ಆತ್ಮೀಯರೇ,
೨೦೧೯-೨೦ ನೇ ಸಾಲಿನ ಆನಂದಿನಿಯನ್ನು ನಿಮಗೆ ಒಪ್ಪಿಸುತ್ತಿದ್ದೇನೆ.
ಈ ವರ್ಷ ನಮಗೆ ಒಂದು ಮೈಲಿಗಲ್ಲಿನ ವರ್ಷ. ೨೦೧೦ ಜೂನ್ ನಲ್ಲಿ ಪ್ರಾರಂಭವಾದ ಪೂರ್ಣಪ್ರಮತಿ ೧೦ನೇ ವರ್ಷಕ್ಕೆ ಕಾಲಿಟ್ಟಿದೆ. ಅದನ್ನು ವಿಶೇಷವಾಗಿ ಆಚರಿಸುವ ಯೋಜನೆ ವರ್ಷ ಪ್ರಾರಂಭದಲ್ಲಿ ರೂಪುಗೊಂಡಿದ್ದು ಬಹಳ ಮುಖ್ಯವಾಗಿ ಮೂರು ಮುಖಗಳ ಕಾರ್ಯಕ್ರಮ ಮೂಡಿಬಂತು. ಮೊದಲನೆಯದಾಗಿ ಪ್ರತಿ ವಿಷಯಗಳ “ಹಬ್ಬ”, ಎರಡನೆಯದಾಗಿ ರಾಮಾಯಣ ಸಮೀಕ್ಷೆ, ಮೂರನೆಯದಾಗಿ ಕಳೆದ ಹತ್ತುವರ್ಷಗಳ ಒಟ್ಟು ಸಂವತ್ಸರ ಸೂತ್ರಗಳ ಮುಂದುವರೆದ ನಿರೂಪಣೆ.
ನಿಮಗೆ ಅರಿವಿರುವಂತೆ ಪೂರ್ಣಪ್ರಮತಿಯ ಯಾವುದೇ ಕಾರ್ಯಕ್ರಮವು ಕಲಿಕೆಯ ಹಿನ್ನಲೆಯಲ್ಲೇ ಅರಳುವಂಥದ್ದು. ಮತ್ತಷ್ಟು ಕಲಿಸುವಂಥದ್ದು. ಇವೇ ನಮ್ಮ ಪೂರ್ವಪ್ರಾಥಮಿಕ ಹಂತದಿಂದ ಹಿಡಿದು ೧೦ನೇ ತರಗತಿಯವರೆಗೆ ವಿದ್ಯಾರ್ಥಿಗಳು ಕಲಿತ ಎಲ್ಲಾ ವಿಷಯಗಳ ವಿವಿಧ ಆಯಾಮಗಳನ್ನು Subject fest ಗಳಲ್ಲಿ ಪ್ರಸ್ತುತಪಡಿಸಿದ್ದು. ಅವರ ಆಳವಾದ ಕಲಿಕೆಗೆ, ನಿರೂಪಣಾ ಸಾಮರ್ಥ್ಯ, ಕೌಶಲ್ಯಕ್ಕೆ ಸಾಕ್ಷಿಯಾಯಿತು. ಬಂದ ಅತಿಥಿಗಳು ಮನಃಪೂರ್ವಕ ಹರಸಿ ಆಶೀರ್ವದಿಸಿದ್ದು ಶಾಲೆಯ ಭಾಗ್ಯವಾಯಿತು.
ವರ್ಷದುದ್ದಕ್ಕೂ ನಿರಂತರವಾಗಿ ನಡೆಯುವ, ತತ್ವಚಿಂತನಾ ತರಗತಿಗಳಲ್ಲಿ ವಿದ್ಯಾರ್ಥಿಗಳು ಕಲಿಯುವ ರಾಮಾಯಣದ ಸಮೀಕ್ಷೇ ಸೀತಾಜಯಂತಿಯಂದು ನಡೆಯಿತು. ಪ್ರತಿ ವಿದ್ಯಾರ್ಥಿ ಕಥಾನಿರೂಪಣೆ, ಪಾತ್ರ ಪರಿಚಯ, ವಿಷಯಾಧಾರಿತ ಪ್ರಶ್ನೋತ್ತರಗಳಲ್ಲಿ ನಿರರ್ಗಳವಾಗಿ ಭಾಗವಹಿಸಿ ಸೈ ಎನಿಸಿಕೊಂಡರು. ಭಾರತದ ಮಹಾಕಾವ್ಯಗಳ ವಿಷಯವಾದ ಪರಿಚಯ ನಮ್ಮ ಯುವ ಮನಸ್ಸುಗಳಿಗೆ ಆಗಿ, ಅವುಗಳ ತತ್ವ ಮಕ್ಕಳ ಮನದಾಳದಲ್ಲಿ ಬೇರೂರಿದವು. ನಮ್ಮ ಉದ್ದೇಶ ಸಫಲವಾಯಿತು.
ಶಾಲೆಯ ಪ್ರಾರಂಭ ವರ್ಷಗಳಿಂದಲೂ ಶಾಲಾ ವಾರ್ಷಿಕ ಸೂತ್ರ ಬಂದಿದ್ದು, ವರ್ಷದುದ್ದಕ್ಕೂ ಅವುಗಳನ್ನು ಅನೇಕ ಮುಖಗಳಲ್ಲಿ ಅಧ್ಯಯನ ಮಾಡುವುದು, ಕ್ಷೇತ್ರ ಭೇಟಿ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದಗಳ ಮುಖಾಂತರ ಆ ಸೂತ್ರದ ವಿಶೇಷ ತಯಾರಿ ನಡೆಸಿ ವಾರ್ಷಿಕ ಉತ್ಸವದಲ್ಲಿ ವಿದ್ಯಾರ್ಥಿಗಳು ಅದನ್ನು ಪ್ರಸ್ತುತಪಡಿಸುವುದು ಶಾಲಾಪದ್ಧತಿ. ದಶವರ್ಷದ ಉತ್ಸವದ ಈ ಸಂದರ್ಭದಲ್ಲಿ ಕಳೆದ ಒಂಬತ್ತೂ ವರ್ಷದ ಸೂತ್ರಗಳ ಮರು ಪ್ರಸ್ತುತಿಯನ್ನು ಯೋಚಿಸಿ, ಅವುಗಳನ್ನು ಸಿದ್ಧ ಪಡಿಸಿದ್ದು ನಗರದ ವಸಂತಪುರದ “ವಸಂತ ವಲ್ಲಭರಾಯ ಸ್ವಾಮಿ” ದೇವಾಲಯದಲ್ಲಿ ಅಪೂರ್ವ ರೀತಿಯಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸುವುದು ನಮ್ಮ ಆಶಯವಾಗಿದ್ದು, ಕಾರಣಾಂತರಗಳಿಂದ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮೊಟುಕುಮಾಡಬೇಕಾಯಿತು. ಈ ವರ್ಷ ಅನೇಕ ರೀತಿಯಲ್ಲಿ ಮರೆಯಲಾಗದಂಥದ್ದು ಪೂರ್ಣಪ್ರಮತಿಯ ಜೀವಸ್ವರೂಪರೂ, ನಮ್ಮ ಚಿರಸ್ಥಾಯಿ ನೆಲೆಯೂ ಆದ ಪೇಜಾವರ ಪೀಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮಿಜಿ (ಪೂರ್ವಾಶ್ರಮ ಪ್ರೊ.ಜಿ.ಡಿ. ಅಗರವಾಲ್) ಅವರೂ ನಮ್ಮನ್ನು ಅಗಲಿ ಪರಂಧಾಮವಂಗೈದ ವರ್ಷವಿದು. ಆ ಎರದು ಪೂಜ್ಯ ಚೇತನಗಳಿಗೆ ಪೂರ್ಣಪ್ರಮತಿ ಶಿರಬಾಗಿ ನಮಿಸುತ್ತದೆ.
ಉಳಿದಂತೆ ಶಾಲೆಯು ’ನಿಸರ್ಗದೊಂದಿಗೆ ತಾದಾತ್ಮ್ಯ’ , ’ಸಹಜ ಬದುಕು’ ಗರಿಗೆದರಿ ಯುವ ಬ್ರಿಗೆಡ್ ನವರೊಂದಿಗೆ ವೃಷಭಾವತಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗಿಯಾಯಿತು. ಹೊಸಕೆರೆಹಳ್ಳಿ ಕೆರೆಯ ಸ್ವಚ್ಛತಾ ಕಾರ್ಯಕ್ರಮ, ಟಿ.ನರಸೀಪುರ ಸಂಗಮದ ಸ್ವಚ್ಛತಾ ಕಾರ್ಯಕ್ರಮ ಪೂರ್ಣಪ್ರಮತಿ ಸಂತೆ, ಕಸಮುಕ್ತ ಗಿರಿನಗರ ಪ್ರಾಯೋಜಕತೆ, ಪೋಷಕರಿಗೆ ಜ್ಞಾನಧಾರಾ (outreach program) ದ ’ಸಾಧಕರೊಂದಿಗೆ ಮಾತುಕತೆ’ ಯಶಸ್ವಿಯಾಗಿ ನಡೆದು ವರ್ಷವನ್ನು ಸಂಪನ್ನಗೊಳಿಸಿದವು.
ನಿಮ್ಮ
ಶಶಿರೇಖಾ ಮಣೂರು
ಪ್ರಾಂಶುಪಾಲರು
ಪೂರ್ಣಪ್ರಮತಿ.
ಒಂದು ಜೀವ ಇನ್ನೊಂದು ಜೀವವನ್ನು ಆಶ್ರಯಿಸಿ ಇದೆ. ಇದು ಈ ವಾಕ್ಯದ ಅರ್ಥ. ಈ ವಾಕ್ಯ ಬರುವುದು ಭಾಗವತದಲ್ಲಿ. ಒಮ್ಮೆ ಅಲ್ಲಿ ಯಾವ ಪ್ರಸಂಗದಲ್ಲಿ ಬಂದಿದೆ ಎಂದು ನೋಡೋಣ.
ಧರ್ಮರಾಜನಿಗೆ ನಾರದರ ಸಾಂತ್ವನ
ಮಹಾಭಾರತದ ಯುದ್ಧ ಮುಗಿದು ಧರ್ಮರಾಜ ಮಹಾರಾಜನಾಗಿದ್ದಾನೆ. ಅವನ ಆಶ್ರಯದಲ್ಲಿ ಎಲ್ಲ ಮಕ್ಕಳನ್ನು ಕಳೆದುಕೊಂಡ ಧೃತರಾಷ್ಟ್ರ ಮತ್ತು ಗಾಂಧಾರಿ ಇರುತ್ತಾರೆ. ಆಗ ತೀರ್ಥಯಾತ್ರೆಗೆ ಹೋದ ವಿದುರ ಮರಳಿ ಹಸ್ತಿನಾವತಿಗೆ ಬರುತ್ತಾನೆ. ತನ್ನ ಅಣ್ಣನಾದ ಧೃತರಾಷ್ಟ್ರನಿಗೆ “ಪಾಂಡವರಿಗೆ ಮೋಸ ಮಾಡಿ ಈಗ ಅವರ ಆಶ್ರಯದಲ್ಲಿಯೇ ಇದ್ದು ಭೀಮ ಹಾಕಿದ ಅನ್ನವನ್ನು ತಿನ್ನುತ್ತಿರುವಿ. ಬದುಕುವ ಆಸೆ ಬಿಡು. ಪಾಂಡವರಿಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊ” ಎಂದಾಗ ಚಕ್ಷುಹೀನ ಪ್ರಜ್ಞಾಚಕ್ಷುವಾಗುತ್ತಾನೆ. ಧರ್ಮರಾಜನಿಗೆ ತಿಳಿಸದೇ ಧೃತರಾಷ್ಟ್ರ, ಗಾಂಧಾರಿ, ವಿದುರ ಮೂವರೂ ಅರಣ್ಯವನ್ನು ಪ್ರವೇಶಿಸುತ್ತಾರೆ. (ಮುಂದೆ ಧೃತರಾಷ್ಟ್ರ ಯೋಗಬಲದಿಂದ ತನ್ನ ದೇಹವನ್ನು ಕಾಳ್ಗಿಚ್ಚಿಗೆ ಅರ್ಪಣೆ ಮಾಡುತ್ತಾರೆ. ಪತಿಯ ದಾರಿ ಸತಿಯದೂ ಆಗುತ್ತದೆ.) ಅರಮನೆಯಲ್ಲಿ ತನ್ನ ಡೊಡ್ಡಪ್ಪನನ್ನು ಕಾಣದೆ ಧರ್ಮರಾಜ ಖಿನ್ನನಾಗಿರುತ್ತಾನೆ. ಆಗ ಅಲ್ಲಿಗೆ ನಾರದರು ಬರುತ್ತಾರೆ. ಅವರ ಬಳಿ ನೋವನ್ನು ಹೇಳಿಕೊಂಡಾಗ ನಾರದರು ಧರ್ಮರಾಜನಿಗೆ – “ ಈ ಜಗತ್ತು ಈಶ್ವರಾಧೀನ. ಅವನೆ ಎಲ್ಲರನ್ನು ಸೇರಿಸುವವನು ಮತ್ತು ವಿಯೋಗಿಸುವವನು. ನಿಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮ ತಮ್ಮ ಗತಿಯನ್ನು ಹೊಂದುತ್ತಾರೆ. ನೀನು ಈ ಮಮತೆಯನ್ನು ಬಿಡು” ಎಂದು ಉಪದೇಶ ಮಾಡುತ್ತಾರೆ. ಆಗ ಬರುವ ಶ್ಲೋಕ ಇದು
ಅಹಸ್ತಾನಿ ಸಹಸ್ತಾನಾಂ ಅಪದೋ ದ್ವಿಚತುಷ್ಪದಾಮ್ |ಅಣೂನಿ ತಾತ ಮಹತಾಂ ಜೀವೋ ಜೀವಸ್ಯ ಜೀವನಮ್ || ಭಾಗವತ ೧.೧೨.೪೭ |
(ಕೈ ಇರುವ ಪ್ರಾಣಿಗಳಿಗೆ ಕೈ ಇರದ ಪ್ರಾಣಿಗಳು ಜೀವನ. ಕಾಲಿರದ ಜೀವಿಗಳು ಎರಡು-ನಾಲ್ಕು ಕಾಲಿನ ಜೀವಿಗಳಿಗೆ ಜೀವನ. ಸಣ್ಣದೆಲ್ಲ ದೊಡ್ಡವುಗಳಿಗೆ ಜೀವನ. ಪ್ರತಿ ಜೀವವೂ ಇನ್ನೊಂದು ಜೀವಕ್ಕೆ ಜೀವನ)
ಈ ಶ್ಲೋಕದಲ್ಲಿ ಮೊದಲ ಮೂರು ಪಾದ ದುರ್ಬಲ ಸಬಲನ ಜೀವನ ಎನ್ನುವ ಅರ್ಥ ಕೊಟ್ಟರೂ ಕೊನೆಯ ಪಾದ ಪ್ರತಿ ಜೀವಿಯೂ ಇನ್ನೊಂದು ಜೀವಿಗೆ ಜೀವನ; ಎಲ್ಲ ಜೀವಿಗಳೂ ಪರಸ್ಪರ ಅವಲಂಬಿಸಿಕೊಂಡಿರುತ್ತಾರೆ ಎನ್ನುವ ಅರ್ಥವನ್ನು ಕೊಡುತ್ತದೆ. ಪೂರ್ಣಪ್ರಮತಿಯಲ್ಲಿ ಈ ವಿಷಯವನ್ನು ತಿಳಿಯಲು ಮಕ್ಕಳ ಜೊತೆ ಅಧ್ಯಾಪಕರೂ ಅಧ್ಯಯನ ಮಾಡಿದರು. ಅದರ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.
ಹುಲಿ-ಹುಲ್ಲು-ನೀರು
ನೀರನ್ನು ಆಶ್ರಯಿಸಿ ಇಡೀ ಚರಾಚರ ಪ್ರಪಂಚವೇ ಇದೆ ಎನ್ನುವುದು ಸರ್ವವಿದಿತ. ಇಂತಹ ನೀರು ಉಳಿಯಲು ಹುಲಿ ಕಾರಣ. ನಮ್ಮ ಭೂಮಿಯ ಒಳಗೆ ನೀರು ಉಳಿಯಲು ಮರಗಿಡಗಳಂತೆ ಹುಲ್ಲು ಕೂಡ ಪ್ರಧಾನ ಪಾತ್ರ ವಹಿಸಿದೆ. ಹುಲ್ಲು ಇರುವ ಜಾಗದಲ್ಲಿ ಅಂತರ್ಜಲ ಸಮೃದ್ಧವಾಗಿರುತ್ತದೆ. ಆದರೆ ಹುಲ್ಲನ್ನು ತಿನ್ನಲು ಜಿಂಕೆಗಳಿವೆ. ಜಿಂಕೆಗಳು ಹೆಚ್ಚಿದಷ್ಟು ಹುಲ್ಲು ನಾಶವಾಗುತ್ತದೆ. ಹುಲ್ಲು ಇಲ್ಲದಿದ್ದರೆ ಅಂತರ್ಜಲ ಇಲ್ಲ. ಅದಿಲ್ಲದೆ ಹಳ್ಳ ಕೊಳ್ಳ ಕೆರೆಗಳೆಲ್ಲಿ? ಅವುಗಳಿಲ್ಲದೆ ನದಿಗಳೆಲ್ಲಿ? ಅದಕ್ಕಾಗಿ ಪ್ರಕೃತಿಯೇ ಒಂದು ವ್ಯವಸ್ಥೆ ಮಾಡಿಕೊಂಡಿದೆ. ಜಿಂಕೆಗಳ ಸಂಖ್ಯೆ ಬೆಳೆಯದಂತೆ ಜಿಂಕೆಗಳನ್ನು ತನ್ನ ಆಹಾರ ಮಾಡಿಕೊಂಡಿವೆ ಹುಲಿಗಳು. ಆಗ ಹುಲ್ಲಿನ ರಕ್ಷಣೆ ಆಗುತ್ತದೆ. ಆ ಮೂಲಕ ಹುಲ್ಲು ಹಿಡಿದಿರುವ ನೀರಿನ ರಕ್ಷಣೆ ಕೂಡ. ಹೀಗೆ ಜಿಂಕೆಗೆ ಹುಲ್ಲು ಜೀವನ. ಜಿಂಕೆ ಹುಲಿಗೆ ಜೀವನ. ಹುಲಿ ಹುಲ್ಲು ಮತ್ತು ನೀರಿಗೆ ಜೀವನ. ನೀರಂತೂ ಎಲ್ಲದಕ್ಕೂ ಜೀವನ. ಆದ್ದರಿಂದಲೇ ನೀರಿಗೆ ಸಂಸ್ಕೃತದಲ್ಲಿ ಜೀವನ ಎಂದು ಕೋಶಕಾರರು ಕರೆದರು; “ಪಯ: ಕೀಲಾಲಮಮೃತಂ ಜೀವನಂ ಭುವನಂ ವನಮ್” ಎಂದು. (ಎಲ್ಲ ಕಡೆ ನೀರಿಗೆ ಹುಲಿಯೇ ಜೀವನ ಎಂದಲ್ಲ. ಗುಡ್ಡಗಾಡುಗಳ ಕಡೆ ಹುಲಿಯೂ ಕಾರಣ ಎಂದು ಮಾತ್ರ ತಾತ್ಪರ್ಯ.) ಹುಲ್ಲು-ಜಿಂಕೆ-ಹುಲಿಗಳ ಈ ಆಹಾರ ಸರಪಳಿಯೂ ಜೀವೋ ಜೀವಸ್ಯ ಜೀವನಂ ಎನ್ನುವುದರ ಅರ್ಥ.
