Haribhaktisaara

Saturday, November 25th, 2017

ದಾಸವರ್ಯ ಕವಿ ಕನಕದಾಸ ವಿರಚಿತ ಹರಿಭಕ್ತಿಸಾರ ಶ್ರೀಯರಸ ಗಾಂಗೇಯನುತ ಕೌಂ | ತೇಯ ವಂದಿತಚರಣ ಕಮಲದ | ಳಾಯತಾಂಬಕರೂಪ ಚಿನ್ಮಯ ದೇವಕೀತನಯ || ರಾಯ ರಘುಕುಲವರ್ಯ ಭೂಸುರ | ಪ್ರೀಯಸುರಪುರನಿಲಯ ಚೆನ್ನಿಗ | ರಾಯಚತುರೋಪಾಯ ರಕ್ಷಿಸು ನಮ್ಮನನವರತ || ೧ || ದೇವದೇವ ಜಗದ್ಭರಿತ ವಸು | ದೇವಸುತ ಜಗದೇಕನಾಥ ರ | ಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ || ಭಾವಜಾರಿಪ್ರಿಯ ನಿರಾಮಯ | ರಾವಣಾಂತಕ ರಘುಕುಲಾನ್ವಯ | ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ || ೨ || ಅನುಪಮಿತ ಚಾರಿತ್ರ ಕರುಣಾ | ವನದಿ ಭಕ್ತ ಕುಟುಂಬಿ ಯೋಗೀ | ಆನಹೃದಯ ಪರಿಪೂರ್ಣ ನಿತ್ಯಾನಂದ ನಿಗಮನುತ || ವನಜನಾಭ ಮುಕುಂದ ಮುರಮ | ರ್ದನ ಜನಾರ್ದನ ತ್ರೈ ಜಗತ್ಪಾ | ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ || ೩ || ಕಮಲಸಂಭವವಿನುತ ವಾಸವ | ನಮಿತ ಮಂಗಳ ಚರಿತ ದುರಿತ | ಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ || ಅಮಿತವಿಕ್ರಮ ಭೀಮ ಸೀತಾ | ರಮಣ ವಾಸುಕಿಶಯನ ಖಗವತಿ | ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ || ೪ || ಕ್ಷೀರವಾರಿಧಿಶಯನ ಶಾಂತಾ | ಕಾರಾ ವಿವಿಧವಿಚಾರ ಗೋಪೀ | ಜಾರ ನವನೀತಚೋರ ಚಕ್ರಾಧಾರ ಭವದೂರ || ಮಾರಪಿತ ಗುಣಹಾರ ಸರಸಾ | ಕಾರ ರಿಪುಸಂಹಾರ ತುಂಬುರ | ನಾರದಪ್ರಿಯ ವರದ ರಕ್ಷಿಸು ನಮ್ಮನನವರತ || ೫ || ತಾಮರಸದಳನಯನ ಭಾರ್ಗವ | ರಾಮ ಹಲಧರರಾಮ ದಶರಥ | ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ || ಸಾಮಗಾನಪ್ರೇಮ ಕಾಂಚನ | ಧಾಮಧರ ಸುತ್ರಾಮವಿರಚಿತ | ನಾಮ ರವಿಕುಲಸೋಮ ರಕ್ಷಿಸು ನಮ್ಮನನವರತ || ೬ || ವೇದಗೋಚರ ವೇಣುನಾದವಿ | ನೊದ ಮಂದರಶೈಲಧರ ಮಧು | ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ || ಯಾದವೇಂದ್ರ ಯಶೋದೆನಂದನ | ನಾದಬಿಂದುಕಳಾತಿಶಯ ಪ್ರ | ಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ || ೭ || ಅಕ್ಷಯಾಶ್ರಿತ ಸುಜನಜನ ಸಂ | ರಕ್ಷಣ ಶ್ರೀವತ್ಸ ಕೌಸ್ತುಭ | ಮೋಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ || ಪಕ್ಷಿವಾಹನ ದೇವಸಂಕುಲ | ಪಕ್ಷಜಗದಧ್ಯಕ್ಷವರನಿಟಿ | ಲಾಕ್ಷ ಸಖ ಸರ್ವೇಶ ರಕ್ಷಿಸು ನಮ್ಮನನವರತ || ೮ || ಚಿತ್ರಕೂಟನಿವಾಸ ವಿಶ್ವಾ | ಮಿತ್ರ ಕ್ರತುಸಂರಕ್ಷಕ ರವಿ ಶಶಿ | ನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ || ಧಾತ್ರಿಜಾಂತಕ ಕಪಟನಾಟಕ | ಸೂತ್ರ ಪರಮಪವಿತ್ರ ಫಲ್ಗುಣ | ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ || ೯ || ಮಂಗಳಾತ್ಮಕ ದುರಿತತಿಮಿರ ಪ | ತಂಗ ಗರುಡತುರಂಗ ರಿಪುಮದ | ಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ || ಅಂಗದಪ್ರಿಯನಂಗಪಿತ ಕಾ | ಳಿಂಗಮರ್ದನ ಅಮಿತಾ ಕರುಣಾ | ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ || ೧೦ || ದಾಶರಥಿ ವೈಕುಂಠನಗರಿ ನಿ | ವಾಸ ತ್ರೈಜಗದೀಶ ಪಾಪ ವಿ | ನಾಶ ಪರಮವಿಲಾಸ ಹರಿಸರ್ವೇಶ ದೇವೇಶ || ವಾಸುದೇವ ದಿನೇಶ ಶತಸಂ | ಕಾಶ ಯದುಕುಲವಂಶತಿಲಕ ಪ | ರಾಶರಾನತ ದೇವ ರಕ್ಷಿಸು ನಮ್ಮನನವರತ || ೧೧ || ಕುಂದಕುಟ್ಮಲರದನ ಪರಮಾ | ನಂದ ಹರಿ ಗೋವಿಂದ ಸನಕ ಸ | ನಂದ ವಂದಿತ ಸಿಂಧುಬಂಧನ ಮಂದರಾದ್ರಿಧರ || ಇಂದಿರಾಪತ ವಿಜಯಸಖ ಅರ | ವಿಂದನಾಭ ಪುರಂದರಾರ್ಚಿತ | ನಂದಕುಲ ಮುಕುಂದ ರಕ್ಷಿಸು ನಮ್ಮನನವರತ || ೧೨ || ಬಾಣಬಾಹುಚ್ಛೇದ ರಾವಣ | ಪ್ರಾಣನಾಶನ ಪುಣ್ಯನಾಮ ಪು | ರಾಣಪುರು?ತ್ತಮ ನಿಪುಣ ಅಣುರೇಣು ಪರಿಪೂರ್ಣ || ಕ್ಷೆಣಿಪತ ಸುಲಲಿತ ಸುದರ್ಶನ | ಪಾಣಿ ಪಾಂಡವರಾಜಕಾರ್ಯಚ ಧು | ರೀಣ ಜಗನಿರ್ಮಾಲಣ ರಕ್ಷಿಸು ನಮ್ಮನನವರತ || ೧೩ || ನೀಲವರ್ಣ ವಿಶಾಲ ಶುಭಗುಣ ಶೀಲ ಮುನಿಕುಲಪಾಲ ಲಕ್ಷ್ಮೀ | ಲೋಲ ರಿಪು ಶಿಶುಪಾಲ ಮಸ್ತಕಶೂಲ ವನಮಾಲ || ಮೂಲಕಾರಣ ವಮಲ ಯಾದವ | ಜಾಲಹಿತ ಗೋಪಾಲ ಅಗಣಿತ | ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ || ೧೪ || ನಾಗನಗರಿ ಧರಿತ್ರಿ ಕೋಶ ವಿ | ಭಾಗ ತಂತ್ರ ನಿಯೋಗಗಮನ | ರಾಗ ಪಾಂಡವರಾಜಜಿತ ಸಂಗ್ರಾಮ ನಿಸ್ಸೀಮ || ಯೋಗಗಮ್ಯ ಭವಾಬ್ಧಿ ವಿ?ಧರ | ನಾಗ ಗಾರುಡಮಂತ್ರವಿದ ಭವ | ರೋಗವೈದ್ಯ ವಿಚಿತ್ರ ರಕ್ಷಿಸು ನಮ್ಮನನವರತ || ೧೫ || ಶ್ರೀಮದುತ್ಸಹ ದೇವನುತ ಶ್ರೀ | ರಾಮ ನಿನ್ನಯ ಚರಣಸೇವಕ | ಪ್ರೇಮದಿಂ ಸಾ?