MY COLLEGUES

MY COLLEGUES

Wednesday, September 6th, 2017

The word ‘COLLEGUE’ seems to be formal in ‘Purnapramati’. Here we call each other as ಅಣ್ಣ / ಅಕ್ಕ . We have a feeling that we all belong to one family “Purnapramati”.   In my five years of journey in “Purnapramati” there is a special bonding with all the teachers. Everyone has the quality of helping each other, many times I discuss queries with them and always they are ready with some suggestions and solutions. Even though there are many senior and experienced teachers, they are always there to support and motivate me to move further. I still remember my early days in Purnapramati when I was handed over the responsibility as a class teacher. At the end of the year we were supposed to submit the annual report and this was a new experience to me, I remember Geetha akka, Balanna and Meena akka who stayed back till 6:00 pm with me in school and helped to complete my work that was the day I realized how helpful and dedicated everyone here is, keeping aside their personal work. In my last two years after completing elementary training it was a very big challenge to me to introduce this system to students. At this time I got lot of support from my environment teachers- Smitha akka and Ranjitha akka. Now I am very much comfortable and confident teaching in this system. One of the other moments I always look forward is ‘Mahotsava’. This is the time we all teachers come together and enjoy. Our Principal Shashirekha akka motivates me with her talks and I can see a change in myself from day one of joining Purnapramati till now. Here even our management members are easily approachable. Lot of impetus is given to see that even teachers grow, by exposing us to various training programs- both academically and personality development. In addition to this with many programs like Tatvachintane are devised with the view of helping us grow spiritually. Working with “Sudha Pandits”,  I have learnt many values and they have given me a lot of moral support. Each day in Purnapramati is a learning, every moment spent with my colleagues here is a new experience. I feel very lucky to serve in this ‘Purnapramati’ family which has helped me to face challenges and to be more confident in my life.

ಮರೆಯಲಾಗದ ಆ ಕ್ಷಣ

ಮರೆಯಲಾಗದ ಆ ಕ್ಷಣ

Wednesday, September 6th, 2017

ನಮ್ಮ ಗುರುಗಳಾದ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥಶ್ರೀಪಾದರು ಯಾತ್ರಿಕರನ್ನು ಕರೆದುಕೊಂಡು ಪ್ರತಿ ವರ್ಷ ಉತ್ತರ ಭಾರತ ಯಾತ್ರೆಯನ್ನು ಮಾಡುತ್ತಾರೆ. ೨೦೦೯-೧೦ ರಲ್ಲಿ ಗುರುಗಳ ಜೊತೆ ಉತ್ತರ ಭಾರತ ಯಾತ್ರೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಯಾತ್ರಿಕರೆಲ್ಲ ಬೇರೆ ವಾಹನದಲ್ಲಿ ಬರುತ್ತಿದ್ದರೆ ನಾನು ಗುರುಗಳ ಜೊತೆಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಸಾವಿರಾರು ಕಿ.ಮೀ ಪ್ರಯಾಣದ ನಂತರ ನೈಮಿಷಾರಣ್ಯಕ್ಕೆ ಬಂದೆವು. ಅಲ್ಲಿ ಗೋಮತಿ ನದಿಯ ತೀರಕ್ಕೆ ಹೊರಟೆವು. ಆಗಲೇ ಬಹಳ ಪ್ರಯಾಣ ಮಾಡಿದ್ದರಿಂದ ಸಹಜವಾಗಿ ಎಲ್ಲರಿಗೂ ಸ್ವಲ್ಪ ಸುಸ್ತಾಗಿತ್ತು. ಗುರುಗಳಿಗೂ ಆಗಿತ್ತು. ಆದರೆ ನಮಗೆ ಸುಸ್ತಾದರೆ ಅದು ಮುಖದಲ್ಲಿ ಎದ್ದು ಕಾಣುತ್ತದೆ. ಗುರುಗಳಿಗೆ ಸುಸ್ತಾದರೆ ಅದರ ಗೆರೆಯೂ ಕಾಣುವುದಿಲ್ಲ. ಅಷ್ಟು ಉತ್ಸಾಹದಿಂದ ಇರುತ್ತಾರೆ. ಗೋಮತಿ ತೀರಕ್ಕೆ ಹೋಗಲು ಸುಮಾರು ೫೦ ಮೆಟ್ಟಿಲುಗಳನ್ನು ಇಳಿಯಬೇಕಿತ್ತು. ಶ್ರೀಪಾದರು “ತುಂಬಾ ಆಯಾಸ ಆಗಿದೆ. ನಡೆಯುವುದು ಕಷ್ಟ” ಎಂದರು. ಆಗಾಗ ವಿನೋದಕ್ಕಾಗಿ ಶಿಷ್ಯರಿಗೆ ಗುರುಗಳು ಇಂತಹ ಬಿಸಿಗಳನ್ನು ಮುಟ್ಟಿಸುತ್ತಿರುತ್ತಾರೆ. ಆಗಲೇ ನಾನು ತೀರ್ಮಾನ ಮಾಡಿದೆ. ಮರಳಿ ಬರುವಾಗ ಮೆಟ್ಟಿಲು ಹತ್ತುವಾಗ ಗುರುಗಳನ್ನು ಎತ್ತಿಕೊಂಡು ಹತ್ತಬೇಕು ಎಂದು. ಆದರೆ ಗುರುಗಳು ಬಹಳ ಸಂಕೋಚದ ಸ್ವಭಾವದವರು. ಇದಕ್ಕೆ ಒಪ್ಪೊಲ್ಲ ಅಂತ ಗೊತ್ತು. ಒಮ್ಮೆ ಅವರ ಬಳಿ ನಿವೇದಿಸಿ ಸುಮ್ಮನಾದೆ. ಗೋಮತಿ ನದಿಯ ಪವಿತ್ರಜಲವನ್ನು ನಮಗೆ ಪ್ರೋಕ್ಷಿಸಿ ನಮ್ಮ ಮನದ ಕಲ್ಮಶ ತೆಗೆದು ಗುರುಗಳು ಹೊರಟರು. ನಾವು ಅವರನ್ನು ಹಿಂಬಾಲಿಸಿದೆವು. ಮೆಟ್ಟಿಲು ಹತ್ತಿರ ಬರುತ್ತಿದ್ದಂತೆ ಗುರುಗಳು ಹಾವಿಗೆಯನ್ನು ಬಿಟ್ಟು ಬರಿಗಾಲಿನಿಂದ ಮೆಟ್ಟಿಲನ್ನು ನಿಧಾನ ಹತ್ತಲು ಆರಂಭಿಸಿದರು. ನಾನು ಅವರ ಹಿಂದೆ ಹೋಗಿ ಅವರನ್ನು ಮಗುವಂತೆ ಎತ್ತಿಕೊಂಡು ಮೆಟ್ಟಿಲುಗಳನ್ನು ಹತ್ತಿದೆ. ನನ್ನ ಕೈ ಹಿಡಿದ ನಗುಮೊಗದ ಗುರುಗಳು “ರಾಮ-ಕೃಷ್ಣ” ಎನ್ನುತ್ತಿದ್ದರು. ಮೇಲೆ ಏರಿ ಗುರುಗಳನ್ನು ಕೆಳಗೆ ಇಳಿಸಿದೆ. ಗುರುಗಳು ಹಸನ್ಮುಖರಾಗಿ ಒಮ್ಮೆ ನನ್ನ ನೋಡಿ ಅನುಗ್ರಹಿಸಿದರು. ನಾರಾಯಣನನ್ನು ಹೊತ್ತ ಗರುಡನಿಗೆ ಯಾವ ಕೃತಾರ್ಥ ಭಾವನೆ ಇರುತ್ತದೋ ಆ ಭಾವನೆ ನನಗಾಗ ಮೂಡಿತ್ತು. ನನ್ನ ಜೀವನ ಸಾರ್ಥವಾಯಿತು ಎಂದೆನಿಸಿತು. ನನ್ನ ಜೀವನದ ಈ ಅಮೂಲ್ಯ ಕ್ಷಣವನ್ನು ನನ್ನ ಮಿತ್ರ ಕ್ಯಾಮೆರಾದಲ್ಲಿ ಸೆರೆ ಹಿಡಿದ. ಅದನ್ನು ಈಗಲೂ ನೋಡಿ ಧನ್ಯತೆಯನ್ನು ಅನುಭವಿಸುತ್ತಿರುತ್ತೇನೆ. ಗುರುಗಳನ್ನು ನಾನು ಎತ್ತಿಕೊಂಡಿದ್ದನ್ನು ನೋಡಿ  ಕೆಲವರು ನನ್ನ ಬೈದರು. “ಬೀಳಿಸಿದ್ದರೆ ಏನಾಗುತ್ತಿತ್ತು” ಅಂತ. ಪಾಪ ! ಅವರಿಗೂ ಗುರುಗಳ ಕಾಳಜಿ. ಆ ಕಾಳಜಿ ನನಗೂ ಇದ್ದಿದ್ದರಿಂದ ದೇವರು ಈ ಕೆಲಸ ಮಾಡಿಸಿದ. ಜೀವನವನ್ನು ಪಾವನ ಮಾಡಿಸಿದ.

Personal Recount

Personal Recount

Wednesday, September 6th, 2017

My first program – Yakshagana     It was evening 5.00p.m., on May 21st at Ravindra Kalakshetra.  My friends were busy chatting with each other.  I was  busy learning the dialogues of the story Abimanyu Kalaga.  This program was held on May 21st because of the inauguration of the new institution.  This Yakshagana act was based on the Mahabharatha story.  Hundreds of people had gathered with several VIPs.  I was surprised to see them.  My neighbours were also present to cheer me up.  Some foreigners also entered backstage to see the wonderful and colorful costumes of Yakshagana.       After ten minutes, I felt hot and itchy because of the makeup on my face.  I was reading line by line the script that my teacher had given two weeks back and was tensed as it was my first program.  Some of my friends also felt uncomfortable in their thick costumes.       The audience were waiting eagerly for the program of the children.  At last the act started at 6.00p.m.  As it rained heavily, the temperature dropped and we all felt cool.  Inspite of the rain, people were watching the program eagerly.  When I stepped on the stage, the fear that I had before disappeared.  I felt very proud of myself as I was performing in front of a huge audience.  I heard people encouraging me as I performed as Abimanyu, which was the main character in the story Abhimanyu Kalaga.  All of us remembered our dialogues and put up a great show.      Finally, the act finished at 10.00p.m.  Everyone wished me and some people also gave me books.  My parents were very happy.  I was honoured with a prize by the M.L.A.  and I felt very proud and happy.  I will not forget that day in my life. I enjoyed the Yakshagana and that was the most memorable day of my life.