ಹಕ್ಕಿ-ಮತ್ತು-ಮರ
ನಮ್ಮ ಶಾಲೆಗೆ ಪರಿಸರ ತಜ್ಞರನೇಕರು ಮಾರ್ಗದರ್ಶಕರಿದ್ದಾರೆ. ಅವರಲ್ಲಿ ನಿವೃತ್ತ ಅರಣ್ಯಾಧಿಕಾರಿಗಳಾದ ಶ್ರೀ ಯಲ್ಲಪ ರೆಡ್ಡಿಯವರು ಹಾಗು ದಿ.ಶ್ರೀ ಹರೀಶ ಭಟ್ ಮಕ್ಕಳಿಗೆ ಅನೇಕ ವಿಷಯಗಳಲ್ಲಿ ದಾರಿದೀಪಗಳಾಗಿದ್ದಾರೆ. (ನಮ್ಮೆಲ್ಲರ ಅಚ್ಚುಮೆಚ್ಚಿನ ವಿಜ್ಞಾನಿ ಹರೀಶ ಭಟ್ ಈಗ ನಮ್ಮೊಡನೆ ಇಲ್ಲದಿರುವುದು ದು:ಖದ ವಿಚಾರ) ಮಕ್ಕಳನ್ನು ಕುಮಾರಪರ್ವತಕ್ಕೆ ಕರೆದುಕೊಂಡು ಹೋದಾಗ, ಜ್ಞಾನಭಾರತಿಯ ಆವರಣದ ಜೀವ ವೈವಿಧ್ಯ ಉದ್ಯಾನಕ್ಕೆ ಕರೆದುಕೊಂಡು ಹೋದಾಗೆಲ್ಲ ಹಕ್ಕಿ ಮತ್ತು ಮರಗಳ ಸಂಬಂಧದ ಬಗ್ಗೆ ಇವರಿಬ್ಬರು ಆಗಾಗ ಹೇಳುವವರು. ನಮಗೆಲ್ಲ ತಿಳಿದಿರುವಂತೆ ಹಕ್ಕಿಗಳಿಗೆಲ್ಲ ಮರಗಳು ಆಶ್ರಯ. ಹಕ್ಕಿಗಳು ಅಲ್ಲಿ ತಂಗುತ್ತವೆ, ಗೂಡು ಕಟ್ಟುತ್ತವೆ. ಅಲ್ಲಿನ ಹಣ್ಣನ್ನು ತಿಂದು ಜೀವಿಸುತ್ತವೆ. ಹಾಗೆಯೇ ಮರಗಳ ಹುಟ್ಟಿಗೆ ಹಕ್ಕಿಗಳೂ ಕಾರಣಗಳಾಗಿವೆ. ಮರದ ಹಣ್ಣನ್ನು ತಿಂದು ಹಕ್ಕಿಗಳು ಎಲ್ಲೆಲ್ಲೂ ವಲಸಿ ಹೋಗುತ್ತವೆ. ಎಲ್ಲೋ ದಾರಿಯಲ್ಲಿ ಕಾಡಿನಲ್ಲಿ ಹಿಕ್ಕಿ ಹಾಕುತ್ತವೆ. ಅದರಲ್ಲಿ ಮರದ ಬೀಜ ಇದ್ದು ಪ್ರಕೃತಿಯ ಅನುಕೂಲಕ್ಕೆ ತಕ್ಕಂತೆ ಬೀಜ ಮೊಳಕೆಯೊಡೆದು ಗಿಡವಾಗಿ ಮರವಾಗುತ್ತದೆ. ಮರದಿಂದ ಹಕ್ಕಿ ಬದುಕಿದರೆ ಮರದ ಹುಟ್ಟಿಗೆ ಹಕ್ಕಿ ಕಾರಣಾವಾಗಿದೆ. ಹೀಗೆಯೆ ಪ್ರಕೃತಿಯಲ್ಲಿ ಎಲ್ಲದಕ್ಕೂ ಒಂದೊಂದು ಪರಸ್ಪರ ಕೊಂಡಿ ಇದ್ದೇ ಇರುತ್ತದೆ.
ಪ್ರಾಚೀನ ಸಾಹಿತ್ಯದಲ್ಲಿ ಜೀವೋ ಜೀವಸ್ಯ ಜೀವನಮ್
ಒಂದು ವಿಶಾಲವಾದ ಮರ. ಅಲ್ಲಿ ಸಹಸ್ರಾರು ಹಕ್ಕಿಗಳು ಆಶ್ರಯ ಪಡೆದಿವೆ. ಅನೇಕ ಪ್ರಾಣಿಗಳು ಇದರ ನೆರಳಲ್ಲಿ ಸುಖಿಸುತ್ತಿವೆ. ಪೊಟರೆಗಳು ಅನೇಕ ಹಕ್ಕಿ-ಕೀಟಗಳ ತಾಣವಾಗಿದೆ. ಬುಡದ ಸಮೀಪ ಬಿಲದಲ್ಲಂತೂ ಸಾವಿರಾರು ಮೂಷಿಕಗಳು. ಹೀಗೆ ಅನೇಕ ಪ್ರಾಣಿ-ಪಕ್ಷಿಗಳಿಗೆ ಆಶ್ರಯವಾಗಿ ಆ ಮರ ನಿಂತಿತ್ತು. ಒಮ್ಮೆ ಆ ಮರ ಇರುವ ಕಾಡಿಗೆ ಬೇಡರು ಬಂದರು. ಮರದ ನೆರಳಲ್ಲಿದ್ದ ಜಿಂಕೆಗೆ ಗುರಿಯಿಟ್ಟು ವಿಷದ ಬಾಣದ ಪ್ರಯೋಗ ಮಾಡಿದರು. ಗುರಿ ತಪ್ಪಿತು. ಬಾಣ ಮರಕ್ಕೆ ತಾಗಿತು. ನಿರಾಶರಾಗಿ ಬೇಡರು ಹಿಂದಿರುಗಿದರು. ವಿಷವನುಂಡ ಮರ ಕೆಲ ದಿನಗಳ ನಂತರ ಕ್ಷೀಣಿಸತೊಡಗಿತು. ಎಲೆಗಳೆಲ್ಲ ಉದುರಿದವು. ಮರ ಬೋಳಾಯಿತು. ಮರದಲ್ಲಿನ ಹಕ್ಕಿಗಳೆಲ್ಲ ಬೇರೆ ಮರದ ಆಶ್ರಯ ಪಡೆದವು. ಪ್ರಾಣಿಗಳು ನೆರಳಿಗಾಗಿ ಇನ್ನೊಂದು ಮರದ ಮೊರೆ ಹೊಕ್ಕವು. ಆದರೆ ಒಂದು ಗಿಳಿ ಮಾತ್ರ ಆ ಮರವನ್ನು ಬಿಡಲೇ ಇಲ್ಲ. “ನಾನು ಹುಟ್ಟಿದ್ದು ಈ ಮರದಲ್ಲಿ. ಬೆಳೆದದ್ದು ಇಲ್ಲಿ, ಆಡಿದ್ದು ಇಲ್ಲಿ, ಹಾಡನ್ನು, ಹಾರುವುದನ್ನು ಕಲಿತದ್ದು ಇಲ್ಲಿಯೇ. ಈಗ ಈ ಮರಕ್ಕೆ ಕಷ್ಟ ಬಂದಿದೆ. ನನ್ನ ಬದುಕಿಗೆ ಕಾರಣವಾದ ಈ ಮರದ ಇಂಥ ದು:ಸ್ಥಿತಿಯ ಸಮಯದಲ್ಲಿ ಈ ಮರವನ್ನು ನಾನು ಬಿಡೆನು” ಎಂದು ಹಠ ಹಿಡಿದು ಕುಳಿತುಬಿಟ್ಟಿದೆ. ಮಳೆ, ಗಾಳಿ, ಬಿಸಿಲಿನ ಪರಿವೆಯೆ ಇಲ್ಲದೆ ತನ್ನ ಆಶ್ರಯದಾತನ ಜೊತೆಗಾರನಾಗಿದೆ. ಇದನ್ನು ಕಂಡ ಇಂದ್ರ ಅಲ್ಲಿಗೆ ಮಾರು ವೇಷದಿಂದ ಬಂದು –“ಓ ವಿಹಗ ! ಈ ಕಾಡಿನಲ್ಲಿ ಅನೇಕ ಮರಗಳಿವೆ. ಅವುಗಳನ್ನೆಲ್ಲ ಬಿಟ್ಟು ಈ ಬೋಳು ಮರದಲ್ಲೇಕೆ ಜೀವ ತೇಯುತ್ತಿರುವೆ. ಬೆರೆಡೆ ಹೋಗಿ ಬದುಕಬಾರದೆ?” ಎಂದು ಕೇಳುತ್ತಾನೆ. ಗಿಳಿಯು ಆ ಮರದ ಬಗೆಗಿನ ತನ್ನ ಬಾಂಧವ್ಯ ಮತ್ತು ಭಾವನೆಗಳನ್ನು ಹೇಳಿ, “ನೀನು ಇಂದ್ರ, ಎಲ್ಲವನ್ನೂ ತಿಳಿದು ಹೀಗೆ ಏಕೆ ಕೇಳುವೆ?” ಎಂದು ಕೇಳುತ್ತದೆ. ಮಾರುವೇಷದಲ್ಲಿದ್ದರೂ ನನ್ನ ಕಂಡುಹಿಡಿದ ಹಕ್ಕಿಯ ಬಗ್ಗೆ ಇಂದ್ರನಿಗೆ ಸಂತೋಷವಾಗಿ ವರವನ್ನು ಕೇಳು ಎಂದು ಹೇಳುತ್ತಾನೆ. ಆಗ ಹಕ್ಕಿ “ನನ್ನಂತಹ ಅನೇಕ ಪ್ರಾಣಿ-ಪಕ್ಷಿಗಳಿಗೆ ಜೀವನವಾದ ಈ ಮರ ಬದುಕಲಿ, ಮೊದಲಿನಂತೆ ಆಗಲಿ” ಎಂದು ಕೇಳುತ್ತದೆ. ಇಂದ್ರ ಕರುಣಿಸುತ್ತಾನೆ. ಮರ ಮತ್ತೆ ಚಿಗಿದು, ಹಸಿರ ಸೀರೆನ್ನುಡುತ್ತದೆ. ಮತ್ತೆ ಎಲ್ಲ ಹಕ್ಕಿಗಳ ಪ್ರಾಣಿಗಳ ಆಶ್ರಯವಾಗುತ್ತದೆ.
ಇದು ಮಹಾಭಾರದ ಒಂದು ಅಧ್ಯಾಯದಲ್ಲಿ ಬರುವ ಕಥೆ. ಹಕ್ಕಿಗೆ ಮರ ಆಶ್ರಯವಾಗಿತ್ತು. ಹಕ್ಕಿಯಿಂದ ಮರ ಮತ್ತೆ ಬದುಕಿತು. ಹೀಗೆಯೆ ಜೀವನದಲ್ಲಿ ಪರಸ್ಪರ ಸಹಾಯ ಮಾಡಿಕೊಂಡು ಹೊಂದಿಕೊಂಡಿರುವುದೇ ಜೀವೋ ಜೀವಸ್ಯ ಜೀವನಮ್. ಇಂತಹ ಕಥೆಗಳ ಆಗರ ಮಹಾಭಾರತ.
ಗೀತೆಯ ಜಗಚ್ಚಕ್ರ
ಒಂದನ್ನೊಂದು ಅವಲಂಬಿಸಿ ಈ ಜಗತ್ತು ಇದೆ ಎನ್ನುವುದನ್ನು ಗೀತಾಚಾರ್ಯ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾನೆ.
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವ: |
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞ: ಕರ್ಮಸಮುದ್ಭವ: |
ಇಲ್ಲಿ ಭೂತಗಳು ಅಂದರೆ ಜೀವಿಗಳು ಎಂದರ್ಥ. ಜೀವಿಗಳು ಅನ್ನವನ್ನು ತಿಂದು ಬದುಕುತ್ತವೆ. ಆ ಅನ್ನ ಹುಟ್ಟುವುದು ಮಳೆಯಿಂದ. ಮಳೆ ಬರುವುದು ಯಜ್ಞಗಳಿಂದ. ಯಜ್ಞ ಎನ್ನುವುದು ನಾವು ಮಾಡುವ ಕರ್ಮ, ಕ್ರಿಯೆಗಳಿಂದ ಸಂಪಾದಿತವಾಗುತ್ತದೆ. ನಮ್ಮ ಎಲ್ಲ ಕರ್ಮಗಳನ್ನು ಬ್ರಹ್ಮ ಅಂದರೆ ಭಗವಂತ ಮಾಡಿಸುತ್ತಾನೆ. “ನಾಹಂ ಕರ್ತಾ ಹರಿ: ಕರ್ತಾ” ಇತ್ಯಾದಿ ಮಾತುಗಳಂತೆ ನಾವು ಏನನ್ನೂ ಮಾಡಲು ಅಸ್ವತಂತ್ರರು. ಭಗವಂತ ನಮ್ಮಲ್ಲಿದ್ದು ಎಲ್ಲವನ್ನೂ ಮಾಡಿಸುತ್ತಾನೆ ಎನ್ನುವ ತತ್ವದಂತೆ ನಮ್ಮ ಕರ್ಮದ ಜನಕ ಭಗವಂತ. ಆ ಭಗವಂತ ಅಕ್ಷರ ಅಂದರೆ ವೇದದಿಂದ ಹುಟ್ಟುತ್ತಾನೆ, ಅಂದರೆ ಭಗವಂತನ ಅರಿವು ವೇದದಿಂದ ಆಗುತ್ತದೆ ಎಂದರ್ಥ. ಈ ವೇದಗಳನ್ನು ಉಚ್ಚಾರಣೆ ಮಾಡಲು ಜೀವಿಗಳೇ ಇಲ್ಲದಿದ್ದರೆ ಹೇಗೆ? ಆದ್ದರಿಂದ ವೇದದ ಉಳಿವಿಗೆ ಮನುಷ್ಯ ಬೇಕು. ಆ ಮನುಷ್ಯ ಬದುಕುವುದು ಅನ್ನದಿಂದ. ಅನ್ನ ಹುಟ್ಟುವುದು ಮಳೆಯಿಂದ…… ಹೀಗೆ ಈ ಜಗಚ್ಚಕ್ರಕ್ಕೆ ಕೊನೆಯೇ ಇಲ್ಲ. ಈ ಚಕ್ರವನ್ನು ಹೀಗೆ ತೋರಿಸಬಹುದು.
ಅನ್ನ ==> ಭೂತ ==> ಅಕ್ಷರ(ವೇದ) ==> ಬ್ರಹ್ಮ ==> ಕರ್ಮ ==> ಯಜ್ಞ ==> ಪರ್ಜನ್ಯ ==> ಅನ್ನ ==> ಭೂತ ==> ಅಕ್ಷರ(ವೇದ) ==> ಬ್ರಹ್ಮ………. ಹೀಗೆ ಈ ಚಕ್ರ ಸುತ್ತುತ್ತಲೇ ಇರುತ್ತದೆ.
