ಆನಂದಿನೀ – ಸೆಪ್ಟೆಂಬರ್ 2020-21

ಆನಂದಿನೀ

ಶಾರ್ವರಿ ಸಂವತ್ಸರ, ವರ್ಷಾ ಋತು, ಬಾದ್ರಪದ ಮಾಸ – ಸೆಪ್ಟೆಂಬರ್ ೨೦೨೦

ಸಂಪಾದಕೀಯ

ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ)

ಆತ್ಮೀಯರೇ,

ಬಯಸದೇ ಬಂದ ಭಾಗ್ಯ

ಏನಿರಬಹುದು !!! ಪೂರ್ಣಪ್ರಮತಿಯ ಕನಸು ಒಂದು ಕಲಿಕಾ ಸಮುದಾಯವಾಗಬೇಕು ಎಂಬುದು. ಪರಸ್ಪರ ಭಾವಿಸುತ್ತಾ, ಕಲಿಸುತ್ತಾ – ಕಲಿಯುತ್ತಾ ಸ್ವಧರ್ಮದಲ್ಲಿ ತೊಡಗುವ ಒಂದು ಜೀವನಯಾತ್ರೆಯಾಗಿಸಬೇಕೆಂಬುದು. ಆಧುನಿಕ ಅನೇಕ ವ್ಯವಸ್ಥೆಗಳಿಗೆ ಸಿಕ್ಕು ಕಳೆದುಕೊಂಡಿರುವ ಅವಿಭಕ್ತ ಕುಟುಂಬವನ್ನು ಪೂರ್ಣಪ್ರಮತಿಯ ಮೂಲಕ ಮರಳಿ ಪಡೆಯಬಹುದು ಎಂಬುದು. ಈ ಕನಸಿಗೆ ಕರೋನ ಪೂರಕವಾಯಿತು. ಅದಕ್ಕೆ ಹೇಳಿದೆ “ಬಯಸದೇ ಬಂದ ಭಾಗ್ಯ” ಎಂದು. ಹೇಗೆಂದು ವಿವಿರಿಸುವೆ ಬನ್ನಿ….

ಪೂರ್ವಪ್ರಾಥಮಿಕದಿಂದ ಆರಂಭಿಸಿ ಪ್ರಸ್ತುತ ಕಾಲೇಜು ವಿಭಾಗದವರೆಗೆ ಅಧ್ಯಾಪಕರು ನೇರವಾಗಿ ಮಕ್ಕಳು ಮತ್ತು ತನ್ಮೂಲಕ ಅವರ ಕುಟುಂಬವನ್ನು ತಲುಪುತ್ತಿದ್ದಾರೆ. ನಿತ್ಯದ ಪಾಠ ಕುಟುಂಬಕ್ಕೂ ನಡೆಯುತ್ತಿದೆ. ಕೇವಲ ಗಣಿತ, ವಿಜ್ಞಾನ, ಆಂಗ್ಲಭಾಷೆ ಇತ್ಯಾದಿ ಪಾಠಗಳಾಗಿದ್ದರೆ ಬಹುಶಃ ಪೋಷಕರು ತಮ್ಮ ಕೆಲಸದಲ್ಲಿ ಮುಳುಗಿರುತ್ತಿದ್ದರು. ಆದರೆ ಈಗಂತು ಮನೆಗೆಲಸ ನೇರವಾಗಿ ಪೋಷಕರಿಗೂ ತಲುಪಿದೆ, ಅವರೂ ಆಲೋಚಿಸಿ ತಮ್ಮ ಸೃಜನಾತ್ಮಕತೆಯನ್ನು ಮೆರೆಯುತ್ತಿದ್ದಾರೆ, ತಾಯಂದಿರಂತೂ ಅಧ್ಯಾಪಕರೇ ಆಗಿದ್ದಾರೆ. ಈಗ ಹೇಳಿ ಶಾಲೆಗೂ – ಮನೆಗೂ ವ್ಯತ್ಯಾಸ ಉಳಿದಿದೆಯೇ?

ವಾಮನ ಜಯಂತಿಯಂದು ಪೋಷಕರು ಮಕ್ಕಳಿಗೆ ತಮ್ಮ ಹಾಡು, ಕಥೆ, ನೃತ್ಯ ಪ್ರತಿಭೆಗಳ ಮೂಲಕ ಆನಂದಪಡುವ ಅವಕಾಶ ಕಲ್ಪಿಸಿದರು. ಮಕ್ಕಳ ಮನಸ್ಸನ್ನು, ವಯೋಗುಣಕ್ಕೆ ಸರಿಯಾಗಿ ವ್ಯಕ್ತವಾಗುವ ಅಗತ್ಯಗಳನ್ನು ಅರಿಯುವ ದಾರಿಯಲ್ಲಿ ಹೆಜ್ಜೆ ಇಡುವ ತರಬೇತಿಗಳಲ್ಲಿ ಭಾಗವಹಿಸಿದರು. ಅಧ್ಯಾಪಕರು ಮಕ್ಕಳನ್ನು ತಲುಪುವ ನಿಟ್ಟಿನಲ್ಲಿ ತಮ್ಮ ಸೃಜನಾತ್ಮಕ ಪಾಠಯೋಜನೆಗಳ ಮೂಲಕ ಹೊಸ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಹೊಸ ಸಾಧ್ಯತೆಗಳಿಗೆ ಇಂಬುಕೊಟ್ಟ ಈ ಕರೋನಾ ಪರಿಸ್ಥಿತಿಯೇ ನಮಗೆ ಒದಗಿದ ಬಯಸದೇ ಬಂದ ಭಾಗ್ಯ. ಈ ಭಾಗ್ಯದ ಸವಿ ಸೆಪ್ಟೆಂಬರ್ ತಿಂಗಳ ಆನಂದಿನಿ ಮೂಲಕ ನಿಮ್ಮನ್ನು ತಲುಪಿದೆ. ಆನಂದಿಸಿರಿ.

 

ತಿಂಗಳ ತಿಳಿಗಾಳು

(ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ)

ಆನಂದಕಂದ​ ಸುಲಕ್ಷಣ ವಿ.ಆಚಾರ್ಯ (ಅಧ್ಯಾಪಕರು, ಪೂರ್ವಪ್ರಾಥಮಿಕ ವಿಭಾಗ)

 

 

ಕರೋನಾ ಕೊಟ್ಟ ಕೊಡುಗೆ

ಕರೋನಾ ಎಂಬ ವಿಷಯ ಈಗ ಎಲ್ಲೆಡೆ ಸಹಜ ವಿಚಾರವಾಗುತ್ತಿದ್ದರೂ ಅದರಿಂದ ನಮಗೆ ಸಿಕ್ಕ ಲಾಭಗಳು ಅನೇಕ. ತಂತ್ರಜ್ಞಾನದ ಅರಿವಿಲ್ಲದವರೂ ಅದರಲ್ಲಿ ಪಾಠವನ್ನು ಮಾಡುವುದರಿಂದ ಹಿಡಿದು ಮಕ್ಕಳನ್ನು ಆ ಸಮಯದಲ್ಲಿ ಹಿಡಿದಿಟ್ಟುಕೊಳ್ಳೂವ ಸಂಯಮವನ್ನು ತಂದುಕೊಟ್ಟಿದೆ.

 ಶಿಕ್ಷಣ ನಡೆಯುತ್ತಿರುವ ರೀತಿ

ಮಕ್ಕಳ ಕಲಿಕೆಯ ಉತ್ತಮವಾದ ಬುನಾದಿಯನ್ನು ನಿಮಿಸಲು ಈ ಬಾರಿ Online ಮೂಲಕ ಸಕ್ರಿಯವಾಗಿ ಪಾಠ ಆಗುತ್ತಿದೆ. ಮನೆಯೇ ಮೊದಲ ಪಾಠಶಾಲೆ ಆಗಿರುವ ಕಾರಣ, ನಾವು ಪೋಷಕರಿಗೆ ಹಲವಾರ ಕಲಿಕಾ ಸಾಮಗ್ರಿಗಳನ್ನು ತಯಾರಿಸಿ ಮಕ್ಕಳಿಗೆ ಏನನ್ನು ಪಾಠಮಾಡಬೇಕು ಮತ್ತು ಹೇಗೆ ಪಾಠ ಮಾಡಬೇಕು ಎಂಬ ಮಾರ್ಗದರ್ಶನ ಮಾಡುತ್ತಿದ್ದೇವೆ.

ಪೋಷಕರ ಪ್ರತಿಕ್ರೆಯೆಯನ್ನು ನೋಡಿದರೆ, ನಮ್ಮ ಈ ರೀತಿಯ ಶಿಕ್ಷಣದ ವಿಧಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಪರಿಗಣಿಸಬಹುದು. ಪೋಷಕರು ಹೆಚ್ಚಿನ ಮುತುವರ್ಜಿಯಿಂದ ಮಕ್ಕಳಿಗೆ ಕಲಿಸುತ್ತಿದ್ದಾರೆ. ಮಕ್ಕಳು ಕೂಡ ಉತ್ಸಾಹದಿಂದ ಸ್ಪಂದಿಸಿ ಕಲಿಯುತ್ತಿದ್ದಾರೆ. ಪೋಷಕರ ಹಾಗೂ ಮಕ್ಕಳ ಸಹಕಾರದಿಂದ ನಿಗದಿಪಡಿಸಿಕೊಂಡಿರುವ ಪಠ್ಯವನ್ನು ನಾವು ಯಾವುದೇ ಸಮಸ್ಯೆಗಳಿಲ್ಲದೆ ಮಾಡಿಕೊಳ್ಳುವಂತಾಗಿದೆ.

ಪರ್ವದಿನಗಳ ಆಚರಣೆ

ದೆ.ಶಾಲೆಯ ಸಂಸ್ಕೃತಿಯಾಗಿ ಬಂದಿರುವ ಪರ್ವದಿನಗಳ ಆಚರಣೆಯನ್ನೂ ವಿಜೃಂಭಣೆಯಾಗಿ ನಡೆಸಲಾಗುತ್ತಿದೆ. ಇದೂ ಕೂಡ Online ಮೂಲಕವೇ !!!

ಈ ತಿಂಗಳಿನಲ್ಲಿ ನಮ್ಮ ಆನಂದಕಂದ ವಿಭಾಗವು ವಾಮನ ಜಯಂತಿಯನ್ನು ೨೯/೮/೨೦೨೦ ರಂದು ಆಚರಿಸಿದೆವು. ಪ್ರತಿ ಬಾರಿಯಂತೆ ನಿರೂಪಣೆ ಸಂಸ್ಕೃತದಲ್ಲಿತ್ತು. ಅತಿಥಿಯಾಗಿ ಚಿ.ವಿಶೃತ ಶ್ರೀನಿವಾಸ ಎಂಬ ೮ನೇ ತರಗತಿಯ ವಿದ್ಯಾರ್ಥಿಯನ್ನು ಆಹ್ವಾನಿಸಿಲಾಗಿತು. ಅವನು ತನಗಿಂತ ಪುಟಾಣಿ ಮಕ್ಕಳಿಗೆ ವಾಮನ ಕಥೆಯನ್ನು ಹೇಳಿದನು. ಹಾಗೆ, ಅಧ್ಯಾಪಕರಾದ ನಾವೆಲ್ಲರೂ ಮಕ್ಕಳಿಗೆ, ಹಕ್ಕಿಗಳ ಕಥೆಯನ್ನು ನಟಿಸಿ ಹೇಳಿರುವ ವೀಡಿಯೊವನ್ನು ತೊರಿಸಿದೆವು. ಸೌಮ್ಯ ಅಕ್ಕ “ಗೊಂಬೆಯಾಟ” ಮೂಲಕ ಚಿಟ್ಟೆಯ ಕಥೆಯನ್ನು ಹೇಳಿದರು. ನಂತರ ಮಕ್ಕಳಿಗೆ ಹಲವಾರು ಆಟಗಳನ್ನು ಆಡಿಸಿದೆವು. ಎಲ್ಲರೂ ನಿರೀಕ್ಷಿಸುವ ಮಕ್ಕಳ ವಿಡೆಯೋವನ್ನು ತಯಾರಿಸಿ, ಅಂದು ಪ್ರಸ್ತುತಪಡಿಸಿದೆವು. ಆ ವೀಡಿಯೋದಲ್ಲಿ ಮಕ್ಕಳು ಸಂಸ್ಕೃತ, ಕನ್ನಡ ಮತ್ತು ಆಂಗ್ಲ ಭಾಷೆಯ tongue twister ಹೇಳಿದರು. ಇದೇ ರೀತಿ ಈ ತಿಂಗಳಿನ ಕೊನೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ತಿಂಗಳಿಗೊಂದು ವಿಷಯದ ಪರಿಕಲ್ಪನೆ

ಆನಂದಕಂದ ವಿಭಾಗದಲ್ಲಿ ತಿಂಗಳಿಗೊಂದು ವಿಷಯವನ್ನು ಇಟ್ಟುಕೊಂಡು ಅದನ್ನು ಎಲ್ಲಾ ಪಾಠಗಳಲ್ಲಿ ಅಳವಡಿಕೊಳ್ಳುವುದು ವಾಡಿಕೆ. ಈ ತಿಂಗಳು ತರಕಾರಿ ಎಂಬ ವಿಷಯವನ್ನು Sensorial, Culture, Language ಮುಂತಾದ ವಿಷಯಗಳಲ್ಲಿ ಅಳವಡಿಸಿಕೊಂಡು ಪಾಠ ಮಾಡಿದೆವು.

ಕಲಿಕೆ ಎಂಬುದು ಕೇವಲ ಮಕ್ಕಳದ್ದಲ್ಲ. ಅದು ಎಲ್ಲರಿಗೂ ಅನ್ವಯಿಸುತ್ತದೆ. ಮಕ್ಕಳು ನಮ್ಮಿಂದ ಕಲಿಯುತ್ತಾರೆ. ಅವರಿಂದ ನಾವು ಕಲಿಯುತ್ತೇವೆ. ಹಾಗಾಗಿ ಮಕ್ಕಳ ಕಲಿಕೆ ಎಂಬ ಪಯಣದಲ್ಲಿ ಎಂದಿನಂತೆ ನಾವು ನಮ್ಮ ಪುಟ್ಟ ಕಂದಮ್ಮಗಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿ ಮಕ್ಕಳಿಂದ ಹಲವಾರು ವಿಷಯಗಳನ್ನು ಕಲಿಯಲು ಸಜ್ಜಾಗೋಣ.