ಂಗವೆರಗಿಯೆ ಮಾಳ್ಪೆ ಬಿನ್ನಪವ || ಈ ಮಹಿಯೊಳೀವರಿಗೆ ನಾವು ಸು | ಕ್ಷೀಮಿಗಳು ನಿನ್ನಯ ಪದಾಬ್ಜ | ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ || ೧೬ || ಈಗಲೀ ಮರ್ಯಾೆದೆಯಲಿ ಶರ | ಣಾಗತರ ಸೇವೆಯೊಳು ಹೊಂಪುಳಿ | ಯಾಗಿ ಬಾಳುವರೇನು ಧನ್ಯರೊ ಹರ ಮಹಾದೇವ || ಭೋಗಭಾಗ್ಯವ ಬಯಸಿ ಮುಕ್ತಿಯ | ನೀಗಿ ನಿಮ್ಮನು ಭಜಿಸಲರಿಯದ | ಯೋಗಿಗಳ ಮಾತೇನು ರಕ್ಷಿಸು ನಮ್ಮನನವರತ || ೧೭ || ಭಕ್ತಿಸಾರದ ಚರಿತೆಯನು ಹರಿ | ಭಕ್ತರಾಲಿಸುವಂತೆ ರಚಿಸುವೆ | ಯುಕ್ತಿಯಲಿ ಬರೆದೋದಿದವರಿ?ರ್ಥ ಸಿದ್ಧಿಪುದು || ಮುಕ್ತಿಗಿದು ನೆಲೆದೋರಿಪುದು ಹರಿ | ಭಕ್ತರನು ಲಾಲಿಪುದು ನಿಜವತಿ | ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ || ೧೮ || ನಳಿನಲೋಚನ ನಿನ್ನ ಮೂರ್ತಿಯ | ಕಳೆ ಬೆಳಗುತಿದೆ ಲಹರಿಯಲಿ ಭೂ | ತಳದೊಚ್ಚರಿಯಾದ ನಾಮಾಮೃತ ಸಮುದ್ರದಲಿ || ಬಳಸುವರು ಸತ್ಕವಿಗಳಿವರಗ್ಗಳಿಕೆ ಎನಗಿನಿತಿಲ್ಲ ಸನ್ಮತಿ | ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ || ೧೯ || ಗಿಳಿಯಮರಿಯನು ತಂದು ಪಂಜರ | ದೊಳಗೆ ಪೋಷಿಸಿ ಕಲಿಸಿ ಮೃದು | ನುಡಿಗಳನು ಲಾಲಿಸು ಕೇಳ್ವ ಪರಿಣತರಂತೆ ನೀನೆನಗೆ || ತಿಳುಹು ಮತಿಯನು ಎನ್ನ ಜಿಹ್ವೆಗೆ ಮೊಳಗುವಂದದಿ ನಿನ್ನ ನಾಮಾ | ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ || ೨೦ || ಪೊಗಲಳೆವೇ ನಿನ್ನ ನಾಮದ | ಸುಗುಣ ಸಚ್ಚಾರಿತ್ರ ಕಥನವ | ನಗಣಿತೋಪಮ ಅಮಿತ ವಿಕ್ರಮಗಮ್ಯ ನೀನೆಂದು || ನಿಗಮತತಿ ಕೈವಾರಿಸುತ ಪದ | ಯುಗವ ಕಾಣದೆ ಬಳಲುತಿದೆ ವಾ | ಸುಕಿಶಯ ಸರ್ವೇಶ ರಕ್ಷಿಸು ನಮ್ಮನನವರತ || ೨೧ || ವೇದಶಾಸ್ತ್ರಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ | ವಾದದಲಿ ಗುರುಹಿರಿಯರರಿಯದ ಮೂಢಮತಿ ಎನಗೆ || ಆದಿಮೂರುತಿ ನೀನು ನೆರೆ ಕರುಣೊ | ದಯನು ಹೃದಯಾಂಗಣದಿ ಜ್ಞಾ | ನೋದಯವೆನಗಿತ್ತು ರಕ್ಷಿಸು ನಮ್ಮನನವರತ || ೨೨ || ಹರಿವರಿತು ತಾಯ್ತನ್ನ ಶಿಶುವಿಗೆ | ಒಸೆದು ಮೊಲೆ ಕೊಡುವಂತೆ ನೀ ಪೋ | ಷಿಸದೇ ಬೇರಿನ್ನಾರು ಪೋ?ಕರಾಗಿ ಸಲಹುವರು || ಬಸಿರೊಳಗೆ ಬ್ರಹ್ಮಾಂಡಕೋಟಿಯ | ಪಸರಿಸಿದ ಪರಮಾತ್ಮನೀನೆಂ | ದುಸುರುತಿವೆ ವೇದಗಳು ರಕ್ಷಿಸು ನಮ್ಮನನವರತ || ೨೩ || ಇಬ್ಬರಣುಗರು ನಿನಗೆ ಅವರೊಳ | ಗೊಬ್ಬಮಗನೀರೇಳು ಲೋಕದ | ಹೆಬ್ಬೆಳೆಸು ಬೆಳೆವಂತೆ ಕಾರಣಕರ್ತನಾದವನು || ಒಬ್ಬ ಮಗನದ ಬರೆದ ಕರಣಿಕ | ರಿಬ್ಬರೀ ಲೋಕಪ್ರಸಿದ್ಧರು | ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ || ೨೪ || ಸಿರಿಯು ಕುಲಸತಿ ಸುತನು ಕಮಲಜ | ಹಿರಿಯ ಸೊಸೆ ಶಾರದೆ ಸಹೋದರಿ| ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು || ನಿರುತ ಮಾಯೆಯು ದಾಸಿ ನಿಜಮಂ | ದಿರವಜಾಂಡವು ಜಂಗಮಸ್ಥಾ | ವರುಕುಟುಂಬಿಗ ನೀನು ರಕ್ಷಿಸು ನಮ್ಮನನವರತ || ೨೫ || ಸಾಗರನ ಮಗಳರಿಯದಂತೆ ಸ | ರಾಗದಲಿ ಸಂಚರಿಸುತಿಹ ಉ | ದ್ಯೋಗವೇನು ನಿಮಿತ್ತ ಕಾರಣವಿಲ್ಲಲೋಕದಲಿ || ಭಾಗವತರಾದವರ ಸಲಹುವ | ನಾಗಿ ಸಂಚರಿಸುವುದು ಈ ಭವ | ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ || ೨೬ || ಹಸ್ತಿವಾಹನನಾದಿಯಾದ ಸ | ಮಸ್ತ ದೇವನಿಕಾಯಾದೊಳಕೆ ಪ್ರ | ಶಸ್ತನಾವನು ನಿನ್ನ ವೋಲ್ ಶರಣಾಗತರ ಪೊರೆದೆ || ಹಸ್ತ ಕಲಿತ ಸುದರ್ಶನದೊಳರಿ | ಮಸ್ತಕವನಿಳುಹುವ ಪರಾಪರ | ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ || ೨೭ || ಹಗೆಯರಿಗೆ ವರವೀವರಿಬ್ಬರು | ತೆಗೆಯಲರಿಯರು ಕೊಟ್ಟ ವರಗಳ | ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ || ಸುಗುಣರಿನ್ನಾರುಂಟು ಕದನವ | ಬರೆದು ನಿನ್ನೊಳು ಜೈಸುವವರೀ | ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ || ೨೮ || ಸುಮನರಸ ವೈರದಲಿ ಕೆಲಬರ | ಕುಮತಿಗಳು ತಪದಿಂದ ಭರ್ಗನ | ಕಮಲಜನ ಪದಯುಗವ ಮೆಚ್ಚಿರಿ ವರವ ಪಡೆದಿಹರು || ಸಮರಮುಖದೊಳಗುಪಮೆಯಲಿ ವಿ | ಕ್ರಮದಿ ವೈರವ ಮಾಡಿದವರಿಗೆ | ಅಮರಪದವಿಯನಿತ್ತೆ ರಕ್ಷಿಸು ನಮ್ಮನನವರತ || ೨೯ || ಬಲಿಯ ಬಂಧಿಸಿ ಮೊರೆಯಿಡುವ ಸತಿ | ಗೊಲಿದು ಅಕ್ಷಯವಿತ್ತು ಕರುಣದಿ | ಮೊಲೆಯುಣಿಸಿದ ಬಾಲಕಿಯ ಪಿಡಿಸುವನಪಹರಿಸಿ || ಶಿಲೆಯ ಸತಿಯಳ ಮಾಡಿ ತ್ರಿಪುರದ | ಲಲನೆಯರ ವ್ರತಗೆಡಿಸಿ ಕೂಡಿದ | ಕೆಲಸವುತ್ತಮವಾಯ್ತು ರಕ್ಷಿಸು ನಮ್ಮನನವರತ || ೩೦ || ಕರಿಯ ಕಾಯ್ದಾ ಜಲದಿ ಮಕರಿಯ | ತರಿದು ಹಿರಣ್ಯಾಕ್ಷಕನ ಸೀಳ್ದಾ | ತರಳನನು ತಲೆಗಾಯ್ದು ಶಕಟಾಸುರ ಹತಮಾಡಿ || ದುರುಳಕಂಸನ ಕೊಂದು ಮಗಧನ ಮುರಿದು ವತ್ಸನ ಸಂಹರಿಸಿ ಖರ | ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ || ೩೧ || ಶಿಶುತನದ ಸಾಮರ್ಥ್ಯದಲಿ ಕೆಲಸುರರನು ಸಂಹರಿಸಿ ಚಕ್ರವ | ಬಿಸುಟು ಯೌವನಕಾಲದಲಿಯಾ ಪಾಂಡು ಸುತರಿಂದ || ವಸುಮತಿಯ ಭಾರವನಿಳುಹಿ ಸಾ | ಹಸದಿ ಮೆರೆದವನಾಗೆ ನೀ ಮೆ | ಚ್ಚಿಸಿದೆ ತ್ರಿಜಗವನ್ನೆಲ್ಲ ರಕ್ಷಿಸು ನಮ್ಮನನವರತ || ೩೨ || ಎಲ್ಲರಲಿ ನೀನಾಗಿ ಸುಮನಸ | ರಲ್ಲಿ ಅತಿಹಿತಿನಾಗಿ ಯಾದವ | ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ || ಕೊಲ್ಲಿಸಿದೆ ಭೀಮಾರ್ಜುನರ ಕೈ | ಯಲಿ ಕೌರವ ಕುಲವನೆಲ್ಲವ | ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ || ೩೩ || ನರಗೆ ಸಾರಥಿಯಾಗಿ ರಣದೊಳು | ತುರಗ ನೀರಡಿಸಿದರೆ ವಾರಿಯ | ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ || ಶಿರವನು ಕೆಡುಹಿಸಿ ಅವನ ತಂದೆಯ | ಕರತಲಕೆ ನೀಡಿಸಿದೆ ಹರಹರ | ಪರಮಸಾಹಸಿ ನೀನು ರಕ್ಷಿಸು ನಮ್ಮನನವರತ || ೩೪ || ಬವರದಲಿ ಖತಿಗೊಂಡು ಗದೆಯೊಳು | ಕವಿದು ನಿನ್ನಶ್ರುತಾಯಧನು ಹೊ | ಕ್ಕವಘಡಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ || ವಿವರವೇನೋ ತಿಳಿಯೆ ಈ ಮಾ | ಯವನು ನೀನೇ ಬಲ್ಲೆ ನಿನ್ನಾ | ಯುವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ || ೩೫ || ಇಳೆಗೆ ಪತಿಯಾದವನು ಯಾದವ | ರೊಳಗೆ ಬಾಂಧವ ನಿನಗೆ ಸೋದರ | ದಳಿಯನಾದಭಿಮನ್ಯುವನು ಕೊಲ್ಲಿಸಿದೆ ಕೊಳಗುಳದಿ || ಅಳಲಿನಬುಧಿಯಳದ್ದಿತಂಗಿಯ | ಬಳಲಿಸಿದೆ ಕುಲಗೋತ್ರ ಬಾಂಧವ | ರೊಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮನನವರತ || ೩೬ || ತಾಯನಗಲಿದ ತನಯನೀ ರಾ

Newsletter - December - 2015

Newsletter – December – 2015

Wednesday, February 3rd, 2016
Newsletter - November - 2015

Newsletter – November – 2015

Saturday, December 26th, 2015
Newsletter - October - 2015

Newsletter – October – 2015

Tuesday, November 17th, 2015
Newsletter - September - 2015

Newsletter – September – 2015

Sunday, October 11th, 2015
Newsletter - September - 2015

Newsletter – September – 2015

Tuesday, September 15th, 2015
Newsletter - August - 2015

Newsletter – August – 2015

Monday, August 24th, 2015

For more photos – click here

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.