ನಾಲ್ಕರ ಗಂಟು
ಬ್ರಹ್ಮಚಾರಿ ವೇದದ ಸಂಹಿತೆಯ ಅಧ್ಯಯನ ಮಾಡುತ್ತಾನೆ. ಲೋಕದಲ್ಲಿನ ಗೃಹಸ್ಥ ವೇದದ ಬ್ರಾಹ್ಮಣ ಭಾಗವನ್ನು ಅಧ್ಯಯನ ಮಾಡುತ್ತಾನೆ. ವಾನಪ್ರಸ್ಥ ಗೃಹಸ್ಥ ಆರಣ್ಯಕದ ಅಧ್ಯಯನ ಮಾಡಿದರೆ ಸನ್ಯಾಸಿ ಉಪನಿಷತ್ತನ್ನು ಅನುಸಂಧಿಸುತ್ತಾನೆ. ನಾಲ್ಕು ಆಶ್ರಮಗಳಿಗೆ ನಾಲ್ಕು ಗ್ರಂಥಗಳು. ಇದು ಹೀಗೆ ಎಂದು ನಿಯಮವೇನಿಲ್ಲ. ಯಾವ ಆಶ್ರಮದವರು ಯಾವ ಭಾಗವನ್ನು ಬೇಕಾದರು ಓದಬಹುದು. ಬ್ರಹ್ಮಚಾರಿ ಉಪನಿಷತ್ತಿನ ಅಧ್ಯಯನ ಮಾಡಿದರೆ ತಪ್ಪಲ್ಲ. ನಾಲ್ಕಕ್ಕೆ ನಾಲ್ಕು ಎನ್ನುವ ಕ್ರಮ ಅನೇಕ ಜನ್ಮದ ಪುಣ್ಯದ ಪರಿಪಾಕ. ಒಂದು ಜನ್ಮದಲ್ಲಿ ಒಂದನ್ನು ಓದಿ ಅರ್ಥ ಮಾಡಿಕೊಂಡರೆ ಬಹಳ ದೊಡ್ಡದು. ಏನೂ ಓದದಿರುವುದಕ್ಕಿಂತ ಒಂದನ್ನು ಚೆನ್ನಾಗಿ ಓದುವುದು ಒಳ್ಳೆಯದು. ಗಮನಿಸಿ, ನಾವು ಬದುಕುವ ಈ ಲೋಕದಲ್ಲಿ ಈ ನಾಲ್ಕು ಆಶ್ರಮದವನ್ನು ನೋಡುತ್ತೇವೆ. ಮದುವೆ ಆಗದ ಬ್ರಹ್ಮಚಾರಿಗಳು, ಸಂಸಾರ ನಡೆಸುವ ಗೃಹಸ್ಥರು, ಪತ್ನಿಯ ಜೊತೆಗೋ ಪತ್ನಿಯನ್ನು ಬಿಟ್ಟೋ ಅರಣ್ಯದ ಜೀವನ ಮಾಡುವ ವಾನಪ್ರಸ್ಥರು, ಎಲ್ಲವನ್ನು ತೊರೆದ ಸನ್ಯಾಸಿಗಳು. ಇವರಲ್ಲಿ ವಾನಪ್ರಸ್ಥರು ಈಗ ಸಿಗುವುದಿಲ್ಲ. ನಾಡಿನಲ್ಲೇ ಇದ್ದು ವಾನಪ್ರಸ್ಥ ಜೀವನ ಮಾಡುವವರು ಸಿಕ್ಕಾರು. ಅವರನ್ನೇ ನಾವು ಆರಣ್ಯಕರು ಎಂದುಕೊಳ್ಳೋಣ. ಈ ನಾಲ್ಕು ಆಶ್ರಮದವರೂ ಒಬ್ಬರನ್ನೊಬ್ಬರು ಆಶ್ರಯಿಸಿಕೊಂಡಿದ್ದಾರೆ. ಆ ಕೊಂಡಿ ಬಿಡಿಸಲಾಗದ ಕೊಂಡಿ. ಆ ಗಂಟು ಸಡಿಲ ಆದರೆ ಲೋಕದ ವ್ಯವಸ್ಥೆಯೆ ಹಾಳಾಗುತ್ತದೆ. ಆ ವ್ಯವಸ್ಥೆಯ ಬಗ್ಗೆ ನೋಡೊಣ.
ಮೊದಲು ಗೃಹಸ್ಥಾಶ್ರಮವನ್ನು ನೋಡೊಣ. ಗೃಹಸ್ಥನಿಗೆ ನಾಲ್ಕು ಆಶ್ರಮದವರನ್ನೂ ನೋಡಿಕೊಳ್ಳುವ ದೊಡ್ದ ಹೊಣೆ ಇದೆ. ಬ್ರಹ್ಮಚಾರಿಗೆ ಅನ್ನ ವಸವನ್ನೀಯಬೇಕು, ಇನ್ನೊಬ್ಬ ಗೃಹಸ್ಥನನ್ನು ಅತಿಥಿಯಾಗಿ ಕರೆದು ಪೂಜಿಸಬೇಕು, ಎಲ್ಲವನ್ನು ತೊರೆದ ಆರಣ್ಯಕರಿಗೆ ಹಾಗು ಸನ್ಯಾಸಿಗಳಿಗೆ ಬೇಕಾದ ವ್ಯವಸ್ಥೆ ಮಾಡಬೇಕು. ಇದೆಲ್ಲ ಮಾಡುವುದು ಗೃಹಸ್ಥನ ಕರ್ತವ್ಯ. ಆದ್ದರಿಂದ ಗೃಹಸ್ಥನನ್ನು ಆಶ್ರಯಿಸಿ ಎಲ್ಲರೂ ಇರುವರು.
ಈ ಗೃಹಸ್ಥ ತನ್ನ ಲೌಕಿಕ ವ್ಯವಹಾರದಲ್ಲಿ ಧರ್ಮದ ಮಾರ್ಗ ತಪ್ಪುವ ಸಾಧ್ಯತೆ ಇರುತ್ತದೆ. ಅವನನ್ನು ಎಚ್ಚರಿಸಲು ಸನ್ಯಾಸಿಗಳು ಇರಬೇಕು. ತಮ್ಮ ಜ್ಞಾನದ ಬೆಳಕನ್ನು ಇನ್ನುಳಿದ ಆಶ್ರಮದವರಿಗೆ ನೀಡುತ್ತಿರಬೇಕು. ಲೋಕದಲ್ಲಿ ಯಾವ ರೀತಿಯ ಕ್ಷಾಮಗಳಾಗದಂತೆ ಸ್ವಾಧ್ಯಾಯ,ತಪಸ್ಸನ್ನು ಆಚರಿಸುತ್ತಿರಬೇಕು. “ಸರ್ವೇ ಜನಾ: ಸುಖಿನೋ ಭವಂತು” ಎನ್ನುವ ಶುಭಾಶಂಸನೆ ನಿತ್ಯ ಮಾಡುತ್ತಿರಬೇಕು. ಆಗ ಲೋಕ ಸನ್ಮಾರ್ಗದಲ್ಲಿ ಹೋಗುತ್ತಿರುತ್ತದೆ. ಹೀಗೆ ಈ ಸನ್ಯಾಸಿ ಇಡೀ ಲೋಕಕ್ಕೆ ಆಶ್ರಯ.
ಬ್ರಹ್ಮಚಾರಿ ಇಲ್ಲದಿದ್ದರೆ ಗುರುಕುಲಗಳಿಗೆ ಅಸ್ತಿತ್ವವೆ ಇರುವುದಿಲ್ಲ. ಜ್ಞಾನದ ಪರಂಪರೆಯನ್ನು ಮುನ್ನಡೆಸಲು ಒಬ್ಬನಾದರು ಬ್ರಹ್ಮಚಾರಿ ಶಿಷ್ಯ ಬೇಕು. ಅಧ್ಯಾಪಕ ಪಾಠ ಮಾಡುತ್ತ ತಾನು ಕಲಿತ ವಿಷಯವನ್ನು ದೃಢಮಾಡಿಕೊಳ್ಳುತ್ತಾನೆ. ವಿದ್ಯಾರ್ಥಿ ಕೇಳುವ ಪ್ರಶ್ನೆಗಳು ಅಧ್ಯಾಪಕನನ್ನು ಅಧ್ಯಯನಕ್ಕೆ ತೊಡಗಿಸುತ್ತವೆ. ಕೇಳುವ ಕಿವಿಗಳಿಲ್ಲದೆ ವಿದ್ಯೆ ಮರೆತು ಬಿಡುತ್ತದೆ. ಅನಭ್ಯಾಸೇ ವಿಷಂ ವಿದ್ಯಾ. ಹೀಗೆ ವಿದ್ಯಾರ್ಥಿಯನ್ನು (ಬ್ರಹ್ಮಚಾರಿಯನ್ನು) ಆಶ್ರಯಿಸಿ ಜ್ಞಾನಿಗಳಾದ ಇತರ ಆಶ್ರಮದವರು ಇರುತ್ತಾರೆ. ಇನ್ನು ಪಾಠಕರಲ್ಲದ ಗೃಹಸ್ಥರಿಗೆ ಮಕ್ಕಳು ವಂಶಾಭಿವೃದ್ಧಿಗೆ ಬೇಕೆನ್ನುವುದು ಸರ್ವವಿದಿತ.
ವಾನಪ್ರಸ್ಥರು ಈಗ ಸಿಗದಿದ್ದರೂ ಆ ಜೀವನ ನಡೆಸುವ ನಾಗರಿಕರು ಬಹಳ ಜನರಿರುತ್ತಾರೆ. ಅವರ ಅನುಭವ ಅನೇಕರಿಗೆ ಮಾರ್ಗದರ್ಶನ ಮಾಡುತ್ತದೆ. ಹೀಗೆ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸನ್ಯಾಸ ಈ ನಾಲ್ಕು ಆಶ್ರಮಗಳು ಒಂದನ್ನೊಂದು ಆಶ್ರಯಿಸಿ ಇವೆ. ಇದೇ ಜೀವೋ ಜೀವಸ್ಯ ಜೀವನಮ್
ಇದು ಮುಗಿಯದ ಕಥೆ
ಜೀವೋ ಜೀವಸ್ಯ ಜೀವನಮ್. ಬಗೆದಷ್ಟೂ ಆಳ. ಗುರು-ಶಿಷ್ಯರ ಕೊಂಡಿ, ಸತಿ-ಪತಿಯರ ಕೊಂಡಿ, ಚಾತುರ್ವರ್ಣ್ಯಗಳ ಕೊಂಡಿ, ದೇವ-ಮಾನವರ ಕೊಂಡಿ ಹೀಗೆ ಅನೇಕ ಕೊಂಡಿಗಳಿವೆ. ಇವುಗಳ ಬಗ್ಗೆ ಮುಂದಿನ ಕಂತಿನಲ್ಲಿ ನೋಡುವಂತೆ ದೇವರು ಕರುಣಿಸಲಿ. ಸಧ್ಯಕ್ಕೆ ಇಲ್ಲಿಗೆ ಲೇಖನಿಯ ಕೆಲಸವನ್ನು ನಿಲ್ಲಿಸುತ್ತೇನೆ.
Our theme is Dasha Pramathi. Dasha Pramathi can be taken in different ways. We could take it as 10 jeevana moulya of Bhima (bhakti, gnana, vairagya, pragya, medha, drithi, stitihi, yoga, praanah and balah). We could also take the sloka on Mukhyaprana devaru
Budhir balam yasho dairyam nirbhayatwam arogata |
Ajaadyam Vak patothvam cha Hanumath smaranath bhavet ||
I have taken the sloka on Hanuman and tried to explain the meaning of Dashapramati.
If we add bhakti in the beginning and at the end of all our endeavors, what we get Dashapramati. Dasha means holistic (Paripurna) and Pramati means in-depth knowledge. Let us try to see what it means to us when we apply it to how our students should be when they step out into the world. What are the qualities we hope to develop in our students to lead them to success? What are those necessary ingredients which can ensure that our students don’t fail. Not only to our students it can be apply to anyone. Let us look at them one by one.
Atma bala is Chala. One must have the persistence, capacity and confidence to do work. One must not doubt what we do. With effort one can succeed. Deha bala is parakrama to win through your strength. As long as we have prana shakti we don’t get diseases. We must do pranayama regularly to develop deha bala. Buddi bala is pragnya to handle and overcome difficulties when it comes our way. All the three balas are required to pursue any profession. One must develop all these to face the challenges in life. We must have the confidence to take ownership of the task and have the perseverance to pursue it till the end, although we may face unexpected hindrances on the way or reach unexpected results.
Do your duty as a service to God. do it sincerely without any expectations of rewards , as Bhagavad Aradhanam. To such people , Yasha will be accompanying them.
We have to develop a good mental balance between life’s dwandwas like success and failure, profit or loss which are bound to be there in any work. For mental health we must develop spirituality. We should involve ourselves in japa, tapa, parayana, tatva vada and have satsangha so that we are stable and keep our spirits high. It will also ensure that we are happy and peaceful. Ultimately a healthy mind and a healthy body will lead you to success in whichever field you choose when you have all the above qualities.
So when one develops all the above traits he moves towards Purnate and will become a Purnapramati-iya in the true sense. Finally I consider it as seva to Paramatma or as a samarpanae to Shri Hari for having given us this opportunity to be born in this world and be able to reflect on the great qualities of Hanuman and apply it to our context.
Bibliography:
Jeevo-Jeevasya-Jeevanam-
Geetha.S(Elementary School Teacher)
Introduction:
Ecosytem is an interaction of biotic (like flora and fauna) and abiotic (like soil, water, air, etc) things. It is very much necessary for these biotic and abiotic things to depend on each other for a well balanced ecosystem.
JeevoJeevasya Jeevanam – One life is a lifeline for another. Starting from birth till death, each creature is dependent on other creatures and many things to lead a life.
It was decided that this topic should be introduced to children of grade 4, 5 and 6. The main objective behind this was to make children understand the importance of all the living and non-living things on this planet. It is important for children to get the feel of what role each one of it has in balancing an ecosystem and how one influences the number of another.
In this venture of reaching this out to children, I had an opportunity to refer few books and interact with people who have contributed immensely in the field of ecology. I shall try to explain a few insights I gathered along this journey.
Introduction to ecosystems:
There are two main types of ecosystems: Terrestrial ecosystem and aquatic ecosystem. Under terrestrial there are four types – Forest ecosystem, grassland ecosystem, desert ecosystem and mountain ecosystem.
The topic that I found most amazing is the different kinds of relationships within the ecosystem. They can be named as
Competition— Competition is the struggle among organisms for the same limited resources in an ecosystem. This can happen between members of the same species (intraspecific competition) and between different species (interspecific competition). An example of interspecific competition in the ocean is the relationship between corals and sponges. Sponges are very abundant in coral reefs. If they become too successful, however, they take needed food and other resources from the corals that make up the reef. Sponges may outcompete corals for resources in the short term, but if too many corals die, the reef itself becomes damaged. This is bad for the sponges, which may themselves begin to die off until the reef is balanced again.
Predation— behavior of one animal feeding on another.
Mutualism—a symbiotic relationship where both the organisms of two different species, involved derives benefits from each other. .
Commensalism—a symbiotic relationship where one organism benefits and one does not benefit but is unharmed. The commensal—the species that benefits from the association—may obtain nutrients, shelter, support, or locomotion from the host species, which is unaffected. The commensal relation is often between a larger host and a smaller commensal. The host organism is essentially unchanged by the interaction, whereas the commensal species may show great morphological adaptation. This relationship can be contrasted with mutualism, in which both species benefit. Eg: The remora rides attached to sharks and other types of fish. The remora benefits by gaining a measure of protection, and it feeds off of the remains of the meals of the larger fish. The cattle egret is a type of heron that will follow livestock herds.
Parasitism— This happens when one species (the parasite) lives with, on, or in a host species, at the expense of the host species. Unlike in predation, the host is not immediately killed by the parasite, though it may sicken and die over time. Examples of common parasites found in the ocean include nematodes, leeches, and barnacles. Though barnacles exist commensally with whales, they are parasites for swimming crabs. A barnacle may root itself within a crab’s reproductive system. While the crab does not die from this interaction, its reproductive capabilities are greatly diminished.
Of these relationships, mutualism seemed to be too intriguing to me. Felt the urge to know more about this relationship. There is so much harmony in nature is what I felt. Numerous examples can be quoted for mutualism where in it is a win-win situation for both the organisms involved in this relationship. It fascinates me even more when I think how do they communicate.
The algorithm shown here explains these relationships in a nutshell.
Acacia Ants and Acacia Trees: An Irreducibly Complex Symbiotic Relationship? By Jacob Pruse
Acacia tree and Acacia ants: A wonderful symbiotic relationship. The ants receive shelter and food from the acacia plant, and they aggressively defend the plant against herbivores and competing plants. The tree makes nectar for the ants. When it is time for the acacia tree to reproduce, insects and birds must be able to have access to the flowers; otherwise, the plants could not reproduce. The acacia tree, therefore, produces ant repellent on its flowers during the time that its flowers bloom, making it safe for insects to land there. Honey Guide and Honey Badger:
This is another enthralling association between a bird and a mammal both of which are in search of their meal. The bird wants the comb in order to feed on bees’ wax, eggs, and larvae. Once it locates the honey comb, the honey guide with an unusual sound, directs the badger to the comb. The badger attacks the comb, chases the bees, savours honey and finally leaves a part of it for the bird to feed on.
All this while we looked at a symbiotic relationship between two animals. Now let us see a tale of loyalty between fig trees and fig wasps whose association has existed since the time of the dinosaurs, 65 million years ago. The succulent sweet fig is a nesting ground for thousands of tiny fig wasps.
The fig tree and fig wasp share a long and unique mutualistic association, one that benefits both equally. Figs depend on wasps to make their seeds and distribute their pollen. In turn, the fig tree acts as a womb where the fig wasps can reproduce.
Switching from Mutulism, where both organisms experienced a gain, to one win – one loss, let us discuss a bit about parasitism. In a parasitic relationship between two species of plants or animals, one benefits at the expense of the other, either by killing the host organism or by just harming it.
2. Cuscuta is a parasitic plant. It has no chlorophyll and cannot make its own food by photosynthesis. Instead, it grows on other plants, by connecting itself to the vasculature of their host plants in order to extract water and nutrients,using their nutrients for its growth and weakening the host plant. Agriculturalists consider cuscuta, a destructive weed and attempt to eradicate it. It parasitizes wild and cultivated plants. It also grows on common ornamentals as English ivy, dahlias and chrysanthemums.
Cuscuta is a leafless plant with branching stems ranging in thickness from thread-like filaments to heavy cords. The seeds germinate like other seeds. The stems begin to grow and attach themselves to nearby host plants. Once they are firmly attached to a host, the cuscuta root withers away. The mature plant lives its entire life without attachment to the ground.