ರಾಪಾನೂಯಿಯ ದುರಂತ ಕತೆ

ರಾಪಾನೂಯಿಯ ದುರಂತ ಕತೆ

Wednesday, September 6th, 2017

ಗಿಡಮರಗಳನ್ನು, ಪಕ್ಷಿಗಳನ್ನು ಮುಗಿಸಿದ ಮೇಲೆ ಏನುಳಿದೀತು ಅಲ್ಲಿ? ಶಾಂತ ಮಹಾಸಾಗರದಲ್ಲಿ ಈಸ್ಟರ್ ಐಲ್ಯಾಂಡ್ ಎಂಬ ಒಂದು ಪುಟ್ಟ ನತದೃಷ್ಟ ದ್ವೀಪ ಇದೆ. ಮೈಸೂರು ನಗರದಷ್ಟೇ ವಿಶಾಲವಾದ ದ್ವೀಪ. ಸುತ್ತ ಎರಡು ಸಾವಿರ ಕಿಲೊಮೀಟರ್‌ವರೆಗೆ ಎಲ್ಲೂ ದೊಡ್ಡ ಜನವಸತಿಯ ದ್ವೀಪಗಳೇ ಇಲ್ಲ. ೧೭೨೨ರಲ್ಲಿ ಡಚ್ಚರು ಈಸ್ಟರ್ ಹಬ್ಬದ ದಿನವೇ ಅಲ್ಲಿಗೆ ಹಡಗಿನಲ್ಲಿ ಬಂದಿಳಿದರು. ಆ ದ್ವೀಪಕ್ಕೆ ‘ಈಸ್ಟರ್ ದ್ವೀಪ’ ಎಂದೇ ಹೆಸರಿಟ್ಟರು. ಆಗ ಅಲ್ಲಿ ಸುಮಾರು ೭೦೦ ಜನ ವಾಸಿಸುತ್ತಿದ್ದರು. ಹಿಪ್ಪುನೇರಳೆ ನಾರಿನ ಬಟ್ಟೆ ತುಂಡನ್ನು ಸುತ್ತಿಕೊಂಡು, ಗಡ್ಡೆಗೆಣಸು, ಹುಲ್ಲಿನ ಧಾನ್ಯ ತಿನ್ನುತ್ತ ತಂತಮ್ಮ ಪಂಗಡಗಳ ಮಧ್ಯೆ ಕಾದಾಡುತ್ತ್ತ ಹೇಗೋ ಬದುಕಿದ್ದರು. ಕತ್ತಿ, ಕೊಡಲಿ ಇಲ್ಲ; ಕುರಿ, ಎಮ್ಮೆ, ಕುದುರೆಗಳಿಲ್ಲ. ತೀರಾ ಕಾಡು ಜನ. ತಮ್ಮನ್ನು ಅವರು ‘ರಾಪಾ ನೂಯಿ’ ಎಂದು ಕರೆದುಕೊಳ್ಳುತ್ತಿದ್ದರು. ಸುತ್ತ ನೋಡಿದರೆ, ಅದು ಒಂದು ಕಾಲಕ್ಕೆ ತುಂಬ ಶ್ರೀಮಂತ ದ್ವೀಪವಾಗಿದ್ದಂತೆ ಕಾಣುತ್ತಿತ್ತು. ೨೦-೩೦ ಅಡಿ ಎತ್ತರದ ಕಲ್ಲಿನ ಮೂರ್ತಿಗಳು ಎಲ್ಲೆಂದರಲ್ಲಿ ಕಾಣುತ್ತಿದ್ದವು. ಕೈಯಲ್ಲಿ ಕಬ್ಬಿಣದ ಹಾರೆ, ಚಾಣ, ಏನೂ ಇಲ್ಲದೆ ಹೇಗೆ ಇದೆಲ್ಲ ಸಾಧ್ಯವಾಯಿತು? ಇದೊಂದು ನಿಗೂಢ ಪ್ರಶ್ನೆಯಾಗಿಯೇ ಉಳಿದಿತ್ತು. ಈಚಿನ ಐವತ್ತು ವರ್ಷಗಳಲ್ಲಿ ಸಾಕಷ್ಟು ವೈಜ್ಞಾನಿಕ ಸಂಶೋಧನೆಯ ನಂತರ ಆ ದ್ವೀಪದ ದುರಂತದ ಬಗ್ಗೆ ವಿವರವಾದ ಮಾಹಿತಿಗಳು ಸಿಕ್ಕಿವೆ. ಸುಮಾರು ಕ್ರಿ.ಶ. ೭೦೦ರ ಸುಮಾರಿಗೆ ಅಲ್ಲಿಗೆ ಎಲ್ಲಿಂದಲೋ ಹೇಗೋ ಮೊದಲ ಜನರು ಬಂದಾಗ ದ್ವೀಪ ಸಮೃದ್ಧವಾಗಿತ್ತು. ಮೂರು ನಿದ್ರಿತ ಜ್ವಾಲಾಮುಖಿಗಳು ಕೆರೆಗಳಾಗಿತ್ತವು. ಮಳೆಗಾಲದಲ್ಲಿ ಅವು ತುಂಬಿ ಹರಿದು ವರ್ಷವಿಡೀ ತೊರೆಗಳು ಹರಿಯುತ್ತಿದ್ದವು. ತಾಳೆ-ತೆಂಗಿನ ಮರಗಳು ಹೇರಳವಾಗಿದ್ದವು. ಇತರ ೨೦-೨೫ ಜಾತಿಯ ವೃಕ್ಷಗಳು, ಹುಲ್ಲಿನ ಧಾನ್ಯ, ಗಡ್ಡೆಗೆಣಸುಗಳಿದ್ದವು. ನಾನಾ ಬಗೆಯ ಪಕ್ಷಿಗಳಿದ್ದವು. ಓತಿಕ್ಯಾತ, ಕಪ್ಪೆ, ಉಡದಂಥ ಪ್ರಾಣಿಗಳಿದ್ದವು. ಈ ಜನರು ಬರುವಾಗ ತಮ್ಮೊಂದಿಗೆ ಕೋಳಿಗಳನ್ನು ತಂದಿದ್ದರು. ಅವರ ಚೀಲದಲ್ಲಿ ಅವಿತು ಕೆಲವು ಇಲಿಗಳೂ ಬಂದಿದ್ದವು. ಬಂದಿಳಿದ ಜನರು ತೆಂಗು ತಾಳೆ ತಿನ್ನುತ್ತ, ಕೃಷಿ ನಡೆಸಿದರು. ಕೋಳಿಗಳನ್ನು ಬೆಳೆಸಿದರು. ಒಂದೆರಡು ತಲೆಮಾರಿನ ನಂತರ ಆಯುಧಗಳೆಲ್ಲ ಮುಗಿದ ಮೇಲೆ ಜ್ವಾಲಾಮುಖಿ ಶಿಲೆಗಳನ್ನೇ ಚೂಪು ಮಾಡಿ ಆಯುಧಗಳನ್ನಾಗಿ ಬಳಸಿಕೊಳ್ಳತೊಡಗಿದರು. ರಾಪಾನೂಯಿ ಜನರು ಮರಗಳನ್ನು ಕಡಿದು ದೋಣಿ ನಿರ್ಮಿಸಿ ಮೀನುಗಾರಿಕೆ ಆರಂಭಿಸಿದರು. ಜನಸಂಖ್ಯೆ ಹೆಚ್ಚಾಯಿತು. ಅವರಲ್ಲೊಬ್ಬ ರಾಜನಾದ. ಮಾಂಡಲಿಕರಾದರು. ಮರದ ದೊಡ್ಡ ದೊಡ್ಡ ಮನೆಗಳೂ ಬಂದವು. ಕೃಷಿ ಕೆಲಸ ತೀರ ಕಮ್ಮಿ ಇದ್ದುದರಿಂದ ಸಾಂಸ್ಕೃತಿಕ ಚಟುವಟಿಕೆ ಆಟೋಟ ಜಾಸ್ತಿಯೇ ಇತ್ತು. ಅಗಲಿದ ಹಿರಿಯ ಚೇತನಗಳ ಹೆಸರಿನಲ್ಲಿ ಮೂರ್ತಿಗಳನ್ನು ನಿಲ್ಲಿಸುವ ಸಂಪ್ರದಾಯ ಆರಂಭವಾಯಿತು. ಜ್ವಾಲಾಮುಖಿ ಬಂಡೆಗಳನ್ನು, ಅಲ್ಲಿನದೇ ಚೂಪುಕಲ್ಲುಗಳಿಂದಲೇ ಕೊರೆದ ಭವ್ಯಶಿಲ್ಪಗಳನ್ನು ತಮ್ಮ ಭುಜಬಲ ಪರಾಕ್ರಮದಿಂದಲೇ ಪೈಪೋಟಿಯ ಮೇಲೆ ಸಾಗಿಸಿ ನಿಲ್ಲಿಸತೊಡಗಿದರು. ಅವುಗಳನ್ನು ನಿಲ್ಲಿಸಲೆಂದು ‘ಆಹೂ’ ಎಂಬ ಪವಿತ್ರ ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಅವುಗಳಲ್ಲಿ ಅನೇಕವು  ಅವರವರ ಅಂತಸ್ತಿಗೆ ತಕ್ಕಂತೆ ವಿವಿಧ ಗಾತ್ರದ, ಆದರೆ ಏಕರೂಪವಾದ ಶಿಲ್ಪಗಳನ್ನು ಕೊರೆದು ಮೊದಮೊದಲು ಅವುಗಳ ಸಾಗಾಟಕ್ಕೂ ಹೆಮ್ಮರಗಳ ಉರುಟು ದಿಮ್ಮಿಗಳನ್ನೇ ಬಳಸುತ್ತಿದ್ದಿರಬಹುದು. ಆ ಪುಟ್ಟ ದ್ವೀಪದಲ್ಲಿ ೯೦೦ಕ್ಕೂ ಹೆಚ್ಚು ಪ್ರತಿಮೆಗಳು ತಲೆಎತ್ತಿದವು. ಅವುಗಳನ್ನು ಸುಖೀ ಜೀವನ. ಜನಸಂಖ್ಯೆ ಆರೇಳು ಸಾವಿರ ತಲುಪಿತು. ಮರಗಳ ಸಂಖ್ಯೆ ಕಮ್ಮಿಯಾಗುತ್ತ ಹೋಯಿತು. ತಾವಾಗಿ ಬೆಳೆಯುತ್ತಿದ್ದ ತಾಳೆ/ತೆಂಗಿನ ಹೊಸ ಸಸಿಗಳೂ ಹುಟ್ಟುತ್ತಿರಲಿಲ್ಲ. ಏಕೆಂದರೆ ಇಲಿಗಳ ಸಂಖ್ಯೆಯೂ ಹೆಚ್ಚುತ್ತ ಹೋಗಿ ಅವು ಎಳೆ ಮೊಳಕೆಯ ತಿರುಳನ್ನೇ ತಿಂದು ಹಾಕುತ್ತಿದ್ದವು. ದೋಣಿ ಹಾಳಾದರೆ ಹೊಸ ದೋಣಿಯ ನಿರ್ಮಾಣಕ್ಕೆ ಮರಗಳು ಇರಲಿಲ್ಲ. ಇದ್ದ ಕೆಲವೇ ಮರಗಳಿಗಾಗಿ ಪರಸ್ಪರರಲ್ಲಿ ಕಾದಾಟ ಜೋರಾಯಿತು. ಪ್ರತಿಮೆಗಳನ್ನು ಬೀಳಿಸಿ ಜಗಳ ಕಾಯುವವರು ಹೆಚ್ಚಾದರು.  ಮರ ಕಡಿಮೆ ಆದುದರಿಂದ ಮಣ್ಣು ಬರಡಾಗುತ್ತ ಹೋಯಿತು. ಹಳ್ಳಗಳು ಒಣಗಿದವು. ಧಾನ್ಯ ಬೆಳೆಯುವುದು ಕಷ್ಟವಾಯಿತು. ಆಹಾರಕ್ಕಾಗಿ ಪೈಪೋಟಿ ಹೆಚ್ಚಿದ್ದರಿಂದ ಕಡಲಪಕ್ಷಿಗಳನ್ನೂ ಬಡಿದು ತಿನ್ನತೊಡಗಿದರು. ಆ ಪಕ್ಷಿಗಳು ಪಾಪ ಮೀನು ಹಿಡಿದು ತಂದು ಮರಗಳ ಮೇಲೆ ಕೂತು, ಹಿಕ್ಕೆ ಹಾಕುತ್ತಿದ್ದವು. ಮಣ್ಣಿಗೆ ರಂಜಕ, ಕ್ಯಾಲ್ಸಿಯಂ ಸೇರ್ಪಡೆ ಆಗುತ್ತಿತ್ತು. ಕ್ರಮೇಣ ಅವೂ ಇಲ್ಲವಾದವು. ಇಲಿಗಳಿಂದ ಧಾನ್ಯ ರಕ್ಷಣೆಯೂ ಕಷ್ಟವಾಯಿತು. ನೀರು ಸಿಗುವುದು ದುಸ್ತರವಾಯಿತು. ಕೊನೆಕೊನೆಗೆ ಕಟ್ಟಿದ ಮನೆಗಳು ಕುಸಿದ ಮೇಲೆ, ಹುಲ್ಲಿನ ಛಾವಣಿಯಲ್ಲಿ ವಾಸ. ಕೆಲವರು ಬಂಡೆಗಳನ್ನು ಕೊರೆದ ಗುಹೆಗಳಲ್ಲಿ ವಾಸ ಮಾಡತೊಡಗಿದರು. ಬಟ್ಟೆ ನೇಯ್ದುಕೊಳ್ಳಲು, ಮೀನುಗಾರಿಕೆಗೆ ಬಲೆ ನೇಯಲು ನಾರು ಸಿಗುವುದೂ ದುಸ್ತರವಾಯಿತು. ತೆಂಗು-ತಾಳೆಗಿಂತ ಭಿನ್ನವಾದ, ಆ ದ್ವೀಪದಲ್ಲಿ ಮಾತ್ರ ಬೆಳೆಯುತ್ತಿದ್ದ ವೈನ್‌ಪಾಮ್ ವೃಕ್ಷದ ಕೊಟ್ಟಕೊನೆಯ ಮೊಳಕೆಯೂ ಯಾವುದೋ ಹೆಗ್ಗಣದ ಹೊಟ್ಟೆಗೆ ಹೋಯಿತು. ಬದುಕಿನ ಪೈಪೋಟಿಯಲ್ಲಿ ಕೂಳಿಗಾಗಿ, ಕೋಳಿಗಾಗಿ, ಸೌದೆಗಾಗಿ ಪರಸ್ಪರ ಜಗಳ, ಕಾದಾಟ ತೀವ್ರವಾಯಿತು. ಜನಸಂಖ್ಯೆ ಮತ್ತೆ ಕಡಿಮೆ ಆಗುತ್ತ ಆಗುತ್ತ, ಒಂದೆರಡು ಸಾವಿರ ಜನ ರಾಪಾನೂಯಿಗಳು ಉಳಿದರು. ಇಡೀ ಸಮಾಜವೇ ಕಡುಬಡತನಕ್ಕೆ ಜಾರಿ, ದ್ವೀಪವೇ ದಟ್ಟದರಿದ್ರವಾಯಿತು. ಅದೇ ವೇಳೆಗೆ (ಈಸ್ಟರ್ ಹಬ್ಬದ ದಿನ) ಯುರೋಪಿಯನ್ನರು ೧೭೨೨ರಲ್ಲಿ ಬಂದರು. ಒಂದೇ ಒಂದು ಮರವೂ ಇಲ್ಲದ ಬೆಂಗಾಡನ್ನು ನೋಡಿದರು. ಎತ್ತರದ ನಿಲುವಿನ ಕಾಡು ಜನರಿದ್ದಾರೆ, ಅಲ್ಲಲ್ಲಿ ತುಸು ಕೃಷಿ ನಡೆಯುತ್ತಿದೆ ಎಂದು ವರದಿ ಮಾಡಿದರು. ಮುಂದಿನ ಐವತ್ತು ವರ್ಷಗಳ ಕಾಲ ಯಾರೂ ಬರಲಿಲ್ಲ. ಆ ಅವಧಿಯಲ್ಲಿ ದ್ವೀಪವಾಸಿಗಳ ಸ್ಥಿತಿ ಇನ್ನಷ್ಟು ದಾರುಣವಾಗಿತ್ತು. ಆಮೇಲೆ ಸ್ಪೇನಿನ ಎರಡು ಹಡಗುಗಳು ಬಂದವು. ‘ಜನಸಂಖ್ಯೆ ತೀರ ಕಮ್ಮಿ ಇದೆ. ಕಡಲಂಚಿನಲ್ಲಿ ದೊಡ್ಡ ಪ್ರತಿಮೆಗಳ ಸಾಲೇ ಇದೆ’ ಎಂದರು. ಆ ಬಳಿಕ ಬ್ರಿಟಿಷರು ಬಂದರು. ಆಮೇಲೆ ಫ್ರೆಂಚರು, ತದನಂತರ ರಷ್ಯನ್ನರು ಬಂದರು. ಅಷ್ಟರೊಳಗೆ ದ್ವೀಪವಾಸಿಗಳು ನಾನಾ ಬಗೆಯ ‘ಬಿಳಿಯರ ಕಾಯಿಲೆಗೆ’ ಸಿಲುಕಿದರು. ಸಿಡುವು, ಕಾಲರಾ, ಕ್ಷಯ ಮುಂತಾದ ರೋಗಗಳಿಗೆ ತುತ್ತಾಗಿ ಅವರ ಸಂಖ್ಯೆ ೭೦೦ಕ್ಕೂ ಕೆಳಕ್ಕೆ ಬಂತು. ಅಷ್ಟರೊಳಗೆ ದಕ್ಷಿಣ ಅಮೆರಿಕದವರಿಗೆ ಇವರನ್ನು ಗುಲಾಮರಾಗಿಸಿಕೊಳ್ಳುವ ಚಪಲ ಬಂತು. ಅವರ ನಂತರ ವಿವಿಧ ಕ್ರಿಶ್ಚಿಯನ್ ಮಿಶನರಿಗಳು ಬಂದು ಇಡೀ ದ್ವೀಪದವರನ್ನು ರೋಮನ್ ಕೆಥೊಲಿಕ್‌ರನ್ನಾಗಿಸಿ ಹೊಸ ಹೆಸರು ಕೊಡುವ ವೇಳೆಗೆ, ಅಂದರೆ ೧೯೦೦ರ ಸುಮಾರಿಗೆ ರಾಪಾನೂಯಿಗಳ ಸಂಖ್ಯೆ ೨೫೦ಕ್ಕೆ ಇಳಿದಿತ್ತು. ಈಗ ಇಡೀ ದ್ವೀಪ ಚಿಲಿ ದೇಶದ ಆಡಳಿತಕ್ಕೆ ಸೇರಿದೆ. ಮತ್ತೆ ಈಸ್ಟರ್ ಐಲ್ಯಾಂಡನಲ್ಲಿ ಗಿಡಮರಗಳನ್ನು ಬೆಳೆಸಿ ಅದನ್ನು ಸಮೃದ್ಧಗೊಳಿಸುವ ಯತ್ನ ನಡೆದಿದೆ. ಅಂತೂ ಒಂದು ಸಮೃದ್ಧ ದ್ವೀಪ ಏಳೆಂಟು ನೂರು ವರ್ಷಗಳ ಅವಧಿಯಲ್ಲಿ ಮನುಷ್ಯನ ಕೈಗೆ ಸಿಕ್ಕು ನಲುಗಿ, ತನ್ನ ಧಾರಣಶಕ್ತಿಯನ್ನು ಕಳೆದುಕೊಂಡು, ನಂತರದ ಕೇವಲ ನೂರು ವರ್ಷಗಳಲ್ಲಿ ಇಳಿಜಾರಿನಲ್ಲಿ ಉರುಳಿದ ಮಣ್ಣುಂಡೆಯ ಹಾಗೆ ಎಲ್ಲವನ್ನೂ ಕಳೆದುಕೊಂಡು ನಶ್ವರವಾಗುವ ಹಂತಕ್ಕೆ ಬಂತು.

