ಆನಂದಿನೀ –ರಾಮೋತ್ಸವ ವಿಶೇಷ ಸಂಚಿಕೆ 2020-21
Friday, March 12th, 2021♣ . ರಾಮೋತ್ಸವ ವಿಶೇಷ आनन्दिनी ಶಾರ್ವರಿ ಸಂವತ್ಸರ, ಶಿಶಿರ ಋತು, ಮಾಘ-ಫಾಲ್ಘುಣ ಮಾಸ – ಮಾರ್ಚ್ ೨೦೨೦ ಸಂಪಾದಕೀಯ – ಲತಾ ಎಂ (ಪ್ರತಿನಿಧಿ, ಪ್ರಕಾಶನ ವಿಭಾಗ) ♦ “ಮನೆ ಚಿಕ್ಕದಾದರೂ ಮನಸ್ಸು ಚಿಕ್ಕದೇ” – ಎಂಬ ಗಾದೆಯನ್ನು ನಾವೆಲ್ಲ ಕೇಳಿದ್ದೇವೆ. ಈ ಗಾದೆಯಿಂದ ಸ್ಪೂರ್ತಿ ಪಡೆದು ಪೂರ್ಣಪ್ರಮತಿ online ಆದರೇನು ಕಲಿಕೆಯ ಸಂಭ್ರಮಕ್ಕೆ ಕೊರತೆಯೇ ಎಂಬಂತೆ ೨೦೨೦-೨೧ ರಲ್ಲಿ ಎಲ್ಲಾ ಪಾಠಗಳನ್ನು ಮಾಡುತ್ತಾ ಉತ್ಸವವನ್ನೂ ನಡೆಸಿತು. ಅದೇ ರಾಮೋತ್ಸವದ ವಿಶೇಷ ಸಂಚಿಕೆಯನ್ನು ಹೊತ್ತು ಈ ಆನಂದಿನಿ ನಿಮ್ಮ ಕೈಸೇರಿದೆ. ರಾಮರಾಜ್ಯದ ಕಲ್ಪನೆಯೇ ಸುಂದರ. ಈ ವಿಷಯವನ್ನು ರಾಮಾಯಣದ ಬಾಲಕಾಂಡದಲ್ಲಿ ವಾಲ್ಮೀಕಿಗಳು ಸಂಕ್ಷಿಪ್ತವಾಗಿ ಹೇಳುತ್ತಾರೆ. ಇದನ್ನು ಕೇಳಿದರೆ ಮತ್ತೆ ಆ ಕಾಲ ಬರಲು ಸಾಧ್ಯವೇ ?! ಎಂದು ಒಮ್ಮೆ ಕಲ್ಪನಾವಿಲಾಸಕ್ಕೆ ಜಾರುವಂತಾಗುತ್ತದೆ : ರಾಮರಾಜ್ಯವದು ತುಂಬಿತ್ತು ಸಜ್ಜನರ ತುಂಬಿದಾನಂದದಿ ಬದುಕಿನಲ್ಲಿ ಚಿಂತಸದೆ ರೋಗಕ್ಕೆ ಭಯವಿಲ್ಲದವರಾಗಿ ಬರಗಾಲಕ್ಕೆ ತನ್ನ ತನುಜರ ಸಾವು ಕಾಣದಾ ತಂದೆ ನಿತ್ಯ ಸುಮಂಗಳೆಯರಾದರು ಗರತಿಯರು ಬಲಿಯಾಗದೆ ಅನಿಲಾನಲರ ರೋಷಕ್ಕೆ ಬಾಳಿದರಲ್ಲಿ ಯಾವ ವಿಷಜಂತುಗಳಿಗೆದರದೆ ಹಸಿದಿಲ್ಲ ಯಾರೂ ಧನಧಾನ್ಯಗಳಿಗಿಲ್ಲ ಕೊರತೆ ತೆರೆದಿಟ್ಟ ಬಾಗಿಲು ಚೋರನ ಭಯವಿಲ್ಲದಿರಲು ಚಿನ್ನದೋಕುಳಿಯ ನಡುವೆ ನಡೆವಾಶ್ವಮೇಧವು ನೆನಪಿಸಿತು ಕೃತಯುಗವ ಈ ರಾಮರಾಜ್ಯದೆ ತಿಳಿದವರು ಹರ್ಷಿಸಿದರು ಗೋ-ವಿತ್ತದಾನಗಳಿಂದ ನೂರ್ಕಾಲಕು ಬೆಳೆಸಿದನು ಶತಗುಣದಿ ತನ್ನಕುಲವ ಧರ್ಮದ ಹಾದಿಯಲಿ ಅವರವರ ಸಲ್ಲಿಕೆಗಳ ಸಲ್ಲಿಸಿ ಸ್ಥಾಪಿಸಿದನು ರಾಮ ತನ್ನ ರಾಜ್ಯವ (ಕನ್ನಡಾನುವಾದ – ವಾಲ್ಮೀಕಿ ರಾಮಾಯಣ – ಬಾಲಕಾಂಡ) ಕಲ್ಪನೆ ಎನ್ನಿವಿರೋ – ಕನಸು ಎನ್ನಿವಿರೋ ಆದರೆ ಇಂದಿಗೂ ನಮಗೆ ಆದರ್ಶ ರಾಮನೇ, ರಾಮರಾಜ್ಯವೇ ಆಗಿದೆ. ಎಷ್ಟೇ ಆಧುನಿಕತೆಯೊಳಗೆ ಕಳೆದುಹೋದರೂ ಅಮ್ಮನೆಂದರೆ ಸೀತಾ ಮಾತೆ, ಮಗನೆಂದರೆ ರಾಮ, ತಮ್ಮನೆಂದರೆ ಭರತ ಎಂಬ ಉದಾಹರಣೆಗಳು ನಮ್ಮ ಬಾಯಲ್ಲಿ ಹರಿದಾಡುತ್ತವೆ. ಅಂದರೆ ಎಲ್ಲೋ ಒಂದು ಭರವಸೆ ನಮ್ಮೆಲ್ಲರಲ್ಲೂ ಇದೆ. ಆದ್ದರಿಂದ ಮಕ್ಕಳಿಗೆ ಇಂದಿಗೂ ರಾಮನ ಕಥೆಯನ್ನು ಬಾಲ್ಯದಿಂದಲೇ ಹೇಳುತ್ತೇವೆ. ಹೇಳಿಕೊಡುವಾಗ ದುರ್ವಿದ್ಯೆಯನ್ನಂತೂ ಹೇಳಿಕೊಡಲು ಸಾಧ್ಯವಿಲ್ಲ…. ಕಲಿಸುವಾಗ ಒಳ್ಳೆಯದನ್ನೇ ಕಲಿಸಬೇಕು, ನಂತರ ಅದನ್ನು ಅಳವಡಿಸಿಕೊಂಡು ಬದುಕುವ ಜವಾಬ್ದಾರಿ ಮಕ್ಕಳಿಗಿದೆ. ಮಕ್ಕಳು ಹಾಗೆ ಬದುಕಬೇಕಾದರೆ ಹಿರಿಯರು ಮಾದರಿಯಾಗಿ ಬದುಕಿ ತೋರಿಸಬೇಕಿದೆ. ಈ ಆದರ್ಶಗಳನ್ನು ಹೊತ್ತು ಈ ವರ್ಷ ನಮ್ಮ ಎಲ್ಲಾ ಅಧ್ಯಯನವನ್ನು, ಚಟುವಟಿಕೆಗಳನ್ನು ರಾಮಾಯಣದ ಸುತ್ತ ಹೆಣೆಯಲಾಗಿತ್ತು. ಅನೇಕ ಕುಟುಂಬದಲ್ಲಿ ಪೋಷಕರು ಮಕ್ಕಳೊಂದಿಗೆ ಕೂತು ಕಥೆ ಕೇಳಿ, ಪ್ರಸಂಗಗಳನ್ನು ಅಭಿನಯಿಸಿ Video Record ಮಾಡಿ ಕಳುಹಿಸಿದ್ದಾರೆ. ಮಕ್ಕಳು ವೇಷಗಳನ್ನು ಹಾಕಿ ಸಂಭ್ರಮಿಸಿದ್ದಾರೆ. ಈ ಎಲ್ಲಾ ವೈಭವವನ್ನು ನಿಮಗಾಗಿ ತಂದಿದ್ದೇವೆ. ರಾಮ ರಾಜ್ಯದ ಕಲ್ಪನೆಯನ್ನು ಇನ್ನಷ್ಟು ಆಳವಾಗಿ ಅರ್ಥಮಾಡುಕೊಳ್ಳುವ ಸಲುವಾಗಿ Sense of Past ಎಂಬ ವಿಶಿಷ್ಟ ತರಬೇತಿಯನ್ನು ನಮ್ಮ ಶಾಲೆಯ ಚಿಂತಕರಾದ ಪ್ರಣವ್ ವಸಿಷ್ಠ ಅವರು ರೂಪಿಸಿದ್ದಾರೆ ಮತ್ತು ನಡೆಸುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ರಾಮಾಯಣ-ಮಹಾಭಾರತ-ಭಾಗವತ ಆಧಾರಿತ ಪಠ್ಯಗಳನ್ನು ಮಾಡುವ ಯೋಜನೆಯೂ ನಡೆದಿದೆ. ಈ ಎಲ್ಲಾ ಕೆಲಸಗಳಲ್ಲಿ ನಮ್ಮ ಬೆನ್ನೆಲುಬಾಗಿ ಮಕ್ಕಳಿಗೆ ಪರಂಪರೆಯ ಕೊಂಡಿಗಳನ್ನು ತಲುಪಿಸುವ ನಿಟ್ಟಿನಲ್ಲಿ ನೀವೆಲ್ಲ ಕೈ ಜೋಡಿಸಿರುವ ಧೈರ್ಯ ನಮಗಿದೆ. ರಾಮದೇವರ ನಾಡಿನಲ್ಲಿ ಮತ್ತೆ ಧರ್ಮ ನೆಲೆಯಾಗಲಿ ಎಂದು ಹಂಬಲಿಸುತ್ತಾ ಬೀಳ್ಕೊಳ್ಳುವೆ. ಆನಂದಿನಿಯನ್ನು ಆನಂದಿಸಿ. ♦ ತಿಂಗಳ ತಿಳಿಗಾಳು (ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ) ಆನಂದಕಂದದಲ್ಲಿ ಭಾಗವತೋತ್ಸವ – ವಿದ್ಯಾ ಗುತ್ತಲ್ (ಪ್ರತಿನಿಧಿ, ಪೂರ್ವಪ್ರಾಥಮಿಕ ವಿಭಾಗ) ನಮ್ಮ ಶಾಲೆಯಲ್ಲಿ ಡಿಸೆಂಬರ್ ಬಂದಿತೆಂದರೆ, ಉತ್ಸವದ ತಯಾರಿ ಒಂದು ಸಂಭ್ರಮದ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಪ್ರತಿ ವರ್ಷವೂ ಒಂದು ವಿಶೇಷ ವಿಷಯ(ಥೀಮ್) ವನ್ನ ತೆಗೆದುಕೊಂಡು ಉತ್ಸವವನ್ನು ನಡೆಸಲಾಗುತ್ತದೆ. ಆ ವಿಷಯದ ವಿಶೇಷ ಅಧ್ಯಯನದ ಜೊತೆಗೆ ಅದನ್ನು ನಮ್ಮ ಪಠ್ಯದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಯೋಜನೆಯನ್ನು ತಯಾರಿಸಿ ಮಕ್ಕಳಿಗೆ ತರಬೇತಿಯನ್ನು, ಪಾಠವನ್ನು, ಅಭ್ಯಾಸವನ್ನು ನೀಡಲಾಗುತ್ತದೆ. ಉತ್ಸವದ ಸಮಯದಲ್ಲಿ ಮಕ್ಕಳು ತಾವು ಕಲಿತ ವಿಷಯವನ್ನು ಪ್ರಸ್ತುತಪಡಿಸುತ್ತಾರೆ. ಈ ಬಾರಿಯ ಪೂರ್ವ ಪ್ರಾಥಮಿಕ ಉತ್ಸವದಲ್ಲಿ ಭಾಗವತದ ಕಥೆಗಳನ್ನೂ ಆಯ್ದುಕೊಂಡು ಮಕ್ಕಳಿಗೆ ಕಥೆಗಳನ್ನು ಹೇಳಿ, ಅದರಲ್ಲಿ ಅವರಿಗೆ ನೀಡಬಹುದಾದ ಪಠ್ಯಾಧಾರಿತ ಅಭ್ಯಾಸಗಳನ್ನು ನೀಡಿ, ವಿಷಯವನ್ನು ವಿವಿಧ ಪ್ರಕಾರಗಳಲ್ಲಿ ಅರ್ಥಮಾಡಿಕೊಳ್ಳುವುದು ಹೇಗೆ ಎಂಬುದನ್ನು ಪರಿಚಯಿಸಲಾಯಿತು. ಈ ಬಾರಿಯ ಉತ್ಸವದ ಮತ್ತೊಂದು ವಿಶೇಷತೆಯೆಂದರೆ ಎಲ್ಲಾ ವಿಷಯಗಳಲ್ಲೂ ಭಾಗವತದ ಕಥೆಗಳನ್ನು ಸಂಯೋಜಿಸಿ ವಿವಿಧ ಚಟುವಟಿಕೆಗಳ ಮೂಲಕ, ಅವರ ಭಾಷಾ ಜ್ಞಾನ ಹಾಗೂ ಅರ್ಥೈಸುವಿಕೆಯ ಹಂತವನ್ನು ಉತ್ತಮ ಗೊಳಿಸಲಾಯಿತು. ಪಾಠ ಹಾಗೂ ಕಾರ್ಯಕ್ರಮಗಳು ಆನ್ಲೈನ್ನಲ್ಲಿ ಆಗಬೇಕಾಗಿರುವ ಕಾರಣದಿಂದ, ಮಕ್ಕಳಿಗೆ ಸಮಾನ ಅವಕಾಶವನ್ನು ಕಲ್ಪಿಸಬೇಕಾದರಿಂದ, ಮಕ್ಕಳೊಂದಿಗೆ ಅವರ ಕುಟುಂಬದವರನ್ನು ಈ ಬಾರಿಯ ಉತ್ಸವದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲಾಯಿತು. ಪೋಷಕರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯಿಂದ ಎಲ್ಲಾ ದಿನದ ಕಾರ್ಯಕ್ರಮಗಳು ವರ್ಣರಂಜಿತವಾಗಿ, ಅತ್ಯಾಕರ್ಷಕವಾಗಿ ಮೂಡಿಬಂದವು. ಅತಿಥಿಗಳ ಆಗಮನ, ಅವರ ಪರಿವೀಕ್ಷಣೆ, ಅಭಿಪ್ರಾಯಗಳು, ಪೋಷಕರು ಹಾಗೂ ಅಧ್ಯಾಪಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಹದಾಗಿದ್ದುವು. ಶ್ರೀವಿಶ್ವೇಶತೀರ್ಥರ ಜೀವನ, ವಿದ್ಯಾಪೀಠದಲ್ಲಿನ ಗುರುವಂದನಾ, ಪುಟ್ಟ ಮಕ್ಕಳು ತೊಟ್ಟ ವಿವಿಧ ಪಾತ್ರಗಳ ವೇಷಭೂಷಣ, ಉತ್ಸವದ ಕೊನೆಯಲ್ಲಿ ನೀಡಿತೆಮಗೆ ಸಾರ್ಥಕ ಭಾವನೆ. -0- . ವಾಮನ ವಿಭಾಗ – ಮುರಳೀಧರ ಕೆ (ಪ್ರತಿನಿಧಿ, ಪ್ರಾಥಮಿಕ ವಿಭಾಗ) ಎಲ್ಲಿ ನೋಡಲು ನೀನೆ ವ್ಯಾಪ್ತನಾಗಿಹಲಿಕ್ಕೆ………….. ಪೂರ್ಣಪ್ರಮತಿ ಬಂಧುಗಳಿಗೆ ನಮಸ್ಕಾರ ಶಾಲೆಯಲ್ಲಿ ಡಿಸೆಂಬರ್ ಮಾಸ ಬಂತೆಂದರೆ ಕೋಗಿಲೆಗೆ ವಸಂತ ಬಂದಂತೆ. ಮಕ್ಕಳು ತಾವು ಇಡೀ ವರ್ಷ ಪೂರ್ತಿ ಕಲಿತ ವಿಷಯಗಳ ಕ್ರೌಢೀಕರಣವೇ ಈ ಉತ್ಸವ. ಈ ವರ್ಷ ರಾಮೋತ್ಸವ ಮಾಡಿದೆವು ಈ ರಾಮೋತ್ಸವದಲ್ಲಿ ಮಕ್ಕಳು ೩ ಭಾಷೆಗಳಲ್ಲಿ ಭಾಷಣ, ಹಾಡು, ಏಕಪಾತ್ರಾಭಿನಯ, ನರ್ತನ, ಹೀಗೆ ತಾವು ಕಲೆತ ವಿಷಯವನ್ನೇ ಎಲ್ಲಕಡೆ ಪ್ರಸ್ತುತಿ ಪಡೆಸಿದರು. ಮೂರುದಿನಗಳ ಕಾಲ ಆರು ಅವಧಿಯಲ್ಲಿ ಕಾರ್ಯಕ್ರಮ ನೆರವೇರಿತು. ಪ್ರತೀಕಾರ್ಯಕ್ರಮಕ್ಕೂ ಅತಿಥಿಗಳು ಬಂದು ಮಕ್ಕಳನ್ನು ನೋಡಿ ಹರಸಿ, ತಪ್ಪು ಇರುವ ಕಡೆ ತಿದ್ದಿದರು. ಈ ಬಾರಿಯ ವಿಶೇಷವೆಂದರೆ ಆನ್ ಲೈನ್ ಮುಖಾಂತರವೇ ಎಲ್ಲಾ ಮಕ್ಕಳಿಗೂ ಎಲ್ಲಾ ವಿಷಯದಲ್ಲಿ ಭಾಗವಹಿಸಲು ಸಿಕ್ಕಿದ್ದು, ಪೋಷಕರು ಮತ್ತು ಅಧ್ಯಾಪಕರು ಒಂದುಕಡೆ ಕುಳಿತು ಮಕ್ಕಳ ಅಭಿನಯ, ಹಾಡು ಆಸ್ವಾದಿಸಲು ಸಾಧ್ಯವಾದದ್ದು . ಪುಟಾಣಿಗಳ ಪಾದುಕಾ ಪಟ್ಟಾಭಿಷೇಕ ನಾಟಕ, ರಾಮಾಯಣ ಹರಿಕಥೆ, ರಾಮಾಯಣದಲ್ಲಿ ಗಣಿತ, ಯೋಜನೆಗಳ ಲೆಕ್ಕಾಚಾರ, ಬಹಳ ಮನೋಜ್ಞವಾಗಿತ್ತು ಈ ಎಲ್ಲಾ ವಿಧಗಳಲ್ಲೂ ರಾಮಾಯಣ ಆಸ್ವಾದಿಸಬಹುದಾ ? ಎನ್ನುವ ಜಿಜ್ಞಾಸೆ ಹುಟ್ಟುವಂತೆ ಮಾಡಿತು.ಇದರ ಜೊತೆ ಮಕ್ಕಳನ್ನು ತಯಾರು ಮಾಡುವಲ್ಲಿ ಪೊಷಕರು ಹಾಗೂ ಅಧ್ಯಾಪಕರ ಪಾತ್ರ ಮಹತ್ತರವಾಗಿತ್ತು. ಈ ಪ್ರಾಥಮಿಕ ಹಂತದಲ್ಲೇ ಈ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಮುಂದೊಂದುದಿನ ಹೆಮ್ಮರವಾಗಿ ಬೆಳದು ಅನೇಕ ಜಿಜ್ಞಾಸುಗಳಿಗೆ ಆಶ್ರಯ ತಂಗುದಾಣರಾಗುತ್ತಾರೆ ಎನ್ನುವುದರಲ್ಲಿ ಸಂದೇಹವಿಲ್ಲ….. ಧನ್ಯವಾದಗಳು -0- . ಭೀಮಸೆನಾ – Sulochana G (Vibhaga Prathinidhi, Highschool) Ramayana Utsava in Vrikodara and Jayanta We began with the English Ramayana festival on Monday the 28th of December. Children of 10th std participated very enthusiastically with all the children in one activity or the other. Children participated in Story narration, debate, speech given by one of the characters in the Ramayana like Sita, Vibheeshana, character sketch of important characters, dialogues between characters and comic strip with story line,. Children of 9th standard presented a quiz which was well received. They also participated in the debate along with the children of 10th. One child described the city of Lanka and two others did another comic strip with a storyline. All the programs were enjoyable and I was amazed to see how our children got everything ready for the Utsava. We just had to guide them. Our guest was Tejas anna and he gave feedback to our children on how they can improve their presentations. Pranav anna also attended the Utsava that day and he also was able to give specific