ಆನಂದಿನಿಯ ಈ ಸಂಚಿಕೆ ಒಂದು ಹೊಸ ಕಾಲಘಟ್ಟದಲ್ಲಿ ಹೊರಬರುತ್ತಿದೆ.
ಮಾನವ ಪ್ರಕೃತಿಮಾತೆಗೆ ಮಾಡಿದ ಅತಿರೇಕದ ಅಪಚಾರಕ್ಕಾಗಿ ಆಕೆ ಮುನಿದು ಮಾನವನ ಮೇಲೆ ಮಾರಕಾಸ್ತ್ರ ಪ್ರಯೋಗಿಸುತ್ತಿದ್ದಾಳೆ ಎನ್ನುವ ಭಾವ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಇದ್ದಕ್ಕಿದ್ದಂತೆ ಎರಗಿದ ಆಕೆಯ ಶಾಪವಾದ ಕೋವಿಡ್-೧೯ನಿಂದಾಗಿ ಇಡಿಯ ವಿಶ್ವಕ್ಕೇ ದಿಗ್ಭ್ರಮೆ ಆವರಿಸಿ, ಎಲ್ಲ ದೇಶಗಳ ಲಕ್ಷಾಂತರ ಜನರ ನೋವು, ಸಾವು, Lockdown, ಆರ್ಥಿಕ ಪತನ, ಬಡಜನರ ಬದುಕಿನ ಬವಣೆ ಇದೆಲ್ಲ ಸಾಲುಸಾಲಾಗಿ ಮೆರವಣಿಗೆಯಾಗುತ್ತಿದೆ. ಇತಿಹಾಸದುದ್ದಕ್ಕೂ ಇಂಥ ಅನೇಕ ಸಂದರ್ಭಗಳು ಒದಗಿಬಂದಿದ್ದರೂ ಸರ್ವತ್ರವಾಗಿ ಇಡಿಯ ಭೂಮಿಯನ್ನು ಝಾಡಿಸಿದ, ಯಾವ ದೇಶವನ್ನೂ ಬಿಡದೇ ಅತಿ ತೀವ್ರವಾಗಿ ವ್ಯಾಪಿಸಿದ, ಬದುಕಿನ ಸ್ವಾತಂತ್ರ್ಯವನ್ನು ಕಸಿದ ಇಂಥ ಪರಿಸ್ಥಿತಿ ಬಹುಶಃ ಏಕಮೇವ ಇದ್ದಿರಬೇಕು.
ಈ ಸಂಕಟದ ಸಂದರ್ಭದಲ್ಲಿ ಮನುಷ್ಯನ ಅಂತಸ್ಸತ್ವ ಹೇಗೆ ಎದ್ದುನಿಂದು ಈ ಕಷ್ಟವನ್ನು ಎದುರಿಸಿದೆ, ಎದುರಿಸುತ್ತಿದೆ ಅನ್ನುವುದೂ ಕಾಣುತ್ತಿದೆ. ಕಣ್ಣಿಗೆ ಕಾಣದ ಸೂಕ್ಷ್ಮಜೀವಿ ಮನುಕುಲದ ಆರೋಗ್ಯಕ್ಕೆ ಮಾಡುತ್ತಿರುವ ಘಾಸಿಯನ್ನು ಎದುರಿಸುವುದರಲ್ಲಿ, ಅದರ ಪಾರ್ಶ್ವಪರಿಣಾಮಗಳನ್ನು ವಿಶ್ಲೇಷಿಸಿ ಹೊಸ ದಾರಿಗಳನ್ನು ಕಂಡುಹಿಡಿದು ಜಗದ ವ್ಯಾಪಾರವನ್ನು ಮುಂದೆ ಸಾಗಿಸುವಲ್ಲಿ ನರರು ತೋರುತ್ತಿರುವ ಧೈರ್ಯ, ಸಾಹಸ, ಜಾಣ್ಮೆ ಮೆಚ್ಚುವಂಥದ್ದು. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಜನಸಮುದಾಯ ಎಚ್ಚೆತ್ತಿದೆ. ತಾನು ಮಾಡುತ್ತಿದ್ದ ಕೆಲಸದ ಮಾರ್ಗಕ್ಕೆ ಅಡ್ಡಬಂದ ಕೂಡಲೇ ಹೊಸ ಮಾರ್ಗ ಹುಡುಕುವಲ್ಲಿ ಜನ ತೋರಿದ ಉತ್ಸಾಹ, ಮುನ್ನುಗ್ಗುವಿಕೆ, ಆರ್ಥಿಕ ಮುಗ್ಗಟ್ಟು, ಮಾರಣಾಂತಿಕ ರೋಗ ಎದುರಿಸಿದ ಬಗೆ ಅಪೂರ್ವವಾದದ್ದು.
ಆನಂದಿನಿ, ಈ ಕಾಲದಲ್ಲಿ ಜಗದುದ್ದಕ್ಕೂ ಶಿಕ್ಷಣ ಕ್ಷೇತ್ರ ಅನುಭವಿಸಿದ ದಿಗ್ಭ್ರಾಂತಿ ಅನತಿಕಾಲದಲ್ಲಿ ಅನ್ವೇಷಣ ಮಾರ್ಗ ಹಿಡಿದಿದ್ದನ್ನು ದಾಖಲಿಸುತ್ತಿದೆ. ವಾಸ್ತವ (virtual) ತರಗತಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿದ್ದದ್ದು ಪುಟ್ಟಮಕ್ಕಳ ಹಂತಕ್ಕೆ ಬಂದಿದೆ. ಶಾಲೆಯ ಕಲ್ಪನೆಯೂ ಬದಲಾಗಿ ಮನೆಮನೆಯಲ್ಲಿ ಶಾಲೆ ಎನ್ನುವ ವಿನೂತನ ಕಲ್ಪನೆಗೆ ಎಡೆಮಾಡಿಕೊಟ್ಟಿದೆ
ಈ ಸಂದರ್ಭದಲ್ಲಿ ನಮ್ಮ ಪೂರ್ಣಪ್ರಮತಿಯ ತಂಡ, ಶಿಕ್ಷಕವೃಂದ ಮೈಕೊಡವಿ ತನ್ನ ಸೀಮಿತ ತಾಂತ್ರಿಕ ಜ್ಞಾನವನ್ನು ಕೆಲವೇ ದಿನಗಳಲ್ಲಿ ವಿಸ್ತರಿಸಿಕೊಂಡಿತು. ದಿನನಿತ್ಯ ಹತ್ತಾರು ಸಭೆಗಳು, ವಿಚಾರ ವಿನಿಮಯ, ಸಂಶೋಧನೆ, ಹೊಸಪ್ರಯತ್ನ, ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡು ನೋಡ ನೋಡುತ್ತಿದ್ದಂತೆಯೇ, ಮಕ್ಕಳ ಕಲಿಕೆ ಸರಾಗವಾಗಿ ನಡೆಯುವಂತೆ ಹಿರಿಯ ಮಕ್ಕಳಿಗೆ, ಕಿರಿಯ ಮಕ್ಕಳಿಗೆ ಪೋಷಕರಿಗೆ ತರಗತಿ/ತರಬೇತಿ ಪ್ರಾರಂಭಿಸಿಯೇ ಬಿಟ್ಟಿತು. ರಜಾಕಾಲ ಅಧ್ಯಾಪಕರ ಅತ್ಯಂತ ಬಿಡುವಿಲ್ಲದ ಚಟುವಟಿಕೆಗಳ ಕಾಲವಾಯಿತು. ಆದರೆ ಅದರ ದಣಿವಿನ ಬದಲು ಹೊಸ ಸಾಧನೆಯ ಸಂತೃಪ್ತಿ ಅವರದಾಯಿತು. ಅವರೆಲ್ಲರೂ ಅಭಿನಂದನೀಯರು!
ಈ ಬದಲಾವಣೆಯ ಬೆರಗು, ಬವಣೆಗಳನ್ನು ಆನಂದಿನಿ ನಿಮ್ಮ ಮುಂದಿಡುತ್ತಿದೆ. ಈ ಪ್ರಯೋಗ, ಪ್ರಯತ್ನಗಳು ಇನ್ನೂ ಹಲವು ತಿಂಗಳುಗಳು ಮುಂದುವರೆಯುವ ಸೂಚನೆ ಇದೆ. ಅವುಗಳ ಅನುಭವವನ್ನೂ ಕಾಲಕಾಲಕ್ಕೆ ನಿಮ್ಮ ಮುಂದಿಡುತ್ತೇವೆ. ಹಾಗೆಯೇ ಕಳೆದ ವರ್ಷ ನಡೆದ ಸಂವತ್ಸರ ಸೂತ್ರ (Annual theme) ದ ಮಕ್ಕಳ ಸಂಶೋಧನಾ ಕಲಿಕಾ ವರದಿ, ಶಿಕ್ಷಕ ಮಕ್ಕಳ ಅನುಭವಗಳು, ಪೂರ್ಣಪ್ರಮತಿ ಸಾಮಾಜಿಕ ಕಾರ್ಯದ ವೈಖರಿ, ಇತರ ಚಟುವಟಿಕೆಗಳ ಚಿತ್ರಗಳು ನಿಮ್ಮ ಕೈ ಸೇರಿದೆ. ಪ್ರೀತಿಯಿಂದ ಓದಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಹಂಚಿಕೊಳ್ಳಿ.
(ಶಾಲೆಯ ವಿವಿಧ ವಿಭಾಗಗಳ ಮಾಸಿಕ ವರದಿ ವಿಭಾಗ)
ಈ ಬಾರಿಯ ಶೈಕ್ಷಣಿಕ ವರ್ಷವು ನಮ್ಮ ಪುಟ್ಟ ಮಕ್ಕಳ ಪೋಷಕರೊಂದಿಗಿನ ಆನ್ಲೈನ್ ಚರ್ಚೆಯ ಮೂಲಕ ಪ್ರಾರಂಭವಾಯಿತು. ಮೇ ತಿಂಗಳ ಕೊನೆಯ ವಾರದಲ್ಲಿ M3 ಮಕ್ಕಳಿಗೆ ಒಂದು ವಾರ, ಪಠ್ಯ ಪುನರಾವರ್ತನೆ ತರಗತಿಗಳನ್ನು ಆಯೋಜಿಸಲಾಗಿತ್ತು. ಮಕ್ಕಳೆಲ್ಲರೂ ಉತ್ಸಾಹದಿಂದ, ಸಕ್ರಿಯವಾಗಿ ತರಗತಿಯಲ್ಲಿ ಪಾಲ್ಗೊಂಡು ಎಲ್ಲ ನಿಗದಿತ ವಿಷಯಗಳನ್ನು ಅಧ್ಯಾಪಕರ ಸಹಾಯದಿಂದ ಪುನರಾವರ್ತನೆ ಮಾಡಿದರು. ಆನ್ಲೈನ್ ಘಟಿಕೋತ್ಸವದ ಮೂಲಕ ಅವರನ್ನು ಪ್ರಥಮ ಕಕ್ಷೆಗೆ ಬೀಳ್ಕೊಡಲಾಯಿತು.
ಮೇ 30 ಮತ್ತು 31 ನೇ ತಾರೀಖು ಪೋಷಕರಿಗೆ ಮಾರ್ಗಸೂಚಿ ಸಭೆಗಳನ್ನು ಏರ್ಪಾಡು ಮಾಡಲಾಗಿತ್ತು. ಎಲ್ಲರನ್ನು ಹರ್ಷದಿಂದ ಸ್ವಾಗತಿಸಿ ಈ ಬಾರಿಯ ಆನ್ಲೈನ್ ತರಗತಿಗಳ ಬಗ್ಗೆ ಮತ್ತು ಪಠ್ಯ ಯೋಜನೆಗಳ ಬಗ್ಗೆ, ಅದಕ್ಕೆ ಬೇಕಾಗಿರುವ ಪೂರ್ವತಯಾರಿಯ ಬಗ್ಗೆ ವಿವರಿಸಲಾಯಿತು.
ಜೂನ್ 1 ನೇ ತಾರೀಖಿನಿಂದ ನಾಲ್ಕು ದಿನ, ಪೋಷಕರಿಗೆ ವಿಶೇಷ ತರಬೇತಿಯನ್ನು ಆಯೋಜಿಸಲಾಗಿತ್ತು. ಉಮಾ ಅಕ್ಕ ಎಲ್ಲ ಪೋಷಕರಿಗೂ ಮಾಂಟೇಸರಿ ಶಿಕ್ಷಣ ಪದ್ಧತಿಯ ಬಗ್ಗೆ, ಮಗುವಿನ ಮನ:ಶಾಸ್ತ್ರದ ಬಗ್ಗೆ, ಮಗುವಿನ ಅವಶ್ಯಕತೆಗಳ ಬಗ್ಗೆ, ಮಕ್ಕಳ ಪೋಷಣೆಯ ಬಗ್ಗೆ, ಲಾಲನೆ ಪಾಲನೆಯ ಬಗ್ಗೆ, ಪೂರ್ಣಪ್ರಮತಿಯ ಇಂಟಿಗ್ರೇಟೆಡ್ ಲರ್ನಿಂಗ್ ಬಗ್ಗೆ ಮತ್ತು ಮಗುವನ್ನು ಸೂಕ್ಷ್ಮವಾಗಿ ಗಮನಿಸುವುದು ಹೇಗೆ ಎಂಬುದರ ಬಗ್ಗೆ ಪೋಷಕರಿಗೆ ತಿಳಿಸಿಕೊಟ್ಟರು. ಎಲ್ಲ ಪೋಷಕರು ಬಹಳ ಉತ್ಸಾಹದಿಂದ ತರಗತಿಗಳಲ್ಲಿ ಪಾಲ್ಗೊಂಡರು. ಅನೇಕ ವಿಧದ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕಂಡುಕೊಂಡರು. ಕೆಲವು ಪೋಷಕರು ಈ ತರಗತಿಯ ರೆಕಾರ್ಡಿಂಗ್ ಅನ್ನು ಈಮೇಲ್ ಮೂಲಕ ಕಳಿಸಿಕೊಡಿ ಎಂದೂ ಕೇಳಿಕೊಂಡರು.
ಜೂನ್ ಎರಡನೆಯ ವಾರ ಎಲ್ಲಾ ಮಕ್ಕಳಿಗೂ ಮತ್ತು ಪೋಷಕರಿಗೂ ಆನ್ಲೈನ್ ಮೂಲಕ ಬಹಳ ಕಡಿಮೆ ಅವಧಿಗೆ ಸೀಮಿತವಾಗಿ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆವು. ಆ ವಾರದಲ್ಲಾದ ವಿಶೇಷ ಅನುಭವಗಳನ್ನು ಮತ್ತು ಪೋಷಕರಿಂದ ಬಂದ ಸಲಹೆ-ಸೂಚನೆಗಳನ್ನು ಸಂಗ್ರಹಿಸಿ ಜೂನ್, ಮೂರನೆಯ ವಾರ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆವು. ಅದರ ಪ್ರಕಾರ ವಾರದಲ್ಲಿ ಎರಡು ದಿನ ವಿಷಯವಾರು ಶಿಕ್ಷಣ ಮತ್ತು ವಾರದಲ್ಲಿ ಮೂರು ದಿನ ಸಂಸ್ಕೃತ ತತ್ವದರ್ಶನ ಮತ್ತು ಪರಂಪರೆಯ ತರಬೇತಿ – ಇವೆಲ್ಲವೂ ಕೇವಲ ಪೋಷಕರಿಗಾಗಿ ಮಾಡುವುದು ಎಂದು ತೀರ್ಮಾನಿಸಿ ಅದಕ್ಕೆಂದೇ ವಿಶೇಷವಾದ ಪಠ್ಯ ಯೋಜನೆಗಳನ್ನು ಸಿದ್ಧಪಡಿಸಿಕೊಂಡೆವು.
ಇಲ್ಲಿ ಪುಟ್ಟಮಕ್ಕಳಿಗೆ ಆನ್ಲೈನ್ ತರಗತಿಗಳು ಮತ್ತು ಅವರಿಗೆ ಆಗಬಹುದಾದಂಥ ವಯೋಸಹಜ ತೊಂದರೆಗಳನ್ನು, ಮನಗಂಡು ಪೋಷಕರ ಮೂಲಕವೇ ಅವರಿಗೆ ವಿಷಯಗಳ ಕಲಿಕೆಯಾಗಬೇಕೆಂದು : ಪೋಷಕರಿಗೆ, ಅಧ್ಯಾಪಕರ ಜೊತೆ, ಮಾತುಕತೆಗಳ ಮೂಲಕ, ವಿಷಯಗಳ ಪ್ರಸ್ತುತಿಯ ಮೂಲಕ ಮಕ್ಕಳಿಗೆ ಯಾವ ವಿಷಯಗಳನ್ನು ಹೇಗೆ ಹೇಳಿಕೊಡಬೇಕು, ಯಾವ ಸಮಯದಲ್ಲಿ, ಎಷ್ಟು ಸಮಯದಲ್ಲಿ, ಎಂತಹ ಚಟುವಟಿಕೆಗಳನ್ನು ನೀಡಬಹುದು, ಎನ್ನುವ ವಿಚಾರಗಳನ್ನು ದಿನದಲ್ಲಿ ಅರ್ಧಗಂಟೆ ಚರ್ಚಿಸಿ, ತರಬೇತಿಯನ್ನು ನೀಡಲಾಗುತ್ತಿದೆ. ಇನ್ನು ಮುಂದೆಯೂ ಇದಕ್ಕೆ ಒಂದು ವಿಶೇಷ ರೂಪುರೇಷೆಯನ್ನು ನಮ್ಮ ಶಾಲೆಯ ತತ್ವದ ದೃಷ್ಟಿಯಿಂದ ನೀಡಲಾಗುತ್ತಿದೆ.
ಈ ಪುಟಾಣಿ ಮಕ್ಕಳಿಗೆ ಶಿಕ್ಷಣಕ್ಕೂ ಮೊದಲು, ಅದಕ್ಕೆ ಭದ್ರ ಬುನಾದಿಯಾಗುವಂಥ ಪೂರಕ ವಾತಾವರಣವನ್ನು ನೀಡಬೇಕು. ಉತ್ತಮ ಸಂಸ್ಕೃತಿ, ಸಂಸ್ಕಾರ, ಆಚರಣೆ, ನಡೆನುಡಿಗಳು, ಹುಟ್ಟಿನಿಂದ ಮಗುವಿಗೆ ನೋಡಲು, ಅನುಭವಿಸಲು ಅವಕಾಶವಾಗುವಂತಹ ಪರಿಸರ ಮನೆಮನೆಯಲ್ಲೂ ನಿರ್ಮಾಣವಾಗಬೇಕು. ಅದರಲ್ಲಿ ನಮ್ಮ ಆಧುನಿಕ ವಿಷಯವಾರು ಶಿಕ್ಷಣವು ಒಂದು ಸಣ್ಣ ಭಾಗ ಅಷ್ಟೇ. ಮನೆಮನೆಯಲ್ಲೂ ಈ ರೀತಿಯಾದ ಪೂರಕ ವಾತಾವರಣವು ಈ ಸಮಯದಲ್ಲಿ ಸೃಷ್ಟಿಯಾಗಬೇಕು. ತಂದೆ ತಾಯಿಯರ ಮೂಲಕವೇ ಮಕ್ಕಳಿಗೆ ಕಲಿಕೆಯ ನಿಜವಾದ ಆನಂದವು ದೊರೆಯುವಂತಾಗಬೇಕು. ಅದನ್ನು ತಿಳಿಸಿಕೊಡುವುದೇ ನಮ್ಮ ಮುಖ್ಯ ಉದ್ದೇಶ. ಹಾಗಾಗಿ ನಮ್ಮ, ಈ ಪೋಷಕರ ತರಬೇತಿಯಲ್ಲಿ ತಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ನಿಮ್ಮ ಮಕ್ಕಳ ಕಲಿಕೆಯನ್ನು ಸುಂದರವಾಗಿಸಿ, ಪ್ರೋತ್ಸಾಹಿಸಿ, ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ.
