♣
–
ಸಂಪಾದಕೀಯ
– ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ)
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ
ಎಂಬ ಮಾತನ್ನು ಕೇಳುತ್ತಾ ಬೆಳೆದವರು ನಾವು. ನದಿ, ಬೆಟ್ಟ, ಮಣ್ಣು – ಪ್ರಕೃತಿಯ ಕಣಕಣವನ್ನೂ ತಾಯಿಯಂತೆ ಕಾಣುವ ಸಂಸ್ಕಾರವನ್ನು ನಮಗೆ ನಮ್ಮ ಹಿರಿಯರು ಹೇಳಿ ಕೊಟ್ಟಿದ್ದಾರೆ. ಭಾರತ ಒಂದು ಭೌಗೋಳಿಕ ಅಸ್ತಿತ್ವ ಮಾತ್ರವಲ್ಲ. ಕಲೆ, ಶಾಸ್ತ್ರಜ್ಞಾನ, ಋಷಿ ಪರಂಪರೆಗಳ ಅಸ್ತಿತ್ವವೂ ಹೌದು. ಸಂಪ್ರದಾಯಗಳ ಭದ್ರಬುನಾದಿಯ ಮೇಲೆ ಉನ್ನತಜೀವನ ಮೌಲ್ಯಗಳನ್ನು ಜೀವಂತವಾಗಿ ಉಳಿಸಿಕೊಂಡಿರುವ ಭವ್ಯ ಭಾರತ ನಮ್ಮ ಅಸ್ಮಿತೆಯೂ ಆಗಿದೆ. ಹಲವಾರು ರಾಜಕೀಯ, ಸಾಮಾಜಿಕ, ಸಾಂಪ್ರದಾಯಿಕ ದಾಳಿಗಳ ನಂತರವೂ “ಅಖಂಡಭಾರತ”ವಾಗಿಯೇ ಉಳಿದಿದೆ. “ಆನಂದಮಠ” ಕಾದಂಬರಿಯಲ್ಲಿ ಬಂಕಿಮಚಂದ್ರ ಚಟರ್ಜಿಯವರು ದೇಶರಕ್ಷಣೆಗೆ ಪ್ರಾಣ ಯಾರಾದರೂ ಕೊಡಬಲ್ಲರು, “ತಮ್ಮ ಹೃದಯದ ಭಕ್ತಿಯನ್ನು ಕೊಡಲು ಸಾಧ್ಯವೇ ?” ಎಂಬ ಪ್ರಶ್ನೆಯೊಂದಿಗೆ ನಮ್ಮನ್ನು ಮೂಲ ಬೇರಿನೊಂದಿಗೆ ಜೋಡಿಸಿದ್ದಾರೆ. ಅರವಿಂದ ಘೋಷ್ ಅವರು ತಮ್ಮ “ಭವಾನಿ ಮಂದಿರ” ಲೇಖನದಲ್ಲಿ ಭಾರತ, ವಿಶ್ವಮಾತೆಯಾಗಲು ಬೇಕಾದುದು ನಾವು ಕಳೆದುಕೊಂಡಿರುವ ಆಧ್ಯಾತ್ಮದ ನೆಲೆಯನ್ನು ಮತ್ತೆ ಕಂಡುಕೊಳ್ಳುವುದೇ ಸಾಧನ ಎಂದು ಮನವರಿಕೆ ಮಾಡಿದ್ದಾರೆ.
ಆಧುನಿಕತೆಯ ಜ್ಞಾನ ನಮ್ಮನ್ನು ಬಹಿರ್ಮುಖಿಗಳಾಗಿ ಮಾಡಿದೆ. ನಮ್ಮೊಳಗೆ ನಾವು ನೋಡಿಕೊಳ್ಳುವ ಸಾಮರ್ಥ್ಯವನ್ನು ಕಸಿದುಕೊಂಡಿದೆ. ಎಲ್ಲರಿಗೂ ತಾನು ಸ್ವತಂತ್ರನಾಗಿರಬೇಕು ಎಂಬ ಹಂಬಲವಿದೆ. ಆದರೆ ಸ್ವತಂತ್ರ ಎಂದರೇನು ಎಂಬ ಅರಿವು ಇಲ್ಲವಾಗಿದೆ. ಆಧುನಿಕತೆ ನಮ್ಮೊಳಗೆ ಇರುವ ಮೋಹ, ಕಾಮ, ಕ್ರೋಧ ಇತ್ಯಾದಿ ವಿಕಾರಗಳನ್ನು ಬಿಂಬಿಸಿ ಬಹಿರ್ಮುಖಿಗಳಾಗಿ ಮಾಡಿದೆ. ಇದ್ದರೂ ಮುಚ್ಚಿಡುವ, ಇಲ್ಲದಿದ್ದರೂ ತೋರ್ಪಡಿಸುವ “ತೋರಿಕೆ” ಪ್ರಪಂಚಕ್ಕೆ ಕೊಂಡೊಯ್ದಿದೆ. ಒಂದೆಡೆ ವಿಕಾರವನ್ನು ಬೆಳೆಸಿದೆ, ಇನ್ನೊಂದೆಡೆ ಅದನ್ನೇ ಸ್ವಾತಂತ್ರ್ಯ ಎಂಬ ಭ್ರಮೆಯನ್ನೂ ಕೊಟ್ಟಿದೆ.
ಸ್ವ + ತಂತ್ರ + ತಾ ಎಂದರೆ ತನ್ನ + ಪರಂಪರೆಯ ಬುನಾದಿಯ ಮೇಲೆ + ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದು “ಸ್ವತಂತ್ರತಾ” ಎಂಬುದು ಪವನ್ ಗುಪ್ತಾ ಅವರು ನೀಡುವ ವ್ಯಾಖ್ಯಾನ. ಹೊರಗೆ ಕಾಣುವ ವಿಭಿನ್ನತೆಗಳ ಬಗೆಗೆ ಎಲ್ಲರೂ ಮಾತಾಡುವರು. ಅದು ಕಾಣಲು ಸಿಗುವಂತಹದ್ದು. ಆದರೆ ಎಲ್ಲರ ಮಧ್ಯೆ ಇರುವ Commonality ಗಳ ಬಗ್ಗೆ ಯಾರೂ ಗಮನ ಕೊಡುವುದಿಲ್ಲ. ತನ್ನೊಳಗೆ ನೋಡುವುದನ್ನು ಹೇಳಿಕೊಟ್ಟರೆ ಪರಂಪರೆ, ಇತಿಹಾಸ, ನಿಸರ್ಗದತ್ತವಾದ ತಂತ್ರ ತಿಳಿಯುವುದು. ಬೀಜ ಬಿತ್ತಿದರೆ ಅದು ಮೊಳಕೆಯೊಡೆದು, ಗಿಡವಾಗಿ, ಮರವಾಗಿ, ಹೂ ಬಿಟ್ಟು, ಕಾಯಾಗಿ, ಹಣ್ಣಾಗಿ, ಬೀಜ ಮಾಡಿ ಪಕ್ಷಿ ಮೂಲಕ ಪಸರಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು. ಪಕ್ಷಿಗೆ ಹಣ್ಣು ಬೇಕು, ಗೂಡು ಕಟ್ಟಲು ಮರ ಬೇಕು. ಮರಕ್ಕೆ ತನ್ನ ಸಂತಾನ ಬೆಳೆಸಲು ಹಕ್ಕಿಯ ಸಹಾಯ ಬೇಕು. ಇದೊಂದು “ತಂತ್ರ” – “ವ್ಯವಸ್ಥೆ”. ನಿಸರ್ಗ ತಾನೇ ಹೆಣೆದಿರುವ ತಂತ್ರ. ಇವುಗಳನ್ನು ಅರ್ಥಮಾಡಿಕೊಂಡು ತನ್ನ ಸ್ವಾತಂತ್ರ್ಯ ಇತರರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಬದುಕುವ ವ್ಯವಸ್ಥೆಯೇ ಧರ್ಮ. ಈ ಧರ್ಮ ಪಾಲನೆಯೇ ಭಾರತದ ಪರಂಪರೆ.
ಪರಂಪರೆಯನ್ನು ಮರೆತವ ತನ್ನನ್ನೇ ಮರೆತಂತೆ. ಪೂರ್ಣಪ್ರಮತಿ ತನ್ನ ಧ್ಯೇಯಕ್ಕೆ ತಕ್ಕಂತೆ ಪರಂಪರಾ ಬೀಜರಕ್ಷೆಯ ಹಿನ್ನಲೆಯಲ್ಲಿ ಆಗಸ್ಟ್ ತಿಂಗಳನ್ನು ಬಹಳ ಸಂಭ್ರಮದಿಂದ ಕಳೆಯಿತು. ಆಗಸ್ಟ್ ತಿಂಗಳು ಬಂತೆಂದರೆ ನಮಗೆ ನಮ್ಮ ರಾಷ್ಟ್ರಹಬ್ಬದ ಸಂಭ್ರಮ. ಶ್ರಾವಣ ಮಾಸವೆಂದರೆ ಹಬ್ಬಗಳ ಸರಮಾಲೆ ಪ್ರಾರಂಭ. ಪೂರ್ಣಪ್ರಮತಿಯಲ್ಲಿ ಈ ತಿಂಗಳು ಹಯಗ್ರೀವ ಜಯಂತಿ, ಕೃಷ್ಣಜನ್ಮಾಷ್ಟಮಿ, ಸ್ವಾತಂತ್ರದಿನಾಚರಣೆಗಳ ವಾತಾವರಣ ತುಂಬಿತ್ತು. ಹಳೆಬೇರು ಹೊಸ ಚಿಗುರು ಎಂಬಂತೆ ಹೊಸ ತಂತ್ರಜ್ಞಾನವನ್ನು ಬಳಸಿಯೇ ಎಲ್ಲಾ ಹಬ್ಬಗಳ ಆಚರಣೆ ನಡೆಯಿತು. ಅತಿಥಿಗಳ ಆಗಮನ, ಅವರ ಮಾರ್ಗದರ್ಶನ, ಮಕ್ಕಳ ಉತ್ಸಾಹದ ಭಾಗವಹಿಕೆ ಎಲ್ಲವನ್ನೂ ನೋಡಿದರೆ Lockdown, COVID-19, Online ಯಾವ ತಡೆಯೂ ಇಲ್ಲದೆ ಆನಂದದಿಂದ ತುಂಬಿದೆ ಎನಿಸಿತು. ಮಕ್ಕಳು, ಪೋಷಕರು, ಅಧ್ಯಾಪಕರು, ಅತಿಥಿಗಳು – ಅಬ್ಬಾ! ಒಟ್ಟು ಕುಟುಂಬವೆಂದರೆ ಇದೇ ಅಲ್ಲವೆ. ಅನುಭವಸ್ಥ ಹಿರಿಯರು, ಅನೇಕ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರು, ಕಲಿಯಲು ಕಾದಿಹ ಪುಟಾಣಿಗಳು, ಸೇತುವೆಯಾಗಿ ಅಧ್ಯಾಪಕರು, ವ್ಯವಸ್ಥೆಗೆ ಪೂರ್ಣಪ್ರಮತಿ ವೇದಿಕೆ ಇದೊಂದು ಅವಿಭಕ್ತ ಕುಟುಂಬವಾಗಿ ಕಂಡಿತು. ಮನೆಮನೆಯಲ್ಲಿ ಪೂರ್ಣಪ್ರಮತಿ, ಮನಮನದಲ್ಲಿ ಪೂರ್ಣಪ್ರಮತಿ ತುಂಬಿತ್ತು. ಇದೆಲ್ಲದರ ವಿವರ ನಿಮಗಾಗಿ ಕಾದಿದೆ. ಓದಿ ಆನಂದಿಸಿ, ನಿಮ್ಮ ಆನಂದವನ್ನೂ ಹಂಚಿಕೊಳ್ಳಿ.
–
ತಿಂಗಳ ತಿಳಿಗಾಳು
(ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ)
Anandakanda – Vidya Guttal (Pratinidhi, Pre-primary)
Dear parents,
Corona virus has hit the world, devastating many places and lives on earth. I always wonder about God’s creation and giving the power to Mother Nature to heal her wounds and burdens naturally. Being invisible to our naked eyes, the virus particles are attacking living beings leaving all non-harming (non-living) elements under safety. But we, being humans, well known for humanity, love and charity have to pray to God to spare all, to establish a better living place for our progeny by paying due respect to our mother earth.
In terms, our mother nature has given an opportunity to realise our mistakes and understand nature’s laws well in advance. So, now it is our responsibility to undertake this project given by nature and prepare ourselves and our kith and kin to get ready for a better future. Along with ourselves, we have to help our future generations, to learn this without any delay. Let’s make a commitment to be committed to the laws of nature and help our children live in harmony with nature. In the present situation, how can we help the children by helping ourselves??
Parents As Primary Educators
No matter how we ( the parents) regard the school, we must realize as parents that, we have the greatest influence on our child’s life because of our unique love. No one knows and cares for our child as well as we do. Educate means “to lead”. As parents, we have the special opportunity to lead the child into activities which are our hobbies, our chores, our spiritual and intellectual life, and our appreciation for the environment. What we share with our own, they remember with a special relish. We always wish what is best for our child even though this involves sacrifice and renunciation. We want to give, but not indulge, to serve but not to over serve, to allow freedom but not license. The school is a natural extension of our home and will help in establishing a balance. The Adhyapaka (The Teacher) will work directly with the child uniquely, in the prepared environment and in the context of other children, but our relationship is still a key aspect. As your child starts out on this great adventure called liberating himself, remember that you are the most important adult, and for your effort there is no substitute.
The Adhyapaka as A Guide
The Adhyapaka is a child advocate in the deepest sense, and has cultivated respect for the child’s total being. As both the psychological and educational director of the classroom, the teacher responds to the essential needs of the children through careful observation first. The child may repeat a certain activity, reinforcing knowledge of a material. The teacher knows when to intervene so that concentration and involvement which is second-nature to the child’s work is encouraged and not interrupted. The emphasis is on the “work-cycle” and the child is his own timekeeper. The trained teacher allows for a natural pace which facilitates unconscious absorption and better retention. Support is given during low productive phases of work which then builds to peak involvements as the day progresses. Teacher-scheduled time is minimized so that the child’s creative choice is given first priority.
Collaboration: Parents and Teachers
Parents and teachers need to work together to support and follow the whole learning process. The school is not a drop-off place; effective use of the school comes best through communication. Children often confide in their parents, and it is important for the teacher to know how the child perceives the day. And of course, the teacher sees the child in a “scientific environment” and has a unique facility for serving children in the context of other children and materials.
The parent and teacher each hold jigsaw pieces which come together to generate a complete picture. Our integrated program also offers parents creative principles for redesigning aspects of their home, for approaching the child with new kinds of tasks and challenges, for discipline, and general understanding. Parent education gives parents another way of seeing which may enhance decisions related to child development. Thinking and talking about children along with other concerned adults offers heightened awareness and a better response to your child’s needs.
Let’s check how we have integrated for the month of August….
August falls in Shravana masa, the 5th lunar month in Hindu calendar and probably it is the holiest. It is choc-a-bloc with festivals and auspicious occasions. They give an opportunity for the children to indulge in all their favourite activities; perform and attend assorted poojas, dress up in new costumes, visit relatives and friends for haldi-kumkum, sing and learn many devotional songs and last but not the least, enjoying a vast range of delicacies.
For this season, we have celebrated Hayagreeva jayanti, Sri Krishnashtami, Independence day, Gowri – Ganesha chaturti and Dadhi Vamana jayanti. Involving parents and children in varieties of activities is such a wonderful experience and our learning tool for their needs. We integrated Exercises of practical life , Sensorial, culture and language activities with the August month theme. These have made our children to await for the next Parva dina and celebrations, prepare themselves to get participated or contribute in their own way. They gain more and more knowledge about these practices. They discuss, question, listen and reproduce in their quest of learning thirst. They imbibe everything curiously. We have to provide such an environment to grow and create their own world, where they are the masters of their mind and heart to establish, liberate, their personality for the better future. Below are the environment wise picture galleries to cherish the learning moments, from home under their parent’s guidance…….
–೦–
ವಾಮನ ವಿಭಾಗ – ಮುರಳೀಧರ ಕೆ (ವಿಭಾಗ ಪ್ರತಿನಿಧಿ, ಪ್ರಾಥಮಿಕ ವಿಭಾಗ)
ವಾಗ್ಮೀ ಉತ್ತರದ ಸುತ್ತ……..
ನಮಸ್ಕಾರ ಪೂರ್ಣಪ್ರಮತಿ ಬಂಧುಗಳೆ !
ಈ ಬಾರಿ ಹಯಗ್ರೀವ ಜಯಂತಿಯು ಎಲ್ಲಾ ಪರಿಸರಗಳಲ್ಲಿ ತುಂಬಾ ಚೆನ್ನಾಗಿ ನೆರೆವೇರಿತು. ಪ್ರತೀ ಪರಿಸರದಲ್ಲೂ ಶಿಷ್ಟರೂ, ವಿಶಿಷ್ಟರುಗಳಾದ ಅತಿಥಿಗಳು ಬಂದಿದ್ದರು ಅವರು ಎಲ್ಲಾ ಮಕ್ಕಳನ್ನು ನೋಡಿ ಅವರು ಕಲೆತ ವಿಷಯಗಳನ್ನು ಕೇಳಿ ಆನಂದಪಟ್ಟರು ವಿದ್ವಾನ್ ಐತರೇಯ ಆಚಾರ್ಯರು ಈ ರೀತಿಯಾಗಿ ಹೇಳಿದರು- ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಮಕ್ಕಳ ಮಾತು ಮತ್ತಷ್ಟು ಕೇಳಬೇಕು ಎನಿಸುತ್ತಿತ್ತು, ಈ ವಯಸ್ಸಿಗೆ ಸಂಸ್ಕೃತದ ಮೇಲಿನ ಹಿಡಿತ ಬಹಳ ಆಶ್ಚರ್ಯಜನಕ. ಒಳ್ಳೆಯ ಭಾಷಣ ಕಲೆ ಅನೇಕ ಮಕ್ಕಳಲ್ಲಿ ಇರುವುದು ಬಹಳ ಸಂತೋಷದ ವಿಷಯ. ಭಾಗವಹಿಸಿದ ಸಮಯ ಸ್ವಲ್ಪವೂ ವ್ಯರ್ಥವಾಗದೆ ಸಾರ್ಥಕವಾಗಿ ಕಳೆದದ್ದು ಬಹಳ ಸಂತೋಷವಾಗಿದೆ.
ಇನ್ನು ವಿದ್ವಾನ್ ರಾಮವಿಟ್ಠಲ ಆಚಾರ್ಯರು ಆಗಮಿಸಿದ್ದರು ಮಕ್ಕಳನ್ನು ಉದ್ದೇಶಿಸಿ ಹೀಗೆಂದರು ಮಕ್ಕಳೆ! ಈ ಹಯಗ್ರೀವ ದೇವರಿಂದ ಸಕಲಜ್ಞಾನವೂ ಹೊರಹೊಮ್ಮಿದೆ ಅವರ ಜಯಂತಿ ಆಚರಣೆ ಮಾಡತ್ತಿರುವುದು ಖುಷಿಕೊಟ್ಟಿದೆ, ಮಕ್ಕಳೇ ಹಯಗ್ರೀವ ದೇವರು ಹೇಗಿದ್ದಾರೆ ಗೊತ್ತಾ ? ಒಂದು ಕೈಯಲ್ಲಿ ಪುಸ್ತಕ, ಇನ್ನೊಂದು ಕೈಯಲ್ಲಿ ಜಪಮಾಲೆ, ಇನ್ನೆರಡ ಕೈಯಲ್ಲಿ ಶಂಖ ಚಕ್ರ ಧರಸಿದ್ದಾರೆ ಇದರ ಅರ್ಥವೇನು ಗೊತ್ತಾ ಚೆನ್ನಾಗಿ ಓದು, ನನ್ನ ಜಪ ಮಾಡು, (ಶಾಲಾವಾಹನದಲ್ಲಿ ಶಾಲೆಗೆ ಹೋಗುವಾಗ, ಮನೆಗೆ ಬರುವಾಗ) “ಹಯಗ್ರೀವಾಯ ನಮಃ” ಅಂತ ಜಪಮಾಡು, ಚೆನ್ನಾಗಿ ಓದಿನ ಅಭ್ಯಾಸ ಮಾಡದರೆ ಎಂದೂ ದಾರಿದ್ರ ಬರಲ್ಲ, ಉಪವಾಸ ಇರುವ ಪ್ರಸಂಗ ಎಂದೂ ಬರವುದಿಲ್ಲ ಎನ್ನುವ ಸಂಕೇತ ಈ ಶಂಖ ಚಕ್ರಗಳು. ಹೀಗೆ ಮಕ್ಕಳಿಗೆ ಹಯಗ್ರೀವ ದೇವರ ಚಿಂತನೆ ಮಕ್ಕಳಿಗೆ ತಿಳಿಸಿಕೊಟ್ಟರು. ಹೀಗೆ ಎಲ್ಲಾ ಪರಿಸರಗಳಲ್ಲಿಯೂ ಹಯಗ್ರೀವ ಜಯಂತಿಯ ಆಚರಣೆ ಸರಳ ವಿಜೃಭಣೆಯಿಂದ ಜರುಗಿದವು.
ಅದೇನೋ ಶೀರ್ಷಿಕೆ ಬರೆದು ಏನೋ ಹೇಳುತ್ತಾ ಇದ್ದೀರಲ್ಲ.
ಅದೇ ವಿಚಾರಕ್ಕೆ ಬರುತ್ತಾ ಇದ್ದೇನೆ…….
ಕೆಲ ದಿನಗಳ ಹಿಂದೆ ೩ ತರಗತಿಗೆ ಪಾಠಮಾಡುತ್ತಾ ಇದ್ದೆ ಸಂಸ್ಕೃತ ಸ್ವರಭಾರ ಸಹಿತವಾಗಿ ಓದುವ ಬಗೆ ಹೇಗೆ? ಅನ್ನುವ ವಿಚಾರವನ್ನು ಹೇಳುತ್ತಾ ಇದ್ದೆ ಆಗ ಹುಡುಗನೊಬ್ಬ ಅಣ್ಣ ನೀವು ಏಕೆ ಓದುವುದನ್ನು
ಹೇಳಿಕೊಡುತ್ತಿರುವಿರಿ ? ನನಗೆ ಓದಲು ಬರುತ್ತದೆ ಎಂದ. ನಾನು ಉತ್ತರ ಕೊಡವ ಮುಂಚೆನೇ ಆ ಕಡೆಯಿಂದ ಒಂದು ಪುಟ್ಟ ಕೋಗಿಲೆಯ ದನಿ ಇಂತೆಂದಿತು “ಅಲ್ಲೋ ಮುಂದೆ ನಾವು ಕೂಡ ಅಧ್ಯಾಪಕರಾಗುವವರು ಅಣ್ಣ ಓದವ ರೀತಿ ನೋಡಿಕೊಂಡರೆ ಮುಂದೆ ನಾವೂ ನಮ್ಮ ಹತ್ತಿರ ಪಾಠಕ್ಕೆ ಬರುವವರಿಗೆ ಹೇಳಿಕೊಡಲು ಬರುತ್ತದೆ ಅಲ್ವ, ಮತ್ತೆ ನಮ್ಮ ತಪ್ಪುಗಳೂ ಕಡಿಮೆ ಆಗುತ್ತೆ, ಮುಂದೆ ನಾವು ದೊಡ್ಡವರಾದ ಮೇಲೆ ತಪ್ಪು ಹೇಳಿಕೊಟ್ಟರೆ ಚೆನ್ನಾಗಿ ಇರಲ್ಲ ಅಲ್ವಾ” ? ಹೀಗೆ ಆ ಮಗುವಿನ ಮಾತಿನ ಲಹರಿ ನಡೆದಿತ್ತು. ಈ ಪ್ರಸಂಗವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನಮ್ಮ ಶಾಲೆಯ ಎಳೆಯ ಮಕ್ಕಳಲ್ಲಿ ಎಷ್ಟು ಒಳ್ಳೆಯ ಚಿಂತನೆಗಳು ಗಾಢವಾಗಿ ಬೇರೂರಿವೆ.ತಾವು ತಪ್ಪು ಕಲಿಯಬಾರದು, ತಪ್ಪು ಕಲಿಸಬಾರದು ಹಾಗೂ ಗುರುಪರಂಪರೆಯನ್ನು ಮುಂದವರೆಸಿಕೊಂಡು ಹೋಗಬೇಕು ಎನ್ನುವ ಭಾವದ ಮಾತುಗಳೂ ರೋಮಾಂಚನಗೊಳಿಸಿದವು. ಮಕ್ಕಳ ಈ ಭಾವಗಳುನ್ನು ಸೆರೆ ಹಿಡಿಯುವುದರಲ್ಲಿ ನನ್ನ ಅಕ್ಷರಗಳು ಸೋತಿವೆಯೋ ಎನೋ. ಹೀಗೆ ಪ್ರೌಢರಾದಮೇಲೂ ಈ ಚಿಂತನೆಗಳು ಸದಾ ಇರಲಿ ಎಂದು ಆಶಿಸುತ್ತಾ ಮುಂದಿನ ಬಾರಿ ಸ್ವತಂತ್ರಭಾರತದ ಮಕ್ಕಳೊಂದಿಗೆ ನಡೆಯಲಿರುವ ವಾಮನ ಜಯಂತಿಯ ಸುದ್ದಿಯೊಂದಿಗೆ ನಿಮ್ಮ ಬಳಿ ಬರುವೆ….
