Anandini – January

 

ಸಂಪಾದಕೀಯ:

ಜನವರಿ – ಪೂರ್ಣಪ್ರಮತಿಯ ಉತ್ಸವದ ತಯಾರಿಯ ತಿಂಗಳು. ಇಡಿಯ ವರ್ಷ, ಎಲ್ಲ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ವಿದ್ಯೆಯನ್ನು ಪೋಷಕರಿಗೆ, ಸಾರ್ವಜನಿಕರಿಗೆ ಪ್ರದರ್ಶನಮಾಡುವ ಕಾಲ. ಫೆಬ್ರವರಿ ೩ – ೪ ರಂದು ಪೂರ್ಣಪ್ರಮತಿಯ ಉತ್ಸವ ನಡೆಯಲಿದೆ.

ಈ ಬಾರಿಯ ನಮ್ಮ ಶಾಲೆಯ ಸಂವತ್ಸರ ಸೂತ್ರ ( theme) ಭಕ್ತಿ. ದೈವಭಕ್ತಿ, ರಾಷ್ಟ್ರ ಭಕ್ತಿ ಹಾಗೂ ಗುರು ಭಕ್ತಿಯನ್ನಾಧರಿಸಿ ಕಾರ್ಯಕ್ರಮಗಳ ತಯಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಡೆಯುವ ವಿಚಾರ ಸಂಕಿರಣದ ವಿಷಯವೂ ‘ಭಕ್ತಿ ಸಂಗೀತ ಮತ್ತು ಶಿಕ್ಷಣ’. ಭಕ್ತಿ ಸಂಗೀತದಲ್ಲಿ ಮಿಂದೇಳುವ, ಅಣ್ಣಮಾಚಾರ್ಯರ ೮೦೦ ಕೃತಿಗಳಿಗೆ ರಾಗ ಸಂಯೋಜಿಸಿ ಹಾಡಿ ಜನಪ್ರಿಯಗೊಳಿಸಿದ ಶ್ರೀ ಗರಿಮೆಲ್ಲ ಬಾಲಕೃಷ್ಣ ಪ್ರಸಾದರಿಗೆ ಪೂರ್ಣಪ್ರಮತಿ ಸಮ್ಮಾನ್ ನಡೆಯಲಿದೆ.
ಭಕ್ತಿ ಆಧಾರಿತ ನಾಟಕ, ನರ್ತನಗಳನ್ನು ಮಕ್ಕಳು ಅಂತರ್ಗತಗೊಳಿಸಿಕೊಂಡು ಅಭಿನಯಮಾಡುವುದನ್ನು ನೋಡುವುದೇ ಒಂದು ಹಬ್ಬ. ಹಳೆಯ ವಸ್ತುಗಳನ್ನು ಉಪಯೋಗಿಸಿ ಕಸವನ್ನು ರಸವಾಗಿಸಿ, ರಂಗಸಜ್ಜಿಕೆಯನ್ನು ನಮ್ಮ ಶಿಕ್ಷಕರೇ ಮಾಡುತ್ತಿರುವುದು ಮತ್ತೊಂದು ಹಬ್ಬ. ಅದೊಂದು ಬಿಡುವಿಲ್ಲದ ಕಾರ್ಯಾಗಾರ.

ಬೆಂಗಳೂರು ಉತ್ತರ – ದಕ್ಷಿಣ ಜಿಲ್ಲೆಯಲ್ಲೇ ಪ್ರಥಮಬಾರಿಗೆ “ಮಕ್ಕಳ ಲೋಕ ಅದಾಲತ್” ಕಾರ್ಯಕ್ರಮವನ್ನು ಪೂರ್ಣಪ್ರಮತಿಯು ಏರ್ಪಡಿಸಿತ್ತು. ಮಕ್ಕಳು ಜವಾಬ್ದಾರಿ ಪ್ರಜೆಗಳಾಗುವಂತೆ ತರಬೇತು ನೀಡುವ ‘ನಮ್ಮ ವಾರ್ಡ್ ನ ಅಭಿವೃದ್ಧಿ ನಮ್ಮಹೊಣೆ’ ಎನ್ನುವ ಹೊಣೆಗಾರಿಕೆಯನ್ನು ಕಲಿಸುವ ಈ ವಾರ್ಡ್ ಸಭೆಗೆ ಇಲ್ಲಿನ ವಿಧಾನಸಭಾ ಸದಸ್ಯರಾದ ಶ್ರೀರವಿ ಸುಬ್ರಹ್ಮಣ್ಯ, ನಗರಸಭಾ ಸದಸ್ಯೆ ಶ್ರೀಮತಿ ನಂದಿನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿ ವಾರ್ಡ್ ನ ಸಮಸ್ಯೆಗಳ ಬಗ್ಗೆ ಮಕ್ಕಳ
ಜೊತೆ ಚರ್ಚೆ ನಡೆಸಿದ್ದು ಮಕ್ಕಳಿಗೆ ಪೌರನೀತಿಯ ಪಾಠವಾಗಿತ್ತು.
ಈ ಎರಡೂ ಕಾರ್ಯಕ್ರಮಗಳು ವಿದ್ಯಾಭ್ಯಾಸದ ಅಂಗವೇ ಆಗಿದ್ದು ಮಕ್ಕಳ ವ್ಯಕ್ತಿತ್ವ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದು ಪೂರ್ಣಪ್ರಮತಿಯ ಅನುಭವ.

