ಸಂಪಾದಕೀಯ
– ಲತಾ (ಪ್ರತಿನಿಧಿ, ಪ್ರಶಿಕ್ಷಣ ವಿಭಾಗ)
ಮೂರನೇ ತರಗತಿಯ ಮಗುವೊಂದು ಕಣ್ಣು ತೆರೆಸಿದ ಪ್ರಸಂಗ ನಿಮಗೆ ಹೇಳಬೇಕು. ಆಕೆ ಮುದ್ದು ಮುದ್ದು ಮಾತಾಡುವ, ಗುಂಡು ಮುಖದ ಚೆಲುವೆ. ತನ್ನ ಜೊತೆಗಾರರಂತೆ ಓದುವ – ಬರೆಯುವ ಆಸೆ ಅವಳಿಗೂ ಇತ್ತು. ಆದರೆ ಅವಳ ವೇಗಕ್ಕೆ, ಗ್ರಹಿಕೆಗೆ ಸಿಗುವಂತೆ ಹೇಳಿಕೊಡುವವರು ಬೇಕಿತ್ತು. ಅವಳಿಗೆ ಯಾವ ಕಾರಣಕ್ಕೆ ನನ್ನನ್ನು ಕೇಳಬೇಕೆನಿಸಿತೋ ತಿಳಿಯಲಿಲ್ಲ. ಅವಳ ಮುಗ್ಧ ಆಸೆಗೆ ನೀರೆರೆಯುವ ಕಾಯಕಕ್ಕೆ ಅವಳೇ ನನ್ನನ್ನು ಎಳೆದುಕೊಂಡಳು. ಸುಮಾರು ೮ ತಿಂಗಳು ಕಳೆದಿರಬೇಕು. ವರ್ಣಮಾಲೆಯಿಂದ ನಮ್ಮ ಪ್ರಯಾಣ ಶುರುವಾಗಿತ್ತು. ಪುಸ್ತಕವನ್ನು ಚೊಕ್ಕಟವಾಗಿ ಇಟ್ಟುಕೊಳ್ಳುವುದರಿಂದ ಪ್ರಾರಂಭಿಸಿದೆವು. ಯಾವುದನ್ನು ಬರೆದುಕೊಳ್ಳಬೇಕು, ಹೇಗೆ ಬರೆದುಕೊಳ್ಳಬೇಕು, ಎಲ್ಲಿ ಬರೆದುಕೊಳ್ಳಬೇಕು ಎಂಬ ಯಾವ ವಿಷಯವೂ ಅವಳ ಹಿಡಿತಕ್ಕೆ ಸಿಕ್ಕಿರಲಿಲ್ಲ. ದಿನಾಂಕ ಬರೆಯುವುದರಿಂದ ಆರಂಭಿಸಿ, ಪುಟವನ್ನು ಖಾಲಿ ಬಿಡದೆ ಬರೆಯಬೇಕು, Margin ನಿಂದ ಆರಂಭಿಸಿ ಬರೆಯಬೇಕು, ಯಾವಾಗ ಸಾಲು ಬಿಟ್ಟು ಬರೆಯಬೇಕು ಎಂಬ ಅಚ್ಚುಕಟ್ಟುತನವನ್ನು ರೂಢಿಸಿಕೊಂಡಳು.
ನಮ್ಮಿಬ್ಬರ ಈ ಪ್ರಯಾಣ ಒಂದು ಸುಗಮವಾದ ಹಾಡಿನಂತೆ ಸಾಗಿತ್ತು.. ಪ್ರತಿದಿನ ಒಬ್ಬರನ್ನೊಬ್ಬರು ನೋಡಲು ಶಾಲೆ ಯಾವಾಗ ಪ್ರಾರಂಭವಾಗುವುದೋ ಎಂದು ಕಾಯುತ್ತಿದ್ದೆವು. ೭ ತಿಂಗಳಿಗೆ ಅವಳು ನಿಧಾನವಾಗಿ ತನ್ನ ತರಗತಿಯ ಪುಸ್ತಕವನ್ನು ಓದಲು ಪ್ರಾರಂಭಿಸಿದಳು. ಸೊಗಸಾಗಿ ಅರ್ಥಮಾಡಿಕೊಂಡು, ಸೃಜನಾತ್ಮಕ ಉತ್ತರಗಳನ್ನು ಕೊಡಲು ಶುರುಮಾಡಿದಳು. ಅವಳ ದಾರಿಯಲ್ಲಿ ಅವಳು ನಡೆಯಲು ಸಿದ್ಧಳಾಗಿದ್ದಳು. ಅವಳಿಗೆ ಬೇಕಾಗಿದ್ದದ್ದು ತನ್ನ ವೇಗಕ್ಕೆ ಹೆಜ್ಜೆ ಹಾಕುವ ಒಬ್ಬ ಮಾರ್ಗದರ್ಶಕ ಅಷ್ಟೇ. ಅದು ಸಿಕ್ಕ ಕೂಡಲೆ ಆ ಬಣ್ಣದ ಚಿಟ್ಟೆ ತನ್ನ ರೆಕ್ಕೆ ತೆರೆದೇ ಬಿಟ್ಟಿತು. ಸುಂದರ ಲೋಕವನ್ನು ಕಾಣಲು ಸಜ್ಜಾಗಿತ್ತು.
ಒಂದು ದಿನ ನಮ್ಮ ಶಾಲೆಯಲ್ಲಿ ಕ್ರೀಡೋತ್ಸವ ಏರ್ಪಾಡಾಗಿತ್ತು. ಎಲ್ಲರಿಗೂ “ತಮ್ಮ ತಮ್ಮ ಪೋಷಕರೊಂದಿಗೆ ಮೈದಾನಕ್ಕೆ ಬರಬೇಕು. ಪೋಷಕರ ಜವಾಬ್ದಾರಿಯಲ್ಲಿ ಎಲ್ಲರೂ ಮೈದಾನದಲ್ಲಿ ಹಾಜರಾಗಬೇಕು” ಎಂಬ ಸುತ್ತೋಲೆ ನೀಡಲಾಯಿತು. ನಿಧಾನವಾಗಿ ಸುತ್ತೋಲೆಯಲ್ಲಿದ್ದ ಎಲ್ಲಾ ಪದಗಳನ್ನು ಕೂಡಿಸಿಕೊಂಡು ತೊದಲುತ್ತಾ ಓದಿ ಮುಗಿಸಿದಳು, ತಲೆ ಎತ್ತಿ “ಅಮ್ಮ ಆ ದಿನ ಬರಲು ಸಾಧ್ಯವಿಲ್ಲ, ಊರಿಗೆ ಹೋಗಿರುತ್ತಾರೆ. ಆದರೆ ಇನ್ನೊಂದು ಅಮ್ಮ ಬರವರು” ಎಂದಳು. ಯಾರದು ಇನ್ನೊಂದು ಅಮ್ಮ ಎಂದೆ, “ನೀವೇ ಅಕ್ಕ” ಎಂದಳು. ಈ ಒಂದು ಮಾತಿನ ಆಳ ಎಷ್ಟಿದೆ ಎಂದರೆ ಇನ್ನೂ ಕಿವಿಯಲ್ಲಿ ಗುಂಗಾಗಿದೆ. ಕಲಿಕೆಯಲ್ಲಿ ಮಕ್ಕಳಿಗೆ ಅಧ್ಯಾಪಕರಿಂದ ಏನು ಬೇಕು ಎಂಬುದನ್ನು ತಿಳಿಸಿ ನನ್ನ ಕಣ್ಣು ತೆರೆಸಿ ಗುರುವಾದಳು.
ಪ್ರಿಯ ಪೂರ್ಣಪ್ರಮತಿಯ ಬಂಧುಗಳೇ, ಪೂರ್ಣಪ್ರಮತಿಯನ್ನುಕೂಸಾಗಿದ್ದಾಗಿನಿಂದ ತಿದ್ದಿ, ತೀಡಿ, ಬೈದು ಬೆಳೆಸಿದವರು ಹಲವಾರು ಗುರುಗಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಇಂದು ಹತ್ತು ವರ್ಷದ ಕುಮಾರನಾಗಿ ಬೆಳೆದಿದೆ ಈ ಪೂರ್ಣಪ್ರಮತಿ. ನಮ್ಮ ಅಚ್ಚುಮೆಚ್ಚಿನ ಗುರುಗಳಾದ ವಿಶ್ವೇಶತೀರ್ಥರು, ಸಾನಂದಸ್ವಾಮಿಜಿಯವರು, ಎಲ್ಲಪ್ಪರೆಡ್ಡಿ ಅವರು, ರವೀಂದ್ರ ಶರ್ಮ, ರಾಜೇಂದ್ರ ಸಿಂಗ್, ಮಾಧವ ಸಹಸ್ರಬುದ್ಧೆ, ತುಳಸಿ ಗೌಡ ಹೀಗೆ ನೆನಪಿಗೆ ಸವಾಲೊಡ್ಡಿ ಹೆಸರುಗಳನ್ನು ಬರೆಯಬಹುದು. ಅವರೆಲ್ಲರ ಒಡನಾಟ ಪೂರ್ಣಪ್ರಮತಿಗೆ ಕೊಟ್ಟಿರುವ ಬಲ ಪರಂಪರೆಯಾಗಿ ಉಳಿಯುವುದು. ಈ ಎಲ್ಲಾ ಗುರುಗಳ ಜಾಡು ಹಿಡಿದು ಪೂರ್ಣಪ್ರಮತಿ ಇಂದು ಗುರುಪೂರ್ಣಿಮೆಯ ಈ ವಿಶೇಷ ಸಂಚಿಕೆಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.
ಜ್ಞಾನಯಜ್ಞನವಿದು ಎಲ್ಲರ ಪಾತ್ರವದು ದೊಡ್ಡದು
ಗುರು ಹಿಂದೆ ಗುರಿ ಮುಂದೆ ಮುನ್ನಡೆಸುವ ಶಕ್ತಿಯು
ಬೆಳೆದು ಬೆಳೆಸಿ ದೂರ ದಾರಿಯ ಸಾಗ ಬೇಕಿಹುದು
ಅರಿತು ನಡೆದರೆ ಸಾರ್ಥಕ ಭಾವವದು ಒಸರುವುದು
ತಿಂಗಳ ತಿಳಿಗಾಳು
(ವಿವಿಧ ವಿಭಾಗಗಳ ಹಲವು ಚಟುವಟಿಕೆಗಳ ಮಾಸಿಕ ವರದಿ)
ಆನಂದಕಂದ - ವಿದ್ಯಾ (ಪ್ರತಿನಿಧಿ, ಪೂರ್ವಪ್ರಾಥಮಿಕ ಶಿಕ್ಷಕರು)
Even before the Corona has hit the world, few schools had started smart classes inside the physical classrooms and started providing personal tabs and laptops to their students, created partial virtual classes as learning model. Not then, but it is the time where, there is a need to strengthen our education model and welcome the technology into our lives. The students and teachers were facing a degree of uncertainty with respect to their future but teachers are doing all they can and proving to be essential in the fight against Covid -19.
Now, this is the month of July off nearly two months had been started with this online module, and we are proud to say for having succeeded in reaching parents and all students, establishing contact with the system, acclimatised, on track of regular system with the ease of parents support, technology and technical support by the school. We are giving guidance to parents to teach their kids by preparing materials, providing hands on activities, engaging both parents and children with games, conversations, stories, rhymes, crafts, drawings, Sanskrit shloka, vocabulary enhancement, planned conversations…..and much more activities in our list. We have started our regular syllabus after revision classes of last month, accelerated topic presentations, theme work, writing, reading, listening, physical, oral, hands on activities, brain boosters, follow ups etc., Each class is a learning platform for us and each time we introspect and upgrade our system. So, in each class parents are excited to see the activity slides which are going to be presented by our teachers. Teacher takes updates of previous classes by the parents and proceed further, clarifies their doubts, concerns and lending special support for needy parents.
The report will be incomplete, if we do not add about virtual Gurupurnima celebration (Teacher’s day) in our division. Children were asked to dress up in their Guru’s costume and learn about them. Video telecast of all children with Guru Costume was displayed. Guru – Shishya games, Sanskrit song and Guest speech about the day’s celebration…All were mind blowing. All parents and children participated curiously and thanked all teachers for getting knowing about the importance and story behind the celebration, famous Gurushishyaru with pictures. We foresee your support and encouragement for teachers and children in their future venture.
ವಾಮನ ವಿಭಾಗ -ಮುರಳೀಧರ ಕಟ್ಟಿ (ವಿಭಾಗ ಪ್ರತಿನಿಧಿ, ಪ್ರಾಥಮಿಕ ವಿಭಾಗ)
ನಮಸ್ಕಾರ ಬಾಂಧವರೆ!
ಜುಲೈ ಮಾಸಕ್ಕೆ ಹಾರ್ದಿಕ ಸ್ವಾಗತ
ಈ ಮಾಸವು ಹಲವು ವಿಶೇಷತೆಗಳಿಂದ ಕೂಡಿದೆ. ಗುರುಪೂರ್ಣಿಮೆ, ನಾಗರ ಪಂಚಮೀ, ಗೌರೀ ಹಬ್ಬ ದಕ್ಷಿಣಾಯನ ಪ್ರಾರಂಭ, (ಕರ್ಕಾಟಕ ಸಂಕ್ರಮಣ) ಚಾರ್ತುರ್ಮಾಸ. ಹೀಗೆ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ನಮ್ಮ ವಾಮನವಿಭಾಗದಲ್ಲಿ ಗುರುಪೂರ್ಣಿಮೆಯದ್ದೇ ವಿಶೇಷ.
ಗುರುಪೂರ್ಣಿಮೆಗಾಗಿ ಮಕ್ಕಳ ತಯಾರಿಯೂ ಜೋರಾಗಿಯೇ ಇತ್ತು, ಆನ್ ಲೈನ್ ಆದರೂ ಮಕ್ಕಳು ತಯಾರಾದ ರೀತಿ ನೋಡಿದರೆ ಬಹಳ ಸಂತಸವಾಗುತ್ತದೆ.ಈ ಕಾರ್ಯಕ್ರಮಕ್ಕೆ ಆರು ಪರಿಸರದಲ್ಲೂ ಪ್ರತ್ಯೇಕ ಅತಿಥಿಗಳನ್ನು ಆಹ್ವಾನಿಸಿದ್ದೆವು. ಎಲ್ಲಾ ಅತಿಥಿಗಳು ಬಹಳ ಸಂತೋಷದಿಂದ ಬರಲು ಒಪ್ಪಿದರು ಬಂದ ಎಲ್ಲಾ ಅತಿಥಿಗಳು ಪೂಜ್ಯ ಗುರುಗಳಾದ ಶ್ರೀವಿಶ್ವೇಶತೀರ್ಥ ಶ್ರೀಪಾದರನ್ನು ಸ್ಮರಿಸಿಕೊಂಡು ಮಕ್ಕಳಿಗೆ ಬದುಕುವ ಸನ್ಮಾರ್ಗವನ್ನು ತೋರಿಸಿದರು.
ನಚಿಕೇತ ಪರಿಸರಕ್ಕೆ ಕಿರಣ ಅಚಾರ್ಯರು ಆಗಮಿಸಿ – ಮಕ್ಕಳಿಗೆ ಪೋಷಕರಿಗೆ ಈ ರೀತಿ ಹೇಳಿದರು “ ಹರಿಗುರುನಮನಂ ದ್ರಾಕ್ ಯತ್ನತೋಮೀ ವಿಧಾಯ ಪ್ರಯಯುಃ ಅಪರಸಾಮ್ಯಂ” ಮಕ್ಕಳಲ್ಲಿ ಬುದ್ಧಿಮತ್ತೆಯ ಏರುಪೇರು ಈ ಕಾಲ ಅಲ್ಲ, ಮಧ್ವರೂ ಇದ್ದಕಾಲದಲ್ಲೂ ಇತ್ತು, ಆಗ ಆ ಮಕ್ಕಳು ಗುರುಗಳ ಸೇವೆಯಿಂದ ಒಳ್ಳೆಯ ಬದ್ಧಿವಂತರಾದದ್ದೂ ಕಾಣಸಿಗತ್ತದೆ ಗುರುಭಕ್ತಿ, ದೈವಭಕ್ತಿ, ಎರಡನ್ನೂ ಮೈಗೂಡಿಸಿಕೊಂಡು ಅಧ್ಯನಯದ ಪ್ರಗತಿಯನ್ನು ಕಾಣಿ ಎಂದು ಆಶೀರ್ವದಿಸಿದರು.
ಪ್ರಹ್ಲಾದ ಪರಿಸರಕ್ಕೆ – ಮಾತರಿಶ್ವ ಆಚಾರ್ಯರು ಆಗಮಿಸಿದ್ದರು. ಅವರು ಹಿರಿಯರೂ ಅರ್ಥ ಮಾಡಿಕಳ್ಳಲು ಕಷ್ಟವಾಗುವ ಅವಧೂತಗೀತ ಸಾರವನ್ನು ಮಕ್ಕಳಿಗೆ ಅವರ ಭಾಷೆಯಲ್ಲಿ ಊಣಬಡಿಸಿದರು, ಅಲ್ಲಿ ಬರುವ ಮೀನಿನಕಥೆಯನ್ನು ಹೇಳಿದರು ಬಾಯಿಯ ಚಾಪಲ್ಯದಿಂದ ಹಾಳಾಗುವ ಮೀನಿನಕಥೆಯನ್ನು ಮಕ್ಕಳಿಗೆ ಹೇಳಿ ಜೀವನಕ್ಕೆ ಅವಶ್ಯಬೇಕೇಗಾಗುವ ಜವಾಬ್ದಾರಿಯನ್ನು ತಿಳಿಸಿದರು.
ಆರುಣೀ ಪರಿಸರಕ್ಕೆ –ವೆಂಕಟೇಶ ಆಚಾರ್ಯರು ಆಗಮಿಸಿದ್ದರು ಅವರು ಮಕ್ಕಳಿಗೆ ಮೂರು ಗೊಂಬೆಗಳ ಕಥೆ ಹೇಳಿ ನಮ್ಮ ಶಾಲೆಯ ಅಧ್ಯಾಪಕರ ಮಾಡುತ್ತಿರುವ ಮಹತ್ತರವಾದ ಕಾರ್ಯದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಧೃವ- ಪ್ರಯೊಜನದ ಉದ್ದೇಶ ಮಾತ್ರ ಗುರುಗಳನ್ನು ಪೂಜೆ ಮಾಡೋದು ಸರಿ ಅಲ್ಲ, ಅದರ ನಂತರವೂ ಅವರನ್ನು ಸ್ಮರಣೆ ಮಾಡೋದು ಶ್ರೇಯಸ್ಕರ ಎಂದು ವಿಕಾಸ ಆಚಾರ್ಯರು ಹೇಳಿದರು
ಮಾರ್ಕಂಡೇಯ – ಶ್ರೀಶ ಆಚಾರ್ಯರು ಬಂದಿದ್ದರು ಅವರು ಮಕ್ಕಳಿಗೆ ಪೇಜಾವರ ಶ್ರೀಪಾದರ ಜೀವನಶೈಲಿ, ಜನರ ಬಗ್ಗೆ ಇರುವ ಕಾಳಜಿ ಪ್ರೀತಿಯ ಬಗ್ಗೆ ತಿಳಿಸಿದರು.
ಉಪಮನ್ಯು – ಸತ್ಯಮೂರ್ತಿ ಆಚಾರ್ಯರು ಮಕ್ಕಳಿಗೆ ಹೀಗೆಂದರು ಕೇವಲ ಪಾಠ ಮಅಡುವ ಶಾಲೆಯ ಅಧ್ಯಾಪಕರು ಮಾತ್ರವಲ್ಲ ನಿಮ್ಮ ತಂದೆ ತಾಯಂದಿರೂ ನಿಮಗೆ ಗುರುಗಳೆ, ಗುರುಗಳ ಮಹತ್ವವನ್ನು ಸಾರುವ ಉಪಮನ್ಯುವಿನ ಕಥೆಯನ್ನು ಹೇಳಿ ಆಶೀರ್ವದಿಸಿದರು.
ಹೀಗೆ ಗುರುಫೂರ್ಣಿಮೆ ಗುರುಪೂಜೆ ಮಾತ್ರ ಆಗದೆ ಮಕ್ಕಳ ಮುಂದಿನ ಜೀವನಕ್ಕೆ ಬೇಕಾಗುವ ಮೌಲ್ಯಯುತ ಮಾತುಗಳೂ ಅತಿಥಿಗಳಿಂದ ಸಿಕ್ಕವು. ಇನ್ನು ಎಲ್ಲಾ ಪರಿಸರದಲ್ಲೂ ಎರಡನೆಯ ಮಹಾಕಥೆ ಹೇಳಿದ್ದಾರೆ ತನ್ಮೂಲಕ ಹೇಗೆ ಜೀವ ಜಂತುಗಳ ಉಗಮವಾಯಿತು ? ಮನುಷ್ಯ ಹೇಗೆ ಬಂದ ? ಭಾಷೆಗಳು ಹೇಗೆ ಬಂದವು,? ಇತ್ಯಾದಿ ಕತೂಹಲಗಳನ್ನು ಮಕ್ಕಳಲ್ಲಿ ಹುಟ್ಟುಹಾಕುತ್ತಾ ಅಧ್ಯಯನ ಅಧ್ಯಾಪನ ಮುಂದೆ ಸಾಗಿದೆ. ಹಯಗ್ರೀವ ಜಯಂತಿ ವಿಶೇಷಗಳೊಂದಿಗೆ ಮುಂದಿನ ತಿಂಗಳು ನಿಮ್ಮ ಮುಂದೆ ಹಾಜರಾಗುವೆವು.
