Newsletters for 2024-25
Sunday, December 29th, 2024Purnashiksha (Prashikshana Newsletter) for the year 2024-25 July 2024 Aug and Sep 2024 Oct and Nov 2024
Purnashiksha (Prashikshana Newsletter) for the year 2024-25 July 2024 Aug and Sep 2024 Oct and Nov 2024
Purnashiksha (Prashikshana Newsletter) for the year 2023-24 June – July 2023 Oct- Nov 2023
♣ . ರಾಮೋತ್ಸವ ವಿಶೇಷ आनन्दिनी ಶಾರ್ವರಿ ಸಂವತ್ಸರ, ಶಿಶಿರ ಋತು, ಮಾಘ-ಫಾಲ್ಘುಣ ಮಾಸ – ಮಾರ್ಚ್ ೨೦೨೦ ಸಂಪಾದಕೀಯ – ಲತಾ ಎಂ (ಪ್ರತಿನಿಧಿ, ಪ್ರಕಾಶನ ವಿಭಾಗ) ♦ “ಮನೆ ಚಿಕ್ಕದಾದರೂ ಮನಸ್ಸು ಚಿಕ್ಕದೇ” – ಎಂಬ ಗಾದೆಯನ್ನು ನಾವೆಲ್ಲ ಕೇಳಿದ್ದೇವೆ. ಈ ಗಾದೆಯಿಂದ ಸ್ಪೂರ್ತಿ ಪಡೆದು ಪೂರ್ಣಪ್ರಮತಿ online ಆದರೇನು ಕಲಿಕೆಯ ಸಂಭ್ರಮಕ್ಕೆ ಕೊರತೆಯೇ ಎಂಬಂತೆ ೨೦೨೦-೨೧ ರಲ್ಲಿ ಎಲ್ಲಾ ಪಾಠಗಳನ್ನು ಮಾಡುತ್ತಾ ಉತ್ಸವವನ್ನೂ ನಡೆಸಿತು. ಅದೇ ರಾಮೋತ್ಸವದ ವಿಶೇಷ ಸಂಚಿಕೆಯನ್ನು ಹೊತ್ತು ಈ ಆನಂದಿನಿ ನಿಮ್ಮ ಕೈಸೇರಿದೆ. ರಾಮರಾಜ್ಯದ ಕಲ್ಪನೆಯೇ ಸುಂದರ. ಈ ವಿಷಯವನ್ನು ರಾಮಾಯಣದ ಬಾಲಕಾಂಡದಲ್ಲಿ ವಾಲ್ಮೀಕಿಗಳು ಸಂಕ್ಷಿಪ್ತವಾಗಿ ಹೇಳುತ್ತಾರೆ. ಇದನ್ನು ಕೇಳಿದರೆ ಮತ್ತೆ ಆ ಕಾಲ ಬರಲು ಸಾಧ್ಯವೇ ?! ಎಂದು ಒಮ್ಮೆ ಕಲ್ಪನಾವಿಲಾಸಕ್ಕೆ ಜಾರುವಂತಾಗುತ್ತದೆ : ರಾಮರಾಜ್ಯವದು ತುಂಬಿತ್ತು ಸಜ್ಜನರ ತುಂಬಿದಾನಂದದಿ ಬದುಕಿನಲ್ಲಿ ಚಿಂತಸದೆ ರೋಗಕ್ಕೆ ಭಯವಿಲ್ಲದವರಾಗಿ ಬರಗಾಲಕ್ಕೆ ತನ್ನ ತನುಜರ ಸಾವು ಕಾಣದಾ ತಂದೆ ನಿತ್ಯ ಸುಮಂಗಳೆಯರಾದರು ಗರತಿಯರು ಬಲಿಯಾಗದೆ ಅನಿಲಾನಲರ ರೋಷಕ್ಕೆ ಬಾಳಿದರಲ್ಲಿ ಯಾವ ವಿಷಜಂತುಗಳಿಗೆದರದೆ ಹಸಿದಿಲ್ಲ ಯಾರೂ ಧನಧಾನ್ಯಗಳಿಗಿಲ್ಲ ಕೊರತೆ ತೆರೆದಿಟ್ಟ ಬಾಗಿಲು ಚೋರನ ಭಯವಿಲ್ಲದಿರಲು ಚಿನ್ನದೋಕುಳಿಯ ನಡುವೆ ನಡೆವಾಶ್ವಮೇಧವು ನೆನಪಿಸಿತು ಕೃತಯುಗವ ಈ ರಾಮರಾಜ್ಯದೆ ತಿಳಿದವರು ಹರ್ಷಿಸಿದರು ಗೋ-ವಿತ್ತದಾನಗಳಿಂದ ನೂರ್ಕಾಲಕು ಬೆಳೆಸಿದನು ಶತಗುಣದಿ ತನ್ನಕುಲವ ಧರ್ಮದ ಹಾದಿಯಲಿ ಅವರವರ ಸಲ್ಲಿಕೆಗಳ ಸಲ್ಲಿಸಿ ಸ್ಥಾಪಿಸಿದನು ರಾಮ ತನ್ನ ರಾಜ್ಯವ (ಕನ್ನಡಾನುವಾದ – ವಾಲ್ಮೀಕಿ ರಾಮಾಯಣ – ಬಾಲಕಾಂಡ) ಕಲ್ಪನೆ ಎನ್ನಿವಿರೋ – ಕನಸು ಎನ್ನಿವಿರೋ ಆದರೆ ಇಂದಿಗೂ ನಮಗೆ ಆದರ್ಶ ರಾಮನೇ, ರಾಮರಾಜ್ಯವೇ ಆಗಿದೆ. ಎಷ್ಟೇ ಆಧುನಿಕತೆಯೊಳಗೆ ಕಳೆದುಹೋದರೂ ಅಮ್ಮನೆಂದರೆ ಸೀತಾ ಮಾತೆ, ಮಗನೆಂದರೆ ರಾಮ, ತಮ್ಮನೆಂದರೆ ಭರತ ಎಂಬ ಉದಾಹರಣೆಗಳು ನಮ್ಮ ಬಾಯಲ್ಲಿ ಹರಿದಾಡುತ್ತವೆ. ಅಂದರೆ ಎಲ್ಲೋ ಒಂದು ಭರವಸೆ ನಮ್ಮೆಲ್ಲರಲ್ಲೂ ಇದೆ. ಆದ್ದರಿಂದ ಮಕ್ಕಳಿಗೆ ಇಂದಿಗೂ ರಾಮನ ಕಥೆಯನ್ನು ಬಾಲ್ಯದಿಂದಲೇ ಹೇಳುತ್ತೇವೆ. ಹೇಳಿಕೊಡುವಾಗ ದುರ್ವಿದ್ಯೆಯನ್ನಂತೂ ಹೇಳಿಕೊಡಲು ಸಾಧ್ಯವಿಲ್ಲ…. ಕಲಿಸುವಾಗ ಒಳ್ಳೆಯದನ್ನೇ ಕಲಿಸಬೇಕು, ನಂತರ ಅದನ್ನು ಅಳವಡಿಸಿಕೊಂಡು ಬದುಕುವ ಜವಾಬ್ದಾರಿ ಮಕ್ಕಳಿಗಿದೆ. ಮಕ್ಕಳು ಹಾಗೆ ಬದುಕಬೇಕಾದರೆ ಹಿರಿಯರು ಮಾದರಿಯಾಗಿ ಬದುಕಿ ತೋರಿಸಬೇಕಿದೆ. ಈ ಆದರ್ಶಗಳನ್ನು ಹೊತ್ತು ಈ ವರ್ಷ ನಮ್ಮ ಎಲ್ಲಾ ಅಧ್ಯಯನವನ್ನು, ಚಟುವಟಿಕೆಗಳನ್ನು ರಾಮಾಯಣದ ಸುತ್ತ ಹೆಣೆಯಲಾಗಿತ್ತು. ಅನೇಕ ಕುಟುಂಬದಲ್ಲಿ ಪೋಷಕರು ಮಕ್ಕಳೊಂದಿಗೆ ಕೂತು ಕಥೆ ಕೇಳಿ, ಪ್ರಸಂಗಗಳನ್ನು ಅಭಿನಯಿಸಿ Video Record ಮಾಡಿ ಕಳುಹಿಸಿದ್ದಾರೆ. ಮಕ್ಕಳು ವೇಷಗಳನ್ನು ಹಾಕಿ ಸಂಭ್ರಮಿಸಿದ್ದಾರೆ. ಈ ಎಲ್ಲಾ ವೈಭವವನ್ನು ನಿಮಗಾಗಿ ತಂದಿದ್ದೇವೆ. ರಾಮ ರಾಜ್ಯದ ಕಲ್ಪನೆಯನ್ನು ಇನ್ನಷ್ಟು ಆಳವಾಗಿ ಅರ್ಥಮಾಡುಕೊಳ್ಳುವ ಸಲುವಾಗಿ Sense of Past ಎಂಬ ವಿಶಿಷ್ಟ ತರಬೇತಿಯನ್ನು ನಮ್ಮ ಶಾಲೆಯ ಚಿಂತಕರಾದ ಪ್ರಣವ್ ವಸಿಷ್ಠ ಅವರು ರೂಪಿಸಿದ್ದಾರೆ ಮತ್ತು ನಡೆಸುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ರಾಮಾಯಣ-ಮಹಾಭಾರತ-ಭಾಗವತ ಆಧಾರಿತ ಪಠ್ಯಗಳನ್ನು ಮಾಡುವ ಯೋಜನೆಯೂ ನಡೆದಿದೆ. ಈ ಎಲ್ಲಾ ಕೆಲಸಗಳಲ್ಲಿ ನಮ್ಮ ಬೆನ್ನೆಲುಬಾಗಿ ಮಕ್ಕಳಿಗೆ ಪರಂಪರೆಯ ಕೊಂಡಿಗಳನ್ನು ತಲುಪಿಸುವ ನಿಟ್ಟಿನಲ್ಲಿ ನೀವೆಲ್ಲ ಕೈ ಜೋಡಿಸಿರುವ ಧೈರ್ಯ ನಮಗಿದೆ. ರಾಮದೇವರ ನಾಡಿನಲ್ಲಿ ಮತ್ತೆ ಧರ್ಮ ನೆಲೆಯಾಗಲಿ ಎಂದು ಹಂಬಲಿಸುತ್ತಾ ಬೀಳ್ಕೊಳ್ಳುವೆ. ಆನಂದಿನಿಯನ್ನು ಆನಂದಿಸಿ. ♦ ತಿಂಗಳ ತಿಳಿಗಾಳು (ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ) ಆನಂದಕಂದದಲ್ಲಿ ಭಾಗವತೋತ್ಸವ – ವಿದ್ಯಾ ಗುತ್ತಲ್ (ಪ್ರತಿನಿಧಿ, ಪೂರ್ವಪ್ರಾಥಮಿಕ ವಿಭಾಗ) ನಮ್ಮ ಶಾಲೆಯಲ್ಲಿ ಡಿಸೆಂಬರ್ ಬಂದಿತೆಂದರೆ, ಉತ್ಸವದ ತಯಾರಿ ಒಂದು ಸಂಭ್ರಮದ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಪ್ರತಿ ವರ್ಷವೂ ಒಂದು ವಿಶೇಷ ವಿಷಯ(ಥೀಮ್) ವನ್ನ ತೆಗೆದುಕೊಂಡು ಉತ್ಸವವನ್ನು ನಡೆಸಲಾಗುತ್ತದೆ. ಆ ವಿಷಯದ ವಿಶೇಷ ಅಧ್ಯಯನದ ಜೊತೆಗೆ ಅದನ್ನು ನಮ್ಮ ಪಠ್ಯದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಯೋಜನೆಯನ್ನು ತಯಾರಿಸಿ ಮಕ್ಕಳಿಗೆ ತರಬೇತಿಯನ್ನು, ಪಾಠವನ್ನು, ಅಭ್ಯಾಸವನ್ನು ನೀಡಲಾಗುತ್ತದೆ. ಉತ್ಸವದ ಸಮಯದಲ್ಲಿ ಮಕ್ಕಳು ತಾವು ಕಲಿತ ವಿಷಯವನ್ನು ಪ್ರಸ್ತುತಪಡಿಸುತ್ತಾರೆ. ಈ ಬಾರಿಯ ಪೂರ್ವ ಪ್ರಾಥಮಿಕ ಉತ್ಸವದಲ್ಲಿ ಭಾಗವತದ ಕಥೆಗಳನ್ನೂ ಆಯ್ದುಕೊಂಡು ಮಕ್ಕಳಿಗೆ ಕಥೆಗಳನ್ನು ಹೇಳಿ, ಅದರಲ್ಲಿ ಅವರಿಗೆ ನೀಡಬಹುದಾದ ಪಠ್ಯಾಧಾರಿತ ಅಭ್ಯಾಸಗಳನ್ನು ನೀಡಿ, ವಿಷಯವನ್ನು ವಿವಿಧ ಪ್ರಕಾರಗಳಲ್ಲಿ ಅರ್ಥಮಾಡಿಕೊಳ್ಳುವುದು ಹೇಗೆ ಎಂಬುದನ್ನು ಪರಿಚಯಿಸಲಾಯಿತು. ಈ ಬಾರಿಯ ಉತ್ಸವದ ಮತ್ತೊಂದು ವಿಶೇಷತೆಯೆಂದರೆ ಎಲ್ಲಾ ವಿಷಯಗಳಲ್ಲೂ ಭಾಗವತದ ಕಥೆಗಳನ್ನು ಸಂಯೋಜಿಸಿ ವಿವಿಧ ಚಟುವಟಿಕೆಗಳ ಮೂಲಕ, ಅವರ ಭಾಷಾ ಜ್ಞಾನ ಹಾಗೂ ಅರ್ಥೈಸುವಿಕೆಯ ಹಂತವನ್ನು ಉತ್ತಮ ಗೊಳಿಸಲಾಯಿತು. ಪಾಠ ಹಾಗೂ ಕಾರ್ಯಕ್ರಮಗಳು ಆನ್ಲೈನ್ನಲ್ಲಿ ಆಗಬೇಕಾಗಿರುವ ಕಾರಣದಿಂದ, ಮಕ್ಕಳಿಗೆ ಸಮಾನ ಅವಕಾಶವನ್ನು ಕಲ್ಪಿಸಬೇಕಾದರಿಂದ, ಮಕ್ಕಳೊಂದಿಗೆ ಅವರ ಕುಟುಂಬದವರನ್ನು ಈ ಬಾರಿಯ ಉತ್ಸವದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲಾಯಿತು. ಪೋಷಕರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯಿಂದ ಎಲ್ಲಾ ದಿನದ ಕಾರ್ಯಕ್ರಮಗಳು ವರ್ಣರಂಜಿತವಾಗಿ, ಅತ್ಯಾಕರ್ಷಕವಾಗಿ ಮೂಡಿಬಂದವು. ಅತಿಥಿಗಳ ಆಗಮನ, ಅವರ ಪರಿವೀಕ್ಷಣೆ, ಅಭಿಪ್ರಾಯಗಳು, ಪೋಷಕರು ಹಾಗೂ ಅಧ್ಯಾಪಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಹದಾಗಿದ್ದುವು. ಶ್ರೀವಿಶ್ವೇಶತೀರ್ಥರ ಜೀವನ, ವಿದ್ಯಾಪೀಠದಲ್ಲಿನ ಗುರುವಂದನಾ, ಪುಟ್ಟ ಮಕ್ಕಳು ತೊಟ್ಟ ವಿವಿಧ ಪಾತ್ರಗಳ ವೇಷಭೂಷಣ, ಉತ್ಸವದ ಕೊನೆಯಲ್ಲಿ ನೀಡಿತೆಮಗೆ ಸಾರ್ಥಕ ಭಾವನೆ. -0- . ವಾಮನ ವಿಭಾಗ – ಮುರಳೀಧರ ಕೆ (ಪ್ರತಿನಿಧಿ, ಪ್ರಾಥಮಿಕ ವಿಭಾಗ) ಎಲ್ಲಿ ನೋಡಲು ನೀನೆ ವ್ಯಾಪ್ತನಾಗಿಹಲಿಕ್ಕೆ………….. ಪೂರ್ಣಪ್ರಮತಿ ಬಂಧುಗಳಿಗೆ ನಮಸ್ಕಾರ ಶಾಲೆಯಲ್ಲಿ ಡಿಸೆಂಬರ್ ಮಾಸ ಬಂತೆಂದರೆ ಕೋಗಿಲೆಗೆ ವಸಂತ ಬಂದಂತೆ. ಮಕ್ಕಳು ತಾವು ಇಡೀ ವರ್ಷ ಪೂರ್ತಿ ಕಲಿತ ವಿಷಯಗಳ ಕ್ರೌಢೀಕರಣವೇ ಈ ಉತ್ಸವ. ಈ ವರ್ಷ ರಾಮೋತ್ಸವ ಮಾಡಿದೆವು ಈ ರಾಮೋತ್ಸವದಲ್ಲಿ ಮಕ್ಕಳು ೩ ಭಾಷೆಗಳಲ್ಲಿ ಭಾಷಣ, ಹಾಡು, ಏಕಪಾತ್ರಾಭಿನಯ, ನರ್ತನ, ಹೀಗೆ ತಾವು ಕಲೆತ ವಿಷಯವನ್ನೇ ಎಲ್ಲಕಡೆ ಪ್ರಸ್ತುತಿ ಪಡೆಸಿದರು. ಮೂರುದಿನಗಳ ಕಾಲ ಆರು ಅವಧಿಯಲ್ಲಿ ಕಾರ್ಯಕ್ರಮ ನೆರವೇರಿತು. ಪ್ರತೀಕಾರ್ಯಕ್ರಮಕ್ಕೂ ಅತಿಥಿಗಳು ಬಂದು ಮಕ್ಕಳನ್ನು ನೋಡಿ ಹರಸಿ, ತಪ್ಪು ಇರುವ ಕಡೆ ತಿದ್ದಿದರು. ಈ ಬಾರಿಯ ವಿಶೇಷವೆಂದರೆ ಆನ್ ಲೈನ್ ಮುಖಾಂತರವೇ ಎಲ್ಲಾ ಮಕ್ಕಳಿಗೂ ಎಲ್ಲಾ ವಿಷಯದಲ್ಲಿ ಭಾಗವಹಿಸಲು ಸಿಕ್ಕಿದ್ದು, ಪೋಷಕರು ಮತ್ತು ಅಧ್ಯಾಪಕರು ಒಂದುಕಡೆ ಕುಳಿತು ಮಕ್ಕಳ ಅಭಿನಯ, ಹಾಡು ಆಸ್ವಾದಿಸಲು ಸಾಧ್ಯವಾದದ್ದು . ಪುಟಾಣಿಗಳ ಪಾದುಕಾ ಪಟ್ಟಾಭಿಷೇಕ ನಾಟಕ, ರಾಮಾಯಣ ಹರಿಕಥೆ, ರಾಮಾಯಣದಲ್ಲಿ ಗಣಿತ, ಯೋಜನೆಗಳ ಲೆಕ್ಕಾಚಾರ, ಬಹಳ ಮನೋಜ್ಞವಾಗಿತ್ತು ಈ ಎಲ್ಲಾ ವಿಧಗಳಲ್ಲೂ ರಾಮಾಯಣ ಆಸ್ವಾದಿಸಬಹುದಾ ? ಎನ್ನುವ ಜಿಜ್ಞಾಸೆ ಹುಟ್ಟುವಂತೆ ಮಾಡಿತು.ಇದರ ಜೊತೆ ಮಕ್ಕಳನ್ನು ತಯಾರು ಮಾಡುವಲ್ಲಿ ಪೊಷಕರು ಹಾಗೂ ಅಧ್ಯಾಪಕರ ಪಾತ್ರ ಮಹತ್ತರವಾಗಿತ್ತು. ಈ ಪ್ರಾಥಮಿಕ ಹಂತದಲ್ಲೇ ಈ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಮುಂದೊಂದುದಿನ ಹೆಮ್ಮರವಾಗಿ ಬೆಳದು ಅನೇಕ ಜಿಜ್ಞಾಸುಗಳಿಗೆ ಆಶ್ರಯ ತಂಗುದಾಣರಾಗುತ್ತಾರೆ ಎನ್ನುವುದರಲ್ಲಿ ಸಂದೇಹವಿಲ್ಲ….. ಧನ್ಯವಾದಗಳು -0- . ಭೀಮಸೆನಾ – Sulochana G (Vibhaga Prathinidhi, Highschool) Ramayana Utsava in Vrikodara and Jayanta We began with the English Ramayana festival on Monday the 28th of December. Children of 10th std participated very enthusiastically with all the children in one activity or the other. Children participated in Story narration, debate, speech given by one of the characters in the Ramayana like Sita, Vibheeshana, character sketch of important characters, dialogues between characters and comic strip with story line,. Children of 9th standard presented a quiz which was well received. They also participated in the debate along with the children of 10th. One child described the city of Lanka and two others did another comic strip with a storyline. All the programs were enjoyable and I was amazed to see how our children got everything ready for the Utsava. We just had to guide them. Our guest was Tejas anna and he gave feedback to our children on how they can improve their presentations. Pranav anna also attended the Utsava that day and he also was able to give specific
