ಆನಂದಿನಿ – ಜೂನ್ - 2020

ಆನಂದಿನಿ – ಜೂನ್ – 2020

Tuesday, June 30th, 2020

ಸಂಪಾದಕೀಯ – ಶಶಿರೇಖಾ.ಎಂ.ಜಿ (ಪ್ರಾಂಶುಪಾಲರು) ಆನಂದಿನಿಯ ಈ ಸಂಚಿಕೆ ಒಂದು ಹೊಸ ಕಾಲಘಟ್ಟದಲ್ಲಿ ಹೊರಬರುತ್ತಿದೆ.           ಮಾನವ ಪ್ರಕೃತಿಮಾತೆಗೆ ಮಾಡಿದ ಅತಿರೇಕದ ಅಪಚಾರಕ್ಕಾಗಿ ಆಕೆ ಮುನಿದು ಮಾನವನ ಮೇಲೆ ಮಾರಕಾಸ್ತ್ರ ಪ್ರಯೋಗಿಸುತ್ತಿದ್ದಾಳೆ ಎನ್ನುವ ಭಾವ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಇದ್ದಕ್ಕಿದ್ದಂತೆ ಎರಗಿದ ಆಕೆಯ ಶಾಪವಾದ ಕೋವಿಡ್-೧೯ನಿಂದಾಗಿ ಇಡಿಯ ವಿಶ್ವಕ್ಕೇ ದಿಗ್ಭ್ರಮೆ ಆವರಿಸಿ, ಎಲ್ಲ ದೇಶಗಳ ಲಕ್ಷಾಂತರ ಜನರ ನೋವು, ಸಾವು, Lockdown, ಆರ್ಥಿಕ ಪತನ, ಬಡಜನರ ಬದುಕಿನ ಬವಣೆ ಇದೆಲ್ಲ ಸಾಲುಸಾಲಾಗಿ ಮೆರವಣಿಗೆಯಾಗುತ್ತಿದೆ. ಇತಿಹಾಸದುದ್ದಕ್ಕೂ ಇಂಥ ಅನೇಕ ಸಂದರ್ಭಗಳು ಒದಗಿಬಂದಿದ್ದರೂ ಸರ್ವತ್ರವಾಗಿ ಇಡಿಯ ಭೂಮಿಯನ್ನು ಝಾಡಿಸಿದ, ಯಾವ ದೇಶವನ್ನೂ ಬಿಡದೇ ಅತಿ ತೀವ್ರವಾಗಿ ವ್ಯಾಪಿಸಿದ, ಬದುಕಿನ ಸ್ವಾತಂತ್ರ್ಯವನ್ನು ಕಸಿದ ಇಂಥ ಪರಿಸ್ಥಿತಿ ಬಹುಶಃ ಏಕಮೇವ ಇದ್ದಿರಬೇಕು.           ಈ ಸಂಕಟದ ಸಂದರ್ಭದಲ್ಲಿ ಮನುಷ್ಯನ ಅಂತಸ್ಸತ್ವ ಹೇಗೆ ಎದ್ದುನಿಂದು ಈ ಕಷ್ಟವನ್ನು ಎದುರಿಸಿದೆ, ಎದುರಿಸುತ್ತಿದೆ ಅನ್ನುವುದೂ ಕಾಣುತ್ತಿದೆ. ಕಣ್ಣಿಗೆ ಕಾಣದ ಸೂಕ್ಷ್ಮಜೀವಿ ಮನುಕುಲದ ಆರೋಗ್ಯಕ್ಕೆ ಮಾಡುತ್ತಿರುವ ಘಾಸಿಯನ್ನು ಎದುರಿಸುವುದರಲ್ಲಿ, ಅದರ ಪಾರ್ಶ್ವಪರಿಣಾಮಗಳನ್ನು ವಿಶ್ಲೇಷಿಸಿ ಹೊಸ ದಾರಿಗಳನ್ನು ಕಂಡುಹಿಡಿದು ಜಗದ ವ್ಯಾಪಾರವನ್ನು ಮುಂದೆ ಸಾಗಿಸುವಲ್ಲಿ ನರರು ತೋರುತ್ತಿರುವ ಧೈರ್ಯ, ಸಾಹಸ, ಜಾಣ್ಮೆ ಮೆಚ್ಚುವಂಥದ್ದು. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಜನಸಮುದಾಯ ಎಚ್ಚೆತ್ತಿದೆ. ತಾನು ಮಾಡುತ್ತಿದ್ದ ಕೆಲಸದ ಮಾರ್ಗಕ್ಕೆ ಅಡ್ಡಬಂದ ಕೂಡಲೇ ಹೊಸ ಮಾರ್ಗ ಹುಡುಕುವಲ್ಲಿ ಜನ ತೋರಿದ ಉತ್ಸಾಹ, ಮುನ್ನುಗ್ಗುವಿಕೆ, ಆರ್ಥಿಕ ಮುಗ್ಗಟ್ಟು, ಮಾರಣಾಂತಿಕ ರೋಗ ಎದುರಿಸಿದ ಬಗೆ ಅಪೂರ್ವವಾದದ್ದು.            ಆನಂದಿನಿ, ಈ ಕಾಲದಲ್ಲಿ ಜಗದುದ್ದಕ್ಕೂ ಶಿಕ್ಷಣ ಕ್ಷೇತ್ರ ಅನುಭವಿಸಿದ ದಿಗ್ಭ್ರಾಂತಿ ಅನತಿಕಾಲದಲ್ಲಿ ಅನ್ವೇಷಣ ಮಾರ್ಗ ಹಿಡಿದಿದ್ದನ್ನು ದಾಖಲಿಸುತ್ತಿದೆ. ವಾಸ್ತವ (virtual) ತರಗತಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿದ್ದದ್ದು ಪುಟ್ಟಮಕ್ಕಳ ಹಂತಕ್ಕೆ ಬಂದಿದೆ. ಶಾಲೆಯ ಕಲ್ಪನೆಯೂ ಬದಲಾಗಿ ಮನೆಮನೆಯಲ್ಲಿ ಶಾಲೆ ಎನ್ನುವ ವಿನೂತನ ಕಲ್ಪನೆಗೆ ಎಡೆಮಾಡಿಕೊಟ್ಟಿದೆ           ಈ ಸಂದರ್ಭದಲ್ಲಿ ನಮ್ಮ ಪೂರ್ಣಪ್ರಮತಿಯ ತಂಡ, ಶಿಕ್ಷಕವೃಂದ ಮೈಕೊಡವಿ ತನ್ನ ಸೀಮಿತ ತಾಂತ್ರಿಕ ಜ್ಞಾನವನ್ನು ಕೆಲವೇ ದಿನಗಳಲ್ಲಿ ವಿಸ್ತರಿಸಿಕೊಂಡಿತು. ದಿನನಿತ್ಯ ಹತ್ತಾರು ಸಭೆಗಳು, ವಿಚಾರ ವಿನಿಮಯ, ಸಂಶೋಧನೆ, ಹೊಸಪ್ರಯತ್ನ, ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡು ನೋಡ ನೋಡುತ್ತಿದ್ದಂತೆಯೇ, ಮಕ್ಕಳ ಕಲಿಕೆ ಸರಾಗವಾಗಿ ನಡೆಯುವಂತೆ ಹಿರಿಯ ಮಕ್ಕಳಿಗೆ, ಕಿರಿಯ ಮಕ್ಕಳಿಗೆ ಪೋಷಕರಿಗೆ ತರಗತಿ/ತರಬೇತಿ ಪ್ರಾರಂಭಿಸಿಯೇ ಬಿಟ್ಟಿತು. ರಜಾಕಾಲ  ಅಧ್ಯಾಪಕರ ಅತ್ಯಂತ ಬಿಡುವಿಲ್ಲದ ಚಟುವಟಿಕೆಗಳ ಕಾಲವಾಯಿತು. ಆದರೆ ಅದರ ದಣಿವಿನ ಬದಲು ಹೊಸ ಸಾಧನೆಯ ಸಂತೃಪ್ತಿ ಅವರದಾಯಿತು. ಅವರೆಲ್ಲರೂ ಅಭಿನಂದನೀಯರು!           