Arjuna vibhAga – Geetha.S (Vibhaga pratinidhi of Upper Elementary)
In the light of the outbreak of the pandemic, virtual schooling was seen as a daunting task for students, parents and teachers. Now that we are more than one month down this lane, the path seems to be less thorny. Having experienced few hiccups initially, all of us have been learning many lessons. This month has been relatively more productive in comparison to the previous. In lieu of the government order, screen hours were reduced for 4th and 5th grade for a short span of 2 weeks. Once the order was taken back, children are back in action.
Sincere attempts have been made by teachers and admin people to get in contact with children who were irregular to school, with a view to understand the difficulties and challenges they might be facing. People who were complete strangers to Gmail, Google classroom and Google meet, were trained by Balanna.
Teachers might not be frontline COVID warriors, but midnight oil is being burnt to ensure effective knowledge is being imparted. To make teaching more structured, July monthly plan has been chalked out and weekly plans are being followed. Learning is becoming more predictable and children seem to be getting their routine back, to some extent.
Narration of great stories have begun. On Aashada shudha poornime, Gurupoornima was celebrated in all four environments. Children got an opportunity to showcase their individual talents. With a view to know their opinions, a feedback form was circulated to all parents. Close to 90% of them have given positive view about online classes. Thanks to all the immense support we have been getting from parents.
Bheemasena vibhAga (High school)
Ashwini Bhat (Representing High school team)
Purnaparmati – An online learning express train
Purnapramati the name itself indicates the way in which it trains the students, teachers, and parents in an integrated way, the main goal of the school is to achieve in-depth knowledge in various fields along with the curriculum.
As we know, the whole world is facing tough challenges because of COVID 19 pandemic disease. Running schools and conducting classes, board exams were also among them. Most of the schools have opted for online teaching methods. We at Purnapramati, as you all know have also started this academic year with an online teaching methodology. I am glad to say that we have stepped into the second month of the academic year with successful online teaching methods.
In the last week of June, SSLC exams were conducted by the State Board of Karnataka. Exams went on well and it was well planned by the government. Nineteen students from our school wrote the exam. Our High school teachers conducted online revision classes throughout the lockdown days as well as until the last week of examination so that students maintain their confidence and they do not forget the subject. Teachers also gave them good moral support, which is very much needed in these tough times. Our School had also organized an Online Vyasa Pooja for the SSLC student’s wellness, as it is the tradition followed by the school. In addition, I am happy to share that many parents were happy with the efforts made by the school and teachers in preparing students for the exams.
The month of July started with Gurupoornima celebrations and Formative assessments. Students of seventh, eighth, ninth, and tenth celebrated Online Gurupoornima, class-wise for four days which was well organized and successful with the blessings of our Gurus Parama Pujya Sri Vishwesha Theertha Swamiji and Shri Gyan Swaroopaananda Swamiji. Students participated with great interest and enthusiasm. After which we conducted online Formative assessment, which went on well. Students were asked to give presentations on topics related to respective subjects followed by oral question and answer sessions.
Finally, I am glad to announce that we have launched The Writer’s club, the idea which was conceived by our student Ambhrini of 8th standard. Taking the idea of clubs forward we are happy to announce the launch of Purnapramati music society as well as the Raman Ramanujan clubs so that children can explore and discover their passions. As everything is online, I wish to name it as Purnapramati Online Learning Express Train.
We all pray to God that our learning train never stops anywhere at any time in any situation but also hope that we will be able to physically go back to school as early as possible.
Trivikrama– Nagashree Shrivatsa (Teacher and Pratinidhi of PU division)
This month our students wrote 10th board exams amidst so many uncertainties. We are really pleased to know that our students and their parents took the situation in their hands and really did put up great courage and gave their exams.
In fulfilling the dreams of Purnapramati to emphasise higher education, PU team approached the parents from Purnapramati and other schools and did succeed to put the thoughts of Vision of Purnapramati across to parents.
In this direction, we conducted orientation for our parents and Udyogadridhti programmes were conducted. Both the talks by Dr. Gururaj Karajagi and Sri Sri Sri Swami Veereshananda Saraswathi in Udyogadrishti programme were very well received by good number of audiences. Post these two programmes parents showed interest and today we have 13 students for PU programme. 11 students for I PUC, Science, PCMB and 2 students for Arts combination for II PUC NIOS.
Our classes started on July 10th and every day 2 sessions are happening. We are waiting for a few more admissions from the parents who have enquired about the course. Students and the PU team teachers are showing a lot of enthusiasm in taking the programme forward. The team is working towards increasing the number of sessions and regularising the timetable. In addition, there were a couple of new teachers who joined us and are lending their hands to help children reach their goals. Also our Principal Shashirekha madam held Purnasabhe where all the parents of Purnapramati were involved who were informed about our PU programmes vision. We received appreciation and wishes for the new venture. This was held in the interest to make our programme reach as many as possible so more students can get the benefit of our modern education blended with our rich Shastra Parampara.
ಪ್ರಶಿಕ್ಷಣ ವಿಭಾಗ – ಲತಾ (ಪ್ರತಿನಿಧಿ, ಪ್ರಶಿಕ್ಷಣ ವಿಭಾಗ)
ಪ್ರಶಿಕ್ಷಣ ವಿಭಾಗ ಎಂದು ಪ್ರತ್ಯೇಕವಾಗಿ ಆಲೋಚಿಸಲು ಪ್ರಾರಂಭಿಸಿದ ನಂತರ ತರಬೇತಿಯ ಅವಶ್ಯಕತೆಗಳನ್ನು ಗಮನವಿಟ್ಟು ನೋಡುವಂತಾಯಿತು. ಇದೊಂದು ರೀತಿಯಲ್ಲಿ ಹಸಿದ ವಿದ್ಯಾರ್ಥಿಗೆ ಊಟದ ಅವಕಾಶ ಕೊಟ್ಟಂತೆ. ಆದರೆ ಎಲ್ಲರಿಗೂ ಒಂದೇ ರೀತಿಯ ಊಟವಲ್ಲ. ಅವರವರ ದೇಹಪ್ರಕೃತಿಗೆ ಪೂರೈಸುವ ಊಟದಂತೆ ಈ ಪ್ರಶಿಕ್ಷಣ. ತಮ್ಮ ನೆಲಯಲ್ಲಿ ತಾವು ಬೆಳೆಯುವಂತೆ ಪ್ರೋತ್ಸಾಹ ನೀಡುವುದು. ಇದೇ ನಿಟ್ಟಿನಲ್ಲಿ ಜುಲೈ ತಿಂಗಳಿನಲ್ಲಿ ಶಿಕ್ಷಕರಿಗೆ ಮತ್ತು ಪೋಷಕರಿಗೆ ವಿಶೇಷವಾಗಿ ತರಬೇತಿಗಳನ್ನು ಏರ್ಪಡಿಸಲಾಗಿತ್ತು.
ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಈಗ ಅಧ್ಯಾಪಕರೊಂದಿಗೆ ಪೋಷಕರೂ ಸಮಾನವಾಗಿ ಹಂಚಿಕೊಂಡಿರುವುದರಿಂದ ಅವರನ್ನೂ ಸಶಕ್ತಗೊಳಿಸುವುದು ಪ್ರಶಿಕ್ಷಣದ ಹೊಣೆಯಾಗಿದೆ. ಹಾಗಾಗಿ ಪೋಷಕರಿಗೆ ನೇತ್ರಾ ಅಕ್ಕ ಅವರು ೬-೧೨ ವರ್ಷ ವಯಸ್ಸಿನ ಮಕ್ಕಳ ಬೆಳೆವಣಿಗೆಯಲ್ಲಿ ಕಲಿಕಾ ಅಗತ್ಯಗಳು ಏನಿರುತ್ತವೆ ಎಂಬುದರ ಬಗ್ಗೆ ತರಬೇತಿ ಮಾಡಿದರು. ಇದರಿಂದ ಪೋಷಕರಿಗೆ ತಮ್ಮ ಮಕ್ಕಳ ಕಲಿಕೆಯನ್ನು ಅರ್ಥಪೂರ್ಣವಾಗಿ ಮಾಡಿಸಲು ಸಹಾಯವಾಯಿತು.
ಪ್ರಶಿಕ್ಷಣ ವಿಭಾಗದಲ್ಲಿ ಸಸ್ಯಶಾಸ್ತ್ರದ ಪರಿಚಯವೂ ಒಂದು ವಿಷಯ. ಪೂರ್ವಪ್ರಾಥಮಿಕ ಹಂತದಿಂದ ಆರಂಭವಾಗುವ ಈ ವಿಷಯ ಹಂತ ಹಂತವಾಗಿ ಪ್ರೌಢಶಾಲೆ, ಪದವಿಪೂರ್ವ ಅಷ್ಟೇಕೆ ಪದವಿ ವಿಭಾಗದಲ್ಲ್ ಮುಂದುವರೆಯುವುದು. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಸ್ಯಗಳ ಬಗ್ಗೆ ಹೇಗೆ ಪರಿಚಯಿಸಬೇಕೆಂಬ ತರಬೇತಿಯನ್ನು ಪ್ರಸಿದ್ಧ ಪರಿಸರವಾದಿ ಎಲ್ಲಪ್ಪ ರೆಡ್ಡಿ ಅಣ್ಣ ಮಾಡಿದರು. ಮಕ್ಕಳಿಗೆ ಕಾಡಿನ ಬಗ್ಗೆ, ಗಿಡಗಳ ಬಗ್ಗೆ, ಹೂವುಗಳ ಬಗ್ಗೆ ಕನಸು ಕಾಣುವುದನ್ನು ಹೇಳಿಕೊಡಬೇಕು ಎಂಬ ಅಂಶವನ್ನು ಮನದಟ್ಟಾಗಿಸಿದರು. ೭೫ ವರ್ಷ ವಯಸ್ಸಿನಲ್ಲೂ ನಿರಂತರವಾಗಿ ೩ ತಾಸುಗಳು ಮಾತನಾಡುವ ಅವರ ಉತ್ಸಾಹಕ್ಕೆ ನಾವೆಲ್ಲ ತಲೆಬಾಗಿದೆವು. ಬಹುಶಃ ವನದೇವಿ ಅವರಿಗೆ ವಿಶೇಷ ವರವನ್ನು ಕರುಣಿಸಿದ್ದಾಳೆ ಎನಿಸಿತು.
ಸಂಸ್ಕೃತ ಅಧ್ಯಾಪಕರಿಗೆ ವಿದ್ಯಾಪೀಠಗಳಲ್ಲಿ ಸಂಸ್ಕೃತ, ಶಾಸ್ತ್ರಗಳ ಪರಿಚಯವಂತೂ ಆಳವಾಗೇ ಆಗಿರುತ್ತದೆ. ಆದರೆ ಆಧುನಿಕರ ಬಳಸುವಂತೆ ಸರಾಗವಾಗಿ ಆಂಗ್ಲಭಾಷೆಯನ್ನು ಉಪಯೋಗಿಸಲು ಅವರಿಗೆ ಹಿಂಜರಿಕೆ ಇರುತ್ತದೆ. ಈ ಅಗತ್ಯವನ್ನು ಮನಗಂಡು ಅವರಿಗಾಗಿ ಆಂಗ್ಲಭಾಷೆಯ ಪರಿಚಯ ಮತ್ತು ಸಂವಹನದ ತರಬೇತಿಯನ್ನು ಆಯೋಜಿಸಲಾಗಿದೆ. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಕಲಿಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಪೂರ್ಣಪ್ರಮತಿಯಲ್ಲಿ ಸಂಸ್ಕೃತ ವ್ಯಾವಹಾರಿಕ ಭಾಷೆಯಾಗಿಸುವ ಕನಸು ಮೊದಲಿನಿಂದಲೂ ಇರುವಂತಹದ್ದೇ. ಹಾಗಾಗಿ ಎಲ್ಲಾ ಅಧ್ಯಾಪಕರಿಗೂ ಬೇರೆ ಬೇರೆ ಸಮಯ, ದಿನಗಳಲ್ಲಿ ಸಂಸ್ಕೃತ ಸಂಭಾಷಣೆ ತರಗತಿಗಳು ನಡೆಯುತ್ತಿವೆ.
ಹೀಗೆ ಇನ್ನೂ ಅನೇಕ ಪ್ರಶಿಕ್ಷಣ ಕಾರ್ಯಕ್ರಮವು ನಡೆಯುತ್ತಿದೆ. ಇದೊಂದು ನಿತ್ಯೋತ್ಸವವೆಂದರೆ ತಪ್ಪಾಗಲಾರದು ಪೂರ್ಣಪ್ರಮತಿಯಲ್ಲಿ ಕಲಿಯುವವರಿಗೆ ಯಥೇಚ್ಛ ಅವಕಾಶ ಸಿಗುವಂತಾಗಬೇಕು. ತಾನು ಬೆಳೆಯಲು ಪೂರ್ಣಪ್ರಮತಿಯೇ ಸರಿಯಾದ ವೇದಿಕೆ ಎಂದೆನಿಸಿ ಅಧ್ಯಾಪಕರು ಸೇರುವಂತಾಗಬೇಕು ಎಂಬ ನಿಟ್ಟಿನಲ್ಲಿ ಪ್ರಶಿಕ್ಷಣ ವಿಭಾಗವನ್ನು ಸಶಕ್ತಗೊಳಿಸಲಾಗುತ್ತಿದೆ. ಅದರ ಸಣ್ಣ ಸಣ್ಣ ಫಲಗಳನ್ನು ಕಾಣಸಿಗುತ್ತಿವೆ. ಈ ಗರಡಿ ಮನೆಯಲ್ಲಿ ಅಧ್ಯಯನ-ಅಧ್ಯಾಪನ ಮಾಡುವವರಿಗೆ ಸದವಕಾಶವಿದೆ ಎಂದು ಹೇಳಲು ಬಯಸುವೆ.
ಅಲೆಮಾರಿ
(ಭಾಗ ೨)
ಲತಾ.ಎಂ (ಅಧ್ಯಾಪಕರು ಮತ್ತು ಪ್ರಶಿಕ್ಷಣ ವಿಭಾಗದ ಪ್ರತಿನಿಧಿ)
ಮುಂದುವರೆದ ಭಾಗ….
ಅಭಿವೃದ್ಧಿ ಎಂದರೆ…?!
ಹೀಗೆ ಒಂದು ಭಾನುವಾರ, ರಸ್ತೆಯಲ್ಲಿ ೧% ಮಾತ್ರ ವಾಹನವಿತ್ತು. ಇಬ್ಬರು ಇಳಿವಯಸ್ಸಿನ ಅಜ್ಜಂದಿರು ತಮ್ಮ ಬೆಳಗಿನ ವಾಯುವಿಹಾರ ಮುಗಿಸಿ ಮನೆಗೆ ಹೊರಟಿದ್ದರು. ಒಬ್ಬರ ಕೈಯಲ್ಲಿ ಹಾಲು-ತರಕಾರಿ ಇತ್ತು. ಇನ್ನೊಬ್ಬರ ಕೈಯಲ್ಲಿ Newspaper ಇತ್ತು. ಒಬ್ಬರಿಗೆ ಹಾಲು-ತರಕಾರಿ ಸೊಸೆಗೆ ಸಮಯಕ್ಕೆ ಸರಿಯಾಗಿ ತಲುಪಿಸುವ ಜವಾಬ್ದಾರಿ ಇತ್ತು. Newspaper ಹಿಡಿದಿದ್ದ ಅಜ್ಜ ಹೇಳಿದರು. “ಬರುವುದಾದರೆ ಕಾಫಿ-ತಿಂಡಿ ಕೊಡಿಸಲಾಗುವುದು” ಎಂದು ರಾಗ ಎಳೆದರು, ಸ್ವಲ್ಪ ನಿಧಾನವಾಗಿ ಹೆಜ್ಜೆ ಇಡುತ್ತಾ. ಮೂರು ಹೆಜ್ಜೆ ಮುಂದಿದ್ದ ಇನ್ನೊಬ್ಬರು “ಇರಪ್ಪ, ಇದನ್ನು ಸೊಸೆಗೆ ಕೊಟ್ಟು ಬರ್ತೀನಿ” ಎಂದರು. ಜವಾಬ್ದಾರಿಯ (ಸ್ವಲ್ಪ ಭಯದ) ಧ್ವನಿಯಿಂದ.
ನಮ್ಮ ರಸ್ತೆಯಲ್ಲಿ ಒಬ್ಬರು ಅಜ್ಜಿ ಪ್ರತಿದಿನ ರಟ್ಟಿನ ಡಬ್ಬಗಳನ್ನು (ಅಲ್ಲಲ್ಲಿ ಬಿದ್ದಿರುವ) ಎತ್ತಿಕೊಂಡು ಹೋಗುವರು. ನಮ್ಮ ಮನೆಯ ಪಕ್ಕದಲ್ಲಿ ಒಂದು ಕಿರಿದಾದ ಜಾಗವಿದೆ. ಎಲ್ಲವನ್ನೂ ಅಲ್ಲಿ ಸಂಗ್ರಹಿಸಿ, ದಾರಕಟ್ಟಿ ತಲೆಯ ಮೇಲೆ-ಕಂಕುಳಲ್ಲಿ ಹೊತ್ತು ಹೆಜ್ಜೆಗಳನ್ನು ಎಳೆದುಕೊಂಡು ಹೋಗುವರು. ಅವನ್ನು ಎಲ್ಲಿಗೆ ಕೊಡುವರೋ ತಿಳಿದಿಲ್ಲ. ಆದರೆ ಅವರು ಪ್ರತಿ ಬೀದಿ ಸುತ್ತಿ ತಮ್ಮ ಕೈ ತುಂಬುವಷ್ಟು ಡಬ್ಬಗಳನ್ನು ತಂದು, ಇಟ್ಟು ಮತ್ತೊಂದು ಬೀದಿಗೆ ಹೋಗುವರು. ಇದು ನನಗೆ ಆಸಕ್ತಿ ಹುಟ್ಟಿಸಿದ್ದು. ನಾನು ಗಮನಿಸಿದ್ದು ಮೂವರು ಇಳಿವಯಸ್ಸಿನವರ ವಿಭಿನ್ನ ಜೀವನದ ಸ್ತರಗಳನ್ನು. ಈ ವಯಸ್ಸಿನಲ್ಲೂ ತನ್ನ ಊಟ ಬಟ್ಟೆಗೆ-ದುಡಿಯುತ್ತಿರುವ ಅಜ್ಜಿ, ಮಗ-ಸೊಸೆಯರ ಹಂಗಿನ ಆಶ್ರಯದಲ್ಲಿರುವ ಅಜ್ಜ, ನಿರಾಳವಾಗಿ ತಮ್ಮ ಕೊನೆಯ ದಿನಗಳನ್ನು ಸಾಗಿಸುತ್ತಿರುವ ಮತ್ತೊಬ್ಬ ಅಜ್ಜ!! ಎಷ್ಟು ಶ್ರೀಮಂತ ಭಗವಂತನ ಸೃಷ್ಟಿ ಎಂದು ಆನಂದಿಸಿದೆ.
ಯೌವನದ ದಿನಗಳಲ್ಲಿ ಮಕ್ಕಳಿಗಾಗಿ ಮುನ್ನುಗ್ಗುವ ವ್ಯಕ್ತಿಯೇ ಇಳಿವಯಸ್ಸಿನಲ್ಲಿ ಶಕ್ತಿ ಕಳೆದುಕೊಂಡು, ಒಂದೊಂದು ಹೆಜ್ಜೆ ಇಡುವಾಗಲೂ ತಮ್ಮ ಕಾಲಿನ ಮೇಲೆ ತಮಗೇ ನಿಯಂತ್ರಣವಿಲ್ಲದೆ, ಹೆಜ್ಜೆ ಇಟ್ಟಾಗ ಎಷ್ಟು ಕೆಳಗೆ ಭೂಮಿ ಸಿಗುವುದೋ ಎಂದು ಅಂದಾಜು ಮಾಡುತ್ತಾ ಹೆಜ್ಜೆ ಇಡುವರು. “ಕಾಲ ಕೆಳಗಿನ ಭೂಮಿಯೇ ಕುಸಿದಂತೆ” ಎಂಬ ನುಡಿಗಟ್ಟಿನ ಒಂದು ಆಯಾಮ ಕಣ್ಣ ಮುಂದೆ ಬಂದಂತಾಯಿತು. ಇದರ ಜೊತೆಗೆ ಮಬ್ಬು ಕಣ್ಣು, ಎದೆ ಸಿಡಿಸುವಂತ ಗಾಡಿಗಳ Horn ಸದ್ದು. ಒಂದು ಸೆಕೆಂಡಿಗೆ ೩೦ ಗಾಡಿಗಳು ಓಡಾಡುವಷ್ಟು ವಾಹದಟ್ಟಣೆ!! ಜೀವನದ ಸುಖ-ದುಃಖಗಳನ್ನೆಲ್ಲ ದಾಟಿದ ಜೀವ, ಒಂದು ರಸ್ತೆ ದಾಟಲು ತನ್ನ ಜೀವನವನ್ನೇ ಪಣಕ್ಕಿಡಬೇಕು. ಇವರಿಗೆ ನೆಮ್ಮದಿ ಕಳೆದ ನಮ್ಮ “ಅಭಿವೃದ್ಧಿ” ಮುಂದೆ ನಮ್ಮ ನೆಮ್ಮದಿ ಕಸಿಯದೇ ಇರುವುದೇ ?!