<
ನಮಸ್ಕಾರ,
ಶಾರ್ವರೀ ಸಂವತ್ಸರದ ಅಧ್ಯಯನ ಅಧ್ಯಾಪನದ ಈ ವರ್ಷಕ್ಕೆ ಸ್ವಾಗತ.ಶಾಲೆಯ ಪತ್ರಿಕೆಯಾದ ಅನಂದಿನೀ ಓದುಗ ಬಳಗಕ್ಕೂ ಹೃತ್ಪೂರ್ವಕ ಸ್ವಾಗತ. ಪೂರ್ಣಪ್ರಮತಿ ಶಾಲೆಯು ಮಕ್ಕಳ ಅಧ್ಯಯನ ಕೇಂದ್ರ. ಅಲ್ಲಿ ಪ್ರತೀ ವಿಭಾಗಕ್ಕೂ ಒಂದು ಒಂದು ಹೆಸರುಗಳನ್ನು ಸೂಚಿಸಲಾಗಿದೆ. ಆನಂದಕಂದ (ಪೂರ್ವಪ್ರಾಥಮಿಕ ವಿಭಾಗ) ಅರ್ಜುನ ಗಣ (ಮಾಧ್ಯಮಿಕ ವಿಭಾಗ) ವಾಮನ ಗಣ (ಪ್ರಾಥಮಿಕ ವಿಭಾಗ) ಭೀಮಸೇನ (ಪ್ರೌಢ ವಿಭಾಗ) ಹೀಗೆ ೧ ರಿಂದ ೩ ತರಗತಿಯ ವರೆಗೆ ಇರುವ ಮಕ್ಕಳ ವಿಭಾಗವನ್ನು ಶಾಲೆ ವಾಮನ ಗಣ ಎಂದು ಕರೆದಿದೆ. ಏಕೆಂದರೆ ಮಕ್ಕಳು ಹಿಂದಿನ ಕಾಲದಲ್ಲಿ ಗುರುಕುಲಕ್ಕೆ ಹೋಗುವ ವಯಸ್ಸಿದು. ಹಾಗಾಗಿ ಇದನ್ನು ವಾಮನಗಣ = ಬ್ರಹ್ಮಚರ್ಯಾವಸ್ಥೆ ಪ್ರಾರಂಭದ ಸಮಯ ಎನ್ನುವ ಭಾವದಲ್ಲಿ ವಾಮನ ವಿಭಾಗ ಎಂದು ಕರೆಯಲಾಗುತ್ತಿದೆ. ಗುರುಶಿಷ್ಯರ ಉಪಸತ್ತಿಯು ಜ್ಞಾನಕ್ಕೆ ಕಾರಣ. ಆ ಗುರುಶಿಷ್ಯರ ಸಂಬಂಧ ಎಂತಹದ್ದೇ ಪರಿಸ್ಥಿತಿಯಲ್ಲೂ ಮುಂದವರೆದುಕೊಂಡು ಹೋಗಬೇಕು ಗಂಗೆಯ ಹಾಗೇ, ಅವಿಚ್ಛಿನ್ನವಾಗಿ ಸಾಗಬೇಕು ಎನ್ನುವ ದೃಷ್ಟಿಯಿಂದ ಈ ಸಂದರ್ಭದಲ್ಲಿ ಸೃಷ್ಟಿಯಾದದ್ದೇ ಆನ್ ಲೈನ್ ತರಗತಿಗಳು.
ಈ ಆನ್ ಲೈನ್ ತರಗತಿಗಳು ಪ್ರಾರಂಭ ಆಗವುದು ಅಷ್ಟು ಸುಲಭದ ಮಾತಾಗಿರಲಿಲ್ಲ ಅದಕ್ಕಾಗಿ ನಮ್ಮ ಅಧ್ಯಾಪಕರ ತಂಡ ಮತ್ತು ತಂತ್ರಜ್ಞರ ತಂಡ ಮಾರ್ಚ, ಏಪ್ರಿಲ್, ಮೇ ತಿಂಗಳಿನಿಂದಲೇ ಪ್ರರಿಶ್ರಮಪಡಲು ಪ್ರಾರಂಭಿಸಿತು.ನಮ್ಮ ಅಧ್ಯಾಪಕ ತಂಡ ಈ ಆನ್ ಲೈನ್ ಶಿಕ್ಷಣವನ್ನು ಕರಗತ ಮಾಡಿಕೊಳ್ಳಲು ಮೇ ಪ್ರಾರಂಭಿಸಿದರು. ಎಲ್ಲಾ ಅಧ್ಯಾಪಕರು ಏಕಮನಸ್ಕರಾಗಿ ಮಕ್ಕಳಿಗೆ ಯಾವ ರೀತಿ ಮಾಡದರೆ ಒಳಿತು ಎಂದು ಚಿಂತಿಸುತ್ತಾ, ಪ್ರತೀ ತರಗತಿಗೆ ಯಾವ ರೀತಿ ನಮ್ಮ ತಯಾರಿ ಇರಬೇಕು ಎನ್ನುವದಿಲ್ಲಾ ಚಿಂತಿಸುತ್ತಾ ಈ ಆನ್ ಲೈನ್ ತರಗತಿಯನ್ನು ಆರಂಭಿಸಿದರು. ತರಗತಿಯಲ್ಲಿ ಮಕ್ಕಳನ್ನು ಹೆಚ್ಚು ಹೊತ್ತು ಸ್ಕ್ರೀನ್ ಮುಂದೆ ಕೂಡಿಸದ ಹಾಗೇ ಮಕ್ಕಳಿಗೆ ಕೆಲಸಕೊಡಲು ನಿರ್ಧಾರಮಾಡಿಕೊಂಡು ಈ ತರಗತಿಗಳನ್ನು ವಾಮನವಿಭಾಗವು ಆರಂಭಿಸಿತು.
ಈ ರೀತಿ ಶಾಲೆ ನಮ್ಮ ಮಕ್ಕಳಿಗೂ ಬೇಕು ಎಂದು ಹಲವು ಪೋಷಕರು ಬಂದಿದ್ದಾರೆ ಹಾಗಾಗಿ ಕೊಂಚ ಮಟ್ಟಿಗೆ ಮಕ್ಕಳ ಸಂಖ್ಯೆಯೂ ಜಾಸ್ತಿ ಆಗಿರುವ ಕಾರಣ ಈ ಬಾರಿ ಹೊಸ ಪರಿಸರ ಒಂದು ಪ್ರಾರಂಭವಾಯಿತು.ಒಟ್ಟಾರೆಯಾಗಿ ವಾಮನ ವಿಭಾಗದಲ್ಲಿ ೬ ಪರಿಸರಗಳು ಇವೆ.
ಎಂದು ಪ್ರತೀ ಪರಿಸರವೂ ಸಂಸ್ಕೃತ ಹಾಗೂ ಆಧುನಿಕ ವಿಷಯಗಳ ಅಧ್ಯಾಪಕರನ್ನು ಹೊಂದಿದೆ. ಹೀಗೆ ಎಲ್ಲಾ ಪರಿಸರಗಳು ಜೂನ್ ಮಾಸದಲ್ಲಿ ಪುನರಾವರ್ತನೆಗೆ ಹೆಚ್ಚು ಮಹತ್ವವನ್ನು ಕೊಟ್ಟು ಮಾಸಾಂತ್ಯದಲ್ಲಿ ಮೊದಲ ಕಥೆಯಾದ “ಸೃಷ್ಠಿಪ್ರಕ್ರಿಯೆ” ಬಗ್ಗೆ ತಿಳಿಸಿಕೊಟ್ಟು ನಂತರದ ದಿನಗಳಲ್ಲಿ ಮುಂದಿನ ವಿಷಯಗಳನ್ನು ತಿಳಿಸಿಕೊಡಲು ಸನ್ನದ್ಧರಾಗಿದ್ದೇವೆ. ಜುಲೈ ಮಾಸಕ್ಕೆ ಸ್ವಾಗತ ಬಯಸುತ್ತೇನೆ.
ಧನ್ಯವಾದಗಳು
First few weeks experience of ‘learning to teach’ from home
Arjuna (Upper elementary) stepped into the academic year 2020-21 on May 25th. With the view of getting children and parents acquainted to this new mode of online learning, we decided to offer just one 40 minute Tatvadarshana session in that week. Children love hearing to stories. More so when it is told by our Samskrutha adhyapakah.
In the first week of June, an extra 40 minute session was introduced dealing with regular academics. Once we got to know that children are getting familiar and reaping the benefits of this method, another 40 minute was added in the second week.
Keeping in mind that children have been away from school for close to three months, most part of June has been kept reserved for revising the concepts which have been learnt in the past year or so.
Teachers have been venturing for innovative methods to make their teaching interesting. Talking about technology, we did have our share of confusions and learnings. Google meet and Google classroom is being effectively used to post online videos, links and assignments. Children are also getting themselves accustomed to these new things.
As we are getting a feel of the level of understanding of our children, we are re designing our daily schedule to cater for children who are new to Arjuna and to those who need individual attention.
This month began with the celebration of Bhageerathi Jayanthi. This year it was unique, as we had to celebrate it online. The tenth standard children were given the responsibility of conducting the program. They, along with all the other classes came up with programs, which were very interesting and displayed their creativity.
Other than that, classes have been going on regularly for children of high school. In addition, the tenth children have been preparing for their FA1, which is currently on. We also conducted Vedavyas puja online for our SSLC batch of students. In spite of the uncertainty of the exams and the COVID, our children have been keeping their spirits high and concentrating on the revision. We must really appreciate the grit of our children. This is usually conducted in school and children receive their halltickets on this day. This year it was relayed live from Channapatna, Vikram anna conducted the puja, and children received the blessings of Lord Sreenivasa. SSLC batch of students also have been preparing rigorously with the help of their teachers and they have started their board exams yesterday.
Teachers are busy with their preparations for their online classes. It has been quite hectic in high school this month.
It is a dream come true for many who have worked hard towards starting PU program as Purnapramati has always had a vision of igniting the childs curiosity for higher learning. In this direction the entire PU team is working towards offering a holistic learning atmosphere. The aim is to equip children to lead a meaningful life in the modern world without relinquishing our culture.
Currently the team is working on Chapter-wise plan and worksheets (question banks) for NEET/CET are being prepared in all subjects. Lab: The requirements are listed and will be finalized in a week. Once the situation improves and we can open the physical space, we can proceed with setting up the facility. Shastra Parichaya: Dr. Tirumala acharya is working on it.
The program of work is ready in chemistry, biology and mathematics. Physics is being done by Achyutha anna. Following it up.
Our main focus is to introduce Purnapramati to students and parents on larger scale. In this direction we conducted a unique informative program – Udyoga Drishti, starting from 27th of May and concluding on 12th of June 2020. The benefits of this program was in many ways. It not only reached students and parents of Purnapramati, people from outside also showed keen interest. And we got two parents reaching us to know more about NIOS, and are enrolling their children to our PU program. We had 6 sessions of Tirumala Acharya on Shastra parichaya and various other speakes talking and interacting with children from various fields. This program was very well received by both parents and children. They got an idea about career choices. Udyoga Drishti will continue as a weekly program hereafter. Poornima Akka is in communication with parents.
Class ten students (out going) attended Bridge Course, Jnnanasetu conducted by Jnnanadhara team. Looking forward for all the tenth students to complete their exams safely. We are eagerly waiting for their arrival in our PU first batch.
ಆನಂದವನದ ತೃತೀಯ ವರ್ಷ! ಕೇಳಿದರೆ ಬಹಳ ಕುತೂಹಲವಾಗುತ್ತದೆ. ಓದು, ಬರಹ, ಹಸುಗಳ ಜೊತೆ ಆಟ, ಕೃಷಿಕೆಲಸ, ಚಿಳ್ಳೆ-ಪಿಳ್ಳೆಗಳ ಗಲಾಟೆ..ಇಂಥ ಆನಂದವನದ ಆನಂದದ ಬದುಕು ಹೇಗಿದೆ? ನೋಡೋಣ.
ಆನಂದವನಕ್ಕೆ ಈ ವರ್ಷದಲ್ಲಿ ಎಂಟು ಹೊಸ ಪುಟಾಣಿಗಳು ಬಂದಿದ್ದಾರೆ. ಅಂದರೆ ಈಗ ಮೂರನೆಯ ತರಗತಿಯಿಂದ ಪದವಿಪೂರ್ವ ತರಗತಿಯವರೆಗೂ ಮಕ್ಕಳು ಇದ್ದಾರೆ. ಪುಟಾಣಿಗಳ ಆಗಮನದಿಂದ ಆನಂದವನದ ಮೂಲೆ ಮೂಲೆಯಲ್ಲೂ ಸಂತೋಷ ತುಂಬಿ ತುಳುಕುತ್ತಿದೆ. ಅಧ್ಯಯನಯಕ್ಕೆಂದು ಏಕಾಂತವನ್ನು ಬಯಸಿ ಬಂದವರು, ಪ್ರಕೃತಿ ಮಧ್ಯೆ ಇರಬೇಕೆಂದು ಬಂದವರನ್ನೂ ಸೇರಿ ಈಗ ಇಡೀ ಆನಂದವನದಲ್ಲಿ ಸುಮಾರು ೨೫ – ೩೦ ಜನ ಇದ್ದೇವೆ.
ಎಲ್ಲರೂ ಬೆಳಗ್ಗೆ ಬ್ರಾಹ್ಮೀ ಮುಹೂರ್ತಕ್ಕೆ ಅಂದರೆ ೪.೦೦ ಗಂಟೆಗೆ ಎದ್ದು ಪ್ರಾತಃಸ್ತೋತ್ರ ಹೇಳಿ ಪಾಠಕ್ಕೆ ಕೂಡುತ್ತೇವೆ. ಐದು ಗಂಟೆಗಳ ಶಾಸ್ತ್ರಾಧ್ಯಯನ. ಲೌಕಿಕ ಅಧ್ಯಯನಕ್ಕೆ ಕೂಡ ಐದು ಗಂಟೆಯ ಸಮಯಾವಕಾಶ ನೀಡಲಾಗಿದೆ. ಆಟಕ್ಕೆ ೧.೩೦ ಗಂಟೆ. ಆಟದ ಸಮಯದಲ್ಲೇ ಹಸು ಮೇಯಿಸುವುದು, ಕೃಷಿ ಕೆಲಸ ಮಾಡುವುದು ಹೀಗೆ ನಮಗೆ ಆಸಕ್ತಿಯಿರುವ ಕೆಲಸಗಳನ್ನು ಮಾಡುತ್ತೇವೆ. ನಾವು ನಮಗಾಗಿ ಸ್ವಲ್ಪ ಭೂಮಿಯನ್ನು ಇಟ್ಟುಕೊಂಡಿದ್ದೇವೆ. ಅಲ್ಲಿ ಕಡಲೆ, ಕೊತ್ತಂಬರಿ, ಮೆಂತ್ಯೆ ಸೊಪ್ಪು, ತರಕಾರಿಗಳನ್ನು ಬೆಳೆಸುತ್ತಿದ್ದೇವೆ. ಎಲ್ಲಪ್ಪರೆಡ್ಡಿ ಅಣ್ಣ “ಶ್ರೀವನ” ಎಂದು ಹೇಳಿದಂತೆ ನಮಗೆ ದಿನ ಬೇಕಾದುದನ್ನು ಇಲ್ಲಿ ಬೆಳೆಸಿಕೊಳ್ಳುತ್ತಿದ್ದೇವೆ. ಹದಿನೈದು ದಿನಗಳಿಗೊಮ್ಮೆ ಕಾಡಿಗೆ ಚಾರಣ ಹೋಗಿ ಬರುತ್ತೇವೆ. ಪ್ರಾಣಿ, ಪಕ್ಷಿ, ಗಿಡ, ಮರಗಳ ಬಗ್ಗೆ ತಿಳಿಯುತ್ತಿದ್ದೇವೆ. ಇಲ್ಲಿ ಇರುವ ಎಲ್ಲಾ ಪಕ್ಷಿ, ಮರಗಳನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲಿ Soap, paste ಬಳಸುವುದಿಲ್ಲ. ಬದಲಾಗಿ ಸೀಗೇಕಾಯಿ ಪುಡಿ ಹಾಗೂ ಇಲ್ಲೇ ತಯಾರಿಸಿದ ಹಲ್ಲುಪುಡಿ, ತಟ್ಟೆ ತೊಳೆಯುವ ಪುಡಿಯನ್ನು ಬಳಸುತ್ತೇವೆ. ಮಧ್ಯಾಹ್ನ ಊಟದ ಸಮಯದಲ್ಲಿ ದಿನ್ನಕ್ಕೊಬ್ಬರಂತೆ ಕಲಿತ ಪಾಠದ ಪ್ರವಚನ ಮಾಡುತ್ತಾರೆ ಮತ್ತು ಹಾಡು ಹೇಳುತ್ತಾರೆ. ದೊಡ್ಡ ವಿದ್ಯಾರ್ಥಿಗಳು ಚಿಕ್ಕಮಕ್ಕಳಿಗೆ ವ್ಯಾಕರಣ, ಚಿಂತನೆ ಮಾಡಿಸುತ್ತಾರೆ. ಬೇರೆ ವಿಷಯದ ಅಧ್ಯಾಪಕರು ಬಂದು ಪಾಠ ಹೇಳಿಕೊಟ್ಟು ಸಂಜೆ ತೆರಳುತ್ತಾರೆ. ನಮ್ಮ ಶೌಚಾಲಯ ನಿಮಗೆ ಸ್ವಲ್ಪ ಹೊಸದಾಗಿರುತ್ತದೆ, ಆದರೆ ನಮಗೆ ಹೊಂದಾಣಿಕೆ ಆಗಿಬಿಟ್ಟಿತೆ. ರಾತ್ರಿ ಮಲಗುವಾಗ ಲಾಲಿ ಹಾಡು, ಕಥೆ ಕೇಳಿಕೊಂಡು ೯.೩೦ ಗೆ ಮಲಗುತ್ತೇವೆ. ಈಗ ಬಂದಿರುವ ಪುಟಾಣಿಗಳಂತು ತಮ್ಮ ಮನೆಗಳನ್ನೂ ಮರೆತು ಅಧ್ಯಯನ, ತರಹರಟೆ, ಕೋಳಿಜಗಳಗಳಲ್ಲಿ ಮೈಮರೆತಿದ್ದಾರೆ.