ಈ ಬದಲಾವಣೆಯ ಬೆರಗು, ಬವಣೆಗಳನ್ನು ಆನಂದಿನಿ ನಿಮ್ಮ ಮುಂದಿಡುತ್ತಿದೆ. ಈ ಪ್ರಯೋಗ, ಪ್ರಯತ್ನಗಳು ಇನ್ನೂ ಹಲವು ತಿಂಗಳುಗಳು ಮುಂದುವರೆಯುವ ಸೂಚನೆ ಇದೆ. ಅವುಗಳ ಅನುಭವವನ್ನೂ ಕಾಲಕಾಲಕ್ಕೆ ನಿಮ್ಮ ಮುಂದಿಡುತ್ತೇವೆ. ಹಾಗೆಯೇ ಕಳೆದ ವರ್ಷ ನಡೆದ ಸಂವತ್ಸರ ಸೂತ್ರ (Annual theme) ದ ಮಕ್ಕಳ ಸಂಶೋಧನಾ ಕಲಿಕಾ ವರದಿ, ಶಿಕ್ಷಕ ಮಕ್ಕಳ ಅನುಭವಗಳು, ಪೂರ್ಣಪ್ರಮತಿ ಸಾಮಾಜಿಕ ಕಾರ್ಯದ ವೈಖರಿ, ಇತರ ಚಟುವಟಿಕೆಗಳ ಚಿತ್ರಗಳು ನಿಮ್ಮ ಕೈ ಸೇರಿದೆ. ಪ್ರೀತಿಯಿಂದ ಓದಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಹಂಚಿಕೊಳ್ಳಿ. ತಿಂಗಳ ತಿಳಿಗಾಳು (ಶಾಲೆಯ ವಿವಿಧ ವಿಭಾಗಗಳ ಮಾಸಿಕ ವರದಿ ವಿಭಾಗ) ಆನಂದಕಂದ – ಪೂರ್ವ ಪ್ರಾಥಮಿಕ ವಿಭಾಗ – ವಿದ್ಯಾ ಗುತ್ತಲ್ ( ಅಧ್ಯಾಪಕರು ಮತ್ತು ಪೂರ್ವಪ್ರಾಥಮಿಕ ವಿಭಾಗದ ಪ್ರತಿನಿಧಿ)           ಈ ಬಾರಿಯ ಶೈಕ್ಷಣಿಕ ವರ್ಷವು ನಮ್ಮ ಪುಟ್ಟ ಮಕ್ಕಳ ಪೋಷಕರೊಂದಿಗಿನ ಆನ್ಲೈನ್ ಚರ್ಚೆಯ ಮೂಲಕ ಪ್ರಾರಂಭವಾಯಿತು.  ಮೇ ತಿಂಗಳ ಕೊನೆಯ ವಾರದಲ್ಲಿ M3 ಮಕ್ಕಳಿಗೆ ಒಂದು ವಾರ, ಪಠ್ಯ ಪುನರಾವರ್ತನೆ ತರಗತಿಗಳನ್ನು ಆಯೋಜಿಸಲಾಗಿತ್ತು. ಮಕ್ಕಳೆಲ್ಲರೂ ಉತ್ಸಾಹದಿಂದ, ಸಕ್ರಿಯವಾಗಿ ತರಗತಿಯಲ್ಲಿ ಪಾಲ್ಗೊಂಡು ಎಲ್ಲ ನಿಗದಿತ ವಿಷಯಗಳನ್ನು ಅಧ್ಯಾಪಕರ ಸಹಾಯದಿಂದ ಪುನರಾವರ್ತನೆ ಮಾಡಿದರು. ಆನ್ಲೈನ್ ಘಟಿಕೋತ್ಸವದ ಮೂಲಕ ಅವರನ್ನು ಪ್ರಥಮ ಕಕ್ಷೆಗೆ ಬೀಳ್ಕೊಡಲಾಯಿತು.           