ಭಾನುವಾರದ ಸಾಕ್ಷಾತ್ಕಾರಗಳಲ್ಲಿ ಮತ್ತೊಂದು ಹೊಂಗೆ ಮರದ್ದು. ನಿಮಗೆ ಹೇಳಲೇ ಬೇಕು,
ಯುಗಾದಿ ಬಂತೆಂದರೆ ಮರಗಳಿಗೆ ಇರುವ ಸಂಭ್ರಮ ನೋಡಬೇಕು… ಇನ್ನೂ ಒಂದು ತಿಂಗಳಿರುವಾಗಲೇ ಹಳೆಯ ಎಲೆಗಳನ್ನು ಉದುರಿಸಿ, ಹೊಸ ಚಿಗುರು ತೊಟ್ಟು ಯುಗಾದಿ ವೇಳೆಗೆ ಹೊಂಗೆ ಹೂವು ಭೂದೇವಿಯನ್ನು ಅಲಂಕಾರ ಮಾಡುವುದನ್ನು ನೋಡುವುದೇ ಆನಂದ. ಆ ಹೂವಿಗೆ ಬರುವ ಮಕರಂದ ಹೀರುವ ಜೇನು ನೋಡುವ ಸಂಭ್ರಮ. ಆಧುನಿಕ ಪ್ರಪಂಚ ತನ್ನ ಪಾಡಿಗೆ ತಾನು ೨ ಚಕ್ರ, ೩ ಚಕ್ರ, ೪ ಚಕ್ರ, ೬ ಚಕ್ರಗಳ ಗಾಡಿಯ ಮೇಲೆ ಬಿಡುವು ಇಲ್ಲದೆ ಓಡುತ್ತಿದೆ. ಆದರೆ ಈ ಮರಗಳು ತಮ್ಮ ಪಾಡಿಗೆ ತಮ್ಮ ಜೀವನ ಬದುಕುತ್ತಿವೆ. ಅವುಗಳ ಜೀವನ ಶೈಲಿಯಲ್ಲಿ ಗೊಂದಲ ಆಗಿರಬಹುದು. ಏಕೆಂದರೆ ಮೊದಲು ನೆಲದ ಮೇಲೆ ಮಣ್ಣಿತ್ತು. ಉದುರುವ ಎಲೆ, ಹೂವು, ಕಾಯಿ ಮತ್ತೆ ಭೂಮಿ ಸೇರಿ ಶಕ್ತಿಕೊಡುತ್ತಿತ್ತು ಬೇರುಗಳಿಗೆ. ಮಳೆ ಬಂದಾಗ ನೀರು ಆರಾಮವಾಗಿ ಸಿಗುತ್ತಿತ್ತು. ಈಗ ಈ ಯಾವ ಸುಖವೂ ಅವುಗಳಿಗಿಲ್ಲ. ಏಕೆಂದರೆ ನಮಗೆ ಥಾರ್ ಹಾಕಿರುವ ರಸ್ತೆ ಬೇಕಲ್ಲವೆ!!
ಉದುರುವ ಎಲೆ, ಹೂವು, ಕಾಯಿ ನಮಗೆ ಕಸ. ಗುಡಿಸುವವರಿಗೂ ಕಿರಿಕಿರಿ. ಯಾವುದು ಭೂಮಿಯನ್ನು “ಗಂಧವತೀ ಪೃಥಿವೀ” ಎಂಬ ಅಸಾಧಾರಣ ಲಕ್ಷಣಕೊಟ್ಟಿತ್ತೋ ಆ ಎಲ್ಲಾ ಸಂಬಂಧಗಳನ್ನು ಯಶಸ್ವಿಯಾಗಿ ನಾಶ ಮಾಡಿದ್ದೇವೆ. ಥಾರ್ ರಸ್ತೆಯನ್ನೂ ಸೀಳಿ ಬೇರುಗಳನ್ನು ಬಕೆಟ್ ನಂತೆ ಚಾಚಿ ಮಣ್ಣು, ನೀರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದರೂ ನಾವು ಅಲ್ಲಿಯೂ ಪ್ಲಾಸ್ಟಿಕ್ ಹಾಕಿ ಉಸಿರುಕಟ್ಟಿಸುವುದನ್ನು ಮಾತ್ರ ಮರೆಯುವುದಿಲ್ಲ. ಬಿದ್ದ ಮಳೆಯ ನೀರು ಹರಿದು ಚರಂಡಿ ಸೇರುವಾಗ ಯಾರಿಗೆ ಬೇಕಿತ್ತು ಈ ಥಾರ್ ರೋಡ್ ಎಂದು ಸಿಟ್ಟಾಗುವುದು. ಆದರೂ ತನ್ನ ಧರ್ಮ ಬಿಡದೆ ಕಾಲ-ಕಾಲಕ್ಕೆ ಚಿಗುರಿ, ಒಣಗಿ ತನ್ನ ಸಂತತಿಯನ್ನು ಪಸರಿಸುವ, ವಾಹನಗಳ ದಟ್ಟ ಹೊಗೆಯನ್ನೂ ಮೀರುವ ಹೊಂಗೆ ಹೂವಿನ ಘಮಘಮ ಹೇಗೆ ಬಾಳಬೇಕೆಂಬುದನ್ನು ನಮಗೆ ಕಲಿಸಿದೆ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು)
(ಅಧ್ಯಾಪಕರ / ಪೋಷಕರ ಸ್ವಾಧ್ಯಾಯ ಹಂಚಿಕೆ ವಿಭಾಗ)
ಸಂಸ್ಕೃತದಲ್ಲಿನ ಚಾಟುಶ್ಲೋಕಗಳು – ಬಾಲಚಂದ್ರ (ಸಂಸ್ಕೃತ ಅಧ್ಯಾಪಕರು, ಪ್ರಾಥಮಿಕ ವಿಭಾಗ)
ಸಂಸ್ಕೃತ ಭಾಷೆಯ ಮಹತ್ವ ಎಲ್ಲರಿಗೂ ತಿಳಿದದ್ದೇ ಆಗಿದೆ. ಆ ಭಾಷೆಯಲ್ಲಿರುವ ಸಾಹಿತ್ಯ ಸಾಗರದಂತೇ ಅದ್ಭುತವೂ, ವಿಶಾಲವೂ, ಅಗಾಧವೂ ಆಗಿದೆ. ಸಂಸ್ಕೃತದ ಕವಿಗಳ ಕಾವ್ಯಗಳನ್ನು ಆಸಕ್ತಿಯಿಂದ ಓದ ಹೊರಟರೆ ಅದು ಎಂದಿಗೂ ಮುಗಿಯದು. ಅವುಗಳ ಸಂಖ್ಯೆಯೂ, ಪ್ರತಿಯೊಂದರ ಗಾತ್ರವೂ ಅಂಥದ್ದಾಗಿದೆ.
ಈ ಕಾವ್ಯಗಳೂ ಅನೇಕ ಪ್ರಕಾರದ್ದಾಗಿವೆ. ಗದ್ಯ ಕಾವ್ಯಗಳು, ಪದ್ಯ ಕಾವ್ಯಗಳು, ಚಂಪೂ ಕಾವ್ಯಗಳು ಅವುಗಳಲ್ಲಿ ಪ್ರಧಾನ ವಿಭಾಗಗಳು. ಇವುಗಳಲ್ಲಿ ಪದ್ಯಕಾವ್ಯಗಳು ಬಹಳ ಸ್ವಾರಸ್ಯ ಉಳ್ಳವುಗಳಾಗಿವೆ. ಕವಿಗಳು ಬೇರೆ ಬೇರೆ ಛಂದಸ್ಸು-ವೃತ್ತಗಳಲ್ಲಿ, ಬೇರೆ ಬೇರೆ ಅಲಂಕಾರಗಳನ್ನು ಬಳಸಿ, ಅನೇಕ ಪ್ರಸಂಗಗಳನ್ನು ಕಂಡದ್ದಕ್ಕಿಂತಲೂ ಸುಂದರವಾಗಿ ಮನದಲ್ಲಿ ಅನುಭವಿಸಿ, ಅನುಭವಿಸಿದ್ದನ್ನು ಓದುಗರು ಇನ್ನೂ ಚೆನ್ನಾಗಿ ಆಸ್ವಾದಿಸುವಂತೆ ಶ್ಲೋಕಗಳ ರೂಪದಲ್ಲಿ ಬರೆಯುತ್ತಾರೆ. ಅದಕ್ಕೇ ಹೇಳಿರುವುದು- “ಕವಿಃ ಕರೋತಿ ಕಾವ್ಯಾನಿ ರಸಂ ಜಾನಂತಿ ಪಂಡಿತಾಃ” ಎಂದು. ಹಾಗೆಂದ ಮಾತ್ರಕ್ಕೆ ಕವಿ ಪಂಡಿತನಲ್ಲ ಎಂದರ್ಥವಲ್ಲ. ಕವಿಯ ಕಾವ್ಯದ ರಸವನ್ನು ಕವಿ ಕಂಡಂತೇ ಕಾಣಲು ಅಥವಾ ಅದಕ್ಕಿಂತ ಹೆಚ್ಚಾಗಿ ಅನುಭವಿಸಲು ಪಂಡಿತನಿಗಷ್ಟೇ ಸಾಧ್ಯ ಎಂದು.
ನಮ್ಮಲ್ಲಿ ಅನೇಕರು ಸಂಸ್ಕೃತವನ್ನು ಚೆನ್ನಾಗಿ ಬಲ್ಲವರು, ಕಲಿಯಬೇಕೆಂದು ಬಯಸುತ್ತಿರುವವರು, ಅರಿಯಬೇಕೆಂದರಿತವರು, ಅರಿಯದವರು ಎಲ್ಲರೂ ಇದ್ದೇವೆ. ಸಂಸ್ಕೃತದಲ್ಲಿ ಅನೇಕರೀತಿಯ ಶ್ಲೋಕಗಳಿವೆ. ಅವುಗಳಲ್ಲಿ ಚಾಟು ಶ್ಲೋಕಗಳೂ ಒಂದು. ಚಾಟು ಎಂದರೆ ಆಹ್ಲಾದಕರವಾದ, ಪ್ರಿಯವಾದ ಎಂಬರ್ಥವಿದೆ. ಚಾಟು ಶ್ಲೋಕಗಳೆಂದರೆ ಮುದವನ್ನು ನೀಡುವ ಚಮತ್ಕಾರಿ ಶ್ಲೋಕಗಳು. ಎಲ್ಲಾ ಶ್ಲೋಕಗಳೂ ಮುದವನ್ನೇ ನೀಡುತ್ತವೆ. ಆದರೆ ಈ ಚಾಟು ಶ್ಲೋಕಗಳು ಪಾಂಡಿತ್ಯಪೂರ್ಣವಾದವುಗಳೂ, ಸಂದರ್ಭೋಚಿತವಾದವುಗಳೂ, ಹಾಸ್ಯಯುಕ್ತವಾದವುಗಳೂ, ಸರಳವಾಗಿ ಅರ್ಥವಾಗದಿದ್ದರೂ ಅರ್ಥವಾದೊಡನೆ ಖುಷಿಕೊಡುವವುಗಳೂ ಆಗಿರುತ್ತವೆ. ಒಂದೆರಡು ಶ್ಲೋಕಗಳನ್ನು ನೋಡೋಣ-
“ಮೃಗಾತ್ಸಿಂಹಃ ಪಲಾಯತೇ” ಅಂದರೆ ಜಿಂಕೆಯದೆಸೆಯಿಂದ ಸಿಂಹ ಓಡುತ್ತದೆ. ಲೋಕದಲ್ಲೆಲ್ಲಾದರೂ ಕಾಣಲು ಸಾಧ್ಯವೇ ಇಂತಹ ಪ್ರಸಂಗವನ್ನು. ಕವಿಗಳು ಈ ಪ್ರಸಂಗವೂ ಸರಿಯೆನ್ನುತ್ತಾರೆ. ಹೇಗೆ ಎಂದರೆ-
ಋಷೇರಸ್ಯಾಶ್ರಮೇ ಪುಣ್ಯೇ ಶಾಪಸಂತ್ರಸ್ತಮಾನಸಃ|
ಉದ್ಬೋಧತೋÅಪಿ ಪ್ರಾಯೋÅಯಂ ಮೃಗಾತ್ಸಿಂಹಃ ಪಲಾಯತೇ||
ಋಷಿಯ ಆಶ್ರಮದ ಬಳಿ ಜಿಂಕೆಗಳೆಲ್ಲಾ ಚೆನ್ನಾಗಿ ಹುಲ್ಲು ಮೇಯುತ್ತಿವೆ. ಸಿಂಹ ಜಿಂಕೆಗಳನ್ನು ಕಂಡು ತಿನ್ನಲು ಬಯಸಿದೆ. ಆದರೆ ಆಶ್ರಮದ ಜಿಂಕೆಗಳನ್ನು ತಿನ್ನಲು ಹೋಗಿ, ಋಷಿಗೆ ಸಿಟ್ಟು ಬರಿಸಿ, ಅವರಿಂದ ಶಾಪ ಪಡೆದು ಸಾಯುವುದಕ್ಕಿಂತ ಇಲ್ಲಿಂದ ಕಾಲ್ಕೀಳುವುದೇ ಉಚಿತವೆಂದುಭಾವಿಸಿದೆ ಸಿಂಹ. ಹೀಗೆ ಸಿಂಹವು ಜಿಂಕೆಯದೆಸೆಯಿಂದ ಓಡುತ್ತಿದೆ ಎಂಬುದನ್ನು ಸಮರ್ಥಿಸಿದ್ದಾರೆ ಕವಿಗಳು.
ಯಾವ ವಿಜ್ಞಾನಯುಗದಲ್ಲೂ ಆಗಸದಲ್ಲಿ ನೂರು ಚಂದ್ರರು ಅಸಾಧ್ಯವೆನಿಸುತ್ತದೆ. ಆದರೆ ಸಂಸ್ಕೃತದ ಕವಿಗಳಿಗೆ ಅದು ಅಸಂಗತವಲ್ಲ-
ವಿಧೇ ಪಿಧೇಹಿ ಶೀತಾಂಶುಂ ಯಾವನ್ನಾಯಾತಿ ಮೇ ಪ್ರಿಯಃ|
ಆಗತೇ ದಯಿತೇ ಕುರ್ಯಾಃ ಶತಚಂದ್ರಂ ನಭಸ್ಥಲಮ್||
“ಶತಚಂದ್ರಂ ನಭಸ್ಥಲಮ್” ನೂರು ಚಂದ್ರರುಳ್ಳ ಆಗಸ ಹೇಗೆ ಸಾಧ್ಯ? ಒಮ್ಮೆ ಪ್ರಿಯನನ್ನು ಅಗಲಿದ ವಿರಹಿಣಿ ಬ್ರಹ್ಮನನ್ನು ಕುರಿತು ಹೇಳುತ್ತಾಳಂತೆ- “ಈ ಚಂದ್ರನನ್ನು ನೋಡಿ ನನ್ನ ವಿರಹವ್ಯಥೆ ತಾಳಲಾಗಿದೆ. ಬ್ರಹ್ಮಾ, ಚಂದ್ರನನ್ನೊಮ್ಮೆ ಮುಚ್ಚಿಹಾಕು. ನನ್ನ ಪ್ರಿಯನು ಬಂದಮೇಲೆ ಬೇಕಾದರೆ ಆಗಸದಲ್ಲಿ ನೂರು ಚಂದ್ರರನ್ನು ತೂಗುಹಾಕು”- ಹೇಗಿದೆ ಕವಿಗಳ ಆಲೋಚನಾ ಸಾಮರ್ಥ್ಯ.
ಬಡಕವಿಯೊಬ್ಬ ರಾಜನ ಬಳಿಬಂದು ನಾನೂ ನಿನ್ನಂತೆ ರಾಜ ಎಂದರೆ ಹೇಗಿರುತ್ತದೆ? ರಾಜ ಅವನನ್ನು ಸುಮ್ಮನೆ ಬಿಡಬಹುದೇ. ಇಲ್ಲ ರಾಜ ಸುಮ್ಮನೆ ಬಿಟ್ಟಿಲ್ಲ, ಅವನಿಗೆ ಸನ್ಮಾನ ಮಾಡಿ ಕಳುಹಿಸುತ್ತಾನೆ. ಅರೆ! ಇದೇನಿದು ಎನ್ನುತ್ತೀರಾ?
ಅಹಂ ಚ ತ್ವಂ ಚ ರಾಜೇಂದ್ರ ಲೋಕನಾಥಾವುಭಾವಪಿ|
ಬಹುವ್ರೀಹಿರಹಂ ರಾಜನ್ ಷಷ್ಠೀತತ್ಪುರುಷೋ ಭವಾನ್||
ಎಲೈ ರಾಜನೇ! ನಾನು ನಿನಗಿಂತೇನೂ ಕಡಿಮೆಯಲ್ಲ. ನೀನೂ ಲೋಕನಾಥ (ಒಡೆಯ) ನಾನೂ ಲೋಕನಾಥ. ಹೇಗೆಂದರೆ ನೀನು ಷಷ್ಠೀ ತತ್ಪುರುಷಸಮಾಸದ ಲೋಕನಾಥ. ಅಂದರೆ ಲೋಕದ ಒಡೆಯನಾದವನು. ನಾನು ಬಹುವ್ರೀಹಿಸಮಾಸದ ಲೋಕನಾಥ. ಅರ್ಥಾತ್ ಲೋಕವೇ ಗತಿಯಾಗಿ ಉಳ್ಳವನು. ಇದನ್ನು ಕೇಳಿದ ರಾಜ ಸಂತೋಷದಿಂದ ಪಂಡಿತನನ್ನು ಸನ್ಮಾನಿಸಿದ. ಹೇಗಿದೆ ಕವಿಯ ಚಾತುರ್ಯ?
ಈಗ ಸ್ವಲ್ಪ ವಿಭಿನ್ನವಾದ ಇನ್ನೊಂದು ಶ್ಲೋಕವನ್ನು ಗಮನಿಸೋಣ. ದ್ರೋಣಾಚಾರ್ಯರು ಕೌರವರಕಡೆಯಿಂದ ಯುದ್ಧಮಾಡಿದರೂ ಕೃಷ್ಣಭಕರಾಗಿದ್ದರೆಂಬುದು ತಿಳಿದ ವಿಚಾರ ತಾನೆ? ಆದರೆ ಕವಿಯೊಬ್ಬ ಹೇಳುತ್ತಾನೆ-
ಕೇಶವಂ ಪತಿತಂ ದೃಷ್ಟ್ವಾ ದ್ರೋಣೋ ಹರ್ಷಮುಪಾಗತಃ|
ರುದಂತಿ ಕೌರವಾಃ ಸರ್ವೇ ಹಾ ಕೇಶವ ಕಥಂ ಗತಃ||
ಕೃಷ್ಣ ಬಿದ್ದದ್ದನ್ನು ಕಂಡು ದ್ರೋಣಾಚಾರ್ಯರು ಸಂತಸಪಟ್ಟರು. ಎಲ್ಲಾ ಕೌರವರು ದುಃಖದಿಂದ ಅತ್ತರು…. ಇದು ಯಾವ ಪ್ರಸಂಗವಪ್ಪಾ ಎಂದು ತಲೆಕೆರೆದುಕೊಳ್ಳಬೇಡಿ. ಸಂಸ್ಕೃತದ ಮತ್ತು ಸಂಸ್ಕೃತ ಕವಿಯ ಚಮತ್ಕಾರದ ಪ್ರಸಂಗವಿದು. ಕೇಶವ ಎಂದರೆ ಕೃಷ್ಣ ನಿಜ. ಆದರೆ “ಕ” ಎಂದರೆ ನೀರು ಎಂಬರ್ಥವೂ ಇದೆ. ಆದ್ದರಿಂದ ಕೇಶವ ಎಂದರೆ ನೀರಿನಲ್ಲಿ ಬಿದ್ದ ಹೆಣ ಎಂಬರ್ಥ ಸಿಗುವುದು. ದ್ರೋಣ ಎಂದರೆ ಕೌರವಪಾಂಡವರ ಗುರುಗಳು ನಿಜ. ಆದರೆ ದ್ರೋಣ ಪದದ ಇನ್ನೊಂದರ್ಥ ಕಾಗೆ ಎಂದು. ಹಾಗೇ ಕೌರವ ಪದಕ್ಕೆ ನರಿ ಎಂಬರ್ಥವೂ ಇದೆ. ನೀರಲ್ಲಿ ಹೆಣ ಬಿದ್ದರೆ ಕಾಗೆಗಳಿಗೆ ಸಂತೋಷ. ನರಿಗಳಿಗೆ ಅದು ಸಿಗದಿರುವ ಕಾರಣ ದುಃಖ ಸಹಜ. ಇದು ಕವಿ ಚಮತ್ಕಾರವೂ, ಸಂಸ್ಕೃತ ಭಾಷೆಯ ಸಾಮರ್ಥ್ಯವೂ ಹೌದು.