ಇನ್ನೊಂದು ವಿಶೇಷವೆಂದರೆ ವಾರಕ್ಕೆ ಒಮ್ಮೆ ಹಯಗ್ರೀವ ಸಭೆಯನ್ನು ನಡೆಸುತ್ತೇವೆ. ಆ ಸಭೆಯಲ್ಲಿ ಭಾಷಣ, ಪ್ರಸ್ತುತಿ, ಚರ್ಚೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಹಾಗೇ ಪಕ್ಷಕ್ಕೆ ಒಬ್ಬ ವಿದ್ಯಾರ್ಥಿ ಯಜಮಾನರಾಗಿರುತ್ತಾರೆ. ಅವರು ಆ ಪಕ್ಷದ ಎಲ್ಲಾ ತರಗತಿ, ಸಮಯಪಾಲನೆ, ಸ್ವಚ್ಛತೆ, ಪ್ರಾರ್ಥನೆ, ಸಭೆ ಇತ್ಯಾದಿ ಎಲ್ಲದರ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆಸಕ್ತಿ ಇರುವವರಿಗೆ ಕಲರಿಪಯಟ್ಟು, ಶಾಸ್ತ್ರೀಯ ಸಂಗೀತ, ಕೊಳಲು ಇತ್ಯಾದಿಗಳ ಪಾಠಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಲ್ಲರ ಹುಟ್ಟುಹಬ್ಬದವನ್ನೂ ಸಂಭ್ರಮದಿಂದ ಆಚರಿಸುತ್ತೇವೆ. ಎಲ್ಲರೂ ಅಣ್ಣ ತಮ್ಮಂದಿರ ಭಾವದಿಂದ ಸಂತೋಷದಿಂದ ಇದ್ದೇವೆ. ಈ ಆನಂದವನಕ್ಕೆ ನೀವೂ ಒಮ್ಮೆ ಭೇಟಿ ಕೊಟ್ಟರೆ ನಮ್ಮ ಖುಷಿಯನ್ನು ನಿಮ್ಮೊಡನೆಯೂ ಹಂಚಿಕೊಳ್ಳುತ್ತೇವೆ. ಆನಂದವನ ಹೀಗೆ ಆನಂದವಾಗಿ ನಲಿಯಲಿ.
ಸವಾಲುಗಳ ಬೆನ್ನು ಹತ್ತಿ !!
ಪೂರ್ಣಪ್ರಮತಿಯೇ ಒಂದು ಗರಡಿ ಮನೆ. ಹಲವರು ತಮ್ಮ ಹಲವು ಹುಡುಕಾಟಗಳಿಗೆ ಉತ್ತರ ಹುಡುಕುವ ವೇದಿಕೆ. ಪರಂಪರಾ ಬೀಜರಕ್ಷೆ ಮತ್ತು ಸ್ವಧರ್ಮ ಪಾಲನೆಯನ್ನು ಮಾಡುವ ಏಕಮನಸ್ಕರನ್ನು ಒಂದೆಡೆ ಸೆಳೆಯುವ ತಾಣವೇ ಪೂರ್ಣಪ್ರಮತಿ. ಈ ಒಂದು ಕುಟುಂಬ ಮಾದರಿಯ ವ್ಯವಸ್ಥೆಗೆ ಒಗ್ಗಿಕೊಳ್ಳಲು ಮೊದಲು ಮನಸ್ಸಿರಬೇಕು, ನಂತರ ಹಲವಾರು ಕೌಶಲಗಳನ್ನು ಸಂಪಾದಿಸಿಕೊಳ್ಳಬೇಕಾಗಿದೆ. ಈ ಕೆಲಸವನ್ನು ಪ್ರಶಿಕ್ಷಣ ವಿಭಾಗ ಮಾಡುತ್ತಿದೆ. ಯಾರೇ ಪೂರ್ಣಪ್ರಮತಿ ಕುಟುಂಬಕ್ಕೆ ಸೇರಲು ಬಂದಾಗ ಅವರಿಗೆ ಇಲ್ಲಿನ ಸಂಸ್ಕೃತಿ, ಚಿಂತನೆ, ಸಂಪ್ರದಾಯಗಳ ಪರಿಚಯ ಮಾಡಿಸಿ ಅವರನ್ನು ಒಂದಾಗಿಸಿಕೊಳ್ಳುವ ಪ್ರಕ್ರಿಯೆ. ನಂತರ ಅವರು ತಮ್ಮ ಅಭಿರುಚಿ, ಸಾಮರ್ಥ್ಯಕ್ಕೆ ತಕ್ಕಂತೆ ಬೇರೆ ಬೇರೆ ವಿಭಾಗಗಳಲ್ಲಿ ತಮ್ಮ ಕೊಡುಗೆಯನ್ನು ಕೊಡಬಹುದು. ಅಧ್ಯಾಪನಕ್ಕಾದರೆ ಅಧ್ಯಾಪಕ ತರಬೇತಿ, ಕಛೇರಿ ಕೆಲಸಗಳಿಗಾದರೆ ಅದಕ್ಕೆ ಸಂಬಂಧಪಟ್ಟ ತರಬೇತಿ, ಹೀಗೆ ಮುಂದಿನ ಹಂತಗಳಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುವುದು.
ಪ್ರಶಿಕ್ಷಣ ವಿಭಾಗ ಪ್ರಾರಂಭವಾಗಿ ಮೂರು ವರ್ಷಗಳಾಗಿವೆ. ನಮ್ಮಲ್ಲೆ “ಪೂರ್ಣಪ್ರಮತಿ ಗುರುಕುಲ ಶಿಕ್ಷಣ” ತರಬೇತಿಯನ್ನು ಪಡೆದ ಅಧ್ಯಾಪಕರು ಇಂದು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಗಣಿತ-ವಿಜ್ಞಾನ ಇತ್ಯಾದಿ ವಿಷಯಗಳಷ್ಟೆ ಅಲ್ಲದೆ ಹಲವಾರು ಕಲಿಕಾಪದ್ಧತಿಗಳ ತುಲನಾತ್ಮಕ ಅಧ್ಯಯನ, ಪ್ರಯೋಗಗಳನ್ನು ಮಾಡಲಾಗುವುದು. ಪ್ರಶಿಕ್ಷಣ ವಿಭಾಗದಲ್ಲಿ ಇಬ್ಬರೇ ಇರುವುದು, ಒಬ್ಬರು ಹಿರಿಯ ವಿದ್ಯಾರ್ಥಿಗಳು ಮತ್ತೊಬ್ಬರು ಕಿರಿಯ ವಿದ್ಯಾರ್ಥಿಗಳು. ಅಂದರೆ ಎಲ್ಲರನ್ನೂ ವಿದ್ಯಾರ್ಥಿಗಳಾಗಿಸಿ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಲು ಬೇಕಾದ ಮನಸ್ಥಿತಿಗೆ ತರುವುದು ನಮ್ಮ ಪ್ರಯತ್ನ. ಪ್ರತಿಯೊಬ್ಬರು ಒಂದೊಂದು ಸಾಮರ್ಥ್ಯ, ಪ್ರತಿಭೆಗಳನ್ನು ಹೊತ್ತು ತಂದಿರುತ್ತಾರೆ. ಅದನ್ನು ಬೆಳೆಸಿ, ಇತರರಿಗೂ ಹಂಚುವಂತೆ ತಯಾರು ಮಾಡುವುದು ನಮ್ಮ ಪ್ರಶಿಕ್ಷಣ ತಂಡ. ಅನೇಕ ಗೃಹಿಣಿಯರು, ತಾಯಂದಿರ ತಾವೂ ಶಿಕ್ಷಕರಾಗುವ ಕನಸ್ಸನ್ನು ಹೊತ್ತು ಬರುತ್ತಾರೆ. ಅವರಿಗೆ ಇದು ಪರಿಪೂರ್ಣ ಕಲಿಕೆಯ ತಾಣ. ನಮ್ಮ ಮಾರ್ಗದರ್ಶನಕ್ಕೆ ಅನೇಕ ಅನುಭವಸ್ಥರು, ಶಿಕ್ಷಣ-ಕಲೆ-ಶಾಸ್ತ್ರೀಯ ಇತ್ಯಾದಿ ಕ್ಷೇತ್ರಗಳ ತಜ್ಞರ ನೇರ ಸಂಪರ್ಕವಿದೆ. ಇದು ನಿಜಕ್ಕೂ ಭಾಗ್ಯವೇ ಸರಿ. ಅವರೆಲ್ಲರ ಮಾರ್ಗದರ್ಶದಲ್ಲಿ ಎಲ್ಲ ವಿದ್ಯಾರ್ಥಿಗಳಾಗಿ ಕಲಿಯುತ್ತಾ-ಕಲಿಸುತ್ತಾ ಅಧ್ಯಯನ ಕೇಂದ್ರವಾಗಿ ಪೂರ್ಣಪ್ರಮತಿ ಬೆಳೆಯುತ್ತಿದೆ.
ಪ್ರಸ್ತುತ ಇರುವ ಸವಾಲುಗಳೆಂದರೆ ಅಧ್ಯಯನ ಮತ್ತು ಅಧ್ಯಾಪನವನ್ನು ಗಂಭೀರವಾಗಿ ಪರಿಗಣಿಸಿ ದೇಶಕಟ್ಟುವ ಕೆಲಸಕ್ಕೆ ಎಷ್ಟು ಜನ ಸಿದ್ಧರಿದ್ದಾರೆ ಎಂಬುವವರನ್ನು ಹುಡುಕಿ ಅವರನ್ನು ಒಂದೆಡೆ ಸೇರಿಸುವುದು. ನಿಮಗೆ ತಿಳಿದಂತೆ ಇದೊಂದು ಸಮುದಾಯ ಕಟ್ಟುವ ಕೆಲಸ. ಉನ್ನತವಾದ ಧ್ಯೇಯ, ಆದರ್ಶ, ತ್ಯಾಗಗಳಿದ್ದರೆ ಮಾತ್ರ ದೇಶ ಸೇವೆಗೆ ನಿಲ್ಲಲು ಸಾಧ್ಯ. ಈ ಸವಾಲಿನ ಬೆನ್ನು ಹತ್ತಿ ಹೊರಟಾಗ ಕಂಡಿದ್ದು “ಇಂದಿಗೂ ಅನೇಕರಿಗೆ ತಮ್ಮ ಜೀವನದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕೆಂಬ ಸರಿಯಾದ ಮಾರ್ಗದರ್ಶನ ಸಿಕ್ಕಿಲ್ಲ, ಯಾವುದೋ ಸೆಳೆತ ಎಳೆದುಕೊಂಡು ಬೇರೆಲ್ಲೋ ಕರೆದುಕೊಂಡು ಹೋಗಿರುತ್ತದೆ. ಯಾವುದಕ್ಕೋ ಪ್ರಾಮುಖ್ಯತೆ ಕೊಟ್ಟು, ಅದರಲ್ಲೇ ಸಮಯ-ಸಾಮರ್ಥ್ಯವನ್ನು ತೊಡಗಿಸಿ ಜೀವನದ ಕಾಲು-ಅರ್ಧ ಭಾಗ ಮುಗಿದೇ ಹೋಗಿರುತ್ತದೆ”.
ನಮ್ಮಲ್ಲಿ ಹೊಸ ಸದಸ್ಯರಿಗೆ “ದಶಪ್ರಮತಿ” ಎಂಬ ಒಂದು ಪ್ರವೇಶ ಪ್ರಕ್ರಿಯೆ ಮಾಡಲಾಗುವುದು. ಅದರಲ್ಲಿನ ಆತ್ಮಾವಲೋಕನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಎಷ್ಟೋ ಜನ ತಮಗಾಗಿ ಸ್ವಲ್ಪ ಕೊಡಲು ಸಾಧ್ಯವಾಯಿತು, ಖುಷಿ ಆಯಿತು ಎಂದು ತಿಳಿಸುತ್ತಾರೆ. ದಿನಕ್ಕೆ ಹಲವರ ಬಳಿ ಮಾತನಾಡುತ್ತಾ, ಅವರ ಬರವಣಿಗೆಗಳನ್ನು ಓದುತ್ತಾ ಪೂರ್ಣಪ್ರಮತಿಯ ಅಸ್ತಿತ್ವ ಏಕೆ ಎಂಬುದು ಇನ್ನೂ ಮನದಟ್ಟಾಗುತ್ತಿದೆ ಮತ್ತು ಪ್ರಶಿಕ್ಷಣದ ಅಗತ್ಯತೆ ಕಂಡುಬರುತ್ತಿದೆ. ಮನಸ್ಸನ್ನುಗಳನ್ನು ತಯಾರು ಮಾಡುವ ಗರಡಿ ಮನೆಯಾಗಿ ಬೆಳೆಯಬೇಕಿದೆ ಈ ಪ್ರಶಿಕ್ಷಣ ತಂಡ ಮತ್ತು ಪೂರ್ಣಪ್ರಮತಿ.
(ಅಧ್ಯಾಪಕರ / ಪೋಷಕರ ಸ್ವಾಧ್ಯಾಯ ಹಂಚಿಕೆ ವಿಭಾಗ)
It was early March. COVID-19 was making its way into India. It was the last week before the X children would be given holidays for the final preparations and VII were writing their preparatory exams when we heard that schools had been given the order to close down due to the Pandemic. Also everyone was expecting a lockdown. How do we go about teaching? What to do about exams for 7th and 8th? How will we start 10th portions for them? All these thoughts ran through my mind. Immediately I thought that the best solution would be online teaching. For that, I had to create a Zoom id and get ready with a white board and marker pens. I immediately went to a nearby stationary shop and got the required things and was all set to start my online classes.
Initially, I was worried about how it would work as we cannot be sure that the children are concentrating. How should we improvise on our teaching so that children can be hooked? I explored different aspects of it and found some good videos which I could use to enhance the classes. Along with direct online class, I was supplementing with relevant videos. After some research I found that the Flip classroom system would probably work well. So I decided to try it. It was working well. In flip classroom children had to be given some material or video that they viewed or read before they came to class. Then the topic would be taken further in the class through problem solving or discussions. So we as teachers had to find relevant material for them. So that was the beginning of our classes which, started on Zoom.
Initially, in zoom children started using private chat and that was a problem. But now we have moved to Google meet where there is no option to chat privately. So I can now reprimand them if they indulge in unnecessary chatting during the class.
One good thing that I experienced was that children who feel shy to ask questions and doubts during regular face to face class are opening up to me through email. I ask all children to ask doubts either in the class or through email and some of the quiet ones are coming to me through email. This is something which I felt was nice and feel that for such children, online mode is good. They are able to reach out to their teachers without any fear of being ridiculed by their peers. I am also able to get good feedback on my classes from the children regarding the speed in which I am teaching a particular topic. So based on their feedback, I am able to go slow or fast. Of course, it is very difficult to keep track of our children’s work and ensure that they are completing work on time. I am conducting a small quiz after each concept is taught so that I know that they have understood it. I am also trying to give more assignments which interest them and which will motivate them to explore and present their ideas. They are also presenting their topics which they have researched, through seminars in the class. I am pleased to see that the children have taken this seriously and doing a good amount of research before presenting them.
Recently, we decided to use Google classrooms for our school. So we created classrooms for each subject where the teacher can create and post assignments and quizzes. We can even schedule it and they can turn in their assignments in the classroom itself. This will save a lot of clutter in our email. One thing I found on enquiry was that we can use software called Xodo to correct our papers. We conducted formative assessments for our children and used Xodo to correct it. It has a red pen and we can correct it just like we are physically correcting our papers. It was fun using that and I was amazed to think that such things existed.
Overall it has been a challenge for me to take up online teaching as too much of screen time affects us both mentally and physically. On some of the days, I am really drained out and feel that I can’t take it anymore. Just waiting for the day when we all will be safely backed in our classes laughing and talking with the children in front of us. May the Paramatma be pleased with all of us to enable us to teach our children face to face at the earliest?
(Annual theme related study)
About – River Narmada
Purpose – Purnapramati Dashamanotsava 2019-20.
Theme – Jalam Jeevanamuchyate.
Index
Who were all involved
Introduction –
Narmada or Reva is one of the 3 rivers flowing westwards and is the third longest river of India, after Ganges and Godavari. She has also shown her presence in history where kings have ruled and fought on her banks. Her waters have been regarded as the cleanest and purest. From Puranas to Parikrama, people have regarded her as the holy river and from Ramayana to modern musical albums, many poets and musicians have sung her glory. She flows from Amarkantak mountains to Arabian sea at Baruch, for a distance of 1310 Km, carving beautiful valleys and watering forest terrains while turning many places on either side of her banks into holy places. She has been a lifeline for many farmers and fishermen whose occupations and livelihood are entirely dependent on her. She has always been a part of culture for everyone who lived on her banks, from tribes to modern tourists.
This is a small effort from a group of Purnapramati children to understand rivers as a part of our exploration about water.
Narmada in Puranas
The other name of Narmada is Rewa. Skanda Purana has a mention about the birth of river Narmada in Rewa Khanda. Markahandeya maharishi says, river Narmada is the holiest river and the very glimpse of her would liberate one from all worldly sins while talking about the greatness of river Narmada. Mentioning about the birth of the river, it is said that she descended on the earth when king Pururava, by the plea of sages did a tapassu and pleased lord Shiva to send river Narmada to earth. Lord Shiva directed her to descend on the earth to which the holy river accepted and asked for a strong base who could bear her fall. Prayanka parvata, the son of Vindhya mountains were instructed by lord Shiva to take her fall and thus she came down liberating the people on the earth. While Skanda Purana says, she was married to Prukutsu (one of the 6 Chakravartis) who was an ocean in his previous birth, the other scriptures mention that she is a maiden i.e she remained a kanya forever as she was cheated by her husband to be.
The other legend is that two rivers (nada and nadi ) Sone and Narmada were born by the two tear drops of Brahma. Narmada was about to marry Sone but he got attracted to the other river Johila and so disappointed Narmada flows towards west while the other two rivers meet each other and flow towards the east.
There is another legend which says, she was born from lord Shiva’s perspiration when he performed profound thandava. She was so beautiful that all devas started liking her and got delighted to see her and hence Shiva named her NARMADA which means the one who delights all.
There is another mention about the greatness of this river in Skanda Purana, where Manu learning about the holiness of this river from Vasishta, did yajna on the banks of river Narmada and prayed for her for the liberation of the people on the earth. Narmada, pleased by his work agreed that riven Ganga would descend on the earth in the future.
These are some of the references about River Narmada. Narmada makes her appearance in our epics too. In Ramayana, it says Karthiveeryarjuna fought with Ravana on the banks of river Narmada.
Puranic literature on river Narmada – Many rishis and Acharyas have composed many shlokas and stotras on mata Narmada. Narmadashtaka by Adi Shankaracharya is one of the famous hymns of this river. She has been regarded as one of the holiest of seven rivers of India.
NarmadAshtakam is in Sanskrit. It is a very beautiful creation of Adi Shankaracharya. It is a praise of Goddess Narmada.
For hundreds of years Narmada has been silently guiding the Rushies, Munis, Yogis and people in their spiritual development through her serene flow. She not only provides life to the people on the bank but also to millions of aquatic and terrestrial species by building a conducive ecosystem for their survival. Hence our culture regards her not only as a mere river who helps in the survival of humans but as Mata the mother for all the creatures.
Narmade in our Samskruta kavyas-
Our ancient poets never missed admiring or portraying the beauty of nature in their kavyas. In Kalidasa’s Meghadhoota kavya, man sends his message to his beloved through clouds. He guides the cloud to travel in the direction to reach her. According to the research done by Dr. S.V. Bhave, Kalidasa wrote this kavya in Amarkantak where Narmada takes birth, inspired by the beauty of that place. He talks about the course of narmada through Amarkantak to Omkareshwar. He mentions that, in one place the river has spiraled herself like the symbol on the hood of spectacled cobra, which is only visible at a height of 14-15 thousands feet. Which has been verified by Dr. S.V. Bhave.
Historic aspects of river Narmada – When it comes to history, we broke it into different phases.
Ancient history – There is a mention of many ancient kingdoms being existed on the banks of this river. Mahishmati, Hoshangabad and Jabalpur are a few to mention.
Mahishmati –Many Sanskrit texts say that the haihaya ruler kartaviryaarjuna ruled over mahishmati, a kingdom established on the banks of river Narmada. Many texts mention that, It was also the most important part of the southern Avanti kingdom . Mahishmati served as the capital of Anupa kingdom too. Several current cities in MadhyaPradesh are claimed to be a part of Mahishmati . These cities include Mandhata ( now known as Omkareshwar). Mahishmati was also Ruled by the Paramaras of Malwa , Ahirs of Asirgarh and later , the Malwa Sultanate of Mandu ‘Sultan Bahadur Shah conquered Mahishmati .
