Anandini – April 2018
ಸಂಪಾದಕೀಯ:

ಏಪ್ರಿಲ್ ನ ಸಂಚಿಕೆ ತಾಂತ್ರಿಕ ಕಾರಣಗಳಿಂದಾಗಿ ಈಗ ಹೊರಬರುತ್ತಿದೆ. ಆನಂದಿನಿಗೆ ಇಷ್ಟು ದಿನ ಅಜ್ಞಾತವಾಸ.
ಈ ಮಧ್ಯದ ಅನೇಕ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ.
ಏಪ್ರಿಲ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪೂರ್ಣಪ್ರಮತಿಯ ಪ್ರಥಮ ತಂಡದ ಹತ್ತು ಮಕ್ಕಳು ತೆಗೆದುಕೊಂಡಿದ್ದು ಶೇಕಡ ನೂರು ಶ್ರೇಷ್ಠದರ್ಜೆಯ ( distinction) ತೇರ್ಗಡೆಯ ಫಲಿತಾಂಶ ಬಂದಿದೆ. ಏಳು ಮಕ್ಕಳು ಶೇಕಡ ೯೦ – ೯೭ರ ಅಂಕ ಗಳನ್ನು ಪಡೆದಿದ್ದಾರೆ. ಹತ್ತಾರು ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತ, ಪಾಠಕ್ರಮದಲ್ಲೂ ಹೊಸ ಪ್ರಯೋಗಗಳನ್ನು ಮಾಡುತ್ತ ಅದರ ಹಿನ್ನೆಲೆಯಲ್ಲಿ ಪುಸ್ತಕದ ಬದನೇಕಾಯಿಯಾಗದೆಯೂ ಇಷ್ಟೆಲ್ಲಾ ಅಂಕಗಳನ್ನು ಪಡೆಯಬಹುದು ಎನ್ನುವ ನಮ್ಮ ಯೋಜನೆ ಸಫಲವಾಗಿದೆ. ಇದು ಒಂದು ರೀತಿಯಲ್ಲಿ ಇತರರಿಗೂ ಮಾದರಿಯಾಗಬಹುದೇನೊ!
೨೦೧೮ ಜೂನ್ ನಲ್ಲಿ ಪೂರ್ಣಪ್ರಮತಿ ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಎರಡೂವರೆ ವರ್ಷದಿಂದ ಹನ್ನೊಂದು ವರ್ಷದ ವರೆಗೆ (೬ನೆಯ ತರಗತಿ) ಮಾಟೆಸ್ಸೊರಿ ಪದ್ಧತಿ, ನಂತರದ ತರಗತಿಗಳಲ್ಲಿ ರಾಜ್ಯಪಠ್ಯಕ್ರಮ ಪದ್ಢತಿ ಹಾಗೂ ಮಾಗಡಿ ರಸ್ತೆಯ ಆನಂದವನ ಗುರುಕುಲಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹಗಳೇ ಕಾರಣ.
ನಮ್ಮ ಮಾರ್ಗದರ್ಶಕ ಗುರುಗಳಲ್ಲಿ ಒಬ್ಬರಾದ ಶ್ರೀ ಜ್ಞಾನಸ್ವರೂಪ ಸಾನಂದ ಸ್ವಾಮೀಜಿಯವರು ಹರಿದ್ವಾರದಲ್ಲಿ ಗಂಗೆಯ ನಿರಂತರತೆ, ಅವಿರಲತೆಯ ಬಗೆಗೆ ನಿರ್ಣಾಯಕ ಫಲಿತಾಂಶಕ್ಕಾಗಿ ತಮ್ಮ ಜೀವವನ್ನೇ ಪಣವಾಗಿಟ್ಟು ಆಮರಣಾಂತ ಉಪವಾಸದ ತಪಸ್ಸು ಪ್ರಾರಂಭಿಸಿದ್ದಾರೆ. ಈಹೊತ್ತಿಗೆ ಉಪವಾಸ ಪ್ರಾರಂಭವಾಗಿ ೬೭ ದಿನಗಳು ಸಂದಿವೆ. ಆನಂದವನದ ಮಕ್ಕಳು ಶ್ರೀನಿವಾಸ್ ಅವರ ನೇತೃತ್ವದಲ್ಲಿ ದೆಹಲಿ ಹಾಗೂ ಹರಿದ್ವಾರಕ್ಕೆ ಹೋಗಿ ಅವರೊಡನೆ ತಾವೂ ಗಂಗಾ ತಪಸ್ಸಿನಲ್ಲಿ ಪಾಲ್ಗೊಂಡು ಹಿಂದಿರುಗಿದ್ದಾರೆ.