ವಾಮನ ವಿಭಾಗಮುರಳೀಧರ ಕೆ (ಪ್ರತಿನಿಧಿ, ಪ್ರಾಥಮಿಕ ವಿಭಾಗ)

ವಾಮನಾಯ ನಮೋ ನಮಃ…

ಆತ್ಮೀಯ ಪೂರ್ಣಪ್ರಮತಿ ಬಂಧುಗಳಿಗೆ ನಮಸ್ಕಾರ

ಕಳೆದ ಬಾರಿ ವಾಗ್ಮೀ ಉತ್ತರದೊಂದಿಗೆ ಬಂದಿದ್ದೆ ಈ ಬಾರಿ ವಾಮನಜಯಂತಿಯ ಆಚರಣೆಯೊಂದಿಗೆ ನಿಮ್ಮ ಮುಂದೆ ಇರುವೆ. ಪೂರ್ಣಪ್ರಮತಿ ಶಾಲೆಯು ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿರುವ ಚಿಂತಕರ ಚಾವಡಿ. ಹಾಗಾಗಿ ಈ ಬಾರಿ ವಾಮನ ಜಯಂತಿಯನ್ನು ಸರಳ ವಿಜೃಂಭಣೆಯಿಂದ ನಡೆಸಿದೆವು. ವಾಮನ ಜಯಂತಿ ಎಂದರೆ ಮಕ್ಕಳದಿನ ಎನ್ನುವ ಚಿಂತನೆ ನಮ್ಮಲ್ಲಿ ಇದೆ, ಹಾಗಾಗಿ ಮಕ್ಕಳಿಗಾಗಿಯೇ ಈ ಕಾರ್ಯಕ್ರಮ. ಮಕ್ಕಳಿಗಾಗೇ ಮಾಡುವ ಈ ಕಾರ್ಯಕ್ರಮದಲ್ಲಿ ಮಕ್ಕಳೇ ಮುಖ್ಯ ಅತಿಥಿಗಳು. ಈ ಬಾರಿಯ ವಿಶೇಷತೆಯಂದರೆ ಪೋಷಕರೂ ನಮ್ಮೊಡನೆ ಭಾಗಿಯಾಗಿರುವುದು. ಪೊಷಕರ ಜೊತೆ ನಮ್ಮ ಆಧ್ಯಾಪಕರು ಮಾತನಾಡಿ ನಾಟಕ, ಹಾಡು, ಏಕಪಾತ್ರಾಭಿನಯ, ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮ ನಡೆಸಿಕೊಡಲು ಹೇಳಿದರು,  ಆಗಲಿ ಎಂದು ಹಲವು ಪೋಷಕರು  ಒಪ್ಪಿಗೆ ಕೊಟ್ಟರು.ತುಂಬಾ ಸಂತಸದಿಂದ ಪಾಲ್ಗೊಂಡರು. ನಮ್ಮ ಅಧ್ಯಾಪಕರೂ ಮಕ್ಕಳಿಗಾಗಿ ನಾಟಕ ಮಾಡಿತೋರಿಸಿದರು. ಏಕಪಾತ್ರಾಭಿನಯ, ಹಾಡು, ಕಾರ್ಯಕ್ರಮದ ನಿರೂಪಣೆ  ಇತ್ಯಾದಿಗಳನ್ನು ಮಾಡಿದರು. ಈ ಕಾರ್ಯಕ್ರಮದಿಂದ ಆದ ಹಲವು ಬೆಳವಣಿಗೆಗಳು ಪೋಷಕರು ಅಧ್ಯಾಪಕರ ನಡುವೆ ಬಾಂಧವ್ಯ ಜಾಸ್ತಿ ಆಗಿದೆ, ಅಧ್ಯಾಪಕರಿಗೆ, ಮಕ್ಕಳಿಗೆ, ಪೋಷಕರ ಕಲಾ ಚಾತುರ್ಯದ ಪರಿಚಯವೂ ಆಯಿತು. ವಿಶೇಷವಾಗಿ  ಮಕ್ಕಳಿಗೆ ಇಂತಹ ಕಲೆಗಳನ್ನ ನಾವೂ ರೂಢಿಸಿಕೊಳ್ಳಬೇಕು ಎನ್ನುವ ಬೀಜಕ್ಷೇಪ ಈ ಮೂಲಕ ಸಾಗುತ್ತಾ ಇದೆ. ಮಕ್ಕಳನ್ನು ಸನ್ಮಾರ್ಗದಲ್ಲಿ  ಬೆಳೆಸುವ ಕಾರ್ಯದಲ್ಲಿ ನಿರತರಾದ ನಮ್ಮೆಲ್ಲರ ಬುದ್ಧಿಯು ವಾಮಮಾರ್ಗದಡೆಗ ತಿರುಗದಿರಲೆಂದು ವಾಮನನ ಬಳಿ ಪ್ರಾರ್ಥನೆ……

ಧನ್ಯವಾದಗಳೊಂದಗೆ, ಮುಂದಿನ ತಿಂಗಳು ಭೇಟಿಯಾಗೋಣ.


 

Arjuna  Geetha (Pratinidhi of Upper elementary)

Time flies and it is up to you to be a navigator – Robert Orben

Yes time indeed flies, but the good news is that Arjuna has been a very good pilot in circumventing the lockdown times by offering both academics and parvadina for children, with the intention of giving maximum learning in the past one month. Both teachers and children have been busy with presentations, follow-ups and timely informal assessments.

In addition to this, it was time for we teachers to take a step back and reflect upon our progress in relation to our year-end goals. Yes, it was time for bi-monthly reviews of all subjects, in which an external person with subject expertise is invited to observe classes, check Google Classrooms, notes and assignments, take a look at teacher’s plans and give honest opinions and valuable suggestions. This is done with a view to improvise the way we teach.

August/September is the month, which children look forward to, as its time to celebrate Vamana Jayanthi. In Arjuna, It was celebrated on Sept 5th, coincidentally on teacher’s day. Although teachers couldn’t entertain children as much as we usually do in school, it was a nice gesture that parents also came forward to contribute towards entertaining our children through stories, songs, quiz and games. On the whole, it was a collaborated effort from parents and teachers.

Now having come closer to the far end of the first term, Smhavalokana is just around the corner. With everything new this time, Simhavalokana seems to be more of an assessment for ‘the way I have taught, than the way you learnt’. A lot of brainstorming is happening to plan online Simhavalokana effectively.


 

ಭೀಮಸೆನಾ ಅನಂತಶಯನ ಶಿರಹಟ್ಟಿ (ಸಂಸ್ಕೃತ ಅಧ್ಯಾಪಕರು, ಪ್ರೌಢಶಾಲಾ ವಿಭಾಗ)

 ಭಾದ್ರಪದ ಮಾಸ ನಿರ್ವಿಘ್ನವಾಗಿ ವಿಘ್ನರಾಜನ ದಯೆಯಿಂದ ಕಳೆಯಿತು. ಈ ಮಾಸದಲ್ಲಿ ಭೀಮಸೇನ ಗಣದಲ್ಲಿ (ಪ್ರೌಢಶಾಲಾ ವಿಭಾಗ) ನಡೆದ ಕಾರ್ಯಕ್ರಮಗಳ ವಿವರ ಇಂತಿದೆ.

ಭಾದ್ರಪದ ಶುಕ್ಲ ತೃತೀಯಾ ಹಾಗು ಚತುರ್ಥೀ (ಅಗಷ್ಟ್ ೨೧,೨೨) ಮಕ್ಕಳಿಗೆ ವಿರಾಮ ಇತ್ತು. ಮನೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯ ಪೂಜೆ ಮಾಡುವಂತೆ ಮಕ್ಕಳಿಗೆ ತಿಳಿಸಲಾಗಿತ್ತು. ಪೂರ್ಣಪ್ರಮತಿಯ ಮಕ್ಕಳಿಗೆ ಇದನ್ನು ವಿಶೇಷವಾಗಿ ಹೇಳುವಷ್ಟಿಲ್ಲ. ನಮ್ಮ ಮಕ್ಕಳೇ ಇನ್ನೊಬ್ಬರಿಗೆ ಬೋಧಿಸುವಷ್ಟು ಈ ವಿಷಯವನ್ನು ತಿಳಿದಿದ್ದಾರೆ.

ಭಾದ್ರಪದ ಶುಕ್ಲ ದ್ವಾದಶೀ (ಅಗಷ್ಟ್ ೩೦) ವಾಮನ ಜಯಂತಿ. ಪೂರ್ಣಪ್ರಮತಿಯಲ್ಲಿ ಇದು ಮಕ್ಕಳ ದಿನ. ಇಲ್ಲೊಂದು ವಿಶೇಷವಿದೆ. ಗುರು ಪೂರ್ಣಿಮಾ ದಿನ ಮಕ್ಕಳು ಅಧ್ಯಾಪಕರಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಗುರು-ಗೌರವವನ್ನು ತೋರಿಸುತ್ತಾರೆ. ವಾಮನ ಜಯಂತಿ ಮಕ್ಕಳಿಗಾಗಿ ಅಧ್ಯಾಪಕರು ಅನೇಕ ಕಾರ್ಯಕ್ರಗಳನ್ನು ಮಾಡಿ ಮಕ್ಕಳ ಮನಸ್ಸನ್ನು ಅರಳಿಸುತ್ತಾರೆ. ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿದ್ದ ಕಾರಣ ವಾಮನ ಜಯಂತಿ ಯ ದಿನ ಸಾಂಕೇತಿಕವಾಗಿ ಆಚರಣೆ ಮಾಡಿ, ಸೆಪ್ಟಂಬರ್ ೧೧ ರಂದು ಅಧ್ಯಾಪಕರು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಅವುಗಳಲ್ಲಿ ಒಂದು ನಾಟಕ, ಏಕಪಾತ್ರಾಭಿನಯ, ವೀಣಾವಾದನ, ಹಾಡು, ರಸಪ್ರಶ್ನೆಗಳಿದ್ದವು. ಎಲ್ಲ ಕಾರ್ಯಕ್ರಮಗಳನ್ನು ಅನುಭವಿಸದ ಮಕ್ಕಳು ಕೊನೆಗೆ ತಮ್ಮ ಸಂತೋಷವನ್ನು ಅಭಿವ್ಯಕ್ತಗೊಳಿಸಿದ್ದು ಅಧ್ಯಾಪಕರಿಗೆಲ್ಲ ಆನಂದವನ್ನುಂಟು ಮಾಡಿತ್ತು. ಮಕ್ಕಳು ವಾಮನ ಜಯಂತಿಗಾಗಿ ಕಾಯುವುದು ನೋಡುವುದೇ ಒಂದು ಆನಂದ.

ಮಕ್ಕಳ ಕಲಿಕೆಯ ಪ್ರಗತಿಯನ್ನು ಶಿಕ್ಷಕರು ಪ್ರತಿದಿನ ಗಮನಿಸುತ್ತಿರುತ್ತಾರೆ. ತಿಂಗಳಿಗೊಮ್ಮೆ ಮಾಡುವ ಸಂಕ್ಷಿಪ್ತ ಮೌಲ್ಯಮಾಪನ (FA) ಇದರ ಇನ್ನೊಂದು ಮುಖ. ಮಕ್ಕಳು ವಾಕ್-ಲೇಖನ ಅವಲೋಕನಕ್ಕೆ ಸಿದ್ಧರಾಗಿದ್ದರು. ಈಗಿನ ಪರಿಸ್ಥಿತಿಗೆ ಅಂತರ್ಜಾಲದ ಮುಖಾಂತರ ಪಾಠವೇ ಕಷ್ಟ ಎನ್ನುವ ಸ್ಥಿತಿ ಇದೆ. ನಮ್ಮಲ್ಲಿ ಅಧ್ಯಾಪಕರು ಪಾಠ ಮಾಡಿದ್ದಲ್ಲದೆ ತಾಳ್ಮೆಯಿಂದ ಒಬ್ಬೊಬ್ಬ ವಿದ್ಯಾರ್ಥಿಯನ್ನು ಪರೀಕ್ಷಿಸಿ ಅವರ ಪ್ರಗತಿಯನ್ನು ದಾಖಲಿಸಿದ್ದಾರೆ. ಈ ತಿಂಗಳ (ಸೆಪ್ಟೆಂಬರ್)  ಸಂಕ್ಷಿಪ್ತ ಮೌಲ್ಯಮಾಪನ ಯಾವ ಗೊಂದಲಗಳಿಲ್ಲದೆ ಚೆನ್ನಾಗಿ ನಡೆಯಿತು.

ಇನ್ನು ಮಕ್ಕಳ ಆಸಕ್ತಿಗೆ ತಕ್ಕಂತೆ ಕೆಲವು ಗುಂಪುಗಳನ್ನಾಗಿ ಮಾಡಿಕೊಂಡಿದೆ. “ರಚನಾ” ಕಥೆಗಾರರ, ಬರಹದಲ್ಲಿ ಆಸಕ್ತಿ ಇರುವವರ ಗುಂಪು (ಈ ತಿಂಗಳ ಆನಂದಿನಿಯಲ್ಲಿ  ರಚನಾ ತಂಡದ ಸದಸ್ಯರೊಬ್ಬರ ಸಣ್ಣ ಕಥೆ ಒಂದು ಪ್ರಕಟಗೊಂಡಿದೆ) “ಪೂರ್ಣಪ್ರಮತಿ ಸಂಗೀತ ಧಾರಾ” ಸಂಗೀತದಲ್ಲಿ ಆಸಕ್ತಿ ಇರುವವರ ತಾಣವಿದು. ಇಲ್ಲಿ ಆಗಾಗ ಆಯಾ ಕ್ಷೇತ್ರದ ಪರಿಣತರನ್ನು ಕರೆಸಿ ಮಕ್ಕಳ ಆಸಕ್ತಿ ಬೆಳೆಸಲು ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಬಾರಿಯ “ಪೂರ್ಣಪ್ರಮತಿ ಸಂಗೀತ ಧಾರಾ” ದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಯಾಗಿದ್ದೆ ಸಿರಿಕೃಷ್ಣ ಬಂದು ತನ್ನ ಅದ್ಭುತ ಕಂಠದಿಂದ ಎಲ್ಲರನ್ನು ಆನಂದ ಕಡಲಲ್ಲಿ ತೇಲಿಸಿದ್ದ.

ಇನ್ನು ಕೊನೆಯ ವಿಷಯ. ಅಧ್ಯಾಪಕರ ಪಾಠಗಳು ಯೋಜಿಸಿದಂತೆ ನಡೆಯಲು ಸಹಾಯವಾಗುವಂತೆ ಪ್ರತಿ ವಿಷಯಗಳಿಗೆ ಒಬ್ಬೊಬ್ಬ ತಜ್ಞರು ಬಂದು ಸಮೀಕ್ಷೆ (Review) ಮಾಡುತ್ತಾರೆ. ಈ ಸಲದ ಸಮೀಕ್ಷೆಯೂ ನಡೆದು ಅಧ್ಯಾಪಕರಿಗೆ ಒಳ್ಳೆಯ ಸಲಹೆಗಳು ಸಿಕ್ಕಿವೆ. ಮಕ್ಕಳ ಪ್ರಗತಿಗೆ ಈ ಸಮೀಕ್ಷೆ ಬಹಳ ಅನುಕೂಲವಾಗುತ್ತದೆ.

ಇಷ್ಟು ಈ ಭಾದ್ರಪದ ಮಾಸದ ವರದಿ. ಈಗ ಅಧಿಕಮಾಸ ಆರಂಭವಾಗಿದೆ. ಮಧ್ಯಾವಧಿಯ ಕೊನೆಯ ಹಂತ. ಮಾಸ ನಿಯಾಮಕ ಪುರುಷೋತ್ತಮನ ದಯೆಯಿಂದ ಜ್ಞಾನಕಾರ್ಯ ಅವ್ಯಾಹತವಾಗಿ ಆಗಿ ಸಾರ್ಥಕವಾಗಲಿ ಎಂದು ಪ್ರಾರ್ಥನೆ.


ThrivikramaNagashree Shrivatsa (Teacher and Pratinidhi of PU division)

We started September with a full-fledged timetable starting from 7:00 am to 5:00pm. Computer science classes are taken after the regular hours. Students were given an introduction about KVPY exams and the necessary preparations. Children are being registered for the same. All children are geared up for the same. We celebrated Vamana Jayanthi on September 11th.

As the PU team is growing gradually, now we have a solid full team. From this month Ananth Anna, Vikrama Anna and Satish Anna will start Sahitya classes. Sudharshan Anna is our new teacher who supports Shastra Parichaya class along with Tirumala Acharyaru.

All the team members are working towards giving a solid structure to the programme. In this direction, many things came up. We have a scheduled structure to give subject wise assignments and worksheets to students. This will enable students to give quality time to each subject. Many orientation classes were taken to guide children on utilising the time effectively. They are guided on creating a schedule for this. In addition, the team is working on starting foundation classes and sahitya classes to current tenth class children.

