ಆತ್ಮೀಯರೇ,
ತಾಂತ್ರಿಕ ಕಾರಣಗಳಿಂದ ಕಳೆದ ವರ್ಷ ಆನಂದಿನಿಯನ್ನು ತಮ್ಮ ಕೈಗೆ ಇಡಲಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ.
ಕಳೆದ ವರ್ಷದ ಆಗುಹೋಗುಗಳ ಸಿಂಹಾವಲೋಕನ ಮಾಡಿದಲ್ಲಿ, ‘ಶ್ರೇಷ್ಠತೆ’ (Excellence) ಎನ್ನುವ ವಾರ್ಷಿಕ ಸೂತ್ರದ ಮೂಲಕ ಎಲ್ಲ ಕೆಲಸಗಳನ್ನೂ ಕೈಗೊಂಡಿದ್ದು, ನಮ್ಮ ಶಾಲೆಯ ಹನ್ನೊಂದು ಮಕ್ಕಳ ಎರಡನೇ ತಂಡವು S.S.L.C. ಪರೀಕ್ಷೆಯಲ್ಲಿ ಶ್ರೇಷ್ಠದರ್ಜೆಯಲ್ಲಿ (distinction) ಜಯಭೇರಿ ಬಾರಿಸಿದ್ದು, ಗಂಗಾನದಿಯ ಅವಿರಲತೆಯ ವಿಷಯಾಧಾರಿತವಾಗಿ ವಾರ್ಷಿಕ ಉತ್ಸವ ನಡೆಸಿದ್ದು ವಿಶೇಷವಾಗಿತ್ತು. ಬಹುದುಃಖದ ಸಂಗತಿಯೆಂದರೆ ನಮ್ಮ ಮಾರ್ಗದರ್ಶಕ ಗುರುಗಳಾಗಿದ್ದ ಪೂಜ್ಯ ಶ್ರೀ ಸಾನಂದ ಸ್ವಾಮೀಜಿಯವರು ಗಂಗಾಮಾತೆಯ ಅವಿರಲತೆಗಾಗಿ (ತಡೆಯಿಲ್ಲದ ನಿರಂತರ ಪ್ರವಾಹಕ್ಕಾಗಿ) ಹೋರಾಟನಡೆಸಿ ನೂರಹನ್ನೊಂದು ದಿನಗಳ ಉಪವಾಸದ ನಂತರ ಜೀವದ ಬಲಿದಾನ ನೀಡಿದ್ದು. ಹನುಮಂತ ಅವಿಚ್ಛಿನ್ನ ರಾಮಭಕ್ತನಿದ್ದಂತೆ. ಸಾನಂದ ಸ್ವಾಮೀಜಿ ಗಂಗೆಯನ್ನು ತಮ್ಮ ಮಾತೆಯೆಂದೇ ಭಾವಿಸಿದ್ದರು. ಅವಳು ತನ್ನ ‘ಗಂಗತ್ವ’ವನ್ನು ಉಳಿಸಿಕೊಂಡು ಮೈದುಂಬಿ ಹರಿಯುವಂತೆ ಮಾಡುವುದೇ ಅವರ ಜೀವನದ ಪರಮಗುರಿಯಾಗಿತ್ತು. ಅಂತಹ ವಿಜ್ಞಾನಿಸಂತ, ದೃಢಸಂಕಲ್ಪದ ಅವಿರತ ಹೋರಾಟಗಾರ ನಮ್ಮ ನಡುವೆ ಹಲವು ಕಾಲವಿದ್ದು ನಮಗೆ ಮಾದರಿಯಾಗಿದ್ದುದು ನಮ್ಮ ಭಾಗ್ಯ.
ಪೂರ್ಣಪ್ರಮತಿಗೀಗ ಹತ್ತುವರ್ಷದ ಪ್ರಾಯ. ಬಾಲ್ಯದಿಂದ ಯೌವನಾವಸ್ಥೆಯ ಕಡೆ ಹೆಜ್ಜೆಯಿಡುವ ಕಾಲ. ನಮ್ಮ ಕನಸುಗಳೂ ಹತ್ತಾರು.
ಪೂರ್ಣಪ್ರಮತಿಯೊಂದು ಅದ್ವಿತೀಯ ಕಲಿಕೆಯ ತಾಣವಾಗಬೇಕು, ನಸುಕಿನಿಂದ ನಡುರಾತ್ರಿಯ ವರೆಗೂ ಸರ್ವವಯಸ್ಕರಿಗೂ ನಿರಂತರ ಜ್ಞಾನದಾಸೋಹ ನಡೆಯುತ್ತಲೇ ಇರಬೇಕು, ಕಾಲಕ್ರಮೇಣ ಹಲವಾರು ಕಡೆ ಹರಡಿದ ಒಂದು ಅಪೂರ್ವ ಜೀವಂತ ವಿಶ್ವವಿದ್ಯಾಲಯವಾಗಬೇಕು ಎನ್ನುವುದು ಒಂದು.
