ಆನಂದಿನೀ – ಅಕ್ಟೋಬರ್ 2020-21

       

 

 

ಆನಂದಿನೀ

ಶಾರ್ವರಿ ಸಂವತ್ಸರ, ವರ್ಷಾ ಋತು, ಆಶ್ವಯುಜ ಮಾಸ – ಅಕ್ಟೋಬರ್ ೨೦೨೦

ಸಂಪಾದಕೀಯ

ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ)

 

ಕಾಲಾಯ ತಸ್ಮೈ ನಮಃ

 

ಎಲ್ಲವನ್ನೂ ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಮುಗುಳು ನಗುತ್ತಾ ಮುಂದೆ ಸಾಗುವುದು ಕಾಲದ ಗುಣ. ಕರೋನ ಎಂಬ ಬೇಡದ ಅಧ್ಯಾಯನವನ್ನು ಜೀರ್ಣಿಸಿಕೊಳ್ಳುತ್ತಾ ಈ ಶೈಕ್ಷಣಿಕ ವರ್ಷದ ಅರ್ಧ ಭಾಗ ಮುಗಿದೇ ಹೋಯಿತು. ಮಕ್ಕಳು – ಅಧ್ಯಾಪಕರು Online ನಲ್ಲಿ ಸಂವಾದ ನಡೆಸುತ್ತಾ, ಮನೆಯಲ್ಲಿ ಪೋಷಕರ ಮಾರ್ಗದರ್ಶನ ಪಡೆದು ಈ ಬಾರಿಯ ಸಿಂಹಾವಲೋಕನ(ಅರ್ಧವಾರ್ಷಿಕ ಪರೀಕ್ಷೆ)ವನ್ನು ಬರೆದು ಇದೀಗ ದಸರಾ ರಜೆಯನ್ನು ಸವಿಯುತ್ತಿದ್ದಾರೆ. ಗಾಂಧಿ ತಾತನ ಜನ್ಮದಿನವನ್ನು ಆಚರಿಸಲಾಯಿತು. ಅರ್ಧವರ್ಷದ ಚಟುವಟಿಕೆಗಳನ್ನು ಮೆಲುಕು ಹಾಕಿದರೆ ಯಾವುದೇ ಕೊರತೆ ಇಲ್ಲದೆ ಮಕ್ಕಳ ಕಲಿಕೆ ಸಾಗಿದೆ ಎಂಬುದು ಅರಿವಾಯಿತು. ಪೋಷಕರ ಭಾಗವಹಿಸುವಿಕೆ, ಅಧ್ಯಾಪಕರ ಉತ್ಸಾಹಕ್ಕೆ ಮಕ್ಕಳೇ ಕಾರಣ.  ಒಟ್ಟಿನಲ್ಲಿ ಯಜ್ಞ ನಿರ್ವಿಜ್ಞವಾಗಿ ನಡೆದಿದೆ. ಇನ್ನೇನು ನವೆಂಬರ್ ನಲ್ಲಿ ಕನ್ನಡ ಹಬ್ಬ, English fest, Math fest ಹೀಗೆ ಸಾಲು ಸಾಲು ಹಬ್ಬಗಳು ಅವರನ್ನು ಎದುರು ನೋಡುತ್ತಿವೆ. ಬಂದದ್ದೆಲ್ಲ ಬರಲಿ ಭಗವಂತನ ದಯೆ ಒಂದಿರಲಿ ಎಂದು ಮುಂದಡಿ ಇಡುತ್ತಾ, ಜೀವನ ಯಾತ್ರೆಯನ್ನು ಖುಷಿಯಿಂದಲೇ ಮುನ್ನಡೆಸುವುದು ಒಂದು ದೊಡ್ಡ ತಪಸ್ಸು. ಇದು ಭಾರತೀಯರಲ್ಲಿ ಎದ್ದು ಕಾಣುವ ಗುಣವೇ. ಇದೇ ರೀತಿಯಲ್ಲಿ ಎಲ್ಲಕ್ಕೂ ಸಾಕ್ಷಿಯಾಗಿ ಇತಿಹಾಸವನ್ನು ದಾಖಲಿಸುತ್ತಾ ಆನಂದಿನಿ ಮಾಸ ಪತ್ರಿಕೆಯು ಪೂರ್ಣಪ್ರಮತಿಯ ತಿಂಗಳ ಕಥೆಯನ್ನು ಹೊತ್ತುಕೊಂಡು ನಿಮ್ಮ ಮನದ ಬಾಗಿಲಿಗೆ ಬಂದಿದೆ.

 

ಈ ಸಂಚಿಕೆಯಲ್ಲಿ ನೀಲಾಳ ತಣಿಯದ ಕುತೂಹಲ ತನ್ನ ಕೊನೆಯ ಘಟ್ಟದ ಕಥೆಯನ್ನು ಹೇಳುವುದು. ಮುಂದಿನ ಸಂಚಿಕೆಗಳಲ್ಲಿ ಇದೇ ರೀತಿಯ ವಿಜ್ಞಾನ ಜಗತ್ತಿನ ಕುತೂಹಲದ ಇನ್ನೂ ಬೇರೆಯ ಕಥೆಯನ್ನು ಹೊತ್ತು ಬರಲಿದೆ. ಗೊಂಬೆ ಹಬ್ಬದ ಸಂಭ್ರಮದಲ್ಲಿ ಮಕ್ಕಳಿಂದ ಆದ ನಾಟಕ, M1 ಮಗುವಿನ ಸಂಸ್ಕೃತ ಕಥೆ – ಖಂಡಿತ ಮಕ್ಕಳಿಗೆ ಮೆಚ್ಚುಗೆಯಾಗುವುದು. ಲೀಲಾವತಿ ತರಬೇತಿಯನ್ನು ನಮ್ಮ ಅಧ್ಯಾಪಕರೊಬ್ಬರು ತೆಗೆದುಕೊಂಡಿದ್ದರು, ಅವರು ತಮ್ಮ ಕಲಿಕೆಯನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಭಾಸರೂಪಕದ ಎರಡನೆಯ ಭಾಗ, ಇವೆಲ್ಲ ನಿಮ್ಮ ಓದಿನ ರುಚಿ ಹೆಚ್ಚಿಸಲಿವೆ. ಓದಿ ಆನಂದಿಸಿ, ಮತ್ತಷ್ಟು ಸ್ವಾರಸ್ಯಕರ ಘಟನೆಗಳನ್ನು ಹೊತ್ತು ನಿಮ್ಮ ಮುಂದೆ ಆನಂದಿನೀ ಮತ್ತೆ ಬರುವುದು.

.

.

ತಿಂಗಳ ತಿಳಿಗಾಳು

(ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ)

ಆನಂದಕಂದ​ –  ವಿದ್ಯಾ ಗುತ್ತಲ್ (ಪ್ರತಿನಿಧಿ, ಪೂರ್ವಪ್ರಾಥಮಿಕ ವಿಭಾಗ)

 

ಮೊದಲಿಗೆ ನಮ್ಮ ಪುಟಾಣಿಗಳಿಗೆ ಹಾಗೂ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಅರ್ಧ ವರ್ಷದ ಆನ್ಲೈನ್ ತರಗತಿಯು ಇಲ್ಲಿಗೆ ಮುಕ್ತಾಯಗೊಂಡಿದೆ. ಭವಿಷ್ಯದಲ್ಲಿ ಉತ್ತಮ ದಿನಗಳಿಗಾಗಿ ಆಶಾಭಾವನೆಯನ್ನು ಹೊಂದಿದಂಥ ವರಾಗಿ ನಮ್ಮ ಮುಂದಿನ ಹೆಜ್ಜೆಯನ್ನು ಇರಿಸೋಣ.

 

ಅಕ್ಟೋಬರ್ 2ನೇ ತಾರೀಕು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಒಂದು ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು. ಭಾರತ ದೇಶಕ್ಕಾಗಿ ಹೋರಾಡಿದ ವೀರ ಯೋಧರ ಜೀವನವನ್ನು, ಅವರು ನಂಬಿದ್ದ ಜೀವನದ ಆದರ್ಶಗಳನ್ನು ಮಕ್ಕಳಿಗೆ ತಿಳಿ ಹೇಳಲಾಯಿತು. ನಮ್ಮ ಪೋಷಕರಾದ ಅನು ಕೌಶಿಕ್ ರವರು ಮನೆಯಲ್ಲಿನ ತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ದುರ್ಬಳಕೆಯ ಬಗ್ಗೆ ವಿಶೇಷ ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಬಹಳ ಪೋಷಕರು ಇದನ್ನು ಮೆಚ್ಚಿಕೊಂಡು ತಾವು ಈ ಮಾರ್ಗಸೂಚಿಗಳನ್ನು ಅನುಸರಿಸುವುದಾಗಿ ವಾಗ್ದಾನ ವಿತ್ತರು.

 

ನಂತರ, ಅರ್ಧವಾರ್ಷಿಕ ಅವಲೋಕನವನ್ನು ಮಕ್ಕಳಿಗೆ ನಡೆಸಿಕೊಡಲಾಯಿತು. ಅಕ್ಟೋಬರ್ 3ನೇ ವಾರದಿಂದ ಆರಂಭಿಸಿ ಪೋಷಕರ ಮತ್ತು ಅಧ್ಯಾಪಕರ ಸಭೆಯನ್ನು ನಿಗದಿಪಡಿಸಲಾಗಿತ್ತು. ಮನೆಯಲ್ಲಿ ಮತ್ತು ಆನ್ಲೈನ್ ತರಗತಿಯಲ್ಲಿ, ಮಕ್ಕಳ ಕಲಿಕೆ ಹೇಗೆ  ನಡೆಯುತ್ತಿದೆ? ವಿಶೇಷ ಮಾರ್ಗದರ್ಶನದ ಅಗತ್ಯ ಏನಾದರೂ ಇದೆಯೇ ಎಂಬುದನ್ನು ಪ್ರತಿ ಮಗುವಿನ ಪೋಷಕರ ಜೊತೆಗೆ ಚರ್ಚಿಸಲಾಯಿತು. ಪೋಷಕರು, ತಮ್ಮ ಹಾಗೂ ಮಕ್ಕಳ ಕಲಿಕೆಯ ಬಗ್ಗೆ ಸಂತೋಷವನ್ನು, ಅನಿಸಿಕೆಗಳನ್ನು, ಸಲಹೆಗಳನ್ನು ಮತ್ತು ಅಧ್ಯಾಪಕರು ತೋರುತ್ತಿರುವ  ಕಾಳಜಿಯನ್ನು ಅಭಿನಂದಿಸಿದರು.

 

ಅಕ್ಟೋಬರ್ 17 ನೇ ತಾರೀಖಿನಿಂದ ಶಾಲೆಯ ಆನ್ಲೈನ್ ತರಗತಿಗಳಿಗೆ ದಸರಾ ವಿರಾಮವನ್ನು ನೀಡಲಾಯಿತು. ರಜೆಗೂ ಮೊದಲು – ದಸರಾ ಹಬ್ಬ, ನಮ್ಮ ನಾಡ ಹಬ್ಬ, ಅದರ ವೈಭವಗಳು, ಪ್ರಾಮುಖ್ಯತೆ, ಹಿನ್ನೆಲೆ ಇವುಗಳ ಬಗ್ಗೆ ಮಕ್ಕಳಿಗೆ ಚಿತ್ರಗಳ ಮೂಲಕ, ಕಥೆಗಳ ಮೂಲಕ ಮಾಹಿತಿಯನ್ನು ವಿವರಿಸಲಾಯಿತು. ರಜೆಯಲ್ಲಿ ಮಾಡಬೇಕಾದ ಚಟುವಟಿಕೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲಾಯಿತು. ಇದಲ್ಲದೆ ನವೆಂಬರ್ ನಲ್ಲಿ ಪ್ರಾರಂಭವಾಗುವ ಕನ್ನಡ ಹಬ್ಬದ ಬಗ್ಗೆ ಸುತ್ತೋಲೆಯನ್ನು, ಅದರಲ್ಲಿ ಮಕ್ಕಳು ಮತ್ತು ಪೋಷಕರು ಹೇಗೆ ಭಾಗವಹಿಸಬಹುದು ಎಂಬುದನ್ನು ಗೂಗಲ್ ಕ್ಲಾಸ್ ರೂಮ್ ನಲ್ಲಿ ಹಾಗೂ ಆನ್ಲೈನ್ ತರಗತಿಯಲ್ಲಿ ಪೋಷಕರೊಂದಿಗೆ ವಿನಿಮಯ ಮಾಡಿಕೊಳ್ಳಲಾಯಿತು.

-೦-

.