♣ . आनन्दिनी ಶಾರ್ವರಿ ಸಂವತ್ಸರ, ಹೇಮಂತ ಋತು, ಕಾರ್ತೀಕ ಮಾಸ – ನವೆಂಬರ್೨೦೨೦ ಸಂಪಾದಕೀಯ ಪೂರ್ಣಪ್ರಮತಿ ಕಲಿಕಾ ತಾಣ…..ಯಾರಿಗೆಲ್ಲಾ? ಎಂದು ಯಾರಾದರೂ ಪ್ರಶ್ನಿಸಿದರೆ ! ಯಾರು ಕಲಿಯಲು ಸಿದ್ಧರೋ ಅವರಿಗೆ ಇದು ಕಲಿಕಾತಾಣ. ಪೋಷಕರು, ಮಕ್ಕಳು, ಅಧ್ಯಾಪಕರು….ಇದಕ್ಕೆ ಮಿತಿಯಿಲ್ಲ. ನಮ್ಮ ಕಲಿಕೆಯ ಪ್ರಯಾಣ ಮುಂದುವರೆದಿದೆ. ನವೆಂಬರ್ ಮಾಸದ ಕಲಿಕೆಯನ್ನು ಆನಂದಿನಿಯಲ್ಲಿ ಹೊತ್ತು ಬಂದಿದ್ದೇವೆ. ಪ್ರತಿಬಾರಿಯಂತೆ ವಿವಿಧ ವಿಭಾಗಗಳ ವರದಿ ಇದೆ, ಮಕ್ಕಳ ಬರವಣಿಗೆ – ಚಟುವಟಿಕೆಗಳಿವೆ, ಭಗವದ್ಗೀತೆಯ ಅಧ್ಯಯನ ಮಾಡುತ್ತಾ ಅಧ್ಯಾಪಕರು ಕಂಡುಕೊಂಡ ಕರ್ಮಯೋಗದ ಅಂಶಗಳಿವೆ, ವಿಜ್ಞಾನದ ಹಸಿವನ್ನು ಹೆಚ್ಚಿಸುವ ತಣಿಯದ ಕುತೂಹಲ – ಭೂಮಿಯ ತೂಕವನ್ನು ಕಂಡುಹಿಡಿದ ರೋಚಕ ಕಥೆ “ಶಿಹ್ಯಾಲಿಯನ್ ಪ್ರಯೋಗ” ಇದೆ. ನವೆಂಬರ್ ತಿಂಗಳಲ್ಲಿ ಪೂರ್ಣಪ್ರಮತಿಯವರು “ಕನ್ನಡ ಹಬ್ಬದ” ಬಗ್ಗೆ ಮಾತೆ ಆಡಲಿಲ್ಲವಲ್ಲ ಎಂದುಕೊಂಡಿರಾ!? “ಕನ್ನಡ ಕಸ್ತೂರಿ” ಎಂಬ ವಿಶೇಷ ಸಂಚಿಕೆ ಇಷ್ಟರಲ್ಲೇ ನಿಮ್ಮ ಕೈ ಸೇರಲಿದೆ. ಕನ್ನಡ ಅಧ್ಯಯನಕ್ಕೆ ಒಂದು ಮಾರ್ಗದರ್ಶನ ಸಿಕ್ಕಿದೆ. ಈ ಬಾರಿ ಪೋಷಕರೂ ಭಾಗವಹಿಸಿ ಮತ್ತಷ್ಟು ಬೆಂಬಲ ಕೊಡುತ್ತಿದ್ದಾರೆ. ಪೂರ್ಣಪ್ರಮತಿಯಲ್ಲಿ ಕನ್ನಡ ಬಳಗ ಸಿದ್ಧವಾಗಿದೆ. ಇನ್ನು ಕನ್ನಡ ಡಿಂಡಿಮವನ್ನು ಬಾರಿಸುವುದೇ… ಆನಂದಿನಿಯ ಪ್ರಕಟಣೆಯೇ ಒಂದು ಕಲಿಕಾ ಪ್ರಕ್ರಿಯೆಯಾಗಿ ರೂಪುಗೊಂಡಿದೆ. ಆನಂದಿನಿಗಾಗಿ ಲೇಖನವನ್ನು ಕೊಟ್ಟ ನಂತರ ಬರೆದವರು ಒಂದು ಉತ್ಸಾಹದಲ್ಲಿ ಇರುತ್ತಾರೆ. ಅವರ ಉತ್ಸಾಹವನ್ನು ಕಲಿಕೆಯಾಗಿ ಮಾರ್ಪಡಿಸುವವರು ನಮ್ಮ ಸಂಪಾದಕೀಯ ತಂಡದವರು. ಒಮ್ಮೆ ಕೊಟ್ಟ ಲೇಖನವನ್ನು ತಿದ್ದುಪಡಿಗೆ ಕಳುಹಿಸಿದಾಗ ನಿಜವಾದ ಚರ್ಚೆ ಪ್ರಾರಂಭವಾಗುವುದು. ಸರಿಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಓದಿ, ಮತ್ತೆ ಬರೆದು, ಸಂಪಾದಕೀಯ ತಂಡಕ್ಕೆ ಕೊಟ್ಟಾಗ ಅವರಿಂದ ಒಪ್ಪಿಗೆ ಸಿಕ್ಕ ನಂತರ ಪ್ರಕಟವಾಗುವುದು. ಸಂಪಾದಕೀಯ ತಂಡದವರು ಇವರ ಲೇಖನವನ್ನು ತಿದ್ದಲು ಸಂಬಂಧಪಟ್ಟ ಪುಸ್ತಕವನ್ನೋ, ಲೇಖನವನ್ನೋ, ಅದರ ಹಿನ್ನಲೆಯನ್ನು ತಾವು ಓದಿ ಅವರಿಗೆ ಪ್ರತಿಕ್ರಿಯೆ ಕೊಡುವರು. ಈ ವೇಳೆಗೆ ಲೇಖನ ಬರೆದವರು “Thanks for giving me this opportunity to write for Anandini” ಎಂಬ ಉದ್ಘಾರ ಬರುವುದು… ಆಗ ಆನಂದಿನಿ ಸಾರ್ಥಕ ಎನಿಸುವುದು.ಪೂರ್ಣಪ್ರಮತಿ ಕಲಿಕಾ ತಾಣ ಎಂದು ಅದಕ್ಕೆ ಹೇಳಿದೆ. ♣ ತಿಂಗಳ ತಿಳಿಗಾಳು (ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ) “ರೋಮಾಂಚನ ವೀ ಕನ್ನಡ” ಕನ್ನಡ ಭಾಷೆ, ನಡೆ, ನುಡಿ, ಆಚಾರ, ವಿಚಾರ, ಪರಂಪರೆ, ಕಲೆ, ಸಾಹಿತ್ಯ, ಎಲ್ಲವೂ ರೋಮಾಂಚನಕಾರಿ. ಕರ್ನಾಟಕವನ್ನಾಳಿದ ರಾಜರ ಪರಾಕ್ರಮ ಅನ್ಯಾದೃಶ್ಯ. ಇದಕ್ಕೆ ಒಂದು ಕಥೆ ಹೇಳುವೆ. ಆಗಬಹುದಾ? …….. ♣ . ಅಧ್ಯಯನ (ಅಧ್ಯಾಪಕರ / ಪೋಷಕರ ಸ್ವಾಧ್ಯಾಯ ಹಂಚಿಕೆ ವಿಭಾಗ) The regular practice of breathing exercises can completely change the quality of life that one is leading i.e., increases and enhances the quantity and quality of prana, clears blocked nadis and chakras, makes one energetic, enthusiastic, calmer and positive. …. ♣ . ತಣಿಯದ ಕುತೂಹಲ ವಿಜ್ಞಾನ ಜಗತ್ತಿನ ರೋಚಕ ಕಥೆಗಳು ಭೂಮಿಯ ಭಾರವನ್ನು ಅಳೆದ ಕೆವೆಂಡಿಶ್ ಭೂಮಿಯನ್ನು ತಕ್ಕಡಿಯಲ್ಲಿ ಇಟ್ಟು ಅದರ ಭಾರವನ್ನು ಅಳೆಯುವುದು ಸಾಧ್ಯವೇ? ಅದು ಆಗದ ಮಾತು. ಹಾಗಾದರೆ ಭೂಮಿಯ ಭಾರವನ್ನು ಅಳೆಯುವುದು ಹೇಗೆ? ಇದು 18ನೇ ಶತಮಾನದ ಭೂವಿಜ್ಞಾನಿಗಳನ್ನು ಮತ್ತು ಭೌತಶಾಸ್ತ್ರಜ್ಞರನ್ನು ಬಹಳವಾಗಿ ಕಾಡುತ್ತಿದ್ದ ಪ್ರಶ್ನೆಯಾಗಿತ್ತು…….. ♣ . ಚಿಗುರು (ಮಕ್ಕಳ ಬರಹಗಳ ವಿಭಾಗ) ♣ ಕೇಳ್ರಪ್ಪೋ ಕೇಳ್ರಿ (Announcements from School) Upcoming Events: English Fest Math Fest Tatvadarshana parva
♣ – ಆನಂದಿನೀ ಶಾರ್ವರಿ ಸಂವತ್ಸರ, ವರ್ಷಾ ಋತು, ಆಶ್ವಯುಜ ಮಾಸ – ಅಕ್ಟೋಬರ್ ೨೦೨೦ ಸಂಪಾದಕೀಯ ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ) ಕಾಲಾಯ ತಸ್ಮೈ ನಮಃ ಎಲ್ಲವನ್ನೂ ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಮುಗುಳು ನಗುತ್ತಾ ಮುಂದೆ ಸಾಗುವುದು ಕಾಲದ ಗುಣ. ಕರೋನ ಎಂಬ ಬೇಡದ ಅಧ್ಯಾಯನವನ್ನು ಜೀರ್ಣಿಸಿಕೊಳ್ಳುತ್ತಾ ಈ ಶೈಕ್ಷಣಿಕ ವರ್ಷದ ಅರ್ಧ ಭಾಗ ಮುಗಿದೇ ಹೋಯಿತು. ಮಕ್ಕಳು – ಅಧ್ಯಾಪಕರು Online ನಲ್ಲಿ ಸಂವಾದ ನಡೆಸುತ್ತಾ, ಮನೆಯಲ್ಲಿ ಪೋಷಕರ ಮಾರ್ಗದರ್ಶನ ಪಡೆದು ಈ ಬಾರಿಯ ಸಿಂಹಾವಲೋಕನ(ಅರ್ಧವಾರ್ಷಿಕ ಪರೀಕ್ಷೆ)ವನ್ನು ಬರೆದು ಇದೀಗ ದಸರಾ ರಜೆಯನ್ನು ಸವಿಯುತ್ತಿದ್ದಾರೆ. ಗಾಂಧಿ ತಾತನ ಜನ್ಮದಿನವನ್ನು ಆಚರಿಸಲಾಯಿತು. ಅರ್ಧವರ್ಷದ ಚಟುವಟಿಕೆಗಳನ್ನು ಮೆಲುಕು ಹಾಕಿದರೆ ಯಾವುದೇ ಕೊರತೆ ಇಲ್ಲದೆ ಮಕ್ಕಳ ಕಲಿಕೆ ಸಾಗಿದೆ ಎಂಬುದು ಅರಿವಾಯಿತು. ಪೋಷಕರ ಭಾಗವಹಿಸುವಿಕೆ, ಅಧ್ಯಾಪಕರ ಉತ್ಸಾಹಕ್ಕೆ ಮಕ್ಕಳೇ ಕಾರಣ. ಒಟ್ಟಿನಲ್ಲಿ ಯಜ್ಞ ನಿರ್ವಿಜ್ಞವಾಗಿ ನಡೆದಿದೆ. ಇನ್ನೇನು ನವೆಂಬರ್ ನಲ್ಲಿ ಕನ್ನಡ ಹಬ್ಬ, English fest, Math fest ಹೀಗೆ ಸಾಲು ಸಾಲು ಹಬ್ಬಗಳು ಅವರನ್ನು ಎದುರು ನೋಡುತ್ತಿವೆ. ಬಂದದ್ದೆಲ್ಲ ಬರಲಿ ಭಗವಂತನ ದಯೆ ಒಂದಿರಲಿ ಎಂದು ಮುಂದಡಿ ಇಡುತ್ತಾ, ಜೀವನ ಯಾತ್ರೆಯನ್ನು ಖುಷಿಯಿಂದಲೇ ಮುನ್ನಡೆಸುವುದು ಒಂದು ದೊಡ್ಡ ತಪಸ್ಸು. ಇದು ಭಾರತೀಯರಲ್ಲಿ ಎದ್ದು ಕಾಣುವ ಗುಣವೇ. ಇದೇ ರೀತಿಯಲ್ಲಿ ಎಲ್ಲಕ್ಕೂ ಸಾಕ್ಷಿಯಾಗಿ ಇತಿಹಾಸವನ್ನು ದಾಖಲಿಸುತ್ತಾ ಆನಂದಿನಿ ಮಾಸ ಪತ್ರಿಕೆಯು ಪೂರ್ಣಪ್ರಮತಿಯ ತಿಂಗಳ ಕಥೆಯನ್ನು ಹೊತ್ತುಕೊಂಡು ನಿಮ್ಮ ಮನದ ಬಾಗಿಲಿಗೆ ಬಂದಿದೆ. ಈ ಸಂಚಿಕೆಯಲ್ಲಿ ನೀಲಾಳ ತಣಿಯದ ಕುತೂಹಲ ತನ್ನ ಕೊನೆಯ ಘಟ್ಟದ ಕಥೆಯನ್ನು ಹೇಳುವುದು. ಮುಂದಿನ ಸಂಚಿಕೆಗಳಲ್ಲಿ ಇದೇ ರೀತಿಯ ವಿಜ್ಞಾನ ಜಗತ್ತಿನ ಕುತೂಹಲದ ಇನ್ನೂ ಬೇರೆಯ ಕಥೆಯನ್ನು ಹೊತ್ತು ಬರಲಿದೆ. ಗೊಂಬೆ ಹಬ್ಬದ ಸಂಭ್ರಮದಲ್ಲಿ ಮಕ್ಕಳಿಂದ ಆದ ನಾಟಕ, M1 ಮಗುವಿನ ಸಂಸ್ಕೃತ ಕಥೆ – ಖಂಡಿತ ಮಕ್ಕಳಿಗೆ ಮೆಚ್ಚುಗೆಯಾಗುವುದು. ಲೀಲಾವತಿ ತರಬೇತಿಯನ್ನು ನಮ್ಮ ಅಧ್ಯಾಪಕರೊಬ್ಬರು ತೆಗೆದುಕೊಂಡಿದ್ದರು, ಅವರು ತಮ್ಮ ಕಲಿಕೆಯನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಭಾಸರೂಪಕದ ಎರಡನೆಯ ಭಾಗ, ಇವೆಲ್ಲ ನಿಮ್ಮ ಓದಿನ ರುಚಿ ಹೆಚ್ಚಿಸಲಿವೆ. ಓದಿ ಆನಂದಿಸಿ, ಮತ್ತಷ್ಟು ಸ್ವಾರಸ್ಯಕರ ಘಟನೆಗಳನ್ನು ಹೊತ್ತು ನಿಮ್ಮ ಮುಂದೆ ಆನಂದಿನೀ ಮತ್ತೆ ಬರುವುದು. . ♣ . ತಿಂಗಳ ತಿಳಿಗಾಳು (ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ) ಆನಂದಕಂದ – ವಿದ್ಯಾ ಗುತ್ತಲ್ (ಪ್ರತಿನಿಧಿ, ಪೂರ್ವಪ್ರಾಥಮಿಕ ವಿಭಾಗ) ಮೊದಲಿಗೆ ನಮ್ಮ ಪುಟಾಣಿಗಳಿಗೆ ಹಾಗೂ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಅರ್ಧ ವರ್ಷದ ಆನ್ಲೈನ್ ತರಗತಿಯು ಇಲ್ಲಿಗೆ ಮುಕ್ತಾಯಗೊಂಡಿದೆ. ಭವಿಷ್ಯದಲ್ಲಿ ಉತ್ತಮ ದಿನಗಳಿಗಾಗಿ ಆಶಾಭಾವನೆಯನ್ನು ಹೊಂದಿದಂಥ ವರಾಗಿ ನಮ್ಮ ಮುಂದಿನ ಹೆಜ್ಜೆಯನ್ನು ಇರಿಸೋಣ. ಅಕ್ಟೋಬರ್ 2ನೇ ತಾರೀಕು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಒಂದು ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು. ಭಾರತ ದೇಶಕ್ಕಾಗಿ ಹೋರಾಡಿದ ವೀರ ಯೋಧರ ಜೀವನವನ್ನು, ಅವರು ನಂಬಿದ್ದ ಜೀವನದ ಆದರ್ಶಗಳನ್ನು ಮಕ್ಕಳಿಗೆ ತಿಳಿ ಹೇಳಲಾಯಿತು. ನಮ್ಮ ಪೋಷಕರಾದ ಅನು ಕೌಶಿಕ್ ರವರು ಮನೆಯಲ್ಲಿನ ತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ದುರ್ಬಳಕೆಯ ಬಗ್ಗೆ ವಿಶೇಷ ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಬಹಳ ಪೋಷಕರು ಇದನ್ನು ಮೆಚ್ಚಿಕೊಂಡು ತಾವು ಈ ಮಾರ್ಗಸೂಚಿಗಳನ್ನು ಅನುಸರಿಸುವುದಾಗಿ ವಾಗ್ದಾನ ವಿತ್ತರು. ನಂತರ, ಅರ್ಧವಾರ್ಷಿಕ ಅವಲೋಕನವನ್ನು ಮಕ್ಕಳಿಗೆ ನಡೆಸಿಕೊಡಲಾಯಿತು. ಅಕ್ಟೋಬರ್ 3ನೇ ವಾರದಿಂದ ಆರಂಭಿಸಿ ಪೋಷಕರ ಮತ್ತು ಅಧ್ಯಾಪಕರ ಸಭೆಯನ್ನು ನಿಗದಿಪಡಿಸಲಾಗಿತ್ತು. ಮನೆಯಲ್ಲಿ ಮತ್ತು ಆನ್ಲೈನ್ ತರಗತಿಯಲ್ಲಿ, ಮಕ್ಕಳ ಕಲಿಕೆ ಹೇಗೆ ನಡೆಯುತ್ತಿದೆ? ವಿಶೇಷ ಮಾರ್ಗದರ್ಶನದ ಅಗತ್ಯ ಏನಾದರೂ ಇದೆಯೇ ಎಂಬುದನ್ನು ಪ್ರತಿ ಮಗುವಿನ ಪೋಷಕರ ಜೊತೆಗೆ ಚರ್ಚಿಸಲಾಯಿತು. ಪೋಷಕರು, ತಮ್ಮ ಹಾಗೂ ಮಕ್ಕಳ ಕಲಿಕೆಯ ಬಗ್ಗೆ ಸಂತೋಷವನ್ನು, ಅನಿಸಿಕೆಗಳನ್ನು, ಸಲಹೆಗಳನ್ನು ಮತ್ತು ಅಧ್ಯಾಪಕರು ತೋರುತ್ತಿರುವ ಕಾಳಜಿಯನ್ನು ಅಭಿನಂದಿಸಿದರು. ಅಕ್ಟೋಬರ್ 17 ನೇ ತಾರೀಖಿನಿಂದ ಶಾಲೆಯ ಆನ್ಲೈನ್ ತರಗತಿಗಳಿಗೆ ದಸರಾ ವಿರಾಮವನ್ನು ನೀಡಲಾಯಿತು. ರಜೆಗೂ ಮೊದಲು – ದಸರಾ ಹಬ್ಬ, ನಮ್ಮ ನಾಡ ಹಬ್ಬ, ಅದರ ವೈಭವಗಳು, ಪ್ರಾಮುಖ್ಯತೆ, ಹಿನ್ನೆಲೆ ಇವುಗಳ ಬಗ್ಗೆ ಮಕ್ಕಳಿಗೆ ಚಿತ್ರಗಳ ಮೂಲಕ, ಕಥೆಗಳ ಮೂಲಕ ಮಾಹಿತಿಯನ್ನು ವಿವರಿಸಲಾಯಿತು. ರಜೆಯಲ್ಲಿ ಮಾಡಬೇಕಾದ ಚಟುವಟಿಕೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲಾಯಿತು. ಇದಲ್ಲದೆ ನವೆಂಬರ್ ನಲ್ಲಿ ಪ್ರಾರಂಭವಾಗುವ ಕನ್ನಡ ಹಬ್ಬದ ಬಗ್ಗೆ ಸುತ್ತೋಲೆಯನ್ನು, ಅದರಲ್ಲಿ ಮಕ್ಕಳು ಮತ್ತು ಪೋಷಕರು ಹೇಗೆ ಭಾಗವಹಿಸಬಹುದು ಎಂಬುದನ್ನು ಗೂಗಲ್ ಕ್ಲಾಸ್ ರೂಮ್ ನಲ್ಲಿ ಹಾಗೂ ಆನ್ಲೈನ್ ತರಗತಿಯಲ್ಲಿ ಪೋಷಕರೊಂದಿಗೆ ವಿನಿಮಯ ಮಾಡಿಕೊಳ್ಳಲಾಯಿತು. -೦- . ವಾಮನ ವಿಭಾಗ– ಮುರಳೀಧರ ಕೆ (ಪ್ರತಿನಿಧಿ, ಪ್ರಾಥಮಿಕ ವಿಭಾಗ) “ಮಾಧ್ವೀರ್ಗಾವಃ ಭವಂತು” ಆತ್ಮೀಯ ಪೂರ್ಣಪ್ರಮತಿ ಬಂಧುಗಳಿಗೆ ನಮಸ್ಕಾರಗಳು. ಪ್ರತೀ ಬಾರಿಯೂ ನಿಮ್ಮ ಮುಂದೆ ಪ್ರಗತಿ ಪತ್ರವಾಹಕನಾಗಿ ಬರುವ ಈ ಸಮಯ ಅತೀವ ಸಂತಸಮಯ. ಈ ಬಾರಿಯೂ ಅನೇಕ ವಿಷಯಗಳೊಂದಿಗೆ ನಿಮ್ಮಮುಂದೆ ಹಾಜರಿರುವೆ. ಈ ಬಾರಿ ಸಿಂಹಾವಲೋಕ, ಪೋಷಕರೊಂದಿಗೆ ಮಕ್ಕಳ ಪ್ರಗತಿ ಸಂವಾದ ಕಾರ್ಯಕ್ರಮವೇ ಅಧಿಕಮಾಸದ ವಿಶೇಷ. ಸಿಂಹಾವಲೋಕನ ಈ ಶಬ್ದ ಕೆಲವರಿಗೆ ನೂತನ , ಪೂರ್ಣಪ್ರಮತೀಯರ ಚಿಂತನೆಗಳು ನಿತ್ಯ ನೂತನ. ಸಿಂಹಾವಲೋಕನ ಎಂದರೆ ಶಾಬ್ದಿಕವಾಗಿ ಅರ್ಥ ಪರೀಕ್ಷೆ , ಎಂದಾದರೆ ಆದರ ಆಂತರ್ಯ ಮಕ್ಕಳು ಯಾವ ಯಾವ ವಿಷಯಗಳನ್ನು ಎಷ್ಟು ಆಳವಾಗಿ ಅರ್ಥ ಮಾಡಿಕೊಂಡಿದ್ದಾರೆ, ಅಥವಾ ಅವರಿಗೆ ಯಾವ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಬೇಕು ಇಷ್ಟು ಅಧ್ಯಾಪಕರಿಗೆ ಅರ್ಥವಾಗಬೇಕು ಆ ದೃಷ್ಟಿಯಿಂದ ಸಿಂಹಾವಲೋಕನ ನಡೆಯುತ್ತದೆ ಹೊರತು ಒಂದು ಪ್ರಶ್ನೆಗೆ ಒಂದಂಕ ಎನ್ನುವ ದೃಷ್ಟಿಯಿಂದ ಅಲ್ಲ, ಮಕ್ಕಳಿಗೆ ಈ ಪ್ರಾಥಮಿಕ ಹಂತದಲ್ಲಿ ಅರ್ಥವಾದರೆ ಅದು ಅಂಕಾನುಕೂಲ ಹಾದಿಯಾಗುತ್ತದೆ. ಈ ಸಿಂಹಾವಲೋಕನವನ್ನು ವಾಕ್, ಹಾಗೂ, ಲೇಖಾ ಪರೀಕ್ಷೆ ಮಾಡುವ ಮೂಲಕ ಮಾಡಲಾಯಿತು ಈ ಸಿಂಹಾವಲೋಕನವು ಮಕ್ಕಳಿಗೆ ಸಿಂಹಸ್ವಪ್ನವಾಗಿರಲಿಲ್ಲ ಎನ್ನುವುದು ಇದರ ವಿಶೇಷತೆ. ಪೋಷಕರ ಜೊತೆ ಮಕ್ಕಳ ಪ್ರಗತಿಯ ಬಗ್ಗೆ ಹಂಚಿಕೊಳ್ಳಲಾಯಿತು. ಪ್ರತೀ ಪೋಷಕರೂ ಈ online ಸಂದರ್ಭದಲ್ಲಿ ಮಕ್ಕಳಿಗೆ ತಾಳ್ಮೆಯಿಂದ ಪಾಠ ಮಾಡುತ್ತಿರುವ ಅಧ್ಯಾಪಕರನ್ನು ತುಂಬು ಹೃದಯದ ಅಭಿಮಾನದಿಂದ ಮಾತನಾಡಿಸಿದರು,ಹಾಗೂ ಪ್ರಗತಿಯನ್ನು ಹಂಚಿಕೊಂಡರು. ಹೀಗೆ ಅಧಿಕಮಾಸ ಸಾಗಿತು ಮುಂದಿನಬಾರಿ ಕನ್ನಡದ ಕಂಪಿನೊಡನೆ ಬರುವೆ ಧನ್ಯವಾದಗಳು. “ಪಾಯಾನ್ನೋ ವೈರಿಗರ್ಭಾ ಗ್ರಸನಗುರುಭರಾ ಸಿದ್ಧಿದಾ ಪಂಚದುರ್ಗಾ” ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. -೦- . Arjuna – Geetha (Pratinidhi of Upper elementary) October, as usual, was a busy month for teachers, children, and parents alike. It was a month dedicated to revision and Simhavalokana. The first week of October was kept reserved for revision of all learned topics while the following two weeks were used for assessing the understanding of each child in Arjuna. Children were assessed from three different angles. One hour-long question paper was set in each of the six subjects and children were asked to answer them in the presence of a teacher. Parents were spoken about their role in this online assessment. As such we got complete co-operation from them and this new mode of Simhavalokana was conducted very smoothly. In addition to the written question paper, every child took up oral assessment too in pre-defined individual time slots. In a written exam the student’s ability to write– to turn thoughts into a linear string of words is tested. In some cases, it is valid to test this ability as we want students to learn how to write, but in other cases, this gets in the way of finding out what they have learned about the subject. In such cases, an oral assessment provides a way of understanding students’ knowledge rather than their writing skills. In order to understand their presentation skills, a new kind of assessment was tried this time in Arjuna. Each child was told to pick a topic from each of the six subjects and present it to his class. Rubrics for the topic presentation were also shared so that children have an idea on what basis they are being assessed… Of the three types of assessment, the last one was a big hit. Children of all three ages performed exceptionally well. They need some fine-tuning to get better. The term came to an end with a one-on-one conversation with parents. Parents seemed to be satisfied with the way this first term went on. Concerns shared have been made a note with a view to take care of them in the coming term. The whole of Arjuna went on to take a much-awaited break, on a positive note. -೦- ಭೀಮಸೆನಾ – ವೈಶಾಲಿ ಕಟ್ಟಿ (ಅಧ್ಯಾಪಕರು, ಪ್ರೌಢಶಾಲಾ ವಿಭಾಗ) “There are two educations. One should teach us how to make a living and other how to live” – John Adams That part of education which teaches us how to live is co-curricular activity. Many co-curricular activities were conducted for the children this month. We
♣ – ಆನಂದಿನೀ ಶಾರ್ವರಿ ಸಂವತ್ಸರ, ವರ್ಷಾ ಋತು, ಬಾದ್ರಪದ ಮಾಸ – ಸೆಪ್ಟೆಂಬರ್ ೨೦೨೦ ಸಂಪಾದಕೀಯ ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ) ಆತ್ಮೀಯರೇ, “ಬಯಸದೇ ಬಂದ ಭಾಗ್ಯ” ಏನಿರಬಹುದು !!! ಪೂರ್ಣಪ್ರಮತಿಯ ಕನಸು ಒಂದು ಕಲಿಕಾ ಸಮುದಾಯವಾಗಬೇಕು ಎಂಬುದು. ಪರಸ್ಪರ ಭಾವಿಸುತ್ತಾ, ಕಲಿಸುತ್ತಾ – ಕಲಿಯುತ್ತಾ ಸ್ವಧರ್ಮದಲ್ಲಿ ತೊಡಗುವ ಒಂದು ಜೀವನಯಾತ್ರೆಯಾಗಿಸಬೇಕೆಂಬುದು. ಆಧುನಿಕ ಅನೇಕ ವ್ಯವಸ್ಥೆಗಳಿಗೆ ಸಿಕ್ಕು ಕಳೆದುಕೊಂಡಿರುವ ಅವಿಭಕ್ತ ಕುಟುಂಬವನ್ನು ಪೂರ್ಣಪ್ರಮತಿಯ ಮೂಲಕ ಮರಳಿ ಪಡೆಯಬಹುದು ಎಂಬುದು. ಈ ಕನಸಿಗೆ ಕರೋನ ಪೂರಕವಾಯಿತು. ಅದಕ್ಕೆ ಹೇಳಿದೆ “ಬಯಸದೇ ಬಂದ ಭಾಗ್ಯ” ಎಂದು. ಹೇಗೆಂದು ವಿವಿರಿಸುವೆ ಬನ್ನಿ…. ಪೂರ್ವಪ್ರಾಥಮಿಕದಿಂದ ಆರಂಭಿಸಿ ಪ್ರಸ್ತುತ ಕಾಲೇಜು ವಿಭಾಗದವರೆಗೆ ಅಧ್ಯಾಪಕರು ನೇರವಾಗಿ ಮಕ್ಕಳು ಮತ್ತು ತನ್ಮೂಲಕ ಅವರ ಕುಟುಂಬವನ್ನು ತಲುಪುತ್ತಿದ್ದಾರೆ. ನಿತ್ಯದ ಪಾಠ ಕುಟುಂಬಕ್ಕೂ ನಡೆಯುತ್ತಿದೆ. ಕೇವಲ ಗಣಿತ, ವಿಜ್ಞಾನ, ಆಂಗ್ಲಭಾಷೆ ಇತ್ಯಾದಿ ಪಾಠಗಳಾಗಿದ್ದರೆ ಬಹುಶಃ ಪೋಷಕರು ತಮ್ಮ ಕೆಲಸದಲ್ಲಿ ಮುಳುಗಿರುತ್ತಿದ್ದರು. ಆದರೆ ಈಗಂತು ಮನೆಗೆಲಸ ನೇರವಾಗಿ ಪೋಷಕರಿಗೂ ತಲುಪಿದೆ, ಅವರೂ ಆಲೋಚಿಸಿ ತಮ್ಮ ಸೃಜನಾತ್ಮಕತೆಯನ್ನು ಮೆರೆಯುತ್ತಿದ್ದಾರೆ, ತಾಯಂದಿರಂತೂ ಅಧ್ಯಾಪಕರೇ ಆಗಿದ್ದಾರೆ. ಈಗ ಹೇಳಿ ಶಾಲೆಗೂ – ಮನೆಗೂ ವ್ಯತ್ಯಾಸ ಉಳಿದಿದೆಯೇ? ವಾಮನ ಜಯಂತಿಯಂದು ಪೋಷಕರು ಮಕ್ಕಳಿಗೆ ತಮ್ಮ ಹಾಡು, ಕಥೆ, ನೃತ್ಯ ಪ್ರತಿಭೆಗಳ ಮೂಲಕ ಆನಂದಪಡುವ ಅವಕಾಶ ಕಲ್ಪಿಸಿದರು. ಮಕ್ಕಳ ಮನಸ್ಸನ್ನು, ವಯೋಗುಣಕ್ಕೆ ಸರಿಯಾಗಿ ವ್ಯಕ್ತವಾಗುವ ಅಗತ್ಯಗಳನ್ನು ಅರಿಯುವ ದಾರಿಯಲ್ಲಿ ಹೆಜ್ಜೆ ಇಡುವ ತರಬೇತಿಗಳಲ್ಲಿ ಭಾಗವಹಿಸಿದರು. ಅಧ್ಯಾಪಕರು ಮಕ್ಕಳನ್ನು ತಲುಪುವ ನಿಟ್ಟಿನಲ್ಲಿ ತಮ್ಮ ಸೃಜನಾತ್ಮಕ ಪಾಠಯೋಜನೆಗಳ ಮೂಲಕ ಹೊಸ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಹೊಸ ಸಾಧ್ಯತೆಗಳಿಗೆ ಇಂಬುಕೊಟ್ಟ ಈ ಕರೋನಾ ಪರಿಸ್ಥಿತಿಯೇ ನಮಗೆ ಒದಗಿದ ಬಯಸದೇ ಬಂದ ಭಾಗ್ಯ. ಈ ಭಾಗ್ಯದ ಸವಿ ಸೆಪ್ಟೆಂಬರ್ ತಿಂಗಳ ಆನಂದಿನಿ ಮೂಲಕ ನಿಮ್ಮನ್ನು ತಲುಪಿದೆ. ಆನಂದಿಸಿರಿ. ♣ – ತಿಂಗಳ ತಿಳಿಗಾಳು (ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ) ಆನಂದಕಂದ – ಸುಲಕ್ಷಣ ವಿ.ಆಚಾರ್ಯ (ಅಧ್ಯಾಪಕರು, ಪೂರ್ವಪ್ರಾಥಮಿಕ ವಿಭಾಗ) ಕರೋನಾ ಕೊಟ್ಟ ಕೊಡುಗೆ ಕರೋನಾ ಎಂಬ ವಿಷಯ ಈಗ ಎಲ್ಲೆಡೆ ಸಹಜ ವಿಚಾರವಾಗುತ್ತಿದ್ದರೂ ಅದರಿಂದ ನಮಗೆ ಸಿಕ್ಕ ಲಾಭಗಳು ಅನೇಕ. ತಂತ್ರಜ್ಞಾನದ ಅರಿವಿಲ್ಲದವರೂ ಅದರಲ್ಲಿ ಪಾಠವನ್ನು ಮಾಡುವುದರಿಂದ ಹಿಡಿದು ಮಕ್ಕಳನ್ನು ಆ ಸಮಯದಲ್ಲಿ ಹಿಡಿದಿಟ್ಟುಕೊಳ್ಳೂವ ಸಂಯಮವನ್ನು ತಂದುಕೊಟ್ಟಿದೆ. ಶಿಕ್ಷಣ ನಡೆಯುತ್ತಿರುವ ರೀತಿ ಮಕ್ಕಳ ಕಲಿಕೆಯ ಉತ್ತಮವಾದ ಬುನಾದಿಯನ್ನು ನಿಮಿಸಲು ಈ ಬಾರಿ Online ಮೂಲಕ ಸಕ್ರಿಯವಾಗಿ ಪಾಠ ಆಗುತ್ತಿದೆ. ಮನೆಯೇ ಮೊದಲ ಪಾಠಶಾಲೆ ಆಗಿರುವ ಕಾರಣ, ನಾವು ಪೋಷಕರಿಗೆ ಹಲವಾರ ಕಲಿಕಾ ಸಾಮಗ್ರಿಗಳನ್ನು ತಯಾರಿಸಿ ಮಕ್ಕಳಿಗೆ ಏನನ್ನು ಪಾಠಮಾಡಬೇಕು ಮತ್ತು ಹೇಗೆ ಪಾಠ ಮಾಡಬೇಕು ಎಂಬ ಮಾರ್ಗದರ್ಶನ ಮಾಡುತ್ತಿದ್ದೇವೆ. ಪೋಷಕರ ಪ್ರತಿಕ್ರೆಯೆಯನ್ನು ನೋಡಿದರೆ, ನಮ್ಮ ಈ ರೀತಿಯ ಶಿಕ್ಷಣದ ವಿಧಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಪರಿಗಣಿಸಬಹುದು. ಪೋಷಕರು ಹೆಚ್ಚಿನ ಮುತುವರ್ಜಿಯಿಂದ ಮಕ್ಕಳಿಗೆ ಕಲಿಸುತ್ತಿದ್ದಾರೆ. ಮಕ್ಕಳು ಕೂಡ ಉತ್ಸಾಹದಿಂದ ಸ್ಪಂದಿಸಿ ಕಲಿಯುತ್ತಿದ್ದಾರೆ. ಪೋಷಕರ ಹಾಗೂ ಮಕ್ಕಳ ಸಹಕಾರದಿಂದ ನಿಗದಿಪಡಿಸಿಕೊಂಡಿರುವ ಪಠ್ಯವನ್ನು ನಾವು ಯಾವುದೇ ಸಮಸ್ಯೆಗಳಿಲ್ಲದೆ ಮಾಡಿಕೊಳ್ಳುವಂತಾಗಿದೆ. ಪರ್ವದಿನಗಳ ಆಚರಣೆ ದೆ.ಶಾಲೆಯ ಸಂಸ್ಕೃತಿಯಾಗಿ ಬಂದಿರುವ ಪರ್ವದಿನಗಳ ಆಚರಣೆಯನ್ನೂ ವಿಜೃಂಭಣೆಯಾಗಿ ನಡೆಸಲಾಗುತ್ತಿದೆ. ಇದೂ ಕೂಡ Online ಮೂಲಕವೇ !!! ಈ ತಿಂಗಳಿನಲ್ಲಿ ನಮ್ಮ ಆನಂದಕಂದ ವಿಭಾಗವು ವಾಮನ ಜಯಂತಿಯನ್ನು ೨೯/೮/೨೦೨೦ ರಂದು ಆಚರಿಸಿದೆವು. ಪ್ರತಿ ಬಾರಿಯಂತೆ ನಿರೂಪಣೆ ಸಂಸ್ಕೃತದಲ್ಲಿತ್ತು. ಅತಿಥಿಯಾಗಿ ಚಿ.ವಿಶೃತ ಶ್ರೀನಿವಾಸ ಎಂಬ ೮ನೇ ತರಗತಿಯ ವಿದ್ಯಾರ್ಥಿಯನ್ನು ಆಹ್ವಾನಿಸಿಲಾಗಿತು. ಅವನು ತನಗಿಂತ ಪುಟಾಣಿ ಮಕ್ಕಳಿಗೆ ವಾಮನ ಕಥೆಯನ್ನು ಹೇಳಿದನು. ಹಾಗೆ, ಅಧ್ಯಾಪಕರಾದ ನಾವೆಲ್ಲರೂ ಮಕ್ಕಳಿಗೆ, ಹಕ್ಕಿಗಳ ಕಥೆಯನ್ನು ನಟಿಸಿ ಹೇಳಿರುವ ವೀಡಿಯೊವನ್ನು ತೊರಿಸಿದೆವು. ಸೌಮ್ಯ ಅಕ್ಕ “ಗೊಂಬೆಯಾಟ” ಮೂಲಕ ಚಿಟ್ಟೆಯ ಕಥೆಯನ್ನು ಹೇಳಿದರು. ನಂತರ ಮಕ್ಕಳಿಗೆ ಹಲವಾರು ಆಟಗಳನ್ನು ಆಡಿಸಿದೆವು. ಎಲ್ಲರೂ ನಿರೀಕ್ಷಿಸುವ ಮಕ್ಕಳ ವಿಡೆಯೋವನ್ನು ತಯಾರಿಸಿ, ಅಂದು ಪ್ರಸ್ತುತಪಡಿಸಿದೆವು. ಆ ವೀಡಿಯೋದಲ್ಲಿ ಮಕ್ಕಳು ಸಂಸ್ಕೃತ, ಕನ್ನಡ ಮತ್ತು ಆಂಗ್ಲ ಭಾಷೆಯ tongue twister ಹೇಳಿದರು. ಇದೇ ರೀತಿ ಈ ತಿಂಗಳಿನ ಕೊನೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ತಿಂಗಳಿಗೊಂದು ವಿಷಯದ ಪರಿಕಲ್ಪನೆ ಆನಂದಕಂದ ವಿಭಾಗದಲ್ಲಿ ತಿಂಗಳಿಗೊಂದು ವಿಷಯವನ್ನು ಇಟ್ಟುಕೊಂಡು ಅದನ್ನು ಎಲ್ಲಾ ಪಾಠಗಳಲ್ಲಿ ಅಳವಡಿಕೊಳ್ಳುವುದು ವಾಡಿಕೆ. ಈ ತಿಂಗಳು ತರಕಾರಿ ಎಂಬ ವಿಷಯವನ್ನು Sensorial, Culture, Language ಮುಂತಾದ ವಿಷಯಗಳಲ್ಲಿ ಅಳವಡಿಸಿಕೊಂಡು ಪಾಠ ಮಾಡಿದೆವು. ಕಲಿಕೆ ಎಂಬುದು ಕೇವಲ ಮಕ್ಕಳದ್ದಲ್ಲ. ಅದು ಎಲ್ಲರಿಗೂ ಅನ್ವಯಿಸುತ್ತದೆ. ಮಕ್ಕಳು ನಮ್ಮಿಂದ ಕಲಿಯುತ್ತಾರೆ. ಅವರಿಂದ ನಾವು ಕಲಿಯುತ್ತೇವೆ. ಹಾಗಾಗಿ ಮಕ್ಕಳ ಕಲಿಕೆ ಎಂಬ ಪಯಣದಲ್ಲಿ ಎಂದಿನಂತೆ ನಾವು ನಮ್ಮ ಪುಟ್ಟ ಕಂದಮ್ಮಗಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿ ಮಕ್ಕಳಿಂದ ಹಲವಾರು ವಿಷಯಗಳನ್ನು ಕಲಿಯಲು ಸಜ್ಜಾಗೋಣ. ವಾಮನ ವಿಭಾಗ– ಮುರಳೀಧರ ಕೆ (ಪ್ರತಿನಿಧಿ, ಪ್ರಾಥಮಿಕ ವಿಭಾಗ) ವಾಮನಾಯ ನಮೋ ನಮಃ… ಆತ್ಮೀಯ ಪೂರ್ಣಪ್ರಮತಿ ಬಂಧುಗಳಿಗೆ ನಮಸ್ಕಾರ ಕಳೆದ ಬಾರಿ ವಾಗ್ಮೀ ಉತ್ತರದೊಂದಿಗೆ ಬಂದಿದ್ದೆ ಈ ಬಾರಿ ವಾಮನಜಯಂತಿಯ ಆಚರಣೆಯೊಂದಿಗೆ ನಿಮ್ಮ ಮುಂದೆ ಇರುವೆ. ಪೂರ್ಣಪ್ರಮತಿ ಶಾಲೆಯು ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿರುವ ಚಿಂತಕರ ಚಾವಡಿ. ಹಾಗಾಗಿ ಈ ಬಾರಿ ವಾಮನ ಜಯಂತಿಯನ್ನು ಸರಳ ವಿಜೃಂಭಣೆಯಿಂದ ನಡೆಸಿದೆವು. ವಾಮನ ಜಯಂತಿ ಎಂದರೆ ಮಕ್ಕಳದಿನ ಎನ್ನುವ ಚಿಂತನೆ ನಮ್ಮಲ್ಲಿ ಇದೆ, ಹಾಗಾಗಿ ಮಕ್ಕಳಿಗಾಗಿಯೇ ಈ ಕಾರ್ಯಕ್ರಮ. ಮಕ್ಕಳಿಗಾಗೇ ಮಾಡುವ ಈ ಕಾರ್ಯಕ್ರಮದಲ್ಲಿ ಮಕ್ಕಳೇ ಮುಖ್ಯ ಅತಿಥಿಗಳು. ಈ ಬಾರಿಯ ವಿಶೇಷತೆಯಂದರೆ ಪೋಷಕರೂ ನಮ್ಮೊಡನೆ ಭಾಗಿಯಾಗಿರುವುದು. ಪೊಷಕರ ಜೊತೆ ನಮ್ಮ ಆಧ್ಯಾಪಕರು ಮಾತನಾಡಿ ನಾಟಕ, ಹಾಡು, ಏಕಪಾತ್ರಾಭಿನಯ, ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮ ನಡೆಸಿಕೊಡಲು ಹೇಳಿದರು, ಆಗಲಿ ಎಂದು ಹಲವು ಪೋಷಕರು ಒಪ್ಪಿಗೆ ಕೊಟ್ಟರು.