BIBILIOGRAPHY:
ಪೂರ್ಣಪ್ರಮತಿ ಶಾಲೆಯ ಉತ್ಸವ ಎಂದರೆ ಅದು ಎಲ್ಲಾ ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವದ ರೀತಿ ಅಲ್ಲ ಎಂಬುದು ನನ್ನ ಮಗ ಅಕ್ಷೋಭ್ಯ ಇಲ್ಲಿ ಓದುತ್ತಿರುವಾಗ ನಾವು ನೋಡಿದ ಉತ್ಸವದಿಂದಲೇ ಗಮನಕ್ಕೆ ಬಂದಿತ್ತು. ಆದರೆ ಅನುಭವಕ್ಕೆ ಬಂದದ್ದು ಮಾತ್ರ ನಾನು ಈ ಶಾಲೆಗೆ ಅಧ್ಯಾಪಕಿಯಾಗಿ ನೇಮಕವಾದ ಮೊದಲ ಉತ್ಸವದಲ್ಲಿ. ಅಬ್ಬಾ!!! ನಿಜವಾಗಿಯೂ ನಾನು ಹೀಗೂ ಇರಬಹುದೇ!? ಎಂದು ಚಕಿತಳಾಗಿದ್ದಂತೂ ಸತ್ಯ. ನಾನು ಶಾಲೆಗೆ ಬಂದ ವರ್ಷ ಇದ್ದ ವಿಷಯ ಕೃಷ್ಣನ ಬಾಲಲೀಲೆಗಳು. ನನ್ನ ಖುಷಿಗಂತೂ ಪಾರವೇ ಇರಲಿಲ್ಲ. ನನ್ನನ್ನು ಮತ್ತೆ ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋಗಿತ್ತು ಈ ಘಳಿಗೆ. ನಾವು ಕೂಡಾ ಬಾಲ್ಯದಲ್ಲಿ ಶಿವಕನ್ಯಾ ಬಾಲಿಕಾ ವೃಂದ ಎಂಬ ತಂಡದಿಂದ ಹೀಗೇ ಕೃಷ್ಣನ ಬಾಲಲೀಲೆಗಳು ಎಂಬ ನೃತ್ಯ ರೂಪಕವನ್ನು ಹಲವು ಕಡೆ ಪ್ರದರ್ಶನ ನೀಡಿದ್ದೆವು. ಆ ಎಲ್ಲಾ ನೆನಪುಗಳು ಒಮ್ಮೆಲೇ ಮೇಳೈಸಿ ನನ್ನನ್ನು ಬಹಳ ಪುಳಕಿತಳನ್ನಾಗಿಸಿದ ಘಳಿಗೆಗಳು ಅವು. ವಿಕ್ರಮ ಅಣ್ಣ, ಬದರಿ ಅಣ್ಣ ಅವರ ಅಭಿನಯ ಮಾರ್ಗದರ್ಶನ ನನಗಿನ್ನೂ ಉತ್ಸಾಹ ಬರುವಂತೆ ಮಾಡುತ್ತಿತ್ತು. ಇಷ್ಟು ಅದ್ಭುತ ಕಲಾವಿದರಾಗಿದ್ದರೂ ಎಷ್ಟು ಸರಳ ವ್ಯಕ್ತಿತ್ವ ಇವರದು ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತಿತ್ತು. ಉಡುಪಿಯಲ್ಲಿ ಕೃಷ್ಣನ ಬಾಲ ಲೀಲೆಗಳನ್ನು ನೋಡುವ ಅನುಭವದ ಬಗ್ಗೆ ಕೇಳಬೇಕೆ? ವರ್ಣಿಸಲು ಕುಳಿತರೆ ಅದು ವಿಷಯಾಂತರವಾಗುತ್ತದೆ. ಅದು ಅಂತಿರಲಿ ಮತ್ತೊಮ್ಮೆ ಯಾವಾಗಲಾದರೂ ಹೇಳುವ ಪ್ರಯತ್ನ ಮಾಡುವೆ.
ಹೀಗೆ ಒಂದು ಮುಖ್ಯ ವಿಷಯವನ್ನಾಧರಿಸಿ ಅಧ್ಯಯನ ಮಾಡಿ ಉತ್ಸವ ಆಚರಿಸುವುದು ಪೂರ್ಣಪ್ರಮತಿ ಪ್ರಾರಂಭವಾದಾಗಿನಿಂದಲೂ ನಡೆದುಕೊಂಡು ಬಂದಿದೆ. ಹೀಗೆ ನಡೆಯುವ ಉತ್ಸವದಲ್ಲಿ ತುಂಬಾ ಆಳವಾದ ಅಧ್ಯಯನ, ಸೃಜನಶೀಲತೆ, ಪ್ರತಿಭೆಗಳ ಹುಡುಕಾಟ, ಅವರಿಗೊಂದು ವೇದಿಕೆಯನ್ನು ಕಲ್ಪಸಿಕೊಡುವುದು, ಎಲ್ಲದಕ್ಕೂ ಮುಖ್ಯವಾಗಿ ವಿವಿಧ ಆಯಾಮಗಳಿಂದ ಆ ವರ್ಷದ ವಿಷಯದ ಕಲಿಕೆ ಎಲ್ಲವೂ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಾ ಬಂದಿದೆ.
ಈ ಬಾರಿ ದಶಮಾನೋತ್ಸವದ ಆಗಿದ್ದರಿಂದ ಹತ್ತು ವರ್ಷಗಳಲ್ಲಿ ನಡೆದ ಉತ್ಸವದ ವಿಷಯಗಳನ್ನು ಮರು ಸೃಷ್ಟಿ ಅಥವಾ ಮೆಲುಕು ಹಾಕುವುದು ಈ ಬಾರಿಯ ಉತ್ಸವದ ವಿಶೇಷತೆಯಾಗಿತ್ತು. ಅಂತೆಯೇ ನಮಗೆ ಅಂದರೆ ಪಾರ್ಥ ಹಾಗೂ ಧನಂಜಯ ಪರಿಸರಕ್ಕೆ ದೊರೆತ ವಿಷಯ “ಜಲಮ್ ಜೀವನಮ್ ಉಚ್ಯತೇ” ಇದು ಬಹುಶಃ ಪೂರ್ಣಪರ್ಮತಿಯ ೫ ಅಥವಾ ೬ ನೇ ವರ್ಷದ ವಿಷಯ ವಸ್ತು.
ಮೊದಲು ಈ ಪದ ಕೇಳಿದಾಗ ನೀರಿನ ಕುರಿತದ್ದು ಎಂಬುದೊಂದನ್ನು ಬಿಟ್ಟರೆ ಬೇರಾವ ಅಂಶವೂ ನನಗೆ ತಿಳಿದಿರಲಿಲ್ಲ. ಮೇಲ್ನೋಟಕ್ಕೆ ಎಲ್ಲರೂ ಗ್ರಹಿಸುವಂತೆ ನಾನು ಕೂಡಾ ನೀರು ಜೀವಾಧಾರಕ ಎಂಬ ಅಂಶವನ್ನು ಗ್ರಹಿಸಿದ್ದೆ. ಆದರೆ ಈ ವಿಷಯವಸ್ತುವನ್ನು ಇಟ್ಟುಕೊಂಡು ಬಹಳಷ್ಟು ಅಧ್ಯಯನವಾಗಿರುವುದು ತಿಳಿದಿರಲಿಲ್ಲ. ಕಾರಣ ನಾನು ಆಗ ಶಾಲೆಗಿನ್ನೂ ಸೇರಿರಲಿಲ್ಲ. ಇದು ಅಷ್ಟು ಸುಲಭದ ಕೆಲಸವಲ್ಲ ಎಂಬುದಂತೂ ಅನುಭವ ವೇದ್ಯವಾದ ಮಾತಾಗಿತ್ತು ಹಾಗಾಗಿ ಒಮ್ಮೆಲೇ ನನ್ನೆದೆ ಬಡಿದುಕೊಳ್ಳಲಾರಂಭಿಸಿತು. ಹೇಗೆ ನಿಭಾಯಿಸುವೆನೆಂಬ ಆತಂಕ ಕಾಡುತ್ತಲಿತ್ತು. ಆ ವೇಳೆಗೆ ರಘುರಾಮ ಅಣ್ಣ ಅವರು ಹಿಂದೆ ನಡೆಸಿದ ಅಧ್ಯಯನದ ಕೆಲವು ವಿಷಯಗಳನ್ನು ಕಳುಹಿಸಿಕೊಟ್ಟರು. ಇಷ್ಟು ಹೊತ್ತು ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದ ನನ್ನ ಜೀವ ಮತ್ತೆ ಹಿಂತಿರುಗಿ ಬಂದಂತಾಯಿತು. ಆದರೂ ಆ ವರ್ಷದಲ್ಲಿ ನಾನಿರಲಿಲ್ಲವಲ್ಲ? ಹೇಗೆ ಮಾಡಿಸುವುದು ಎಂಬ ಆತಂಕ ಕಾಡುತ್ತಲೇ ಇತ್ತು. ಹಾಗೇ ದಿನ ಕಳೆದಂತೆ ಸ್ವಲ್ಪ ಹಂತ ಹಂತವಾಗಿ ವಿಷಯ ತಿಳಿಯುತ್ತಾ ಹೋದಂತೆ ಧೈರ್ಯ ಮನೆ ಮಾಡುತ್ತಾ ಬಂದಿತು. ಹೀಗೆ ನಡೆದ ನಮ್ಮ ಅಧ್ಯಯನ ಹಾಗೂ ತಯಾರಿಯನ್ನು ಕೆಳಗಿನ ವಿವಿಧ ಆಯಾಮಗಳಲ್ಲಿ ನೋಡೋಣ.
ಪುಸ್ತಕಗಳು/ ಆಕರ ಗ್ರಂಥಗಳು ಹಾಗೂ ಲೇಖಕರು.
“ಪುಸ್ತಕಗಳು ಜ್ಞಾನ ಭಂಡಾರಗಳು” ಎಂಬ ರಾಜೇಂದ್ರ ಪ್ರಸಾದ್ ಅವರ ಮಾತಿನಂತೆ ನಮ್ಮ ಜ್ಞಾನ ವೃದ್ಧಿಯ ಸಲುವಾಗಿ ನಾವು ಅನೇಕ ಪುಸ್ತಕಗಳ ಮೊರೆ ಹೋದೆವು. ಅವು ಇಂತಿವೆ.
ಸಿದ್ಧತೆ ಹಾಗೂ ಪ್ರಾರಂಭ
ಡಿಸೆಂಬರ್ ೫ ನೇ ತಾರೀಖಿನಂದು ವಿಕಾಸ ಅಣ್ಣ ಹಾಗೂ ಬದರಿ ಅಣ್ಣ ಅವರು ಮಂಗಲಾಷ್ಟಕ, ತೀರ್ಥಪ್ರಬಂಧ ಇವುಗಳನ್ನು ಆಧರಿಸಿ ಸಪ್ತ ಸಾಗರಗಳು, ಮಹಾನದಿಗಳು ಎಂಬ ವಿಷಯದಡಿಯಲ್ಲಿ ಮಕ್ಕಳೊಡನೆ ಅಧ್ಯಯನದೊಂದಿಗೆ ಅಭ್ಯಾಸವನ್ನೂ ಪ್ರಾರಂಭ ಮಾಡಿಸಿದರು. ಇಲ್ಲಿ ನಮ್ಮ ಉದ್ದೇಶವಿದ್ದದ್ದು ನದಿಗಳು, ನದಿಗಳ ಮಹತ್ವ, ಭೌಗೋಳಿಕ ವಿಚಾರ, ಆಧ್ಯಾತ್ಮಿಕ ವಾಗಿ ನದಿಗಳ ಪ್ರಾಮುಖ್ಯ ಸೃಷ್ಟಿಯಾದಂದಿನಿಂದ ಇಂದಿನವರೆಗಿನ ನೀರಿನ ಬಳಕೆ ಹೇಗಿದೆ? ನೀರಿನ ಕೊರತೆಗೆ ಕಾರಣ ಇವುಗಳನ್ನು ಕುರಿತು ಅಧ್ಯಯನ ನಡೆಸುವುದಾಗಿತ್ತು. ಆ ಎಡೆಯಲ್ಲಿಯೇ ನಮ್ಮ ಪ್ರಯತ್ನವೂ ಸಾಗಿತ್ತು. ಆದರೆ ನಂತರ ಶ್ರೀನಿವಾಸ ಅಣ್ಣ,ಪ್ರಣವ ಅಣ್ಣ ಅವರು ನಮ್ಮ ಅಧ್ಯಯನದ ದಿಕ್ಕನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿದರು. ಆಧ್ಯಾತ್ಮಿಕ, ಆದಿ ದೈವಿಕ,ಆದಿ ಭೌತಿಕ,ಸಾಮಾಜಿಕ, ವೈಜ್ಞಾನಿಕ ಹೀಗೆ ಎಲ್ಲಾ ನೆಲೆಗಳಲ್ಲೂ ಅಧ್ಯಯನ ನಡೆದು ಒಂದು ಸಮಗ್ರ ಪ್ರಸ್ತುತಿಯಾಗಬೇಕು ಎಂದು ತಿಳಿಸಿದರು. ಅಂದಿನಿಂದ ನಮ್ಮ ಪಯಣ ಈ ಅಂಶಗಳೆಡೆಗೆ ಮುಖ ಮಾಡಿ ಹೊರಟಿತು.
ಆಧ್ಯಾತ್ಮಿಕ ನೆಲೆಗಟ್ಟು
ಆಧ್ಯಾತ್ಮಿಕವಾಗಿ ವಿಚಾರಗಳನ್ನು ಹೀಗೆ ವಿಭಾಗಿಸಲಾಯಿತು.
ಹೀಗೇ ಈ ಜಾಡನ್ನೇ ಹಿಡಿದು ಸಾಗುತ್ತಿರುವಾಗ ಮಂಗಲಾಷ್ಟಕ ಶ್ಲೋಕದಲ್ಲಿ ಬರುವಂತೆ ನದಿಗಳ ಹೆಸರುಗಳಿಗೆ ಕ್ರಮವಾಗಿ ತಂಡಗಳನ್ನು ಮಾಡಿ, ಅದಕ್ಕೊಬ್ಬ ಅಧ್ಯಾಪಕರನ್ನು ನೇಮಿಸಿ ಅಧ್ಯಯನ ನಡೆಸಲಾಯಿತು. ಇದರ ಪ್ರಕಾರ ನಮಗೆ ಬಂದ ನದಿ ಗೋದಾವರಿ. ( ಗೋ ದತ್ತ ವಾರಿ – ಗೋದಾವರಿ)
೬ ಮಕ್ಕಳ ತಂಡ ಇದಾಗಿತ್ತು. ಮಕ್ಕಳಿಗೋ ಎಲ್ಲಿಲ್ಲದ ಉತ್ಸಾಹ. ಅವರ ಉತ್ಸಾಹಕ್ಕೆ ತಕ್ಕ ಆಹಾರ ಒದಗಿಸುವ ಜವಾಬ್ದಾರಿ ನನ್ನದಾಗಿತ್ತು. ‘ಭಾರತದ ನದಿಗಳು’ ಎಂಬ ಪುಸ್ತಕ ಆಗ ನಮಗಿನ್ನೂ ಸಿಕ್ಕಿರಲಿಲ್ಲವಾದ್ದರಿಂದ ಇರುವ ಪುಸ್ತಕಗಳಲ್ಲಿಯದ್ದೇ ಲಭ್ಯವಿರುವ ಮಾಹಿತಿ ಇಟ್ಟುಕೊಂಡು ಕೆಲಸ ಪ್ರಾರಂಭ ಮಾಡಿದೆವು. ಅಂತರ್ಜಾಲದಲ್ಲು ಕೆಲವು ಮಹತ್ತರ ಮಾಹಿತಿಗಳು ದೊರೆತವು. ಅವೂ ಬಹಳ ನೆರವಾದವು. ಬೆಳಗಿನ ಕಥೆಯ ಸಮಯದಲ್ಲಿ ಬದರಿ ಅಣ್ಣ ಹೇಳಿದ ಗೋದಾವರಿ ನದಿಯ ಉಗಮದ ಹಿಂದಿನ ಕಥೆ ಹಾಗೂ ಗೋದಾವರಿ ಹೆಸರಿನ ವೃತ್ತಾಂತ ಕೇಳಿ ನಿಜವಾಗಿಯೂ ನನ್ನ ಮನಸು ಸ್ತಬ್ಧವಾಗಿತ್ತು. ಬಹಳ ಆಶ್ಚರ್ಯವೂ ಆಗಿತ್ತು. ಈ ಸಂಗತಿ ನನ್ನ ಕುತೂಹಲದ ಕದ ತಟ್ಟಿ ತೆರೆಸಿತು. ಹೀಗೇ ನಾನೂ ತಿಳಿದುಕೊಳ್ಳುತ್ತಾ, ತಿಳಿದಷ್ಟೂ ಹೆಮ್ಮೆ ಅನುಭವಿಸುತ್ತಾ, ಸಾರ್ಥಕ್ಯ ಮನೋಭಾವದಿಂದ ನನಗೆ ತಿಳಿದಿದ್ದನ್ನು ಮಕ್ಕಳಿಗೆ ತಿಳಿಸುತ್ತಾ, ತಿಳಿದು,ತಿಳಿಸುವ ಪಯಣ ಸಾಗುತ್ತಿತ್ತು. ಗೋದಾವರಿ ಕಥೆಯನ್ನು ಹೇಳುವ slide show ಒಂದನ್ನು ನಾವು ತಯಾರಿಸಿದೆವು. ಮಕ್ಕಳಿಗೆ ಖುಷಿಯೋ ಖುಷಿ. ನಂತರದಲ್ಲಿ ಭಾರತದ ನದಿಗಳು ಎಂಬ ಪುಸ್ತಕ ದೊರೆಯಿತು. ಅಲ್ಲಿ ನಮಗೆ ಸಾಕಷ್ಟು ಮಾಹಿತಿಗಳು ದೊರೆತವು.