ಶಶಿರೇಖಾ ಮಣೂರ್
ಸಂಪಾದಕರು.

ತಿಂಗಳ ತಿಳಿಗಾಳು:

‎17 ‎December ‎2017: ಪೋಷಕರಿಗಾಗಿ ಕ್ರೀಡಾಸ್ಪರ್ಧೆಗಳು

Purnapramati conducted Parents Sports Meet on 17/12/2017 Ganesh, our sport’s faculty was incharge of the event. Around 38 parents had registered and around 30 of them enthusiastically participated. They expressed their happyness orally and through mails.

 

22 ‎December ‎2017: ಕನ್ನಡ ಹಬ್ಬ

ಕನ್ನಡ ಹಬ್ಬ- ಪೂರ್ಣಪ್ರಮತಿಯಲ್ಲಿ ನಾಡಹಬ್ಬವನ್ನು ವಿಶಿಷ್ಟರೀತಿಯಲ್ಲಿ ಆಚರಿಸಲಾಗುತ್ತದೆ. ಕನ್ನಡ ಕಲಿಕೆಯೇ ಪ್ರಾಧನ್ಯತೆ ಪಡೆದು ವಯೋಮಾನಕ್ಕೆ ತಕ್ಕಂತೆ ಸ್ಪಷ್ಟ ಅರ್ಥಪೂರ್ಣ ಮಾತು, ಓದು, ಬರಹ, ಸ್ವಂತ ಬರಹಗಳ ಬಗ್ಗೆ ವರ್ಶದುದ್ದಕ್ಕೂ ವಿಶೇಷ ತರಬೇತಿ ನೀಡಲಾಗಿರುತ್ತದೆ. ಕನ್ನಡ ಹಬ್ಬದಲ್ಲಿ ತಿಂಗಳುದ್ದಕ್ಕೂ ವಿವಿಧ ಹಂತಗಳಲ್ಲಿ ಎಲ್ಲಾ ಮಕ್ಕಳಿಗೂ ಆಯಾ ಹಂತದ ಸ್ಪರ್ಧೆ ನಡೆಸಲಾಯಿತು. ಪುಟ್ಟ ಮಕ್ಕಳು ತಮ್ಮ ಪರಿಚಯ ಮಾಡಿಕೊಂಡರೆ, ಮುಂದಿನ ಹಂತದವರು ಅಕ್ಷರ ಬರಹ, ಪ್ರಬಂಧ, ಲೇಖನ, ಕವನಗಳ ರಚನೆ ಮಾಡಿದರು. ಕನ್ನಡ ಹಬ್ಬಕ್ಕೆ ಅತಿಥಿಗಳಾಗಿ ಅಗಮಿಸಿದವರಿಗೆ ಮಕ್ಕಳ ಬರಹಗಳನ್ನು ಮೊದಲೇ ತಲುಪಿಸಿ, ಆ ಹಿನ್ನೆಲೆಯಲ್ಲಿ ಹಬ್ಬದ ದಿನ ಅವರು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.

