Anandini – June-October 2019

Anandini – June-October 2019

Wednesday, September 4th, 2019

ಸಂವತ್ಸರ ಸೂತ್ರ​-ಕಲಿಕೆ-ಹಂಚಿಕೆ ಸರಣಿ – 1 ಸಂಪಾದಕೀಯ ಆತ್ಮೀಯರೇ, ತಾಂತ್ರಿಕ ಕಾರಣಗಳಿಂದ ಕಳೆದ ವರ್ಷ ಆನಂದಿನಿಯನ್ನು ತಮ್ಮ ಕೈಗೆ ಇಡಲಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಕಳೆದ ವರ್ಷದ ಆಗುಹೋಗುಗಳ ಸಿಂಹಾವಲೋಕನ ಮಾಡಿದಲ್ಲಿ, ‘ಶ್ರೇಷ್ಠತೆ’ (Excellence) ಎನ್ನುವ ವಾರ್ಷಿಕ ಸೂತ್ರದ ಮೂಲಕ ಎಲ್ಲ ಕೆಲಸಗಳನ್ನೂ ಕೈಗೊಂಡಿದ್ದು, ನಮ್ಮ ಶಾಲೆಯ ಹನ್ನೊಂದು ಮಕ್ಕಳ ಎರಡನೇ ತಂಡವು S.S.L.C. ಪರೀಕ್ಷೆಯಲ್ಲಿ ಶ್ರೇಷ್ಠದರ್ಜೆಯಲ್ಲಿ (distinction) ಜಯಭೇರಿ ಬಾರಿಸಿದ್ದು, ಗಂಗಾನದಿಯ ಅವಿರಲತೆಯ ವಿಷಯಾಧಾರಿತವಾಗಿ ವಾರ್ಷಿಕ ಉತ್ಸವ ನಡೆಸಿದ್ದು ವಿಶೇಷವಾಗಿತ್ತು. ಬಹುದುಃಖದ ಸಂಗತಿಯೆಂದರೆ ನಮ್ಮ ಮಾರ್ಗದರ್ಶಕ ಗುರುಗಳಾಗಿದ್ದ ಪೂಜ್ಯ ಶ್ರೀ ಸಾನಂದ ಸ್ವಾಮೀಜಿಯವರು ಗಂಗಾಮಾತೆಯ ಅವಿರಲತೆಗಾಗಿ (ತಡೆಯಿಲ್ಲದ ನಿರಂತರ ಪ್ರವಾಹಕ್ಕಾಗಿ) ಹೋರಾಟನಡೆಸಿ ನೂರಹನ್ನೊಂದು ದಿನಗಳ ಉಪವಾಸದ ನಂತರ ಜೀವದ ಬಲಿದಾನ ನೀಡಿದ್ದು. ಹನುಮಂತ ಅವಿಚ್ಛಿನ್ನ ರಾಮಭಕ್ತನಿದ್ದಂತೆ. ಸಾನಂದ ಸ್ವಾಮೀಜಿ ಗಂಗೆಯನ್ನು ತಮ್ಮ ಮಾತೆಯೆಂದೇ ಭಾವಿಸಿದ್ದರು. ಅವಳು ತನ್ನ ‘ಗಂಗತ್ವ’ವನ್ನು ಉಳಿಸಿಕೊಂಡು ಮೈದುಂಬಿ ಹರಿಯುವಂತೆ ಮಾಡುವುದೇ ಅವರ ಜೀವನದ ಪರಮಗುರಿಯಾಗಿತ್ತು. ಅಂತಹ ವಿಜ್ಞಾನಿಸಂತ, ದೃಢಸಂಕಲ್ಪದ ಅವಿರತ ಹೋರಾಟಗಾರ ನಮ್ಮ ನಡುವೆ ಹಲವು ಕಾಲವಿದ್ದು ನಮಗೆ ಮಾದರಿಯಾಗಿದ್ದುದು ನಮ್ಮ ಭಾಗ್ಯ. ಪೂರ್ಣಪ್ರಮತಿಗೀಗ ಹತ್ತುವರ್ಷದ ಪ್ರಾಯ. ಬಾಲ್ಯದಿಂದ ಯೌವನಾವಸ್ಥೆಯ ಕಡೆ ಹೆಜ್ಜೆಯಿಡುವ ಕಾಲ. ನಮ್ಮ ಕನಸುಗಳೂ ಹತ್ತಾರು.  ಪೂರ್ಣಪ್ರಮತಿಯೊಂದು ಅದ್ವಿತೀಯ ಕಲಿಕೆಯ ತಾಣವಾಗಬೇಕು, ನಸುಕಿನಿಂದ ನಡುರಾತ್ರಿಯ ವರೆಗೂ ಸರ್ವವಯಸ್ಕರಿಗೂ ನಿರಂತರ ಜ್ಞಾನದಾಸೋಹ ನಡೆಯುತ್ತಲೇ ಇರಬೇಕು, ಕಾಲಕ್ರಮೇಣ ಹಲವಾರು ಕಡೆ ಹರಡಿದ ಒಂದು ಅಪೂರ್ವ ಜೀವಂತ ವಿಶ್ವವಿದ್ಯಾಲಯವಾಗಬೇಕು ಎನ್ನುವುದು ಒಂದು. ಪೂರ್ಣಪ್ರಮತಿಯ ಮಕ್ಕಳ, ಪೋಷಕರ, ಶಿಕ್ಷಕರ, ಹಿತೈಷಿಗಳ ಬಳಗದಿಂದ ಒಂದು ಆದರ್ಶ ಸ್ವಾವಲಂಬೀ ಸಮಾಜ ನಿರ್ಮಾಣವಾಗಬೇಕು, ನಿಸರ್ಗಕ್ಕೆ ಹತ್ತಿರವಾದ, ರಾಸಾಯನಿಕರಹಿತ, ಸರಳ, ಸಹಜ ಬದುಕನ್ನು ನಡೆಸುತ್ತ, ತಾನು ಪಡೆದುದಕ್ಕಿಂತ ಹೆಚ್ಚಿನದ್ದನ್ನು ಸಮಾಜಕ್ಕೆ, ನೆಲಕ್ಕೆ, ಜಲಕ್ಕೆ, ಪ್ರಕೃತಿಗೆ, ಪಂಚಭೂತಗಳಿಗೆ ನೀಡಲು ಪಾರಯತ್ನಿಸುತ್ತ, ಉದಾತ್ತಚಿಂತನೆ, ಕಾರ್ಯಗಳಲ್ಲಿ ತೊಡಗಿರುವ ಪೂರ್ಣಪ್ರಮತಿ ಕುಟುಂಬ ದೇಶಕ್ಕೇ ಮಾದರಿಯಾಗಬೇಕು ಎನ್ನುವುದು ಮತ್ತೊಂದು. ನಮ್ಮ ಗುರುಕುಲ ‘ಆನಂದವನ’ದಲ್ಲಿ ಇಂಥದ್ದೇ ಜೀವನ ನಡೆಯುತ್ತಿದೆ. ಬೆಂಗಳೂರಿನ ಶಾಲೆಯಲ್ಲಿ ಪೂರ್ಣಪ್ರಮತಿ ಸಂತೆ ಪ್ರಾರಂಭವಾಗಿದೆ, ನಮ್ಮ ಲೋಕಹಿತದ ಆಸೆಯ ಮೊದಲ ಹೆಜ್ಜೆಯಾಗಿ. ವಾಸ್ತವಿಕ ನೆಲೆಗೆ ಬಂದರೆ ದಶಮಾನದ ವರ್ಷದಲ್ಲಾದರೂ ಶಾಲೆಗೆ ಉತ್ತಮ ಕಟ್ಟಡ/ಗಳ ಶಿಕ್ಷಕ-ಸಿಬ್ಬಂದಿ ವರ್ಗದ ನೇಮಕಾತಿಗಳ ಅವಶ್ಯಕತೆ ಇದೆ. ಪದವಿಪೂರ್ವ ತರಗತಿಗಳ ಆರಂಭವಾಗಬೇಕಾಗಿದೆ. ಇದೆಲ್ಲ ಸಾಧ್ಯವಾಗಬೇಕಾದಲ್ಲಿ ಪೂರ್ಣಪ್ರಮತಿ ಕುಟುಂಬದ ಪ್ರತಿ ಸದಸ್ಯನೂ ತನ್ನ ಪಾಲಿನ ಸೇವೆಯನ್ನು ಕರ್ತವ್ಯವೆಂದು ಭಾವಿಸಿ ಮಾಡಬೇಕಿದೆ. ಈ ಸತ್ರಯಾಗದಲ್ಲಿ ತಮ್ಮ ಹವಿಸ್ಸನ್ನು ಸಲ್ಲಿಸಬೇಕಿದೆ. ದಶಮಾನೋತ್ಸವದ ಈ ವರ್ಷದುದ್ದಕ್ಕೂ ವಶೇಷ ಕಾರ್ಯಕ್ರಮಗಳ ಸಂಭ್ರಮವನ್ನು ಆಯೋಜಿಸಲಾಗುತ್ತಿದೆ. ಬನ್ನಿ, ಎಲ್ಲರೂ ಕೂಡಿ ಮೌಲ್ಯಾಧಾರಿತ ಅರ್ಥಪೂರ್ಣ ಶಿಕ್ಷಣ ನೀಡುತ್ತಾ, ಸಮಾಜಮುಖೀ ಸೇವಾಕಾರ್ಯಗಳನ್ನು ನಡೆಸುತ್ತಾ ಪೂರ್ಣಪ್ರಮತಿಯ ಹತ್ತನೇ ಹುಟ್ಟುಹಬ್ಬವನ್ನು ಚಿರಸ್ಥಾಯಿಯಾಗಿಸೋಣ.  ಆನಂದಿನಿ ಈ ಸಂಚಿಕೆಯಿಂದ ಆರಂಭಿಸಿ ನಮ್ಮ ಸಾರ್ಥಕ ಹತ್ತುವರ್ಷಗಳ ಸವಿನೆನಪನ್ನು ಪ್ರತಿಸಂಚಿಕೆಯಲ್ಲೂ ಎರಡು ವರ್ಷಗಳಂತೆ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾಳೆ. ನಿಮ್ಮ ಶಶಿರೇಖಾ ಮಣೂರು ಪ್ರಾಂಶುಪಾಲರು ಪೂರ್ಣಪ್ರಮತಿ. A 10 year journey of Purnapramati  Exploring diverse realities — Akhila Vasu “Purnapramati – A Center for Integrated Learning” is a platform to different approaches exploring through experiences. Purnapramati is completing its 10th Anniversary (Dashamanotsava). It’s a good time to retrospect our journey and also contemplate on future direction. The idea of Purnapramati was seeded in 2010 based on experience, explorations followed by serious pursuits in studies and research. The efforts, the time , the energy, the thoughts, the passion, the commitment put in by all the concerned people to start and grow Purnapramati is highly commendable. As Prof D.Prahladacharya says “it’s quite possible to sow the seeds of values of life in the innocent minds of young students who, in large number every year are admitted to seek primary education. Gradually it’s also possible to introduce such a curriculum by which they would become well aware of the rich Indian knowledge heritage and feel proud of it. In relation to holistic study of Prakruti and Prana, an integrated learning as emphasised by Shri Anandateertha needs to be understood. Prof Navajyothi Singh focussed on….. Read more>> A peek into Purnapramati during 2010-11 Our infant steps….. ಚಿಂತಕರ ಮಂಥನದಲ್ಲಿ ಪೂರ್ಣಪ್ರಮತಿ — ಅಖಿಲಾ ವಾಸು ಧಾರ್ಮಿಕ ಹಾಗೂ ಸುಸಂಸ್ಕೃತ ಜೀವನಕ್ಕಾಗಿ, ಶಾಂತಿ ಸಮೃದ್ಧಿಯ ಬಾಳ್ವೆಗಾಗಿ ನಾವು ನಮ್ಮ ಮಕ್ಕಳ ಜೀವನವನ್ನು ರೂಪಿಸಬೇಕಾಗಿದೆ. ಧರ್ಮದ ನೆಲೆಯಲ್ಲಿ ಶಿಕ್ಷಣ ಸಿಕ್ಕಾಗ ವಿದ್ಯಾರ್ಥಿ ಉತ್ತಮ ಚಿಂತಕನಾಗುತ್ತಾನೆ. ಶಿಕ್ಷಣದ ಮುಖೇನ ಸಮೃದ್ಧ ಜೀವನಕ್ಕೆ ಪೂರಕವಾದ ನಂಬಿಕೆಗಳನ್ನು ಬಲಪಡಿಸಿಕೊಳ್ಳುತ್ತಾನೆ. ಆದರೆ -“ಪ್ರಾಚೀನ ಋಷಿಮುನಿಗಳ ಚಿಂತನೆಯೆಲ್ಲವೂ ಅಪ್ರಬುದ್ಧ, ನಮ್ಮ ಹಿರಿಯರೆಲ್ಲಾ ಮೂಢ ನಂಬಿಕೆಗಳ ದಾಸರು” ಎನ್ನುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಆಂಗ್ಲ ಮಾಧ್ಯಮದ ಶಿಕ್ಷಣ ಪದ್ಧತಿಯನ್ನು ಒಪ್ಪಿಕೊಳ್ಳಬೇಕಾದ ಸಾಮಾಜಿಕ, ಕೌಟಂಬಿಕ ಒತ್ತಡ ಎಲ್ಲೆಲ್ಲೂ ಹರಡಿದೆ. ಜ್ಞಾನವೆನ್ನುವುದು ಸ್ಪರ್ಧೆಗೆ ಮೀಸಲಾಗಿದೆ. ಮಕ್ಕಳು ಕಲಿಕೆಯ ಆತುರದಲ್ಲಿ ಜೀವನದ ಮೌಲ್ಯಗಳ ಚಿಂತನೆಗಳಿಗಿಂತಲೂ ತೋರಿಕೆಯ ಬದುಕಿನ ದಾಸರಾಗುತ್ತಿದ್ದಾರೆ. ನಾನು ಪೂರ್ಣಪ್ರಮತಿಗೆ ಈ ವರ್ಷವಷ್ಟೇ ಸೇರಿಕೊಂಡೆ. ಇಲ್ಲಿನ ನನ್ನ ಕೆಲವು ಅನಿಸಿಕೆಗಳನ್ನು ಹೇಳಬಯಸುತ್ತೇನೆ. ನಾನು ನನ್ನ ಅಧ್ಯಾಪಕ ವೃತ್ತಿಯಲ್ಲಿ ಅನೇಕ ಶಾಲೆ, ಕಾಲೇಜುಗಳಲ್ಲಿ, ಅನೇಕ ರೀತಿಯ ಬೋಧನಾಕ್ರಮವನ್ನು ಕಂಡಿದ್ದೇನೆ. ಎಲ್ಲಾ ಬೋಧನಾಕ್ರಮಗಳು ಮನುಷ್ಯನ ಮೂಲ ಚಿಂತನೆಗೆ ಎಲ್ಲಿಯೂ ಅವಕಾಶವಿಲ್ಲದಂತೆ ಸಾಮಾಜಿಕ ಬದುಕಿಗೆ ಮಾತ್ರ ಸೀಮಿತವಾಗಿಯೇ ಇದೆ. ಮಕ್ಕಳಲ್ಲಿ ಏಳುವ ಸಾವಿರಾರು ಪ್ರಶ್ನೆಗಳಿಗೆ ಪ್ರತಿ ಹಂತದಲ್ಲೂ ಗಮನಿಸುವ ಹಲವಾರು ಗೊಂದಲಗಳಿಗೆ ಉತ್ತರ ಸಿಗದೆ ಮಕ್ಕಳಿಗೆ ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದುಹೋಗುತ್ತಿವೆ. ಮಕ್ಕಳು ಹಿಂದಿನವರ ಆಚಾರವಿಚಾರಗಳು ಆಧಾರವಿಲ್ಲದ್ದು ಎನ್ನುವ ನಿಟ್ಟಿನಲ್ಲಿ ಯೋಚಿಸುವಂತಾಗುತ್ತಿದೆ. ಆಧುನಿಕ ಪಠ್ಯ ಕ್ರಮದಲ್ಲಿ ತಮ್ಮ  ಮಾತೃಭಾಷೆಯನ್ನು ಪಕ್ಕಕ್ಕಿಟ್ಟು ಆಂಗ್ಲಭಾಷೆಯನ್ನು ಕಷ್ಟಪಟ್ಟಾದರೂ ಕಲಿಯಲೇಬೇಕೆಂಬ ಒತ್ತಡದಲ್ಲಿ ಮಕ್ಕಳ ಮನೋವಿಕಾಸದಲ್ಲಿ ಮುಕ್ತತೆ ಮರೆಯಾಗುತ್ತಿದೆ. ಒಂದು ರೀತಿಯ ಬಂಧನವೆಂಬಂತೆ ಕಲಿಕೆಯ ಬೆಳವಣಿಗೆಯಾಗುತ್ತಿದೆ. ಉದ್ಯೋಗಕ್ಕಾಗಿ ವಿದ್ಯೆ ಎಂಬುದು ಎಲ್ಲೆಡೆಯಲ್ಲೂ ರುಜುವಾಗುತ್ತಿದೆ. ಜ್ಞಾನ, ವಿದ್ಯೆ -ಇವುಗಳ ನಿಜವಾದ ಅರ್ಥವೇ ಅಳಿಸಿಹೋಗುತ್ತಿದೆ. ಮನಸ್ಸಿನಲ್ಲಿ ಇಂಥ ನೂರಾರು ಆಲೋಚನೆಗಳು ವಿದ್ಯಾವಂತರನ್ನು ಕಾಡಿದರೂ ಪ್ರವಾಹ ಬಂದ ದಿಕ್ಕಿಗೇ ನೀರು ನುಗ್ಗುವಂತೆ ಇಂದಿನ ವಿದ್ಯಾವಂತ ಯುವ ಪೀಳಿಗೆಯೂ ಅತ್ತಕಡೆ ನುಗ್ಗುತ್ತಿದೆ. ಇಂದಿನ ದಿನಗಳಲ್ಲಿ ಶಾಲೆ ಎಂಬುದು ಒಂದು ಉತ್ತಮ ವ್ಯಾಪಾರದ ಅಂಗವಾಗಿ ದಿಢೀರನೆ ಹಣ ಗಳಿಸಬಹುದಂಥ ಮಾರ್ಗವಾಗಿದೆ. ಹಣವಿದ್ದವರೆಲ್ಲಾ ವಿದ್ಯಾಸಂಸ್ಥೆಗಳನ್ನು ತೆರೆಯುತ್ತಿದ್ದಾರೆ. ತಮಗಿಷ್ಟ ಬಂದ ರೀತಿಯಲ್ಲಿ ವ್ಯಾಪಾರದ ಕುಶಲತೆಗಳನ್ನು ಅದರಲ್ಲಿ ಅಳವಡಿಸಿಕೊಂಡು ಮಕ್ಕಳನ್ನು ದಾಳವಾಗಿ ಬಳಸಿಕೊಂಡು ಹಣ ಸಂಪಾದನೆಯ ಹುಚ್ಚು ಭರದಲ್ಲಿ ಸಾಗುತ್ತಿದ್ದಾರೆ. ಇದರಿಂದ ನಮ್ಮ….. ಉಳಿದ ಭಾಗವನ್ನು ಓದಿ >> Our experiences in Purnapramati — Anagha Raghavendra (Student) (We have been a part of Purnapramati for the past 8 years. In this article we have tried to share some of our experiences which impacted us the most and shaped us in Purnapramati.)               When we joined Purnapramati in our 4th standard, the school felt very small compared to our earlier ones and number of students in each class was very minimal too. The teachers were very caring. It took a little while to get adjusted to calling our teachers akka and anna and then, it was as if they became our akkas and annas. The atmosphere was very free: we could talk and discuss with our teachers without apprehension. We also started learning Samskruta starting from names of various objects and the basic Shabdas & Dhaatus as well as subhAshitAs. This adhyayana of Samskruta has stayed with us till date, and now, we are about to write Sahitya pareeksha of Sanskrit University this year. It was in our 1st year that we were introduced to 2 special subjects which were unique to Purnapramati: Tattvadarshana  and Paramapara. Tattvadarshana started off as various stories from Ramayana and Mahabharata and other neetikathas. In Parampara we learnt various stotras and most importantly the greatest asset of any student of Purnapramati: Bhagavadgeeta. We were taught the shlokas pada by pada and had to memorize them. This continued until we were able to give kanThapATha Pareekshe of all the 18 adhyAyas to Sri Pejawara Swamiji. Our academic learning was also different from other schools. Focus was on understanding the concepts rather than preparing for exams (we weren’t given marks or grades; our report cards had only detailed observation of us by our teachers), we went on….. Read more>> पूर्णप्रमति में मेरा अनुभव — आशा (हिन्दी आध्यापिका) पूर्णप्रमति को यदि एक् वाक्य में परिभाषित किया जाये तो मेरे अनुसार एक बीज को सम्पूर्ण विकसित करना अर्थात् एक बच्चे का सर्वाङ्गीण विकास। अभि कल की हो बात लगती है जब मुझे यह हिंदी शिक्षण