ಧನ್ಯವಾದಗಳು.
-೦-
ಅರ್ಜುನ – ಮಮತಾ (ಅಧ್ಯಾಪಕರು, ಮಾಧ್ಯಮಿಕ ವಿಭಾಗ)
ಅವಿಸ್ಮರಣೀಯ ೭೪ನೇ ಸ್ವಾತಂತ್ರ್ಯ ದಿನಾಚರಣೆಯ ಒಂದು ನೋಟ
೧೫/೮/೨೦೨೦ ಸ್ವತಂತ್ರ್ಯ ಭಾರತದ ೭೪ನೇ ವರ್ಷ. ಈ ವರ್ಷ ಕಣ್ಣಿಗೆ ಕಾಣದ ಒಂದು ಜೀವ ಇಡೀ ಪ್ರಪಂಚವನ್ನೇ ತನ್ನ ಮುಷ್ಟಿಯಲ್ಲಿಟ್ಟು, ನಾನು ಎಂದು ಮೆರೆಯುತ್ತಿದ್ದ. ಅತಿ ಬುದ್ಧಿಜೀವಿ ಎಂದು ಕರೆಸಿಕೊಳ್ಳುವ ಮನುಷ್ಯನ್ನು ಮೂಲೆಗುಂಪಾಗಿಸಿದೆ. ಆದರೆ ಮನುಷ್ಯ ಎಲ್ಲವನ್ನೂ ಮೆಟ್ಟಿ ನಿಂತು ತನ್ನ ಚಾಣಾಕ್ಷ ಬುದ್ಧಿಯಿಂದ ಅಂತರಜಾಲದ ಸಹಾಯದಿಂದ ಅನೇಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾನೆ.
ಹೀಗೆಯೇ ಅನೇಕ ಅಂತರಜಾಲದ ಸಹಾಯದಿಂದ ನಾವು ಈಗಲೂ ಸ್ವತಂತ್ರ್ಯದಿನಾಚರಣೆಯನ್ನು ಆಚರಿಸಹುದೆಂದು ಯೋಚಿಸಿ. ನಮ್ಮ ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರು ಕೆಂಪು ಕೋಟೆಯ ಮೇಲೆ ಹಾರಿಸಿದ ತ್ರಿವರ್ಣ ಧ್ವಜವನ್ನು ಮಕ್ಕಳಿಗೆ ದೃಶ್ಯಮಾಧ್ಯಮದ ಮೂಲಕ ತೋರಿಸಿ, ನಂತರ ರಾಷ್ಟ್ರಗೀತೆಯನ್ನು ಹೆಮ್ಮೆಯಿಂದ ಹೇಳಿ ನಮ್ಮ ಅಂದಿನ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು.
ಅರ್ಜುನ ಗಣದ ನಾಲ್ಕು ಪರಿಸರದಲ್ಲಿ ಶಿಕ್ಷಕರು ಹಾಗೂ ಪೋಷಕರ ಸಹಾಯದೊಂದಿಗೆ ಮಕ್ಕಳು ಚಿತ್ರಕಲೆ, ಗೀತಗಾಯನ, ಸ್ವತಂತ್ರ್ಯಯೋಧರ ಬಗ್ಗೆ ಪ್ರಸ್ತುತಿ, ಭಾರತ ಮತ್ತು ಅನೇಕ ರಾಷ್ಟ್ರಗಳ ನಡುವೆ ನಡೆದ ಸಮರಗಳ ಬಗ್ಗೆ, ಆತ್ಮನಿರ್ಭರ ಭಾರತದ ಬಗ್ಗೆ, ಸ್ವಚ್ಛ ಭಾರತದ ಬಗ್ಗೆ ಹೀಗೆ ..ಅನೇಕ ವಿಷಯಗಳ ಬಗ್ಗೆ ತಮ್ಮ ಮಿತಿಮೀರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದರು.
ನಮ್ಮ ಈ ಪುಟ್ಟ ಮಕ್ಕಳ ಪ್ರಸ್ತುತಿಯನ್ನು ನೋಡಿ, ಹರಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ನಮ್ಮ ಶಾಲೆಗೆ (ಅಂತರ್ಜಾಲದ ಮೂಲಕ) ಆಗಮಿಸಿದ ಎಲ್ಲಾ ಹಿರಿಯ ಹಾಗೂ ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯಂತ ಸಾಧನೆಗೈದ ಮಹನೀಯರಿಗೆ ನಮ್ಮ ಶಾಲೆಯ ಪರವಾಗಿ ಹುತ್ಪೂರ್ವಕ ಧನ್ಯವಾದಗಳು.
ಮಹನೀಯರು ನಮ್ಮ ಮಕ್ಕಳಿಗೆ ಹೇಳಿದ ನುಡಿಮುತ್ತುಗಳು
ಮೇಜರ್ ದೀಪಕ್ ರಾಜ್ ಅವರು ಒಬ್ಬ ಸೈನಿಕನಿಗೆ ಎಷ್ಟು ಮಟ್ಟದ ಸ್ವಾತಂತ್ರ್ಯ ಇರುತ್ತದೆ ಎಂಬುದಾಗಿ ಬಹಳ ಚೆನ್ನಾಗಿ ಹೇಳಿದರು. ಅವರು ತಮ್ಮ ಸೈನಿಕ ಜೀವನದ ಬಗ್ಗೆ ಬಹಳ ವಿವರವಾಗಿ ತಿಳಿಸಿಕೊಟ್ಟರು. ಅವರ ಜೀವನ ಎಷ್ಟು ಕಟ್ಟುನಿಟ್ಟಿನ ಹಾಗೂ ಶಿಸ್ತಿನದ್ದಾಗಿರುತ್ತದೆ ಎಂದು ಮಕ್ಕಳಿಗೆ ತಿಳಿಸಿದರು.
ಸವ್ಯಸಾಚಿ ಪರಿಸರಕ್ಕೆ ಆಗಮಿಸಿದ ಶ್ರೀಯುತ ನಾಗರಾಜ ಗೋವಿಂದಪ್ಪ, ಹಿರಿಯ ಪೋಲೀಸ್ ಅಧಿಕಾರಿ, ಗಿರಿನಗರ. ಇವರು ಪೋಲೀಸ್ ವೃತ್ತಿ ನಮ್ಮ ಸಮಾಜಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿಕೊಟ್ಟರು. ಅತ್ಯಂತ ಶ್ರೇಷ್ಠ ನುಡಿಯಾಗಿರುವ ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಇದಕ್ಕೆ ಇನ್ನು ಎರಡು ವಿಶೇಷ ನುಡಿಗಳನ್ನು ಸೇರಿಸಿದ್ದಾರೆ. ಅವುಗಳೆಂದರೆ “ಅಧಿಕಾರಿ ದೇವೋ ಭವ ಹಾಗೂ ಸಹಕರ್ತ ದೇವೋ ಭವ”. ಅವರ ಈ ವಿಚಾರಗಳಿಗೆ ನಮ್ಮ ನಮಗಳು. ಇದರ ಜೊತೆಗೆ ಹಿರಿಯರಿಗೆ ಗೌರವ, ಪ್ರಕೃತಿಯೊಡನೆ ಜೀವನ ಮತ್ತು ಮಕ್ಕಳನ್ನು ಕೆಟ್ಟ್ ಅಭ್ಯಾಸಗಳಿಂದ ದೂರ ಇಡುವ ಬಗ್ಗೆ ಮಾತನಾಡಿದರು.
ರೂಪ ಮರಿಸ್ವಾಮಿ, ನಮ್ಮ ಪಾರ್ಥ ಮಕ್ಕಳಿಗೆ ಪ್ರಾಮಾಣಿಕತೆಯ ಪಾಠವನ್ನು ಹೇಳಿಕೊಟ್ಟರು. ಮಕ್ಕಳು ತಮ್ಮ ಮುಂದಿನ ಜೀವನ ಹೇಗ್ ರೂಪಿಸಿಕೊಳ್ಳಬೇಕೆಂದು ತಿಳಿಸಿಕೊಟ್ಟಿದ್ದಾರೆ. ಮಕ್ಕಳು ಸಂಸ್ಕೃತದಲ್ಲಿ ಮಾಡಿದ ನಿರೂಪಣೆಯನ್ನು ಮೆಚ್ಚಿದ್ದಾರೆ. ಅವರು ಕಾಲೇಜಿನಲ್ಲಿ ಸಂಸ್ಕೃತವನ್ನು ಅಭ್ಯಾಸ ಮಾಡಿದ್ದರಿಂದ ಸ್ವಲ್ಪ ಮಟ್ಟಿಗೆ ಅರ್ಥವಾಯಿತೆಂದು ತಿಳಿಸಿದರು.
ಇನ್ನು ಧನಂಜಯ ಪರಿಸರಕ್ಕೆ ಆಗಮಿಸಿದ, ಲೇ.ಜನರಲ್.ಪಿ.ಜಿ.ಕಾಮತ್ ಅವರು ಮಕ್ಕಳ ಮನಸ್ಥಿತಿಯನ್ನು ಅರಿತು ಅವರಿಗೆ ಅರ್ಥವಾಗುವ ರೀತಿಯಲ್ಲಿ ದೇಶಾಭಿಮಾನ, ಸಾಧನೆಯೆಡೆಗೆ ನಮ್ಮ ಗಮನ ಹೇಗಿರಬೇಕು, ಒಬ್ಬ ಸೈನಿಕ ಯುದ್ಧಭೂಮಿಯಲ್ಲಿ ಕೊನೆಯ ಉಸಿರಿರುವ ತನಕ ಹೋರಾಡುವ ರೀತಿ, ನಾವು ದೇಶಕ್ಕಾಗಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು – ಹೀಗೆ ಹತ್ತು ಹಲವಾರು ವಿಚಾರಗಳನ್ನು ತಿಳಿಸಿ ಈ ಸುದಿನವನ್ನು ಮಕ್ಕಳೊಂದಿಗೆ ಕೆಲವು ನಿಮಿಷಗಳ ಕಾಲ ಕಳೆದರು.
ಈ ನಾಲ್ಕು ಜನ ಧುರೀಣರನ್ನು ಹುಡುಕಿ ನಮ್ಮ ಮಕ್ಕಳಿಗಾಗಿ ಕರೆಯಿಸಿದ ರಘುರಾಮಣ್ಣ ಅವರಿಗೆ ಅರ್ಜುನ ಗಣದ ಪರವಾಗಿ ನಮನಗಳು. ಕೊನೆಯದಾಗಿ, ಈ ದಿನದ ಕಾರ್ಯಕ್ರಮವನ್ನು ಅತ್ಯಂತ ಕಡಿಮೆ ದಿನಗಳಲ್ಲಿ ಆಯೋಜಿಸಲು ನೆರವಾದ ಎಲ್ಲಾ ನನ್ನ ಸಹೋದ್ಯೋಗಿಗಳಿಗೆ ನನ್ನ ಅನಂತ ಅನಂತ ನಮನಗಳು.
-0-
Bheemasena – Uma. V (class teacher 10th)
The month of August is significant not only for the national festival but also as a spiritual month, also known as Shravana Masa, a month to awaken our divine spirituality. At Purnapramati, we began the month with the celebration of Hayagreeva Jayanti, where students presented their knowledge of Ramayana and Mahabharata, thereby, depicting the values inculcated in them and rejoicing the Prime ministers’ decision to conduct the Shilanyasa of Ram janma bhoomi, which I believe is celebrated by every Indian.
Parent teacher meeting was also organised during this month. Lot of apprehensions were there as to how parents would react to the online classes. But, overall, parents were positive and expressed their wish for the quick opening of the school as the students missed the interactions with their friends. We also celebrated the Independence Day on 15th of August. The students participated by preparing for the occasion with various topics ranging from the historic past, present and, to the future of the country. And, the icing on the cake were the guests, who motivated the students of Purnapramati with their magnifying talks. One such guest was, Major (retd.) Sipra Majumbdar, a young military officer who spoke about her achievements and challenges encountered as well as her expedition to Mt. Everest. She interacted with the students and answered all queries with a lot of patience. A thing to remember her by, was a quote she stated; “the strength of the pack is the wolf, and the strength of the wolf is the pack”.
The most fulfilling event of the month is the SSLC result, which has been a great reinforcement to all. Here, I feel that if it was not the dedication and farsightedness of our Education minister, Shri Suresh Kumar, we wouldn’t have had the opportunity for celebration.
As a school, we knew the capabilities of the students and we too, to some extent thought, that the lockdown would create a sense of depression in the minds of our students, but, the student of Purnapramati proved us wrong. They excelled and broke all previous records. 623 out of 625, a great achievement to our school! With over 12 students scoring 90% marks and above all, there were centums in the subjects; Sanskrit, English, Kannada, Science and social studies. In conclusion, the strength of Purnapramati lies in their parents and students, and the strength of the parents and children lies in Purnapramati.
-0-
Thrivikrama – Nagashree Shrivatsa (Teacher and Pratinidhi of PU division)
In the light of 10th results, our orientation programme for I PUC is happening with vigour every day. We all experienced proud moments at Purnapramati as our tenth grade children came out with flying colours. We are pleased to know that most of our students are continuing with us for our PU Programme. We have started regular classes for the students with approximately five to six classes per day on average.
We had two teams, one working on creating brochures, presentations to share about our PU programme and to conduct orientation programmes and following up with the participants and the second team which are working towards building academics which can support children to aspire for their interests. Our aim is to reach out to many students who have completed their tenth, and in this direction, the team approached many schools and parents through various platforms. Few such are social media, Google ads and our extensive Udyog Drishti programme, which saw many prominent figures like Sri Prabhakara Joshi, Sri Adarsh Gokhale, Dr. Tejaswini Ananthakumar, Dr. Arati. We are very thankful to Dr. Tejaswini Ananthakumar for taking the time to reach various schools to share about our PU programme. Based on the contacts received the PU team took effort to make individual calls to all the students. To support this we are conducting an orientation programme on a day-to-day basis.
PU is a stage, which provides an opportunity for children to explore their interests and put an effort to discover their swadharmas. The team is working towards how effectively children could be guiding on this. The team is committed to give their best. Children are putting their effort to take up the new beginning to their best. They are now participating in all the events. They are attending prayer sessions along with ninth and tenth students. They also participated in the Independence day programme. They are all set for their new roles. The team has new teachers who joined us and are lending their hands to help children reach their goals.
-0-
ಆನಂದವನ ಗುರುಕುಲ– ಯದುನಂದನ (ಪ್ರತಿನಿಧಿ ಮತ್ತು ಅಧ್ಯಾಪಕ, ಆನಂದವನ ಗುರುಕುಲ)
ಮಾಗಡಿ ಸಮೀಪದಲ್ಲಿ ಪ್ರಕೃತಿಯ ಮಡಿಲಲ್ಲಿ, ಹೊಲಗದ್ದೆಗಳ ನಡುವಿನಲ್ಲಿ ಆನಂದದಾಯಕವಾದ ಗುರುಕುಲ ಆನಂದವನ. ಪ್ರತಿ ತಿಂಗಳ ನಮ್ಮ ಇಲ್ಲಿನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದೇ ಆನಂದ. ಆಗಸ್ಟ್ ತಿಂಗಳು (ವರ್ಷಾ ಋತು, ಶ್ರಾವಣ ಮಾಸ) ಹೇಗಿತ್ತೆಂಬ ಪಕ್ಷಿನೋಟ ನಿಮಗೆ ನೀಡುವೆ.
ನಮ್ಮ ಆನಂದವನದಲ್ಲಿ ನಾವು ಕೇವಲ ಲೋಕ ಪರರು ಅಲ್ಲ ಕೇವಲ ಪಾರಮಾರ್ಥಿಕ ಪರರು ಅಲ್ಲ ಎರಡು ವಿದ್ಯೆಗಳನ್ನು ಕರಗತಮಾಡಿಕೊಂಡು ಮಾನವ ಹಾಗೂ ಮಾಧವನ ಪ್ರೀತಿಯನ್ನು ಗಳಿಸಬಯಸುತ್ತೇವೆ. ನಮ್ಮ ದಿನಚರಿ ಬ್ರಹ್ಮಮುಹೂರ್ತ ೪.೦೦ ಗಂಟೆಗೆ ಆರಂಭವಾಗುವುದು. ಶಾಸ್ತ್ರಪಾಠ, ಯೋಗಾಭ್ಯಾಸ, ಸ್ನಾನ – ಸಂಧ್ಯಾವಂದನೆ ಮಗಿಸಿ ಲಘು ಉಪಾಹಾರ ನಡೆಯುವುದು. ನಾವು ತಿನ್ನುವ ಆಹಾರವೇ ನಮ್ಮ ಮನಸ್ಸಾಗುವುದು ಎಂಬ ಎಚ್ಚರಿಕೆಯೂ ಇದೆ. ನಂತರ ಪ್ರಾರ್ಥನೆ, ಪಾರಾಯಣ. ಸುಮಾರು ೯.೩೦ ಗೆ ನಮ್ಮ ಲೌಕಿಕಾಧ್ಯಯನ ಪ್ರಾರಂಭವಾಗುವುದು. ಸಂಜೆ ೪.೦೦ ರವರೆಗೆ ಗಣಿತ, ವಿಜ್ಞಾನ, ಆಂಗ್ಲಭಾಷೆ, ಸಮಾಜ ಅಧ್ಯಯನಗಳಲ್ಲಿ ಮುಳುಗುತ್ತೇವೆ. ಕರೋನ ಬಾಧೆ ನಮ್ಮ ಅಧ್ಯಯನಕ್ಕೆ ಯಾವ ಹಾನಿಯನ್ನೂ ಮಾಡಿಲ್ಲ. ಅಧ್ಯಾಪಕರು Online ನಲ್ಲೇ ತರಗತಿಗಳನ್ನು ತೆಗೆದುಕೊಳ್ಳತ್ತಾರೆ. ಸಂಸ್ಕೃತ ಸಂಭಾಷಣೆ, ನಡುವೆ ಹಾಸ್ಯ, ಹುಸಿಕೋಪ, ಕೋಳಿಜಗಳಗಳು ಇರುತ್ತವೆ. ಇದರೊಂದಿಗೆ ಸಂಜೆ ೪.೦೦ ರ ನಂತರ ತಂತ್ರಜ್ಞಾನ, ಸಂಗೀ, ವಾದ್ಯಗಳ ಕೌಶಲವನ್ನು ಗಳಿಸುತ್ತೇವೆ.
ಪ್ರಕೃತಿಯನ್ನು ಪ್ರೀತಿಸುತ್ತಾ ಅದರ ಬಗ್ಗೆ ತಿಳಿಯುತ್ತಾ ಗೋವುಗಳನ್ನು ಉಪಚರಿಸುತ್ತಾ ವಿಶೇಷವಾದ ಜ್ಞಾನ ಹಾಗೂ ಪುಣ್ಯವನ್ನು ಪಡೆಯುತ್ತೇವೆ. ಕ್ರೀಡೆಯಲ್ಲೂ ನಾವೇನೂ ಹಿಂದೆ ಇಲ್ಲ. ಸಂಜೆ ೫.೦೦ – ೬.೦೦ ಮೈದಾನದಲ್ಲಿ ಮೈಮರೆಯುತ್ತೇವೆ. ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್ ಇವೇ ಮೊದಲಾದ ಕ್ರೀಡೆಗಳನ್ನು ಹಾಡುತ್ತಾ, ನಮ್ಮ ಭಾರತೀಯ ಕ್ರೀಡೆಗಳಾದ ಕಬ್ಬಡ್ಡಿ, ಲಗೋರಿ ಮೊದಲಾದ ಆಟಗಳನ್ನು ಆಡುತ್ತವೆ.
ಇವರ ಊಟದ ಕ್ರಮ ಏನೆಂದು ಕೇಳಿದಿರಾ?! ಕೇವಲ ಆಟದಲ್ಲಿ ಮಾತ್ರವಲ್ಲದೆ ಊಟ ದಲ್ಲಿಯೂ ಕ್ರಮಬದ್ಧತೆಯನ್ನು ಪಾಲಿಸುತ್ತೇವೆ. ಅದೇನೆಂದರೆ ಊಟಕ್ಕೆ ಕುಳಿತುಕೊಳ್ಳುವ ಮೊದಲು ದೇವರ ಪ್ರಾರ್ಥನೆ, ಊಟದಲ್ಲಿ ಮೌನವಾಗಿ ಕುಳಿತು ಕೊಳ್ಳುವುದು, ಪುರಾಣ ಕಥಾಶ್ರವಣ ಶಾಸ್ತ್ರ ಶ್ರವಣ. ಹೀಗೆ ಕಿವಿಗಳಿಂದಲೂ ಬಾಯಿಂದಲೂ ಅನುಭವಿಸುತ್ತ ಭೋಜನವನ್ನು ಮಾಡುವುದು.
ಕೇವಲ ನಮ್ಮ ಜೀವನವನ್ನು ಅಷ್ಟೇ ಅಲ್ಲದೆ ಸಣ್ಣಪುಟ್ಟ ಪಕ್ಷಿಗಳ ಜೀವನವನ್ನು ಗಮನಿಸುತ್ತಾ ಅದಕ್ಕೆ ನೆರವಾಗುತ್ತೇವೆ. ಇತ್ತೀಚೆಗಷ್ಟೇ ಎರಡು ಪಕ್ಷಿಗಳು ತಮ್ಮ ಗೂಡುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆ ಪಕ್ಷಿಗಳಿಗೆ ಪ್ರತಿನಿತ್ಯ ಆಹಾರಗಳನ್ನು ಕೊಡುತ್ತಾ ಅವುಗಳು ಸಂತೋಷವಾಗಿರುವಂತೆ ನೋಡಿಕೊಂಡೆವು. ವೃಜುಲಾಲ್ ಅಣ್ಣ ನಮಗೆ ಪಕ್ಷಿಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ಆದರೆ ವಿಧಿವಶಾತ್ ಪಕ್ಷಿಗಳು ನಮ್ಮನ್ನಗಲಿದವು. ಹೀಗೆ ನಮ್ಮಲ್ಲಿ ಹೊಸ ಹೊಸ ಬಂಧುಗಳು ಬರುತ್ತಿರುತ್ತಾರೆ ಹೋಗುತ್ತಿರುತ್ತಾರೆ. ನಮ್ಮಲ್ಲಿ ವಾರಕ್ಕೊಮ್ಮೆ ಹಯಗ್ರೀವ ಸಭೆ ನಡೆಯುವುದು. ಮಕ್ಕಳು ಶ್ಲೋಕರಚನೆ, ಭಾಷಣ, ಹಾಡು, ನಾಟಕ ಇತ್ಯಾದಿ ಕೌಶಲಗಳ ಮೂಲಕ ತಮ್ಮ ಕಲಿಕೆಯನ್ನು ಪ್ರಸ್ತುತ ಪಡಿಸುತ್ತಾರೆ.
ಇತ್ತೀಚೆಗೆ ಪ್ರಮೋದ್ ಕುಲಕರ್ಣಿಯವರು ಆನಂದವನಕ್ಕ ಬಂದು ಗೊಬ್ಬರದ ಅನಿಲದ ವ್ಯವಸ್ಥೆ ಮಾಡುವ ಯೋಜನೆ ಮಾಡಿದರು. ಹಿರಿಯ ವಿದ್ಯಾರ್ಥಿಗಳಿಗೆ ಆ ತಂತ್ರಜ್ಞಾನದ ಬಗ್ಗೆ ಬೋಧಿಸಿದರು.
