A 10 year journey of Purnapramati

Wednesday, September 4th, 2019

Exploring diverse realities “Purnapramati – A Center for Integrated Learning” is a platform to different approaches exploring through experiences. Purnapramati is completing its 10th Anniversary (Dashamanotsava). It’s a good time to retrospect our journey and also contemplate on future direction. The idea of Purnapramati was seeded in 2010 based on experience, explorations followed by serious pursuits in studies and research. The efforts, the time , the energy, the thoughts, the passion, the commitment put in by all the concerned people to start and grow Purnapramati is highly commendable. As Prof D.Prahladacharya says “it’s quite possible to sow the seeds of values of life in the innocent minds of young students who, in large number every year are admitted to seek primary education. Gradually it’s also possible to introduce such a curriculum by which they would become well aware of the rich Indian knowledge heritage and feel proud of it. In relation to holistic study of Prakruti and Prana, an integrated learning as emphasised by Shri Anandateertha needs to be understood. Prof Navajyothi Singh focussed on bridging the traditional and modern system of education. Based on this thinking Purnapramati started nurturing its seed. It started germinating with core values representing the essence of “Eternal Dharma” and is being guided by the people who can articulate and practice this in tune with contemporary social needs. Thus successfully its stepping into its 10th year. In its journey it started with 37 children along with 10 teachers. Now reach to the height of 450 students around 50 teachers. As Purnapramati has envisioned, it has its progress. The research work in identifying manuscripts has added clarity and has brought confidence. This integrated learning has expanded the dimension of knowing reality. Expansion implies multiple lences, while reality mandates interlinkages in those domains. The Purnapramati team of people sharing common goals for larger good, with similar values, has been the driving force. The teachers are the real actors. With the guidance of hundreds of elders, friends, well-wishers and parents , Purnapramati formulated certain specification with “Sankalpa”. This was followed and blessed by one of our greatest social philosopher Shri Vishweshateertha Swamiji. Purnapramati also focused on personality development along with the organizational development. The efforts were made to ensure all members involved, play a role according to their strengths, i.e. “Swadharma” a continuous learning for all, i.e. students, teachers, parents, members and community. An renowned educationist Dr.Gururaja Karajagi helped the parents in understanding the integrated curriculum in one of his orientations. Purnapramati knows that a strong conviction needs some more time. However Purnapramati realizes that the collaboration of parents, children, teachers is not an short term, it’s a long term process. It needs decade long Purnapramati assures and has patience and trust till the seed transforms into tree full of flowers and fruits. A peek into Purnapramati during 2010-11 Our infant steps…..  