ವಾಮನ ವಿಭಾಗಮುರಳೀಧರ ಕೆ (ಪ್ರತಿನಿಧಿ, ಪ್ರಾಥಮಿಕ ವಿಭಾಗ)

“ಮಾಧ್ವೀರ್ಗಾವಃ ಭವಂತು”

ಆತ್ಮೀಯ ಪೂರ್ಣಪ್ರಮತಿ ಬಂಧುಗಳಿಗೆ ನಮಸ್ಕಾರಗಳು. ಪ್ರತೀ ಬಾರಿಯೂ ನಿಮ್ಮ ಮುಂದೆ ಪ್ರಗತಿ ಪತ್ರವಾಹಕನಾಗಿ ಬರುವ ಈ ಸಮಯ ಅತೀವ ಸಂತಸಮಯ. ಈ ಬಾರಿಯೂ ಅನೇಕ ವಿಷಯಗಳೊಂದಿಗೆ ನಿಮ್ಮಮುಂದೆ ಹಾಜರಿರುವೆ.

 

ಈ ಬಾರಿ ಸಿಂಹಾವಲೋಕ, ಪೋಷಕರೊಂದಿಗೆ ಮಕ್ಕಳ ಪ್ರಗತಿ ಸಂವಾದ ಕಾರ್ಯಕ್ರಮವೇ ಅಧಿಕಮಾಸದ ವಿಶೇಷ.

ಸಿಂಹಾವಲೋಕನ ಈ ಶಬ್ದ ಕೆಲವರಿಗೆ ನೂತನ , ಪೂರ್ಣಪ್ರಮತೀಯರ ಚಿಂತನೆಗಳು ನಿತ್ಯ ನೂತನ. ಸಿಂಹಾವಲೋಕನ ಎಂದರೆ ಶಾಬ್ದಿಕವಾಗಿ ಅರ್ಥ ಪರೀಕ್ಷೆ , ಎಂದಾದರೆ ಆದರ ಆಂತರ್ಯ ಮಕ್ಕಳು ಯಾವ ಯಾವ ವಿಷಯಗಳನ್ನು ಎಷ್ಟು ಆಳವಾಗಿ ಅರ್ಥ ಮಾಡಿಕೊಂಡಿದ್ದಾರೆ, ಅಥವಾ ಅವರಿಗೆ ಯಾವ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಬೇಕು ಇಷ್ಟು ಅಧ್ಯಾಪಕರಿಗೆ ಅರ್ಥವಾಗಬೇಕು ಆ ದೃಷ್ಟಿಯಿಂದ  ಸಿಂಹಾವಲೋಕನ ನಡೆಯುತ್ತದೆ ಹೊರತು ಒಂದು ಪ್ರಶ್ನೆಗೆ ಒಂದಂಕ ಎನ್ನುವ ದೃಷ್ಟಿಯಿಂದ ಅಲ್ಲ, ಮಕ್ಕಳಿಗೆ ಈ ಪ್ರಾಥಮಿಕ ಹಂತದಲ್ಲಿ  ಅರ್ಥವಾದರೆ ಅದು ಅಂಕಾನುಕೂಲ ಹಾದಿಯಾಗುತ್ತದೆ. ಈ ಸಿಂಹಾವಲೋಕನವನ್ನು ವಾಕ್, ಹಾಗೂ, ಲೇಖಾ ಪರೀಕ್ಷೆ ಮಾಡುವ ಮೂಲಕ ಮಾಡಲಾಯಿತು ಈ ಸಿಂಹಾವಲೋಕನವು ಮಕ್ಕಳಿಗೆ ಸಿಂಹಸ್ವಪ್ನವಾಗಿರಲಿಲ್ಲ ಎನ್ನುವುದು ಇದರ ವಿಶೇಷತೆ.

 

ಪೋಷಕರ ಜೊತೆ ಮಕ್ಕಳ ಪ್ರಗತಿಯ ಬಗ್ಗೆ ಹಂಚಿಕೊಳ್ಳಲಾಯಿತು. ಪ್ರತೀ ಪೋಷಕರೂ ಈ online ಸಂದರ್ಭದಲ್ಲಿ ಮಕ್ಕಳಿಗೆ ತಾಳ್ಮೆಯಿಂದ ಪಾಠ ಮಾಡುತ್ತಿರುವ ಅಧ್ಯಾಪಕರನ್ನು ತುಂಬು ಹೃದಯದ ಅಭಿಮಾನದಿಂದ ಮಾತನಾಡಿಸಿದರು,ಹಾಗೂ ಪ್ರಗತಿಯನ್ನು ಹಂಚಿಕೊಂಡರು. ಹೀಗೆ ಅಧಿಕಮಾಸ ಸಾಗಿತು ಮುಂದಿನಬಾರಿ ಕನ್ನಡದ ಕಂಪಿನೊಡನೆ ಬರುವೆ ಧನ್ಯವಾದಗಳು.

 

 “ಪಾಯಾನ್ನೋ ವೈರಿಗರ್ಭಾ ಗ್ರಸನಗುರುಭರಾ ಸಿದ್ಧಿದಾ ಪಂಚದುರ್ಗಾ”

ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

-೦-

.

 

Arjuna  Geetha (Pratinidhi of Upper elementary)

October, as usual, was a busy month for teachers, children, and parents alike. It was a month dedicated to revision and Simhavalokana. The first week of October was kept reserved for revision of all learned topics while the following two weeks were used for assessing the understanding of each child in Arjuna. Children were assessed from three different angles. One hour-long question paper was set in each of the six subjects and children were asked to answer them in the presence of a teacher. Parents were spoken about their role in this online assessment. As such we got complete co-operation from them and this new mode of Simhavalokana was conducted very smoothly. 

 

In addition to the written question paper, every child took up oral assessment too in pre-defined individual time slots.  In a written exam the student’s ability to write– to turn thoughts into a linear string of words is tested. In some cases, it is valid to test this ability as we want students to learn how to write, but in other cases, this gets in the way of finding out what they have learned about the subject. In such cases, an oral assessment provides a way of understanding students’ knowledge rather than their writing skills. 

 

In order to understand their presentation skills, a new kind of assessment was tried this time in Arjuna. Each child was told to pick a topic from each of the six subjects and present it to his class. Rubrics for the topic presentation were also shared so that children have an idea on what basis they are being assessed… Of the three types of assessment, the last one was a big hit. Children of all three ages performed exceptionally well. They need some fine-tuning to get better.

The term came to an end with a one-on-one conversation with parents. Parents seemed to be satisfied with the way this first term went on. Concerns shared have been made a note with a view to take care of them in the coming term. The whole of Arjuna went on to take a much-awaited break, on a positive note. 

-೦-

 

ಭೀಮಸೆನಾ ವೈಶಾಲಿ ಕಟ್ಟಿ (ಅಧ್ಯಾಪಕರು, ಪ್ರೌಢಶಾಲಾ ವಿಭಾಗ)

 

“There are two educations. One should teach us how to make a living and other how to live” – John Adams

 

That part of education which teaches us how to live is co-curricular activity. Many co-curricular activities were conducted for the children this month. We started this month September/October,that is the month of  Bhadrapada/Adhika maasa with the celebration of Vamana jayanti on September 11th which children usually eagerly await. All the teachers of the HIgh School section participated in the celebration and presented a variety of programmes which children thoroughly enjoyed.

 

A new faculty Chaaya akka has joined us to train the children who are not able to grasp mathematics concepts in the class. A group of 6 to 7 students from classes 7 and 8 have been identified and are attending her classes. She trains them in basic mathematics concepts and takes classes for four days a week between 3 p.m and 3:40 p.m. 

 

Another interesting activity ‘Hindi Fest’ was held from 21st September to 24th September. There were different activities pertaining to listening, reading, writing and speaking . I was amazed at the enthusiasm with which children participated in these activities in the language which was introduced to them just a couple of years ago.

 

Gandhi jayanti was celebrated in a simple way in our school. Children were given topics like Simple living, Make in India, Independence and freedom and many other such topics in advance.They came prepared with the topics and discussions were held in their respective classes under the supervision of the class teachers.

 

Children of classes 7 and 8 are conducting Saptahika Sabha every Saturday. They themselves organize the whole event, starting from inviting the guest, compering to thanksgiving. They select a few topics in any of the four languages that is Kannada, Samskrita, Hindi and English and give presentations on the selected topics. They also narrate stories from Ramayana, Mahabharata or any other moral stories and sometimes the stories they have written on their own. They also recite Samskrita slokas. The whole programme is organized and conducted by the children themselves.

 

One more amusing activity ,The English Fest’ was conducted  for the children from October 5th to 7th. Children exhibited their skills in reading, writing and speaking English. A number of activities like speech, Declamation, Recitation and Group discussions were conducted. The students of class 10 conducted a quiz for their junior counterparts that is the children of classes 7,8 and 9. The quiz program was very well organized and a variety of questions were asked on different topics. 

 

Now we are at the far end of the First term and the children are geared up to write their first Summative Assessment exams. They are well prepared and their exams will be conducted from 8th October to 16th October. After this the children will break up for a short  Dasara vacation and come back refreshed for the second term.

 

-೦-

 

Thrivikrama ನಾಗಶ್ರೀ (ಪ್ರತಿನಿಧಿ, ಪದವಿಪೂರ್ವ ವಿಭಾಗ)

 

October has been quite a challenging month for both students and teachers. Students were introduced to various aspects and learnings. As teachers, we really had to focus on guiding and supporting students to handle a couple of things. Somewhere students started to experience a kind of displeasure towards their schedule. It was very essential for us to address that as either willingness or resentment, which is going to allow an individual to explore his or her best. We really had to have a lot of talking with students to address various aspects, which were focused to make children get present to their abilities, desires, commitment and focus. We still have a long way to cover in this direction. It’s a festive atmosphere everywhere, children desired to have their vacation. But due to KVPY and other commitments we have, children are attending classes. It took a lot of effort from students’ side to let go of their desire to have a much-needed vacation. Really, appreciate their willingness to join their hands in achieving what is planned. 

 

Our PU team along with high school team are working on starting a Science foundation programme for current tenth grade students under the guidance of Achyutha Anna. We are intending to start the classes from November 1st. There are lists of activities and experiments which have been planned. This will enable students to appreciate the beauty of the subject and enjoy learning. This foundation course is aimed at enabling students to read reference materials, sharpen their reasoning abilities which in turn will play a huge role in the way they can put themselves into PU and KVPY programmes in future. On the other hand, our Sanskrit teachers are giving their best to children through Shastraparichya, Sahitya and Kavya programmes. We have Sangeetha Akka with us who started classes for Tarka Shastra this month. We believe our students can give much more. We as a team are constantly working to bring an enjoyable learning platform.  

 

-೦-

 

ಆನಂದವನ ಗುರುಕುಲಯದುನಂದನ (ಪ್ರತಿನಿಧಿ ಮತ್ತು ಅಧ್ಯಾಪಕ, ಆನಂದವನ ಗುರುಕುಲ)

 

ಆನಂದವನಕ್ಕೆ ಬಂದು ಮಾಸಗಳು ಮಾಸಿದವು, ಆದರೆ ನಮ್ಮ ಮಾನಸವು  ಸುಮತಿಯಿಂದ ಮಿಲಿತವಾಗಿ ಮನೋಹರವಾಗಿ ಕುತೂಹಲದಿಂದ ಕಾರ್ಯಪ್ರವೃತ್ತವಾಗುತ್ತಿದೆ. ಪ್ರತಿ ಮಾಸದಲ್ಲೂ ನಿಮ್ಮೊಂದಿಗೆ ನಮ್ಮ ಅನುಭವಗಳನ್ನು ಹಂಚಿಕೊಳ್ಳಲು ಬಹಳ ಸಂತೋಷದಿಂದ ಉತ್ಸಾಹದಿಂದ ಪ್ರವೃತ್ತವಾಗುತ್ತೇವೆ. ಬನ್ನಿ ಈ ಮಾಸದ  ವರದಿಯನ್ನು ತಿಳಿಯೋಣ.