On 29th 30th and 1st we are conducting both the subjective and objective monthly tests. The objective question paper will be in the respective competitive exam and KVPY pattern. Children will be giving these tests every month apart from chapter wise internal tests.

This month we got two new admissions for 1st PUC Commerce. Latha Akka is working on setting a timetable for the same. Children are also given reference books, which are available online to read. To guide every child in the class we have teachers mentoring each child. They will be looking into the overall need of each child in the class and our Udyoga Drishti program is going in full rigor.  We hope and wish to see all the students their parents and teachers get to participate in maximum strength.

 


 

ಆನಂದವನ ಗುರುಕುಲಯದುನಂದನ (ಪ್ರತಿನಿಧಿ ಮತ್ತು ಅಧ್ಯಾಪಕ, ಆನಂದವನ ಗುರುಕುಲ)

 ಆನಂದವನದ ಅನುಭವ ಹಂಚಲು ಬಹಳ ಸಂತೋಷವಿದೆ. ನಮ್ಮ ಈ ಸಂತೋಷದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ನಮ್ಮ ಆಶಯ. ಹಾಗಾಗಿ ಸೆಪ್ಟೆಂಬರ್ ಮಾಸದ ವರದಿಯ ಮಾಲಿಕೆಯನ್ನು ನಿಮ್ಮ ಮುಂದೆ ಬಿಡಿಸುತ್ತಿರುವೆ. ಈ ಮಾಸದಲ್ಲಿ ಬಹಳ ಉತ್ತಮ ಆರಂಭವಾಗಿದೆ ಮಾಸದ ಮೊದಲನೇ ವಾರದಲ್ಲಿ ಗೋವುಗಳಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅಂತಾರಾಷ್ಟ್ರೀಯಯೋಗ ತಜ್ಞರಾದ ರಾಜೇಂದ್ರ ಎಂಕಣ್ಣ ಮೂಲೆ ಯವರು ಬಹಳ ದೊಡ್ಡ ಮೊತ್ತದ ದೇಣಿಗೆಯನ್ನು ಗುರುಕುಲಕ್ಕೆ ನೀಡಿದರು. ಹೀಗೆ ಪ್ರಾರಂಭವಾದ ಈ ಮಾಸದಲ್ಲಿ ಅನೇಕ ಶುಭಸೂಚನೆಗಳು ಹೊಸ ಹೊಸ ವಿಷಯಗಳು. ಅದರಲ್ಲಿ ಮೊದಲನೆಯದು ನಾಲಿಗೆಗೆ ಹಿತವನ್ನುಂಟುಮಾಡುವ ಅಡುಗೆಯನ್ನು ಮಾಡುವ ಉತ್ತಮ ಪಾಚಕರ ಆಗಮನವಾಯಿತು. ಭೀಮನಂತೆ ಉತ್ತಮ ದೇಹಧಾರಣೆಯನ್ನು ಹೊಂದಿರುವ ಭಟ್ಟರು ಪಾಕ ತಯಾರಿಸುವುದರಲ್ಲಿಯೂ ಬಲ್ಲವನೇ  ಸರಿ. ಪಾಕ ಮಾಡಿದರೆ ನಾಕದ ದೇವತೆಗಳು ನಾಚಿ ಗೆಳೆಯರಾಗಬೇಕು.

ಈಗಿನ ಕಾಲದಲ್ಲಿ ಅಡುಗೆಗೆ ಅನಿಲ ಸಹಕಾರ ಬೇಕು ಹಾಗಾಗಿ ತನ್ನ ದೇಹದ ಪ್ರತಿ ಅಂಗಗಳಿಂದಲೂ ಜನರಿಗೆ ಉಪಕಾರ ಮಾಡುವ ಗೋಮಾತೆಯ ಗೋಮಯದಿಂದ ಉಂಟಾಗುವ ಗೊಬ್ಬರ ಅನಿಲ ಉತ್ಪಾದಕರ ವ್ಯವಸ್ಥೆಯು ಈ ಮಾಸದಲ್ಲಿ ನಡೆದಿದೆ.

10 ಅಡಿ ಹಿತ್ತಲಿನ ಜಾಗದಲ್ಲಿ ಎತ್ತಲಿಂದಲೋ ಬಂದ ಜನರು ಎಲ್ಲರೂ ಕಣ್ಣೆತ್ತಿ ನೋಡುವಂತೆ ಮತ್ತಿತರರು ಸೇರಿ ಗೊಬ್ಬರದ ಗುಂಡಿ ಸ್ಥಾಪಿಸಿದರು.

ಮಕ್ಕಳ ವಿದ್ಯೆಯ ಅರ್ಹತೆಯನ್ನು ತಿಳಿಯುವುದಕ್ಕಾಗಿ ಅಳತೆಗೋಲು ಪ್ರಸಿದ್ಧವಾದ ಪರೀಕ್ಷೆ ಮಾಸದ ಮತ್ತೊಂದು ವಿಶೇಷ. ಮಕ್ಕಳ ಒಂದು ಹಂತದ ವಿದ್ಯಾರ್ಹತೆಯನ್ನು ಕಳೆಯುವುದಕ್ಕಾಗಿ ಈ ಮಾಸದಲ್ಲಿ ಪ್ರಥಮ ಮಾಸಿಕ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಲೇಖನ ಪರೀಕ್ಷೆ ಮತ್ತು ವಾಚನ ಪರೀಕ್ಷೆ ಎರಡು ವಿಧದಲ್ಲಿಯೂ ಈ ಪರೀಕ್ಷೆ ನಡೆಯಿತು. ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಪರೀಕ್ಷೆಗಳಲ್ಲಿ ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ನಮ್ಮ ಗುರುಕುಲಕ್ಕೆ ಹೆಚ್ಚಿನ ಆನಂದವನ್ನು ಪಡೆಯಲು ಮಕ್ಕಳ ಆಗಮನವಾಯಿತು ಒಬ್ಬ ಅರವಿಂದ ಮತ್ತೊಬ್ಬ ಭಾವಬೋಧ. ಹೊಸ ಜಾಗ ಹೊಸ ರೀತಿಯ ಎಂದೇನು ಮರುಗಲಿಲ್ಲ. ಎಲ್ಲಾ ವಿಷಯಗಳಿಗೂ ಅಂದುಕೊಳ್ಳುತ್ತಾ ಹೊಸ ಹೊಸ ವಿಷಯಗಳನ್ನು ಕಲೆಯುತ್ತ ಬಹಳ ಸಂತೋಷದಿಂದಲೇ ಎಲ್ಲರೊಂದಿಗೆ ತಮ್ಮ ದಿನಗಳನ್ನು ಕಳೆಯಲಾರಂಭಿಸಿದರು.

ಪ್ರತಿ ಮಾಸದಲ್ಲಿಯೂ 4 ಭಾನುವಾರಗಳು ಬರುವುದು. ಭಾನುವಾರಗಳಂದು ನಡೆಯುವ ಹಯಗ್ರೀವ ಸಭೆಗೆ ಒಬ್ಬೊಬ್ಬ ಹೊಸ ಹೊಸ ಅತಿಥಿಗಳು ಆಗಮಿಸುವರು. ಸದ್ಯಕ್ಕೆ ಇವೆಲ್ಲವೂ Online ಮೂಲಕವೇ ನಡೆದಿದೆ. ಮಕ್ಕಳಿಗೆ ಅನೇಕ ವಿಷಯಗಳನ್ನು ತಿಳಿಸಿ ಅಧ್ಯಯನ ಮಾಡುವಂತೆ ಪ್ರೇರೇಪಿಸಿದರು. ಅದರಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಸುಧೀಂದ್ರ ಆಚಾರ್ಯರು, ವಾದಿರಾಜ ಆಚಾರ್ಯರು, ಅನಂತಶಯನ ಆಚಾರ್ಯರು, ಸಂಸ್ಕೃತದ ವ್ಯುತ್ಪತ್ತಿಗೆ ಅನುಕೂಲವಾಗುವ ಅನೇಕ ಮಾರ್ಗದರ್ಶನಗಳನ್ನು ನೀಡಿ ಮಕ್ಕಳನ್ನು  ಪ್ರೇರೇಪಿಸಿದರು..

 


ಪ್ರಶಿಕ್ಷಣ ವಿಭಾಗ ಲತಾ.ಎಂ (ಪ್ರತಿನಿಧಿ, ಪ್ರಶಿಕ್ಷಣ ವಿಭಾಗ)

ವ್ಯವಸ್ಥೆಗೆ ಬೇಕಾದಂತೆ ತಿದ್ದುವ ಪ್ರಕ್ರಿಯೆ ತರಬೇತಿ. ಇದು ಪಾಶ್ಚಾತ್ಯರ ಸಂಸ್ಕೃತಿ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಆಸೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ತರಬೇತಿ ಎಂಬ ಪದಕ್ಕಿಂತ ಶಿಕ್ಷಣ ಎಂಬುದೇ ಹೆಚ್ಚು ಸೂಕ್ತ. ಪ್ರತಿಯೊಬ್ಬರಲ್ಲೂ ಒಂದು ಸತ್ವ, ಪ್ರತಿಭೆ ಅಡಗಿದೆ. ಹೀಗೆ ತನ್ನ ಸ್ವಧರ್ಮವನ್ನು ಕಂಡುಕೊಳ್ಳಲು ಬೇಕಾದ ಪ್ರಕ್ರಿಯೆ ಈ ಶಿಕ್ಷಣ. ಇದುವೇ ಪೂರ್ಣಪ್ರಮತಿಯಲ್ಲಿ ಸಾಧಿಸ ಬಯಸುತ್ತಿರುವ
ಪ್ರ-ಶಿಕ್ಷಣ ಎಂಬ ಅವಕಾಶ.  ಅರಿಯುವ – ಬೆಸೆಯುವ ಕೆಲಸ ಇದು. ಪೂರ್ಣಪ್ರಮತಿ ಎಂಬ ಕಲ್ಪನೆಯನ್ನು ಉಳಿಸಿ-ಬೆಳೆಸಲು ಬೇಕಾದ ಪಡೆಯನ್ನು ಸಿದ್ಧಮಾಡುವ ಪ್ರಶಿಕ್ಷಣ ವಿಭಾಗ ಸೆಪ್ಟೆಂಬರ್ ತಿಂಗಳಿನಲ್ಲಿ ಹಲವಾರು ಮಹತ್ತರವಾದ ಚಟುವಟಿಕೆಗಳನ್ನು ಆಯೋಜಿಸಿತ್ತು. ಅದರ ಪಕ್ಷಿನೋಟ ಹೀಗಿದೆ:

  • Maria Montessori ಅವರ ೧೫೦ ನೇ ಜನ್ಮದಿನದ ಪ್ರಯುಕ್ತ ಅನುಭವ ಹಂಚಿಕೆ ಸಭೆಯನ್ನು ಆಯೋಜಿಸಲಾಗಿತ್ತು. ಮಾಂಟೆಸರಿ ಅವರು ಶಿಕ್ಷಣವನ್ನು ನೋಡಿರುವ ಬಗೆ ಒಂದು ಅದ್ಭುತ ಎನಿಸಿವುದು. ಅವರ ಜೀವನ ಗಾಥೆಯನ್ನು ಸ್ಮರಿಸುತ್ತಾ ಅಧ್ಯಾಪಕರು, ಅತಿಥಿಗಳು ಭಾವುಕರಾದರು.
  • ಪ್ರೌಢಶಾಲೆಯ ಪೋಷಕರಿಗಾಗಿ “Adolescent Developmental needs (human tendency) and handling behavioural issues during current situation” ಎಂಬ ವಿಷಯದ ಬಗ್ಗೆ Dr. Dinesh Periasamy ಎಂಬುವವರಿಂದ ಉಪಯುಕ್ತ ಮತ್ತು ಪರಿಣಾಮಕಾರಿಯಾದ ಆಪ್ತಸಲಹಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
  • ಸಂಸ್ಕತ ಭಾಷಾ ಕಲಿಕೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ವಿದ್ಯಾಸಂ ಸಂಸ್ಥೆಯ ಸಹಯೋಗದಲ್ಲಿ ತರಬೇತಿ ಪ್ರಾರಂಭವಾಯಿತು. ವ್ಯಾಕರಣ ತಿಳಿದಿದ್ದರೂ ಮಕ್ಕಳಿಗೆ ಹೇಗೆ ಅದನ್ನು ಕಲಿಸುವುದು ಎಂಬ ನಿಟ್ಟಿನಲ್ಲಿ ಈ ತರಬೇತಿ ಬಹಳ ಮಹತ್ವವಾದದ್ದು. ಪೂರ್ಣಪ್ರಮತಿಯ ಮತ್ತು ಪೂರ್ಣಪ್ರಜ್ಞವಿದ್ಯಾಪೀಠದ ಸಂಸ್ಕೃತ ಅಧ್ಯಾಪಕರು ಬಹಳ ಉತ್ಸಾಹದಿಂದ ಈ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.
  • ಪವನ್ ಗುಪ್ತಾ ಅವರು ಸ್ವತಃ ಧರ್ಮಪಾಲ್ ಅವರೊಡನೆ ಕೆಲಸ ಮಾಡಿದ ಅನುಭವ ಇರುವವರು ಮತ್ತು ಸ್ವತಃ ಜನಸಾಮಾನ್ಯರ ನಡುವೆ ಬೆರೆತು ಶಿಕ್ಷಣ, ಸಂಸ್ಕೃತಿ, ಭಾಷೆಯ ಅಧ್ಯಯನದಲ್ಲಿ ತೊಡಗಿರುವವರು. ಆಧುನಿಕತೆ ಹೇಗೆ ನಮ್ಮನ್ನು ನಮ್ಮಿಂದ ದೂರ ಮಾಡಿದೆ ಎಂಬುದನ್ನು ಬಹಳ ಸೊಗಸಾಗಿ ಮನದಟ್ಟಾಗಿರುವ “Making Sense of Modern Education” ಎಂಬ ಒಂದು ತಿಂಗಳ ತರಬೇತಿಯನ್ನು ಹಮ್ಮಿಕೊಂಡಿದ್ದಾರೆ. ನಮ್ಮ ಶಾಲೆಯ ನಾಲ್ಕು ಮಂದಿ ಈ ತರಬೇತಿಯಲ್ಲಿ ಭಾಗವಹಿಸುತ್ತಿದ್ದೇವೆ. ಇದೊಂದು ಅದ್ಭುತ ಅನುಭವ. ಶಿಕ್ಷಣದಲ್ಲಿ ಭಾರತೀಯತೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ಅರಿವು ಮೂಡುತ್ತಿದೆ.
  • ಸಂಸ್ಕೃತ ಸಂಭಾಷಣಾ ಶಿಬಿರವು ಸತೀಶಣ್ಣ ಅವರ ಸಾರಥ್ಯದಲ್ಲಿ ಈಗಾಗಲೇ ನಡೆಯುತ್ತಿದೆ. ಪೋಷಕರ, ಅಧ್ಯಾಪಕರ ಮತ್ತು ಪ್ರಶಿಕ್ಷಣದ ಅಭ್ಯರ್ಥಿಗಳಿಗಾಗಿ ಮೂರು ತಂಡಗಳಲ್ಲಿ ಸಂಸ್ಕೃತ ಭಾರತೀ ನಡೆಸುವ ಪ್ರವೇಶಪರೀಕ್ಷೆಯ ತಯಾರಿ ನಡೆಯುತ್ತಿದೆ.