ಪೂರ್ಣಪ್ರಮತಿಯ ಮಕ್ಕಳ, ಪೋಷಕರ, ಶಿಕ್ಷಕರ, ಹಿತೈಷಿಗಳ ಬಳಗದಿಂದ ಒಂದು ಆದರ್ಶ ಸ್ವಾವಲಂಬೀ ಸಮಾಜ ನಿರ್ಮಾಣವಾಗಬೇಕು, ನಿಸರ್ಗಕ್ಕೆ ಹತ್ತಿರವಾದ, ರಾಸಾಯನಿಕರಹಿತ, ಸರಳ, ಸಹಜ ಬದುಕನ್ನು ನಡೆಸುತ್ತ, ತಾನು ಪಡೆದುದಕ್ಕಿಂತ ಹೆಚ್ಚಿನದ್ದನ್ನು ಸಮಾಜಕ್ಕೆ, ನೆಲಕ್ಕೆ, ಜಲಕ್ಕೆ, ಪ್ರಕೃತಿಗೆ, ಪಂಚಭೂತಗಳಿಗೆ ನೀಡಲು ಪಾರಯತ್ನಿಸುತ್ತ, ಉದಾತ್ತಚಿಂತನೆ, ಕಾರ್ಯಗಳಲ್ಲಿ ತೊಡಗಿರುವ ಪೂರ್ಣಪ್ರಮತಿ ಕುಟುಂಬ ದೇಶಕ್ಕೇ ಮಾದರಿಯಾಗಬೇಕು ಎನ್ನುವುದು ಮತ್ತೊಂದು. ನಮ್ಮ ಗುರುಕುಲ ‘ಆನಂದವನ’ದಲ್ಲಿ ಇಂಥದ್ದೇ ಜೀವನ ನಡೆಯುತ್ತಿದೆ. ಬೆಂಗಳೂರಿನ ಶಾಲೆಯಲ್ಲಿ ಪೂರ್ಣಪ್ರಮತಿ ಸಂತೆ ಪ್ರಾರಂಭವಾಗಿದೆ, ನಮ್ಮ ಲೋಕಹಿತದ ಆಸೆಯ ಮೊದಲ ಹೆಜ್ಜೆಯಾಗಿ.
ವಾಸ್ತವಿಕ ನೆಲೆಗೆ ಬಂದರೆ ದಶಮಾನದ ವರ್ಷದಲ್ಲಾದರೂ ಶಾಲೆಗೆ ಉತ್ತಮ ಕಟ್ಟಡ/ಗಳ ಶಿಕ್ಷಕ-ಸಿಬ್ಬಂದಿ ವರ್ಗದ ನೇಮಕಾತಿಗಳ ಅವಶ್ಯಕತೆ ಇದೆ. ಪದವಿಪೂರ್ವ ತರಗತಿಗಳ ಆರಂಭವಾಗಬೇಕಾಗಿದೆ. ಇದೆಲ್ಲ ಸಾಧ್ಯವಾಗಬೇಕಾದಲ್ಲಿ ಪೂರ್ಣಪ್ರಮತಿ ಕುಟುಂಬದ ಪ್ರತಿ ಸದಸ್ಯನೂ ತನ್ನ ಪಾಲಿನ ಸೇವೆಯನ್ನು ಕರ್ತವ್ಯವೆಂದು ಭಾವಿಸಿ ಮಾಡಬೇಕಿದೆ. ಈ ಸತ್ರಯಾಗದಲ್ಲಿ ತಮ್ಮ ಹವಿಸ್ಸನ್ನು ಸಲ್ಲಿಸಬೇಕಿದೆ.
ದಶಮಾನೋತ್ಸವದ ಈ ವರ್ಷದುದ್ದಕ್ಕೂ ವಶೇಷ ಕಾರ್ಯಕ್ರಮಗಳ ಸಂಭ್ರಮವನ್ನು ಆಯೋಜಿಸಲಾಗುತ್ತಿದೆ. ಬನ್ನಿ, ಎಲ್ಲರೂ ಕೂಡಿ ಮೌಲ್ಯಾಧಾರಿತ ಅರ್ಥಪೂರ್ಣ ಶಿಕ್ಷಣ ನೀಡುತ್ತಾ, ಸಮಾಜಮುಖೀ ಸೇವಾಕಾರ್ಯಗಳನ್ನು ನಡೆಸುತ್ತಾ ಪೂರ್ಣಪ್ರಮತಿಯ ಹತ್ತನೇ ಹುಟ್ಟುಹಬ್ಬವನ್ನು ಚಿರಸ್ಥಾಯಿಯಾಗಿಸೋಣ.