ಮೇಲೆ ತಿಳಿಸಿರುವಂತೆ ಒಂದು ನದಿಯ ಕುರಿತು ಎಲ್ಲಾ ಆಯಾಮಗಳಲ್ಲೂ ಅಧ್ಯಯನ ಆಗಬೇಕಾದ್ದರಿಂದ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಆಧರಿಸಿ ನಮ್ಮ ಅಧ್ಯಯನ ಮುನ್ನಡೆಯಿತು. ಪೌರಾಣಿಕ ಹಾಗೂ ಆಧ್ಯಾತ್ಮಿಕ ನೆಲೆಯ ಅಧ್ಯಯನಕ್ಕಾಗಿ ತೀರ್ಥ ಪ್ರಬಂಧ ಹಾಗೂ ಮಂಗಳಾಷ್ಟಕ ಪುಸ್ತಕವನ್ನು ಹಾಗೂ ಕೆಲವು ಸುಳಾದಿಗಳನ್ನು ನಾವು ಆಧರಿಸಿದೆವು. ಈ ಹೊತ್ತಿಗೆಗಳಲ್ಲಿ ಭೌಗೋಳಿಕ ಅಂಶಗಳೊಂದಿಗೆ ನಮಗೆ ಆಧ್ಯಾತ್ಮಿಕ ವಿಷಯಗಳು ತಿಳಿದು ಬಂದವು. ಇಲ್ಲಿಯೇ ನಮಗೆ ಗೋ – ದತ್ತ – ವಾರಿ ಗೋದಾವರಿ ಎಂಬ ವೃತ್ತಾಂತ ತಿಳಿದದ್ದು. ಹಾಗೂ ಆ ನದಿಯ ಪಾವಿತ್ರ್ಯತೆಯ ಕುರಿತು, ದಕ್ಷಿಣ ಗಂಗಾ,ಗೌತಮೀ ಎಂಬಿತ್ಯಾದಿ ಹೆಸರುಗಳ ಕುರಿತು ಅನೇಕ ಮಾಹಿತಿಗಳು ದೊರೆತವು. ಇನ್ನು ಸುಳಾದಿಗಳಿಂದಾಗಿ ಭಗವಂತನ ಒಂದೊಂದು ನಾಡಿಗಳು ಒಂದೊಂದು ನದಿ ಎಂಬ ವಿಚಾರಗಳು ತಿಳಿದು ಬಂದಿತು. ಹಾಗೂ ನಾವು ಪ್ರತಿನಿತ್ಯ ಮಾಡುವ ಸಂಕಲ್ಪ ಶ್ಲೋಕದಲ್ಲಿ ಗೋದಾವರಿಯ ಉಲ್ಲೇಖವಿರುವಿದನ್ನು ಮಕ್ಕಳಿಗೆ ತಿಳಿಸಲಾಯಿತಯ. ವಾದಿರಾಜರು ರಚನೆ ಮಾಡಿದ ಕೃತಿಯೊಂದರಲ್ಲಿ ಗೋದಾವರಿ ಉಗಮದ ಕಥೆಯನ್ನು ಸುಂದರವಾಗಿ ಹೆಣೆದಿರುವುದು ಹಾಗೂ ಅದರ ಪಾವಿತ್ರ್ಯತೆಯನ್ನು ವರ್ಣಿಸಿರುವುದು ನಮಗೆ ದೊರೆಯಿತು. ಅದನ್ನು ಕೂಡಾ ಮಕ್ಕಳಿಗೆ ಹೇಳಿ ಕೊಡಲಾಯಿತು. ಗಂಗಾ ಆರತಿಯಂತೆಯೇ ಗೋದಾವರಿ ನದಿ ಹರಿಯುವ ಪ್ರದೇಶಗಳಲ್ಲಿ ಕುಂಭಮೇಳದ ರೀತಿ ಉತ್ಸವ ನಡೆಸಲಾಗುತ್ತದೆ ಎಂಬ ಅಂಶವನ್ನೂ ತಿಳಿಸಿಕೊಡಲಾಯಿತು. ನದೀ ತಾರತಮ್ಯ ಸ್ತೋತ್ರವನ್ನು ಹೇಳಿಕೊಡಲಾಯಿತು.
ಸಾಮಾಜಿಕವಾಗಿ ನೀರಿನ ಅಧ್ಯಯನ
ಇನ್ನು ಭೌಗೋಳಿಕ ಹಾಗೂ ಸಾಮಾಜಿಕ ಅಂಶಗಳ ಕುರಿತು ಹೆಚ್ಚು ಮಾಹಿತಿಗಳು ನಮಗೆ ಭಾರತದ ನದಿಗಳು, ಹಾಗೂ ಅಂತರ್ಜಾಲದ ಒಂದು document video ದಲ್ಲಿ ಹೆಚ್ಚು ಮಾಹಿತಿಗಳು ಲಭ್ಯವಾದವು. ಅಂತರ್ಜಾಲದ ಮಾಹಿತಿಯ ನಿಖರತೆಯ ಬಗ್ಗೆ ರಘುರಾಮ ಅಣ್ಣ ಅವರ ಸಲಹೆಯನ್ನು ಪಡೆದು ಮುಂದುವರಿದೆವು. ಮಹಾರಾಷ್ಟ್ರದ ನಾಸಿಕದ ತ್ರಯಂಬಕೇಶ್ವರದಲ್ಲಿ ಹುಟ್ಟುವ ಈ ಗೋದಾವರಿ ನದಿಯು ಪಶ್ಚಿಮಾಭಿಮುಖವಾಗಿ ಹರಿಯುತ್ತಾ ಅನೇಕ ಉಪನದಿಗಳನ್ನು ತನ್ನೊಟ್ಟಿಗೆ ಸೇರಿಸಿಕೊಳ್ಳುತ್ತಾ, ತನ್ನ ಪಾತ್ರವನ್ನು ಹಿರಿದಾಗಿಸಿಕೊಳ್ಳುತ್ತಾ ಅಲ್ಲಿಯ ಜನರಿಗೆ ಜೀವದಾನ ಮಾಡುತ್ತಾ ಕಡೆಯಲ್ಲಿ ಬಂಗಾಳಕೊಲ್ಲಿಯಲ್ಲಿ ವಿಲೀನವಾಗುತ್ತಾಳೆ. ‘ಪ್ರಾಣಹಿತ’ ಎಂಬ ಮೂರು ಉಪನದಿಗಳನ್ನೊಳಗೊಂಡ ನದಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗೂ ಗೋದಾವರಿ ಭಾರತದ ಎರಡನೆಯ ಅತ್ಯಂತ ದೊಡ್ಡ ನದಿಯಾಗಿದ್ದು, ಇದು ಜೀವದಾನ ಮಾಡಿರುವ ಪ್ರದೇಶ ಬಹು ದೊಡ್ಡ ಪ್ರಮಾಣದಲ್ಲಿದೆ ಎಂಬ ಪ್ರಮುಖ ಅಂಶಗಳು ತಿಳಿದು ಬಂದವು. ಅಂತರ್ಜಾಲದಲ್ಲಿ ನಮಗೆ ದೊರೆತದ್ದು ದೃಶ್ಯವಾದ್ದರಿಂದ (video) ಮಕ್ಕಳಿಗೆ ಭೌಗೋಳಿಕ ಅಂಶಗಳನ್ನು ತಿಳಿಸಲು ಬಹಳ ಹೊತ್ತು ಹಿಡಿಯಲಿಲ್ಲ. ಅತೀ ಉತ್ಸುಕರಾಗಿದ್ದ ಮಕ್ಕಳು ತಕ್ಷಣವೇ ಎಲ್ಲ ವಿಚಾರಗಳನ್ನು ಗ್ರಹಿಸಿದರು. ಅದರೊಟ್ಟಿಗೇ ಅಲ್ಲಿಯ ಪ್ರಾಣಿ ,ಪಕ್ಷಿ,ಆಹಾರ ಪದಾರ್ಥ, ಅಲ್ಲಿಯ ಸಂಸ್ಕೃತಿ, ಸಂಪ್ರದಾಯಗಳು, ಜನ ಜೀವನ ಶೈಲಿ, ಕಲಾಪ್ರಕಾರಗಳು,ವಸ್ತ್ರ ಸಂಹಿತೆ ಇತ್ಯಾದಿಗಳ ಕುರಿತು ಅಧ್ಯಯನ ಮಾಡಲಾಯಿತು. ಹೀಗೆ ಅಧ್ಯಯನ ಮಾಡುವಾಗ ಪ್ರತಿಯೊಂದು ಘಟ್ಟವೂ ಒಂದು ಕುತೂಹಲಕಾರಿ ಅಂಶಗಳನ್ನು ನಮಗೆ ತಿಳಿಸಿಕೊಡುತ್ತಾ ಹೋಯಿತು. ಸಮಯದ ಅಭಾವದಿಂದಾಗಿ ಹೆಚ್ಚು ಆಳಕ್ಕೆ ಇಳಿಯಲಾಗಲಿಲ್ಲವಾದರೂ ಇದಕ್ಕಾಗಿ ಸಮಯ ಮಾಡಿಕೊಂಡು ಅಧ್ಯಯನ ಮಾಡಬೇಕೆಂಬ ಮನಸ್ಥಿತಿಯನ್ನು ಅಣಿ ಮಾಡಿಕೊಟ್ಟಿತು. ಇಲ್ಲಿ ನಾವು ಮುಖ್ಯವಾಗಿ ಗಮನಿಸಿದ ಅಂಶಗಳು
ನದಿಯ ಉಗಮ, ಪಾತ್ರ, ಉಪನದಿಗಳು, ನದಿಯ ಉದ್ದ ,ಅಗಲ,ಪೌರಾಣಿಕ ಹಿನ್ನೆಲೆ, ಆಧ್ಯಾತ್ಮಿಕ ಮಹತ್ವ,ಜೀವಾಧಾರಕ ಪ್ರದೇಶಗಳು ಇತ್ಯಾದಿ.
ಸಂಪನ್ಮೂಲ ವ್ಯಕ್ತಿಗಳು
ನಮ್ಮ ಈ ಅಧ್ಯಯನದ ಪಯಣದಲ್ಲಿ ಸರಿಯಾದ ಮಾರ್ಗದಲ್ಲಿ ಹುಟ್ಟುಹಾಕಿ ನಾವು ನೆಲೆ ತಲುಪುವಲ್ಲಿ ನೆರವಾದವರು ಶ್ರೀ ಯಲ್ಲಪ್ಪ ರೆಡ್ಡಿ ಸರ್ ಹಾಗೂ ಶ್ರೀ ರಾಧಾಕೃಷ್ಣ ಬಡ್ತಿ ಸರ್ ಅವರು. ನಿಸರ್ಗದ ಮಡಿಲಲ್ಲೇ ತಮ್ಮ ಜೀವನವನ್ನು ಕಳೆಯುತ್ತಿರುವ ಇವರು ನೀಡಿದ ಪ್ರತಿಯೊಂದು ಮಾಹಿತಿಯೂ ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಗಟ್ಟಿ ಮಾಡುತ್ತಾ ಹೋಯಿತು. ಕೇವಲ ನಾವು ತಿಳಿಯುವುದಲ್ಲದೇ ಎಲ್ಲರಿಗೂ ತಿಳಿಯುವಂತೆ ತಿಳಿಸುವುದು ಹೇಗೆ ಎಂಬುದನ್ನು ಕೂಡಾ ಬಡ್ತಿ ಅಣ್ಣ ತಿಳಿಸಿಕೊಟ್ಟರು. ಯಾವರೀತಿ ತಯಾರಿ ಮಾಡಿಕೊಳ್ಳಬೇಕು!? ಯಾವ ರೀತಿ ಪ್ರಸ್ತುತಿ ಮಾಡಬೇಕು? ಯಾವ ದಿಕ್ಕಿನಲ್ಲಿನಮ್ಮ ಪಯಣ ಸಾಗಬೇಕೆಂಬುದನ್ನು ತುಂಬಾ ಚನ್ನಾಗಿ ತಿಳಿಸಿಕೊಟ್ಟರು. ಇಲ್ಲಿ ನಮ್ಮ ಗಮನ ಸೆಳೆದ ಮತ್ತೊಂದು ಪ್ರಮುಖ ವಿಷಯವೆಂದರೆ ನಮ್ಮ ರಾಮಾಯಣ ಮಹಾಭಾರತದಲ್ಲಿ ಪ್ರತಿಯೊಂದು ಪ್ರಮುಖ ಘಟನೆಗಳಲ್ಲೂ ನೀರು ಇದೆ ಎಂಬುದು. ಉದಾಹರಣಗೆ : ವೈಶಂಪಾಯನ ಸರೋವರ, ಯಮುನಾ ನದಿ, ಗಂಗಾ ನದಿ, ತಮಸಾನದಿ, ಸರಯೂ ನದಿ, ಇತ್ಯಾದಿ. ಇಲ್ಲಿಯವರೆಗೂ ಈ ಅಂಶದ ಕಡೆಗೆ ನಾವ್ಯಾರೂ ಗಮನ ಹರಿಸಿರಲೇ ಇಲ್ಲ. ಈ ವಿಷಯವನ್ನು ಕೇಳಿದಾಗ ಅಷ್ಟೇ ಅಗಾಧ ನನಗಾಯಿತು. ಮತ್ತಷ್ಟು ಹುರುಪನ್ನು ಬಡ್ತಿ ಅಣ್ಣ ಅವರ ವಿಚಾರಗಳು ನಮಗೆ ತಂದುಕೊಟ್ಟಿತು ಎಂದರೆ ತಪ್ಪಾಗಲಾರದು.
ಇನ್ನು ಯಲ್ಲಪ್ಪ ರೆಡ್ಡಿ ಅಣ್ಣ ಇವರ ಬಗ್ಗೆ ನಾನೇನು ಹೇಳಲಿ? ನನ್ನ ಪಾಲಿಗಂತೂ ಇವರು ನಡೆದಾಡುವ ಪ್ರಕೃತಿ ಮಾತೆಯೂ ಹೌದು, ಪ್ರಕೃತಿಯ ಕುರಿತಾದ ಒಂದು encyclopaedia ನೂ ಹೌದು, ಪ್ರಕೃತಿಯ ಮಡಿಲಲ್ಲಿ ಆಡ್ತಾ ಇರುವ ಮಗುವು ಹೌದು. ಬಹುಶಃ ಪ್ರಕೃತಿಯನ್ನು ಇವರು ನೋಡುವ ದೃಷ್ಟಿಯಿಂದ ನಾವ್ಯಾರೂ ನೋಡೇ ಇಲ್ಲ ಎನಿಸುತ್ತದೆ. ಪ್ರತಿಯೊಂದರಲ್ಲೂ ಜೀವ ಕಾಣುವ ವ್ಯಕ್ತಿತ್ವ ಇವರದು. ನಮಗೋ ನಮ್ಮನ್ನು ಹೊರತು ಪಡಿಸಿ ಉಳಿದದ್ದೆಲ್ಲವೂ ನಿರ್ಜೀವ. ಆದರೆ ಇವರು ಹಾಗಲ್ಲ. ಪ್ರಕೃತಿಯ ಪ್ರತಿಯೊಂದು ಕಣ ಕಣದೊಂದಿಗೂ ಸಂಭಾಷಣೆ ಮಾಡುತ್ತಾರೆ. ನಾನು ಕಂಡಂತೆ ಪ್ರಕೃತಿಯ ಯಾವ ಅಂಶವನ್ನೂ ಇವರು ಅದು, ಇದು ಎಂದು ಮಾತನಾಡಿಸಿದ್ದೇ ಇಲ್ಲ. ಅವಳು, ಇವಳು ಎಂದೇ ಮಾತನಾಡಿಸುತ್ತಾರೆ. ಪ್ರಕೃತಿಯ ಮಧ್ಯ ಇದ್ದು ಇದ್ದು ಇವರೂ ಕೂಡಾ ಪ್ರಕೃತಿ ಮಾತೆಯಂತೆಯೇ ಆಗಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಏಕೆಂದರೆ ಕೇವಲ ಕೊಡುವುದು, ಎಲ್ಲರನ್ನೂ ಪ್ರಿತೀಸುವುದು ಮಾತ್ರ ಇವರಿಗೆ ತಿಳಿದಿದೆ. ಈ ಇಳಿ ವಯಸ್ಸಿನಲ್ಲೂ ಅದೆಂಥಾ ಉತ್ಸಾಹ ಈ ಚೇತನಕ್ಕೆ!? ಎಂದು ಅವರ ಪ್ರತಿ ಮಾತಿನಿಂದಲೂ ಎನಿಸುತ್ತದೆ. ಮರದಿಂದ ಎಲೆ ಉದುರುವ ಪ್ರಕ್ರಿಯೆಯನ್ನು ಕೂಡಾ ಇವರು ವರ್ಣಿಸುವುದನ್ನು ಕೇಳುತ್ತಿದ್ದರೆ ಪ್ರೀತಿಯ ನಿಜವಾದ ಅರಿವು ನಮಗಾಗುತ್ತದೆ.
ನಮ್ಮ ಗೊಇದಾವರಿ ತಂಡದ ಕೆಲಸವನ್ನು ಗಮನಿಸಲು ಬಂದಾಗ ಮಕ್ಕಳು ಭರದಿಂದ, ಉತ್ಸಾಹದಿಂದ ವಿವರಿಸಲು ಮುಂದಾದರು, ತಾವು ಮಾಡಿದ ಮಾದರಿಗಳನ್ನು ತೋರಿಸಲು ಮುಂದಾದರು. ಆದರೆ ಅಣ್ಣ ಅದಾವುದನ್ನೂ ನೋಡದೇ ಮಗುವಿನ ಹೆಗಲ ಮೇಲೆ ಕೈ ಹಾಕಿ, ಪ್ರೀತಿಯಿಂದ
ಅಣ್ಣ : “ಅದೆಲ್ಲಾ ಬಿಡು ಗೋದಾವರಿ ಅಮ್ಮನ ಬಗ್ಗೆ ನಂಗೆ ಹೇಳು” ಎಂದರು ಆಗ ಆ ಮಗು: “ಅದನ್ನೇ ಹೇಳ್ತಿದ್ದೇನೆ ಅಣ್ಣ”
ಅಣ್ಣ : “ ಹೂಂ ಹೇಳು”
ಮಗು : ಮಹಾರಾಷ್ಟ್ರದ ನಾಸಿಕದಲ್ಲಿ ಗೋದಾವರಿ ಹುಟ್ಟುತ್ತದೆ..
ಅಣ್ಣ: ಅದು ಗೊತ್ತೋ ಅದೆಲ್ಲಾ ಬೇಡ ನಂಗೆ.. ನಾ ಹೇಳ್ತೀನಿ ಕೇಳು. ಅಮ್ಮ ನೀ ಹೇಳಿದಂಗೆ ಅಲ್ಲಿಂದ ಹರ್ಕೊಂಡು ಬರ್ತಾಳಲ್ಲಾ ಕೃಷ್ಣಾ ನೇ ಗೋದಾವರಿ ಅಮ್ಮ ಆಗ್ತಾಳೆ. ಅವಳೇ ಇಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹರ್ಕೊಂಡು ಬರ್ತಾಳೆ. ಈಗ ನೀನು ಹೇಳು ಯಾಕೆ ಅಮ್ಮ ಹೋಗಿ ಸಮುದ್ರ ಸೇರ್ತಾಳೆ?
ಮಗು: ಅದೂ… ಅದೂ…
ಅಣ್ಣ : ಯಾಕೆ ಗೊತ್ತಾ? ಈಗ ಹೇಳು ನೀರೊಳಗೆ ಇರ್ತಾವಲ್ಮ ಕೋಟಿ ಕೋಟಿ ಜೀವಿಗಳು ಅವು ನಮ್ ಹಂಗೆ ಹೋಟೆಲ್ ಗೆ ಹೋಗ್ತಾವಾ?
ಮಗು : ಇಲ್ಲ
ಅಣ್ಣ : ಅವುಕ್ಕೆ ಅನಾರೋಗ್ಯ ಆದರೆ ಅವಕ್ಕೆ ಆಸ್ಪತ್ರೆ ಇದಿಯಾ?