ನಾವು ಕೇವಲ ಪಠ್ಯವಿಷಯಗಳ ಕಲಿಕೆಯಲ್ಲಿ ಕುಳಿತಿಲ್ಲ, ದೇಶಭಕ್ತಿಯನ್ನು ಸಾರುವ ಸ್ವಾತಂತ್ರ್ಯದಿನವನ್ನು ಆಚರಿಸಿದೆವು. ನಮ್ಮ ಇತಿಹಾಸಗಳ ಬಗ್ಗೆ, ವೀರ ಯೋಧರ, ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಕ್ಕಳು ಮಾತನಾಡಿದರು. ಪ್ರಕೃತಿ ಪ್ರೇಮಿಯಾದ, ಉತ್ತಮ ವಾಗ್ಮಿಯೂ ಆದ ಪೂಜ್ಯ ಸಾನಂದ ಗುರುಗಳು ೨೦೧೬ ರಂದು ಆನಂದವನದಲ್ಲಿ ಆಚರಿಸಿದ ಮೊದಲ ಸ್ವಾತಂತ್ರದಿನದಂದು ಮಾಡಿದ ಭಾಷಣವನ್ನು ಸಾಮೂಹಿಕವಾಗಿ ಕೇಳಿದೆವು. ಗುರುಗಳು ಜನಗಣಮನ ಪದ್ಯವನ್ನು ವಿವರಿಸುತ್ತಾ, ಇಂದಿನ ಆಧುನಿಕರು ನಂಬಿರುವಂತೆ ಭಾಗ್ಯವಿದಾತೃ “ಅಭಿವೃದ್ಧಿ”ಯೇ ಆಗಿದೆ. ಆದರೆ ಭಾರತಾಂಬೆಯ ನಿಜವಾದ ಭಾಗ್ಯವಿದಾತೃ ಬೇರಾರು ಅಲ್ಲ ನಾವುಗಳೇ. ನಮ್ಮ ಪರಂಪರೆಯ ಅರಿವೇ ನಮ್ಮ ಭಾಗ್ಯವಿಧಾತೃ ಎಂಬುದನ್ನು ಅರ್ಥಮಾಡಿಸಿದರು. ಪ್ರಕೃತಿಯ ರಕ್ಷಣೆ ನಮ್ಮ ಮುಖ್ಯ ಧರ್ಮವಾಗಿರಬೇಕು ಎಂಬಿತ್ಯಾದಿ ಅವರ ವಾಕ್ ಝರಿಗಳಿಂದ ನಮ್ಮನ್ನು ಪಾವನಗೊಳಿಸಿದರು.
ಶ್ರಾವಣವೆಂದರೆ ಹಬ್ಬಗಳ ಸಂಭ್ರಮ. ಆನಂದವನಕ್ಕೆ ಗಣಪನ ಆಗಮನವಾಗಿತ್ತು. ಮಕ್ಕಳು ಉತ್ಸಾಹದಿಂದ ಮಣ್ಣಿನ ಗಣಪನನ್ನುಮಾಡಿ ಶ್ರದ್ಧೆಯಿಂದ ಪೂಜೆ ಮಾಡಿದರು.
ಮಾನವನು ಆನಂದವನ್ನು ಪದಾರ್ಥಗಳಲ್ಲಿ ಅನ್ವೇಷಿಸುತ್ತಿರುತ್ತಾನೆ. ಆದರೆ ಮಾನವನಿಗೆ ತಿಳಿದಿಲ್ಲ, ಅದು ಪದಾರ್ಥಗಳಿಂದ ದೊರಕುವುದಿಲ್ಲ ಎಂದು. ನಮ್ಮ ಈ ಆನಂದವನಕ್ಕೆ ಬಂದರೆ ಆನಂದವನ್ನು ಅನ್ವೇಷಿಸಲೇ ಬೇಕಿಲ್ಲ ತಾನಾಗಿಯೆ ದೊರಕುತ್ತದೆ. ಪ್ರಿಯ ಓದುಗರೆ, ಇಂತಹ ಆನಂದ ದಾಯಕವಾದ ಸ್ಥಳದಲ್ಲಿ ವಿಹರಿಸುತ್ತಾ ಇಲ್ಲಿನ ಉತ್ತಮ ಅನುಭವವನ್ನು ಹಂಚಿಕೊಳ್ಳಲು ಮತ್ತೆ ಮುಂದಿನ ತಿಂಗಳು ನಿಮ್ಮ ಮುಂದೆ ಹಾಜರಾಗುವೆ.
-0-
–
ಪ್ರಶಿಕ್ಷಣ ವಿಭಾಗ –ಲತಾ.ಎಂ (ಪ್ರತಿನಿಧಿ, ಪ್ರಶಿಕ್ಷಣ ವಿಭಾಗ)
ಪ್ರಶಿಕ್ಷಣ ವಿಭಾಗದಿಂದ ಆಗಸ್ಟ್ ತಿಂಗಳಿನಲ್ಲಿ ಶಿಕ್ಷಕರಿಗಾಗಿ ಆದ ಮೂರು ಪ್ರಮುಖ ತರಬೇತಿಗಳೆಂದರೆ ಸಂಸ್ಕೃತ ಸಂಭಾಷಣೆ, ಪವನ್ ಗುಪ್ತಾ ಅವರೊಡನೆ Deconstruction of Modernity ಬಗ್ಗೆ ಚರ್ಚೆ ಮತ್ತು ಮಾಂಟೆಸರಿ ಅವರ ಶೈಕ್ಷಣಿಕ ಸಿದ್ಧಾಂತಗಳು. ಇದೊಂದು ತ್ರಿವೇಣಿ ಸಂಗಮ ಎನ್ನಬಹುದು. ಒಂದೆಡೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಸಂಸ್ಕೃತ ಭಾಷೆ, ಇನ್ನೊಂದೆಡೆ ಮಕ್ಕಳ ಮನಃಶಾಸ್ತ್ರವನ್ನು ಅರಿತು ಹೇಗೆ ಪಠ್ಯಕ್ರಮ ಇರಬೇಕೆಂಬ ಮಾಂಟೆಸರಿ ಅವರ ಶೈಕ್ಷಣಿಕ ಸಿದ್ಧಾಂತ, ಮತ್ತೊಂದೆಡೆ ಇಂದಿನ ಶಿಕ್ಷಣ ಯಾವ ದಿಕ್ಕಿನಲ್ಲಿ ಯೋಚಿಸುತ್ತಿದೆ – ಬೇಕಾಗಿರುವ ಬದಲಾವಣೆ ಏನು? ಎಂಬ ಚರ್ಚೆ. ಹಾಗಾಗಿ ಅಧ್ಯಾಪಕರಿಗೆ ಒಂದು ಸಮಗ್ರ ನೋಟ ಸಿಗಲು ಸಾಧ್ಯವಾಯಿತು. ಮಕ್ಕಳಂತೆ ಕಲಿಯುವ ಸುಂದರ ಕ್ಷಣಗಳನ್ನು ಪಡೆದರು.
ಒಂದು ಸ್ವಾರಸ್ಯಕರ ಅಂಶವನ್ನು ಹಂಚಿಕೊಳ್ಳುವುದಾದರೆ –
“ಕರೋನದಿಂದ ಉಂಟಾಗಿರುವ ಭಯವನ್ನು ನಿಭಾಯಿಸುವುದು ಹೇಗೆ”
ಎಂಬ ಪ್ರಶ್ನೆಗೆ ಪವನ್ ಗುಪ್ತಾ ಅವರ ಸಹಜವಾದ ಉತ್ತರ ನೋಡಿ
“ಭಯವನ್ನು ಹೇಗೆ ನಿಭಾಯಿಸುವರು ಎಂಬುದರಲ್ಲಿ ವ್ಯತ್ಯಾಸವಿದೆ. ಆಧುನಿಕರು, ಹೆಚ್ಚು ಓದಲು – ಬರೆಯಲು ಕಲಿತವರು ಹೆಚ್ಚು ಭಯಕ್ಕೆ ಒಳಗಾಗುವರು. ಏಕೆಂದರೆ ಅವರಿಗೆ media exposure ಹೆಚ್ಚು ಮತ್ತು ಅದನ್ನು ನಿಜವೆಂದು ನಂಬುವರು. ಅನಿಶ್ಚಿತತೆ (Uncertainty) ಬಗ್ಗೆ ಅವರಿಗೆ ಸ್ವೀಕಾರವೇ ಇರುವುದಿಲ. ಎಲ್ಲದರ ಮೇಲೂ ತನ್ನ ನಿಯಂತ್ರಣ ಇರಬೇಕೆಂದು ಒದ್ದಾಡುತ್ತಾರೆ. ಹಾಗಾಗಿ ಭಯವೂ ಹೆಚ್ಚು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಗೆ “ಆಸ್ಥೆ” ಬಲವಾಗಿ ಇರುವುದು. ಅನಿಶ್ಚಿತತೆಯ ವಾಸ್ತವತೆಯ ಅರಿವು ಇರುವುದು. ಆದ್ದರಿಂದ ಅವರು ಭಯವನ್ನು ನಿಭಾಯಿಸುವ ರೀತಿಯೇ ಬೇರೆ. ಅವರಿಗೆ ನಂಬಿಕೆ ಇರುವುದು ತಮ್ಮ ಪರಂಪರೆಯ ಮೇಲೆ ಮತ್ತು ಅನುಭವದ ಮೇಲೆ. ಮಾದ್ಯಮಗಳಲ್ಲಿ ತೋರಿಸುವ ವರದಿಗಳ ಮೇಲೆ ಅಲ್ಲ. ಅವರು ಹೆಚ್ಚಾಗಿ ಮಾದ್ಯಮಗಳನ್ನು ನೋಡುವುದೂ ಇಲ್ಲ. ಹಾಗಾಗಿ ನೆಮ್ಮದಿಯಾಗಿ ಇರುತ್ತಾರೆ. This Too Will Pass ಎಂಬ ಸಿದ್ಧಾಂತ ಅವರದ್ದು. ಕಷ್ಟ ಬರುವುದು – ಹೋಗುವುದು. ಅಂತಿಮವಾಗಿ ಒಳಿತೇ ಆಗುವುದು, ದೇವರಿದ್ದಾನೆ ಎಂಬ ಬಲವಾದ ನಂಬಿಕೆ, ಆಸ್ಥೆ ಅವರನ್ನು ಭಯಮುಕ್ತವಾಗಿ ಬದುಕುವಂತೆ ಮಾಡುವುದು.
ಹೀಗೆ ಸ್ವಾರಸ್ಯಕರವಾಗಿ ಚರ್ಚೆ ಸುಮಾರು ೨.೩೦ ಗಂಟೆ ನಡೆಯಿತು. ಆಲೋಚನೆಯ ದಿಕ್ಕನ್ನೇ ಬದಲಿಸುವ ಇಂತಹ ಚರ್ಚೆಗಳಿಗೆ ಪ್ರಶಿಕ್ಷಣ ತೆರೆದ ವೇದಿಕೆಯಾಗಿರುವುದು. ಮುಂದಿನ ನಮ್ಮ ಚಿಂತನೆ ನೂತನ ಶಿಕ್ಷಣ ನೀತಿಯ (National Educational Policy 2020) ಅಧ್ಯಯನ ಕ್ಷೇತ್ರದಲ್ಲಿ ಇರಲಿದೆ. ಸಂಸ್ಕೃತ ಕಲಿಕೆಯೂ ಅವಿರಳವಾಗಿ ನಡೆಯಲಿದೆ. ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಣಕ್ಷೇತ್ರದ ಕೊಡುಗೆ ಮಹತ್ವವಾದದ್ದು. ಮುಂದಿನ ಪ್ರಜೆಗಳ ಮನಸ್ಸಿನಲ್ಲಿ ನಮ್ಮ ಪರಂಪರೆಯ ಅರಿವನ್ನು ಕೊಟ್ಟು, ಅವರ ಬೇರುಗಳ ಹಿನ್ನಲೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಮಾಡುವ ಶಕ್ತಿ ಶಿಕ್ಷಣಕ್ಕೆ ಇದೆ. ಇದೇ ದಿಕ್ಕಿನಲ್ಲಿ ಪ್ರಶಿಕ್ಷಣ ಶಿಕ್ಷಕರ ತರಬೇತಿಯಲ್ಲಿ ತೊಡಗಿದೆ.
–
ಅಲೆಮಾರಿ – 3
ಲತಾ.ಎಂ (ಅಧ್ಯಾಪಕರು ಮತ್ತು ಪ್ರಶಿಕ್ಷಣ ವಿಭಾಗದ ಪ್ರತಿನಿಧಿ)
ಮುಂದುವರೆದ ಭಾಗ…..
Magadi exploration
ಮುಂದೆ ನಿಮ್ಮನ್ನು ಸೇವನಗರಕ್ಕೆ ಕರೆದುಕೊಂಡು ಹೋಗುವೆ. ನನಗೆ ಸೇವಾನಗರ ಪರಿಚಯವಾದದ್ದು ಒಂದು ವಿಶೇಷ. ಮಾಗಡಿ ಕೆಂಪೆಗೌಡರ ನಾಡು. ಸ್ವಲ್ಪ ಅರ್ಥಮಾಡಿಕೊಳ್ಳೋಣವೆಂದು ಮಾಗಡಿಯ ಇತಿಹಾಸ ಓದೋಣವೆಂದು ಹುಡುಕಿದೆ. ಅಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದೆ ಒಂದು ಪ್ರತಿ ಸಿಕ್ಕಿತು. ಕಾಡಿ-ಬೇಡಿ ಅದನ್ನು ತಂದು Xerox ಮಾಡಿಸಿಕೊಂಡು ಮರಳಿಸಿದೆ.
ಗ್ರಂಥಾಲಯದ ಎದುರಿಗೆ ಕೋಟೆಯಂತೆ ಕಾಣುವ ಒಂದು ಗೋಡೆ ಇದೆ. ಕುತೂಹಲವಾಯಿತು. ಒಳಗೆ ಹೋದೆ. ನೋಡಿದರೆ ಒಳಗೆ ದೊಡ್ಡ ಮೈದಾನ. ಅಲ್ಲಿ ಕೆಂಪೇಗೌಡ ಕಟ್ಟಿಸಿರುವ ಸೇಮನಾಥ ದೇವಾಲವಿದೆ. ಇತ್ತೀಚೆಗೆ ಕಟ್ಟಿರುವ ಚಾಮುಂಡಿಯ ದೇವಾಲಯವಿದೆ. ಅಲ್ಲಿ ಗಮನ ಸೆಳೆದದ್ದು ಹಳೆಯ ಕಾಲದ ಕೆತ್ತನೆ ಇರುವ ಮಾಡು. ಅರಳಿಯ ಬೇರು ಗೋಡೆಯನ್ನು ಸೀಳಿ ತನ್ನ ಜಾಗವನ್ನು ಸ್ಥಾಪಿಸಿತ್ತು. ಒಳಗೆ ಹೋದರೆ ಅನೇಕ ದೇವರುಗಳ ಚಿತ್ರ, ಮಧ್ಯದಲ್ಲಿ ಹನುಮಂತನ ಪ್ರತಿಮೆ. ಒಬ್ಬ ಹೆಂಗಸು ಮಗುವಿಗೆ ಊಟ ಮಾಡಿಸುತ್ತಿದ್ದರು. ದೊಡ್ಡ ನಡುಮನೆ. ಪಕ್ಕದಲ್ಲಿ ೪ ಕೋಣೆಗಳು. ನೆಲಕ್ಕೆ ಹಾಕಿದ್ದದ್ದು ಕಡಪಕಲ್ಲು. ನೋಡಿದರೆ ಮನೆಯಂತಿರಲಿಲ್ಲ. ಅಲ್ಲಿದ್ದವರು ಬಹುಶಃ ಮರಾಠಿ ಭಾಷೆ ಮಾತಾಡುತ್ತಿದ್ದರು. ಅವರನ್ನು ಕೇಳಿದೆನು. ಅವರು ಹೇಳಿದರು “ಇದು ಕೆಂಪೇಗೌಡರ ಕಾಲದ ಗರಡಿ ಮನೆ, ನಾವು ರಜಪೂತರು. ನಮ್ಮ ಅಜ್ಜ-ಮುತ್ತಜ್ಜ ಎಲ್ಲಾ ಇಲ್ಲೇ ಇದ್ದದ್ದು. ಈಗ ಸರಕಾರದವರು ಜಾಗ ಖಾಲಿ ಮಾಡಿ ಎನ್ನುತ್ತಿದ್ದಾರೆ. ಮೈದಾನ ಮಾಡಬೇಕಂತೆ,ನಾವು ಎಲ್ಲಿಗೆ ಹೋಗುವುದು” ಎಂದು ಬೇಸರ ಮಾಡಿಕೊಂಡರು. ಪಕ್ಕದಲ್ಲಿ ಇನ್ನೊಂದು ಚಿಕ್ಕಮನೆ . ಅಲ್ಲಿ ಒಂದು ಅಜ್ಜಿ ವಾಸವಾಗಿದ್ದರು. ಹಳೆಯ ಕಾಲದ ಶೈಲಿಯಮನೆ. ಬಹಳ ಕೇಳಿದ ಮೇಲೆ ಒಂದು ರಾಗಿಬೀಸವಾಗ ಹೇಳುವ ಹಾಡನ್ನು ಹಾಡಿದರು. ಅಂದಿಗೆ ಪ್ರಯಾಣ ಮುಗಿಸಿ ಮನೆಗೆ ಮರಳಿದೆ.
ಮಾಗಡಿ ಇತಿಹಾಸ ಓದಲು ಪ್ರಾರಂಭಿಸಿದೆ. ಅದರಲ್ಲಿ ಕಲ್ಯ ಶಾಸನದ ಬಗ್ಗೆ ತಿಳಿಯಿತು. ಅಲ್ಲಿ ಸೋಮನಾಥ ಗದ್ದುಗೆ ಇದೆ. ವಿಜಯನಗರ ಕಾಲದಲ್ಲಿ ಇದನ್ನು “ಕಲಾವತಿನಗರ” ಎಂದು ಕರೆಯಲಾಗುತ್ತಿತ್ತು. ಈಗ ಕಲ್ಯ ಆಗಿದೆ. ಆ ಶಾಸನವೂ ವಿಜಯನಗರ ಕಾಲದ್ದು. ಜೈನರು ಮತ್ತು ವೈಷ್ಣವರ ಜಗಳ ನಿಲ್ಲಿಸಲು, ಜೈನಬಸದಿಗಳನ್ನು ಜೀರ್ಣೋದ್ಧಾರ ಮಾಡಿಸುತ್ತೇವೆ ಎಂದು ರಾಜನ ಸಮ್ಮುಖದಲ್ಲಿ ವೈಷ್ಣವರು ಒಪ್ಪಿಕೊಂಡ ಶಾಸನ ಅದಾಗಿತ್ತು. ಅದಕ್ಕಾತಿ ಎಷ್ಟು ಹಣವನ್ನು ಮೀಸಲಿಟ್ಟರು ಎಂಬ ಮಾಹಿತಿಯೂ ಅಲ್ಲಿ ಉಲ್ಲೇಖವಾಗಿದೆ. ಒಬ್ಬ ಹುಡುಗ ನಮ್ಮನ್ನು ಅಲ್ಲೆಲ್ಲಾ ಸುತ್ತಾಡಿಸಿದ. ಅಂದು ಸುಮಾರು ೩ ಶಾಸನಗಳನ್ನು ನೋಡಿದೆವು.
ಆ ಹುಡುಗ ಅಲ್ಲಿನ ಒಂದು ನಂದಿಮೂರ್ತಿಯನ್ನು ತೋರಿಸಿ ಇದು ನಂದಿ, ಶಿವರಾತ್ರಿಯಲ್ಲಿ ದಿಕ್ಕು ಬದಲಿಸುತ್ತದೆ, ನಾನೇ ನೋಡಿದ್ದೇನೆ ಎಂದ. ದೀಪಾವಳಿಯಂದು ದೀಪಗಳ ಸಾಲು ಬೆಳಗಿಸು ಬಂಡೆಯನ್ನು ತೋರಿಸಿದ. ಇನ್ನೂ ಸ್ವಲ್ಪ ಮೇಲೆ ಹೋದರೆ ಇನ್ನೊಂದು ಗದ್ದುಗೆ. ಪ್ರಶಾಂತ ವಾತಾವರಣ. ಸ್ವಲ್ಪ ಮುಳ್ಳು ಹೊತ್ತಿಕೊಂಡಿತ್ತು. ಅದನ್ನೆಲ್ಲ ಬಿಡಿಸಿಕೊಂಡು, ನೆಮ್ಮದಿಯಾಗಿ ಹತ್ತು ನಿಮಿಷ ಉಸಿರಾಡಿದೆವು. “ಗದ್ದುಗೆ” ಎಂದರೆ ತಿಳಿದಿದೆಯೇ? ಗದ್ದುಗೆ ಎಂದರೆ ವೀರಶೈವರ ಸಂತರ ಸಮಾಧಿ. ಇನ್ನೂ ಸ್ವಲ್ಪ ಮೇಲೆ ಕಡಿದಾದ ದಾರಿ ಇತ್ತು. ಹೋದರೆ ಮಂಟಪ ಸಿಗುತ್ತಿತ್ತು. ಆದರೆ ಕಡಿದಾದ ದಾರಿ ಬೇಡವೆಂದು ಸುಮ್ಮನಾದೆವು. ಈ ಭಾನುವಾರ ಒಳ್ಳೆಯ ವಿಷಯ ಸಿಕ್ಕಿತೆಂದು ಆನಂದವಾಯಿತು.
ಮಾಗಡಿ ಇತಿಹಾಸ ಓದುವುದನ್ನು ಮುಂದುವರೆಸಿದೆ. ಅಲ್ಲೇ ಯಾವುದೋ ಊರಿನಲ್ಲಿ “ವೀರಗಲ್ಲು” ಇದೆ ಎಂಬ ಮಾಹಿತಿ ಸಿಕ್ಕಿತು. ವೀರಗಲ್ಲು ಎಂದರೆ ವೀರಾವೇಶದಿಂದ ಹೋರಾಡಿ ಹುತಾತ್ಮರಾದ ವೀರರ ನೆನಪಿಗೆ ಸ್ಥಾಪಿಸುವ ಕಲ್ಲು. ಅದರ ಮೇಲೆ ಯುದ್ಧದ, ಕೈಲಾಸದ ಚಿತ್ರಗಳನ್ನು ಕೆತ್ತಲಾಗಿರುತ್ತದೆ. ಅದನ್ನು ಹುಡುಕಿಕೊಂಡು ಹೊರಟೆವು. ಈ ಬಾರಿ ಜಾಗ ಗೊತ್ತಿರುವವರು ಒಬ್ಬರು ಇದ್ದರೆ ಚೆನ್ನ ಎಂದು ಮತ್ತೊಬ್ಬರನ್ನು ಕರೆದುಕೊಂಡು ಹೋದೆವು.
ದಾರಿಯಲ್ಲಿ ಕೆಂಪೆಗೌಡ ಕಟ್ಟಿಸಿದ್ದ ೪೫೦ ವರ್ಷಗಳ ಹಳೆಯ ಸೋಮನಾಥನ ದೇವಾಲಯ ತೋರಿಸಿದರು. ಆಗಷ್ಟೇ ಅಲ್ಲಿನ ತರುಣರೆಲ್ಲ ಸೇರಿ ಸ್ವಚ್ಛಗೊಳಿಸಿದ್ದ ದೊಡ್ಡದಾದ ಕಲ್ಯಾಣಿ ತೋರಿಸಿದರು. ಆದರೆ ನಾವು ಹುಡುಕಿದ ವೀರಲ್ಲು ಮಾತ್ರ ಸಿಗಲೇ ಇಲ್ಲ. ಎಷ್ಟೊ ಹಳ್ಳಿ ಅಲೆದೆವು. ಅಲೆದಾಟಕ್ಕೆ ಏನೋ ಒಂದು ಸಿಗಲೇ ಬೇಕಲ್ಲ. ಒಂದು ಹಳ್ಳ್ಲಿಯಲ್ಲಿ ಒಂದು ಕಪ್ಪುಕಲ್ಲು ಕಂಡಿತು. ಸುಮಾರು ೨.೫ ಅಡಿ ಎತ್ತರದ, ಒಬ್ಬರು ತಮ್ಮ ಎರಡು ಕೈಗಳಿಂದ ತಬ್ಬಿಕೊಳ್ಳಬಹುದಾದ ಅಗಲದ ಗುಂಡನೆಯ ಕಲ್ಲು. ಅದು ಶನಿಮಹಾತ್ಮನ ಕಲ್ಲು ಎಂದು ಸ್ಥಳೀಯರು ಹೇಳಿದರು. ಯಾರದ್ದೋ ಕನಸಿನಲ್ಲಿ ಬಂದು, ಭೂಮಿಯ ಒಳಗೆ ಹುದುಗಿದ್ದ ಆ ಕಲ್ಲನ್ನು ಒಂದು ವರ್ಷದ ಕೆಳಗೆ ತೆಗೆಸಿ ಸ್ಥಾಪಿಸಿದಂತೆ (ಇಂದಿಗೆ ೪ ವರ್ಷವಾಗಿದೆ) ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಒಂದು ದೇವಾಲಯವಿತ್ತು. ಆದರೆ ಬಾಗಿಲು ಹಾಕಿತ್ತು. ಅಲ್ಲಿ ಒಬ್ಬ ಅಜ್ಜ ಸಿಕ್ಕರು. ಅಲ್ಲೇ ಹುಣಸೇಮರದ ಕೆಳಗೆ ಸವೆದು ಹೋಗಿದ್ದ, ವೀರಗಲ್ಲು ಅಲ್ಲದಿದ್ದರೂ ಮತ್ತೇನೋ ಕಥೆ ಹೇಳುವ ಕಲ್ಲುವ ಕಂಡಿತು. ಯಾರೋ ಒಬ್ಬ ಹುಡುಗ ದೇವತೆಗಳ ರಹಸ್ಯವನ್ನು ಬಯಲು ಮಾಡಿದಕ್ಕೆ ಅವನ ಕತ್ತು ಕತ್ತರಿಸಿ ಹೋದ ಚಿತ್ರವನ್ನು ಕೆತ್ತಲಾಗಿತ್ತು. ಅಜ್ಜ ಹೇಳಿದ ಮೇಲೆ ಈ ಕತೆಗೂ ಆ ಕೆತ್ತನೆಗೂ ಸಂಬಂಧ ಸಿಕ್ಕಿತು. ಸದ್ಯಕ್ಕೆ ಅಜ್ಜ ದೇವರಂತೆ ಸಿಕ್ಕರು. ಇಲ್ಲದಿದ್ದರೆ ವೀರಗಲ್ಲು ಸಿಗಲಿಲ್ಲವೆಂದು ಇಳಿಮುಖ ಮಾಡಿಕೊಂಡು ಹೊರಡುತ್ತಿದ್ದೆವು.