ತಣಿಯದ ಕುತೂಹಲ

ತಣಿಯದ ಕುತೂಹಲ

Wednesday, September 6th, 2017

ತಣಿಯದ ಕುತೂಹಲ [ಅಂಕಣ ಬರಹ – ೩] ಮರುದಿನ ನೀಲಾಳಿಗೆ ನಾಚಿಕೆ ಮುಳ್ಳನ್ನು ಮೊದಲು ಕಂಡ ಜಾಗದಲ್ಲೆ ಕಾಣುವ ಮನಸ್ಸಾಯಿತು. ನಾಚಿಕೆ ಮುಳ್ಳನ್ನು ತನ್ನ ಊರಲ್ಲಿ ಕಂಡಿಲ್ಲ ಎಂದಲ್ಲ. ಆದರೆ ಈಗ ಅದರ ಮಹತ್ವವೆಲ್ಲ ಗೊತ್ತಾಗಿದೆ. ಈಗ ನೋಡಿವ ರೀತೆಯೇ ಬೇರೆಯಾಗಿದೆ. ನಮ್ಮ ಮನೆ ಬೀದಿಯ ಕೊನೆಯಲ್ಲೇ ಇರುವ ನಾಟಿ ಔಷಧಿಯ ಚಿಕ್ಕ ಗುಡಿಸಲನ್ನು ನೋಡೇ ಇರುವುದಿಲ್ಲ. ಬೇರೆ ಊರಿನ ಯಾರೋ ಒಬ್ಬರು ಬಂದು ನಿಮ್ಮ ಊರಿನಲ್ಲಿ ಒಬ್ಬ ಒಳ್ಳೆಯ ನಾಟಿ ವೈದ್ಯರಿದ್ದಾರೆ ಎಂದಾಗ, ಹೌದಾ, ನಮ್ಮ ಊರಿನಲ್ಲಾ, ಏನು ಅವರ ಹೆಸರು, ಇರುವುದೆಲ್ಲಿ? ಎಂದು ಕೇಳುವೆವು. ವಿಳಾಸ ಎಲ್ಲಾ ಹೇಳಿದಾಗ ‘ಹೌದು, ನಮ್ಮ ಬೀದಿಯ ಕೊನೆಯಲ್ಲೇ ಇದೆ, ಒಂದು ಗುಡಿಸಲು, ಅದೇನಾ?’ ಎಂದು ಆಶ್ಚರ್ಯದಿಂದ ಕೇಳುತ್ತೇವೆ. ಆಮೇಲೆ ಬೀದಿ ಕೊನೆಯ ಗುಡಿಸಲು ನಾಟಿ ವೈದ್ಯರ ಬಗ್ಗೆ ಒಂದು ತುಂಬು ಭಾವನೆಯು ಬರುವುದು. ಭಗವಂತನ ಗುಣಗಳನ್ನು, ಮಹಿಮೆಯನ್ನು ಅರಿತಾಗ ಮೂಡುವ ಭಕ್ತಿ ಇಮ್ಮಡಿಯಾಗುವಂತೆ ನಮ್ಮ ಸುತ್ತಲಿರುವ ಗಿಡಗಳ ಔಷಧಿಯ ಗುಣಗಳನ್ನು ಅರಿತಾಗ ಅವುಗಳನ್ನು ಕಾಣುವ ಕಣ್ಣು ಬೇರೆಯೇ ಆಗುವುದು. ಹಾಗೆಯೇ ನೀಲಾಳಿಗೆ ಈಗ ನಾಚಿಕೆ ಮುಳ್ಳನ್ನು ನೋಡುವುದರಲ್ಲಿ ಏನೋ ಆನಂದವಾಗುತ್ತಿದೆ. ಬೆಳಗ್ಗೆ ಸುಮಾರು  à³®.೦೦ ಗಂಟೆಯ ಸಮಯಕ್ಕೆ ನೀಲಾ ಯಥಾ ಪ್ರಕಾರ ಹಸುಗಳನ್ನು ಮೇಯಿಸಲು ಹೊರಡಲು ಮನೆಯಿಂದ ಹೊರಬಂದಳು. ಅಷ್ಟರಲ್ಲಿ ಬೀದಿಯಲ್ಲಿ ನಡೆಯುತ್ತಿದ್ದ ಒಂದು ದೊಡ್ಡ ಗಲಾಟೆ ಕೇಳಿಸಿತು. ಅದೇನೆಂದು ನೋಡಲು ಅಲ್ಲಿಗೆ ಓಡಿ ಹೋದಳು. ನೋಡಿದರೆ ಬಸಪ್ಪ ತನ್ನ ಹೆಂಡತಿಯನ್ನು ಹಿಡಿದುಕೊಂಡು ಹೊಡೆಯುತ್ತಿದ್ದಾನೆ. ಅವನ ಅಮ್ಮ ಬಿಡಿಸಲು ಹೋದರೂ ಕೇಳದೆ ಹೊಡೆಯುತ್ತಿದ್ದ. ನೀಲಾಳಿಗೆ ಇದು ಬಹಳ ಹೊಸದಾದ ಸನ್ನಿವೇಶ. ಗಂಡ  ಹೆಂಡತಿಯನ್ನು ಹೊಡೆಯುವುದನ್ನು ಅವಳು ಎಂದೂ ಕಂಡೆ ಇರಲಿಲ್ಲ. ಧೈರ್ಯವಾಗಿ ಮುಂದೆ ಹೋಗೆ ಕಾರಣವೇನೆಂದು ಕೇಳಿದಳು. ಕೋಪದಲ್ಲಿದ್ದ ಬಸಪ್ಪ ನಿನಗ್ಯಾಕಮ್ಮ ಆ ವಿಚಾರ, ಸುಮ್ಮನೆ ಹೋಗು, ಹೊಸದಾಗಿ ನಮ್ಮೂರಿಗೆ ಬಂದಿದ್ದೀಯ ಎಂದು ಗದರಿಸಿದ. ನೀಲಾ ಕುತೂಹಲ ತಡೆಯದೆ ಮತ್ತೆ ಕಾರಣವನ್ನು ಕೇಳಿದಳು. ಆಗ ಅವರ ಅಮ್ಮ ‘ಅಯ್ಯೋ ಮನೆಯಲ್ಲಿ ಈಗಾಗಲೆ ೫ ಮಕ್ಕಳು ಇದ್ದಾರೆ, ಈಗ ಸುಬ್ಬಿ ಮತ್ತೆ ಬಸುರಿಯಾಗಿದ್ದಾಳೆ, ಅದಕ್ಕೆ ಅವಳನ್ನು ನಮ್ಮ ಬಸಪ್ಪ ಹೊಡೆಯುತ್ತಿದ್ದಾನೆ’ ಎಂದು ಗೊಳೋ ಎಂದು ಅತ್ತಳು. ನೀಲಾಳಿಗೆ ಆಶ್ಚರ್ಯವಾಯಿತು. ಮಕ್ಕಳೆಂದರೆ ಎಲ್ಲರೂ ಖುಷಿಪಡಬೇಕಲ್ಲ, ಇವನ್ಯಾಕೆ ಹೊಡೆಯುತ್ತಿದ್ದಾನೆ ಎಂದು. ಮತ್ತೆ ಅಮ್ಮನನ್ನು ಕೇಳಿದಳು, ‘ಇದರಲ್ಲಿ ಹೊಡೆಯುವ ವಿಷಯ ಏನಿದೆ? ಖುಷಿಪಡಬೇಕಲ್ಲ?’ ಎಂದು. ಅದಕ್ಕೆ ಅವರ ಅಮ್ಮ ಹೇಳಿದರು ‘ಇರುವ ಐದು ಮಕ್ಕಳಿಗೇ ಊಟಕ್ಕೆ ಬಟ್ಟೆಗೆ ಇಲ್ಲ, ಇನ್ನು ಆರನೆಯ ಮಗು ಬಂದರೆ ಉಪವಾಸವಿದ್ದು ಸಾಯಬೇಕಷ್ಟೆ’ ಎಂದು ಅತ್ತಳು. ಈಗ ನೀಲಾಳಿಗೆ ಸಮಸ್ಯೆ ಅರ್ಥವಾಯಿತು. ಅಲ್ಲಿಂದ ಹೊರಟು ಮನೆಗೆ ಬಂದಳು. ಅಲ್ಲಿ ಒಂದು ಬೆಕ್ಕು ನೆನ್ನೆ ತಾನೆ ಹಾಕಿದ್ದ ತನ್ನ ೬ ಮರಿಗಳಿಗೆ ಹಾಲುಣಿಸುತ್ತಿದ್ದುದನ್ನು ಕಂಡಳು. ಅವಳಿಗೆ ಆನಂದವಾಯಿತು. ಅತ್ತೆಯ ಬಳಿ ಬಂದು ಬೀದಿಯಲ್ಲಿ ನಡೆದ ಜಗಳವನ್ನು ಹೇಳಿದಳು. ಅತ್ತೆ ಸುಶೀಲಮ್ಮ ‘ಅಯ್ಯೋ, ಆ ಬಸಪ್ಪನದ್ದು ಯಾವಾಗಲೂ ಇದ್ದದ್ದೇ, ಎಲ್ಲಾ ತಪ್ಪು ಸುಬ್ಬಿಯದ್ದೆ ಎನ್ನುವ ರೀತಿಯಲ್ಲಿ ಆಡ್ತಾನೆ, ಅವನಿಗೆ ಬುದ್ಧಿ ಇಲ್ಲವಾ, ಮಕ್ಕಳನ್ನು ಸಾಕುವ ಯೋಗ್ಯತೆ ಇಲ್ಲ ಎಂದ ಮೇಲೆ ಮಕ್ಕಳು ಯಾಕೆ ಬೇಕು? ಈಗ ಅವಳು ಬಸುರಿ ಎಂದು ತಿಳಿದ ನಂತರ ತೆಗೆಸಿಕೊಳ್ಳಲು ಹೇಳುತ್ತಾನೆ, ಪಾಪಾ ಅವಳ ಮನಸ್ಸು ಹೇಗಾಗಿರಬೇಕು, ಅವಳು ಮೂಕ ಪ್ರಾಣಿಯಂತೆ ಸುಮ್ಮನೆ ನೋವು ನುಂಗುತ್ತಾಳೆ, ಇದು ಇದ್ದದ್ದೆ ಬಿಡು, ನೀನು ಹಸು ಮೇಯಿಸಲು ??ಗಿ?ಲಿಲ್ಲವಾ?’ ಎಂದು ಕೇಳಿದಳು. ಕೂಡಲೆ ನೀಲಾ ಬಸಪ್ಪನ ಮಕ್ಕಳನ್ನು ಮತ್ತು ಬೆಕ್ಕಿನ ಮಕ್ಕಳನ್ನು ಒಮ್ಮೆಲೆಗೆ ಕಣ್ಣ ಮುಂದೆ ತಂದುಕೊಂಡಳು. ಪ್ರಾಣಿ ಪ್ರಪಂಚದಲ್ಲಿ ೫-೬ ಮಕ್ಕಳು ಸಹಜ ಆದರೆ ಮನುಷ್ಯರಲ್ಲಿ ಇದು ದುಬಾರಿ. ಹಾಗಾದರೆ ಸಸ್ಯ ಪ್ರಪಂಚದಲ್ಲಿ ಹೇಗಿರಬೇಕು ಎಂದು ಚಿಂತಿಸಿದಳು. ಇವಳು ಇದ್ದಕ್ಕಿದ್ದಂತೆ ಎಲ್ಲೋ ಕಳೆದು ಹೋದದ್ದನ್ನು ಕಂಡು ಸುಶೀಲಮ್ಮ ಎಚ್ಚರಿಸಿ ‘ಹೊರಡಮ್ಮ, ಹೊರಡು ಬಿಸಿಲಾಗುವ ವೇಳೆಗೆ ಬರುವಿಯಂತೆ ಹೊರಡು’ ಎಂದು ಕಳುಹಿಸಿದಳು. ನಿನ್ನೆ ನೋಡಿದ್ದ ನಾಚಿಕೆ ಮುಳ್ಳಿನೊಂದಿಗೆ ಇನ್ನೇನೋ ಹುಡುಕುವ ಕಣ್ಣಿನೊಂದಿಗೆ ನೀಲಾ ಕಾಡಿನ ದಾರಿ ಹಿಡಿದಳು. ಇದೀಗ ನಿಮ್ಮ ಕೆಲಸ: ಒಮ್ಮೆಲೆಗೆ ಅನೇಕ ಮಕ್ಕಳನ್ನು ಪಡೆಯುವ ಪ್ರಾಣಿಗಳ ಪಟ್ಟಿಯನ್ನು ತಯಾರು ಮಾಡಿರಿ. ಮುಂದಿನ ತಿಂಗಳ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ - ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ

ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ – ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ

Wednesday, September 6th, 2017

ದೇಹದಂಡನೆಯ ತಪಸ್ಸು ಇಂದು ಅಪರೂಪ. ಅದರಲ್ಲೂ ಉಪವಾಸದ ತಪಸ್ಸು. ಅದರಲ್ಲೂ ಇಳಿಯ ವಯಸ್ಸಿನಲ್ಲಿ ನಡೆಸುವ ಉಪವಾಸದ ತಪಸ್ಸು. ಅದರಲ್ಲೂ ಸನ್ನ್ಯಾಸಿಯೊಬ್ಬರು ಈ ರಾಷ್ಟ್ರದ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ನಡೆಸುವ ತಪಸ್ಸು. ಇದೊಂದು ಢೋಂಗಿ ಸಾಧುವಿನ ನಾಟಕವಿರಬೇಕು ಅಂತ ತಿರಸ್ಕರಿಸುವವರೇ ಹೆಚ್ಚು. ಕೆಲವರು ಇದು ನಮ್ಮ ಹೊಟ್ಟೆಪಾಡಿಗೆ ಸಂಬಂಧಿಸಿದ್ದಂತೂ ಅಲ್ಲ ಅನ್ನುವವರು. ಇನ್ನು ಕೆಲವರು ಇದು ಆಧುನಿಕ ವಿರೋಧಿ ಸ್ವದೇಶೀ ಗಾಂಧೀ ಮಾರ್ಗಿಗಳು ನಡೆಸುವ ಧಾರಾವಾಹಿಕ ಉಪವಾಸಗಳು ಅಂತ ಉಪೇಕ್ಷಿಸುವವರು. ಆದರೆ ೮೦ ವರ್ಷದ ಸನ್ನ್ಯಾಸಿಯೊಬ್ಬ ಗಂಗಾತೀರದಲ್ಲಿ ಉಪವಾಸ ಕೂತರೆ, ಸ್ವಯಂ ಪ್ರಧಾನಿ ಕಛೇರಿಯೇ ಮಧ್ಯ ಪ್ರವೇಶಿಸಿ ಅವರ ಆಗ್ರಹಗಳನ್ನು ಒಪ್ಪಿಕೊಳ್ಳುತ್ತದೆ ಎಂದರೆ ಆಶ್ಚರ್ಯವಲ್ಲವೇ! ಹೌದು ಆ ಸನ್ನ್ಯಾಸಿಯೇ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ. ಅವರ ಆಜ್ಞೆ ಪಾಲಿಸಲು ದೊಡ್ಡ ದೊಡ್ಡ ಮಂದಿಯೂ ಓಡಿ ಬರುತ್ತಾರೆ. ಮ್ಯಾಗ್ಸೆಸೆ ಪ್ರಶಸ್ತಿಯ ನೀರಿನ ಗಾಂಧಿಯೆಂದೇ ಪ್ರಖ್ಯಾತರಾದ ರಾಜೇಂದ್ರ ಸಿಂಗ್ ಇರಬಹುದು, ಹಿಮಾಲಯದ ತಪ್ಪಲಿನಲ್ಲಿ ಪರ್ಯಾಯ ಹಾಗೂ ಪ್ರಕೃತಿಸಹಜ ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ರವಿ ಚೋಪ್ರಾ ಇರಬಹುದು. ಡೌನ್ ಟು ಅರ್ಥ್ ಖ್ಯಾತಿಯ ಸುನಿತಾ ನಾರಾಯಣ್ ಇರಬಹುದು, ನೊಂದವರ ಸೇವೆಯಲ್ಲಿ ತೊಡಗಿಸಿಕೊಂಡಿರುವ ದುನು ರಾಯ್ ಇರಬಹುದು. ರಾಜೇಂದ್ರ ಸಿಂಗ್, ಡಾ. ಚೋಪ್ರಾ, ದುನು ರಾಯ್ ಹಾಗೂ ಸಿ. ಎಸ್. ಇ. ಸಂಸ್ಥಾಪಕ ಡಾ.ಅನಿಲ್ ಅಗರ್‌ವಾಲ್ ಎಲ್ಲರೂ ಇವರ ಶಿಷ್ಯರೇ. ಸರ್ವಸಂಗ ಸನ್ನ್ಯಾಸಿಯಾಗಿ ಆಶ್ರಮ ಸ್ವೀಕಾರ ಮಾಡಿ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ ಆದದ್ದು ಒಂದು ವರ್ಷದ ಹಿಂದಷ್ಟೇ. ಅವರ ೭೯ನೇ ಪಕ್ವ ವಯಸ್ಸಿನಲ್ಲಿ. ಆದರೆ ಅಲ್ಲಿಯತನಕವೂ ಪ್ರೊ. ಜಿ.ಡಿ. ಅಗ್ರವಾಲರು ಸನ್ನ್ಯಾಸಿಗಳೇ. ಮಧ್ಯಪ್ರದೇಶದ ಚಿತ್ರಕೂಟದ ಅವರ ನಿವಾಸದಲ್ಲಿ ವಯಸ್ಸು ೭೫ ದಾಟಿದ್ದಾಗಲೂ ಮನೆಯ ಕಸಗುಡಿಸುತ್ತಾ, ತಮ್ಮ ಬಟ್ಟೆ ತಾವೇ ಒಗೆಯುತ್ತಾ, ತನ್ನ ಅಡಿಗೆ ತಾನೇ ಬೇಯಿಸುತ್ತಾ, ಮನೆಯಲ್ಲೇ ನೇಯ್ದ ಖಾದಿಯನ್ನು ತೊಡುತ್ತಾ ಬದುಕುತ್ತಿದ್ದ ಆಶ್ರಮಪೂರ್ವ ಸನ್ನ್ಯಾಸಿ. ಹತ್ತಿರ ಓಡಾಡಲು ಸೈಕಲ್, ದೂರಕ್ಕೆ ಆರ್ಡಿನರಿ ಬಸ್ಸು ಇಲ್ಲವೇ ದ್ವಿತೀಯ ದರ್ಜೆ ರೈಲು. ಇವರದ್ದು ಜಿಗುಪ್ಸೆಯ ವೈರಾಗ್ಯವಲ್ಲ. ತೋರಿಕೆಯ ಸತ್ಯಾಗ್ರಹವಲ್ಲ. ಯಾವುದೇ ಕೀರ್ತಿ, ಸಂಪತ್ತು ಅಥವಾ ಅಧಿಕಾರದ ಅಪೇಕ್ಷೆಯೂ ಇಲ್ಲದ ತಪಸ್ಸು. ತಾಯಿಯ ಜೀವರಕ್ಷಣೆಗಾಗಿ ನಡೆಸುತ್ತಿರುವ ತಪಸ್ಸು. ಸನ್ನ್ಯಾಸದಿಂದಲೂ ಕಳಚದ ಕೊಂಡಿ ಎಂದರೆ ಆ ತಾಯಿಯೊಂದೇ. ಈ ದೇಶದ ಯಾವ ಪ್ರಜೆಯೂ ಆಕೆಯ ನಂಟು ಬಿಟ್ಟು ಬದುಕಲಾರ. ಮರೆತು ಉಳಿಯಲಾರ. ಭಾರತೀಯನಾಗಲಾರ. ಆ ಗಂಗಾಮಾತೆಯ ಕರುಳ ಕೊಂಡಿಯದು. ಇವರ ಉಪವಾಸವೂ ಅಷ್ಟೇ. ಮಾಧ್ಯಮಗಳು ಹಗಲೂ ರಾತ್ರಿ ಬಿತ್ತರಿಸುವ ತಾಮಸ ಕಾರ್ಯಕ್ರಮವಲ್ಲ. ಲಕ್ಷಾಂತರ ಮಂದಿ ಸೇರಿ ಘೋಷಣೆ ಕೂಗುವ ರಾಜಸ ಆಂದೋಲನಗಳೂ ಅಲ್ಲ. ನನ್ನ ತಾಯಿಯನ್ನು ಬದುಕಿಸು ಎಂದು ಗಂಗಾಪಿತನನ್ನು ರಾಮಭಕ್ತನೊಬ್ಬ ಒತ್ತಾಯಿಸುವ ಸಾತ್ವಿಕ ತಪಸ್ಸು. ಖಾವಿ ಬಟ್ಟೆಯವರೂ ಕೆಲವರಿದ್ದಾರೆ. ಟೋಪಿಧಾರಿಗಳೂ ಹಲವರಿದ್ದಾರೆ. ಆದರೆ ಋಷಿಕುಲದ ಮಂದಿ ಬಹು ಕಡಿಮೆ. ಕೇವಲ ಭಾವುಕನಾದರೂ ಸಾಲದು, ಬುದ್ಧಿಜೀವಿಯಾದರೂ ಸಾಲದು. ಅವೆರಡರ ಮೇಲನದ ಅಂತಃಶಕ್ತಿ ಬೇಕು. ಅದೇ ಪ್ರೊ. ಅಗ್ರವಾಲರ ವೈಶಿಷ್ಟ್ಯ. ಇವರು ಆಧುನಿಕ ಶಿಕ್ಷಣದ ತುತ್ತತುದಿಯನ್ನು ಅನುಭವಿಸಿದವರು. ಜೊತೆಗೇ ಭಾರತದ ಮೂಲಭೂತ ಭಾವನೆಯಾದ ಗಂಗೆಯನ್ನು ಆರಾಧಿಸತೊಡಗಿದವರು. ಗಂಗಾಪುತ್ರ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ ಜಿ.ಡಿ. ಅಗರ್‌ವಾಲ್ ಜನಿಸಿದ್ದು ೧೯೩೨ ರಲ್ಲಿ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಕಂಧ್ಲಾ ಊರಿನಲ್ಲಿ ಒಂದು ಕೃಷಿಕ ಕುಟುಂಬದಲ್ಲಿ. ಅಲ್ಲಿಯೇ ಸುತ್ತಮುತ್ತ ಮೊದಲ ಹಂತದ ಶಿಕ್ಷಣ ಮುಗಿಸಿ, ರೂರ್ಕೀ ವಿಶ್ವವಿದ್ಯಾಲಯದಲ್ಲಿ (ಈಗಿನ ಐ ಐ ಟಿ ರೂರ್ಕೀ) ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ವಿನ್ಯಾಸ ಅಭಿಯಂತರರಾಗಿ ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ಕೆಲಸ ಆರಂಭಿಸಿದ ಇವರು ನಂತರ ಅಮೇರಿಕಾದ ಬರ್ಕ್ಲಿಯಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪಿ.ಎಚ್.ಡಿ. ಮುಗಿಸಿದರು. ಆಗಿನಿಂದ ಅವರು ವಿಶ್ವವೇ ಗುರುತಿಸುವ ಪ್ರಖ್ಯಾತ ಎನ್ವಿರಾನ್‍ಮೆಂಟಲ್ ಎಂಜಿನಿಯರ್. ನಂತರ ಐ ಐ ಟಿ ಕಾನ್ಪುರದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಹಾಗೂ ಡೀನ್ ಆಗಿಯೂ ಸೇವೆ ಸಲ್ಲಿಸಿದರು. ಹಲವಾರು ವೈಜ್ಞಾನಿಕ ಲೇಖನಗಳನ್ನು ಬರೆದುದಲ್ಲದೇ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ವಿದ್ಯಾರ್ಥಿಗಳ ಮಾರ್ಗದರ್ಶಕರೂ ಆದರು. ಇದೇ ಅವಧಿಯಲ್ಲಿ ರಾಜೇಂದ್ರ ಸಿಂಗ್, ಅನಿಲ್ ಅಗರ್‌ವಾಲ್, ರವಿ ಛೋಪ್ರಾ ತರಹದ ಸಾಮಾಜಿಕ ಕ್ರಾಂತಿಕಾರಿಗಳಿಗೂ ಸ್ಫೂರ್ತಿಪ್ರದರಾದರು. ಮುಂದೆ ಭಾರತ ಸರ್ಕಾರದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿ (Central Pollution Control Board) ಯ ಮೊದಲ ಸದಸ್ಯ-ಕಾರ್ಯದರ್ಶಿಯಾದರು. ತನ್ಮೂಲಕ ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ರಕ್ಷಣೆಯ ಕುರಿತಾದ ಕಾಯ್ದೆಗಳ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೀಗೆ ಸಂಶೋಧಕರೂ ಗೌರವಿಸುವ ವಿಜ್ಞಾನಿಯಾಗಿ, ವಿದ್ಯಾರ್ಥಿಗಳು ಮೆಚ್ಚುವ ಶಿಕ್ಷಕನಾಗಿ, ಸಾಮಾಜಿಕ ಕಾರ್ಯಕರ್ತರಿಗೆ ಚೈತನ್ಯ ತುಂಬುವ ಮಾರ್ಗದರ್ಶಕರಾಗಿ, ಸರ್ಕಾರವು ಆಹ್ವಾನಿಸುವ ತಜ್ಞರಾಗಿ ಜಗತ್ತಿಗೇ ಕಂಡ ಅಗ್ರವಾಲರು, ಅಂತರಂಗದಲ್ಲಿ ಪ್ರಕೃತಿಮಾತೆಯ ಸೇವೆಗಾಗಿ ಹಪಹಪಿಸುತ್ತಿದ್ದರು. ಸನಾತನ ಧರ್ಮದಲ್ಲಿ ಸದಾಸಕ್ತರಾಗಿ, ಭಾರತೀಯ ಸಂಸ್ಕೃತಿಯ ರಕ್ಷಣೆಯಲ್ಲಿ ಬದ್ಧಮನಸ್ಕರಾಗಿದ್ದ ಅಗ್ರವಾಲರು ಅನೇಕ ಪರಿಸರ ರಕ್ಷಣೆ ಸಂಬಂಧಿ ಕಾರ್ಯಗಳಲ್ಲಿ ತಮ್ಮ ಆಧುನಿಕ ವಿದ್ಯೆಯನ್ನು ತಮ್ಮ ಅಗಾಧ ಶಿಷ್ಯಸಂಪತ್ತನ್ನು ಬಳಸತೊಡಗಿದ್ದರು. ೨೦೦೭ ರ ಒಂದು ದಿನ ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಬಯಸಲಾಗಿದ್ದ ಅಣೆಕಟ್ಟೊಂದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಪ್ರಿಯಾ ಪಟೇಲ್ ಎಂಬುವವರು ಎಂ.