ಪೂರ್ಣಪ್ರಮತಿ ಒಂದು ಕೆಲಸವಲ್ಲ, ಶಾಲೆಯಲ್ಲ. ಇದೊಂದು ಕಲಿಕಾ ತಾಣ. ಹಾಗಾಗಿ ಇದರ ಬಗ್ಗೆ ಪರಿಚಯಿಸುವ ಪ್ರಕ್ರಿಯೆ ಸ್ವಲ್ಪ ವಿಭಿನ್ನವಾಗೇ ಇರಬೇಕು. ಯಾರೇ ಮೊದಲು ಪೂರ್ಣಪ್ರಮತಿಗೆ ಪರಿಚಯವಾದರೂ ತನ್ನ ಕುಟುಂಬಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ – ಅದುವೇ ದಶಪ್ರಮತಿ. ಅಂದರೆ ಧ್ಯೇಯಗಳನ್ನು, ಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಕೆಲಸ. ಇದಕ್ಕೆ ಸಾಕಷ್ಟು ಸಮಯ ಕೊಟ್ಟು ಏಕಾಗ್ರತೆಯಿಂದ ಮಾಡುವಂತೆ ಕೆಲವು ಓದುವ-ಬರೆಯುವ-ವಿಡಿಯೋಗಳನ್ನು ನೋಡುವ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಹೀಗೆ ಈ ದಶಪ್ರಮತಿ ಪ್ರಕ್ರಿಯೆಯೇ ಒಂದು ಪ್ರಶಿಕ್ಷಣವೂ ಆಗಿದೆ. ಪೂರ್ಣಪ್ರಮತಿಯೊಂದಿಗೆ ಸೇರಿ ಈ ಕಲ್ಪನೆಯನ್ನು ಸಾಕಾರಗೊಳಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಸ್ವಾಗತವಿದೆ.

 

ಅಲೆಮಾರಿ – 4

ಭಾಗ – ೪

ಲತಾ.ಎಂ (ಅಧ್ಯಾಪಕರು ಮತ್ತು ಪ್ರಶಿಕ್ಷಣ ವಿಭಾಗದ ಪ್ರತಿನಿಧಿ)

 

(ಮುಂದುವರೆದ ಭಾಗ…)

ಏನೋ ಹುಡುಕಲು ಹೋಗಿ ಏನೋ ಸಿಕ್ಕಿತು

ಸೇವಾನಗರದ ಕಂಡು ಒಂದು ಹಂತ ಮುಗಿದ ಮೇಲೆ ನನ್ನ ಪಯಣ ನೇರವಾಗಿ ಮಾಗಡಿ ರಂಗನಾಥನ ಕ್ಷೇತ್ರಕ್ಕೆ. ಆನಂದವನಕ್ಕೆ ಸ್ಥಳೀಯ ಅಧ್ಯಾಪಕರುಅನ್ನು ಹುಡುಕುವ ಸಲುವಾಗಿ ಮಾಗಡಿಗೆ ಹೋದೆ. ಆದರೆ ಅಲ್ಲಿರುವ ರಂಗನಾಥ ದೇವಾಲಯದ ಅರ್ಚಕರು ನೀವೇ ಬಂದು ಇಲ್ಲಿನ ಮಕ್ಕಳಿಗೆ  ಸಂಸ್ಕೃತ ಹೇಳಿಕೊಡಿ ಎಂದರು. ಹೋಗಿ-ಬರುವ ವ್ಯವಸ್ಥೆ ಮಾಡಿದರು. ವ್ಯವಸ್ಥೆ ಇಲ್ಲದೆ  ಹಳ್ಳಿಯಿಂದ ಹಳ್ಳಿಗೆ ಅಲೆಯುತ್ತಾ ಇದ್ದಾಗ ರಂಗನಾಥ ಒಂದು ವ್ಯವಸ್ಥೆ ಮಾಡಿದ. ಮುಂದಿನ ತರಗತಿ ಆಲ್ಲಿ ಪ್ರಾರಂಭವಾಯಿತು. ಅವರು ಆರ್.ಎಸ್.ಎಸ್ ನವರು. ಮಕ್ಕಳನ್ನು ಚೆನ್ನಾಗಿ ಕಲೆ ಹಾಕಿದರು. ಸಾನಂದ ಸ್ವಾಮಿಜಿ ಹೇಳಿದಂತೆ ಪಾಠಕ್ಕೆ ಬರುವ ಮಕ್ಕಳ ಪೋಷಕರು convince ಆಗುವುದು ಮುಖ್ಯ. ಇಲ್ಲಿ ಪೋಷಕರೇ ಮಕ್ಕಳನ್ನು ತಂದು ಸೇರಿಸಿದರು. ಭಾನುವಾರ ಸಂಸ್ಕೃತ ತರಗತಿ ನಡೆಯುತ್ತದೆ ಎಂದು ಒಳ್ಳೆಯ ಪ್ರಚಾರ ಸಿಕ್ಕಿತು. ಕಲ್ಯದಿಂದಲೂ ಮಕ್ಕಳು ಬರುತ್ತಿದ್ದರು. ಒಂದೇ ವರ್ಷದಲ್ಲಿ ರಂಗನಾಥನ ಕೊಟಾರೋತ್ಸವದಲ್ಲಿ ಹತ್ತಳ್ಳಿ ಜನರ ಸಭೆಯಲ್ಲಿ ಮಕ್ಕಳಿಂದ ಕಾರ್ಯಕ್ರಮ ಕೊಡಿಸಲು ಸಾಧ್ಯವಾಯಿತು. ಇದಾವುದೂ ನನ್ನ ಪ್ರಯತ್ನದಿಂದ ಆದದ್ದಲ್ಲ. ರಂಗನಾಥ ಮಾಡಿಸಿಕೊಂಡಿದ್ದು. ನನ್ನ ಜೋಳಿಗೆಗೂ ಒಂದೆರಡು ಭಿಕ್ಷೆ ಹಾಕಿದ. ಅದನ್ನು ಹೇಳಲೇ?!

ಒಮ್ಮೆ ಹೀಗೆ ಬಸ್ ನಲ್ಲಿ ಹೋಗುವಾಗ ಒಬ್ಬರು “ಸೀಗೇಹಳ್ಳಿ ಗೇಟ್” ನಲ್ಲಿ ತಾವರೆಕೆರೆ ಇಳಿಯಬೇಕು, ಎಲ್ಲಿ ಬರತ್ತೆ ಎಂದರು. ಕಂಡಕ್ಟರ್ “ಅಯ್ಯೋ ತಾವರೆಕೆರೆ ಹೋಗಿ ಯಾವುದೋ ಕಾಲ ಆಯ್ತು, ನೀವೇನ್ ನಿದ್ದೆ ಮಾಡ್ತಿದ್ರಾ, ಸೀಟ್ ಸಿಕ್ತು ಅಂತ ನಿದ್ದೆ ಮಾಡೋದಾ ಅಂತ ಗದರಿಸಿದ. ವಾಸ್ತವ ಎಂದರೆ ಅವರು ಆ ದಾರಿಗೆ ಹೊಸಬರು. ನಿಲ್ದಾಣಗಳ ಅರಿವು ಇರಲಿಲ್ಲ. ಸಾಮಾನ್ಯವಾಗಿ ಹಳ್ಳಿ ಬಸ್ ಗಳಲ್ಲಿ ಯಾರೇ ಬರಲಿ ’ಎಲ್ಲಿ ಇಳೀತೀರಾ? ಯಾವ ಊರು ನಿಮ್ದು? ಎಲ್ಲಿಗೆ ಹೋಗ್ತಿದ್ದೀರಾ” ಎಂದು ಕೇಳಿಯೇ ಕೇಳುತ್ತಾರೆ. ಅದು ಎಷ್ಟು ಮುಖ್ಯ ಎಂದು ಈ ಘಟನೆಯಾದ ಮೇಲೆ ತಿಳಿಯಿತು. ಈಗಿನ ಕಾಲದವರಿಗೆ ಕಿವಿಗೆ ವಯರ್ ನೇತುಹಾಕ್ಕೊಂಡು ಹಾಡು ಕೇಳುವುದರಲ್ಲೇ ಪ್ರಪಂಚ ಮುಗಿದೇ ಹೋಗತ್ತೆ. ಬಾಯ್ಬಿಟ್ಟು ಮಾತಾಡಿದ್ರೆ ಮುತ್ತು ಉದುರೊಲ್ವೆ ಮತ್ತೆ?!

ಹಳ್ಳಿ ಜನರ ಸರಳ ಜೀವನವೇ ಚಂದ. ೪ ಜನ ಕೂರುವ ಸೀಟ್ ನಲ್ಲಿ Adjust ಮಾಡಿಕೊಂಡು ೮ ಜನ ಕೂರುವುದು, ಜಾಗವೇ ಇಲ್ಲದಿದ್ದರೂ ವಯಸ್ಸಾದವರನ್ನು ಹತ್ತಿಸಿಕೊಂಡು ಹೇಗೋ ಜಾಗ ಮಾಡಿ ಕೂರಿಸುವುದು, ಡ್ರೈವರ್ ಬಳಿ ದೂರದ ಊರಿನಲ್ಲಿರುವ ತಮ್ಮವರಿಗಾಗಿ ಪಾರ್ಸೆಲ್ ಕಳಿಸುವುದು, ಹತ್ತಿರದವರೆಲ್ಲ ಡ್ರೈವರಣ್ಣನ ಬಳಿ ಬಾಯ್ತುಂಬ ಮಾತಾಡುವುದು…ಇದೆಲ್ಲ ಅದ್ಭುತ ಅನುಭವ ಸಂಬಂಧವಿಲ್ಲದೆಯೂ ಬಸ್ ನಲ್ಲಿ ಇರುವಷ್ಟು ಕಾಲ ಆತ್ಮೀಯ ಸಂಬಂಧಿಕರಂತೆ ಎಲ್ಲಾ ವಿಚಾರಿಸಿ ಕೊನೆಗೆ “ದೇವ್ರು ಇಟ್ಟಂಗ್ ಆಗ್ತದೆ ಬಿಡವ್ವ” ಎನ್ನುವುದು. ಇಳಿಯುವಾಗ ಮತ್ತೆ ಭೇಟಿಯಾಗುವ ಯಾವ ನಿರೀಕ್ಷೆಯೂ ಇರದೆ ಇಳಿದು ಹೋಗುವುದು. ದಾಸರು ಹೇಳಿರುವ “ಮಕ್ಕಳಾಡಿ ಮನೆ ಕಟ್ಟಿದ್ದಂತೆ, ಆಟ ಸಾಕೆಂದು ಮುರಿದು ಹೋದಂತೆ, ಹೇಗೆ ಬರೆದಿತ್ತೋ ಪ್ರಾಚೀನದಲ್ಲಿ, ಹಾಗೆ ಇರಬೇಕು ಸಂಸಾರದಲ್ಲಿ” ಎನ್ನುವ ಮಾತು ಇವರಲ್ಲಿ ಹಾಸುಹೊಕ್ಕಿರುವುದು ಕಂಡುಬಂದಿತು.

ದೇಹಕ್ಕೆ ಶ್ರಮವೆನಿಸಿದರೂ ಅದರಿಂದ ಸಿಗುವ ಈ ಅನುಭವಗಳನ್ನು ನಾನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಭಾನುವಾರದ ಭರ್ಜರಿ ಊಟದಲ್ಲಿ ಸಾನಂದ ಸ್ವಾಮಿಜಿಯವರ ಪಾತ್ರ ಬಹಳ ಇದೆ.

ಸದ್ಯಕ್ಕೆ ಅಜೀರ್ಣವಾಗುವುದು ಬೇಡ. ಅಲೆಮಾರಿಯ ಮತ್ತೊಂದು ವಿಶೇಷ ಅನ್ವೇಷಣೆಯಲ್ಲಿ ಮತ್ತೆ ಭೇಟಿಯಾಗೋಣ.

ತಾತ್ಕಾಲಿಕವಾಗಿ ಮುಗಿಯಿತು.

 

ಅಧ್ಯಯನ

(ಅಧ್ಯಾಪಕರ / ಪೋಷಕರ ಸ್ವಾಧ್ಯಾಯ ಹಂಚಿಕೆ ವಿಭಾಗ)

 

भासरूपकाणां प्रस्तुतता  – 

                   -Vikash Savoy (Sanskrit Teacher Upper Elementary and PU Division)

भासरूपकाणां प्रस्तुतता

इति शीर्षिकां बहुधा व्याख्यातुं शक्यते ।

  • भासरूपकेषु पात्राणि यं संदेशं व्यतरन् सः संदेशः अद्यापि प्रस्तुत: ।
  • भास: स्वरूपकेषु जगतः उपकारार्थं यानि सुभाषितानि उवाच तानि अद्यापि प्रस्तुतानि ।
  • भास: रंगमंचे अभिनेतृभ्यः यान् अनुकूलान् नियमान् कल्पितवान् ते नियमाः अद्यापि प्रस्तुता ।

एवं विमर्शकभेदेन विमर्शापि भिध्यते खलु । मम विमर्शा एवमस्ति । “भासः अनेकानां रूपकाणां कर्ता इति अवगत: विषय एव । अपि च एषः निर्देशकोऽपि। एषः अनेकानि रूपकाणि रचयामास । अतः अनुभवे न किंचिदूनतास्य वर्तते इति सर्वैः उररीक्रियत एव ।  भासमहर्षिः तद्रूपकं च, अधुनातनानां, धारावाही- चलच्चित्रनिर्देशकाणां मार्गदर्शको भवति । भासरूपकाणि आधुनिकरूपककर्तॄणां मार्गदर्शकरूपेण प्रस्तुतानि भवन्ति इति शीर्षिकायाः अर्थं प्रकल्प्य अग्रे गम्यते । “घटकज्ञानं प्रति घटितज्ञानं कारणं’ इति नियमोऽस्ति । व्याकारणे सूत्राध्ययनसमये न्यायोऽयं अनुसन्धीयते । अतः भासविषये किंचित् विवक्षामि।

      भाससम्बन्धी विषयः भाससमस्या’ इत्येव प्रथिता । नास्मिन् महर्षिविषये इदमित्थमिति व्याचक्ष्महे । केचनैष: क्रिस्तपूर्वं चतुर्थशतके आसीदिति, केचन द्वितीयशतकात् पूर्वमेव भवितव्यं तेनेति प्रतिपादयन्ति । नात्र निर्णायकं वाक्यमस्ति । विषयद्वयसमर्थनेऽपि प्रमाणबाहुल्यं, स्फुटकरणानि च संदृश्यन्ते । विषयेऽस्मिन् भासपितृणां, महामहोपाध्याय श्री टी. गणपतिशास्त्रिणां, योगदानं अविस्मरणीयं । भासरूपकाणां प्रथमसम्पादकत्वेन भासस्य ‘पिता’ इत्युक्तम् । यः यस्य स्वरूपं लोकाय दर्शयति, सः तस्य पिता इति प्रतीतिः खलु ? नात्र कालः विचार्यते । यत्र न निर्णयो भवति तत्र मौनमेव शरणम् इति विदुषां अभिप्रायः खलु?