ಅದರ ಮುಂದಿನ ಭಾನುವಾರ ಮಾಂಡವಿ ಗುಹೆ, ಕೌಮುದಕಿ ತೀರ್ಥ, ಕಣ್ವತೀರ್ಥ, ರಂಗನಾಥ, ಚೋಳರ ಮಂಟಪಗಳ ದರ್ಶನ. ಮಾಗಡಿ ರಂಗನಾಥ ಮಾಂಡವ್ಯ ಕ್ಷೇತ್ರವೆಂದೇ ಪ್ರಸಿದ್ಧ. ರಂಗನಾಥನ ಶಾಲಗ್ರಾಮವಿದೆ. ಒಂದು ಗುಹೆಯನ್ನೂ ನೋಡಿದೆವು. ಕೆಲವರು ಅದು ಮಾಂಡವಿ ಗುಹೆ, ಕೆಲವರು ಅಲ್ಲ ಎನ್ನುತ್ತಾರೆ. ಗುಹೆಯೊಳಗೆ ಪ್ರಶಾಂತವಾಗಿತ್ತು.
ಅಲ್ಲಿ ವಿಶೇಷ ಎನಿಸಿದ್ದು ಊರಿಗೆ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವ ಬಾವಿ ಮತ್ತು ತಾವರೆ ಕೊಳ. ಮಾಗಡಿಯಲ್ಲಿ ೮ ಕಲ್ಯಾಣಿಗಳು ಇರುವುದಾಗಿ ಹೇಳುತ್ತಾರೆ. ನಾನು ೨ ನೋಡಿದೆ. ಅಲ್ಲಿ ಇದುವರೆಗೆ ನೀರಿನ ಕೊರತೆ ಕಂಡುಬಂದಿಲ್ಲ. ಅಷ್ಟು ಸೊಗಸಾಗಿ ಆಲೋಚಿಸಿ ಕೆಂಪೆಗೌಡರು ಮಾಗಡಿಯನ್ನು ಅಭಿವೃದ್ಧಿಗೊಳಿಸಿದ್ದರು. ವಿಶೇಷವೆಂದರೆ ಮಾಗಡಿ ರಂಗನಾಥನ ಸ್ಥಳಪುರಾಣ ಮಾಡುವ ಅವಕಾಶ ನನಗೆ ಒದಗಿ ಬಂತು. ಇದು ದೇವರ ಕೃಪೆಯೇ ಸರಿ.
ಅಬ್ಬಾ! ಸೇವನಗರದ ಹೆಸರು ಹೇಳಿ, ಎಷ್ಟೆಲ್ಲ ತಲೆ ಕೊರೆದೆ..ಹೀಗೆ ಮಾಗಡಿ ಇತಿಹಾಸ ಓದುವಾಗ ಸಿಕ್ಕಿದ್ದು ಸೇವಾನಗರ. ಇದೊಂದು ಲಂಬಾಣಿಗರ ತಾಂಡ್ಯ. ವರದೇನಹಳ್ಳಿಯಿಂದ ೩ ಕಿ.ಮೀ. ಹೋದರೆ ಸಿಗುವುದು. ಇದನ್ನು “ನಾಯಕರ” ಊರು ಎನ್ನಬಹುದು. ಏಕೆಂದರೆ ಎಲ್ಲಾ ಲಂಬಾಣಿಗರ ಗಂಡುಮಕ್ಕಳ ಹೆಸರಿನ ಮುಂದೆ “ನಾಯಕ್” ಇದ್ದೆ ಇದೆ. ಹೆಣ್ಣು ಮಕ್ಕಳ ಹೆಸರಿನ ಮುಂದೆ “ಬಾಯಿ” ಎಂಬುದಿದೆ. ಅಲ್ಲಿ ೩-೪ ಹೆಂಗಸರು ನೀರು ಹಿಡಿಯುತ್ತಾ ನಿಂತಿದ್ದರು. ನಗುತ್ತಾ ಮಾತನಾಡಿದರು. ನಡುನಡುವೆ ಅವರ ಭಾಷೆಯಲ್ಲಿ ಏನೋ ಹೇಳಿಕೊಂಡು ಕಿಸಿಯುತ್ತಿದ್ದರು. ನಾನು ಅವರ ಜೀವನ ಶೈಲಿ, ಆಹಾರ, ಹಬ್ಬ, ಸಂಪ್ರದಾಯ, ಔಷಧೋಪಚಾರಗಳ ಬಗ್ಗೆ ಅನೇಕ ಪ್ರಶ್ನೆ ಕೇಳಿದೆ. ಅವರ ಮದುವೆಯ Photo ಗಳನ್ನು ತೋರಿಸಿ ಚೆನ್ನಾಗಿ ವಿವರಿಸಿದರು. “ನೀವ್ಯಾರು ಲಂಬಾಣಿ ವೇಷ ತೊಡುವುದಿಲ್ಲವೇ” ಎಂದು ಕೇಳಿದೆ. ಅವರೆಲ್ಲ ನಕ್ಕರು. ಈಗ ಆ ವೇಷವನ್ನು ಹೊಲೆಯುವವರೆ ಇಲ್ಲ. ಎಲ್ಲವನ್ನೂ Nighty ನುಂಗಿಬಿಟ್ಟಿದೆ. ಇದು ಆಧುನಿಕತೆಯ ಮಹದುಪಕಾರ ! ನಮ್ಮಿಂದ ನಮ್ಮನ್ನು ದೂರಮಾಡಿ ಕತ್ತೆಗಳಾಗಿಸುವುದು. ಅವರ ಕುಲಕಸುಬು, ಭಾಷೆ, ಆಚರಣೆ ಎಲ್ಲಾ ಮರೆದು ಪ್ರವಾಹದೊಂದಿಗೆ ತಮ್ಮ ದಿನ ಕಳೆಯುತ್ತಿದ್ದಾರೆ. ಬಹಳ ಕೇಳಿದ ಮೇಲೆ ಇಬ್ಬರು ಟ್ರಂಕಿನಲ್ಲಿದ್ದ, ಅದೂ ಅಡಿಯಲ್ಲಿದ್ದ ತಮ್ಮ ಸಾಂಪ್ರದಾಯಿಕ ವೇಷ ಹಾಕಿಕೊಂಡು ಒಂದೆರಡು ಹಾಡಿಗೆ ನರ್ತಿಸಿದರು. ಎಲ್ಲಾ ಆದ ನಂತರ “ನೀನು ಸಿದ್ಧರಾಮಯ್ಯನ ಕಡೆಯವರಾ? ಎಷ್ಟು ದುಡ್ಡು ಕೊಡ್ತೀರಾ? ಎಂದರು. “ದುಡ್ಡು ಕೊಡಬೇಕೆಂದರೆ ಕೊಡುವೆ, ಆದರೆ ನಾವು ರಾಜಕೀಯದವರಲ್ಲ. ಬೇಕಾದರೆ ನಿಮ್ಮ ಮಕ್ಕಳಿಗೆ ಸ್ತೋತ್ರ, ಸಂಸ್ಕೃತ ಹೇಳಿಕೊಡುವೆ” ಎಂದೆ. ಅವರಿಗೆ ಇದು ಪ್ರಾಮಾಣಿಕ ಉತ್ತರ ಎನಿಸಿರಬೇಕು. ದುಡ್ಡು ಬೇಡ ಬಿಡಿ ಎಂದರು.
ಮುಂದಿನ ಭಾನುವಾರ ಅಲ್ಲಿಗೆ ಹೋಗಿ ನಿಂತಾಗ ಅವರಿಗೆ ಆಶ್ಚರ್ಯ! ’ನಿಮಗೆ ಎಷ್ಟು ಸಂಬಳ ಕೊಡುತ್ತಾರೆ? ಯಾವ ಸಂಘ ನಿಮ್ಮದು” ಎಂದರು. ನನಗೆ ಯಾರೂ ಈ ಕೆಲಸಕ್ಕೆ ಸಂಬಳ ಕೊಡುವುದಿಲ್ಲ, ನಾನು ಕಲಿತದ್ದನ್ನು ಕಲಿಸಲು ಬಂದೆ ಎಂದರೆ ಅವರಿಗೆ ಆಶ್ಚರ್ಯ! ನಿಧಾನವಾಗಿ ಮಕ್ಕಳು ಒಟ್ಟಾದರು. ಆ ಊರಿನ ಶಾಲೆಯ ಅಂಗಳದಲ್ಲಿ ನಮ್ಮ ತರಗತಿ ಪ್ರಾರಂಭವಾಯಿತು. ಈ ಬಾರಿ ನಾನು ಸ್ವಲ್ಪ Syllabus ಪಕ್ಕ ಮಾಡಿಕೊಂಡು ಹೋಗಿದ್ದೆ. ಸ್ತೋತ್ರ, ಕಥೆ, ಲಂಬಾಣಿಗರ ಇತಿಹಾಸ, ಆಟ, ಕೈಕೆಲಸ. ಹೀಗೆ ಕ್ರಮಬದ್ಧವಾಗಿ ಸುಮಾರು ೧ ವರ್ಷ ಅವರ ಒಡನಾಟ ಸಿಕ್ಕಿತು. ಮಕ್ಕಳು ನನ್ನ ಬಗ್ಗೆ ಬಹಳ ಪ್ರೀತಿ ತೋರಿಸಿದರು. ಬಟ್ಟೆಯ ಮೇಲೆ ಮಾಡುವ ಹೊಲಿಗೆ ಹೇಳಿಕೊಟ್ಟೆ.
ಅಲ್ಲಿರುವ ಸೇವಾಲಾಲ್ ದಂಪತಿಗಳ ದೇವಾಲಯದಿಂದಲೇ ಆ ಊರಿಗೆ “ಸೇವಾನಗರ” ಎಂಬ ಹೆಸರು ಬಂದಿದೆ ಎಂದು ತಿಳಿದು ಖುಷಿಪಟ್ಟರು. ಇವರು ಮೂಲತಃ ಆಫ್ಘಾನಿಸ್ತಾನದವರು. ಬಂಜಾರ/ವನಚರ ಎಂದು ಕರೆಯಲ್ಪಡುವ ಜನಾಂಗದವರು. ಅಲೆಮಾರಿಗಳು. ರಜಪೂತರ ಸೈನಿಕರಿಗೆ ಊಟ ಒದಗಿಸುತ್ತಿದ್ದರು ಎಂದು ತಿಳಿಯಿತು. ಇದನ್ನೆಲ್ಲಾ ಹೇಳಿದೆ. ಅವರಿಗೆ ಖುಷಿಯೋ ಖುಷಿ. ಬಹಳ ಅರ್ಥಪೂರ್ಣವದ “ತೀಜ್” ಹಬ್ಬವನ್ನು ಆಚರಿಸುತ್ತಾರೆ. ಸಾಂಪ್ರದಾಯಿಕವಾಗಿ ಹೇಳುವುದಾದರೆ ’ಭೀಮನ ಅಮಾವಾಸ್ಯೆ’. ೯ ರೀತಿಯ ಧಾನ್ಯಗಳನ್ನು ಬುಟ್ಟಿಯಲ್ಲಿ ಹಾಕಿ ೯ ದಿನಗಳ ಕಾಲ ನಿಯಮದಿಂದಿದ್ದು ನಂತರ ತಲೆಯ ಮೇಲೆ ಹೊತ್ತಿಕೊಂಡು ಹೋಗಿ ಸೇವಾಲಾಲಿ ಗುಡಿಯಿಅ ಮುಂದೆ ಇರಿಸಿ ದೀಪ ಹಚ್ಚುತ್ತಾರೆ. ಇದು ಹೆಣ್ಣು ಮಕ್ಕಳ ಹಬ್ಬ. ಒಳ್ಳೆಯ ಗಂಡ ಸಿಗಲೆಂದು ಮಾಡುವುದು. ಅಂತೆಯೇ ದೀಪಾವಳಿ ಬಹಳ ವಿಶೇಷ. ಕೆಟ್ಟದ್ದನ್ನು ಸುಡುವ ಸಂಕೇತವಾಗಿ ಕೆಟ್ಟ ಕೆಟ್ಟ ಪದಗಳಿಂದ ಸೈತಾನನನ್ನು ಬೈದು, ಹಳೆಯ ಪದಾರ್ಥಗಳನ್ನು ಸುಟ್ಟು ಕಾಮನ ಹಬ್ಬವನ್ನು ಆಚರಿಸುತ್ತಾರೆ. ಇವರ ಭಾಷೆಗೆ ಲಿಪಿ ಇಲ್ಲ. ಮಾತನಾಡುವವರು ಇಲ್ಲದಿದ್ದರೆ ಅದು ಸತ್ತೆ ಹೋಗುವುದು. ಆದರೆ ಈಗ English, computer ಎಲ್ಲವನ್ನೂ ನುಂಗುವ ಹುನ್ನಾರದಲ್ಲಿದೆ. ಇವರ ಸಾಂಪ್ರದಾಯಿಕ ಹಾಡುಗಳನ್ನು ನುಂಗಿದೆ. ಹೇಗಾದರೂ ಮಾಡಿ ಅವರಿಗೆ ಅವರ ಸಂಪ್ರದಾಯದ ಬಗ್ಗೆ ಹೆಮ್ಮೆ ಬರಿಸಬೇಕೆಂದು ಪ್ರತಿವಾರ ಅವರ ಇತಿಹಾಸ ಹೇಳುತ್ತಿದ್ದೆ.
ಆದರೆ ಅಲ್ಲಿಗೆ ಹೋಗುವ ವ್ಯವಸ್ಥೆ ಸರಿ ಇರಲಿಲ್ಲ. ಗಾಡಿ, ಟೆಂಪೊ, ಬೈಕ್, ಎತ್ತಿನಬಂಡಿ, ಕುರಿವ್ಯಾನ್, ಟ್ರಾಕ್ಟರ್ ಏನು ಸಿಕ್ಕರೆ ಅದರಲ್ಲಿ ಹೋಗಬೇಕಿತ್ತು. ನಿಧಾನವಾಗಿ ಅಲ್ಲಿನ ಜನರೇ ಬನ್ನಿ ಚೆಕ್ ಪೋಸ್ಟ್ ಗೆ ಬಿಡುತ್ತೇವೆ ಎಂದು ಸಹಕರಿಸಿದರು. ದುಡ್ಡಿಲ್ಲದೆ ವಿದ್ಯೆ ಹೇಳಿಕೊಡುತ್ತಿರುವ ತಾಯಿ, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹರಸಿದರು. ನನಗೆ ಹರಕೆಗಿಂತ ನನ್ನ ಶ್ರೀಮಂತ ಸಂಸ್ಕೃತಿ ಉಳಿಯಬೇಕಿತ್ತು. ಹಾಗಾಗಿ ನಕ್ಕು ಸುಮ್ಮನಾದೆ.
–
ಅಧ್ಯಯನ
(ಅಧ್ಯಾಪಕರ / ಪೋಷಕರ ಸ್ವಾಧ್ಯಾಯ ಹಂಚಿಕೆ ವಿಭಾಗ)
–
The Absorbent Mind Ashwini Rao (Teacher, Pre-primary division)
The Absorbent Mind was Maria Montessori’s most in-depth work on her educational theory, based on decades of scientific observation of children. The absorbent mind is the sponge-like capacity to absorb from the environment what is necessary to create an individual from his or her specific culture. It is the quality of the child’s mind up to the age of about six, when there is a transition to the reasoning mind we have as adults.
Every little child learns to speak his/her mother tongue. And no one teaches him/her the vocabulary, the grammar, or the syntax. It happens every day in every country at just about the same time. It’s a rather amazing feat! If you have tried to learn a foreign language later in your life, you know it is not so easy. Yet every little child does it effortlessly. How? Through the absorbent mind. If the child is in an environment where she hears the language, she will speak it. As the child absorbs words and their meaning along with the context and the emotions behind the words, she begins to construct the ability to communicate.
Children absorb not only their language, but the traits of their families and communities. They learn how and what we eat, and how to behave in certain situations. Some of it is consciously taught, but a great deal of it is simply absorbed through this powerful child mind. Children absorb through a process Montessori called “mental chemistry,” and actually build themselves and their identity through what they absorb.
The absorbent mind is more like the camera. What the child takes in during the absorbent mind period is taken in effortlessly and remains as the foundation of his or her personality. What the child takes in later in the reasoning mind is taken in through conscious work and memory, and is not so foundational to the personality.
Montessori’s understanding of the power of the absorbent mind in the first six years of life is a great gift. It teaches us that we can prepare a rich environment for the young child and, as he simply lives in the environment, he absorbs from it and learns. In the Montessori early childhood program for ages 2½ through 6, we introduce the children to all manner of interesting activities, including language, mathematics, the sciences, music, art, and geometry.
Through the power of the absorbent mind, we can give our children a broad and deep foundation, when it is completely effortless for them to learn. Through the amazing “mental chemistry” of the absorbent mind, the child builds his or her identity with wide interests. The child learns through self-chosen, engaging activity and builds a solid base habit of thoughtful concentration and structured learning.
-ο-
सुभाषितम रघुत्तम.बि (बाल विहार)
सुन्दरं भाषितमिति सम्यक् भाषितमिति शोभनं भाषितमिति वा सुभाषितम्। काव्यनाटकादीनां प्रकारा: इव सुभाषितान्यपि परिगणितानि विशिष्टकाव्यप्रकारत्वेन । अर्थगम्भीरयुक्त: श्लोक: एकैकोपि मुक्तकमिति परिभावितोऽस्ति । यथा मुक्तकं स्वर्णाभरणस्य शोभां वर्धयति तथैव सुभाषितान्यपि जीवनस्य शोभां वर्धयन्ति । अपिच एकैकमपि सुभाषितम् एकैकं वस्तु समग्रतया सुन्दरतया सम्यक् निरूपयति । एतानि सुभाषितानि मनोज्ञै: उदाहरणै: चेतोहारीणि च भवन्ति । एतानि जीवनस्य विविधेषु क्षेत्रेषु मार्गदीपा इव मार्गदर्शनं कुर्वन्ति । कानिचन सूक्तिपुष्पाणि अत्र सङ्ग्रथितानि ।
अलब्धमीहेद् धर्मेण लब्धम् यत्नेन पालयेत् ।
पालितं वर्धयेन्नित्यं वृद्धं पात्रेषु निक्षिपेत् ॥ [याज्ञवल्क्य स्मृति:]
ಅಲಭ್ಯವಾದುದನ್ನು ಧರ್ಮದಿಂದ ಗಳಿಸಬೇಕು. ಗಳಿಸಿದ್ದನ್ನು ಜೋಪಾನವಾಗಿ ರಕ್ಷಿಸಬೇಕು. ರಕ್ಷಿಸಿದುದನ್ನು ವೃದ್ಧಿ ಮಾಡಬೇಕು. ಅದನ್ನು ಯೋಗ್ಯರಿಗೆ ಹಂಚಬೇಕು.
ದೃಷ್ಟಾಂತ – ಪಾಂಡವರು. ಅವರಿಗೆ ಇಂದ್ರಪ್ರಸ್ಥ ಸುಲಭದಲ್ಲಿ ಸಿಗಲಿಲ್ಲ. ಸಿಕ್ಕಿದ್ದನ್ನು ರಕ್ಷಿಸಿದರು, ಸಂಪತ್ತನ್ನು ವೃದ್ಧಿಸಿದರು. ಅದನ್ನು ಯೋಗ್ಯರಿಗೆ ಯೋಗ್ಯ ರೀತಿಯಿಂದ ಹಂಚಿದರು.
गिरिर्महान् गिरेरब्धि: महानब्धेर्नभो महत् ।
नभसोपि महद्ब्रह्म ततोऽप्याशा गरीयसी ॥ [ कुवलयानन्द: ]
ಪರ್ವತವು ದೊಡ್ಡದು, ಅದಕ್ಕಿಂತ ಸಮುದ್ರ ದೊಡ್ಡದು, ಅದಕ್ಕಿಂತ ಆಕಾಶ ದೊಡ್ಡದು, ಆಕಾಶಕ್ಕಿಂತ ದೊಡ್ಡವನು ಬ್ರಹ್ಮ, ಬ್ರಹ್ಮನಿಗಿಂತ ದೊಡ್ಡದು ಮನುಷ್ಯನ ಆಸೆ.
ದೃಷ್ಟಾಂತ – ರಾವಣ ಹಿರಣ್ಯಕಶಿಪು ಮುಂತಾದ ಅಸುರರು ದೇವರನ್ನು ಮರೆತು ಪ್ರಪಂಚವೆಲ್ಲ ತಮ್ಮ ಅಂಕೆಯಲ್ಲಿ ಇರಬೇಕು, ಸಾವೂ ಬರಬಾರದು ಎಂಬ ಆಸೆಯೊಂದಿಗೆ ಘೋರ ತಪಸ್ಸನ್ನು ಮಾಡಿದರು. ತಪಸ್ಸು ಲೋಕಕಲ್ಯಾಣದ ಉದ್ದೇಶವನ್ನು ಹೊಂದಿದ್ದರೆ ಫಲ ಧರ್ಮವನ್ನು ನೆಲೆಗೊಳಿಸುವುದು. ಸ್ವಾರ್ಥಕ್ಕೆ ಲೋಕವನ್ನು ಎಳೆದರೆ ವಿಧ್ವಂಸ ಖಂಡಿತಾ. ಇದೇ ಆಸೆಯನ್ನೇ ದೊಡ್ಡದಾಗಿ ಮಾಡಿಕೊಂಡು ಅವರು ಅದರಿಂದಲೇ ವಿನಾಶವನ್ನೂ ಹೊಂದಿದರು. ಆದರೆ ಪ್ರಹ್ಲಾದನಂತಹ ಸಜ್ಜನರು ತಪಸ್ಸನ್ನು ಲೋಕದಲ್ಲಿ ಧರ್ಮದ ನೆಲೆಗಾಗಿ ಮಾಡಿದರು. ಈ ನಿಸ್ವಾರ್ಥತೆ ಸದ್ಗತಿಯನ್ನು ಒದಗಿಸಿತು. ಆಸೆ ಇರುವುದು ತಪ್ಪಲ್ಲ. ಆದರೆ ಆ ಆಸೆಯ ನೆಲೆ ಯಾವುದೆನ್ನುವುದೇ ಮುಖ್ಯ.