ಈ ಹಿನ್ನೆಲೆಯಲ್ಲಿ, ಬನ್ನಿ,ಈ ಸಂಚಿಕೆಯನ್ನು ಓದೋಣ.
ಶಶಿರೇಖಾ ಮಣೂರ್,
ಸಂಪಾದಕರು.
ಪೂರ್ಣಪ್ರಮತಿ ಉತ್ಸವ
೦೪ ಫೆಬ್ರವರಿ ೨೦೧೮ರಂದು ಕುವೆಂಪು ಕಲಾಕ್ಷೇತ್ರದಲ್ಲಿ ಪೂರ್ಣಪ್ರಮತಿ ತನ್ನ ಎಂಟನೆಯ ವಾರ್ಷಿಕೋತ್ಸವ “ಪೂರ್ಣಪ್ರಮತಿ ಉತ್ಸವವನ್ನು” ಆಚರಿಸಿತು. “ಭಕ್ತಿ” ಎಂಬ ಸಂವತ್ಸರಸೂತ್ರವನ್ನು ಆಧರಿಸಿ ಭಕ್ತಿಪಂಥದ ಶ್ರೇಷ್ಠ ಸಾಧಕರ ಜೀವನ ಸಾಧನೆಯನ್ನು ಮಕ್ಕಳು ವೇದಿಕೆಯ ಮೇಲೆ ಪ್ರದರ್ಶಿಸಿದರು. ಪೂರ್ವಪ್ರಾಥಮಿಕ ಮಕ್ಕಳು ಕನಕದಾಸ, ಆಂಡಾಳ್, ತ್ಯಾಗರಾಜರನ್ನು ರಂಗಮಂಚಕ್ಕೆ ಕರೆತಂದರೆ, ಪ್ರಾಥಮಿಕ ಮಕ್ಕಳು ಪುರಂದರದಾಸರು ಹಾಗೂ ಅಣ್ಣಮಾಚಾರ್ಯರನ್ನು ಜೀವಂತಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಸಾನಂದ ಸ್ವಾಮೀಜಿ, ತಿರುಪತಿ ತಿರುಮಲದ ಅಣ್ಣಮಾಚಾರ್ಯ ಪ್ರಾಜೆಕ್ಟ್ನ ನಿವೃತ್ತ ಮುಖ್ಯಸ್ಥರಾದ ಶ್ರೀ ಗರಿಮೆಲ್ಲ ಬಾಲಕೃಷ್ಣ ಪ್ರಸಾದ್, ನಾಗ್ಪುರದ ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ಶ್ರೀನಿವಾಸ ವರಖೇಡಿಯವರು, ಅದಮ್ಯ ಚೇತನದ ಶ್ರೀಮತಿ ತೇಜಸ್ವಿನಿ, ಬಿ.ಪಿ.ಆರ್.ಎಲ್. ಔಷಧಿ ತಯಾರಕ ಸಂಸ್ಥೆಯ ಶ್ರೀ ಜಯಪ್ರಕಾಶ್ ಮಡಿ, ನಿವೃತ್ತ ನಾಸಾ ವಿಜ್ಞಾನಿ ಶ್ರೀ ಶ್ರೀನಿವಾಸ್ ರವರು ಉಪಸ್ಥಿತರಿದ್ದರು.