 

ಈ ಮಾಸದಲ್ಲಿ ನಾವು ಒಬ್ಬ ಉತ್ತಮ ವ್ಯಕ್ತಿಯನ್ನು ಬರ ಮಾಡಿಕೊಂಡೆವು. ಅವರಾರೆಂದಿರಾ!! ಅವರು ವಿದ್ವಾನ್ ಗುರುರಾಜ ಕುಲಕರ್ಣಿ ಆಚಾರ್ಯರು. ವ್ಯಾಕರಣಶಾಸ್ತ್ರದಲ್ಲಿ ಅಸಾಮಾನ್ಯ ಪಂಡಿತರಾದ ಪೂಜ್ಯ ಆಚಾರ್ಯರು ಅಧಿಕಮಾಸದ ಉತ್ತಮ  ದಿನದಂದು ಆಗಮಿಸಿ ಗೌರವಾದರಗಳನ್ನು ಸ್ವೀಕರಿಸಿ ನಮ್ಮನ್ನು ಅನುಗ್ರಹಿಸಿದರು. ಅಷ್ಟೇ ಅಲ್ಲದೆ ಮಕ್ಕಳ ವ್ಯಾಕರಣ ವಿಷಯಾನುಕ್ರಮಣಿಕೆಯನ್ನು ಐದನೇ ತರಗತಿಯ ಮಕ್ಕಳಿಂದ ಆರಂಭಿಸಿ ಪಿಯುಸಿ ಮಕ್ಕಳ ಪರ್ಯಂತ ನಿರ್ಧರಿಸಿದರು. ಪಠ್ಯವಿಷಯಗಳಿಗೆ ವಿಶೇಷ  ಮಾರ್ಗದರ್ಶನ ಮಾಡಿದರು. ಮತ್ತೊಂದು ಮುಖ್ಯವಾದ ವಿಷಯವೆಂದರೆ ಇದೇ ಮಾಸದಲ್ಲಿ ನವರಾತ್ರಿಯ ವಿಶೇಷ ಆಚರಣೆಯೂ ಬರುವುದರಿಂದ ಮಕ್ಕಳೆಲ್ಲರೂ ತಮ್ಮ ತಮ್ಮ ಹಬ್ಬದ ಆಚರಣೆಯನ್ನು  ಪೋಷಕರೊಂದಿಗೆ ಆಚರಿಸ ಬಯಸುತ್ತಾರೆ. ಅದಕ್ಕನುಸಾರವಾಗಿ ಗುರುಕುಲದ ವಿರಾಮವನ್ನು ನೀಡಬೇಕಾಗುತ್ತದೆ. ಹಾಗಾಗಿ ಅವರ ಜೂನ್ ಮಾಸದಿಂದ ಆರಂಭಿಸಿ ಅಕ್ಟೋಬರ್ ಮಾಸದ ಪರ್ಯಂತ ಯಾವ ಯಾವ ವಿಷಯಗಳನ್ನು ಮಕ್ಕಳು ಅಭ್ಯಸಿಸಿದ್ದರೋ  ಆ ಆ ವಿಷಯಗಳನ್ನು ಅಧ್ಯಪಕರು ಪರೀಕ್ಷೆ ನಡೆಸಿ ಮಕ್ಕಳ ಪ್ರಕೃತ ವಿದ್ಯೆಯ ಸ್ಥರವನ್ನು ತಿಳಿದರು. ಮಕ್ಕಳಾದರೋ ಅತ್ಯಂತ ಉತ್ಸಾಹದಿಂದ ತಮ್ಮ ಪರೀಕ್ಷೆಗಳಲ್ಲಿ ಭಾಗವಹಿಸಿದರು. ಈ ವರ್ಷದ ಆರಂಭದಿಂದ ಇಲ್ಲಿಯ ತನಕ  ಮಕ್ಕಳಲ್ಲಿ ಆದ ವ್ಯತ್ಯಾಸಗಳನ್ನು ಕಂಡು ತಂದೆತಾಯಿಗಳು ತಿಳಿದು ಬಹಳ ಸಂತೋಷಪಟ್ಟರು. ಮಕ್ಕಳು ತಮ್ಮ ಹಳೆಯ ನೆನಪುಗಳನ್ನು ನೆನೆಯುತ್ತಾ ಸಂತೋಷಪಟ್ಟರು. ನವರಾತ್ರಿಯ ವಿರಾಮ ಆರಾಮ ಮಾಡಲಲ್ಲ,  ತಿಳಿದ ಮಕ್ಕಳು ಅನೇಕ ವಿಷಯಗಳನ್ನು ಯೋಜನಾಬದ್ಧವಾಗಿ ಕಲಿಯಲು ಆಲೋಚನೆಗಳನ್ನು ಮಾಡಿಕೊಂಡರು. ಹತ್ತನೇ ತರಗತಿಯ ಪಿ.ಯು.ಸಿಯ ಮಕ್ಕಳು ನವರಾತ್ರಿಯ ಕೆಲವು ದಿನಗಳನ್ನು ಅಧ್ಯಯನಕ್ಕಾಗಿ ಮೀಸಲಿಟ್ಟು ಸಂತೋಷದಿಂದ ಅಧ್ಯಯನ ನಡೆಸಿದರು. ಸದಾ ಮಕ್ಕಳ ಚಕಮಕ ಶಬ್ದದಿಂದ ಆವರಿಸುತ್ತಿದ್ದ ಕೋಣೆಗಳಲ್ಲಿ ಮೌನ ತುಂಬಿ, ದೊಡ್ಡ ಮಕ್ಕಳ ಅಧ್ಯಯನಕ್ಕೆ ಸಹಕಾರ ನೀಡಿದವು.

.

ಅಧ್ಯಯನ

(ಅಧ್ಯಾಪಕರ / ಪೋಷಕರ ಸ್ವಾಧ್ಯಾಯ ಹಂಚಿಕೆ ವಿಭಾಗ)

ಮೂರ್ಖ ಕಾಗೆ -ಸಂಧ್ಯಾ (ಅಧ್ಯಾಪಕರು, ಪ್ರಾಥಮಿಕ ವಿಭಾಗ)

ಆನಂದಿನಿಯ ಪ್ರಿಯ ಓದುಗರೇ,

ಗೊಂಬೆಗಳ ಹಬ್ಬ, ನಾಡಹಬ್ಬ ಬಂತೆಂದರೆ ಹಿರಿಯರಲ್ಲಿ, ಕಿರಿಯರಲ್ಲಿ ಎಲ್ಲಿಲ್ಲದ ಸಂಭ್ರಮ. ಈ ಸಂಭ್ರಮಕ್ಕೆ ಮೆರಗು ನೀಡಲು ನಮ್ಮ ಮನೆಯಲ್ಲಿ ಮಕ್ಕಳು ಒಂದು ನೀತಿಕಥೆಯನ್ನು ನಾಟಕದ ರೂಪದಲ್ಲಿ ಬರೆದು ಗೊಂಬೆಯಾಟದ ಮೂಲಕ ಪ್ರದರ್ಶಿಸಿದರು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವೆ.

 

 

 

 

 

 

 

 

 

 

 

 

 

 

 

 

-0-

 

ನಮಸ್ಕಾರ…..ನಾವೀಗ ಒಂದು ಕಾಗೆ ಹಾಗೂ ಗುಬ್ಬಚ್ಚಿಯ ಕಥೆಯನ್ನು ಗೊಂಬೆಯಾಟದ ಮೂಲಕ ನಿಮಗೆಲ್ಲ ತೋರಿಸುತ್ತೇವೆ.

 

ಒಂದು ದಟ್ಟವಾದ ಕಾಡಿತ್ತು. ಆ ಕಾಡಿನಲ್ಲಿ ಒಂದು ಮೂರ್ಖ ಕಾಗೆ ಹಾಗೂ ಜಾಣ ಗುಬ್ಬಚ್ಚಿ ವಾಸವಾಗಿದ್ದವು. ಮುಂದೇನಾಯಿತು ನೋಡೋಣ?

 

ಕಾಗೆ:           ಬೆಳಗ್ಗಿನಿಂದ ಹಸಿವಾಗಿದೆ, ಏನೂ ಆಹಾರ ಸಿಕ್ಕಿಲ್ಲ…ಅಲ್ಲೊಂದು ಗುಬ್ಬಿ ಬರುತ್ತಿದೆ. ಅದನ್ನೇ

ತಿನ್ನುವೆ.

ಗುಬ್ಬಿ:          ಕಾಗೆ ನನ್ನನ್ನ ಯಾಕೆ ತಿನ್ನುವೆ? ಮನೆಯಲ್ಲಿ ನನಗೊಂದು ಸಣ್ಣ ಮರಿ ಇದೆ. ನಾನು ಸತ್ತರೆ ಅದು

ಅನಾಥವಾಗತ್ತೆ. ನನ್ನನ್ನು ತಿನ್ನಬೇಡ. ಬಿಟ್ಟು ಬಿಡು…

ಕಾಗೆ:          ಹೂ……(ಈ ಮುದಿ ಗುಬ್ಬಚ್ಚಿಗಿಂತ ಮರಿ ಹೆಚ್ಚು ರುಚಿ ಇರುತ್ತದೆ ಎಂದು ಮನಸ್ಸಿನಲ್ಲಿ

ಆಲೋಚಿಸಿ). ಆಗಲಿ….. ಒಂದು ವಾರ ಬಿಟ್ಟು ಆಮೇಲೆ ನಿನ್ನ ಮನೆಗೆ ಬರ್ತೀನಿ, ನಿನ್ನ ಮರಿಯನ್ನು ತಿನ್ನೋಕೆ. ಮಾತು ಕೊಡು..

ಗುಬ್ಬಿ         (ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರುಷ ಆಯಸ್ಸಂತೆ) ಹೂ….ಆಗಲಿ…..

(ಒಂದು ವಾರದಲ್ಲಿ ಕಾಗೆ ನನ್ನ ಮರಿಯನ್ನು ತಿನ್ನುವುದನ್ನು ಮರೆತುಬಿಡಲಿ..)

ಕಾಗೆ           ಬೇಗ ಒಂದು ವಾರ ಆಗಲಿ….ಎಳೆ ಗುಬ್ಬಿ ಮರಿ ರುಚಿಯಾಗಿರುತ್ತದೆ. ಆಹಾ!

(ಒಂದು ವಾರದ ನಂತರ, ಕಾಗೆ ಗುಬ್ಬಿಯ ಮನೆಯ ಹತ್ತಿರ ಬಂತೇ ಬಿಟ್ಟಿತು)

ಕಾಗೆ:             ಗುಬ್ಬಕ್ಕ ನಾನು ಬಂದಿದೀನಿ. ನಿನ್ನ ಮರಿಯನ್ನು ತಿನ್ನೋಕೆ. ಮರೆತಿಲ್ಲ ತಾನೆ? ಹೊರಗೆ ಬಾ….

ಗುಬ್ಬಿ:             ಏನಾದರೂ ಉಪಾಯ ಮಾಡಲೇ ಬೇಕಲ್ಲ…ಕಾಗೆರಾಯ ನನಗೆ ಒಂದು ಸಹಾಯ ಮಾಡಿ, ಆಮೇಲೆ ನನ್ನ ಮರಿಯನ್ನು ತಿನ್ನಿರಿ.

ಕಾಗೆ:              ಏನದು ಹೇಳು ಬೇಗ?

ಗುಬ್ಬಿ:             ನನ್ನ ಗೂಡು ಬಹಳ ಹಳೆಯದಾಗಿದೆ. ಅದನ್ನು ಗಟ್ಟಿಮಾಡಲು ಸ್ವಲ್ಪ ಒಣ ಹುಲ್ಲು ಬೇಕು.

ಕಾಡಿನಿಂದ ತಂದುಕೊಡ್ತೀಯಾ?

ಕಾಗೆ:                ಆಗಲಿ….ಪುರ್….ಇಲ್ಲೇಲ್ಲೂ ಒಣ ಹುಲ್ಲೇ ಕಾಣ್ತಿಲ್ಲವಲ್ಲ. ಏನು ಮಾಡುವುದು? ಇಲ್ಲೇ ನರಿ

ಬರುತ್ತಾ ಇದೆ. ಅದನ್ನೇ ಕೇಳಲೇ? ಅದೇ ಉಪಾಯ ಮಾಡುವುದರಲ್ಲಿ ಜಾಣ.

ನರಿ:                 ಕಾಗೆರಾಯ….ಕಾಗೆರಾಯ….ಏನಾದರೂ ಸಮಸ್ಯೆನಾ?

ಕಾಗೆ:                ಹೌದು, ಇಲ್ಲಿ ಬರೀ ಹಸಿರು ಹುಲ್ಲೇ ಇದೆ. ನನಗೆ ಒಣ ಹುಲ್ಲು ಬೇಕು. ಏನು ಮಾಡಲಿ?

ನರಿ:                  ನಾನು ನಿನಗೆ ಒಂದು ಉಪಾಯ ಹೇಳುವೆ. ನೀನು ಕೂತಿರುವ ಮರಕ್ಕೆ ಬೆಂಕಿ ಹಚ್ಚು. ಅದೆಲ್ಲ ಉರಿದು

ಒಣಗಿರುವ ಹುಲ್ಲು, ಕಡ್ಡಿ ಎಲ್ಲ ಸಿಗುವುದು?

ಕಾಗೆ:                 ಚುಷ್…..ಚುಷ್…. ಹಾಗೇ ಮಾಡ್ತೀನಿ.

(ನರಿ ಹೇಳಿದ ಉಪಾಯ ಕೇಳಿ ಮೂರ್ಖ ಕಾಗೆ ತಾನು ಕೂತಿದ್ದ ಮರಕ್ಕೆ ಬೆಂಕಿ ಹಚ್ಚಿ ತಾನೂ ಮರದ ಜೊತೆ ನಾಶವಾಯಿತು)

ಗುಬ್ಬಿ:             ಇದೇನಿದು? ಬಹಳ ಹೊತ್ತಾಯಿತಲ್ಲಾ, ಕಾಗೆ ಬಂದೇ ಇಲ್ಲ. ನಾನೇ ನೋಡಿ

ಬರ್ತೀನಿ…ಪುರ್….ಅಯ್ಯೋ ಪಾಪ! ಕಾಗೆ ನನ್ನ ಮರಿಯನ್ನು ತಿನ್ನಲು ಬಂದು ತಾನೇ ಅಪಾಯಕ್ಕೆ ಸಿಲುಕಿತು.

(ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಿದರೆ, ತಾವೇ ಕೆಟ್ಟದ್ದನ್ನು ಅನುಭವಿಸಬೇಕಾಗುವುದು)

.

.