ಚಿಂತಕರ ಮಂಥನದಲ್ಲಿ ಪೂರ್ಣಪ್ರಮತಿ

Wednesday, September 4th, 2019

ಧಾರ್ಮಿಕ ಹಾಗೂ ಸುಸಂಸ್ಕೃತ ಜೀವನಕ್ಕಾಗಿ, ಶಾಂತಿ ಸಮೃದ್ಧಿಯ ಬಾಳ್ವೆಗಾಗಿ ನಾವು ನಮ್ಮ ಮಕ್ಕಳ ಜೀವನವನ್ನು ರೂಪಿಸಬೇಕಾಗಿದೆ. ಧರ್ಮದ ನೆಲೆಯಲ್ಲಿ ಶಿಕ್ಷಣ ಸಿಕ್ಕಾಗ ವಿದ್ಯಾರ್ಥಿ ಉತ್ತಮ ಚಿಂತಕನಾಗುತ್ತಾನೆ. ಶಿಕ್ಷಣದ ಮುಖೇನ ಸಮೃದ್ಧ ಜೀವನಕ್ಕೆ ಪೂರಕವಾದ ನಂಬಿಕೆಗಳನ್ನು ಬಲಪಡಿಸಿಕೊಳ್ಳುತ್ತಾನೆ. ಆದರೆ -“ಪ್ರಾಚೀನ ಋಷಿಮುನಿಗಳ ಚಿಂತನೆಯೆಲ್ಲವೂ ಅಪ್ರಬುದ್ಧ, ನಮ್ಮ ಹಿರಿಯರೆಲ್ಲಾ ಮೂಢ ನಂಬಿಕೆಗಳ ದಾಸರು” ಎನ್ನುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಆಂಗ್ಲ ಮಾಧ್ಯಮದ ಶಿಕ್ಷಣ ಪದ್ಧತಿಯನ್ನು ಒಪ್ಪಿಕೊಳ್ಳಬೇಕಾದ ಸಾಮಾಜಿಕ, ಕೌಟಂಬಿಕ ಒತ್ತಡ ಎಲ್ಲೆಲ್ಲೂ ಹರಡಿದೆ. ಜ್ಞಾನವೆನ್ನುವುದು ಸ್ಪರ್ಧೆಗೆ ಮೀಸಲಾಗಿದೆ. ಮಕ್ಕಳು ಕಲಿಕೆಯ ಆತುರದಲ್ಲಿ ಜೀವನದ ಮೌಲ್ಯಗಳ ಚಿಂತನೆಗಳಿಗಿಂತಲೂ ತೋರಿಕೆಯ ಬದುಕಿನ ದಾಸರಾಗುತ್ತಿದ್ದಾರೆ. ನಾನು ಪೂರ್ಣಪ್ರಮತಿಗೆ ಈ ವರ್ಷವಷ್ಟೇ ಸೇರಿಕೊಂಡೆ. ಇಲ್ಲಿನ ನನ್ನ ಕೆಲವು ಅನಿಸಿಕೆಗಳನ್ನು ಹೇಳಬಯಸುತ್ತೇನೆ. ನಾನು ನನ್ನ ಅಧ್ಯಾಪಕ ವೃತ್ತಿಯಲ್ಲಿ ಅನೇಕ ಶಾಲೆ, ಕಾಲೇಜುಗಳಲ್ಲಿ, ಅನೇಕ ರೀತಿಯ ಬೋಧನಾಕ್ರಮವನ್ನು ಕಂಡಿದ್ದೇನೆ. ಎಲ್ಲಾ ಬೋಧನಾಕ್ರಮಗಳು ಮನುಷ್ಯನ ಮೂಲ ಚಿಂತನೆಗೆ ಎಲ್ಲಿಯೂ ಅವಕಾಶವಿಲ್ಲದಂತೆ ಸಾಮಾಜಿಕ ಬದುಕಿಗೆ ಮಾತ್ರ ಸೀಮಿತವಾಗಿಯೇ ಇದೆ. ಮಕ್ಕಳಲ್ಲಿ ಏಳುವ ಸಾವಿರಾರು ಪ್ರಶ್ನೆಗಳಿಗೆ ಪ್ರತಿ ಹಂತದಲ್ಲೂ ಗಮನಿಸುವ ಹಲವಾರು ಗೊಂದಲಗಳಿಗೆ ಉತ್ತರ ಸಿಗದೆ ಮಕ್ಕಳಿಗೆ ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದುಹೋಗುತ್ತಿವೆ. ಮಕ್ಕಳು ಹಿಂದಿನವರ ಆಚಾರವಿಚಾರಗಳು ಆಧಾರವಿಲ್ಲದ್ದು ಎನ್ನುವ ನಿಟ್ಟಿನಲ್ಲಿ ಯೋಚಿಸುವಂತಾಗುತ್ತಿದೆ. ಆಧುನಿಕ ಪಠ್ಯ ಕ್ರಮದಲ್ಲಿ ತಮ್ಮ  ಮಾತೃಭಾಷೆಯನ್ನು ಪಕ್ಕಕ್ಕಿಟ್ಟು ಆಂಗ್ಲಭಾಷೆಯನ್ನು ಕಷ್ಟಪಟ್ಟಾದರೂ ಕಲಿಯಲೇಬೇಕೆಂಬ ಒತ್ತಡದಲ್ಲಿ ಮಕ್ಕಳ ಮನೋವಿಕಾಸದಲ್ಲಿ ಮುಕ್ತತೆ ಮರೆಯಾಗುತ್ತಿದೆ. ಒಂದು ರೀತಿಯ ಬಂಧನವೆಂಬಂತೆ ಕಲಿಕೆಯ ಬೆಳವಣಿಗೆಯಾಗುತ್ತಿದೆ. ಉದ್ಯೋಗಕ್ಕಾಗಿ ವಿದ್ಯೆ ಎಂಬುದು ಎಲ್ಲೆಡೆಯಲ್ಲೂ ರುಜುವಾಗುತ್ತಿದೆ. ಜ್ಞಾನ, ವಿದ್ಯೆ -ಇವುಗಳ ನಿಜವಾದ ಅರ್ಥವೇ ಅಳಿಸಿಹೋಗುತ್ತಿದೆ. ಮನಸ್ಸಿನಲ್ಲಿ ಇಂಥ ನೂರಾರು ಆಲೋಚನೆಗಳು ವಿದ್ಯಾವಂತರನ್ನು ಕಾಡಿದರೂ ಪ್ರವಾಹ ಬಂದ ದಿಕ್ಕಿಗೇ ನೀರು ನುಗ್ಗುವಂತೆ ಇಂದಿನ ವಿದ್ಯಾವಂತ ಯುವ ಪೀಳಿಗೆಯೂ ಅತ್ತಕಡೆ ನುಗ್ಗುತ್ತಿದೆ. ಇಂದಿನ ದಿನಗಳಲ್ಲಿ ಶಾಲೆ ಎಂಬುದು ಒಂದು ಉತ್ತಮ ವ್ಯಾಪಾರದ ಅಂಗವಾಗಿ ದಿಢೀರನೆ ಹಣ ಗಳಿಸಬಹುದಂಥ ಮಾರ್ಗವಾಗಿದೆ. ಹಣವಿದ್ದವರೆಲ್ಲಾ ವಿದ್ಯಾಸಂಸ್ಥೆಗಳನ್ನು ತೆರೆಯುತ್ತಿದ್ದಾರೆ. ತಮಗಿಷ್ಟ ಬಂದ ರೀತಿಯಲ್ಲಿ ವ್ಯಾಪಾರದ ಕುಶಲತೆಗಳನ್ನು ಅದರಲ್ಲಿ ಅಳವಡಿಸಿಕೊಂಡು ಮಕ್ಕಳನ್ನು ದಾಳವಾಗಿ ಬಳಸಿಕೊಂಡು ಹಣ ಸಂಪಾದನೆಯ ಹುಚ್ಚು ಭರದಲ್ಲಿ ಸಾಗುತ್ತಿದ್ದಾರೆ. ಇದರಿಂದ ನಮ್ಮ ದೇಶದ ಮುಂದಿನ ಜನಾಂಗದ ಪರಿಸ್ಥಿತಿ ಎಲ್ಲಿ ಹೋಗಿ ಮುಟ್ಟುತ್ತದೆ ಎನ್ನುವ ಕಿಂಚಿತ್ತೂ ಪ್ರಜ್ಞೆ ಇಲ್ಲದಂತೆ ನಾಯಿಕೊಡೆಗಳಂತೆ ಎಲ್ಲೆಲ್ಲೂ ಶಾಲೆಗಳು ತಲೆ ಎತ್ತುತ್ತಿದೆ.  ಇಂಥಹ ಒಂದು ವಿಷಮ ಪರಿಸ್ಥಿತಿಯಲ್ಲಿ ಚಿಂತನ ಶೀಲ ಕೆಲವು ಯುವಕರು ಒಂದುಗೂಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯತ್ತ ಸಾಗಲು ಚಿಂತನೆ ನಡೆಸಿದ್ದಾರೆ. ಅಂತಹ ಚಿಂತನಶೀಲರ ಸಮ್ಮಿಲನವೇ ಪೂರ್ಣಪ್ರಮತಿ. ಇದು ಪೂರ್ವಜರ ಪರಂಪರೆಯ ಬೀಜಗಳನ್ನು ಮಕ್ಕಳಲ್ಲಿ ಬಿತ್ತುವ ಸಾಹಸದ ಕಾರ್ಯ ಕೈಗೊಂಡಿದೆ. ನಮ್ಮ ಮಹಾಗ್ರಂಥಗಳಾದ ರಾಮಾಯಣ, ಮಹಾಭಾರತ, ಭಾಗವತಗಳ ಮುಖೇನ ಪಾಠ ಮಾಡುವ, ಜ್ಞಾನಾರ್ಜನೆಗೆ ಸಹಾಯಕವಾಗುವ ವಿವಿಧ ನೂತನ ಶೈಲಿಗಳನ್ನು ಬೋಧನಾಕ್ರಮದಲ್ಲಿ ಅಳವಡಿಸಿ ಯೋಜಿಸಿದೆ. ಮೂಲ ಧಾರ್ಮಿಕ ತತ್ವಗಳು ಮಹಾಗ್ರಂಥಗಳಲ್ಲಿ ಸಂಸ್ಕೃತದಲ್ಲಿರುವುದರಿಂದ ಮಕ್ಕಳು ಮೂಲದಿಂದಲೇ ಅದರ ಜ್ಞಾನವನ್ನು ಪಡೆಯಬೇಕೆಂಬ ಹಂಬಲ ಹಾಗೂ ಆ ನಿಟ್ಟಿನಲ್ಲಿ ಮಕ್ಕಳಿಗೆ ಮೂರು-ನಾಲ್ಕು ವಯಸ್ಸಿನಿಂದಲೇ ಸಂಸ್ಕೃತ ಪಾಠದ ಅಧ್ಯಯನ ಪ್ರಾರಂಭಿಸಿದೆ. ಉನ್ನತ ಮಟ್ಟದ ಹುದ್ದೆಗಳಲ್ಲಿದ್ದರೂ ತತ್ವಜ್ಞಾನಿಗಳ ಒಡನಾಟದಲ್ಲಿ ನಿರಂತರವಾಗಿ ಸಮಾಲೋಚಿಸಿ ಈ ಯುವಕರ ತಂಡ ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಪಾರಂಪರಿಕ ಹಾಗೂ  ಆಧುನಿಕ ಸಂಘಟಿತ ವಿದ್ಯಾ ಪಠ್ಯಕ್ರಮದ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡಿದೆ. ಪೂರ್ಣಪ್ರಮತಿ ತಮ್ಮ ಪೂರ್ವಜರ ಗುರುಕುಲದ ಪದ್ಧತಿಯಲ್ಲಿನ ಅನೇಕ ವಿಧಿವಿಧಾನಗಳಲ್ಲಿ ಸತ್ಯತೆಯ ಶೋಧ ನಡೆಸಿ ಅದರ ತಿರುಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಹಾಗೂ ಬೆಳೆಸಲು ಶ್ರಮವಹಿಸಿದೆ. ಈ ಸಂಸ್ಥೆಯ ಎಲ್ಲಾ ಚಿಂತಕರ ದೃಷ್ಟಿಯೂ ಪರಂಪರೆಯ ಬೀಜದ ಸಂರಕ್ಷಣೆಯ ಕಡೆಗೆ ನೆಟ್ಟಿರುವುದರಿಂದ ಎಲ್ಲರ ಗುರಿಯೂ ಒಂದೇ ಆಗಿ ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಿಷಯಗಳಲ್ಲಿ ಸಂಬಂಧಿಸಿದ ಪರಿಣಿತರ ಸಲಹೆ ಪಡೆದು ಅದನ್ನು ಕಾರ್ಯರೂಪಕ್ಕೆ ತರುವುದು ಈ ಶಾಲೆಯ ವಿಶೇಷತೆಯಾಗಿದೆ.  ಇನ್ನು ಇಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಕ್ರಮದ ಬಗ್ಗೆ ತಿಳಿಸಲು ಹೋದರೆ, ಇಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ತಮ್ಮೊಂದಿಗಿನವರೊಂದಿಗೆ ಸ್ವಚ್ಛಂದ ವಾತಾವರಣದಲ್ಲಿ ಸುಂದರವಾಗಿ ಅರಳುತ್ತಿರುವ ಪುಷ್ಪಗಳೆಂದೆನಿಸುತ್ತಾರೆ.  ಮನಸ್ಸಿನಲ್ಲಿ ಹೊಳೆವ ವಿಚಾರಗಳನ್ನು ನಿರ್ಭೀತಿಯಿಂದ ಅಕ್ಕಂದಿರೊಂದಿಗೆ ವಿಮರ್ಶಿಸುತ್ತಾರೆ. [ಇಲ್ಲಿ ಅಧ್ಯಾಪಕರನ್ನು ಅಕ್ಕ,ಅಣ್ಣ, ಎಂದು ಸಂಭೋಧಿಸಲಾಗುತ್ತದೆ.] ಒಂದು ರೀತಿಯ ಆತ್ಮೀಯತೆ ಇಲ್ಲಿ ಮನೆ ಮಾಡಿದೆ. ಮಕ್ಕಳ ಎಲ್ಲಾ ರೀತಿಯ ಪ್ರತಿಭೆಗೂ ಇಲ್ಲಿ ಪ್ರೋತ್ಸಾಹವಿದೆ. ಮಕ್ಕಳು ತಮ್ಮ ಅಭಿರುಚಿಗೆ ತಕ್ಕಂತೆ ಪಠ್ಯೇತರ ಕ್ರಮವನ್ನು ಆರಿಸಿಕೊಂಡಿದ್ದಾರೆ. ಒಂದೇ ಸೂರಿನಡಿಯಲ್ಲಿ ಮಕ್ಕಳು ವೀಣೆ, ಮೃದಂಗ, ತಬಲ, ಕಲೆ, ಹೀಗೆ ತಮ್ಮ ಆಸಕ್ತ ವಲಯದಲ್ಲಿ ಪರಿಣಿತರಿಂದ ಐಚ್ಚಿಕ ತರಬೇತಿ ಪಡೆಯುತ್ತಿದ್ದಾರೆ.  