ತುಂಬಾ ಸಂತಸದಿಂದ ಪಾಲ್ಗೊಂಡರು. ನಮ್ಮ ಅಧ್ಯಾಪಕರೂ ಮಕ್ಕಳಿಗಾಗಿ ನಾಟಕ ಮಾಡಿತೋರಿಸಿದರು. ಏಕಪಾತ್ರಾಭಿನಯ, ಹಾಡು, ಕಾರ್ಯಕ್ರಮದ ನಿರೂಪಣೆ ಇತ್ಯಾದಿಗಳನ್ನು ಮಾಡಿದರು. ಈ ಕಾರ್ಯಕ್ರಮದಿಂದ ಆದ ಹಲವು ಬೆಳವಣಿಗೆಗಳು ಪೋಷಕರು ಅಧ್ಯಾಪಕರ ನಡುವೆ ಬಾಂಧವ್ಯ ಜಾಸ್ತಿ ಆಗಿದೆ, ಅಧ್ಯಾಪಕರಿಗೆ, ಮಕ್ಕಳಿಗೆ, ಪೋಷಕರ ಕಲಾ ಚಾತುರ್ಯದ ಪರಿಚಯವೂ ಆಯಿತು. ವಿಶೇಷವಾಗಿ ಮಕ್ಕಳಿಗೆ ಇಂತಹ ಕಲೆಗಳನ್ನ ನಾವೂ ರೂಢಿಸಿಕೊಳ್ಳಬೇಕು ಎನ್ನುವ ಬೀಜಕ್ಷೇಪ ಈ ಮೂಲಕ ಸಾಗುತ್ತಾ ಇದೆ. ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸುವ ಕಾರ್ಯದಲ್ಲಿ ನಿರತರಾದ ನಮ್ಮೆಲ್ಲರ ಬುದ್ಧಿಯು ವಾಮಮಾರ್ಗದಡೆಗ ತಿರುಗದಿರಲೆಂದು ವಾಮನನ ಬಳಿ ಪ್ರಾರ್ಥನೆ…… ಧನ್ಯವಾದಗಳೊಂದಗೆ, ಮುಂದಿನ ತಿಂಗಳು ಭೇಟಿಯಾಗೋಣ. Arjuna – Geetha (Pratinidhi of Upper elementary) Time flies and it is up to you to be a navigator – Robert Orben Yes time indeed flies, but the good news is that Arjuna has been a very good pilot in circumventing the lockdown times by offering both academics and parvadina for children, with the intention of giving maximum learning in the past one month. Both teachers and children have been busy with presentations, follow-ups and timely informal assessments. In addition to this, it was time for we teachers to take a step back and reflect upon our progress in relation to our year-end goals. Yes, it was time for bi-monthly reviews of all subjects, in which an external person with subject expertise is invited to observe classes, check Google Classrooms, notes and assignments, take a look at teacher’s plans and give honest opinions and valuable suggestions. This is done with a view to improvise the way we teach. August/September is the month, which children look forward to, as its time to celebrate Vamana Jayanthi. In Arjuna, It was celebrated on Sept 5th, coincidentally on teacher’s day. Although teachers couldn’t entertain children as much as we usually do in school, it was a nice gesture that parents also came forward to contribute towards entertaining our children through stories, songs, quiz and games. On the whole, it was a collaborated effort from parents and teachers. Now having come closer to the far end of the first term, Smhavalokana is just around the corner. With everything new this time, Simhavalokana seems to be more of an assessment for ‘the way I have taught, than the way you learnt’. A lot of brainstorming is happening to plan online Simhavalokana effectively. ಭೀಮಸೆನಾ – ಅನಂತಶಯನ ಶಿರಹಟ್ಟಿ (ಸಂಸ್ಕೃತ ಅಧ್ಯಾಪಕರು, ಪ್ರೌಢಶಾಲಾ ವಿಭಾಗ) ಭಾದ್ರಪದ ಮಾಸ ನಿರ್ವಿಘ್ನವಾಗಿ ವಿಘ್ನರಾಜನ ದಯೆಯಿಂದ ಕಳೆಯಿತು. ಈ ಮಾಸದಲ್ಲಿ ಭೀಮಸೇನ ಗಣದಲ್ಲಿ (ಪ್ರೌಢಶಾಲಾ ವಿಭಾಗ) ನಡೆದ ಕಾರ್ಯಕ್ರಮಗಳ ವಿವರ ಇಂತಿದೆ. ಭಾದ್ರಪದ ಶುಕ್ಲ ತೃತೀಯಾ ಹಾಗು ಚತುರ್ಥೀ (ಅಗಷ್ಟ್ ೨೧,೨೨) ಮಕ್ಕಳಿಗೆ ವಿರಾಮ ಇತ್ತು. ಮನೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯ ಪೂಜೆ ಮಾಡುವಂತೆ ಮಕ್ಕಳಿಗೆ ತಿಳಿಸಲಾಗಿತ್ತು. ಪೂರ್ಣಪ್ರಮತಿಯ ಮಕ್ಕಳಿಗೆ ಇದನ್ನು ವಿಶೇಷವಾಗಿ ಹೇಳುವಷ್ಟಿಲ್ಲ. ನಮ್ಮ ಮಕ್ಕಳೇ ಇನ್ನೊಬ್ಬರಿಗೆ ಬೋಧಿಸುವಷ್ಟು ಈ ವಿಷಯವನ್ನು ತಿಳಿದಿದ್ದಾರೆ. ಭಾದ್ರಪದ ಶುಕ್ಲ ದ್ವಾದಶೀ (ಅಗಷ್ಟ್ ೩೦) ವಾಮನ ಜಯಂತಿ. ಪೂರ್ಣಪ್ರಮತಿಯಲ್ಲಿ ಇದು ಮಕ್ಕಳ ದಿನ. ಇಲ್ಲೊಂದು ವಿಶೇಷವಿದೆ. ಗುರು ಪೂರ್ಣಿಮಾ ದಿನ ಮಕ್ಕಳು ಅಧ್ಯಾಪಕರಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಗುರು-ಗೌರವವನ್ನು ತೋರಿಸುತ್ತಾರೆ. ವಾಮನ ಜಯಂತಿ ಮಕ್ಕಳಿಗಾಗಿ ಅಧ್ಯಾಪಕರು ಅನೇಕ ಕಾರ್ಯಕ್ರಗಳನ್ನು ಮಾಡಿ ಮಕ್ಕಳ ಮನಸ್ಸನ್ನು ಅರಳಿಸುತ್ತಾರೆ. ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿದ್ದ ಕಾರಣ ವಾಮನ ಜಯಂತಿ ಯ ದಿನ ಸಾಂಕೇತಿಕವಾಗಿ ಆಚರಣೆ ಮಾಡಿ, ಸೆಪ್ಟಂಬರ್ ೧೧ ರಂದು ಅಧ್ಯಾಪಕರು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಅವುಗಳಲ್ಲಿ ಒಂದು ನಾಟಕ, ಏಕಪಾತ್ರಾಭಿನಯ, ವೀಣಾವಾದನ, ಹಾಡು, ರಸಪ್ರಶ್ನೆಗಳಿದ್ದವು. ಎಲ್ಲ ಕಾರ್ಯಕ್ರಮಗಳನ್ನು ಅನುಭವಿಸದ ಮಕ್ಕಳು ಕೊನೆಗೆ ತಮ್ಮ ಸಂತೋಷವನ್ನು ಅಭಿವ್ಯಕ್ತಗೊಳಿಸಿದ್ದು ಅಧ್ಯಾಪಕರಿಗೆಲ್ಲ ಆನಂದವನ್ನುಂಟು ಮಾಡಿತ್ತು. ಮಕ್ಕಳು ವಾಮನ ಜಯಂತಿಗಾಗಿ ಕಾಯುವುದು ನೋಡುವುದೇ ಒಂದು ಆನಂದ. ಮಕ್ಕಳ ಕಲಿಕೆಯ ಪ್ರಗತಿಯನ್ನು
♣ – ಸಂಪಾದಕೀಯ – ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ) ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿಎಂಬ ಮಾತನ್ನು ಕೇಳುತ್ತಾ ಬೆಳೆದವರು ನಾವು. ನದಿ, ಬೆಟ್ಟ, ಮಣ್ಣು – ಪ್ರಕೃತಿಯ ಕಣಕಣವನ್ನೂ ತಾಯಿಯಂತೆ ಕಾಣುವ ಸಂಸ್ಕಾರವನ್ನು ನಮಗೆ ನಮ್ಮ ಹಿರಿಯರು ಹೇಳಿ ಕೊಟ್ಟಿದ್ದಾರೆ. ಭಾರತ ಒಂದು ಭೌಗೋಳಿಕ ಅಸ್ತಿತ್ವ ಮಾತ್ರವಲ್ಲ. ಕಲೆ, ಶಾಸ್ತ್ರಜ್ಞಾನ, ಋಷಿ ಪರಂಪರೆಗಳ ಅಸ್ತಿತ್ವವೂ ಹೌದು. ಸಂಪ್ರದಾಯಗಳ ಭದ್ರಬುನಾದಿಯ ಮೇಲೆ ಉನ್ನತಜೀವನ ಮೌಲ್ಯಗಳನ್ನು ಜೀವಂತವಾಗಿ ಉಳಿಸಿಕೊಂಡಿರುವ ಭವ್ಯ ಭಾರತ ನಮ್ಮ ಅಸ್ಮಿತೆಯೂ ಆಗಿದೆ. ಹಲವಾರು ರಾಜಕೀಯ, ಸಾಮಾಜಿಕ, ಸಾಂಪ್ರದಾಯಿಕ ದಾಳಿಗಳ ನಂತರವೂ “ಅಖಂಡಭಾರತ”ವಾಗಿಯೇ ಉಳಿದಿದೆ. “ಆನಂದಮಠ” ಕಾದಂಬರಿಯಲ್ಲಿ ಬಂಕಿಮಚಂದ್ರ ಚಟರ್ಜಿಯವರು ದೇಶರಕ್ಷಣೆಗೆ ಪ್ರಾಣ ಯಾರಾದರೂ ಕೊಡಬಲ್ಲರು, “ತಮ್ಮ ಹೃದಯದ ಭಕ್ತಿಯನ್ನು ಕೊಡಲು ಸಾಧ್ಯವೇ ?” ಎಂಬ ಪ್ರಶ್ನೆಯೊಂದಿಗೆ ನಮ್ಮನ್ನು ಮೂಲ ಬೇರಿನೊಂದಿಗೆ ಜೋಡಿಸಿದ್ದಾರೆ. ಅರವಿಂದ ಘೋಷ್ ಅವರು ತಮ್ಮ “ಭವಾನಿ ಮಂದಿರ” ಲೇಖನದಲ್ಲಿ ಭಾರತ, ವಿಶ್ವಮಾತೆಯಾಗಲು ಬೇಕಾದುದು ನಾವು ಕಳೆದುಕೊಂಡಿರುವ ಆಧ್ಯಾತ್ಮದ ನೆಲೆಯನ್ನು ಮತ್ತೆ ಕಂಡುಕೊಳ್ಳುವುದೇ ಸಾಧನ ಎಂದು ಮನವರಿಕೆ ಮಾಡಿದ್ದಾರೆ. ಆಧುನಿಕತೆಯ ಜ್ಞಾನ ನಮ್ಮನ್ನು ಬಹಿರ್ಮುಖಿಗಳಾಗಿ ಮಾಡಿದೆ. ನಮ್ಮೊಳಗೆ ನಾವು ನೋಡಿಕೊಳ್ಳುವ ಸಾಮರ್ಥ್ಯವನ್ನು ಕಸಿದುಕೊಂಡಿದೆ. ಎಲ್ಲರಿಗೂ ತಾನು ಸ್ವತಂತ್ರನಾಗಿರಬೇಕು ಎಂಬ ಹಂಬಲವಿದೆ. ಆದರೆ ಸ್ವತಂತ್ರ ಎಂದರೇನು ಎಂಬ ಅರಿವು ಇಲ್ಲವಾಗಿದೆ. ಆಧುನಿಕತೆ ನಮ್ಮೊಳಗೆ ಇರುವ ಮೋಹ, ಕಾಮ, ಕ್ರೋಧ ಇತ್ಯಾದಿ ವಿಕಾರಗಳನ್ನು ಬಿಂಬಿಸಿ ಬಹಿರ್ಮುಖಿಗಳಾಗಿ ಮಾಡಿದೆ. ಇದ್ದರೂ ಮುಚ್ಚಿಡುವ, ಇಲ್ಲದಿದ್ದರೂ ತೋರ್ಪಡಿಸುವ “ತೋರಿಕೆ” ಪ್ರಪಂಚಕ್ಕೆ ಕೊಂಡೊಯ್ದಿದೆ. ಒಂದೆಡೆ ವಿಕಾರವನ್ನು ಬೆಳೆಸಿದೆ, ಇನ್ನೊಂದೆಡೆ ಅದನ್ನೇ ಸ್ವಾತಂತ್ರ್ಯ ಎಂಬ ಭ್ರಮೆಯನ್ನೂ ಕೊಟ್ಟಿದೆ. ಸ್ವ + ತಂತ್ರ + ತಾ ಎಂದರೆ ತನ್ನ + ಪರಂಪರೆಯ ಬುನಾದಿಯ ಮೇಲೆ + ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದು “ಸ್ವತಂತ್ರತಾ” ಎಂಬುದು ಪವನ್ ಗುಪ್ತಾ ಅವರು ನೀಡುವ ವ್ಯಾಖ್ಯಾನ. ಹೊರಗೆ ಕಾಣುವ ವಿಭಿನ್ನತೆಗಳ ಬಗೆಗೆ ಎಲ್ಲರೂ ಮಾತಾಡುವರು. ಅದು ಕಾಣಲು ಸಿಗುವಂತಹದ್ದು. ಆದರೆ ಎಲ್ಲರ ಮಧ್ಯೆ ಇರುವ Commonality ಗಳ ಬಗ್ಗೆ ಯಾರೂ ಗಮನ ಕೊಡುವುದಿಲ್ಲ. ತನ್ನೊಳಗೆ ನೋಡುವುದನ್ನು ಹೇಳಿಕೊಟ್ಟರೆ ಪರಂಪರೆ, ಇತಿಹಾಸ, ನಿಸರ್ಗದತ್ತವಾದ ತಂತ್ರ ತಿಳಿಯುವುದು. ಬೀಜ ಬಿತ್ತಿದರೆ ಅದು ಮೊಳಕೆಯೊಡೆದು, ಗಿಡವಾಗಿ, ಮರವಾಗಿ, ಹೂ ಬಿಟ್ಟು, ಕಾಯಾಗಿ, ಹಣ್ಣಾಗಿ, ಬೀಜ ಮಾಡಿ ಪಕ್ಷಿ ಮೂಲಕ ಪಸರಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು. ಪಕ್ಷಿಗೆ ಹಣ್ಣು ಬೇಕು, ಗೂಡು ಕಟ್ಟಲು ಮರ ಬೇಕು. ಮರಕ್ಕೆ ತನ್ನ ಸಂತಾನ ಬೆಳೆಸಲು ಹಕ್ಕಿಯ ಸಹಾಯ ಬೇಕು. ಇದೊಂದು “ತಂತ್ರ” – “ವ್ಯವಸ್ಥೆ”. ನಿಸರ್ಗ ತಾನೇ ಹೆಣೆದಿರುವ ತಂತ್ರ. ಇವುಗಳನ್ನು ಅರ್ಥಮಾಡಿಕೊಂಡು ತನ್ನ ಸ್ವಾತಂತ್ರ್ಯ ಇತರರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಬದುಕುವ ವ್ಯವಸ್ಥೆಯೇ ಧರ್ಮ. ಈ ಧರ್ಮ ಪಾಲನೆಯೇ ಭಾರತದ ಪರಂಪರೆ. ಪರಂಪರೆಯನ್ನು ಮರೆತವ ತನ್ನನ್ನೇ ಮರೆತಂತೆ. ಪೂರ್ಣಪ್ರಮತಿ ತನ್ನ ಧ್ಯೇಯಕ್ಕೆ ತಕ್ಕಂತೆ ಪರಂಪರಾ ಬೀಜರಕ್ಷೆಯ ಹಿನ್ನಲೆಯಲ್ಲಿ ಆಗಸ್ಟ್ ತಿಂಗಳನ್ನು ಬಹಳ ಸಂಭ್ರಮದಿಂದ ಕಳೆಯಿತು. ಆಗಸ್ಟ್ ತಿಂಗಳು ಬಂತೆಂದರೆ ನಮಗೆ ನಮ್ಮ ರಾಷ್ಟ್ರಹಬ್ಬದ ಸಂಭ್ರಮ. ಶ್ರಾವಣ ಮಾಸವೆಂದರೆ ಹಬ್ಬಗಳ ಸರಮಾಲೆ ಪ್ರಾರಂಭ. ಪೂರ್ಣಪ್ರಮತಿಯಲ್ಲಿ ಈ ತಿಂಗಳು ಹಯಗ್ರೀವ ಜಯಂತಿ, ಕೃಷ್ಣಜನ್ಮಾಷ್ಟಮಿ, ಸ್ವಾತಂತ್ರದಿನಾಚರಣೆಗಳ ವಾತಾವರಣ ತುಂಬಿತ್ತು. ಹಳೆಬೇರು ಹೊಸ ಚಿಗುರು ಎಂಬಂತೆ ಹೊಸ ತಂತ್ರಜ್ಞಾನವನ್ನು ಬಳಸಿಯೇ ಎಲ್ಲಾ ಹಬ್ಬಗಳ ಆಚರಣೆ ನಡೆಯಿತು. ಅತಿಥಿಗಳ ಆಗಮನ, ಅವರ ಮಾರ್ಗದರ್ಶನ, ಮಕ್ಕಳ ಉತ್ಸಾಹದ ಭಾಗವಹಿಕೆ ಎಲ್ಲವನ್ನೂ ನೋಡಿದರೆ Lockdown, COVID-19, Online ಯಾವ ತಡೆಯೂ ಇಲ್ಲದೆ ಆನಂದದಿಂದ ತುಂಬಿದೆ ಎನಿಸಿತು. ಮಕ್ಕಳು, ಪೋಷಕರು, ಅಧ್ಯಾಪಕರು, ಅತಿಥಿಗಳು – ಅಬ್ಬಾ! ಒಟ್ಟು ಕುಟುಂಬವೆಂದರೆ ಇದೇ ಅಲ್ಲವೆ. ಅನುಭವಸ್ಥ ಹಿರಿಯರು, ಅನೇಕ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರು, ಕಲಿಯಲು