एवं समस्याविभ्रमनिमग्नस्य महर्षेः भासस्य ज्वलनमित्रेति उपाधिरासीत् इति वाक्पतिकृत-गौडवहो-नामकप्रबंधे समुपलभ्यते । अत्रेकां कथां श्रावयन्ति प्राचीनाः । समाननामांकिते व्यासभासविरचिते ‘विष्णुधर्म’ इति प्रथिते ग्रन्थे प्रकर्षापरिक्षणायै स्वक्षिप्तसकलशकलदहनक्षमे ज्वलनप्रक्षिप्तेऽपि, व्यासविरचितं ग्रंथं जज्वाल, न तु भासस्य । ततः प्रभृति ज्वलनमित्रैति नाम प्राप्तवान् । इममेव विषयं जयानको नाम कविः “पृथ्वीराजविजयाख्य काव्ये” निरूपितवानस्ति ।

“स्वप्नवासवदत्ता” इति रूपकविषयेऽपि एवमेव खलु ? “स्वप्नवासवदत्तस्य दाहकोऽभूत् न पावकः” वाक्यमिदम् अधुना स्मृतिपटले आयाति । सर्वाणि रूपकाण्यपि भस्मसात् अभूवन् तथापि नैषः ग्रन्थः दग्धः । एवं सार्थकोपाधिः मुनि सः।

वैदिकेषु नियमः एकः अस्ति । मन्त्रानुसन्धानात् पूर्वं तन्मन्त्रर्षेः स्मरणं विहितम् इति । अतः मया मोक्षानन्ददायकचतुर्दशरूपकद्रष्टुः भासस्य स्मरणमाचरितम् ।

भासस्य अनितरसाधारणत्वं :

नाट्यशास्त्रकर्त्रुभिः भरताचार्यैः नाट्यशास्त्रं पंचमो वेदः इति अनुवर्णितः “क्रीडनीयकामिच्छामो दृश्यंश्रव्यं च यद् भवेत्” इति देवता प्रार्थनम् पुरस्कृत्य, ब्रह्मैव क्रीडनकं प्रथमं ससर्जेति श्रूयते ।  नाट्यम् नाटकादिकं च सर्वानन्दजनकमिति नात्र संशयलवलेशोऽपि ।

सर्वे भासकालिदासादिकवयः इमामेव सरणिं अनुसस्रुः किन्तु सर्वे कवयः नाट्यं नाटकं च [दृश्यकाव्यं] चक्रुः। तत्र प्रसिद्धिम् अपि प्राप्ताः । किन्तु रूपकरचनात्प्राक् तेषां मनस्थितिः उद्देशः क: आसीत् इति विचार्यते चेत् स्पष्टं भाति यत्, →

  • स्वाश्रयदातुः श्लाघनं, तत्प्रीतिसम्पादनं,
  • जनानां कृते उपदेशः,
  • स्वधर्माचरणे प्रेरणा,
  • स्वाश्रितसिद्धान्तस्य दृश्यकाव्यद्वाराप्रचारः,

इमानेव मनसि निधाय रूपकाणि रचयामासुः । किन्तु स्वकृतदृश्यकाव्यं कथं लोकान् जनांश्च स्पृशति ? किं परिणामं वितरति, प्रायशः न विचिन्त्येरन् । तेषां रूपकाणि, नाटकानि वा पठ्यते चेत्, महदानन्दसन्दोहं स्रावयति इति विषये न संशीतिशकलोऽपि । परं तु यदि रङ्गमण्डपे प्रदर्शनपथां भजन्ते तर्हि प्रेक्षकाणां रसानुभूतिं जनयति वा? स्वालोचितविषयाः, आलोचितक्रमेणैव संद्रष्टॄणां  प्रेक्षकाणां मनसि निमज्जति वा? इति प्रायशः न आलोचितवन्तः । प्राचीनानां भरताचार्याणां शास्त्रम् अवलम्ब्य विनम्राः सन्तः, द्वाभ्यां कराभ्यां स्वकपोलस्फालनं कुर्वन्तः, रूपकाणि विरच्य नाट्याचार्याणां कृपापात्राः अभवन् किंतु, प्रेक्षकाणां कृपापात्राः नाभवन् ।       

भासान्यकविचिन्तितविषयाः कल्पनारमणीयाः, न तु रंगमंचे प्रदर्शनयोग्याः । भासान्यकवयः तन्त्रांशे स्खलितपदाः अभूवन् । अस्मिन् विषये भासः जागरूकः अभवत् । जनानां मनोंगितम् विचिन्त्य, भविष्यतिकाले यद्येकेन रूपकेण प्रसिद्धिः प्राप्तव्या चेत्, कथं रचयितव्यं ? इति आलोच्य परं पारं प्राप । एतस्य रूपकाणि रंगमंचे अभिनेतृणां सौकर्यं आवहन्ति । प्रस्तुते, सर्वेषां निर्देशकाणां भासः एव गुरुस्थाने स्थित्वा रंगकर्मिभ्यः मार्गं दर्शयति । एवं “भासरूपकाणि आधुनिकदृश्यकाव्यानां मार्गदर्शकाणि भूत्वा प्रस्तुततां भजन्ते”।

(To be continued….)

 


ಹೊಸ ಶಿಕ್ಷಣ ನೀತಿ ೨೦೨೦

                                       - ಮಂಗಳಾ ಹೆಬ್ಬಾರ್ (ಅಧ್ಯಾಪಕರು, ಪೂರ್ವಪ್ರಾಥಮಿಕ ವಿಭಾಗ)

ಇತ್ತೀಚೆಗೆ ನಾನು ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಓದುತ್ತಿದ್ದೆ ಅಲ್ಲಿರುವ ಕೆಲವು ಅಂಶಗಳನ್ನು ಹಂಚಿಕೊಳ್ಳಬಯಸುತ್ತೇನೆ.

ಏನಿದು ರಾಷ್ಟ್ರೀಯ ಹೊಸ ಶಿಕ್ಷಣ ನೀತಿ? ಏನೇನು ಹೊಸ ಅಂಶ ಇದರಲ್ಲಿದೆ? ಇದರಿಂದ ಮುಂದಿನ ಪೀಳಿಗೆಗೆ ಸಿಗುವ ಲಾಭ ಏನು? ಇವೆಲ್ಲದರ ಬಗ್ಗೆ ನನಗೆ ತಿಳಿದಿರುವ ಕೆಲವು ಅಂಶವನ್ನು ಹಂಚಿಕೊಳ್ಳುತ್ತೇನೆ.

1968 ರಲ್ಲಿ ಹೊಸ ಶಿಕ್ಷಣ ಕಾಯ್ದೆ ,1986 ರಲ್ಲಿ ಹಲವಾರು ಪರಿವರ್ತನೆಯ ನಂತರ ಇನ್ನೊಂದು ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿತು. ಇಂದು 2020ರ ನೂತನ ಶಿಕ್ಷಣ ನೀತಿ ವಿನೂತನ ಉದ್ದೇಶಗಳನ್ನು ಆಸೆಗಳನ್ನು ಬದಲಾವಣೆಯ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿದ್ದಾರೆ ಎಂದು ಅರ್ಥವಾಗುತ್ತದೆ.

ಶಿಕ್ಷಣವು ಒಂದು ದೇಶದ ಬೆಳವಣಿಗೆಯ ಮೇಲೆ ನೇರವಾದ ಪರಿಣಾಮ ಬೀರಬಲ್ಲದು, ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸನ್ಮಾನ್ಯ ಕೇಂದ್ರ ಸರಕಾರ ಶಿಕ್ಷಣದ ಗುಣಮಟ್ಟವನ್ನು ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ, ವೈಜ್ಞಾನಿಕ ಬೆಳವಣಿಗೆ ರಾಷ್ಟ್ರೀಯ ಏಕತೆ, ಸಂಸ್ಕೃತಿಯ ಉಳಿವು ಇವೆಲ್ಲವನ್ನೂ ಒಳಗೊಂಡ ಹೊಸ ಶಿಕ್ಷಣ ನೀತಿಯನ್ನು ಭಾರತದ ಮುಂದಿನ ಶ್ರೇಯೋಭಿವೃದ್ಧಿಗಾಗಿ ಪ್ರಕಟಿಸಿದೆ.

ಭಾರತದ ಜನಸಂಖ್ಯೆಯಲ್ಲಿ ಬಹುಪಾಲು ಯುವ ಜನಾಂಗದವರು ಮುಂದಿನ ಹತ್ತು ವರ್ಷಗಳಲ್ಲಿ ಇಂತಹ ಗುಣಮಟ್ಟದ ಶಿಕ್ಷಣ ಒದಗಿಸುವುದುರಿಂದ ನಮ್ಮ ಭಾರತದ ಭವಿಷ್ಯ ನಿರ್ಧಾರವಾಗಬಲ್ಲದು. ಇಡೀ ವಿಶ್ವವೇ ಇಂದು ಹೊಸ ಹೊಸ ಬದಲಾವಣೆ, ಸಂಶೋಧನೆಯಲ್ಲಿ ಭರದಿಂದ ಸಾಗಿದೆ.ವಿವಿಧ ವೈಜ್ಞಾನಿಕ, ತಾಂತ್ರಿಕ ಬೆಳವಣಿಗೆಯಿಂದ ದಿನದಿನವು ಅಚ್ಚರಿ ಮೂಡುವಂತಹ ಬದಲಾವಣೆ.

ಇಂದಿನ ಈ ಪ್ರತಿಕೂಲ ವಾತಾವರಣದಲ್ಲಿ ಹೇಗೆ ಉತ್ತಮವಾಗಿ ನಮ್ಮ ಯುವಪೀಳಿಗೆಯನ್ನು ಪರಿಣಿತಿ ಪಡಿಸಬಹುದು,ಶಿಕ್ಷಣವು ಒಂದು ಅಳತೆಯ ಮಾಪನವಾಗಿರದೆ ಅದರಲ್ಲಿ ಮಾನವೀಯ ಮೌಲ್ಯಗಳು, ಅರ್ಥಶಾಸ್ತ್ರ, ಕೃಷಿ, ವಿಮರ್ಶೆ ಮತ್ತು ನಿರ್ಧಾರ  ಸಂಶೋಧನೆ ಒಟ್ಟಾರೆ ವಿದ್ಯಾರ್ಥಿ ಕೇಂದ್ರೀಕೃತವಾಗಿ ಆನಂದದ ಕಲಿಕೆ ಆಗಬೇಕು. ಇದರಲ್ಲಿ ಇನ್ನೂ ಅಂದರೆ ಕಲೆ-ಸಾಹಿತ್ಯ ಕರಕುಶಲ, ಆಟ, ಯೋಗ, ಭಾಷೆ-ಸಂಸ್ಕೃತಿ, ಗಣಿತ ಇವು ಕೂಡ.ಇದು ಅವರವರ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಒದಗಿಸುವಂತಾಗಬೇಕು.

ಇಲ್ಲಿಯವರೆಗೆ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿತ್ತು ಎಂದರೆ 10+2. ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಶಾಲಾ ಶಿಕ್ಷಣ ನಂತರ ಎರಡು ವರ್ಷದ ಪದವಿ ಪೂರ್ವ ಶಿಕ್ಷಣ.

ಇದನ್ನೇ ಹೊಸ ಶಿಕ್ಷಣ ನೀತಿಯಲ್ಲಿ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ  5+3+3+4

3ನೇ ವರ್ಷದಿಂದ 8ನೇ ವರ್ಷದ ವರೆಗೆ ಅಂದರೆ ಪೂರ್ವ ಪ್ರಾಥಮಿಕದಿಂದ 1 ಮತ್ತು 2 ನೇ ತರಗತಿಯವರೆಗೆ ಅಡಿಪಾಯದ ಹಂತ.. 9ನೇ ವರ್ಷದಿಂದ 11 ವರ್ಷದವರೆಗೆ ಅಂದರೆ ಮೂರನೇ ತರಗತಿಯಿಂದ 5 ನೇ ತರಗತಿಯವರೆಗೆ ತಯಾರಿ ಮಟ್ಟ,ಇಲ್ಲಿ ಮಕ್ಕಳಿಗೆ ಹೆಚ್ಚು ಚಟುವಟಿಕೆಯುಳ್ಳ, ಮಕ್ಕಳನ್ನೇ ಕೇಂದ್ರೀಕೃತವಾಗಿರಿಸಿಕೊಂಡ ಪಠ್ಯಕ್ರಮ ಇರುತ್ತದೆ. 6ನೇ ತರಗತಿಯಿಂದ 8ನೇ ತರಗತಿಯವರೆಗೆ ಅಂದರೆ 11 ವರ್ಷದಿಂದ 14 ವರ್ಷದ ಮಕ್ಕಳಿಗೆ ವಿಷಯಾಧಾರಿತ ಕಲಿಕೆ ಮತ್ತುವೃತ್ತಿಪರ ಶಿಕ್ಷಣ. 9ನೇ ತರಗತಿ ಯಿಂದ 12ನೇ ತರಗತಿಯವರೆಗೆ ಅಂದರೆ ಪಿಯುಸಿಯವರೆಗೆ ಅವರಿಗೆ ಆಳವಾದ ಅಧ್ಯಯನ, ಕೋಡಿಂಗ್, ವೃತ್ತಿಪರ ಶಿಕ್ಷಣ ಮಕ್ಕಳ ಅಭಿರುಚಿಗೆ ತಕ್ಕಅಧ್ಯಯನವನ್ನು ಆರಿಸಿಕೊಳ್ಳುವ ಎಲ್ಲಾ ಸ್ವಾತಂತ್ರ್ಯವನ್ನು ಇಲ್ಲಿ ಕಲ್ಪಿಸಲಾಗಿದೆ.

ನಮ್ಮ ಭಾರತದ ಇತಿಹಾಸವನ್ನು ತಿರುವಿ ಹಾಕಿದರೆ ನಮಗೆ ತಿಳಿಯುವುದು ನಮ್ಮಲ್ಲಿದ್ದ ಹೆಸರಾಂತ ವಿಶ್ವವಿದ್ಯಾನಿಲಯಗಳಾದ ತಕ್ಷಶಿಲಾ, ನಳಂದ ಇಲ್ಲಿ ಅದೆಷ್ಟೋ  ಮಂದಿ ವಿದ್ವಾಂಸರು, ಅರ್ಥಶಾಸ್ತ್ರಜ್ಞರು, ಸಾಹಿತಿಗಳು, ಸಂಶೋಧಕರು ಅವರ ಕೊಡುಗೆ ಇಡೀ ವಿಶ್ವಕ್ಕೆ ಅಪಾರ. ಅಂತಹ ದೇಶದಲ್ಲಿ ಅದೇ ಪರಂಪರೆಯ ಬೀಜವನ್ನು ಬಿತ್ತಿ ಬೆಳೆಸುವುದೇ ನಮ್ಮ ಕರ್ತವ್ಯ.

ನಮ್ಮ ಪೂರ್ಣಪ್ರಮತಿ ಶಾಲೆ ಹತ್ತು ವರ್ಷದ ಹಿಂದೆಯೇ “ಪರಂಪರಾ ಬೀಜ ರಕ್ಷೆ” ಎನ್ನುವ ಅಪೂರ್ವವಾದ ಧ್ಯೇಯವನ್ನು ಇಟ್ಟುಕೊಂಡು ಅಂಬೆಗಾಲಿಡುತ್ತಾ ಇಂದು ಪ್ರೌಢಾವಸ್ಥೆಗೆ ಬಂದು ನಿಂತಿದೆ.ಹೊಸ ಶಿಕ್ಷಣ ನೀತಿ ನಮಗೆ ಸಿಕ್ಕಂತಹ ಇನ್ನೊಂದು ಬೆಂಬಲ ಮಾರ್ಗದರ್ಶನವಲ್ಲದೆ ಮತ್ತೇನು?

 

The second Plane Chithrashree B N (Teacher, Elementary division)

Maria Montessori found that children moved through a succession of developmental planes as they get older. Each plane has a variety of characteristics that are typical for children at that stage. Understanding these planes of development is key to understanding Montessori. 

 

My children are in two different planes of development. My son is presently in the second plane and my daughter has just stepped into the third plane. 

 

Second Plane of Development

 In The Absorbent Mind, Maria Montessori says, “it is a period of growth unaccompanied by other change. The child is calm and happy. Mentally, he is in a state of health, strength and assured stability.” There is also a new found focus on the society, goodness, rules, and social constructs. Maria says, 

 

In a second plane child, “An inner change has taken place, but nature is quite logical in arousing now in the child not only a hunger for knowledge and understanding, but a claim to mental independence, a desire to distinguish good from evil by his own powers, and to resent limitation by arbitrary authority.  In the field of morality, the child now stands in need of his own inner light.” 