ಈ ಶಾಲೆಯಲ್ಲಿ ನಾನು ಹೆಚ್ಚು ಗಮನಿಸಿದ್ದೆಂದರೆ ಯಾವುದೇ ಯೋಜನೆ ರೂಪಿಸಿದರೂ ಅದರ ಆಳವನ್ನು ಹೊಕ್ಕು ಅದರ ಪೂರ್ಣ ಪ್ರಯೋಜನ ಮಕ್ಕಳಿಗೆ ಅತೀ ದೀರ್ಘಕಾಲದವರೆಗೂ ದೊರೆಯುವಂತಾಗಬೇಕು  ಎಂಬ ದೂರದೃಷ್ಟಿಯ ಚಿಂತನೆ. ಹಾಗಾಗಿ ಯಾವುದನ್ನೇ ಕೈಗೆತ್ತಿಕೊಂಡರೂ ಅದು ಸಂಪೂರ್ಣವಾಗಿ ಉತ್ತಮ ರೀತಿಯಲ್ಲಿ ಯೋಜಿತವಾಗಿ ಸರಿಯಾಗಿ ಕ್ರಮದಲ್ಲಿ ರೂಪುಗೊಳ್ಳುತ್ತಿದೆ. ಪ್ರತಿಯೊಂದು ಪ್ರಯೋಗವನ್ನು ಕಾರ್ಯರೂಪಕ್ಕೆ ತರುವ ಮುನ್ನ ಅದರ ಸಾಧ್ಯತೆ ಭಾದ್ಯತೆಗಳನ್ನು ಚಿಂತನೆ ನಡೆಸಿ ನಂತರ ಕಾರ್ಯರೂಪಕ್ಕೆ ತರುವುದು ಸಂಸ್ಥೆಯ ಚಿಂತಕರ ದಿಟ್ಟ ನಿಲುವನ್ನು ಸೃಷ್ಠೀಕರಿಸುತ್ತದೆ.  ಇಲ್ಲಿ ಮಕ್ಕಳನ್ನು ಯಾವ ರೀತಿಯಲ್ಲೂ ವಿಭಾಗಿಸದೆ, ನಿಧಾನವಾಗಿ ಕಲಿಯುವ ಮಕ್ಕಳಿಗೆ ನಿಧಾನವಾಗಿ, ವೇಗದಲ್ಲಿ ಗ್ರಹಿಸುವ ಮಕ್ಕಳಿಗೆ ಅಷ್ಟೇ ತೀವ್ರಗತಿಯಲ್ಲಿ ಬೋಧಿಸುವ ಕ್ರಮ ವಿಶಿಷ್ಟವಾಗಿದೆ. ಮಕ್ಕಳು ಯಾವ ಸ್ಪರ್ಧೆಗೂ ಒಳಪಡದಿರುವುದರಿಂದ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆ ಅಥವಾ ಮೇಲರಿಮೆಯ ಭಾವ ಹುಟ್ಟುವಲ್ಲಿ ಆಸ್ಪದವೇ ಇಲ್ಲದಂತಾಗಿದೆ. ಇದರಿಂದಾಗಿ ಮಕ್ಕಳು ಮನೆಯಲ್ಲಿ ಹಿರಿಯರು ಕಿರಿಯರಿಗೆ ಸಹಾಯ ಮಾಡುವಂತೆ ಮಕ್ಕಳು ತಮ್ಮೊಂದಿಗಿನ ಸಹಪಾಠಿಗಳಿಗೆ ತಾವೇ ಸಹಾಯ ಮಾಡುತ್ತಾ ಕಲಿಕೆಯ ಶ್ರೇಷ್ಠತೆಯನ್ನು ಮೆರೆಯುತ್ತಿದ್ದಾರೆ. ಇದು ಮಕ್ಕಳ ಕಲಿಕೆಗೆ ಮಾತ್ರ ಸೀಮಿತವಾಗದೆ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿದೆ. ಮಕ್ಕಳು ಒಬ್ಬರನ್ನೊಬ್ಬರು ಸಂಪೂರ್ಣ ಅರ್ಥಮಾಡಿಕೊಳ್ಳಬಲ್ಲವರಾಗಿದ್ದಾರೆ. ಇದರಿಂದಾಗಿ ಇಲ್ಲಿ ಮಕ್ಕಳಿಗೆ ಅಧ್ಯಾಪಕರು ಮಾರ್ಗದರ್ಶಕರೇ ಹೊರತು ಆದೇಶ ಕೊಡುವವರಲ್ಲ ಎನ್ನುವ ಭಾವ ಎತ್ತಿ ಕಾಣುತ್ತದೆ. ಇದು ವಿದ್ಯಾರ್ಥಿಗಳನ್ನು ಹೆಚ್ಚು ಸ್ವತಂತ್ರವಾಗಿ ಬೆಳೆಸುತ್ತಿದೆ. ಮಾನಸಿಕ ಧೃಡತೆಯನ್ನು ಹೆಚ್ಚಿಸುತ್ತಿದೆ.  ಶಾಲಾ ಚಟುವಟಿಕೆಗಳಲ್ಲಿ ಮುಖ್ಯವಾಗಿ ಆಚರಿಸುವ ಹಬ್ಬಗಳೆಂದರೆ ಭಾಗೀರಥಿ ಜಯಂತಿ, ಸೀತಾ ಜಯಂತಿ, ವಾಮನ ಜಯಂತಿ ಇತ್ಯಾದಿ. ಈ ಹಬ್ಬಗಳೂ ಕೂಡ ನಮ್ಮ ಪೂರ್ವಿಕರ ಸಂದೇಶವನ್ನು ಸಾರುವಂಥದ್ದಾಗಿದೆ. ಈ ಹಬ್ಬಗಳು ಪ್ರಕೃತಿ ಮಾತೆಗೆ ಆದ್ಯತೆ ನೀಡುತ್ತವೆ. ಶಾಲೆಯು ಹೊರ ಆಡಂಬರಕ್ಕೆ ಒಂದಿಷ್ಟೂ ಆದ್ಯತೆ ನೀಡದಿರುವುದು ಇಲ್ಲಿ ಗಮನಾರ್ಹ ಎಂದೇ ಹೇಳಬಹುದು. ಆಧುನಿಕ, ಸುಸಜ್ಜಿತ ಪೀಠೋಪಕರಣಗಳು ಈ ಶಾಲೆಯಲ್ಲಿ ಕಂಡು ಬರುವುದಿಲ್ಲ. ಮಕ್ಕಳು ಉತ್ತಮ ಅಭ್ಯಾಸವೆಂಬಂತೆ ಚಾಪೆ ಹಾಸಿ ಚಾಪೆ ಮೇಲೆ ಇಟ್ಟುಕೊಂಡು ಬರೆಯಲು ಓದಲು ಅನುಕೂಲವಾಗುವಂತೆ ಕೆಳಗೇ ಕೂಡುತ್ತಾರೆ. ಬಳಕೆಗೆ ಎಷ್ಟು ಅಗತ್ಯವೋ ಅಷ್ಟು ತಾಂತ್ರಿಕ ಉಪಕರಣಗಳ ವ್ಯವಸ್ಥೆಯಿದೆ. ಪುಸ್ತಕ ಭಂಡಾರವಂತೂ ಹೇರಳವಾಗಿದೆ. ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಬೇಕಾದ ಪುಸ್ತಕ ತೆಗೆದು ಓದುವ ಸ್ವಾತಂತ್ರ್ಯವಿದೆ.  ಎಲ್ಲಕ್ಕಿಂತ ನನ್ನ ಮನಸ್ಸಿಗೆ ಮುದ ನೀಡಿದ ಸಂಗತಿಯೆಂದರೆ ಬೆಳಗಿನ ಪ್ರಾರ್ಥನೆ, ಶಾಲೆಯ ಶಿರೋಮಣಿಯು ಎಲ್ಲೆಡೆ ದೀಪ ಹಚ್ಚುತ್ತಾಳೆ. ಮಕ್ಕಳು ಸಾಲಾಗಿ ಕುಳಿತು ಪ್ರತಿದಿನವೂ ಭಗವದ್ಗೀತೆಯ ಎರಡು ಅಧ್ಯಾಯಗಳನ್ನು ಪಾರಾಯಣ ಮಾಡುತ್ತಾರೆ. ನಂತರದಲ್ಲಿ ಪಂಚಾಂಗ ಶ್ರವಣವಾಗುತ್ತದೆ. ಅದಾದ ನಂತರ ಸಂಸ್ಕೃತ ಪಂಡಿತರಿಂದ ಹತ್ತು ನಿಮಿಷಗಳ ಕಾಲ ಭಗವದ್ಗೀತೆಯ ತತ್ವಚಿಂತನೆ ನಡೆಯುತ್ತದೆ. ನಂತರದಲ್ಲಿ ನಿತ್ಯದ ಪ್ರಾರ್ಥನೆ ಹಾಗೂ ರಾಷ್ಟ್ರಗೀತೆ, ಮುಂಜಾನೆಯಲ್ಲಿ ಚದುರಿದ ಮನಸ್ಸು ಭಗವಂತನ ಪ್ರಾರ್ಥನೆಯಿಂದ ಸಮಸ್ಥಿತಿಗೆ ಬಂದು ನಿಂತು ಮಕ್ಕಳು ಕಲಿಕೆಗೆ ಮಾನಸಿಕ ತಯಾರಿ ನಡೆಸುವ ಈ ಬಗೆ ನಿಜಕ್ಕೂ ನನಗೆ ಬಹಳ ಇಷ್ಟವಾಯಿತು. ಪಾರಾಯಣಕ್ಕೆ ಮಕ್ಕಳ ಬಳಿ ಯಾವ ಪುಸ್ತಕವೂ ಇಲ್ಲದೆ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳು ಮಕ್ಕಳಿಗೆ ನಾಲಿಗೆ ತುದಿಯಲ್ಲಿ ಸರಾಗವಾಗಿ ಹರಿಯುವ ವೈಖರಿ ನನ್ನಲ್ಲಿ ಅಚ್ಚರಿಮೂಡಿಸಿತು. ಇಂದಿನ ಶಾಲಾವ್ಯವಸ್ಥೆಯಲ್ಲಿ ಈ ಪೂರ್ಣಪ್ರಮತಿ ಒಂದು ಅನರ್ಘ್ಯ ರತ್ನ ಎನ್ನಿಸಿತು. ಇಷ್ಟೇ ಅಲ್ಲದೇ ಮಕ್ಕಳ ಊಟದ ವೇಳೆಯಲ್ಲೂ ಸಂಸ್ಕೃತ ಅಧ್ಯಾಪಕರು ತತ್ವಚಿಂತನೆ ನಡೆಸುತ್ತಾರೆ.  ಬೆಳೆಯುವ ಮಕ್ಕಳ ಮನಸ್ಸು ನಿರಂತರವಾಗಿ ಇಂಥ ಚಿಂತನೆಯಲ್ಲಿ ತೊಡಗಿದಾಗ ಮಕ್ಕಳಲ್ಲಿ ಸರಿ ತಪ್ಪುಗಳ ವಿವೇಚನಾ ಶಕ್ತಿ ವೃದ್ಧಿಸುತ್ತದೆ. ಪ್ರಬುದ್ಧತೆ ಬೆಳೆಯುತ್ತದೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚು ಸಮರ್ಥರಾಗುತ್ತಾರೆ. ಆಂತರಿಕ ಬಲವರ್ಧನೆಯಾಗುತ್ತದೆ. ಪೂರ್ಣ ಪ್ರಮತಿಯ ಮಕ್ಕಳು ಇತರೆ ಮಕ್ಕಳಿಗಿಂತಲೂ ಭಿನ್ನ ಎಂಬುದನ್ನು ನಾನು ಮನಗಂಡೆ. ಮಕ್ಕಳು ತಮ್ಮ ಮಾತಿನಲ್ಲಿ ನಡೆಯಲ್ಲಿ ಮತ್ತೊಬ್ಬರಿಗೆ ನೋವಾಗದಂತೆ ನಡೆದುಕೊಳ್ಳುವುದನ್ನೂ ಗಮನಿಸಿದೆ. ಇಂಥ ಸೂಕ್ಷ್ಮ ವಿಚಾರಗಳು ಇಷ್ಟು ಚಿಕ್ಕ ವಯಸ್ಸಿನಲ್ಲೇ ಸ್ವಾಭಾವಿಕವಾಗಿ ಕಲಿಯುವ ವಾತಾವರಣ ಪೂರ್ಣಪ್ರಮತಿಯ ಮೌಲ್ಯಾಧಾರಿತ ಬೋಧನೆಗೆ ಸಾಕ್ಷಿಯಾಗಿದೆ. ಇಂಥ ಹಲವು ಉದಾಹರಣೆಗಳನ್ನು ನಾನು ಪ್ರತಿನಿತ್ಯವೂ ಮಕ್ಕಳಲ್ಲಿ ಗಮನಿಸುತ್ತಿರುವೆ. ಇತರ ಶಾಲೆಗಳಲ್ಲಿ ಮಕ್ಕಳ ನಡವಳಿಕೆಗಳು ಸ್ವಾರ್ಥಕ್ಕೆ ಹೆಚ್ಚು ಸೀಮಿತವಾಗಿದ್ದು ಪ್ರೋತ್ಸಾಹವೂ, ಅದಕ್ಕೇ ಹೆಚ್ಚಾಗಿರುವಂಥಹುದು. ಆದರೆ ಇಲ್ಲಿ ಮಕ್ಕಳು ಮನೆಯಲ್ಲಿ ಬೆಳೆಯುವ ಹಾಗೆ ಒಗ್ಗಟ್ಟಿನಲ್ಲಿ ಎಲ್ಲರೊಡಗೂಡಿ ಬೆಳೆಯುತ್ತಿದ್ದಾರೆ ಎಂಬುದು ಸತ್ಯ ಎಂದು ಹೇಳಬಲ್ಲೆ. ಮಕ್ಕಳ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವ ಶಿಕ್ಷಕ ವರ್ಗದವರ ಸಂಸ್ಕಾರವೂ ಇದಕ್ಕೆ ಪೂರಕವಾಗಿದೆ. ಒಟ್ಟಿನಲ್ಲಿ ಪೂರ್ಣಪ್ರಮತಿ ಮಕ್ಕಳ ಬೆಳವಣಿಗೆಯಲ್ಲಿ ಅತ್ಯಂತ ಮುಖ್ಯವಾದ ಮೌಲ್ಯಾಧಾರಿತ ಆಂತರಿಕ ಶಕ್ತಿಯ ಬೆಳವಣಿಗೆಗೆ ಭದ್ರ ಬುನಾದಿ ಹಾಕುತ್ತಿದೆ.  ಇಂತಹ ಒಂದು ಉತ್ಕೃಷ್ಟ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪೂರ್ಣಪ್ರಮತಿಯ ಪೋಷಕರು ಅತೀ ಹೆಚ್ಚಿನ ಪಾತ್ರ ವಹಿಸುತ್ತಾರೆ. ಪೋಷಕರೂ ಹೆಚ್ಚು ಸಂಸ್ಕಾರವಂತರಾಗಿರುವುದರಿಂದಲೇ ಪೂರ್ಣಪ್ರಮತಿ ಇಂಥ ನಿಟ್ಟಿನಲ್ಲಿ ಧೃಡವಾಗಿ ಹೆಜ್ಜೆ ಇಡುವಲ್ಲಿ ಸಹಕಾರಿಯಾಗಿದೆ. ಪೂರ್ಣಪ್ರಮತಿಯ ನೂರಾರು ಯೋಜನೆಗಳು ಹೀಗೆಯೇ ಸಾಕಾರಗೊಳ್ಳಬೇಕು. ಈ ದೃಷ್ಟಿಯಿಂದಲೇ ಪೂರ್ಣಪ್ರಮತಿ ಆಸಕ್ತ ಅಧ್ಯಾಪಕರನ್ನು ಸದಾ ತನ್ನೆಡೆಗೆ ಆಹ್ವಾನಿಸುತ್ತಲೇ ಇರುತ್ತದೆ. ಇಂಥ ಪೂರ್ಣಪ್ರಮತಿ ಮೌಲ್ಯಗಳ ನೀರೆರೆದು ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದು ಸಂಪದ್ಭರಿತವಾಗಬೇಕು ಎನ್ನುವುದೇ ನನ್ನ ಆಶಯ.   ಅಖಿಲಾ ವಾಸು  ಪ್ರೌಢಶಾಲಾ ಅಧ್ಯಾಪಕಿ

Our experiences in Purnapramati

Wednesday, September 4th, 2019

(We have been a part of Purnapramati for the past 8 years. In this article we have tried to share some of our experiences which impacted us the most and shaped us in Purnapramati.)               When we joined Purnapramati in our 4th standard, the school felt very small compared to our earlier ones and number of students in each class was very minimal too. The teachers were very caring. It took a little while to get adjusted to calling our teachers akka and anna and then, it was as if they became our akkas and annas. The atmosphere was very free: we could talk and discuss with our teachers without apprehension. We also started learning Samskruta starting from names of various objects and the basic Shabdas & Dhaatus as well as subhAshitAs. This adhyayana of Samskruta has stayed with us till date, and now, we are about to write Sahitya pareeksha of Sanskrit University this year. It was in our 1st year that we were introduced to 2 special subjects which were unique to Purnapramati: Tattvadarshana  and Paramapara. Tattvadarshana started off as various stories from Ramayana and Mahabharata and other neetikathas. In Parampara we learnt various stotras and most importantly the greatest asset of any student of Purnapramati: Bhagavadgeeta. We were taught the shlokas pada by pada and had to memorize them. This continued until we were able to give kanThapATha Pareekshe of all the 18 adhyAyas to Sri Pejawara Swamiji. Our academic learning was also different from other schools. Focus was on understanding the concepts rather than preparing for exams (we weren’t given marks or grades; our report cards had only detailed observation of us by our teachers), we went on field trips to better understand the topics in our textbooks. We also had ‘Guest Lecturers’, experts from different fields, who  came and interacted with us. We also got introduced to the idea of ‘utsava’ as our annual day. All in all, our 1st year was spent in getting acquainted with this new idea of Purnapramati.                 Our 2nd year in Purnapramati was special from many aspects. It was the year when we started dedicating the whole year to a main theme which was jalam jeevanam uchyate. We focused on Kumudvati, a river in Shivaganga region, which had dried out due to various malpractices by the people in that region. We climbed the Shivaganga hill, we tried to understand why the river had been reduced to such a state, we mingled with the local people there, understood the environment, and tried to revive the kalyAnis surrounding it through which the river would flow again because of the recharged groundwater. We spent a lot of time in learning about rivers in general, about their origins, rain-fed and snow-fed rivers, the system of small water bodies which make the river possible. We also learnt a lot from experts in various fields who visited us in our school as well as accompanied us on our trips. Radhakrishna Bhadti anna, Dr.Lingaraju anna, Rajendra Singh anna and other distinguished people. Our Utsava that year was noteworthy as it was also based on our academic learning and not just a cultural program. We had the opportunity to present what we had learnt in front of experts in that field.  That year, practical experience and theoretical knowledge combined into one wholesome learning. This year, it was our fortune to meet Sri Sananda Swamiji for first time, as Purnapramati samman was conferred upon him. He became one of the crucial aspects of Purnapramati’s identity, and became an exemplar for all of us.               In our 3rd year, the theme chosen was jeevo jeevasya jeevanam. We were divided into groups and were given specific topics to study for the whole year. We learnt about various Ecosystems, such as rivers, forests, mountains, deltas etc. We also learnt about various purANa kathAs associated with them and studied scientific aspects as well.  We went to a lot of field trips including Tippangondanahalli reservoir, Amruth Mahal kaval, Kavloor, Krishnagiri, Biodiversity park and others. We got to learn a lot with Yellappa Reddy anna. Another important aspect of Purnapramati’s identity: Electives started in that year. We were given the chance to pursue a kala guided by expert teachers. We had to choose among Sangeeta, Bharatnatyam, Drawing, Kalaaripaayattu and nature. In that year, we were also able to spend more time with Sanada swamiji also and learnt from him about various scientific topics. That year utsava was very different. We had organised jaatre where we had put numerous stalls and presented all our learning of the year along with models. Distinguished people from all over India had come to enrich our knowledge. On the whole, that year was memorable with a kind of all-round-learning.                  In our 4th year, the Theme of the year was centred around Fabric. We learnt about the various types of fabrics, their cultural significance, and environmental impact. In that light, we also understood the significance of Khadi Movement and the concept of self-sustenance. We also had year-long interactions with Madhav Sahasrabuddhe anna, who taught us how to spin yarn from cotton. We had a major change in the academic method, we switched from classroom system to Montessori system or mainly independent model of studying. Instead of being in a class with children of our own age group and taught everything by our teachers, we were put into groups with children of different age-groups and had to put our effort in understanding concepts with guidance from our teachers. Each student was free to learn different concepts at his own pace and dedicate enough time for each subject without time-bars. We made booklets by ourselves, wrote worksheets, corrected each others’ papers and learnt together.  We also got the chance to help our juniors by explaining what we knew, to them, and learnt more deeply from it. We had to learn to be responsible for our work, make our own plans, complete them. Until then, teachers were running behind us and prodding us to do

Earless Frogs and Their Unique Habitats

Earless Frogs and Their Unique Habitats

Friday, August 10th, 2018

Earless frogs are those that lack a tympanum, which is visible as an eardrum surrounded by a ring of cartilage in most eared frogs. More specifically, the eardrum is called tympanic membrane, the ring is called tympanic annulus, and both are part of the tympanic middle ear, which also includes a bone called columella. Altogether, these structures aid in the transmission of airborne sound to the inner ear. The amphibian tree of life contains hundreds of species of earless frogs. The most prominent example includes those in the true toad family, Bufonidae, which has approximately 200 earless species out of a total of 609 known species. The loss of hearing structures has occurred multiple times in this and other amphibian families. However, in most cases, male earless frogs have retained the ability to call and species evolved alternative sensory pathways that enable the transmission of sound to the inner ear. For example, the earless Gardiner’s Seychelles Frog (endemic to the Seychelles) use the mouth cavity as a resonating chamber to amplify the sound and transmit it to the inner ear. Courtesy – Herpdigest Magazine                     — (PHOTOGRAPH BY RUDOLF VON MAY) Regards

ಕಸ ಕಹಾನಿ: ತ್ಯಾಜ್ಯದ ಸಮರ್ಥ ವಿಲೇವಾರಿಗಾಗಿ ನಾವೇನು ಮಾಡಲು ಸಾಧ್ಯ?

ಕಸ ಕಹಾನಿ: ತ್ಯಾಜ್ಯದ ಸಮರ್ಥ ವಿಲೇವಾರಿಗಾಗಿ ನಾವೇನು ಮಾಡಲು ಸಾಧ್ಯ?