ಕಾದಿಹ ಪುಟಾಣಿಗಳು, ಸೇತುವೆಯಾಗಿ ಅಧ್ಯಾಪಕರು, ವ್ಯವಸ್ಥೆಗೆ ಪೂರ್ಣಪ್ರಮತಿ ವೇದಿಕೆ ಇದೊಂದು ಅವಿಭಕ್ತ ಕುಟುಂಬವಾಗಿ ಕಂಡಿತು. ಮನೆಮನೆಯಲ್ಲಿ ಪೂರ್ಣಪ್ರಮತಿ, ಮನಮನದಲ್ಲಿ ಪೂರ್ಣಪ್ರಮತಿ ತುಂಬಿತ್ತು. ಇದೆಲ್ಲದರ ವಿವರ ನಿಮಗಾಗಿ ಕಾದಿದೆ. ಓದಿ ಆನಂದಿಸಿ, ನಿಮ್ಮ ಆನಂದವನ್ನೂ ಹಂಚಿಕೊಳ್ಳಿ. ♣ – ತಿಂಗಳ ತಿಳಿಗಾಳು (ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ) Anandakanda – Vidya Guttal (Pratinidhi, Pre-primary) Dear parents, Corona virus has hit the world, devastating many places and lives on earth. I always wonder about God’s creation and giving the power to Mother Nature to heal her wounds and burdens naturally. Being invisible to our naked eyes, the virus particles are attacking living beings leaving all non-harming (non-living) elements under safety. But we, being humans, well known for humanity, love and charity have to pray to God to spare all, to establish a better living place for our progeny by paying due respect to our mother earth. In terms, our mother nature has given an opportunity to realise our mistakes and understand nature’s laws well in advance. So, now it is our responsibility to undertake this project given by nature and prepare ourselves and our kith and kin to get ready for a better future. Along with ourselves, we have to help our future generations, to learn this without any delay. Let’s make a commitment to be committed to the laws of nature and help our children live in harmony with nature. In the present situation, how can we help the children by helping ourselves?? Parents As Primary Educators No matter how we ( the parents) regard the school, we must realize as parents that, we have the greatest influence on our child’s life because of our unique love. No one knows and cares for our child as well as we do. Educate means “to lead”. As parents, we have the special opportunity to lead the child into activities which are our hobbies, our chores, our spiritual and intellectual life, and our appreciation for the environment. What we share with our own, they remember with a special relish. We always wish what is best for our child even though this involves sacrifice and renunciation. We want to give, but not indulge, to serve but not to over serve, to allow freedom but not license. The school is a natural extension of our home and will help in establishing a balance. The Adhyapaka (The Teacher) will work directly with the child uniquely, in the prepared environment and in the context of other children, but our relationship is still a key aspect. As your child starts out on this great adventure called liberating himself, remember that you are the most important adult, and for your effort there is no substitute. The Adhyapaka as A Guide The Adhyapaka is a child advocate in the deepest sense, and has cultivated respect for the child’s total being. As both the psychological and educational director of the classroom, the teacher responds to the essential needs of the children through careful observation first. The child may repeat a certain activity, reinforcing knowledge of a material. The teacher knows when to intervene so that concentration and involvement which is second-nature to the child’s work is encouraged and not interrupted. The emphasis is on the “work-cycle” and the child is his own timekeeper. The trained teacher allows for a natural pace which facilitates unconscious absorption and better retention. Support is given during low productive phases of work which then builds to peak involvements as the day progresses. Teacher-scheduled time is minimized so that the child’s creative choice is given first priority. Collaboration: Parents and Teachers Parents and teachers need to work together to support and follow the whole learning process. The school is not a drop-off place; effective use of the school comes best through communication. Children often confide in their parents, and it is important for the teacher to know how the child perceives the day. And of course, the teacher sees the child in a “scientific environment” and has a unique facility for serving children in the context of
” ಗುರುಪೂರ್ಣಿಮೆ ವಿಶೇಷ ಸಂಚಿಕೆ “ ಸಂಪಾದಕೀಯ – ಲತಾ (ಪ್ರತಿನಿಧಿ, ಪ್ರಶಿಕ್ಷಣ ವಿಭಾಗ) ಮೂರನೇ ತರಗತಿಯ ಮಗುವೊಂದು ಕಣ್ಣು ತೆರೆಸಿದ ಪ್ರಸಂಗ ನಿಮಗೆ ಹೇಳಬೇಕು. ಆಕೆ ಮುದ್ದು ಮುದ್ದು ಮಾತಾಡುವ, ಗುಂಡು ಮುಖದ ಚೆಲುವೆ. ತನ್ನ ಜೊತೆಗಾರರಂತೆ ಓದುವ – ಬರೆಯುವ ಆಸೆ ಅವಳಿಗೂ ಇತ್ತು. ಆದರೆ ಅವಳ ವೇಗಕ್ಕೆ, ಗ್ರಹಿಕೆಗೆ ಸಿಗುವಂತೆ ಹೇಳಿಕೊಡುವವರು ಬೇಕಿತ್ತು. ಅವಳಿಗೆ ಯಾವ ಕಾರಣಕ್ಕೆ ನನ್ನನ್ನು ಕೇಳಬೇಕೆನಿಸಿತೋ ತಿಳಿಯಲಿಲ್ಲ. ಅವಳ ಮುಗ್ಧ ಆಸೆಗೆ ನೀರೆರೆಯುವ ಕಾಯಕಕ್ಕೆ ಅವಳೇ ನನ್ನನ್ನು ಎಳೆದುಕೊಂಡಳು. ಸುಮಾರು ೮ ತಿಂಗಳು ಕಳೆದಿರಬೇಕು. ವರ್ಣಮಾಲೆಯಿಂದ ನಮ್ಮ ಪ್ರಯಾಣ ಶುರುವಾಗಿತ್ತು. ಪುಸ್ತಕವನ್ನು ಚೊಕ್ಕಟವಾಗಿ ಇಟ್ಟುಕೊಳ್ಳುವುದರಿಂದ ಪ್ರಾರಂಭಿಸಿದೆವು. ಯಾವುದನ್ನು ಬರೆದುಕೊಳ್ಳಬೇಕು, ಹೇಗೆ ಬರೆದುಕೊಳ್ಳಬೇಕು, ಎಲ್ಲಿ ಬರೆದುಕೊಳ್ಳಬೇಕು ಎಂಬ ಯಾವ ವಿಷಯವೂ ಅವಳ ಹಿಡಿತಕ್ಕೆ ಸಿಕ್ಕಿರಲಿಲ್ಲ. ದಿನಾಂಕ ಬರೆಯುವುದರಿಂದ ಆರಂಭಿಸಿ, ಪುಟವನ್ನು ಖಾಲಿ ಬಿಡದೆ ಬರೆಯಬೇಕು, Margin ನಿಂದ ಆರಂಭಿಸಿ ಬರೆಯಬೇಕು, ಯಾವಾಗ ಸಾಲು ಬಿಟ್ಟು ಬರೆಯಬೇಕು ಎಂಬ ಅಚ್ಚುಕಟ್ಟುತನವನ್ನು ರೂಢಿಸಿಕೊಂಡಳು. ನಮ್ಮಿಬ್ಬರ ಈ ಪ್ರಯಾಣ ಒಂದು ಸುಗಮವಾದ ಹಾಡಿನಂತೆ ಸಾಗಿತ್ತು.. ಪ್ರತಿದಿನ ಒಬ್ಬರನ್ನೊಬ್ಬರು ನೋಡಲು ಶಾಲೆ ಯಾವಾಗ ಪ್ರಾರಂಭವಾಗುವುದೋ ಎಂದು ಕಾಯುತ್ತಿದ್ದೆವು. ೭ ತಿಂಗಳಿಗೆ ಅವಳು ನಿಧಾನವಾಗಿ ತನ್ನ ತರಗತಿಯ ಪುಸ್ತಕವನ್ನು ಓದಲು ಪ್ರಾರಂಭಿಸಿದಳು. ಸೊಗಸಾಗಿ ಅರ್ಥಮಾಡಿಕೊಂಡು, ಸೃಜನಾತ್ಮಕ ಉತ್ತರಗಳನ್ನು ಕೊಡಲು ಶುರುಮಾಡಿದಳು. ಅವಳ ದಾರಿಯಲ್ಲಿ ಅವಳು ನಡೆಯಲು ಸಿದ್ಧಳಾಗಿದ್ದಳು. ಅವಳಿಗೆ ಬೇಕಾಗಿದ್ದದ್ದು ತನ್ನ ವೇಗಕ್ಕೆ ಹೆಜ್ಜೆ ಹಾಕುವ ಒಬ್ಬ ಮಾರ್ಗದರ್ಶಕ ಅಷ್ಟೇ. ಅದು ಸಿಕ್ಕ ಕೂಡಲೆ ಆ ಬಣ್ಣದ ಚಿಟ್ಟೆ ತನ್ನ ರೆಕ್ಕೆ ತೆರೆದೇ ಬಿಟ್ಟಿತು. ಸುಂದರ ಲೋಕವನ್ನು ಕಾಣಲು ಸಜ್ಜಾಗಿತ್ತು. ಒಂದು ದಿನ ನಮ್ಮ ಶಾಲೆಯಲ್ಲಿ ಕ್ರೀಡೋತ್ಸವ ಏರ್ಪಾಡಾಗಿತ್ತು. ಎಲ್ಲರಿಗೂ “ತಮ್ಮ ತಮ್ಮ ಪೋಷಕರೊಂದಿಗೆ ಮೈದಾನಕ್ಕೆ ಬರಬೇಕು. ಪೋಷಕರ ಜವಾಬ್ದಾರಿಯಲ್ಲಿ ಎಲ್ಲರೂ ಮೈದಾನದಲ್ಲಿ ಹಾಜರಾಗಬೇಕು” ಎಂಬ ಸುತ್ತೋಲೆ ನೀಡಲಾಯಿತು. ನಿಧಾನವಾಗಿ ಸುತ್ತೋಲೆಯಲ್ಲಿದ್ದ ಎಲ್ಲಾ ಪದಗಳನ್ನು ಕೂಡಿಸಿಕೊಂಡು ತೊದಲುತ್ತಾ ಓದಿ ಮುಗಿಸಿದಳು, ತಲೆ ಎತ್ತಿ “ಅಮ್ಮ ಆ ದಿನ ಬರಲು ಸಾಧ್ಯವಿಲ್ಲ, ಊರಿಗೆ ಹೋಗಿರುತ್ತಾರೆ. ಆದರೆ ಇನ್ನೊಂದು ಅಮ್ಮ ಬರವರು” ಎಂದಳು. ಯಾರದು ಇನ್ನೊಂದು ಅಮ್ಮ ಎಂದೆ, “ನೀವೇ ಅಕ್ಕ” ಎಂದಳು. ಈ ಒಂದು ಮಾತಿನ ಆಳ ಎಷ್ಟಿದೆ ಎಂದರೆ ಇನ್ನೂ ಕಿವಿಯಲ್ಲಿ ಗುಂಗಾಗಿದೆ. ಕಲಿಕೆಯಲ್ಲಿ ಮಕ್ಕಳಿಗೆ ಅಧ್ಯಾಪಕರಿಂದ ಏನು ಬೇಕು ಎಂಬುದನ್ನು ತಿಳಿಸಿ ನನ್ನ ಕಣ್ಣು ತೆರೆಸಿ ಗುರುವಾದಳು. ಪ್ರಿಯ ಪೂರ್ಣಪ್ರಮತಿಯ ಬಂಧುಗಳೇ, ಪೂರ್ಣಪ್ರಮತಿಯನ್ನುಕೂಸಾಗಿದ್ದಾಗಿನಿಂದ ತಿದ್ದಿ, ತೀಡಿ, ಬೈದು ಬೆಳೆಸಿದವರು ಹಲವಾರು ಗುರುಗಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಇಂದು ಹತ್ತು ವರ್ಷದ ಕುಮಾರನಾಗಿ ಬೆಳೆದಿದೆ ಈ ಪೂರ್ಣಪ್ರಮತಿ. ನಮ್ಮ ಅಚ್ಚುಮೆಚ್ಚಿನ ಗುರುಗಳಾದ ವಿಶ್ವೇಶತೀರ್ಥರು, ಸಾನಂದಸ್ವಾಮಿಜಿಯವರು, ಎಲ್ಲಪ್ಪರೆಡ್ಡಿ ಅವರು, ರವೀಂದ್ರ ಶರ್ಮ, ರಾಜೇಂದ್ರ ಸಿಂಗ್, ಮಾಧವ ಸಹಸ್ರಬುದ್ಧೆ, ತುಳಸಿ ಗೌಡ ಹೀಗೆ ನೆನಪಿಗೆ ಸವಾಲೊಡ್ಡಿ ಹೆಸರುಗಳನ್ನು ಬರೆಯಬಹುದು. ಅವರೆಲ್ಲರ ಒಡನಾಟ ಪೂರ್ಣಪ್ರಮತಿಗೆ ಕೊಟ್ಟಿರುವ ಬಲ ಪರಂಪರೆಯಾಗಿ ಉಳಿಯುವುದು. ಈ ಎಲ್ಲಾ ಗುರುಗಳ ಜಾಡು ಹಿಡಿದು ಪೂರ್ಣಪ್ರಮತಿ ಇಂದು ಗುರುಪೂರ್ಣಿಮೆಯ ಈ ವಿಶೇಷ ಸಂಚಿಕೆಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ. ಜ್ಞಾನಯಜ್ಞನವಿದು ಎಲ್ಲರ ಪಾತ್ರವದು ದೊಡ್ಡದು ಗುರು ಹಿಂದೆ ಗುರಿ ಮುಂದೆ ಮುನ್ನಡೆಸುವ ಶಕ್ತಿಯು ಬೆಳೆದು ಬೆಳೆಸಿ ದೂರ ದಾರಿಯ ಸಾಗ ಬೇಕಿಹುದು ಅರಿತು ನಡೆದರೆ ಸಾರ್ಥಕ ಭಾವವದು ಒಸರುವುದು ತಿಂಗಳ ತಿಳಿಗಾಳು (ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ) ಆನಂದಕಂದ – ವಿದ್ಯಾ (ಪ್ರತಿನಿಧಿ, ಪೂರ್ವಪ್ರಾಥಮಿಕ ಶಿಕ್ಷಕರು) Even