ಈಗ ಶ್ಲೋಕಕ್ಕೆ ಮೊದಲು ಒಂದು ಸಣ್ಣ ಕಥೆ ಕೇಳೋಣ. ಕುಸುಮಪುರವೆಂಬ ಒಂದು ಊರು. ಅನೇಕ ಸಂಸ್ಕೃತ ಪಂಡಿತರಿರುವ ಆ ಊರಿಗೆ ಬೇರೆ ಊರಿನಿಂದ ಕೆಲವು ದುರಹಂಕಾರಿ ಪಂಡಿತರ ಗುಂಪೊಂದು ವಾದಕ್ಕಾಗಿ ಬಂದಿತ್ತು. ಇವರ ಅಹಂಕಾರವನ್ನು ಮಣಿಸಬೇಕೆಂದು ಕುಸುಮಪುರದ ಪಂಡಿತರು ಒಂದು ಉಪಾಯ ಮಾಡಿದರು. ತಮ್ಮ ಮನೆಯ ಕೆಲಸದಾಕೆಯನ್ನು ಆಕೆಯ ಮಗನೊಡನೆ, ವಾದಕ್ಕಾಗಿಬಂದ ಪಂಡಿತರು ತಂಗಿದ್ದ ಮನೆಯ ಸ್ವಚ್ಛತೆ ಮೊದಲಾದ ಕೆಲಸಕ್ಕಾಗಿ ಕಳುಹಿಸಿದರು. ಆ ಪಂಡಿತರು ಬೆಳ್ಳಂಬೆಳಗ್ಗೆ ತಮ್ಮ ಆಹ್ನಿಕಗಳನ್ನು ಮಾಡುತ್ತಿದ್ದಾಗ ಆಕಾಶದಲ್ಲಿ ಕಾಗೆಗಳು ಶಬ್ದ ಮಾಡುತ್ತಿದ್ದವು. ಇದನ್ನು ಕಂಡ ಕೆಲಸದಾಕೆಯ ಮಗ ತಾಯಿಯ ಬಳಿ “ಕಾಗೆಗಳು ಏಕೆ ಶಬ್ದ ಮಾಡುತ್ತಿವೆ” ಎಂದು ಕೇಳಿದನು. ಆಗ ಆಕೆ ಒಂದು ಶ್ಲೋಕದ ಮೂಲಕ ಮಗನಿಗೆ ಉತ್ತರ ಕೊಡುತ್ತಾಳೆ. ಆ ಶ್ಲೋಕ ಹೀಗಿತ್ತು-
ತಿಮಿರಾರಿಸ್ತಮೋ ಹಂತಿ ಇತ್ಯಾಕುಲಿತಮಾನಸಾಃ|
ವಯಂ ಕಾಕಾ ವಯಂ ಕಾಕಾ ಇತಿ ಜಲ್ಪಂತಿ ವಾಯಸಾಃ||
ನೋಡು ಮಗನೇ ಈಗ ಸೂರ್ಯೋದಯವಾಗುತ್ತಿದೆ. ಕತ್ತಲೆಯ ವೈರಿಯಾದ ಸೂರ್ಯ ಕತ್ತಲೆಯನ್ನು ನಾಶಪಡಿಸುತ್ತಿದ್ದಾನೆ. ಅದರಿಂದ ಕಪ್ಪಾದ ಕಾಗೆಗಳು ಸೂರ್ಯ ನಮ್ಮನ್ನೂ ಕತ್ತಲೆಯೆಂದು ಭಾವಿಸಿ ಎಲ್ಲಿ ನಾಶಪಡಿಸುತ್ತಾನೋ ಎಂಬ ಭೀತಿಯಿಂದ ನಾವು ಕಾಗೆಗಳು, ನಾವು ಕಾಗೆಗಳು ಎಂದು ಕೂಗಿ ಕೂಗಿ ಹೇಳುತ್ತಿವೆ. ತಾಯಿಯ ಶ್ಲೋಕರೂಪವಾದ ಈ ಉತ್ತರ ಕೇಳಿ ದುರಹಂಕಾರಿ ಪಂಡಿತರಿಗೆ ಕಷ್ಟವಾಯಿತು. ಅವರು “ನಿನಗೆ ಈ ರೀತಿಯ ಶ್ಲೋಕವನ್ನು ಯಾರು ಕಲಿಸಿದರು” ಎಂದು ಆಕೆಯಲ್ಲಿ ಕೇಳಿದರು. ಆಕೆ “ಕಲಿಸುವುದೇನು? ನಾನು ನಮ್ಮೂರಿನ ಪಂಡಿತರ ಮನೆಯಲ್ಲಿ ಕೆಲಸಮಾಡುವಾಗ ಅತ್ತಿಂದಿತ್ತ ಓಡಾಡುತ್ತಾ ಶ್ಲೋಕಮಾಡುವುದನ್ನು ಸ್ವಲ್ಪ ಸ್ವಲ್ಪ ಕಲಿತುಕೊಂಡಿದ್ದೇನೆ” ಎಂದಳು. ಪಂಡಿತರಿಗೆಲ್ಲಾ ಮೂರ್ಛೆ ಹೋಗುವುದೊಂದು ಬಾಕಿ. ಈ ಊರಿನ ವಿದ್ವಾಂಸರಲ್ಲಿ ವಾದಕ್ಕಿಳಿದರೆ ನಮ್ಮದೇ ಮರ್ಯಾದೆ ಹೋದೀತೆಂದು ಅಲ್ಲಿಂದ ಅದಾಗಲೇ ತಮ್ಮೂರಿಗೆ ಹೊರಟುಬಿಟ್ಟರು.
ಈಗ ಅವರಿವರ ಕಥೆ ಬಿಡೋಣ. ಈ ಕವಿಗಳು ನಾರಾಯಣ, ರುದ್ರರನ್ನೂ ಬಿಟ್ಟಿಲ್ಲ. ಸಂಸಾರದ ಸಮಸ್ಯೆ ಕೇವಲ ನಮಗೆ ಮಾತ್ರವಲ್ಲ ಸಾಕ್ಷತ್ ಪರಶಿವನಿಗೆ ಮತ್ತು ಮಹಾವಿಷ್ಣುವಿಗೂ ಈ ಸಮಸ್ಯೆ ಇದೆ ಎನ್ನುತ್ತಾರೆ ಸಂಸ್ಕೃತದ ಕವಿಗಳು. ಹೇಗೆಂದರೆ –
ಅತ್ತುಂ ವಾಂಛತಿ ವಾಹನಂ ಗಣಪತೇರಾಖುಂ ಕ್ಷುಧಾರ್ತಃ ಫಣೀ
ತಂ ಚ ಕ್ರೌಂಚಪತೇಃ ಶಿಖೀ ಚ ಗಿರಿಜಾಸಿಂಹೋಪಿ ನಾಗಾನನಮ್|
ಗೌರೀ ಜಹ್ನುಸುತಾಮಸೂಯತಿ ಕಲಾನಾಥಂ ಕಪಾಲಾನಲಃ
ನಿರ್ವಿಣ್ಣಃ ಸ ಪಪೌ ಕುಟುಂಬಕಲಹಾದೀಶೋಽಪಿ ಹಾಲಾಹಲಮ್||
ಗಣಪತಿಯ ವಾಹನವಾದ ಇಲಿಯನ್ನು ಶಿವನ ಕಂಠದಲ್ಲಿರುವ ಹಾವು ತಿನ್ನಬಯಸಿದೆ. ಹಾವನ್ನು ಶಿವನ ಮಗ ಷಣ್ಮುಖನ ವಾಹನ ನವಿಲು ತಿನ್ನಬಯಸಿದೆ. ಪಾರ್ವತಿಯ ವಾಹನವಾದ ಸಿಂಹ ಆನೆಯ ವೈರಿ. ಆನೆಮುಖದ ಗಣಪತಿಯನ್ನು ಸಿಂಹ ವೈರಿಯಂತೆ ಕಾಣುತ್ತಿದೆ. ಶಿವನ ತಲೆಯ ಮೇಲಿರುವ ಗಂಗೆಯನ್ನು ಪಾರ್ವತಿಯು ಸವತಿಯಂತೆ ಮಾತ್ಸರ್ಯದಿಂದ ಕಾಣುತ್ತಾಳೆ. ಶಿವನ ಕೈಯ್ಯಲ್ಲಿರುವ ಕಪಾಲದ ಬೆಂಕಿ ತಲೆಯಲ್ಲಿರುವ ಚಂದ್ರನನ್ನು ಕರಗಿಸಲು ಬಯಸುತ್ತಿದೆ. ಹೀಗೆ ತನ್ನ ಕುಟುಂಬಿಕರ ಪರಸ್ಪರ ಜಗಳವನ್ನು ಕಂಡು ದುಃಖಿತನಾದ ಶಿವ ಹಾಲಾಹಲ ವಿಷವನ್ನು ಕುಡಿದ ಎನ್ನುತ್ತಿದೆ ಈ ಶ್ಲೋಕ. ಶಿವ ಹಾಲಾಹಲ ಕುಡಿದ ಕಾರಣ ನಮಗೆಲ್ಲಾ ಗೊತ್ತೇ ಇದೆ. ಆದರೆ ಅದಕ್ಕೆ ಕಾರಣವನ್ನು ಹೀಗೂ ಆಲೋಚಿಸಬಹುದೆಂದು ಕವಿಗಳಿಗೆ ಮಾತ್ರ ಗೊತ್ತಾಗಲು ಸಾಧ್ಯ.
ಏಕಾ ಭಾರ್ಯಾ ಪ್ರಕೃತಿ ಮುಖರಾ ಚಂಚಲಾ ಚ ದ್ವಿತೀಯಾ
ಪುತ್ರಸ್ತ್ವೇಕೋ ಭುವನವಿಜಯೀ ಮನ್ಮಥೋ ದುರ್ನಿವಾರಃ|
ಶೇಷಃ ಶಯ್ಯಾ ಶಯನಮುದಧೌ ವಾಹನಂ ಪನ್ನಗಾರಿಃ
ಸ್ಮಾರಂ ಸ್ಮಾರಂ ಸ್ವಗೃಹಚರಿತಂ ದಾರುಭೂತೋ ಮುರಾರಿಃ||
ಮಹಾವಿಷ್ಣುವಿಗೂ ಸಂಸಾರದ ಸಮಸ್ಯೆ ಬಿಟ್ಟಿಲ್ಲವಂತೆ. ಅವನಿಗೆ ಇಬ್ಬರು ಪತ್ನಿಯರು ಸರಸ್ವತಿ ಮತ್ತು ಲಕ್ಷ್ಮಿ. ಮೊದಲನೆಯವಳು ಸ್ವಭಾವತಃ ವಾಚಾಳಿ. ಎರಡನೆಯವಳು ಸದಾಸಂಚಾರಿಣಿ. ಇನ್ನು ಒಬ್ಬ ಮಗ ಮನ್ಮಥ ಅವನನ್ನು ನಿಗ್ರಹಿಸಿವುದೇ ಅಸಾಧ್ಯವಾಗಿದೆ. ಮಲಗಲು ಸರಿಯಾದ ಹಾಸಿಗೆಯೂ ಇಲ್ಲದೇ ಶೇಷನ ಮೇಲೆ ಮಲಗಬೇಕಾಗಿದೆ ಅದೂ ಸಮುದ್ರ ಮಧ್ಯದಲ್ಲಿ. ಇನ್ನು ವಾಹನವೋ ಸರ್ಪಗಳ ವೈರಿಯಾದ ಗರುಡ. ಹೀಗೆ ತನ್ನ ಮನೆಯ ತಾಪತ್ರಯಗಳನ್ನು ಸದಾ ನೆನೆಸುತ್ತಾ ಖಿನ್ನನಾದ ವಿಷ್ಣುವು ಜಡವಾದ ಮರದರೂಪವನ್ನು (ಪುರಿಯ ಜಗನ್ನಾಥ)ತಾಳಿದ್ದಾನೆ.
ಹೀಗೆ ತಮ್ಮ ಕವಿತಾ ಸಾಮರ್ಥ್ಯದಿಂದ ಕವಿಗಳು ವಿಷ್ಣು, ರುದ್ರರಿಗೂ ಸಂಸಾರದ ದುಃಖವಿದೆಯೆಂದು ಹೇಳುತ್ತಾರೆ. ಸಂಸ್ಕೃತಭಾಷೆ ಆವೆ ಮಣ್ಣಿನಂತೆ. ಅದರ ಸರಿಯಾದ ಅರಿವಿರುವವನು ಎಂಥಹಾ ಕೃತಿಯನ್ನೂ ರಚಿಸಬಲ್ಲ. ಹೀಗೆ ಸಂಸ್ಕೃತದಲ್ಲಿ ಚಾಟು ಶ್ಲೋಕವಲ್ಲದೆ ನಾನಾವಿಧವಾದ ಶ್ಲೋಕಗಳಿವೆ. ಸಂಸ್ಕೃತ ಒಂದು ವಿಶಿಷ್ಟವಾದ ಭಾಷೆ ಎಲ್ಲರೂ ಆಭಾಷೆಯನ್ನು ಕಲಿಯೋಣ. ಅಲ್ಲಿರುವ ಕೃತಿಗಳನ್ನು ಓದಿ ಆನಂದಿಸೋಣ.
-೦-
– Meena.Y, (Teacher Elementary Division)
Need of various aspects of health in children:
As we know, the majority of children are physically healthy. They are joyful, active and a source of energy at home. Present era of education and the stress put on them by parents, school and society, made them more machines than a being with a atman inside. As machines have wear and tear our children are also susceptible to wear and tear by emotional and mental challenges put across by the education system and nuclear family, which the current education system and parents (working population) are not willing or failed to address at this point of time.
Spiritual health has been most abused and misunderstood by various spiritual people and preached as religion but in reality spiritual health is beyond all religion and gives inner strength to children to overcome the stress generated by this society and make the child to understand his/ her religion better and to follow. If we want our children to have balanced and holistic health, we need to rediscover our own health, that is the ancient wisdom.
WHO defines health as a state of complete physical, mental, social and a spiritual well-being and not merely the absence of disease or infirmity.
To know more about this, let us look into the ancient wisdom which speaks about the different bodies and various aspects associated with it. Taittiriya Upanishad talks about Pancha Koshas – the five sheaths and different bodies (sharira). This ancient science is much more closer to our modern science in terms of disease origin and its cure, provided we understand and follow it. We as teachers and parents need to learn and understand this science and apply it practically in order to manifest greatness in each child.
The Pancha Koshas are Annamaya kosha, Pranamaya kosha, Manomaya kosha, Vignanamaya kosha and Anandamaya kosha
The three shariras are Sthula sharira, Sukshma sharira, and Karana sharira.
∙ Sthula sharira
o The physical sheath (Annamaya kosha) belongs to Sthula sharira.
∙ Sukshma sharira
o The energy sheath, emotional sheath ( Pranamaya kosha),
o The mental sheath (Manomaya kosha)
o The intellectual sheath (Vignanamaya kosha)
∙ Karana sharira
o The blissful sheath (Anandamaya kosha) belongs to Karana sharira.
For the holistic development of an individual, all the five koshas and the three shariras are equally important.
The entire cosmic creation begins from the point of the Panchabhutas or the five elements. They are Prithvi (Earth), Aapa (Water), Teja (Fire), Vayu (Air), Akasha (Ether). These five elements contain five tanmatras (vishaya/Guna). They have the supporting indriyas (jnanendriya) .
∙ Shabda gunakamaakaasham (sound), shabda graahyaha shrotrendriya
(this comprises of shabda)
∙ Sparsha(touch), aakaashat vaayuhu (this comprises of shabda, sparsha)
sparshavaan vayuhu
∙ Roopa(sight), vaayoho agnihi (this comprises of shabda, sparsha, roopa)
chakshu
∙ Rasa(taste), agneraapaha (this comprises of shabda, sparsha, roopa, rasa)
rasanendriya shitasparshavatyaapaha
∙ Gandhavatee prithivi (smell)adbhyaha prithivi(this comprises of shabda,
sparsha, roopa, rasa, gandha )Indriyam gandhagraahakam ghraanam
tachcha naasaagravartee
This sharira is created by the pancha bhootas.
The various aspects that contribute to annamaya kosha are food, sleep, exercise;
pranamaya kosha is proper breathing; manomaya kosha is the activities associated to right and left brain (balanced emotions, feelings, thoughts, and logical thinking and reasoning); vijnanamaya kosha is intuition- beyond logical analysis, which is the requirement for present generation; and anandamaya kosha is peace and bliss- which is the search engine needed at this moment.
Sthula sharira, that is, annamaya kosha as the name itself suggests, is formed by the food. Sthula means gross. To maintain this, the kind of food we take, the amount and the quality of sleep, the physical activity—the vyaayaama, and asana that we do daily matter a lot. Yama and niyama are important for every kosha.
Exercise or Asanas (Hata yoga) are also one of the most important aspects in order to be fit in order to achieve success , we need a fit and sustainable body. The Asanas play a vital role in the growth, flexibility, stamina and also to develop the immune system.
About eyes
The jnanendriyas which are connected to the sthula sharira are the eyes, nose, ears, tongue and skin. The sensorial aspects are predominant and need to be emphasised. Eyes are said to be the most important indriya (sarvendiyanam nayanam pradhaanam). In today’s learning situation, the eyes play an important role.
Problems faced by parents or negligence in taking care
Many parents have several problems or complaints regarding children being addicted to gadgets and they say that it is difficult to get them out, but initially they give these gadgets to children in order to keep them engaged, avoid all kinds of troublesome activities and keep them quiet. After some time the same parents complain that it is very difficult to get them out of the gadgets. Thus, parents who find it very difficult to engage them, who do not know what to do, give these gadgets. Some say that they give these gadgets because children like them. On realising the impact of the gadgets on the mind and the eyes, they want them to come out of it. But the major impact of gadgets is on the mental and emotional wellbeing of children. If your children are becoming arrogant, abusive, do not listen to your words, does t mix with family members and they do respond to emotions of parents like pain/pleasure etc. These are manifestations of the mental and emotional trauma by parents, teachers and also the games in gadgets or the non living characters in gadgets on the growing child, which we never addressed. It’s time to blame ourselves and correct ourselves for the betterment of our children.
In this context, I would like to share an experience when I was working in a Residential School. In the dining hall, children were demanding jazzy music or drums, and that was played one day. In the same school Dr. Gururaj Karajagi Sir was there. On hearing this, he immediately called for a meeting and asked for the reason for playing the music. One of the teachers said that the children were wanting it and they were enjoying it very nicely, Sir put it across saying that we are there to refine their taste, rather than act according to their taste. This incident really touched me a lot, Sir has also mentioned this several times. We cannot always act according to fancies of our children and students. We need to demarcate and be very clear about what are the things that are good for them, how to mould them, and we need to work keeping all this in mind children definitely will want gadgets, they will want them for various other purposes, But we as parents and teachers are there to refine their tastes. So what we give with proper intention and for the betterment of the child, keeping all this in mind, helps in the growth of the child. It is inevitable in this situation, so use it with discretion.
Care for the organs and being close to the nature (how nature enhances the organs)
When we look at nature—plants, trees all are green in colour, when we look at the sky it is blue in colour. Looking at these actually brings in a lot of peace and calmness. It is soothing to the mind. This is the reason why it is important to take children to nature, expose them to nature, bring them up in the midst of nature. It is always good to be open to nature, watching the greenery around them and observing nature itself is a great teacher which refines and rejuvenates our mental and emotional body. Eg: when you ionto water in the forest and have bath, how much you feel fresh and vitality in your mind and emotions. It was in your body or in mind, this is what makes the difference when we know changes in different kosha how it affects us. In the same way in this busy schedule of life, if we are able to keep our children’s mental and emotional body healthy – what all changes can expect from them. Is it much needed to us or not? Time to re think…
Children need to be exposed to nature wherein they hear the chirping sounds of the birds, they hear the sound of the waves, waterfall, breeze, and when it comes to the aagraana, they need to experience and smell the aroma of mud, the fragrance of different types of flowers, and the mud during the rainy season. They need to taste all types of fruits and vegetables, Bittergourd, for example, might be bitter, but they should experience it. Children are very choosy, they don’t like certain fruits, we need to expose them to nature’s gifts. Children should be exposed to sunrise, sunset, sea watching, bird watching, nature walk.
Pranamaya kosha
The pranamaya kosha is important for breathing. It’s just not breathing, it’s beyond. It has vitality or life which can give life to each molecule / atom including the cell in the body. Pranayam is one such process where will fill the vitality to our body.
Pranayama is also another very important aspect. It brings in calmness and has a soothing effect on children. It helps in addressing restlessness and hyperactivity. Children are to be taught the proper breathing pattern and techniques. In the fast running competition we had forgotten the need for emotional instability in them.
Emphasis by parents
Most of the time we as adults— either for ourselves or our children—give importance to sthula sharira (annamaya kosha) and more of manomaya kosha with logical mind. If a child has to have a holistic development, all the koshas are equally important at every stage ( from childhood to adulthood) . Vignanamaya kosha and Anandamaya kosha are something which we do not usually consider.