चलन्ति गिरय: कामं युगान्तपवनाहता: ।
कृच्छ्रेऽपि न चलत्येव धीराणां निश्चलं मनः ॥ [चण्डकौशिक:]
ಪ್ರಳಯಕಾಲದ ಬಿರುಗಾಳಿಗೆ ಬೆಟ್ಟಗಳು ಹಾರಿ ಹೋಗುತ್ತವೆ. ಆದರೆ ಧೀರರ (ಗುರಿ ಸಾಧಿಸುವ ಛಲ ಇರುವವರ) ಮನಸ್ಸು ಸ್ವಲ್ಪವೂ ಅಲುಗಾಡುವುದಿಲ್ಲ (ಎದೆ ಗುಂದುವಿದಿಲ್ಲ)
ದೃಷ್ಟಾಂತ – ಸಾನಂದ ಸ್ವಾಮಿಗಳು. ಇವರು ಇಳಿವಯಸ್ಸಿನಲ್ಲೂ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸ್ವಚ್ಛ ಮತ್ತು ಅವಿರಳ ಗಂಗೆಗಾಗಿ ತಪಸ್ಸಿನಿಂದ ಹಿಂದೆ ಸರಿಯಲೇ ಇಲ್ಲ. ಇದಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.
सर्पा: पिबन्ति पवनं नच दुर्बलास्ते
शुष्कैस्तृणैर्वनगजा बलिनो भवन्ति ।
कन्दै: फलैर्मुनिवरा क्षपयन्ति कालम्
सन्तोष एव पुरुषस्य परं निदानम् ॥ [पञ्चतन्त्रम् – मित्रसंप्राप्ति:]
ಹಾವುಗಳು ಕೇವಲ ಗಾಳಿಯನ್ನು ಕುಡಿದರೂ ಅವು ದುರ್ಬಲವಾಗುವುದಿಲ್ಲ, ಕಾಡಾನೆಗಳು ಒಣಹುಲ್ಲು ತಿಂದರೂ ಬಲಿಷ್ಠವಾಗಿರುತ್ತವೆ, ಋಷಿಮುನಿಗಳು ಗೆಡ್ಡೆ-ಹಣ್ಣುಗಳನ್ನು ತಿಂದು ಕಾಲ ಕಳೆಯುತ್ತಾರೆ. ಏಕೆಂದರೆ ತೃಪ್ತಿ, ಸಂತೋಷವೇ ಮನುಷ್ಯನ ಆರೋಗ್ಯದ ಗುಟ್ಟು.
ದೃಷ್ಟಾಂತ – ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮಿಗಳು. ಆಹಾರದ ಪರಿಣಾಮ ಮನಸ್ಸು, ದೇಹ ಎರಡರ ಮೇಲೂ ಆಗುವುದು. ನಾವು ಸೇವಿಸುವ ಆಹಾರವೇ ಮನಸ್ಸಾಗಿ ಬರುವುದು. ಉಪವಾಸ-ವ್ರತ ಮಾಡಿ ದೇಹ ಕುಗ್ಗಿದ ಕೂಡಲೆ ದುರ್ಬಲ ಎಂದು ಅರ್ಥವಲ್ಲ. ಬದಲಾಗಿ ಮನಸ್ಸು ಗಟ್ಟಿಯಾಗುವುದು. ದೇಹಕ್ಕೆ ಪ್ರಕೃತಿಯ ಜೊತೆ ಜೊತೆಗೆ ಬದುಕುವುದು, ಅಗತ್ಯಕ್ಕಿಂತ ಹೆಚ್ಚಿನ ಆಹಾರ
ಸೇವಿಸದಿರುವುದು ಅಭ್ಯಾಸವಾಗುವುದು. ಹಾಗಾಗಿ ಸ್ವಾಮಿಗಳು ೮೯ ವರ್ಷಗಳವರೆಗೆ ಆರೋಗ್ಯವಾಗಿದ್ದರು. (ಶೀತ, ಕೆಮ್ಮು, ನೆಗಡಿ ಮನುಷ್ಯರಿಗೆ ಸಾಮಾನ್ಯ)
दाक्षिण्यं स्वजने, दया परिजने, शाठ्यं सदा दुर्जने
प्रीति: साधुजने, नयो नृपजने, विद्वज्जने चार्जवम् ।
शौर्यं शत्रुजने, क्षमा गुरुजने, नारीजने पूज्यता
ये चैवं पुरुषा: कलासु कुशला: तेष्वेव लोकस्थिति: ॥
ತನ್ನವರಲ್ಲಿ ಸೌಜನ್ಯ, ಸೇವಕ ಜನರಲ್ಲಿ ದಯೆ, ದುರ್ಜನರಲ್ಲಿ ಹಗೆ, ಸಜ್ಜನರಲ್ಲಿ ಪ್ರೀತಿ, ರಾಜ ಮತ್ತು ರಾಜಪರಿವಾರದವರಲ್ಲಿ ನಯವಂತಿಕೆ, ಪಂಡಿತರಲ್ಲಿ ಜ್ಞಾನಿಗಳಲ್ಲಿ ನೇರ ನಡೆ ನುಡಿ, ಶತ್ರುಗಳಲ್ಲಿ ಶೂರತನ, ಹಿರಿಯರಲ್ಲಿ ಕ್ಷಮೆ, ಸ್ತ್ರೀಯರಲ್ಲಿ ಗೌರವ ಭಾವನೆ – ಹೀಗೆ ಜೀವನಕಲೆಗಳಲ್ಲಿ ನಿಪುಣರಾದ ಜನರು ಎಲ್ಲಿರುತ್ತಾರೋ ಅವರ ಲೋಕವು ಸುಭಿಕ್ಷವಾಗಿರುವುದು.
ದೃಷ್ಟಾಂತ – ಶ್ರೀರಾಮಚಂದ್ರ ಇವನು ಸೇವಕರಲ್ಲಿ ದರ್ಪ ತೋರಿಸುತ್ತಿರಲಿಲ್ಲ,
ರಾಜಪರಿವಾರದೊಂದಿಗೆ ಸೌಜನ್ಯದಿಂದ ಇರುತ್ತಿದ್ದ, ಶತೃಗಳಿಗೆ ತನ್ನ ಪರಾಕ್ರಮ ತೋರಿಸುತ್ತಿದ್ದ, ಹಿರಿಯರಲ್ಲಿ (ಕೈಕೇಯಿಯಲ್ಲಿ) ಕ್ಷಮಾಗುಣ ಹೊಂದಿದ್ದ, ಎಲ್ಲಾ ಸ್ತ್ರೀಯರನ್ನು ಗೌರವದಿಂದ ಕಾಣುತ್ತಿದ್ದ. ಹಾಗಾಗಿ ರಾಮರಾಜ್ಯ ಸುಭಿಕ್ಷವಾಗಿತ್ತು.
(ಸಹಾಯ – ದೃಷ್ಟಾಂತಗಳ ಸಂಗ್ರಹಕ್ಕೆ ವಿಕ್ರಮಸಿಂಹ ಆಚಾರ್ಯರು ಸಹಾಯ ಮಾಡಿದ್ದಾರೆ)
-ο-
ಕರೋನಾ ತಂದ ಸೌಭಾಗ್ಯ– ಅಶ್ವಿನಿ ವ್ಯಾಸನಕೆರೆ (ಅಧ್ಯಾಪಕರು, ಪ್ರಾಥಮಿಕ ವಿಭಾಗ)
ನಮ್ಮ ಶಾಲೆಯ ಮಾಸಪತ್ರಿಕೆಗೆ ಲೇಖನ ಬರೆಯಬೇಕು ಎಂದಾಗ ಇದೆಲ್ಲಾ ಅಭ್ಯಾಸವಿಲ್ಲದ ನನಗೆ ಏನು ಬರೆಯಲಿ? ಹೇಗೆ ಬರೆಯಲಿ? ಎಂದು ನನ್ನೊಳಗೇ ಗೊಂದಲ ಶುರುವಾಯಿತು. ಇದೇ ಪ್ರಶ್ನೆಗಳು ಗುನುಗುಟ್ಟುತ್ತಿದ್ದವು. ಡಾ. ಕರಜಗಿ ಸರ್ ಹೇಳಿದ ಒಂದು ವಾಕ್ಯ ನೆನಪಾಯಿತು. “ಒಂದು ವಾಕ್ಯ ಬರೆಯಲು ನೂರು ಸಾಲುಗಳು ಓದಿರಬೇಕು”.
ಈ ಬಿಡುವಿಲ್ಲದ ಬದುಕಿನಲ್ಲಿ ಇದುವರೆಗೂ ಅಧ್ಯಯನಕ್ಕೆ ಸಮಯಕೊಡದ ನನಗೆ ಲೇಖನ ಬರೆಯುವುದು ಎಂದರೆ ಏನು, ಹೇಗೆ ಎಂಬ ಪ್ರಶ್ನೆಗಳು ಸಹಜ. ಅಧ್ಯಯನ ಮಾಡುವ ಮನಸ್ಸಿದೆ ಆದರೆ ಕೆಲಸದ ಮಧ್ಯೆ ಜೊತೆಗೆ ನನ್ನ ಸೋಮಾರಿತನದಿಂದಾಗಿ ಸಮಯ ಒದಗಿಸಿಕೊಡಲು ಆಗುತ್ತಿರಲಿಲ್ಲ. ಕೊರೋನಾ ಮಹಾಮಾರಿಯಿಂದ ಇಡೀ ಪ್ರಪಂಚವೇ ಸ್ತಬ್ಧವಾದಾಗ, ಎಲ್ಲರೂ ಹಲಕಾಲ ಮನೆಯಲ್ಲಿಯೇ ಇರಬೇಕು ಎಂದಾಗ, ಏನೋ ಒಂದು ಸಂತಸ. ಅಬ್ಬಾ! ಈಗಲಾದರೂ ನೆಮ್ಮದಿಯಿಂದ ಮನೆಯಲ್ಲಿಯೇ ಇದ್ದು, ಬಂದಿರುವ ಸೌಭಾಗ್ಯವನ್ನು ಸಾರ್ಥಕವಾಗಿ ಉಪಯೋಗಿಸಿಕೊಳ್ಳೋಣ. ಈ ಯಾಂತ್ರಿಕ ಬದುಕಿನಲ್ಲಿ ಎಷ್ಟು ಕಳೆದುಹೋಗಿದ್ದೆವೆಂದರೆ, ನಿತ್ಯ ಮನೆಯವರೆಲ್ಲರ ಜೊತೆಗಿನ ಮಾತುಗಳೂ ಯಾಂತ್ರಿಕವಾಗಿಹೋಗಿದ್ದವು. ಈಗ ಸಮಯ ಸಿಕ್ಕಿದೆ, ಎಲ್ಲರೂ ಇದ್ದರೂ ಮಾತುಗಳೇ ಹೊರಡುತ್ತಿಲ್ಲ! ಎಂಥ ವಿಪರ್ಯಾಸ.
ಕೆಲದಿನಗಳು ಹೀಗೇ ನಡೆದಿತ್ತು. ನಂತರ ಲಾಕ್-ಡೌನ್ ದಿನಚರಿ ಆರಂಭವಾಯಿತು. ಓದಬೇಕು ಅಂದುಕೊಂಡಿದ್ದ ಕೆಲವು ಪುಸ್ತಕಗಳ ಧೂಳು ಜಾಡಿಸಿ ಚೂರು ಓದಲು ಶುರುಮಾಡಿದೆ. ಮನೆಯವರೆಲ್ಲರ ಜೊತೆ ಆರಾಮವಾಗಿ ಒಳ್ಳೆಯ ಮಾತು-ಕಥೆ, ಒಟ್ಟಿಗೇ ಕುಳಿತು ನೆಮ್ಮದಿಯಿಂದ ಉಂಡು-ತಿಂದು ನಕ್ಕು-ನಲಿದು, ಆಹಾ! ತಲೆಯ ಮೇಲಿನ ಒಂದು ದೊಡ್ಡ ಭಾರವನ್ನು ಬದಿಗಿಟ್ಟ ಅನುಭವ!!
ಈಗ ಅಧ್ಯಯನ ಮಾಡಬೇಕು, ಹೇಗೆ ಎಲ್ಲಿಂದ ಶುರುಮಾಡುವುದು ಎಂದು ಚಿಂತಿಸುತ್ತಿರುವಾಗ, ಕಳೆದ ವರ್ಷ ನಮ್ಮ ಶಾಲೆಯ ಉತ್ಸವಕ್ಕಾಗಿ ಕೊಟ್ಟಿದ್ದ ಥೀಮ್ “ಕಾಲಚಕ್ರ ಮತ್ತು ಯುಗಧರ್ಮ” ಇದಕ್ಕಾಗಿ ನಡೆಸಿದ್ದ ಅಧ್ಯಯನವನ್ನೇ ಮುಂದುವರೆಸಿ, ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಹಲವು ಪುರಾಣಗಳ ಪುಸ್ತಕಗಳನ್ನು ಹಿಡಿದು ನನ್ನ ಸೋದರಿ ಜೊತೆ ಆಗಲೇ ಶುರುವಾಗಿದ್ದ ಅಧ್ಯಯನವನ್ನು ಮುಂದುವರೆಸಿದೆ. ಒಂದು ತಿಂಗಳ ಕಾಲ ಕಲಿಯುಗದಿಂದ ಕೃತಯುಗಕ್ಕೆ ಹೋದಂತೆ ಭಾಸವಾಯಿತು.
ಇದೇ ಸಮಯಕ್ಕೆ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ನನಗೆ ಕೆ.ಎಮ್. ಶೇಷಗಿರಿ ಅಣ್ಣನವರಿಂದ ಸಾಮಾಜಿಕ ಜಾಲತಾಣದಲ್ಲಿ ಚಿತ್ರಕಲಾ ಶಿಬಿರ ಆರಂಭವಾಗಲಿದೆ ಎಂದಾಗ ಎಲ್ಲಿಲ್ಲದ ಸಂತೋಷವಾಯಿತು. ಇದೊಂದು ಒಳ್ಳೆಯ ಭಾಗ್ಯ ಎಂದು ಅವರ ತರಗತಿಗಳಿಗೆ ಬಿಡದೆ ಕುಳಿತುಕೊಳ್ಳುತ್ತಿದ್ದೆ. ಅವರ ಪಾಠ ಹೇಳುವ ಕ್ರಮ ಎಂಥವರಿಗೂ ನಾವೂ ಚಿತ್ರವನ್ನು ಇಷ್ಟು ಸುಲಭವಾಗಿ ಚಿತ್ರಿಸಬಹುದಾ? ಎನ್ನಿಸುವಂತಿತ್ತು. ಶಾಲೆಯಲ್ಲಿ ಮಕ್ಕಳಿಗೆ ರೇಖಾಗಣಿತ ಶುರುಮಾಡುವಾಗ “3 basic shapes” ಏನು ಹೇಳಿಕೊಡುತ್ತೇವೆ ಅದನ್ನೇ ಇಷ್ಟು ಚೆನ್ನಾಗಿ ಚಿತ್ರಬರೆಯಲು ಬಳಸಬಹುದಾ! ಎಂದು ಆಶ್ಚರ್ಯವಾಯಿತು.
ಈಗ ರಜಾ ದಿನಗಳು ಕಳೆದು ಶಾಲೆ ಪ್ರಾರಂಭಿಸುವ ದಿನಗಳು ಹತ್ತಿರ ಬಂದವು. ಶಾಲೆ ತೆರೆಯುವಂತಿಲ್ಲ ಆದರೆ ಮಕ್ಕಳನ್ನು ಹಾಗೆ ಎಲ್ಲಿಯವರೆಗು ಬಿಡುವುದು, ಇದಕ್ಕೆ ಹೇಗೆ ಮಾಡುವುದು ಎಂದು ಎಲ್ಲಾ ಚಿಂತಕರೂ ಚಿಂತಿಸಿ, ಆನ್ ಲೈನ್ ಪಾಠ ಮಾಡಲು ಗೂಗಲ್ ಅಪ್ಪ್ಲಿಕೇಷನ್ ಗಳನ್ನು ಬಳಸಿ ಸುಲಭವಾಗಿ ಪಾಠಮಾಡುವ ತರಬೇತಿಯಾಯಿತು. Software ಕಂಪನಿಗಳಲ್ಲಿ ಹೆಚ್ಚು ಕಾಲ ಕೆಲಸ ಮಾಡಿದ್ದರಿಂದ ಇದು ಕಷ್ಟಕರ ಎಂದು ಯಾವತ್ತೂ ಅನಿಸಲಿಲ್ಲ. ಆದರೆ ಮಕ್ಕಳು ಇದಕ್ಕೆ ಹೇಗೆ ಸ್ಪಂದಿಸುತ್ತಾರೆ? ನಮ್ಮ ಪೋಷಕರು ಎಷ್ಟು ಸಹಕರಿಸಿಯಾರು? ನಮ್ಮ ಮಕ್ಕಳು ಮತ್ತು ಪೋಷಕರು ಎಷ್ಟು ಸಹಕರಿಸಿದರು ಎಂದರೆ ಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ಸುಲಭವಾಗಿ ಕೆಲಸ ಆರಂಭವಾಗಿ ಮುಂದುವರೆಯಿತು.
ಆನ್ ಲೈನ್ ಪಾಠಕ್ಕಾಗಿ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಮೆಟೀರಿಯಲ್ ಮಾಡುವುದು, ಗೂಗಲ್ ಸ್ಲೈಡ್ ಮಾಡುವುದರ ಜೊತೆಗೆ ಪಕ್ಕದ ಮನೆಯವರ ಮಹಡಿಮೇಲಿನ ತೋಟಕ್ಕೆ ಹೋಗಿ ಸಸ್ಯಶಾಸ್ತ್ರ ಹೇಳಿಕೊಡುವುದರ ಜೊತೆಗೆ ಶಾಲೆಯ ಕೆಲವು ಮಕ್ಕಳಿಗೆ ಸ್ಪೆಶಲ್ ಕ್ಲಾಸ್ ಜೊತೆಗೆ ಮನೆಯ ಹತ್ತಿರದಲ್ಲಿರುವ ಬಳಗದವರ ಮಕ್ಕಳಿಗೂ ಪಾಠ ಶುರುವಾಯಿತು. ಮನೆ ಮನೆಯಲ್ಲಿ ಪೂರ್ಣಪ್ರಮತಿಗೆ ನಾಂದಿಯಾಯಿತು.
ಕೆಳಗಿನ ಚಿತ್ರಗಳು ನಮ್ಮ ಮನೆಯಲ್ಲಿ ನಿತ್ಯ ನಡೆಯುತ್ತಿರುವ ಪೂರ್ಣಪ್ರಮತಿಯದ್ದು. ಹೀಗೆ ಎಲ್ಲರ ಮನೆಗಳಲ್ಲೂ ಈಗ ಪೂರ್ಣಪ್ರಮತಿ ಶುರುವಾಗಿರುವುದಂತೂ ನಿಜ. “ಮನೆಯೆ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು” ಈಗಿನ ಕಾಲಕ್ಕೆ ಅನ್ವಯಿಸುತ್ತಿರಲಿಲ್ಲ ಈಗ ಕೊರೋನಾದಿಂದಾಗಿ ಮತ್ತೆ ಅನ್ವಯವಾಗುತ್ತಿದೆ.
ಕೊರೋನಾದಿಂದಾಗಿ ಪ್ರಪಂಚದಾದ್ಯಂತ ಎಷ್ಟೋ ಕಷ್ಟ ನಷ್ಟಗಳು ಆಗಿವೆ, ಆಗುತ್ತಿವೆ. ಅದರಲ್ಲೂ ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುವ ಭಾಗ್ಯ ನನ್ನದಾಗಿದೆ. ಹೀಗೆ ಬಹಳಷ್ಟು ಜನರಿಗೆ ಆಗಿರುವುದರಲ್ಲಿ ಸಂಶಯವಿಲ್ಲ. ಎಲ್ಲ ಸಂದರ್ಭದಲ್ಲಿ ಅದರಿಂದ ಒಳ್ಳೆಯ ಅಂಶಗಳನ್ನು ಹೆಕ್ಕಿ ತೆಗೆದು ಮೆಲುಕುಹಾಕಿದರೆ ಜೀವನ ಸುಂದರ ಮನಸ್ಸಿಗೆ ಹಿತ ಎಂದು ಇಷ್ಟು ವಿಷಯ ನಿಮ್ಮೆಲ್ಲರ ಬಳಿ ಹಂಚಿಕೊಂಡೆ.
-ο-
My experience of conventional teaching v/s Montessori Method of learning!
– Rupa Sandur (Elementary teacher)
The level of academic education given in Indian schools is exceptionally high as compared to other countries. The concepts of mathematics and science touched upon are very good. I come from such a conventional school, where the textbook is considered to be the complete knowledge resource. You are shown that the syllabus is all you have to know and other questions are labelled as “Out of syllabus!”. There is an instant limit put on your learning.
It is not that, I have not learnt anything in my school. But most of that was abstract to me. For example, the concepts of mathematics – fractions, area and volume were just given to us without an opportunity to discover it’s physical or real meaning. Big numbers were alway big to me, as I was not able to visually quantify them.
By now, you must have understood, I am not a regular writer!
“Better late than never!”
I entered Purnapramati and got introduced to a completely different way of teaching. Here, it is not taken as teaching but as learning. There are no teachers; all are facilitators to help each other to learn more. At Purnapramati, I got introduced to the “Montessori way of learning”. I was able to revisit all the elementary level topics and had to unlearn many methods or approaches that were taught in my classrooms. Here, concepts were taught through material as this age is regarded to be a sensorial age for children. Then why should we cut off all their senses and ask them to gaze at the blackboards? However, their hands, legs and touch sense are not being served adequately. I felt this was an excellent approach which is – to give children the concepts in a sensorial way as for them these faculties are very active at that age. The idea that children are left free to roam around and choose what they want to do was very new to me!
If I compare this to my school, my memories bring out the following phrases – “I want pindrop silence.” – I have never understood the meaning of this phrase. How can a classroom with so many bubbles of energy give you pin drop silence. “No talking” – I thought humans were born to communicate and it is the basic need for us. “Applaud for the first 3 rankers”. “Form a queue height wise” – I always stood first in this line. “All the intelligent students in A section, average in B and below average in C”. I was very much relaxed as I was labelled by the teachers so it was very convenient for me and thought no action was required from my side. I was not alone; there were many classmates of mine who echoed my thoughts.
In the Montessori Method, children are allowed to express their creativity without any inhibitions. Like, if a child were to colour a Sun in green, it is ok. The leaf can be purple in colour and the mountains can be in blue colour. All this is accepted and the child is never straight-jacketed. Nothing the child does is considered wrong or is scoffed at. In the Montessori Method, children are never graded and are always encouraged to express themselves.
In conventional schools, syllabus and ranks are given more importance than the children themselves. In this situation, what should one do, if they have the ability to grasp more? On the other hand, if someone wants some more time to understand a concept, what would that person do? Or what should one do if he/she could understand if taught in a different way? I think all these questions largely can be answered by the Montessori Method of learning.
I am fortunate to be introduced to the Montessori Method of learning. Here complete focus is on the child rather than the syllabus.
-ο-
ಬನ್ನಿ – ಭಾಗ್ಯಶ್ರೀ ಚಿಕ್ಕೇರೂರು (ಅಧ್ಯಾಪಕರು, ಮಾಧ್ಯಮಿಕ ವಿಭಾಗ)
ಎಲ್ಲಿ ಹೋಯಿತು ರೋಷ?
ಎಲ್ಲಡಗಿತ್ತಾಕ್ರೋಷ?
ಪಾಶ್ಚಿಮಾತ್ಯರ ಬೆಳ್ಳಂ ಬೆಡಗಿಗೆ ಬೆರಗಾಗಿ
ಗಂಡೆದೆಯ ಗುಂಡಿಗೆಯ ಗುಡುಗು ಸದ್ದಡಗಿ
ಗೂಡೊಳಗೆ ಅಡಗಿ ಹೋಯಿತೇ?
ಪರದೇಸಿಗೆ ಬೆಂಡಾಗಿ ಮನ ಮೊಂಡಾಗಿ ಹೋಯಿತೇ?
ಪರತಂತ್ರ ಸರಿದು ಸ್ವತಂತ್ರ ಬಂದರೂ
ಬಿಳಿಯರಾ ತಳುಕು ಬಳುಕಿನೆದುರು
ಮಂತ್ರಮುಗ್ಧರು ನಾವು, ಮೂಕ ವಿಸ್ಮಿತರು ನಾವು
ನಮ್ ನೆಲದ ಸಂಸ್ಕಾರ ಸಂಸ್ಕೃತಿಗೆ ತಿರಸ್ಕಾರ
ಪ್ರೇಮದಾ ಹೆಸರಿನಲಿ ಕಾಮಕೆ ಪುರಸ್ಕಾರ
ನಾರುಟ್ಟವಳು ನಮ್ ತಾಯಿ ಎಂದು
ಜರಿದು ಜರ್ಝರವಾಗಿ
ಜರಿಯುಟ್ಟ ನೆರೆಮನೆಯ ನೀರೆಯನು ಕರಿಬಹುದೇ
ಜನುಮದಾತೆ ಎಂದು? ಹೆತ್ತ ತಾಯಿ ಎಂದು?