ಸಿ. ಮೆಹ್ತಾರನ್ನು ಕಾಣಲು ಬಂದಿದ್ದಾಗ ಅಗ್ರವಾಲರೂ ಅವರ ಜೊತೆ ಇದ್ದರು. ಎಲ್ಲರೂ ಈ ಅಣೆಕಟ್ಟು ಮೊದಲಾದ ಯೋಜನೆಗಳು ಗಂಗಾಮಾತೆಯನ್ನು ಬರಿದು ಮಾಡುತ್ತಿರುವ ಬಗೆಯನ್ನು ಕಾಣಲು ಹೋದರು. ಅಲ್ಲಿನ ದೃಶ್ಯವನ್ನು ಅಗ್ರವಾಲರಿಗೆ ನಂಬಲಾಗಲಿಲ್ಲ. ಮೂವತ್ತು ವರ್ಷಗಳ ಹಿಂದೆ ಮನೇರಿ ಭಾಲಿ ಯೋಜನೆ ಶುರುವಾಗಿದ್ದಾಗ ಅಲ್ಲಿ ಹೋಗಿದ್ದ ಅಗ್ರವಾಲರು, ಈಗ ಈ ದೃಶ್ಯವನ್ನು ನೋಡಿ ದಿಗ್ಭ್ರಾಂತರಾದರು. ಮನೇರಿ ಭಾಲಿಯ ಕೆಳಪ್ರದೇಶಗಳಲ್ಲಿ ಭಾಗೀರಥಿಯೇ ಕಣ್ಮರೆಯಾಗಿದ್ದಳು! ಅಣೆಕಟ್ಟುಗಳಲ್ಲಿ ಸಂಗ್ರಹಿಸಿ ನದಿಯ ಸಮಗ್ರ ನೀರನ್ನು ಕಾಲುವೆಗಳ ಮೂಲಕ ಬೇರೆಡೆ ಸ್ಥಳಾಂತರಿಸುತ್ತಿರುವದನ್ನು ನೋಡಿ ಅಗ್ರವಾಲರ ಮನಸ್ಸು ಕದಡಿತು. ಬಹಳ ದಿನಗಳ ಕಾಲ ಯೋಚಿಸಿ, ೨೦೦೮ ರ ರಾಮನವಮಿಯಂದು ಅವರೊಂದು ದೃಢ ಸಂಕಲ್ಪ ಮಾಡಿದರು: ಉಳಿದ ನನ್ನ ಜೀವನವೆಲ್ಲವೂ ಗಂಗೆಗಾಗಿಯೇ ಸಮರ್ಪಿತ. ಗಂಗೆ ಒಂದು ಪರಿಸರದ ಸಂಗತಿಯಲ್ಲ. ಅದೊಂದು ದೈವೀ ಶಕ್ತಿ. ಅದು ನನ್ನ ವ್ಯಕ್ತಿತ್ವದ ಗುರುತು. ಅದು ನನ್ನ ನಂಬಿಕೆ. ಆಕೆ ನನ್ನ ತಾಯಿ. ರಾಜಾ ಭಗೀರಥನನ್ನು ನಾನು ನನ್ನ ಪೂರ್ವಜನೆಂದು ಭಾವಿಸುತ್ತೇನೆ. ನಮಗಾಗಿ ಅವನು ಕೊಟ್ಟು ಹೋದ ಭವ್ಯ ಪರಂಪರೆಯೇ ಗಂಗೆ. ಹೊರಸಂಕೇತದ ಇತ್ತೀಚಿನ ರಾಷ್ಟ್ರಧ್ವಜಕ್ಕೇ ಅವಮಾನವನ್ನು ಒಪ್ಪದ ನಾವು ನಮ್ಮ ದೇಶದ ಅಂತಃಪ್ರಜ್ಞೆಯಾದ ಸಾವಿರಾರು ವರ್ಷಗಳ ನಮ್ಮ ಭವ್ಯ ಪರಂಪರೆಯ ಪ್ರತೀಕವಾದ ಗಂಗೆಗೆ ಆಗುತ್ತಿರುವ ಅಪಚಾರವನ್ನು ಹೇಗೆ ಸಹಿಸಲು ಸಾಧ್ಯ? ನಾವು ತಾಜ್ ಮಹಲ್ ಗೆ ಇಷ್ಟೆಲ್ಲಾ ಮಾಡಬಹುದಾದರೆ ಗಂಗೆಗೆ ಯಾಕಿಲ್ಲ? ಎಲ್ಲೆಡೆಯೂ ಗಂಗೆಯ ಹರಿವು ಕ್ಷೀಣಿಸುತ್ತಿದೆ. ಎಲ್ಲ ಕಾರ್ಖಾನೆಗಳ ತ್ಯಾಜ್ಯಗಳಿಂದ ಹಿಡಿದು ನಗರಗಳ ಮಲಮೂತ್ರಗಳೂ ಗಂಗೆ ಸೇರುತ್ತಿವೆ. ಗಂಗೆಯ ಅವಿಚ್ಛಿನ್ನ ಪ್ರವಾಹಕ್ಕೆ ಅಡೆ ತಡೆಗಳನ್ನು ಕಟ್ಟುತ್ತಿದ್ದೇವೆ. ಭಾಗೀರಥಿಯ ಉಗಮದಿಂದ ಸುಮಾರು ೧೩೫ ಕಿ.ಮೀ. ಗಳ ಉತ್ತರಕಾಶಿಯ ವರೆಗೆ ಮಾತ್ರ ಉಳಿದಿರುವ ಭಾಗೀರಥಿಯ ಪ್ರವಾಹಕ್ಕೂ ಆಧುನಿಕ ಜಗತ್ತು ಲಗ್ಗೆಯಿಡುತ್ತಿದೆ. ಗಂಗೋತ್ರಿಯ ಹತ್ತಿರದಲ್ಲೇ ಅಣೆಕಟ್ಟನ್ನು ನಿರ್ಮಿಸಹೊರಟಿದ್ದಾರೆ. ಈಗ ಅಳಿದುಳಿದಿರುವುದೂ ಕೂಡ ನಾಶವಾದರೆ ಭಾಗೀರಥಿ ಪೂರ್ಣವಾಗಿ ಮರೆಯಾಗುವಳೇ? ಇದಕ್ಕೆ ನಾ ಹೇಗೆ ಸ್ಪಂದಿಸಲಿ? ತಾಯಿಯ ರಕ್ತವನ್ನೇ ಹೀರುತ್ತಿರುವ ಪ್ರಬಲರ ವಿರುದ್ಧ ನಾನು ಏನು ಮಾಡಲಿ? ಈ ಭವ್ಯ ಇತಿಹಾಸದ ಧರ್ಮಾಚಾರ್ಯರುಗಳೂ ಕೈಕಟ್ಟಿ ಕುಳಿತಿರುವಾಗ ನಾ ಏನು ಮಾಡಲಿ? ಆದರೆ ನನ್ನ ತಾಯಿಯ ರಕ್ತವನ್ನು ಹೀರುವುದನ್ನು ನೋಡುತ್ತಾ ನಾನು ಸುಮ್ಮನಿರಲಾರೆ. ಇದು ಕಷ್ಟವೆನಿಸಿದರೂ ನನಗೊಂದು ಸೌಭಾಗ್ಯವಿದೆ. ನಾನು ಈ ಭಾರತವರ್ಷದಲ್ಲಿ ಹುಟ್ಟಿದವನು. ತಪಸ್ಸು ಮತ್ತು ತ್ಯಾಗವನ್ನು ಬೇರೆಲ್ಲ ಶಕ್ತಿಗಳಿಗಿಂತ ದೊಡ್ಡದು ಎಂದು ತೋರಿಸಿದ ಪರಂಪರೆಯವ ನಾನು. ಗಂಗೆ ನಮ್ಮೆಲ್ಲರ ನಂಬಿಕೆಯ ಪ್ರತೀಕ ಹೌದು. ಆ ನಂಬಿಕೆಗಾಗಿ ತ್ಯಾಗ ಮಾಡಲು ಸಿದ್ಧರಿಲ್ಲದಿದ್ದರೆ, ಆ ನಂಬಿಕೆಯ ಅರ್ಥವಾದರೂ ಏನು? ಎನ್ನುತ್ತಾ ಬಹಳ ದಿನಗಳ ಆತ್ಮವಿಮರ್ಶೆಯ ನಂತರ ಅಗ್ರವಾಲರು ಒಂದು ಗಟ್ಟಿ ತೀರ್ಮಾನಕ್ಕೆ ಬಂದರು. ಗಂಗಾಮಾತೆಗಾಗಿ ತನ್ನ ಸರ್ವಸ್ವವನ್ನು ತ್ಯಜಿಸುವ ಪಣ ತೊಟ್ಟರು. ಗಂಗೆಯನ್ನು ಉಳಿಸಲು ಜೀವವನ್ನೂ ಅಡವಿಡಲು ಸಜ್ಜಾದರು. ಗಂಗೋತ್ರಿ ಮತ್ತು ಉತ್ತರಕಾಶಿಯ ನಡುವಿನ ಭಾರೀ ಪ್ರಮಾಣದ ಯೋಜನೆಗಳನ್ನು ಕೈಬಿಡುವುದಿಲ್ಲವಾದರೆ ಆಮರಣಾಂತ ಉಪವಾಸ ಮಾಡುವುದಾಗಿ ಆಹಾರವನ್ನು ತ್ಯಜಿಸಿಯೇ ಬಿಟ್ಟರು – ೨೦೦೮ ರ ಜೂನ್ ತಿಂಗಳು. ಏಳು ದಿನಗಳ ಉಪವಾಸಕ್ಕೆ ಸ್ಪಂದಿಸಿದ ಉತ್ತರಾಖಾಂಡ್ ರಾಜ್ಯ ಸರ್ಕಾರ ಭೈರೊಘಾಟಿ ಮತ್ತು ಪಾಲಾ ಮನೇರಿ ಯೋಜನೆಗಳನ್ನು ಕೈಬಿಟ್ಟಿತು. ಕೇಂದ್ರ ಸರ್ಕಾರ ಲೊಹಾರಿನಾಗ್-ಪಾಲ ಯೋಜನೆಯ ಸಾಧಕ-ಬಾಧಕಗಳನ್ನು ವಿಮರ್ಶಿಸಲು ಸಮಿತಿಯೊಂದನ್ನು ರಚಿಸಿ ಮೂರು ತಿಂಗಳ ಕಾಲಾವಕಾಶ ಕೊಟ್ಟಿತು. ಇವುಗಳಿಂದ ತಮ್ಮ ಉಪವಾಸ ಕೈಬಿಟ್ಟ ಅಗ್ರವಾಲರು ಮೂರು ತಿಂಗಳು ಕಾದರು. ಸರ್ಕಾರ ಇನ್ನೊಂದು ತಿಂಗಳ ವಿಸ್ತರಣೆ ಕೊಟ್ಟಿದು. ಮತ್ತೊಂದು ತಿಂಗಳು. ಮತ್ತೆ ಮೂರು ತಿಂಗಳು. ಬೇಸತ್ತ ಅಗ್ರವಾಲರು ಮತ್ತೆ ಆಮರಣಾಂತ ಉಪವಾಸ ಕೈಗೊಂಡರು. ಈ ಬಾರಿ ಕೇಂದ್ರ ಸರ್ಕಾರದ್ದೂ ದಪ್ಪ ಚರ್ಮವಾಗಿತ್ತು. ಒಂದು ದಿನವಲ್ಲ. ಎರಡು ದಿನವಲ್ಲ. ಒಂದು ವಾರ, ಎರಡು ವಾರ, ಮೂರು ವಾರ, ಒಂದು ತಿಂಗಳು. ಕೊನೆಗೆ ೩೭ ದಿನಗಳ ನಂತರ, ಪ್ರಧಾನಿ ಕಛೇರಿಯ ಮಧ್ಯಸ್ಥಿಕೆಯಿಂದ ಕೇಂದ್ರ ಸರ್ಕಾರದ ವಿದ್ಯುತ್ ಮಂತ್ರಾಲಯ ಲೊಹಾರಿನಾಗ್-ಪಾಲ ಯೋಜನೆಯನ್ನು ಕೈಬಿಡುವ ಆದೇಶ ಹೊರಡಿಸಿತು. ೩೮ನೇ ದಿನ ಅಗ್ರವಾಲರು ತಮ್ಮ ಉಪವಾಸ ಕೈಬಿಟ್ಟರು. ನಂತರದಲ್ಲೂ ಮಾತು ಕೊಟ್ಟು ಮತ್ತೆ ಮುರಿಯುವ ಸರ್ಕಾರದ ವಿರುದ್ಧ ಅಗ್ರವಾಲರ ಉಪವಾಸದ ತಪಸ್ಸುಗಳೂ ನಡೆದೇ ಇವೆ. ಮೂರು ಭಾರೀ ಯೋಜನೆಗಳನ್ನು ಗಂಗೋತ್ರಿ ಮತ್ತು ಉತ್ತರಕಾಶಿಯ ನಡುವಿನಲ್ಲಿ ನಿಲ್ಲಿಸಲಾಯಿತು. ಅಲ್ಲದೇ ಈ ಪ್ರದೇಶವನ್ನು ಸೂಕ್ಷ್ಮ ಪರಿಸರದ ತಾಣ ಎಂದೂ ಸರ್ಕಾರ ಘೋಷಿಸಿತು. ಗಂಗೆಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಿತು. ಅಷ್ಟರಲ್ಲೇ ಗಂಗಾ ಮಾತೆಯ ಪರಿಚಾರಕರಾಗಿ, ಪರಿವ್ರಾಜಕರಾಗುವ ದೀಕ್ಷೆ ತೊಟ್ಟರು. ಜಗದ್ಗುರು ಶ್ರೀ ಶಂಕರಾಚಾರ್ಯ ದ್ವಾರಕಾಸಂಸ್ಥಾನ ಹಾಗೂ ಜ್ಯೋತಿಷ್ಪೀಠದ ಅಧೀಶ್ವರರಾದ ಸ್ವಾಮೀ ಸ್ವರೂಪಾನಂದ ಸರಸ್ವತಿಗಳ ಶಿಷ್ಯರಾದ ಸ್ವಾಮೀ ಅವಿಮುಕ್ತೇಶ್ವರಾನಂದ ಸರಸ್ವತಿಗಳಿಂದ ಸನ್ನ್ಯಾಸ ಪಡೆದು ಸ್ವಾಮೀ ಜ್ಞಾನಸ್ವರೂಪ ಸಾನಂದರಾದರು. ಗಂಗೆಯ ಪರಿಶುದ್ಧಿಗಾಗಿ ಹಗಲು ರಾತ್ರಿ ಗಂಗೆಯ ತಪಸ್ಸಿನಲ್ಲೇ ಮುಂದುವರೆಯುತ್ತಿದ್ದಾರೆ. ಇತ್ತೀಚಿಗಷ್ಟೇ ತಮ್ಮ ೮೦ ನೇ ವಯಸ್ಸಿನಲ್ಲೂ ಗಂಗಾ ಸಮಿತಿಯು ಸಭೆಗಳನ್ನೇ ನಡೆಸುತ್ತಿಲ್ಲದ್ದನ್ನು ಪ್ರತಿಭಟಿಸಿ ಮತ್ತೆ ಉಪವಾಸ ಕೈಗೊಂಡರು. ಪ್ರಧಾನಿ ನೇತೃತ್ವದ ಸಭೆಯನ್ನು ಕೂಡಲೇ ನಡೆಸುವ ಆದೇಶ ಹೊರಬಂದ ಮೇಲೆಯೇ ಉಪವಾಸ ನಿಂತಿದ್ದು. ವೈಜ್ಞಾನಿಕ ವಿಮರ್ಶೆಗಳಲ್ಲಿ ಸಿದ್ಧಹಸ್ತರಾದ ಸ್ವಾಮೀಜಿ, ಈ ದೇಶದ ಆಧ್ಯಾತ್ಮಿಕ ಸೊಬಗಿಗೆ ತಾವಾಗಿಯೇ ಶರಣಾದವರು. ಗಂಗೆಯ ಭವಿಷ್ಯವನ್ನು ಯಾವುದೋ ಒಂದು ತಜ್ಞ ಸಮಿತಿಯೋ, ಸರ್ಕಾರವೋ, ಒತ್ತಡ ಹೇರುವ ಸಮುದಾಯಗಳೋ ಮಾಡಿದರೆ ಸಾಲದು. ಅದು ಧರ್ಮಾಚಾರ್ಯರ ಒಪ್ಪಿಗೆಯಂತೆ ನಡೆಯಬೇಕು. ಇದೊಂದು ಬರಿಯ ನೀರಿನ ನದಿಯಲ್ಲ. ಇದು ನಮ್ಮ ನಿಮ್ಮೆಲ್ಲರ ಭಾಗ್ಯದೇವತೆ ಎನ್ನುತ್ತಾ ತಪಸ್ಸಿನಲ್ಲಿ ಮುಂದುವರೆದಿದ್ದಾರೆ ಸ್ವಾಮೀಜಿ. ಎಲ್ಲ ಬಿಟ್ಟ ಸನ್ನ್ಯಾಸಿಯೂ ಬಿಡಬಾರದ್ದು ಈ ತಪಸ್ಸು. ತಾಯಿಯ ಕರುಳ ಕುಡಿಯೊಂದು ನಡೆಸುತ್ತಿರುವ ತಪಸ್ಸು ಇದು. ಗಂಗೆಯನ್ನೇ ತಾಯಿಯಂದು ಅಪ್ಪಿರುವ, ಶ್ರೀರಾಮನನ್ನೇ ದೈವವೆಂದು ಆಶ್ರಯಿಸಿರುವ, ಭಗೀರಥನನ್ನೇ ಪೂರ್ವಜನೆಂದು ನಂಬಿರುವ, ತಪಸ್ಸೇ ತನ್ನ ಧರ್ಮವೆಂದು ಆಚರಿಸುತ್ತಿರುವ ಆ ಜ್ಞಾನವೃದ್ಧ ಹಾಗೂ ವಯೋವೃದ್ಧ ಚೇತನಕ್ಕೆ  ಪೂರ್ಣಪ್ರಮತಿಯ ನಮನ. ಪೂರ್ಣಪ್ರಮತಿಗುರುಕಾರುಣ್ಯಸರಣಿಂ ಪ್ರಪನ್ನಾ ಮಾನ್ಯಾ ಸ್ಮಃ