Chakras and their implications
The chakras in the body play a vital role in holistic development. Many of you know about Chakras, you might have come across in Lalitha Sahasranamam , where it speaks about the different chakras in the body— Sahasrara, Ajna, Vishuddhi, Anahata, Manipura, Swadhistana chakra, Mooladhara chakra
Where is malfunctioning of these chakras, it tends to manifest as the physical ailments. The malfunctioning of these chakras can either be due to
Many of these problems will not be able to be addressed by treating the physical body itself. Eg: If the child is very hyperactive and restless, too much sleep, then there is a malfunctioning of Moolaadhara chakra.
When there is too much obesity or malnourishment, always wanting to munch, then the Nabhi chakra is malfunctioning, so that needs treatment.
When there is always depression, irritation, anger, jealousy, hatred, with a negative approach, the Manipura chakra will be affected.
When there is no clarity of thoughts, and finds it very difficult to express in the class either in oral form or written form, in spite of a lot of preparation, then there is a problem with both Vishuddi and Swadhistana. These two chakras contribute to the creative aspect in an individual. So we need to understand that the incapability is not at the physical level, it can be at the level of the koshas. If the chakras are malfunctioning it tends to manifest as the disorders ailments or the challenges.
Let us move on to the ajna chakra. If the child or even an adult finds it very difficult to make a decision, has lack of focus and clarity, then there is a problem or malfunctioning of the Ajna Chakra. Even if the child or anybody has some mental disorder, the Ajna chakra could be malfunctioning.
Sahasrara is the Chakra on top of the head, where many believe that God will be having Amrutha Kalasha and will be pouring on an individual through the Sahasrara. This needs to be activated. If the brain and mental faculties are not developed properly, that is because of the malfunctioning of the Sahasrara.
On the whole, we have to identify and understand the difficulties of the students, not just at the physical level, that is the annamaya kosha, we need to identify it at various levels. it is not because they cannot do it, it is because the system is not alright. For this, I would like to give an example, though the intake is there, but no output , say for example, if the food is consumed and in spite of it, if a person is not able to excrete, then there is some block. Again, if there is a block in the pipe, the water does not flow easily.. In the same way, if there is a block in any region within the body, there will be some difficulty or challenge for the individual. If those blocks are treated properly, definitely there will be a change in the individual.
As adults, we would have often faced various problems. For example, we might have wonderful ideas, but we might not be able to execute or use; or we may be very good executors but fall short in planning, so in some areas, some faculties need to be enhanced, which helps in holistic development. The same thing applies to students, young children, because when certain aspects are blocked, there is no free flow.
If the energy, the Shakti, does not flow freely in the entire body, then these kinds of challenges will be visible. We need to understand the mechanism to bring in the requisite change. This is how the body works in combination with energy. The chakras and the pancha koshas go hand in hand, hence addressing panchakosha will help for overall development.
This article gives glimpses about the role of pancha koshas and chakras in health management not only at physical level, but also in emotional, mental and intellectual aspects of a person. Understanding the science behind and learning the techniques to enhance the ability of each kosha is very important to make our lives more balanced and also support children in holistic development.
Reference:
परवरिश– आशा (अध्यापिका, प्रौढशाला)
परवरिश, एक ऐसा शब्द, जिसे सुनकर हर एक व्यक्ति के मन में तरह-तरह के विचार उत्पन्न होते हैं । यह एक ऐसा कार्य है जिसे सभी माता-पिता अपनी सम्फूर्ण योग्यता से बखूभी निभाना चाहते हैं । परवरिश एक लम्बा सफर हि ना कि एक निर्धारित मंजिल लेकिन इस सफर को सुहाना और आनन्दित बनाने के लिए प्रत्येक माता-पिता के द्वारा कुछ सही कदम उठाने की आवश्यकता है ।
इस दिशा में सर्वप्रथम प्रयास, समय के साथ स्वयं में और अपने विचारों में बदलाव के लिए तैयार रहना है । माता-पिता को यह हमेशा याद रखना चाहिए कि हर एक बच्चा अनोखा है और बहुत बुद्धिमान भी । बच्चे को उसकी आयु को देखते हुए किसी प्रकार भी उसे कम नहीं आंकना चाहिए । बच्चे के साथ हमेशा धैर्य से बर्ताव करना चाहिए । जब बच्चा परिस्थिति मे अचानक आवेश में आजाये, तब हमें उसे व्यक्तिगत ना लेकर उसका कारण जानने का प्रयास करना चाहिए । इसके पीछे कोई भी कारण हो सकता है, जैसे कि बच्चे को भूख लगाना, पर्याप्त निद्रा का अभाव या कोई शारिरिक कष्ट । उपरोक्त स्थितियों में माता-पिता के लिए आवश्यक है, कि वे एक अच्छा आदर्श प्रस्तुत करें । इस स्थिति में बच्चे की वास्तविक स्थिति को समझते हुए अपने क्रोध पर नियंत्रण रखना और धैर्य से काम लेना आवश्यक है ।
अनुशासन का बीज कम उम्र में हि, बच्चे के जीवन में बो देना चाहिए । परिवार में प्रारम्भ से हि अनुशासन के कुछ नियम होने चाहिए, जो सबके ऊपर समान रूप से लागू हो । यदि हम चाहतें हैं कि हमारा बच्चा बडा होकर अनुशासन मे रहे, तो सर्वप्रथम हमें अनुशासन का आदर्श प्रस्तुत करने की आवश्यकता है । सभी के विचारों का आदर करना एक स्वस्थ परिवार की निशानी है, चाहे बह छोटा बच्चा हो या युवक । जब माता – पिता बच्चे की दिन भर की अनुकूल और प्रतिकूल गतिविधियों को ध्यान से सुनते हैं और समझते हैं, तब बच्चे का अपने माता-पिता के साथ एक भावनात्मक संबन्ध बन जाता है, जिससे एक स्वस्थ और सुखी समाज का निर्माण होता है । अतः परवरिश को एक कठिन कार्य ना समझकर इसे एक अनुशासन और आनन्द से भरा एक सफर समझना चाहिए ।
ಕರ್ಜಗಿ ಅವರಿಂದ ಕರಗಿದ ಜಿಗಿ ಭಾಗ್ಯಶ್ರೀ ಚಿಕ್ಕೇರೂರು (ಅಧ್ಯಾಪಕರು, ಮಾಧ್ಯಮಿಕ ವಿಭಾಗ)
ಇಂದು ಸಮಾಜದಲ್ಲಿ ನಾವು ನಮ್ಮನ್ನು ಗುರುಗಳು ಅಥವಾ ಶಿಕ್ಷಕರು ಎಂದು ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಜ್ಞಾನ ಪ್ರಸರಣದಲ್ಲಿ ನಾವು ಗುರುವಾಗಬೇಕೋ? ಶಿಕ್ಷಕರಾಗಬೇಕೋ ?ಎಂಬ ಚಟುವಟಿಕೆಯಿಂದ ಆರಂಭವಾದ ಇಂದಿನ ವಿಚಾರಸಂಕಿರಣ ಗತ ಮತ್ತು ಆಧುನಿಕ ಶಿಕ್ಷಣದ ಅಳವಡಿಕೆಯ ಮುಖೇನ ಸಾಗುವಾಗ, ಖ್ಯಾತ ಸಾಹಿತಿ ಎಮ್.ಎನ್ ವ್ಯಾಸರಾವ್ ಅವರ “ಹಳೆಯ ಕೊಳಲಿಗೆ ಹೊಸ ಉಸಿರು, ಹಳೆಯ ಮರಕ್ಕೆ ಹೊಸ ಹಸಿರು. ಹೊಸ ದನಿ ಹೊಸ ಬಗೆ ಕೊಡಿ ಗಮನ” ಎಂಬ ಕೃತಿಯು ನನ್ನ ಸ್ಮೃತಿಪಟಲದ ಮೇಲೆ ಹರಿದುಹೋಯಿತು. ಅಂತೆಯೇ ಕರ್ಜಗಿಯವರು ಹೇಳಿದ “ಹಳೆಯದರ ಸಮೃದ್ಧಿ, ಹೊಸದರ ಸತ್ವ” ಎಂಬ ಮಾತು ಅಚ್ಚಳಿಯದೇ ಉಳಿದು ಅದರ ಜಾಡನ್ನೇ ಹಿಡಿದು ಸಾಗಿತು.
ಬದಲಾವಣೆ
ಬದಲಾವಣೆ ಜಗದ ನಿಯಮ. ಕಾಲಾಯ ತಸ್ಮೈ ನಮ: ಎನ್ನುವಂತೆ ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ನಾವು ಬೆಳೆಯುತ್ತಿದ್ದೇವೆ. ಹಾಗಾದರೆ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಯಾವ ರೀತಿಯದು ? ಅಂದು ಏನಿತ್ತು ? ಇಂದು ಏನಿದೆ ? ನೋಡೋಣ….
ಇಷ್ಟೆಲ್ಲ ಬದಲಾವಣೆಗಳ ನಿರಂತರ ಸುಳಿಯಲ್ಲೂ ಮಾನವನ ಮೂಲ ಅಪೇಕ್ಷೆಗಳು ಇಡೇರದೇ ಹಾಗೇ ಉಳಿದಿವೆ. ಹಾಗಾದರೆ ಈ ಮೂಲಾಪೇಕ್ಷೇಗಳ ಈಡೇರಿಕೆಯು ಅಸಾಧ್ಯವೇ? ಎಂಬ ನಮ್ಮ ಪ್ರಶ್ನೆಗೆ ಉತ್ತರ ಹೀಗಿದೆ. ಕೇವಲ ಬಾಹ್ಯಾರ್ಥದಲ್ಲಿ ಮೂಲಾಪೇಕ್ಷೆಗಳನ್ನು ಅರ್ಥೈಸದೇ ಒಳ ಅರ್ಥದಲ್ಲಿ ಗಂಭೀರವಾಗಿ ಅರ್ಥೈಸಿದಾಗ, ಬದಲಾವಣೆಯು ಅರ್ಥವತ್ತಾಗಿ ಬೆಳೆದಾಗ ಅವುಗಳ ಈಡೇರಿಕೆಯು ಖಂಡಿತವಾಗಿಯೂ ಸಾಧ್ಯ. ಈ ನಿಟ್ಟಿನಲ್ಲಿ ಹಳೆಯ ಬೇರನ್ನು ಭದ್ರವಾಗಿ ಆಧರಿಸಿ, ಹೊಸ ಚಿಗುರನ್ನು ಬೆಳೆಸುವ ಮೂಲಮಂತ್ರವನ್ನು ನಾವೆಲ್ಲಾ ಧರಿಸ ಬೇಕಿದೆ. ಲೇಖನದ ಶೀರ್ಷಿಕೆಗೂ, ಬರವಣಿಗೆಯ ವಿಷಯಕ್ಕೂ ಹೊಂದಾಣಿಕೆಯಾಗುತ್ತಿಲ್ಲವೆಂಬ ಒಂದು ಸಣ್ಣ ಸಂಶಯ ಎಲ್ಲರಿಗೂ ಮೂಡದಿರಲು ಸಾಧ್ಯವಿಲ್ಲ. ಹಾಗಾದರೆ ಹೇಗೆ ಕರಗಿತು ಕರ್ಜಗಿ ಅವರಿಂದ ಕರಿ ಜಿಗಿ? ಹೀಗೆ ನೋಡೋಣ
ಧೈರ್ಯ ಇದೆ ಏನ್ರೀ?
ನಾವು ಗುರುಗಳೋ, ಶಿಕ್ಷಕರೋ ಆಗಿ ಗುರುತಿಸಿಕೊಳ್ಳುವ ಮುನ್ನ ಆ ಸ್ಥಾನದ ಮಹತ್ವವನ್ನು ಅರಿತಿರುವುದು ಬಹಳ ಮುಖ್ಯ. ಅದರೊಂದಿಗೆ ಆ ಪಾತ್ರ ನಿರ್ವಹಣೆಗೆ ತಯಾರಿದ್ದೇವೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳುವಾಗ ಖ್ಯಾತ ಸಾಹಿತಿ ’ಡಿ.ವಿ.ಜಿ’ಯವರ ಮಾತು. ಕರ್ಜಗಿಯವರು ತಾವು ಅಧ್ಯಾಪಕ ವೃತ್ತಿಗೆ ತೆರಳುತ್ತಿದ್ದೇನೆ ಎಂದು ಡಿ.ವಿ.ಜಿ ಯವರ ಬಳಿ ಹೇಳಿದಾಗ “ಧೈರ್ಯ ಇದೆ ಏನ್ರೀ?” ಎಂದ ಗುಂಡಪ್ಪನವರು ಕೇಳಿದ ಪ್ರಶ್ನೆ ಅವರೊಬ್ಬರಿಗೆ ಮಾತ್ರವಲ್ಲದೇ, ಗುರುವಿನ ಪಾತ್ರ ನಿರ್ವಹಿಸಲು ಹೊರಟ ಪ್ರತಿಯೊಬ್ಬರಿಗೂ ಅನ್ವಯವಾಗುವಂತಿದ್ದು, ಪ್ರಾಯಃ ಆ ಪ್ರಶ್ನೆಯ ಗಾಂಭೀರ್ಯತೆಯ ಆಳಕ್ಕಿಳಿದು ನಮ್ಮ ಅಂತರಾತ್ಮಕ್ಕೆ ಉತ್ತರಿಸಿಕೊಳ್ಳುವ ಪ್ರಯತ್ನ ಮಾಡಿದಲ್ಲಿ ಸ್ವಲ್ಪ ಮಟ್ಟಿನ ಕಲಿಕೆ ನಮ್ಮಲ್ಲಿ ಉಂಟಾಗಬಹುದೇನೋ. ಹಾಗಾದರೆ ಈ ಗಂಭೀರ ಪ್ರಶ್ನೆಗೆ ಗುರು ಹೇಗೆ ಉತ್ತರಿಸಬಲ್ಲ?
ಉತ್ತರಿಸುವ ಗುರು
ಮಕ್ಕಳಿಗೆ ಗುರುವೇ ಆದರ್ಶದ ಆಕೃತಿ. ಶಿಕ್ಷಕನ ವೈಯುಕ್ತಿಕ ಜೀವನವು ವಿದ್ಯಾರ್ಥಿಗೆ ತೆರೆದ ಪುಸ್ತಕದಂತಿರಬೇಕು. ಏಕೆಂದರೆ ವಿದ್ಯಾರ್ಥಿಗಳು ವಿಷಯದಿಂದ ಕಲಿತ ಅಂಶಗಳಿಗಿಂತ ಗುರುವಿನಿಂದ ಕಲಿತ ಪಾಠವೇ ಅವರ ಜೀವನದ ಪರಿವರ್ತನೆಗೆ ಪೂರಕವಾಗಿರುತ್ತವೆ. ಆದ್ದರಿಂದ ಗುರುವು ಆದರ್ಶಪ್ರಾಯವಾಗಿರುವುದು ಒಂದು ಮುಖ್ಯ ಲಕ್ಷಣ ಎನ್ನಬಹುದು. ಈ ಮಾತನ್ನು ಹೇಳುವ ಒಂದು ಪುಟ್ಟ ಕವಿತೆಯ ಪ್ರಯತ್ನ ಕೆಳಗಿದೆ.
ಉತ್ತರೋತ್ತರದ ಮಹತ್ತರದ ಎತ್ತರಕೆ
ವಿದ್ಯೆಯ ಅರ್ಥಿಯನು ಕರೆದೊಯ್ಯಲು ಹತ್ತಿರಕೆ
ಕತ್ತರಿಸಿ ತನ್ನೆಲ್ಲ ಮತ್ಸರೀಪ್ಸಿತಗಳನು
ಸತ್ಕರಿಸಿ ಉತ್ಕರ್ಷಿಸಿ ಸತ್ವಾಂಶಗಳನು
ಬಿತ್ತರಿಸಿ ಜ್ಞಾನವನು ಕಲಿಕೆ ಪುಷ್ಠೀಕರಿಸಿ
ತತ್ತರಿಕೆ ಕತ್ತರಿಸಿ ಅಜ್ಞಾನ ನೀಗಿಸುವ
ಜ್ಞಾನದಾ ಜ್ಯೋತಿಯನು ಸದಾಕಾಲ ಬೆಳಗಿಸುವ
ಅನುಭವದಿ ಮಾಗಿ, ಅನನುಭವಿಗಳ ಮಾಗಿಸುವ
ಮತ್ತೆ ಹುರಿದುಂಬಿಸಿ,ಕಷ್ಟಗಳ ಚುಂಬಿಸಿ
ಗೊತ್ತಿರಿಸಿ, ಗುರಿಯಿರಿಸಿ ಗುರುತರವಾಗಿಸಿ
ಹಿರಿತನದ ಹೊರೆ ಹೊರಲು ಸನ್ನದ್ಢರಾಗಿಸಿ
ಪ್ರತ್ಯಕ್ಷವಾದ ಸಾಕ್ಷಾತ್ಕಾರವೇ ಆಗಿರುವ
ಗುರಿಯ ಸೇರಿಸಲು ಗುರುತರವಾಗಿರುವ ಸಾರಥಿಯೇ ಗುರು.
ಈ ರೀತಿ ಗುರುವಿನ ಪಾತ್ರ ನಿರ್ವಹಿಸಲು ತನ್ನೊಳಗೆ ಈ ಎಲ್ಲಾ ಅಂಶಗಳಿಗೆ ಸಜ್ಜಾಗಿರುವುದು ಅವಶ್ಯಕ. ಹಾಗೆಂದ ಮಾತ್ರಕ್ಕೆ ನಾನು ಗುರು, ನಾನು ನಡೆದದ್ದೇ ದಾರಿ ಎಂದು ಸಾಧನೆಗೈದಂತೆ ಬೀಗುವುದು ಸಾಮಾನ್ಯ. ಮಕ್ಕಳನ್ನು ಖಾಲಿ ಶೀಷೆಯಂತೆ ಕಂಡು, ನಾವು ಕಂಡದ್ದನ್ನು, ಕಲಿತದ್ದನ್ನು ಆ ಶೀಷೆಯೊಳಗೆ ತುಂಬಿಸುವ ನಿರಂತರ ಪ್ರಯತ್ನ ಇಂದು ಎಲ್ಲೆಡೆ ಸಾಗುತ್ತಿದೆ. ಭಾವನಾತ್ಮಕವಾಗಿ ಇರಬೇಕಾದ ಗುರು-ಶಿಷ್ಯರ ಬಾಂಧವ್ಯ ಕೇವಲ ಅಂಕಗಳ ಗಳಿಕೆಯ ಸಾಧನದ ರೀತಿಯಲ್ಲಿ ರೂಪತಳೆದಿರಿವುದು ಬೇಸರ ಸಂಗತಿ. ಇಂತಹ ಸಂದರ್ಭದಲ್ಲಿ ಇಂದು ನಮಗೆಲ್ಲಾ “ತಮಸೋ ಮಾ ಜ್ಯೋತಿರ್ಗಮಯ” ಎನ್ನುವಂತೆ ನಾನು ಶ್ರೇಷ್ಠ, ನಾನು ಜ್ಞಾನಿ, ನಾನು ಗುರು ಎಂಬ ಮದದಿಂದ ನಮ್ಮ ಮನಸ್ಸಿಗೆ , ಬುದ್ಧಿಗೆ ಅಂಟಿದಂತಹ ದುರಭಿಮಾನ , ದುರಂಹಕಾರ ಎಂಬ ಕರಿ [ಕಪ್ಪು] ಜಿಗಿ [ಅಂಟು] ಕರಗಿ ಕರ್ಜಗಿ ಎನ್ನುವ ಕರಿಯ ಘೀಳಿಗೆ ಆಚೆಗೆ ಜಿಗಿದು, ಡಿ.ವಿ.ಜಿಯವರ ಪ್ರಶ್ನೆಗೆ ಅಂತರ್ಮುಖಿಯಾಗಿ ಉತ್ತರಿಸುತ್ತಾ ಶಿಕ್ಷಕನು ಗುರುವಾಗಿ,ಗುರುವು ಲಘುವಾಗಿ ವಿದ್ಯಾರ್ಥಿಗಳು ಗುರಿಯ ಸಾಧಿಸುವಲ್ಲಿ ಬಲವಾಗಿ ನಿಲ್ಲುವುದು ಹೇಗೆ? ಎಂದು ಕಲಿತ ಧನ್ಯತಾ ಭಾವ ಇಂದು ಎಲ್ಲಾ ಪೂರ್ಣಪ್ರಮತೀಯರದ್ದು.