IISc Visit
ಮಾರ್ಚ್ ತಿಂಗಳ ಮೊದಲ ಶನಿವಾರದಂದು IISc Open Dayಗೆ ಭೇಟಿ ಕೊಟ್ಟು ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಿಕೊಂಡರು.
ಅಗ್ನಿಹೋತ್ರಿ – ಸುಬ್ರಾಯ ಶರ್ಮಾ
ಅಗ್ನಿಹೋತ್ರಿಗಳು ಈ ಕಾಲದಲ್ಲಿ ಬಹಳ ವಿರಳ. ವೈದಿಕ ಸಂಪ್ರದಾಯದಂತೆ ಅಗ್ನಿಯಪ್ರಾದುರ್ಭಾವ ಹಾಗೂ ಅದರ ಸಂರಕ್ಷಣೆಯ ಪ್ರಕ್ರಿಯೆ ಬಹಳ ವಿಶೇಷವಾದದ್ದು. ಈಗಿನ ಕಾಲಕ್ಕೆ ಆ ಪ್ರಕ್ರಿಯೆಯನ್ನು ತಿಳಿದು ಅದರಂತೆ ಅಗ್ನಿಯನ್ನು ಸಂರಕ್ಷಿಸಿ ಪ್ರತಿದಿನ ಅಗ್ನಿಹೋತ್ರಾದಿಗಳಲ್ಲಿ ತೊಡಗಿಕೊಳ್ಳುವವರು ಬಹಳ ಅಪರೂಪ. ನಮ್ಮ ಶಾಲೆಯ ಮಕ್ಕಳು ಅಂತಹ ಅಗ್ನಿಹೋತ್ರಿಗಳಾದ ಶ್ರೀ ಸುಬ್ರಾಯ ಶರ್ಮಾ ಅವರ ಬಳಿ ಹೋಗಿ, ಆ ಪ್ರಕ್ರಿಯೆಗಳನ್ನು ಪ್ರತ್ಯಕ್ಷ ನೋಡಿ ಆ ಜ್ಞಾನವನ್ನು ಪಡೆದರು. ಇದರ ಬಗ್ಗೆ ವಿದ್ಯಾರ್ಥಿಯೊಬ್ಬ ಬರೆದ ಲೇಖನವೊಂದನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ಮಿತಿಕ್ ಸೊಸೈಟಿ
ವಿದ್ಯಾರ್ಥಿಗಳಿಗೆ ಗ್ರಂಥಾಲಯ ವಿಜ್ಞಾನದ ಪರಿಚಯ ಮಾಡಿಕೊಡಲು ಹಾಗೂ ಗ್ರಂಥಾಲಯದ ಪ್ರಯೋಜನ ಪಡೆಯುವಂತೆ ಪ್ರೇರೇಪಿಸಲು ವಿದ್ಯಾರ್ಥಿಗಳನ್ನು ಮಿಥಿಕ್ ಸೊಸೈಟಿ ಗ್ರಂಥಾಲಯಕ್ಕೆ ಮಾರ್ಚ್ ತಿಂಗಳ ಮೊದಲವಾರದಂದು ಕರೆದುಕೊಂಡು ಹೋಗಲಾಯಿತು.
ಶಿಕ್ಷಕರ ಅಂಕಣ
ಒಂದೆರಡು ದಶಕಗಳ ಹಿಂದೆ ನಮ್ಮ ಬೆಂಗಳೂರು ಗಾರ್ಡನ್ ಸಿಟಿ ಆಗಿತ್ತು. ಆ ಹೆಸರಿನ ಸ್ಪೆಲಿಂಗು ಕೊಂಚ ಬದಲಾಗಿ ನಮ್ಮೂರು ಗಾರ್ಬೇಜ್ ಸಿಟಿ ಆಗಿದ್ದು ಈಚೆಗೆ ಕೆಲವರ್ಷಗಳ ಹಿಂದೆಯಷ್ಟೇ.