भासरूपकाणां प्रस्तुतता -Vikas Savoy (Sanskrit teacher, Upper Elementary)

(द्वितीयो भागः)

अपि च भासप्रयुक्तवाक्यानि सरलानि, अल्पानि भूत्वा, सुखेन अवगन्तुं शक्यानि। गाढसमासादिभिरनवलिप्तानि च । आरूपकं संभाषणं अत्यल्पम्, किन्तु अभिनयम् अधिकम् । एते गुणधर्माः अद्यापि प्रस्तुता इति मे मतिः ।

 

यदि आधुनिकरूपककर्तारः भासमहर्षिम् अनुसरेयुः, तदा निश्चप्रचं प्रसिद्धिं संसाधयिष्यन्ति । अपि च प्राचीनरूपककर्तारः, दशरूपकेषु प्रसिद्धं रूपकान्यतमं नाटकं बाहुल्येन रचयन्ति स्म । प्रायशः प्रसिद्धानि नाटकानि न्यूनातिन्यूनेन पञ्चतः सप्तांकयुक्तानि। एतानि नाटकानि उत्सवेषु प्रदर्शयन्ति स्म। एतादृशं नाटकस्वरूपं भासः न्यक्करोति। कारणमेवमस्ति । एकः प्रेक्षकः सप्तघण्टां यावत् उपविश्य रसास्वादयितुं असमर्थः भवति । देहालस्यं अनुभवति । अतः कवेः उद्देशः न सफलतां प्राप्नोति इति चिन्तितवान् । एवं विचिन्त्य सः एकघंटात्मकं द्विघंटात्मकं रूपकं विरचितवान् । 

 

नाहं दीर्घनाटकग्रथने असमर्थः इति प्रकाशयितुं स्वप्नवासवदत्तादिकं लिलेख । कियदद्भुतमिदं भाससमालोचनम् । चिन्त्यतामिममेव मनसि कृत्वा, पूर्वं दीर्घस्वरूपयुक्तानि यक्षगानानि चलच्चित्राणि क्रिकेट (test,oneday,20/20) इत्यादयः अल्पस्वरूपाणि भेजिरे । इदमेव खलु भासरूपकाणां प्रस्तुतता नाम ।

 

साहित्यशास्त्रेषु काव्यस्वरूपं निरूप्य, तदनन्तरे काव्यप्रयोजनं निगद्यते । अनेके आलंकारिकाः नानाकाव्यजन्यफलानि प्रोचुः । तेषु अन्यतमः मम्मटः । काव्यप्रकाशाख्यग्रन्थस्य कर्ता । एषः काव्यप्रयोजनं कथयामास । एवमस्ति श्लोकः –

काव्यं यशसे अर्थकृते शिवेतरक्षतये सद्यः परनिवृत्तये कान्तासंहिततया उपदेशयुजे” । 

 अत्राचार्यमम्मटः कानिचन प्रयोजनान्यकथयत् । एतानि सर्वाणि प्रयोजनानि भासनाटकेषु उत्कृष्टतया, क्लेशं विना समुपलभ्यन्ते । तानि रूपकाणि विचिन्त्यैव काव्यप्रकाशकारो काव्यप्रयोजनानि अवादीदिति मे अभात् । ते भातु नाम, सर्वाः भातविषयाः न निरूपणीयाः खलु? उक्तविषयस्य का संगतिरस्ति ? इति चेत् साध्यते । भासकव्येषु मम्मटाचार्यैः यानि प्रयोजनानि कथितानि प्रायः तानि सर्वाणि सन्ति एव ।

 

भासरूपकेषु संदृश्यमानप्रयोजनान्येव वक्ष्यमाणरूपेण  प्रस्तुततां भजन्ते।

यतो हि आधुनिकदृश्यकाव्यानीति प्रसिद्धाः धारावाह्यः चलच्चित्राणि च, जनानां मनस्सु  निगूडतया प्रविश्य, तेषु कातरतां समुत्पाद्य, अन्तिमे नीरसतां समुत्पादयन्ति प्रयोजनद्वयमेव आत्मसात् कृतवन्ति ।  एकं यश:, अपरं अर्थकारित्वं च । यशः आधुनिकैः T.R.P. इति परिगण्यते । एतत् आवश्यकं च । यतो हि रूपकमेकं प्रचारबाहुल्यं न लभते तर्हि अनेकैः न संदृश्यते अतः अत्यवश्यम् । किन्तु दृश्यकाव्ये T.R.P. वर्धयितुं हरसाहसं कुर्वन्ति ।परब्रह्मणि विद्यमानं अघटितघटनासामर्थ्यं, क्षुल्लकेषु पात्रेषु साधयन्ति । 

स्वकरस्थं छायाग्रहणकं रुचिमतिक्रम्य भ्रामयन्ति । किंचिदपि तथ्यं नात्रभवति सर्वं शुक्तिरजतायितम् । एते सर्वे प्रयत्नाः यशः प्रापयितुमेव खलु?

 

अपि च दृश्यकाव्यं अर्थकारित्वेन भवितव्यं  इति धिया वैपरीत्येन,दृश्यकाव्यं प्रदर्शयन्ति। दृश्यकाव्ये प्रकटनं न प्रदर्शयन्ति, किन्तु प्रकटनमध्ये (Advertise) दृश्यकाव्यं किञ्चिदेव स्वेच्छया प्रदर्शयन्ति । स्वप्रयोजनं  विहाय, प्रेक्षकाणां प्रयोजनाय न कमप्यंशं भजते आधुनिकदृश्यकाव्येषु ।

 

न तावदेव । शिवेतररक्षणमेव आधुनिकदृश्यकाव्यात् भवति । अस्मदीयाः बालकाः आधुनिक दृश्यकाव्याणि पश्यंपश्यं दुर्व्यसनैकलीनाः संजायन्ते इति खेदेन उच्यते । नाटकपाठनसमये मम गुरवः एवं वदन्ति स्म, “वयं तु dr.राजकुमारस्य चलच्चित्राणि पश्यंपश्यं,  उत्तमाः पुत्राः,  उत्तमपिता, उत्तमसखा,उत्तमअनुजाः,उत्तम अध्यापकश्च समभवाम” इति ।

 न तत्काले तेषामियं भणितिः अस्माकं अपक्वयुवमनसि प्रविष्टा , प्रविष्टापि न बोधजनिका । किन्तु अधुना पौनःपुन्येन अनुरणते ।

 

चिन्तयन्तु,    मुनिर्भासः सर्वत्र स्वरूपकेषु यत्र कुत्रापि अशिवं, उद्वेगकरं, समाजघातकं विषयं न दर्शयामास । वस्तुतः दुष्टप्रकृतिवतां पात्रेषु च, किञ्चित् प्रसङ्गान्तरं कल्पयित्वा दुष्टपात्रेषु अपि सत्त्वं पुपूर । पश्यन्तु , न भासनाटके दुर्योधनो वा कैकेयी वा तिरस्कार्याः । इयमेव खलु शिवेतरक्षतिः । यदि भासेन शिक्षितं शिवेतरक्षतिरूपं प्रयोजनं, आधुनिकाः निर्देशकाः हृदा, मुदा स्वीकुर्वन्ति, तर्हि “दृश्यमाध्यमं, भारतस्य औन्नत्याय भवतीति नास्ति संदेहलेशोऽपि इति उद्धृतहस्तेन प्रोच्यते ।

 

एवं भासरूपकाणि शिवेतरक्षतिरूप्रयोजनम् वहत् मार्गदर्शिरूपेण प्रस्तुतानि भवन्ति ।

 

“अनौचित्यात् ऋते नान्यत् रसभंगस्य कारणम्” इति ध्वन्यालोककर्तुः  उक्तिः क्षेमेंद्रम् अपि आकर्षयत् । इमां युक्तां युक्तिमतीं उक्तिं अवलम्ब्य एव सः औचित्यसिद्धान्तं प्रचारयामास। “रसजीवभूतस्य चमत्कारिणः औचित्यस्य चारुवर्णने विचारं कुरुते” इति तस्योक्ति: । एवं मे भाति, प्रायशः ध्वनिकारः, भासस्य रूपकाणि दृष्ट्वा, तत्र च रसभंगकारणीभूतान् अनौचित्यान् अदृष्ट्वा ‘अनौचित्यात् ऋते नान्यत् रसभंगस्य कारणम्.‘ इति उज्जगाद । यदि  छात्राः संशोधनार्थिनः “भासरूपकेषु औचित्यं” इति विषये शोधप्रबन्धं कुर्वन्ति,  सुलभेन पारं स्पृशन्ति । यतो हि अनौचित्यं भासरूपकेषु न वर्तन्त एव । रूपकं रूपकं औचित्यमयम् । यदि उदाहरणानि पश्यामः तदा दृढो भवति अस्मदीयो विचारः ।

 

“प्रतिमा नाटके [सर्वैः पठितमेव इत्यतः हेतोः इदमेव रूपकं स्वीकृतं] भरतस्य कृते दशरथमहाराजस्य मरणं निवेदनप्रसङ्ग:। किन्तु यथा भरतस्य मर्माघातः न भवेत् तथा विषयं प्रापयितव्यम् । तदानी स्वं प्रत्यानेतुं समागतवति सूते, भरतस्य पितृसम्बन्धी प्रश्नः, तस्य सूतस्य समाधानं, श्लोकरूपेण भासः ग्रथितवान् । पितुर्मेकोऽव्याधिः [प्र.ना. ३.] इत्यस्मिन् श्लोके कियदौचित्यं पूरितवानिति वक्तुं वाणी नैवालं भवति । नाहं विषयमिमं विस्तरामि । भरतेनापि सम्यक् पृष्टं, सूतेनापि सम्यगुत्तरितं । किन्तु न मर्माघातःभरतस्य भवति ।

 

अपि च भासकल्पितं प्रतिमागृहं कियदौचित्यपूर्णमिति न वक्तुं  शेषो प्रभवति । यदा भरतः शुल्कलुब्धा कैकेयी एव दशरथमरणस्य, मातॄणां ऐश्वर्यभंगस्य, रामस्य वनगमनस्य, च कारणीभूता इति जानाति तदा रोषेण पृच्छति, तदा कैकेय्या उत्तरं दीयतेवत्स, देशे काले निवेदयामि” इति। 

 

अत्र तु औचित्यस्वरूपं निस्सन्देहं, निष्कण्टकं, धूमरहिताग्निरिव विद्योतते।  यतो हि भारतकृतस्य प्रश्नस्य किमपि उत्तरं प्रदत्तेऽपि दोषः संजायते एव । अतः भासः प्रेक्षकाणां उपरि एव उत्तरचिन्तनरूपधुरम् आरोपयति । भवद्भिः यथा रोचते तथा उत्तरो अन्विष्यताम् इति । एतादृशाः विचाराः रूपकेषु पदे पदे समुपलभ्यन्ते ।

 

एवमपि भासरूपकाणि दृश्यकाव्यनिर्देशकाणां कृते औचित्यं बोधयन् प्रस्तुततां भजन्ते । अर्वाचीनधारावाही-चलच्चित्रादिषु किञ्चिदपि औचित्यम् अस्ति वा इति चिन्तयन्तु? न शीर्षिकाचलच्चित्रयोः, गीताप्रसङ्गयोः नायकनायिकयोः प्रेमोत्पादने वा औचित्यगन्धोऽप्यस्ति । अपि च अतीदीर्घस्वरूपीणां, अस्माकमायुर्गतेऽपि असमात्पानां घारावाहीनां औचित्यं तु अष्टमरसायते । एतासां निर्देशकाणाम्  औचित्यं बोधयन्ती मार्गदर्शकरूपेण प्रस्तुताः भासस्य कृतयः।

.

.

 

The Lilavati -Sulochana G (Teacher, High school)

I would like to introduce the great Indian Mathematician of the 12th century Bhaskaracharya -II who wrote the great Indian treatise on Arithmetic , Lilavati. He belongs to Karnataka region and all of us must be proud of his contribution to Indian Mathematics.  Before him in 629CE Bhaskara-I contributed Mahabhaskariya and Laghubhaskariya granthas. 

 

Bhaskaracharya-II was born in 1036 saka which is 1114CE.  The birth date is mentioned by him in the text of Goladhyaya in Siddhanta Shiromani .  In the Mangalacharan sloka of the Lilavati Bhaskaracharya invokes on Vigneshwara to remove all obstacles and bestow happiness on all devotees.  

 

प्रीतिं भक्तजनस्य यो जनयते विघ्नं विनिघ्नन् स्मृतः

तं वृन्दारकवृन्दवन्दितपदं नत्वा मतङ्गाननम् ।

पाटीं सद्गणितस्य वच्मि चतुरप्रीतिप्रदां प्रस्फुटां

संक्षिप्ताक्षरकोमलामलपदैर्लालित्यलीलावतीम् ॥१॥

 

Bhaskaracharya says that he is writing this book of algorithms of good mathematics , in concise, soft and faultless words which would delight experts, which is clear and unambiguous and endowed with playful elegance.  

 

Lilavati consists of three Kandas.  The first Kanda deals with various units of measurements of length, weight and volume as well as different operations on numbers.  The Dwithiya kanda deals with operations on series, geometry, Trigonometry, calculations pertaining to trade, excavations, construction activities and so on.  The Tritiya kanda deals with permutations of digits and pulverisation. 