Hoshangabad – Malwa ruler Hoshang Shah named a city after him as Hoshangabad in 1406. He built this city to find a hiding place against native Gonda tribes.
Jabalpur – In the ancient era, the city of Jabalpur was known as the kingdom of Tripuri, ruled by the Kalachuri dynasty.
British like any other place colonised the Narmada river basin and the holy river was considered more as a resource during this era.
Post independence – During 1950, when Sardar Vallabhai Patel united the states, three states – Madhya Pradesh, Maharashtra and Gujarat were formed on the banks of river Narmada. According to the current demographics, this river flows through these three states.
Narmada Bacho movement– After independence, under the new government, many small and big dam projects were sanctioned to effectively use the water in the development of the economy. This was opposed by many environmentalists like Narmada Patkar, Baba Amte, who started a movement ‘ Narmada Bacho ANdolan’ to stop building of these dams, which affected the environment and the people equally. She fought for the rebaliation of the people who lost their land for this project.
Geographical aspects – River Narmada is seen appearing in the picturesque forest of Amarkantak (which is at an elevation of 3,500 feet), situated in the Maikala mountain range, in the border of Madhya Pradesh and Chhattisgarh state. She flows through Mandala mountains with a lot of twists, and turns before entering the city of Jabalpur where she plunges to form Dhuandhar waterfall. From there, she turns Southwest and forms a rift valley between Vindhya and Mandata mountains very well known as Narmada valley. While building her course, she sculpts the marbles at the Marble Rock Gorge. She forms an oxbow in the shape of ‘ OM’ in Omkareshwar temple which is one of the 12 Jyothirlingas. Turning her course to west and flowing through the states of Maharashtra and Gujarat, she descends down from Baruch and drains into the gulf of Khambhat through an estuary of 21km wide and drains into Arabian ocean, completing her 1300 km journey and being one of the only three rivers flowing westward. Needless to say she builds various plains through her course like Hoshangabad and Mahishmati planes while many tributaries get united with her along her journey.
Tributaries – Narmada has more than 20 smaller rivers joining her during her course.
Hiran, Tendoni, Barna, Kolar, Man, Uri, Hatni, Orsang, Burhner, Banjar, Sher, Shakkar, Dudhi, Tawa, Ganjal, Chhota Tawa, Kundi, Goi, Karjan are a few to name.
Pilgrimages on the bank of river – People consider this river as holy as Ganga and much ancient than Ganga and this has many sacred centres on its bank.
middle reach of the river – all named after Shiva. This is the place where the stone worshipped as Shiva lingam is available.
Cultures through her course – Not only she builds her geographical course but cultural course too, throughout her journey. Also many religious practices and festivals are celebrated because of her presence. Narmada River is also worshipped as the mother goddess by many. The importance of the Narmada is affirmed by the fact that the pilgrims perform a holy pilgrimage or a „Parikrama‟ of the river.
Narmada Parikrama –Many people and devotees of Narmada perform Parikrama at least once in their lifetime to have a divine experience of spirituality present on the banks of Narmada mata. The parikrama starts just after the end of ChaturMas mainly from or after Tripuri Purnima. Many devotees do this parikrama of about 3500K.m. bare footed. This is the only river which is circumambulated around throughout the course and the sacred circumambulation around the holy course of this maiden river is called Narmada Parikrama. Every year thousands of devotees undertake this spiritual journey, starting from Amarkantak. This yatra involves taking dips at various places, visits to temples, ghats, shrines and villages. This journey also becomes adventurous, while passing through many hills, dense forests, gorges, ravines, rocky patches, caves, plateaus and plains. They carry water from Amarkantak to Barauch and from Barouch to Amarkantak. The following map shows the path of Narmada Parikrama.
Narmada Jayanti – is a sacred festival celebrated to mark the birthday of river Narmada. It is celebrated with spectacular extravagance in Amarkantak and also in the bathing ghats of Hoshangabad. This great festival is observed during the month of February. The celebrations at Amarkantak continue through the day. At Hoshangabad, the devotees float traditional oil lamps into the waters of the Narmada, from the sprawling bathing ghats.
Culture on the bank – People who live along the course on the banks are very much connected to this river, spiritually, economically and culturally. Their life and lifestyle is dependent on the course of this river, like Gonda tribes, who sing folklores about this river. May it be their food, festivals, dressing or literature, people living on the banks have a relationship with the river. Many people living on her banks call themselves as children of Devi Narmada.
Tribal culture – Gonda and Baiga are the two main tribal groups who live on the banks of this river. They have retained their nativity upto certain extent, in spite of the invasion of modern culture. Their occupation is very much connected to the river and her flow while they call themselves as her children. They have made their livelihood through the occupations like agriculture, fishing, boating etc, since these places are most visited by tourists and pilgrimages, it has given birth to occupations like priests, who preach the puranic significance of this river, guides who sing the glory of river through their folklores, traders who sell locally available stuff as souvenirs and drivers.
Unfortunately sand mining and marble trading are the two occupations due to which the river is being exploited.
Biodiversity – Tough we referred to many books, we could not find any species specific to this river however, she nests many aquatic animals in her lap while creating forests through her course, she protects and helps in the survival of many wild animals and birds.
Sardar sarovar dam – This is a controversial dam built over this river near Gujarat, which was opposed by many environmentalists. Dedicated to one of India’s founding fathers, and the country’s first Deputy Prime Minister, Sardar Vallabhbhai Patel, the Statue of Unity, stands tall atop Sadhu Bet island on the Narmada facing the Sardar Sarovar Dam downstream in Kevadiya colony, about a 100 kilometres southeast of Vadodara.
Narmada in modern literature – There are many songs and poetry describing and glorifying her beauty by many modern poets. Many have sung songs on her and have become famous in those regions.
“Maa Rewatharopaaninirmal…. Maa Rewatharopaaninirmal khalkhalbehtojaaye Amarkanth se nikli O rewa jannjannkarirayothaarisewa sewa se sab pawemewa, asovedpuranbatayo re” “Maa Rewa”
this song was sung by the Indian Music Group called Indian Ocean. In its literal translation and meaning, the song is addressed to the Maa Rewa or Maa Narmada. It says that „the water of the river Narmada is extremely pure and flows constantly. Ever since You originated from Amarkantak, everyone has been worshipping You without exception. Every person who worships You, finds release from their troubles and this fact has been stated in the Puranas.‟
Conclusion – As a part of our theme Jalam Jeevanamuchyate, we as a group did a lot of reading and learnt a few of the above things about river Narmada. Narmada is one of the three rivers flowing westward. She has many stories and has been mentioned in Puranas too. NarmadAshtakam is a very beautiful creation of Adi Shankaracharya, the praise of Goddess Narmada. She starts her journey in Amarkantak in Madhya pradesh and flows through Maharashtra and Gujarat states to join Arabian sea in Baruch. Many books mention the famous rulers and kingdoms that flourished on her banks during the ancient times. Lives People living on her banks are very much connected to her culturally and economically. Narmada parikrama is a religious practice undertaken by thousands of devotees every year. Also many festivals and religious practices along her course are connected to her flow. For hundreds of years Narmada has been helping Rushies, Munies, Yogis and people for their spiritual development. She also provides life to the people on the bank and also to many fishes, crocodiles and other creatures living in the water and to birds also living in the forests. She is not merely a river for the people in India but really she is a mother to us.
How did we go about this project – First thing was to give the presentations about the river, its birth, its parts, sediments, ect. to the children involved in this project.
Once the river was assigned to us, we collected a few books like Bharatada nadigalu and rivers of India, we started reading about river Narmada from both the books and discussed about what we read.
I also spoke to Pranav Anna and got many spiritual facts about this river. He suggested depicting Bhakti predominantly through this theme. He said, once the feeling of Bhakti is generated then one’s life starts getting interwoven with the river. He explained about Narmadashtaka and Narmada parikrama.
We also read a few pdf documents available online like Narmada hara by flames and the ecology of Narmada. We also read reva Khanda of Skanda purana. We did our reading for a longer period and only after each of us understood all the things we read about, we took one topic each to depict our learning in various ways like write ups, charts, drawings, mind maps, ect. Children worked with one topic each though, all of them were able to talk about all the things we had learnt about.
Nishanth took a study on tributaries of this river. He made a map of her course and listed her tributaries and also the different names she is being called because of various reasons.
Satvik – He did a study on how the states are divided post independence and how the map of India got transformed.
Samhita – She did research on geographical aspects of the river and depicted her learning through a chart.
Tarini – Made a chart listing all the religious places on the bank of Narmada and about Narmada Parikrama.
Samyajna – She drew a few pictures to depict the story of Narmada in puranas.
Pranava – He showed our learnings about occupation of the people and about Sardar Sarovar dam through his models.
Dhruva – He presented our learnings about historic aspects of this river through a power point presentation.
Uma – I am trying to culminate all our learnings in this document.
We tried to read about the crops grown on the bank of this river, a few articles suggested that the crops are chosen based on the commercial needs and the agriculture in the current day is regarding the river only as a resource for the commercial needs and hence we did not dig deep into what is grown on the banks. It is a different topic altogether, which needs detailed research before writing anything about it.
On the day of Utsava, many people visited us and all the children were ready to explain anything about our learnings about river Narmada.
Children had also designed a few puzzles and questions for the guests. They had hidden a few words related to the theme on the board and challenged the visitors to find the same.
Guests – Ellappa Reddy sir visited us and he explained to children about how the dam built over the river is encouraging the farmers to grow only sugarcane and in turn the liquor industry which uses the molasses of the sugarcane have flourished. Our children understood this immediately and started discussing this with all others who visited us. Naveen Kalgundi, Ellappa Reddy’s friend and a few more people visited our display set up.
We got around 10 working days to do this after getting the clarity. Children did a great job by learning about this while all of us felt that what we did during this short span of time is very less and there are many more things to learn and research about, like we know the food habits, dressing and other practices of this region but children wanted to do a research on how these are connected to the river also we could not do much work on biodiversity.
Reference sources –
Few pictures about how we represented our learnings in Utsava.
ಮುನ್ನುಡಿ
ಈ ಲೇಖನಕ್ಕೆ ಸ್ಫೂರ್ತಿ ರವೀಂದ್ರ ಶರ್ಮ ಜಿ ಮತ್ತು ಸಾನಂದ ಸ್ವಾಮಿಜಿ.
ರವೀಂದ್ರರ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಈ ಸಾಲುಗಳು ನನ್ನನ್ನು ಬಹಳ ಅರಳಿಸಿತ್ತು.
“ರವೀಂದ್ರ ಶರ್ಮಾ ಅವರ ಬಾಲ್ಯವು ಈ ಹಾಡುಗಳ ಸ್ಮರಣೆಯಿಂದ ತುಂಬಿದೆ. ಅದಿಲಾಬಾದ್ ಆಗ ಒಂದು ಸಣ್ಣ ಪೇಟೆ. ಬೆರಳೆಣಿಕೆಯಷ್ಟು ಜನ ಮತ್ತು ಅಲ್ಲಿ-ಇಲ್ಲಿ ಸದ್ದು ಮಾಡುವ ಕೆಲವೇ ಕೆಲವು ವಿದ್ಯುತ್ ಉಪಕರಣಗಳು. ರಾತ್ರಿಗಳಂತೂ ನೀರವ ಕತ್ತಲು. ಪುಟ್ಟ ರವೀಂದ್ರ ಮಲಗಿದಂತೆ ನಟಿಸುತ್ತಾ ಕಾಯುತ್ತಿರುತ್ತಿದ್ದ. ಪ್ರಕೃತಿಯಲ್ಲಿ ಎಲ್ಲವೂ ನಿಶಬ್ದವಾದ ಮೇಲೆ ದೂರದಲ್ಲೊಂದು ’ಡಕ್ ಡಕ್ ಡಕ್ ಡಕ್…’ ಎಂದು ಡಮರುವಿನ ಸದ್ದು ಕೇಳುತ್ತಿತ್ತು. ಮಸಣದ ದಿಕ್ಕಿನಿಂದ ಯಾರೊ ಒಬ್ಬರು ಬುದುಬುದುಕಲೋಡು ಕಾಣಿಸಿಕೊಂಡು ತನ್ನ ಡಮರುವಿನ ಶಬ್ದದೊಂದಿಗೆ ರುದ್ರಭೂಮಿ ರಸ್ತೆಯ ಕೊನೆಯಲ್ಲಿ ಮತ್ತೆ ಕಾಣದಾಗುತ್ತಾರೆ. ಪುಟ್ಟ ಹುಡುಗ ಬುದುಬುದುಕಲೋಡು ಪೇಟೆಯಲ್ಲೆಲ್ಲಾ ಸುತ್ತಿ ದೆವ್ವಗಳಿಗೆ, ನಿಶಾಚರಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆಂದು ತಿಳಿದ. ಆಗ ಸುಮಾರು ಬೆಳಗಿನ ಜಾವ ಮೂರು ಘಂಟೆ. ಸ್ವಲ್ಪ ಸಮಯದ ನಂತರ ಗೊಸಮೊಲು ದಂಪತಿಗಳು ಏಕತಾರದೊಂದಿಗೆ ಭಜನೆಗಳನ್ನು ಹಾಡುತ್ತಾ ಅದೇ ದಾರಿಯಲ್ಲಿ ಹೋಗುತ್ತಾರೆ. ಬೆಳಕಿನ ಮೊದಲ ಕಿರಣ ತಲುಪುವ ವೇಳೆಗೆ ಹರಿದಾಸರು ಬರುತ್ತಾರೆ. ಅವರು ತಮ್ಮ ಗೆಜ್ಜೆ ಮತ್ತು ತಲೆಯ ಮೇಲಿನ ಘಟದಿಂದ ಮಧುರವಾದ ಸದ್ದನ್ನು ಮಾಡುತ್ತಾ, ಕುಣಿಯುತ್ತ ಭೈರವಿ ರಾಗವನ್ನು ಹಾಡುತ್ತಾರೆ. ದೇವತೆಗಳನ್ನು ಹೊಸ ದಿನಕ್ಕೆ ಸ್ವಾಗತಿಸುವ ಹರಿದಾಸರು ಇವರು.
ಆಗಲೇ ಜನಜೀವನ ಶುರುವಾಗುವುದು. ಹರಿದಾಸರು ತಮ್ಮ ಮೊದಲ ಭಿಕ್ಷೆಯನ್ನು ಪಡೆಯಲು ಬರುವರು. ಅಷ್ಟರಲ್ಲೇ ಶಿವನ ಗುಣಗಾನವನ್ನು ಮಾಡುತ್ತಾ ಜಂಗಮರು, ಜೋಡಿಯಾಗಿಯೋ, ಮೂವರೋ ಬರುವರು. ಅವರೂ ಭಿಕ್ಷೆಯನ್ನು ಗ್ರಹಿಸಿ ಹೊರಡುವರು. ಸುಮಾರು ಮಧ್ಯಾಹ್ನದ ವೇಳೆಗೆ ಕರಡಿಯೊಂದಿಗೆ ಅಥವಾ ಹೋರಿಯೊಂದಿಗೆ ಕಥಿ-ಪಲೋಡುಗಳು ಬರುವರು. ಹೀಗೆ ಅದಿಲಾಬಾದಿನ ದಿನವನ್ನು ವರ್ಣಮಯಗೊಳಿಸುತ್ತಾ ಬೆಳಗಿನಿಂದ ಸಂಜೆಯವರೆಗೆ ಹಲವು ಸಂಗೀತಗಾರರು, ದಾರ್ಶನಿಕರು, ವೈದ್ಯರು, ಸಂಚಾರಿ ವ್ಯಾಪಾರಿಗಳು ನಡೆದಾಡುತ್ತಾ ಹಾಡು ಮತ್ತು ಅರ್ಥಗಳಿಂದ ತುಂಬುತ್ತಿದ್ದರು.
ಬುಡುಬುಡುಕೆಯವರು ಮತ್ತು ಗೋಪಾಲರು ಮುಂದಿನ ಹಳ್ಳಿಗೆ ಪ್ರಯಾಣ ಬೆಳೆಸುವ ಮೊದಲು ೧೫ ದಿನಕ್ಕೊಮ್ಮೆ ಮನೆಗಳಿಗೆ ಭಿಕ್ಷೆಗಾಗಿ ಬರುತ್ತಿದ್ದರು. ಬೆಳಕಿನಲ್ಲಿ ಅವರ ಸಂಗೀತದ ತುಣುಕುಗಳನ್ನು ಕೇಳಲು ಪುಟ್ಟ ರವೀಂದ್ರನ ಕಿವಿಗಳು ನೆಟ್ಟಗಾಗುತ್ತಿದ್ದವು. ಸ್ವಲ್ಪದರಲ್ಲೇ ಧೂಳಿನ ಮುಸುಕಿನ ಹಿಂದೆ ಪರದೆ ತೆರೆದಂತೆ ಕೋಲಾಟ ತಂಡದ ನೃತ್ಯ, ಪ್ರೇಕ್ಷರನ್ನು ಹಿಡಿದಿಡುವ ರಾಮಾಯಣ-ಭಾಗವತದ ಕಥೆಗಳು ಅದಿಲಾಬಾದನ್ನು ತುಂಬುತ್ತಿತ್ತು. ದಾರ್ಶನಿಕರು ಮತ್ತು ಪೌರಾಣಿಕ ಕಥೆಯನ್ನು ಹೇಳುವವರು ಬದುಕಿದ್ದು ಹಲವು ಶತಮಾನಗಳ ಕಾಲ ಅದಿಲಾಬಾದನ್ನು ಶ್ರೀಮಂತಗೊಳಿಸಿದ್ದಾರೆ”
ಈ ಅನುವಾದದ ನಂತರ ರಸ್ತೆಯಲ್ಲಿ ಕೇಳುವ ಸೊಪ್ಪು ಮಾರವವರ ರಾಗ, ಕಸದ ಗಾಡಿ, ತರಕಾರಿಯವ ಕೂಗುವುದು ಯಾವುದೂ ನನಗೆ ಕಿರಿಕಿರಿ ಮಾಡಲಿಲ್ಲ. ನಮ್ಮ ಜೀವನವನ್ನು ನಾವೇ ಶ್ರೀಮಂತ ಮಾಡಿಕೊಳ್ಳಬೇಕೆಂದು ಅರಿವಾಯಿತು.
ಅದೇ ಸಮಯದಲ್ಲಿ ಸಾನಂದ ಸ್ವಾಮಿಜಿಯವರ ಚಿಂತನೆಗಳು ಇನ್ನೂ ಆಳಕ್ಕೆ ಎಳೆದುಕೊಂಡು ಹೋಯಿತು. ಭಾರತೀಯ ಸಂಸ್ಕೃತಿಯನ್ನು ಸಾನಂದ ಸ್ವಾಮಿಜಿಯವನ್ನು ಕಂಡ ಆಳ ಬಹುಶಃ ನಾವ್ಯಾರು ಕಾಣಲು ಸಾಧ್ಯವಿಲ್ಲವೇನೊ?!