ಹರಿಸಿ ನೆತ್ತರ ಕೋಡಿ, ಪ್ರಾಣವನು ಪಣಹೂಡಿ
ಕೆಚ್ಚೆದೆಯ ವೀರರು ಬಿಚ್ಚೊಗೆದು ಪ್ರಾಣದ ಹಂಗನು
ಬಿಚ್ಚಿಸಿದು ನಾಡ ಪರತಂತ್ರದಿ
ವರುಷಕೊಮ್ಮೆ ತಮ್ ಸಮಾಧಿಗೆ ಹೂ ಗುಚ್ಛವಿಡಲೆಂದೇ?
ತಮ್ ಕನಸುಗಳು ಕಿಚ್ಚಿಗೆ ಆಹುತಿ ಆಗಲೆಂದೇ?
ಪರತಂತ್ರ ತೆಗದೆಸೆದು ಸ್ವತಂತ್ರ ತಂದದ್ದು
ಸ್ವ-ತಂತ್ರದಲಿ ನಾಡಸಿಗಿಸಲೆಂದೇ?
ಕುತಂತ್ರದಿಂದ ನಾಡ ಹರಿದು ಹಂಚಲೆಂದೇ?
ತಾಯ್ ಕೈಯ ಶೃಂಖಲೆಯ ತೊಡೆದು ಹೊರ ತಂದದ್ದು
ಸ್ವಾರ್ಥಗಳ ಸಂಕೋಲೆಯಲಿ ಬಂಧಿಸಲು ಎಂದೇ?
ಒಡಲೊಳಗಿನಾ ಕಿಚ್ಚು ಹೊತ್ತುರಿಯುತಿರುವಾಗ
ಗಚ್ಚನೆ ಕಚ್ಚಿಕೊಂಡ ಕೊಂಡಿಗಳು ಕಳಚುತಿರುವಾಗ
ಈ ಕಿಚ್ಚಿನೆದುರಲಿ ಬೆಚ್ಚಗಿರುವರೆ ಹೆಚ್ಚಿ
ನಾಡನು ತುಚ್ಛವಾಗಿ ಚುಚ್ಚುತಿರುವಾಗ
ಕೊಚ್ಚಿ ಹೋಗಿಹುದೇ ಕೆಚ್ಚೆದೆಯ ರಚ್ಚು?
ಆಗದಿರಲಿ ಕನಸಿನಾಹುತಿಯು
ಬಿಳಿಯರೆಂಬ ಆಷಾಢ ಭೂತಿಯಿಂದ
ಕಾಲ ಕೈ ಮೀರಿ ಹೋಗುವ ಮುನ್ನ
ಎಚ್ಚೆತ್ತು ತಾಯ ಕಾಯ್ದುಕೊಳ್ಳುವ ಬನ್ನಿ
ನೆಲವನುಳಿಸಿಕೊಳ್ಳುವ ಬನ್ನಿ, ಗೆಲುವ ಸಾಧಿಸುವ ಬನ್ನಿ
ಹುಲಿವೇಷ ಧರಿಸಿದಾ ನರಿಯಂತಾಗಿರದೆ
ನಮ್ ನೆಲಕೆ ನಾವೇ ದೊರೆಯಾಗಿ ಮೆರೆವ ಬನ್ನಿ
ಪೊರೆದ ತಾಯ್ ನೆಲವು ಬಿರಿಯದಂತೆ ಕಾಯುವಾ ಬನ್ನಿ
ಒಂದಾಗುವಾ ಬನ್ನಿ, ಹೊಂದಿಳ್ಳುವ ಬನ್ನಿ
ಜನ್ಮಭೂಮಿಯ ಋಣವ ತೀರಿಸುವ ಯತ್ನವ ಮಾಡುವಾ ಬನ್ನಿ
ಬನ್ನಿ…ಬನ್ನಿ….ಬನ್ನಿ
-ο-
पद्यकथा – पद्योत्पत्तिकारणीभूता अनंत शयन शिरहट्टि (अध्यापकाः, प्रौड शाला )
जानन्त्येव सर्वे यत् संस्कृते नैकानि हृद्यानि पद्यानि राजन्ते इति । तासु कासाञ्चन पद्यानामुत्पत्तौ काश्चन कथा: भवन्ति । तासामवलोकनं किञ्चित् कुर्म: ।
आसीत् भारविरिति महाकवि: । पञ्चमहाकाव्येष्वेतस्य “नैषधीयचरितम्” अप्यन्यतमम् । बाल्ये एवासाधारणप्रतिभावानासीदेष: कवि: । एतत्कृतश्लोकास्तु विद्वत्तल्लजानामपि आश्चर्यहेतवो आसन् । एतस्य कवितासामर्थ्यं दृष्ट्वा सर्वेऽपि जना: प्रशंसन्ति स्म कविमेनम् । जनन्यपि नितरां सन्तुष्टा आसीत् ।
परन्तु भारवेरेकैव चिन्तासीत् – “असाधारणकविताशक्तिसम्पन्नं मां सर्वेऽपि प्रशंसन्ति । मया रचितेषु श्लोकेषु रुचिं प्रदर्शयन्ति । किन्तु न तुष्यति मम पिता कदापि । यं श्लोकं कवयोऽपि प्रशंसन्ति तं मद्रचितं श्लोकं दृष्ट्वा – ’अस्मिन् श्लोके इतोऽपि रमणीयता पदसौष्टवादिगुणा: आवश्यकाः’ इति वदति । श्लोकानां शतं दर्शितमपि एवमेव कमपि दोषमेव वदति । न प्रशंसति किञ्चिदपि । तस्य प्रशंसां श्रोतुमेव मया अनितरसाधारणानि पद्यानि रचितानि । तथापि न तुष्यति” इति ।
अथैकदा तु भारवि: अद्भुतमेकं पद्यं विरचय्य पित्रेऽदर्शयत् । तद्दृष्ट्वापि तत्पिता पूर्ववत् “सम्यगस्ति । तथापि काव्यरसा: आवश्यका:” इत्यकथयत् । तच्छ्रुत्वा ततो निर्गच्छति खिन्नो भारवि: । एकान्ते आलोचयतोऽतीवखिन्नस्य तस्य मनसि दुरालोचना काचिदुद्भवति । “मम पिता मत्सरी । ममोन्नतिं न सहते । पुत्रोन्नतिमसहमान: पिता एव न भवति । मत्सरिणं पितृपदकलङ्कमिमं अद्यैव हन्मि” इति क्रुद्ध: पितृवधार्थं गृहं गच्छति ।
रात्रौ जनकवधाय बृहत्पाषाणमेकं गृहीत्वा पितु: शयनगृहं गच्छति । “यदा पिता स्वपिति तदैव तस्य शिरसि पाषाणं पातयामि” इति हनने बद्ध: सन् समयं प्रतीक्षते । शयनगृहात् बहि: प्रतीक्षत: तस्य कर्ण: मातापित्रो: सम्भाषणं श्रुणोति ।
माता – स्वामिन् ! आवयो: पुत्र: भारवि: इदानीं महाकवि: सञ्जात: ।
पिता – जानामि ।
माता – सर्वेऽपि तस्य कवितासामर्थ्यं दृष्ट्वा तं नितरां प्रशंसन्ति ।
पिता – तदपि जानामि ।
माता – परन्तु भवान् तस्य प्रशंसामेव न करोति । तेन स: अतीव खिन्न: अस्ति ।
पिता – एतदप्यहं जानामि । अहं तस्य प्रवृद्धिं दृष्ट्वा अतीव सन्तुष्ट: अस्मि । यदायदा तस्य नूतनं रचनं दृष्टवानस्मि तदातदा प्रभूतं सन्तोषम् अनुभूतवान् अस्मि ।
माता – परन्तु भवत: वचने वा वदने वा तादृशी भावना न दृष्टा कदापि ।
पिता – सत्यम् । यद्यहं तस्य प्रशंसां प्रथममेव कुर्यां तत्रैव तस्य सामर्थ्यं स्थगितं स्यात् । सर्वेषां प्रशंसावचनेन तस्य कौशलं कुण्ठितं स्यात् । अत एवाहं अतुष्ट इव आसम् । पुत्रस्तु मम तोषणार्थं बहु प्रयत्नं कृतवान् । असाधारणप्रतिभां प्राप्तवांश्च । भारवि: महाकवि: भविष्यतीति तस्य प्रथमश्लोकं दृष्ट्वैवाहं ज्ञातवान् आसम् । केवलं अहं कंटकोद्धरणं कर्तुं प्रशंसां न कृतवान्
भारवि: एतत्सर्वं श्रुतवान् । सत्यं ज्ञातवान् । तस्य दोषं च । झटिति पितु: समीपं गत्वा तत्पादयो: पतित्वा स्वदुरालोचनं कथयित्वा क्षमां याचितवान् । पिता तस्य मूर्ध्नुपाघ्राय तमालिङ्गितवान् । सद्य एव तत्रैव भारवीमुखत: श्लोकमेकं नि:सरति ।
सहसा विदधीत न क्रियामविवेक: परमापदां पदम् ।
वृणुते हि विमृष्य कारिणं गुणलुब्धा: स्वयमेव सम्पद: ॥ इति ।
सर्वमपि विचार्य कार्यम् । अविवेकबुद्धि: आपदां कारणं भवति इति तस्य अभिप्राय: । अनेन पिता सन्तुष्ट: तं भूय: दृढमालिङ्गितवान् । एवम् एतस्य पद्यस्य उत्पत्तौ इमा कथा प्रथिता विद्यते ।
–
ಚಿಂತಕರ ಛಾವಡಿ
–
ಪೂರ್ಣಪ್ರಮತಿಯಲ್ಲಿ ಪರಿಸರದ ಪಾಠ – ಯಲ್ಲಪ್ಪ ರೆಡ್ಡಿ (ಕರ್ನಾಟಕ ಲೋಕ ಅದಾಲತ್ ಸದಸ್ಯರು ಮತ್ತು ಪರಿಸರ ತಜ್ಞರು)
(..ಮುಂದುವರೆದ ಭಾಗ)
ಮಕ್ಕಳ ಮನಸ್ಸನ್ನು ಮುದುಡಿಸುವ ಅಧಿಕಾರ ನಮಗೆ ಇಲ್ಲ
ಇನ್ನೊಂದು ಪ್ರಮುಖ ವಿಷಯ ಮಕ್ಕಳಿಗೆ ಇಲ್ಲಿ ಹೇಳಿಕೊಡುತ್ತಿರುವ ಪ್ರಕೃತಿ ಪಾಠ. ಕದಂಬ ವೃಕ್ಷವನ್ನು ಸೂಕ್ಷ್ಮವಾಗಿ ಗಮನಿಸಿದ ಒಂದು ಮಗು ಮುಂದಿನ ವರ್ಷದಲ್ಲಿ ಹಣ್ಣು ಕೊಡುವುದು ಕಡಿಮೆಯಾದಾಗ ಏಕೆ? ಏನಾಯಿತು? ಎಂಬ ಪ್ರಶ್ನೆಯನ್ನು ತರುತ್ತಾನೆ. ಇಲ್ಲಿ ಕದಂಬ ಮರಕ್ಕೂ ಮಿಂಚಿಗೂ-ಗುಡುಗಿಗೂ ಸಂಬಂಧವಿದೆ. ಎಷ್ಟು ಮಿಂಚು-ಗುಡುಗು ಬರುವುದೋ ಅಷ್ಟು ಫಲವನ್ನು ಕದಂಬ ವೃಕ್ಷವು ನೀಡುವುದು. ಏಕೆಂದರೆ ವಾತಾವರಣದಲ್ಲಿ ೭೦-೮೦% ನೈಟ್ರೋಜನ್ ಇದೆ. ಮರಗಳಿಗೆ ಗುಡುಗು-ಮಿಂಚು ಬಂದಾಗ ಈ ನೈಟ್ರೋಜನ್ ಪ್ರೋಟೀನ್ ಗಳಾಗಿ ಸಿಗುತ್ತದೆ. ಹೆಚ್ಚು ಪ್ರೋಟೀನ್ ಸಿಕ್ಕಾಗ ಹೆಚ್ಚು ಫಲಕೊಡುತ್ತವೆ. ಇದು ವಿಜ್ಞಾನ. ಆದರೆ ವಿಜ್ಞಾನ ಪುಸ್ತಕವನ್ನು ಓದಿ ಬಾಯಿಪಾಠ ಮಾಡಿದಾಗ ಬರುವುದಿಲ್ಲ. ಪ್ರಕೃತಿಯಲ್ಲಿ ಇದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಬರುವುದು. ಒಂದು ಮಾಧವಿ ಲತೆಯ ಹೂವು ಇರುವುದು ಇಷ್ಟು ಚಿಕ್ಕದು, ಅಷ್ಟು ದೊಡ್ಡ ಜೇನು ಬಂದಾಗ ಅದು ಬೀಳುವುದಿಲ್ಲ, ಅದಕ್ಕೆ ನೋವಾಗುವುದಿಲ್ಲ, ತಾನೂ ಉಪಕಾರ ಪಡೆದು, ಜೇನುನೊಣಕ್ಕೂ ಮಧುವನ್ನು ಕೊಟ್ಟು ಹೇಗೆ ಬದುಕುತ್ತಿದೆ? ಒಂದು ಬೀಜ ಇಷ್ಟು ದೊಡ್ಡ ಮರವಾಗಿ ಬೆಳೆದದ್ದು ಹೇಗೆ? ಇಂತಹ ಜೀವಂತ ಉದಾಹರಣೆಗಳನ್ನು ನೋಡಿದಾಗ ಮಗುವಿನ ಮನಸ್ಸು ಅರಳುವುದು. ಇದು ನಿಜವಾದ ವಿಜ್ಞಾನ. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಹೇಳಿಕೊಡುವ ಕೆಲಸವನ್ನು ಶಾಲೆ ಮಾಡಬೇಕು. ಹೀಗೆ ಬೆಳೆದಾಗ ಮಾತ್ರ ಮಗು ವಿಜ್ಞಾನಿಯಾಗುವುದು. ಈ ಶಾಲೆಯಲ್ಲಿ ನಾವು ಹೇಳಿಕೊಡುವುದು ಈ ವಿಜ್ಞಾನವನ್ನು. ಅಂದರೆ ಜೀವಕೊಂಡಿಗಳು, ಜೈವಿಕ ಚಕ್ರವನ್ನು ಪರಿಚಯ ಮಾಡುತ್ತಿರುವುದು. ಪ್ರಕೃತಿಯಲ್ಲಿರುವ ಈ ಸಂಬಂಧಗಳನ್ನು ಹೇಳಿಕೊಟ್ಟಾಗ ಮಗು ಪರಿಪೂರ್ಣ ವಿಜ್ಞಾನಿಯಾಗುತ್ತಾನೆ. ಇದು ಪ್ರಕೃತಿಯಲ್ಲಿ ಇದೆ. ಅದನ್ನು ಬಿಟ್ಟು ನಾವು ಕೋಣೆಯ ಒಳಗೆ Smart class ನಲ್ಲಿ ತೋರಿಸಿ ಕಲಿಸಿದರೆ ಸಮಗ್ರ ರೀತಿಯಲ್ಲಿ ಬೆಳೆಯುವುದಿಲ್ಲ. ಮಗುವಿಗೆ ಕಲಿಕೆ ಆನಂದ ತರುವ ಪ್ರಕ್ರಿಯೆಯಾಗಬೇಕು. ಶಿಕ್ಷೆಯಾಗಬಾರದು. ಕಷ್ಟವಾದ ವಿಷಯವನ್ನು ಬಿಟ್ಟರೂ ತೊಂದರೆ ಇಲ್ಲ, ಆನಂದದಿಂದ ಕಲಿಯಬೇಕು. ಅದರ ಬದಲು ಕಷ್ಟವಾಗಿರುವುದನ್ನೇ ಪದೆ ಪದೆ ಹೇಳಿ, ಮಗುವಿಗೆ ತಾನು ಅಪ್ರಯೋಜಕ ಎನಿಸಿ ಮನಸ್ಸು ಮುದುಡುವಂತೆ ಮಾಡಿದರೆ ಎಂಥ ಶಿಕ್ಷಣ ಕೊಟ್ಟಂತಾಯಿತು? ಮಕ್ಕಳ ಮನಸ್ಸನ್ನು ಮುದುಡಿಸುವ ಅಧಿಕಾರ ನಮಗೆ ಇಲ್ಲ. ಅದು ಅಕ್ಷಮ್ಯ ಅಪರಾಧ. ಮಕ್ಕಳ ಮನಸ್ಸನ್ನು ಅರಳಿಸಿ, ಪ್ರಕೃತಿಯೊಂದಿಗೆ ಬೆರೆಸುವಲ್ಲಿ, ಕಲಿಕೆಯನ್ನು ಆನಂದದ ಪ್ರಕ್ರಿಯೆಯಾಗಿಸುವಲ್ಲಿ ಪೂರ್ಣಪ್ರಮತಿಯ ಪಾತ್ರ ದೊಡ್ಡದು.
ಪ್ರಕೃತಿ ಚಿಕಿತ್ಸೆ
ಇನ್ನೊಂದು ಪ್ರಮುಖ ಅಂಶವೆಂದರೆ ಇತ್ತೀಚಿನ ದಿನಗಳಲ್ಲಿ ಇ.ಸಿ.ಜಿ ಮಾಡಿ ಮೆದುಳಿನ ಕೆಲಸಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ. ವಾತಾವರಣದಲ್ಲಿರುವ ಪ್ರಾಣವಾಯುವನ್ನು ಸೇವಿಸಿದಾಗ ಆಗುವ ಬದಲಾವಣೆಯನ್ನು ಗಮನಿಸಿದಾಗ ಮೆದುಳು ಬಹಳ ಸಕ್ರಿಯವಾಗಿರುವುದು ಕಂಡುಬಂದಿದೆ. ಇದನ್ನು ಬಿಟ್ಟು ಹವಾನಿಯಂತ್ರಿತ ತರಗತಿಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಕೂಡಿಹಾಕಿ ಕಲಿಸುವುದರಿಂದ ಮೆದುಳು ಸಕ್ರಿಯವಾಗುವುದೇ ಇಲ್ಲ. ಮೆದುಳಿನಲ್ಲಿರುವ ಮಿಯಾಸ್ಮ ಅನಗತ್ಯವಾದದ್ದನ್ನು ಸಂಗ್ರಹಿಸಿಕೊಳ್ಳಲು ಶುರುಮಾಡುತ್ತವೆ. ಪ್ರಕೃತಿಯಲ್ಲಿ ಪ್ರಾಣವಾಯುವನ್ನು ಸ್ವೀಕರಿಸುತ್ತಾ ಆನಂದಿಸಿದಾಗ ಮಾತ್ರ ಮೆದುಳು ಚುರುಕಾಗುವುದು. ಹಾಗಾಗಿ ನಾವು ಮಾಡಬೇಕಾದ ಕೆಲಸ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಭೂಮಿತಾಯಿಯ ಸಂಪರ್ಕಕ್ಕೆ ತರುವುದು.
ದುಂಬಿಯನ್ನು ನೋಡಿದಾಗ, ಹೂವಿನೊಂದಿಗೆ ಅದರ ಸಂಪರ್ಕವನ್ನು ಗಮನಿಸಿದಾಗ ನಾನೇಕೆ ಆ ರೀತಿ ಇಲ್ಲ? ಎಂಬ ಪ್ರಶ್ನೆ ಬಂದಾಗ, ಪ್ರಕೃತಿಯೊಂದಿಗೆ ಒಂದಾದಾಗ ಬರುವ ಜ್ಞಾನ ಎಲ್ಲಕ್ಕಿಂತಲೂ ಮಹತ್ವವಾದದ್ದು. ಆಗ ಮೆದುಳಿನಲ್ಲಿರುವ ನರತಂತುಗಳು ಸಕ್ರಿಯವಾಗುವುದು, ಆಗ ಎಲ್ಲಾ ಇಂದ್ರಿಯಗಳು ಸರಿಯಾಗಿ ಕೆಲಸ ಮಾಡುವುದು. ಹೀಗೆ ಪಂಚೇಂದ್ರಿಯಗಳು, ಪಂಚಭೂತಗಳು ಸಂಪರ್ಕಕ್ಕೆ ಬಂದಾಗ ಮಗುವಿಗೆ “ಅರೆ ಪ್ರಕೃತಿಯಲ್ಲಿ ಎಲ್ಲದ್ದಕ್ಕೂ ಮಹತ್ವವಿದೆ, ಎಲ್ಲರೂ ಬದುಕುತ್ತಿದ್ದಾರೆ, ನಾನೇಕೆ ಕಡಿಮೆ ಸಿಕ್ಕರೆ ಜಗಳ ಆಡಬೇಕು, ಕೋಪ ಮಾಡಿಕೊಳ್ಳಬೇಕು ಎಂಬ ಅರಿವು ಮೂಡುವುದು, ಇದ್ದದ್ದರಲ್ಲಿ ತೃಪ್ತಿಯಿಂದ ಇರುವ ತುಂಬು ಭಾವ ಮೂಡುವುದು, ಜೀವನವನ್ನು ಆನಂದಿಸುವುದು”. ಇದನ್ನು ಶಾಲೆಯಲ್ಲಿ ಹೇಳಿಕೊಡುವ ಅಗತ್ಯವಿಲ್ಲ. ಪ್ರಕೃತಿ ಆಗಲೇ ಪಠ್ಯಕ್ರಮವನ್ನು ಸಿದ್ಧಮಾಡಿ ಇಟ್ಟಿದೆ. ಅದನ್ನು ಗಮನಿಸಲು ಕಲಿಸಿದರೆ ಸಾಕು. ಬೇಡದ ವಿಷಯಗಳಿಂದ ಮನಸ್ಸನ್ನು ಬೇರ್ಪಡಿಸುವ ಕೆಲಸವನ್ನು ಮಾಡಬೇಕು.
William words worth – “I made quite by the harmony offered immeasurable relief by the flowers of the word” ಎಂದು ವರ್ಣಿಸುತ್ತಾನೆ. ಒಂದು ಹೂವನ್ನು ನೋಡುವಾಗ ಕಣ್ಣು – ಮನಸ್ಸು ನಿಶ್ಶಬ್ದವಾಗುವುದು. ಇದೇ ರೀತಿ ಅರಬಿಂದೋ ಘೋಷ್ ಅವರು ೮೦೦ ಹೂವುಗಳಿಗೆ ಇರುವ ಆಧ್ಯಾತ್ಮಿಕ ಶಕ್ತಿಯನ್ನು ಪುಸ್ತಕದಲ್ಲಿ ತಿಳಿಸಿದ್ದಾರೆ. ಹೀಗೆ ಸಣ್ಣ ಸಣ್ಣ ಹೂವಿನಲ್ಲೂ ಇರುವ ದೊಡ್ಡ ಶಕ್ತಿ, ಆಕಾರ-ಬಣ್ಣ-ವಿನ್ಯಾಸಗಳಲ್ಲಿರುವ ತಂತ್ರಜ್ಞಾನವನ್ನು ಮಕ್ಕಳಿಗೆ ತಿಳಿಸಿದಾಗ “ನಾನೇನು ಇದಕ್ಕಿಂತ ಹೆಚ್ಚು ಎಂದು ಅಹಂಕಾರ ಕಡಿಮೆಯಾಗುವುದು”.