 

Other than Lilavati he has also written Siddhanta shiromani, Bijaganitha, Vasanabhashya, Karna Kuthuhalam and other Samskrita works.  Lilavati is a premier text in Arithmetic with numerous examples covering foundational concepts in Mathematics.  Siddhanta Shiromani deals with planetary motions, determination of their instantaneous velocities as well as longitudes, in addition to numerous other astronomical factors.  Bijaganita is the first text in India to deal with Algebra.  The Vasanbhashya is a detailed commentary on the Siddhanta shiromani which presents detailed expositions on various astronomical concepts as well as justifications and proofs of various Mathematical results. Bhaskaracharya deals with the nuances of making the calendar or Panchanga in Karnakutoohalam.

 

Bhaskaracharya’s father was the great preceptor Maheswara. Changadeva was the grandson of Bhaskara, the son of Lakshmidhara.  He has paid great tributes to his grandfather, which is preserved in an inscription of 1207CE in which he describes Bhasakaracharya as the foremost among the priest engaged in yagnas, the most respected teacher of the almanac makers, one who trains scholars in all branches and so on.  With the desire to lift up those who have been caught by the makara of a series of doubts swimming in the waters in the form of discussions pertaining to numerous mathematical procedures outlined by Sridhara, Bharmagupta and others, he composed the Siddhanta Shiromani.

 

Since its composition in the 12th century, the Lilavati has attracted a number of commentaries in Samskrita and a number of translations in other languages like English, Japanese, Persian and so on.  We also have a number of commentaries, which were written in many Indian languages like Hindi, Marvari, Telugu, Kannada and Marathi.   

 

IIT Indore conducted a course dealing with scientific texts in an immersive samskrita environment, where they dealt with the explanation of some slokas from the Lilavati written by Bhaskaracharya.  It enabled all lovers of Mathematics and Samskrita to delve into the exciting work of the Lilavati.  It gave us an insight into the immense contributions of Indian Mathematicians like Bhaskara, Aryabhatta and others which most of us are unaware of . It is important that we should recognize the contributions of our people and ensure that our future generations feel proud of it and carry it forward.  

.

.

ತಣಿಯದ ಕುತೂಹಲ

(ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬರೆದಿರುವ ನೈಸರ್ಗಿಕ ಕಥೆ)

[ಅಂಕಣ ಬರಹ – 8]’

 

(ಪ್ರಕೃತಿ ಆರಾಧಕರಾದ ಎಲ್ಲಪ್ಪರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬರೆದ ಸಸ್ಯಪ್ರಪಂಚದ ಕಥೆಗಳ ಸರಣಿ “ತಣಿಯದ ಕುತೂಹಲ”)

 

ಮಂಚನ ಬೆಲೆ ಒಂದು ಸಣ್ಣ ಗ್ರಾಮವಷ್ಟೆ. ಪ್ರಕೃತಿಮಾತೆ ಒಲಿದು ಹರಸಿರುವ ಹಳ್ಳಿ. ಹತ್ತಿರದಲ್ಲಿ ಸಾವನದುರ್ಗ ಕಾಡು. ಇದಕ್ಕೆ ಸರಿಯಾಗಿ ಕುತೂಹಲವೇ ಮೈತಳೆದ ನೀಲಾ ಅಲ್ಲಿ ವಾಸಿಸುವಳು. ಇದೆಲ್ಲ ಒಳ್ಳೆಯ ಗುರು-ಗುರುಕುಲ-ಶಿಷ್ಯರ ಸಮಾಗಮದಂತೆ ಕಾಣುವುದು. ನೀಲಾಳನ್ನು ಅವಳ ಊರಿನಲ್ಲಿ ಎಲ್ಲರೂ ಇವಳೆಲ್ಲೋ ಹೊದ ಜನ್ಮದಲ್ಲಿ ಮರವೋ – ಗಿಡವೋ ಆಗಿರಬೇಕು. ಅದಕ್ಕೆ ಯಾವಾಗಾಲೂ, ಕಾಡು-ಗಿಡ-ಮರ ಎನ್ನುತ್ತಿರುತ್ತಾಳೆ ಎಂದು ಹಾಸ್ಯಮಾಡಲು ಪ್ರಾರಂಭಿಸಿದ್ದರು.

 

ಸುಗ್ಗಿಕಾಲ ಬಂತು, ಊರಿನಲ್ಲಿ ಜಾತ್ರೆ ಪ್ರಾರಂಭವಾಯಿತು. ಸುತ್ತಲಿಸುವ ಹತ್ತು ಹಳ್ಳಿಗಳು ಸೇರಿ ಒಟ್ಟಿಗೆ ಜಾತ್ರೆ ಮಾಡುವುದು ವಾಡಿಕೆ. ಇವರ ಗ್ರಾಮದೇವತೆ ’ಬನದಮ್ಮನ ಗುಡಿ’ ಇರುವುದು ಮಂಚನಬೆಲೆ ಗ್ರಾಮದಲ್ಲೇ. ಈ ಜಾತ್ರೆ ೫ ದಿನಗಳ ಕಾಲ ನಡೆಯುವ ಸಂಭ್ರಮ. ಈ ಸಮಯದಲ್ಲಿ ಊರು ಊರಿನಿಂದ ಅಳಲೆಕಾಯಿ ಪಂಡಿತರೆಲ್ಲ ಬಂದು ಸೇರಿವರು. ಆಧುನಿಕರ ಭಾಷೆಯಲ್ಲಿ Free medical camp ನಡೆಯುವಂತೆ ಒಂದು ಸುತ್ತು ಎಲ್ಲಾ ಖಾಯಿಲೆಯನ್ನು ತೋರಿಸಿಕೊಳ್ಳುವ ವೈದ್ಯರು ಬಂದಿರುತ್ತಾರೆ. ನೀಲಾಳ ಮಾವ ಸುಟ್ಟ ಗಾಯಗಳಿಗೆ ಔಷಧಿ ಮಾಡುವುದರಲ್ಲಿ ಎತ್ತಿದ ಕೈ. ಹೀಗೆ ಇನ್ನೂ ಅನೇಕ ಪಂಡಿತರನ್ನು ಒಮ್ಮೆಲೆಗೆ ಕಾಣುವ ಹಬ್ಬ ಈ ಜಾತ್ರೆಯಾಗಿತ್ತು. ಅಂತೂ ನೀಲಾಳಿಗೆ ಒಂದು ಸಮಾವೇಶವೇ ಸಿಕ್ಕಂತಾಯಿತು.

 

ಜಾತ್ರೆಯ ದಿನ ಬನದಮ್ಮನ ಮೂರ್ತಿಯನ್ನು ಕೆರೆಯಬಳಿ ಕರೆದೊಯ್ದು ಅನೇಕ ಶಾಸ್ತ್ರಗಳನ್ನು ಮಾಡಿ, ಪಟ್ಟಕ್ಕೆ ಕೂರಿಸುವುದು ವಾಡಿಕೆ. ಇದನ್ನು ಒಂದು ಕುಟುಂಬದವರು ವಿಶೇಷವಾಗಿ ನಡೆಸುತ್ತಿದ್ದರು. ಆ ಕುಟುಂಬದವರಿಗೆ ಬನದಮ್ಮನ ಮಹಿಮೆ, ಇತಿಹಾಸ ಎಲ್ಲವೂ ತಿಳಿದಿದೆ ಎಂದು ನೀಲಾಳ ಅತ್ತೆ ಹೇಳುತ್ತಿದ್ದಳು. ನೀಲಾಳ ಕುತೂಹಲಕ್ಕೆ ಹೊಸ ಆಹಾರ ಸಿಕ್ಕಂತಾಯಿತು. ಜಾತ್ರೆ ಮುಗಿಯುವ ವೇಳೆಗೆ ಆ ಕಥೆಯನ್ನೆಲ್ಲಾ ತಿಳಿದುಕೊಳ್ಳಬೇಕೆಂದು ನಿರ್ಧರಿಸಿದಳು. ತಕ್ಷಣ ಆ ಕುಟುಂಬದವರ ಮನೆಗೆ ಹೋಗಿ ಅದರ ಕಥೆಯನ್ನು ಆ ಮನೆಯ ಅಜ್ಜನ ಬಳಿ ಕೇಳಿದಳು. ಅಜ್ಜ ಈಗ ತುಂಬಾ ಕೆಲಸ, ಜಾತ್ರೆ ಮುಗಿಯುವವರೆಗೆ ಆಗುವುದಿಲ್ಲ, ಆಮೇಲೆ ಬಾ ಎಂದರು. ಆದರೆ ನೀಲಾ ಬಿಡಬೇಕಲ್ಲ!! ಕೆಲಸಗಳೆಲ್ಲಾ ಮುಗಿದ ಮೇಲೆ ದಿನ ಸಂಜೆ ಬರ್ತೀನಿ ಎಂದು ದುಂಬಾಲು ಬಿದ್ದಳು. ಅಜ್ಜನನ್ನು ಹೇಗೋ ಒಪ್ಪಿಸಿದಳು. ಅಜ್ಜ ಇವಳಿಂದ ತಪ್ಪಿಸಿಕೊಂಡರೆ ಸಾಕೆಂದು ಹಳೆ ಪೆಟ್ಟಿಗೆಯಲ್ಲಿದ್ದ ಒಂದು ಕಡತವನ್ನು ತೆಗೆದಿಟ್ಟರು. ಅವಳು ಬಂದರೆ ಈ ಕಡತವನ್ನು ಕೊಟ್ಟು ಓದು ಎಂದು ಹೇಳಿ ತಪ್ಪಿಸಿಕೊಂಡರಾಯಿತು ಎಂದು ಯೋಚಿಸಿದರು. ಸಂಜೆ ಸುಮಾರು  ೮ ಗಂಟೆಯ ವೇಳೆಗೆ ನೀಲಾ ಮತ್ತು ಅವಳ ಮಾವ ಬಂದಳು. ಅಜ್ಜನಿಗೆ ಇದೇನು ಸೊಸೆ-ಮಾವ ಇಬ್ಬರು ಬಂದಿದ್ದಾರೆ, ಎಲ್ಲೋ ಇವರಿಬ್ಬರಿಗೂ ತಲೆ ಕೆಟ್ಟಿದೆ ಎಂದು ಗೊಣಗಿಕೊಂಡರು. ಆದರೆ ವಿಷಯ ಕೇಳಿದರೆ ಯಾರಿಗೂ ಇಲ್ಲ ಎನ್ನುವಂತಿಲ್ಲ, ಹಾಗಾಗಿ ಆಗಲೇ ತೆಗೆದಿಟ್ಟಿದ್ದ ಕಡತವನ್ನು ಕೊಟ್ಟು ಓದಲು ಹೇಳಿದರು.

 