ಮಗು : ಇಲ್ಲ
ಅಣ್ಣ : ಮತ್ತೆ ಅವಕ್ಕೆ ಹಸಿವಾದರೆ ಊಟ, ಅನಾರೋಗ್ಯ ಆದರೆ ಔಷಧ ಯಾರು ಕೊಡ್ತಾರೆ? ಈಗ ನೋಡು ಸಮುದ್ರ ಅಪ್ಪ ಇದ್ದ ಹಂಗೆ. ನದಿ ಅಮ್ಮ ಇದ್ದ ಹಂಗೆ. ಅಪ್ಪ ಎಲ್ಲಾ ಜೀವಿಗಳಿಗೂ ಸಮಾಧಾನ ಮಾಡಿಸಿಕೊಂಡು ಕೂತಿರ್ತಾನೆ ಅಮ್ಮ ಬರ್ತಾಳೆ, ತಿಂಡಿ ತರ್ತಾಳೆ ಅಂತ. ಈ ಅಮ್ಮನೂ ಅಷ್ಟೇ ಮಕ್ಕಳನ್ನ ನೋಡಬೇಕು ಸಿಹಿಕೊಡಬೇಕು ಅಂತ ಓಡ್ಕೊಂಡು ಓಡ್ಕೊಂಡು ಹೋಗ್ತಾಳೆ. ಸಿಹಿ ಅಂದ್ರೆ ಏನು ಹೇಳು ಹೋಟೆಲ್, ಬೇಕರಿನಲ್ಲಿಸಿಗತ್ತಲಾ ಅದಾ? ಅಲ್ಲ …. ಅವಳು ಹರಿಯೋದು ಎಲ್ಲಿ ಹೇಳು ಕಾಡುಗಳಲ್ಲಿ. ಒಂದೊಂದು ಕಿಲೋಮೀಟರ್ ಗೂ ಒಂದು ಸಾವಿರ ರೀತಿ ಜೀವಪ್ರಭೇದ, ಔಷಧಿಯ ಗುಣ, ಮರ ಗಿಡಗಳು ಇವೆ ಗೊತ್ತಾ? ಹಂಗೆ ಎಲ್ಲಾದರ ನಡುವೆ ಹರಕೊಂಡು ಬರುವಾಗ ಮರಗಳ ಹಣ್ಣು ಅದು ಇದು ಎಲ್ಲಾ ಬಿದ್ದು, ಅದರ ರುಚಿ ಸಿಹಿ ಆಗಿರತ್ತೆ. ಅದಕೆ ನದಿ ನೀರು ಸಿಹಿ ಇರತ್ತೆ. ಯಾಕೆ ಹೇಳು? ಅವಳು ಹರ್ಕೊಂಡು ಬರೋವಾಗ ತನ್ನ ಸುತ್ತ ಮುತ್ತಲಿನ ಎಲ್ಲಾ ಅಂಶಗಳನ್ನು ಸೇರಿಸಿಕೊಂಡು ಬರ್ತಾಳೆ ಅದರಲ್ಲಿ ಔಷಧಿ ಗಿಡಗಳ ಮೇಲೆ ಹರಿದಾಗ ಔಷಧಿ ಗುಣನೂ ಇರತ್ತೆ. ಸಮುದ್ರದಲ್ಲಿದ್ದ ಜೀವಿಗಳಿಗೆ ಸಿಹಿನೂ ಅದೇ, ಔಷಧಿನೂ ಅದೇ…. ಅಮ್ಮ ಬರ್ತಾಳೆ ಅಂತ ಕಾಯ್ತಾ ಇರ್ತಾವಲಾ ಮಕ್ಕಳು ಅಮ್ಮ ಓಡೋಡಿ ಹೋಗಿ ತನ್ನ ಮಡಿಲಲ್ಲಿ ಇಟ್ಕೊಂಡಿರ್ತಾಳಲಾ ಅದನ್ನೆಲ್ಲಾ ಮಕ್ಕಳಿಗೆ ಕೊಟ್ಟುಬಿಡ್ತಾಳೆ. ಮಕ್ಕಳು ಪೂರ್ತಿ ಖುಷಿ ಆಗ್ತವೆ. ಆಮೇಲೆ ಅದೂ ಹೆಂಗೆ ಗೊತ್ತಾ ನದಿನೂ ಸಮುದ್ರನೂ ಸೇರೋ ಜಾಗ ಇರತ್ತಲಾ ಅದನ್ನ ‘ಈಸ್ಟುರಿ’ ‘Estuary’ ಅಂತ ಕರೀತಾರೆ. ಇದರ ವಿಶೇಷ ಏನು ಗೊತ್ತಾ ಅಮ್ಮ ಸಮುದ್ರ ಸೇರ್ತಾಳಲಾ ಅವಾಗ ನಿಧಾನವಾಗಿ ಉಪ್ಪಿನ ಅಂಶ ಸೇರ್ಕೊಳ್ತಾ ಹೋಗ್ತದೆ. ಪೂರ್ತಿ ಸಿಹಿ, ಸ್ವಲ್ಪ ಉಪ್ಪು, ಇನ್ನು ಸ್ವಲ್ಪ ಉಪ್ಪು, ಇನ್ನು ಸ್ವಲ್ಪ ಉಪ್ಪು, ಜಾಸ್ತಿ ಉಪ್ಪು, ಪೂರ್ತಿ ಉಪ್ಪು. ಹಿಂಗ್ಯಾಕೆ ಇರ್ತದೆ ಗೊತ್ತಾ? ಈಗ ಅಮ್ಮ ನಮ್ಮನೇಲಿ ನಮಗೇನಿಷ್ಟನೋ ಅದನ್ನೇ ಮಾಡಿ ಬಡಿಸ್ತಾಳಲ್ವಾ? ಹಾಗೇ ಇದೂನು. ಅಮ್ಮ ತಂದಿದೀನಿ ಅಂತ ಹಂಗೆ ಕೊಟ್ಟು ಬಿಡಲ್ಲ.. ಯಾರು ಯಾರಿಗೆ ಏನು ಬೇಕೋ ಅದನ್ನ ಮಾಡಿ ಕೊಡ್ತಾಳೆ. ಹಂಗೆ ಸ್ವಲ್ಪ ಸ್ವಲ್ಪ ಉಪ್ಪು ಮಿಶ್ರಣ ಆಗೋ ಜಾಗದಲ್ಲಿ ಎಷ್ಟೋ ಸಹಸ್ರ ಸಹಸ್ರ ಜೀವಿಗಳು ಇದಾವೆ ಗೊತ್ತಾ? ಅಮ್ಮ ಅಂದ್ರೆನೇ ಹಂಗೆ. ಅವಳ ಪ್ರೀತಿನೇ ಹಂಗೆ ಗೊತ್ತಾಯ್ತಾ?
ಮಕ್ಕಳು, ನಾನು : ಹೂಂ ಅಣ್ಣ ಗೊತ್ತಾಯ್ತು.
ಇಷ್ಟೆಲ್ಲಾ ಕೇಳಿದ ನನಗೆ ಅಂತರಂಗದಲ್ಲಾಗಲೇ ಒಂದು ಹೂವು ಅರಳಿ ಪರಿಮಳಿಸ ತೊಡಗಿತ್ತು. ಮೃದುವಾಗಿದ್ದ ಅದು ಕರಗಿ ಕಣ್ಣಂಚಲ್ಲಿ ಹನಿಯೊಂದನ್ನು ಮೂಡಿಸಿತ್ತು. ಅಬ್ಬಾ!!! ಪ್ರಕೃತಿಯನ್ನು ಹೀಗೂ ನೋಡಬಹುದಾ? ಎಂದೆನಿಸಿತು. ಈ ಅನುಭವದಿಂದ ಇಂದಿಗೂ ಹೊರ ಬರಲಾಗಿಲ್ಲ ಎನಗೆ. ಹೀಗೆ ಇಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನ , ಅನುಭವ ಎಲ್ಲವೂ ನಾನಿನ್ನೂ ಎಷ್ಟು ಚಿಕ್ಕವಳು? ಎಷ್ಟೊಂದಿದೆ ಕಲಿಯಲು? ಎಂಬ ಭಾವವನ್ನು ಮೂಡಿಸುತ್ತಿತ್ತು.
ಪರಿಸರ ಸ್ನೇಹಿ ಮಾದರಿಗಳು.
ವಿಷಯಕ್ಕೆ ಸಂಬಂಧಿಸಿದಂತೆ ಮಾದರಿಗಳನ್ನು ಮಾಡುವುದರಿಂದ ಮಕ್ಕಳಲ್ಲಿ ಆಸಕ್ತಿಯೂ ಬೆಳೆಯುತ್ತದೆ, ವಿವರಣೆ ಸುಲಭವಾಗುತ್ತದೆ ಹಾಗೂ ಬಹುದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂಬ ನಿಟ್ಟಿನಲ್ಲಿ ಮಾದರಿಗಳನ್ನು ಮಾಡುವುದರಲ್ಲಿ ನಮ್ಮ ಯೋಚನೆಯು ಸಾಗುತ್ತಿತ್ತು. ಪ್ಲಾಸ್ಟಿಕಾಸುರನ ರಾಜ್ಯದಲ್ಲಿ ಪ್ಲಾಸ್ಟಿಕ್ ಮತ್ತಿತರ ಪ್ರಕೃತಿಗೆ ಹಾನಿಯನ್ನುಂಟುಮಾಡುವ ಯಾವುದೇ ವಸ್ತುಗಳನ್ನು ಬಳಸದೇ ಮಾದರಿ ತಯಾರಿಸ ಬೇಕೆಂಬುದೇ ನಮ್ಮ ಮುಂದಿದ್ದ ದೊಡ್ಡ ಸವಾಲಾಗಿತ್ತು. ಅಂತೂ ಬಹುಪಾಲು ನಾವು ಇದರಲ್ಲಿ ಯಶಸ್ವಿಯಾದೆವು ಎಂದು ಹೇಳಲು ಖುಷಿಯಾಗುತ್ತದೆ. ಕೆಲವು ಅನಿವಾರ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಪರಿಸರ ಸ್ನೇಹಿಯಾದವುಗಳೇ ಆಗಿದ್ದು ಮನಸಿಗೆ ಬಹಳ ತೃಪ್ತಿ ಕೊಡುತ್ತಿತ್ತು. ಇದಕ್ಕಾಗಿ ಮಕ್ಕಳ ಮನವೊಲಿಸುವುದು ನಮಗೆ ಬಹಳ ಕಷ್ಟವಾಗಲಿಲ್ಲ ಏಕೆಂದೆ ಪ್ರತ್ಯಕ್ಷವಾಗಿ ಮಕ್ಕಳೇ ಹೊಸಕೆರೆಹಳ್ಳಿ ಕೆರೆ ಸ್ವಚ್ಛತಾ ಕಾರ್ಯದಲ್ಲಿ’ ಪಾಲ್ಗೊಂಡಿದ್ದರು ಅಲ್ಲದೇ ಇಂತಹ ವಸ್ತುಗಳನ್ನು ಎಸೆದವರನ್ನು ಬಾಯಿತುಂಬಾ ಶಪಿಸಿದ್ದರು ಆದ್ದರಿಂದ ನಾವು ಬಳಸುವ ವಸ್ತುಗಳಾವೂ ಪರಿಸರಕ್ಕೆ ಹಾನಿ ಮಾಡುವಂತಹದ್ದಾಗಿರಬಾರದೆಂಬ ಜಾಗೃತಿ ಅವರಲ್ಲಾಗಲೇ ಮೂಡಿಯಾಗಿತ್ತು. ಹಾಗಾಗಿ ನಮಗಿಂತಲೂ ಅವರೇ ಬಹಳ ಜಾಗರೂಕರಾಗಿ ಒಂದಲ್ಲ ಹತ್ತು ಬಾರಿ ಪರಿಶೀಲಿಸಿ, ವಸ್ತುಗಳನ್ನು ತರುತ್ತಿದ್ದರು. ಒಮ್ಮೊಮ್ಮೆಯಂತೂ ತಂಡ ತಂಡಗಳ ಮಧ್ಯೆ ದೀರ್ಘ ಚರ್ಚೆಯೇ ಏರ್ಪಟ್ಟು ಮಧ್ಯ ನಾವು ಪ್ರವೇಶ ಮಾಡಿ, ಅದನ್ನು ಸರಿದೂಗಿಸ ಬೇಕಾಗುತ್ತಿತ್ತು. ಅದು ಏನೇ ಆದರೂ ಮೈ ಕೈಗಳಿಗೆ ಬಣ್ಣ, ಮಣ್ಣು ಮೆತ್ತಿಕೊಂಡು, ಪುಟ್ಟ ಮಕ್ಕಳೆಲ್ಲರೂ ಪುಟ್ಟ ಕಲಾವಿದರಂತೆ ಬಣ್ಣ, ಕುಂಚ, ಮಣ್ಣು ಹಿಡಿದು ಓಡಾಡುತ್ತಿರುವುದನ್ನು ನೋಡುತ್ತಿದ್ದರೆ ಮನಸಿಗದೇನೋ ಒಂದು ರೀತಿ ಆನಂದ ಸಿಗುತ್ತಿತ್ತು. ನಾನಂತೂ ಈ ಸಮಯವನ್ನು ತುಂಬಾ ಚನ್ನಾಗಿ ಅನುಭವಿಸಿದೆ.
ನಾವು ಮಾಡಿದ ಮಾದರಿಗಳು
ಅನುಭವಗಳು ಹಾಗೂ ಕಲಿಕೆ
ಈ ಪಯಣದ ಪ್ರತಿಯೊಂದು ಹೆಜ್ಜೆಯಲ್ಲಿಯೂ ಒಂದೊಂದು ವಿಧವಾದ ಕಲಿಕೆ ಇದೆ. Estuary ಈ ಪದವನ್ನು ಜೀವನದಲ್ಲಿ ನಾನು ಮೊದಲು ಬಾರಿ ಕೇಳಿದ್ದು. ಗೋದಾವರಿ ಕಥೆಯನ್ನೂ ಕೂಡಾ ಮೊದಲ ಬಾರಿ ಕೇಳಿದ್ದು. ನೀರಿನ ಮಹತ್ವ ಹಾಗೆ ಹೀಗೆ ಎಂದು ಹಾರಾಡುತ್ತಿದ್ದ ನನಗೆ ನಿಜವಾದ ಅರ್ಥದಲ್ಲಿ ನೀರಿನ ಅಧ್ಯಯನ ಮಾಡುವ ಅವಕಾಶ ದೊರೆಯಿತು. ಸಾವಧಾನದಿಂದ ಮಾಡಿದ ಕೆಲಸಗಳು ಒಳ್ಳೆಯ ಫಲ ಕೊಡುತ್ತವೆ ಎಂಬುದು ಅರಿವಾಯಿತು. ದಾಸ ಸಾಹಿತ್ಯದಲ್ಲಿ ಜಲ, ಜಲಾಭಿಮಾನಿ ದೇವತೆಗಳು, ಜಲದ ಪಾವಿತ್ರ್ಯ,ಮಹತ್ವ,ಭಗವಂತನ ಅಂಗದಲ್ಲಿ ನದಿಗಳ ಪಾತ್ರ ಇವೆಲ್ಲದರ ಬಗ್ಗೆ ತಿಳಿಯುವ ಅವಕಾಶ ದೊರೆಯಿತು. ಅನಿವಾರ್ಯತೆಯೇ ಆವಿಷ್ಕಾರದ ತಾಯಿ ಎಂಬ ಸತ್ಯ ಮತ್ತೊಮ್ಮೆ ಅರಿವಾಯಿತು. ಹೀಗೆ ಒಟ್ಟಾರೆಯಾಗಿ ಒಂದು ಸುಂದರವಾದ ಪಯಣ ಇದಾಗಿತ್ತು. ನಾನೂ ಅಧ್ಯಯನ ಮಾಡಬಲ್ಲೆ ಎಂಬ ವಿಶ್ವಾಸದ ಆಶಾಕಿರಣವನ್ನು ಮೂಡಿತು.
Every individual is a leader in one way or the other. When he is face to face with challenges, he needs to rise up to the situation.
Management is a set of people who set the thought in motion. They are the ones who dream about a different concept all together. For an institution to be healthy, it should comprise of four different sets of people.
The job of the visionary doesn’t stop at giving brilliant ideas, it is very important to have constant talks with all the other three tiers of people making up the institution.
2. Collaborators: The second tier represents the collaborators. A collaborator will have constant interaction with the visionary by contributing his ideas too. A visionary gets brilliant ideas; all of which may not be practical. He does not know how to implement. So he talks to collaborators and decides on what can be done and what needs to be kept in the reserve.
3. Executives: Visionaries and Collaborators alone cannot run an institution. Here comes the role of Executives (represented by the third circle). These executives may not be able to contribute too much to the vision of the institution, but they are very good at implementing and converting the thoughts into actions. The difficulties and challenges faced during the time of implementation is exchanged with the collaborators and visionaries. Over a period of time these executives become collaborators and visionaries later on. They are not just managers to implement whatever is given to them, they also think about the plan of action and its repercussions. It is very important for executives to have continuous interaction with Collaborators and visionaries.
4. Grass root workers: The fourth and the outer most circle stands for the grass root workers. They may not think about the policies or how the policies came into being but they are very good in implementing in what is being given to them. All four categories are very crucial for the well-being of an institution. Without collaborators, vision doesn’t get transferred into practical ideas, which is transferred to executives through collaborators. Executives ensure these ideas are implemented with the help of grass root workers.
There are many qualities that a leader should possess. Three most important ones are:
Decisions are taken at the top level. It is like military; rules are made and employees are expected to implicitly follow them. Here the top level leaders tend to believe in a few chosen people and their opinions dictate the decisions.
In such an approach, Management gives support rather than giving decisions and instructions. Responsibilities are shared and not concentrated. Leaders empower their members by giving them chance to grow. They invest more on human resources rather than on infrastructure. The biggest investment is the human resource. More effort, time and money is spent on enabling the team.
Only if it passes through all the three gates, I should speak. If it doesn’t pass even one single gate, I shouldn’t.
ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯ ಚ
ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ
ಮೊದಲಿಗೆ ಪೂರ್ಣಪ್ರಮತಿ ಎಂಬ ವಿಶಾಲವಾಗಿ ಹಬ್ಬುತ್ತಿರುವ ವೃಕ್ಷಕ್ಕೆ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ. ಕೇವಲ ಒಂದು ಚೌಕಟ್ಟಿನಲ್ಲಿ ಸೀಮಿತವಾಗಿದ್ದ ನನ್ನ ಬುದ್ಧಿಶಕ್ತಿಯನ್ನು ಸಂಸ್ಥೆಯವರೆಗೆ ಎಳೆತಂದು ಸಮಾಜದಲ್ಲಿ ಒಂದು ಸ್ಥಾನವನ್ನು ಕಲ್ಪಿಸಿರುವ ಪೂರ್ಣಪ್ರಮತಿಗೆ ನಾನು ಆಭಾರಿಯಾಗಿರುವೆ.