ಸಾನಂದರು ೨೦೧೮ ರಲ್ಲಿ ತಮ್ಮ ಜೀವನದ ಕೊನೆಯ ಉಪವಾಸವನ್ನು ಕೈಗೊಂಡಾಗ ಮನಸ್ಸಿಗೆ ಎಲ್ಲೋ ಮತ್ತೆ ಅವರನ್ನು ನೋಡಲಾದೀತೊ ಇಲ್ಲವೊ ಎನಿಸಿತು. ಇದ್ದಕ್ಕಿದ್ದಂತೆ ಹರಿದ್ವಾರದಲ್ಲಿದ್ದ ಅವರನ್ನು ನೋಡುವ ಮನಸ್ಸಾಗಿ ಹೊರಟೆ ಬಿಟ್ಟೆವು. ಮಾತೃಸದನ ತಲುಪಿ ಅವರ ಮುಂದೆ ನಿಂತ ಕ್ಷಣ ಜೀವನದ ಅಮೂಲ್ಯ ಘಳಿಗೆಗಳು. ಮೊದಲ ಹತ್ತು ನಿಮಿಷ ನಿರಂತರವಾಗಿ ಬೈದರು. ನಂತರ ಅವರು ಹೇಳಿದ ಒಂದು ಮಾತು ಮುಂದಿನ ಎಷ್ಟೋ ವರ್ಷಗಳಿಗೆ ಶಕ್ತಿ ತುಂಬುವದಾಗಿತ್ತು. “ನೀವು ಮಾಡುವ ಕೆಲಸವೇ ನಿಮಗೆ ಆಶೀರ್ವಾದ” ಈಗಲೂ ಕಿವಿಯಲ್ಲಿ ಸಿಡಿಲಿನಂತೆ ಕೇಳುತ್ತಿದೆ. ಅವರು ನಿಷ್ಠುರವಾದಿ, ವಾಸ್ತವವಾದಿ, ವಿಜ್ಞಾನಿ, ಸಂತ ಎಲ್ಲವೂ ಮೇಳೈಸಿದ ಒಂದು ಜೀವ. ಅವರ ಒಡನಾಟದಲ್ಲಿ ಇದ್ದುದೇ ನಮ್ಮ ಭಾಗ್ಯ. ಈ ಮುಂದಿನ ಲೇಖನ ಅವರ ಸ್ಫೂರ್ತಿಯಿಂದ ಬಂದದ್ದು.
-0-
ನಾಯಿ ಪುರಾಣ
ನನಗೆ ಭಾನುವಾರಗಳೆಂದರೆ ಇಷ್ಟ. ರಜೆ ಇದೆ ಎಂದಲ್ಲ. ರಜೆಯನ್ನು ಸಾರ್ಥಕಪಡಿಸಿಕೊಳ್ಳಬಹುದಲ್ಲ ಎಂದು. ನನ್ನ ಭಾನುವಾರಗಳು ವಿವಿಧ ಅನುಭವಗಳಿಂದ ಶ್ರೀಮಂತವಾಗಿದೆ. ಸದ್ಯಕ್ಕೆ ಎಲ್ಲರಿಗೂ ಹಂಚುವ ಶ್ರೀಮಂತಿಕೆಯಲ್ಲ. ತುಂಬಿಸಿಕೊಳ್ಳುತ್ತಿದ್ದೇನೆ ಅಷ್ಟೆ. ನನ್ನ ಭಾನುವಾರದ ಜೋಳಿಗೆ ಬಿಚ್ಚುವ ಮೊದಲು ನಮ್ಮ ರಸ್ತೆಯ ನಾಯಿಯ ಬಗ್ಗೆ ಹೇಳಬೇಕು.
ನಾವು ೧೮ನೇ ಮುಖ್ಯರಸ್ತೆಗೆ ಮನೆ ಬದಲಿಸಿ ಒಂದು ವರ್ಷವಾಗುತ್ತಾ ಬಂದಿದೆ. ಈ ಒಂದು ವರ್ಷದಲ್ಲಿ ನನ್ನನ್ನು ಸೆಳೆದ ವಿಷಯಗಳು ಮೂರು. ಅದರಲ್ಲಿ ಒಂದು ಆ ರಸ್ತೆಯ ನಾಯಿ. ಎತ್ತರವಾದ ಬಿಳಿಯ ನಾಯಿ. ಬೊಗಳಿದರೆ ೩ ಬೀದಿಗೆ ಕೇಳುತ್ತಿತ್ತು. ಅದರ ಜೊತೆ ಸಂಗಾತಿ ಎಂಬಂತೆ ಇನ್ನೊಂದು ನಾಯಿ. ಇವರಿಬ್ಬರೆ ನಮ್ಮ ರಸ್ತೆ ಆರಕ್ಷಕರು. ರಾತ್ರಿ ೯.೦೦ ಗಂಟೆ ಆಗುತ್ತಿದ್ದಂತೆ ರಸ್ತೆಯಲ್ಲಿ ಓಡಾಡುವ ಎಲ್ಲಾ ವಾಹನಗಳನ್ನೂ ನೋಡಿ ಬೊಗಳುತ್ತಿದ್ದವು. ರಾತ್ರಿಯಾದರೂ ಓಡಾಡ ಬೇಡಿರಿ ಎಂದು ಪರೋಕ್ಷವಾಗಿ ಬುದ್ಧಿ ಹೇಳುವಂತೆ. ಆದರೆ ಬೆಂಗಳೂರಿಗರಿಗೆ ನಾಯಿ ಬುದ್ಧಿ ಕಲಿಸುವುದು ಎಂದರೆ ಏನು? ಬುದ್ಧಿವಂತಿಕೆಯ ಅಪರಾವತಾರವೇ ಮನುಷ್ಯನಲ್ಲವೇ?!
ರಾತ್ರಿ ೩.೦೦ ರ ವೇಳೆಗೆ ಪಕ್ಕದ ಬೀದಿಯ ಇನ್ನೆರಡು ನಾಯಿಗಳೂ ಸೇರಿ ಅದೇನೋ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದವು. ಮೊದಲಿಗೆ ರಾತ್ರಿಯೂ ನೆಮ್ಮದಿಯಾಗಿ ಮಲಗಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರವಾಗುತ್ತಿತ್ತು. ಏಕೆಂದರೆ ನಮ್ಮ ಮನೆ ಮುಖ್ಯರಸ್ತೆ ಅಲ್ಲದಿದ್ದರೂ ಹಾಗೆಯೇ ಇರುವ ಹಾದಿಯಾಗಿತ್ತು. ಬೆಳಗಿನ ಜಾವ ೫.೩೦ ರಿಂದ ರಾತ್ರಿ ೧೧.೩೦ ರವರೆಗೆ ಗಾಡಿಗಳ ಸದ್ದು ನಿಲ್ಲುವುದೆ ಇಲ್ಲ. ಸಂತೊಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯ ಎಂಬ ಸಾಲು ನೆನಪಾಗುತ್ತಲೆ ಇತ್ತು. ನಿಧಾನವಾಗಿ ಎಲ್ಲವೂ ಅಭ್ಯಾಸವಾಯಿತು. ನಾಯಿಗಳ ಚರ್ಚೆಯಂತೂ ಕುತೂಹಲಕ್ಕೆ ತಿರುಗಿತು. ಒಮ್ಮೆ ರಾತ್ರಿ ನಾಯಿಗಳ ಚರ್ಚೆಯನ್ನು ರೆಕಾರ್ಡ್ ಮಾಡಿದೆ. ಆದರೆ ಆ ಭಾಷೆ ತಿಳಿಯುವ ಆಳಕ್ಕೆ ಇಳಿಯಲಿಲ್ಲ.
ಎರಡು ತಿಂಗಳ ಹಿಂದೆ ನಮ್ಮ ರಸ್ತೆಯ ದಾದಾ ಇದ್ದಕ್ಕಿದ್ದಂತೆ ಸಣ್ಣಗಾಗಿರುವುದು ಕಂಡು ಬಂತು. ನೋಡ ನೋಡುತ್ತಿದ್ದಂತೆ ಇನ್ನೂ ಮತ್ತೂ ಸಣ್ಣಗಾಯಿತು. ಇದ್ದಕ್ಕಿದ್ದಂತೆ ಅದರ ಚರ್ಯೆ ಬದಲಾಗುತ್ತಾ ಬಂದು. ರಾತ್ರಿ ೯.೦೦ ಕ್ಕೆ ಕೆಲಸದ ಪಾಳಿ ತೆಗೆದುಕೊಳ್ಳುತ್ತಿದ್ದ ಅದು ೧೦.೩೦ ಆದರೂ ಬೊಗಳುತ್ತಿರಲಿಲ್ಲ. ಒಂದೆಡೆ ಮುದುಡಿ ಮಲಗಿರುತ್ತಿತ್ತು. ನಿಧಾನವಾಗಿ ಅದರ ಚಲನ-ವಲನ ನಿಂತಿತು. ಇದೇ ಶಕ್ತಿಯಾಗಿದ್ದ ಅದರ ಸಂಗಾತಿಗೆ ಬಹುಶಃ ಏನು ಮಾಡುವುದೆಂದು ತಿಳಿಯಲಿಲ್ಲ. ಬೊಗಳಲು ಪ್ರಾರಂಭಿಸಿ ತನ್ನ ಪತಿ ಸಾಥ್ ಕೊಡದೆ ಇದ್ದಾಗ ತಕ್ಷಣವೇ ಕುಯ್ ಕುಯ್ ಎಂದು ಮೆತ್ತಗಾಗುತ್ತಿತ್ತು. ನಾನು ಒಂದು ವಾರ ನನ್ನ ಕೆಲಸದಲ್ಲಿ ಮೈಮರೆತೆ. ಒಂದು ದಿನ ಇದ್ದಕ್ಕಿದ್ದಂತೆ ನೆನಪಾಗಿ ಗಮನಿಸಿದೆ. ಮೂರು ದಿನಗಳಾದರೂ ನಮ್ಮ ರಸ್ತೆಯ ದಾದಾ ಕಾಣಲೇ ಇಲ್ಲ !! ಅದರ ಸಂಗಾತಿ ಕೂಡ. ಅಮ್ಮ ಹೇಳಿದರು “ಅದಕ್ಕೆ ಖಾಯಿಲೆ ಬಂದು, ಎಲ್ಲೋ ಹೋಗಿ ಸತ್ತಿರಬೇಕು” ಎಂದು. ಒಂದು ಕ್ಷಣ ದುಃಖವಾಯಿತು. ಮನುಷ್ಯರಿಗೂ ಇಲ್ಲದ ನಿಯತ್ತು ಈ ಪ್ರಾಣಿಗೆ ಇದೆಯಲ್ಲ ಎಂದು. ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ತನ್ನ ಜೀವನ ಮುಗಿಸಿತ್ತು. ಸಂಬಳ ತೆಗೆದುಕೊಳ್ಳದೆ ನಮ್ಮ ಬೀದಿ ಕಾದಿತ್ತು.
ಈಗ ನಮ್ಮ ಬೀದಿಯಲ್ಲಿ ಅದರ ಬೊಗಳುವಿಕೆಯೂ ಇಲ್ಲ, ರಾತ್ರಿ ನಾಯಿಗಳ ಚರ್ಚಾಕೂಟವೂ ಇಲ್ಲ. ಒಂದು ಕ್ಷಣ ಎಲ್ಲವೂ ಖಾಲಿ ಎನಿಸಿತು. ಆದರೆ ಮರುದಿನ ಒಂದು ನಾಯಿ ಎಲ್ಲ ಗಾಡಿಗಳ ಹಿಂದೆ ಹೋಗಲು ಪ್ರಾರಂಭಿಸಿದೆ !! ನಮ್ಮ ರಸ್ತೆಯ ದಾದಾ ಆಳ್ವಿಕೆಯಲ್ಲಿದ್ದಾಗ ಗಮನಿಸುತ್ತಿದ್ದ ಮತ್ತೊಂದು ಪುಟ್ಟ ಮರಿ ಇದು ಎಂದು ಆಮೇಲೆ ತಿಳಿಯಿತು. ಆದರೆ ಇದಕ್ಕೆ ಇನ್ನೂ ಬೊಗಳುವ ತರಬೇತಿ ಆಗಿಲ್ಲ. ಸುಮ್ಮನೆ ಗಾಡಿಗಳ ಹಿಂದೆ ಓಡುವುದು. “ಬೊಗಳುವ ನಾಯಿ ಕಚ್ಚುವುದಿಲ್ಲ” ಎಂಬ ಮಾತು ಸ್ವಲ್ಪ ಅನುಭವಕ್ಕೆ ಬಂದಿತ್ತು. ಏಕೆಂದರೆ ನಮ್ಮ ದಾದಾ ಯಾವತ್ತೂ ಯಾರನ್ನೂ ಕಚ್ಚಿದ್ದೇ ಇಲ್ಲ !
ಯಾವ ಪರಂಪರೆಯೂ ನಿಲ್ಲುವಿದಿಲ್ಲ. ಇದು ದೇವರು ಕೊಟ್ಟ ದೊಡ್ಡ ಭರವಸೆ. ವ್ಯವಸ್ಥೆ-ರೂಪ ಬದಲಾಗಬಹುದು. ಆದರೆ ಸತ್ವಯುತವಾದುದು ಎಂದಿಗೂ ನಿಲ್ಲುವುದಿಲ್ಲ ಎಂಬ ಭಾವ ಗಟ್ಟಿಯಾಯಿತು.
ಹೀಗೆ ನಾಯಿ ಪುರಾಣ ಹೇಳಿ ಬೇರೆಲ್ಲೊ ಕರೆದುಕೊಂಡು ಹೋಗಲ್ಲ. ನನ್ನ ಭಾನುವಾರದ ಜೋಳಿಗೆ ಬಿಚ್ಚುವೆ. ಜೋಳಿಗೆ ಬಟ್ಟೆಯದ್ದು. ಸ್ವಲ್ಪ ತೂತಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ. ಸರಿ ಹಾಗಾದರೆ ಅರೆಮಾರಿ ಅನುಭವಗಳನ್ನು ಪ್ರಾರಂಭಿಸುವೆ, ಮೊದಲು ಅಡಕಮಾರನಹಳ್ಳಿಯಿಂದ ಪ್ರಾರಂಭಿಸೋಣ.
ಅಡಿಕೆ ಮಾರನ ಹಳ್ಳಿ, ಅದುವೇ ಅಡಕಮಾರನ ಹಳ್ಳಿ
ಆನಂದವನ ಗುರುಕುಲ ಪೂರ್ಣಪ್ರಮತಿಯ ಒಂದು ಕನಸು. ಇದು ಮಾಗಡಿ ರಸ್ತೆಯಲ್ಲಿ ಇರುವ ಒಂದು ಪ್ರಶಾಂತ ವಾತಾವರಣ, ಕಲಿಕಾ ತಾಣ. ಇದರ ವಿವರ ನಂತರ ನೀಡುವೆ. ನಾನು ಆನಂದವನಕ್ಕೆ ವಾರಕ್ಕೆ ಒಮ್ಮೆ ಅಂದರೆ ಭಾನುವಾರ ಹೋಗುತ್ತಿದ್ದೆ. ಮೊದಲಿಗೆ ಬಸ್ ನಲ್ಲಿ ಹೋಗಿ ಬರುವುದು ಬಹಳ ಶ್ರಮದಾಯಕ ಎನಿಸುತ್ತಿತ್ತು. ನಿಧಾನವಾಗಿ ಅದು ಅಭ್ಯಾಸವಾಯಿತು. ಅಲ್ಲಿ ನನ್ನ ಕೆಲಸ ಕನ್ನಡ ಹೇಳಿಕೊಡುವುದು. ಅದು ೨-೩ ತಾಸಿನ ಕೆಲಸ. ನಂತರದ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪಕ್ಕದಲ್ಲೇ ಇದ್ದ ಹಳ್ಳಿಗೆ ಹೊರಟೆ. ಮೊದಲಿಗೆ ಪ್ರಕೃತಿಯ ಮಧ್ಯೆ ಇದ್ದ ಕಾಲುದಾರಿ ಸೊಗಸಾಗಿದೆ ಎನಿಸಿತು. ನಂತರ ಅಲ್ಲಿ ಮಧ್ಯಾಹ್ನದಲ್ಲೇ ಚಿರತೆಗಳು ಬಂದು ಕುರಿ, ಹಸುಗಳನ್ನು ಎಳೆದುಕೊಂಡು ಹೋಗುತ್ತವೆ ಎಂದು ತಿಳಿದು ಭಯವೂ ಆಯಿತು. ಆದರೆ ಭಯಪಟ್ಟರೆ ಏನೂ ಮಾಡಲು ಸಾಧ್ಯವಿಲ್ಲ. ದೇವರು ಎಷ್ಟು ದಿನ ಉಳಿಸುತ್ತಾನೋ ಅವನಿಗೆ ಬಿಟ್ಟಿದ್ದು ಎಂದು ಹೋಗಲು ಪ್ರಾರಂಭಿಸಿದೆ. ಸ್ವಲ್ಪ ಪುಕ್ಕಲು ಸ್ವಲ್ಪ ಹುಚ್ಚು ಸೇರಿಕೊಂಡಿತ್ತು !!
ಮೊದಲ ದಿನ ಹಳ್ಳಿಗೆ ಹೋಗುವಾಗ ಏನು ಹೇಳುವುದು, ಕೇಳುವುದು ಎಂದು ತಿಳಿದಿರಲಿಲ್ಲ. ಒಂದು ಮನೆಯ ಮುಂದೆ ನಿಂತೆ – “ಪ್ರತಿ ಭಾನುವಾರ ದೇವರ ನಾಮ, ಸ್ತೋತ್ರ ಹೇಳಿಕೊಡುತ್ತೇನೆ, ಆಸಕ್ತರು ಬರಬಹುದು” ಎಂದು ಭಗವಂತ ನುಡಿಸಿದ. ಇದನ್ನೇ ಎಲ್ಲಾ ಮನೆಯ ಮುಂದೆ ಹೋಗಿ ಹೇಳಿದೆ. ಯಾವುದೇ ಪೂರ್ವಯೋಜನೆ ಇಲ್ಲದೆ ಮಾಡಿದರೂ ಸರಿಯಾದುದೆಂದು ಮನಸಿಗೆ ಅನಿಸಿತು.
ಮುಂದಿನ ವಾರ ಹೋಗಬೇಕು. ಯಾರು ಬರುವರೋ ಇಲ್ಲವೊ ಎಂದು ಆಲೋಚಿಸುತ್ತಾ ಹಳ್ಳಿಯ ಒಳಗೆ ಕಾಲಿಟ್ಟೆ. ಎಲ್ಲರೂ ಕಳೆದ ವಾರ ನೋಡಿದ್ದರಲ್ಲಾ ಮಕ್ಕಳನ್ನು ಕೂಗಿ “ಏಯ್ Madam ಅವ್ರು ಬಂದವ್ರೆ, ಹೋಗ್ರೋ ಪಾಠಕ್ಕೆ” ಅಂತ ಕೂಗು ಹಾಕಿದರು.
ಮೊದಲ ದಿನ ಆದ್ದರಿಂದ ೩೦ ಜನ ಮಕ್ಕಳು ಬಂದರು. ಏನು ಹೇಳಿಕೊಡುವರೋ ಎಂಬ ಕುತೂಹಲ. ಒಬ್ಬ ಹುಡುಗ ಚಾಪೆ ತಂದ. ಒಂದು ಮನೆಯ ಮುಂದೆ ವಿಶಾಲವಾದ ಪಡಸಾಲೆ ಇತ್ತು. ಅಲ್ಲಿ ಎಲ್ಲರೂ ಕೂತೆವು. ಮೊದಲಿಗೆ ಎಲ್ಲರೂ ಪರಿಚಯ ಮಾಡಿಕೊಂಡಿವು. ಕೆಲವು ನಿತ್ಯ ಪಠನೀಯ ಶ್ಲೋಕ ಹೇಳಿಸಿದೆ. ಅನೇಕ ಅಕ್ಷರಗಳನ್ನು ತಪ್ಪಾಗಿ ಉಚ್ಚರಿಸಿದರೂ ಹೇಳಿದರು. “ಕುಂಡಧಾರನ ಕರುಣೆ” (ಮಹಾಭಾರತದ ಉಪಕಥೆ) ಹೇಳಿದೆ. ಎಲ್ಲರೂ ಖುಷಿಪಟ್ಟಿಅರು. ಅಲ್ಪಾರಂಭ ಕ್ಷೇಮಕರ ಎಂದು ಸಾಕು ಮಾಡಿದೆ. ಮತ್ತೆ ಮುಂದಿನವಾರ ಸೇರೋಣ ಎಂದು ಹೊರಟೆ.