 

Children in this plane of development also make a shift away from the absorbent mind and solely constructing themselves, and instead become interested in the world around them. They have a keen interest in culture, in history, in science, and especially in their place within this big beautiful world.

 

My son Madhwa who is in the second plane, is showing immense interest in Zoology and Botany -part of Culture. As mentioned in the previous paragraphs, my son who is also an elementary child is experiencing the shift from the “I being the center” to “We all being the center”. To teach an elementary child becomes easy if we have an idea of his mental appetite. Madhwa or any other elementary child enjoy their learning best when there is absolute freedom of choice and space for repetitive experiencing which in turn help them acquire the desired knowledge. 

 

In this corona times I got the opportunity to observe the working/thinking pattern of the second pane child in detail. Here is what I witnessed and still witnessing…….:

  • An intense interest in fairness and right-wrong – There was always a series of questions to conclude about the righteousness of a taken decision. 
  • Age for “classic” games, stories, and movies and other such cultural experiences. 
  • A love for learning different kinds of information.
  • Sense of physical order is less strong, but importance was being given to social order.
  • Big ideas are forming in his head, play is often project based, big, and real. Eg: He was looking for a new name for himself, which he said he would keep, when he grows up. So there was lot of search in books done by him in this respect.
  • Imagination is flourishing, as his able to understand the difference between fantasy and reality.  
  • Earlier he looked for perfection in things but now it has taken a back seat but learning and performing various tasks is of prime importance.

It’s sort of incredible to think that Madhwa will stay in this plane of development for the next four years. I would expect he will continue to strive for independence, to dig deeply into the things he loves, to explore the world around him and to find his place within it!! 

.

ತಣಿಯದ ಕುತೂಹಲ

(ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬರೆದಿರುವ ನೈಸರ್ಗಿಕ ಕಥೆ)

[ಅಂಕಣ ಬರಹ – ]

 

ಪೇಟೆಯಲ್ಲಿ ಟಿ.ವಿ. ಸಿನಿಮಾ ಅಂತ ಸಮಯ ಕಳೆಯುವ ರಾಣಿಗೆ ಹಳ್ಳಿಯಲ್ಲಿ ಸಮಯ ಹೋಗುವುದೇ ಕಷ್ಟ ಎನಿಸಿತು. ಗಾಡಿಗಳ ಸದ್ದೂ ಇಲ್ಲ. ಅನಿವಾರ್ಯವಾಗಿ ಮೊನ್ನೆ ನೀಲಾ ಹೇಳಿದಂತೆ ಕಥೆ ಕೇಳಲು ಹೋಗಬೇಕು ಎನಿಸಿತು. ಹಸು – ಕರುಗಳನ್ನು ನೋಡುವುದಕ್ಕಿಂತ ಕತೆ ಕೇಳುವುದು ಮೇಲು ಎನಿಸಿ ನೀಲಾಳ ಮನೆ ಎಲ್ಲಿ ಎಂದು ಹುಡುಕಿಕೊಂಡು ಹೊರಟಳು ನಮ್ಮ ರಾಣಿ. ನೀಲಾ ಬಟ್ಟೆ ಒಗೆದುಕೊಂಡು ತರಲು ಕೆರೆ ಬಳಿ ಹೋಗಿದ್ದಳು. ಅವಳ ಅತ್ತೆ ಕೆರೆಯ ದಾರಿ ತೋರಿಸಿ ಹೀಗೆ ಹೋಗು, ಕೆರೆ ಸಿಗುತ್ತದೆ. ಅಲ್ಲೇ ಅರಳಿ ಕಟ್ಟೆ ಇದೆ, ನೀಲಾ ಅಲ್ಲೇ ಇದ್ದರೂ ಇರಬಹುದು. ಹುಷಾರು, ಹೊಸದಾಗಿ ಮದುವೆಯಾದ ಹುಡುಗಿ, ಜೋಪಾನ ಎಂದು ಹೇಳಿ ಕೈಗೆ ಒಂದು ಮೆಣಸಿಕಾಯಿ ಕೊಟ್ಟು ಕಳುಹಿಸಿದಳು. ಈ ಮೆಣಸಿನ ಕಾಯಿ ಏನು ರಕ್ಷಣೆ ಮಾಡೀತು ಎಂದು ರಾಣಿ ಮನೆಯ ಆಚೆ ಬಂದವಳೆ ಬಿಸಾಕಿ ಮುಂದೆ ನಡೆದಳು.

 

ನೀಲಾ ಅರಳಿ ಕಟ್ಟೆ ಬಳಿ ಕುಳಿತು ಮಕ್ಕಳೊಂದಿಗೆ ಅಚ್ಚನ ಕಲ್ಲು ಆಡುತ್ತಿದ್ದಳು. ಸಿಕ್ಕ ಕಲ್ಲು, ಕಡ್ಡಿಗಳಿಂದಲೇ ಈ ಜನ ಎಷ್ಟು ಖುಷಿಯಾಗಿ ಬದುಕುತಿದ್ದಾರೆ ಎಂದು ನೋಡಿಯೇ ರಾಣಿಗೆ ಆಶ್ಚರ್ಯವಾಯಿತು. ರಾಣಿ ಬರುವುದನ್ನು ಕಂಡ ನೀಲಾ ತಾನೆ ಹೋಗೆ ಅವಳನ್ನು ಮಾತನಾಡಿಸಿ ತನ್ನ ಬಳಿ ಕೂಡಿಸಿಕೊಂಡಳು. ತಲೆ ಎತ್ತಿ ನೋಡಿ ಇದೋ ನೋಡು ರಾಣಿ ಇದೇ ಅಶ್ವತ್ಥ ಮರ, ಇದೇ ಔದುಂಬರ ಮರ ಎಂದು ಹೆಮ್ಮೆಯಿಂದ ಪರಿಚಯಿಸಿದಳು. ಹಳ್ಳಿಜನ ತಮ್ಮ ಅನುಭವಕ್ಕೆ ಬಂದದ್ದನ್ನು ಆಚರಣೆ ಎಂದು ಮಾಡುತ್ತಾ ತಮ್ಮ ನೆಮ್ಮದಿಯನ್ನು ತಾವಿರುವ ಜಾಗದಲ್ಲೇ ಕಂಡುಕೊಳ್ಳುತ್ತಾರೆ. ಪೇಟೆ ಜನ ನೆಮ್ಮದಿಯನ್ನು ಹೊರಗೆ ಹುಡುಕುತ್ತಾ ಅಲೆಯುತ್ತಿರುತ್ತಾರೆ. ಈ ಮರದ ಕೆಳಗೆ ಸೂರ್ಯೋದಯಕ್ಕೆ ಮುನ್ನ ಓಡಾಡಿದರೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಉತ್ಪತ್ತಿಯಾಗಿರುತ್ತದೆ. ಅದನ್ನು ಸೇವಿಸುವುದರಿಂದ ಅಸ್ತಮ, ಉದರ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ಹಾಗಾಗಿ ಗರ್ಭಿಣಿಯರಿಗೆ, ಮಕ್ಕಳಾಗದವರಿಗೆ ವ್ರತ ಎಂಬ ನೆಪದಲ್ಲಿ ಬೆಳಗಿನ ಜಾವ ಅರಳಿ ಮರ, ಔದುಂಬರ ಮರ ಸುತ್ತಲು ಹೇಳುತ್ತಾರೆ. ಬೆಳಗಿನ ಜಾವದಲ್ಲಿ ಮತ್ತು ಚಂದ್ರನ ಬೆಳದಿಂಗಳಲ್ಲಿ ಈ ಮರಗಳ ಬಳಿ ಅತಿ ಹೆಚ್ಚು ಸೆರಿಟೋನಿನ್ ರಾಸಾಯನಿಕ ಉತ್ಪತ್ತಿಯಾಗುವುದು, ಅದು ನಮ್ಮ ಏಕಾಗ್ರತೆಯನ್ನು ರಕ್ಷಿಸಲು ಬಹಳ ಉಪಯುಕ್ತ. ನನಗೆ ಈ ರಾಸಾಯನಿಕಗಳ ಹೆಸರೆಲ್ಲ ಹೇಗೆ ತಿಳಿಯಿತು ಎಂದು ಆಶ್ಚರ್ಯ ಪಡಬೇಡ. ನಾನು ಸ್ವಲ್ಪ ಓದಿದ್ದೇನೆ. ಒಂದು ವಿಷಯ ಪೂರ್ತಿ ತಿಳಿಯುವವರೆಗೆ ನನಗೆ ಸಮಾಧಾನವೇ ಆಗುವುದಿಲ್ಲ. ಹಾಗೆ ಕೆಲವು ವಿಷಯಗಳನ್ನು ಓದಿಕೊಂಡಿದ್ದೇನೆ.

 

ನೀನು ರಾಮಾಯಣ ಕತೆ ಕೇಳಿದ್ದರೆ ಪಂಚವಟಿ ಎಂಬ ಹೆಸರು ಕೇಳುರುತ್ತೀಯ. ರಾಮ-ಲಕ್ಷ್ಮಣ-ಸೀತೆಯರು ಪಂಚವಟಿಯಲ್ಲಿ ಆಶ್ರಮ ಕಟ್ಟಿಕೊಂಡಿದ್ದರು ಎಂದು. ಆ ಪಂಚವಟಿ ಯಾವುದು ಗೊತ್ತೆ? ಎಂದು ಮರಳಿನ ಮೇಲೆ ಕಡ್ಡಿಯಿಂದ ಚಿತ್ರ ಬಿಡಿಸಿ ತೋರಿಸಿದಳು.

 

 

ಹೀಗೆ ಐದು ವೃಕ್ಷಗಳ ಮಧ್ಯೆ ಕುಟೀರ ಕಟ್ಟಿಕೊಂಡು ರಾಮ-ಲಕ್ಷ್ಮಣ-ಸೀತೆಯರು ವಾಸಿಸಿದರು. ಆದ್ದರಿಂದ ಅದು ಪಂಚವಟಿ. ಇವುಗಳ ಮಹತ್ವ ಹೇಳಿದರೆ ನಿನಗೆ ಇನ್ನೂ ಆಶ್ಚರ್ಯವಾಗುವುದು. ಆಫ್ರಿಕಾದಲ್ಲೂ ಕೂಡ ಔದುಂಬರವನ್ನು ಮರಗಳ ರಾಣಿ ಎಂದು ಕರೆಯುತ್ತಾರೆ.      ವಿದ್ಯೆಯನ್ನು ಕಲಿಯುವ ಗುರುಕುಲಗಳನ್ನೂ ಈ ಪ್ರಶಸ್ತವಾದ ಸ್ಥಳದಲ್ಲೇ ಕಟ್ಟುತ್ತಿದ್ದರು. ಇದರಿಂದ ಮಕ್ಕಳಿಗೆ ಆರೋಗ್ಯವೂ ಚೆನ್ನಾಗಿರುವುದು ಮತ್ತು ಏಕಾಗ್ರತೆ ಹೆಚ್ಚುವುದು. ವಿದ್ಯಾಭ್ಯಾಸ ಚೆನ್ನಾಗಿ ಆಗುವುದು. ಇದನ್ನು ಪಂಚವಲ್ಕಲಗಳೆಂದೂ ಕರೆಯುವರು. ವಲ್ಕಲ ಎಂದರೆ ತೊಗಟೆ. ಐದು ಮರಗಳ ತೊಗಟೆಯ ಚೂರ್ಣ ಅನೇಕ ಖಾಯಿಲೆಗಳಿಗೆ ರಾಮಬಾಣ. ನಮ್ಮ ಮಾವ ಮನೆಮದ್ದು ಮಾಡಿಕೊಡುತ್ತಾರೆ. ಕೆಲವನ್ನು ಅವರೇ ನನಗೆ ತೋರಿಸಿದ್ದಾರೆ. ಆಲ, ಔದುಂಬರ, ಬಸರಿ, ಅಶ್ವಥ, ಗೋಣಿ – ಈ ಐದು ಮರಗಳ ತೊಗಟೆಯ ಚೂರ್ಣವನ್ನು ಸಣ್ಣ ಮಕ್ಕಳಿಗೆ, ಗರ್ಭಿಣಿಯರಿಗೆ ಕೊಡುತ್ತಾರೆ. ಇದರಿಂದ ಮಗುವಿನ ಮೆದುಳು ಚುರುಕಾಗಿ ಬೆಳೆಯುವುದು. ಗರ್ಭಕೋಶದ ತೊಂದರೆ ನಿವಾರಣೆಯಾಗುವುದು. ಈ ಮರಗಳನ್ನು ಕ್ಷೀರವೃಕ್ಷಗಳು ಎಂದು ಕರೆಯುತ್ತಾರೆ. ಇದರ ಹಣ್ಣು, ಎಲೆಗಳು ಭೂಮಿಗೆ ಸೇರುವುದರಿಮ್ದ ಭೂಮಿಯ ಮಣ್ಣನ್ನು ಸಡಿಲಿಸಿ ಭೂಮಿಯ ಉಸಿರಾಟವನ್ನು ಸರಾಗವಾಗಿಸುತ್ತದೆ. ಭೂಮಿಯನ್ನು ಫಲವತ್ತಾಗಿಸುತ್ತದೆ.