Anandini - April 2018

Anandini – April 2018

Wednesday, August 29th, 2018

ಏಪ್ರಿಲ್ ನ ಸಂಚಿಕೆ ತಾಂತ್ರಿಕ ಕಾರಣಗಳಿಂದಾಗಿ ಈಗ ಹೊರಬರುತ್ತಿದೆ. ಆನಂದಿನಿಗೆ ಇಷ್ಟು ದಿನ ಅಜ್ಞಾತವಾಸ. ಈ ಮಧ್ಯದ ಅನೇಕ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ಏಪ್ರಿಲ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪೂರ್ಣಪ್ರಮತಿಯ ಪ್ರಥಮ ತಂಡದ ಹತ್ತು ಮಕ್ಕಳು ತೆಗೆದುಕೊಂಡಿದ್ದು ಶೇಕಡ ನೂರು ಶ್ರೇಷ್ಠದರ್ಜೆಯ ( distinction) ತೇರ್ಗಡೆಯ ಫಲಿತಾಂಶ ಬಂದಿದೆ. ಏಳು ಮಕ್ಕಳು ಶೇಕಡ ೯೦ – ೯೭ರ ಅಂಕ ಗಳನ್ನು ಪಡೆದಿದ್ದಾರೆ. ಹತ್ತಾರು ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತ, ಪಾಠಕ್ರಮದಲ್ಲೂ ಹೊಸ ಪ್ರಯೋಗಗಳನ್ನು ಮಾಡುತ್ತ ಅದರ ಹಿನ್ನೆಲೆಯಲ್ಲಿ ಪುಸ್ತಕದ ಬದನೇಕಾಯಿಯಾಗದೆಯೂ ಇಷ್ಟೆಲ್ಲಾ ಅಂಕಗಳನ್ನು ಪಡೆಯಬಹುದು ಎನ್ನುವ ನಮ್ಮ ಯೋಜನೆ ಸಫಲವಾಗಿದೆ. ಇದು ಒಂದು ರೀತಿಯಲ್ಲಿ ಇತರರಿಗೂ ಮಾದರಿಯಾಗಬಹುದೇನೊ! ೨೦೧೮ ಜೂನ್ ನಲ್ಲಿ ಪೂರ್ಣಪ್ರಮತಿ ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಎರಡೂವರೆ ವರ್ಷದಿಂದ ಹನ್ನೊಂದು ವರ್ಷದ ವರೆಗೆ (೬ನೆಯ ತರಗತಿ) ಮಾಟೆಸ್ಸೊರಿ ಪದ್ಧತಿ, ನಂತರದ ತರಗತಿಗಳಲ್ಲಿ ರಾಜ್ಯಪಠ್ಯಕ್ರಮ ಪದ್ಢತಿ ಹಾಗೂ ಮಾಗಡಿ ರಸ್ತೆಯ ಆನಂದವನ ಗುರುಕುಲಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹಗಳೇ ಕಾರಣ. ನಮ್ಮ ಮಾರ್ಗದರ್ಶಕ ಗುರುಗಳಲ್ಲಿ ಒಬ್ಬರಾದ ಶ್ರೀ ಜ್ಞಾನಸ್ವರೂಪ ಸಾನಂದ ಸ್ವಾಮೀಜಿಯವರು ಹರಿದ್ವಾರದಲ್ಲಿ ಗಂಗೆಯ ನಿರಂತರತೆ, ಅವಿರಲತೆಯ ಬಗೆಗೆ ನಿರ್ಣಾಯಕ ಫಲಿತಾಂಶಕ್ಕಾಗಿ ತಮ್ಮ ಜೀವವನ್ನೇ ಪಣವಾಗಿಟ್ಟು ಆಮರಣಾಂತ  ಉಪವಾಸದ ತಪಸ್ಸು ಪ್ರಾರಂಭಿಸಿದ್ದಾರೆ. ಈಹೊತ್ತಿಗೆ ಉಪವಾಸ ಪ್ರಾರಂಭವಾಗಿ ೬೭ ದಿನಗಳು ಸಂದಿವೆ. ಆನಂದವನದ ಮಕ್ಕಳು ಶ್ರೀನಿವಾಸ್ ಅವರ  ನೇತೃತ್ವದಲ್ಲಿ ದೆಹಲಿ ಹಾಗೂ ಹರಿದ್ವಾರಕ್ಕೆ ಹೋಗಿ ಅವರೊಡನೆ ತಾವೂ ಗಂಗಾ ತಪಸ್ಸಿನಲ್ಲಿ ಪಾಲ್ಗೊಂಡು ಹಿಂದಿರುಗಿದ್ದಾರೆ. ಈ ಹಿನ್ನೆಲೆಯಲ್ಲಿ, ಬನ್ನಿ,ಈ ಸಂಚಿಕೆಯನ್ನು ಓದೋಣ. ಶಶಿರೇಖಾ ಮಣೂರ್, ಸಂಪಾದಕರು. ೦೪ ಫೆಬ್ರವರಿ ೨೦೧೮ರಂದು ಕುವೆಂಪು ಕಲಾಕ್ಷೇತ್ರದಲ್ಲಿ ಪೂರ್ಣಪ್ರಮತಿ ತನ್ನ ಎಂಟನೆಯ ವಾರ್ಷಿಕೋತ್ಸವ “ಪೂರ್ಣಪ್ರಮತಿ ಉತ್ಸವವನ್ನು” ಆಚರಿಸಿತು. “ಭಕ್ತಿ” ಎಂಬ ಸಂವತ್ಸರಸೂತ್ರವನ್ನು ಆಧರಿಸಿ ಭಕ್ತಿಪಂಥದ ಶ್ರೇಷ್ಠ ಸಾಧಕರ ಜೀವನ ಸಾಧನೆಯನ್ನು ಮಕ್ಕಳು ವೇದಿಕೆಯ ಮೇಲೆ ಪ್ರದರ್ಶಿಸಿದರು. ಪೂರ್ವಪ್ರಾಥಮಿಕ ಮಕ್ಕಳು ಕನಕದಾಸ, ಆಂಡಾಳ್, ತ್ಯಾಗರಾಜರನ್ನು ರಂಗಮಂಚಕ್ಕೆ ಕರೆತಂದರೆ, ಪ್ರಾಥಮಿಕ ಮಕ್ಕಳು ಪುರಂದರದಾಸರು ಹಾಗೂ ಅಣ್ಣಮಾಚಾರ್ಯರನ್ನು ಜೀವಂತಗೊಳಿಸಿದರು. ಮುಖ್ಯ ಅತಿಥಿಗಳಾಗಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಸಾನಂದ ಸ್ವಾಮೀಜಿ, ತಿರುಪತಿ ತಿರುಮಲದ ಅಣ್ಣಮಾಚಾರ್ಯ ಪ್ರಾಜೆಕ್ಟ್ನ ನಿವೃತ್ತ ಮುಖ್ಯಸ್ಥರಾದ ಶ್ರೀ ಗರಿಮೆಲ್ಲ ಬಾಲಕೃಷ್ಣ ಪ್ರಸಾದ್, ನಾಗ್ಪುರದ ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ಶ್ರೀನಿವಾಸ ವರಖೇಡಿಯವರು, ಅದಮ್ಯ ಚೇತನದ ಶ್ರೀಮತಿ ತೇಜಸ್ವಿನಿ, ಬಿ.ಪಿ.ಆರ್.ಎಲ್.  ಔಷಧಿ ತಯಾರಕ ಸಂಸ್ಥೆಯ ಶ್ರೀ ಜಯಪ್ರಕಾಶ್ ಮಡಿ, ನಿವೃತ್ತ ನಾಸಾ ವಿಜ್ಞಾನಿ ಶ್ರೀ ಶ್ರೀನಿವಾಸ್ ರವರು ಉಪಸ್ಥಿತರಿದ್ದರು. ಪೂರ್ಣಪ್ರಮತಿಯ ಎಲ್ಲಾ ವಿಭಾಗಗಳಲ್ಲಿ ಸೀತಾಜಯಂತಿಯನ್ನು ಮಾತೆಯರ ದಿನವನ್ನಾಗಿ ಆಚರಿಸಲಾಯಿತು. ಪೂರ್ವಪ್ರಾಥಮಿಕದ ಕೊನೆಯ ವರ್ಷ (ಎಮ್೩), ಪ್ರಾಥಮಿಕ ೩ನೆಯ ತರಗತಿ, ಹಿರಿಯ ಪ್ರಾಥಮಿಕ ೭ನೆಯ ತರಗತಿ ಹಾಗೂ ೧೦ನೆಯ ತರಗತಿಯ ಘಟಿಕೋತ್ಸವವನ್ನು ಹೃದಯಸ್ಪರ್ಶಿಯಾಗಿ ಆಚರಿಸಲಾಯಿತು. ಫಾಲ್ಗುನ ಮಾಸದ ಪ್ರತಿಪತ್ ತಿಥಿಯಂದು ಮಕ್ಕಳು ನೈಸರ್ಗಿಕ ಬಣ್ಣಗಳಿಂದ ಹೋಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.   ಮಾರ್ಚ್ ತಿಂಗಳ ಮೊದಲ ಶನಿವಾರದಂದು IISc Open Dayಗೆ ಭೇಟಿ ಕೊಟ್ಟು ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಿಕೊಂಡರು. ಅಗ್ನಿಹೋತ್ರಿಗಳು ಈ ಕಾಲದಲ್ಲಿ ಬಹಳ ವಿರಳ. ವೈದಿಕ ಸಂಪ್ರದಾಯದಂತೆ  ಅಗ್ನಿಯಪ್ರಾದುರ್ಭಾವ ಹಾಗೂ ಅದರ ಸಂರಕ್ಷಣೆಯ ಪ್ರಕ್ರಿಯೆ ಬಹಳ ವಿಶೇಷವಾದದ್ದು. ಈಗಿನ ಕಾಲಕ್ಕೆ ಆ ಪ್ರಕ್ರಿಯೆಯನ್ನು ತಿಳಿದು ಅದರಂತೆ ಅಗ್ನಿಯನ್ನು ಸಂರಕ್ಷಿಸಿ ಪ್ರತಿದಿನ ಅಗ್ನಿಹೋತ್ರಾದಿಗಳಲ್ಲಿ ತೊಡಗಿಕೊಳ್ಳುವವರು ಬಹಳ ಅಪರೂಪ. ನಮ್ಮ ಶಾಲೆಯ ಮಕ್ಕಳು ಅಂತಹ ಅಗ್ನಿಹೋತ್ರಿಗಳಾದ ಶ್ರೀ ಸುಬ್ರಾಯ ಶರ್ಮಾ ಅವರ ಬಳಿ ಹೋಗಿ, ಆ ಪ್ರಕ್ರಿಯೆಗಳನ್ನು ಪ್ರತ್ಯಕ್ಷ ನೋಡಿ ಆ ಜ್ಞಾನವನ್ನು ಪಡೆದರು. ಇದರ ಬಗ್ಗೆ ವಿದ್ಯಾರ್ಥಿಯೊಬ್ಬ ಬರೆದ ಲೇಖನವೊಂದನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯ ವಿಜ್ಞಾನದ ಪರಿಚಯ ಮಾಡಿಕೊಡಲು ಹಾಗೂ ಗ್ರಂಥಾಲಯದ ಪ್ರಯೋಜನ ಪಡೆಯುವಂತೆ ಪ್ರೇರೇಪಿಸಲು ವಿದ್ಯಾರ್ಥಿಗಳನ್ನು ಮಿಥಿಕ್ ಸೊಸೈಟಿ ಗ್ರಂಥಾಲಯಕ್ಕೆ ಮಾರ್ಚ್ ತಿಂಗಳ ಮೊದಲವಾರದಂದು ಕರೆದುಕೊಂಡು ಹೋಗಲಾಯಿತು. ೨೮ ಮಾರ್ಚ್ ೨೦೧೮ ರಂದು ಯತಿಕುಲಚಕ್ರವರ್ತಿಯೆಂದು ಬಿರುದಾಂಕಿತರಾದ ಶ್ರೀ ವಿಶ್ವೇಶತೀರ್ಥರ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Anandini – January