Friday, August 10th, 2018

ಕೊಡುಗೆ: TG Shrinidhi (www.ejnana.com) ಒಂದೆರಡು ದಶಕಗಳ ಹಿಂದೆ ನಮ್ಮ ಬೆಂಗಳೂರು ಗಾರ್ಡನ್ ಸಿಟಿ ಆಗಿತ್ತು. ಆ ಹೆಸರಿನ ಸ್ಪೆಲಿಂಗು ಕೊಂಚ ಬದಲಾಗಿ ನಮ್ಮೂರು ಗಾರ್ಬೇಜ್ ಸಿಟಿ ಆಗಿದ್ದು ಈಚೆಗೆ ಕೆಲವರ್ಷಗಳ ಹಿಂದೆಯಷ್ಟೇ. ಹಾಗೆ ನೋಡಿದರೆ ಕಸದ ಸಮಸ್ಯೆ ನಮ್ಮ ಊರೊಂದಕ್ಕೇ ಸೀಮಿತವೇನಲ್ಲ. ನಮ್ಮ ಊರಷ್ಟೇ ಏಕೆ, ಇರು ಬರೀ ನಮ್ಮ ಗ್ರಹದ ಸಮಸ್ಯೆ ಮಾತ್ರವೂ ಅಲ್ಲ. ಭೂಮಿಯ ಮೇಲಿನ ಸಾಗರಗಳಲ್ಲೆಲ್ಲ ಕಚಡಾ ಪ್ಲಾಸ್ಟಿಕ್ಕಿನ ದ್ವೀಪಗಳು ತೇಲುತ್ತಿರುವಂತೆ ಭೂಮಿಯಿಂದ ಆಚೆ ಬಾಹ್ಯಾಕಾಶದಲ್ಲೂ ಕಸದ ರಾಶಿ ತೇಲಾಡುತ್ತಿದೆಯಂತೆ. ರಾಕೆಟ್ ಚೂರುಗಳು, ಕೆಟ್ಟುಹೋದ ಉಪಗ್ರಹಗಳು, ಅವುಗಳಿಂದ ಕಳಚಿಕೊಂಡಿರುವ ಬಿಡಿಭಾಗಗಳು – ಹೀಗೆ ರಾಶಿರಾಶಿ ಕಸ ಕ್ಷುದ್ರಗ್ರಹಗಳಂತೆ ನಮ್ಮ ಭೂಮಿಯನ್ನು ಸುತ್ತುಹಾಕುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಬಗ್ಗೆ ನಾನು ಮೊದಲ ಬಾರಿಗೆ ಓದಿದ್ದು ತೊಂಬತ್ತರ ದಶಕದಲ್ಲಿರಬೇಕು. ಆಗ ನಾವು ಇದ್ದದ್ದು ಪಶ್ಚಿಮಘಟ್ಟಗಳ ತಪ್ಪಲಿನ ಪುಟ್ಟ ಹಳ್ಳಿಯೊಂದರಲ್ಲಿ. ಹಸಿರನ್ನೇ ಹಾಸಿ ಹೊದ್ದು ಮಲಗಿದ್ದ ಅಂದಿನ ನಮ್ಮ ಊರಿನಲ್ಲಿ ಇಂದು ಪಿಡುಗಾಗಿ ಪರಿಣಮಿಸಿರುವ ರೂಪದ ಕಸ ಕಾಣುತ್ತಿದ್ದುದೇ ಅಪರೂಪ. ಅಲ್ಲೊಂದು ಇಲ್ಲೊಂದು ಬೀಡಿ-ಸಿಗರೇಟಿನ ಖಾಲಿ ಪೊಟ್ಟಣ, ಶಾಲೆಯ ಸುತ್ತಮುತ್ತ ಒಂದಷ್ಟು ಚಾಕಲೇಟ್ ಕಾಗದ ಕಂಡರೆ ಅದೇ ಹೆಚ್ಚು. ಅಂದಿನ ಸಂದರ್ಭದಲ್ಲಿ  ನಮಗೆ ಕಾಣುತ್ತಿದ್ದ ಕಸವೆಂದರೆ ಮನೆಯೆದುರಿನ ಮರಗಿಡಗಳಿಂದ ಬಿದ್ದ ಎಲೆ, ಕಡ್ಡಿ – ಇಂಥವೇ. ಗುಡಿಸಿ ಒಂದುಕಡೆ ಹಾಕಿದರೆ ತನ್ನಷ್ಟಕ್ಕೆ ತಾನೇ ಕರಗಿ ಗೊಬ್ಬರವಾಗುತ್ತಿದ್ದ ನಿರುಪದ್ರವಿ ಕಸ ಅದು. ಒಮ್ಮೊಮ್ಮೆ ಕಸ ತೀರಾ ಜಾಸ್ತಿಯಾಯಿತು ಅನ್ನಿಸಿದಾಗ ಇದನ್ನೆಲ್ಲ ಒಂದುಕಡೆ ಒಟ್ಟುಸೇರಿಸಿ ಬೆಂಕಿಹೊತ್ತಿಸುವ ಕಾರ್ಯಕ್ರಮವೂ ನಡೆಯುತ್ತಿತ್ತು. ಏರ್ ಪಲ್ಯೂಶನ್ ಎನ್ನುವುದು ಪರೀಕ್ಷೆಯ ಪ್ರಬಂಧವಷ್ಟೇ ಆಗಿದ್ದ ಕಾಲದಲ್ಲಿ ಲಂಕಾದಹನದ ಈ ಕಾರ್ಯಕ್ರಮ ನಮ್ಮ ಪಾಲಿಗೆ ಸಂಜೆಯ ಮನರಂಜನೆ. ಮುಂದಿನ ಕೆಲವರ್ಷಗಳಲ್ಲಿ ಮಾಡರ್ನ್ ಕಸದ ಪ್ರವಾಹ ನಮ್ಮೂರಿನತ್ತಲೂ ಬಂದಿರಬೇಕು. ಆದರೆ ಆ ಪ್ರವಾಹ ಅಲ್ಲೇನು ಬದಲಾವಣೆ ತಂದಿತೋ ಗೊತ್ತಾಗುವ ಮೊದಲೇ ನಾವು ಪಟ್ಟಣದತ್ತ ಬಂದುಬಿಟ್ಟಿದ್ದೆವು. ಮೊದಮೊದಲು ಪಟ್ಟಣಗಳಲ್ಲೂ ಕಸದ ಸಮಸ್ಯೆ ನಿಯಂತ್ರಣದಲ್ಲೇ ಇತ್ತು. ಹಣ್ಣು-ತರಕಾರಿ ಸಿಪ್ಪೆ ತಿನ್ನಲು ಬರುತ್ತಿದ್ದ ಹಸುಗಳು ಮನೆಯ ಸದಸ್ಯರಂತೆ ಇದ್ದವು. ಮಿಕ್ಕ ಸಾರು – ಹುಳಿಯಾದ ಮೊಸರು ಪಡೆದು ಬೆಳೆಯಲು ಮನೆಯ ಆಚೀಚೆ ಗಿಡಮರಗಳಿದ್ದವು. ಇನ್ನು ಚೂರುಪಾರು ಕಾಗದ-ತೆಂಗಿನ ಕರಟಗಳಿಂದ ಬಚ್ಚಲ ಒಲೆ ಉರಿಯುತ್ತಿತ್ತು. ಹೀಗಾಗಿ ಆಗಷ್ಟೇ ಶುರುವಾಗಿದ್ದ ಕಸದಗಾಡಿಗೆ ಸೇರುತ್ತಿದ್ದ ಕೊಡುಗೆ ಕಡಿಮೆಯೇ ಇತ್ತು ಎನ್ನಬಹುದು. ಪಟ್ಟಣಗಳು ಇನ್ನಷ್ಟು ದೊಡ್ಡವಾಗಿ ಮನೆಗಳು ಮತ್ತಷ್ಟು ಸಣ್ಣವಾಗುತ್ತಿದ್ದಂತೆ ಕಸಾಸುರ ಬೆಳೆಯುತ್ತಲೇ ಹೋದ. ಕಸವೂ ಒಂದು ಸಮಸ್ಯೆ ಎನಿಸಲು ಶುರುವಾದದ್ದೇ  ಆಗ. ಮಿಕ್ಕ ಆಹಾರವನ್ನು ಗೊಬ್ಬರವಾಗಿಸೋಣ ಎನ್ನಲು ಮನೆಯಲ್ಲಿ ಗಿಡವಿಲ್ಲ, ಮೂರನೆಯದೋ ಆರನೆಯದೋ ಮಹಡಿಗೆ ಯಾವ ಪ್ರಾಣಿಯೂ ಬರುವುದಿಲ್ಲ, ಕಾಗದವನ್ನೂ ಕರಟವನ್ನೂ ಉರಿಸಲು ಬಾತ್‌ರೂಮಿನಲ್ಲಿ ಒಲೆಯೇ ಇಲ್ಲ. ಹಾಗಾಗಿಯೇ ಕಸದ ಗಾಡಿ ಬಾರದಿದ್ದರೆ ನಿನ್ನೆ ಪ್ರಯಾಣಿಸಿದ ಬಸ್ಸಿನ ಟಿಕೇಟೂ ಮನೆಯಿಂದಾಚೆ ಹೋಗುವುದಿಲ್ಲ. ಇದು ನಮ್ಮ ನಗರಗಳ ಇಂದಿನ ಪರಿಸ್ಥಿತಿ. ಮಿತಿಮೀರಿದ ಪ್ಲಾಸ್ಟಿಕ್ ಬಳಕೆ ಹಾಗೂ ಕಸ ಸಮಸ್ಯೆ ಕುರಿತ ನಮ್ಮ ನಿರ್ಲಕ್ಷ್ಯಗಳೂ ಇದರೊಡನೆ ಸೇರಿಕೊಂಡು ಇಡೀ ಊರನ್ನೇ ಕಸದ ತೊಟ್ಟಿ ಮಾಡಿಬಿಟ್ಟಿವೆ. ಹೌದು, ಕಸ ನಮ್ಮ ಮನೆಯಿಂದ ಆಚೆ ಹೋಗಬೇಕು ಎನ್ನುವುದಷ್ಟೇ ನಮ್ಮಲ್ಲಿ ಅನೇಕರ ಪರಮ ಗುರಿ. ಕಸದ ಗಾಡಿ, ಪಕ್ಕದ ಸೈಟು, ತೆರೆದ ಚರಂಡಿ – ಒಟ್ಟಿನಲ್ಲಿ ಕಸ ಮನೆಯಿಂದ ಆಚೆ ಹೋದರಾಯಿತು. ಆಮೇಲೆ ಅದು ಏನಾಗುತ್ತೋ ಅದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಇದ್ದುಬಿಟ್ಟರಾಯಿತು! ಇಷ್ಟೆಲ್ಲ ಬೇಜವಾಬ್ದಾರರಲ್ಲದವರ ಕೊಡುಗೆಯೂ ಕಡಿಮೆಯೇನಲ್ಲ – “ಅಯ್ಯೋ, ನಾವು ಕಸ ವಿಂಗಡಿಸಿದರೂ ಅದನ್ನು ಗಾಡಿಯವರು ಒಟ್ಟಿಗೆಯೇ ತೊಗೊಂಡು ಹೋಗ್ತಾರೆ ಸುಮ್ನೆ ಟೈಮ್ ವೇಸ್ಟು ಸಾರ್” ಎನ್ನುತ್ತ ಕಸದ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣರಾದವರು ಇವರು. ಬಿಡುವಿಲ್ಲದ ನಗರವಾಸಿಗಳಿಗೆ ನೆರವಾಗಲು ಬಂದಿವೆಯಲ್ಲ ಆನ್‍ಲೈನ್ ಅಂಗಡಿಗಳು, ಅವುಗಳ ಕೊಡುಗೆಯೂ ಕಡಿಮೆಯೇನಲ್ಲ. ಅಲ್ಲಿ ಕೊಳ್ಳುವ ವಸ್ತುಗಳಿಗೆ ಈಗಾಗಲೇ ಇರುವ ಪ್ಯಾಕಿಂಗಿನ ಮೇಲೆ ಇನ್ನೊಂದು ಪ್ಲಾಸ್ಟಿಕ್ ಚೀಲ, ಅದಷ್ಟನ್ನೂ ಇಡಲೊಂದು ರಟ್ಟಿನ ಡಬ್ಬ, ಡಬ್ಬದಲ್ಲಿ ಖಾಲಿಯಿರುವ ಜಾಗ ತುಂಬಲು ಗಾಳಿತುಂಬಿದ ಪ್ಲಾಸ್ಟಿಕ್ ಚೀಲ – ಹೀಗೆ ಶಾಪ್ ಮಾಡಿದ ವಸ್ತುಗಳ ಜೊತೆಗೆ ರಾಶಿರಾಶಿ ಕಸದ ಫ್ರೀ ಡೆಲಿವರಿಯನ್ನೂ ಕೊಡುತ್ತಿರುವವರು ಇವರು. ಇಷ್ಟೆಲ್ಲ ಸಂಗತಿಗಳ ಮಧ್ಯದಲ್ಲಿ ಕಸದ ಸಮಸ್ಯೆಯನ್ನು ತಮ್ಮ ಕೈಲಾದಷ್ಟು ಪರಿಹರಿಸಲು ಹೊರಡುವವರಿಗೆ ಸಾಕಷ್ಟು ವಿಶಿಷ್ಟ ಅನುಭವಗಳಾಗುತ್ತವೆ. “ಊರುತುಂಬ ಇದೇ ಪ್ರಾಬ್ಲಮ್ಮು, ನಾನು-ನೀವು ಏನ್ ಮಾಡಕ್ಕಾಗುತ್ತೆ ಬಿಡಿ” ಎನ್ನುವ ಬಿಟ್ಟಿ ಉಪದೇಶ ಕೇಳುವುದು ಇಂತಹ ಅನುಭವಗಳ ಪೈಕಿ ಅತ್ಯಂತ ಸಾಮಾನ್ಯವಾದದ್ದು. ಅಪಾರ್ಟ್‍ಮೆಂಟ್ ಅಸೋಸಿಯೇಶನ್ ಸದಸ್ಯರಿಂದ ಪ್ರಾರಂಭಿಸಿ ಮನೆಗೆಲಸದ ಶೋಭಕ್ಕನವರೆಗೆ ಈ ಉಪದೇಶವನ್ನು ಎಲ್ಲರೂ ಕೊಡುತ್ತಾರೆ. ಅವರ ಮಾತನ್ನು ಉಪೇಕ್ಷಿಸಿ ಕಸ ವಿಂಗಡಿಸಲು ಹೊರಟಿರೋ, ವಿಂಗಡಿಸಿದ ಕಸವನ್ನು ಎಲ್ಲಿಡುವುದು ಎಂಬ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಸಿಕಸದ ವಿಷಯವಂತೂ ಕಷ್ಟವೇ ಬಿಡಿ, ಮನೆಯಲ್ಲಿ ಕಾಂಪೋಸ್ಟ್ ಮಾಡಲು – ಆ ಪ್ರಕ್ರಿಯೆಯನ್ನು ಸೂಕ್ತವಾಗಿ ನಿಭಾಯಿಸಲು ಸಾಕಷ್ಟು ಸಮಯ, ಹಣ ಎಲ್ಲವೂ ಬೇಕು. ಉತ್ಪನ್ನವಾದ ಗೊಬ್ಬರವನ್ನು ವಿಲೇವಾರಿ ಮಾಡಲಿಕ್ಕೂ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಬಾಲ್ಕನಿಯಲ್ಲಿ ಗಿಡ ಬೆಳೆಸಿದರೆ ಪಾರಿವಾಳದ ಕಾಟ – ಕೆಳಗಿನ ಮನೆಯವರ ಕಿರಿಕಿರಿಯನ್ನೂ ಸಹಿಸಿಕೊಳ್ಳಬೇಕು. ಇದೆಲ್ಲದರ ಜೊತೆಗೆ ಉಚಿತವಾಗಿ ದೊರಕುವ ನೆರೆಹೊರೆಯವರ, ಮನೆಯವರ ಅನುಕಂಪವನ್ನು ತಾಳಿಕೊಳ್ಳುವ ತಾಳ್ಮೆಯೂ ಇರಬೇಕು! ಇಷ್ಟೆಲ್ಲ ತಾಕತ್ತಿಲ್ಲವೆಂದು ಒಣಕಸದ ಉಸಾಬರಿಗೆ ಹೋದಿರೋ, ಅಲ್ಲೂ ಸಮಸ್ಯೆ ತಪ್ಪಿದ್ದಲ್ಲ. ಬಾಲ್ಕನಿಯಲ್ಲಿ ಒಂದಷ್ಟು ಜಾಗ ಮಾಡಿ ಒಣಕಸ ಸಂಗ್ರಹಿಸಿಟ್ಟರೆ ಮನೆಗೆ ಬಂದವರೆಲ್ಲ ನಿಮಗೆ ಹೋರ್ಡಿಂಗ್ ಡಿಸಾರ್ಡರ್ (ನಿರುಪಯುಕ್ತ ವಸ್ತುಗಳನ್ನು ಕೂಡಿಡುವ ಕಾಯಿಲೆ) ಇದೆಯೇನೋ ಎನ್ನುವಂತೆ ನೋಡುತ್ತಾರೆ. ಸಂಗ್ರಹಿಸಿಟ್ಟ ಕಸವನ್ನು ತೆಗೆದುಕೊಂಡು ಹೋಗಪ್ಪ ಎಂದು ಹತ್ತು ಬಾರಿ ಕೇಳಿಕೊಂಡರೂ ಹಳೇಪೇಪರಿನ ಅಣ್ಣ ನಿಮ್ಮತ್ತ ತಿರುಗಿಯೂ ನೋಡುವುದಿಲ್ಲ. ಇದೇನಿದು ಇಷ್ಟೊಂದು ನೆಗೆಟಿವಿಟಿ ಅಂದುಕೊಂಡಿರಾ? ಹನ್ನೊಂದನೆಯ ಸಾರಿಗೆ ಎಲ್ಲವೂ ಸರಿಹೋಗುತ್ತದೆ! ಹೋಮ್ ಮೇಡ್ ಗೊಬ್ಬರದಿಂದ ಪೋಷಣೆ ಪಡೆದ ಬಾಲ್ಕನಿಯ ಪುಟ್ಟ ಕೈತೋಟ ನಳನಳಿಸಲು ಶುರುವಾಗುತ್ತದೆ, ನಿಮ್ಮ ಕಾಟ ತಾಳಲಾರದ ಹಳೇಪೇಪರಿನ ಅಣ್ಣ ಒಣಕಸವನ್ನು ಕೊಂಡೊಯ್ಯಲು ಶುರುಮಾಡುತ್ತಾನೆ – ಅಷ್ಟಿಷ್ಟು ದುಡ್ಡನ್ನೂ ನಿಮ್ಮ ಕೈಗಿಡುತ್ತಾನೆ. ಹಾಲಿನ ಕವರನ್ನು ನೀರಿನಲ್ಲಿ ತೊಳೆದಿಟ್ಟರೆ ವಾಸನೆ ಬರುವುದಿಲ್ಲ, ಪ್ಲಾಸ್ಟಿಕ್ಕಿನ ಚೀಲಗಳನ್ನು ಚಿಕ್ಕದಾಗಿ ಮಡಚಿ ತುಂಬಿಟ್ಟರೆ ಜಾಸ್ತಿ ಜಾಗ ಬೇಕಾಗುವುದಿಲ್ಲ, ರಟ್ಟಿನ ಪೆಟ್ಟಿಗೆಗಳಿಂದ ಗಮ್‍ಟೇಪ್ ಕಿತ್ತರೆ ಅದನ್ನು ಮಡಚಿ ಹಳೆಪೇಪರ್ ಜೊತೆಯಲ್ಲೇ ಇಡಬಹುದು, ನೀರಿನ ಬಾಟಲಿ ಕೊಳ್ಳದಿದ್ದರೆ ಏನೂ ನಷ್ಟವಿಲ್ಲ ಎನ್ನುವಂತಹ ವಿಷಯಗಳೂ ನಮಗೆ ಅರ್ಥವಾಗುತ್ತವೆ. ಟೂವೀಲರಿನಲ್ಲಿ, ಕಾರಿನ ಡಿಕ್ಕಿಯಲ್ಲಿ, ಆಫೀಸಿನ ಕಬೋರ್ಡಿನಲ್ಲಿ ಒಂದೆರಡು ಬಟ್ಟೆಯ ಚೀಲ ಇಟ್ಟಿದ್ದರೆ ಪ್ಲಾಸ್ಟಿಕ್ ಚೀಲ ಮನೆಗೆ ಬರುವುದೇ ಇಲ್ಲವೆನ್ನುವುದೂ ತಿಳಿಯುತ್ತದೆ. ಎಟಿಎಂ‍ನಿಂದ ಹಣ ತೆಗೆದಾಗ ಕಾಗದದ ರಸೀತಿ ಬೇಡವೆಂದರೆ, ಬಿಲ್ಲುಗಳು ಇಮೇಲಿನ ಮೂಲಕವಷ್ಟೇ ಬಂದರೆ ಸಾಕು ಎಂದರೆ ಅದನ್ನೆಲ್ಲ ಹರಿದು ಬಿಸಾಡಲು ವ್ಯರ್ಥವಾಗುವ ಸಮಯ ಕೂಡ ಉಳಿಯುತ್ತದೆ. ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ಬಳಸಿದಾಗ ನನಗೆ ರಸೀತಿ ಬೇಡ ಎಂಬ ಮೂರೇ ಪದಗಳನ್ನು ಉಚ್ಚರಿಸಿದರೆ ಸಾಕು, ಅಂಗಡಿಯವರ ಮುಗುಳ್ನಗೆಯೂ ಉಚಿತವಾಗಿ ದೊರಕುತ್ತದೆ!                         ಇಲ್ಲೊಂದು ಎಚ್ಚರಿಕೆಯ ಅಗತ್ಯವೂ ಇದೆ: ಇಷ್ಟೆಲ್ಲ ಮಾಡಿದಾಕ್ಷಣ ಕಸದ ಸಮಸ್ಯೆ ಏಕಾಏಕಿ ಕರಗಿಹೋಗುತ್ತದೆ ಎಂದೇನೂ ಇಲ್ಲ. ಏಕೆಂದರೆ ನಮ್ಮ ಇಂದಿನ ವ್ಯವಸ್ಥೆಯ ಬಹುದೊಡ್ಡ ಪಾಲು ನಿಂತಿರುವುದೇ ಕಸ ಉತ್ಪಾದನೆಯ ಮೇಲೆ. ಬಿಸ್ಕತ್ ಪೊಟ್ಟಣದಿಂದ ಮೊಬೈಲ್ ಫೋನಿನವರೆಗೆ ಸಕಲವನ್ನೂ ತಯಾರಿಸುತ್ತಿರಬೇಕು, ಬಳಸುತ್ತಿರಬೇಕು, ಬಳಸಿ ಎಸೆಯುತ್ತಿರಬೇಕು – ಆಗಷ್ಟೇ ಉದ್ದಿಮೆಗಳು ನಡೆಯುವುದು, ಉದ್ಯೋಗಾವಕಾಶಗಳು ಸೃಷ್ಟಿಯಾಗುವುದು, ಹೊಸ ಮಾದರಿಯ ಬಿಸ್ಕತ್ತನ್ನೂ ಮೊಬೈಲ್ ಫೋನನ್ನೂ ಕೊಳ್ಳಲು ದುಡ್ಡು ಸಿಗುವುದು. ಈ ವ್ಯವಸ್ಥೆಯನ್ನು ತಜ್ಞರು ಲೀನಿಯರ್ ಇಕಾನಮಿ ಎಂದು ಕರೆಯುತ್ತಾರೆ. ಈ ಅರ್ಥವ್ಯವಸ್ಥೆಯಲ್ಲಿರುವುದು ಒಂದೇ ರೇಖೆ – ಕಾರ್ಖಾನೆಯಿಂದ ಹೊರಟು ಗ್ರಾಹಕನನ್ನು ಹಾದು ಕಸದ ಬುಟ್ಟಿ ಸೇರುವುದೇ ಆ ರೇಖೆಯ ಗುರಿ. ಕಸವನ್ನು ಸಂಪೂರ್ಣವಾಗಿ ನಿವಾರಿಸಲು ಪ್ರಯತ್ನಿಸುವುದು ಇದಕ್ಕೆ ತದ್ವಿರುದ್ಧ ಪರಿಸ್ಥಿತಿ: ಸುಲಭಕ್ಕೆ ಹಾಳಾಗದ ವಸ್ತುಗಳನ್ನು ತಯಾರಿಸುವುದು, ಅನಗತ್ಯ ವಸ್ತುಗಳ ಉತ್ಪಾದನೆ ತಡೆಯುವುದು, ಆ ಮೂಲಕ ಕಸ ಶೇಖರವಾಗದಂತೆ ನೋಡಿಕೊಳ್ಳುವುದು – ಇದು ಅಂತಹ ಪರಿಸ್ಥಿತಿಯ ಸ್ವರೂಪ. ಇದನ್ನೇ ತಜ್ಞರು ಸರ್ಕ್ಯುಲರ್ ಇಕಾನಮಿ ಎನ್ನುವುದು – ಇಲ್ಲಿ ಸಕಲ ವಸ್ತುಗಳೂ ಮೆರ್‍ರಿ-ಗೋ-ರೌಂಡಿನಂತೆ ಸುತ್ತುತ್ತಿರುವುದರಿಂದ ಅವಕ್ಕೆ ಕಸದ ಬುಟ್ಟಿಯತ್ತ ಬರಲು ಪುರುಸೊತ್ತೇ ಇರುವುದಿಲ್ಲ. ಕಸದಬುಟ್ಟಿಯೇ ಪರಮಗುರಿಯಾಗಿರುವ ಇಂದಿನ ಪರಿಸ್ಥಿತಿಯಿಂದ ಕಸದಬುಟ್ಟಿಯನ್ನೇ ಇಲ್ಲವಾಗಿಸುವ ಈ ಪರಿಸ್ಥಿತಿಗೆ ಹೋಗುವುದು ಸುಲಭದ ಕೆಲಸವೇನಲ್ಲ. ಹಾಗಾಗಿ ಇಲ್ಲೊಂದು ಮಧ್ಯಮಮಾರ್ಗವೂ ಇದೆ. ಆ ಮಾರ್ಗವೇ ಮರುಬಳಕೆ, ಅಂದರೆ ರೀಸೈಕ್ಲಿಂಗ್. ಉಳಿದ ಆಹಾರ ಪದಾರ್ಥವನ್ನು ಗೊಬ್ಬರವಾಗಿಸಿ ಸೊಪ್ಪು-ತರಕಾರಿ ಬೆಳೆಯುವುದು,  ಪ್ಲಾಸ್ಟಿಕ್ಕು-ಪೇಪರುಗಳನ್ನು ಹಳೇಪೇಪರಿನ ಅಣ್ಣನಿಗೆ ಕೊಟ್ಟುಕಳಿಸುವುದೆಲ್ಲ ಇದೇ ಮಾರ್ಗದಲ್ಲಿ ಸಿಗುವ ಮೈಲಿಗಲ್ಲುಗಳು. ಕಸವೇ ಇಲ್ಲದ ‘ಜೀರೋ ವೇಸ್ಟ್’ ಪರಿಕಲ್ಪನೆಯ ಅನುಷ್ಠಾನ ಸಾಧ್ಯವಾದಿದ್ದರೆ ಹೋಗಲಿ, ಉತ್ಪಾದನೆಯಾಗುವ ಕಸದ ಪ್ರಮಾಣವನ್ನಾದರೂ ಕಡಿಮೆಮಾಡಬಹುದಲ್ಲ ಎನ್ನುವ ಭರವಸೆ ಮೂಡುವುದು ಈ ಮೈಲಿಗಲ್ಲುಗಳನ್ನು ದಾಟಿದಾಗಲೇ. ಊರತುಂಬಾ ಕಸದ ರಾಶಿ ಹರಡಿಕೊಂಡಿರುವುದು ಅನಿವಾರ್ಯವೇನಲ್ಲ, ಪಟ್ಟಣದ ಸುತ್ತಮುತ್ತಲ ಹಳ್ಳಿಗಳಿರುವುದು ನಮ್ಮ ಕಸವನ್ನು ತುಂಬಿಸಿಕೊಳ್ಳುವುದಕ್ಕೇ ಅಲ್ಲ ಎನ್ನುವುದೆಲ್ಲ ಈ ಪಯಣ ಮುಂದುವರೆದಂತೆ ಸ್ಪಷ್ಟವಾಗುತ್ತ ಹೋಗುತ್ತದೆ. ನಮ್ಮ ಮನೆಯಿಂದ ಆಚೆ ಹೋದರೆ ಸಾಕು ಎಂದು ಬೇಕಾಬಿಟ್ಟಿಯಾಗಿ ಎಸೆದ ಕಸ ನಮ್ಮ ಮಕ್ಕಳ ಶಾಲೆಯೆದುರೇ ರಾಶಿಬೀಳಬಹುದು, ಅವರ ಆರೋಗ್ಯಕ್ಕೇ ತೊಂದರೆಮಾಡಬಹುದು ಎನ್ನುವುದೂ ಅರ್ಥವಾಗುತ್ತದೆ. ಅಷ್ಟೇ ಅಲ್ಲ, ಕೊಂಚವೇ ಶ್ರಮ ಬೇಡುವ ಇಂತಹ ಸಣ್ಣಸಣ್ಣ ಕೆಲಸಗಳನ್ನು ಮಾಡುವುದರಿಂದ ಮನೆಯ ಮಕ್ಕಳಲ್ಲಿ ಕಸ ನಿರ್ವಹಣೆ ಒಂದು ಸಹಜ ಪ್ರಕ್ರಿಯೆ ಎನ್ನುವ ಭಾವನೆ ಮೂಡುತ್ತದೆ. ಗಾರ್ಬೇಜ್ ಸಿಟಿಯ ಸ್ಪೆಲಿಂಗು ಮತ್ತೊಮ್ಮೆ ಬದಲಾಗಿ ಬೆಂಗಳೂರು ಮತ್ತೊಮ್ಮೆ ಗಾರ್ಡನ್ ಸಿಟಿ ಆಗಬಹುದೇನೋ ಎಂಬ ಆಶಾಭಾವನೆ, ಬಾಲ್ಕನಿಯ ಹೂಕುಂಡದಲ್ಲಿ ತಲೆಯೆತ್ತಿದ ಮೆಂತ್ಯದ ಗಿಡದಂತೆ, ಮತ್ತೊಮ್ಮೆ ಚಿಗುರುತ್ತದೆ!  