ಪೂರ್ಣಪ್ರಮತಿ ಎಂಬ ಹೆಸರಿನಲ್ಲಿಯೇ ಪೂರ್ಣ ಎಂಬ ಶಬ್ದ ಇದೆ. ಪೂರ್ಣಪ್ರಮಾಣದಲ್ಲಿ ನಮ್ಮನ್ನು ಅಭಿವೃದ್ಧಿಗೊಳಿಸುವ, ಎಲ್ಲರೂ ಪೂರ್ಣ ಸಾಮರ್ಥ್ಯದಿಂದ ಶ್ರಮಿಸುವ, ಪೂರ್ಣತೆಯನ್ನು ಸಾಧಿಸುವ, ಒಂದು ಅದ್ಭುತವಾದ ಅಭೂತಪೂರ್ವವಾದ ಸಂಸ್ಥೆ ಇದು.
ಬ್ರಿಟೀಷರಿಂದ ಸಂಪೂರ್ಣವಾಗಿ ವಿರೂಪಗೊಂಡ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಪುನಃ ಬೆಳೆಯಬೇಕೆಂಬ ದೃಷ್ಟಿಯಲ್ಲಿ ಪ್ರಜ್ವಲವಾದ ಜ್ಯೋತಿಯಾಗಿ ಬಂದದ್ದೇ ಈ ಪೂರ್ಣಪ್ರಮತಿ. ಶ್ರೀ ವಿಶ್ವೇಶತೀರ್ಥರ ಅನುಗ್ರಹದಿಂದ ಅಶೀರ್ವಾದದ ಬಲದಿಂದ, ಹಿರಿಯರ ಮಾರ್ಗದರ್ಶನದಿಂದ, ಹಿತೈಷಿಗಳ ಬೆಂಬಲದಿಂದ, ಪೋಷಕರ ನಂಬಿಕೆಯಿಂದ, ಮಕ್ಕಳ ಉತ್ಸಾಹದಿಂದ ಈ ಸಂಸ್ಥೆ ಇಂದು ೧೦ ಸಂವತ್ಸರಗಳನ್ನು ಪೂರೈಸಿದೆ.
ಈ ಸಂಸ್ಥೆಯು ಆರಂಭವಾದಾಗಲೇ ನನಗೆ ಇಷ್ಟವಾಗಿತ್ತು. ಕಾರಣ ಇದರ ಉದ್ದೇಶ ನನ್ನ ಮನ ಮುಟ್ಟಿತ್ತು. ಇಂದಿನ ಲೌಕಿಕ ಶಿಕ್ಷಣದ ಜೊತೆ ಪ್ರಾಚೀನವಾಗಿ ಹರಿದು ಬಂದಿರುವ ನಮ್ಮ ಸಂಸ್ಕೃತಿಯ ಬೋಧನೆಯ ಜೊತೆ ಮಕ್ಕಳು ಮೇಲೆ ಬರುವ ಪ್ರಯತ್ನ ಇಲ್ಲಿ ನಡೆದಿತ್ತು. ಹತ್ತು ವರ್ಷಗಳ ನಂತರ ಇದರ ಯಶಸ್ಸಿನ ಬಾವುಟವು ಎಲ್ಲರಲ್ಲಿಯೂ ಸಂತಸ ತಂದಿದೆ. ಹೀಗೆ ಮಾಡುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಲೌಕಿಕ ಸಾಧನೆ ಹಾಗೂ ಸಾಂಸ್ಕೃತಿಕ ಅರಿವುಳ್ಳ ಪ್ರಜೆಗಳು ಭಾರತಕ್ಕೆ ಅದ್ಭುತವಾದ ಕೊಡುಗೆಗಳಾಗುವ ವಿಶ್ವಾಸವಿದೆ.
ಪೂರ್ವಪ್ರಾಥಮಿಕದಿಂದ ಹಿಡಿದು ಹಿರಿಯ ಪ್ರಾಥಮಿಕ ತರಗತಿಗಳಲ್ಲಿ ಕೇವಲ ಪಠ್ಯ ಪುಸ್ತಕದ ವಿದ್ಯೆ ಮಾತ್ರವಲ್ಲದೇ ಸ್ತೋತ್ರ, ಮಂತ್ರ, ಒಗಟು, ಗಾದೆ, ಮಹಾಭಾರತ, ರಾಮಾಯಣ, ಭಾಗವತ ಕಥನಗಳಿಂದ ಕೂಡಿದ ಕುತೂಹಲಕರವಾದ ಸಂಗತಿಗಳನ್ನು ಇಲ್ಲಿ ಅನುಭವಿಸಬಹುದು. ಹಾಗೆಯೇ ಕುಮುದ್ವತಿಯ ಪುನಶ್ಚೇತನ, ವೃಷಭಾವತಿಯ ಸ್ವಚ್ಛತೆ ಈ ರೀತಿ ಸಾಮಾಜಿಕ ಸೇವೆಯನ್ನು ಮಾಡುವುದರಲ್ಲಿ ಪೂರ್ಣಪ್ರಮತಿಯು ಶ್ರದ್ಧೆ, ಉತ್ಸಾಹಗಳಿಂದ ಮುಂದಾಗಿದೆ. ಮಕ್ಕಳಲ್ಲಿ ಈ ರೀತಿಯ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನದಲ್ಲಿ ಪೂರ್ಣಪ್ರಮತಿ ದಾಪುಗಾಲಿಟ್ಟಿದೆ. ’ಜಿ.ಎಸ್.ಐ ಸೆಂಟರ್’ ನಂತಹ ಹಲವಾರು ಪ್ರಸಿದ್ಧ ಸಂಸ್ಥೆಗಳಿಗೆ ಭೇಟಿ ನೀಡಿ ತನ್ನ ಕಲಿಕೆಯ ದೃಷ್ಟಿಕೋನವನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ.
ಸರಳ-ಸುಂದರ ದೇವಭಾಷೆಯಾದ ಸಂಸ್ಕೃತಕ್ಕೆ ಇಲ್ಲಿ ಒಳ್ಳೆಯ ಪ್ರಾಶಸ್ತ್ಯವಿದೆ. ಸಂಸ್ಕೃತ ಭಾಷೆಯ ಕಲಿಕೆಯಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚುತ್ತಿರುವುದನ್ನು ವಿದೇಶಿಗರು ಮನಗಂಡಿದ್ದಾರೆ. ವಿದೇಶಿ ಸಂಸ್ಕೃತಿಗೆ ಮಾರುಹೋದ ಭಾರತದಲ್ಲಿ ಪೂರ್ಣಪ್ರಮತಿಯಂತಹ ಸಂಸ್ಥೆಗಳಿಂದ ಸಂಸ್ಕೃತಕ್ಕೆ ಒಳ್ಳೆಯ ಆಶ್ರಯ ದೊರಕಿದೆ.
ಎಲ್ಲಕ್ಕಿಂತ ಸಂತಸದ ವಿಷಯವೆಂದರೇ, ಎಲ್ಲ ಶಾಲೆಗಳಲ್ಲಿ Teacher’ Day, Children’s day Mother’s day ಎಂದು ಆಚರಿಸಿದರೇ, ಇಲ್ಲಿ ಸಾಂಪ್ರದಾಯಿಕವಾಗಿ ಭಾಗೀರಥಿ ಜಯಂತಿ, ಹಯಗ್ರೀವ ಜಯಂತಿ, ಗುರುಪೂರ್ಣಿಮಾ, ಧನ್ವಂತರಿ ಜಯಂತಿ, ವನಪೂಜಾ, ಗೀತಾಜಯಂತಿ, ಸೀತಾಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದರಿಂದ ನಮ್ಮ ಸಂಸ್ಕೃತಿಯ ಬೆಳವಣಿಗೆಯೊಂದಿಗೆ ಎಷ್ಟೋ ಪೋಷಕರಿಗೆ ತಿಳಿಯದ ಆಚರಣೆಗಳು ತಿಳಿಯುವಂತಾಗಿದೆ.
ಮಕ್ಕಳ ಕಲಿಕೆಯ ಜೊತೆಗೆ ಮಕ್ಕಳಿಂದ ಕಲಿಯುವ ಅನುಭವ ಅದ್ಭುತ. ಮಕ್ಕಳ ಜೊತೆ ಮಕ್ಕಳಾಗಿ ಇರುವ ಅವಕಾಶ ಸುಂದರವಾದದ್ದು ಮತ್ತು ಆಹ್ಲಾದವನ್ನುಂಟುಮಾಡುವಂತದ್ದು. ಅವರ ಛಲವನ್ನು ನೋಡಿ ಇನ್ನಷ್ಟು ಕೆಲಸ ಮಾಡಬೇಕೆಂಬ ಹುರುಪು ಬರುತ್ತದೆ. ಒಳ್ಳೆಯ ವಿಷಯ ನಮಗೆ ಹೊಳೆದಾಗ ಕೂಡಲೆ ಮಕ್ಕಳಿಗೆ ಅದನ್ನು ಯಾವ ರೀತಿಯಲ್ಲಿ ಮುಟ್ಟಿಸಬಹುದೆಂಬ ಯೋಚನೆ ಬರುತ್ತದೆ. ಹಾಗಾಗಿ ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ಯೋಜನೆ ಮಾಡಿ ಮಕ್ಕಳಿಗೆ ಕಲಿಸಿದಾಗ ಸಿಗುವ ಆನಂದಕ್ಕೆ ಪಾರವೇ ಇಲ್ಲ.
ಸಮಾಜದ ಬಗ್ಗೆ ಜಾಗೃತಿಯನ್ನು ಮಕ್ಕಳಿಗೆ ವಿವಿಧ ರೀತಿಯಲ್ಲಿ ತಿಳಿಸಲಾಗುತ್ತದೆ. ಉದಾಹರಣೆಗೆ workshop ಗಳನ್ನು ಆಯೋಜಿಸಲಾಗುತ್ತದೆ. ಅಂತಹ ಸಭೆಗಳಿಂದ ಕಲಿತ ಒಂದು ವಿಚಾರವನ್ನು ಉದಾಹರಣೆಗೆ ತೆಗೆದುಕೊಂಡರೆ – ಪ್ಲಾಸ್ಟಿಕ್ ಬಳಕೆಯ ಬಗ್ಗೆ ಮಾಹಿತಿ, ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಪೂರ್ಣಪ್ರಮತಿಯ ಪೂರ್ಣಬೆಂಬಲವಿದೆ. ಇಲ್ಲಿ ಕೇವಲ ಮಕ್ಕಳಿಗಲ್ಲದೆ ಪೋಷಕರಿಗೂ ಹಾಗೂ ಶಿಕ್ಷಕರಿಗೆ ವಿಶೇಷ ತರಗತಿಗಳು ಇರುತ್ತವೆ. ಪೋಷಕರಿಗೆ ’ಮಕ್ಕಳನ್ನು ಬೆಳೆಸುವ ಕ್ರಮ’ ವಿಚಾರಗಳನ್ನು ತಿಳಿಸಲಾಗುತ್ತಿದೆ. ಅಧ್ಯಾಪಕರಿಗೆ ಹೊಸ ಹೊಸ ರೀತಿಯಲ್ಲಿ ಹೇಗೆ ಪಾಠ ಮಾಡಬಹುದು ಎಂದು ಉಪಾಯಗಳನ್ನು ಸಲಹೆಗಳನ್ನು ನೀಡಲಾಗುತ್ತಿದೆ.
ಎಲ್ಲ ಶಾಲೆಗಳು Annual day ಆಚರಿಸುತ್ತವೆ. ಆದರೆ ಇಲ್ಲಿ ಉತ್ಸವವೆಂದು ಆಚರಣೆ ಮಾಡಲಾಗುತ್ತದೆ. ಕೇವಲ ಒಂದು ದಿನ ಉತ್ಸವವಾಗಿರದೆ ೪-೫ ದಿನಗಳ ಸಂಭ್ರಮದ ಆಚರಣೆಯಾಗುತ್ತದೆ. ಪ್ರತಿವರ್ಷ ಒಂದು ಸಂವತ್ಸರ ಸೂತ್ರವನ್ನು ತೆಗೆದುಕೊಂಡು ಅದಕ್ಕೆ ಸಂಬಂಧಪಟ್ಟಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಉದಾಹರಣೆಗೆ ವಿಷಯ “ನದಿಗಳು” ಎಂದಿದ್ದರೆ ಅದರ ಬಗ್ಗೆ ವಿಚಾರವಿನಿಮಯ ಮಾಡಿ ಅದರ ಬಗ್ಗೆ ಅನೇಕ ಚಟುವಟಿಕೆಗಳನ್ನು ಮಾಡಿ, ಸಾಂಸ್ಕೃತಿಕವಾಗಿ ಆಚರಿಸಿ, ಯಶಸ್ವಿಯಾಗಿ ಆಯೋಜಿಸುವುದನ್ನು ನಾನು ಕಣ್ಣಾರೆ ನೋಡಿ ಭಾಗವಹಿಸಿ ಆನಂದಿಸಿದ್ದೇನೆ. ಖ್ಯಾತ ಮತ್ತು ಗೌರವಾನ್ವಿತ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಅವರ ನಮ್ಮ ಸಮ್ಮಿಲದ ಕಾಲದಲ್ಲಿ ಸಾಕಷ್ಟು ವಿಚಾರಗಳನ್ನು ಅರಿತಿದ್ದೇನೆ.
ಈ ಸಂಸ್ಥೆಗೆ ನಾವು ಹಲವಾರು ರೀತಿಯಲ್ಲಿ ಕೈ ಜೋಡಿಸಬಹುದು. ಶಿಕ್ಷಕರಾಗಿ, ದಾನಿಗಳಾಗಿ ಅಥವಾ ಸ್ವಯಂ ಸೇವಕರಾಗಿ ಸಹಾಯ ಮಾಡಬಹುದು. ಪೂರ್ಣಪ್ರಮತಿ ಒಂದು ಪರಿವಾರದಂತೆ ನಮ್ಮನ್ನು ಅಕ್ಕ-ಅಣ್ಣ ಎಂದು ಕರೆದಾಗ ಎಲ್ಲರೂ ನಮ್ಮವರೇ ಎಂದು ಭಾಸವಾಗುತ್ತದೆ. ವಸುದೈವ ಕುಟುಂಬಕಂ ಎಂದು ಕೇವಲ ಬಾಯಿಮಾತಿನಲ್ಲಿ ಹೇಳದೆ ಈ ಸೂತ್ರವನ್ನು ಅಳವಡಿಸಿಕೊಂಡು ಮುಂದುವರೆಯಲಾಗುತ್ತಿರುವುದು ಈ ಸಂಸ್ಥೆಯ ವೈಶಿಷ್ಟ್ಯ. ೧೦ ವರ್ಷಗಳಲ್ಲಿ ಬೆಳೆದ ಈ ಸಂಸ್ಥೆ ಇನ್ನೂ ನೂರಾರು ವರ್ಷಗಳ ಕಾಲ ಅಭಿವೃದ್ಧಿಗೊಂಡು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಗುರುಗಳಲ್ಲಿ ಪ್ರಾರ್ಥಿಸುವೆ. ಮಕ್ಕಳಿಗೆ ಏನಾದರೂ ಹೇಳಿಕೊಡುವೆ ಎಂಬ ಧೈರ್ಯವನ್ನು ನೀಡಿರುವ ಈ ದೇಗುಲದಂತಹ ವಿದ್ಯಾಲಯ ಇನ್ನು ಸಾವಿರ ಜನರನ್ನು ಉದ್ಧಾರಮಾಡಲಿ ಎಂದು ಆಶಿಸುತ್ತೇನೆ. ಉತ್ತಮ ಬಳ್ಳಿಯಂತೆ ಈ ಶಾಲೆಯ ಕೀರ್ತಿ ಯಶಸ್ಸು ಸಾಧನೆಯ ಪ್ರಮಾಣ ಹಬ್ಬಲಿ ಎಂದು ಅಭಿಲಾಶಿಸುತ್ತೇನೆ.