ಧನ್ಯವಾದಗಳು
– ಯಲ್ಲಪ್ಪ ರೆಡ್ಡಿ (ಕರ್ನಾಟಕ ಲೋಕ ಅದಾಲತ್ ಸದಸ್ಯರು ಮತ್ತು ಪರಿಸರ ತಜ್ಞರು)
ಪೂರ್ಣಪ್ರಮತಿ ಕಳೆದ ಹತ್ತು ವರ್ಷಗಳಿಂದ ಅನೇಕ ವಿಷಯಗಳನ್ನು ಮಕ್ಕಳೊಂದಿಗೆ, ಪೋಷಕರೊಂದಿಗೆ ಹಂಚಿಕೊಂಡು ಬಂದಿದೆ. ಇದಾವುದು ಪರೀಕ್ಷೆಗಾಗಿಯೂ ಅಲ್ಲ. ಅಂಕಗಳಿಗಾಗಿಯೂ ಅಲ್ಲ. ಪೂರ್ಣಪ್ರಮತಿ ಕೊಡುತ್ತಿರುವುದು ಒಂದು ವಿಷೇಷವಾದ ಗುಳಿಗೆ. ಈ ಗುಳಿಗೆ ಮುಂದಿನ ಜೀವನಕ್ಕೆ ಬೇಕಾದ ಬಲವನ್ನು ಈಗ ತುಂಬಿಸುವುದು. ನನ್ನ ಅವಲೋಕನದಲ್ಲಿ ಪೂರ್ಣಪ್ರಮತಿಯ ಮಕ್ಕಳು ೬೦-೭೦% ಅಂಶಗಳನ್ನು ಗ್ರಹಿಸಿದ್ದಾರೆ, ೦% ಯಾರೂ ಇಲ್ಲ. ಅಂದರೆ ಸರಿಯಾದ ರೀತಿಯಲ್ಲಿ ಅವರ ಮಟ್ಟಕ್ಕೆ ಇಳಿದು ನಾವು ವಿಷಯವನ್ನು ಕೊಟ್ಟರೆ ಖಂಡಿತ ಗ್ರಹಿಸುತ್ತಾರೆ.
ಮಣ್ಣಿನಿಂದ ಹುಟ್ಟು – ಮಣ್ಣಿನಿಂದಲೇ ಕೊನೆ
ಬದುಕು ಎಲ್ಲಿ ಪ್ರಾರಂಭವಾಯಿತು, ಎಲ್ಲಿಗೆ ಕೊನೆಗೊಳ್ಳುವುದು? ಎಂಬುದರಿಂದ. ಈ ಪ್ರಶ್ನೆಗೆ ಉತ್ತರ, ಮಣ್ಣಿನಿಂದ ಪ್ರಾರಂಭವಾಗಿ ಮಣ್ಣಿನಿಂದಲೇ ಕೊನೆಗೊಳ್ಳುವುದು. ಭೂಮಿತಾಯಿ ಮನುಷ್ಯನ ಪ್ರತಿಯೊಂದು ಅಂಗಾಂಗಗಳಿಗೂ ಸತ್ವ ತುಂಬಿ ಬದುಕಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಳೆ. ಹುಟ್ಟು-ಬದುಕು-ಸಾವು ಎಲ್ಲವೂ ನಡೆಯುವುದು ಈ ಭೂಮಿತಾಯಿಯಿಂದಲೇ. ಪ್ರಾಣವಾಯು, ಯಾವ ಆಂಗಾಂಗಗಳಿಗೆ ಯಾವಾಗ ಏನು ಬೇಕು ಎಂಬ ತೀರ್ಪು ಕೊಡುವವಳು ಅವಳೇ. ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ಹೇಳಿಕೊಡುವವಳು ಅವಳೇ. ನಮಗೆ ವಿಷವಾದ ಪದಾರ್ಥವೇ ಬೇರೆಯ ಜೀವಿಗೆ ಆಹಾರವಾಗಿರಬಹುದು. ನಮ್ಮ ಆಹಾರ ಬೇರೆಯ ಜೀವಿಯ ವಿಷವಾಗಿರಬಹುದು. ಹೀಗೆ ಸಮತೋಲನೆ ಕಾಪಾಡಿ ತೀರ್ಪು ಕೊಡುವ ಶಕ್ತಿ ಇರುವುದು ಭೂಮಿತಾಯಿಗೆ ಮಾತ್ರ. ಹೀಗೆ ದೈಹಿಕ, ಮಾನಸಿಕ, ಭಾವನಾತ್ಮಕ ಸಮತೋಲನ ಬಹಳ ಮುಖ್ಯ. ಇವೆಲ್ಲವೂ ಸರಿಯಾಗಿ ಕೆಲಸ ಮಾಡಬೇಕೆಂದರೆ ಆಧ್ಯಾತ್ಮಿಕ ಸಮತೋಲನ ಚೆನ್ನಾಗಿರಬೇಕು. ಈ ಆಧ್ಯಾತ್ಮಿಕ ಬುನಾದಿ ಇಲ್ಲದೆ ಹೋದರೆ ಭಾವನೆಗಳು ದಾರಿ ತಪ್ಪುತ್ತವೆ. ಆಗ ವಿವೇಕವೂ ಕಳೆದುಕೊಳ್ಳಬೇಕಾಗುವುದು. ಆಗಲೇ ಮನುಷ್ಯರು ಮಧ್ಯಪಾನ, ಸಿಗರೇಟಿನಂತಹ ಚಟಗಳಿಗ ತುತ್ತಾಗುವರು. ಆಗ ಇರುವ ವಿವೇಕ ಇನ್ನೂ ಕಳೆದುಕೊಳ್ಳಬೇಕಾಗುವುದು. ತಂದೆ ತಾಯಿಯರಿಂದ ಪಡೆದ ಬಳುವಳಿಗಳನ್ನೂ ಕಳೆದುಕೊಳ್ಳಲು ಪ್ರಾರಂಭವಾಗುತ್ತದೆ. ಇವೆಲ್ಲವನ್ನೂ ಪೂರ್ಣಪ್ರಮತಿಯಲ್ಲಿ ನಿಧಾನವಾಗಿ ಮಕ್ಕಳಿಗೆ ತಿಳಿಸಲು ಪ್ರಾರಂಭವಾಯಿತು.
ಮಕ್ಕಳು ಮೇಲೆ ಹೇಳಿದ ವಿಷಯಗಳನ್ನು ಹೇಗೆ ಸ್ವೀಕರಿಸಿ ಮುಂದೆ ಬೆಳೆಸಿಕೊಳ್ಳುವರೋ ಎಂಬುದೂ ಗೊತ್ತಿಲ್ಲ. ಆದರೆ ಅವರಿಗೆ ಬೇಕಾದ ರೀತಿಯಲ್ಲಿ ಕೊಡುವುದರ ಮೂಲಕ ಹೆಚ್ಚಿನ ಲಾಭ ಪಡೆದವರು ಮಾತ್ರ ಅಧ್ಯಾಪಕರು. ಇದರಲ್ಲಿ ಭಾಗಿಗಳಾದ ಪೋಷಕರಿಗೂ ಇದರ ಲಾಭ ಸಿಕ್ಕಿದೆ. ಇಲ್ಲಿ ಮಗುವೇ ಕೇಂದ್ರಬಿಂದು. ಮಗುವಿನ ಭಾವನೆಯನ್ನು ಕೇಂದ್ರವಾಗಿ ಇಟ್ಟುಕೊಂಡು ನಾವೆಲ್ಲರೂ ಬೆಳೆದೆವು. ಅನೇಕ ರೀತಿಯ ವಿಶಿಷ್ಟ ಅಧ್ಯಾಪಕರು, ಅವಕಾಶಗಳನ್ನು ಮಕ್ಕಳಿಗೆ ನೀಡಲಾಯಿತು. ಮಕ್ಕಳು ಎಲ್ಲದರ ಮಿಶ್ರಣವನ್ನು ಗ್ರಹಿಸಿ ಬೆಳೆದರು. ಈ ಹಂತದಲ್ಲಿ ವಿಷಯಗ್ರಹಣೆ ಚೆನ್ನಾಗಿ ಆಯಿತು. ಒಂದು ಮಗುವೂ ಒಂದೊಂದು ಪ್ರತ್ಯೇಕ ಅಸ್ತಿತ್ವ. ಮಗುವಿನ ಮೆದುಳಿನಲ್ಲಿ ಯಾವ ರೀತಿ ಕೆಲಸ ನಡೆಯುತ್ತದೆ ಎಂಬುದು ಗೊತ್ತಿಲ್ಲದೆ, ಅರ್ಥಮಾಡಿಕೊಳ್ಳದೆ ಎಲ್ಲಾ ಮಕ್ಕಳನ್ನು ಒಂದೇ ಎಂದು ತಿಳಿಯುವುದು ತಪ್ಪು. ಅಧ್ಯಾಪಕರಾದವರು ಆ ಮಗುವಿನಲ್ಲಿರುವ ಧನಾತ್ಮಕ ಮತ್ತು ಋಣಾತ್ಮಕ ಅಂಶವನ್ನು ವಿಮರ್ಶಿಸಿ ಅದಕ್ಕೆ ತಕ್ಕಂತೆ ಪಾಠ ಹೇಳುವ ಸಾಮರ್ಥ್ಯವನ್ನು ಗಳಿಸಬೇಕು.
ಎಲ್ಲಾ ಮಕ್ಕಳಲ್ಲೂ ಸಾಮಾನ್ಯವಾದ ಅಂಶಗಳ ಇರುತ್ತವೆ, ಅಂತೆಯೇ ವಿಶೇಷಾಂಶಗಳೂ ಇರುತ್ತವೆ. ಅವರ ಮಟ್ಟಕ್ಕೆ ಇಳಿದು ಮಾತನಾಡಿದಾಗ ಮಕ್ಕಳು ಅಂಥವರನ್ನು ಸ್ವೀಕರಿಸುವರು ಮತ್ತು ತಾವು ಮರಳಿ ಕೊಡುಗೆ ಕೊಡುವರು. ನಾನು ಹೆಚ್ಚಿಗೆ ಪಡೆದದ್ದು ಮಕ್ಕಳಿಂದ. ಅವರು ಕೇಳುವ ಪ್ರಶ್ನೆಗಳು ನನ್ನಲ್ಲಿರುವ ಅಷ್ಟೋ ಇಷ್ಟೋ ಜ್ಞಾನವನ್ನು ಚುರುಕುಗೊಳಿಸುವುದು. ಅಧ್ಯಾಪಕರು ತಮ್ಮ ಅಹಂ ಅನ್ನು ಬದಿಗಟ್ಟು ಪ್ರಾಮಾಣಿಕವಾಗಿ ಮಗುವಿನೊಂದಿಗೆ ಬೆರೆತಾಗ ಎಲ್ಲೋ ಒಂದು ಕಡೆ ಅದು ಹೊರಗೆ ಬರುವುದು. ಅಧ್ಯಾಪಕರಾದವರು ಮಗು ಎಂತಹ ಪ್ರಶ್ನೆಯನ್ನೇ ಕೇಳಿದರೂ ಬಾಯಿಮುಚ್ಚಿಸದೆ ಉತ್ತರಿಸಬೇಕು, ಗೊತ್ತಿಲ್ಲದಿದ್ದರೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಹಿರಿಯರಿಗೆ ತಾಳ್ಮೆಯನ್ನು ಕಲಿಸುವುದರಿಂದ ಮಕ್ಕಳೇ ಬಹಳಷ್ಟು ಪಾಠಗಳನ್ನು ಹೇಳಿಕೊಡುತ್ತಾರೆ. ಒಂದೊಂದು ವಯಸ್ಸಿನಲ್ಲಿ ಒಂದೊಂದು ಪಾಠವನ್ನು ಕಲಿಸುತ್ತಾರೆ. ಮಕ್ಕಳಿಂದ ಕಲಿಯುವುದೇನು! ಎಂದು ಯಾರಾದರೂ ಎಂದುಕೊಂಡಿದ್ದರೆ ಅದು ಅವರ ಮೂರ್ಖತನ.
ತನ್ನತನವನ್ನು ಮಗು ಕಂಡುಕೊಳ್ಳಬೇಕು
ನಾನು ಅರಣ್ಯಾಧಿಕಾರಿಯಾಗಿ ಕಾಡಿನಲ್ಲಿ ಓಡಾಡುವಾಗ ಜಿಂಕೆ, ಆನೆ, ಚಿಟ್ಟೆ ಅಥವಾ ಸಣ್ಣ ಕೀಟಗಳ ನಡುವೆ ಇರುವ ಬಾಂಧವ್ಯವನ್ನು ನೋಡಿದರೆ ಆಶ್ಚರ್ಯ ತರಿಸುವುದು. ತುಂಟಾಟ ಆಡುವ ಆನೆಯ ಮರಿಯನ್ನು ರಕ್ಷಿಸಬೇಕು, ಹೇಗೆ ಬದುಕನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡಬೇಕು. ಆನೆಗಳ ಹಿಂಡಿನಲ್ಲಿ ಸಾಕುತಾಯಿ ಮರಿಗೆ ಪಾಠವನ್ನು ಹೇಳಿಕೊಡುವುದೋ ಹಾಗೆಯೇ ನಾವು ಮಾಡಿದ್ದೇವೆ. ಇದೊಂದು ಸಮೂಹ – ಕುಟುಂಬ. ಆನೆಗಳು ವರ್ಷಕ್ಕೆ ೫೦ ಮೈಲಿಗಳ ವರೆಗೆ ಸಮೂಹದಲ್ಲಿ ಸಂಚರಿಸುತ್ತಾ ಹೋಗುತ್ತವೆ. ಒಂದೊಂದು ಜಾಗಕ್ಕೆ ಹೋದಾಗ ಒಂದೊಂದು ವೈವಿಧ್ಯ. ಅಲ್ಲಿಗೆ ಹೇಗೆ ಹೊಂದಿಕೊಳ್ಳಬೇಕು. ಯಾವ ಋತುವಿಗೆ ಹೇಗೆ ಸ್ಪಂದಿಸಬೇಕು – ಹೀಗೆ ಒಂದು ಸಮಗ್ರ ಜೀವನಚಕ್ರವನ್ನು ಅರ್ಥಮಾಡಿಸುತ್ತದೆ. ಯಾವ ಕಾಲದಲ್ಲಿ ಮರಿಗೆ ಜನ್ಮ ಕೊಟ್ಟರೆ ಆಹಾರ – ನೀರು ಸಿಗುವುದು ಎಂಬುದನ್ನೂ ಅರ್ಥಮಾಡಿಕೊಂಡು ತಾಯಿ ಆನೆಯು ಮಗುವನ್ನು ರಕ್ಷಸುವುದು. ತಾಯಿತನ ಎನ್ನುವುದು ಒಂದು ದೊಡ್ಡ ಜವಾಬ್ದಾರಿ ಮತ್ತು ವರ. ಇದಕ್ಕೆ ಯಾರೂ ತರಬೇತಿಯನ್ನು ಕೊಟ್ಟಿರುವುದಿಲ್ಲ. ನಮಗಾದರೆ ಸಮಾಜಕ್ಕೆ ಒಬ್ಬ ಅಧ್ಯಾಪಕರು, ಗಣಿತಕ್ಕೆ ಒಬ್ಬ ಅಧ್ಯಾಪಕರು, ಕನ್ನಡಕ್ಕೆ ಒಬ್ಬ ಅಧ್ಯಾಪಕರು ಹೀಗೆ ಎಲ್ಲೆಡೆಯಿಂದಲೂ ಸಂರಕ್ಷಿಸುವ ನೆಪದಲ್ಲಿ ಅನಗತ್ಯವಾದ ರಕ್ಷಣೆಯನ್ನು ಕೊಟ್ಟು ಕೋಟೆಯನ್ನು ಕಟ್ಟುತ್ತಿದ್ದೇವೆ. ಮಗು ತಾನಾಗಿಯೇ ಬೆಳೆಯಲು ಬಿಡದೆ ನಮ್ಮ ಕಣ್ಣಳತೆಯಲ್ಲಿ ಏಕೆ ಇರಬೇಕು? ನಮ್ಮದ್ದನ್ನು ಅವರ ತಲೆಗೆ ತುಂಬಿ ಮಗು ತನ್ನ ತನವನ್ನು ಕಳೆದುಕೊಳ್ಳುವುದು. ಪೂರ್ಣಪ್ರಮತಿಯಲ್ಲಿ ನಾವು ಆದಷ್ಟು ಪ್ರಯತ್ನಪಟ್ಟು ಮಗುವಿಗೆ ತನ್ನ ತನವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸವಾಗಿದೆ.
ನಿರ್ಣಾಯಕ ಅವಧಿಯಲ್ಲಿ ಪೂರ್ಣಪ್ರಮತಿಯ ಪಾತ್ರ
ತಾಯಿಯ ಗರ್ಭದಲ್ಲಿದ್ದಾಗ 6 ನೆಯ ತಿಂಗಳಿನಿಂದ ಸುವರ್ಣಾವಧಿ ಪ್ರಾರಂಭವಾಗುವುದು. ಈ ವಯಸ್ಸಿನಲ್ಲಿ ವಿಷಯವನ್ನು ಗ್ರಹಿಸಲು ಹೆಚ್ಚು ಸಂವೇದನಾಶೀಲತೆ ಇರುವುದು. ಈ Golden age ಅಥವಾ critical period ನಲ್ಲಿ ಮಕ್ಕಳಿಗೆ ಅಗತ್ಯವಾದ ರಕ್ಷಣೆ ಕೊಡಬೇಕು. ಪೂರ್ಣಪ್ರಮತಿಯಲ್ಲಿ ಈ Golden age ಅನ್ನು ಅರ್ಥಮಾಡಿಕೊಂಡು ಅದನ್ನು ರಕ್ಷಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರಾಣಿ-ಪಕ್ಷಿಗಳಿಗೆ ಈ ಸುವರ್ಣಾವಧಿಯ ಅರಿವು ಇದೆ. ಮನುಷ್ಯರಲ್ಲಿ ಅದು ಕಳೆದುಹೋಗಿದೆ. 6 ನೇ ತಿಂಗಳಿನಲ್ಲಿ ಆಯುರ್ವೇದದಲ್ಲಿ ಪಂಚವಲ್ಕಲ ಚಿಕಿತ್ಸೆ ಬೇಕಾಗುವುದು. ಐದು ಮಹಾವೃಕ್ಷಗಳ ಸಂಪರ್ಕಕ್ಕೆ ತಾಯಿ ಬರಬೇಕು. ಈ ಅವದಧಿಯಲ್ಲಿ ಅಗತ್ಯವಾಗಿ ಬೇಕಾಗಿರುವ ಸೆರೆಟೊನಿನ್, ಎಂಡಾರ್ಫಿನ್ ಇತ್ಯಾದಿಗಳನ್ನು ಪ್ರಾಣವಾಯುವಿನ ಮೂಲಕ ಸೇವಿಸಬೇಕು. ಈ ಸಂದರ್ಭದಲ್ಲಿ ಮಗುವಿನ ಮೆದುಳು ಬಹಳ ಕಾತರದಿಂದ ಇವುಗಳನ್ನು ಸ್ವೀಕರಿಸಲು ಕಾಯುತ್ತಿರುತ್ತದೆ. ಅದು ಸಿಕ್ಕಾಗ ವಿವೇಕ ಎಂಬುದು ಮೂಡಲು ಪ್ರಾರಂಭಾಗುವುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ಇದು ಸಾಧ್ಯವಾಗುತ್ತಿಲ್ಲ. ಬದಲಾಗಿ ಅತಿಯಾದ ಒತ್ತಡಮಾತ್ರ ಮಗುವಿಗೆ ಸಿಗುತ್ತಿದೆ. ಅದರ ಪರಿಣಾಮ ಮಗುವಿನ ಬೆಳವಣಿಗೆ ಮತ್ತು ವಿವೇಕದ ಮೇಲೆ ಆಗುವುದು. ಯಾವ ಕುಟುಂಬದಲ್ಲೂ ಈಗ ಸಮಾಧಾನಕರ ವಾತಾವರಣ ಇರುವುದಿಲ್ಲ, ಯಾವುದೋ ಒಂದು ರೀತಿಯ ಬೇಸರ, ಗೊಂದಲ, ಕಷ್ಟ ಇದ್ದೇ ಇರುತ್ತದೆ. ಇದೆಲ್ಲವನ್ನೂ ಒಳಗೊಂಡಂತೆಯೇ ಆಗಿ ಮಗುವಿಗೆ ಬರುವುದು. ಇದನ್ನು ನಿಭಾಯಿಸಲು ಅನೇಕ ಅನೇಕ ಪರ್ಯಾಯಗಳನ್ನು ಹೊರಗಿನಿಂದ ನೀಡಬೇಕಾಗುವುದು. ಮಗು ಹೊಟ್ಟೆಯಲ್ಲಿದ್ದಾಗ ತಾಯಿಯ ಮನೋಮಯ ಕೋಶ ಮತ್ತು ಆನಂದಮಯ ಕೋಶಗಳ ಪ್ರಭಾವ ಮಗುವಿನ ಮೇಲೂ ಇರುವುದು. ಹೊರಗೆ ಬಂದ ಮೇಲೆ ತನ್ನದೇ ಆದ ಹೊಸ ಪ್ರಪಂಚವನ್ನು ನೋಡುವುದು. ತಾಯಿಯಿಂದ ಸಿಕ್ಕ ಬಳುವಳಿಯನ್ನು ಹೊತ್ತುಕೊಂಡೇ ಮಗು ಹೊರಗೆ ಬರುವುದು. ಇದರ ಅರಿವು ನಮಗೆ ಇರಬೇಕು. ಇಲ್ಲಿ ಪೂರ್ಣಪ್ರಮತಿಯ ಪಾತ್ರ ಬಹಳ ದೊಡ್ಡದಾದುದು. ಇಂತಹ ಬಳುವಳಿಗಳೊಂದಿಗೆ ಬರುವ ಮಗುವನ್ನು ಪೂರ್ಣಪ್ರಮತಿಗೆ ಕೊಡುವರು. ಬೇರೆ ಶಾಲೆಗಳಲ್ಲಿರುವ ಪಠ್ಯಕ್ರಮ, ಪಠ್ಯಗಳು ತಂದೆ ತಾಯಿಯರು ನಿರೀಕ್ಷಿಸುತ್ತಿರುವ ಪರ್ಯಾಯ ವ್ಯವಸ್ಥೆಗಳನ್ನು ನೀಡುತ್ತಿಲ್ಲ. ಬಹಳ ಮೇಲ್ಮಟ್ಟದಲ್ಲಿ ಅಂದರೆ, ಬಾಯಿಪಾಠ ಅಥವಾ ಕೇಲವ ಮಾಹಿತಿ ಸಂಗ್ರಹದಂತಹ ಪಾಠಗಳೇ ಇರುವುದು. ಹಾಗಾಗಿ ದಾಹ ಉಳ್ಳವರು ನೀರನ್ನು ಹುಡುಕಿಕೊಂಡು ಬರುವಂತೆ ಪೋಷಕರು ಪೂರ್ಣಪ್ರಮತಿಯನ್ನು ಹುಡುಕಿಕೊಂಡು ಬರುವರು.
