Menu

ದಿನಾಂಕ ೩.à³­.೨೦೧೨ ರ ಮಂಗಳವಾರ, ಆಶಾಢ ಪೂರ್ಣಿಮೆಯ ದಿನವನ್ನು ಪೂರ್ಣಪ್ರಮತಿಯಲ್ಲಿ ಗುರು ಪೂರ್ಣಿಮಾದಿನವನ್ನಾಗಿ ಆಚರಿಸಲಾಯಿತು. ಶ್ರೀ ವೇದ ವ್ಯಾಸರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಇತ್ತೀಚೆಗಷ್ಟೆ ಮಾನಸ ಸರೋವರದಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಬಂದ, ರಬ್ಬರ್ ಉದ್ಯಮಿಗಳಾದ, ಶ್ರೀಮಾನ್  ಮಣೂರ್ ವೆಂಕಟೇಶ್  ಮತ್ತು ಕುಟುಂಬದವರು ಅತಿಥಿಗಳಾಗಿ  ಆಗಮಿಸಿದ್ದರು.
೪ನೇ ತರಗತಿಯ ವಿದ್ಯಾಶ್ರೀ ಗುರು ಪೂರ್ಣಿಮೆಯ ಮಹತ್ವವನ್ನು ಹೇಳಿದಳು. ನಂತರ ಮಕ್ಕಳು ಗುರುಗಳ ಬಗೆಗಿನ ಹಾಡನ್ನು ಹಾಡಿದರು.  ಗುರುಮಹಿಮೆಯನ್ನು ಸಾರುವ ಮಹಾಭಾರತದ ಉಪಮನ್ಯುವಿನ ಕಥೆಯ ನಾಟಕವನ್ನು ಮಾಡಿದರು.
ಅತಿಥಿಗಳಾದ ಮಣೂರ್ ವೆಂಕಟೇಶ್ ರವರು ತಮ್ಮ ಭಾಷಣದಲ್ಲಿ ಮುಂದೆ  ಈ ಶಾಲೆ ದೇಶದಲ್ಲಿ ಒಳ್ಳೆಯ ಹೆಸರನ್ನು ಗಳಿಸುವುದರಲ್ಲಿ ಸಂಶಯವಿಲ್ಲ. ಈ ಶಾಲೆಗೆ ಭಗವಂತನ  ಅನುಗ್ರಹ ಆಗಲಿ ಎಂದು ಹಾರೈಸಿದರು. ನಂತರ ಶಾಲೆಯ ಸಂಗೀತ ಅಧ್ಯಾಪಕರಾದ ಶ್ರೀ ರಾಜೇಂದ್ರರವರು ಗುರುವಿನ ಗುಲಾಮನಾಗುವ ತನಕ ಎಂಬ ಹಾಡನ್ನು ಮಕ್ಕಳಿಂದ ಹಾಡಿಸಿದರು. ಶಾಂತಿ ಮಂತ್ರದೊಂದಿಗೆ  ಕಾರ್ಯಕ್ರಮಕ್ಕೆ  ಮಂಗಳ ಹಾಡಲಾಯಿತು.

 

 

 

 

 

 

 

 

 

 

 

 

 

 

 

 

 

 

Gurupurnima was celebrated on 3rd June 2012, Ashadapurnima, Tuesday at Purnapramati’s primary campus. Sri Manur Venktesh Pai, an industrialist involved in rubber factory graced the occasion along with his family.

The program commenced with a prayer to Bhagavan Sri Vedavyasa by the 1st graders. This was followed by a short speech on the significance of the occasion by Vidyasree of 4th grade. 5th grade children then sang a devotional song on guru. A short drama conveying the importance of gurubhakti was then enacted by 4th graders.

Sri Venkatesh Pai addressed the gathering with his hearty wishes for Purnapramati’s progress. “Guruvuna Gulaamanaaguva tanaka” was sung by all in the school.  The programme ended with a brief vote of thanks by Rohit of 4th grade. Some of the photo picks are here.