Anandini – January

Monday, February 26th, 2018

  ಸಂಪಾದಕೀಯ: ಜನವರಿ – ಪೂರ್ಣಪ್ರಮತಿಯ ಉತ್ಸವದ ತಯಾರಿಯ ತಿಂಗಳು. ಇಡಿಯ ವರ್ಷ, ಎಲ್ಲ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ವಿದ್ಯೆಯನ್ನು ಪೋಷಕರಿಗೆ, ಸಾರ್ವಜನಿಕರಿಗೆ ಪ್ರದರ್ಶನಮಾಡುವ ಕಾಲ. ಫೆಬ್ರವರಿ ೩ – ೪ ರಂದು ಪೂರ್ಣಪ್ರಮತಿಯ ಉತ್ಸವ ನಡೆಯಲಿದೆ. ಈ ಬಾರಿಯ ನಮ್ಮ ಶಾಲೆಯ ಸಂವತ್ಸರ ಸೂತ್ರ ( theme) ಭಕ್ತಿ. ದೈವಭಕ್ತಿ, ರಾಷ್ಟ್ರ ಭಕ್ತಿ ಹಾಗೂ ಗುರು ಭಕ್ತಿಯನ್ನಾಧರಿಸಿ ಕಾರ್ಯಕ್ರಮಗಳ ತಯಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಡೆಯುವ ವಿಚಾರ ಸಂಕಿರಣದ ವಿಷಯವೂ ‘ಭಕ್ತಿ ಸಂಗೀತ ಮತ್ತು ಶಿಕ್ಷಣ’. ಭಕ್ತಿ ಸಂಗೀತದಲ್ಲಿ ಮಿಂದೇಳುವ, ಅಣ್ಣಮಾಚಾರ್ಯರ ೮೦೦ ಕೃತಿಗಳಿಗೆ ರಾಗ ಸಂಯೋಜಿಸಿ ಹಾಡಿ ಜನಪ್ರಿಯಗೊಳಿಸಿದ ಶ್ರೀ ಗರಿಮೆಲ್ಲ ಬಾಲಕೃಷ್ಣ ಪ್ರಸಾದರಿಗೆ ಪೂರ್ಣಪ್ರಮತಿ ಸಮ್ಮಾನ್ ನಡೆಯಲಿದೆ. ಭಕ್ತಿ ಆಧಾರಿತ ನಾಟಕ, ನರ್ತನಗಳನ್ನು ಮಕ್ಕಳು ಅಂತರ್ಗತಗೊಳಿಸಿಕೊಂಡು ಅಭಿನಯಮಾಡುವುದನ್ನು ನೋಡುವುದೇ ಒಂದು ಹಬ್ಬ. ಹಳೆಯ ವಸ್ತುಗಳನ್ನು ಉಪಯೋಗಿಸಿ ಕಸವನ್ನು ರಸವಾಗಿಸಿ, ರಂಗಸಜ್ಜಿಕೆಯನ್ನು ನಮ್ಮ ಶಿಕ್ಷಕರೇ ಮಾಡುತ್ತಿರುವುದು ಮತ್ತೊಂದು ಹಬ್ಬ. ಅದೊಂದು ಬಿಡುವಿಲ್ಲದ ಕಾರ್ಯಾಗಾರ. ಬೆಂಗಳೂರು ಉತ್ತರ – ದಕ್ಷಿಣ ಜಿಲ್ಲೆಯಲ್ಲೇ ಪ್ರಥಮಬಾರಿಗೆ “ಮಕ್ಕಳ ಲೋಕ ಅದಾಲತ್” ಕಾರ್ಯಕ್ರಮವನ್ನು ಪೂರ್ಣಪ್ರಮತಿಯು ಏರ್ಪಡಿಸಿತ್ತು. ಮಕ್ಕಳು ಜವಾಬ್ದಾರಿ ಪ್ರಜೆಗಳಾಗುವಂತೆ ತರಬೇತು ನೀಡುವ ‘ನಮ್ಮ ವಾರ್ಡ್ ನ ಅಭಿವೃದ್ಧಿ ನಮ್ಮಹೊಣೆ’ ಎನ್ನುವ ಹೊಣೆಗಾರಿಕೆಯನ್ನು ಕಲಿಸುವ ಈ ವಾರ್ಡ್ ಸಭೆಗೆ ಇಲ್ಲಿನ ವಿಧಾನಸಭಾ ಸದಸ್ಯರಾದ ಶ್ರೀರವಿ ಸುಬ್ರಹ್ಮಣ್ಯ, ನಗರಸಭಾ ಸದಸ್ಯೆ ಶ್ರೀಮತಿ ನಂದಿನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿ ವಾರ್ಡ್ ನ ಸಮಸ್ಯೆಗಳ ಬಗ್ಗೆ ಮಕ್ಕಳ ಜೊತೆ ಚರ್ಚೆ ನಡೆಸಿದ್ದು ಮಕ್ಕಳಿಗೆ ಪೌರನೀತಿಯ ಪಾಠವಾಗಿತ್ತು. ಈ ಎರಡೂ ಕಾರ್ಯಕ್ರಮಗಳು ವಿದ್ಯಾಭ್ಯಾಸದ ಅಂಗವೇ ಆಗಿದ್ದು ಮಕ್ಕಳ ವ್ಯಕ್ತಿತ್ವ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದು ಪೂರ್ಣಪ್ರಮತಿಯ ಅನುಭವ. ಶಶಿರೇಖಾ ಮಣೂರ್ ಸಂಪಾದಕರು. ತಿಂಗಳ ತಿಳಿಗಾಳು: ‎‎17 ‎December ‎2017: ಪೋಷಕರಿಗಾಗಿ ಕ್ರೀಡಾಸ್ಪರ್ಧೆಗಳು Purnapramati conducted Parents Sports Meet on 17/12/2017 Ganesh, our sport’s faculty was incharge of the event. Around 38 parents had registered and around 30 of them enthusiastically participated. They expressed their happyness orally and through mails.   22 ‎December ‎2017: ಕನ್ನಡ ಹಬ್ಬ ಕನ್ನಡ ಹಬ್ಬ- ಪೂರ್ಣಪ್ರಮತಿಯಲ್ಲಿ ನಾಡಹಬ್ಬವನ್ನು ವಿಶಿಷ್ಟರೀತಿಯಲ್ಲಿ ಆಚರಿಸಲಾಗುತ್ತದೆ. ಕನ್ನಡ ಕಲಿಕೆಯೇ ಪ್ರಾಧನ್ಯತೆ ಪಡೆದು ವಯೋಮಾನಕ್ಕೆ ತಕ್ಕಂತೆ ಸ್ಪಷ್ಟ ಅರ್ಥಪೂರ್ಣ ಮಾತು, ಓದು, ಬರಹ, ಸ್ವಂತ ಬರಹಗಳ ಬಗ್ಗೆ ವರ್ಶದುದ್ದಕ್ಕೂ ವಿಶೇಷ ತರಬೇತಿ ನೀಡಲಾಗಿರುತ್ತದೆ. ಕನ್ನಡ ಹಬ್ಬದಲ್ಲಿ ತಿಂಗಳುದ್ದಕ್ಕೂ ವಿವಿಧ ಹಂತಗಳಲ್ಲಿ ಎಲ್ಲಾ ಮಕ್ಕಳಿಗೂ ಆಯಾ ಹಂತದ ಸ್ಪರ್ಧೆ ನಡೆಸಲಾಯಿತು. ಪುಟ್ಟ ಮಕ್ಕಳು ತಮ್ಮ ಪರಿಚಯ ಮಾಡಿಕೊಂಡರೆ, ಮುಂದಿನ ಹಂತದವರು ಅಕ್ಷರ ಬರಹ, ಪ್ರಬಂಧ, ಲೇಖನ, ಕವನಗಳ ರಚನೆ ಮಾಡಿದರು. ಕನ್ನಡ ಹಬ್ಬಕ್ಕೆ ಅತಿಥಿಗಳಾಗಿ ಅಗಮಿಸಿದವರಿಗೆ ಮಕ್ಕಳ ಬರಹಗಳನ್ನು ಮೊದಲೇ ತಲುಪಿಸಿ, ಆ ಹಿನ್ನೆಲೆಯಲ್ಲಿ ಹಬ್ಬದ ದಿನ ಅವರು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು. ಪೂರ್ವಪ್ರಾಥಮಿಕ ಹಾಗೂ ಕಿರಿಯಪ್ರಾಥಮಿಕ ತರಗತಿಗಳ ಕನ್ನಡ ಹಬ್ಬಾಚರಣೆಯಲ್ಲಿ ಅತಿಥಿಗಳಾಗಿ ಮತ್ತೂರು ಸುಬ್ಬಣ್ಣ ಅವರು ಭಾಗವಹಿಸಿದ್ದರೆ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಕವಿ ಶ್ರೀ ಹೆಚ್.ಎಸ್.ವೆಂಕಟೇಶಮೂರ್ತಿಯವರು ಹಾಗೂ ಸಾಹಿರಿ ಶ್ರೀಮಧುಸೂದನ ಅವರು ಆಗಮಿಸಿ ಹಬ್ಬಕ್ಕೆ ಕಳೆಕಟ್ಟಿಸಿದರು. ‎23 ‎ ‎December 2017: Ward Sabha ಮಕ್ಕಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು, ಪ್ರಜಾಪ್ರಭುತ್ವ, ಸರ್ಕಾರ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಇರುವ ಬಹು ಮುಖ್ಯ ಮಾರ್ಗವೆಂದರೆ ಮಕ್ಕಳ ವಾರ್ಡ್ ಸಭೆ. ನಗರದ ಮೊಟ್ಟ ಮೊದಲ ಮಕ್ಕಳ ವಾರ್ಡ್ ಸಭೆಯನ್ನು ನಮ್ಮ ಶಾಲೆಯ ವತಿಯಿಂದ ೨೩/೧೨/೨೦೧೭ರಂದು ಗಿರಿನಗರದ ವಿಜಯ ಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಬಸವನಗಿಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ರವಿ ಸುಬ್ರಹ್ಮಣ್ಯ, ಗಿರಿನಗರ ವಾರ್ಡ್‌ನ ಕಾರ್ಪೊರೇಟರ್ ಶ್ರೀಮತಿ ನಂದಿನಿ ವಿಜಯ ವಿಟ್ಠಲ, ಬಿಬಿಎಮ್‌ಪಿಯ ಸ್ಥಳೀಯ ವಾರ್ಡ್‌ನ ಅಭಿಯಂತರರಾದ ಶ್ರೀಯುತ ರಮೇಶ್, ಗಿರಿನಗರ ಪೋಲೀಸ್ ಠಾಣೆಯ ಸಹಾಯಕ ಪೋಲೀಸ್ ನಿರೀಕ್ಷಕರಾದ ರಾಮಕೃಷ್ಣ, ಪೂರ್ಣಪ್ರಮತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶಶಿರೇಖಾ, ವಿಜಯ ಭಾರತಿ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಮಚಂದ್ರ, ಪ್ರಾಂಶುಪಾಲರಾದ ಶ್ರೀಮತಿ ಉಷಾಕಿರಣ್, ಗಿರಿನಗರದ ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿಗಳಾದ ಶ್ರೀ ವಾಸುದೇವ್, ಡಾ||ಯಲ್ಲಪ್ಪ ರೆಡ್ಡಿ ಮತ್ತು ಸಿ.ಎಮ್.ಸಿ.