ಪ್ರಕೃತಿಯಲ್ಲಿ heal and deal ಶಕ್ತಿ ಸಹಜವಾಗೇ ಇದೆ (ಗುಣಪಡಿಸುವ ಮತ್ತು ಒಪ್ಪಂದ ವ್ಯವಸ್ಥೆ) . ಅಂದರೆ ನಮ್ಮೊಳಗಿರುವ ಕಷ್ಟ, ಸವಾಲುಗಳಿಗೆ ತನ್ನದೇ ರೀತಿಯಲ್ಲಿ ಗುಣಪಡಿಸುವ ಶಕ್ತಿ ಇದೆ. ಆದರೆ ಅದರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ನಮಗೆ ಗೊತ್ತಿರಬೇಕು. ಹೂವನ್ನು ನೋಡಿ ಆನಂದಿಸಬೇಕು, ಅದರಿಂದ ಬರುವ ಪರಿಮಳವನ್ನು ಉಸಿರಾಡಬೇಕು. ಅದನ್ನು ಬಿಟ್ಟು ಹೂವನ್ನು ಕಿತ್ತರೆ healing ಎಲ್ಲಿಂದ ಆಗಬೇಕು. ಹಾಗಾಗಿ heal and deal ಬಗ್ಗೆ ನಮಗೆ ಅರಿವಿರಬೇಕು. ಹೇಗೆ ಒಂದು ಜೇನುನೊಣ, ಜೀರುಂಡೆ ಹೂವಿಗೆ ಹಾನಿಮಾಡದೆ ತಾನೂ ಬದುಕಿ ಅದನ್ನೂ ಬದುಕಿಸುವುದೋ ಹಾಗೆ. ಈ ನೈತಿಕಪ್ರಜ್ಞೆ ನಮಗೆ ಇರಬೇಕು. ಅದನ್ನು ಬಿಟ್ಟು ಪ್ರಕೃತಿಯ ಮರ್ಮಸ್ಥಾನಗಳಿಗೆ ಪೆಟ್ಟು ಕೊಟ್ಟರೆ ಅದು ತನ್ನ ಕೆಲಸವನ್ನು ಮಾಡುವುದಾದರೂ ಹೇಗೆ?! ಅದೂ ಕೂಡ ತನ್ನ ಆಕ್ರೋಶವನ್ನು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸುವುದು. ಆಗ ನಮಗೆ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಪ್ರಕೃತಿಯನ್ನು ವಿಕೃತಿ ಮಾಡದ ಸಂಸ್ಕೃತಿ ನಮ್ಮದಾಗಬೇಕು. ಪ್ರಕೃತಿಯೊಡನೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ನಾಗರಿಕತೆ ಎಂದು ನಾವು ಮಕ್ಕಳಿಗೆ ಹೇಳಿಕೊಡಬೇಕಿರುವುದು.
ನಾಗರಿಕತೆ ಎಂದರೆ?!
ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ ಕಲೆಯನ್ನು ಅವರು ಕಲಿಯಬೇಕು. ಅಲ್ಲಿ ಇರುವ ಅಪಾರವಾದ ಚಿಕಿತ್ಸಕ ಗುಣವನ್ನು ಅನುಭವಿಸಬೇಕು. ದೇಹ – ಮೆದುಳು-ಮನಸ್ಸು-ಆತ್ಮ ಒಂದೇ ರೇಖೆಯಲ್ಲಿ ನಿಲ್ಲುವಂತೆ ಮಾಡುವ ಶಕ್ತಿ ಪ್ರಕೃತಿಗೆ ಇದೆ. ಹೂವನ್ನು ವಿಕಾರಗೊಳಿಸದೆ ಸೌಂದರ್ಯವನ್ನು – ಪರಿಮಳವನ್ನು ಸ್ವೀಕರಿಸಿದರೆ ಅದು ತನ್ನ ಫಲವನ್ನು ಕೊಡುತ್ತದೆ. ಹಾನಿಮಾಡಿ ಫಲ ಸಿಗಲಿಲ್ಲ ಎಂದರೆ ಅದು ಅದರ ತಪ್ಪಲ್ಲ! ಇದು ಪ್ರಕೃತಿಯ ಮೂಲತತ್ವಗಳು.
ಮನಶಾಸ್ತ್ರ ಮತ್ತು ನರವಿಜ್ಞಾನ ಈ ಆನಂದವನ್ನು ಕರಾರುವಾಕ್ಕಾಗಿ ಅಳೆಯಬಲ್ಲವಾಗಿವೆ. ಅಂದರೆ ಒಂದು ಹೂವಿನ ಬಗ್ಗೆ ಇಷ್ಟು ಸೂಕ್ಷ್ಮವಾಗಿ ಗಮನಿಸಿ, ಅದರ ಬಗ್ಗೆ ಆಲೋಚಿಸಿ, ಆನಂದಿಸಿ ಎಷ್ಟು ಸಮಯ ಕಳೆಯಿತೋ ಅದೆಲ್ಲವೂ ತಪಸ್ಸೇ ಅಲ್ಲವೇ?! ಇದೇ ಪೂಜೆ. ಇದೇ ವಿಜ್ಞಾನ, ಇದೇ ಜ್ಞಾನ. ಇದಕ್ಕೆ ಯಾವುದೇ ಜಾತಿ-ಮತಗಳ ಬೇಲಿ ಇಲ್ಲ. ತಪಸ್ಸು ಎಂದರೆ ರಾಮ-ಕೃಷ್ಣ ಎಂದು ಜಪಮಾಡುವುದಷ್ಟೆ ಅಲ್ಲ. ಮಕ್ಕಳಿಗೆ ಈ ವಯಸ್ಸಿನಲ್ಲಿ ಬೇಕಾದುದು ಪ್ರಕೃತಿಯೊಡನೆ ಆಗುವ ಸಂಬಂಧ, ಆಗ ಅದು ನಿಧಾನವಾಗಿ ತಪಸ್ಸಿಗೆ ತಿರುಗುವುದು. ಮುಂದೆ ಜೀವನದಲ್ಲಿ ನಮಗೆ ಅರಿವಿಲ್ಲದಂತೆ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡುತ್ತೇವೆ, ಪ್ರಕೃತಿಯನ್ನು ವಿಕೃತಿಗೊಳಿಸದೆ ನಾಗರಿಕರಾಗಿ ಬದುಕುತ್ತೇವೆ. ಇತ್ತೀಚಿನ ಎರಡು ಅಧ್ಯಯನಗಳು ಇದನ್ನು ಸ್ಪಷ್ಟಪಡಿಸುತ್ತವೆ. 1st January 2016 ನಲ್ಲಿ Exter Medical school “Mental health Data of good health”[1] ಮತ್ತೊಂದು 2009 Dutch research.[2]
ಪ್ರಕೃತಿಯಿಂದ ದೂರಾಗಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದರೂ ನಮಗೆ ಏನು ಬೇಕೋ ಅದು ಸಿಗುವುದಿಲ್ಲ, ಬದಲಾಗಿ ಆತಂಕ, ಒತ್ತಡಗಳೇ ಸಿಗುವುದು. ಒಂದು ಎಲೆಯಲ್ಲಿ 80,000 Km / second ನಲ್ಲಿ ಜೀವಕಣಗಳ ಸಂಚಲನ ನಡೆಯುತ್ತಿರುತ್ತದೆ. ಒಳ್ಳೆಯ ಮನಸ್ಸಿನಿಂದ ಹೂವನ್ನು ನೋಡಿದಾಗ ಇದು ನಮ್ಮಲ್ಲಿನ ರಕ್ತ ಚಲನೆಗೂ ಸಹಾಯವಾಗುತ್ತದೆ. ಪ್ರತಿಯೊಂದು ಹೂವು, ಎಲೆ ದೇವತೆಯಂತೆ ಕೆಲಸಮಾಡುವುದು. ಕೆಲವು ಗಿಡಗಳು, ಕೆಲವು ಹೂವುಗಳು ಇಂತಹ ದೈವಿಕ ಶಕ್ತಿಯನ್ನು ಬಿಡುಗಡೆ ಮಾಡಬಲ್ಲವು. ಮನುಷ್ಯ ಅದನ್ನು ಗ್ರಹಿಸುವ ಒಂದು ಸಮಾನರೇಖೆಯನ್ನು (Frequency) ಸಂಪಾದಿಸಿಕೊಳ್ಳಬೇಕು. ಅಶೋಕದ ಕೆಳಗೆ ಕುಳಿತಾಗ, ವಟವೃಕ್ಷದ ಕೆಳಗೆ ಕುಳಿತಾಗ, ಔದುಂಬರದ ಕೆಳಗೆ ಕುಳಿತಾಗ ಒಬ್ಬೊಬ್ಬರಿಗೆ ಸಿಗುವ ಶಕ್ತಿ ಒಂದೊಂದು ರೀತಿಯಾಗಿರುತ್ತದೆ. ಅದನ್ನು ನಾವು ಕಂಡುಕೊಳ್ಳಬೇಕು. ಚಿಟ್ಟೆ ಎಲ್ಲಾ ಹೂವುಗಳಿಗೂ ಹೋಗುವುದಿಲ್ಲ, ಪ್ರಾಣಿಗಳು ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತವೆ. ಅವುಗಳಿಗೆ ಅಷ್ಟು ಬುದ್ಧಿವಂತಿಕೆ ಇದೆ. ಹಾಗೆಯೇ ನಾವು ನಮ್ಮ ಅಗತ್ಯವನ್ನು ಕಂಡುಕೊಳ್ಳಬೇಕು. ಇದು ಸಾಧ್ಯವಾಗುವುದು ಪ್ರಕೃತಿಯೊಡನೆ ಒಂದಾದಾಗ ಮಾತ್ರ. ಮನುಷ್ಯರು ಆನಂದ ಪಡಲು ಸಾಧ್ಯವಾಗುವುದು ಈ ಸಂಪರ್ಕಕ್ಕೆ ಬಂದಾಗ ಮತ್ತು ತಮ್ಮನ್ನು ತಾವು ಕಂಡುಕೊಂಡಾಗ ಮಾತ್ರ. ಪೂರ್ಣಪ್ರಮತಿಯಲ್ಲಿ ಮಕ್ಕಳಿಗೆ ಇದನ್ನು ಹೇಳಿಕೊಡಬೇಕು. ಹೂವಿನಲ್ಲಿರುವ ಬಣ್ಣ ಆದಿತ್ಯನ ಕೃಪೆ. ಎಲ್ಲಿಂದ ಹೂವಿಗೆ ಈ ಬಣ್ಣ ಬಂದಿದೆ ಎಂದು ನೋಡಿದರೆ ಆದಿತ್ಯನ ಶಕ್ತಿಯನ್ನು ವಿಕೇಂದ್ರೀಕರಣಗೊಳಿಸಿಕೊಂಡು ತನಗೆ ಬೇಕಾದುದನ್ನು ಲೆಕ್ಕ ಮಾಡಿ ಹೂವುಗಳು ಪಡೆದುಕೊಳ್ಳುತ್ತವೆ. ಹೂವಿನ ಈ ಕೆಲಸಕ್ಕೆ ಒಂದು ಉದ್ದೇಶವಿದೆ. ಯಾವ ಹೂವು ಎಷ್ಟು ಪ್ರಮಾಣದಲ್ಲಿ ಬಣ್ಣ ಮತ್ತು ಪರಿಮಳವನ್ನು ಪಡೆದುಕೊಳ್ಳಬೇಕು ಎಂಬುದನ್ನು ಆದಿತ್ಯನಿಂದ ಕೇಳಿ ತೆಗೆದುಕೊಳ್ಳುತ್ತವೆ. ಇದು ಪ್ರಕೃತಿಯಲ್ಲಿ ನಡೆಯುತ್ತಿರುವ ನಿಜವಾದ ಗಾಯತ್ರಿ ಜಪ. ಕೋಟಿಗಿಂತಲೂ ಹೆಚ್ಚು ಸುಖ ತರುವುದು ಇದು ಎಂಬುದನ್ನು ಅರ್ಥಮಾಡಿಸಬೇಕು. ಖಾಯಿಲೆ ಎಂದು ಸುಮ್ಮನೆ ಕುಳಿತರೆ ವಾಸಿಯಾಗುವುದಿಲ್ಲ. ಬದಲಾಗಿ ಪ್ರಕೃತಿಯಲ್ಲಿರುವ ಶಕ್ತಿಯನ್ನು ಹೇಗೆ ಪಡೆದುಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳಬೇಕು. ಬಳ್ಳಿಯೊಂದು ಮರದ ಆಶ್ರಯ ಪಡೆದುಕೊಂಡು ಹೇಗೆ ಬೆಳೆದುಕೊಂಡಿದೆ, ಎಷ್ಟು ಸವಾಲುಗಳನ್ನು ನಿಭಾಯಿಸಿದೆ ಎಂಬುದನ್ನು ಮಗು ಗಮನಿಸಿದಾಗ ತಾನೂ ಅಂತೆಯೇ ಜೀವನದಲ್ಲಿ ಸವಾಲುಗಳನ್ನು ನಿಭಾಯಿಸುವುದನ್ನು ಕಲಿಯುವುದು. ಸವಾಲುಗಳು ಬಂದಾಗ ಎದೆಗುಂದುವುದಿಲ್ಲ. ಪೂರ್ಣಪ್ರಮತಿ ಈ ಕೆಲಸ ಮಾಡಬೇಕು. ಮಕ್ಕಳಿಗೆ ಪ್ರಕೃತಿಯನ್ನು ಗಮನಿಸಿ ತನ್ನನ್ನು ಬೆಳೆಸಿಕೊಳ್ಳುವ ಸೂಕ್ಷ್ಮದರ್ಶಿತ್ವವನ್ನು ಕಲಿಸಬೇಕು. ಆಗ ರಸಾಯನ ಶಾಸ್ತ್ರ, ಗಣಿತ, ಭೌತಶಾಸ್ತ್ರ ಯಾವುದೂ ಕಷ್ಟವಾಗುವುದಿಲ್ಲ. ಬಲಹೀನ ಮನಸ್ಸಿಗೂ ಬಲತುಂಬುವ ಶಕ್ತಿ ಇದಕ್ಕಿದೆ.
ಸ್ವೀಡನ್ – ಮೆಡಿಲಾಡ ಬಾನ್ ಡೆನ್ ಬಾಷ್ ಎಂಬುವವರು – after stressful math heart rate decreases stress will happen, suffering will increase. ಎಂಬುದನ್ನು ಪ್ರಯೋಗದ ಮೂಲಕ ವ್ಯಕ್ತಪಡಿಸಿದ್ದಾರೆ. ತಾಯಿಯಾದವಳು ಮಗುವಿನ ಅಗತ್ಯವನ್ನು ಗಮನಿಸಿ ಪ್ರಕೃತಿಗೆ ಕರೆದುಕೊಂಡು ಬಂದು ಅದನ್ನು ಸಮಾಧಾನವಾಗಲು ಪ್ರೇರೇಪಿಸಬೇಕು. ಬದಲಾಗಿ ಇಂದಿನ ಶಾಲೆಗಳಲ್ಲಿ ಮಾಡುವಂತೆ ಕೋಲಿನಿಂದ ಹೊಡೆಯಬಾರದು. ಹೇಗೆ ಸೋಲದಂತೆ ತನ್ನನ್ನು ತಾನು ಚೈತನ್ಯಗೊಳಿಸಕೊಳ್ಳಬೆಕು ಎಂಬುದನ್ನು ಮಾಡಿ ತೋರಿಸಬೇಕು. ಗಣಿತ ಬರದಿದ್ದರೂ ಪರವಾಗಿಲ್ಲ, ನೀನು ಸೋಲಲಿಲ್ಲ ಎಂಬುದನ್ನು ತಿಳಿಸಬೇಕು. ಇವತ್ತು ಅರ್ಥವಾಗದಿದ್ದರೆ ನಾಳೆ ಮಾಡಿಕೊ ಪರವಾಗಿಲ್ಲ ಎಂಬ ಅವಕಾಶಗಳನ್ನು ಕೊಡಬೇಕು. ಪ್ರಕೃತಿಯೊಡನೆ ನಮ್ಮನ್ನು ನೋಡಿಕೊಂಡಾಗ ನಮ್ಮ ಸಣ್ಣತನ ಕಳೆದು, ನಾವೂ ಎತ್ತರಕ್ಕೆ ಚಿಂತಿಸಲು ಕಲಿಯುತ್ತೇವೆ. ಇಲ್ಲದಿದ್ದರೆ ನಮ್ಮ ಸಮಸ್ಯೆಯೇ ನಮಗೆ ದೊಡ್ಡದಾಗಿ ಕಾಣುತ್ತದೆ. ಯಾವುದೇ ಐಷಾರಾಮಿ ತರಗತಿ, ಉತ್ತಮ ಅಧ್ಯಾಪಕ, ಅತ್ಯುತ್ತಮ ಪಠ್ಯಪುಸ್ತಕವಾದರೂ ಪ್ರಕೃತಿ ಕೊಡುವ ಕೊಡುಗೆಯನ್ನು ನೀಡಲು ಸಾಧ್ಯವೇ ಇಲ್ಲ.
ಜ್ವರ ಬಂದಾಗ ಒಂದು ಗುಳಿಗೆ ತೆಗೆದುಕೊಂಡಂತೆ ಪ್ರಕೃತಿಯಲ್ಲಿ ಗುಳಿಗೆ ಇಲ್ಲ. ಯಾವ ವೈದ್ಯನಾದರೂ ನಮ್ಮನ್ನು ಶಾಶ್ವತವಾಗಿ ಗುಣಪಡಿಸುವ ನಿಟ್ಟಿನಲ್ಲಿ ಯೋಚಿಸುವುದಿಲ್ಲ. ಒಂದು ವಾರದ ನಂತರ, ಒಂದು ತಿಂಗಳ ನಂತರ, ಒಂದು ವರ್ಷದ ನಂತರ ಬನ್ನಿ ಎನ್ನುವುದರ ಮೂಲಕ ನಿರಂತರ ರೋಗಿಯಾಗೇ ಇರಿಸುತ್ತಾರೆ. ಇಷ್ಟು ಇದ್ದರೆ ಯಾವ ಮನುಷ್ಯ ತಾನೇ ತನ್ನ ರೋಗದಿಂದ ಮಾನಸಿಕವಾಗಿ ದೂರವಾಗಿ ನೆಮ್ಮದಿಯ ಬದುಕು ಬಾಳಲು ಸಾಧ್ಯ. ಬೆಂಗಳೂರಿನ ೯೦% ಜನರಿಗೆ ನೆಮ್ಮದಿಯೇ ಇಲ್ಲದೆ ಒದ್ದಾಡುತ್ತಿರುತ್ತಾರೆ. ಆತಂಕ, ಒತ್ತಡದ ಬದುಕು, ಆತ್ಮಹತ್ಯೆಯ ಪ್ರಮಾಣ ಬಹಳ ಹೆಚ್ಚಾಗಿದೆ. ೮೩ ವರ್ಷದ ನನ್ನ ಅನುಭವದಲ್ಲಿ ನಾನು ಒಂದು ಗುಳಿಗೆಯನ್ನೂ ತೆಗೆದುಕೊಂದಿಲ್ಲ. ಪ್ರಕೃತಿಯೇ ಎಲ್ಲವನ್ನೂ ಕೊಟ್ಟಿದೆ. ಆದ್ದರಿಂದ ಧೈರ್ಯವಾಗಿ ಮುಂದಿನ ಮಕ್ಕಳಿಗೂ ಇದನ್ನು ನಾನು ಹೇಳಲು ಬಯಸುವೆ. ಕೆಲ್ವಿ ಕೋರ್ಪ್ಲಿ ಎಂಬ ಮನೋವಿಜ್ಞಾನಿಯೊಬ್ಬರು (ಯೂನಿವರ್ಸಿಟಿ ಆಫ್ ಟಾಪ್ರಿ) ವೈಜ್ಞಾನಿಕ ಅಧ್ಯಯನಗಳೂ ಹೇಳುವ ಪ್ರಕಾರ ೨೦-೩೦ ನಿಮಿಷಗಳ ಕಾಲ ಪ್ರತಿದಿನ ಪ್ರಕೃತಿಯಲ್ಲಿ ನಡಿಗೆ ಮಾಡುವುದರಿಂದ ಆರೋಗ್ಯದ ಸ್ಥಿತಿ ಬಹಳ ಸುಧಾರಿಸುವುದು. ಕೊರಿಯಾದಲ್ಲಿ ಮಾನವನ ಕ್ಷೇಮಾಭಿವೃದ್ಧಿಯನ್ನು ಆರೋಗ್ಯಕರ ಪರಿಸರವ್ಯವಸ್ಥೆಯ ಮೂಲಕ ಅಳೆಯಲಾಗುವುದು. ಕಾಡಿನ ಚಿಕಿತ್ಸೆಯ ಮೂಲಕ ಆರೋಗ್ಯವನ್ನುಪಡೆಯುವುದು. ಬುದ್ಧಿಮಾಂದ್ಯ ಮಕ್ಕಳಿಗೂ ಈ ಪರಿಸರ ಚಿಕಿತ್ಸೆ ಬಹಳ ಲಾಭವನ್ನು ಕೊಟ್ಟಿದೆ. ಪ್ರಕೃತಿ ನಮಗೆ ಅರಿವಿಲ್ಲದಂತೆ ನಮ್ಮನ್ನು ಸೂಕ್ಷ್ಮದರ್ಶಿಗಳಾಗಿ, ತಾಳ್ಮೆ ಉಳ್ಳವರಾಗಿ ಮಾಡುತ್ತದೆ. ಪ್ರಕೃತಿಯ ಪಾಠಕ್ಕೆ ಮಕ್ಕಳನ್ನು ತೆರೆದ ಮನಸ್ಕರಾಗಿ ಪೂರ್ಣಪ್ರಮತಿ ಮಾಡಬೇಕು ಎಂಬುದೇ ನನ್ನ ಆಶಯ.
ತಾನೇ ತನ್ನ ರೋಗದಿಂದ ಮಾನಸಿಕವಾಗಿ ದೂರವಾಗಿ ನೆಮ್ಮದಿಯ ಬದುಕು ಬಾಳಲು ಸಾಧ್ಯ. ಬೆಂಗಳೂರಿನ ೯೦% ಜನರಿಗೆ ನೆಮ್ಮದಿಯೇ ಇಲ್ಲದೆ ಒದ್ದಾಡುತ್ತಿರುತ್ತಾರೆ. ಆತಂಕ, ಒತ್ತಡದ ಬದುಕು, ಆತ್ಮಹತ್ಯೆಯ ಪ್ರಮಾಣ ಬಹಳ ಹೆಚ್ಚಾಗಿದೆ. ೮೩ ವರ್ಷದ ನನ್ನ ಅನುಭವದಲ್ಲಿ ನಾನು ಒಂದು ಗುಳಿಗೆಯನ್ನೂ ತೆಗೆದುಕೊಂದಿಲ್ಲ. ಪ್ರಕೃತಿಯೇ ಎಲ್ಲವನ್ನೂ ಕೊಟ್ಟಿದೆ. ಆದ್ದರಿಂದ ಧೈರ್ಯವಾಗಿ ಮುಂದಿನ ಮಕ್ಕಳಿಗೂ ಇದನ್ನು ನಾನು ಹೇಳಲು ಬಯಸುವೆ. ಕೆಲ್ವಿ ಕೋರ್ಪ್ಲಿ ಎಂಬ ಮನೋವಿಜ್ಞಾನಿಯೊಬ್ಬರು (ಯೂನಿವರ್ಸಿಟಿ ಆಫ್ ಟಾಪ್ರಿ) ವೈಜ್ಞಾನಿಕ ಅಧ್ಯಯನಗಳೂ ಹೇಳುವ ಪ್ರಕಾರ ೨೦-೩೦ ನಿಮಿಷಗಳ ಕಾಲ ಪ್ರತಿದಿನ ಪ್ರಕೃತಿಯಲ್ಲಿ ನಡಿಗೆ ಮಾಡುವುದರಿಂದ ಆರೋಗ್ಯದ ಸ್ಥಿತಿ ಬಹಳ ಸುಧಾರಿಸುವುದು. ಕೊರಿಯಾದಲ್ಲಿ ಮಾನವನ ಕ್ಷೇಮಾಭಿವೃದ್ಧಿಯನ್ನು ಆರೋಗ್ಯಕರ ಪರಿಸರವ್ಯವಸ್ಥೆಯ ಮೂಲಕ ಅಳೆಯಲಾಗುವುದು. ಕಾಡಿನ ಚಿಕಿತ್ಸೆಯ ಮೂಲಕ ಆರೋಗ್ಯವನ್ನುಪಡೆಯುವುದು. ಬುದ್ಧಿಮಾಂದ್ಯ ಮಕ್ಕಳಿಗೂ ಈ ಪರಿಸರ ಚಿಕಿತ್ಸೆ ಬಹಳ ಲಾಭವನ್ನು ಕೊಟ್ಟಿದೆ. ಪ್ರಕೃತಿ ನಮಗೆ ಅರಿವಿಲ್ಲದಂತೆ ನಮ್ಮನ್ನು ಸೂಕ್ಷ್ಮದರ್ಶಿಗಳಾಗಿ, ತಾಳ್ಮೆ ಉಳ್ಳವರಾಗಿ ಮಾಡುತ್ತದೆ. ಪ್ರಕೃತಿಯ ಪಾಠಕ್ಕೆ ಮಕ್ಕಳನ್ನು ತೆರೆದ ಮನಸ್ಕರಾಗಿ ಪೂರ್ಣಪ್ರಮತಿ ಮಾಡಬೇಕು ಎಂಬುದೇ ನನ್ನ ಆಶಯ.
[1] Good feeling in the natural system – the health data compiled by high-resolution mapping to track people who spent 40 minutes in natural settings, will have less mental stress.