ಒಂದು ವಿಷಯ ಮರೆತೆ. ಮೊದಲ ವಾರ ಹೋದಾಗ ದೊಡ್ಡವರು, ಚಿಕ್ಕವರು ಬರಬಹುದೆಂದು ಹೇಳುತ್ತಾ ಬರುತ್ತಿದೆ. ಊರಿನಲ್ಲಿದ್ದ ಒಂದು ದೊಡ್ಡಮನೆಯ ಮಧ್ಯಮ ವಯಸ್ಸಿನ ಇಬ್ಬರು ಹೆಂಗಸರು ವಿವರವಾಗಿ ನನ್ನ ಸಂದರ್ಶನ ಮಾಡಿದ್ದರು. ಮಹಾಭಾರತದ ಭೀಮನ ಬಗ್ಗೆ ಕೇಳಿದರು. “ರಾಮಾಯಣ ಏನಮ್ಮ ಹೇಳ್ತೀಯ ಎಲ್ಲರ ಮನೆ ರಾಮಾಣ್ಯ ಇದ್ದೇ ಇದೆ” ಎಂದರು. ಸುಮಾರು ೩೦ ನಿಮಿಷ ಮಾತಾಡಿ ’ಸರಿ ಹೋಗವ್ವ, ಬಾ ಮುಂದಿನ್ ವಾರ ಮಕ್ಕಳ್ ಬತ್ತಾವೆ’ ಎಂದರು. ಅಂತೂ Interview ಆದ ಮೇಲೇ ಅವಕಾಶ ಸಿಕ್ಕಿದ್ದು.
ಎರಡನೆಯ ವಾರ ಮಕ್ಕಳೇ ದೇವಸ್ಥಾನದ ಮುಂದಿದ್ದ ಜಗಲಿ+ಮಂಟಪವನ್ನು ಪಾಠಕ್ಕಾಗಿ ಆಯ್ಕೆ ಮಾಡಿದ್ದರು. ನನ್ನಲ್ಲಿ ೧.೦೦ ಗಂಟೆಯ ಸರಕು ಮಾತ್ರ ಇತ್ತು. ಅಷ್ಟು ಮಾಡಿ ದ್ವಿತೀಯ ವಿಘ್ನ ಆಗಲಿಲ್ಲವೆಂದು ಬೆಂಗಳೂರಿಗೆ ಹೊರಟು ಬಂದೆ. ಹೋಗುತ್ತಾ – ಬರುತ್ತಾ ಬಸ್ ನಲ್ಲಿ ೪ ತಾಸಿನ ಪ್ರಯಾಣ. ಕುಳಿತುಕೊಳ್ಳಲು ಇರಲಿ, ನಿಲ್ಲಲೂ ಕೆಲವೊಮ್ಮೆ ಜಾಗ ಸಿಗುತ್ತಿರಲಿಲ್ಲ. ಆದರೂ ನನಗೇನೋ ಉತ್ಸಾಹ. ರವೀಂದ್ರ ಶರ್ಮ ಅವರು ಹೆಚ್ಚು ಹೆಚ್ಚು ಜನರ ಮಧ್ಯೆ ಇದ್ದು ಅವರ ಸಂಸ್ಕೃತಿ, ಜೀವನ ಶೈಲಿಯನ್ನು ಅರಿಯುವುದರ ಮೂಲಕ ಭಾರತೀಯತೆಯನ್ನು ಅರ್ಥಮಾಡಿಕೊಳ್ಳುತ್ತಿದ್ದರಂತೆ. ಅದೇ ಕನಸಿನಿಂದ ಮುಂದುವರೆಸಿದೆ.
ವಾರದಿಂದ ವಾರಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಪ್ರೌಢಶಾಲೆಗೆ ಬಂದ ಗಂಡುಮಕ್ಕಳು ಬಾಯಿಬಿಟ್ಟು ಸ್ತೋತ್ರ ಹೇಳುವುದೆಂದರೆ ಅವಮಾನ ಎಂದು ತಿಳಿದಿದ್ದರು. ಏನೋ ನೆಪ ಹೇಳಿ ಓಡಿಹೋಗುತ್ತಿದ್ದರು. ಹೆಣ್ಣುಮಕ್ಕಳು ಮನೆಗೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡಬೇಕು. ಅಂತೂ ತರಗತಿಯಲ್ಲಿ ಉಳಿದುಕೊಂಡವರು ೪ ಗಂಡುಮಕ್ಕಳು, ೫ ಹೆಣ್ಣುಮಕ್ಕಳು. ನಮ್ಮ ಪಯಣ ಸುಮಾರು ಒಂದು ವರ್ಷ ಮುಂದುವರೆಯಿತು. ಭಜನೆ, ನಿತ್ಯಪಠನೀಯ ಸ್ತೋತ್ರ, ರಾಮಾಯಣ ಕಥೆ ನಡೆಯಿತು.
ಈ ಒಂದು ವರ್ಷದಲ್ಲಿ ಹಳ್ಳಿ, ಜೀವನ ಶೈಲಿ ಸಾಕಷ್ಟು ಪರಿಚಯವಾಯಿತು. ಈ ಹೊತ್ತಿಗಾಗಲೇ ಟಿ.ವಿ, ಮೊಬೈಲ್, ಫ್ಯಾನ್, ಫ್ರಿಡ್ಜ್ ಹಾವಳಿ ಆರಾಮವಾಗಿ ಹಳ್ಳಿಗೆ ಕಾಲಿಟ್ಟಿತು. ಫೇಸ್ ಬುಕ್ ನಿಂದ ಬಿಡಿಸಿಕೊಂಡು ಮಕ್ಕಳನ್ನು ತರಗತಿಗೆ ಕರೆತರುವುದು ಹರಸಾಹಸವಾಗಿತ್ತು. ಹಳೆಯ ಕಾಲದ ಕೆಲವು ಮನೆಗಳಿದ್ದವು. ಪ್ರಾಚೀನ ಮನಃಸ್ಥಿತಿ-ನವೀನ ಜೀವನದ ಅಗತ್ಯಗಳಿಗೆ ಹೊಂದಿಕೊಳ್ಳುವ ಕಾಲದಲ್ಲಿ ಅಲ್ಲಿನ ಜನರಿದ್ದರು. ಸಂಪ್ರದಾಯ, ಆಚರಣೆ ಬಿಡಲೂ ಮನಸ್ಸಿಲ್ಲ ಆದರೆ ನಿತ್ಯ ಜೀವನದ ಹೋರಾಟ ನಡೆಸಲೇಬೇಕು. “ಇರುವ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ, ತಡೆಯೇ ಇಲ್ಲದೆ ನಡೆಯಲೇ ಬೇಕು, ಸೋಲಿಲ್ಲದ ಹೋರಾಟ”.
ಹೇಗಾದರೂ ಮಾಡಿ ಆನಂದವನಕ್ಕೂ ಹಳ್ಳಿಗೂ ನಿಕಟ ಸಂಬಂಧ ಉಂಟುಮಾಡಲೆಂದು ಏನೇನೋ ಪ್ರಯತ್ನ ಮಾಡಲಾಯಿತು. ಹಳ್ಳಿ ಸುತ್ತ ಮುತ್ತ ಬೇಕೆಂದರೂ, ತುರ್ತು ಪರಿಸ್ಥಿತಿ ಎಂದರೂ ಒಂದು ಗುಳಿಗೆಯೂ ಸಿಗುತ್ತಿರಲಿಲ್ಲ. ಹಾಗಾಗಿ ಆನಂದವನ ಒಂದು ಆರೋಗ್ಯಕೇಂದ್ರವಾಗಿ ಮಾಡಿದರೆ ಹಳ್ಳಿಗರು ಬರುವರೆಂದು ಎರಡುವಾರ ವೈದ್ಯಬ್ಬರು ಬೆಂಗಳೂರಿನಿಂದ ಬಂದು ಸಣ್ಣ-ಪುಟ್ಟ ಖಾಯಿಲೆಗೆ ಔಷಧಿ ಕೊಟ್ಟರು. ಔಷಧಿ ದೊಡ್ಡದೋ-ಚಿಕ್ಕದೋ ವೈದ್ಯರೊಬ್ಬರು ಸಿಕ್ಕರಲ್ಲ ಎಂಬ ಭರವಸೆಯೇ ದೊಡ್ಡದು. ಮೊದಲು ಪಾಠಕ್ಕೆ ಬನ್ನಿ ಎಂದು ಕರೆಯುತ್ತಿದ್ದೆ. ಈಗ ಡಾಕ್ಟರ್ ಬಂದಿದ್ದಾರೆ ಗುರುಕುಲಕ್ಕೆ ಬನ್ನಿ ಎಂದು ಕರೆಯಲು ಪ್ರಾರಂಭಿಸಿದೆ. ಆದರೆ ಡಾಕ್ಟರ್ ಬರುವುದು ಹೆಚ್ಚು ದಿನ ಸಾಧ್ಯವಾಗಲಿಲ್ಲ. ಕೆಲವು ಅಗತ್ಯ ಔಷಧಿಗಳನ್ನು ಆನಂದವನದಲ್ಲಿ ಇರಿಸಿ Emergency ಇದ್ದಾಗ ತೆಗೆದುಕೊಳ್ಳಬಹುದೆಂದು ತಿಳಿಸಲಾಯಿತು.
ಇನ್ನೊಂದು ಪ್ರಯೋಗ ಹೇಳಲೇ ಬೇಕು. ಮಕ್ಕಳ ಗುಂಪುಮಾಡಿ ಹಳ್ಳಿಯಲ್ಲಿದ್ದ ಹಿರಿಯರ ಬಳಿ ಹೋಗಿ ಅವರ ಅನುಭವಗಳನ್ನು ಕೇಳುವುದು. ಆಗ ಒಬ್ಬರು ಅಜ್ಜಿ ಹೇಳಿದರು “ಮೊದಲು ಇಲ್ಲಿ ರಾಮಸ್ವಾಮಿ ಅನ್ನೋರು ಇದ್ದರು. ಅವರು ನಮಗೆಲ್ಲ ರಾಮಮಂತ್ರ ಕೊಟ್ಟಿದ್ದರು. ಇದೇ ಜಗಲಿ-ಮಂಟಪದಲ್ಲಿ ಭಜನೆ ಮಾಡಿಸುತ್ತಿದ್ದರು” ಎಂದು. ಆಗ ಒಂದು ಆನಂದವಾಯಿತು. ಮೊದಲಿನ ಜನರಿಗೆ ಮನರಂಜನೆ ಎಂದರೆ ಭಜನೆ, ದೇವರ ನಾಮಸ್ಮರಣೆ, ಅರಿವಿನ ಕಾರ್ಯಕ್ರಮವೇ ಆಗಿರುತ್ತಿತ್ತು. ಭಾರತದ ಯಾವುದೇ ಮೂಲೆಗೆ ಹೋದರೂ ಒಬ್ಬ ಸಂತರ ವಾಸದ ಬಗ್ಗೆ ಒಂದು ಕಥೆ ಸಿಕ್ಕೇ ಸಿಗುತ್ತದೆ. ಭಾರತ ಸಾಧು ಸಂತರ ನೆಲೆಯಲ್ಲವೇ?! ಮತ್ತೊಂದು ಸ್ವಾರಸ್ಯವೆಂದರೆ ಈ ಸಂತರು ಕೌಟುಂಬಿಕ ಕಟ್ಟುಪಾಡಿಗೆ ಒಳಪಟ್ಟಿರುವುದಿಲ್ಲ. ಆದರೆ ಎಲ್ಲಾ ಕುಟುಂಬಕ್ಕೆ ಬೇಕಾದವರಾಗಿರುತ್ತಾರೆ. ಇಂದಿನ ಆಧುನಿಕರ ಭಾಷೆಯಲ್ಲಿ ಹೇಳುವುದಾದರೆ Counsellor. ಯಾವುದೇ Course, Institution , Fees ಗಳ ಗೊಂದಲವಿಲ್ಲದೆ ಬದುಕುವ ಪರೋಪಕಾರಿಗಳು. ಸರಳ ಜೀವನ, ಆಹಾರ-ವಸತಿ ಇವರದ್ದು. ನೊಂದು ಬಂದವರಿಗೆ, ದಾರಿ ತಪ್ಪಿದವರಿಗೆ ನೆಮ್ಮದಿಯ ಮಾತುಗಳನ್ನಾಡುವರು. ಯಾರು ತಮ್ಮ ವೈಯಕ್ತಿಕ ಪರಿಧಿಯನ್ನು ಮೀರುವರೋ ಅವರು ಇತರರ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲರು. ಭಾರತೀಯ ಸಮಾಜವ್ಯವಸ್ಥೆ ಇಂತಹ ಅನೇಕ ಭದ್ರಕೊಂಡಿಗಳನ್ನು ಹೊಂದಿದೆ. ಕುಟುಂಬ (ಸಂಬಂಧಗಳ ಕೊಂಡಿ) ಸನ್ಯಾಸ (ಬಿಡುಗಡೆಯ ದಾರಿ) ಇವೆರಡನ್ನೂ ಬೆಸೆದ ಸುಂದರ ವ್ಯವಸ್ಥೆ ನಮ್ಮದು. ತ್ಯಾಗಕೂ ಸಮಾನ ಬೆಲೆ ಇದೆ. ಸ್ವಲ್ಪ ಹೆಚ್ಚೆ ಎನ್ನಬಹುದು. ಎಲ್ಲವನ್ನೂ – ಎಲ್ಲರನ್ನೂ ಬಿಟ್ಟವರನ್ನು ಬಿಟ್ಟವರನ್ನು ಎಲ್ಲರೂ ಸೇರಿ ನೋಡಿಕೊಳ್ಳುವ ಭದ್ರ ಸಮಾಜ.
ಈ ಸಂದರ್ಶನ ಮಕ್ಕಳಿಗೆ ಹೊಸ ಸ್ಫೂರ್ತಿ ಕೊಟ್ಟಿತು. ೯ ಜನ ಮಕ್ಕಳು ಸೇರಿ ಪ್ರತಿದಿನ ಸಂಜೆ ಹಳ್ಳಿಯ ಜಗಲಿ+ಮಂಟಪದಲ್ಲಿ ಸೇರಿ ಭಜನೆ ಆರಂಭಿಸಿದರು. ಇದು ಮೊದಲ ಗೆಲುವಾಗಿತ್ತು. ಮೇಕೆ ಮರಿಹಾಕುವುದನ್ನು ನೋಡಿದೆ, ಹಸು ಕರು ಹಾಕುವುದನ್ನು ನೋಡಿದೆ, ಮುಸ್ಲಮಾನರ ಹಬ್ಬವನ್ನು ಎಲ್ಲರೂ ಸೇರಿ ಆಚರಿಸುವುದನ್ನುನೋಡಿದೆ, ಒಬ್ಬ ಅಂಗವಿಕಲ ಮಗುವಿನ ತಾಯಿಯ ಕಳಕಳಿಗೆ ಸ್ಪಂದಿಸಿದೆ, ಅಮ್ಮನ ಆತಂಕವಾಗಿದ್ದ ಮಗನ ಕುಡುಕುತನವನ್ನು ಬಿಡಿಸುವ ಆಪ್ತಸಲಹೆಗಾರ್ತಿಯಾದೆ, ಕೆಲವು ವಿದ್ಯಾವಂತರಿಗೆ ಉದ್ಯೋಗ ಮಾಹಿತಿ ನೀಡಿದೆ – ಹೀಗೆ ಅವರ ಅಗತ್ಯಗಳೊಂದಿಗೆ ನಾನೂ ಬೆರೆತೆ. ಮಕ್ಕಳು “ಇಲ್ಲಿನ ಗಂಡಸರು ಪ್ರತಿದಿನ ಕುಡಿಯುತ್ತಾರೆ, ಇಲ್ಲಿನ ಎಲ್ಲಾ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಾರೆ, ಹೇಗಾದರೂ ತಪ್ಪಿಸಬೇಕು, ನೀವು ಸಹಾಯ ಮಾಡಿ” ಎಂದು ಅವರ ಕಳಕಳಿಯನ್ನು ಹೇಳಿಕೊಂಡರು. ಈ ಕೂಗಿಗೆ ಸ್ಪಂದಿಸಲು ಒಂದು ಪಡೆಯೊಂದಿಗೆ ಹೋಗಬೇಕು. ವರದೇನ ಹಳ್ಳಿ, ಬಾಚೇನಹಟ್ಟಿಗಳಲ್ಲಿ ಸ್ವಲ್ಪ ಪ್ರಯತ್ನ ಮುಂದುವರೆಸಿದೆ. ಅಲ್ಲಿದ್ದ ಮಂಜುನಾಥ ಗ್ರಾಮೋದ್ಯೋಗ ಗುಂಪಿನ ಸದಸ್ಯೆ ಅವರ ಹಳ್ಳಿಗೂ ಕರೆದರು. ನದಿ ಹುಟ್ಟುವ ಬಗ್ಗೆ ತಿಳಿಸಿದೆ, ಕೆಲವು ಕರಕುಶಲ ವಸ್ತುಗಳನ್ನು ಮಾಡಿಸಿದೆ. ಆದರೆ ಶಕ್ತಿ ಸಾಕಾಗಲಿಲ್ಲ.. ಸೈನ್ಯ ಕಟ್ಟಬೇಕಿದೆ.
ಬಳೆಗಾರ್ತಿಯ ಹಾಡಿನಲ್ಲಿ ಬಳೆಗಾರರ ಕಥೆ, ಹೊಲ ಕಟಾವು ಮಾಡುವಾಗ ಹೇಳುವ ಲಾವಣಿಯಲ್ಲಿ ಸೊಸೆ ಅತ್ತೆಗೆ ಮಾಡುವ ವಿನಂತಿಗಳನ್ನು ಕೇಳಿ ಆನಂದಿಸಿದ್ದೇನೆ. ಹಳ್ಳಿಗರು ತಮ್ಮ ನೆಮ್ಮದಿಯ ಜೀವನವನ್ನು ಹಳ್ಳಿಯಲ್ಲೇ ಕಂಡುಕೊಳ್ಳುವಂತಾದರೆ ಈ ಪ್ರಯತ್ನ ಸಾರ್ಥಕ. ನಿಸರ್ಗದ ಮಹತ್ವ, ಕುಲಕಸುಬುಗಳ ಅರಿವು, ಸಂಬಂಧಗಳ ಹಿರಿಮೆ ಮನವರಿಕೆ ಮಾಡಿಸುವ ಹಂಬಲ. ಆದರೆ ಆಧುನಿಕ ಜಗತ್ತಿನ ಸೆಳೆತ ಒಂದೆ ಕ್ಷಣಕ್ಕೆ ಮಾರು ದೂರ ಎಳೆದುಕೊಂಡು ಹೋಗುತ್ತಿದೆ. ಹೀಗೆ ಹೋದರೆ ಮುಂದೆ ಒಂದು ದಿನ ಮನೆಗಳ ಪಳಯುಳಿಕೆಗಳು ಮಾತ್ರ ಉಳಿದಾವು, ಕಥೆ ಹೇಳಲು. ಜೀವ ತುಂಬುವವರಿರುವುದಿಲ್ಲ…
(ಮುಂದುವರೆಯುವುದು)
ಪೂರ್ಣಪ್ರಮತಿಯ ಕುಟುಂಬಕ್ಕೆ ಸೇರಿ ನಾಲ್ಕು ವರ್ಷಗಳು ಕಳೆದವು. ಗುರುಗಳಾದ ಪರಮಪೂಜ್ಯ ಪೇಜಾವರ ಶ್ರೀಗಳ ಅನುಗ್ರಹದ ಆದೇಶದಂತೆ ಅಧ್ಯಯನ ಮುಗಿಸಿ ಅಧ್ಯಾಪಕನಾಗಲು ಪೂರ್ಣಪ್ರಮತಿಗೆ ಬಂದೆ. ಆದರೆ ನಂತರ ತಿಳಿಯಿತು, ಅಧ್ಯಾಪಕ ಎನ್ನುವ ಪದಕ್ಕೆ ಸರಿಯಾದ ತೂಕ ನೀಗಿಸಲು, ಅದೊಂದು ಜ್ಞಾನದ ಭಂಡಾರವಾಗಿ, ಉತ್ಸಾಹದ ಚಿಲುಮೆಯಾಗಿ ಪ್ರತಿ ಮಕ್ಕಳ ಮನಸ್ಥಿತಿ ಅರಿತು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸದಾ ತಾನು ಅಧ್ಯಯನ ಶೀಲನಾಗಿ, ಕ್ರಿಯಾಶೀಲನಾಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಆದರೆ ಗುರುಗಳಾಗುವ ಸಾಮರ್ಥ್ಯ ಬಹಳ ಕಷ್ಟಸಾಧ್ಯ. ಚಂದ್ರನನ್ನು ಮುಟ್ಟಲು ಸಾಧ್ಯವಿಲ್ಲದಿದ್ದರೂ ಅವನ ಕಡೆಯ ನಡೆಯ ಮಾರ್ಗವನ್ನಾದರೂ ಅರಿಯುವ ಹಾಗೆ ನಮ್ಮಿಂದ ಉತ್ತಮ ಗುರುವಾಗಲು ಸಾಮರ್ಥ್ಯವಿಲ್ಲದಿದ್ದರೂ ಮಹಾಮಹಿಮರ ಸಾಧು ಸಜ್ಜನರ ಮಹಾ ಸಾಧಕರ ಉತ್ತಮ ಶಿಕ್ಷಕರ ಪರಮಗುರುಗಳ ಮಾರ್ಗವನ್ನಾಶ್ರಯಿಸಿದಾಗ ಒಂದು ಮೆಟ್ಟಿಲನ್ನಾದರೂ ಹತ್ತಬಹುದು. ಈ ನಿಟ್ಟಿನಲ್ಲಿ ಗುರುಗಳಾಗಲು ಪ್ರಯತ್ನ, ಸಾಮರ್ಥ್ಯ, ಶಕ್ತಿ, ಇಚ್ಛೆ, ಪೂರಕವಾದ ಜ್ಞಾನವಿತ್ತು ಹಯಗ್ರೀವ ಪರಮಾತ್ಮ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
ಪೂರ್ಣಪ್ರಮತಿಯಲ್ಲಿ ನನ್ನ ಪಾತ್ರ
ಹಿಂದೆ ತಿಳಿಸಿದ ಹಾಗೆ ನಾನು ಗುರುವಲ್ಲ, ಈಗಲೂ ಒಬ್ಬ ವಿದ್ಯಾರ್ಥಿಯಾಗಿದ್ದೇನೆ. ಪೂರ್ಣಪ್ರಮತಿಗೆ ವಿದ್ಯಾರ್ಥಿಯಾಗಿ ಬಂದೆ. ವಿದ್ಯಾರ್ಥಿಯಾಗಿಯೇ ವಿದ್ಯಾರ್ಥಿಗಳಿಂದ ಕಲಿಯುತ್ತಲೂ ಇದ್ದೇನೆ. ಬಂದ ಮೊದಮೊದಲು ಪೂರ್ಣಪ್ರಮತಿಯ ಕಲಿಕೆಯು ತುಂಬಾ ಅಯೋಮಯವಾಗಿ ಕಾಣಿಸಿತು. ಏಕೆಂದರೆ ಈ ಹಿಂದೆ ಇನ್ನೆಲ್ಲೂ ಕಾಣದ ಹೊಸ ಪರಿಸರ ನೂತನ ಮಾದರಿಯ ಶಾಲೆಯನ್ನು ಕಂಡೆ. ಇಲ್ಲಿಯ ತತ್ವವು ತುಂಬಾ ಅದ್ಭುತವಾದದ್ದು. ಏಕೆಂದರೆ ಈಗಿನ ಕಲಿಯುಗದ, ವಿದೇಶದ ಮೋಹಗೊಂಡ ಜನರು ಪರದೇಶಿಗಳಾಗಿದ್ದಾರೆ. ಆದ್ದರಿಂದ ನಮ್ಮ ದೇಶದ ಸಂಸ್ಕೃತಿ, ಸಂಸ್ಕೃತ, ಆಚಾರ, ವಿಚಾರ, ಧರ್ಮ, ಸಂಪ್ರದಾಯಗಳು ಯಾವವು ಇವರಿಗೆ ಬೇಡವಾಗಿದೆ. ಈಗ ಬರೀ ಪಾಶ್ಚಾತ್ಯ ಶಿಕ್ಷಣಕ್ಕೆ ಮುಂದಾಗಿರುವರು. ಇಂತಹವರ ಮಧ್ಯೆ ಒಂದು ಸುಸಜ್ಜಿತವಾದ ಅಚ್ಚುಕಟ್ಟಾದ ನೂತನ ಮಾದರಿಯ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಪರಂಪರಾ ಬೀಜ ರಕ್ಷಣೆಯನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡಿರುವ ಶಿಕ್ಷಣವು ಈಗಿನ ಕಾಲದಲ್ಲಿ ದುರ್ಲಭ. ಈ ನಿಟ್ಟಿನಲ್ಲಿ ಪೂರ್ಣಪ್ರಮತಿ ಹೊಸ ಹೆಜ್ಜೆಯನ್ನಿಟ್ಟಿದೆ. ಇದರಲ್ಲಿ ನಮ್ಮ ಪಾತ್ರ ಸಾಗರದಲ್ಲಿರುವ ಚಿಕ್ಕ ಮೀನಿನ ಹಾಗೆ.
ಮೊದಮೊದಲು ಹೊಸದಾದರು ಸ್ವಲ್ಪ ಸಮಯದ ನಂತರ ಸ್ವಲ್ಪ ಸ್ವಲ್ಪವಾಗಿ ಅರಿವಾಯಿತು. ಆರಂಭದಲ್ಲಿ ಪೂರ್ವಪ್ರಾಥಮಿಕ ತರಬೇತಿ ಬಹಳ ಚೆನ್ನಾಗಿತ್ತು. ಇದನ್ನು ತುಂಬಾ ಆಸಕ್ತಿಯಿಂದ ಪೂರ್ಣಗೊಳಿಸಿದೆ. ಆದ್ದರಿಂದ ಅಧ್ಯಾಪನಕ್ಕೆ ಬೇಕಾದ ಅನೇಕ ರೀತಿಯ ಮಾರ್ಗದರ್ಶನ ದೊರೆಯಿತು. ಅದರಲ್ಲಿನ ತತ್ವಗಳು ಮಕ್ಕಳ ಮನಸ್ಸನ್ನು ಅರಿಯಲು ಸಹಕಾರಿಯಾಯಿತು. ಹೀಗೆ ಮೊದಲ ವರ್ಷದ ಅನೇಕ ಏಳು ಬೀಳುಗಳಿಂದ ಎರಡನೆಯ ಹಾಗೂ ಮೂರನೆಯ ವರ್ಷವೂ ತಕ್ಕ ಮಟ್ಟಿಗೆ ಅಧ್ಯಯನ ಹಾಗೂ ಅಧ್ಯಾಪನ ಮಾಡಲು ಪೂರಕವಾಗಿತ್ತು. ಹೀಗೆ ಮೂರು ವರ್ಷದ ಅನುಭವದಿಂದ ಹೊಸ ರೀತಿಯ ಉತ್ಸಾಹ, ದೃಢವಾಗಿ ಮಾಡುವ ಧೈರ್ಯ ಬಂದಿರುವಾಗಲೇ, ನನ್ನ ಸ್ಥಾನವೂ ಬೇರೆಯಾಯಿತು. ಪೂರ್ಣಪ್ರಮತಿಯು ಹೊಸದಲ್ಲದಿದ್ದರೂ, ತರಗತಿಯು ಹೊಸದಾದು, ಆದ್ದರಿಂದ ಇಲ್ಲಿಯೂ ಪುನಃ ನಾನು ವಿದ್ಯಾರ್ಥಿಯಾದೆ. ಅಂದರೆ ನಮ್ಮ ಜೀವನ ಪೂರ್ತಿ ನಾವು ವಿದ್ಯಾರ್ಥಿಗಳಂತೆ (ಅಂದರೆ ಇದರರ್ಥ ಅಧ್ಯಯನ ಎಂದು, ಎಷ್ಟು ಮಾಡಿದರೂ ಕಡಿಮೆಯೇ, ಅದರಲ್ಲಿ ಪಕ್ವತೆ, ಪರಿಪೂರ್ಣತೆ ನಿರಂತರ ಅಧ್ಯಯನ ಅಧ್ಯಾಪನದಿಂದಲೇ) ಹೀಗಾಗಿ ನಾನು ನನ್ನನ್ನು ಅವಲೋಕಿಸಿಕೊಂಡ ವಿದ್ಯಾರ್ಥಿಯಾಗಿಯೇ ಇದ್ದು, ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಾ ವಿದ್ಯಾರ್ಥಿಗಳಿಂದಲೇ ಕಲಿಯುತ್ತಾ ಇದ್ದೇನೆ. ಹೀಗೆ ಕಲಿಯುತ್ತ ಕಲಿಯುತ್ತಾ ಬೆಳೆಯುವ ಪ್ರಯತ್ನದಲ್ಲಿದ್ದೇನೆ.
ಒಟ್ಟಿನಲ್ಲಿ ಯಾವಾಗ ಪಾಠ ಮಾಡಲು ಪ್ರಾರಂಭವೋ ಆಗಲೇ ವಿದ್ಯಾರ್ಥಿಯಾಗುವುದು. ಈ ನಿಟ್ಟಿನಲ್ಲಿ ನಾನು ಪೂರ್ಣಪ್ರಮತಿಯಲ್ಲಿ ಶಿಕ್ಷಕನಾದ ಮೇಲೆ ಅನೇಕ ಕಲಿಕೆಯಾಗಿದೆ. ಹಿಂದಿನ ವರ್ಷದಲ್ಲಿ ಹಾಗೂ ಇತರೆ ವರ್ಷಗಳ ಉತ್ಸವದಲ್ಲಿ ವಿಷಯಾಧಾರಿತ ಅಧ್ಯಯನಕ್ಕಿಂತ ಹೆಚ್ಚಾಗಿ ನನಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಇರುವುದರಿಂದ ಅದರಲ್ಲಿಯೇ ತುಂಬಾ ಮುಂದುವರೆಯಿತು. ಮಾಡೆಲ್, ಚಾರ್ಟ್, ಸ್ಕ್ರೀನ್, ಚಿತ್ರ ಹೀಗೆ ವಿಷಯಕ್ಕೆ ಪೂರಕವಾದ ಮಾದರಿಗಳ ತಯಾರಿಯಲ್ಲೇ ಮನಸ್ಸು ಹರಿದದ್ದರಿಂದ ವಿಷಯಗಳ ಅಧ್ಯಯನ ಕುಂಠಿತವಾಯಿತು. ಆದರೆ ಅಧ್ಯಯನವು ಬಹಳ ಮುಖ್ಯವಾದ್ದರಿಂದ ಮುಂದಿನ ದಿನಗಳಲ್ಲಿ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ದೇವರ, ಗುರುಗಳ ದಯೆಯಿಂದ ಅಂತಹ ಜ್ಞಾನ, ಶಕ್ತಿಬರಲೆಂದು ಪ್ರಾರ್ಥಿಸುತ್ತೇನೆ.
“Education is the manifestation of the perfection present already in man. Divinity is the manifestation of the religion already in man” – said Swami Vivekananda.
There have been many schools of thoughts, ideas, ideologies and theories about what the meaning of education is and what should be the ultimate purpose of the education since ages. We can blatantly put it that this is not demystified yet.
Some are of the opinion that education must make a human being economically successful and thereby gain name and fame for him in the society. All other purposes are secondary. Some others are of the opinion that if education does not make him a better human being and helpful to the others in the society, all the efforts are futile.
There is also a group which takes a mid path to support the idea that both these have to be kept mind to ensure they strike a balance between the two.
I have been pondering on this for quite a long time and all these thought seems to be limited in one or the other way. Howsoever you put it across, there is no conclusive ultimatum which we can boast of and declare that we have found an answer.
When I think about education, it is just like any other areas of life. A permanent evolutionary process over the years and centuries. Since, the dawn of a civilized living, man has been able to use his brain and mind to decode the knowledge of the natural and unnatural things that surrounded him in various depths and gravities. It is as though, very natural to be inquisitive and seeking. If it is only because of the modern life demands and customized approach to meet the economical needs of the society that categorization of knowledge happened in to various sectors and streams. Of course it is of great use in vocational skill development and create a source of income for self dependency. But, what about the satisfaction of the inner urge to explore everything around us and beyond us? What about that inexplicable happiness and contentment we get out of sheer learning and creating something based on that knowledge without any hidden agendas. Simply, the goal of learning is, learning itself? That boundless feeling of let me explore it to the sake of soul satisfaction and its results, no matter if it has any economical value or simply spiritual value that an individual can get, is unparallel to all the materialistic achievements.
By letting a child deeply engaging in anything that interests him without harsh boundaries of syllabus and examination fear, he would be spiritually interested in the concept and motivates himself to explore more and more about the same. What he finds may not be of any immense value for others from their perspective but for that child, the whole universe comes alive and he finds the meaning and purposes of his life.
You may ask as often does the world, how then someone can also survive in this competitive world and make his living? The answer is rather reversing and simple. No amount of money, name and great achievements in the world have saved people from getting depressed, hurt, worried and suffering. Rather, people who have found their passions, love of the subjects and an opportunity to deep dive in their area of interest have always made huge differences in the world by contributing their best.
Ask a painter who loves his work, ask an artist who loves his plays, ask a poet about his love for words….watch them light up with joy and that divine contentment he has when that calling has been met. It is the ultimate joy and bliss.
We at Purnapramati understand this and are committed to make each child meet with his divine gifts by holding their hands to the paradise they love to walk through and set them free on an adventure of their own for life time. With the backing of the divine texts and treatises and blessings of the great Gurus and the Montessori museum of wonders, we are sure our children are evolving exactly the same way they are meant to be and that we can help them sculpt themselves in to the form they desire to bloom in!
Let us keep our doors open to whoever is destined to join this Anandavana and become beautiful flowers and fruits. Let us find our own divine calling in this service and let the children discover their divine calling no matter what the hardships and challenges we face in the form of Corona or any other least significant challenges!
ಪೂರ್ಣಪ್ರಮತಿಯೆಂಬ ಕಲಿಕಾ ಸಮುದಾಯಕ್ಕೆ ಸ್ವಾಗತ…
ಪೂರ್ಣಪ್ರಮತಿಯು ಒಂದು ಕ್ರಾಂತಿಯಲ್ಲ. ಆಂದೋಲನವಲ್ಲ. ಇದೊಂದು ಸಂಯೋಜನೆ ಮಾತ್ರ. ಇಲ್ಲಿ ಮನಸ್ಸುಗಳನ್ನು ಪರಿವರ್ತಿಸುವ ಉದ್ದೇಶವಿಲ್ಲ. ಸಮಾನ ಮನಸ್ಕರಿಗೆ ಇದೊಂದು ಒಕ್ಕೂಟದ ವೇದಿಕೆ; ಅಷ್ಟೆ. ಅಂತಹ ಮನಸ್ಕರು ಸೇರಿ ಭಾರತೀಯ ಸಂಸ್ಕೃತಿಯ ಬಗ್ಗೆ, ಅಲ್ಲಿನ ನಡಿಗೆಗಳ ಬಗ್ಗೆ, ಚಿಂತನೆಗಳ ಬಗ್ಗೆ, ಪರಂಪರೆಗಳ ಬಗ್ಗೆ ಆಳವಾಗಿ ಅಭ್ಯಸಿಸಲು, ಅಭ್ಯಸ್ತರು ಹಾಗೆ ಬದುಕಲು ಒಂದು ಹೊಸ ಸಮುದಾಯವನ್ನು ಕಟ್ಟುವುದಕ್ಕಾಗಿ ಈ ಪ್ರಯತ್ನ.
ಆಧುನಿಕತೆಯ ರಭಸದಲ್ಲಿ ವಿಶ್ವದಾದ್ಯಂತದ ಪ್ರಾಚೀನ ಪರಂಪರೆಗಳು ಕಂಗೆಡುತ್ತಿವೆ: ತಾವೂ ಆಧುನಿಕಗೊಳ್ಳುತ್ತಾ ಅಥವಾ ಬೆಚ್ಚಿ ಅವಿತುಕೊಳ್ಳುತ್ತಾ ಈ ರಕ್ಕಸಿ ವಿಷಮತೆಗೆ ಸಮಾನತೆಯೊಂದೇ ನ್ಯಾಯ ಒದಗಿಸಬಲ್ಲದು. ಅದಕ್ಕಾಗಿ ಸಮಸ್ತರಲ್ಲಿ ನಿಂತು ಆಧುನಿಕತೆಯೊಂದಿಗೆ ಅರ್ಥಪೂರ್ಣವಾದ ಸಂವಾದವನ್ನು ನಡೆಸುತ್ತಾ ಪರಂಪರೆಗಳನ್ನು ಕಾಯ್ದುಕೊಳ್ಳಬೇಕು. ಆಧುನಿಕತೆಯ ಉದ್ದಗಲದ ಅಸಮಾನತೆಯನ್ನು ನೀಗಿಸಲು ಪರಂಪರೆಯ ಆಳದ ಮೊರೆಹೋಗಬೇಕು.
ಇದಕ್ಕಾಗಿ ಒಂದು ಹೊಸ ಸಂಯೋಜನೆ ಆಗಬೇಕು. ಸಮುದಾಯ ಕಟ್ಟಬೇಕು. ಅದಕ್ಕಾಗಿ ಪೂರ್ಣಪ್ರಮತಿ ಪ್ರಯತ್ನಿಸುತ್ತಿದೆ. ಇಲ್ಲಿ ಅಭಿಪ್ರಾಯಗಳನ್ನು ಹೇರುವ ಉದ್ದೇಶವಿಲ್ಲ. ಗಟ್ಟಿ ನಿರ್ಧಾರದ ನಾಲ್ಕು ಮನಸ್ಸುಗಳು ಸೇರಬೇಕಷ್ಟೆ. ಹಾಗಾಗಿ ಇದೊಂದು ಸಂಸ್ಥೆಯೆಂಬುದು ನೆಪಮಾತ್ರ. ನಾಲ್ಕಾರು ಜನ ಒಂದು ಕುಟುಂಬವಾಗಿ, ಸಮುದಾಯವಾಗಿ, ತಮ್ಮ ತಮ್ಮ ವಿಚಾರಗಳಲ್ಲಿ ನೆಲೆನಿಂತು ಬದುಕಬೇಕು. ಅವರವ ಸ್ವಾಸ್ಥ್ಯ, ಸಂಸ್ಥೆಯ ಸುಸ್ಥಿತಿಗೆ ಕಾರಣವಾಗುತ್ತದೆ. ಸಂಸ್ಥೆಯ ಆಚಾರಗಳು ಸ್ಥಿರವಾಗುತ್ತದೆ.