ಆನಂದಿನಿ ಈ ಸಂಚಿಕೆಯಿಂದ ಆರಂಭಿಸಿ ನಮ್ಮ ಸಾರ್ಥಕ ಹತ್ತುವರ್ಷಗಳ ಸವಿನೆನಪನ್ನು ಪ್ರತಿಸಂಚಿಕೆಯಲ್ಲೂ ಎರಡು ವರ್ಷಗಳಂತೆ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾಳೆ.
ನಿಮ್ಮ
ಶಶಿರೇಖಾ ಮಣೂರು
ಪ್ರಾಂಶುಪಾಲರು
ಪೂರ್ಣಪ್ರಮತಿ.
— Akhila Vasu
“Purnapramati – A Center for Integrated Learning” is a platform to different approaches exploring through experiences.
Purnapramati is completing its 10th Anniversary (Dashamanotsava). It’s a good time to retrospect our journey and also contemplate on future direction. The idea of Purnapramati was seeded in 2010 based on experience, explorations followed by serious pursuits in studies and research. The efforts, the time , the energy, the thoughts, the passion, the commitment put in by all the concerned people to start and grow Purnapramati is highly commendable.
As Prof D.Prahladacharya says “it’s quite possible to sow the seeds of values of life in the innocent minds of young students who, in large number every year are admitted to seek primary education. Gradually it’s also possible to introduce such a curriculum by which they would become well aware of the rich Indian knowledge heritage and feel proud of it. In relation to holistic study of Prakruti and Prana, an integrated learning as emphasised by Shri Anandateertha needs to be understood.
Prof Navajyothi Singh focussed on….. Read more>>
A peek into Purnapramati during 2010-11
Our infant steps…..
— ಅಖಿಲಾ ವಾಸು
ಧಾರ್ಮಿಕ ಹಾಗೂ ಸುಸಂಸ್ಕೃತ ಜೀವನಕ್ಕಾಗಿ, ಶಾಂತಿ ಸಮೃದ್ಧಿಯ ಬಾಳ್ವೆಗಾಗಿ ನಾವು ನಮ್ಮ ಮಕ್ಕಳ ಜೀವನವನ್ನು ರೂಪಿಸಬೇಕಾಗಿದೆ. ಧರ್ಮದ ನೆಲೆಯಲ್ಲಿ ಶಿಕ್ಷಣ ಸಿಕ್ಕಾಗ ವಿದ್ಯಾರ್ಥಿ ಉತ್ತಮ ಚಿಂತಕನಾಗುತ್ತಾನೆ. ಶಿಕ್ಷಣದ ಮುಖೇನ ಸಮೃದ್ಧ ಜೀವನಕ್ಕೆ ಪೂರಕವಾದ ನಂಬಿಕೆಗಳನ್ನು ಬಲಪಡಿಸಿಕೊಳ್ಳುತ್ತಾನೆ. ಆದರೆ -“ಪ್ರಾಚೀನ ಋಷಿಮುನಿಗಳ ಚಿಂತನೆಯೆಲ್ಲವೂ ಅಪ್ರಬುದ್ಧ, ನಮ್ಮ ಹಿರಿಯರೆಲ್ಲಾ ಮೂಢ ನಂಬಿಕೆಗಳ ದಾಸರು” ಎನ್ನುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಆಂಗ್ಲ ಮಾಧ್ಯಮದ ಶಿಕ್ಷಣ ಪದ್ಧತಿಯನ್ನು ಒಪ್ಪಿಕೊಳ್ಳಬೇಕಾದ ಸಾಮಾಜಿಕ, ಕೌಟಂಬಿಕ ಒತ್ತಡ ಎಲ್ಲೆಲ್ಲೂ ಹರಡಿದೆ. ಜ್ಞಾನವೆನ್ನುವುದು ಸ್ಪರ್ಧೆಗೆ ಮೀಸಲಾಗಿದೆ. ಮಕ್ಕಳು ಕಲಿಕೆಯ ಆತುರದಲ್ಲಿ ಜೀವನದ ಮೌಲ್ಯಗಳ ಚಿಂತನೆಗಳಿಗಿಂತಲೂ ತೋರಿಕೆಯ ಬದುಕಿನ ದಾಸರಾಗುತ್ತಿದ್ದಾರೆ. ನಾನು ಪೂರ್ಣಪ್ರಮತಿಗೆ ಈ ವರ್ಷವಷ್ಟೇ ಸೇರಿಕೊಂಡೆ. ಇಲ್ಲಿನ ನನ್ನ ಕೆಲವು ಅನಿಸಿಕೆಗಳನ್ನು ಹೇಳಬಯಸುತ್ತೇನೆ.