ಇವರಿಬ್ಬರೂ ದೀಪದ ಬೆಳಕಿನಲ್ಲಿ ಆ ಕಡತವನ್ನು ತೆಗೆದರು. ಈ ಕಡತಗಳು 18ನೇ ಶತಮಾನದಲ್ಲಿ ಇವರ ಕುಟುಂಬದ ಹಿರಿಯರಿಗೆ ಬ್ರಿಟಿಷ್ ಸರಕಾರದ ಅಧಿಕಾರಿಗಳು ಹಸ್ತಾಂತರಿಸಿದ್ದ ದಾಖಲೆಗಳು. ಇದರಲ್ಲಿ ಆಗಿನ ಬೆಂದಕಾಳೂರು, ಮಾಗಡಿ ಇತ್ಯಾದಿಗಳ ಇತಿಹಾಸವನ್ನು, ಅಂಕಿಅಂಶಗಳನ್ನು ದಾಖಲಿಸಲಾಗಿತ್ತು. ಒಂದೊಂದೇ ನೋಡುತ್ತಾ ಹೋದರು. ಅದರಲ್ಲಿ ಆಸಕ್ತಿ ಕೆರಳಿಸಿದ ಒಂದು ಜಾಗವೆಂದರೆ ಬೆಂದಕಾಳೂರಿನ ಕೆಂಗೇರಿ ಬಳಿ ಇರುವ ಒಂದು ಚಿಕ್ಕ ವನ. ಈ ವನವನ್ನು ಶ್ರೀಗಂಧದ ವನ ಎಂದೇ ಕರೆಯುತ್ತಿದ್ದರಂತೆ. ಆದರೆ ಕಾಲ ಕಳೆದಂತೆ ಅದು ಬರಡು ಭೂಮಿಯಾಗುತ್ತಿದೆ ಎಂದು ದಾಖಲಿಸಲಾಗಿತ್ತು. ಮುಂದಿನ ಅಧ್ಯಾಯ ಮಂಚನಬೆಲೆಯ ಗ್ರಾಮದ ದಾಖಲೆ. ಕದಂಬೇಶ್ವರಿ ಹೋಗಿ ಕದಂಬಮ್ಮ ಆಗಿ, ಕದಂಬಮ್ಮ ಹೋಗಿ ಬನದಮ್ಮ ಆದ ಕಥೆಯನ್ನು ಕೊಡಲಾಗಿತ್ತು. ಕನ್ನಡ ನಾಡನ್ನು ಕದಂಬರು ಆಳಿದ ನೆನಪಿಗೆ ಇಲ್ಲಿ ಕದಂಬೇಶ್ವರಿ ಎಂದು ಇದ್ದದ್ದರಲ್ಲಿ ಆಶ್ಚರ್ಯವೇನಿಲ್ಲ ಎಂದು ಅನಿಸಿತು. ಈಗಿರುವ ಬನದಮ್ಮ ಹೆಸರೂ ಚೆನ್ನಾಗೇ ಇದೆ ಎನಿಸಿತು. ಆ ಊರಿನಲ್ಲಿ ಕಾಡಿನ ಸಂಪತ್ತು ಯಥೇಚ್ಛವಾಗಿ ಇದ್ದುದರಿಂದ ಬನದಮ್ಮ ಎಂದು ಕರೆದದ್ದೂ ಸರಿಯಾಗೇ ಇದೆ ಎಂದುಕೊಂಡರು. ಸರಿ ಹೊತ್ತಾಯಿತು, ಇಂದು ಹೋಗಿ ನಾಳೆ ಬರೋಣ ಎಂದುಕೊಂಡು ಇಬ್ಬರು ಹೊರಟು. ನೀಲಾಳಿಗೆ ತಮ್ಮ ಊರಿನ ಕಥೆಗಿಂತ ಶ್ರೀಗಂಧ ವನವಾಗಿದ್ದ ನೆಲ ಹೇಗೆ ಬರಡಾಗಲು ಸಾಧ್ಯ ಎಂದು ತಲೆಯಲ್ಲಿ ಕೊರೆಯುತ್ತಿತ್ತು. ಮಾವನನ್ನು ಜಾತ್ರೆ ಮುಗಿದ ಮೇಲೆ ಆ ಜಾಗವನ್ನು ಒಮ್ಮೆ ನೋಡಿಕೊಂಡು ಬರೋಣ ಎಂದು ಹೇಳಿದಳು. ಮಾವನಿಗೂ ಬೆಂಗಳೂರಿನಲ್ಲಿ ಸ್ವಲ್ಪ ಕೆಲಸವಿದ್ದುದರಿಂದ ಆಗಲಿ ಎಂದು ಹೇಳಿದರು.           

 

ಜಾತ್ರೆಯಲ್ಲಿ ಒಂದು ದಿನ ಸಂಜೆ ಹರಿಕಥೆಯನ್ನು ಏರ್ಪಡಿಸಲಾಗಿತ್ತು. ಅದು ವಿಷ್ಣುವಿನ ದಶಾವತಾರಗಳ ಕಥೆ. ದಶಾವತಾರಗಳು ಒಂದು ಕಲ್ಪದಲ್ಲಿ ಒಮ್ಮೆ ಆಗುವುದು. ಎಲ್ಲಾ ಕ್ರಮವಾಗಿ ಒಂದೆ ಯುಗಚಕ್ರದಲ್ಲಿ ಆಗಬೇಕೆಂದಿಲ್ಲ ಎಂದು ಹರಿಕಥೆ ಮಾಡುವವರು ತಿಳಿಸಿದರು. ಮನ್ವಂತರ, ಯುಗಚಕ್ರ, ಕಲ್ಪ ಇವುಗಳ ಬಗ್ಗೆ ನೀಲಾ ಊರಿನ ಅರ್ಚಕರ ಬಳಿ ಕೇಳಿ ತಿಳಿದಿಕೊಂಡಿದ್ದಳು. ತಾನೇ ಕುಳಿತು ಅಳೆದು-ಕಳೆದು ಲೆಕ್ಕಾಚಾರ ಮಾಡಿ ಬರೆದಿಟ್ಟುಕೊಂಡಿದ್ದಳು. ಈಗ ಹರಿಕಥೆಯವರು ಹೇಳಿದಾಗ ಅವಳಿಗೆ ಆಶ್ಚರ್ಯವೇನು ಆಗಲಿಲ್ಲ. ಬೇರೆ ಯಾರಿಗೆ ಎಷ್ಟು ಅರ್ಥವಾಯಿತೋ ಇಲ್ಲವೋ ತಿಳಿಯದು. ಆದರೆ ಇವಳಿಗೆ ಹರಿಕಥೆಕಾರರು ವರಾಹಾವತಾರವನ್ನು ವರ್ಣಿಸಿದ ಬಗೆ ಮರೆಯಲು ಸಾಧ್ಯವೇ ಇಲ್ಲ. ಭಾಗವತದಲ್ಲಿ ಭೂಮಿ ಎರಡು ಬಾರಿ ಕಕ್ಷೆಯಿಂದ ತಪ್ಪಿದ್ದ ಉಲ್ಲೇಖಗಳು ಇವೆ. ಎರಡು ಬಾರಿಯೂ ವಿಷ್ಣುವು ವರಾಹ ಅವತಾರದಲ್ಲಿ ಭೂಮಿಯನ್ನು ರಕ್ಷಣೆ ಮಾಡಿದ ಕಥೆ ಇದೆ. ವಿಜ್ಞಾನಿಗಳಿಗೆ ಭೂಮಿ ತನ್ನ ಗುರುತ್ವಾಕರ್ಷಣೆ ತಪ್ಪಿಸಿಕೊಂಡು ಚಲಿಸಿತ್ತು ಎಂದು ಗೊತ್ತಿದೆ, ಆದರೆ ಯಾಕೆಂದು ಕಾರಣ ತಿಳಿದಿಲ್ಲ. ಪುರಾಣಗಳಲ್ಲಿ ಇದರ ಉಲ್ಲೇಖ, ಕಾರಣ ಸ್ಪಷ್ಟವಾಗಿ ನೀಡಲಾಗಿದೆ. ಹರಿಕಥೆ ಮುಗಿದ ಮೇಲೆ ನೀಲಾ ದಾಸರನ್ನು ಅನೇಕ ಪ್ರಶ್ನೆಗಳನ್ನು ಮಾಡಿದಳು. ದಾಸರಿಗೆ ಎಲ್ಲಕ್ಕೂ ಉತ್ತರಿಸಲು ಆಗಲಿಲ್ಲ. ಅವರಾದರೊ ತಮ್ಮ ತಂದೆ ಹೇಳುತ್ತಿದ್ದ ಕಥೆಗಳನ್ನು ಕಲಿತು ತಕ್ಕ ಮಟ್ಟಿಗೆ ಹೇಳುತ್ತಿದ್ದವರು. ಶಾಸ್ತ್ರಗಳನ್ನು ಅಧ್ಯಯನ ಮಾಡಿರಲಿಲ್ಲ. ಆದರೆ ಇಷ್ಟು ಕುತೂಹಲದಿಂದ ಕೇಳುತ್ತಿರುವವರಿಗೆ ಸರಿಯಾದ ಉತ್ತರ ಸಿಗಬೇಕು ಎಂದು ಎನಿಸಿತು. ನಗರದಲ್ಲಿ ತಮಗೆ ಗೊತ್ತಿರುವ ಒಬ್ಬರು ಶಾಸ್ತ್ರಕಲಿತವರಿಗೆ ಇವರನ್ನು ಪರಿಚಯ ಮಾಡಿಸಿದರೆ ಅವರ ಬಳಿ ಉತ್ತರ ಸಿಗಬಹುದು ಎಂದು ಅವರ ವಿಳಾಸ ಕೊಟ್ಟರು. ಅವರ ಹೆಸರು ಸುದರ್ಶನ ಜೋಷಿ.

 

ಸುದರ್ಶನ ಜೋಷಿ, ಸುಮಾರು 40 ವರ್ಷದ ಉತ್ಸಾಹಿ ಅಧ್ಯಾಪಕರು. ನಿರಂತರ ಅಧ್ಯಯನ, ಸಂಶೋಧನೆಗಳಿಂದ ವಯಸ್ಸಿಗೆ ಮೀರಿದ ಜ್ಞಾನವನ್ನು ಸಂಪಾದಿಸಿದ್ದರು. ಇವರನ್ನು ಭೇಟಿ ಮಾಡಿಸಿದರೆ ನೀಲಾಳ ಕುತೂಹಲಕ್ಕೆ ಒಳ್ಳೆಯ ತಿರುವು ಸಿಗಬಹುದು ಎನಿಸಿ ಹರಿದಾಸರು ಇವರ ವಿಳಾಸವನ್ನು ಕೊಟ್ಟಿದ್ದರು. ಜಾತ್ರೆ ಎಲ್ಲಾ ಮುಗಿದ ಮೇಲೆ ನೀಲಾ ಮಾವನೊಂದಿಗೆ ಬೆಂಗಳೂರಿಗೆ ಹೊರಟೇ ಬಿಟ್ಟಳು. ಇವರ ವಿಳಾಸವನ್ನು ಹುಡುಕಿ ಮನೆ ಮುಂದೆ ನಿಂತು ಸುದರ್ಶನ ಜೋಷಿ ಅವರು ಇರುವರೇ ಎಂದು ಕೇಳಿದರು. ಅವರ ಮನೆಯಿಂದ ಬಂದ ಒಂದು ಪುಟ್ಟ ಮಗು ಅಪ್ಪ ಊರಲ್ಲಿ ಇಲ್ಲ ನಾಳೆ ಬರುತ್ತಾರೆ, ಅವರು ಯಾರೋ ಒಬ್ಬರು ವಿಜ್ಞಾನಿಯನ್ನು ಭೇಟಿಯಾಗಲು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ ಎಂದು ತಿಳಿಸಿದರು. ಕಾಯುವಿಕೆ ಹೆಚ್ಚಾದಷ್ಟು ಕುತೂಹಲವೂ ಹೆಚ್ಚುವುದು. ಏಕೆಂದರೆ ನೀಲಾಳದ್ದು ತಿಳಯಲೇಬೇಕೆಂಬ ಕುತೂಹಲ. ಹಾಗಾಗಿ ಕಾಯುವಿಕೆ ವಿಶೇಷ ಮೆರುಗು ನೀಡಿತ್ತು. ಈ ದಿನ ಮಾವನವರಿಗೆ ಬೆಂಗಳೂರಿನಲ್ಲಿದ್ದ ಕೆಲಸವನ್ನು ಮುಗಿಸಿಕೊಂಡು ನಾಳೆ ಭೇಟಿಯಾಗೋಣ ಎಂದು  ಹೊರಟರು. ಮಾವನಿಗೆ ಒಂದು ಗಿಡಮೂಲಿಕೆ ಬೇಕಾಗಿತ್ತು. ಅದು ಸಿಗುವುದು ಬೆಂಗಳೂರಿನ ಒಬ್ಬ ಪಂಡಿತರಲ್ಲಿ ಮಾತ್ರ. ಹಾಗಾಗಿ ಅವರಿಗಾಗಿ ಹುಡುಕಿಕೊಂಡು ಬಂದಿದ್ದರು. ಬೇಕಾದ ಗಿಡಮೂಲಿಕೆ ಸಿಕ್ಕಿತು. ಅದೊಂದು ಬಳ್ಳಿಯ ಗೆಡ್ಡೆ. ಈ ಗೆಡ್ಡೆ ಮಾನವರೂ ತಿನ್ನಬಹುದಾದದ್ದು. ಇದನ್ನು ಕನ್ನಡದಲ್ಲಿ ಬಿತ್ತಿರುಕ ಅಥವಾ ಹಾಲಿಕೆ ಎಂದು ಕರೆಯುವರು. ಸಂಸ್ಕೃತದಲ್ಲಿ ಅಂಕಲೋದ್ಯ, ಗಿಲೋದಯಮ್ (Ceropegia in English) ಎಂದು ಕರೆಯುವರು. ಮಾಂಗಲ್ಯ ಪುಷ್ಪ-ಶಂಖಪುಷ್ಪಿ ಎಂದೂ ಕರೆಯುವರು.

 

 

 

 

 

 

 

ಪ್ರಾಣಿಗಳಿಗೆ ಇದರ ಅರಿವು ಚೆನ್ನಾಗಿದೆ. ಇದು ಅಜೀರ್ಣವನ್ನು ಸರಿಪಡಿಸಲು, ತಲೆನೋವು ಕಡಿಮೆ ಮಾಡಲು, ವಿಷಕಾರಿ ಪ್ರಾಣಿಗಳು ಕಚ್ಚಿದಾಗಲೂ ಇದನ್ನು ಬಳಸಬಹುದಾಗಿತ್ತು. ಅಲ್ಲದೆ ಇದು ಹೊಟ್ಟೆ ಹುಣ್ಣಿಗೆ ಮತ್ತು ಭಾವನೆಗಳ ಹೊಯ್ದಾಟಕ್ಕೆ ರಾಮಬಾಣ. ಅಂತೂ ಹುಡುಕಿದ ಮೂಲಿಕೆ ಸಿಕ್ಕಿತಲ್ಲ ಎಂಬ ಖುಷಿಯಲ್ಲಿ ನೀಲಾ ಮತ್ತು ಅವಳ ಮಾವ ಬೆಂಗಳೂರಿನ ಒಂದು ಧರ್ಮಛತ್ರದಲ್ಲಿ ಉಳಿದುಕೊಂಡರು.

 

ಮಾರನೆಯ ದಿನ ಸುದರ್ಶನ ಜೋಷಿ ಅವರನ್ನು ಹುಡುಕಿಕೊಂಡು ಹೊರಟರು. ಪುಣ್ಯವಶಾತ್ ಅವರು ಸಿಕ್ಕರು. ದಶಾವತಾರಗಳ ಬಗ್ಗೆ ತಿಳಿದುಕೊಳ್ಳಲು ಬಂದಿರುವುದಾಗಿ ತಿಳಿಸಿದರು. ಸುದರ್ಶನ ಜೋಷಿಯವರಿಗೆ ಇದಕ್ಕಾಗಿ ಊರಿಂದ ಬಂದರೆ ಎಂಬುದು ಆಶ್ಚರ್ಯ. ಏನಿದರ ಹಿನ್ನಲೆ ಎಂದು ಕೇಳಿದಾಗ ಅವರು ಕಥೆಯನ್ನೆಲ್ಲಾ ಹೇಳಿದರು. ಆಕಸ್ಮಿಕವೆಂಬಂತೆ ಸುದರ್ಶನ ಜೋಷಿಯವರು ಬೆಂಗಳೂರಿನ ವನಗಳ ಬಗ್ಗೆ ತಿಳಿಯುವ ಸಲುವಾಗೇ ಮಹಾರಾಷ್ಟ್ರದ ಒಬ್ಬ ವಿಜ್ಞಾನಿಯನ್ನು ಹುಡುಕಿಕೊಂಡು ಹೋಗಿದ್ದರು. ಮಾತಿನ ಮಧ್ಯದಲ್ಲಿ ಕೆಂಗೇರಿಯ ಬಳಿ ಇದ್ದ ವನ ಹೇಗೆ ಮಾಯವಾಯಿತು ಎಂದು ಹೇಳಲು ಪ್ರಾರಂಭಿಸಿದರು. ನೇರವಾಗಿ ವಿಷಯಕ್ಕೆ ಬಂದರೆಂದು ನೀಲಾಳಿಗೆ ಖುಷಿ ಹೆಚ್ಚಾಯಿತು.

17-18 ಶತಮಾನಗಳಲ್ಲಿ ಇದು ಶ್ರೀಗಂಧವನವಾಗಿತ್ತು. ಆದರೆ ಅದನ್ನು ಬರಡುಭೂಮಿಯಾಗಿ ಮಾಡುತ್ತಾ ಈಗ ದರಿದ್ರರಂತೆ ಬದುಕುವಂತಾಗಿದೆ. ಸಂಪತ್ತಿನ ಇರುವು ಸಂಪತ್ತಲ್ಲ, ಇರುವಿಕೆಯ ಅರಿವು ಸಂಪತ್ತು. ನಮಗೆ ನಮ್ಮ ಸುತ್ತ ಏನಾಗುತ್ತಿದೆ ಎಂಬ ಅರಿವೆ ಇಲ್ಲ. ಅರಿವುಗೆಟ್ಟವರಾಗಿ ಬದುಕುತಿದ್ದೇವೆ. ಬಡತನ ದುಡ್ಡಿಲ್ಲದೆ ಬರುವುದಲ್ಲ, ಸಂಪತ್ತಿದೆ ನಮ್ಮ ಬಳಿ ಎಂದು ತಿಳಿಯದೆ ಬರುವುದು. ಶ್ರೀಗಂಧದವನವಾಗಿದ್ದ ನಾಡನ್ನು ಅರಿವಿಲ್ಲದೆ ನಾಶಮಾಡಿದ್ದೇವೆ ಎಂದು ಒಂದೆ ಸಮನೆ ಆಕ್ರೋಶದಿಂದ ಸುದರ್ಶನ ಜೋಷಿ ಅವರು ಹೇಳುತ್ತಾ ಬಂದರು. ತಕ್ಷಣ ನೀಲಾ “ನಾವು ಅರಿವು ಕಳೆದುಕೊಂಡಿದ್ದು ಎಲ್ಲಿ?” ಎಂದಳು. “ಎಲ್ಲಿ ಎಂದರೆ ಪ್ರಕೃತಿಯಲ್ಲಿರುವ ಬೆಸುಗೆಗಳನ್ನು ಅರ್ಥಮಾಡಿಕೊಳ್ಳದೆ. ಪ್ರಕೃತಿಯಲ್ಲಿ ಅಥವಾ ಸೃಷ್ಟಿಯಲ್ಲಿ ಇರುವ ರಹಸ್ಯವೆಂದರೆ ಬೆಸುಗೆಗಳು ಅಥವಾ ಕೊಂಡಿಗಳು. ಈ ಕೊಂಡಿಗಳನ್ನು ತಪ್ಪಿಸಿದರೆ ಸೃಷ್ಟಿಪ್ರಕ್ರಿಯೆ ಅರ್ಥಹೀನವಾಗುತ್ತಾ ಹೋಗುವುದು” ಎಂದರು. “ಅರ್ಥವಾಗಲಿಲ್ಲ ಸ್ವಲ್ಪ ವಿವರವಾಗಿ ಹೇಳಿ” ಎಂದು ನೀಲ ಮತ್ತೆ ಕೇಳಿದಳು. ಆಗ ವಿವರವಾಗಿ ಹೇಳಲು ಪ್ರಾರಂಭಿಸಿದರು – ಶ್ರೀಗಂಧ ಸುಗಂಧರಾಣಿ ಎಂದೂ ಕರೆಯುವರು. ಆದರೆ ಶ್ರೀಗಂಧ ತಾನೊಬ್ಬಳೇ ಬೆಳೆಯಲು ಸಾಧ್ಯವಿಲ್ಲ. ಅವಳಿಗೆ ಆಹಾರ ಒದಗಿಸುವವರು ಅನೇಕ ಮಂದಿ ಇದ್ದಾರೆ, ಹೊನೆಗೊನೆ-ಹುಲ್ಲು-ಬಿದಿರು-ಅಶ್ವತ್ಥ-ಹೊಂಗೆ-ಕಸ್ತೂರಿ-ಜಾಲಿ-ಬೇವು ಇವೆಲ್ಲಾ ಅವಳ ಸೇವಕರು. ಇವರಡನೆ ಸ್ನೇಹಮಾಡಿಕೊಂಡು ಇವರೆಲ್ಲರ ಬೇರುಗಳೊಡನೆ ಬೆಸೆದುಕೊಂಡು ತಾನು ರಾಣಿಯಂತೆ ಆಹಾರ ಪಡೆಯುತ್ತಾಳೆ. ಇವಳು ತಯಾರಿಸುವ ಹಣ್ಣು ಕೋಗಿಲೆಗಳಿಗೆ ರಸಗವಳ. ಈ ಕೋಗಿಲೆಗಳು ಆ ಹಣ್ಣನ್ನು ನೋವಾಗದಂತೆ ತಿಂದು, ಒಳಗಿನ ಬೀಜವನ್ನು ತನ್ನ ಒಡಲೊಳಗೆ ಸಂಸ್ಕರಿಸಿ ಹೊರಗೆ ಕಳುಹಿಸುತ್ತವೆ. ಮನುಷ್ಯರಾದರೆ ಈ ಬೀಜವನ್ನು ಸಂಸ್ಕರಿಸಿ ಮೊಳಕೆಯೊಡೆಸಲು 6 ತಿಂಗಳು ಕಾಯಬೇಕು, ಆದರೆ ಇದೇ ಕೆಲಸವನ್ನು ಕೋಗಿಲೆಗಳು 6 ದಿನಗಳಲ್ಲಿ ಮಾಡುತ್ತವೆ. ಆದರೆ ಈ ತಂತ್ರಗಾರಿಕೆಗೆ ಯಾರೂ ನೊಬೆಲ್ ಬಹುಮಾನ ಕೊಡುವುದಿಲ್ಲ. ಅದೇ ಸಮಸ್ಯೆ. ನಮಗೆ ಅರಿವಿಲ್ಲದೆ ಏನೇನು ನಡೆಯುತ್ತಿದೆ ಎಂಬ ಅಜ್ಞಾನ ನಮಗಿರುವುದರಿಂದ ನಾವೊಬ್ಬರೆ ಈ ಪ್ರಪಂಚದಲ್ಲಿ ಬುದ್ಧಿವಂತರೆಂದು ಬೀಗುತ್ತೇವೆ. ಈ ಕೋಗಿಲೆಗಳು ಆನಂದವಾಗಿ ಹಣ್ಣು ತಿಂದು ಹಾಡುತ್ತಾ-ಹಾರಾಡುತ್ತಾ ಎಲ್ಲೆಡೆ ಈ ಬೀಜಗಳನ್ನು ಪ್ರಸಾರ ಮಾಡುವುದು. ಹೀಗೆ ಒಂದಕ್ಕೆ ಒಂದು ಆಧಾರವಾಗಿದೆ. ಈ ಬೆಸುಗೆಯನ್ನು ತಿಳಿಯದೆ ಶ್ರೀಗಂಧವನ್ನು ಮಾತ್ರ ಬೆಳೆಸೋಣ, ಉಳಿದವನ್ನು ತೆಗೆದು ಬಿಡೋಣ ಎಂದು ಯೋಚಿಸಿದರೆ ಅದು ಮೂರ್ಖತನ. ಈಗ ಆಗಿರುವುದು ಇದೇ ಮೂರ್ಖತನ. ಹಾಗಾಗಿ ಶ್ರೀಗಂಧವನವಾಗಿದ್ದ ಈ ಜಾಗ ಈಗ ಚರ್ಮಸುಲಿದ ವನವಾಗಿದೆ, ಜೀವವೈವಿಧ್ಯವನ್ನು ಕಳೆದುಕೊಂಡು ಬಂಜೆಯಾಗಿದೆ. ಭೂಮಿತಾಯಿಯನ್ನು ಬಂಜೆ ಮಾಡಿಸುವ ಕಿರೀಟ ಮನುಷ್ಯರಿಗೇ ಸಿಗಬೇಕು” ಎಂದು ಹೇಳಿ ಸುಮ್ಮನಾದರು.

 

ಸುದರ್ಶನ ಜೋಷಿ ಅವರ ಬೇಸರಿಕೆ ಕಂಡು ಎಲ್ಲರೂ ಕ್ಷಣಕಾಲ ಮೌನವಾದರು. ಅಂದು ಮತ್ತೇನು ಮಾತನಾಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಅವರ ಒತ್ತಾಯದ ಮೇರೆಗೆ ಎಲ್ಲರೂ ಊಟಕ್ಕೆ ಎದ್ದರು. ಊಟವಾದ ನಂತರ ಇವರಿಬ್ಬರು ಹೊರಡುವುದಾಗಿ ಅನುಮತಿ ಕೇಳಿದರು. ಆಗ ಮತ್ತೆ ಸುದರ್ಶನ ಅವರು – ನೀವು ಈ ವಿಷಯಕ್ಕಾಗಿ ಬಂದಿರಾ? ಎಂದು ಕೇಳಿದರು. ಆಗ ನೀಲಾಳ ಮಾವ ತಾನು ತಂದಿದ್ದ ಗಿಡಮೂಲಿಕೆಯನ್ನು ತೋರಿಸಿ ಇದಕ್ಕಾಗಿ ಬಂದೆವು. ಎರಡೂ ಕೆಲಸವಾಯಿತು. ನೀವು ಹೇಳಿದ ಆ ಜೀವವೈವಿಧ್ಯವನವನ್ನು ನೋಡಿಕೊಂಡು ಊರಿಗೆ ತೆರಳುತ್ತೇವೆ ಎಂದರು. ಆ ಗಿಡಮೂಲಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಸುದರ್ಶನ ಅವರು ಅರೆ ! ಇದು ಹಾಲಿಕೆಯಲ್ಲವೆ? ಎಂದರು. ಹೌದು ಇದು ಬಹಳ ಉಪಯುಕ್ತ ಔಷಧಿ ಗಿಡ, ನಾನು ಊರಿನಲ್ಲಿ ಸಣ್ಣ ಪುಟ್ಟ ಖಾಯಿಲೆಗಳಿಗೆ ಮದ್ದು ಕೊಡುತ್ತೇನೆ. ಅದಕ್ಕೆ ಇದನ್ನು ಹುಡುಕಿಕೊಂಡು ಬಂದೆ ಎಂದರು.