ಇಲ್ಲಿ ಎಲ್ಲರಿಗೂ ಬೇರಿನದ್ದೇ ಚಿಂತೆ. ಬೇರು ಕೀಳದಂತೆ ರಕ್ಷಿಸುವ ತವಕ. ಬೀಜ ಮರೆಯಾಗದಂತೆ ಉಳಿಸಿಕೊಳ್ಳುವ ಆದರ. ಯಾರಿಗೂ ಹಣ್ಣಿನ ಆಸೆಯಿಲ್ಲ. ಬೀಜರಕ್ಷೆಯೇ ಇಲ್ಲಿನ ಧ್ಯೇಯ. ಅದರ ಜೊತೆಗೆ ಸಾವಿರಾರು ವರ್ಷಗಳಿಂದ ಆಳವಾಗಿ ಪಸರಿಸುವ ಬೇರನ್ನು ಗಟ್ಟಿಗೊಳಿಸುವ ಸವಾಲು. ಹಗಲಿನಲ್ಲಿ ಕಾಣದಿದ್ದರೂ, ದೂರದಲ್ಲಿದ್ದರೂ, ಸೂರ್ಯನೇ ಕಾಣದ ರಾತ್ರಿಯಲ್ಲೂ ಕಾಣುವಂತಾಗಲು.
ನೀವು ಇಂತಹುದೇ ಆಲೋಚನೆಯಲ್ಲಿದ್ದೀರೆ! ಬನ್ನಿ! ಬೀಜರಕ್ಷೆಗಾಗಿ! ಬುಡಕಟ್ಟಿಗಾಗಿ! ನಮ್ಮನ್ನೆಲ್ಲಾ ಬೆಸೆಯಲು ಇಲ್ಲಿ ಕೆಲವು ನಿಯಮಗಳಿವೆ. ಈ ನಿಯಮಗಳು ನಮ್ಮನ್ನಾರನ್ನೂ ನಿರ್ಬಂಧಿಸಲಾರವು. ಆದರೆ ನಮ್ಮೆಲ್ಲರನ್ನೂ ಬೆಸೆದ ನಿಯಮಗಳಿವು. ಭಾರತೀಯ ಸಂಸ್ಕೃತಿಯಂತೆ.
[ಅಂಕಣ ಬರಹ – ೪]
ನೀಲಾ ದಾರಿಯಲ್ಲಿ ಬರುತ್ತಾ ನಾಯಿ, ಬೆಕ್ಕು, ಹಂದಿ, ಹಾವು ಹೀಗೆ ಎಲ್ಲದರ ಬಗ್ಗೆ ಯೋಚಿಸುತ್ತಾ ಬರುತ್ತಿದ್ದಳು. ’ಪ್ರಾಣಿಗಳು ಒಮ್ಮೆಗೆ ಹಲವು ಮಕ್ಕಳನ್ನು ಪಡೆಯಬಲ್ಲವು. ಮತ್ತು ಸಾಕಬಲ್ಲವು. ಹೇಗೆ?? ಹಾಗಾದರೆ ಸಸ್ಯಗಳು!!! ಹಾ…ಸಸ್ಯಗಳೂ ಹಲವು ಬೀಜಗಳನ್ನು ಸೃಷ್ಟಿಸುತ್ತವೆ’. ಈ ಬೀಜಗಳ ವಿಶೇಷವೇ ವಿಶೇಷ..ಎಂದು ಗಾಢವಾಗಿ ಆಲೋಚಿಸುತ್ತಾ ’ಈ ಬೀಜಗಳು ಒಂದು ರೀತಿಯಲ್ಲಿ ನಿಜವಾದ ಸಂಪತ್ತು. ಬ್ಯಾಂಕಿನಲ್ಲಿ ೧೦೦.ರೂಗಳನ್ನು ಇಟ್ಟರೆ ಮುಂದಿನ ಒಂದು ವರ್ಷದ ನಂತರವೂ ೧೦೦ ರೂಪಾಯಿಗಳೇ ಆಗಿರುತ್ತದೆ. ಅದೇ ಒಂದು ಬೀಜವನ್ನು ಭೂಮಿಯಲ್ಲಿ ಹಾಕಿದರೆ ಒಂದು, ನೂರಾಗುವುದು. ಹಾಗಾದರೆ ನಿಜವಾದ ಸಂಪತ್ತು ಎಂದರೆ ಯಾವುದು? ಇದೇ ಅಲ್ಲವೆ?! ಅದಕ್ಕೆ ಭೂಮಿಯನ್ನು ಶ್ರೀದೇವಿ ಎನ್ನುವುದು’ ಎಂದು ಯೋಚಿಸುತ್ತಾ ದನಗಳು ಎತ್ತ ಹೋದವೋ ನೋಡಲೇ ಇಲ್ಲ. ಸರಿ..ದನಗಳಿಗೆ ದಾರಿ ಚೆನ್ನಾಗಿ ಗೊತ್ತಿದೆ. ಮೇದು ತಾನಾಗೇ ಬರುತ್ತವೆ ಎಂದುಕೊಂಡು ಒಂದು ಮರದ ಕೆಳಗೆ ಎಲೆ-ಅಡಿಗೆ ಜಗಿಯುತ್ತಾ ಕುಳಿತಳು. ಒಂದೆರಡು ಮಕ್ಕಳು ಅದೇ ದಾರಿಯಲ್ಲಿ ಶಾಲೆಗೆ ಹೊರಟಿದ್ದರು. ಮಕ್ಕಳ ಕೈಲಿ ಬುತ್ತಿಯನ್ನು ನೋಡಿ ’ಏನು ಇವತ್ತು ಡಬ್ಬಿಯಲ್ಲಿ?’ ಎಂದು ಸುಮ್ಮನೆ ಬಾಯಿಮಾತಿಗೆ ಕೇಳಿದಳು. ಅವರು ’ಅಮ್ಮ ರೊಟ್ಟಿ ಹಾಕಿದ್ದಾಳೆ’ ಎಂದ, ಹೊತ್ತಾಯ್ತು ನೀಲಕ್ಕ, ರೊಟ್ಟಿ ತಿಂದರೆ ಗಟ್ಟಿ ಎಂದು ಜೋರಾಗಿ ಹಾಡುತ್ತಾ, ನಗುತ್ತಾ ಅವರು ಹೊರಟರು.
’ರೊಟ್ಟಿ ತಿಂದರೆ ಗಟ್ಟಿ..ರೊಟ್ಟಿ ತಿಂದರೆ ಗಟ್ಟಿ’ ಮತ್ತೆ ಮತ್ತೆ ಅದೇ ಹಾಡು ಗುನುಗುತ್ತಿತ್ತು ನೀಲಾಳ ಬಾಯಲ್ಲಿ. ಹೀಗೆ ಬುತ್ತಿ ಕಟ್ಟುವುದು ಅಮ್ಮನ ಅದ್ಭುತ ವಾತ್ಸಲ್ಯ. ಮಗು ಏನು ತಿಂದರೆ ಒಳ್ಳೆಯದು, ಯಾವಾಗ ತಿನ್ನಬೇಕು ಎಂದು ಯೋಚಿಸಿ ಮೊದಲೆ ಕೊಟ್ಟು ಕಳುಹಿಸಿರುತ್ತಾಳೆ. ಈ ವಾತ್ಸಲ್ಯಕ್ಕೆ ಎಣೆ ಯಾವುದು?! ಗಿಡಗಳೇನು ಕಡಿಮೆ ಇಲ್ಲ. ತನ್ನಿಂದ ಒಂದು ಬೀಜ ಸಿಡಿದರೆ ಅದು ಎಲ್ಲಿ ಹೋಗಿ ಬೀಳಬೇಕು, ಭೂಮಿಯಲ್ಲಿ ಬಿದ್ದ ಮೇಲೆ ಹೇಗೆ ಭದ್ರವಾಗಬೇಕು, ಎಷ್ಟು ಆಳಕ್ಕೆ ಬೇರು ಬಿಟ್ಟರೆ ಬೇಸಿಗೆಯಲ್ಲೂ ನೀರು ಸಿಗುವಂತೆ ಬದುಕಬಹುದು, ಶತ್ರುಗಳು ಕಾಯಿ-ಹಣ್ಣು ಕೀಳಲು ಬಂದಾಗ ಹೇಗೆ ರಕ್ಷಿಸಿಕೊಳ್ಳಬೇಕು, ಆಶ್ರಯ ಕೊಟ್ಟ ಭೂಮಿಯನ್ನೂ ಹೇಗೆ ಕಾಪಾಡಬೇಕು ಎನ್ನುವ ಬುದ್ಧಿಯನ್ನೆಲ್ಲಾ ಮೊದಲೇ ಹೇಳಿ, ಬೀಜಕ್ಕೆ ಸಂಸ್ಕಾರ ಕೊಟ್ಟು ಕಳುಹಿಸುತ್ತಾಳೆ. ತನ್ನ ಬದುಕಿನ ಎಲ್ಲವನ್ನೂ ತಾನೇ ನಿಭಾಯಿಸಿಕೊಳ್ಳಲು ಸಿದ್ಧ ಮಾಡಿ ಕಳುಹಿಸುತ್ತಾಳೆ. ಇದಕ್ಕೆ ಸರಿಯಾಗಿ ಭೂದೇವಿ ಮಣ್ಣು, ಪೋಷಕಾಂಶ ಎಲ್ಲ ಕೊಟ್ಟು ಕೈ ಹಿಡಿಯುತ್ತಾಳೆ. ಸೂರ್ಯ ಬೆಳಕು, ಮಳೆ ತಂದು ಬೆಳೆಸುತ್ತಾನೆ. ಈ ವಾತ್ಸಲ್ಯಕ್ಕೆ ಮಾತು ಬೇಕೇ?
ನೋಡ ನೋಡುತ್ತಿದ್ದಂತೆ ಮಧ್ಯಾಹ್ನವಾಗುತ್ತಾ ಬಂದಿತು. ದನಗಳು ಹತ್ತಿರ ಬಂದಂತೆ ಕಂಡವು. ಅವಳು ಕೂತಲ್ಲಿಂದ ಇನ್ನೇನು ಸ್ವಲ್ಪ ದೂರದಲ್ಲಿ ಒಂದು ಮುಳ್ಳಿನ ಪೊದೆಯೊಳಗೆ ನುಗ್ಗಿದವು. ಇವಳು ಅಲ್ಲಿಂದಲೇ ಕೂಗುತ್ತಾ ಹೊಯ್ ಹೊಯ್ ಎಂದು ಗದರಿಸಿದಳು. ಪೊದೆಯಿಂದ ತಪ್ಪಿಸಿಕೊಳ್ಳಲು ಕೊಂಬಿನಿಂದ ನೆಲ ಕೆರೆಯಲು ಪ್ರಾರಂಭಿಸಿತು ಒಂದು ಹಸು. ಹಾಗೂ ಹೀಗೂ ಮಾಡಿ ಹೊರಬಂತು. ಇವಳೂ ಅಷ್ಟರಲ್ಲಿ ಹತ್ತಿರ ಓಡಿ ಇತ್ತ ಕಡೆ ಎಳೆದುಕೊಂಡಳು. ಈ ಜಗ್ಗಾಟದಲ್ಲಿ ಅಗೆದ ಆ ನೆಲೆದಲ್ಲಿ ಒಂದು ಚಿಕ್ಕ ಮೂಲಂಗಿ ಗಾತ್ರದ ಒಂದು ಗೆಡ್ಡೆ ಕಾಣಿಸಿತು. ಇದೇನಿದು ಯಾರೋ ಮೂಲಂಗಿ ಬೀಳಿಸಿಕೊಂಡು ಹೋಗಿದ್ದಾರೆ ಎಂದು ನೋಡಲು, ಹುಷಾರಾಗಿ ಬಾಗಿದಳು. ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದಳು. ಆದರೆ ಬರಲಿಲ್ಲ. ಎಳೆಯಲು ಪ್ರಯತ್ನಿಸಿದಳು. ಅದು ಇನ್ನೊಂದಕ್ಕೆ ಸೇರಿಕೊಂಡಿರುವಂತೆ ಅನಿಸಿತು. ಅಗೆದು ತೆಗೆಯೋಣ ಅನಿಸಿತು. ನಿಧಾನವಾಗಿ ಅದು ಹಾಳಾಗದಂತೆ ಅಗೆಯಲು ಪ್ರಯತ್ನಿಸಿದಳು. ಅಬ್ಬಾ! ಮೂರು ಅಡಿ ಒಳಗೆ ಒಂದು ದೊಡ್ಡ ಆಶ್ಚರ್ಯ ಕಾದಿದೆ. ಮೇಲೆ ಒಂದು ಸಣಕಲು ಮುಳ್ಳಿನ ಗಿಡ, ಹೂವಿನಲ್ಲೂ ಘಮ-ಘಮವಿಲ್ಲ, ಮುಳ್ಳು ಬೇರೆ, ಎಲೆಗಳು ಚಿಕ್ಕವು. ನೋಡಲು ಆಕರ್ಷಕವೂ ಇಲ್ಲ. ಒಳಗೆ ಒಂದು ದೊಡ್ಡ ಪ್ರಪಂಚವೇ ಅಡಗಿದೆ. ಅದಕ್ಕೆ ಹೇಳೋದು ಮೇಲೆ ನೋಡಿ ಯಾರನ್ನೂ ಅಳೆಯಬಾರದು ಎಂದು ಯೋಚಿಸುತ್ತ ನೀಲಾ ಕುತೂಹಲ ತಡೆಯಲಾಗದೆ ಅದನ್ನು ಸ್ವಲ್ಪ ರುಚಿ ನೋಡಲು ಶುರುಮಾಡಿದಳು. ಸ್ವಲ್ಪ ಗೆಣಸು ತಿಂದ ರುಚಿ ಹತ್ತಿತು. ಆದರೆ ಗೆಣಸಲ್ಲ. ಸರಿ ಯಥಾ ಪ್ರಕಾರ ಅದನ್ನು ತೆಗೆದುಕೊಂಡು ಸಾವಿರಾರು ಪ್ರಶ್ನೆಗಳೊಂದಿಗೆ ನೀಲಾ ಮನೆ ಬಂದಳು. ಈ ಬಾರಿ ಮಾವ ಮನೆಯಲ್ಲಿ ಇರಲಿಲ್ಲ. ಪೇಟೆಗೆ ಯಾವುದೋ ಕೆಲಸಕ್ಕೆ ಹೋಗಿದ್ದರು. ಇವಳಿಗೆ ಕಾಯುವ ತಾಳ್ಮೆ ಇರಬೇಕಲ್ಲ. ಪ್ರಶ್ನೆಗಳು ಒಳಗಿಂತ ಗುದ್ದಾಡುತ್ತಿವೆ. ಅದನ್ನು ಹಿಡಿದು ಆ ಊರಿನ ವೈದ್ಯರ ಬಳಿ ಓಡಿದಳು. ಇದರ ಬಗ್ಗೆ ತಿಳಿಯುವವರೆಗೆ ಅವಳಿಗೆ ಏನೋ ಕಳೆದುಕೊಂಡಂತೆ. ತನಗೆ ಗೊತ್ತಿರಬೇಕಾದ ಯಾವುದೋ ಗೊತ್ತಿಲ್ಲದಂತೆ ಎನಿಸಿ ಕಳವಳಿಸಿದಳು. ಅವಳು ಪ್ರಕೃತಿಯೊಡನೆ ಅಷ್ಟು ಬೆರೆತು ಹೋಗಿದ್ದಳು. ಹೀಗೆ ದಿನದಿಂದ ದಿನಕ್ಕೆ ಇವರ ನಡುವೆ ಸಂಬಂಧಗಳು ಬಲವಾಗುತ್ತಿದ್ದವು.
ವೈದ್ಯರು ಯಾರಿಗೋ ಒಂದು ಚೂರ್ಣ ತಯಾರಿಸಿ ಬೆಳಗ್ಗೆ – ರಾತ್ರಿ ಜೇನುತುಪ್ಪದಲ್ಲಿ ಬೆರೆಸಿ ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ಇವಳು ಒಂದೇ ಉಸಿರಲ್ಲಿ ಬಂದವಳೆ ಅದನ್ನು ತೋರಿಸಿದಳು. ವೈದ್ಯರು ’ಓಹೋ ನೀಲಾ ಇದೇನು, ಶತಾವರಿ ತಂದಿದ್ದೀಯಾ? ನಿನಗೆ ಎಲ್ಲಿ ಸಿಕ್ಕಿತು ಎಂದರು’. ಇವಳಿಗೋ ಅದರ ಹೆಸರೂ ತಿಳಿದಿರಲಿಲ್ಲ. ಓಹೋ ಇದು ಶತಾವರಿ ನಾ ಎಂದು ಆಶ್ಚರ್ಯದಿಂದ ಕಣ್ಣರಳಿಸಿದಳು. ’ಶತಾವರಿ ಹೆಸರೇ ಚೆನ್ನಾಗಿದೆ. ಹಾಗೆಂದರೆ?!’ ಎಂದು ಮತ್ತೆ ಪ್ರಶ್ನೆ ಮಾಡಿದಳು. ಅವರು ’ಹಾಗೆಂದರೆ ಹಲವು ಮಕ್ಕಳ ತಾಯಿ’ ಎಂದರು. ’ಓಹ್ ಇದು ಇನ್ನೂ ಚೆನ್ನಾಗಿದೆ’. ಬೆಕ್ಕು, ಹಂದಿ, ನಾಯಿಯ ಹಾಗೆ ಇದೂ ಹಲವು ಮಕ್ಕಳ ತಾಯಿ, ಶತಾವರಿ..ಶತಾವರಿ ಎಂದು ಜಪಿಸುತ್ತಿದ್ದಳು. ಅದರ ಬಗ್ಗೆ ಎಲ್ಲಾ ತಿಳಿಯುವ ಆಸೆ ಇವಳಿಗೆ. ಅವಳ ತಣಿಯದ ಕುತೂಹಲವನ್ನು ಭರಿಸಲು ಅವರು ಒಂದು ಹಳೆಯ ಗ್ರಂಥವನ್ನು ಹಿಡಿದು ಒಳಮನೆಯಿಂದ ಹೊರಜಗಲಿಗೆ ಬಂದರು. ಈ ಶತಾವರಿ ಇದ್ದಾಳಲ್ಲ…ಇವಳು ಗಿಡಗಳ ಮಹಾರಾಣಿ. ಹಲವು ಮಕ್ಕಳನ್ನು ಮಾಡಿಕೊಂಡು ಇರುತ್ತಾಳೆ. ಅದಕ್ಕೆ ಶತಾವರಿ ಎನ್ನುತ್ತಾರೆ. ಇದಕ್ಕೆ ನಾರಾಯಣಿ ಗಿಡ ಎಂತಲೂ ಕರೆಯುತ್ತಾರೆ’ ಎಂದು ಪ್ರಾರಂಭಮಾಡಿದರು. ನೀಲಾಳಿಗೆ ಇನ್ನೊಂದು ಹೊಸ ಆಪರೂಪದ ಗಿಡ ತಿಳಿಯುತ್ತಿರುವ ಆನಂದವಾಗುತ್ತಿದೆ…ಇವರ ಮಾತೂ ಹೀಗೆ ಮುಂದುವರೆಯಿತು…