ಬಿಳಿಘೇಂಡಾ ಹಿಂದಿನ ಕರಾಳ ಕತೆ

Tuesday, August 7th, 2018

‘ಇದೊಂದು ಆಘಾತಕಾರಿ ಸುದ್ದಿ: ‘ಸುಡಾನ್’ ಹೆಸರಿನ ಬಿಳಿಘೇಂಡಾ ಕಳೆದ ವಾರ ಕೆನ್ಯಾ ದೇಶದ ಸಂರಕ್ಷಿತ ಅರಣ್ಯದಲ್ಲಿ ಪ್ರಾಣಬಿಟ್ಟಿತು. ಘೇಂಡಾ ಜಾತಿಯ ಮೃಗಗಳಲ್ಲಿ  ‘ಉತ್ತರದ ಬಿಳಿಘೇಂಡಾ’ ತಳಿಯ ಕೊಟ್ಟ ಕೊನೆಯ ಗಂಡು ಪ್ರಾಣಿ ಇದಾಗಿತ್ತು. ಇನ್ನೆರಡು ಹೆಣ್ಣು ಘೇಂಡಾಗಳಿವೆ. ಸುಡಾನಿನ ಮಗಳು ನಾಜಿನ್ ಮತ್ತು ನಾಜಿನ್ ಮಗಳು ಫಾತು. ಇನ್ನು ಅವುಗಳಿಂದ ಬಿಳಿ ಘೇಂಡಾ ಮರಿಗಳು ಜನಿಸುವ ಸಂಭವವಿಲ್ಲ. ಏಕೆಂದರೆ ಗಂಡುಗಳೇ ಉಳಿದಿಲ್ಲವಲ್ಲ. ಸುಡಾನ್ 35 ವಯಸ್ಸಿನದಾಗಿತ್ತು. ಮುದಿಯಾಗಿತ್ತು. ವೃದ್ಧಾಪ್ಯದ ವಿವಿಧ ಕಾಯಿಲೆಗಳಿಂದ ಅಶಕ್ತವಾಗಿತ್ತು. ಕಾಲಿಗೆ ಹುಣ್ಣಾಗಿ  ನರಳುತ್ತಿತ್ತು. ಅದರ ಸಂಕಟವನ್ನು ನೋಡಲಾರದೆ, ಪಶುವೈದ್ಯರೇ ಚುಚ್ಚುಮದ್ದಿನ ಮೂಲಕ ಸುಖಮರಣವನ್ನು ದಯಪಾಲಿಸಿದರು. ಅನೇಕ ವರ್ಷಗಳ ಹಿಂದೆಯೇ ಅದರ ವೀರ್ಯಾಣುಗಳನ್ನು ತೆಗೆದಿರಿಸಿ ಸುರಕ್ಷಿತ ಇಡಲಾಗಿದೆ ನಿಜ. ಆದರೆ ಉಳಿದಿರುವ ಹೆಣ್ಣುಗಳೆಂದರೆ ಸುಡಾನಿನ ಮಗಳು, ಮೊಮ್ಮಗಳು. ಅವಕ್ಕೆ ಕೃತಕ ಗರ್ಭಧಾರಣೆ ಮಾಡುವಂತಿಲ್ಲ. ‘ದಕ್ಷಿಣದ ಬಿಳಿ ಘೇಂಡಾ’ ಎಂಬ ಬೇರೆ ಪ್ರಭೇದದ ಯಾವುದಾದರೂ ಹೆಣ್ಣಿನ ಮೂಲಕ ಸುಡಾನಿನ ಸಂತಾನ ವೃದ್ಧಿಸಲು ಸಾಧ್ಯವೊ ನೋಡಬೇಕು. ಘೇಂಡಾಮೃಗಗಳಲ್ಲಿ (ರೈನೊಸಿರೊಸ್ -ಅಂದರೆ ಮೂಗಿನ ಕೋಡು) ಎಮ್ಮೆಯ ಬಣ್ಣದ್ದೇ ಆಗಿರುತ್ತವೆ. ಆಫ್ರಿಕಾ ಮತ್ತು ಸುಮಾತ್ರಾ ದ್ವೀಪದ ಘೇಂಡಾಗಳಿಗೆ ಎರಡು ಕೊಂಬುಗಳಿರುತ್ತವೆ; ಭಾರತದ ಮತ್ತು ಜಾವಾದ ಘೇಂಡಾಗಳಿಗೆ ಒಂದೇ ಕೊಂಬು. ಭಾರೀ ಗಾತ್ರದ ಹತ್ತು ಕ್ವಿಂಟಾಲ್ ತೂಕದ ಪ್ರಾಣಿಗಳು. ಆದರೆ ತುಂಬ ಸಭ್ಯ ಪ್ರಾಣಿ. ಯಾರಮೇಲೂ ಏರಿ ಹೋಗುವುದಿಲ್ಲ. ನಾವೇ ಅವುಗಳ ಬೆನ್ನು ಏರಿ ಸವಾರಿ ಮಾಡಬಹುದು.  ಆಫ್ರಿಕಾದ ಕೆಲವು ಘೇಂಡಾಗಳಿಗೆ ಅಗಲವಾದ ಬಾಯಿ ಇರುತ್ತದೆ. ಅವಕ್ಕೆ ಆಫ್ರಿಕನ್ ಭಾಷೆಯಲ್ಲಿ ವೇಯಿಟ್ ಎನ್ನುತ್ತಾರೆ. ಅದೇ ಇಂಗ್ಲಿಷ್ ಭಾಷೆಗೆ ಬರುವಾಗ ವ್ಹೈಟ್ ಆಗಿ ಬಿಳಿಘೇಂಡಾ ಎನ್ನಿಸಿಕೊಂಡಿದೆ. ಅದು ಬಿಳಿ ಅಲ್ಲ, ಬೂದು ಅಷ್ಟೆ. ಎಮ್ಮೆ ಕೋಣಗಳ ಹಾಗೇ ಕಪ್ಪು ಅಥವಾ ಬೂದು ಬಣ್ಣದವು. ಕೇವಲ 20-30 ವರ್ಷಗಳ ಹಿಂದೆ ನಾಲ್ಕಾರು ಸಾವಿರದಷ್ಟಿದ್ದ ‘ಉತ್ತರದ ಬಿಳಿಘೇಂಡಾ’ಗಳ ಸಂತತಿ ಇಷ್ಟು ಕ್ಷಿಪ್ರವಾಗಿ ಕಮ್ಮಿ ಆಗಲು ಯಾವ ರೋಗರುಜಿನ ಪ್ರಕೃತಿ ವಿಕೋಪ ಕಾರಣವಲ್ಲ. ಮನುಷ್ಯನ ಮೂಢ ನಂಬಿಕೆಗಳೇ ಕಾರಣ. ಘೇಂಡಾ ಕೊಂಬನ್ನು ತೇಯ್ದು ನೆಕ್ಕಿದರೆ ಪೌರುಷ ಬರುತ್ತದೆ ಎಂಬ ನಂಬಿಕೆ ವಿಯೆಟ್ನಾಂ, ಕಾಂಬೋಡಿಯಾ, ಮತ್ತಿತರ ಪೂರ್ವ ಏಷ್ಯದ ಕೆಲವು ಪ್ರದೇಶಗಳಲ್ಲಿ ಇದೆ. ಜೊತೆಗೆ ಮಂತ್ರಮಾಟಗಳಿಗೂ ಅದನ್ನು ಬಳಸುತ್ತಾರೆ. ಮನೆಯಲ್ಲಿ ‘ಗಂಡಾಮೃಗದ ಕೋಡು’ ಇದ್ದರೆ ಅದು ಆಢ್ಯತೆ, ಪೌರುಷ, ಶ್ರೀಮಂತಿಕೆಯ ಪ್ರತೀಕವೆಂದು ಭಾವಿಸಲಾಗುತ್ತದೆ. ಘೇಂಡಾಗಳನ್ನು ಕೊಲ್ಲದಂತೆ ಕಾನೂನು ಅದೆಷ್ಟೇ ಬಿಗಿಯಾಗಿದ್ದರೂ ಕಳ್ಳ ಸಾಗಣೆದಾರರು ತಮ್ಮ ಜೀವವನ್ನಾದರೂ ಪಣಕ್ಕಿಟ್ಟು ಈ ಸಭ್ಯಪ್ರಾಣಿಗೆ ಗುಂಡಿಟ್ಟು ಕೊಂದು ಕೊಂಬನ್ನು ಕಿತ್ತು ಸಾಗಿಸುತ್ತಾರೆ. ಅದಕ್ಕೆ ಚಿನ್ನಕ್ಕಿಂತ ಹೆಚ್ಚು ಬೆಲೆ ತೆತ್ತಾದರೂ ಮೂಢರು ಖರೀದಿ ಮಾಡುತ್ತಾರೆ. ಘೇಂಡಾ ಕೊಂಬುಗಳಲ್ಲಿ ನಿಜಕ್ಕೂ ಅಂಥ ಔಷಧೀಯ ಗುಣ ಇದೆಯೆ ಎಂದು ವಿಜ್ಞಾನಿಗಳು ಅನೇಕ ಬಾರಿ ಪರೀಕ್ಷೆ ಮಾಡಿದ್ದಾರೆ. ಅಂಥ ಏನೂ ಅವರಿಗೆ ಕಂಡುಬಂದಿಲ್ಲ. ಎತ್ತಿನ ಕೋಡು, ಎಮ್ಮೆಯ ಗೊರಸು, ನಮ್ಮ ಉಗುರು, ಕೂದಲು, ಜಿಂಕೆಯ ಕೊಂಬು ಎಲ್ಲವುಗಳಲ್ಲಿ ಕೆರಟೊನಿನ್ ಎಂಬ ನಾರಿನ ಅಂಶ ಇದ್ದಂತೇ ಘೇಂಡಾ ಕೋಡಿನಲ್ಲೂ ಅದೇ ನಿರುಪಯುಕ್ತ ಪದಾರ್ಥ ಇದೆ. ಬೇರೆ ಏನೂ ಇಲ್ಲ. ಆದರೆ ಜನರ ಮನಸ್ಸಿನಲ್ಲಿ ಬೇರೂರಿರುವ ಇಂಥ ರೂಢನಂಬಿಕೆಯನ್ನು ಕಿತ್ತು ಹಾಕುವುದು ಹೇಗೆಂಬುದು ವಿಜ್ಞಾನಕ್ಕೆ ಗೊತ್ತಿಲ್ಲ.  ಭೂಮಿಯ ಮೇಲಿನ ಎರಡನೆಯ ದೈತ್ಯಜೀವಿಯ ಸಂತಾನವನ್ನೇ ಈ ನಂಬಿಕೆ ಬಲಿತೆಗೆದುಕೊಂಡಿದೆ. ಹುಲ್ಲು, ಗಿಡಗಂಟಿ, ಕಳೆಸಸ್ಯಗಳನ್ನು ತಿಂದು ಕಾಡಿನ ಜೀವಲೋಕಕ್ಕೆ ಪೋಷಕಾಂಶವನ್ನೂ ನೀಡುತ್ತ ತನ್ನ ಪಾಡಿಗೆ ಸಭ್ಯ ಬದುಕು ನಡೆಸುತ್ತಿದ್ದ ಜೀವಿಯನ್ನು ನಿರ್ವಂಶ ಮಾಡಿದೆ. ಹಾರಲಾಗದ ಡೋಡೋ ಎಂಬ ಪಕ್ಷಿಯನ್ನು ಬಡಿಗೆಯಿಂದ ಬಡಿದೇ ಸಾಯಿಸಿ ನಿರ್ವಂಶ ಮಾಡಿದ ಮನುಷ್ಯ ಆನಂತರ ಬಂದೂಕು, ಸಿಡಿಮದ್ದು, ವಿದ್ಯುತ್ ಕರೆಂಟು, ಕೆಮಿಕಲ್ ವಿಷಗಳನ್ನು ಬಳಸಿ ಎಷ್ಟೆಲ್ಲ ಬಗೆಯ ಜೀವಜಂತುಗಳ ಸಂತಾನವನ್ನು ಮುಗಿಸಿದ್ದಾನೆ. ಕೆಲವಷ್ಟನ್ನು ತೆವಲಿಗೆ, ಇನ್ನು ಕೆಲವನ್ನು ಆಹಾರಕ್ಕೆ, ಪೈರು ರಕ್ಷಣೆಗೆ, ಮತ್ತೆ ಕೆಲವನ್ನು ಮೂಢನಂಬಿಕೆಗೆ ಬಲಿಯಾಗಿಸಿದ್ದಾನೆ. ನಮ್ಮ ಹಳ್ಳಿಗಳಲ್ಲಿ, ಅಷ್ಟೇಕೆ ನಗರಗಳಲ್ಲೂ ಅನೇಕ ಬಗೆಯ ಮೂಢನಂಬಿಕೆಗಳಿವೆ. ಊಸರವಳ್ಳಿ, ಓತಿಕ್ಯಾತಗಳನ್ನು ಒಂದು ಧರ್ಮದವರು ಕಂಡಲ್ಲಿ ಕಲ್ಲು ಬೀಸಿ ಕೊಲ್ಲುತ್ತಾರೆ. ನಿರುಪದ್ರವಿ ಹಾಸುಂಬೆ ಹಾವನ್ನು ಬಡಿದು ಕೊಲ್ಲುತ್ತಾರೆ (ಹಸುರು ಬಣ್ಣದ ಈ ವಿಷರಹಿತ ಹಾವು ಮನುಷ್ಯರ ಕಣ್ಣನ್ನು ನುಂಗಿ ಹಾಕುತ್ತದೆ ಎಂಬ ಮೂಢ ನಂಬಿಕೆ ನಮ್ಮ ಆನಂದವನದ ಅಕ್ಕಪಕ್ಕದ ಹಳ್ಳಿಗಳಲ್ಲೂ ಪ್ರಚಲಿತದಲ್ಲಿದೆ). ಗೂಬೆಗಳು ಅಪಶಕುನವೆಂದು ಭಾವಿಸಿ ಅದಕ್ಕೆ ಕಲ್ಲೆಸೆಯುತ್ತಾರೆ. ಅಂಥವರ ನಡುವೆ ವನ್ಯರಕ್ಷಣಾ ತಜ್ಞರು ಏನೆಲ್ಲ ಶ್ರಮವಹಿಸಿ ಜೀವಸಂಕುಲಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ. ಸಂತಸದ ಸಂಗತಿ ಏನೆಂದರೆ ಅಂಥವರ ಸಂಖ್ಯೆ ಹೆಚ್ಚುತ್ತಿದೆ. ಸರಕಾರದ ಮೇಲೆ ಒತ್ತಡ ತಂದು ಹುಲಿ, ರಣಹದ್ದು, ಇರುವೆಭಕ್ಷಕ ಪ್ಯಾಂಗೊಲಿನ್, ಮಂಗಟ್ಟೆ ಪಕ್ಷಿ, ಕೃಷ್ಣಮೃಗಗಳಂಥ ಜೀವಿಗಳ ರಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕೆ ಶಾಭಾಶ್ ಹೇಳೋಣ. ಪೌರುಷವೃದ್ಧಿಗಾಗಿ ಮುಗ್ಧ ಪ್ರಾಣಿಗಳ ಜೀವ ತೆಗೆಯುವ ಬದಲು ಜೀವಿಗಳನ್ನು ಉಳಿಸಲು ತೋರುವ ಪೌರುಷಕ್ಕೆ ಜೈ ಎನ್ನೋಣ. ಆದರೆ ಚಿಂತೆಯ ಸಂಗತಿ ಏನು ಗೊತ್ತೆ? ಬಿಳಿಘೇಂಡಾದಂಥ ದೈತ್ಯ ಜೀವಿಯೇ ನಿರ್ವಂಶವಾಯಿತು ಎಂದರೆ, ಯಾರಿಗೂ ಸುಲಭಕ್ಕೆ ಕಾಣದಂತೆ ಕಾಡಿನಲ್ಲಿ, ಮರಳುಗಾಡಿನಲ್ಲಿ, ಕೆರೆ-ನದಿ-ಜಲಧಿಯಲ್ಲಿ ಕೊನೆಯುಸಿರು ಹಿಡಿದು ಬದುಕುತ್ತಿರುವ ಜೀವಿಗಳು ಇನ್ನೆಷ್ಟಿವೆಯೊ? ಮನುಷ್ಯನ ಕರಾಳ ನೆರಳು ಅಲ್ಲೆಲ್ಲ ಬೀಳುತ್ತಿದೆ. ಅವುಗಳನ್ನು ಗುರುತಿಸಿ, ರಕ್ಷಿಸುವ ಬಹುದೊಡ್ಡ ಹೊಣೆ ನಮ್ಮೆಲ್ಲರ ಹೆಗಲ ಮೇಲಿದೆ. ನಾಳಿನ ಜಗತ್ತಿಗಾಗಿ ಎಂಜಿನಿಯರ್ ಗಳನ್ನು, ಡಾಕ್ಟರ್ ಗಳನ್ನು, ವಕೀಲರನ್ನು, ಕಲಾವಿದರನ್ನು, ವಾಸ್ತುಶಿಲ್ಪಿಗಳನ್ನು, ಸಂಗೀತಗಾರರನ್ನು, ವಿಜ್ಞಾನಿಗಳನ್ನು, ಅರ್ಥತಜ್ಞರನ್ನು, ರಕ್ಷಣಾ ಅಧಿಕಾರಿಗಳನ್ನು, ರಾಜಕಾರಣಿಗಳನ್ನು, ಪೈಲಟ್ ಗಳನ್ನು, ಇನ್ಸೂರನ್ಸ್ ಪರಿಣತರನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳು ನಿಸರ್ಗಕ್ಕೆ ಜೀವವಿಮೆ ಮಾಡಬಲ್ಲ ತಜ್ಞರನ್ನೂ ರೂಪಿಸಬೇಕಾಗಿದೆ. ನಾಗೇಶ ಹೆಗಡೆ

ಕಾಡ್ಗಿಚ್ಚಿನ ಸುತ್ತಮುತ್ತ….