ಮಕ್ಕಳಿಗೆ ಒಂದು ಚಿತ್ರವನ್ನು ನೋಡಿದರೆ “ಅದು ಏನು? ಪಕ್ಷಿಯನ್ನು ನೋಡಿದರೆ ಏಕೆ ಅಲ್ಲಿ ಹಾರುತ್ತಿದೆ? ನಾನು ಏಕೆ ಅಲ್ಲಿಗೆ ಹೋಗಲಾರೆ” ಹೀಗೆ ಅನೇಕ ಪ್ರಶ್ನೆಗಳು ಮೂಡುತ್ತವೆ. ಮಗು ಬಾಯಿ ಬಿಟ್ಟು ಕೇಳದಿರಬಹುದು, ಆದರೆ ಅದರ ಮನಸ್ಸಿಗೆ ನನ್ನಲ್ಲೇನು ಕೊರತೆ? ಅದು ಆರಾಮವಾಗಿ ಓಡಾಡುತ್ತಿದೆ! ಹೂವನ್ನು ನೋಡಿದಾಗ ಇಷ್ಟೊಂದು ಬಣ್ಣ ಎಲ್ಲಿಂದ ಬಂತು? ಹೀಗೆ ಕೋಟಿ ಕೋಟಿ ಪ್ರಶ್ನೆಗಳು ಬರುತ್ತಿರುತ್ತವೆ. ಅಂತೆಯೇ ಸಮಾಜದಲ್ಲಿ ನಡೆಯುವುದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಮತ್ತು ಗ್ರಹಿಸುವ ಸಾಮರ್ಥ್ಯ ಮಕ್ಕಳಿಗೆ ಇರುತ್ತದೆ. ಜಗಳ, ಹೊಡೆದಾಟ, ವಾಹನಗಳು ಹೀಗೆ ಎಲ್ಲವನ್ನೂ ನೋಡುತ್ತವೆ ಮತ್ತು ಗ್ರಹಿಸುತ್ತವೆ. ಇಂದಿನ ಪ್ರಪಂಚದಲ್ಲಿ ಕಾಣಸಿಗುವ ೯೦% ಋಣಾತ್ಮಕವೇ ಇರುವುದು. ಇದರ ಮಧ್ಯೇ ೧೦% ಧನಾತ್ಮಕ ಅಂಶಗಳು ಸಿಗಬಹುದು. ನಾವು ತೊಡೆಯ ಮೇಲಿ ಕೂರಿಸಿಕೊಂಡು ಮುದ್ದು ಮಾಡಿ, “ಚಿನ್ನ ಆ ಗಿಡ ನೋಡು, ಈ ಪಕ್ಷಿ ನೋಡು” ಎಂಬಿತ್ಯಾದಿ ಮಾತುಗಳನ್ನು ಹೇಳುವಾಗ ಮಗು ಅದನ್ನು ಗಮನಿಸುವುದು, ನೀವು ಏನನ್ನು ಗಮನಿಸುತ್ತಿದ್ದೀರಿ ಎಂಬುದನ್ನೂ ಗಮನಿಸುವುದು. ಹೀಗೆ ಪೂರ್ಣಪ್ರಮತಿಗೆ ಅವರು ಬರುವ ಮೊದಲು ಏನೆಲ್ಲ ನಡೆದಿದೆ, ಯಾವ ನೋವನ್ನು ಹೊತ್ತು ತಂದಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಶಾಲೆಗಳಲ್ಲೂ ಮತ್ತೆ ಇಂತಹ ವಾತಾವರಣವನ್ನೇ ನೋಡಿದರೆ ಮಗುವಿನ ಪರಿಸ್ಥಿತಿ ಏನಾಗಬಹುದು ?! ಸದ್ಯದ ಪರಿಸ್ಥಿತಿಯಲ್ಲಿ ಈ ವಿಪರ್ಯಾಸ ಇನ್ನೂ ಹೆಚ್ಚಾಗುವ ವಾತಾವರಣವೇ ಇದೆ. ಬೇರೆ ಶಾಲೆಗಳಿಗಿಂತ ಪೂರ್ಣಪ್ರಮತಿಯಲ್ಲಿ ಇದು ಸ್ವಲ್ಪ ಕಡಿಮೆ. ಇಲ್ಲಿರುವ ಸಂಬೋಧನೆಯ “ಅಕ್ಕ – ಅಣ್ಣ” ಎನ್ನುವ ಭಾಷೆಯೇ ಎಲ್ಲರೂ ನಮ್ಮವರೇ ಎನ್ನುವ ಭಾವ ಬರುವುದು. ಸರ್ ಎಂದರೆ ಸರ್ ಮಾತ್ರ ಆಗುತ್ತಾರೆ. ಪೋಷಕರು ಹಣ ನೀಡುತ್ತಾರೆ, ಶಾಲೆ ತಮಗೆ ತಿಳಿದದ್ದನ್ನು ಹೇಳಿಕೊಡುವುದು. ಅದಕ್ಕಿಂತ ಹೆಚ್ಚಿನ ಬಾಂಧವ್ಯ ಇಲ್ಲ. ಇಲ್ಲಿರುವುದು ಯಾಂತ್ರಿಕ ಸಂಬಂಧ. ಆದರೆ ಅಣ್ಣ – ಅಕ್ಕ ಎಂದಾಗ ಸಿಗುವ ಕುಟುಂಬದ ವಾತಾವರಣವೇ ಬೇರೆ.
ಶಿಕ್ಷಣ ಇಬ್ಬರೂ ಕಲಿಯುವಂತದ್ದಾಗಬೇಕೇ ಹೊರತು ಯಾಂತ್ರಿಕವಾಗಬಾರದು. ಒಂದೊಂದು ಮಗುವು ಒಂದೊಂದು ಪ್ರಯೋಗ, ಪ್ರತ್ಯೇಕ ಮತ್ತು ವಿಶಿಷ್ಟ. ಆದ್ದರಿಂದ ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿಗೂ ಪ್ರತ್ಯೇಕ ಗಮನ ಸಿಗುವುದು. ಹೀಗೆ ಮಗುವನ್ನು ತಯಾರು ಮಾಡುವುದೇ ಈ ಸಂಸ್ಥೆಯ ಬಲ. ಸಮಾಜದಲ್ಲಿ ಇರುವ ಸರಾಸರಿ ಮಕ್ಕಳನ್ನು ಈ ಸಂಸ್ಕಾರದಲ್ಲಿ ಬೆಳೆಸಿದರೆ ಅವರು ಇತರರನ್ನು ಸರಿಪಡಿಸಿವರು, ಒಂದು ಧನಾತ್ಮಕ ಶಕ್ತಿಯಾಗಿ ಹೊರಬರುವರು. ಇದೇ ಬಳುವಳಿಯನ್ನು ಹೊತ್ತು ತಮ್ಮ ಮುಂದಿನ ಜನಾಂಗಕ್ಕೂ ಕೊಂಡೊಯ್ಯುವರು. ಇದೇ ವಾತಾವರಣ ನಾವು ಶಾಲೆಗಳಲ್ಲಿ ಕೊಡಬೇಕಿರುವುದು. ಸಹವಾಸದಿಂದ ಕಲಿಯುವುದು ಬಹಳ ಇರುತ್ತದೆ, ಪರಸ್ಪರ ಹೊಂದಿಕೊಳ್ಳುವುದು, ಧನಾತ್ಮಕ ಅಂಶಗಳನ್ನು ಸಮೂಹದಲ್ಲಿ ಹಂಚಿಕೊಳ್ಳುವುದು ಹೀಗೆ ಒಂದು ಮುಕ್ತ ವಾತಾವರಣ ಏರ್ಪಡುವುದು. ಎಲ್ಲರನ್ನೂ ಅವರವರ ವೈಶಿಷ್ಟ್ಯತೆಗಳೊಂದಿಗೆ ಒಪ್ಪಿಕೊಳ್ಳುವ ಸ್ವಭಾವ ಬಂದಾಗ ಆರೋಗ್ಯಕರ ವಾತಾರವಣ ಸೃಷ್ಟಿಯಾಗುವುದು. ಸ್ನೇಹಿತೆ ಕೊಟ್ಟ ಸಿಹಿಯಲ್ಲಿ ಅರ್ಧ ಕೊಟ್ಟಳೋ, ಕಾಲುಭಾಗ ಕೊಟ್ಟಳೋ, ಮುಕ್ಕಾಲು ಕೊಟ್ಟಳೊ ಎಂದು ಲೆಕ್ಕ ಬರುವುದಿಲ್ಲ. ಕೊಟ್ಟಿದ್ದಷ್ಟೆ ಲೆಕ್ಕಕ್ಕೆ ಬರುವುದು. ಇಂತಹ ಧನಾತ್ಮಕ ವಾತಾವರಣದಲ್ಲಿ ಬೆಳೆದ ಮಗು ತಾನು ಪಡೆದದ್ದಕ್ಕಿಂತ ಹೆಚ್ಚಿನದ್ದನ್ನು ಸಮಾಜಕ್ಕೆ ಕೊಡುವುದು. ಅಂದರೆ ಇಲ್ಲಿ ಒಂದು ಸಹಬಾಳ್ವೆ, ಕಷ್ಟವನ್ನು ಕಂಡು ಮರುಗುವ ಮನಸ್ಸು ಬರುವುದು. ಇದನ್ನೆಲ್ಲಾ ಗಮನಿಸಿ ಅಧ್ಯಾಪಕರಾದವರು ಯಾವ ಮಗುವಿಗೆ ಏನು ಕೊರತೆ ಇದೆ ಎಂಬುದನ್ನು ಅರ್ಥಮಾಡಿಕೊಂಡು ಅದಕ್ಕೆ ಬೇಕಾದುದನ್ನು ಕೊಡಬೇಕು.
ಮಕ್ಕಳಲ್ಲಿ ಸಹಬಾಳ್ವೆ ಮತ್ತು ಧನಾತ್ಮಕ ಪರಿಣಾಮವನ್ನು ಹಂಚುವ ಸಾಮರ್ಥ್ಯವನ್ನು ಬೆಳೆಸುವ ಪಠ್ಯಕ್ರಮ-ಶಾಲೆ ಬೇಕು. ಹೀಗೆ ಬೆಳೆದ ಮಕ್ಕಳಲ್ಲಿ ದ್ವೇಷ ಬರಲು ಸಾಧ್ಯವಿಲ್ಲ. ಶಾಲೆಯಲ್ಲಿರುವ ಎಲ್ಲಾ ಮಕ್ಕಳೂ ಹೀಗೆ ಆಗುವರೆಂಬುದು ಕಲ್ಪನೆಯ ಮಾತು. ಆದರೆ ೨೦% ಮಕ್ಕಳಾದರೂ ಹೀಗೆ ಬೆಳೆದರೆ ಅವರ ಪ್ರಭಾವ ಹರಡುತ್ತಾ ಹೋಗುವುದು. ಬೇರೆ ಶಾಲೆಗಳಲ್ಲಿ ಸ್ಪರ್ಧಾತ್ಮಕ ವಾತಾವರಣದಲ್ಲಿ ಈ ಸಹಬಾಳ್ವೆ ಬರಲು ಸಾಧ್ಯವೇ ಇಲ್ಲ. ಅಲ್ಲದೆ ಅಂಕಗಳ ಗೊಂದಲ ಇನ್ನೊಂದು ಕಡೆ. ಮಕ್ಕಳನ್ನು ಅಳೆಯಲು ಅಂಕಗಳು ಯಾವ ರೀತಿಯಲ್ಲೂ ಯೋಗ್ಯವಾಗಿಲ್ಲ. ಜೀವನದಲ್ಲಿ ಹಣ, ಅನುಕೂಲಗಳು ಮಾತ್ರ ಸಫಲತೆಯ ಮಾನದಂಡಗಳೂ ಅಲ್ಲ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು)
[ಅಂಕಣ ಬರಹ – ೫]
(ಪ್ರಕೃತಿ ಆರಾಧಕರಾದ ಎಲ್ಲಪ್ಪರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬರೆದ ಸಸ್ಯಪ್ರಪಂಚದ ಕಥೆಗಳ ಸರಣಿ “ತಣಿಯದ ಕುತೂಹಲ”)
ನಾರಾಯಣಿ…ಹಲವು ಮಕ್ಕಳ ತಾಯಿಯಾದ ಶತಾವರಿ ಒಂದು ಮಹಾ ಆಭರಣವಿದ್ದಂತೆ. ಪರಿಪೂರ್ಣ ಔಷಧಿಯಾಗಿ ಬಳಕೆಯಾಗುತ್ತದೆ. ಹೃದಯದ ತೊಂದರೆ, ಮೂತ್ರಪಿಂಡದಲ್ಲಿ ಕಲ್ಲು ಇದ್ದಾಗ, ಮೆದುಳನ್ನು ಚುರುಕುಗೊಳಿಸಲು, ಬೆಳವಣಿಗೆಗೆ ಬೇಕಾಗುವ ಜೀವಸತ್ವಗಳು ಇದರಲ್ಲಿ ಯಥೇಚ್ಛವಾಗಿದೆ. ಇದರ ಬಗ್ಗೆ ಸಂಹಿತೆಗಳಲ್ಲಿ ಉಲ್ಲೇಖವಿದೆಯಂತೆ. ನಾನೂ ಓದಿಲ್ಲ. ಸಪ್ತರ್ಷಿಗಳಲ್ಲಿ ಅತ್ರೇಯ ಮಹರ್ಷಿ ಹೇಗೆ ಶ್ರೇಷ್ಠರೋ ಹಾಗೆಯೇ ಇದು ಔಷಧಿಗಳಲ್ಲಿ ಶ್ರೇಷ್ಠ ಎಂದು ವೈದ್ಯರು ಮುಂದುವರಿಸಿದರು. ಇದ್ದಕ್ಕಿದ್ದಂತೆ ಏನೋ ನೆನಪಾದವರಂತೆ ಹಾ.. ನಮ್ಮ ಅಜ್ಜ ಹೇಳುತ್ತಿದ್ದರು. ಕಾಕೋಲಿ, ಕ್ಷೀರಕಾಕೋಲಿ ಎಂದು ಎರಡು ಗಿಡಮೂಲಿಕೆಗಳು ಕೇವಲ ಹಿಮಾಲದಲ್ಲಿ ಮಾತ್ರ ಸಿಗುತ್ತಿತ್ತಂತೆ. ಕಾಲಕಳೆದಂತೆ ಅದು ಸಿಗದೆ ಹೋಯಿತು. ಅದಕ್ಕೆ ಪರ್ಯಾಯವಾಗಿ ಈಗ ಶತಾವರಿಯನ್ನು ಬಳಸುತ್ತಾರೆ. ಅವರು ಹೇಳುವಂತೆ ಶತಾವರಿಗೆ ಬಹುಪತ್ರಿಕಾ, ಊರ್ಧ್ವಕಂಠಕ, ಶತಪದಿ ಎಂದೂ ಹೇಳುತ್ತಿದ್ದರಂತೆ. ಇದು ಮೇಧಾಗ್ನಿವರ್ಧಕವಂತೆ. ಅಪಸ್ಮಾರ ಕಾಯಿಲೆ, ಕೆಲವು ಸ್ವರಭೇದದ ಸಮಸ್ಯೆಗೆ, ಮೂತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗೆ ಇದು ರಾಮಬಾಣವಿದ್ದಂತೆ. ಆಡು ಭಾಷೆಯಲ್ಲಿ ಇದನ್ನು ಸೀತೆಚವರಿ, ಮಜ್ಜಿಗೆ ಗಡ್ಡೆ ಎಂದೂ ಕರೆಯುವುದುಂಟು. ಹೀಗೆ ಅಜ್ಜನ ಕೆಲವು ಮಾತುಗಳನ್ನೂ ವೈದ್ಯರು ನೆನಪಿಸಿಕೊಂಡು ಹೇಳತೊಡಗಿದರು. ಹಳೆಬೇರು ಹೊಸ ಚಿಗುರು ಸೇರಿ ಮರವು ಸೊಗಸು ಎಂಬಂತೆ ತಲೆಮಾರುಗಳ ಮೇಳನ ಈ ಚರ್ಚೆಯಲ್ಲಿ ನಡೆಯುತ್ತಿತ್ತು. ಅಷ್ಟು ಹೊತ್ತಿಗೆ ಮತ್ತೊಬ್ಬ ರೋಗಿಯು ವೈದ್ಯರನ್ನು ಹುಡುಕಿಕೊಂಡು ಬಂದರು. ಕೂಡಲೆ ವೈದ್ಯರು ಅವನತ್ತ ಗಮನ ಕೊಡಲು ಪ್ರಾರಂಭಿಸಿದರು. ನಾಳೆ ಮುಂದುವರೆಸುವಷ್ಟು ತಾಳ್ಮೆ ನೀಲಾಳಿಗೆ ಇರಲಿಲ್ಲ. ಹಾಗಾಗಿ ಸಂಜೆ ಬೇಗ ಊಟ ಮುಗಿಸಿಕೊಂಡು ಬರುವುದಾಗಿ ಹೇಳಿ ಹೊರಟಳು.
ದಾರಿಯಲ್ಲಿ ಸುಬ್ಬಿಯ ಮನೆಗೆ ಹೋಗಿ ಧೈರ್ಯ ಹೇಳಿದಳು. ನೀನೇನು ಹೆದರಬೇಡ. ಪ್ರಕೃತಿ ಮಾತೆ ತಾನೇ ತಾಯಿಯಾಗಿ ನಿನ್ನ ಮಕ್ಕಳನ್ನು ಸಾಕಲು ಇದ್ದಾಳೆ. ಶತಾವರಿ ಎಂಬ ಗೆಡ್ಡೆ ಎದೆಯಹಾಲನ್ನು ಹೆಚ್ಚಿಸುವುದಂತೆ. ನೀನು ನೆಮ್ಮದಿಯಾಗಿರು, ನಾನು ನಾಳೆ ಬರುವಾಗ ನಿನಗೆ ಅದರ ಚೂರ್ಣವನ್ನು ಮಾಡಿಸಿಕೊಂಡು ತರುತ್ತೇನೆ ಎಂದು ಭರವಸೆ ಕೊಟ್ಟು ಮನೆಗೆ ಬಂದಳು. ನಡೆದುದನ್ನೆಲ್ಲ ಮಾವನೊಟ್ಟಿಗೆ ಹೇಳುತ್ತಿದ್ದಳು. ಅಷ್ಟರಲ್ಲಿ ಗಂಡನೂ ಮನೆಗೆ ಬಂದನು. ಊಟ ಮಾಡುತ್ತಾ ಇವರ ನಡುವೆ ಇದೇ ಚರ್ಚೆ ನಡೆಯಿತು. ನೀಲಾಳ ತಣಿಯದ ಕುತೂಹಲ ಎಲ್ಲರನ್ನೂ ಆವರಿಸಿಕೊಂಡಿತ್ತು. ಸಂಜೆ ಬೇಗನೆ ಮನೆಕೆಲಸವನ್ನೆಲ್ಲ ಮುಗಿಸಿ, ಹಸುಗಳಿಗೆ ಮೇವು ಹಾಕಿ, ನೀರಿಟ್ಟು ಅತ್ತೆಗೆ ಹೇಳಿ ವೈದ್ಯರ ಮನೆಗೆ ಹೊರಟಳು. ಈ ಬಾರಿ ಅವಳ ಪತಿರಾಯನೂ ಒಟ್ಟಿಗೆ ಬರುವುದಾಗಿ ಹೇಳಿ ಹೊರಟನು. ಇಬ್ಬರು ವೈದ್ಯರ ಮನೆ ಸೇರಿದರು. ಅವರು ತಮ್ಮ ಕೆಲಸವೆಲ್ಲ ಮುಗಿಸಿ ಜಗಲಿಯ ಮೇಲೆ ಯಾವುದೋ ಚೂರ್ಣ ಮಾಡುತ್ತಾ ಕುಳಿತಿದ್ದರು. ನೀಲಾಳನ್ನು ಕಂಡ ಕೂಡಲೆ ಬೆಳಗ್ಗೆಯಿಂದ ತಲೆಯಲ್ಲಿ ಓಡುತ್ತಿದ್ದ ವಿಷಯವನ್ನೆಲ್ಲ ಹೇಳಬೇಕೆನಿಸಿತು. ಮತ್ತೆ ತಮ್ಮ ಹಳೆಯ ಗ್ರಂಥಗಳನ್ನು ತೆಗೆದರು. ಈ ಬಾರಿ ಎಲ್ಲರೂ ಗಂಭೀರವಾಗಿ ಚರ್ಚೆಯಲ್ಲಿ ತೊಡಗಿದರು.