 

ರಾಣಿಗೆ ಈ ಕಥೆ ಒಳ್ಳೆ Botany ಕ್ಲಾಸ್ ಎನಿಸಿತು. ಆದರೆ ನೀಲಾ ಹಳ್ಳಿಯ ಹುಡುಗಿಯಾಗಿ ಇಷ್ಟೆಲ್ಲ ಹೇಗೆ ಕಲಿತಳು ಎಂಬುದೇ ಅವಳಿಗೆ ಆಶ್ಚರ್ಯ. ರಾಣಿಯ ಪ್ರಕಾರ ಕಾಲೇಜಿಗೆ ಹೋಗಿ, ನೋಟ್ಸ್ ಬರೆದು, ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಕಲಿತವರು. ಆದರೆ ಈ ಹಳ್ಳಿಯಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದಾರೆ, ಇದೊಳ್ಳೆ ತೆರೆದ ವಿಶ್ವವಿದ್ಯಾಲಯದಂತೆ ಎಂದೆನಿಸಿತು. ಇವಳು ಹೀಗೆ ಯೋಚಿಸುತ್ತಿದ್ದಂತೆ ನೀಲಾ ಅಲ್ಲೇ ಇದ್ದ ಅತ್ತಿಹಣ್ಣನ್ನು ತೆಗೆದುಕೊಂಡು ಬಂದು ಅದನ್ನು ನಿಧಾನವಾಗಿ ತೆರೆದು ತೋರಿಸಿದಳು. ಅದರೊಳಗೆ ಅನೇಕ ಸಣ್ಣ ಸಣ್ಣ ಬೀಜಗಳಿದ್ದವು. ಈ ಹಣ್ಣಿನಲ್ಲಿ ಪ್ರೋಟೀನ್ ಪ್ರಮಾಣ ೪.೯ ರಷ್ಟು ಇದೆ. ಇದನ್ನು ತಿನ್ನುವುದರಿಂದ ಅನಗತ್ಯ ಮಾಂಸ ಬೆಳೆಯುವುದಿಲ್ಲ, ಮೂಲವ್ಯಾಧಿಯ ರಕಸ್ರಾವವನ್ನು ಕಡಿಮೆ ಮಾಡುವುದು, ಬ್ಯಾಕ್ಟೀರಿಯದಿಂದಾಗುವ ಖಾಯಿಲೆಗಳನ್ನು ತಡೆಯುತ್ತದೆ. ಇದರ ತೊಗಡೆಯಲ್ಲಿ ಗ್ಲೂಕೊಸೈಡ್, ಮಿಥೇನಲ್ ಒಲಿಯೋ ಮ್ಯುಲೆಟ್, ಲ್ಯಾನೊಸ್ಟ್ರಾಲ್, ಸ್ಟಿಗ್ಮೊ ಸ್ಟೈರಾಲ್, ಲುಪಿನ್ ಇಂತಹ ಅನೇಕ ರಾಸಾಯನಿಕ ಪದಾರ್ಥಗಳಿರುತ್ತವೆ. ಅವು ದೇಹದ ಕೊಬ್ಬನ್ನು ಕಡಿಮೆ ಮಾಡಲು ಅತ್ಯಂತ ಸಹಾಯಕಾರಿ. ಚರ್ಮ ತೊಂದರೆಗೆ, ರಕ್ತದಲ್ಲಿರುವ ಹೆಚ್ಚಾದ ಸಕ್ಕರೆಯ ಅಂಶವನ್ನು ಕಡಿಮೆ ಮಾಡಲು, ಗರ್ಭಪಾತವನ್ನು ತಡೆಯಲು, ಮೂತ್ರಜನಕಾಂಗದ ತೊಂದರೆ ಕಡಿಮೆ ಮಾಡಲು ಸಹಾಯಕ. ಕೆರೆಯ ಬಳಿಯೇ ಈ ಮರ ಇರುವುದರಿಂದ ಇದರ ಹಣ್ಣು-ಎಲೆ ನೀರಿಗೆ ಬಿದ್ದು ನೀರನ್ನು ಶುದ್ಧಮಾಡುತ್ತದೆ. ಎಲೆಯ ಮೇಲಿರುವ ಟಾನಿನ್ ಪದಾರ್ಥವು ನೀರನ್ನು ಶುದ್ಧಗೊಳಿಸುವುದು. ಆ ನೀರನ್ನು ಊರಿನ ಜನರೆಲ್ಲ ಬಳಸುವುದರಿಂದ, ಶುದ್ಧವಾದ ಗಾಳಿಯನ್ನು ಉಸಿರಾಡುವುದರಿಂದ ಖಾಯಿಲೆಗಳು ಬರುವುದಿಲ್ಲ. ಅದಕ್ಕೆ ಹೇಳುವುದು ಹಳ್ಳಿ ಜನರಿಗೆ ಆಯಸ್ಸು ಹೆಚ್ಚು ಎಂದು.         

 

ಇಷ್ಟು ಹೇಳುವವ ವೇಳೆಗೆ ರಾಣಿಗೆ ತಾನೆಷ್ಟು ದಡ್ಡತನವನ್ನು ಹೊಂದಿದ್ದೇನೆ ಮರಗಳ ಬಗ್ಗೆ ಎಂಬ ಅರಿವಾಯಿತು. ಉದಾಸೀನದಿಂದ ಕೇಳಿಸಿಕೊಳ್ಳುತ್ತಿದ್ದವಳು ಈಗ ಆಸಕ್ತಿಯಿಂದ ಕೇಳಿಸಿಕೊಳ್ಳಲು ಪ್ರಾರಂಭಿಸಿದಳು. ನಂಬಿಕೆ ಬಂದ ಮೇಲೆ ಪ್ರಭಾವವೂ ಹೆಚ್ಚು. ಈಗ ನೀಲಾಳ ಕಣ್ಣಲ್ಲಿ ಒಂದು ಮಿಂಚು ಕಾಣಿಸಿತು. ಅವಳ ಮಾತಿನಲ್ಲಿ ಅಯಸ್ಕಾಂತದ ಸೆಳೆತ ಕಂಡಿತು. ಅಷ್ಟರಲ್ಲಿ ಅವಳ ಅತ್ತೆ ಅವಳನ್ನು ಹುಡುಕುತ್ತಾ ಅಲ್ಲಿಗೆ ಬಂದಳು. ಇವರ ಮಾತಿಗೆ ಇತಿಶ್ರೀ ಹಾಡಿಸಿ ಮನೆಗೆ ಕರೆದುಕೊಂಡು ಹೋದಳು. ಮನೆಗೆ ಹೋದವಳೇ ರಾಣಿ ಮಾಡಿದ ಮೊದಲ ಕೆಲಸ ಏನು ಗೊತ್ತೆ?! ಮೊನ್ನೆ ಧಾರೆಗೆ ಬಳಸಿದ್ದ ಔದುಂಬರ ಮರದ ತುಂಡನ್ನು ಕೋಣೆಯ ಒಳಗಿಟ್ಟು ಜೋಪಾನ ಮಾಡಿದಳು. ಪುಟ್ಟ ಮಕ್ಕಳು ಅಜ್ಜಿಯ ಕಥೆ ಕೇಳಲು ಹಾತೊರೆಯುವಂತೆ ನೀಲಾಳ ಮಾತನ್ನು ಕೇಳಲು ರಾಣಿ ಹಾತೊರೆಯ ತೊಡಗಿದಳು. ಅತ್ತೆಗೂ ಸ್ವಲ್ಪ ಸಮಾಧಾನವಾಯಿತು, ಪೇಟೆಯಿಂದ ಬಂದವಳು – ಹೊಂದಿಕೊಳ್ಳುವಳೋ ಇಲ್ಲವೋ ಎಂದು ಆತಂಕವಿತ್ತು.

 

ಮರುದಿನ ನೀಲಾ ದನಗಳನ್ನು ಕರೆದುಕೊಂಡು ಕಾಡಿನ ಕಡೆಗೆ ಹೊರಟಿದ್ದಳು. ಇವರ ಮನೆಯ ಮುಂದೆಯೇ ಹಾದು ಹೋಗುತ್ತಿದ್ದಾಗ ನೋಡಿ ರಾಣಿ ತಾನೂ ಅವಳೊಂದಿಗೆ ಹೋಗುವುದಾಗಿ ಕೇಳಿದಳು. ಗೌಡರ ಮಗನು ಅವರೊಡನೆ ಹೊರಟ. ನೀಲಾ ಮನಸ್ಸಿನಲ್ಲಿಯೇ ಇವರ ದಾಂಪತ್ಯವನ್ನು ಗಟ್ಟಿಗೊಳಿಸುವ ಕತೆ ಹೇಳಬೇಕೆಂದು ಹೆಣೆದುಕೊಂಡಳು.

 

ದಾರಿಯಲ್ಲಿ ನಡೆಯುತ್ತಾ ಅವರಿಗೆ ಒಂದು ಪ್ರಶ್ನೆ ಕೇಳಿದಳು. ದಾಂಪತ್ಯ ಎಂದರೇನು? ಗೌಡರ ಮಗ ಹೇಳಿದ ನಮ್ಮ ಅಪ್ಪ – ಅಮ್ಮ ಅನ್ಯೋನ್ಯವಾಗಿ ೪೦ ವರ್ಷಗಳಿಂದ ಬಾಳುತ್ತಿದ್ದಾರಲ್ಲ ಅದುವೇ ದಾಂಪತ್ಯ ಎಂದು. ರಾಣಿ ಕೂಡಲೇ ಕಷ್ಟ ಕೊಡದೆ, ಅರ್ಥಮಾಡಿಕೊಂಡು ಬದುಕುವುದು ಎಂದಳು. ಮನುಷ್ಯರಿಗೆ ಮಾತ್ರವೇ ಈ ದಾಂಪತ್ಯದ ಬಗ್ಗೆ ತಿಳಿದಿರುವುದಾ ಅಥವಾ ಪ್ರಕೃತಿಯಲ್ಲಿ ಈ ದಾಂಪತ್ಯವನ್ನು ಕಾಣಬಹುದೇ? ಎಂದು ನೀಲಾ ಮರುಪ್ರಶ್ನೆ ಮಾಡಿದಳು. ಅದೆಲ್ಲ ನಮಗೆ ತಿಳಿದಿಲ್ಲ. ಬಾಯಿ ಬಿಟ್ಟು ಮಾತಾಡಿದರೇನೆ ಅರ್ಥಮಾಡಿಕೊಳ್ಳುವುದು ಕಷ್ಟ, ಇನ್ನು ಮಾತನಾಡದೆ ಇರುವ ವಿಷಯವನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಎಂಬುದು ಅವರ ಅಭಿಪ್ರಾಯ. ನೀಲಾ ಹಾಗಾದರೆ ನಿಮಗೆ ಒಂದು ವಿಶೇಷ ತೋರಿಸುತ್ತೇನೆ ಬನ್ನಿ ಎಂದು ಒಂದು ಔದುಂಬರ ಮರದ ಬಳಿ ಕರೆದುಕೊಂಡು ಹೋದಳು. ಹೋಗುತ್ತಿದ್ದಂತೆ ರಾಣಿ ಇದು ಔದುಂಬರ ಮರ ಎಂದು ಸಣ್ಣ ಮಕ್ಕಳಂತೆ ಕೂಗಿದಳು. ಹಣ್ಣುಗಳನ್ನು ವಿಶೇಷವಾಗಿ ಗಮನಿಸಲು ಹೇಳಿದಳು. ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಹಣ್ಣುಗಳನ್ನು ಗಮನಿಸಲು ಪ್ರಾರಂಭಿಸಿದರು. ಹಣ್ಣಿನ ಬಳಿ ಒಂದು ಕಣಜ ಹಾರಿಕೊಂಡು ಬಂತು, ನೋಡ ನೋಡುತ್ತಿದ್ದಂತೆ ಅದು ಹಣ್ಣಿನ ಒಳಗೆ ಹೋಯಿತು. ಇವರಿಗೆ ಆಶ್ಚರ್ಯ! ಹಣ್ಣಿನಲ್ಲಿ ಇವರಿಗೆ ತೂತು ಕಾಣಿಸಲೇ ಇಲ್ಲ, ಹೇಗೆ ಒಳಗೆ ಹೋಯಿತು? ಎಂದು. ಹಾಗೆ ಗಮನಿಸುತ್ತಿದ್ದಂತೆ ಇನ್ನೊಂದು ಮತ್ತೊಂದು  ಕಣಜಗಳು ಬಂದವು. ಆದರೆ ಆ ಕಣಜಗಳು ಯಾವುದೆಂದರೆ ಆ ಹಣ್ಣಿನೊಳಗೆ ಹೋಗುತ್ತಿಲ್ಲ. ಇವರಿಗೆ ಆಶ್ಚರ್ಯವಾಯಿತು. ಇದೇನು ಈ ಕಣಜಗಳು ಬಹಳ ಛಿhoosಥಿ ಆಗಿವೆ ಎಂದು. ಅದಕ್ಕಿಂತಲೂ ಆಶ್ಚರ್ಯ ಹಣ್ಣಿಗೆ ನೋವಾಗದಂತೆ, ಅದು ಒಡೆಯದಂತೆ ಈ ಕಣಜ ಒಳಗೆ ಹೋಗಿ ಬರುತ್ತಿದೆ. ಕುತೂಹಲ ತಡೆಯಲಾರದೆ ಇದೇನು? ಎಂದು ನೀಲಾಳನ್ನು ಕೇಳಿದರು. ನೀಲಾ ಇನ್ನೇನೊ ಗಮನಿಸುತ್ತಿದ್ದಳು. ಇವರ ಕುತೂಹಲ ನೋಡಿ ತನ್ನ ಹುಚ್ಚು ಇವರಿಗೆ ಹತ್ತಿತು ಎಂದು ಒಳಗೊಳಗೆ ಖುಷಿ ಪಟ್ಟಳು.

 

ಇದೇನೆಂದರೆ, ನಾನು ನೆನ್ನೆ ಕ್ಷೀರವೃಕ್ಷಗಳು ಎಂದು ಹೇಳಿದೆನಲ್ಲ, ಅದರ ವಿಶೇಷ ಇರುವುದೇ ಈ ಪರಾಗಸ್ಪರ್ಶದಲ್ಲಿ. ಈ  ಮರಗಳು ಕಣಜಗಳಿಗಾಗಿ ವಿಶೇಷ ಹಣ್ಣುಗಳನ್ನು ಎಲ್ಲಾ ಕಾಲದಲ್ಲೂ ಸಿದ್ಧಪಡಿಸಿಕೊಂಡು ಇರುತ್ತವೆ. ಆದರೆ ಎಲ್ಲರಿಗೂ ಈ ಹಣ್ಣುಗಳು ಸಿಗುವುದಿಲ್ಲ. ಬೇರೆ ಬೇರೆ ಮರಕ್ಕೆ ಬೇರೆ ಬೇರೆ ಕಣಜಗಳು ಬರುತ್ತವೆ. ನಮಗೆ ಪ್ರತ್ಯೇಕ ರಕ್ತದ ಗುಂಪುಗಳಿರುವಂತೆ, ಅವುಗಳಿಗೆ ಮಾತ್ರ ಗೊತ್ತಿರುತ್ತದೆ ತಾನು ಯಾವ ಹಣ್ಣಿನೊಳಗೆ ಹೋಗಿ ಪರಾಗಸ್ಪರ್ಶ ಮಾಡಬೇಕೆಂದು. ಈ ವಿಜ್ಞಾನ ನಾವು ಓದುವ ವಿಜ್ಞಾನಕ್ಕೆ ಮೀರಿದ್ದು. ಹಣ್ಣಿನೊಳಗೆ ತೊಟ್ಟಿಲಂತೆ ಮೃದುವಾಗಿ ವೇದಿಕೆ ತಯಾರಿಸಿರುತ್ತಾಳೆ ಈ ರಾಣಿ ಔದುಂಬರ. ನಿಗದಿತ ಸಮಯದಲ್ಲೇ ಈ ಕಣಜಗಳು ಬರುವುದು, ಈ ಹಣ್ಣುಗಳಿಂದ ಸುವಾಸನೆ ಬರುವುದು. ನಾವು ಓದುವ ಖಿeಛಿhಟಿoಟogಥಿ ಗಿಂತ ಇದು ಎಷ್ಟೋ ಪಾಲು ಮುಂದುವರೆದಿದೆ. ಈ ಜಾಣ್ಮೆಯನ್ನು ಮನುಷ್ಯನೂ ಅನುಕರಿಸಲಾರ. ಪ್ರಕೃತಿಯ ಅನೇಕ ಜೀವಿಗಳಿಗೆ ಜೀವನ ಕೊಡುವ ಸಲುವಾಗಿ ತಾನು ಬದುಕಿ, ತನ್ನ ಉಳಿವಿಗೂ ಒಂದು ತಂತ್ರವನ್ನು ಹೆಳೆದುಕೊಂಡಿರುವ ಈ ವ್ಯವಸ್ಥೆಯನ್ನು ಜೀವಕೊಂಡಿ ಎಂದು ಕರೆಯುತ್ತಾರೆ. ಯಾರನ್ನು ಬಿಟ್ಟು ಯಾರೂ ಬದುಕುವುದಿಲ್ಲ, ಎಲ್ಲರಿಗಾಗಿ ಎಲ್ಲರೂ ಬದುಕುವುದು – ಇದು ಪ್ರಕೃತಿ ಮಾಡಿರುವ ದಾಂಪತ್ಯ ವ್ಯವಸ್ಥೆ. ಇದನ್ನು ಕೇಳುತ್ತಿದ್ದ ರಾಣಿ ಮತ್ತು ಗೌಡರ ಮಗನಿಗೆ ಮೈ ಜುಮ್ ಎಂದಿತು. ಊಟ-ನಿದ್ದೆ-ಸುಖ ಇಷ್ಟರಲ್ಲೇ ಜೀವನ ಕಳೆಯುತ್ತಿರುವ ನಮ್ಮ ಸುತ್ತ ಇಷ್ಟು ವಿಷಯಗಳು ನಡೆದಿವೆಯೇ ಎಂದು ಊಹಿಸಲೂ ಸಾಧ್ಯವಾಗಲಿಲ್ಲ. ನೀಲಾ ಮತ್ತೆ ಮುಂದುವರೆದು ಅದಕ್ಕೆ ಹೀಗೆ ನಿಮ್ಮ ದಾಂಪತ್ಯವೂ ಗಟ್ಟಿಯಾಗಿರಲೆಂದು ಮೊನ್ನೆ ಔದುಂಬರ ಮರದ ತುಂಡಿನ ಮೇಲೆ ನಿಲ್ಲಿಸಿ ಧಾರೆ ಮಾಡಿದ್ದು ಎಂದು ಹೇಳಿದಳು. ಅವರಿಗೆ ಆ ಸಂಪ್ರದಾಯ ಈಗ ಅರ್ಥಪೂರ್ಣ ಎನಿಸಿತು, ಹಿರಿಯರ ಬಗ್ಗೆ ಗೌರವ ಮೂಡಿತು. 