Tuesday, August 7th, 2018

ಕೆ.ಎಸ್‍. ನವೀನ್ ಸಂಗ್ರಹಾಲಯ ನಿರ್ವಾಹಕ, “ವಿಶ್ವರೂಪ” ಪೂರ್ಣಪ್ರಮತಿ ಬೋಧನಾತ್ಮಕ ಸಂಗ್ರಹಾಲಯ ಆನಂದವನ, ಮಾಗಡಿ.   ಬೇಸಿಗೆ ಬಂದರೆ ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತಿಯಿರುವವರಿಗೆ ಆಂತಕ ತರುವವ ವಿಷಯಗಳಲ್ಲಿ ಪ್ರಮುಖವಾದದ್ದು ಕಾಡ್ಗಿಚ್ಚು. ಪ್ರತೀ ವರ್ಷ ಈ ಕಾಡಿನ ಬೆಂಕಿಯಿಂದ ಸಾವಿರಾರು ಎಕರೆ ಕಾಡು ಭಸ್ಮವಾಗಿ ಹೋಗುತ್ತದೆ. ಈ ವರ್ಷ (2018) ಇನ್ನು ಮಾರ್ಚ್ ಮೊದಲರ್ಧದಲ್ಲಿದ್ದೇವೆ, ಆಗಲೇ ಸುಟ್ಟುಹೋಗಿರುವ ಕಾಡಿನ ಪ್ರಮಾಣ ಐದು ಸಾವಿರಕ್ಕೂ ಹೆಚ್ಚು! ಇದು ತುಂಬ ಕಳವಳಕಾರಿ ವಿಷಯ.   ಈ ಕಾಡ್ಗಿಚ್ಚು ಉಂಟಾಗುವುದು ಹೇಗೆ ಎಂಬ ಬಗ್ಗೆ ನಮ್ಮಲ್ಲಿ ಅನೇಕ ಕಲ್ಪನೆಗಳಿವೆ! ಜಿಂಕೆಗಳು ಜಗಳಾಡುವಾಗ ಕೋಡುಗಳು ಒಂದಕ್ಕೊಂದು ತಗುಲಿ ಬೆಂಕಿ ಹತ್ತಿಕೊಳ್ಳುತ್ತದೆ ಎಂಬುದು ಒಂದಾದರೆ ಇನ್ನೊಂದು ನಂಬಿಕೆ ಮರಗಳು ತಾಗಿ ಹೊತ್ತಿಕೊಳ್ಳುತ್ತದೆ ಎಂಬುದು, ಅದರಲ್ಲಿಯೂ ಬಿದುರು ಒಂದಕ್ಕೊಂದು ತಾಗಿ ಬೆಂಕಿ ಹತ್ತಿಕೊಳ್ಳುತ್ತದೆ ಎಂಬುದು ತುಂಬ ಜನಪ್ರಿಯವಾದ ನಂಬಿಕೆ. ಆದರೆ, ಕಾಡಿನ ಬೆಂಕಿ ಈ ಯಾವುದರಿಂದಲೂ ಉಂಟಾಗುವುದಿಲ್ಲ, ಭಾರತದಲ್ಲಿ ಉಂಟಾಗುವ ಎಲ್ಲ ಹೌದು, ಎಲ್ಲ ಕಾಡ್ಗಿಚ್ಚೂ ಮಾನವಕೃತ ಎಂದು ತುಂಬ ವಿಷಾದದಿಂದ ಗುರುತಿಸಬೇಕಾಗಿದೆ. ಈ ಕುರಿತಾಗಿ ಅನೇಕ ಅಧ್ಯಯನಗಳು ನಡೆದಿವೆ.   ಜನ ಕಾಡಿಗೆ ಬೆಂಕಿ ಏಕೆ ಹಾಕುತ್ತಾರೆ? ಜನರು ಕಾಡಿಗೆ ಬೆಂಕಿ ಹಾಕಲು ಹತ್ತಾರು ಕಾರಣಗಳಿವೆ. ಬಿದಿರು ಮತ್ತಿತರ ಅರಣ್ಯ ಉತ್ಪನ್ನಗಳನ್ನು ಕಡಿದು ಸಾಗಿಸುವ ಲಾಬಿ ಈ ಕಾರ್ಯ ಮಾಡಿಸುತ್ತದೆ. ಅರಣ್ಯದಲ್ಲಿ ಬೇಟೆಯಾಡುವವರು ಪ್ರಾಣಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಿಸಲು ಕಾಡಿಗೆ ಬೆಂಕಿ ಕೊಡುತ್ತಾರೆ. ಅರಣ್ಯದಲ್ಲಿ ಬೇಸಾಯ ಮಾಡುವವರು ಒಂದು ಬೆಳೆ ಬಂದ ನಂತರ ಮತ್ತೆ ಬೆಳೆಯುವ ಮುನ್ನು ಬೆಂಕಿ ಹಾಕುತ್ತಾರೆ, ಇದು ಅರಣ್ಯದ ಬೇರೆ ಭಾಗಗಳಿಗೆ ದಾಟಿಕೊಳ್ಳುತ್ತದೆ. ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಲು ಬರುವ ಕೆಲವರು ನೆಲದಲ್ಲಿನ ಜಿಗ್ಗನ್ನು, ಹಾವು ಮುಂತಾದ ಸರಿಸೃಪಗಳನ್ನು ನಿವಾರಿಸಲು ಬೆಂಕಿ ಹಾಕುತ್ತಾರೆ, ಅದು ದೊಡ್ಡ ಕಾಡಿನ ಬೆಂಕಿಯಾಗಿ ಮಾರ್ಪಡುತ್ತದೆ. ಬೇಜವಾಬ್ದಾರಿ ಪ್ರವಾಸಿಗರ ಪಾಲು ಇದರಲ್ಲಿ ಕಡಿಮೆಯೇನಿಲ್ಲ! ಧೂಮಪಾನ ಮಾಡಿ ಎಸೆದ ಬೀಡಿ, ಸಿಗರೇಟುಗಳಿಂದ ಎಕರೆಗಟ್ಟಲೆ ಕಾಡು ನಾಶವಾಗಿದೆ. ಕಾಡಿಗೆ ಹೋಗುವುದರಿಂದಲೇ ವನ್ಯಸಂರಕ್ಷಣೆಯಾಗಿಬಿಡುತ್ತದೆ ಎಂಬ ಭ್ರಮೆಯಿಟ್ಟುಕೊಂಡು ಅಲ್ಲಿ ಹೋಗಿ ಅಡುಗೆ ಮಾಡಿಕೊಳ್ಳಲು ಹಚ್ಚಿದ ಬೆಂಕಿ ಆರಿಸದರೇ ಕಾಡೆ ಸುಟ್ಟುಹೋದ ಘಟನೆಗಳು ಸಾಕಷ್ಟಿವೆ. ಒಬ್ಬ ಪ್ರಾಮಾಣಿಕ ಅರಣ್ಯಾಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸುಲಭ ಮಾರ್ಗವೇ ಕಾಡಿಗೆ ಬೆಂಕಿ ಕೊಡುವುದು. ಯಾವುದೋ ವೈಮನಸ್ಯ ಕಾಡಿನ ಬೆಂಕಿಯಲ್ಲಿ ಕೊನೆಗೊಂಡಿರುವ ಅನೇಕ ಪ್ರಸಂಗಗಳಿವೆ. ಹಿಂದೆ ನಾಗರಹೊಳೆ ಕಾಡಿಗೆ ಜನನುಗ್ಗಿ ಪೆಟ್ರೋಲ್‍ ಸುರಿದು ಬೆಂಕಿ ಹಾಕಿದ್ದ ಘಟನೆ ನಮ್ಮ ಸಂರಕ್ಷಣಾ ಇತಿಹಾಸದಲ್ಲೊಂದು ದೊಡ್ಡ ಕಪ್ಪುಚುಕ್ಕೆ. ಇದೇ ರೀತಿಯಲ್ಲಿ ಭದ್ರಾ ಕಾಡಿಗೆ ಬೆಂಕಿ ಹಾಕಲಾಗಿತ್ತು. ಆಗ ಕಾಡು ದಿನಗಟ್ಟಲೆ ಹೊತ್ತಿ ಉರಿದಿತ್ತು. ಹತ್ತಾರು ವರ್ಷಗಳಾಗಿವೆ ಇವೆಲ್ಲ ಮುಗಿದು, ಆದರೆ, ಆ ಗಾಯಗಳನ್ನು ಇಂದಿಗೂ ಅಲ್ಲಿ ಕಾಣಬಹುದು.   ಕಾಡಿನ ಬೆಂಕಿಯ ದುಷ್ಪರಿಣಾಮಗಳು ಕಾಡಿಗೆ ಬೆಂಕಿ ಯಾವ ಕಾರಣಕ್ಕಾದರೂ ಬೀಳಲಿ ನಷ್ಟ ಮಾತ್ರ ಅಪಾರ ಪ್ರಮಾಣದ್ದಾಗಿರುತ್ತದೆ. ನೆಲವಾಸಿ ಪ್ರಾಣಿಗಳು, ಕೀಟ, ತಪ್ಪಿಸಿಕೊಳ್ಳಲಾಗದ ಹಕ್ಕಿಗಳು ನೇರವಾಗಿ ಸುಟ್ಟುಹೋಗುತ್ತವೆ. ಜೀವಜಾಲದ ಒಂದು ಕೊಂಡಿಗೆ ದೊಡ್ಡ ಹೊಡತಬೀಳುತ್ತದೆ. ಹಾಗೆಯೇ ಆಹಾರ ಸರಪಳಿಗೂ ಸಹ ಧಕ್ಕೆಯಾಗುತ್ತದೆ. ಇನ್ನು ಅಲ್ಲಿನ ಫಲವತ್ತಾದ ಮಣ್ಣಿನ ಮೇಲ್ಪದರ ಬೆಂಕಿಯಿಂದ ನಾಶವಾಗುತ್ತದೆ. ಇನ್ನು ಜೈವಿಕ ವಿಘಟನೆಗೆ ಒಳಗಾಗಿ ಮಣ್ಣಿನಪೋಷಕಾಂಶವಾಗ ಬೇಕಿದ್ದ ಒಣಗಿ ಬಿದ್ದ, ಎಲೆ, ಕೊಂಬೆ ಇತ್ಯಾದಿ ಜೈವಿಕ ಪದಾರ್ಥಗಳು ಸುಟ್ಟು ವ್ಯರ್ಥವಾಗಿ ಹೋಗುತ್ತವೆ. ಕಾಡಿನ ಸಾವಯವ ಇಂಗಾಲಾಂಶ (ಆರ್ಗಾನಿಕ್‍ ಕಾರ್ಬನ್‍) ಕಡಿಮೆಯಾಗಲು ಕಾರಣವಾಗುತ್ತದೆ.   ಮೊದಲೇ ಬೇಸಿಗೆಯಲ್ಲಿ ನೀರು, ಆಹಾರಕ್ಕೆ ತೊಂದರೆಯಿರುತ್ತದೆ, ಇನ್ನು ಬೆಂಕಿಯಿಂದ ಸುಟ್ಟುಹೋದ ಬೇಸಿಗೆಯಲ್ಲಿ ಹಣ್ಣುಬಿಡುವ (ಉದಾ: ನೆಲ್ಲಿಕಾಯಿ) ಮರಗಳು ಮಂಗ, ಮುಸುವ, ಕರಡಿ, ಜಿಂಕೆಗಳು ಕೊನೆಗೆ ಆನೆಗಳಿಗೂ ಸಹ ಆಹಾರದ ಕೊರತೆಯನ್ನು ಉಂಟು ಮಾಡುತ್ತದೆ. ಅನೇಕ ಪ್ರಾಣಿಗಳು ಹಸಿವಿನಿಂದ ಸಾಯುತ್ತವೆ. ಬೇಸಿಗೆಯಲ್ಲಿ ಆಹಾರ ನೀರು ಕಡಿಮೆಯಾಗಿ ಪ್ರಾಣಿಗಳು ಸಾಯುವುದು ಪ್ರಕೃತಿಯ ಸಹಜ ಚಕ್ರವೇ ಆದರೆ, ಮಾನವನ ಹಸ್ತಕ್ಷೇಪವಿರದಿದ್ದಲ್ಲಿ ಕಾಡಿಗೆ ಬೆಂಕಿ ಬೀಳುವುದಿಲ್ಲ, ಬೇಸಿಗೆ ವನ್ಯಜೀವಿಗಳಿಗೆ ಇಷ್ಟು ಅಸಹನೀಯವಾಗುವುದಿಲ್ಲ. ಇದೊಂದು ತಪ್ಪಿಸಬಹುದಾದ ದುರಂತ. ಕೆಲವೇ ದಿನಗಳ ಹಿಂದೆ ನಾಗರಹೊಳೆ ಅರಣ್ಯದಲ್ಲಿ ಬಿದ್ದ ಬೆಂಕಿಯ ಪರಿಣಾಮಗಳನ್ನು ಪರಿಶೀಲಿಸಲು ಹೋಗಿದ್ದ ದಕ್ಷ ಅರಣ್ಯಾಧಿಕಾರಿ ಮಣಿಕಂಠನ್‍ ಆನೆ ದಾಳಿಗೆ ಬಲಿಯಾಗಿದ್ದು ದುರಾದೃಷ್ಟಕರ. ಕಾಡಿಗೆ ಬೆಂಕಿ ಹಾಕಿದವರೇ ಈ ಸಾವಿಗೆ ಪರೋಕ್ಷ ಕಾರಣವಲ್ಲವೆ?   ಕಾಡಿಗೆ ಹೀಗೆ ನಿರಂತರವಾಗಿ ಬೆಂಕಿ ಬೀಳುತ್ತಿದ್ದರೆ ಇದು ಪ್ರಕೃತಿ ನಿಧಾನವಾಗಿ ಅದಕ್ಕೆ ಸ್ಪಂದಿಸಿ ಬೇಗ ಬೆಂಕಿಹಿಡಿಯದ ಮರಜಾತಿಗಳು ಮಾತ್ರ ಹೆಚ್ಚು ಬೆಳೆಯುವಂತೆ ಮಾಡುತ್ತದೆ. ಉಳಿದ ಉಪಯೋಗಿ ಮರಗಳು ಹೋಗಿ ವನ್ಯಜೀವಿ-ಅರಣ್ಯ-ನೀರಿನ ಕೊಂಡಿ ಕಳಚಿಹೋಗಿ ಮಾನವ ಮತ್ತಷ್ಟು ಸಂಕಷ್ಟಗಳಿಗೆ ತುತ್ತಾಗುತ್ತಾನೆ. ಆ ಲಕ್ಷಣಗಳು ಈಗಾಗಲೇ ಕಂಡುಬರುತ್ತಿವೆ.   ಕಾಡಿನಿಂದ ಬಿದುರನ್ನು ಸಾಗಿಸುವ ಲಾಬಿ ಸಾಕಷ್ಟು ತೊಂದರೆ ಮಾಡಿತು. ಬೇಸಿಗೆಯಲ್ಲಿ ಬಿದಿರಿಗೆ ಬೆಂಕಿಹತ್ತಿಕೊಳ್ಳುವುದರಿಂದ ಅದನ್ನು ಕಡಿದು ಸಾಗಿಸಲಾಗುವುದು ಎಂಬ ಹಾಸ್ಯಾಸ್ಪದ ಹೇಳಿಕೆ ಬೇರೆ! ಈ ಲಾಬಿಯಿಂದಲೂ ಸಾಕಷ್ಟು ತೊಂದರೆ ಉಂಟಾಗಿದೆ. ಕೊಟ್ಯಂತರ ವರ್ಷಗಳಿಂದ ಬಿದುರು ಬೇಸಿಗೆಯಲ್ಲಿ ಹೊತ್ತುರಿಯದ್ದು ಈಗ ಏಕೆ ಹೊತ್ತಿ ಉರಿಯುತ್ತದೆ?! ಈ ವಾದಗಳನ್ನು ನ್ಯಾಯಾಲದ ಮೆಟ್ಟಿಲು ಹತ್ತಿ ಯಶಸ್ವಿಯಾಗಿ ಹತ್ತಿಕ್ಕಿದ್ದು ನಮ್ಮ ವನ್ಯಸಂರಕ್ಷಣಾಸಕ್ತರ ಸಾಹಸ. ಇಂದು ರಕ್ಷಿತಾರಣ್ಯಗಳಿಂದ ಅಕ್ಷರಶಃ ಒಂದು ಹುಲ್ಲುಕಡ್ಡಿಯನ್ನೂ ಹೊರತೆಗೆಯುವಂತಿಲ್ಲ ಎಂಬ ಆದೇಶವನ್ನು ಘನವೆತ್ತ ಸರ್ವೋಚ್ಚ ನ್ಯಾಯಾಲಯ ನೀಡಿದೆ.   ಈ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ಹೇಳಲೇ ಬೇಕು. ಪಾಪ! ಬೇಸಿಗೆ! ಎಂದು ಕಾಡಿನಲ್ಲಿ ನೀರಿನಾರಸರೆಗಳನ್ನು ಸೃಷ್ಠಿ ಮಾಡುತ್ತಾರೆ. ಇದು ಖಂಡಿತವಾಗಿಯೂ ಆಗಬಾರದು. ಇಂತಹ ಹಸ್ತಕ್ಷೇಪಗಳು ಮೇಲ್ನೋಟಕ್ಕೆ ಎಷ್ಟು ಮಾನವೀಯವಾಗಿ ಕಂಡರೂ ಮೂಲತಃ ಯಾವುದೋ ಕೆಲ ಪ್ರಭೇಧಗಳನ್ನು ಮಾತ್ರ ಪೋಷಿಸಿ ಕಾಡಿನ ಅಸಮತೋಲನಕ್ಕೆ ಕಾರಣವಾಗುತ್ತದೆ. ಕಾಡನ್ನು ಹೇಗಿದೆಯೋ ಹಾಗೆ ಸಂರಕ್ಷಿಸುವುದು ಮಾತ್ರ ವೈಜ್ಞಾನಿಕ ಸಂರಕ್ಷಣೆ.   ಅಗ್ನಿ ಅನಾಹುತವಾಗದಿರಲೆಂದು ಅರಣ್ಯ ಇಲಾಖೆ ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತದೆ. ಬೇಸಿಗೆಗೆ ಮೊದಲೇ ಸೂಕ್ಷ್ಮ ಜಾಗಗಳನ್ನು ಗುರುತಿಸಿ ಅಲ್ಲಿನ ಒಣಹುಲ್ಲು ಇತ್ಯಾದಿಗಳನ್ನು ತೆರವು ಮಾಡಿಬಿಡುತ್ತಾರೆ. ಕೆಲವು ಕಡೆ ಅವರೇ ಸುಟ್ಟುಹಾಕುತ್ತಾರೆ. ಇದರಿಂದಾಗಿ, ಅದರಾಚೆಗಿನ ಪ್ರದೇಶದಲ್ಲಿ ಬೆಂಕಿಬಿದ್ದರೆ ಅದು ಅಷ್ಟು ಸುಲಭವಾಗಿ ಕಾಡಿಗೆ ದಾಟಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಜನರ, ಅದರಲ್ಲಿಯೂ ಕಾಡಿನ ಸುತ್ತ ವಾಸಿಸುವವರ ಬೆಂಬಲ ಬಹಳ ಮುಖ್ಯ. ನಗರವಾಸಿಗಳಾಗಿ ಕಾಡಿನ “ಬಳಕೆದಾರರಾದ” ನಮಗೆ ಈ ಕುರಿತಾದ ಜವಾಬ್ದಾರಿ ಸಾಕಷ್ಟಿದೆ. ಮುಖ್ಯವಾಗಿ ಶಿಕ್ಷಣ, ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ಕುರಿತ ಅಧ್ಯಯನಗಳೂ ನಮ್ಮಲ್ಲಿ ಆಗಬೇಕಿವೆ. ಆ ದಿಕ್ಕಿನಲ್ಲಿ ನಡೆಯೋಣ.