before the Corona has hit the world, few schools had started smart classes inside the physical classrooms and started providing personal tabs and laptops to their students, created partial virtual classes as learning model. Not then, but it is the time where, there is a need to strengthen our education model and welcome the technology into our lives. The students and teachers were facing a degree of uncertainty with respect to their future but teachers are doing all they can and proving to be essential in the fight against Covid -19. Now, this is the month of July off nearly two months had been started with this online module, and we are proud to say for having succeeded in reaching parents and all students, establishing contact with the system, acclimatised, on track of regular system with the ease of parents support, technology and technical support by the school. We are giving guidance to parents to teach their kids by preparing materials, providing hands on activities, engaging both parents and children with games, conversations, stories, rhymes, crafts, drawings, Sanskrit shloka, vocabulary enhancement, planned conversations…..and much more activities in our list. We have started our regular syllabus after revision classes of last month, accelerated topic presentations, theme work, writing, reading, listening, physical, oral, hands on activities, brain boosters, follow ups etc., Each class is a learning platform for us and each time we introspect and upgrade our system. So, in each class parents are excited to see the activity slides which are going to be presented by our teachers. Teacher takes updates of previous classes by the parents and proceed further, clarifies their doubts, concerns and lending special support for needy parents. The report will be incomplete, if we do not add about virtual Gurupurnima celebration (Teacher’s day) in our division. Children were asked to dress up in their Guru’s costume and learn about them. Video telecast of all children with Guru Costume was displayed. Guru – Shishya games, Sanskrit song and Guest speech about the day’s celebration…All were mind blowing. All parents and children participated curiously and thanked all teachers for getting knowing about the importance and story behind the celebration, famous Gurushishyaru with pictures. We foresee your support and encouragement for teachers and children in their future venture. ವಾಮನ ವಿಭಾಗ -ಮುರಳೀಧರ ಕಟ್ಟಿ (ವಿಭಾಗ ಪ್ರತಿನಿಧಿ, ಪ್ರಾಥಮಿಕ ವಿಭಾಗ) ನಮಸ್ಕಾರ ಬಾಂಧವರೆ! ಜುಲೈ ಮಾಸಕ್ಕೆ ಹಾರ್ದಿಕ ಸ್ವಾಗತ ಈ ಮಾಸವು ಹಲವು ವಿಶೇಷತೆಗಳಿಂದ ಕೂಡಿದೆ. ಗುರುಪೂರ್ಣಿಮೆ, ನಾಗರ ಪಂಚಮೀ, ಗೌರೀ ಹಬ್ಬ ದಕ್ಷಿಣಾಯನ ಪ್ರಾರಂಭ, (ಕರ್ಕಾಟಕ ಸಂಕ್ರಮಣ) ಚಾರ್ತುರ್ಮಾಸ. ಹೀಗೆ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ನಮ್ಮ ವಾಮನವಿಭಾಗದಲ್ಲಿ ಗುರುಪೂರ್ಣಿಮೆಯದ್ದೇ ವಿಶೇಷ. ಗುರುಪೂರ್ಣಿಮೆಗಾಗಿ ಮಕ್ಕಳ ತಯಾರಿಯೂ ಜೋರಾಗಿಯೇ ಇತ್ತು, ಆನ್ ಲೈನ್ ಆದರೂ ಮಕ್ಕಳು ತಯಾರಾದ ರೀತಿ ನೋಡಿದರೆ ಬಹಳ ಸಂತಸವಾಗುತ್ತದೆ.ಈ ಕಾರ್ಯಕ್ರಮಕ್ಕೆ ಆರು ಪರಿಸರದಲ್ಲೂ ಪ್ರತ್ಯೇಕ ಅತಿಥಿಗಳನ್ನು ಆಹ್ವಾನಿಸಿದ್ದೆವು. ಎಲ್ಲಾ ಅತಿಥಿಗಳು ಬಹಳ ಸಂತೋಷದಿಂದ ಬರಲು ಒಪ್ಪಿದರು ಬಂದ ಎಲ್ಲಾ ಅತಿಥಿಗಳು ಪೂಜ್ಯ ಗುರುಗಳಾದ ಶ್ರೀವಿಶ್ವೇಶತೀರ್ಥ ಶ್ರೀಪಾದರನ್ನು ಸ್ಮರಿಸಿಕೊಂಡು ಮಕ್ಕಳಿಗೆ ಬದುಕುವ ಸನ್ಮಾರ್ಗವನ್ನು ತೋರಿಸಿದರು. ನಚಿಕೇತ ಪರಿಸರಕ್ಕೆ ಕಿರಣ ಅಚಾರ್ಯರು ಆಗಮಿಸಿ – ಮಕ್ಕಳಿಗೆ ಪೋಷಕರಿಗೆ ಈ ರೀತಿ ಹೇಳಿದರು “ ಹರಿಗುರುನಮನಂ ದ್ರಾಕ್ ಯತ್ನತೋಮೀ ವಿಧಾಯ ಪ್ರಯಯುಃ ಅಪರಸಾಮ್ಯಂ” ಮಕ್ಕಳಲ್ಲಿ ಬುದ್ಧಿಮತ್ತೆಯ ಏರುಪೇರು ಈ ಕಾಲ ಅಲ್ಲ, ಮಧ್ವರೂ ಇದ್ದಕಾಲದಲ್ಲೂ ಇತ್ತು, ಆಗ ಆ ಮಕ್ಕಳು ಗುರುಗಳ ಸೇವೆಯಿಂದ ಒಳ್ಳೆಯ ಬದ್ಧಿವಂತರಾದದ್ದೂ ಕಾಣಸಿಗತ್ತದೆ ಗುರುಭಕ್ತಿ, ದೈವಭಕ್ತಿ, ಎರಡನ್ನೂ ಮೈಗೂಡಿಸಿಕೊಂಡು ಅಧ್ಯನಯದ ಪ್ರಗತಿಯನ್ನು ಕಾಣಿ ಎಂದು ಆಶೀರ್ವದಿಸಿದರು. ಪ್ರಹ್ಲಾದ ಪರಿಸರಕ್ಕೆ – ಮಾತರಿಶ್ವ ಆಚಾರ್ಯರು ಆಗಮಿಸಿದ್ದರು. ಅವರು ಹಿರಿಯರೂ ಅರ್ಥ ಮಾಡಿಕಳ್ಳಲು ಕಷ್ಟವಾಗುವ ಅವಧೂತಗೀತ ಸಾರವನ್ನು ಮಕ್ಕಳಿಗೆ ಅವರ ಭಾಷೆಯಲ್ಲಿ ಊಣಬಡಿಸಿದರು, ಅಲ್ಲಿ ಬರುವ ಮೀನಿನಕಥೆಯನ್ನು ಹೇಳಿದರು ಬಾಯಿಯ ಚಾಪಲ್ಯದಿಂದ ಹಾಳಾಗುವ ಮೀನಿನಕಥೆಯನ್ನು ಮಕ್ಕಳಿಗೆ ಹೇಳಿ ಜೀವನಕ್ಕೆ ಅವಶ್ಯಬೇಕೇಗಾಗುವ ಜವಾಬ್ದಾರಿಯನ್ನು ತಿಳಿಸಿದರು. ಆರುಣೀ ಪರಿಸರಕ್ಕೆ –ವೆಂಕಟೇಶ ಆಚಾರ್ಯರು ಆಗಮಿಸಿದ್ದರು ಅವರು ಮಕ್ಕಳಿಗೆ ಮೂರು ಗೊಂಬೆಗಳ ಕಥೆ ಹೇಳಿ ನಮ್ಮ ಶಾಲೆಯ ಅಧ್ಯಾಪಕರ ಮಾಡುತ್ತಿರುವ ಮಹತ್ತರವಾದ ಕಾರ್ಯದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಧೃವ- ಪ್ರಯೊಜನದ ಉದ್ದೇಶ ಮಾತ್ರ ಗುರುಗಳನ್ನು ಪೂಜೆ ಮಾಡೋದು ಸರಿ ಅಲ್ಲ, ಅದರ ನಂತರವೂ ಅವರನ್ನು ಸ್ಮರಣೆ ಮಾಡೋದು ಶ್ರೇಯಸ್ಕರ ಎಂದು ವಿಕಾಸ ಆಚಾರ್ಯರು ಹೇಳಿದರು ಮಾರ್ಕಂಡೇಯ – ಶ್ರೀಶ ಆಚಾರ್ಯರು ಬಂದಿದ್ದರು ಅವರು ಮಕ್ಕಳಿಗೆ ಪೇಜಾವರ ಶ್ರೀಪಾದರ ಜೀವನಶೈಲಿ, ಜನರ ಬಗ್ಗೆ ಇರುವ ಕಾಳಜಿ ಪ್ರೀತಿಯ ಬಗ್ಗೆ ತಿಳಿಸಿದರು. ಉಪಮನ್ಯು – ಸತ್ಯಮೂರ್ತಿ ಆಚಾರ್ಯರು ಮಕ್ಕಳಿಗೆ ಹೀಗೆಂದರು ಕೇವಲ ಪಾಠ ಮಅಡುವ ಶಾಲೆಯ ಅಧ್ಯಾಪಕರು ಮಾತ್ರವಲ್ಲ ನಿಮ್ಮ ತಂದೆ ತಾಯಂದಿರೂ ನಿಮಗೆ ಗುರುಗಳೆ, ಗುರುಗಳ ಮಹತ್ವವನ್ನು ಸಾರುವ
ಸಂಪಾದಕೀಯ – ಶಶಿರೇಖಾ.ಎಂ.ಜಿ (ಪ್ರಾಂಶುಪಾಲರು) ಆನಂದಿನಿಯ ಈ ಸಂಚಿಕೆ ಒಂದು ಹೊಸ ಕಾಲಘಟ್ಟದಲ್ಲಿ ಹೊರಬರುತ್ತಿದೆ. ಮಾನವ ಪ್ರಕೃತಿಮಾತೆಗೆ ಮಾಡಿದ ಅತಿರೇಕದ ಅಪಚಾರಕ್ಕಾಗಿ ಆಕೆ ಮುನಿದು ಮಾನವನ ಮೇಲೆ ಮಾರಕಾಸ್ತ್ರ ಪ್ರಯೋಗಿಸುತ್ತಿದ್ದಾಳೆ ಎನ್ನುವ ಭಾವ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಇದ್ದಕ್ಕಿದ್ದಂತೆ ಎರಗಿದ ಆಕೆಯ ಶಾಪವಾದ ಕೋವಿಡ್-೧೯ನಿಂದಾಗಿ ಇಡಿಯ ವಿಶ್ವಕ್ಕೇ ದಿಗ್ಭ್ರಮೆ ಆವರಿಸಿ, ಎಲ್ಲ ದೇಶಗಳ ಲಕ್ಷಾಂತರ ಜನರ ನೋವು, ಸಾವು, Lockdown, ಆರ್ಥಿಕ ಪತನ, ಬಡಜನರ ಬದುಕಿನ ಬವಣೆ ಇದೆಲ್ಲ ಸಾಲುಸಾಲಾಗಿ ಮೆರವಣಿಗೆಯಾಗುತ್ತಿದೆ. ಇತಿಹಾಸದುದ್ದಕ್ಕೂ ಇಂಥ ಅನೇಕ ಸಂದರ್ಭಗಳು ಒದಗಿಬಂದಿದ್ದರೂ ಸರ್ವತ್ರವಾಗಿ ಇಡಿಯ ಭೂಮಿಯನ್ನು ಝಾಡಿಸಿದ, ಯಾವ ದೇಶವನ್ನೂ ಬಿಡದೇ ಅತಿ ತೀವ್ರವಾಗಿ ವ್ಯಾಪಿಸಿದ, ಬದುಕಿನ ಸ್ವಾತಂತ್ರ್ಯವನ್ನು ಕಸಿದ ಇಂಥ ಪರಿಸ್ಥಿತಿ ಬಹುಶಃ ಏಕಮೇವ ಇದ್ದಿರಬೇಕು. ಈ ಸಂಕಟದ ಸಂದರ್ಭದಲ್ಲಿ ಮನುಷ್ಯನ ಅಂತಸ್ಸತ್ವ ಹೇಗೆ ಎದ್ದುನಿಂದು ಈ ಕಷ್ಟವನ್ನು ಎದುರಿಸಿದೆ, ಎದುರಿಸುತ್ತಿದೆ ಅನ್ನುವುದೂ ಕಾಣುತ್ತಿದೆ. ಕಣ್ಣಿಗೆ ಕಾಣದ ಸೂಕ್ಷ್ಮಜೀವಿ ಮನುಕುಲದ ಆರೋಗ್ಯಕ್ಕೆ ಮಾಡುತ್ತಿರುವ ಘಾಸಿಯನ್ನು ಎದುರಿಸುವುದರಲ್ಲಿ, ಅದರ ಪಾರ್ಶ್ವಪರಿಣಾಮಗಳನ್ನು ವಿಶ್ಲೇಷಿಸಿ ಹೊಸ ದಾರಿಗಳನ್ನು ಕಂಡುಹಿಡಿದು ಜಗದ ವ್ಯಾಪಾರವನ್ನು ಮುಂದೆ ಸಾಗಿಸುವಲ್ಲಿ ನರರು ತೋರುತ್ತಿರುವ ಧೈರ್ಯ, ಸಾಹಸ, ಜಾಣ್ಮೆ ಮೆಚ್ಚುವಂಥದ್ದು. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಜನಸಮುದಾಯ ಎಚ್ಚೆತ್ತಿದೆ. ತಾನು ಮಾಡುತ್ತಿದ್ದ ಕೆಲಸದ ಮಾರ್ಗಕ್ಕೆ ಅಡ್ಡಬಂದ ಕೂಡಲೇ ಹೊಸ ಮಾರ್ಗ ಹುಡುಕುವಲ್ಲಿ ಜನ ತೋರಿದ ಉತ್ಸಾಹ, ಮುನ್ನುಗ್ಗುವಿಕೆ, ಆರ್ಥಿಕ ಮುಗ್ಗಟ್ಟು, ಮಾರಣಾಂತಿಕ ರೋಗ ಎದುರಿಸಿದ ಬಗೆ ಅಪೂರ್ವವಾದದ್ದು. ಆನಂದಿನಿ, ಈ ಕಾಲದಲ್ಲಿ ಜಗದುದ್ದಕ್ಕೂ ಶಿಕ್ಷಣ ಕ್ಷೇತ್ರ ಅನುಭವಿಸಿದ ದಿಗ್ಭ್ರಾಂತಿ ಅನತಿಕಾಲದಲ್ಲಿ ಅನ್ವೇಷಣ ಮಾರ್ಗ ಹಿಡಿದಿದ್ದನ್ನು ದಾಖಲಿಸುತ್ತಿದೆ. ವಾಸ್ತವ (virtual) ತರಗತಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿದ್ದದ್ದು ಪುಟ್ಟಮಕ್ಕಳ ಹಂತಕ್ಕೆ ಬಂದಿದೆ. ಶಾಲೆಯ ಕಲ್ಪನೆಯೂ ಬದಲಾಗಿ ಮನೆಮನೆಯಲ್ಲಿ ಶಾಲೆ ಎನ್ನುವ ವಿನೂತನ ಕಲ್ಪನೆಗೆ ಎಡೆಮಾಡಿಕೊಟ್ಟಿದೆ ಈ ಸಂದರ್ಭದಲ್ಲಿ ನಮ್ಮ ಪೂರ್ಣಪ್ರಮತಿಯ ತಂಡ, ಶಿಕ್ಷಕವೃಂದ ಮೈಕೊಡವಿ ತನ್ನ ಸೀಮಿತ ತಾಂತ್ರಿಕ ಜ್ಞಾನವನ್ನು ಕೆಲವೇ ದಿನಗಳಲ್ಲಿ ವಿಸ್ತರಿಸಿಕೊಂಡಿತು. ದಿನನಿತ್ಯ ಹತ್ತಾರು ಸಭೆಗಳು, ವಿಚಾರ ವಿನಿಮಯ, ಸಂಶೋಧನೆ, ಹೊಸಪ್ರಯತ್ನ, ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡು ನೋಡ ನೋಡುತ್ತಿದ್ದಂತೆಯೇ, ಮಕ್ಕಳ ಕಲಿಕೆ ಸರಾಗವಾಗಿ ನಡೆಯುವಂತೆ ಹಿರಿಯ ಮಕ್ಕಳಿಗೆ, ಕಿರಿಯ ಮಕ್ಕಳಿಗೆ ಪೋಷಕರಿಗೆ ತರಗತಿ/ತರಬೇತಿ ಪ್ರಾರಂಭಿಸಿಯೇ ಬಿಟ್ಟಿತು. ರಜಾಕಾಲ ಅಧ್ಯಾಪಕರ ಅತ್ಯಂತ ಬಿಡುವಿಲ್ಲದ ಚಟುವಟಿಕೆಗಳ ಕಾಲವಾಯಿತು. ಆದರೆ ಅದರ ದಣಿವಿನ ಬದಲು ಹೊಸ ಸಾಧನೆಯ ಸಂತೃಪ್ತಿ ಅವರದಾಯಿತು. ಅವರೆಲ್ಲರೂ ಅಭಿನಂದನೀಯರು! ಈ ಬದಲಾವಣೆಯ ಬೆರಗು, ಬವಣೆಗಳನ್ನು ಆನಂದಿನಿ ನಿಮ್ಮ ಮುಂದಿಡುತ್ತಿದೆ. ಈ ಪ್ರಯೋಗ, ಪ್ರಯತ್ನಗಳು ಇನ್ನೂ ಹಲವು ತಿಂಗಳುಗಳು ಮುಂದುವರೆಯುವ ಸೂಚನೆ ಇದೆ. ಅವುಗಳ ಅನುಭವವನ್ನೂ ಕಾಲಕಾಲಕ್ಕೆ ನಿಮ್ಮ ಮುಂದಿಡುತ್ತೇವೆ. ಹಾಗೆಯೇ ಕಳೆದ ವರ್ಷ ನಡೆದ ಸಂವತ್ಸರ ಸೂತ್ರ (Annual theme) ದ ಮಕ್ಕಳ ಸಂಶೋಧನಾ ಕಲಿಕಾ ವರದಿ, ಶಿಕ್ಷಕ ಮಕ್ಕಳ ಅನುಭವಗಳು, ಪೂರ್ಣಪ್ರಮತಿ ಸಾಮಾಜಿಕ ಕಾರ್ಯದ ವೈಖರಿ, ಇತರ ಚಟುವಟಿಕೆಗಳ ಚಿತ್ರಗಳು ನಿಮ್ಮ ಕೈ ಸೇರಿದೆ. ಪ್ರೀತಿಯಿಂದ ಓದಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಹಂಚಿಕೊಳ್ಳಿ. ತಿಂಗಳ ತಿಳಿಗಾಳು (ಶಾಲೆಯ ವಿವಿಧ ವಿಭಾಗಗಳ ಮಾಸಿಕ ವರದಿ ವಿಭಾಗ) ಆನಂದಕಂದ – ಪೂರ್ವ ಪ್ರಾಥಮಿಕ ವಿಭಾಗ – ವಿದ್ಯಾ ಗುತ್ತಲ್ ( ಅಧ್ಯಾಪಕರು ಮತ್ತು ಪೂರ್ವಪ್ರಾಥಮಿಕ ವಿಭಾಗದ ಪ್ರತಿನಿಧಿ) ಈ ಬಾರಿಯ ಶೈಕ್ಷಣಿಕ ವರ್ಷವು ನಮ್ಮ ಪುಟ್ಟ ಮಕ್ಕಳ ಪೋಷಕರೊಂದಿಗಿನ ಆನ್ಲೈನ್ ಚರ್ಚೆಯ ಮೂಲಕ ಪ್ರಾರಂಭವಾಯಿತು. ಮೇ ತಿಂಗಳ ಕೊನೆಯ ವಾರದಲ್ಲಿ M3 ಮಕ್ಕಳಿಗೆ ಒಂದು ವಾರ, ಪಠ್ಯ ಪುನರಾವರ್ತನೆ ತರಗತಿಗಳನ್ನು ಆಯೋಜಿಸಲಾಗಿತ್ತು. ಮಕ್ಕಳೆಲ್ಲರೂ ಉತ್ಸಾಹದಿಂದ, ಸಕ್ರಿಯವಾಗಿ ತರಗತಿಯಲ್ಲಿ ಪಾಲ್ಗೊಂಡು ಎಲ್ಲ ನಿಗದಿತ ವಿಷಯಗಳನ್ನು ಅಧ್ಯಾಪಕರ ಸಹಾಯದಿಂದ ಪುನರಾವರ್ತನೆ ಮಾಡಿದರು. ಆನ್ಲೈನ್ ಘಟಿಕೋತ್ಸವದ ಮೂಲಕ ಅವರನ್ನು ಪ್ರಥಮ ಕಕ್ಷೆಗೆ ಬೀಳ್ಕೊಡಲಾಯಿತು. ಮೇ 30 ಮತ್ತು 31 ನೇ ತಾರೀಖು ಪೋಷಕರಿಗೆ ಮಾರ್ಗಸೂಚಿ ಸಭೆಗಳನ್ನು ಏರ್ಪಾಡು ಮಾಡಲಾಗಿತ್ತು. ಎಲ್ಲರನ್ನು ಹರ್ಷದಿಂದ ಸ್ವಾಗತಿಸಿ ಈ ಬಾರಿಯ ಆನ್ಲೈನ್ ತರಗತಿಗಳ ಬಗ್ಗೆ ಮತ್ತು ಪಠ್ಯ ಯೋಜನೆಗಳ ಬಗ್ಗೆ, ಅದಕ್ಕೆ ಬೇಕಾಗಿರುವ ಪೂರ್ವತಯಾರಿಯ ಬಗ್ಗೆ ವಿವರಿಸಲಾಯಿತು. ಜೂನ್ 1 ನೇ ತಾರೀಖಿನಿಂದ ನಾಲ್ಕು ದಿನ, ಪೋಷಕರಿಗೆ ವಿಶೇಷ ತರಬೇತಿಯನ್ನು ಆಯೋಜಿಸಲಾಗಿತ್ತು. ಉಮಾ ಅಕ್ಕ ಎಲ್ಲ ಪೋಷಕರಿಗೂ ಮಾಂಟೇಸರಿ ಶಿಕ್ಷಣ ಪದ್ಧತಿಯ ಬಗ್ಗೆ, ಮಗುವಿನ ಮನ:ಶಾಸ್ತ್ರದ ಬಗ್ಗೆ, ಮಗುವಿನ ಅವಶ್ಯಕತೆಗಳ ಬಗ್ಗೆ, ಮಕ್ಕಳ ಪೋಷಣೆಯ ಬಗ್ಗೆ, ಲಾಲನೆ ಪಾಲನೆಯ ಬಗ್ಗೆ, ಪೂರ್ಣಪ್ರಮತಿಯ ಇಂಟಿಗ್ರೇಟೆಡ್ ಲರ್ನಿಂಗ್ ಬಗ್ಗೆ ಮತ್ತು ಮಗುವನ್ನು ಸೂಕ್ಷ್ಮವಾಗಿ ಗಮನಿಸುವುದು ಹೇಗೆ ಎಂಬುದರ ಬಗ್ಗೆ ಪೋಷಕರಿಗೆ ತಿಳಿಸಿಕೊಟ್ಟರು. ಎಲ್ಲ ಪೋಷಕರು ಬಹಳ ಉತ್ಸಾಹದಿಂದ ತರಗತಿಗಳಲ್ಲಿ ಪಾಲ್ಗೊಂಡರು. ಅನೇಕ ವಿಧದ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕಂಡುಕೊಂಡರು. ಕೆಲವು ಪೋಷಕರು ಈ ತರಗತಿಯ ರೆಕಾರ್ಡಿಂಗ್ ಅನ್ನು ಈಮೇಲ್ ಮೂಲಕ ಕಳಿಸಿಕೊಡಿ ಎಂದೂ ಕೇಳಿಕೊಂಡರು. ಜೂನ್ ಎರಡನೆಯ ವಾರ ಎಲ್ಲಾ ಮಕ್ಕಳಿಗೂ ಮತ್ತು ಪೋಷಕರಿಗೂ ಆನ್ಲೈನ್ ಮೂಲಕ ಬಹಳ ಕಡಿಮೆ ಅವಧಿಗೆ ಸೀಮಿತವಾಗಿ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆವು. ಆ ವಾರದಲ್ಲಾದ ವಿಶೇಷ ಅನುಭವಗಳನ್ನು ಮತ್ತು ಪೋಷಕರಿಂದ ಬಂದ ಸಲಹೆ-ಸೂಚನೆಗಳನ್ನು ಸಂಗ್ರಹಿಸಿ ಜೂನ್, ಮೂರನೆಯ ವಾರ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆವು. ಅದರ ಪ್ರಕಾರ ವಾರದಲ್ಲಿ ಎರಡು ದಿನ ವಿಷಯವಾರು ಶಿಕ್ಷಣ ಮತ್ತು ವಾರದಲ್ಲಿ ಮೂರು ದಿನ ಸಂಸ್ಕೃತ ತತ್ವದರ್ಶನ ಮತ್ತು ಪರಂಪರೆಯ ತರಬೇತಿ – ಇವೆಲ್ಲವೂ ಕೇವಲ ಪೋಷಕರಿಗಾಗಿ ಮಾಡುವುದು ಎಂದು ತೀರ್ಮಾನಿಸಿ ಅದಕ್ಕೆಂದೇ ವಿಶೇಷವಾದ ಪಠ್ಯ ಯೋಜನೆಗಳನ್ನು ಸಿದ್ಧಪಡಿಸಿಕೊಂಡೆವು. ಇಲ್ಲಿ ಪುಟ್ಟಮಕ್ಕಳಿಗೆ ಆನ್ಲೈನ್ ತರಗತಿಗಳು ಮತ್ತು ಅವರಿಗೆ ಆಗಬಹುದಾದಂಥ ವಯೋಸಹಜ ತೊಂದರೆಗಳನ್ನು, ಮನಗಂಡು ಪೋಷಕರ ಮೂಲಕವೇ ಅವರಿಗೆ ವಿಷಯಗಳ ಕಲಿಕೆಯಾಗಬೇಕೆಂದು : ಪೋಷಕರಿಗೆ, ಅಧ್ಯಾಪಕರ ಜೊತೆ, ಮಾತುಕತೆಗಳ ಮೂಲಕ, ವಿಷಯಗಳ ಪ್ರಸ್ತುತಿಯ ಮೂಲಕ ಮಕ್ಕಳಿಗೆ ಯಾವ ವಿಷಯಗಳನ್ನು ಹೇಗೆ ಹೇಳಿಕೊಡಬೇಕು, ಯಾವ ಸಮಯದಲ್ಲಿ, ಎಷ್ಟು ಸಮಯದಲ್ಲಿ, ಎಂತಹ ಚಟುವಟಿಕೆಗಳನ್ನು ನೀಡಬಹುದು, ಎನ್ನುವ ವಿಚಾರಗಳನ್ನು ದಿನದಲ್ಲಿ ಅರ್ಧಗಂಟೆ ಚರ್ಚಿಸಿ, ತರಬೇತಿಯನ್ನು ನೀಡಲಾಗುತ್ತಿದೆ. ಇನ್ನು ಮುಂದೆಯೂ ಇದಕ್ಕೆ ಒಂದು ವಿಶೇಷ ರೂಪುರೇಷೆಯನ್ನು ನಮ್ಮ ಶಾಲೆಯ ತತ್ವದ ದೃಷ್ಟಿಯಿಂದ ನೀಡಲಾಗುತ್ತಿದೆ. ಈ ಪುಟಾಣಿ ಮಕ್ಕಳಿಗೆ ಶಿಕ್ಷಣಕ್ಕೂ ಮೊದಲು, ಅದಕ್ಕೆ ಭದ್ರ ಬುನಾದಿಯಾಗುವಂಥ ಪೂರಕ ವಾತಾವರಣವನ್ನು ನೀಡಬೇಕು. ಉತ್ತಮ ಸಂಸ್ಕೃತಿ, ಸಂಸ್ಕಾರ, ಆಚರಣೆ, ನಡೆನುಡಿಗಳು, ಹುಟ್ಟಿನಿಂದ ಮಗುವಿಗೆ ನೋಡಲು, ಅನುಭವಿಸಲು ಅವಕಾಶವಾಗುವಂತಹ ಪರಿಸರ ಮನೆಮನೆಯಲ್ಲೂ ನಿರ್ಮಾಣವಾಗಬೇಕು. ಅದರಲ್ಲಿ ನಮ್ಮ ಆಧುನಿಕ ವಿಷಯವಾರು ಶಿಕ್ಷಣವು ಒಂದು ಸಣ್ಣ ಭಾಗ ಅಷ್ಟೇ. ಮನೆಮನೆಯಲ್ಲೂ ಈ ರೀತಿಯಾದ ಪೂರಕ ವಾತಾವರಣವು ಈ ಸಮಯದಲ್ಲಿ ಸೃಷ್ಟಿಯಾಗಬೇಕು. ತಂದೆ ತಾಯಿಯರ ಮೂಲಕವೇ ಮಕ್ಕಳಿಗೆ ಕಲಿಕೆಯ ನಿಜವಾದ ಆನಂದವು ದೊರೆಯುವಂತಾಗಬೇಕು. ಅದನ್ನು ತಿಳಿಸಿಕೊಡುವುದೇ ನಮ್ಮ ಮುಖ್ಯ ಉದ್ದೇಶ. ಹಾಗಾಗಿ ನಮ್ಮ, ಈ ಪೋಷಕರ ತರಬೇತಿಯಲ್ಲಿ ತಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ನಿಮ್ಮ ಮಕ್ಕಳ ಕಲಿಕೆಯನ್ನು ಸುಂದರವಾಗಿಸಿ, ಪ್ರೋತ್ಸಾಹಿಸಿ, ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ. ವಾಮನ – ಪ್ರಾಥಮಿಕ ವಿಭಾಗ < – – ಮುರಳಿಧರ ಕಟ್ಟಿ (ಅಧ್ಯಾಪಕರು ಮತ್ತು ಪ್ರಾಥಮಿಕ ವಿಭಾಗದ ಪ್ರತಿನಿಧಿ) ನಮಸ್ಕಾರ, ಶಾರ್ವರೀ ಸಂವತ್ಸರದ ಅಧ್ಯಯನ ಅಧ್ಯಾಪನದ ಈ ವರ್ಷಕ್ಕೆ ಸ್ವಾಗತ.ಶಾಲೆಯ ಪತ್ರಿಕೆಯಾದ ಅನಂದಿನೀ ಓದುಗ ಬಳಗಕ್ಕೂ ಹೃತ್ಪೂರ್ವಕ ಸ್ವಾಗತ. ಪೂರ್ಣಪ್ರಮತಿ ಶಾಲೆಯು ಮಕ್ಕಳ ಅಧ್ಯಯನ ಕೇಂದ್ರ. ಅಲ್ಲಿ ಪ್ರತೀ ವಿಭಾಗಕ್ಕೂ ಒಂದು ಒಂದು ಹೆಸರುಗಳನ್ನು ಸೂಚಿಸಲಾಗಿದೆ. ಆನಂದಕಂದ (ಪೂರ್ವಪ್ರಾಥಮಿಕ ವಿಭಾಗ) ಅರ್ಜುನ ಗಣ (ಮಾಧ್ಯಮಿಕ ವಿಭಾಗ) ವಾಮನ ಗಣ (ಪ್ರಾಥಮಿಕ ವಿಭಾಗ) ಭೀಮಸೇನ (ಪ್ರೌಢ ವಿಭಾಗ) ಹೀಗೆ ೧ ರಿಂದ ೩ ತರಗತಿಯ ವರೆಗೆ ಇರುವ ಮಕ್ಕಳ ವಿಭಾಗವನ್ನು ಶಾಲೆ ವಾಮನ ಗಣ ಎಂದು ಕರೆದಿದೆ. ಏಕೆಂದರೆ ಮಕ್ಕಳು ಹಿಂದಿನ ಕಾಲದಲ್ಲಿ ಗುರುಕುಲಕ್ಕೆ ಹೋಗುವ ವಯಸ್ಸಿದು. ಹಾಗಾಗಿ ಇದನ್ನು ವಾಮನಗಣ = ಬ್ರಹ್ಮಚರ್ಯಾವಸ್ಥೆ ಪ್ರಾರಂಭದ ಸಮಯ ಎನ್ನುವ ಭಾವದಲ್ಲಿ ವಾಮನ ವಿಭಾಗ ಎಂದು ಕರೆಯಲಾಗುತ್ತಿದೆ. ಗುರುಶಿಷ್ಯರ ಉಪಸತ್ತಿಯು ಜ್ಞಾನಕ್ಕೆ ಕಾರಣ. ಆ ಗುರುಶಿಷ್ಯರ ಸಂಬಂಧ ಎಂತಹದ್ದೇ ಪರಿಸ್ಥಿತಿಯಲ್ಲೂ ಮುಂದವರೆದುಕೊಂಡು ಹೋಗಬೇಕು ಗಂಗೆಯ ಹಾಗೇ, ಅವಿಚ್ಛಿನ್ನವಾಗಿ ಸಾಗಬೇಕು ಎನ್ನುವ ದೃಷ್ಟಿಯಿಂದ ಈ ಸಂದರ್ಭದಲ್ಲಿ ಸೃಷ್ಟಿಯಾದದ್ದೇ ಆನ್ ಲೈನ್ ತರಗತಿಗಳು. ಈ ಆನ್ ಲೈನ್ ತರಗತಿಗಳು ಪ್ರಾರಂಭ ಆಗವುದು ಅಷ್ಟು ಸುಲಭದ ಮಾತಾಗಿರಲಿಲ್ಲ ಅದಕ್ಕಾಗಿ ನಮ್ಮ ಅಧ್ಯಾಪಕರ ತಂಡ ಮತ್ತು ತಂತ್ರಜ್ಞರ ತಂಡ ಮಾರ್ಚ, ಏಪ್ರಿಲ್, ಮೇ ತಿಂಗಳಿನಿಂದಲೇ ಪ್ರರಿಶ್ರಮಪಡಲು ಪ್ರಾರಂಭಿಸಿತು.ನಮ್ಮ ಅಧ್ಯಾಪಕ ತಂಡ ಈ ಆನ್ ಲೈನ್ ಶಿಕ್ಷಣವನ್ನು ಕರಗತ ಮಾಡಿಕೊಳ್ಳಲು ಮೇ ಪ್ರಾರಂಭಿಸಿದರು. ಎಲ್ಲಾ ಅಧ್ಯಾಪಕರು ಏಕಮನಸ್ಕರಾಗಿ ಮಕ್ಕಳಿಗೆ ಯಾವ ರೀತಿ ಮಾಡದರೆ ಒಳಿತು ಎಂದು ಚಿಂತಿಸುತ್ತಾ, ಪ್ರತೀ ತರಗತಿಗೆ ಯಾವ ರೀತಿ ನಮ್ಮ ತಯಾರಿ ಇರಬೇಕು ಎನ್ನುವದಿಲ್ಲಾ ಚಿಂತಿಸುತ್ತಾ ಈ ಆನ್ ಲೈನ್ ತರಗತಿಯನ್ನು ಆರಂಭಿಸಿದರು. ತರಗತಿಯಲ್ಲಿ ಮಕ್ಕಳನ್ನು ಹೆಚ್ಚು ಹೊತ್ತು ಸ್ಕ್ರೀನ್ ಮುಂದೆ ಕೂಡಿಸದ ಹಾಗೇ ಮಕ್ಕಳಿಗೆ ಕೆಲಸಕೊಡಲು ನಿರ್ಧಾರಮಾಡಿಕೊಂಡು ಈ ತರಗತಿಗಳನ್ನು ವಾಮನವಿಭಾಗವು ಆರಂಭಿಸಿತು. ಈ ರೀತಿ ಶಾಲೆ ನಮ್ಮ ಮಕ್ಕಳಿಗೂ ಬೇಕು ಎಂದು ಹಲವು ಪೋಷಕರು ಬಂದಿದ್ದಾರೆ ಹಾಗಾಗಿ ಕೊಂಚ ಮಟ್ಟಿಗೆ ಮಕ್ಕಳ ಸಂಖ್ಯೆಯೂ ಜಾಸ್ತಿ ಆಗಿರುವ ಕಾರಣ ಈ ಬಾರಿ ಹೊಸ ಪರಿಸರ ಒಂದು ಪ್ರಾರಂಭವಾಯಿತು.ಒಟ್ಟಾರೆಯಾಗಿ ವಾಮನ ವಿಭಾಗದಲ್ಲಿ ೬ ಪರಿಸರಗಳು ಇವೆ. ಆರುಣೀ ಧೃವ ನಚಿಕೇತ ಪ್ರಹ್ಲಾದ ಮಾರ್ಕಂಡೇಯ ಉಪಮನ್ಯು ಎಂದು ಪ್ರತೀ ಪರಿಸರವೂ ಸಂಸ್ಕೃತ ಹಾಗೂ ಆಧುನಿಕ ವಿಷಯಗಳ ಅಧ್ಯಾಪಕರನ್ನು ಹೊಂದಿದೆ. ಹೀಗೆ ಎಲ್ಲಾ ಪರಿಸರಗಳು ಜೂನ್ ಮಾಸದಲ್ಲಿ ಪುನರಾವರ್ತನೆಗೆ ಹೆಚ್ಚು ಮಹತ್ವವನ್ನು ಕೊಟ್ಟು ಮಾಸಾಂತ್ಯದಲ್ಲಿ ಮೊದಲ ಕಥೆಯಾದ “ಸೃಷ್ಠಿಪ್ರಕ್ರಿಯೆ” ಬಗ್ಗೆ ತಿಳಿಸಿಕೊಟ್ಟು ನಂತರದ ದಿನಗಳಲ್ಲಿ ಮುಂದಿನ ವಿಷಯಗಳನ್ನು ತಿಳಿಸಿಕೊಡಲು ಸನ್ನದ್ಧರಾಗಿದ್ದೇವೆ. ಜುಲೈ ಮಾಸಕ್ಕೆ ಸ್ವಾಗತ ಬಯಸುತ್ತೇನೆ. ಧನ್ಯವಾದಗಳು Arjuna – Upper Elementary – Geetha. S (Teacher and Vibhaga pratinidhi of Upper elementary) First few weeks experience of ‘learning to teach’ from home Arjuna (Upper elementary) stepped into the academic year 2020-21 on May 25th. With the view of getting children and parents acquainted to this new mode of online learning, we
ಸಂವತ್ಸರ ಸೂತ್ರ-ಕಲಿಕೆ-ಹಂಚಿಕೆ ಸರಣಿ – 2 ಸಂಪಾದಕೀಯ ಆತ್ಮೀಯರೇ, ೨೦೧೯-೨೦ ನೇ ಸಾಲಿನ ಆನಂದಿನಿಯನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ಈ ವರ್ಷ ನಮಗೆ ಒಂದು ಮೈಲಿಗಲ್ಲಿನ ವರ್ಷ. ೨೦೧೦ ಜೂನ್ ನಲ್ಲಿ ಪ್ರಾರಂಭವಾದ ಪೂರ್ಣಪ್ರಮತಿ ೧೦ನೇ ವರ್ಷಕ್ಕೆ ಕಾಲಿಟ್ಟಿದೆ. ಅದನ್ನು ವಿಶೇಷವಾಗಿ ಆಚರಿಸುವ ಯೋಜನೆ ವರ್ಷ ಪ್ರಾರಂಭದಲ್ಲಿ ರೂಪುಗೊಂಡಿದ್ದು ಬಹಳ ಮುಖ್ಯವಾಗಿ ಮೂರು ಮುಖಗಳ ಕಾರ್ಯಕ್ರಮ ಮೂಡಿಬಂತು. ಮೊದಲನೆಯದಾಗಿ ಪ್ರತಿ ವಿಷಯಗಳ “ಹಬ್ಬ”, ಎರಡನೆಯದಾಗಿ ರಾಮಾಯಣ ಸಮೀಕ್ಷೆ, ಮೂರನೆಯದಾಗಿ ಕಳೆದ ಹತ್ತುವರ್ಷಗಳ ಒಟ್ಟು ಸಂವತ್ಸರ ಸೂತ್ರಗಳ ಮುಂದುವರೆದ ನಿರೂಪಣೆ. ನಿಮಗೆ ಅರಿವಿರುವಂತೆ ಪೂರ್ಣಪ್ರಮತಿಯ ಯಾವುದೇ ಕಾರ್ಯಕ್ರಮವು ಕಲಿಕೆಯ ಹಿನ್ನಲೆಯಲ್ಲೇ ಅರಳುವಂಥದ್ದು. ಮತ್ತಷ್ಟು ಕಲಿಸುವಂಥದ್ದು. ಇವೇ ನಮ್ಮ ಪೂರ್ವಪ್ರಾಥಮಿಕ ಹಂತದಿಂದ ಹಿಡಿದು ೧೦ನೇ ತರಗತಿಯವರೆಗೆ ವಿದ್ಯಾರ್ಥಿಗಳು ಕಲಿತ ಎಲ್ಲಾ ವಿಷಯಗಳ ವಿವಿಧ ಆಯಾಮಗಳನ್ನು Subject fest ಗಳಲ್ಲಿ ಪ್ರಸ್ತುತಪಡಿಸಿದ್ದು. ಅವರ ಆಳವಾದ ಕಲಿಕೆಗೆ, ನಿರೂಪಣಾ ಸಾಮರ್ಥ್ಯ, ಕೌಶಲ್ಯಕ್ಕೆ ಸಾಕ್ಷಿಯಾಯಿತು. ಬಂದ ಅತಿಥಿಗಳು ಮನಃಪೂರ್ವಕ ಹರಸಿ ಆಶೀರ್ವದಿಸಿದ್ದು ಶಾಲೆಯ ಭಾಗ್ಯವಾಯಿತು. ವರ್ಷದುದ್ದಕ್ಕೂ ನಿರಂತರವಾಗಿ ನಡೆಯುವ, ತತ್ವಚಿಂತನಾ ತರಗತಿಗಳಲ್ಲಿ ವಿದ್ಯಾರ್ಥಿಗಳು ಕಲಿಯುವ ರಾಮಾಯಣದ ಸಮೀಕ್ಷೇ ಸೀತಾಜಯಂತಿಯಂದು ನಡೆಯಿತು. ಪ್ರತಿ ವಿದ್ಯಾರ್ಥಿ ಕಥಾನಿರೂಪಣೆ, ಪಾತ್ರ ಪರಿಚಯ, ವಿಷಯಾಧಾರಿತ ಪ್ರಶ್ನೋತ್ತರಗಳಲ್ಲಿ ನಿರರ್ಗಳವಾಗಿ ಭಾಗವಹಿಸಿ ಸೈ ಎನಿಸಿಕೊಂಡರು. ಭಾರತದ ಮಹಾಕಾವ್ಯಗಳ ವಿಷಯವಾದ ಪರಿಚಯ ನಮ್ಮ ಯುವ ಮನಸ್ಸುಗಳಿಗೆ ಆಗಿ, ಅವುಗಳ ತತ್ವ ಮಕ್ಕಳ ಮನದಾಳದಲ್ಲಿ ಬೇರೂರಿದವು. ನಮ್ಮ ಉದ್ದೇಶ ಸಫಲವಾಯಿತು. ಶಾಲೆಯ ಪ್ರಾರಂಭ ವರ್ಷಗಳಿಂದಲೂ ಶಾಲಾ ವಾರ್ಷಿಕ ಸೂತ್ರ ಬಂದಿದ್ದು, ವರ್ಷದುದ್ದಕ್ಕೂ ಅವುಗಳನ್ನು ಅನೇಕ ಮುಖಗಳಲ್ಲಿ ಅಧ್ಯಯನ ಮಾಡುವುದು, ಕ್ಷೇತ್ರ ಭೇಟಿ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದಗಳ ಮುಖಾಂತರ ಆ ಸೂತ್ರದ ವಿಶೇಷ ತಯಾರಿ ನಡೆಸಿ ವಾರ್ಷಿಕ ಉತ್ಸವದಲ್ಲಿ ವಿದ್ಯಾರ್ಥಿಗಳು ಅದನ್ನು ಪ್ರಸ್ತುತಪಡಿಸುವುದು ಶಾಲಾಪದ್ಧತಿ. ದಶವರ್ಷದ ಉತ್ಸವದ ಈ ಸಂದರ್ಭದಲ್ಲಿ ಕಳೆದ ಒಂಬತ್ತೂ ವರ್ಷದ ಸೂತ್ರಗಳ ಮರು ಪ್ರಸ್ತುತಿಯನ್ನು ಯೋಚಿಸಿ, ಅವುಗಳನ್ನು ಸಿದ್ಧ ಪಡಿಸಿದ್ದು ನಗರದ ವಸಂತಪುರದ “ವಸಂತ ವಲ್ಲಭರಾಯ ಸ್ವಾಮಿ” ದೇವಾಲಯದಲ್ಲಿ ಅಪೂರ್ವ ರೀತಿಯಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸುವುದು ನಮ್ಮ ಆಶಯವಾಗಿದ್ದು, ಕಾರಣಾಂತರಗಳಿಂದ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮೊಟುಕುಮಾಡಬೇಕಾಯಿತು. ಈ ವರ್ಷ ಅನೇಕ ರೀತಿಯಲ್ಲಿ ಮರೆಯಲಾಗದಂಥದ್ದು ಪೂರ್ಣಪ್ರಮತಿಯ ಜೀವಸ್ವರೂಪರೂ, ನಮ್ಮ ಚಿರಸ್ಥಾಯಿ ನೆಲೆಯೂ ಆದ ಪೇಜಾವರ ಪೀಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮಿಜಿ (ಪೂರ್ವಾಶ್ರಮ ಪ್ರೊ.