ಪರಿಸರದಲ್ಲಿ ಕೆಲವು ರಾಸಾಯನಿಕಗಳು ಇರುತ್ತವೆ. ನಮ್ಮ ದೇಹದ ಪೋಷಣೆಗೆ ಕೆಲವು ಪೂರಕವೂ ಹೌದು, ಕೆಲವು ಮಾರಕವೂ ಹೌದು. ಆದರೆ ಎಲ್ಲಾ ರಾಸಾಯನಿಕಗಳನ್ನು ದೇಹವು ನೇರವಾಗಿ ಸ್ವೀಕರಿಸುವುದೂ ಇಲ್ಲ, ಜೀರ್ಣಿಸಿಕೊಂಡು ಬೇಕಾದ ಅಂಶವನ್ನು ಪಡೆಯುವುದೂ ಇಲ್ಲ. ಅದಕ್ಕೆ ಒಂದು ಪ್ರಕ್ರಿಯೆ ಇದೆ. ಆಧುನಿಕ ವೈದ್ಯ ಪದ್ಧತಿಯಲ್ಲಿ ದೇಹದ ಅಂಗಗಳನ್ನು ಪ್ರತ್ಯೇಕ ಮಾಡಿ ನೋಡಲಾಗುವುದು. ಆದರೆ ಪ್ರಾಚೀನ ಪದ್ಧತಿಯಲ್ಲಿ ಮನುಷ್ಯನ ಸಮಗ್ರ ದೇಹಪ್ರಕೃತಿಯನ್ನು ಗಮನಿಸಿ ಔಷಧೋಪಚಾರ ಮಾಡುತ್ತಿದ್ದರು ಎಂದು ವೈದ್ಯರು ಮುಂದುವರೆಯುತ್ತಿದ್ದರು. ಅಷ್ಟರಲ್ಲಿ ನೀಲಾಳಿಗೆ ಅವಳ ಗಂಡ ಹೇಳುತ್ತಿದ್ದ ಕೆಲವು ಪಾಠಗಳು ನೆನಪಾಯಿತು. ದೇಹದಲ್ಲಿ ಕ್ಯಾಲ್ಸಿಯಮ್, ಪೊಟಾಷಿಯಂ, ಸೆಲೆನಿಯಮ್ ಇತ್ಯಾದಿ ಇದೆ ಎಂದು. ಅವರು ಓದುವಾಗ ಕಾಲೇಜಿನಲ್ಲಿ ಬರೆಸಿದ್ದು. ಆ ಪುಸ್ತಕವನ್ನು ತಾನು ಜೋಪಾನವಾಗಿ ಎತ್ತಿಟ್ಟುಕೊಂಡಿದ್ದಳು. ಕೂಡಲೆ ಅವರಿಬ್ಬರಿಗೂ ಹೇಳಿ ಮನೆಗೆ ಓಡಿದಳು. ಅಟ್ಟದ ಮೇಲಿದ್ದ ಪೆಟ್ಟಿಗೆಯನ್ನು ತೆಗೆದು ಅದರಲ್ಲಿದ್ದ ಪುಸ್ತಕವನ್ನು ಹಿಡಿದು ಮತ್ತೆ ಬಂದಳು. ಇದು ವೈದ್ಯರಿಗೂ ಹೊಸದಾಗಿತ್ತು. ನೀಲಾಳ ಗಂಡ ತಾನೇ ಮರೆತುಹೋಗಿದ್ದ.
ಮನುಷ್ಯನ ದೇಹಕ್ಕೆ ಯಾವ ರಾಸಾಯನಿಕ ಎಷ್ಟು ಪ್ರಮಾಣದಲ್ಲಿ ಬೇಕು ಎಂಬ ನಕ್ಷೆ ಅದಾಗಿತ್ತು. ಇದನ್ನು ವಿವರಿಸುತ್ತಿದ್ದಂತೆ ವೈದ್ಯರು ಹೇಳುತ್ತಿರುವ ವಿಷಯವೂ ತಾಳೆಯಾಗುತ್ತಿತ್ತು. ಪ್ರಕೃತಿಯಲ್ಲಿನ ರಾಸಾಯನಿಕಗಳನ್ನು ನೇರವಾಗಿ ಮನುಷ್ಯ ಸ್ವೀಕರಿಸಲಾರ. ಆದ್ದರಿಂದ ಮಾತ್ರೆ/ಗುಳಿಗೆಗಳಲ್ಲಿ ಅಗತ್ಯವಿರುವ ಪ್ರಮಾಣದಲ್ಲಿ ಬೆರೆಸಿ ನೀಡಲಾಗಿರುತ್ತದೆ. ಆದ್ದರಿಂದಲೇ ’ಹೀಗೆ ತೆಗೆದುಕೊಳ್ಳಬೇಕು, ಇಷ್ಟೇ ತೆಗೆದುಕೊಳ್ಳಬೇಕು’ ಎಂಬ ನಿಯಮಾವಳಿಗಳನ್ನು ಹಾಕಿರುತ್ತಾರೆ. ಅಂತೆಯೇ ವೈದ್ಯರು ಹೇಳಿದಂತೆ ಶತಾವರಿಯಲ್ಲಿ ಸಿದ್ಧ ಔಷಧ ಅಡಗಿದೆ. ಯಾವ ಪ್ರಮಾಣದಲ್ಲಿ ಬೇಕೋ ಅದನ್ನು ಪ್ರಕೃತಿಯೇ ಸಿದ್ಧಪಡಿಸಿ ಇಡುತ್ತದೆ. ಅದನ್ನು ಚೂರ್ಣಮಾಡಿ ಎಷ್ಟು ತೆಗೆದುಕೊಳ್ಳಬೇಕು, ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕೆಂದು ವೈದ್ಯರ ಸಲಹೆ ಪಡೆದರೆ ಸಾಕು ಎಂದು ಚರ್ಚೆ ಮುಂದುವರೆಯಿತು. ಇದರ ಬಗ್ಗೆ ಇನ್ನಷ್ಟು ವೈಜ್ಞಾನಿಕ ವಿಷಯಗಳನ್ನು ತಿಳಿದರೆ ಮಾತ್ರ ಸೂಕ್ತವೆಂದು ತಿಳಿದು ಮೂವರು ಮಾತನಾಡಿಕೊಂಡು ನಗರದಲ್ಲಿರುವ ವೈದ್ಯರನ್ನು ಭೇಟಿ ಮಾಡುವುದಾಗಿ ತೀರ್ಮಾನಿಸಿಕೊಂಡರು. ಹಳ್ಳಿಗಳಲ್ಲಿ ಕೇವಲ ಹುಟ್ಟಿದ್ದು, ಸತ್ತಿದ್ದು ಮಾತ್ರ ಚರ್ಚೆಯಾಗುತ್ತದೆ ಎಂದಿಲ್ಲ…ಇಂತಹ ಕುತೂಹಲದ ಚರ್ಚೆಗಳೂ ನಡೆಯುತ್ತವೆ !! ಎಂದು ತಮ್ಮನ್ನು ತಾವೇ ಸಮರ್ಥಿಸಿಕೊಂಡು ಗುರುವಾರ ಪೇಟೆಯಲ್ಲಿರುವ ವೆಂಕಟಸ್ವಾಮಿ ಅವರನ್ನು ಭೇಟಿ ಮಾಡುವುದಾಗಿ ತೀರ್ಮಾನಿಸಿದರು. ವೆಂಕಟಸ್ವಾಮಿ ಇದೇ ಮೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಆಧುನಿಕ ವೈದ್ಯಕೀಯ ಕಲಿತು ನಗರದ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನೀಲಾಳಿಗೆ ಗುರುವಾರ ಎಂದು ಬಂದೀತೋ ಎಂಬ ಆತುರ..
ಅಂತೂ ಗುರುವಾರ ಬಂದಿತು. ವೈದ್ಯರು, ನೀಲಾ ಮತ್ತು ಅವಳ ಗಂಡ ವೆಂಕಟಸ್ವಾಮಿ ಅವರಿಗೆ ಮೊದಲೇ ಬರುವುದಾಗಿ ತಿಳಿಸಿದ್ದರಿಂದ ಹೊರಟರು. ಆಲ್ಲಿಆರೋಗ್ಯಕೇಂದ್ರಕ್ಕೆ ಭೇಟಿ ಕೊಟ್ಟರೆ ಆಶ್ಚರ್ಯವೇ ಕಾದಿತ್ತು. ಇವರು ಮೊನ್ನೆಯಷ್ಟೇ ಏನನ್ನು ಚರ್ಚಿಸಿದ್ದರೋ ಅದನ್ನು ಒಂದು ನಕ್ಷೆಯಲ್ಲಿ ಚಿತ್ರಿಸಲಾಗಿತ್ತು. ಪರಿಸರದಲ್ಲಿ ಯಾವ ರಾಸಾಯನಿಕ ಎಷ್ಟು ಪ್ರಮಾಣದಲ್ಲಿ ಮಾನವನ ದೇಹಕ್ಕೆ ಬೇಕು ಎಂದು ತುಲನಾತ್ಮಕವಾಗಿ ನೋಡುವ ನಕ್ಷೆ ಅದಾಗಿತ್ತು.
ಇದನ್ನು ನೋಡಿ ವೈದ್ಯರು ’ಅಬ್ಬ…ಆಧುನಿಕ ವೈದ್ಯಕೀಯ ಎಷ್ಟು ಮುಂದುವರೆದಿದೆ’ ಎಂದು ಆಶ್ಚರ್ಯ ಪಟ್ಟರು. ವೆಂಕಟಸ್ವಾಮಿ ಅವರನ್ನು ಭೇಟಿ ಮಾಡಿ ಇನ್ನೂ ಹೆಚ್ಚಗೆ ತಿಳಿಯಬೇಕು ಎನಿಸಿತು. ಅವರೂ ಬಂದಿದ್ದ ರೋಗಿಗಳಿಗೆಲ್ಲ ಔಷಧೋಪಚಾರ ಮಾಡಿ ನಂತರ ಬಿಡುವಾಗಿ ಇವರೊಡನೆ ಚರ್ಚೆಗೆ ಕುಳಿತರು. ನೀವು ಕರೆ ಮಾಡಿ ಹೇಳಿದ ನಂತರ ನಾನು ಹಲವು ಪುಸ್ತಕಗಳಲ್ಲಿ ಇದೇ ಅಂಶವನ್ನು ಗಮನಿಸುತ್ತಿದ್ದೆ. ನೀವು ಹೇಳಿದ ಶತಾವರಿಯನ್ನು ನಮ್ಮಲ್ಲೂ ಒಂದೆರಡು ಕಡೆ ಉಲ್ಲೇಖಿಸಿದ್ದಾರೆ. ಈ ಶತಾವರಿಯಲ್ಲಿ ದೊಡ್ಡಪ್ರಮಾಣದಲ್ಲಿ ಕ್ಯಾಲ್ಸಿಯಂ, ಫಾಸ್ಪರಸ್, ಮ್ಯಾಂಗನೀಸ್, ಸೋಡಿಯಂ, ಪೊಟಾಷಿಯಂ, ಕ್ಲೋರಿನ್, ಸಲ್ಫರ್ ಇದೆ, ಅಲ್ಲದೆ ಸ್ವಲ್ಪ ಪ್ರಮಾಣದಲ್ಲಿ ಐರನ್, ಕಾಪರ್, ಮ್ಯಾಂಗನೀಸ್, ಐಯೋಡಿನ್, ಜಿಂಕ್, ಸೆಲೆನಿಯಂ ಇದೆಯಂತೆ. ನಿಮಗೆ ಈಗ ನಾನು ಹೇಳಿದ ರಾಸಾಯನಿಕಗಳ ಮಹತ್ವ ಹೇಳುತ್ತೇನೆ. ಈ ನಕ್ಷೆಯನ್ನು ಗಮನಿಸಿ –
ಕ್ಯಾಲ್ಸಿಯಂ (Calcium) | ಮೂಳೆಯ ರಚನೆ ಮತ್ತು ಬೆಳವಣಿಗೆ, ಹೃದಯದ ಕೆಲಸ, ಜೀರ್ಣಕ್ರಿಯೆಗೆ ಸಹಾಯಕ |
ಫಾಸ್ಪರಸ್ (Phosphorus) | ಮೂಳೆಯ ರಚನೆ ಮತ್ತು ಬೆಳವಣಿಗೆ ಸಹಾಯಕ |
ಪೊಟಾಷಿಯಂ (Potassium) | ದೇಹದ ಸರಿಯಾದ ಬೆಳವಣಿಗೆ, ಜೀವಕೋಶಗಳ ಕೆಲಸಕ್ಕೆ ಸಹಾಯಕ |
ಸೋಡಿಯಂ (Sodium) | ಸ್ನಾಯುಗಳ ರಚನೆ, ದೇಹದಲ್ಲಿ ನೀರಿನ ಮತ್ತು pH ಪ್ರಮಾಣ, ನರಗಳ ಕೆಲಸಕ್ಕೆ ಸಹಾಯಕ |
ಐರನ್
(Iron) |
ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಶಕ್ತಿಯನ್ನು ಮಾರ್ಪಡಿಸಲು, ರೋಗ ನಿರೋಧಕ ಶಕ್ತಿಯನ್ನು ನಮ್ಮಲ್ಲಿ ತರಲು, ಶೈಶವ ಹಂತದಲ್ಲಿ ಮತ್ತು ಗರ್ಭಧಾರಣೆಯ ಸಂದರ್ಭದಲ್ಲಿ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ತಲುಪಿಸಲು ಸಹಾಯಕ |
ಮ್ಯಾಂಗನಿಷಿಯಂ (Magnesium) | ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲು, ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು, ಉದ್ವೇಗವನ್ನು ನಿಯಂತ್ರಣದಲ್ಲಿಡಲು, ಮೂಳೆಗಳನ್ನು ಗಟ್ಟಿಗೊಳಿಸಲು, ಮೂತ್ರಪಿಂಡದಲ್ಲಿ ರಚನೆಯಾಗುವ ಕಲ್ಲನ್ನು ನಿಯಂತ್ರಿಸಲು ಸಹಾಯಕ |
ಮ್ಯಾಂಗನೀಸ್ (Manganese) | ದೇಹದಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸಲು, ಜಿಂಕ್ ಮತ್ತು ಕಾಪರ್ ಗಳನ್ನು ದೇಹದಲ್ಲಿ ಸಮಪ್ರಮಾಣದಲ್ಲಿ ನಿಯಂತ್ರಿಸಲು, ನರವ್ಯೂಹಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಲು ಇದು ಸಹಾಯಕ |
– ಹೀಗೆ ಅನೇಕ ಮೂಲಗಳಿಂದ ನಮ್ಮ ದೇಹಕ್ಕೆ ಅಗತ್ಯವಾಗಿರುವ ಅಂಶಗಳನ್ನು ಪಡೆಯಬೇಕು. ಕೆಲವೊಂದು ಗುಳಿಗೆಗಳ ಮೂಲಕ, ಆಹಾರದ ಮೂಲಕ, ಗಾಳಿಯ ಮೂಲಕ, ನೀರಿನ ಮೂಲಕ. ಇದೆಲ್ಲವೂ ಶತಾವರಿಯಲ್ಲಿ ಸಿಗುವುದು ಎಂದರು ವೆಂಕಟಸ್ವಾಮಿಗಳು. ಇದನ್ನು ಕೇಳಿತ್ತಿದ್ದಂತೆ ನಾಟಿವೈದ್ಯರಿಗೆ ಇದ್ದಕ್ಕಿದ್ದಂತೆ ಆನಂದವೋ ಆನಂದವಾಯಿತು – ಅರೆ ಪ್ರಾಣಿಗಳ ಸೌಭಾಗ್ಯವೇನು? ಜಾಣ್ಮೆ ಏನು? ಭೂಮಿಯಲ್ಲಿ ಸಹಜವಾಗೇ ಸಿಗುವ ಈ ಶತಾವರಿಯನ್ನು ತಿಂದು ದೇಹಕ್ಕೆ ಏನು ಬೇಕೋ ಅದನ್ನು ಕಾಲಾಂತರದಿಂದ ಪಡೆಯುತ್ತಿವೆ. ಪ್ರಾಣಿಗಳು ತಮ್ಮ ಮರಿಗಳಿಗೆ ಹಾಲುಣಿಸಲು ಪ್ರಕೃತಿಯೇ ಔಷಧಿಯನ್ನು ತಯಾರಿಸಿದೆ ಎಂದು ಹೇಳಿದರು. ಅಲ್ಲಿ ಸೇರಿದ್ದ ನಾಲ್ವರಿಗೂ ಏನೋ ಹೊಸತನ್ನು ಕಲಿತ, ಅರಿತ ಖುಷಿ ಸಿಕ್ಕಿತು. ದೇಹಕ್ಕೆ ಬೇಕಾದ ರಾಸಾಯನಿಕಗಳೆಲ್ಲ ಸಮೃದ್ಧವಾಗಿ ಇರುವ ಆಹಾರ ಪದಾರ್ಥಗಳ ಪಟ್ಟಿಯನ್ನು ವೆಂಕಟಸ್ವಾಮಿ ಅವರಿಂದ ಪಡೆಯುವುದನ್ನು ನೀಲಾ ಮರೆಯಲಿಲ್ಲ. ಅವಳ ತಲೆಗೆ ಇನ್ನೂ ಹಲವಾರು ಕುತೂಹಲದ ಬೀಜಗಳು ಬಂದು ಬಿದ್ದವು. ಇಷ್ಟು ಜ್ಞಾನದ ಸಂಪತ್ತಿನೊಂದಿಗೆ ಎಲ್ಲರೂ ಮತ್ತೆ ಊರಿಗೆ ಮರಳಿದರು. ಭೂಮಿಯಲ್ಲಿ ಬಿತ್ತಿದ ಬೀಜವೊಂದು ಹೇಗೆ ಸಂಪತ್ತೋ ಹಾಗೆ ನೀಲಾಳ ತಲೆಯಲ್ಲಿ ಹೊಕ್ಕ ಆಲೋಚನೆಗಳು…ಅದಕ್ಕೆ ಅವಳದ್ದು ತಣಿಯದ ಕುತೂಹಲ 🙂
ನಿಮ್ಮ ಚರಣಕೆ ನಮಿಪೆ – ಕುಮಾರ್ ಭರತ್ (೮ನೇ ತರಗತಿ)
ನಿಮ್ಮ ಚರಣಕೆ ನಮಿಪೆ ಗುರುವೆ ||ಪ||
ಜ್ಞಾನವೆಂಬ ಪಾಲನುಣಿಸಿ
ವಿನಯವೆಂಬ ಉಡುಗೆ ತೊಡಿಸಿ |
ಎಮ್ಮ ಬಾಳನು ಬೆಳಗು ಗುರುವೆ ||೧||
ಹರಿಯ ಕರುಣದಿ ನಿಮ್ಮ ಪಡೆದೆವು
ನಿಮ್ಮನುಗ್ರಹದಿ ಜ್ಞಾನ ಪಡಿಯುತಿಹೆವು |
ಎಮ್ಮನುದ್ಧರಿಸು ಗುರುವೆ ||೨||
ಜ್ಞಾನದಾಹವ ತಣಿಸು ಗುರುವೆ
ಅಂಧಕಾರವ ಅಳಿಸು ಗುರುವೆ |
ಧರ್ಮಮಾರ್ಗದಿ ನಡೆಸು ಗುರುವೆ ||೩||
ನಿಮ್ಮ ಚರಣಕೆ ನಮಿಪೆ ಗುರುವೆ ||ಪ||
(ಗುರು ಪೂರ್ಣಮಿಗೆ ಬರೆದ ಪದ್ಯ. ಇದನ್ನು ಪೇಜಾವರ ಶ್ರೀಗಳನ್ನು ಹಾಗು ಸಾನಂದ ಸ್ವಾಮಿಜಿ ಅವರನ್ನು ಹಾಗು ಎಲ್ಲಾ ಗುರುಗಳನ್ನು ಕುರಿತು ಬರೆದ ಪದ್ಯ)
ಮರಗಳು– ಗೀರ್ವಾಣಿ (೭ನೇ ತರಗತಿ)
ನೋಡಿ ನಮ್ಮ ಹಸಿರು ಮರ
ಬಿಡುತ್ತದೆ ಹಣ್ಣು ನಾನಾ ತರ
ನೋಡಲಿವು ಬಹಳ ಸುಂದರ
ಹೊಂದಿರುವುದು ನಾನಾ ಆಕಾರ
ಇದರ ಹಣ್ಣು ರುಚಿಕರ
ಇದು ಎಂದೆಂದಿಗೂ ಅಮರ
Ananthashree (4 Grade)