ಹಾಗೆ ನೋಡಿದರೆ ಕಸದ ಸಮಸ್ಯೆ ನಮ್ಮ ಊರೊಂದಕ್ಕೇ ಸೀಮಿತವೇನಲ್ಲ. ನಮ್ಮ ಊರಷ್ಟೇ ಏಕೆ, ಇರು ಬರೀ ನಮ್ಮ ಗ್ರಹದ ಸಮಸ್ಯೆ ಮಾತ್ರವೂ ಅಲ್ಲ.
‘ಇದೊಂದು ಆಘಾತಕಾರಿ ಸುದ್ದಿ: ‘ಸುಡಾನ್’ ಹೆಸರಿನ ಬಿಳಿಘೇಂಡಾ ಕಳೆದ ವಾರ ಕೆನ್ಯಾ ದೇಶದ ಸಂರಕ್ಷಿತ ಅರಣ್ಯದಲ್ಲಿ ಪ್ರಾಣಬಿಟ್ಟಿತು. ಘೇಂಡಾ ಜಾತಿಯ ಮೃಗಗಳಲ್ಲಿ ‘ಉತ್ತರದ ಬಿಳಿಘೇಂಡಾ’ ತಳಿಯ ಕೊಟ್ಟ ಕೊನೆಯ ಗಂಡು ಪ್ರಾಣಿ ಇದಾಗಿತ್ತು. ಇನ್ನೆರಡು ಹೆಣ್ಣು ಘೇಂಡಾಗಳಿವೆ. ಸುಡಾನಿನ ಮಗಳು ನಾಜಿನ್ ಮತ್ತು ನಾಜಿನ್ ಮಗಳು ಫಾತು. ಇನ್ನು ಅವುಗಳಿಂದ ಬಿಳಿ ಘೇಂಡಾ ಮರಿಗಳು ಜನಿಸುವ ಸಂಭವವಿಲ್ಲ. ಏಕೆಂದರೆ ಗಂಡುಗಳೇ ಉಳಿದಿಲ್ಲವಲ್ಲ.
It was May 23rd 2017 . Children were beginning a new academic year. Purnapramati’s first batch of children had arrived to X grade!!Teachers were ready to take up their new responsibility eagerly.
Purnapramati Utsava is always an integral part of school activities that happens once in an year where celebration, joy and feast are seen no less than a family festival. I’m very happy to be part of this utsava. It’s always a moment of celebration filled with enthusiasm.
Earless frogs are those that lack a tympanum, which is visible as an eardrum surrounded by a ring of cartilage in most eared frogs.
ಬೇಸಿಗೆ ಬಂದರೆ ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತಿಯಿರುವವರಿಗೆ ಆಂತಕ ತರುವವ ವಿಷಯಗಳಲ್ಲಿ ಪ್ರಮುಖವಾದದ್ದು ಕಾಡ್ಗಿಚ್ಚು. ಪ್ರತೀ ವರ್ಷ ಈ ಕಾಡಿನ ಬೆಂಕಿಯಿಂದ ಸಾವಿರಾರು ಎಕರೆ ಕಾಡು ಭಸ್ಮವಾಗಿ ಹೋಗುತ್ತದೆ. ಈ ವರ್ಷ (2018) ಇನ್ನು ಮಾರ್ಚ್ ಮೊದಲರ್ಧದಲ್ಲಿದ್ದೇವೆ, ಆಗಲೇ ಸುಟ್ಟುಹೋಗಿರುವ ಕಾಡಿನ ಪ್ರಮಾಣ ಐದು ಸಾವಿರಕ್ಕೂ ಹೆಚ್ಚು! ಇದು ತುಂಬ ಕಳವಳಕಾರಿ ವಿಷಯ.