 

ಮತ್ತೆ ಇವರೆಲ್ಲರ ಮಾತು ಮನೆಯಂಗಳದ ಕೈತೋಟದಲ್ಲೇ ಮುಂದುವರೆಯಿತು. ಸುದರ್ಶನ ಅವರಿಗೆ ಈ ಗಿಡದ ಕಾರ್ಯವೈಖರಿಯನ್ನು ನೆನೆದು ಸುಂದರವಾದ ಸೃಷ್ಟಿಪ್ರಕ್ರಿಯೆ ನೆನಪಾಯಿತು. ಈ ಹೂವಿನ ಸೌಂದರ್ಯವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಸೃಷ್ಟಿಯಲ್ಲಿ ಅವ್ಯಕ್ತವಾದ – ವ್ಯಾಪಕವಾದ ತತ್ವಗಳನ್ನು ಬಹಳ ಚೆನ್ನಾಗಿ ಇದರೊಂದಿಗೆ ವಿವರಿಸಬಹುದು ಗೊತ್ತೆ ಎಂದು ಆನಂದದಿಂದ ನುಡಿದರು. ಅವರ ಕಣ್ಣಿನಲ್ಲಿ ಒಂದು ಮಿಂಚು ಕಾಣಿಸಿತು. ಕುತೂಹಲದ ಬೆಂಕಿಗೆ ತುಪ್ಪ ಸುರಿದಂತೆ, ನೀಲಾ ತನ್ಮಯಳಾದಳು. ತಮ್ಮ ತೋಟದಲ್ಲಿ ಬೆಳೆದಿದ್ದ ಒಂದು ಹಾಲಿಕೆಯ ಬಳ್ಳಿಯನ್ನು ತೆಗೆದು ತೋರಿಸಿದರು.

 

 

 

 

 

 

 

 

 

ಇದು ಇಂದು ಮೊನ್ನೆ ಭೂಮಿಗೆ ಬಂದ ಬಳ್ಳಿಯಲ್ಲ. ಭೂಮಿ ಸೃಷ್ಟಿಯಾದಾಗಿನಿಂದ ಇರುವ ಅತಿಥಿಗಳು. ಭೂಮಿ ಅಪಾಯದಲ್ಲಿದ್ದಾಗ ರಕ್ಷಣೆಗಾಗಿ ಬಂದ ವರಾಹಮೂರ್ತಿಗೆ ಉಣಬಡಿಸಿದ ಗೆಡ್ಡೆಗಳು. ಭೂದೇವಿ ತನ್ನ ಸಂಪತ್ತಿನಿಂದ ಮೆರೆಯುತ್ತಿದ್ದ ಕಾಲವೊಂದಿತ್ತು. ಆದರೆ ಈಗ…

 

ಈ ಹೂವಿನ ಸ್ಪರ್ಶತಂತುಗಳು ಪರಾಗಸ್ಪರ್ಶಕ್ಕೆ ತಯಾರಾದಾಗ 5-10 ಕಿ.ಮೀ ದೂರದಲ್ಲಿರುವ ಇರುವೆ, ಕೀಟಗಳಿಗೆ ಸಂದೇಶ ಕಳುಹಿಸುತ್ತವೆ. ಬೇರೆಯ ಗಿಡಗಳಿಂದ ಪರಾಗವನ್ನು ಹೊತ್ತು ತರುವ ಅತಿಥಿಗಳಿಗೆ ಒಳಬರುವ ಮೃದುವಾದ ಮಾರ್ಗವನ್ನು ಸಿದ್ಧಪಡಿಸಿರುತ್ತದೆ. ಕೀಟಗಳ ಯಾವುದೇ ಅಂಗಗಳಿಗೆ ಯಾವ ತೊಂದರೆಯೂ ಆಗದಂತೆ ಸರಾಗವಾಗಿ ಒಳಗೆ ಹೋಗಿ ಅಲ್ಲಿ ಅವಳು ತಯಾರಿಸಿಟ್ಟಿರುವ ಮಕರಂದವನ್ನು ಕುಡಿದು, ತಾನು ತಂದಿರುವ ಪರಾಗವನ್ನು ಅಲ್ಲಿರುವ ಅಂಡಾಣುಗಳ ಒಳಗೆ ಕೂರಿಸಿ ನೋವಾಗದಂತೆ ಹೊರಬರುತ್ತವೆ. ಮತ್ತೆ ಹೀಗೆ ತಮ್ಮ ಪರಾಗಸ್ಪರ್ಶ ಕ್ರಿಯೆಯನ್ನು ಮುಂದುವರೆಸುತ್ತವೆ. ಕೀಟಗಳಿಗೆ ಬೇಕಾದ ಮಕರಂದವನ್ನು ಹೂವುಗಳು ಕೊಟ್ಟರೆ ಹೂವುಗಳಿಗೆ ಬೇಕಾದ ಪರಾಗವನ್ನು, ಬೀಜಪ್ರಸಾರ ಕೆಲಸವನ್ನು ಕೀಟಗಳು ಮಾಡುತ್ತವೆ. ಈ ದಾಂಪತ್ಯವನ್ನು ಏರ್ಪಡಿಸುವ ಕೆಲಸಕ್ಕೆ ಕವಡೆ ಕಾಸು ಬೇಕಿಲ್ಲ. ಅವರ ಪಾಡಿಗೆ ಅವರನ್ನು ಬಿಟ್ಟರೆ ಸಾಕು. ಈ ಬಳ್ಳಿಯ ಗೆಡ್ಡೆಯು ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ತಿನ್ನುವ ಪದಾರ್ಥವಾಗಿದೆ. ಇಲ್ಲಿ ನಡೆಯುವ ಸ್ಪರ್ಶ – ರಸೋತ್ಪತ್ತಿ – ಸೌಂದರ್ಯದ ಅರಳುವಿಕೆ – ಪರಿಮಳ ಬೀರುವುದು – ಸೂಕ್ಷ್ಮ ಶಬ್ದೋತ್ಪತ್ತಿ ಸೃಷ್ಟಿಯ ನಿತ್ಯಸತ್ಯಗಳನ್ನು ತೆರೆದಿಡುತ್ತವೆ. ಇಲ್ಲಿ ಯಾವುದೂ ಸಮಯ ಮೀರುವುದಿಲ್ಲ, ತಪ್ಪಿ ಹೆಜ್ಜೆ ಹಾಕುವುದಿಲ್ಲ ಅಂದರೆ ಒಂದು ಬುದ್ಧಿಸತ್ವ ನಿರಂತರ ಕಾರ್ಯನಿರತವಾಗಿದೆ. ಆಕಾಶದಲ್ಲಿ ನಡೆಯುವ ಸಂವಹನ ಕ್ರಿಯೆ, ಸ್ಪರ್ಶವಾದ ತಕ್ಷಣ ಆಗುವ ರಸೋತ್ಪತ್ತಿ, ಇದರಿಂದ ಅರಳುವ ಸೌಂದರ್ಯ, ಹೊರಸೂಸುವ ಗಂಧ, ನೀಡುವ ಮಕರಂದ, ಶಬ್ದ – ಹೀಗೆ ಪುರುಷ ಮತ್ತು ಪ್ರಕೃತಿಯ ಮೇಲನವಾಗುವುದು. ಪಂಚಭೂತಗಳ ಆಲಿಂಗನದಿಂದ ಸೃಷ್ಟಿ ನಡೆಯುತ್ತದೆ. ಇದು ಅವ್ಯಕ್ತ ಆದರೆ ವ್ಯಾಪಕತ್ವ ಹೊಂದಿದೆ. ಅಂದರೆ ಇದೇ ನಿತ್ಯಸತ್ಯಗಳು ಎಂದಿಗೂ ಬದಲಾಗದ ಸೃಷ್ಟಿಯ ತತ್ವಗಳು. ಕಠೋಪನಿಷತ್ತಿನಲ್ಲಿ ಹೇಳುವಂತೆ ಅಂಗುಷ್ಠಮಾತ್ರಃ ಪುರುಷೋ ಜ್ಯೋತಿರಿವಾಧೂಮಕಃ | ಈಶಾನೋ ಭೂತಭವಸ್ಯ ಸ ಏವಾದ್ಯ ಸ ಉ ಶ್ವ ಏತದ್ ವೈ ತತ್” (ಕಠೋಪನಿಷತ್ತು – ಅಧ್ಯಾಯ ೨ – ಶ್ಲೋಕ ೧೩ ) ಅಂಗುಷ್ಠಗಾತ್ರದಲ್ಲಿ ಇರುವ ಆತ್ಮಜ್ಯೋತಿ ಸೃಷ್ಟಿಪ್ರಕ್ರಿಯೆಯಲ್ಲಿ ಉನ್ನತ ಬುದ್ಧಿಸತ್ವವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಎಲ್ಲೆಡೆ ಇರುವ ಶುದ್ಧ-ಅಪರಿವರ್ತನೀಯ-ಶಾಶ್ವತ ಅಸ್ತಿತ್ವ. ಈ ಎಲ್ಲಾ ಪ್ರಕೃತಿಯ ಬೆಸುಗೆಗಳನ್ನು ಹಾಳುಮಾಡದೆ, ಶುದ್ಧ ಗಾಳಿ-ನೀರು-ಮಣ್ಣುಗಳನ್ನು ಉಳಿಸಿಕೊಂಡರೆ ಅದೇ ಈ ಜೀವವೈವಿಧ್ಯವಾಗಿ ಉದಯಿಸಿ ಬರುವುದು. ಬರಡಾಗಿರುವ ಈ ಭೂಮಿ ಮತ್ತೆ ಜೀವವೈವಿಧ್ಯವನ್ನು ಪಡೆಯುವಂತಾದರೆ ಹೇಗಿರಬಹುದು?! ಎಂದು ಕನಸಿಗೆ ಜಾರಿದರು.

 

ಆವೇಶ ಬಂದವರಂತೆ ಸುದರ್ಶನ ಜೋಷಿಗಳು ಹೀಗೆ ಉದ್ಗರಿಸಿದರು – ಹಿಂದೆ ಭೂಮಿ ತನ್ನ ಕಕ್ಷೆಯಿಂದ ಜಾರಿ ನಿಂತಾಗ, ಭೂದೇವಿಯನ್ನು-ಭೂಮಿಯ ಮೇಲೆ ಇರುವ ಅರಿವನ್ನು ಅಪಹರಿಸಿದ ಹಿರಣ್ಯಾಕ್ಷನನ್ನು ಸಂಹರಿಸಲು ವರಾಹ ಅವತರಿಸಿದಂತೆ ಮತ್ತೆ ಅವತರಿಸಬೇಕು. ಅರಿವಿನ ಧಾರೆಯನ್ನು ತಡೆಯದಂತೆ ಮತ್ತೆ ಹರಿಸಬೇಕು. ಕೋರೆದಾಡೆಗಳಿಂದ ಭೂಮಿಯನ್ನು ಉದ್ಧರಿಸಬೇಕು. ನಮಗೆ ಅರಿವಿನ ಸಂಪತ್ತನ್ನು ಕೊಡುವುದರ ಮೂಲಕ ವರಾಹ ಅವ್ಯಕ್ತವಾಗಿ ನಮ್ಮೆಲ್ಲರಲ್ಲೂ ಅವತರಿಸಿ ಬರಬೇಕು. ಆಗ ಒಬ್ಬ ಹಿರಣ್ಯಾಕ್ಷನಿದ್ದ, ಈಗ ಇರುವ ಅಜ್ಞಾನಿ ದುರಾಸೆಯ ಹಿರಣ್ಯಾಕ್ಷನನ್ನು ಕೊಲ್ಲಲು ವರಾಹ ಅವತರಿಸಬೇಕು:

 

यः प्रभुः सर्वभूतानां वराहस्तेन ताडितः 

ततो भागवता चक्रमाविध्यादितसन्निभम् ॥ २० ॥

पातितं दानवेन्द्रस्य शिरस्युत्तमकर्मणा 

ततः स्थितस्यैव शिरस्तस्य भूमौ पपात ह ।

हिरण्मयं वज्रहतं मेरुशृङ्गमिवोत्तरम् ॥ २१ ॥ (हरिवंश – भविष्यपर्व – अध्याय ३९)
 
 

ತರಿದು ಬಿಡು ಆಸೆ ಕಂಗಳ ದುರಾಸೆ ಜಿಹ್ವೆಯ ಹಿರಣ್ಯನ

ಸುಟ್ಟುಬಿಡು ಮೋಹಬೀಜವ ನಿನ್ನೀ ಕಿರಣಗಳ ಜ್ವಾಲೆಯಿಂ

ವಿಜೃಂಭಿಸು ಆಕಾಶ-ಭುವಿಗಳ ಆವರಿಸಿ ನಿಂತು ನೀನೆ

ಭುವಿಯ ರಕ್ಷಿಸೆ ಬಂದಂತೆ ಬಾ ರಕ್ಷಿಸು ನಮ್ಮರಿವ

ಹೇ ವರಾಹನೇ ಬಾಯ್ತೆರೆದು ನಿಂತಿದೆ ಭುವಿಯೊಡಲು ನಿನ್ನಾಗಮನಕ್ಕಾಗಿ

.

.

 

ಚಿಗುರು

(ಮಕ್ಕಳ ಬರಹಗಳ ವಿಭಾಗ)

 

 

 

 

 

 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
Abhiram (M1 Grade)

 

 

 

Aditi (1st Grade)

 

Buddimaan Kaakaha

 

Children work – Sevanthika and Sougandhika

 

 

 

Dhatri (3rd Grade)

 

Mayuri (M3 Grade)

 

 

 

.

ಕೇಳ್ರಪ್ಪೋ ಕೇಳ್ರಿ

(Announcements from School)

 

 

 

 

 

 

 

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.