ಎ. ಸಂಸ್ಥೆಯ ರೀಜನಲ್ ಹೆಡ್ ಮರುಳಪ್ಪ ಅವರು ಹಾಜರಿದ್ದರು. ಪೂರ್ಣಪ್ರಮತಿ, ವಿಜಯಭಾರತಿ, ಆಡನ್ ಪಬ್ಲಿಕ್ಚ್ ಮತ್ತು ಜ್ಞಾನದೀಪ್ತಿ ಶಾಲೆಗಳ ೧೨೦ಕ್ಕೂ ಹೆಚ್ಚು ಮಂದಿ ಮಕ್ಕಳು ಹಾಗೂ ಶಿಕ್ಷಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಡಾಂಬರು ಹಾಕಿದ ಕೆಲವೇ ದಿನಗಳಲ್ಲಿ ರಸ್ತೆಗಳನ್ನು ಅಗೆಯಲಾಗುತ್ತದೆ, ವಿವಿಧ ಇಲಾಖೆಗಳ ನಡುವೆ ಸಮನ್ವಯ ಏಕೆ ಸಧ್ಯವಾಗುತ್ತಿಲ್ಲ, ಕೆರೆಗಳಿಗೆ ತ್ಯಾಜ್ಯ ಸೇರೆದಂತೆ ತಡೆಯಲು ಸಾಧ್ಯವಿಲ್ಲವೇ… ಪೋಲೀಸರೇ ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನಗಳಲ್ಲಿ ಸಾಗಾಗುತ್ತಾರೆ. ಜನರು ನಿಯಮ ಪಾಲಿಸುವಂತೆ ನೋಡಿಕೊಳ್ಳಬೇಕಾದವರೇ ಹೀಗೆ ಮಾಡಿದರೆ ಹೇಗೆ? ಹೀಗೆ ನಗರದ ಹತ್ತಾಋ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಒಂದರಮೇಲೊಂದರಂತೆ ಪ್ರಶ್ನಿಸಿದರು. ಮಕ್ಕಳು ಕೇಳಿದ ಅನೇಕ ಪ್ರಶ್ನೆಗಳಿಗೆ ರವಿಸುಬ್ರಹ್ಮಣ್ಯ ಹಾಗೂ ನಂದಿನಿ ವಿಜಯ ವಿಠ್ಠಲ ಅವರು ಉತ್ತರಿಸಿದರು. ಈ ಸಂವಾದ ಕಾರ್ಯಕ್ರಮವು ನಗರದಲ್ಲಿನ ಆಗುಹೋಗುಗಳ ಬಗ್ಗೆ ಮಕ್ಕಳ ಗಮನ ಎಷ್ಟಿದೆ ಎಂಬುದನ್ನು ತಿಳಿಯ ಪಡಿಸಿತು. ‎30 December ‎2017: Nature Science Internship Programme Nature Science Internship Programme had its final show during the Seva Utsava conducted by Adamya Chetana every year during December 30, 31, Jan 1 and 2. All the 15 participating schools were given a topic to be displayed in the exhibition area in the National High School grounds. Our topic was Water Management. We tried to depict our Karnataka’s traditional water management systems, how it has been messed up with the example of Bellundur lake and some tips that can be followed at home to manage water efficiently. We also had a working model of a sewage treatment plant. Along with this we tried to show the best practices at our school in Bengaluru and anandavana. The event saw a huge crowd of more than 10,000 every day and our children were busy explaining to the curious onlookers. Some senior citizens who saw the chart on traditional water system recollected their memories on their childhood, their village and its water management system and gave us more information. They felt bad and helpless about the present systemt. Some of them felt bad about  the present lakes. Many were happy about the best practices in theschool and appreciated the school’s initiative. Children had a good exposure explaining the audience and answering their questions. Some times they were tired and took turns to explain. On Jan 1st we had a stage performance where children danced for the Gange song composed by Sriram, our teacher then and now a well wisher. Many appreciated the efforts of the children. Overall it was a enriching experience and personally i could meet a lot of people working who shared common interests with our school’s thought.   05 January 2018: A Visit to G.K.V.K. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ೦೫/೦೧/೨೦೧೮ರಂದು ಗಾಂಧಿ ಕೀಟ ವಿಜ್ಞಾನಕೇಂದ್ರಕ್ಕೆ ಭೇಟಿ ನೀಡಿದ್ದರು. ಬಗೆಯ ಬಗೆಯ ರೀತಿ, ಬಣ್ಣಗಳ ಕೀಟಗಳನ್ನು ನೋಡಿದ ಮಕ್ಕಳ ಕಣ್ಣುಗಳಲ್ಲಿ ಕುತೂಹಲದ ಜೊತೆಗೆ ಆಶ್ಚರ್ಯವೂ ಇಣುಕಿತ್ತು. ಆ ಕೀಟಗಳ ವಿಚಿತ್ರ ಆಕೃತಿ, ಅವುಗಳ ಗುಣಸ್ವಭಾವಗಳನ್ನು ಮಕ್ಕಳು ಆಸಕ್ತಿಯಿಂದ ಅಭ್ಯಸಿಸಿದರು. ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಮತ್ತು ಎಲೆ ಕಡ್ಡಿಗಳ ಆಕಾರದ ಕೀಟಗಳನ್ನು ನೋಡಿದಾಗಲಂತೂ ಮಕ್ಕಳು ತೆರೆದ ಬಾಯಿ ಮುಚ್ಚಲೇ ಇಲ್ಲ. ನಂತರ ಮಧ್ಯಾಹ್ನದ ಊಟದಲ್ಲಿ ಮಕ್ಕಳು ತಾವು ಕಂಡ ಅದ್ಭುತ ಹಾಗೂ ವಿಸ್ಮಯಕಾರಿ ಕೀಟಜಗತ್ತಿನ ವಿಷಯಗಳನ್ನು ಅಧ್ಯಾಪಕರೊಡನೆ ಮತ್ತು ಇತರ ಸ್ನೇಹಿತರೊಡನೆ ಹಂಚಿಕೊಂಡರು. ಹೀಗೆ ಒಬ್ಬೊಬ್ಬರು ಒಂದೊಂದು ವಿಷಯಗಳನ್ನು ಗಮನಿಸಿದ್ದರೂ, ಪರಸ್ಪರ ಹಂಚಿಕೊಂಡಾಗ ಅನೇಕ ವಿಷಯಗಳನ್ನು ತಿಳಿದುಕೊಂಡಂತಾಯಿತು.  ಹೀಗೆ ಕೀಟ-ಜಗತ್ತಿನ ವಿಸ್ಮಯಲೋಕದ ಭೇಟಿ ಸಾರ್ಥಕವಾಯಿತು. ಸ್ಕೌಟ್ ಕ್ಯಾಂಪ್:  ನಮ್ಮ ಶಾಲೆಯ ದೈಹಿಕ ಶಿಕ್ಷಕರಾದ ಗಣೇಶ್ ಅವರು ಶಾಲೆಯಲ್ಲಿ ಸ್ಕೌಟ್ ವಿಭಾಗವನ್ನು ಆರಂಭಿಸಲಿದ್ದಾರೆ. ಅದಕ್ಕಾಗಿ ತಾವು ದೊಡ್ಡಬಳ್ಳಾಪುರದಲ್ಲಿ ನಡೆಯುವ ಸ್ಕೌಟ್ ಕ್ಯಾಂಪ್ ಗೆ ಹೋಗಿ ವಿಶೇಷ ತರಬೇತಿಯನ್ನು ಪಡೆದುಬಂದಿರುತ್ತಾರೆ. ಮಕ್ಕಳ ಶಿಸ್ತುಬದ್ದ ಜೀವನಕ್ಕಾಗಿ ಬೇಕಾದ ಅಡಿಪಾಯ, ಸ್ವತಂತ್ರವಾಗಿ ಬದುಕುವ ಕಲೆ, ದೇಶದ ಒಳಿತಿಗಾಗಿ ಸದಾ ಕಟಿಬದ್ಧರಾಗಿರುವುದು, ಮೊದಲಾದ ವಿಷಯಗಳನ್ನು ಬೋಧಿಸುವುದು ಈ ವಿಭಾಗದ ಮುಖ್ಯ ಉದ್ದೇಶವಾಗಿದೆ. ಸಮಾಜದ ಹಿತಕ್ಕಾಗಿ ಮಿಡಿಯುವ ಮನೋಭಾವನೆ, ಯಾವುದೇ ಮೂಲಸೌಲಭ್ಯಗಳಿಲ್ಲದೆಯೂ ಬದುಕುವ ಕಲೆಗಳನ್ನು ಈ ಸ್ಕೌಟ್ ವಿಭಾಗದಲ್ಲಿ ಮಕ್ಕಳಿಗೆ ಕಲಿಸುವ ಸಂಕಲ್ಪ ನಮ್ಮ ದೈಹಿಕಶಿಕ್ಷಕರದ್ದಾಗಿದೆ. ‎26 ‎January ‎2018: ಗಣರಾಜ್ಯೋತ್ಸವ   Our school celebrated Republic day in the school ground. Sri Anantha .B.S., Deputy Secretary of Scouts & guides, Bengaluru division was the chief guest. The day also marked the inauguration of Scouts activities in the school.   ಶಿಕ್ಷಕರ ಅಂಕಣ: Adorable pig-nosed frog completely new to science found in India The frog is called Bhupathy’s purple frog (Nasikabatrachus bhupathi), in honor of Dr. Subramaniam Bhupathy, a well known Indian herpetologist who lost his life surveying the Western Ghats in 2014. Its appearance is characterized by a shiny purple coat, light