ದಾಂಪತ್ಯದ ನಿಜವಾದ ಅರ್ಥ ತಿಳಿದು ಎಲ್ಲರಿಗೂ ಒಂದು ಅಗೋಚರವಾದ ಆನಂದವಾಗುತ್ತಿತ್ತು. ರಾಣಿ ತಾನು ಪೇಟೆಯಲ್ಲಿದ್ದಾಗ ಇದೇ ನೆಮ್ಮದಿ ಸಿಗಲೆಂದು ಏನೆಲ್ಲ ಮಾಡಬೇಕಿತ್ತು, ಈಗ ಅನಾಯಾಸವಾಗಿ ಸಿಕ್ಕಿತಲ್ಲ ಎಂದು ಆನಂದ ಪಟ್ಟಳು. ಗಡಿಬಿಡಿ ಇಲ್ಲ, ಸದ್ದುಗದ್ದಲವಿಲ್ಲ, ಆಹ್ಲಾದ ಮನೆ ಮಾಡಿದೆ ಎನಿಸಿತು.

 

ಕೂಡಲೆ ನೀಲಾ ನಿಮ್ಮ ಮದುವೆಯಾದ ದಿನಾಂಕ – ಪಂಚಾಂಗ ಗೊತ್ತಿದೆಯೇ? ಎಂದು ಕೇಳಿದಳು. ಓಹೋ ಎಂದು ರಾಣಿ ದಿನಾಂಕವನ್ನು ಹೇಳಿದಳು. ಪಂಚಾಗ?! ಅದು ಗೊತ್ತಿಲ್ಲ ಎಂದರು. ನೀಲಾ ಹೋಗಲಿ ಬಿಡಿ, ನಾನೇ ಹೇಳುತ್ತೇನೆ, ಈಗ ವೈವಸ್ವತ ಮನ್ವಂತರ. ಈ ಮನ್ವಂತರಗಳ ಕಥೆಯನ್ನು ಮತ್ತೆ ಯಾವಾಗಲಾದರೂ ಹೇಳುತ್ತೇನೆ. ಹಿಂದೆ ಸ್ವಾರೋಚಿಷ ಮನ್ವಂತರದಲ್ಲಿ ಇರುವ ಸಪ್ತರ್ಷಿಗಳಲ್ಲಿ ದತ್ತಾತ್ರೇಯ ಸ್ವಾಮಿಯೂ ಒಬ್ಬನು. ವೈವಸ್ವತ ಮನ್ವಂತರದಲ್ಲಿ ಅತ್ರಿ-ಅನಸೂಯೆ ಎಂಬ ಋಷಿ ದಂಪತಿಗಳು ಮಗುವಿಗಾಗಿ ತಪಸ್ಸು ಮಾಡುತ್ತಿದ್ದರು. ಆಗ ವಿಷ್ಣು ಸ್ವತಃ ತಾನೇ ಅತ್ರಿಗೆ ಕೊಟ್ಟುಕೊಂಡನು, ಅಂದರೆ ಮಗನಾಗಿ ಹುಟ್ಟಿಬಂದನು, ಅದಕ್ಕೆ ಈ ಅವತಾರವನ್ನು ದತ್ತಾತ್ರೇಯ ಎಂದೂ ಕರೆಯುತ್ತಾರೆ. ದತ್ತಾತ್ರೇಯ ಸಾಕ್ಷಾತ್ತಾಗಿ ಈ ಔದುಂಬರ ಮರದಲ್ಲಿ ವಾಸವಾಗಿರುತ್ತಾನೆ ಎಂದು ನನಗೆ ನನ್ನ ಅಜ್ಜಿ ಹೇಳುತ್ತಿದ್ದಳು. ಪುರಾಣದ ಕಥೆ ಏನೇ ಇದ್ದರೂ ಅದನ್ನು ಗೌರವಿಸೋಣ. ಇಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿರುವುದನ್ನು ನಂಬಬಹುದಲ್ಲವೇ? ಒಂದು ಸಣ್ಣ ಬೀಜದಲ್ಲಿ ಎಷ್ಟೆಲ್ಲಾ ಶಕ್ತಿಯನ್ನು ಅಡಗಿಸಿಟ್ಟಿರುವ ಒಂದು ದೊಡ್ಡ ಶಕ್ತಿ ಇದೆ. ಈ ಶಕ್ತಿ ಸದಾ ಕಾಲ ಇರುವ ಜೀವಂತ ಶಕ್ತಿ. ಇದನ್ನೇ ಹಿರಿಯರು ದೇವರು ಎನ್ನುವರು. ಇದು ವಿಜ್ಞಾನಿಗಳಿಗೆ ಪ್ರಯೋಗದಲ್ಲಿ ಕಾಣಸಿಗದ ಶಕ್ತಿ, ಹೃದಯವಿದ್ದರೆ ಅನುಭವಕ್ಕೆ ಬರುವುದು. ಅಗೋಚರವಾಗಿ ನಡೆಸುವ ಶಕ್ತಿಯೇ ದೇವರು. ಈ ಮರಗಳಿಗೆ ನೀಡಿರುವಂತೆ ಎಲ್ಲರೊಳಗೂ ಒಂದು ಶಕ್ತಿ ಇದೆ, ಅದನ್ನು ಕಂಡುಕೊಂಡರೆ ಅದನ್ನೇ ಮೋಕ್ಷ ಎನ್ನಬಹುದು ಎಂದು ಹೇಳಿ ಮಾತು ನಿಲ್ಲಿಸಿದಳು. ನೀವು ಹೊಸದಾಗಿ ಮದುವೆಯಾದವರು. ದಾಂಪತ್ಯವನ್ನು ಪ್ರಕೃತಿಯೊಂದಿಗೆ ಸವಿಯಿರಿ. ಕಾಲ ನಿಧಾನವಾಗಿ ನಿಮಗೆ ಈ ಪಾಠವನ್ನೆಲ್ಲಾ ಕಲಿಸುವುದು, ಎಂದು ಹೇಳಿ ಮಾತಿಲ್ಲದೆ ಮುಂದೆ ಮುಂದೆ ನಡೆದಳು. ರಾಣಿಗೆ ನೀಲಾ ಒಬ್ಬ ಗುರುವಿನಂತೆ ಕಂಡಳು…ಇಬ್ಬರೂ ಅವಳನ್ನು ಹಿಂಬಾಲಿಸಿ ಹೊರಟರು.

 

ಚಿಗುರು

(ಮಕ್ಕಳ ಬರಹಗಳ ವಿಭಾಗ)

 

My House Nihar K N (Grade 2)

 

 

 

 

Solar System Aarna G A (Grade 1)

 

 

 

 

 

 

Peacock    Bhaktasiri (Grade 3)

 

 

 

 

 

Concept Guru-Mind Map   Rajath Guru (Grade 3)

 

Nursie And Me (A short story)

 Ambhini Mallur (Student of 8th Grade and Member of Rachana team)

I practically lived in the mental asylum when I was young, and ironically, I enjoyed my stay. I learnt things and experienced things which brings back happy memories, even now. It’s surprising, how I remember each and every day from my days at the hospital.

Once, I wanted to ask my personal nurse(who I called Nursie) for an extra glass of water. I had searched the entire first floor, and I couldn’t find her. So, I went up to the second floor. My nurse had told me that the floor up was a floor with patients who had a critical condition. I remember the sanitized, fresh white walls of the long, brightly lit hallways even now. The floor had a soft grey carpet, which was heaven for my feet. I remember wondering why grown ups get better stuff than us 10 year olds. As I was bouncing across another hallway, I saw a door slightly ajar. I tip-toed towards it, hearing two voices arguing. I peeped inside, and saw two women, one facing the window directly opposite to me, and the other, with their back towards me. I saw the peach nurse uniform on one, which I recognized was my nurse, and the other, looked like she had just arrived.

The woman wore a dark grey suit and a faint trace of makeup, which was smudged away from tears. Her blue eyes looked sad and worn out. A strand of her auburn hair which was haphazardly tied into a loose bun was bouncing on her cheeks. She was drinking a glass of lemon juice. Nursie was reading a file. It was marked, ‘Miss Vivian Parker. Appointment: Sleep Paralysis

Vivian started to talk, “I’m so worn out in the mornings, you know! I’m just so afraid all the time.”, she paused sipping juice, “My parents got really scared when I started to scream most nights. They tried all they could, and it just wouldn’t go away!”

Nursie closed the file and turned to Vivian, “Look dear, this can also occur because of stress. How’s your work going on?”

“It was just fine, until i got so tired. They gave me a holiday to rest myself.  But you know, I just couldn’t sleep.”, she had kept the lemon juice away, and now looked really distressed. She craned her neck forward and whispered something to Nursie. She showed her neck. It was dotted with scars and scratches. I suddenly felt spooked. 10 year old me could have never understood what that woman was going through. I was about to go in, but just at that moment, the grumpy nosed nurse came around with her big head behind a laundry basket. I dashed for it. That old hag was one of the most hated grown up we kids in the hospital had ever seen, or thought of. She was sort of a bajillion old grandma, who seemed too fit for her age because once, I had seen her chasing-full speed-a 5 year old kid, who had stolen sugar, and had had a sugar rush. And that was the end of my second floor adventure.

I don’t know why I’ve remembered this incident. It’s just one of those things which doesn’t leave the mind. I’m pretty sure she got cured.

Another memory I remember vividly, was when I had learnt about my sickness. It was my birthday, and I was finally turning 6. It had been 7 months since I had been admitted to the Hospital. Nursie and I were playing Jenga. I was horrible at the game, but Nursie had always found a way to make me win. We were relaxing after a small party with my family and my hospital friends and doctors. There was cake and juice too! Nursie played while telling me the story of The Rabbit and The Turtle. I had rolled over laughing when I heard that the Rabbit had slept in the middle of a race. After I had calmed down, and had won a couple more Jenga games, I asked something which Nursie and even I got surprised.

“Nursie?”

“Go on.. Another slice of cake?”

“No. I was just wondering..” I had been hesitating. I had never heard another kid talk about it, “Why am I living in the hospital……rather than at home……with my parents…” I remember sweating slightly, and rubbing my nose, like how I do when I’m nervous.

Nursie smiled, “I’m afraid you’re still too little, Iva”

“But I’m 6 now…” I chided, “I’m practically a grown up. Just a little shorter, that’s all!”

“Very well, grown up girl.” I could see her hiding another smile, “You know where you are, don’t you?”

“Yeah! I’m in The City Central Hospital for The Mentally Disordered” I recited happily, not knowing what any of that meant.

“Yes!” she nodded, “This is a hospital which treats people with slight problems in their brain. We cure as much as we can. The brain is very delicate. You can say, it’s delicate like a dewdrop on a flower. You understand? It can fall, and break into a million little water droplets.” She tickled me.

“Yeah!” I loved the way Nursie explained things to me. She simplified it to me, and made it more fun and interactive.

“Some people, they need more time to heal, and others can be healed in a matter of days.”

“So, I have this brain problem which takes time to heal?”

Nursie nodded. “You have a problem, which needs years and years to heal completely. We don’t know what might happen if it doesn’t heal. Just to be safe, you’re here, and I’m sure after medications, you can go back home.”

I smiled and hugged her. “I won’t be sad over here. In fact, I’ll be happy! You’ll be there with me!”

I raced off before letting her finish explaining, as the doctor called me to take my medicines. The last thing I remembered was tears on Nursie’s kind face.

After that incident, Nursie and I were closer than ever before.

It’s been 20 years since my illness got cured, I still wish to not talk about it. Painful memories of Nursie and me brings back the nostalgia. I found out about a couple of years back, that Nursie had passed away, and the whole day, I had been sitting near my window, staring longingly at the grey clouds, disappearing as the night sky came into view.

I had taken up a job at the same hospital, inspired by Nursie to help the helpless, and care for the long term patients. I was actually hoping to see her, and the thought of working together, literally made me jump down the stairs as I headed to the hospital on my first day. Alas! My wishes were not fulfilled, and the chance of meeting Nursie again had vanished, dauntingly. It seemed that Nursie had retired a month ago, and was living the life in Germany, with her family. It saddened me. She had been a huge part of my life, and I had not gotten the chance to meet her again. It sobered me even worse that she had forgotten me over the years…

The first few weeks were a blur, I was learning the hospital ways, taking bedside manner notes from professionals, and overall, dumping huge amounts of information into my brain. I had chosen the day shift, and within the next month, I had treated small wounds, and had 5 long term children assigned to me. Things were going as smooth as a fish swimming in water, until that day, when I heard that Nursie had passed away. Her family had visited the hospital dedication, and I got the chance to meet her son, a father of two lovely kids.

Actually, he came over to me

“May I ask, are you Iva Morris?”, his voice was cheerful, but I could see the pain and weariness in his soft brown eyes.

“Yes”

“My mother talked frequently of you when you were a long term patient here.”

“Really?!”, this took me as a surprise. I always thought Nursie saw me no different from all the other children living there, and it was only from my side that I adored and looked up to her.

“Yes. She used to tell all your little adventures together to my children, and she would occasionally show me pictures of you to my wife and me.”

“Oh!”, I exclaimed. It looked like she had taken CCTV pictures of me and her, when she was about to retire.

“Anyway, before she died, after she had said her goodbyes to all of us, she asked me to give this bag to a certain Iva Morris, who she said, was now working at The City Central Hospital for The Mentally Disordered!”, he showed me a small old paper bag, and gently placed it in my arms. He bid goodbye, and walked away, leaving me with a melancholy feeling of respect to my dear old Nursie.

I opened the bag, curiosity swelling inside me, and in that bag, was a single piece of Jenga block. It had crayon and colour pencil marks all over it, and the word Jenga, which was usually printed on the side, was fading away. Tears poured down my eyes. This was the same Jenga block we used when we played together all those years ago, when it was night-time, and all our tummies were filled with birthday cake…

.

Reader of Anandini    Suguna S

 

 

 

 

 

 

 

 

 

 

 

 

 

 

 

.

 

ಕಥೆಗೆ ಚಿತ್ರ

ಎಲ್ಲರೂ ಚಿತ್ರನೋಡಿ ಅದಕ್ಕೊಂದು ಕಥೆ ಬರೆದರೆ ನಮ್ಮ ಸಂಹಿತಾ ಕಥೆ ಓದಿ ಅದಕ್ಕೊಂದು ಚಿತ್ರ ಬರೆದಿದ್ದಾಳೆ…

 

 

 

 

 

 

 

 

 

 

 

 

 

 

 

 

 

.

ಕೇಳ್ರಪ್ಪೋ ಕೇಳ್ರಿ

(Announcements from School)

 

 

 

 

 

 

 

 

 

 

 

 

 

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.