Excellence – A Guiding Principle

Sunday, July 1st, 2012

Krishna Kadiri Purnapramati Team Excellence means different things to different people, and in different contexts. Let’s start with a popular anecdote on Excellence : A German once visited a temple under construction where he saw a sculptor making an idol of God. Suddenly he noticed a similar idol lying nearby. Surprised, he asked the sculptor, “Do you need two statues of the same idol?” “No,” said the sculptor without looking up, “We need only one, but the first one got damaged at the last stage.” The gentleman examined the idol and found no apparent damage. “Where is the damage?” he asked. “There is a scratch on the nose of the idol.” said the sculptor, still busy with his work. “Where are you going to install the idol?” The sculptor replied that it would be installed on a pillar twenty feet high. “If the idol is that far, who is going to know that there is a scratch on the nose?” the gentleman asked. The sculptor stopped his work, looked up at the gentleman, smiled and said, “I will know it.” We usually use these anecdotes to tell others about excellence, rather than imbibe it as a value to pursue. Given the rush of our lives with little time for most things, and such a populous country with numerous options – be it for anything; education, food, entertainment etc.  – it is not surprising that excellence takes a back seat and whatever serves the basic purpose gets accepted. For example, a public transport bus that carries people from one point to another is neither rejected, nor is there a demand for public transport designed for a comfortable commute. This excessive predominance or focus of ‘whatever works’ has pushed the drive for excellence to the backseat. Even those, who pursue excellence, are lead to frustration of there not being a direct reward. And some day, that drive to excellence will die its own natural death, if not used or nourished. However, despite there no being direct reward, the pursuit of excellence is a very satisfying one. It is a never-ending journey. For one, excellence is not about competition with others. It is one’s wish to excel oneself. This pursuit does not tire oneself because a human exhilarates, by his very nature, when he sees a positive change in himself. Most importantly, this pursuit helps one not get distracted by other ‘rewards’ and stay focused on oneself. And such a pursuit cannot begin without a dream of what excellence means in that context. So, here, I narrate our dream of excellence: 1.    Integrated Learning: That is Purnapramati’s most fundamental promise. The basic purpose would be served by the additional classical subjects (at various levels) and the methodology adopted. However, if additional means are devised to ensure that the child is not dogmatic about any system of knowledge but is neither indecisive, that would be a step towards excellence. Integrated Learning should open up his mind to different approaches to a problem, should make him understand different facets of the problem and not just the popular one. For example, is the problem of alternate energy sources related to consumerism, which itself is related to one-life belief? If the learning is really holistic and presented in the way it should be (rather than dogmatic axioms), the child must not think there are two different / contrasting streams of education. For the child, there is no integrated learning. There is just learning. The next measure would be to get parents, grandparents, friends, cousins, teachers interested in Integrated Learning. After all, it is important to everybody’s life! Most parents and friends of Purnapramati are interested in this idea because ‘there is a fear of losing our culture and getting westernized’. While that is a good motivation, one must still ask – why this loss of culture? A little introspection gets to the root of the problem i.e. oneself. And to those people, who wish to correct the offset (instead of just blaming the earlier generations), Purnapramati must become relevant. The next level would be when society and other institutions recognize the value for such integrated education and become good competition to Purnapramati! And the school should propagate the idea of integrated learning and enable other schools for providing the same in as remote areas as possible. 2.    Svadharma: Within Purnapramati, the word Svadharma refers to natural propensities and intrinsic talent of an individual. We recognize that these are given by God, and he gives them in good measure because such are needed for the purpose of that life. Identifying those starts with teachers and staff observing the child in a qualitative manner, as is already prevalent at the school. The teachers identify what is the child good at, what are his ways of learning etc. That is a good but first step. It is limited to the subjects taught at school. However Svadharma as a concept is much deeper and requires greater involvement and exposure of the teacher. Essentially the child must realize on his own (without any goading), what he is good at (at a suitable age), where he excels, where his interests lie etc. And the child must be able to act upon it, to find his own calling. 3.    Cultural Values over culture: While the basic curriculum will retain certain cultural aspects in the child, it is necessary to go beyond that. The child must be able to understand the philosophy behind the culture, the values guiding such culture as much as the culture itself. For example, instructing the child to bow to elders is teaching culture; however teaching the child that bowing down is a gesture to acknowledge greater experience, to acknowledge one’s gratitude, and to respect the forms of Supreme Being present in such elders. The culture itself is transient; the values are and should be more persistent. 4.    Teacher vs. Guru: This is for our teachers. Teacher teaches, Guru guides. Our tradition holds a Guru as a reflection of the

Purnapramati - A Method to Madness

Purnapramati – A Method to Madness

Sunday, July 1st, 2012

Sreenivasa G and Srinidhi V Doctoral Students, IIIT-H and IIM-B Purnapramati Team Purnapramati is completing its 2 years shortly. It may be a good time to retrospect on our journey and also contemplate on future directions.  The idea of Purnapramati was seeded, nurtured, planned and course-corrected for more than a decade, all based on experiences, explorations followed by serious pursuit in studies and research. Planning is the key to the success of any work. Even Lord Brahma, did penance for long years before creating this universe: निशम्य तद्वक्तृदिदृक्षया दिशो विलोक्य तत्रान्यदपश्यमानः । स्वधिष्ण्यमास्थाय विमृश्य तद्धितं तपस्युपादिष्ट इवादधे मनः ॥ – भागवतम् (२/९/७) Experiences are our most valuable assets and if we can reflect on them dispassionately, they can not only help in our course correction, but also play an important role in identifying our innate passion. Experiences also become richer with wider exposures. Exposure is a natural result of explorations. Exploration of life through travelling and reading are two key sources to get a wider exposure: ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು! In a country as rich and variegated as India, be its mountains, rivers, forests, people or her culture,  each one of them have inspired every step of this journey.  From Kalish-Manasa-sarovar in Tibet to Kumara Parvat in south, Kanchanaganga in East to Narayana-Sarovara in Gujarat, an Anna Hazare in remote village of Maharashtra to Anil Agarwal in Delhi, Prabodhini Gurukula in Hariharapura to Siddh School in Kempti, the insights of Bharat Jhunjhunwala to works of Rajendra Singh are just a few sources for powerful and diverse inspirations.  Such exposure also brings a new perspective to life. The pursuit of such wider exposure requires stretching physical limits, in climbing the peaks and trekking the remotest places of the world, and this in turn makes us mentally strong with resilience to pursue the impossible. Modern world, along with material prosperity, also brought the very purpose of modernity into question. Ironically, the foundations for providing any answer also became questionable. What is development? How do we answer it? What is our role? Such fundamental questions have driven the idea of Purnapramati, towards serious studies in Philosophy and its relations with society. From a social perspective, consider the projects like Kaiga Nuclear Plant or many other such projects, at the cost of enormous natural resources, which have been sustained over millions of years to meet our energy needs. Philosophical questions lead to a different kind of adventure. Our land is a treasure trove here too. Like the Majestic Himalayas, a wonder in many ways, be its geographical features or culture, Indian literature too, like Mahabharata and Ramayana unravels the infinite wisdom. It is such works spread across the country, in manuscripts and living traditions that bring the spirit of this ancient civilization alive. Many shaastras and kalaas (arts) in our tradition blend pure intellect, emotions and beauty together. The contemporary issues surrounding our society and polity are missing these roots, arguably due to our own slavery, so that we still are educated without these, and it only continues to weaken them. Creating a new world and order – Shangri-la, within whatever limited scope, has always been the driving force behind Purnapramati. Time had given some good insights and wisdom, to ensure that this does not end up nowhere like a trishanku creation. This is seeded strongly in core values representing the essence of eternal Dharma and is being guided by the people who can articulate and practice these in tune with contemporary societal needs. We hope this will not only stand the test of time, but will multiply as integrated learning centers of excellence. Like Nalanda or Takshashila, ancient universities, open to all sections of society for all branches of higher learning, Purnapramati is envisioned to be a one-stop integrated learning center for all, where the wisdom of important disciplines of learning in the world are introduced in reasonable depth.  It also has a deep desire to extend integrated learning to higher education and research. Outreach programs meant for public will make it a platform for integrated learning for all ages. The journey so far has had its moments. What started as an utopian idea in public perception, i.e. to host a Gurukul in the forests on the banks of a river, kept moving from farther options to nearer options and to be finally settled in our own backyard in Bangalore city.  Integration of humanities in higher education pursued in IIIT-H crystallized our thoughts and gave the impending force to pursue. Visits to alternative schools like CFL and Valley in Bangalore expanded the ideas and instilled confidence in our ideas. Research work in identifying and publishing some important unpublished manuscripts added clarity and brought confidence. We were capable of dreaming and reifying it as well! Lakhs of valuable manuscripts still preserved in libraries in Bikaner to Tanjore, Varanasi to Tripunatra, Jammu to Bhubaneswar is undoubtedly a wonder of highest order. While such an unparalleled wonder motivates life forever, their decaying state sets the goals for our life. In most social works, where participation of many individuals is a necessity, it is important to have a team of like-minded and like-hearted people who share the same vision and values. A core team should have had time-tested relationships, those that can result in commitment for a purpose. With blessings, support and wishes from Gurus, who are an anchor through their wisdom, like-minded friends and extra-ordinary people with similar values, the idea of Purnapramati became a dream and, within months, the mission of many. All at Purnapramati committed to this new school of integrated learning. Integrated learning is not just a rhetorical phrase, but the philosophical foundation of Purnapramati. It is the overarching principle that defines the values, culture, academics and metrics at Purnapramati. However, integrated learning has multiple connotations in daily use. Can we understand this principle in a comprehensive way? What do we at Purnapramati mean by Integrated Learning? Can it be translated or does it diffuse? How does it percolate to

Perspectives on Purnapramati as an Organization

Sunday, July 1st, 2012

Dr. Madhusudan Atre Former President and MD, Applied Materials India Vegashakti Consultants, Nurturing Success “Purnapramati – A Center for Integrated Learning” is a school which is different from most of the other schools. It aims to integrate the modern school system of education with the traditional Indian values and knowledge. A holistic grooming of children, from their initial years, is envisaged – helping them to be armed with the modern knowledge base built on the foundations of classical Indian learning – and all this from the early stages of primary school. Being different also brings its excitements and challenges on various fronts – some of which are Infrastructure, Organization and its Structure, Management & Leadership, Teachers, Success Factors, Criteria & Metrics to measure success, etc. Being different also has the advantage that one can address the various aspects and challenges in one’s own way, rather than through established means. This gives an opportunity to establish path-breaking and pioneering methodologies in the education system addressing integrated learning. Some thoughts, as well as pointers, on some of the organizational topics are presented below (the list is not prioritized, all of them are important): 1.    Learning from Others: There have been other schools and educational institutions (at various levels from school to universities) which have also addressed holistic learning. It is important to understand what successes and challenges they have faced, and learn from them. Take the positives, and keep in mind the areas of improvements. 2.    Organization: It is very important to set up a proper organization structure. The proper requirements need to be identified – Trust Board, Governing/Advisory Board, Executive Team, Operational Team, etc. It is critical to have clearly defined positions, along with well defined roles and responsibilities, reporting, performance appraisals, etc. 3.    Strategic and Tactical: Keep in mind the important aspects of Vision, Mission, Core Values, Goals, and Roadmaps – and enable their success from the very beginning by setting up the right environment and platforms. The long term strategic goals should be the guiding stars, and the short term tactical roadmaps should be the achievements. 4.    Empowerment & Accountability: Each role and position has to be empowered to do the job, and properly balanced with accountability towards doing the job. The system should be based on meritocracy – and is applicable for all people within the organization, whether they are teachers or directors or advisors or trustees. 5.    High Standards: The aim and vision should be for the highest standards of quality, outputs, team, etc. It is important to aim for the galaxies, so that one can at least reach the sun and the moon. 6.    Organization v/s Individual: While it is important for each person within the organization to contribute his/her best and be successful, it is important to keep in mind that Organization comes before Self. “Silo – Mentality” should not be encouraged. It is indeed true that “an individual succeeds when the organization succeeds”, and not the other way round. Team work is the key. 7.    Success Factors: Along with accountability comes the need to define success and measure it. Suitable metrics and criteria need to be defined and put in place. All the people in the organization must realize what the organization expects of them to be successful, and how they will be held accountable. 8.    Organizational Culture: The culture of an organization will ultimately determine its future in the long run. Focusing on – transparency (balanced with a “need to know” approach), honesty, stress on ethical behavior and high value system, and “walking the talk”, etc – will set the tone of the organizational culture for the future. 9.    Evolving Strategy and Adaptability: While it is important to have goals, vision, strategy – it is equally important to realize that while the many goals will be achieved with time; the world and ecosystem will change, the needs will evolve, etc. Hence the goals should be studied at suitable frequencies, and adaptability towards change should be kept in mind. 10.    Ecosystem: Many ingredients go towards making this organization – teachers, parents, children, society, management, school infrastructure, etc. It is important to ensure that all are in sync. Hence communication at the right levels of frequency and content, as well as involving the various ingredients at the right time place and place will add to the success. The commitments, and passion, of the entire ecosystem is important. 11.    Self Improvement: As the organization grows and successes come in – reflecting on what has gone well, as well as what could have been done better, is important. This will help achieve future successes in quicker time, as well as avoiding pitfalls and obstacles in the future. There are, surely, many more. The attempt here is to highlight some of the aspects which are important in a new organization which is starting to grow, and trying to reach the next (and higher) levels. Being a “start-up” in terms of the age of the organization, may have some additional aspects to consider. 1.    Founding Principles Towards a Long Term Success: All of the aspects of general organizational success mentioned in the 11 points above are also relevant for a new “start-up” organization. 2.    Entrepreneurial v/s Structured Organization: The philosophies of organizational behavior in a new start-up are very different from a big, established organization. In a start-up – the approach is informal, everyone does anything to make things successful, roles are ambiguous and cut across individuals, etc. In an established organization – there are systems and processes, roles and responsibilities are well defined, there are clear accountabilities, etc. It is important to find the right balance, such that the dynamism and entrepreneurial approach of a start-up, mesh as seamlessly as possible with the structured and process approach of an establishment. And the degree of the two approaches can vary with time. 3.    Establishing Credibility: Being a start-up, it is very important to establish credibility – as this will determine the success for the future. Having specific goals