Anandini – November & December

Anandini – November & December

Saturday, December 30th, 2017

∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗ ಹರೀಶ್ ಭಟ್ ಅಣ್ಣನಿಗೆ ನಮ್ಮ ಮಕ್ಕಳ ಪ್ರೀತಿತುಂಬಿದ ಅಶ್ರುತರ್ಪಣ ಈ ಸಂಚಿಕೆಯಲ್ಲಿ  ಪ್ರಕಟವಾಗಿದೆ. ಸಂಪಾದಕರು.   Article on Harish Bhat from Centre for Ecological Studies, IISC Website  Harish Bhat (28 august 1971 – 3 Nov 2017), the author of the popular book ‘the Pakshi Prapancha (the world of birds)’, passed away on 3rd Nov 2017 afternoon while delivering a lecture at Alva’s High school, Moodbidri. Harish was associated with CES since 1995 and was actively involved in many field experiments related to ecology and biodiversity. Apart from field work, he was deeply engaged in the centre’s outreach programme including biennial lake symposium, environment education programmes in schools and colleges and was successful in creating considerable passion in youth on birds and butterflies and their interaction with nature. His work had received many accolades including the Karnataka Sahitya Academy Award, Govt. of Karnataka, for science literature and ‘Best Science Communicator’ award by Mysore Science Foundation. He served as a Honorary Wildlife Warden, Bangalore, a Member of Biodiversity Management Committee (BBMP), a member in the CBSE syllabus committee, Directorate for text books, Govt. of Karnataka, Western Ghats Task force, Government of Karnataka and more. Harish Bhat had deep ecological knowledge, a friendly nature, an ability to connect with students speaking Kannada — qualities that are so rare among scientists of current generation.These qualities made him extremely popular among school students and among public for disseminating innovative ideas and his talks on topics such as bio-mimicry, nature inspired design, and bioengineering aspects are quite popular.Its no wonder that almost every news outlet in Karnataka covered his untimely demise. His vast experience in environmental education and reaching out to children is unmatched evident from the successful co-ordination of the annual popular nature science programmes including Indian Science & Engineering Fair (INSEF), Nature Science Internship Programme (NSIP), etc. He has delivered more than 1500 lectures apart from training students and teachers from hundreds of schools, covering nook and corner of Karnataka through Karnataka State in the School Biodiversity Register Programme. Harish Bhat is survived by his wife and a 6 year old daughter. CES community deeply mourns the untimely death of Harish which has created void with the loss of a dedicated nature teacher. His mobile is still busy with the numerous SMS and calls from school students, which he would have responded within few seconds. Source: Centre for Ecological Sciences, IISc (http://ces.iisc.ac.in/new/?q=node/602). ******************************************* ಪ್ರಮೋದ್ ಸುಬ್ಬರಾವ್ ಸಹ ಲೇಖಕರು , ಪಕ್ಷಿ ಪ್ರಪಂಚ          ಈಗ್ಗೆ ಸುಮಾರು ೧೩ ವರುಷಗಳ ಹಿಂದೆ ನಮ್ಮ ದೇಶಕ್ಕೆ ಸುನಾಮಿಯೊಂದು ಅಪ್ಪಳಿಸಿ, ಅಲ್ಲೋಲ-ಕಲ್ಲೋಲವಾಗಿತ್ತು. ಹಾಗೆಯೇ ೪ನೇ ನವೆಂಬರ್, ಇನ್ನೊಂದು ಸುನಾಮಿಯ ಆಘಾತವಿದೆಯೆಂದು ನನಗೆ ಮುನ್ಸೂಚನೆಯೇ ಇರಲಿಲ್ಲ. ಆ ಸುದ್ದಿ ಕೇಳಿದೊಡನೆ ಎಂತದುದೋ ಒಂದು ಸಂಕಟ, ದುಃಖ, ಶೂನ್ಯದ ಎಡೆಗೆ ಮನ ನಿಂತಿತು. ಪಕ್ಷಿ ಪ್ರಪಂಚ ಪುಸ್ತಕ ಬರೆಯುವಾಗ ಹರೀಶರೊಂದಿಗೆ ಕಳೆದ ಅದೆಷ್ಟೋ ಕ್ಷಣಗಳು ಕಣ್ಣಮುಂದೆ ಪುಂಖಾನುಪುಂಖವಾಗಿ ಹಾದುಹೋದವು. ಅಂತಹ ಒಂದು ಸಂದರ್ಭದ ನೆನಪಾಗುತ್ತಿದೆ.          ‘ಪಕ್ಷಿ ಪ್ರಪಂಚ‘ ಬರೆಯುವಾಗಿನ ಸಮಯ. ಭಾರತೀಯ ವಿಜ್ಞಾನ ಮಂದಿರದಲ್ಲಿ ಕನ್ನಡದ ಕಾರ್ಯಕ್ರಮವೊಂದು ಏರ್ಪಾಡಾಗಿದೆ. ನಮ್ಮ ನಿತ್ಯೋತ್ಸವ ಕವಿ ಶ್ರೀ ನಿಸಾರರು ವಿಶೇಷ ಆಹ್ವಾನಿತರು. ಅಂದಿನ ಕಾರ್ಯಕ್ರಮ ಜನ ನಿಬಿಡವಾಗಿರಲಿಲ್ಲ. ಶ್ರೀಯುತರನ್ನು ಭೇಟಿಯಾಗಿ, ಅವರಿಂದ ಪಕ್ಷಿ ಪುಸ್ತಕದ ಬಗ್ಗೆ ತಿಳಿಸಿ, ಅವರ ಸಲಹೆ ಹಾಗೂ ಪಕ್ಷಿಗಳ ಕವನವೊಂದು ಪಡೆಯುವ ಬಯಕೆಯಿಂದ, ಹಿಂಜರಿಸುತ್ತಲೇ ನಾನು ಹರೀಶ್ ಅವರತ್ತ ಧಾವಿಸಿದೆವು.             ಶ್ರೀ ನಿಸಾರರು ಪುಸ್ತಕದ ಬಗ್ಗೆ ತಿಳಿದು, ತಮ್ಮನ್ನು ಇನ್ನೊಮ್ಮೆ ಕಾಣುವಂತೆ ಸೂಚಿಸಿದರು. ಮಗದೊಂದು ದಿನ ಅವರ ಮನೆಗೆ ಕರೆಮಾಡಿದಾಗ, ಪಕ್ಷಿಯ ಕವನವಿನ್ನೂ ಬರೆದಿಲ್ಲ, ೧೫ ದಿನಗಳ ತರುವಾಯ ಬನ್ನಿರೆಂದು ಹೇಳಿದರು. ೨-೩ ವಾರಗಳ ನಂತರ ಮತ್ತೆ ಕರೆ ಮಾಡಿದಾಗ, ಕವನ ತಯಾರಾಗಿದೆ, ಆದರೆ ನಿಮಗೆ ೫ ನಿಮಿಷಗಳಷ್ಟೇ ನೀಡುವೆ, ಕೆಲಸದ ಒತ್ತಡ ತುಂಬಾ ಇದೆಯೆಂದು ಹೇಳಿದರು. ನಾವು ಭಯ ಮಿಶ್ರಿತ ಸಂಭ್ರಮದದೊಂದಿಗೆ ಅವರನ್ನು ಕಂಡೆವು. ಮೊದಲ ಆ  ೨-೩ ನಿಮಿಷಗಳು ಭೇಟಿ, ನಮ್ಮ ಮುಂದಿನ ಯಶಸ್ಸಿನ ಹಾದಿಗೆ ನಾಂದಿಯಾಯಿತು ಎಂದರೆ ತಪ್ಪಾಗಲಾರದು.           ಪುಸ್ತಕದ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನಮ್ಮಿಂದ ಪಡೆದು ಹಾಗೂ ನಾವು ಬಳಸಿಕೊಂಡಿರುವ ಇತರ ಕವನಗಳ ಬಗ್ಗೆ ಸಂತಸವ್ಯಕ್ತ ಪಡಿಸಿ, ಪುಸ್ತಕವನ್ನು ಇನ್ನು ಹೆಚ್ಚು ಆಕರ್ಷಕವಾಗುವಂತೆ ಅನೇಕ ಉಪಯುಕ್ತ ಸಲಹೆಗಳನ್ನು ನೀಡಿದರು. ತಮ್ಮ ಕವನವೊಂದನ್ನು ಬಳಸಲು ಅನುಮತಿಯಿತ್ತು, ನಮ್ಮನ್ನು ‘ಛಲದಂಕ ಮಲ್ಲ‘ರೆಂದು ಸಂಬೋಧಿಸಿ, ಪುಸ್ತಕ ಬಿಡುಗಡೆಯಾದ ಮೇಲೆ ತಮ್ಮನ್ನು ಮತ್ತೆ ಕಾಣಲು ಸೂಚಿದರು.            ಲೋಕಾರ್ಪಣೆಯಾದ ನಂತರ, ಹೊತ್ತಗೆಯನ್ನು ಕಂಡು ಇದು ಸಂಗ್ರಾಹ್ಯ ಯೋಗ್ಯವೆಂದು ಶ್ಲಾಘಿಸಿ, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿಗೆ ಪುಸ್ತಕದ ಪ್ರತಿಗಳನ್ನು ನೀಡುವಂತೆ ಹುರಿದುಂಬಿಸಿದರು. ಅವರು ಹೇಳಿದಂತೆ ಆ ಸಂಸ್ಥೆಗಳಿಗೆ ಪ್ರತಿಗಳನ್ನು ತಲುಪಿಸಿ, ಇತರ ಕಾರ್ಯಗಳಲ್ಲಿ ಮಗ್ನರಾಗಿದ್ದೆವು. ಪ್ರಾಧಿಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ದಕ್ಕಿದೆಯೆಂದು ಅಲ್ಲಿಂದ ಕರೆ ಬಂದಾಗ ನಮ್ಮ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ತದನಂತರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಕೂಡ ನಮಗೇ ಬಂದಿದೆಯೆಂದು ತಿಳಿದು, ಪಟ್ಟ ಶ್ರಮವು ಫಲಕೊಟ್ಟಿತೆಂದು ಹಾಗೂ ಶ್ರೀ ನಿಸಾರರನ್ನು ಮನಸಾರೆ ನೆನೆದೆವು. ನೆನಪಿನಾಳದಿಂದ ಇವು ನನ್ನ ಕಣ್ಣಮುಂದೆ ಬಂದು ನನ್ನ ಕಣ್ಣಾಲಿಗಳು ತೇವವಾಗಿವೆ. ಸಾವು ತನ್ನ ಕೈಯನ್ನು ಸವರಿ ಹರೀಶರನ್ನು ತನ್ನ ಬಳಿ ಸೆಳೆದುದೇಕೆ? ಪ್ರಕೃತಿಯ ಮುಂದೆ ಮನುಜನ ಇಚ್ಛೆ ನಡೆಯುವುದೇ? ******************************************* Articles of Lower-elementary students:  Articles of Upper-elementary students:  Articles of High School students: Harish bhat anna was our teacher. He was the best teacher. I first met him at Bio-diversity park in Bangalore university. He started explaining about the flora and fauna at the park . I was surprised . I thought how he had learnt so much at such young age, it was interesting.  