ಜಿ.ಡಿ. ಅಗರವಾಲ್) ಅವರೂ ನಮ್ಮನ್ನು ಅಗಲಿ ಪರಂಧಾಮವಂಗೈದ ವರ್ಷವಿದು. ಆ ಎರದು ಪೂಜ್ಯ ಚೇತನಗಳಿಗೆ ಪೂರ್ಣಪ್ರಮತಿ ಶಿರಬಾಗಿ ನಮಿಸುತ್ತದೆ. ಉಳಿದಂತೆ ಶಾಲೆಯು ’ನಿಸರ್ಗದೊಂದಿಗೆ ತಾದಾತ್ಮ್ಯ’ , ’ಸಹಜ ಬದುಕು’ ಗರಿಗೆದರಿ ಯುವ ಬ್ರಿಗೆಡ್ ನವರೊಂದಿಗೆ ವೃಷಭಾವತಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗಿಯಾಯಿತು. ಹೊಸಕೆರೆಹಳ್ಳಿ ಕೆರೆಯ ಸ್ವಚ್ಛತಾ ಕಾರ್ಯಕ್ರಮ, ಟಿ.ನರಸೀಪುರ ಸಂಗಮದ ಸ್ವಚ್ಛತಾ ಕಾರ್ಯಕ್ರಮ ಪೂರ್ಣಪ್ರಮತಿ ಸಂತೆ, ಕಸಮುಕ್ತ ಗಿರಿನಗರ ಪ್ರಾಯೋಜಕತೆ, ಪೋಷಕರಿಗೆ ಜ್ಞಾನಧಾರಾ (outreach program) ದ ’ಸಾಧಕರೊಂದಿಗೆ ಮಾತುಕತೆ’ ಯಶಸ್ವಿಯಾಗಿ ನಡೆದು ವರ್ಷವನ್ನು ಸಂಪನ್ನಗೊಳಿಸಿದವು. ನಿಮ್ಮಶಶಿರೇಖಾ ಮಣೂರುಪ್ರಾಂಶುಪಾಲರುಪೂರ್ಣಪ್ರಮತಿ. ಅಧ್ಯಯನ-ಅಧ್ಯಾಪನ ಜೀವೋ ಜೀವಸ್ಯ ಜೀವನಮ್– ಅನಂತಶಯನ ಶಿರಹಟ್ಟಿ (ಮಾಧ್ಯಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರು) ಒಂದು ಜೀವ ಇನ್ನೊಂದು ಜೀವವನ್ನು ಆಶ್ರಯಿಸಿ ಇದೆ. ಇದು ಈ ವಾಕ್ಯದ ಅರ್ಥ. ಈ ವಾಕ್ಯ ಬರುವುದು ಭಾಗವತದಲ್ಲಿ. ಒಮ್ಮೆ ಅಲ್ಲಿ ಯಾವ ಪ್ರಸಂಗದಲ್ಲಿ ಬಂದಿದೆ ಎಂದು ನೋಡೋಣ. ಧರ್ಮರಾಜನಿಗೆ ನಾರದರ ಸಾಂತ್ವನ ಮಹಾಭಾರತದ ಯುದ್ಧ ಮುಗಿದು ಧರ್ಮರಾಜ ಮಹಾರಾಜನಾಗಿದ್ದಾನೆ. ಅವನ ಆಶ್ರಯದಲ್ಲಿ ಎಲ್ಲ ಮಕ್ಕಳನ್ನು ಕಳೆದುಕೊಂಡ ಧೃತರಾಷ್ಟ್ರ ಮತ್ತು ಗಾಂಧಾರಿ ಇರುತ್ತಾರೆ. ಆಗ ತೀರ್ಥಯಾತ್ರೆಗೆ ಹೋದ ವಿದುರ ಮರಳಿ ಹಸ್ತಿನಾವತಿಗೆ ಬರುತ್ತಾನೆ. ತನ್ನ ಅಣ್ಣನಾದ ಧೃತರಾಷ್ಟ್ರನಿಗೆ “ಪಾಂಡವರಿಗೆ ಮೋಸ ಮಾಡಿ ಈಗ ಅವರ ಆಶ್ರಯದಲ್ಲಿಯೇ ಇದ್ದು ಭೀಮ ಹಾಕಿದ ಅನ್ನವನ್ನು ತಿನ್ನುತ್ತಿರುವಿ. ಬದುಕುವ ಆಸೆ ಬಿಡು. ಪಾಂಡವರಿಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊ” ಎಂದಾಗ ಚಕ್ಷುಹೀನ ಪ್ರಜ್ಞಾಚಕ್ಷುವಾಗುತ್ತಾನೆ. ಧರ್ಮರಾಜನಿಗೆ ತಿಳಿಸದೇ ಧೃತರಾಷ್ಟ್ರ, ಗಾಂಧಾರಿ, ವಿದುರ ಮೂವರೂ ಅರಣ್ಯವನ್ನು ಪ್ರವೇಶಿಸುತ್ತಾರೆ. (ಮುಂದೆ ಧೃತರಾಷ್ಟ್ರ ಯೋಗಬಲದಿಂದ ತನ್ನ ದೇಹವನ್ನು ಕಾಳ್ಗಿಚ್ಚಿಗೆ ಅರ್ಪಣೆ ಮಾಡುತ್ತಾರೆ. ಪತಿಯ ದಾರಿ ಸತಿಯದೂ ಆಗುತ್ತದೆ.) ಅರಮನೆಯಲ್ಲಿ ತನ್ನ ಡೊಡ್ಡಪ್ಪನನ್ನು ಕಾಣದೆ ಧರ್ಮರಾಜ ಖಿನ್ನನಾಗಿರುತ್ತಾನೆ. ಆಗ ಅಲ್ಲಿಗೆ ನಾರದರು ಬರುತ್ತಾರೆ. ಅವರ ಬಳಿ ನೋವನ್ನು ಹೇಳಿಕೊಂಡಾಗ ನಾರದರು ಧರ್ಮರಾಜನಿಗೆ – “ ಈ ಜಗತ್ತು ಈಶ್ವರಾಧೀನ. ಅವನೆ ಎಲ್ಲರನ್ನು ಸೇರಿಸುವವನು ಮತ್ತು ವಿಯೋಗಿಸುವವನು. ನಿಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮ ತಮ್ಮ ಗತಿಯನ್ನು ಹೊಂದುತ್ತಾರೆ. ನೀನು ಈ ಮಮತೆಯನ್ನು ಬಿಡು” ಎಂದು ಉಪದೇಶ ಮಾಡುತ್ತಾರೆ. ಆಗ ಬರುವ ಶ್ಲೋಕ ಇದು ಅಹಸ್ತಾನಿ ಸಹಸ್ತಾನಾಂ ಅಪದೋ ದ್ವಿಚತುಷ್ಪದಾಮ್ |ಅಣೂನಿ ತಾತ ಮಹತಾಂ ಜೀವೋ ಜೀವಸ್ಯ ಜೀವನಮ್ || ಭಾಗವತ ೧.೧೨.೪೭ | (ಕೈ ಇರುವ ಪ್ರಾಣಿಗಳಿಗೆ ಕೈ ಇರದ ಪ್ರಾಣಿಗಳು ಜೀವನ. ಕಾಲಿರದ ಜೀವಿಗಳು ಎರಡು-ನಾಲ್ಕು ಕಾಲಿನ ಜೀವಿಗಳಿಗೆ ಜೀವನ. ಸಣ್ಣದೆಲ್ಲ ದೊಡ್ಡವುಗಳಿಗೆ ಜೀವನ. ಪ್ರತಿ ಜೀವವೂ ಇನ್ನೊಂದು ಜೀವಕ್ಕೆ ಜೀವನ) ಈ ಶ್ಲೋಕದಲ್ಲಿ ಮೊದಲ ಮೂರು ಪಾದ ದುರ್ಬಲ ಸಬಲನ ಜೀವನ ಎನ್ನುವ ಅರ್ಥ ಕೊಟ್ಟರೂ ಕೊನೆಯ ಪಾದ ಪ್ರತಿ ಜೀವಿಯೂ ಇನ್ನೊಂದು ಜೀವಿಗೆ ಜೀವನ; ಎಲ್ಲ ಜೀವಿಗಳೂ ಪರಸ್ಪರ ಅವಲಂಬಿಸಿಕೊಂಡಿರುತ್ತಾರೆ ಎನ್ನುವ ಅರ್ಥವನ್ನು ಕೊಡುತ್ತದೆ. ಪೂರ್ಣಪ್ರಮತಿಯಲ್ಲಿ ಈ ವಿಷಯವನ್ನು ತಿಳಿಯಲು ಮಕ್ಕಳ ಜೊತೆ ಅಧ್ಯಾಪಕರೂ ಅಧ್ಯಯನ ಮಾಡಿದರು. ಅದರ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಹುಲಿ-ಹುಲ್ಲು-ನೀರು ನೀರನ್ನು ಆಶ್ರಯಿಸಿ ಇಡೀ ಚರಾಚರ ಪ್ರಪಂಚವೇ ಇದೆ ಎನ್ನುವುದು ಸರ್ವವಿದಿತ. ಇಂತಹ ನೀರು ಉಳಿಯಲು ಹುಲಿ ಕಾರಣ. ನಮ್ಮ ಭೂಮಿಯ ಒಳಗೆ ನೀರು ಉಳಿಯಲು ಮರಗಿಡಗಳಂತೆ ಹುಲ್ಲು ಕೂಡ ಪ್ರಧಾನ ಪಾತ್ರ ವಹಿಸಿದೆ. ಹುಲ್ಲು ಇರುವ ಜಾಗದಲ್ಲಿ ಅಂತರ್ಜಲ ಸಮೃದ್ಧವಾಗಿರುತ್ತದೆ. ಆದರೆ ಹುಲ್ಲನ್ನು ತಿನ್ನಲು ಜಿಂಕೆಗಳಿವೆ. ಜಿಂಕೆಗಳು ಹೆಚ್ಚಿದಷ್ಟು ಹುಲ್ಲು ನಾಶವಾಗುತ್ತದೆ. ಹುಲ್ಲು ಇಲ್ಲದಿದ್ದರೆ ಅಂತರ್ಜಲ ಇಲ್ಲ. ಅದಿಲ್ಲದೆ ಹಳ್ಳ ಕೊಳ್ಳ ಕೆರೆಗಳೆಲ್ಲಿ? ಅವುಗಳಿಲ್ಲದೆ ನದಿಗಳೆಲ್ಲಿ? ಅದಕ್ಕಾಗಿ ಪ್ರಕೃತಿಯೇ ಒಂದು ವ್ಯವಸ್ಥೆ ಮಾಡಿಕೊಂಡಿದೆ. ಜಿಂಕೆಗಳ ಸಂಖ್ಯೆ ಬೆಳೆಯದಂತೆ ಜಿಂಕೆಗಳನ್ನು ತನ್ನ ಆಹಾರ ಮಾಡಿಕೊಂಡಿವೆ ಹುಲಿಗಳು. ಆಗ ಹುಲ್ಲಿನ ರಕ್ಷಣೆ ಆಗುತ್ತದೆ. ಆ ಮೂಲಕ ಹುಲ್ಲು ಹಿಡಿದಿರುವ ನೀರಿನ ರಕ್ಷಣೆ ಕೂಡ. ಹೀಗೆ ಜಿಂಕೆಗೆ ಹುಲ್ಲು ಜೀವನ. ಜಿಂಕೆ ಹುಲಿಗೆ ಜೀವನ. ಹುಲಿ ಹುಲ್ಲು ಮತ್ತು ನೀರಿಗೆ ಜೀವನ. ನೀರಂತೂ ಎಲ್ಲದಕ್ಕೂ ಜೀವನ. ಆದ್ದರಿಂದಲೇ ನೀರಿಗೆ ಸಂಸ್ಕೃತದಲ್ಲಿ ಜೀವನ ಎಂದು ಕೋಶಕಾರರು ಕರೆದರು; “ಪಯ: ಕೀಲಾಲಮಮೃತಂ ಜೀವನಂ ಭುವನಂ ವನಮ್” ಎಂದು. (ಎಲ್ಲ ಕಡೆ ನೀರಿಗೆ ಹುಲಿಯೇ ಜೀವನ ಎಂದಲ್ಲ. ಗುಡ್ಡಗಾಡುಗಳ ಕಡೆ ಹುಲಿಯೂ ಕಾರಣ ಎಂದು ಮಾತ್ರ ತಾತ್ಪರ್ಯ.) ಹುಲ್ಲು-ಜಿಂಕೆ-ಹುಲಿಗಳ ಈ ಆಹಾರ ಸರಪಳಿಯೂ ಜೀವೋ ಜೀವಸ್ಯ ಜೀವನಂ ಎನ್ನುವುದರ ಅರ್ಥ. ಹಕ್ಕಿ-ಮತ್ತು-ಮರ ನಮ್ಮ ಶಾಲೆಗೆ ಪರಿಸರ ತಜ್ಞರನೇಕರು ಮಾರ್ಗದರ್ಶಕರಿದ್ದಾರೆ. ಅವರಲ್ಲಿ ನಿವೃತ್ತ ಅರಣ್ಯಾಧಿಕಾರಿಗಳಾದ ಶ್ರೀ ಯಲ್ಲಪ ರೆಡ್ಡಿಯವರು ಹಾಗು ದಿ.ಶ್ರೀ ಹರೀಶ ಭಟ್ ಮಕ್ಕಳಿಗೆ ಅನೇಕ ವಿಷಯಗಳಲ್ಲಿ ದಾರಿದೀಪಗಳಾಗಿದ್ದಾರೆ. (ನಮ್ಮೆಲ್ಲರ ಅಚ್ಚುಮೆಚ್ಚಿನ ವಿಜ್ಞಾನಿ ಹರೀಶ ಭಟ್ ಈಗ ನಮ್ಮೊಡನೆ ಇಲ್ಲದಿರುವುದು ದು:ಖದ ವಿಚಾರ) ಮಕ್ಕಳನ್ನು ಕುಮಾರಪರ್ವತಕ್ಕೆ ಕರೆದುಕೊಂಡು ಹೋದಾಗ, ಜ್ಞಾನಭಾರತಿಯ ಆವರಣದ ಜೀವ ವೈವಿಧ್ಯ ಉದ್ಯಾನಕ್ಕೆ ಕರೆದುಕೊಂಡು ಹೋದಾಗೆಲ್ಲ ಹಕ್ಕಿ ಮತ್ತು ಮರಗಳ ಸಂಬಂಧದ ಬಗ್ಗೆ ಇವರಿಬ್ಬರು ಆಗಾಗ ಹೇಳುವವರು. ನಮಗೆಲ್ಲ ತಿಳಿದಿರುವಂತೆ ಹಕ್ಕಿಗಳಿಗೆಲ್ಲ ಮರಗಳು ಆಶ್ರಯ. ಹಕ್ಕಿಗಳು ಅಲ್ಲಿ ತಂಗುತ್ತವೆ, ಗೂಡು ಕಟ್ಟುತ್ತವೆ. ಅಲ್ಲಿನ ಹಣ್ಣನ್ನು ತಿಂದು ಜೀವಿಸುತ್ತವೆ. ಹಾಗೆಯೇ ಮರಗಳ ಹುಟ್ಟಿಗೆ ಹಕ್ಕಿಗಳೂ ಕಾರಣಗಳಾಗಿವೆ. ಮರದ ಹಣ್ಣನ್ನು ತಿಂದು ಹಕ್ಕಿಗಳು ಎಲ್ಲೆಲ್ಲೂ ವಲಸಿ ಹೋಗುತ್ತವೆ. ಎಲ್ಲೋ ದಾರಿಯಲ್ಲಿ ಕಾಡಿನಲ್ಲಿ ಹಿಕ್ಕಿ ಹಾಕುತ್ತವೆ. ಅದರಲ್ಲಿ ಮರದ ಬೀಜ ಇದ್ದು ಪ್ರಕೃತಿಯ ಅನುಕೂಲಕ್ಕೆ ತಕ್ಕಂತೆ ಬೀಜ ಮೊಳಕೆಯೊಡೆದು ಗಿಡವಾಗಿ ಮರವಾಗುತ್ತದೆ. ಮರದಿಂದ ಹಕ್ಕಿ ಬದುಕಿದರೆ ಮರದ ಹುಟ್ಟಿಗೆ ಹಕ್ಕಿ ಕಾರಣಾವಾಗಿದೆ. ಹೀಗೆಯೆ ಪ್ರಕೃತಿಯಲ್ಲಿ ಎಲ್ಲದಕ್ಕೂ ಒಂದೊಂದು ಪರಸ್ಪರ ಕೊಂಡಿ ಇದ್ದೇ ಇರುತ್ತದೆ. ಪ್ರಾಚೀನ ಸಾಹಿತ್ಯದಲ್ಲಿ ಜೀವೋ ಜೀವಸ್ಯ ಜೀವನಮ್ ಒಂದು ವಿಶಾಲವಾದ ಮರ. ಅಲ್ಲಿ ಸಹಸ್ರಾರು ಹಕ್ಕಿಗಳು ಆಶ್ರಯ ಪಡೆದಿವೆ. ಅನೇಕ ಪ್ರಾಣಿಗಳು ಇದರ ನೆರಳಲ್ಲಿ ಸುಖಿಸುತ್ತಿವೆ. ಪೊಟರೆಗಳು ಅನೇಕ ಹಕ್ಕಿ-ಕೀಟಗಳ ತಾಣವಾಗಿದೆ. ಬುಡದ ಸಮೀಪ ಬಿಲದಲ್ಲಂತೂ ಸಾವಿರಾರು ಮೂಷಿಕಗಳು. ಹೀಗೆ ಅನೇಕ ಪ್ರಾಣಿ-ಪಕ್ಷಿಗಳಿಗೆ ಆಶ್ರಯವಾಗಿ ಆ ಮರ ನಿಂತಿತ್ತು. ಒಮ್ಮೆ ಆ ಮರ ಇರುವ ಕಾಡಿಗೆ ಬೇಡರು ಬಂದರು. ಮರದ ನೆರಳಲ್ಲಿದ್ದ ಜಿಂಕೆಗೆ ಗುರಿಯಿಟ್ಟು ವಿಷದ ಬಾಣದ ಪ್ರಯೋಗ ಮಾಡಿದರು. ಗುರಿ ತಪ್ಪಿತು. ಬಾಣ ಮರಕ್ಕೆ ತಾಗಿತು. ನಿರಾಶರಾಗಿ ಬೇಡರು ಹಿಂದಿರುಗಿದರು. ವಿಷವನುಂಡ ಮರ ಕೆಲ ದಿನಗಳ ನಂತರ ಕ್ಷೀಣಿಸತೊಡಗಿತು. ಎಲೆಗಳೆಲ್ಲ ಉದುರಿದವು. ಮರ ಬೋಳಾಯಿತು. ಮರದಲ್ಲಿನ ಹಕ್ಕಿಗಳೆಲ್ಲ ಬೇರೆ ಮರದ ಆಶ್ರಯ ಪಡೆದವು. ಪ್ರಾಣಿಗಳು ನೆರಳಿಗಾಗಿ ಇನ್ನೊಂದು ಮರದ ಮೊರೆ ಹೊಕ್ಕವು. ಆದರೆ ಒಂದು ಗಿಳಿ ಮಾತ್ರ ಆ ಮರವನ್ನು ಬಿಡಲೇ ಇಲ್ಲ. “ನಾನು ಹುಟ್ಟಿದ್ದು ಈ ಮರದಲ್ಲಿ. ಬೆಳೆದದ್ದು ಇಲ್ಲಿ, ಆಡಿದ್ದು ಇಲ್ಲಿ, ಹಾಡನ್ನು, ಹಾರುವುದನ್ನು ಕಲಿತದ್ದು ಇಲ್ಲಿಯೇ. ಈಗ ಈ ಮರಕ್ಕೆ ಕಷ್ಟ ಬಂದಿದೆ. ನನ್ನ ಬದುಕಿಗೆ ಕಾರಣವಾದ ಈ ಮರದ ಇಂಥ ದು:ಸ್ಥಿತಿಯ ಸಮಯದಲ್ಲಿ ಈ ಮರವನ್ನು ನಾನು ಬಿಡೆನು” ಎಂದು ಹಠ ಹಿಡಿದು ಕುಳಿತುಬಿಟ್ಟಿದೆ. ಮಳೆ, ಗಾಳಿ, ಬಿಸಿಲಿನ ಪರಿವೆಯೆ ಇಲ್ಲದೆ ತನ್ನ ಆಶ್ರಯದಾತನ ಜೊತೆಗಾರನಾಗಿದೆ. ಇದನ್ನು ಕಂಡ ಇಂದ್ರ ಅಲ್ಲಿಗೆ ಮಾರು ವೇಷದಿಂದ ಬಂದು –“ಓ ವಿಹಗ ! ಈ ಕಾಡಿನಲ್ಲಿ ಅನೇಕ ಮರಗಳಿವೆ. ಅವುಗಳನ್ನೆಲ್ಲ ಬಿಟ್ಟು ಈ ಬೋಳು ಮರದಲ್ಲೇಕೆ ಜೀವ ತೇಯುತ್ತಿರುವೆ. ಬೆರೆಡೆ ಹೋಗಿ ಬದುಕಬಾರದೆ?” ಎಂದು ಕೇಳುತ್ತಾನೆ. ಗಿಳಿಯು ಆ ಮರದ ಬಗೆಗಿನ ತನ್ನ ಬಾಂಧವ್ಯ ಮತ್ತು ಭಾವನೆಗಳನ್ನು ಹೇಳಿ, “ನೀನು ಇಂದ್ರ, ಎಲ್ಲವನ್ನೂ ತಿಳಿದು ಹೀಗೆ ಏಕೆ ಕೇಳುವೆ?” ಎಂದು ಕೇಳುತ್ತದೆ. ಮಾರುವೇಷದಲ್ಲಿದ್ದರೂ ನನ್ನ ಕಂಡುಹಿಡಿದ ಹಕ್ಕಿಯ ಬಗ್ಗೆ ಇಂದ್ರನಿಗೆ ಸಂತೋಷವಾಗಿ ವರವನ್ನು ಕೇಳು ಎಂದು ಹೇಳುತ್ತಾನೆ. ಆಗ ಹಕ್ಕಿ “ನನ್ನಂತಹ ಅನೇಕ ಪ್ರಾಣಿ-ಪಕ್ಷಿಗಳಿಗೆ ಜೀವನವಾದ ಈ ಮರ ಬದುಕಲಿ, ಮೊದಲಿನಂತೆ ಆಗಲಿ” ಎಂದು ಕೇಳುತ್ತದೆ. ಇಂದ್ರ ಕರುಣಿಸುತ್ತಾನೆ. ಮರ ಮತ್ತೆ ಚಿಗಿದು, ಹಸಿರ ಸೀರೆನ್ನುಡುತ್ತದೆ. ಮತ್ತೆ ಎಲ್ಲ ಹಕ್ಕಿಗಳ ಪ್ರಾಣಿಗಳ ಆಶ್ರಯವಾಗುತ್ತದೆ. ಇದು ಮಹಾಭಾರದ ಒಂದು ಅಧ್ಯಾಯದಲ್ಲಿ ಬರುವ ಕಥೆ. ಹಕ್ಕಿಗೆ ಮರ ಆಶ್ರಯವಾಗಿತ್ತು. ಹಕ್ಕಿಯಿಂದ ಮರ ಮತ್ತೆ ಬದುಕಿತು. ಹೀಗೆಯೆ ಜೀವನದಲ್ಲಿ ಪರಸ್ಪರ ಸಹಾಯ ಮಾಡಿಕೊಂಡು ಹೊಂದಿಕೊಂಡಿರುವುದೇ ಜೀವೋ ಜೀವಸ್ಯ ಜೀವನಮ್. ಇಂತಹ ಕಥೆಗಳ ಆಗರ ಮಹಾಭಾರತ. ಗೀತೆಯ ಜಗಚ್ಚಕ್ರ ಒಂದನ್ನೊಂದು ಅವಲಂಬಿಸಿ ಈ ಜಗತ್ತು ಇದೆ ಎನ್ನುವುದನ್ನು ಗೀತಾಚಾರ್ಯ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾನೆ.ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವ: | ಯಜ್ಞಾದ್ಭವತಿ ಪರ್ಜನ್ಯೋ ಯಜ್ಞ: ಕರ್ಮಸಮುದ್ಭವ: | ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ || (ಗೀತೆ.೩.೪-೫) ಇಲ್ಲಿ ಭೂತಗಳು ಅಂದರೆ ಜೀವಿಗಳು ಎಂದರ್ಥ. ಜೀವಿಗಳು ಅನ್ನವನ್ನು ತಿಂದು ಬದುಕುತ್ತವೆ. ಆ ಅನ್ನ ಹುಟ್ಟುವುದು ಮಳೆಯಿಂದ. ಮಳೆ ಬರುವುದು