ಪೂರ್ವಪ್ರಾಥಮಿಕ ಹಾಗೂ ಕಿರಿಯಪ್ರಾಥಮಿಕ ತರಗತಿಗಳ ಕನ್ನಡ ಹಬ್ಬಾಚರಣೆಯಲ್ಲಿ ಅತಿಥಿಗಳಾಗಿ ಮತ್ತೂರು ಸುಬ್ಬಣ್ಣ ಅವರು ಭಾಗವಹಿಸಿದ್ದರೆ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಕವಿ ಶ್ರೀ ಹೆಚ್.ಎಸ್.ವೆಂಕಟೇಶಮೂರ್ತಿಯವರು ಹಾಗೂ ಸಾಹಿರಿ ಶ್ರೀಮಧುಸೂದನ ಅವರು ಆಗಮಿಸಿ ಹಬ್ಬಕ್ಕೆ ಕಳೆಕಟ್ಟಿಸಿದರು.

‎23 ‎ ‎December 2017: Ward Sabha

ಮಕ್ಕಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು, ಪ್ರಜಾಪ್ರಭುತ್ವ, ಸರ್ಕಾರ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಇರುವ ಬಹು ಮುಖ್ಯ ಮಾರ್ಗವೆಂದರೆ ಮಕ್ಕಳ ವಾರ್ಡ್ ಸಭೆ. ನಗರದ ಮೊಟ್ಟ ಮೊದಲ ಮಕ್ಕಳ ವಾರ್ಡ್ ಸಭೆಯನ್ನು ನಮ್ಮ ಶಾಲೆಯ ವತಿಯಿಂದ ೨೩/೧೨/೨೦೧೭ರಂದು ಗಿರಿನಗರದ ವಿಜಯ ಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಈ ಸಭೆಯಲ್ಲಿ ಬಸವನಗಿಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ರವಿ ಸುಬ್ರಹ್ಮಣ್ಯ, ಗಿರಿನಗರ ವಾರ್ಡ್‌ನ ಕಾರ್ಪೊರೇಟರ್ ಶ್ರೀಮತಿ ನಂದಿನಿ ವಿಜಯ ವಿಟ್ಠಲ, ಬಿಬಿಎಮ್‌ಪಿಯ ಸ್ಥಳೀಯ ವಾರ್ಡ್‌ನ ಅಭಿಯಂತರರಾದ ಶ್ರೀಯುತ ರಮೇಶ್, ಗಿರಿನಗರ ಪೋಲೀಸ್ ಠಾಣೆಯ ಸಹಾಯಕ ಪೋಲೀಸ್ ನಿರೀಕ್ಷಕರಾದ ರಾಮಕೃಷ್ಣ, ಪೂರ್ಣಪ್ರಮತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶಶಿರೇಖಾ, ವಿಜಯ ಭಾರತಿ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಮಚಂದ್ರ, ಪ್ರಾಂಶುಪಾಲರಾದ ಶ್ರೀಮತಿ ಉಷಾಕಿರಣ್, ಗಿರಿನಗರದ ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿಗಳಾದ ಶ್ರೀ ವಾಸುದೇವ್, ಡಾ||ಯಲ್ಲಪ್ಪ ರೆಡ್ಡಿ ಮತ್ತು ಸಿ.ಎಮ್.ಸಿ.ಎ. ಸಂಸ್ಥೆಯ ರೀಜನಲ್ ಹೆಡ್ ಮರುಳಪ್ಪ ಅವರು ಹಾಜರಿದ್ದರು. ಪೂರ್ಣಪ್ರಮತಿ, ವಿಜಯಭಾರತಿ, ಆಡನ್ ಪಬ್ಲಿಕ್ಚ್ ಮತ್ತು ಜ್ಞಾನದೀಪ್ತಿ ಶಾಲೆಗಳ ೧೨೦ಕ್ಕೂ ಹೆಚ್ಚು ಮಂದಿ ಮಕ್ಕಳು ಹಾಗೂ ಶಿಕ್ಷಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಡಾಂಬರು ಹಾಕಿದ ಕೆಲವೇ ದಿನಗಳಲ್ಲಿ ರಸ್ತೆಗಳನ್ನು ಅಗೆಯಲಾಗುತ್ತದೆ, ವಿವಿಧ ಇಲಾಖೆಗಳ ನಡುವೆ ಸಮನ್ವಯ ಏಕೆ ಸಧ್ಯವಾಗುತ್ತಿಲ್ಲ, ಕೆರೆಗಳಿಗೆ ತ್ಯಾಜ್ಯ ಸೇರೆದಂತೆ ತಡೆಯಲು ಸಾಧ್ಯವಿಲ್ಲವೇ… ಪೋಲೀಸರೇ ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನಗಳಲ್ಲಿ ಸಾಗಾಗುತ್ತಾರೆ. ಜನರು ನಿಯಮ ಪಾಲಿಸುವಂತೆ ನೋಡಿಕೊಳ್ಳಬೇಕಾದವರೇ ಹೀಗೆ ಮಾಡಿದರೆ ಹೇಗೆ? ಹೀಗೆ ನಗರದ ಹತ್ತಾಋ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಒಂದರಮೇಲೊಂದರಂತೆ ಪ್ರಶ್ನಿಸಿದರು.

ಮಕ್ಕಳು ಕೇಳಿದ ಅನೇಕ ಪ್ರಶ್ನೆಗಳಿಗೆ ರವಿಸುಬ್ರಹ್ಮಣ್ಯ ಹಾಗೂ ನಂದಿನಿ ವಿಜಯ ವಿಠ್ಠಲ ಅವರು ಉತ್ತರಿಸಿದರು. ಈ ಸಂವಾದ ಕಾರ್ಯಕ್ರಮವು ನಗರದಲ್ಲಿನ ಆಗುಹೋಗುಗಳ ಬಗ್ಗೆ ಮಕ್ಕಳ ಗಮನ ಎಷ್ಟಿದೆ ಎಂಬುದನ್ನು ತಿಳಿಯ ಪಡಿಸಿತು.

‎30 December ‎2017: Nature Science Internship Programme

Nature Science Internship Programme had its final show during the Seva Utsava conducted by Adamya Chetana every year during December 30, 31, Jan 1 and 2. All the 15 participating schools were given a topic to be displayed in the exhibition area in the National High School grounds.

Our topic was Water Management. We tried to depict our Karnataka’s traditional water management systems, how it has been messed up with the example of Bellundur lake and some tips that can be followed at home to manage water efficiently. We also had a working model of a sewage treatment plant. Along with this we tried to show the best practices at our school in Bengaluru and anandavana.

The event saw a huge crowd of more than 10,000 every day and our children were busy explaining to the curious onlookers. Some senior citizens who saw the chart on traditional water system recollected their memories on their childhood, their village and its water management system and gave us more information. They felt bad and helpless about the present systemt. Some of them felt bad about  the present lakes. Many were happy about the best practices in theschool and appreciated the school’s initiative.

Children had a good exposure explaining the audience and answering their questions. Some times they were tired and took turns to explain. On Jan 1st we had a stage performance where children danced for the Gange song composed by Sriram, our teacher then and now a well wisher. Many appreciated the efforts of the children.

Overall it was a enriching experience and personally i could meet a lot of people working who shared common interests with our school’s thought.
 

05 January 2018: A Visit to G.K.V.K.

ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ೦೫/೦೧/೨೦೧೮ರಂದು ಗಾಂಧಿ ಕೀಟ ವಿಜ್ಞಾನಕೇಂದ್ರಕ್ಕೆ ಭೇಟಿ ನೀಡಿದ್ದರು. ಬಗೆಯ ಬಗೆಯ ರೀತಿ, ಬಣ್ಣಗಳ ಕೀಟಗಳನ್ನು ನೋಡಿದ ಮಕ್ಕಳ ಕಣ್ಣುಗಳಲ್ಲಿ ಕುತೂಹಲದ ಜೊತೆಗೆ ಆಶ್ಚರ್ಯವೂ ಇಣುಕಿತ್ತು. ಆ ಕೀಟಗಳ ವಿಚಿತ್ರ ಆಕೃತಿ, ಅವುಗಳ ಗುಣಸ್ವಭಾವಗಳನ್ನು ಮಕ್ಕಳು ಆಸಕ್ತಿಯಿಂದ ಅಭ್ಯಸಿಸಿದರು. ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಮತ್ತು ಎಲೆ ಕಡ್ಡಿಗಳ ಆಕಾರದ ಕೀಟಗಳನ್ನು ನೋಡಿದಾಗಲಂತೂ ಮಕ್ಕಳು ತೆರೆದ ಬಾಯಿ ಮುಚ್ಚಲೇ ಇಲ್ಲ. ನಂತರ ಮಧ್ಯಾಹ್ನದ ಊಟದಲ್ಲಿ ಮಕ್ಕಳು ತಾವು ಕಂಡ ಅದ್ಭುತ ಹಾಗೂ ವಿಸ್ಮಯಕಾರಿ ಕೀಟಜಗತ್ತಿನ ವಿಷಯಗಳನ್ನು ಅಧ್ಯಾಪಕರೊಡನೆ ಮತ್ತು ಇತರ ಸ್ನೇಹಿತರೊಡನೆ ಹಂಚಿಕೊಂಡರು. ಹೀಗೆ ಒಬ್ಬೊಬ್ಬರು ಒಂದೊಂದು ವಿಷಯಗಳನ್ನು ಗಮನಿಸಿದ್ದರೂ, ಪರಸ್ಪರ ಹಂಚಿಕೊಂಡಾಗ ಅನೇಕ ವಿಷಯಗಳನ್ನು ತಿಳಿದುಕೊಂಡಂತಾಯಿತು.  ಹೀಗೆ ಕೀಟ-ಜಗತ್ತಿನ ವಿಸ್ಮಯಲೋಕದ ಭೇಟಿ ಸಾರ್ಥಕವಾಯಿತು.

ಸ್ಕೌಟ್ ಕ್ಯಾಂಪ್: 

ನಮ್ಮ ಶಾಲೆಯ ದೈಹಿಕ ಶಿಕ್ಷಕರಾದ ಗಣೇಶ್ ಅವರು ಶಾಲೆಯಲ್ಲಿ ಸ್ಕೌಟ್ ವಿಭಾಗವನ್ನು ಆರಂಭಿಸಲಿದ್ದಾರೆ. ಅದಕ್ಕಾಗಿ ತಾವು ದೊಡ್ಡಬಳ್ಳಾಪುರದಲ್ಲಿ ನಡೆಯುವ ಸ್ಕೌಟ್ ಕ್ಯಾಂಪ್ ಗೆ ಹೋಗಿ ವಿಶೇಷ ತರಬೇತಿಯನ್ನು ಪಡೆದುಬಂದಿರುತ್ತಾರೆ. ಮಕ್ಕಳ ಶಿಸ್ತುಬದ್ದ ಜೀವನಕ್ಕಾಗಿ ಬೇಕಾದ ಅಡಿಪಾಯ, ಸ್ವತಂತ್ರವಾಗಿ ಬದುಕುವ ಕಲೆ, ದೇಶದ ಒಳಿತಿಗಾಗಿ ಸದಾ ಕಟಿಬದ್ಧರಾಗಿರುವುದು, ಮೊದಲಾದ ವಿಷಯಗಳನ್ನು ಬೋಧಿಸುವುದು ಈ ವಿಭಾಗದ ಮುಖ್ಯ ಉದ್ದೇಶವಾಗಿದೆ. ಸಮಾಜದ ಹಿತಕ್ಕಾಗಿ ಮಿಡಿಯುವ ಮನೋಭಾವನೆ, ಯಾವುದೇ ಮೂಲಸೌಲಭ್ಯಗಳಿಲ್ಲದೆಯೂ ಬದುಕುವ ಕಲೆಗಳನ್ನು ಈ ಸ್ಕೌಟ್ ವಿಭಾಗದಲ್ಲಿ ಮಕ್ಕಳಿಗೆ ಕಲಿಸುವ ಸಂಕಲ್ಪ ನಮ್ಮ ದೈಹಿಕಶಿಕ್ಷಕರದ್ದಾಗಿದೆ.

‎26 ‎January ‎2018: ಗಣರಾಜ್ಯೋತ್ಸವ

 

Our school celebrated Republic day in the school ground. Sri Anantha .B.S., Deputy Secretary of Scouts & guides, Bengaluru division was the chief guest. The day also marked the inauguration of Scouts activities in the school.

 

ಶಿಕ್ಷಕರ ಅಂಕಣ:

Adorable pig-nosed frog completely new to science found in India

The frog is called Bhupathy’s purple frog (Nasikabatrachus bhupathi), in honor of Dr. Subramaniam Bhupathy, a well known Indian herpetologist who lost his life surveying the Western Ghats in 2014. Its appearance is characterized by a shiny purple coat, light blue rings around small eyes and a signature pig snout nose, according to researchers at the Centre for Cellular and Molecular Biology (CCMB)in Hyderabad.

Courtesy – Herpdigest Magazine

 

ತಣಿಯದ ಕುತೂಹಲ(ಅಂಕಣ ಬರಹ) – ೫:

“ನಾರಾಯಣಿ…ಹಲವು ಮಕ್ಕಳ ತಾಯಿಯಾದ ಶತಾವರಿ ಒಂದು ಮಹಾ ಆಭರಣವಿದ್ದಂತೆ. ಪರಿಪೂರ್ಣ ಔಷಧಿಯಾಗಿ ಬಳಕೆಯಾಗುತ್ತದೆ. ಹೃದಯದ ತೊಂದರೆ, ಮೂತ್ರಪಿಂಡದಲ್ಲಿ ಕಲ್ಲು ಇದ್ದಾಗ, ಮೆದುಳನ್ನು ಚುರುಕುಗೊಳಿಸಲು, ಬೆಳವಣಿಗೆಗೆ ಬೇಕಾಗುವ ಜೀವಸತ್ವಗಳು ಇದರಲ್ಲಿ ಯಥೇಚ್ಛವಾಗಿದೆ. ಇದರ ಬಗ್ಗೆ ಸಂಹಿತೆಗಳಲ್ಲಿ ಉಲ್ಲೇಖವಿದೆಯಂತೆ. ನಾನೂ ಓದಿಲ್ಲ.

ಪಾರಿವಾಳಗಳು ಪಿಡುಗಾಗುತ್ತಿವೆಯೇ?:

ಶಾಂತಿಗೆ ಪರ್ಯಾಯ ಹೆಸರೇ ಪಾರಿವಾಳ, ಅದರಲ್ಲಿಯೂ ಬಿಳಿ ಬಣ್ಣದ ಪಾರಿವಾಳ. ಸಮಾರಂಭಗಳಲ್ಲಿ ಬಿಳಿಪಾರಿವಾಳಗಳನ್ನು ಹಾರಿಬಿಡುವುದು ಶಾಂತಿಯ ಸಂಕೇತ ಎಂದೇ ತಿಳಿಯಲಾಗಿದೆ. ಪ್ರಾಚೀನ ಕಾಲದಲ್ಲಿ ಇವು ಬಹಳ ಮುಖ್ಯವಾದ ಸಂದೇಶವಾಹಕಗಳಾಗಿಯೂ ಕೆಲಸ ಮಾಡುತ್ತಿದ್ದವು. ಗುಪ್ತ ಸಂದೇಶಗಳ ರವಾನೆಯಲ್ಲಿ ಇವುಗಳದ್ದು ಬಹಳ ವಿಶ್ವಾಸಾರ್ಹವಾದ ಪಾತ್ರವಾಗಿತ್ತು. ಸೇನೆಯಲ್ಲಿಯೂ ಇವನ್ನು ಸಂದೇಶವಾಹಕವಾಗಿ ಬಳಸಲಾಗುತ್ತಿತ್ತು.

ಬೆಲ್ಲದ ರಸಚಕ್ರ ಮತ್ತು ಸಕ್ಕರೆಯ ಅಷ್ಟವಕ್ರ: 

ಸುತ್ತ ಒಂದರ್ಧ ಕಿಲೊಮೀಟರ್‌ವರೆಗೂ ಪರಿಮಳವನ್ನು ಬೀರುವ ಮಲೆನಾಡಿನ ಆಲೆಮನೆ ಎಂದರೆ ಎಲ್ಲವೂ ವೃತ್ತಾಕಾರ. ಗಾಣದ ಸುತ್ತ ನೊಗಹೊತ್ತ ಕೋಣಗಳು ವೃತ್ತಾಕಾರ ಸುತ್ತುವುದು, ಗಾಣವಂತೂ ವೃತ್ತಾಕಾರವೇ. ಅದರಿಂದ ಜಿನುಗುವ ರಸವನ್ನು ಹಿಡಿದಿಡುವ ಡ್ರಮ್ ಕೂಡ ವೃತ್ತಾಕಾರ. ಆ ಸಿಹಿರಸವನ್ನು ಕುದಿಸುವ ಕೊಪ್ಪರಿಗೆಯೂ ವೃತ್ತಾಕಾರ.

ಪೂರ್ಣಪ್ರಮತಿ ಕನ್ನಡ ಹಬ್ಬ ೨೦೧೭-೧೮:

೨೦೧೭-೧೮ ನೇ ಶೈಕ್ಷಣಿಕ ವರ್ಷ ಪ್ರಾರಂಭಿಸುವ ವೇಳೆಗೆ ಪೂರ್ಣಪ್ರಮತಿ ಪ್ರಾರಂಭವಾಗಿ ಏಳು ವರ್ಷಗಳು ಕಳೆದಿದ್ದು, ಎಂಟನೆಯ ವರ್ಷಕ್ಕೆ ಕಾಲಿಟ್ಟಿದೆ. ಆಧುನಿಕ ವಿದ್ಯೆಗಳೊಂದಿಗೆ ಸಾಂಪ್ರದಾಯಿಕ ವಿದ್ಯೆಗಳನ್ನೂ ಒಂದೇ ವೇದಿಕೆಯಲ್ಲಿ ಕೊಡುವ ಆಲೋಚನೆಯೊಂದಿಗೆ ಪೂರ್ಣಪ್ರಮತಿ ಪ್ರಾರಂಭವಾಯಿತು. ಇದನ್ನು ಒಂದು ಶಾಲೆ ಎನ್ನುವುದಕ್ಕಿಂತ ಕಲಿಕೆಗೆ ಒಂದು ವೇದಿಕೆ ಎನ್ನಬಹುದು. ಏಕೆಂದರೆ ಇಲ್ಲಿ ಮಕ್ಕಳು ಮಾತ್ರವಲ್ಲ, ಅಧ್ಯಾಪಕರು-ಪೋಷಕರು-ಅತಿಥಿ-ಅಭ್ಯಾಗತರೂ ಎಲ್ಲರೂ ಕಲಿಯುತ್ತಾರೆ, ಕಲಿಸುತ್ತಾರೆ. ಪೂರ್ಣಪ್ರಮತಿಯ ಉದ್ದೇಶವೂ ಒಂದು ಶಾಲೆಯನ್ನು ಸ್ಥಾಪಿಸುವುದಲ್ಲ.

ಸಂಸ್ಕೃತದ ಪ್ರಸಿದ್ಧ ಕವಿ ಭಾರವಿ: 

ಸಂಸ್ಕೃತ ಹೇಗೆ ವಿಶ್ವಭಾಷೆ ಆಗಿತ್ತು ಎಂದು ಹಿಂದಿನ ಲೇಖನದಲ್ಲಿ ನೋಡಿದ್ದೇವು. ಈ ಬಾರಿ ಒಬ್ಬ ಕವಿಗೆ ಶ್ಲೋಕ ಹೇಗೆ ಸ್ಫುರಿಸಿತು ಎಂದು ನೋಡೋಣ.

ಕನ್ನಡ ಆಡು ಭಾಷೆ ಆದರೂ ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಭಾವಕ್ಕೆ ತಕ್ಕ ಪದ ಸಂದರ್ಭಕ್ಕೆ ತಕ್ಕಂತೆ ಬಂದು ಲಯಬದ್ಧವಾಗಿ ಪದಗಳ ಸಾಲಿನಲ್ಲಿ ಸೇರಿದರೆ ಅದು ಕವಿತೆ ಆಗುತ್ತದೆ.

My reflections on Purnapramati Utsava:

This is the first time that I have seen the pre-utsava and utsava activities happen. It did really feel like a ‘mahotsava’. It was a delight to see so many people participate as happens in one’s own family function.

ಉತ್ಸವದ ಸಿದ್ಧತೆ ನನ್ನನ್ನು ಸಿದ್ಧಗೊಳಿಸಿದ್ದು ಹೀಗೆ…

ಪೂರ್ಣಪ್ರಮತಿಯಲ್ಲಿ ಕಲಿಕೆ ನಿರಂತರವಾಗಿರಬೇಕೆಂದು ನಾನೇ ಹಲವು ಬಾರಿ ಲೇಖನಗಳಲ್ಲಿ ಬರೆಯುತ್ತಿದ್ದೆ. ಅದರ ಇನ್ನೊಂದು ಮುಖ ಉತ್ಸವದ ತಯಾರಿ ಹಂತದಲ್ಲಿ ಕಂಡುಬಂದಿತು. ಕುವೆಂಪು ಕಲಾಮಂದಿರ ಹೊರಾಂಗಣದ ಅಲಂಕಾರವನ್ನು ನನಗೆ ವಹಿಸಲಾಗಿತ್ತು. ಈ ಜವಾಬ್ದಾರಿ ಸಿಕ್ಕ ಕೂಡಲೆ ಒಂದೊಂದೇ ಕನಸು ಕಾಣಲು ಪ್ರಾರಂಭಿಸಿದೆ.

 

 

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.