Anandini - October & November

Anandini – October & November

Wednesday, December 13th, 2017

ಸಂಪಾದಕೀಯ:         ಶಶಿರೇಖಾ, (ಪ್ರಾಂಶುಪಾಲರು, ಪೂರ್ಣಪ್ರಮತಿ ಶಾಲೆ)   ಹರೀಶ್ ಭಟ್‌ಗೆ ಮಿಂಚಂಚೆ ಕಳಿಸಿದೆ ಎರಡು ತಿಂಗಳ ಹಿಂದೆ. ನಮ್ಮ ಆನಂದಿನಿಗೆ ಇನ್ನು ಮುಂದೆ ಒಂದು ಅಂಕಣ ಬೇಕು, ತಪ್ಪದೇ ಪ್ರತಿ ತಿಂಗಳ ೧೮ರಂದು ಕಳಿಸಿ ದಯವಿಟ್ಟು ಅಂತ. ಆಗಲಿ ಮೇಡಂ, ಆದರೆ ಈಗ ತುಂಬಾ ಬಿಜ಼ಿ ಇದ್ದೇನೆ, ಸಧ್ಯದಲ್ಲೇ ಪ್ರಾರಂಭಿಸ್ತೀನಿ ಅಂದಿದ್ದರು. ನಮ್ಮ ದುರದೃಷ್ಟ. ಅವರ ನೆನಪಿಗಾಗಿ ಆನಂದಿನಿ ಮೀಸಲಾಗಿಡುವ ಸಂದರ್ಭ ಬಂದೊದಗಿದೆ. ದಿನಾಂಕ ೦೩.೧೧.೨೦೧೭ ರಂದು ಹರೀಶ್ ಭಟ್ ಅವರು ನಮ್ಮನ್ನು ಅಗಲಿದ್ದಾರೆ. ಯಾರಿಗಾದರೂ ಥಟ್ಟನೆ ಇವರು ನಮ್ಮ ಆತ್ಮೀಯ ಬಂಧು ಅನ್ನಿಸೋ ವ್ಯಕ್ತಿತ್ವ ಅವರದು. ಎಂದೂ ಅಳಿಸದ ಮಾಸದ ನಗುಮುಖ, ಸರಳವಾಗಿ ಮನೆಯೊಳಗೆ ನಡೆಯುವಂಥ ಮಾತುಕತೆ. ಯಾವ ವಿಶೇಷ ಸೌಲಭ್ಯವನ್ನೂ ಬೇಡದ, ಸದಾ ಪುಟಿಯುವ ಉತ್ಸಾಹದ ಬುಗ್ಗೆ. ಮಾಧವ ಗಾಡ್ಗೀಳರಂಥ ವಿಜ್ಞಾನಿಯಿರಲಿ, ಕೇಂದ್ರ ಮಂತ್ರಿ ಅನಂತಕುಮಾರರಂಥ ರಾಜಕಾರಣಿಯಿರಲಿ, ಒಂದನೇ ತರಗತಿಯ ಹಾಲು ಹಸುಳೆಯಿರಲಿ- ಸುಗಮವಾಗಿ, ಸುರಸವಾಗಿ ಯಾವ ಒತ್ತಡವೂ ಇಲ್ಲದೆ ಮಾತನಾಡುವ ಜೊತೆಗೂಡಿ ಕೆಲಸ ಮಾಡುವ ಮಾಡಿಸುವ ಕೆಲಸಗಾರ. ಏನು ಮಾಡಬೇಕು, ಎಷ್ಟು ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಸ್ಪಷ್ಟ ಕಲ್ಪನೆ ಇದ್ದ, ಏಕೋಭಾವದಿಂದ ಕೈಗೆತ್ತಿಕೊಂಡ ಕೆಲಸವನ್ನು ಪೂರೈಸುವ ಶಕ್ತಿ ಇದ್ದ ವ್ಯಕ್ತಿ. ನಮ್ಮ ಮೊದಲ ಭೇಟಿ ಅವರ ಬದುಕು-ಭಾವ-ಜೀವ ಆಗಿದ್ದ ನಿಸರ್ಗದಲ್ಲೇ. ಬೆಂಗಳೂರು ವಿಶ್ವವಿದ್ಯಾನಿಲಯದ ಸಾವಿರ ಎಕರೆಯ ಕಾಡಿನಲ್ಲಿ. ಅಲ್ಲೇ ತಮ್ಮತನದ ಛಾಪು ಒತ್ತಿದರು ಹರೀಶ್. ನಾಗೇಶ್ ಹೆಗ್ಗಡೆಯವರಿಂದ ಅವರ ಪರಿಚಯವಾಯ್ತು. ಕೆಲಹೊತ್ತು ಕಾಡಲ್ಲಿ ಓಡಾಡಿ ದಣಿದ ಮಕ್ಕಳನ್ನು ಒಂದೆಡೆ ಕೂಡಿಸಿದ್ದೆವು. ಹರೀಶ್ ಅಲ್ಲೇ ಇದ್ದ ಕಪ್ಪೆ, ಇರುವೆ, ಚಿಟ್ಟೆಗಳನ್ನು ಕೈಯಲ್ಲಿ ಹಿಡಿದು ಮಕ್ಕಳಿಗೆ ಆಕರ್ಷಕವಾಗಿ ಅವುಗಳ ಬಗ್ಗೆ ಹೇಳತೊಡಗಿದರು. ಬಹುಶಃ ಒಂದು ಘಂಟೆಯಾಗಿರಬಹುದು, ಮಕ್ಕಳೊಟ್ಟಿಗೆ ಶಿಕ್ಷಕರೂ ಆ ನಿಸರ್ಗ ಕಥನದಲ್ಲಿ ಮುಳುಗಿಹೋಗಿದ್ದರು. ಭಾರತದ ಅದರಲ್ಲೂ ಕರ್ನಾಟಕದ ಎಷ್ಟುಶಾಲೆಗಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳನ್ನು ನಿಸರ್ಗದ ಅಭ್ಯಾಸದೆಡೆಗೆ ತಿರುಗಿಸಿದರೋ, ಎಷ್ಟು ಮಕ್ಕಳಿಗೆ ಪ್ರಕೃತಿಯೊಡನೆ ಸಹಬಾಳ್ವೆ ನಡೆಸುವ ದೀಕ್ಷೆ ಕೊಟ್ಟರೋ, ಎಷ್ಟು ಸರ್ಕಾರ, ಸರ್ಕಾರೇತರ ವಿಜ್ಞಾನ ಕಾರ್ಯಾಗಾರ, ಸಂಶೋಧನೆ, ಸ್ಪರ್ಧೆಗಳ ಮೇಲ್ವಿಚಾರಣೆ ಹೊತ್ತರೋ ಅವರಿಗೇ ಗೊತ್ತು. ಅವರ ಬಜಂತ್ರಿ ಅವರು ಊದಿದವರಲ್ಲ. ಯಾರು ಯಾವಾಗ ಯಾವುದೇ ಪ್ರಶ್ನೆ ಕೇಳಿದರೂ ತಕ್ಷಣ ಉತ್ತರ ಕಳಿಸುತ್ತಿದ್ದುದು ಅವರ ವೈಶಿಷ್ಟ್ಯ. ೨೦ನೇ ಶತಮಾನದ ಮೇರು ವಿಜ್ಞಾನಿ ಐನ್‌ಸ್ಟೈನ್ ಹೇಳುತ್ತಾನೆ “A person who says I have no time, is a dandy”. ಆತ ವಿಜ್ಞಾನದೊಂದಿಗೆ ಬದುಕನ್ನು ಸವಿದಾತ. ನಮ್ಮ ಹರೀಶ್ ಕೂಡ ತಮ್ಮ ಇಷ್ಟೆಲ್ಲ ಕಾರ್ಯಗಳ ಮಧ್ಯೆಯೂ ಸಂಸಾರದ ಯಾವ ಆಸ್ಥೆಯನ್ನೂ ಕಡೆಗಣಿಸಲಿಲ್ಲ. ಮಗಳು ಹಂಸಳ ಬಗ್ಗೆ ವಹಿಸುತ್ತಿದ್ದ ಕಾಳಜಿಯನ್ನು, ಅವಳೊಂದಿಗೆ ಅವಳಿಗಾಗಿ ಅವರು ಕಳೆಯುತ್ತಿದ್ದ ಕಾಲ, ಬೆಳೆಸುತ್ತಿದ್ದ ಬಗೆಯನ್ನು ಮಡದಿ ಶ್ರೀವಲ್ಲಿ ವಿವರಿಸುತ್ತಾರೆ. ಕೆಲಸದ ಮೇಲೆ ಬಹಳ ಸಲ ಬೇರೆ ಊರುಗಳಿಗೆ ಹೋಗುತ್ತಿದ್ದ ಹರೀಶ್ ತಾವಿಲ್ಲದಾಗ ಹೇಗಿರಬೇಕೆಂದು ಮಡದಿಗೆ ಕಲಿಸಿದ್ದರಂತೆ. ವಿಧಿಗೆ ಅದು ಕೇಳಿಸಿತೇ! ಇಂತಹ ವ್ಯಕ್ತಿ ಕಳೆದ ಐದು ವರ್ಷಗಳಿಂದ ನಮ್ಮ ಶಾಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಕ್ಕಳಿಗೆ ಮುಖ್ಯವಾಗಿ “ಭೂಮಿಯ ಮೇಲೆ ಜೀವ ವಿಕಾಸದ” ಪಾಠ ಮಾಡಿದರು. ಮಕ್ಕಳಿಂದ ಒಂದು ಪಠ್ಯಪುಸ್ತಕ ತಯಾರಿ ಮಾಡಿಸಿದ್ದರು. ನಮ್ಮ ಆನಂದವನದ ಜೀವವೈವಿಧ್ಯದ ಸರ್ವೆಯನ್ನು ಮಕ್ಕಳಿಂದ ಮಾಡಿಸಿದ್ದರು ಎನ್ನುವುದೇ ನಮ್ಮ ಸಂತೋಷ, ಸೌಭಾಗ್ಯ, ಹೆಮ್ಮೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ.         ಅವರ ಆತ್ಮೀಯ ನೆನಪಿನಲ್ಲಿ ಅವರ ಪ್ರೀತಿಪಾತ್ರರಾದ ನಮ್ಮ ಶಾಲೆಯ ಮಕ್ಕಳು,  ಶಿಕ್ಷಕರು ಹಾಗೂ ನಮ್ಮ ಮಾರ್ಗದರ್ಶಕರು ಕಂಬನಿದುಂಬಿದ ವಿದಾಯದ ಲೇಖನಗಳನ್ನು ಬರೆದಿದ್ದಾರೆ. ಅದನ್ನು ಎರಡು ಕಂತುಗಳಲ್ಲಿ ಪ್ರಕಟಿಸುತ್ತಿದ್ದೇವೆ.          Raghuram (Vice Principal)           My association with Harish Bhat, the naturalist began almost 3 years back. I could instantly hit a chord with him as our interests were common. There are very few naturalists who go out in the field, do research, come back and share it with others.  He could instantly strike the right chord with 6 year old or a 60 year old. Our yatra to Kumaraparvat with him was unforgettable. The vast amount of knowledge he had and his willingness to share it with every child throughout the journey was something extraordinary. He always encouraged me to come up with a zoological dictionary with inputs from our ancient scriptures. It will be a befitting shrandanjali to him if I can atleast start this work in this academic year. ದೇವಲೋಕದ ಹೂವನ್ನು ಅರಸಿ ಹೊರಟ ಚಿಟ್ಟೆ  – ಶ್ರೀವಲ್ಲಿ (ಹರೀಶ್ ಭಟ್ಟರ ಶ್ರೀಮತಿ) ೨೦೦೩, ಅಕ್ಟೋಬರ್ ೩ ರಂದು ಉಡುಪಿಯಲ್ಲಿ ನನ್ನ ಜೀವನದ ಒಂದು ಹೊಸ ಅಧ್ಯಾಯ ಆರಂಭವಾಯಿತು. ಒಂದು ನಡೆದಾಡುವ ವಿಶ್ವಕೋಶವನ್ನು ನಾನು ಮದುವೆಯಾಗಿದ್ದೆ ಎಂದು ನಂತರ ತಿಳಿಯಿತು. ಇವರ ಭೇಟಿಯಾದ ನಂತರ ನಾನು ಎಂದೂ ಗೂಗಲ್ ಸರ್ಚ್ ಮಾಡಿದ್ದೇ ಇಲ್ಲ……. ನಾನು ಕಂಡ ಅಪರೂಪದ ವಿಜ್ಞಾನಿ –  Sri Yallappa Reddy,  (Retired Forest officer ) ಡಾ.ಹರೀಶ್ ಭಟ್ಟರು ಒಬ್ಬ ಯುವ ವಿಜ್ಞಾನಿ. ಇವರು ಬೇರೆ ವಿಜ್ಞಾನಿಗಳ ಹಾಗೆ ಜೀವಿ-ಜೀವಿಗಳನ್ನು ನೋಡಿದವರಲ್ಲ. ಪಕ್ಷಿ ಅಧ್ಯಯನ ಮಾಡಿದರು. ಅಲ್ಲದೆ ಪಕ್ಷಿ-ಮರ-ಕೀಟ-ಹಣ್ಣು-ಹೂವುಗಳ ನಡುವಿನ ಕೊಂಡಿ, ಸಂಬಂಧಗಳನ್ನು ಗುರುತಿಸಿದರು. ಇವೆಲ್ಲ ಒಂದನ್ನೊಂದು ಬಿಟ್ಟು ಬಾಳಲಾರದ ಸಂಬಂಧಿಕರು……… ಹರಿತ್ ಮತ್ತು ಹರೀಶ್: ಕಳಚಿಕೊಂಡ ಹಸುರು ಕೊಂಡಿ – Nagesh Hegde ( Journalist) ನಿಸರ್ಗದ ಜೊತೆ ಗಾಢ ನಂಟನ್ನು ಇಟ್ಟುಕೊಂಡವರು ಕಣ್ಮರೆ ಆದರೆಂದರೆ ನಿಸರ್ಗದ ಒಂದು ಭಾಗವೇ ಕಣ್ಮರೆ ಆದಂತೆ. ‘ಮಿತ್ರ ಹರೀಶ್ ಭಟ್ ಇನ್ನಿಲ್ಲ’ ಎಂದು ಶ್ರೀನಿವಾಸ್ ಅಣ್ಣ ಆ ದಿನ ಗದ್ಗದಿತರಾಗಿ, ತಡೆ-ತಡೆದು ಹೇಳುತ್ತಿದ್ದಾಗ ಒಂದು ಸೊಂಪಾದ ಅಶ್ವತ್ಥ ವೃಕ್ಷವೊಂದು ನೋಡನೋಡುತ್ತ ಕಣ್ಮರೆ ಆದಂತೆ……….. ಅಜಾತಶತ್ರು, ನಿಗರ್ವಿ ಡಾ|ಹರೀಶ್‍ ಭಟ್ – K.S. Naveen (ಸಂಗ್ರಹಾಲಯ ನಿರ್ವಾಹಕ, ಆನಂದವನ, ಮಾಗಡಿ) “ಯಶ್ವಂತ್‍, ಇವರು ನವೀನ್‍ ಅಂತ ಪುಸ್ತಕ ಬರಿತಾ ಇದಾರೆ. ಅವರಿಗೆ ಯಾವುದಾದರು ರೆಫೆರೆನ್ಸ್ ಪುಸ್ತಕ ಬೇಕಾದರೆ ನನ್ನ ಹೆಸರಲ್ಲಿ ಕೊಡಿ” ಇದು ಹರೀಶ್ ಭಟ್‍, ನನ್ನ ಪರಿಚಯ ಹೆಚ್ಚೇನು ಇರದಿದ್ದ ಸಂದರ್ಭದಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯ……………… ಬಿತ್ತಿದ ಕನಸು- (ಭಾಗ – ೧) – Krishnaraja Bhat (Lecturer, PES College) ಹರೀಶಣ್ಣ ಈ ಪದ ವ್ಯಕ್ತಿಪರಿಚಯ ಇದ್ದವರಿಗೆ ಕಿವಿಯಿಂದಿಳಿದು ನೇರ ಹೃದಯಕ್ಕೆ ತಟ್ಟುತ್ತದೆ. ಅವರಲ್ಲಿ ಮೇಧಾವಿತನದೊಂದಿಗಿದ್ದ ನಿರಹಂಕಾರ ಸರಳತೆ ಎಳೆಯ ಮನಸ್ಸಿಗೂ ಆಪ್ತತೆಯನ್ನು ಮೂಡಿಸುತ್ತಿತ್ತು. ನಡೆದಾಡುವ ಗೂಗಲ್ ಆಗಿ, ಆದರೆ ಗೂಗಲ್‌ನಂತೆ ಈ ಅರ್ಥದಲ್ಲೋ ಆ ಅರ್ಥದಲ್ಲೋ! ಎಂದು ಮರಳಿ ಪ್ರಶ್ನಿಸದೆ ನಿಸ್ಸಂದೇಹವಾದ…… ಅವಧೂತ ಗೀತೆ – ಹರೀಶ್ ಭಟ್ ಅವರು ತಮ್ಮ ಕೊಠಡಿಯಲ್ಲಿ ಕುಳಿತು ತಮ್ಮ ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಏನೋ ವಿವರಣೆ ಕೊಡ್ತಾ ಇರ್ತಾರೆ. ಅವರಿಗೆ ತೊಂದರೆ ಕೊಡುವುದು ಬೇಡವೆಂದು ಇವರೆಲ್ಲ ಸುಮ್ಮನೆ ಕೇಳುತ್ತಾ ಕುಳಿತುಕೊಳ್ಳುತ್ತಾರೆ. ಹರೀಶ್ ಅವರು behavioral study of animals ಬಗ್ಗೆ ವಿವರಿಸುತ್ತಾ ………… ಹರೀಶ್ ಭಟ್ ಇನ್ನು ನೆನೆಪು ಮಾತ್ರ – Indumati, Purnapramati ನಮ್ಮ ಶಾಲೆಯಲ್ಲಿ ‘ಜೀವೋ ಜೀವಸ್ಯ ಜೀವನಮ್’ ಎಂಬ ಸಂವತ್ಸರ ಸೂತ್ರವನ್ನು ಕಲಿಯುತ್ತಿದ್ದಾಗ ಭಾಗೀರಥಿ ಜಯಂತಿಯಂದು ಮಕ್ಕಳನ್ನು ಪರಿಸರ ಅಧ್ಯಯನಕ್ಕೆಂದು ಯಪ್ಪಲ್ಲರೆಡ್ಡಿಯವರ ಜೊತೆ ೨೦೧೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜೀವವೈವಿದ್ಯ ಉದ್ಯಾನಕ್ಕೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಶ್ರೀ ಹರೀಶ್ ಭಟ್ಟರ ಪರಿಚಯ ನಮಗಾಯಿತು……… ಪ್ರಕೃತಿಯನ್ನೇ ಗುರುವಾಗಿಸಿ….. – ಆಗಸ್ಟ್ ೮, ೨೦೧೩ ಪೂರ್ಣಪ್ರಮತಿಯ ಹಾದಿಯಲ್ಲಿ ಮರೆಯಲಾಗದ ಹೆಜ್ಜೆಯಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಗುರುಪೂರ್ಣಿಮೆಯಂದು ಆಚರಿಸಲು ಸಾಧ್ಯವಾಗದ ಉತ್ಸವವನ್ನು ಆಗಸ್ಟ್ ೮ ರಂದು ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪುಟ್ಟ ವನಕ್ಕೆ ಪೂರ್ಣಪ್ರಮತಿಯ ಮಕ್ಕಳು ಪಯಣ ಬೆಳೆಸಿದ್ದರು. ಜೀವೋ ಜೀವಸ್ಯ ಜೀವನಂ ಸೂತ್ರವನ್ನು ಮತ್ತಷ್ಟು ಮಗದಷ್ಟು……… ನಮ್ಮಶಾಲೆಯ ಅನೇಕ ಚಟುವಟಿಕೆಗಳಲ್ಲಿ ನಮ್ಮೊಡನಿದ್ದು ಆ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಹರೀಶಣ್ಣನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರೊಡಗಿನ ನಮ್ಮ ಶಾಲೆಯ ಪಯಣದಲ್ಲಿನ ಕೆಲ ಚಿತ್ರಗಳನ್ನು ಇಲ್ಲಿ ಬಿತ್ತರಿಸಲಾಗಿದೆ.  