[2] Found lower incidence of 15 diseases (depression, Anxiety, Astma, Migraine, heart disease compared to who failed to connect to nature. Those who connected can show a boost in heart health, equivalent what one could get lacks of rupees.
–
ತಣಿಯದ ಕುತೂಹಲ
(ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬರೆದಿರುವ ನೈಸರ್ಗಿಕ ಕಥೆ)
[ಅಂಕಣ ಬರಹ – ೬]
ಹಲವು ಮಕ್ಕಳ ತಾಯಿ ಶತಾವರಿಯ ಬಗ್ಗೆ ತಿಳಿದು ನೀಲಾಳ ಮನಸ್ಸು ಪ್ರಸನ್ನವಾಗಿತ್ತು. ಸುಬ್ಬಿಗೆ ಕೊಟ್ಟಿದ್ದ ಮಾತು ಉಳಿಸಿಕೊಂಡಳು. ಅದನ್ನು ಚೂರ್ಣಮಾಡಿ ಕೊಟ್ಟದ್ದರಿಂದ ಅವಳಿಗೂ ನೆಮ್ಮದಿಯಿಂದ ಮಕ್ಕಳಿಗೆ ಹಾಲು ಕುಡಿಸುವಂತಾಯಿತು. ನೀಲಾ ಈಗ ಊರಿಗೆ ಹೊಸಬಳಲ್ಲ. ಊರಿನ ಜನರೆಲ್ಲ ಅವಳನ್ನು ವಿಚಿತ್ರವಾಗೇ ನೋಡುತ್ತಿದ್ದರು. ಹೆಣ್ಣು ಮಕ್ಕಳು ಎಷ್ಟು ಮಾತಾಡುವುದು, ಸುಮ್ಮನೆ ಮನೆಯಲ್ಲಿ ಇರುವ ಕೆಲಸ ಮಾಡಿಕೊಂಡು ಇರಬಾರದೇ? ಎಂದು ಹಿಂದೆ ಬೈದುಕೊಳ್ಳುತ್ತಿದ್ದರು. ಆದರೆ ಎದುರಿಗೆ ’ನೀನು ಬಿಡಮ್ಮ, ನೀನು ಹೇಳಿದಂತೆ ನಿನ್ನ ಗಂಡ, ಮಾವ ಎಲ್ಲ ಕುಣಿತಾರೆ. ನಿಮ್ಮ ಅತ್ತೆ ಬೈಯಲ್ವಾ?’ ಎಂದು ಮೂದಲಿಸುತ್ತಿದ್ದರು. ನೀಲ ಹೆಚ್ಚಗೆ ಓದದೆ ಇದ್ದರೂ ಸಂಸ್ಕಾರ ಇದ್ದ ಹೆಣ್ಣು ಮಗಳು. ಮನೆ ಕೆಲಸವನ್ನು ಮಾಡದೆ ಕಾಡು ಸುತ್ತುವ ಕಾರ್ಯಕ್ಕೆ ಹೋಗುತ್ತಿರಲಿಲ್ಲ. ಈಗಂತು ಸಂಜೆ ಹೊತ್ತು ಆಡುವ ಮಕ್ಕಳನ್ನು ಕೂಡಿಸಿಕೊಂಡು ಕಥೆ ಹೇಳುವುದು, ಹಾಡು ಹೇಳಿಕೊಡುವುದು ಎಲ್ಲಾ ಪ್ರಾರಂಭಿಸಿದ್ದಳು. ಮಕ್ಕಳಿಗೆ ತಾನು ಕಂಡಿದ್ದ ಗಿಡ-ಮರ-ನದಿಗಳ ಬಗ್ಗೆ ಕಥೆ ಹೇಳುತ್ತಿದ್ದಳು. ಈಗೀಗ ಮಕ್ಕಳು ತಮ್ಮ ಊರಿನ ಎಲ್ಲ ಮರಗಳ ಹೆಸರನ್ನು ಕಲಿತಿದ್ದರು. ಅಷ್ಟೆ ಅಲ್ಲ ಮರಗಳನ್ನು ತಮ್ಮ ಗೆಳೆಯರಂತೆ ಮಾತನಾಡಿಸಲು ಪ್ರಾರಂಭಿಸಿದ್ದರು.
ಸ್ವಲ್ಪ ದಿನಗಳಲ್ಲೇ ಊರಿನ ಗೌಡನ ಮಗನ ಮದುವೆ ಗೊತ್ತಾಯಿತು. ಹುಡುಗಿ ಪೇಟೆಯಲ್ಲಿ ಓದಿ ಬಂದವಳು. ಪದವಿ ಪಡೆದವಳು. ಗೌಡರ ಮಗನ ಬಳಿ ಜಮೀನು, ಆಸ್ತಿ ಇದೆ ಎಂದು ಅವಳ ತಂದೆ ಒತ್ತಾಯ ಮಾಡಿ ಮದುವೆಗೆ ಒಪ್ಪಿಸಿದ್ದರು. ಇಲ್ಲದಿದ್ದರೆ ಈಗಿನ ಕಾಲದಲ್ಲಿ ಪೇಟೆಯಲ್ಲಿ ಕಲಿತು ಹಳ್ಳಿಯಲ್ಲಿ ಬದುಕಲು ಬಯಸುವವರಾರು? ನೀಲಾಳ ಅತ್ತೆ ಗೌಡತಿಯ ಬಳಿ ಮಾತನಾಡುತ್ತಾ ಮದುವೆಗೆ ಬೇಕಾದ ತಯಾರಿ ಎಲ್ಲಾ ಆಯಿತೇ ಎಂದು ವಿಚಾರಿಸುತ್ತಿದ್ದಳು. ಅನೇಕ ಶಾಸ್ತ್ರಗಳು, ಅವುಗಳಿಗೆ ಬೇಕಾದ ಪದಾರ್ಥಗಳು ಇವನ್ನೆಲ್ಲಾ ಹೊಂದಿಸಿಕೊಳ್ಳುವುದಕ್ಕೆ ಬಹಳ ಸಮಯವೇ ಬೇಕು. ಹಾಗಾಗಿ ಊರಿನವರೆಲ್ಲ ಗೌಡರ ಮಗನ ಮದುವೆಗೆ ಒಂದಿಲ್ಲೊಂದು ಕೆಲಸ ಮಾಡಿಕೊಡುತ್ತಾ ಕೈ ಜೋಡಿಸುತ್ತಿದ್ದರು.
ಅಂತು ಮದುವೆ ದಿನ ಬಂದೆ ಬಿಟ್ಟಿತು. ಮದುವೆಯಲ್ಲಿ ಧಾರೆ ಎರೆಯುವಾಗ ಒಂದು ಕಟ್ಟಿಗೆಯ ಮೇಲೆ ನಿಲ್ಲಿಸಿ ಧಾರೆ ಎರೆಯುವುದು ವಾಡಿಕೆ. ಗ್ರಾಮೀಣರ ಸಂಪ್ರದಾಯದಂತೆ ಅನೇಕ ಶಾಸ್ತ್ರಗಳನ್ನು ಮಾಡುತ್ತಿದ್ದರು. ಪೇಟೆಯಲ್ಲಿ ಕಲಿತು ಬಂದ ಹುಡುಗಿಗೆ ಇರುಸು-ಮುರುಸಾಗುತ್ತಿತ್ತು. ಕೊನೆಗೆ ಶಾಸ್ತ್ರಗಳೆಲ್ಲ ಮುಗಿದ ಮೇಲೆ ಆಕೆ ಜೋರು ಗಲಾಟೆಯನ್ನೇ ಮಾಡಿದಳು. ಮದುವೆಯ ಮನೆಯಲ್ಲಿ ಜೋರು ಜೋರು ಕೂಗಾಡುವುದನ್ನು ಯಾರು ನಿರೀಕ್ಷಿಸಿರಲಿಲ್ಲ. ಏನಾಯಿತೆಂದು ನೋಡಲು ನೀಲಾ ಒಳಗೆ ಬಂದಳು. ತಕ್ಷಣ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲರನ್ನು ಹೊರಗೆ ಕಳುಹಿಸಿ, ತಾನು ಸಮಾಧಾನವಾಗಿ ಹುಡುಗಿಯ ಬಳಿ ಮಾತನಾಡಲು ಪ್ರಾರಂಭಿಸಿದಳು. ಏಕೆ ಸಹನೆ ಕಳೆದುಕೊಂಡು ಕೂಗುತ್ತಿರುವೆ, ಸುಸ್ತಾಯಿತೇ, ಹಸಿವಾಯಿತೇ, ಇಷ್ಟು ಜನರನ್ನು ಒಟ್ಟಿಗೆ ಕಂಡು ಗಾಬರಿಯಾಯಿತೇ? ಸ್ವಲ್ಪ ವಿಶ್ರಾಂತಿ ತೆಗೆದುಕೊ, ಸರಿಹೋಗಬಹುದು ಎಂದು ಮೃದುವಾಗಿ ಹೇಳಿದಳು. ಆದರೆ ಆ ಹುಡುಗಿ ಕೂಗುತ್ತಲೇ ಹೇಳಿದಳು ಇದೇನು ಕಾಡು ಜನರಂತೆ ಏನೋ ಸೊಪ್ಪು, ರಸ ಕೊಡುವರು. ಕಟ್ಟಿಗೆಯ ಮೇಲೆ ನಿಲ್ಲಿಸಿಯೇ ಧಾರೆ ಎರೆಯಬೇಕಂತೆ, ಸೇರು ಒದೆಯಬೇಕಂತೆ, ಇದೆಲ್ಲಾ ವಿಚಿತ್ರ ಎನಿಸುತ್ತಿದೆ ಎಂದು ಬಳಿಯಲ್ಲಿದ್ದ ಲೋಟವನ್ನು ದೂರಕ್ಕೆ ಎಸೆದಳು. ನೀಲಾಳಿಗೆ ನವವಧುವಿಗೆ ಸಂಪ್ರದಾಯಗಳ ಪರಿಚಯವೇ ಇಲ್ಲ ಎಂಬುದು ತಿಳಿಯಿತು. ಅದನ್ನು ಮನವರಿಕೆ ಮಾಡದ ಹೊರತು ಅವಳ ಮನಸ್ಥಿತಿ ತಣ್ಣಗಾಗುವುದಿಲ್ಲ ಎಂದು ಅರಿವಾಯಿತು.
ಕೂಡಲೆ ಧಾರೆ ಎರೆಯುವಾಗ ನಿಲ್ಲಿಸಿದ್ದ ಕಟ್ಟಿಗೆಗಳನ್ನು ತಂದು ಇದರ ಹೆಸರೇನು ಗೊತ್ತೆ? ಎಂದು ಕೇಳಿದಳು. ನವವಧು ಯಾರಿಗೆ ಗೊತ್ತು? ಎಂದು ತಿರಸ್ಕಾರದಿಂದ ನುಡಿದಳು. ಕೂಡಲೆ ನೀಲಾ ಬಳಿಯಲ್ಲಿದ್ದ ರಾಜಾ-ರಾಣಿಯರ ಗೊಂಬೆಯನ್ನು ತೆಗೆದುಕೊಂಡು ಇವರು ಯಾರು ಗೊತ್ತಾ? ಎಂದು ಕೇಳಿದಳು. ಇವು ಪಟ್ಟದಗೊಂಬೆಗಳು, ರಾಜಾ – ರಾಣಿ ಎಂದಳು ನವವಧು. ಸದ್ಯ ಇದಾದರೂ ಗೊತ್ತಿದೆಯಲ್ಲ ಎಂದುಕೊಂಡು ನೀಲಾ ಮಾತಿಗಿಳಿದಳು. ರಾಜಾ – ರಾಣಿ ಏಕೆ ಬೇಕು? ಏನು ಮಾಡುತ್ತಾರೆ? ಎಂದು ಮರುಪ್ರಶ್ನಿಸಿದಳು. ಆಕಸ್ಮಿಕವೆಂಬಂತೆ ನವವಧುವಿನ ಹೆಸರೂ ರಾಣಿ. ಸರಿ, ರಾಣಿ ಉತ್ತರಿಸಿದಳು ರಾಜಾ ಊರನ್ನೆಲ್ಲಾ ನೋಡಿಕೊಳ್ಳುತ್ತಾಳೆ, ರಾಣಿ ಅರಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾಳೆ, ರಾಜನಿಗೆ ಬೆನ್ನೆಲುಬಾಗಿ ಇರುತ್ತಾಳೆ ಎಂದಳು. ನೀಲಾಳಿಗೆ ಪದವಿಯಲ್ಲಿ ಕಲಿತ ವಿದ್ಯೆ ಎಂದು ತಕ್ಷಣವೇ ತಿಳಿಯಿತು. ಹೇಗೆ ರಾಜ ಊರನ್ನೆಲ್ಲ ನೋಡಿಕೊಳ್ಳುತ್ತಾನೋ, ರಾಣಿ ಅರಮನೆಯನ್ನು ನೋಡುಕೊಳ್ಳುತ್ತಾಳೆ. ಜನರನ್ನು ನೋಡಿಕೊಳ್ಳಲು ರಾಜ ಇದ್ದಾನೆ. ಭೂಮಿತಾಯಿಯನ್ನು ನೋಡಿಕೊಳ್ಳಲು ಯಾರಿದ್ದಾರೆ? ಯಾರು ರಾಜ? ಎಂದು ಕೇಳಿದಳು. ರಾಣಿಗೆ ಆಶ್ಚರ್ಯವಾಯಿತು. ಭೂಮಿ – ತಾಯಿ…ನೋಡಿಕೊಳ್ಳುವವರು…ಏಕೆ ಬೇಕು? ಭೂಮಿಯೇ ನಮ್ಮನ್ನೆಲ್ಲ ನೋಡಿಕೊಳ್ಳಬೇಕಲ್ಲವೆ? ಎಂದಳು. ಇದೇ ಸರಿಯಾದ ಸಮಯವೆಂದು ತಿಳಿದು ನೀಲಾ ವಿವರಿಸಲು ಆರಂಭಿಸಿದಳು.
ಭೂಮಿತಾಯಿಯನ್ನು ನೋಡಿಕೊಳ್ಳಲು ರಾಜನೊಬ್ಬನಿದ್ದಾನೆ, ರಾಣಿಯೊಬ್ಬಳಿದ್ದಾಳೆ. ಅವರೇ ಅಶ್ವತ್ಥ ಮತ್ತು ಔದುಂಬರ ಮರಗಳು
ನಮ್ಮ ಊರಿನಲ್ಲಿ ಒಂದು ಅರಳಿ ಕಟ್ಟೆ ಇದೆಯಲ್ಲ ನೋಡಿರುವೆಯಾ? ಅದೇ ನಿಮ್ಮ ದಿಬ್ಬಣ ಮೊದಲ ಬಾರಿ ಬಂದು ಇಳಿಯಿತಲ್ಲ ಮರದ ಕೆಳಗೆ, ಅದೇ ಕಟ್ಟೆ. ಅಲ್ಲಿ ಮೂರು ಮರಗಳಿದ್ದವು. ನೋಡಿದೆಯಾ? ಅಶ್ವತ್ಥ, ಔದುಂಬರ ಮತ್ತು ಬೇವಿನ ಮರ. ಇವು ಪ್ರತಿ ಹಳ್ಳಿಯ ಜೀವಾಳಗಳು. ಅಶ್ವತ್ಥ ಮರ ಇದ್ದರೆ ಸಾಕು, ಅಲ್ಲಿ ಔದುಂಬರ ಮರ ತಾನಾಗಿಯೇ ಹೇಗೋ ಹುಟ್ಟಿಕೊಳ್ಳುವುದು. ರಾಜನೆಲ್ಲೋ ರಾಣಿ ಅಲ್ಲೇ.
ಔದುಂಬರ ಮರಗಳ ರಾಣಿ, ಅಶ್ವತ್ಥ ಮರಗಳ ರಾಜ. ಔದುಂಬರವನ್ನು ಸದಾಫಲ – ಹೇಮಾಧಾತುಕ – ಜಂತುಫಲ – ಯಜ್ಞಾಂಗ ಎಂದೂ ಹೆಸರುಗಳಿವೆ. ಅಶ್ವತ್ಥಕ್ಕೆ ಭೋದಿವೃಕ್ಷ, ಚಲಪತ್ರ, ಗಜಭಕ್ಷ – ಕ್ಷೀರಧ್ರುಮ ಎಂದೂ ಕರೆಯುವರು. ಈ ಹೆಸರುಗಳಿಗೆ ಹಿನ್ನಲೆ ಇದೆ. ಮನುಷ್ಯರಲ್ಲಿ ಮಾತ್ರ ಶೋಕಿಗೆ ಹೆಸರಿಡುವ ಪದ್ಧತಿ ಇರುವುದು. ಪ್ರಕೃತಿಯಲ್ಲಿ ಎಲ್ಲವೂ ಅನ್ವರ್ಥನಾಮವೇ ಇರುವುದು. ಲಕ್ಷಣಕ್ಕೆ ತಕ್ಕ ಹೆಸರು. ನಮ್ಮ ಹಳ್ಳಿ ಜನರ ಹೆಸರುಗಳನ್ನು ನೋಡಿದರೆ ಹಾಗೇ ಇರುವುದು. ಪೇಟೆಯಲ್ಲಿ ಫ್ಯಾಶನ್ ಗಾಗಿ ಹೆಸರಿಡುತ್ತಾರೆ. ಅದಿರಲಿ, ನಿನಗೆ ಒಂದು ಕಥೆ ಹೇಳುತ್ತೇನೆ ಕೇಳು.
“ಒಮ್ಮೆ ನಾರದರಿಗೆ ತಾನೊಬ್ಬನೇ ನಾರಾಯಣನ ಮಹಾಭಕ್ತ ಎಂದು ಅನಿಸಿತಂತೆ. ಆಗ ನಾರಾಯಣ ಭೂಮಿಯ ಕಡೆ ತೋರಿಸಿ ಅದೋ ಅಲ್ಲಿ ಒಂದು ಭೋದಿವೃಕ್ಷ ಕಾಣುತ್ತಿದೆಯಲ್ಲ, ಅಲ್ಲಿ ಒಬ್ಬ ಚಪ್ಪಲಿ ಹೊಲೆಯುವವನಿದ್ದಾನೆ. ಅವನ ಬಳಿ ಮಾತನಾಡಿಕೊಂಡು ಬಾ ಎಂದು ಕಳುಹಿಸಿದನಂತೆ. ನಾರದರು ಬಂದು ಆ ಮೋಚಿಯನ್ನು ಮಾತನಾಡಿಸಲು ಪ್ರಾರಂಭಿಸಿದರು. ಆತನಾದರೋ ತನ್ನ ಕರ್ತವ್ಯದಲ್ಲಿ ತೊಡಗಿದ್ದನು. ನಂತರ ಮಧ್ಯಾಹ್ನದ ಊಟದ ಸಮಯವಾಯಿತು. ಆಗ ಮರದ ಕೆಳಗೆ ಕುಳಿತು ತಾನು ತಂದಿದ್ದ ಬುತ್ತಿ ತೆಗೆದು ತಿನ್ನಲು ಆರಂಭಿಸಿದ. ಆಗ ನಾರದರು ಮಾತನಾಡಿಸಿದರು. ಏನಯ್ಯ, ನಿನಗೆ ನೀನು ಮೋಕ್ಷಕ್ಕೆ ಹೋಗುವೆ ಎಂಬ ಭರವಸೆ ಇದೆಯೇ? ಎಂದು ಕೇಳಿದರು ಮೋಚಿ ಹಾಗೆಂದರೇನು ಸ್ವಾಮಿ ಎಂದನು. ಅದಕ್ಕೆ ನಾರದರು ಹೋಗಲಿ ಬಿಡು, ನೀನು ಚಪ್ಪಲಿ ಹೊಲಿಯುತ್ತಿರುವೆಯಲ್ಲ ಸೂಜಿ ಅದರೊಳಗೆ ಆನೆಯನ್ನು ತೂರಿಸಲು ಸಾಧ್ಯವೇ ಎಂದು ಕೇಳಿದರಂತೆ. ಆಗ ಅವನು ಖಂಡಿತ ತೂರಿಸಬಹುದು ಎಂದನು. ನಾರದರು ಏನು, ಸೂಜಿಯಲ್ಲಿ ಆನೆತೂರಿಸಲು ಸಾಧ್ಯವೇ? ಎಂದು ಮತ್ತೆ ಆಶ್ಚರ್ಯದಿಂದ ಕೇಳಿದರು. ಆಗ ಮೋಚಿಯು ಸ್ವಾಮಿ ಅಲ್ಲೊಂದಿ ಹಣ್ಣು ಬಿದ್ದಿದೆಯಲ್ಲವೆ, ಅದನ್ನು ತೆಗೆದುಕೊಳ್ಳಿ ಎಂದನು. ನಾರದರು ಅಂತೆಯೇ ಮಾಡಿದರು. ಅದನ್ನು ತೆಗೆಯಿರಿ, ಸರಿ ತೆಗೆದಾಯಿತು. ಅದರ ಒಂದು ಬೀಜವನ್ನು ತೆಗೆದುಕೊಳ್ಳಿ, “ಇದೋ ಇಲ್ಲಿದೆ”, ಎಂದು ಒಂದು ಸಣ್ಣ ಬೀಜವನ್ನು ತೋರಿಸಿದರು. ಆಗ ಮೋಚಿಯು ಈ ಸಣ್ಣ ಬೀಜದಲ್ಲಿ ಇಷ್ಟು ದೊಡ್ಡ ಮರವನ್ನು ಅಡಗಿಸಿರುವ ದೇವರಿಗೆ ಸೂಜಿಯ ಮೊನೆಯಲ್ಲಿ ಆನೆ ತೂರಿಸಲು ಅಸಾಧ್ಯವೇ ಸ್ವಾಮಿ ಎಂದು ಊಟ ಮುಗಿಸಿ ಎದ್ದನಂತೆ.
ಆಗ ನಾರದರಿಗೆ ಅವನ ಮುಗ್ಧಭಕ್ತಿಯ ಅರಿವಾಯಿತು. ತನಗೆ ಹೆಚ್ಚೂ ಬೇಕಿಲ್ಲ ಕಡಿಮೆಯೂ ಬೇಡ, ಇಷ್ಟು ತೃಪ್ತಿಯಾಗಿ ಬದುಕುತ್ತಿರುವ ಚಪ್ಪಲಿ ಹೊಲೆಯುವವನನ್ನು ಕಂಡು ಏನೋ ಖುಷಿಯಾಯಿತು. ಭೋದಿವೃಕ್ಷದ ಮಹಿಮೆ ಇದು ಎಂದು ಅಲ್ಲಿಂದ ಹೊರಟು ಹೋದರಂತೆ ಎಂದು ನೀಲ ಕತೆ ಹೇಳಿದಳು. ಅಷ್ಟರಲ್ಲಿ ರಾಣಿ ಇದೆಲ್ಲ ಓಬಿರಾಯನ ಕಾಲದ ಪುರಾಣ ಕಥೆಗಳು, ನನಗೆ ಸಮಯವಿಲ್ಲ, ಸುಸ್ತಾಗಿದೆ, ಹೋಗಬೇಕು ಎಂದಳು. ಪುರಾಣದ ಕಥೆ ಬೇಡದಿದ್ದರೆ ವೈಜ್ಞಾನಿಕ ಕಥೆಯನ್ನೇ ಹೇಳುತ್ತೇನೆ, ನಿಮ್ಮಂತಹವರಿಗೆ ವಿದೇಶದಲ್ಲಿ ಆದ ಅಧ್ಯಯನ, ನಾಲ್ಕು ಇಂಗ್ಲಿಷ್ ಪದಗಳನ್ನು ಹೇಳಿದರೇನೆ ಸಮಾಧಾನ ಅಲ್ಲವೇ, ಅಜ್ಜಿಯ ಮದ್ದು ನಾಟದು. ನಾಳೆ ಬಿಡುವಾದ ಸಿಗೋಣ. ಮದುವೆಯಲ್ಲಿ ಆ ಕಟ್ಟಿಗೆಯ ಮೇಲೆ ಏಕೆ ನಿಲ್ಲಿಸಿದರು ಎಂದು ತಿಳಿಯಬೇಕಿದ್ದರೆ ಬಾ ಹೇಳುತ್ತೇನೆ ಎಂದು ಉಪಾಯವಾಗಿ ತಲೆಯಲ್ಲಿ ಹುಳ ಬಿಟ್ಟು ಅಲ್ಲಿಂದ ಜಾರಿಕೊಂಡಳು.
–
ಚಿಗುರು
Poem by students for teachers – Anvitha Mallipeddi 10th std
Pakshi sushrusha at AV
Playing and Learning Memories
–
(Announcements from School)
*
_