ಸಂಸ್ಥೆಯ ಗುರಿಸಾಧನೆಯಲ್ಲಿ ಸಾಂಘಿಕಪ್ರಯತ್ನದ ಮಹತ್ವ

ಸಂಸ್ಥೆಯ ಗುರಿಸಾಧನೆಯಲ್ಲಿ ಸಾಂಘಿಕಪ್ರಯತ್ನದ ಮಹತ್ವ

Sunday, July 1st, 2012

ಡಾ. ಹೆಚ್. ಸತ್ಯನಾರಾಯಣಾಚಾರ್ಯ ಪ್ರಾಧ್ಯಾಪಕರು, ಪೂರ್ಣಪ್ರಜ್ಞ ವಿದ್ಯಾಪೀಠ ಪೂರ್ಣಪ್ರಮತಿ ತಂಡ ನಿಶ್ಚಿತಗುರಿ ಹಾಗು ಸಮಾನ ಉದ್ದೇಶಗಳನ್ನು ಮುಂದಿಟ್ಟುಕೊಂಡು ಹಲವು ವ್ಯಕ್ತಿಗಳ ಭಾಗವಹಿಸುವಿಕೆಯಿಂದ ಕಾರ್ಯನಿರ್ವಹಿಸುವ ಘಟಕಕ್ಕೆ ‘ಸಂಸ್ಥೆ’ ಎಂದು ಹೆಸರು. ಅಂತಹ ಗುರಿ ಹಾಗೂ ಉದ್ದೇಶವು ‘ವಿದ್ಯಾದಾನ’ ವೂ ಆಗಿದ್ದಾಗ ಆ ಸಂಸ್ಥೆ ವಿದ್ಯಾಸಂಸ್ಥೆಯೆನಿಸಿದೆ. ಒಂದು ವಿದ್ಯಾಸಂಸ್ಥೆ ಇನ್ನೊಂದು ಸಂಸ್ಥೆಗಿಂತ ಗುರಿತಸಲ್ಪಡುವುದು ಅದರ ಅಸಾಧಾರಣ ಧ್ಯೇಯಗಳಿಂದ. ಸಂಸ್ಥೆಗೆ ಹಲವು ಧ್ಯೇಯಗಳಿರುತ್ತವೆ. ಉದಾಹರಣೆಗೆ ಆದರ್ಶಸಂಸ್ಥೆಯೊಂದರ ಧ್ಯೇಯಗಳು ಹೀಗಿದ್ದಿರಬಹುದು. – ಶಿಕ್ಷಕರು ಭಾರತೀಯ ಆರ್ಷಸಂಸ್ಕೃತಿ – ಸಂಸ್ಕೃತಗಳನ್ನು ಆಧರಿಸಿರಬೇಕು. – ಆರ್ಥಿಕ ಲಾಭೋದ್ದೇಶಗಳು ವಿದ್ಯಾಸಂಸ್ಥೆಯಲ್ಲಿ ಎಂದೂ ಸುಳಿಯಕೂಡದು. – ಜಾತಿ-ಹಣದ ಭೇದವಿಲ್ಲದೇ ಸಮಾಜದ ಎಲ್ಲಾ ವರ್ಗದ ಜನರಿಗೂ ಸಂಸ್ಥೆಯ ಬಾಗಿಲು ತರೆದಿರಬೇಕು. – ಇಲ್ಲಿ ಶಿಕ್ಷಣಪಡೆದು ಹೊರಬರುವಾತ ವಿಜ್ಞಾನ-ತತ್ತ್ವಜ್ಞಾನ ಉಭಯ ಕುಶಲನಾಗಿ ಸಮಾಜಮುಖೀ ಪ್ರವೃತ್ತಿಯನ್ನು ರೂಢಿಸಿಕೊಂಡಿರಬೇಕು. – ಎಲ್ಲಾ ಬಗೆಯ ಸಂಕುಚಿತತೆಯನ್ನು ತ್ಯಜಿಸಿ ವಿಕಸಿತಭಾವದ ಪ್ರಾಮಾಣಿಕಪ್ರಜೆ ಈ ಸಂಸ್ಥೆಯ ಉತ್ಪಾದನೆಯಾಗಿರಬೇಕು. ಇತ್ಯಾದಿ. ಇವುಗಳಲ್ಲಿ ಮೊದಲ ಮೂರು ಆಡಲಿತಕ್ಕೆ ಸಂಬಂಧಪಟ್ಟವುಗಳು. ಗಟ್ಟಿ ಸಂಕಲ್ಪವುಳ್ಳ ನಿಃಸ್ವಾರ್ಥಿಯಾದ ಆಡಳಿತವರ್ಗ ಒಮ್ಮನಸ್ಸಿನಿಂದ ಈ ಧ್ಯೇಯಗಳನ್ನು ಸುಲಭವಾಗಿ ಸಾಧಿಸಬಹುದು. ಆದರೆ ಧ್ಯೇಯಗಳನ ಅನುಷ್ಠಾನ ತುಸು ಕಷ್ಟಸಾಧ್ಯ. ಅದರ ಹಿಂದೆ ಬಹಳಷ್ಟು ಆಲೋಚನೆಯ ಅಗತ್ಯವಿದೆ. ದೂರದೃಷ್ಟಿಯ ಚಿಂತನೆಯ ಆವಶ್ಯಕತೆಯಿದೆ. ಲಭ್ಯವಿರುವ ಹನ್ನೆರಡು ವರ್ಷದ ವಿದ್ಯಾಭ್ಯಾಸದಲ್ಲಿ ನಮ್ಮ ವಿದ್ಯಾರ್ಥಿ ಉದ್ದೇಶಿತಮಟ್ಟಕ್ಕೆ ಬೆಳೆಯಬೇಕಾದರೆ ವರ್ಷ-ವರ್ಷವೂ ಎಷ್ಟೆಷ್ಟನ್ನು ಆತನಲ್ಲಿ ತುಂಬಬೇಕು. ಪಾಠ್ಯವಿಷಯ, ಕಲಿಕೆಯ ವಿಧಾನ, ಪಠ್ಯೇತರ ಆಯ್ಕೆಗಳು ಹೇಗಿರಬೇಕು ಎಂಬ ಬಗೆಯ ವ್ಯವಸ್ಥಿತ ನಿರ್ಣಯವು ಇಲ್ಲಿ ಮುಖ್ಯವಾಗುತ್ತದೆ. ಇಂತಹ ಧ್ಯೇಯೋದ್ದೇಶಗಳು ಯಶಸ್ವಿಯಾಗಿ ಗುರಿಮುಟ್ಟುವಲ್ಲಿ ಒಬ್ಬೊಬ್ಬ ವ್ಯಕ್ತಿಯ ಪ್ರಯತ್ನ ಬಹು ಮುಖ್ಯವಾದರೂ ಸಾಂಘಿಕ ಇಚ್ಛಾಶಕ್ತಿಯಿಲ್ಲದೆ ನಿರೀಕ್ಷಿತ ಯಶಸ್ಸು ಅಸಾಧ್ಯ. ಈ ನಿಟ್ಟಿನಲ್ಲಿ ಪ್ರಾಂಶುಪಾಲರಿಂದ ಹಿಡಿದು ಅರೆಕಾಲಿಕ ಪಾಠಕ-ಕಾರಕೂನನ ತನಕ; ಅಧ್ಯಾಪಕನನ್ನು ನಿಯಮಿಸುವ ಸಂಸ್ಥ್ಯಾವ್ಯವ್ಯವಸ್ಥಾಪಕನಿಂದ ಆರಂಭಸಿ ವಿದ್ಯಾರ್ಥಿಗಳ ಪೋಷಕರ ತನಕ ಪ್ರತಿಯೊಬ್ಬರಿಗೂ ಈ ಧ್ಯೇಯದ ಬಗೆಗೆ ತಿಳುವಳಿಕೆ ಮತ್ತು ಗೌರವ ಅತ್ಯಪೇಕ್ಷಿತವಾಗಿದೆ. ಒಂದು ಸಂಸ್ಥೆಯಲ್ಲಿ ದುಡಿಯುವ ಪ್ರತಿಯೋರ್ವ ವ್ಯಕ್ತಿಯೂ ಆ ಸಂಸ್ಥೆಯ ಆಧಾರಸ್ತಂಭ. ಸ್ತಂಭ ಗಟ್ಟಿಯಾಗಿದ್ದರೆ ಸಂಸ್ಥೆಗೆ ಭದ್ರನೆಲೆ ಶತಶಸ್ಸಿದ್ಧ. ವಿದ್ಯಾಸಂಸ್ಥೆಯ ಯಶಸ್ಸು ಅಧ್ಯಾಪಕವರ್ಗವನ್ನು ಹೆಚ್ಚು ಅವಲಂಬಿಸಿದೆ. ಅಧ್ಯಾಪಕನು ತನ್ನನ್ನು ಪೂರ್ತಿಯಾಗಿ ಸಂಸ್ಥೆಯ ಧ್ಯೇಯಕ್ಕೆ ಅನುಗುಣವಾಗಿ ತೊಡಗಿಸಿಕೂಳ್ಳುವಲ್ಲಿ ಈ ಧ್ಯೇಯದಲ್ಲಿ ಆತನಿಗಿರುವ ಶ್ರದ್ಧೆ ಹಾಗೂ ಆತ್ಮತೃಪ್ತಿ ಪ್ರಧಾನಪಾತ್ರವನ್ನು ವಹಿಸುತ್ತದೆ. ಇದರೊಂದಿಗೆ ಆತನ ಕೌಟುಂಬಿಕ ನಿರ್ವಹಣೆಗೆ ಅನುಗುಣವಾದ ಆರ್ಥಿಕ ಸ್ಥಿರತೆ ಅಪೇಕ್ಷಿಸುತ್ತದೆ. ಪ್ರಸ್ತುತ ಪಟ್ಟಣಜೀವನದಲ್ಲಿ ಸಾಮಾನ್ಯ ಜೀವನ ನಿರ್ವಹಣೆಗೆ ಸಾಕಾಗುವಷ್ಟೂ ಮಾಸಿಕಸಂಪಾದನೆ ಇಲ್ಲವಾದರೆ ಶ್ರೀಸಾಮಾನ್ಯ ಅಧ್ಯಾಪಕನೋರ್ವ ತನ್ನನ್ನು ಪೂರ್ಣಮಟ್ಟದಲ್ಲಿ ಧ್ಯೇಯ ಸಾಧನೆಯಲ್ಲಿ ತೊಡಗಿಸಿಕೊಳ್ಳಲಾರ. ಅಂತಹ ಆವಶ್ಯಕತೆಗಳನ್ನು ನಿರ್ವಹಿಸುವ ಭಾರವನ್ನು ಹೊರುವುದಲ್ಲದೇ ಅಧ್ಯಾಪಕರ ಕಷ್ಟಕಾರ್ಪಣ್ಯಗಳಲ್ಲಿ ಬೆಂಬಲವಾಗಿ ನಿಲ್ಲುವ ಆಡಳಿತವರ್ಗ ಸಂಸ್ಥೆಯ ಬೆನ್ನುಹುರಿ. ಆಡಳಿತವರ್ಗ ಹಾಗೂ ಅಧ್ಯಾಪಕವರ್ಗ ಕುಟುಂಬಭಾವದಿಂದ ಬಾಳುವುದು ಸಂಸ್ಥೆಯ ಸರ್ವತೋಮುಖ ಏಳ್ಗೆಗೆ ಸಹಕಾರಿ. ದುಡಿಸುವವನಲ್ಲಿ ಅಸಹಾಯಕತೆಯ ಭಾವ, ದುಡಿಯುವನಲ್ಲಿ ಅಭದ್ರತೆಯಭಾವ ಇವು ಸಂಸ್ಥೆಯೆಂಬ ಜ್ಯೋತಿಯನ್ನು ನಂದಿಸುವ ಗಾಳಿ-ಮಳೆಗಳು ಎಂಬುದು ಅರ್ಥಶಾಸ್ತ್ರದ ಅಂಬೋಣ. ‘ನಾನು ದುಡಿಯುವವ ಅವನು ದುಡಿಸುವವ’ ಎಂಬ ಭಾವಕ್ಕೆ ಆಸ್ಪದವಿಲ್ಲದಂತಹ ಪರಸ್ಪರ ಪ್ರೀತಿ ನಂಬಿಕೆಗಳ ಸಹಯೋಗ ಸಂಸ್ಥೆಗೆ ಭದ್ರ ಬುನಾದಿ. ಯಾವುದೇ ಉದಾತ್ತಧ್ಯೇಯವುಳ್ಳ ಸಂಸ್ಥೆಗೆ ಆರಂಭದ ಕಾಲ ಅಗ್ನಿಪರೀಕ್ಷೆಯಂತಿರುತ್ತದೆ. ಆರಂಭದಲ್ಲಿಯೇ ಆರ್ಥಿಕಬಲವಾಗಲೀ, ಸಮಾಜದ ತುಂಬುಸಹಕಾರವಾಗಲೀ ದೊರೆಯಲಾರದು. ಪರಮಪೂಜ್ಯ ಪೇಜಾವರಶ್ರೀಗಳು ಜೋಳಿಗೆ ಹಿಡಿದು ಮನೆ ಮನೆಗೆ ನಡೆದು ವಿದ್ಯಾಪೀಠದಂತಹ ಸಂಸ್ಥೆಯ ಸದ್ಯೋಭವಿಷ್ಯದ ಆವಶ್ಯಕತೆಗಳನ್ನು ಜನರಿಗೆ ತಿಳಿ ಹೇಳಿ ಸಂಸ್ಥೆ ಕಟ್ಟಿದರು. ಇಂದು ಗಟ್ಟಿನೆಲೆ ಕಂಡಿರುವ ಸಂಸ್ಥೆಗಳ ಮೂಲ ಹೋಗಿ ನೋಡಿದಾಗ ಎಲ್ಲೆಲ್ಲೂ ಕಾಣುವ ಸ್ಥಿತಿಯದು. ಸೌಧವೇರುವವನು ಕೆಳಗಿನ ಮೆಟ್ಟಿಲುಗಳನ್ನು ಕ್ರಮವಾಗಿ ದಾಟುತ್ತಾ ಮೇಲೇರಿ ತುತ್ತ ತುದಿಯನ್ನು ಮುಟ್ಟುವಂತೆ ಉದಾತ್ತಗುರಿಯ ಸಾಧನೆಗಾಗಿ ಸೈರಣಿ ಅನಿವಾರ್ಯ. ನಾವು ನೆಟ್ಟ ಸಸಿಗೆ ಗೊಬ್ಬರ ಹಾಕಬಹುದು. ಕಾಲಕಾಲಕ್ಕೆ ನೀರನ್ನೂ ಹಾಕಬಹುದು. ಬೇಲಿಕಟ್ಟಿ ಗಿಡವನ್ನು ಸಂರಕ್ಷಿಸಬಹುದು. ಆದರೆ ಬೇಗನೇ ಫಲಕೊಡುವಂತೆ ಸಸಿಯನ್ನು ಅವಸರಪಡಿಸಲಾಗದು. ಬೇಗನೇ ಫಲಕೊಡುವ ಸಸಿಯನ್ನೇ ನೆಟ್ಟಿಯದ್ದರೂ ಅದು ಗೊತ್ತಾದ ಸಮಯದಲ್ಲಿಯೇ ಫಲವನ್ನು ಕೊಟ್ಟೀತು. ನಮ್ಮ ಪಾಲಿನ ಕೆಲಸ ಮಾಡಿ ಫಲಬರುವವರೆಗೆ ಶಾಂತಚಿತ್ತದಿಂದ ಕಾಯುವ ತಾಳುವಿಕೆ ನಮ್ಮಲ್ಲಿರಬೇಕು. “ಒಳ್ಳೆಯ ಸಂಕಲ್ಪದಿಂದ ಸತ್ಕಾರ್ಯವನ್ನು ಮಾಡಹೊರಟವನಿಗೆ ಎಂದಿಗೂ ದುರ್ಗತಿ-ದುಮ್ಮಾನಗಳಿಲ್ಲ” ಎಂಬ ಗೀತಾವಾಣಿಯಲ್ಲಿ ದೃಢನಂಬಿಕೆಯಿರಬೇಕು. ಒಂದೇ ತಿಂಗಳಲ್ಲಿ ಅಥವಾ ಒಂದೇ ವರ್ಷದಲ್ಲಿ ಯಾವುದೇ ವಿದ್ಯಾಸಂಸ್ಥೆ ಜಗನ್ಮಾನ್ಯವಾಗಲಾರದು. ಹಾಗೊಂದು ವೇಳೆ ಇದ್ದಕ್ಕಿದ್ದಂತೆ ಬೆಳೆದು ಬೆಳಗಿದೆಯೆಂದರೆ ಅದು ಪ್ರಾತಃಕಾಲದ ನೆರಳಿನಂತೆ. ಆರಂಭದಲ್ಲಿ ಮಹತ್ತಾಗಿದ್ದು ನಂತರ ಅಲ್ಪತೆಯ ಕಡೆ ಸಾಗತೊಡಗುತ್ತದೆ. ಮಧ್ಯಾಹ್ನಾನಂತರದ ನೆರಳಿನಂತೆ ಅಲ್ಪತೆಯಿಂದ ಕ್ರಮೇಣ ಊರ್ಧ್ವತೆಯನ್ನೂ ಮಹತ್ತೆಯನ್ನೂ ಪಡೆಯುವಿಕೆ ಎಂಬುದೇ ಸಂಸ್ಥೆಯ ನಿಜಧರ್ಮ ಎಂಬುದನ್ನು ಅರಿತಿರಬೇಕು. ಉದಾತ್ತಧ್ಯೇಯದಿಂದ ಇಡುವ ನಿಧಾನದ ಪುಟ್ಟ ಹೆಜ್ಜೆಯೂ ಕಾಲಕ್ಕೆ ಗುರಿಯನ್ನು ಮುಟ್ಟಿಸುತ್ತದೆ. ತಾಳ್ಮೆ ಹಾಗೂ ತ್ಯಾಗ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಅಮೃತ-ಸಂಜೀವಿನಿಗಳು. ಎಲ್ಲರೂ ಒಪ್ಪಲಾರದ(?) ಅಭಿಪ್ರಾಯವೊಂದನ್ನು ಬರೆದುಬಿಡುತ್ತೇನೆ. ಅದೇನೆಂದರೆ ಧರ್ಮ ಅಥವಾ ಆಸ್ತಿಕನಿಷ್ಠೆಯೂ ಒಂದು ಸಂಸ್ಥೆ ಬಲಗೊಳ್ಳುವಲ್ಲಿ ಪ್ರಧಾನಪಾತ್ರವನ್ನು ವಹಿಸುತ್ತದೆ ಎಂಬುದು. ಮಾನವನ ಯಾವುದೇ ಕೆಲಸ ಕಾರ್ಯಗಳಲ್ಲಿ ಎರಡು ಉದ್ದೇಶಗಳು ನಿಯತವಾದವುಗಳು. ಒಂದು ಐಹಿಕ ಮತ್ತೊಂದು ಪಾರತ್ರಿಕ. ಐಹಿಕಫಲ ಕೆಲೆವೆಡೆ ಧನವಾಗುತ್ತದೆ. ಕೆಲೆವೆಡೆ ಕೀರ್ತಿ ಪ್ರತಿಷ್ಠೆಗಳಾಗಿರುತ್ತವೆ. ಪಾರತ್ರಿಕವಾದುದು ದೇವಪ್ರೀತಿ ಪುಣ್ಯಸಂಪಾದನೆ ಆಗಿರಬಹುದಾಗಿದೆ. ಪರವನ್ನು ತಿರಸ್ಕರಿಸಿ ಕೇವಲ ಇಹವನ್ನು ನಂಬಿದ ಮಂದಿ ಸಮಾಜೋಪಕಾರಕ ಸಂಸ್ಥೆಯೊಂದನ್ನು ದೀರ್ಘಕಾಲಿಕವಾಗಿ ನಡೆಸಲಾರರೆಂಬುದು ಇತಿಹಾಸ ಹಾಗು ಅವಲೋಕನಗಳಿಂದ ನಾವು ತಿಳಿವ ಅಂಶ. ಧರ್ಮದ ನೆಲೆಯಲ್ಲಿ ಇದು ಸುಲಭಸಾಧ್ಯ. ಧರ್ಮನಿಷ್ಠಪಾದ್ರಿ ಮೌಲ್ವಿಗಳು ಪ್ರಾಮಾಣಿಕ ಬಾಬಾಗಳು. ಧರ್ಮಗುರುಗಳು ನಡೆಸುವ ಸಂಸ್ಥೆಗಳು ಸುಸೂತ್ರವಾಗಿ ನಡೆಯುವಂತೆ ಇತರ ಸಂಸ್ಥೆಗಳು ನಡೆಯುತ್ತಿಲ್ಲ. ಇದರ ಅರ್ಥ ಇಷ್ಟೇ. ಒಂದು ಶಕ್ತಿಗೆ ತಲೆಬಾಗಿ ಒಪ್ಪಿ ನಡೆಯುವ ಹಲವು ವ್ಯಕ್ತಿಗಳಿಂದ ಸಂಸ್ಥೆ ಅಭಿವೃದ್ಧಿಪಥದಲ್ಲಿ ನಡೆಯುತ್ತದೆ. ಅಹಂಭಾವದಿಂದ ದುರ್ಧಾಂತರಾದ ವ್ಯಕ್ತಿಗಳಿಂದ ಸಂಸ್ಥೆ ಬಡವಾಗುತ್ತದೆ. ಸ್ವತಃ ದುರ್ದಾಂತನಾದ ಮಾನವ ದೇವ-ಧರ್ಮಗಳಿಗೆ ಬಗ್ಗುವಂತೆ ಇತರರಿಗೆ ಬಗ್ಗಲಾರ. ಆದ್ದರಿಂದಲೇ ಧರ್ಮದ ಧೃಢನೆಲೆಗಟ್ಟಿನಲ್ಲಿ, ಧರ್ಮದ ಗಾಢಸೆಳೆತ ಹಾಗೂ ಸಂಯೋಜಕ ಶಕ್ತಿಯ ಬಲದಿಂದ ಸಮಾಜೋಪಕಾರಕ ಸಂಸ್ಥೆಯನ್ನು ಬಲಗೊಳಿಸಬಹುದು. ಇಲ್ಲಿ ‘ಧರ್ಮ’ ಎಂಬ ಪದವನ್ನು ವಿಶಾಲಾರ್ಥದಲ್ಲಿ ಬಳಸಲಾಗಿದೆ. ದೇವನು ಸರ್ವವ್ಯಾಪಿ. ನಮ್ಮೆಲ್ಲರ ಕೆಲಸಗಳನ್ನು ಒಳಹೊರಗಿದ್ದು ನಿರೀಕ್ಷಿಸುವ ಸರ್ವಸಾಕ್ಷಿ ಆತ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಅವನ ಪೂಜೆ. ಆ ದೇವನ ಪೂಜೆಗೆ ಪ್ರತೀಕಗಳಾಗಿ ಸೃಷ್ಟರಾದವರು ಈ ನಾನಾ ಜನರು. ಪ್ರತಿಯೊಬ್ಬ ಜೀವನಲ್ಲೂ ದೇವನು ಅಂತರ್ಯಾಮಿ. ಜೀವನನ್ನು ತುಚ್ಛೀಕರಿಸುವುದೆಂದರೆ ದೇವನನ್ನು ತುಚ್ಚೀಕರಿಸದಂತೆ. ನಮ್ಮಿಂದ ಸಾಧ್ಯವಾದ ಉಪಕಾರವನ್ನು ಮಾಡುವುದರಿಂದ ದೇವನು ಪ್ರೀತನಾಗುತ್ತಾನೆ. ‘ತಸ್ಯ ಪ್ರಾಣ್ಯುಪಕಾರೇಣ ಪ್ರೀತೋ ಭವತಿ ಮಾಧವಃ’. ಇಂತಹ ವಿಶ್ವಧರ್ಮದ್ದಲ್ಲಿ ಅಚಲನಂಬಿಕೆಗಾಗಿ ತಲೆತಲಾಂತರದಿಂದ ನಂಬಿಕೊಂಡು ಬಂದ ಸಂಪ್ರದಾಯಪ್ರವರ್ತಕಗುರುಗಳಲ್ಲಿ ಅತಿಶಯಿತ ಗೌರವ-ಶ್ರದ್ಧೆಗಳೂ ಬೇಕು. ಈ ರೀತಿಯ ಶ್ರದ್ಧೆ ಅತ್ಯಪೇಕ್ಷಿತ. ಆದರೆ ಅದು ಇನ್ನೊಂದು ಪಂಥೀಯರ ದ್ವೇಷ ಅಥವಾ ತುಚ್ಛೀಕರಣಕ್ಕೆ ಎಂದೂ ಕಾರಣವಾಗಕೂಡದು. ಧಾರ್ಮಿಕ ತಳಹದಿಯ ತೆರೆದ ಮನಸ್ಸಿನ ಜನಸಮುದಾಯ ಸಂಸ್ಥೆಯ ಆಸ್ತಿ. Source:  ಊರ್ಧ್ವಮೂಲ Purnapramati Souvenir 2012

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.