ನಾನು ನನ್ನ ಅಧ್ಯಾಪಕ ವೃತ್ತಿಯಲ್ಲಿ ಅನೇಕ ಶಾಲೆ, ಕಾಲೇಜುಗಳಲ್ಲಿ, ಅನೇಕ ರೀತಿಯ ಬೋಧನಾಕ್ರಮವನ್ನು ಕಂಡಿದ್ದೇನೆ. ಎಲ್ಲಾ ಬೋಧನಾಕ್ರಮಗಳು ಮನುಷ್ಯನ ಮೂಲ ಚಿಂತನೆಗೆ ಎಲ್ಲಿಯೂ ಅವಕಾಶವಿಲ್ಲದಂತೆ ಸಾಮಾಜಿಕ ಬದುಕಿಗೆ ಮಾತ್ರ ಸೀಮಿತವಾಗಿಯೇ ಇದೆ. ಮಕ್ಕಳಲ್ಲಿ ಏಳುವ ಸಾವಿರಾರು ಪ್ರಶ್ನೆಗಳಿಗೆ ಪ್ರತಿ ಹಂತದಲ್ಲೂ ಗಮನಿಸುವ ಹಲವಾರು ಗೊಂದಲಗಳಿಗೆ ಉತ್ತರ ಸಿಗದೆ ಮಕ್ಕಳಿಗೆ ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದುಹೋಗುತ್ತಿವೆ. ಮಕ್ಕಳು ಹಿಂದಿನವರ ಆಚಾರವಿಚಾರಗಳು ಆಧಾರವಿಲ್ಲದ್ದು ಎನ್ನುವ ನಿಟ್ಟಿನಲ್ಲಿ ಯೋಚಿಸುವಂತಾಗುತ್ತಿದೆ. ಆಧುನಿಕ ಪಠ್ಯ ಕ್ರಮದಲ್ಲಿ ತಮ್ಮ ಮಾತೃಭಾಷೆಯನ್ನು ಪಕ್ಕಕ್ಕಿಟ್ಟು ಆಂಗ್ಲಭಾಷೆಯನ್ನು ಕಷ್ಟಪಟ್ಟಾದರೂ ಕಲಿಯಲೇಬೇಕೆಂಬ ಒತ್ತಡದಲ್ಲಿ ಮಕ್ಕಳ ಮನೋವಿಕಾಸದಲ್ಲಿ ಮುಕ್ತತೆ ಮರೆಯಾಗುತ್ತಿದೆ. ಒಂದು ರೀತಿಯ ಬಂಧನವೆಂಬಂತೆ ಕಲಿಕೆಯ ಬೆಳವಣಿಗೆಯಾಗುತ್ತಿದೆ. ಉದ್ಯೋಗಕ್ಕಾಗಿ ವಿದ್ಯೆ ಎಂಬುದು ಎಲ್ಲೆಡೆಯಲ್ಲೂ ರುಜುವಾಗುತ್ತಿದೆ. ಜ್ಞಾನ, ವಿದ್ಯೆ -ಇವುಗಳ ನಿಜವಾದ ಅರ್ಥವೇ ಅಳಿಸಿಹೋಗುತ್ತಿದೆ. ಮನಸ್ಸಿನಲ್ಲಿ ಇಂಥ ನೂರಾರು ಆಲೋಚನೆಗಳು ವಿದ್ಯಾವಂತರನ್ನು ಕಾಡಿದರೂ ಪ್ರವಾಹ ಬಂದ ದಿಕ್ಕಿಗೇ ನೀರು ನುಗ್ಗುವಂತೆ ಇಂದಿನ ವಿದ್ಯಾವಂತ ಯುವ ಪೀಳಿಗೆಯೂ ಅತ್ತಕಡೆ ನುಗ್ಗುತ್ತಿದೆ. ಇಂದಿನ ದಿನಗಳಲ್ಲಿ ಶಾಲೆ ಎಂಬುದು ಒಂದು ಉತ್ತಮ ವ್ಯಾಪಾರದ ಅಂಗವಾಗಿ ದಿಢೀರನೆ ಹಣ ಗಳಿಸಬಹುದಂಥ ಮಾರ್ಗವಾಗಿದೆ. ಹಣವಿದ್ದವರೆಲ್ಲಾ ವಿದ್ಯಾಸಂಸ್ಥೆಗಳನ್ನು ತೆರೆಯುತ್ತಿದ್ದಾರೆ. ತಮಗಿಷ್ಟ ಬಂದ ರೀತಿಯಲ್ಲಿ ವ್ಯಾಪಾರದ ಕುಶಲತೆಗಳನ್ನು ಅದರಲ್ಲಿ ಅಳವಡಿಸಿಕೊಂಡು ಮಕ್ಕಳನ್ನು ದಾಳವಾಗಿ ಬಳಸಿಕೊಂಡು ಹಣ ಸಂಪಾದನೆಯ ಹುಚ್ಚು ಭರದಲ್ಲಿ ಸಾಗುತ್ತಿದ್ದಾರೆ. ಇದರಿಂದ ನಮ್ಮ….. ಉಳಿದ ಭಾಗವನ್ನು ಓದಿ >>
— Anagha Raghavendra (Student)
(We have been a part of Purnapramati for the past 8 years. In this article we have tried to share some of our experiences which impacted us the most and shaped us in Purnapramati.)
When we joined Purnapramati in our 4th standard, the school felt very small compared to our earlier ones and number of students in each class was very minimal too. The teachers were very caring. It took a little while to get adjusted to calling our teachers akka and anna and then, it was as if they became our akkas and annas. The atmosphere was very free: we could talk and discuss with our teachers without apprehension. We also started learning Samskruta starting from names of various objects and the basic Shabdas & Dhaatus as well as subhAshitAs. This adhyayana of Samskruta has stayed with us till date, and now, we are about to write Sahitya pareeksha of Sanskrit University this year. It was in our 1st year that we were introduced to 2 special subjects which were unique to Purnapramati: Tattvadarshana and Paramapara. Tattvadarshana started off as various stories from Ramayana and Mahabharata and other neetikathas. In Parampara we learnt various stotras and most importantly the greatest asset of any student of Purnapramati: Bhagavadgeeta. We were taught the shlokas pada by pada and had to memorize them. This continued until we were able to give kanThapATha Pareekshe of all the 18 adhyAyas to Sri Pejawara Swamiji. Our academic learning was also different from other schools. Focus was on understanding the concepts rather than preparing for exams (we weren’t given marks or grades; our report cards had only detailed observation of us by our teachers), we went on….. Read more>>
— आशा (हिन्दी आध्यापिका)
पूर्णप्रमति को यदि एक् वाक्य में परिभाषित किया जाये तो मेरे अनुसार
एक बीज को सम्पूर्ण विकसित करना अर्थात् एक बच्चे का सर्वाङ्गीण विकास।
अभि कल की हो बात लगती है जब मुझे यह हिंदी शिक्षण के लिए नियुक्त
किया गया। प्रारंभ मे तो बहुत सी कठिनाईयाँ आई क्यों कि हिंदी बच्चों के लिए
एक नयी भाषा थी। बहुत बार में निराशा हे जाती थी, लगता था कि मिझसे
नही होगा लेकिन मेरी सहयोगी अध्यापिकाओं और रघुराम भैया ने मुझे
प्रोत्साहित किया कि अभी बच्चों के लिए हिंदी भाषा नही है पर धीरे-धीरे सब
ठीक हो जाएगा। उन सभी के प्रोत्साहन के कारण मेरे लिए हिंदी शिक्षण का कार्य
एक जिम्मेदारी कम और चुनौती अधिक हो गया। अब मुझे यह एक साल से भी
अधिक होगया है। स्थिति में भी बहुत परिवर्तन हो गया है। बच्चों की सीखने की
ललक और सभी के सहयोग ने इस कार्य को आसान बना दिया है। बच्चों से हिंदी
में वार्तालाप करने से धीरे-धीरे उनकी भी हिंदी के प्रति रुचि बढ़ रही है।
आने वाले समय में मेरा यही प्रयत्न रहेगा कि हर एक बच्चा हिन्दी में
वार्तालाप करने में सक्षम हो सके।
आशा
हिन्दी आध्यापिका
ತಿಂಗಳ ತಿಳಿಗಾಳು
ಭಾಗೀರಥೀ ಜಯಂತಿ, Yoga Day
September 19th, 2019 at 3:28 am
Namaskara,
Nice to see Anandini back after many months.