ಮೇ 30 ಮತ್ತು 31 ನೇ ತಾರೀಖು ಪೋಷಕರಿಗೆ ಮಾರ್ಗಸೂಚಿ ಸಭೆಗಳನ್ನು ಏರ್ಪಾಡು ಮಾಡಲಾಗಿತ್ತು. ಎಲ್ಲರನ್ನು ಹರ್ಷದಿಂದ ಸ್ವಾಗತಿಸಿ ಈ ಬಾರಿಯ ಆನ್ಲೈನ್ ತರಗತಿಗಳ ಬಗ್ಗೆ ಮತ್ತು ಪಠ್ಯ ಯೋಜನೆಗಳ ಬಗ್ಗೆ, ಅದಕ್ಕೆ ಬೇಕಾಗಿರುವ ಪೂರ್ವತಯಾರಿಯ ಬಗ್ಗೆ ವಿವರಿಸಲಾಯಿತು.           ಜೂನ್ 1 ನೇ ತಾರೀಖಿನಿಂದ ನಾಲ್ಕು ದಿನ, ಪೋಷಕರಿಗೆ ವಿಶೇಷ ತರಬೇತಿಯನ್ನು ಆಯೋಜಿಸಲಾಗಿತ್ತು. ಉಮಾ ಅಕ್ಕ ಎಲ್ಲ ಪೋಷಕರಿಗೂ ಮಾಂಟೇಸರಿ ಶಿಕ್ಷಣ ಪದ್ಧತಿಯ ಬಗ್ಗೆ, ಮಗುವಿನ ಮನ:ಶಾಸ್ತ್ರದ ಬಗ್ಗೆ, ಮಗುವಿನ ಅವಶ್ಯಕತೆಗಳ ಬಗ್ಗೆ, ಮಕ್ಕಳ ಪೋಷಣೆಯ ಬಗ್ಗೆ, ಲಾಲನೆ ಪಾಲನೆಯ ಬಗ್ಗೆ, ಪೂರ್ಣಪ್ರಮತಿಯ ಇಂಟಿಗ್ರೇಟೆಡ್ ಲರ್ನಿಂಗ್ ಬಗ್ಗೆ ಮತ್ತು ಮಗುವನ್ನು ಸೂಕ್ಷ್ಮವಾಗಿ ಗಮನಿಸುವುದು ಹೇಗೆ ಎಂಬುದರ ಬಗ್ಗೆ ಪೋಷಕರಿಗೆ ತಿಳಿಸಿಕೊಟ್ಟರು.  ಎಲ್ಲ ಪೋಷಕರು ಬಹಳ ಉತ್ಸಾಹದಿಂದ ತರಗತಿಗಳಲ್ಲಿ ಪಾಲ್ಗೊಂಡರು. ಅನೇಕ ವಿಧದ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕಂಡುಕೊಂಡರು. ಕೆಲವು ಪೋಷಕರು ಈ ತರಗತಿಯ ರೆಕಾರ್ಡಿಂಗ್ ಅನ್ನು ಈಮೇಲ್ ಮೂಲಕ ಕಳಿಸಿಕೊಡಿ ಎಂದೂ ಕೇಳಿಕೊಂಡರು.           ಜೂನ್ ಎರಡನೆಯ ವಾರ ಎಲ್ಲಾ ಮಕ್ಕಳಿಗೂ ಮತ್ತು ಪೋಷಕರಿಗೂ ಆನ್ಲೈನ್ ಮೂಲಕ ಬಹಳ ಕಡಿಮೆ ಅವಧಿಗೆ ಸೀಮಿತವಾಗಿ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆವು. ಆ  ವಾರದಲ್ಲಾದ ವಿಶೇಷ ಅನುಭವಗಳನ್ನು ಮತ್ತು ಪೋಷಕರಿಂದ ಬಂದ ಸಲಹೆ-ಸೂಚನೆಗಳನ್ನು ಸಂಗ್ರಹಿಸಿ ಜೂನ್, ಮೂರನೆಯ ವಾರ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆವು. ಅದರ ಪ್ರಕಾರ ವಾರದಲ್ಲಿ ಎರಡು ದಿನ ವಿಷಯವಾರು ಶಿಕ್ಷಣ ಮತ್ತು ವಾರದಲ್ಲಿ ಮೂರು ದಿನ ಸಂಸ್ಕೃತ ತತ್ವದರ್ಶನ ಮತ್ತು ಪರಂಪರೆಯ ತರಬೇತಿ – ಇವೆಲ್ಲವೂ ಕೇವಲ ಪೋಷಕರಿಗಾಗಿ ಮಾಡುವುದು ಎಂದು ತೀರ್ಮಾನಿಸಿ ಅದಕ್ಕೆಂದೇ ವಿಶೇಷವಾದ ಪಠ್ಯ ಯೋಜನೆಗಳನ್ನು ಸಿದ್ಧಪಡಿಸಿಕೊಂಡೆವು.           ಇಲ್ಲಿ ಪುಟ್ಟಮಕ್ಕಳಿಗೆ ಆನ್ಲೈನ್ ತರಗತಿಗಳು ಮತ್ತು ಅವರಿಗೆ ಆಗಬಹುದಾದಂಥ ವಯೋಸಹಜ ತೊಂದರೆಗಳನ್ನು, ಮನಗಂಡು ಪೋಷಕರ ಮೂಲಕವೇ ಅವರಿಗೆ ವಿಷಯಗಳ ಕಲಿಕೆಯಾಗಬೇಕೆಂದು : ಪೋಷಕರಿಗೆ, ಅಧ್ಯಾಪಕರ ಜೊತೆ, ಮಾತುಕತೆಗಳ ಮೂಲಕ, ವಿಷಯಗಳ ಪ್ರಸ್ತುತಿಯ ಮೂಲಕ ಮಕ್ಕಳಿಗೆ ಯಾವ ವಿಷಯಗಳನ್ನು ಹೇಗೆ ಹೇಳಿಕೊಡಬೇಕು, ಯಾವ ಸಮಯದಲ್ಲಿ, ಎಷ್ಟು ಸಮಯದಲ್ಲಿ, ಎಂತಹ ಚಟುವಟಿಕೆಗಳನ್ನು ನೀಡಬಹುದು, ಎನ್ನುವ ವಿಚಾರಗಳನ್ನು ದಿನದಲ್ಲಿ ಅರ್ಧಗಂಟೆ ಚರ್ಚಿಸಿ, ತರಬೇತಿಯನ್ನು ನೀಡಲಾಗುತ್ತಿದೆ. ಇನ್ನು ಮುಂದೆಯೂ ಇದಕ್ಕೆ ಒಂದು ವಿಶೇಷ ರೂಪುರೇಷೆಯನ್ನು ನಮ್ಮ ಶಾಲೆಯ ತತ್ವದ ದೃಷ್ಟಿಯಿಂದ ನೀಡಲಾಗುತ್ತಿದೆ.           ಈ ಪುಟಾಣಿ ಮಕ್ಕಳಿಗೆ ಶಿಕ್ಷಣಕ್ಕೂ ಮೊದಲು, ಅದಕ್ಕೆ ಭದ್ರ ಬುನಾದಿಯಾಗುವಂಥ ಪೂರಕ ವಾತಾವರಣವನ್ನು ನೀಡಬೇಕು. ಉತ್ತಮ ಸಂಸ್ಕೃತಿ, ಸಂಸ್ಕಾರ, ಆಚರಣೆ, ನಡೆನುಡಿಗಳು, ಹುಟ್ಟಿನಿಂದ ಮಗುವಿಗೆ ನೋಡಲು, ಅನುಭವಿಸಲು ಅವಕಾಶವಾಗುವಂತಹ ಪರಿಸರ ಮನೆಮನೆಯಲ್ಲೂ ನಿರ್ಮಾಣವಾಗಬೇಕು. ಅದರಲ್ಲಿ ನಮ್ಮ ಆಧುನಿಕ ವಿಷಯವಾರು ಶಿಕ್ಷಣವು  ಒಂದು ಸಣ್ಣ ಭಾಗ ಅಷ್ಟೇ. ಮನೆಮನೆಯಲ್ಲೂ ಈ ರೀತಿಯಾದ ಪೂರಕ ವಾತಾವರಣವು ಈ ಸಮಯದಲ್ಲಿ ಸೃಷ್ಟಿಯಾಗಬೇಕು. ತಂದೆ ತಾಯಿಯರ ಮೂಲಕವೇ ಮಕ್ಕಳಿಗೆ ಕಲಿಕೆಯ ನಿಜವಾದ ಆನಂದವು ದೊರೆಯುವಂತಾಗಬೇಕು. ಅದನ್ನು ತಿಳಿಸಿಕೊಡುವುದೇ ನಮ್ಮ ಮುಖ್ಯ ಉದ್ದೇಶ. ಹಾಗಾಗಿ ನಮ್ಮ, ಈ ಪೋಷಕರ ತರಬೇತಿಯಲ್ಲಿ ತಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ನಿಮ್ಮ ಮಕ್ಕಳ ಕಲಿಕೆಯನ್ನು ಸುಂದರವಾಗಿಸಿ, ಪ್ರೋತ್ಸಾಹಿಸಿ, ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ. ವಾಮನ – ಪ್ರಾಥಮಿಕ ವಿಭಾಗ < – – ಮುರಳಿಧರ ಕಟ್ಟಿ (ಅಧ್ಯಾಪಕರು ಮತ್ತು ಪ್ರಾಥಮಿಕ ವಿಭಾಗದ ಪ್ರತಿನಿಧಿ) ನಮಸ್ಕಾರ,           ಶಾರ್ವರೀ ಸಂವತ್ಸರದ ಅಧ್ಯಯನ ಅಧ್ಯಾಪನದ ಈ ವರ್ಷಕ್ಕೆ ಸ್ವಾಗತ.ಶಾಲೆಯ ಪತ್ರಿಕೆಯಾದ  ಅನಂದಿನೀ ಓದುಗ ಬಳಗಕ್ಕೂ ಹೃತ್ಪೂರ್ವಕ ಸ್ವಾಗತ.  ಪೂರ್ಣಪ್ರಮತಿ ಶಾಲೆಯು ಮಕ್ಕಳ ಅಧ್ಯಯನ ಕೇಂದ್ರ. ಅಲ್ಲಿ ಪ್ರತೀ ವಿಭಾಗಕ್ಕೂ ಒಂದು ಒಂದು ಹೆಸರುಗಳನ್ನು ಸೂಚಿಸಲಾಗಿದೆ. ಆನಂದಕಂದ (ಪೂರ್ವಪ್ರಾಥಮಿಕ ವಿಭಾಗ)  ಅರ್ಜುನ ಗಣ (ಮಾಧ್ಯಮಿಕ ವಿಭಾಗ) ವಾಮನ ಗಣ (ಪ್ರಾಥಮಿಕ ವಿಭಾಗ) ಭೀಮಸೇನ (ಪ್ರೌಢ ವಿಭಾಗ)  ಹೀಗೆ ೧ ರಿಂದ ೩ ತರಗತಿಯ ವರೆಗೆ ಇರುವ ಮಕ್ಕಳ ವಿಭಾಗವನ್ನು ಶಾಲೆ ವಾಮನ ಗಣ ಎಂದು ಕರೆದಿದೆ. ಏಕೆಂದರೆ ಮಕ್ಕಳು ಹಿಂದಿನ ಕಾಲದಲ್ಲಿ ಗುರುಕುಲಕ್ಕೆ ಹೋಗುವ ವಯಸ್ಸಿದು. ಹಾಗಾಗಿ ಇದನ್ನು ವಾಮನಗಣ = ಬ್ರಹ್ಮಚರ್ಯಾವಸ್ಥೆ ಪ್ರಾರಂಭದ ಸಮಯ ಎನ್ನುವ ಭಾವದಲ್ಲಿ  ವಾಮನ ವಿಭಾಗ ಎಂದು ಕರೆಯಲಾಗುತ್ತಿದೆ. ಗುರುಶಿಷ್ಯರ ಉಪಸತ್ತಿಯು ಜ್ಞಾನಕ್ಕೆ ಕಾರಣ.  ಆ ಗುರುಶಿಷ್ಯರ ಸಂಬಂಧ ಎಂತಹದ್ದೇ ಪರಿಸ್ಥಿತಿಯಲ್ಲೂ ಮುಂದವರೆದುಕೊಂಡು ಹೋಗಬೇಕು ