.
आनन्दिनी
ಪೂರ್ಣಪ್ರಮತಿ ಕಲಿಕಾ ತಾಣ…..ಯಾರಿಗೆಲ್ಲಾ? ಎಂದು ಯಾರಾದರೂ ಪ್ರಶ್ನಿಸಿದರೆ ! ಯಾರು ಕಲಿಯಲು ಸಿದ್ಧರೋ ಅವರಿಗೆ ಇದು ಕಲಿಕಾತಾಣ. ಪೋಷಕರು, ಮಕ್ಕಳು, ಅಧ್ಯಾಪಕರು….ಇದಕ್ಕೆ ಮಿತಿಯಿಲ್ಲ. ನಮ್ಮ ಕಲಿಕೆಯ ಪ್ರಯಾಣ ಮುಂದುವರೆದಿದೆ. ನವೆಂಬರ್ ಮಾಸದ ಕಲಿಕೆಯನ್ನು ಆನಂದಿನಿಯಲ್ಲಿ ಹೊತ್ತು ಬಂದಿದ್ದೇವೆ.
ಪ್ರತಿಬಾರಿಯಂತೆ ವಿವಿಧ ವಿಭಾಗಗಳ ವರದಿ ಇದೆ, ಮಕ್ಕಳ ಬರವಣಿಗೆ – ಚಟುವಟಿಕೆಗಳಿವೆ, ಭಗವದ್ಗೀತೆಯ ಅಧ್ಯಯನ ಮಾಡುತ್ತಾ ಅಧ್ಯಾಪಕರು ಕಂಡುಕೊಂಡ ಕರ್ಮಯೋಗದ ಅಂಶಗಳಿವೆ, ವಿಜ್ಞಾನದ ಹಸಿವನ್ನು ಹೆಚ್ಚಿಸುವ ತಣಿಯದ ಕುತೂಹಲ – ಭೂಮಿಯ ತೂಕವನ್ನು ಕಂಡುಹಿಡಿದ ರೋಚಕ ಕಥೆ “ಶಿಹ್ಯಾಲಿಯನ್ ಪ್ರಯೋಗ” ಇದೆ.
ನವೆಂಬರ್ ತಿಂಗಳಲ್ಲಿ ಪೂರ್ಣಪ್ರಮತಿಯವರು “ಕನ್ನಡ ಹಬ್ಬದ” ಬಗ್ಗೆ ಮಾತೆ ಆಡಲಿಲ್ಲವಲ್ಲ ಎಂದುಕೊಂಡಿರಾ!? “ಕನ್ನಡ ಕಸ್ತೂರಿ” ಎಂಬ ವಿಶೇಷ ಸಂಚಿಕೆ ಇಷ್ಟರಲ್ಲೇ ನಿಮ್ಮ ಕೈ ಸೇರಲಿದೆ. ಕನ್ನಡ ಅಧ್ಯಯನಕ್ಕೆ ಒಂದು ಮಾರ್ಗದರ್ಶನ ಸಿಕ್ಕಿದೆ. ಈ ಬಾರಿ ಪೋಷಕರೂ ಭಾಗವಹಿಸಿ ಮತ್ತಷ್ಟು ಬೆಂಬಲ ಕೊಡುತ್ತಿದ್ದಾರೆ. ಪೂರ್ಣಪ್ರಮತಿಯಲ್ಲಿ ಕನ್ನಡ ಬಳಗ ಸಿದ್ಧವಾಗಿದೆ. ಇನ್ನು ಕನ್ನಡ ಡಿಂಡಿಮವನ್ನು ಬಾರಿಸುವುದೇ…
ಆನಂದಿನಿಯ ಪ್ರಕಟಣೆಯೇ ಒಂದು ಕಲಿಕಾ ಪ್ರಕ್ರಿಯೆಯಾಗಿ ರೂಪುಗೊಂಡಿದೆ. ಆನಂದಿನಿಗಾಗಿ ಲೇಖನವನ್ನು ಕೊಟ್ಟ ನಂತರ ಬರೆದವರು ಒಂದು ಉತ್ಸಾಹದಲ್ಲಿ ಇರುತ್ತಾರೆ. ಅವರ ಉತ್ಸಾಹವನ್ನು ಕಲಿಕೆಯಾಗಿ ಮಾರ್ಪಡಿಸುವವರು ನಮ್ಮ ಸಂಪಾದಕೀಯ ತಂಡದವರು. ಒಮ್ಮೆ ಕೊಟ್ಟ ಲೇಖನವನ್ನು ತಿದ್ದುಪಡಿಗೆ ಕಳುಹಿಸಿದಾಗ ನಿಜವಾದ ಚರ್ಚೆ ಪ್ರಾರಂಭವಾಗುವುದು. ಸರಿಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಓದಿ, ಮತ್ತೆ ಬರೆದು, ಸಂಪಾದಕೀಯ ತಂಡಕ್ಕೆ ಕೊಟ್ಟಾಗ ಅವರಿಂದ ಒಪ್ಪಿಗೆ ಸಿಕ್ಕ ನಂತರ ಪ್ರಕಟವಾಗುವುದು. ಸಂಪಾದಕೀಯ ತಂಡದವರು ಇವರ ಲೇಖನವನ್ನು ತಿದ್ದಲು ಸಂಬಂಧಪಟ್ಟ ಪುಸ್ತಕವನ್ನೋ, ಲೇಖನವನ್ನೋ, ಅದರ ಹಿನ್ನಲೆಯನ್ನು ತಾವು ಓದಿ ಅವರಿಗೆ ಪ್ರತಿಕ್ರಿಯೆ ಕೊಡುವರು. ಈ ವೇಳೆಗೆ ಲೇಖನ ಬರೆದವರು “Thanks for giving me this opportunity to write for Anandini” ಎಂಬ ಉದ್ಘಾರ ಬರುವುದು… ಆಗ ಆನಂದಿನಿ ಸಾರ್ಥಕ ಎನಿಸುವುದು.ಪೂರ್ಣಪ್ರಮತಿ ಕಲಿಕಾ ತಾಣ ಎಂದು ಅದಕ್ಕೆ ಹೇಳಿದೆ.
♣
ತಿಂಗಳ ತಿಳಿಗಾಳು
(ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ)
“ರೋಮಾಂಚನ ವೀ ಕನ್ನಡ” ಕನ್ನಡ ಭಾಷೆ, ನಡೆ, ನುಡಿ, ಆಚಾರ, ವಿಚಾರ, ಪರಂಪರೆ, ಕಲೆ, ಸಾಹಿತ್ಯ, ಎಲ್ಲವೂ ರೋಮಾಂಚನಕಾರಿ. ಕರ್ನಾಟಕವನ್ನಾಳಿದ ರಾಜರ ಪರಾಕ್ರಮ ಅನ್ಯಾದೃಶ್ಯ. ಇದಕ್ಕೆ ಒಂದು ಕಥೆ ಹೇಳುವೆ. ಆಗಬಹುದಾ? ……..
.
ಅಧ್ಯಯನ
(ಅಧ್ಯಾಪಕರ / ಪೋಷಕರ ಸ್ವಾಧ್ಯಾಯ ಹಂಚಿಕೆ ವಿಭಾಗ)
The regular practice of breathing exercises can completely change the quality of life that one is leading i.e., increases and enhances the quantity and quality of prana, clears blocked nadis and chakras, makes one energetic, enthusiastic, calmer and positive. ….
.
ತಣಿಯದ ಕುತೂಹಲ
ಭೂಮಿಯ ಭಾರವನ್ನು ಅಳೆದ ಕೆವೆಂಡಿಶ್ ಭೂಮಿಯನ್ನು ತಕ್ಕಡಿಯಲ್ಲಿ ಇಟ್ಟು ಅದರ ಭಾರವನ್ನು ಅಳೆಯುವುದು ಸಾಧ್ಯವೇ? ಅದು ಆಗದ ಮಾತು. ಹಾಗಾದರೆ ಭೂಮಿಯ ಭಾರವನ್ನು ಅಳೆಯುವುದು ಹೇಗೆ? ಇದು 18ನೇ ಶತಮಾನದ ಭೂವಿಜ್ಞಾನಿಗಳನ್ನು ಮತ್ತು ಭೌತಶಾಸ್ತ್ರಜ್ಞರನ್ನು ಬಹಳವಾಗಿ ಕಾಡುತ್ತಿದ್ದ ಪ್ರಶ್ನೆಯಾಗಿತ್ತು……..
.
ಚಿಗುರು
(Announcements from School)