ವಂದೇ ಮಾತರಂ
ಮಗುವಿನ ಬಾಲಲೀಲೆಗಳನ್ನು ಕಂಡು ತಾಯಿ ಆನಂದಿಸುವಷ್ಟು ಬಹುಶಃ ಪ್ರಪಂಚದಲ್ಲಿ ಬೇರೆ ಯಾರಿಗೂ ಆ ಸುಖ ದೊರಕಲಾರದೇನೋ. ಅಧ್ಯಾಪಕರದ್ದೂ ಹೆಚ್ಚೂ ಕಡಿಮೆ ಅದೇ ಆನಂದ. ಪುಟಾಣಿಗಳಾಗಿ ಶಾಲೆಗೆ ಸೇರಿ ನಮ್ಮ ಕಣ್ಣ ಮುಂದೆಯೇ ಬೆಳೆದು ದೊಡ್ಡ ದೊಡ್ಡ ಚಿಂತನೆಗಳನ್ನು ಮಾಡುತ್ತಾ “ನಾವು ಮುಂದಿನ ಪ್ರಜೆಗಳಾಗಲು ಸಿದ್ಧರಾಗುತ್ತಿದ್ದೇವೆ” ಎಂದು ಮನಗಾಣಿಸುವ ಒಂದೊಂದು ಕ್ಷಣವೂ ಪರಮಾನಂದ. ಅಂತಹ ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಹಪಹಪಿ ನನ್ನದು. ಬಿಡುವಾದಾಗ ಒಮ್ಮೆ ಶಾಲೆ ಕಡೆ ಬನ್ನಿ, ಮಕ್ಕಳ ಜೊತೆ ಮಾತಾಡುತ್ತಾ ಇನ್ನೂ ಆನಂದಿಸಿ…
-೦-
ಒಂಭತ್ತನೆ ತರಗತಿಯ ಮಕ್ಕಳಿಗೆ ನಮ್ಮಲ್ಲಿ ಹತ್ತನೆಯ ತರಗತಿಯ ಪ್ರಥಮ ಭಾಷೆಯ ಕನ್ನಡ ಪಠ್ಯವನ್ನು ಹೇಳಿಕೊಡಲಾಗುತ್ತದೆ. ಅದರಲ್ಲಿ ಜನಪದ ಶೈಲಿಯ ಒಗಟುಗಳು ಎಂಬ ಒಂದು ಪಾಠ. ಪ್ರಶ್ನೆ ಉತ್ತರ ಎರಡೂ ತಾಳಬದ್ಧವಾದ ಹಾಡಿನ ರೀತಿಯಲ್ಲೇ ಇರುತ್ತದೆ. ಪರೀಕ್ಷೆಯಲ್ಲಿ ಮಕ್ಕಳಿಗೆ ತಾವೇ ಸ್ವಂತ ಒಗಟನ್ನು ರಚಿಸಲು ನೀಡಲಾಗಿತ್ತು. ಮಕ್ಕಳ ಈ ರಚನೆಗಳನ್ನು ನೋಡಿದರೆ ನಿಮಗೂ ಆ ಆನಂದ ಸಿಗಬಹುದು…
(೧)
ಮೂರು ಕಾಲುಂಟು, ಮುದುಕನಲ್ಲ
ಒಂದು ಕಣ್ಣುಂಟು, ಶುಕ್ರನಲ್ಲ
ಶಬ್ದ ಮಾಡುವುದು, ಗುಡುಗು ತಾನಲ್ಲ
ನಾನು ಯಾರೆಂದು ಹೇಳೆಲೋ ಬಾಲ
ಮೂರು ಚಕ್ರ, ಒಂದು ಹೆಡ್ ಲೈಟು
ಗಡಗಡ ಎನ್ನುವ ಶಬ್ದ ಉಂಟು
ನಿನ್ನ ಪ್ರಶ್ನೆಗೆ ಉತ್ತರ ಬಂತು
ಪ್ರಶ್ನೆಗುತ್ತರ ಆಟೋರಿಕ್ಷವೆಂದು
(೨)
ಹತ್ತು ತಲೆಯುಂಟು, ರಾವಣನಲ್ಲ
ಚಿಕ್ಕ ಕಿರೀಟವುಂಟು, ದೇವೇಂದ್ರನಲ್ಲ
ದೊಡ್ಡ ಬಾಲವುಂಟು ಹನುಮನಲ್ಲ
ನನ್ನ ಹೆಸರನ್ನ ಹೇಳೆಲ ಬಾಲ
ಚಿಕ್ಕ ಟೋಪಿಯು ಹತ್ತು ಗೀಟುಂಟು
ಬಾಲವೊಂದುಂಟು ಅಂಕು ಡೊಂಕು
ನಿನ್ನ ಒಗಟಿಗೆ ಉತ್ತರ ಬಂತು
ಉತ್ತರವಿದಕೆ ಹಾಗಲಕಾಯಿ ಎಂದು (ಸುಶ್ರುತ – ೯ನೇ ತರಗತಿ)
(೧)
ತಾಕಿದರೆ ಮುಚ್ಚುವುದು
ಮುಟ್ಟಿದರೆ ಚುಚ್ಚುವುದು
ಇದೊಂದು ಬಹಳ ಬೇಕಾದ ಗಿಡ
ಯಾವುದೆಂದು ಹೇಳುವಿರಾ?
ಯಾವುದೆಂದು ನಾನೇ ಹೇಳುವೆನು
ನಾಚಿಕೆ ಮುಳ್ಳಲ್ಲವೇನಯ್ಯ!
(೨)
ಸೂರ್ಯೋದಯದಿ ಅರಳುವುದು
ಸೂರ್ಯಾಸ್ತದಿ ಬಾಡುವುದು
ನೀರಲ್ಲಿ ಬಾಳುವುದು
ನಿನಗೆ ಗೊತ್ತೇನಯ್ಯ?
ನನಗೆ ಗೊತ್ತಯ್ಯ
ಕಮಲವಲ್ಲವೇ ಕಣಯ್ಯಾ ! (ಹರ್ಷ – ಒಂಭತ್ತನೆಯ ತರಗತಿ)
(೧)
ನನ್ನ ಬಟ್ಟೆ ಸ್ಲೀರೇನ್ಕೈಮಾ
ಮಧ್ಯದಲ್ಲಿ ಸಿಹಿನೀರಮ್ಮ
ಚರ್ಮದ ಬಣ್ಣ ಬಿಳೀಯಮ್ಮ
ನಾನ್ಯಾರೆಂದು ತಿಳೀತಾಮ್ಮ ?
(೨)
ನನ್ನಂತೆ ಇನ್ನೊಬ್ಬನಿಲ್ಲ
ನನ್ನನ್ನು ಹತ್ತುವುದೆಂದರೆ ಸುಲಭವಲ್ಲ
ಕಲ್ಲು ಮಣ್ಣು ನನ್ನಲ್ಲೆಲ್ಲಾ
ನಾನ್ಯಾರಂತ ಹೇಳಲ್ವಾ ? (ಊರ್ಜಿತ – ಒಂಭತ್ತನೆಯ ತರಗತಿ)
(೧)
ದ್ರೌಪದಿಯಂತೆ ಇರುವರು ನನಗೆ ಐದು ಗಂಡಂದಿರು
ಕಾಲಿಗೆ ತಾಕಿದರೆ ಸರಸ್ವತಿಯೆಂದು ಕಣ್ಣಿಗಿಕ್ಕುವರು
ಲೇಖಕರು ಸಾಧಕರು ಸಿಕ್ಕರೆ ಬಿಡರು ನನ್ನನ್ನು
ಹೇಳಿ ನೀವೆಲ್ಲರು ಯಾರು ನಾನು?
(೨)
ಇರುವುದೊಂದು ಕಣ್ಣು ಕಾಗೆ ನಾನಲ್ಲ
ಬಿಲದಲ್ಲಿ ಇಡುವರು ಹಾವು ನಾನಲ್ಲ
ಇರುವುದೊಂದು ಕಾಲಿನಿಂದ ಚುಚ್ಚುತಾರೆ ನನ್ನ
ಹೇಳಿರಿ ನೋಡೋಣ ಯಾರು ನಾನು? (ಅನಘಾ.ಜಿ – ಒಂಭತ್ತನೆಯ ತರಗತಿ)
-೦-
ಮರುದಿನ ನೀಲಾಳಿಗೆ ನಾಚಿಕೆ ಮುಳ್ಳನ್ನು ಮೊದಲು ಕಂಡ ಜಾಗದಲ್ಲೆ ಕಾಣುವ ಮನಸ್ಸಾಯಿತು. ನಾಚಿಕೆ ಮುಳ್ಳನ್ನು ತನ್ನ ಊರಲ್ಲಿ ಕಂಡಿಲ್ಲ ಎಂದಲ್ಲ. ಆದರೆ ಈಗ ಅದರ ಮಹತ್ವವೆಲ್ಲ ಗೊತ್ತಾಗಿದೆ. ಈಗ ನೋಡಿವ ರೀತೆಯೇ ಬೇರೆಯಾಗಿದೆ. ನಮ್ಮ ಮನೆ ಬೀದಿಯ ಕೊನೆಯಲ್ಲೇ ಇರುವ ನಾಟಿ ಔಷಧಿಯ ಚಿಕ್ಕ ಗುಡಿಸಲನ್ನು ನೋಡೇ ಇರುವುದಿಲ್ಲ. ಬೇರೆ ಊರಿನ ಯಾರೋ ಒಬ್ಬರು ಬಂದು ನಿಮ್ಮ ಊರಿನಲ್ಲಿ ಒಬ್ಬ ಒಳ್ಳೆಯ ನಾಟಿ ವೈದ್ಯರಿದ್ದಾರೆ ಎಂದಾಗ, ಹೌದಾ, ನಮ್ಮ ಊರಿನಲ್ಲಾ, ಏನು ಅವರ ಹೆಸರು, ಇರುವುದೆಲ್ಲಿ? ಎಂದು ಕೇಳುವೆವು. ವಿಳಾಸ ಎಲ್ಲಾ ಹೇಳಿದಾಗ ’ಹೌದು, ನಮ್ಮ ಬೀದಿಯ ಕೊನೆಯಲ್ಲೇ ಇದೆ, ಒಂದು ಗುಡಿಸಲು, ಅದೇನಾ?’ ಎಂದು ಆಶ್ಚರ್ಯದಿಂದ ಕೇಳುತ್ತೇವೆ. ಆಮೇಲೆ ಬೀದಿ ಕೊನೆಯ ಗುಡಿಸಲು ನಾಟಿ ವೈದ್ಯರ ಬಗ್ಗೆ ಒಂದು ತುಂಬು ಭಾವನೆಯು ಬರುವುದು. ಭಗವಂತನ ಗುಣಗಳನ್ನು, ಮಹಿಮೆಯನ್ನು ಅರಿತಾಗ ಮೂಡುವ ಭಕ್ತಿ ಇಮ್ಮಡಿಯಾಗುವಂತೆ ನಮ್ಮ ಸುತ್ತಲಿರುವ ಗಿಡಗಳ ಔಷಧಿಯ ಗುಣಗಳನ್ನು ಅರಿತಾಗ ಅವುಗಳನ್ನು ಕಾಣುವ ಕಣ್ಣು ಬೇರೆಯೇ ಆಗುವುದು.
ಹಾಗೆಯೇ ನೀಲಾಳಿಗೆ ಈಗ ನಾಚಿಕೆ ಮುಳ್ಳನ್ನು ನೋಡುವುದರಲ್ಲಿ ಏನೋ ಆನಂದವಾಗುತ್ತಿದೆ. ಬೆಳಗ್ಗೆ ಸುಮಾರು ೮.೦೦ ಗಂಟೆಯ ಸಮಯಕ್ಕೆ ನೀಲಾ ಯಥಾ ಪ್ರಕಾರ ಹಸುಗಳನ್ನು ಮೇಯಿಸಲು ಹೊರಡಲು ಮನೆಯಿಂದ ಹೊರಬಂದಳು. ಅಷ್ಟರಲ್ಲಿ ಬೀದಿಯಲ್ಲಿ ನಡೆಯುತ್ತಿದ್ದ ಒಂದು ದೊಡ್ಡ ಗಲಾಟೆ ಕೇಳಿಸಿತು. ಅದೇನೆಂದು ನೋಡಲು ಅಲ್ಲಿಗೆ ಓಡಿ ಹೋದಳು. ನೋಡಿದರೆ ಬಸಪ್ಪ ತನ್ನ ಹೆಂಡತಿಯನ್ನು ಹಿಡಿದುಕೊಂಡು ಹೊಡೆಯುತ್ತಿದ್ದಾನೆ. ಅವನ ಅಮ್ಮ ಬಿಡಿಸಲು ಹೋದರೂ ಕೇಳದೆ ಹೊಡೆಯುತ್ತಿದ್ದ. ನೀಲಾಳಿಗೆ ಇದು ಬಹಳ ಹೊಸದಾದ ಸನ್ನಿವೇಶ. ಗಂಡ ಹೆಂಡತಿಯನ್ನು ಹೊಡೆಯುವುದನ್ನು ಅವಳು ಎಂದೂ ಕಂಡೆ ಇರಲಿಲ್ಲ. ಧೈರ್ಯವಾಗಿ ಮುಂದೆ ಹೋಗೆ ಕಾರಣವೇನೆಂದು ಕೇಳಿದಳು. ಕೋಪದಲ್ಲಿದ್ದ ಬಸಪ್ಪ ನಿನಗ್ಯಾಕಮ್ಮ ಆ ವಿಚಾರ, ಸುಮ್ಮನೆ ಹೋಗು, ಹೊಸದಾಗಿ ನಮ್ಮೂರಿಗೆ ಬಂದಿದ್ದೀಯ ಎಂದು ಗದರಿಸಿದ. ನೀಲಾ ಕುತೂಹಲ ತಡೆಯದೆ ಮತ್ತೆ ಕಾರಣವನ್ನು ಕೇಳಿದಳು. ಆಗ ಅವರ ಅಮ್ಮ ’ಅಯ್ಯೋ ಮನೆಯಲ್ಲಿ ಈಗಾಗಲೆ ೫ ಮಕ್ಕಳು ಇದ್ದಾರೆ, ಈಗ ಸುಬ್ಬಿ ಮತ್ತೆ ಬಸುರಿಯಾಗಿದ್ದಾಳೆ, ಅದಕ್ಕೆ ಅವಳನ್ನು ನಮ್ಮ ಬಸಪ್ಪ ಹೊಡೆಯುತ್ತಿದ್ದಾನೆ’ ಎಂದು ಗೊಳೋ ಎಂದು ಅತ್ತಳು. ನೀಲಾಳಿಗೆ ಆಶ್ಚರ್ಯವಾಯಿತು. ಮಕ್ಕಳೆಂದರೆ ಎಲ್ಲರೂ ಖುಷಿಪಡಬೇಕಲ್ಲ, ಇವನ್ಯಾಕೆ ಹೊಡೆಯುತ್ತಿದ್ದಾನೆ ಎಂದು. ಮತ್ತೆ ಅಮ್ಮನನ್ನು ಕೇಳಿದಳು, ’ಇದರಲ್ಲಿ ಹೊಡೆಯುವ ವಿಷಯ ಏನಿದೆ? ಖುಷಿಪಡಬೇಕಲ್ಲ?’ ಎಂದು. ಅದಕ್ಕೆ ಅವರ ಅಮ್ಮ ಹೇಳಿದರು ’ಇರುವ ಐದು ಮಕ್ಕಳಿಗೇ ಊಟಕ್ಕೆ ಬಟ್ಟೆಗೆ ಇಲ್ಲ, ಇನ್ನು ಆರನೆಯ ಮಗು ಬಂದರೆ ಉಪವಾಸವಿದ್ದು ಸಾಯಬೇಕಷ್ಟೆ’ ಎಂದು ಅತ್ತಳು.
ಈಗ ನೀಲಾಳಿಗೆ ಸಮಸ್ಯೆ ಅರ್ಥವಾಯಿತು. ಅಲ್ಲಿಂದ ಹೊರಟು ಮನೆಗೆ ಬಂದಳು. ಅಲ್ಲಿ ಒಂದು ಬೆಕ್ಕು ನೆನ್ನೆ ತಾನೆ ಹಾಕಿದ್ದ ತನ್ನ ೬ ಮರಿಗಳಿಗೆ ಹಾಲುಣಿಸುತ್ತಿದ್ದುದನ್ನು ಕಂಡಳು. ಅವಳಿಗೆ ಆನಂದವಾಯಿತು. ಅತ್ತೆಯ ಬಳಿ ಬಂದು ಬೀದಿಯಲ್ಲಿ ನಡೆದ ಜಗಳವನ್ನು ಹೇಳಿದಳು. ಅತ್ತೆ ಸುಶೀಲಮ್ಮ ’ಅಯ್ಯೋ, ಆ ಬಸಪ್ಪನದ್ದು ಯಾವಾಗಲೂ ಇದ್ದದ್ದೇ, ಎಲ್ಲಾ ತಪ್ಪು ಸುಬ್ಬಿಯದ್ದೆ ಎನ್ನುವ ರೀತಿಯಲ್ಲಿ ಆಡ್ತಾನೆ, ಅವನಿಗೆ ಬುದ್ಧಿ ಇಲ್ಲವಾ, ಮಕ್ಕಳನ್ನು ಸಾಕುವ ಯೋಗ್ಯತೆ ಇಲ್ಲ ಎಂದ ಮೇಲೆ ಮಕ್ಕಳು ಯಾಕೆ ಬೇಕು? ಈಗ ಅವಳು ಬಸುರಿ ಎಂದು ತಿಳಿದ ನಂತರ ತೆಗೆಸಿಕೊಳ್ಳಲು ಹೇಳುತ್ತಾನೆ, ಪಾಪಾ ಅವಳ ಮನಸ್ಸು ಹೇಗಾಗಿರಬೇಕು, ಅವಳು ಮೂಕ ಪ್ರಾಣಿಯಂತೆ ಸುಮ್ಮನೆ ನೋವು ನುಂಗುತ್ತಾಳೆ, ಇದು ಇದ್ದದ್ದೆ ಬಿಡು, ನೀನು ಹಸು ಮೇಯಿಸಲು ಹೇಗಿಲಿಲ್ಲವಾ?’ ಎಂದು ಕೇಳಿದಳು.
ಕೂಡಲೆ ನೀಲಾ ಬಸಪ್ಪನ ಮಕ್ಕಳನ್ನು ಮತ್ತು ಬೆಕ್ಕಿನ ಮಕ್ಕಳನ್ನು ಒಮ್ಮೆಲೆಗೆ ಕಣ್ಣ ಮುಂದೆ ತಂದುಕೊಂಡಳು. ಪ್ರಾಣಿ ಪ್ರಪಂಚದಲ್ಲಿ ೫-೬ ಮಕ್ಕಳು ಸಹಜ ಆದರೆ ಮನುಷ್ಯರಲ್ಲಿ ಇದು ದುಬಾರಿ. ಹಾಗಾದರೆ ಸಸ್ಯ ಪ್ರಪಂಚದಲ್ಲಿ ಹೇಗಿರಬೇಕು ಎಂದು ಚಿಂತಿಸಿದಳು. ಇವಳು ಇದ್ದಕ್ಕಿದ್ದಂತೆ ಎಲ್ಲೋ ಕಳೆದು ಹೋದದ್ದನ್ನು ಕಂಡು ಸುಶೀಲಮ್ಮ ಎಚ್ಚರಿಸಿ ’ಹೊರಡಮ್ಮ, ಹೊರಡು ಬಿಸಿಲಾಗುವ ವೇಳೆಗೆ ಬರುವಿಯಂತೆ ಹೊರಡು’ ಎಂದು ಕಳುಹಿಸಿದಳು. ನಿನ್ನೆ ನೋಡಿದ್ದ ನಾಚಿಕೆ ಮುಳ್ಳಿನೊಂದಿಗೆ ಇನ್ನೇನೋ ಹುಡುಕುವ ಕಣ್ಣಿನೊಂದಿಗೆ ನೀಲಾ ಕಾಡಿನ ದಾರಿ ಹಿಡಿದಳು.
ಇದೀಗ ನಿಮ್ಮ ಕೆಲಸ: ಒಮ್ಮೆಲೆಗೆ ಅನೇಕ ಮಕ್ಕಳನ್ನು ಪಡೆಯುವುಗಳ ಪಟ್ಟಿಯನ್ನು ತಯಾರು ಮಾಡಿರಿ. ಮುಂದಿನ ತಿಂಗಳ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.