Preparatory Journey of Torch bearers of Purnapramati

Tuesday, August 7th, 2018

      G. Sulochana,  Class teacher – X  grade   It was May 23rd 2017 . Children were beginning a new academic year. Purnapramati’s first batch of children had arrived to X grade!!Teachers were ready to take up their new responsibility eagerly.  The new academic year had a great start.  Children were excited   that they were in X standard and had to take up the Board exams. Teachers enthusiastically gave assignments as it was part of the assessments for the Board.  Children also produced good work under the guidance of teachers.  After FA1 and FA2 we were trying to assess the strengths and weakness of each student. The SA1 results indicated that the students had not achieved their true potential as they weren’t working hard enough.  We felt that something more must be done to awaken our children and make them aware of the task on hand.  So Cycle tests were introduced where , in each subject a topic was taken up and tests were conducted on a rotating basis.  This would help them to learn each topic thoroughly.  Small incentives like key chains were introduced to make them go deep into the topic and to learn it well.  Children felt motivated and worked and tried to give their best.          Then after FA3 and FA4 we had completed the portions and now we had to ensure that each child was confident to take up the exams.  So now we came up with a new strategy for improving them.  We decided that we would take extra classes for them between 3.30 and 4.30pm so that whichever topic they were querulous about could be taken up. This also was done on a rotating basis so that all subjects could be given importance.  Apart from this, board questions were discussed and practiced so that children could feel confident when they would take up the preparatory exams which were to begin shortly.  Also question banks were procured and children were working out the model question papers in Math.  The first preparatory showed us where we had to work with regard to each student.  Since we have only 4 students in Girinagar and another 6 in Anandavana, we could look at each student closely and understand their strengths and weakness.  Now, after three preparatory,  I can say that our students have improved by leaps and bounds when compared to the time we started working with them.  Still we have more work to do till the last day and even during the exams.  On Monday, the 19th of March we have special prayers for our children who are going to take up the X Board exams starting from March 23rd.  We are also getting the Blessings of our Gurus on that occasion.  I pray God that our children will perform well and bring laurels to their alma mater. 17.3.2018

Musings on Purnapramati Utsava (2017-2018)

Tuesday, August 7th, 2018

    Vandana Adult, Pre-primary    Purnapramati Utsava is always an integral part of school activities that happens once in an year where celebration, joy and feast are seen no less than a family festival. I’m very happy to be part of this utsava. It’s always a moment of celebration filled with enthusiasm. The outer and inner look of Kalakshetra was so rejuvenating and appealing to everyone. The beautiful rangolis,  art and craft work, the collage of photos and elective drawings displayed were all mesmerising to each one of us. Ambience was filled with Bhakti theme and all the great hands behind this work deserve a big applause! Being part of utsava’s preparation and conducting them itself is a big learning to one and all. Every year’s theme for utsava is inspiring and enhances our knowledge. This year’s bhakti theme gave so much knowledge about devotees be it Annamacharya or Upmanyu plays. Each program that was performed was unique and generally not seen in conventional schools. I really enjoyed kalaripayatu and Annamacharya dramas which were well performed with lot of devotion and involvement. All the plays, dance and elective programs including guru vandana program were excellent. All adhyapakas including samskrita teachers, elective teachers, children and parents have contributed to their best . Even the pre-primary children were very enthusiastic and filled with energy to perform with their costumes. Adhyapakas and parents contribution in making the beautiful properties and costumes is a big task and was well accomplished. The guests of the utsava were very inspiring and motivating to each one of us. The scholar Garimella Balkrishna’s involvement in singing and his devotion to Lord Rama was amazing. Smt. Tejaswini Ananthakumar from Adamya chetana is doing a great work to the society and to the youth. All the guests were accomplished in their areas of field and respectable. Purnapramati Utsava is a family event where everyone was so involved and took the audience, especially senior parents to their olden times. Overall Utsava is and will always be great for anyone to be part of, to enjoy and cheer with lot of learning experience.

ಬೆಲ್ಲದ ರಸಚಕ್ರ ಮತ್ತು ಸಕ್ಕರೆಯ ಅಷ್ಟವಕ್ರ

Friday, January 26th, 2018

  Nagesh Hegde Ecologist ಸುತ್ತ ಒಂದರ್ಧ ಕಿಲೊಮೀಟರ್‌ವರೆಗೂ ಪರಿಮಳವನ್ನು ಬೀರುವ ಮಲೆನಾಡಿನ ಆಲೆಮನೆ ಎಂದರೆ ಎಲ್ಲವೂ ವೃತ್ತಾಕಾರ. ಗಾಣದ ಸುತ್ತ ನೊಗಹೊತ್ತ ಕೋಣಗಳು ವೃತ್ತಾಕಾರ ಸುತ್ತುವುದು, ಗಾಣವಂತೂ ವೃತ್ತಾಕಾರವೇ. ಅದರಿಂದ ಜಿನುಗುವ ರಸವನ್ನು ಹಿಡಿದಿಡುವ ಡ್ರಮ್ ಕೂಡ ವೃತ್ತಾಕಾರ. ಆ ಸಿಹಿರಸವನ್ನು ಕುದಿಸುವ ಕೊಪ್ಪರಿಗೆಯೂ ವೃತ್ತಾಕಾರ. ಕುದಿಯುವ ರಸದಿಂದ ಕಸಕಡ್ಡಿಗಳನ್ನು ತೆಗೆಯುವ ಊದ್ದನ್ನ ಸೌಟೂ ವೃತ್ತಾಕಾರ. ಬೆಲ್ಲವನ್ನು ತುಂಬುವ ಕೊಡಗಳಂತೂ ವೃತ್ತಾಕಾರ. ಆ ನೊರೆಬೆಲ್ಲವನ್ನು ಅತಿಥಿಗಳಿಗೆ ನೀಡುವುದೂ ವೃತ್ತಾಕಾರದ ಮುತ್ತುಗದ ಎಲೆಗಳಲ್ಲೇ. ಆಲೆಮನೆಯ ಸುತ್ತಲಿನ ಅಗೋಚರ ವಿದ್ಯಮಾನಗಳೂ ವೃತ್ತಾಕಾರವಾಗಿಯೇ ಇರುತ್ತವೆ. ಕಬ್ಬಿನ ಗದ್ದೆಯಿಂದ ಸವರಿ ತಂದ ಎಲೆಗಳು ಮೇವಿನ ರೂಪದಲ್ಲಿ ಕೋಣನ ಜಠರಗಳಿಗೆ ಹೋಗಿ, ಅವುಗಳಿಂದ ಹೊರಬರುವ ಸೆಗಣಿ ಮತ್ತೆ ಕಬ್ಬಿನ ಗದ್ದೆಗೇ ಸೇರುವುದು; ರಸ ತೆಗೆದ ಜಲ್ಲೆಗಳು ಒಣಗಿ, ಆಲೆ ಒಲೆಯಲ್ಲಿ ಉರಿದು ಬೂದಿಯಾಗಿ ಮತ್ತೆ ಹೊಲಕ್ಕೆ ಸೇರುವುದು -ಅದೂ ವೃತ್ತಾಕಾರ. ಇನ್ನು ವರ್ಷದಿಂದ ವರ್ಷಕ್ಕೆ ಅದೇ ಡಿಸೆಂಬರ್-ಜನವರಿಯಲ್ಲಿ ಆಲೆಮನೆ ನಡೆಯುವುದು; ಕಬ್ಬು, ಕಬ್ಬಿನ ರಸ, ನೊರೆಬೆಲ್ಲವನ್ನು ಸವಿದು ಹೋದ ಅತಿಥಿಗಳು ಅದನ್ನು ನೆನಪಿನಲ್ಲಿಟ್ಟುಕೊಂಡು ಬೇರೆ ಏನೇನೋ ಕಾರಣಗಳಿಂದ ಆಲೆಮನೆ ಯಜಮಾನನ ಕುಟುಂಬವನ್ನು ತಮ್ಮಲ್ಲಿಗೂ ಕರೆದು ಉಪಚರಿಸುವುದೂ ಒಂದು ರೀತಿಯಲ್ಲಿ ವೃತ್ತಾಕಾರದ ಚಲನೆಯನ್ನೇ ನೆನಪಿಸುತ್ತದೆ. ಅದೇ ಕಬ್ಬು ಕಾರ್ಖಾನೆಗೆ ಹೋಗಿ ಸಕ್ಕರೆ ಆಗುವಾಗ ಏನೇನಾಗುತ್ತದೆ ನೋಡಿ: ಆಲೆಮನೆಯ ಪರಿಮಳದ ಬದಲು ದುರ್ನಾತ. ಆಲೆಮನೆ ನಡೆಸುವವರು ನಿಮ್ಮನ್ನು ಆದರದಿಂದ ಕರೆದು ಉಪಚರಿಸಿ, ಕಬ್ಬಿನ ರಸವನ್ನು ಕುಡಿಯಲು ಕೊಟ್ಟರೆ, ಸಕ್ಕರೆ ಕಾರ್ಖಾನೆಯ ಕಾವಲುಗಾರರು ನೀವೇಕೆ ಬಂದಿರೆಂದು ಗದರಿಸಿ, ಒಳಪ್ರವೇಶಕ್ಕೆ ಏನೆಲ್ಲ ನಿರ್ಬಂಧ ವಿಧಿಸುತ್ತಾರೆ. ಒಳಗೊ ಅಪಾರ ಗದ್ದಲ, ಗಬ್ಬು ನಾತ. ನೀವು ಎಲ್ಲಾದರೂ ಏನಾದರೂ ಮುಟ್ಟಿಬಿಟ್ಟೀರೆಂದು ವಾಚ್‌ಮ್ಯಾನ್ ನೋಡುತ್ತಿರುತ್ತಾರೆ. ಕಬ್ಬನ್ನು ಅರೆಯುವ ಯಂತ್ರಗಳಿಂದ ಕೊಳವೆ ಮೂಲಕ ಕರೀಹೊಗೆ ಆಕಾಶಕ್ಕೆ. ಕಬ್ಬಿನ ರಸಕ್ಕೆ ಕೆಮಿಕಲ್ ಸೇರಿಸಿ ಕುದಿಸಿ ಹೊರಬಂದ ತ್ಯಾಜ್ಯಗಳು ನೀರಿಗೆ ಸೇರಿ ಅದೆಷ್ಟೊ ಕಿಲೊಮೀಟರ್‌ವರೆಗೆ ದುರ್ನಾತ. ಅಂತರ್ಜಲಕ್ಕೂ ಕೊಳೆದ್ರವ್ಯಗಳು ಸೇರಿ ಕೊಳವೆ ಬಾವಿಯ ನೀರೂ ಕಂದು. ಕೆಲವೆಡೆ ದುರ್ವಾಸನೆ. ಕಬ್ಬನ್ನು ಅರೆಯಲು ಬೇಕಾದ ಡೀಸೆಲ್ ಅಥವಾ ವಿದ್ಯುತ್ ಶಕ್ತಿಯೂ ದೂರದ ಯಾವುದೋ ಸಾಕಷ್ಟು ವಿಪ್ಲವಗಳನ್ನು ಸೃಷ್ಟಿ ಮಾಡಿಯೇ ಬಂದಿರುತ್ತದೆ. ಕಾರ್ಖಾನೆಯಿಂದ ಹೊರಬರುವ ಕಾಕಂಬಿ ಅಲ್ಲೇ ಸಮೀಪದ ಬ್ರೂವರಿಗೆ ಹೋಗಿ ಮದ್ಯವಾಗಿ ಬಾಟಲಿಯಲ್ಲಿ ನಗರಕ್ಕೆ ಬಂದು ಎಲ್ಲೆಲ್ಲೋ ಹೋಗಿ ಏನೆಲ್ಲ ವಿಪ್ಲವಗಳಿಗೆ ಕಾರಣವಾಗುತ್ತದೆ. ಕಾರ್ಖಾನೆಯಿಂದ ಹೊರಬಿದ್ದ ಮೋಹಕ ಬಿಳಿಪುಡಿಯೂ ಹಾಗೇ ಎಲ್ಲೆಲ್ಲೋ ಸುತ್ತಿ, ಎಷ್ಟೊಂದು ಬಗೆಯಲ್ಲಿ ರೂಪಾಂತರಗೊಂಡು, ಮಿಠಾಯಿ, ಜೂಸ್, ಪೆಪ್ಪರ್‌ಮಿಂಟ್, ಬೇಕರಿ ಪದಾರ್ಥಗಳಲ್ಲಿ ಸೇರಿ ದೇಶದ ಎಲ್ಲರನ್ನೂ ಸಿಹಿಯಲ್ಲಿ ಮಿಂದೇಳಿಸುತ್ತ ಅನೇಕರಿಗೆ ಸಕ್ಕರೆ ಕಾಯಿಲೆ ಉಂಟುಮಾಡಿ, ಇನ್ಸೂಲಿನ್ ಚುಚ್ಚುಮದ್ದು ಹಾಕಿಸಿಕೊಳ್ಳುವಂತೆ ಅಥವಾ ಆಸ್ಪತ್ರೆಗಳಿಗೆ ಎಡತಾಕುವಂತೆ ಮಾಡುತ್ತದೆ. ಡಯಾಬಿಟೀಸ್ ರೋಗಿಗಳಲ್ಲಿ ಕೆಲವು ನತದೃಷ್ಟರು ಗ್ಯಾಂಗ್ರಿನ್ ರೋಗಕ್ಕೊ, ಕಿಡ್ನಿ ವೈಫಲ್ಯಕ್ಕೊ ತುತ್ತಾಗಿ ಕಂತು ಕಂತುಗಳಲ್ಲಿ ಅವಸಾನ ಹೊಂದುತ್ತಾರೆ. ಜಗತ್ತಿನಲ್ಲಿ ನಮ್ಮ ದೇಶಗಳಲ್ಲಿರುವಷ್ಟು ಸಕ್ಕರೆ ರೋಗಿಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಸಾಂಪ್ರದಾಯಿಕ ಬೆಲ್ಲ ತಯಾರಿಕೆ ಎಂದರೆ ಅದು ನಿಸರ್ಗ ನಿಯಮಗಳಿಗೆ ತಕ್ಕಂತೆ ಸುಸ್ಥಿರವಾದ ವೃತ್ತಾಕಾರದ ವಿದ್ಯಮಾನವಾಗಿತ್ತು. ಅದು ಆರೋಗ್ಯಪೂರ್ಣ ಚಟುವಟಿಕೆಯಾಗಿತ್ತು. ಕಬ್ಬಿನ ಗದ್ದೆಗಳಲ್ಲಿ ಬೆವರಿಳಿಸಿ ದುಡಿಯುವ ಶ್ರಮಿಕರಿಗೆ ವರ್ಷವಿಡೀ ಬೆಲ್ಲದ ಪಾನಕ ಸಿಗುತ್ತಿತ್ತು. ಬೆಲ್ಲದಿಂದ ಲಭಿಸುವ ಶಕ್ತಿಯೆಲ್ಲ ಶ್ರಮದ ದುಡಿಮೆಗೆ, ಹೆಚ್ಚಿನ ಪಾಲು ನಿಸರ್ಗ ಸಂವರ್ಧನೆಗೇ ಬಳಕೆಯಾಗುತ್ತಿತ್ತು. ಈಗ ಅಂಥ ಸಂಪ್ರದಾಯಗಳು ಒಂದೊಂದಾಗಿ ನಮ್ಮ ಕೈಬಿಟ್ಟು ಹೋಗುತ್ತಿವೆ. ಹೊಲಕ್ಕೆ ಟ್ರ್ಯಾಕ್ಟರ್, ರಸಗೊಬ್ಬರ, ಗಾಣಕ್ಕೆ ಡೀಸೆಲ್ ಯಂತ್ರ, ಬೆಲ್ಲವನ್ನು ಬಿಳಿ ಮಾಡುವ ಗಂಧಕದ ಪುಡಿ ಎಲ್ಲ ಬಂದಿವೆ. ಮನೆಯಲ್ಲಿ ಬೆಲ್ಲದ ಪಾನಕದ ಬದಲು ಸಕ್ಕರೆ ಪೇಯ, ಡೇರಿ ಹಾಲು ಬಂದಿದೆ. ಬೆಲ್ಲದ ಹೋಳಿಗೆ ಮಾಡಲು ಕಣಕದ ಮಿಶ್ರಣಕ್ಕೆ ರುಬ್ಬುಗುಂಡಿನ ಬದಲು ಮಿಕ್ಸಿ ಬಂದಿದೆ. ಸಕ್ಕರೆ ಹೋಳಿಗೆ ಹೆಚ್ಚು ಜನಪ್ರಿಯ ಆಗಿದೆ. ಸಕ್ಕರೆ ಕಾಯಿಲೆ ಹಳ್ಳಿಗಳಿಗೂ ಬಂದಿದೆ. ಹುಟ್ಟು, ಸಾವು, ಮರುಹುಟ್ಟು ಎಂಬ ಚಕ್ರೀಯ ವಿದ್ಯಮಾನ ಈಗ ನಿಸರ್ಗದ ಮಡಿಲಿನಿಂದ ದಾಟಿ ಆಸ್ಪತ್ರೆಗಳಲ್ಲಿ ನಡೆಯುವ ವ್ಯವಹಾರಗಳಾಗಿವೆ.

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.