Anandini – August & September 2017

Anandini – August & September 2017

Tuesday, November 14th, 2017
Anandini - July 2017

Anandini – July 2017

Monday, September 11th, 2017

ಸಂಪಾದಕೀಯ ಜ್ಞಾನವೃದ್ಧರೂ, ವಯೋವೃದ್ಧರೂ ಆಗಿರುವ ಶ್ರೀ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿಯವರು ಕಳೆದ ಹಲವು ದಿನಗಳಿಂದ ನಮ್ಮ ಸೌಭಾಗ್ಯದಿಂದ ನಮ್ಮೊಡನೆ ಆನಂದವನದಲ್ಲಿ ತಂಗಿದ್ದಾರೆ. ಈ ಇಳಿ ಹರೆಯದಲ್ಲೂ ಅವರ ದೈಹಿಕ, ಮಾನಸಿಕ ಚಟುವಟಿಕೆಗಳು ನಮಗೆ ಸ್ಪೂರ್ತಿದಾಯಕವಾಗಿದೆ. ಅವರ ಬಗೆಗೆ ನಮ್ಮ ಶಾಲಾತಂಡದ ಸದಸ್ಯರಾದ ಡಾ.ಶ್ರೀನಿಧಿಯವರ ಪರಿಚಯಾತ್ಮಕ ಲೇಖನವನ್ನು ನೀವು ಇಲ್ಲಿ ಓದಬಹುದು.    ಜುಲೈ ತಿಂಗಳ ತಿಳಿಗಾಳು ಜುಲೈ 2017: ಗಣಿತದ ವಿಷಯದಲ್ಲಿ ಪ್ರಯೋಗಗಳಿಗೆ ಹೆಚ್ಚು ಒತ್ತು ಕೊಡುವ ಉದ್ದೇಶದಿಂದ ನಮ್ಮ ಶಾಲೆಯು ಈ ದಿವಸ PRMO – Regional Math Olympiad ಕಾರ್ಯಕ್ರಮಕ್ಕೆ ನೋಂದಣಿ ಹೊಂದಿ, ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಸಾಕ್ಷಿಯಾಯಿತು.   ಜುಲೈ 2: ಪೂರ್ಣಪ್ರಮತಿಯ, ಸತ್ಯತೀರ್ಥ ಫೌಂಡೇಷನ್ ನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ.ಪ್ರಹ್ಲಾದಾಚಾರ್ಯ ರವರು, ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ಶ್ರೀಪಾದಂಗಳಾಗಿ ಪೀಠಾರೋಹಣ ಮಾಡಿರುವುದು ಸಮಸ್ತ ಪೂರ್ಣಪ್ರಮತಿಯ ಪರಿವಾರಕ್ಕೆ ಸಂತಸದ ವಿಷಯವಾಗಿದೆ.   ಜುಲೈ 8: “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ಸುಮತಿಯ ಮಕ್ಕಳು, ಶಿವಂನ ೧ ರಿಂದ ೬ ನೇ ತರಗತಿಯ ಮಕ್ಕಳು  ಈ ಬಾರಿ ಗುರುಪೂರ್ಣಿಮೆಯನ್ನು ಶ್ರೀ.ಸಾನಂದ ಗುರೂಜಿ ಮತ್ತು ಶ್ರೀ.ಎಸ್.ಕೆ.ಗುಪ್ತ ರವರೊಂದಿಗೆ ಬಹಳ ಅರ್ಥಪೂರ್ಣವಾಗಿ ಆಚರಿಸಿದರು. ಅಂದಿನ ದಿನವೇ ಫ್ರೌಢಶಾಲಾ ವಿಧ್ಯಾರ್ಥಿಗಳು ಸಹ ಈ ಇಬ್ಬರು ಮಹನೀಯರಿಂದ ಮಾರ್ಗದರ್ಶನವನ್ನೂ ಪಡೆದರು.     ಜುಲೈ 8: ಪೂರ್ಣಪ್ರಮತಿಯಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಜನಪ್ರಿಯ ಕ್ರೀಡೆ ಕ್ರಿಕೆಟ್ ತರಬೇತಿ ಪ್ರಾರಂಭವಾಗಿದ್ದು ಸುಮಾರು ೧೫ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. KSCA  ವತಿಯಿಂದ ನಡೆಯುತ್ತಿರುವ ಪಂದ್ಯಗಳಲ್ಲಿ ನಮ್ಮ ಶಾಲೆಯ ತಂಡವು ಭಾಗವಹಿಸಿದೆ.   ಜುಲೈ 9: ಬಿಬಿಎಂಪಿ ವತಿಯಿಂದ ನಡೆದ ಕಾಂಪೋಸ್ಟ್ ಸಂತೆಯಲ್ಲಿ. ಫ್ರೌಢಶಾಲಾ ವಿಧ್ಯಾರ್ಥಿಗಳು ಪಾಲ್ಗೊಂಡು ಸಾವಯವವಾಗಿ ಮಾನವ ತ್ಯಾಜ್ಯವನ್ನು ಹೇಗೆ ಗೊಬ್ಬರವಾಗಿ ಪರಿವರ್ತಿಸಬಹುದು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ವಿವರಿಸಿದರು. ನಮ್ಮ ಆನಂದವನದಲ್ಲಿ ಈ ಪದ್ದತಿಯನ್ನು ಅಳವಡಿಸಿಕೊಂಡಿದ್ದು ಬಹಳ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಈ ಒಂದು ವಿಧಾನದ ಪ್ರಾತ್ಯಕ್ಷಿಕೆಗಾಗಿ ನಮ್ಮ ಶಾಲೆಯು ಪ್ರಥಮ ಬಹುಮಾನವನ್ನು ಪಡೆದಿದೆ.   ಜುಲೈ 10: ಫ್ರೌಢಶಾಲಾ ವಿಧ್ಯಾರ್ಥಿಗಳು ಸಹ ಇಂದಿನ ದಿನ ಶಿಕ್ಷಕರಿಗೆ ವಿವಿಧ ರೀತಿಯ ಆಟಗಳನ್ನು ಆಡಿಸುವ ಮೂಲಕ ಗುರುಪೂರ್ಣಿಮೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು. ಶಿಕ್ಷಕರಿಗೆ ಒಂದೊಂದು ಸಸಿಗಳನ್ನು ಕಾಣಿಕೆಯಾಗಿ ನೀಡಿದರು.   ಜುಲೈ 13 ಮತ್ತು 14: ಪೂರ್ಣಪ್ರಮತಿಯ ಫ್ರೌಢಶಾಲಾ ವಿಧ್ಯಾರ್ಥಿಗಳು ಅಂತರ್ ಶಾಲಾಮಟ್ಟದ ಕೌನ್ಸಿಲರ್ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಸಿದ್ದರು.   ಜುಲೈ 14: ವಿಭಿನ್ನ ಪ್ರಯತ್ನಗಳನ್ನು ಕಲಿಯುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ ಪೂರ್ಣಪ್ರಮತಿಯ ಮಕ್ಕಳು ಹಾಗೂ ಅಧ್ಯಾಪಕರು ಗುರುನಾನಕ್ ಭವನದಲ್ಲಿ ಏರ್ಪಡಿಸಲಾಗಿದ್ದ  ” The Dark Lord” ಎಂಬ ನೃತ್ಯ ರೂಪಕವನ್ನು ವೀಕ್ಷಿಸಿದರು ಮತ್ತು ಆಧುನಿಕ ರಂಗಭೂಮಿಯ ಪ್ರಯೋಗಗಳನ್ನು ಸವಿದರು.   ಜುಲೈ 15: ಪೂರ್ಣಪ್ರಮತಿಯ ಪೋಷಕರಿಗಾಗಿ ಶ್ರೀಮತಿ.ಸೌಮ್ಯ ರಾಮಜಿರವರು ಶಾಲೆಯಲ್ಲಿ ಕಲಿಕಾ ಪದ್ದತಿ ಮತ್ತು ಕಲಿಕೆಯ ಕ್ರಮದ ಬಗ್ಗೆ ವಿವರವಾಗಿ ತಿಳಿಸಿದರು.   ಜುಲೈ 18: ಜವಹರಲಾಲ್ ನೆಹರು ತಾರಾಲಯದ ವತಿಯಿಂದ ರಾಬರ್ಟ್ ಹೂಕಿ ರವರ ಜನ್ಮ ದಿನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಜ್ಜಾನ ಕಾರ್ಯಾಗಾರದಲ್ಲಿ ನಮ್ಮ ಶಾಲೆಯ ಅಧ್ಯಾಪಕರು ಪಾಲ್ಗೊಂಡಿದ್ದರು.   ಜುಲೈ 20 ಮತ್ತು 21: ಜವಹರಲಾಲ್ ನೆಹರು ತಾರಾಲಯದ ವತಿಯಿಂದ ನಡೆದ ಗಣಿತ ಕಾರ್ಯಾಗಾರದಲ್ಲಿ ನಮ್ಮ ಶಾಲೆಯ ಅಧ್ಯಾಪಕರು ಪಾಲ್ಗೊಂಡಿದ್ದರು.   ರಾಪಾನೂಯಿಯ ದುರಂತ ಕತೆ ಒಂದು ಸಮೃದ್ಧ ದ್ವೀಪ ಏಳೆಂಟು ನೂರು ವರ್ಷಗಳ ಅವಧಿಯಲ್ಲಿ ಮನುಷ್ಯನ ಕೈಗೆ ಸಿಕ್ಕು ನಲುಗಿ, ತನ್ನ ಧಾರಣಶಕ್ತಿಯನ್ನು ಕಳೆದುಕೊಂಡು, ನಂತರದ ಕೇವಲ ನೂರು ವರ್ಷಗಳಲ್ಲಿ ಇಳಿಜಾರಿನಲ್ಲಿ ಉರುಳಿದ ಮಣ್ಣುಂಡೆಯ ಹಾಗೆ ಎಲ್ಲವನ್ನೂ ಕಳೆದುಕೊಂಡು ನಶ್ವರವಾಗುವ ಹಂತ ತಲುಪಿದ್ದು ಹೇಗೆ? ನಾಗೇಶ ಹೆಗಡೆಯವರ ಈ ಲೇಖನ ಓದಿ.   ಅಂಕಣಗಳು – ಲೇಖನಗಳು ತಣಿಯದ ಕುತೂಹಲ – ಯಲ್ಲಪ್ಪ ರೆಡ್ಡಿಯವರ ಅಂಕಣದ ಮೂರನೇ ಕಂತು Personal Recount – A writeup by Srihari on his experience at a Yakshagana program ಮರೆಯಲಾಗದ ಆ ಕ್ಷಣ – ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಡನೆ ಕಳೆದ ಕ್ಷಣವೊಂದರ ಮೆಲುಕು My Colleagues  – A recount of five years at Purnapramati ಉಪಮಾಲಂಕಾರ – ಅಲಂಕಾರ ಸರಣಿಯ ಮೂರನೇ ಕಂತು   ಕೃತಕ ಉಪಗ್ರಹಗಳ ಕುರಿತು ನಿಮಗೆಷ್ಟು ಗೊತ್ತು? ನಮ್ಮ ದಿನನಿತ್ಯದ ಬದುಕಿನಲ್ಲಿ ಕೃತಕ ಉಪಗ್ರಹಗಳ ಪಾತ್ರ ಬಹಳ ದೊಡ್ಡದು. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲರ ಬದುಕನ್ನೂ ಅವು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸುತ್ತವೆ. ಅಂತರಿಕ್ಷದಲ್ಲಿರುವ ಉಪಗ್ರಹಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲವಲ್ಲ, ಹಾಗೆಯೇ ಅವುಗಳ ಮಹತ್ವವೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ. ಕಣ್ಣಿಗೆ ಕಾಣದ ಈ ಕಣ್ಮಣಿಗಳು ನಮ್ಮ ಬದುಕನ್ನು ಹೇಗೆಲ್ಲ ಪ್ರಭಾವಿಸುತ್ತವೆ? ವಿವರ ತಿಳಿಯಲು ಈ ಲೇಖನ ಓದಿ.   Recent Research On Language Learning – Conversation Skills Mastering the language in just Grammar or the lessons from standard text book never results in holding good conversation in the language. Read more about the Recent Research On Language Learning and Conversation Skills in this article by Shylaja Holla.   ಸುಖ  v/s ಸಾರ್ಥಕ ನಮ್ಮ ಬದುಕಿನ ಯಾತ್ರೆ ಹೇಗೆ ಸಾಗುತ್ತಿದೆ ಎಂಬುವುದು ಮುಖ್ಯವಲ್ಲ! ಸಾರ್ಥಕ್ಯದ ಹಾದಿಯಲ್ಲಿ ಸಾಗುತ್ತಿದೆಯಾ ಎಂಬುವುದಷ್ಟೇ ಮಾನ್ಯ. ನಮ್ಮ ಜೀವನದ ಸಾರ್ಥಕ್ಯ ದೈವ ಸಾಕ್ಷಾತ್ಕಾರ-ಮುಕ್ತಿಯಲ್ಲಿ, ವಿನ: ನಾವುಗಳಿಸುವ ಶಿಕ್ಷಣ, ದುಡಿಮೆ, ಅನುಭವಿಸುವ ಲಾಭ, ನಷ್ಟ ಎಲ್ಲವು ಅಮಾನ್ಯ. ಪೂರ್ಣಪ್ರಮತಿ ಅಧ್ಯಾಪಕರಾದ ಶ್ರೀನಾಥ ಅವರು ಬರೆದಿರುವ, ಈ ತಾತ್ಪರ್ಯ ತಿಳಿಸುವ ಕತೆ ಓದಲು ಇಲ್ಲಿ ಕ್ಲಿಕ್ ಮಾಡಿ.   ಚಿಣ್ಣರ ಅಂಗಳ Stuti -Class 3

Newsletter - July - 2017

Newsletter – July – 2017

Friday, July 14th, 2017
Newsletter - June - 2017

Newsletter – June – 2017

Tuesday, June 27th, 2017
Newsletter - May - 2017

Newsletter – May – 2017

Friday, May 19th, 2017

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.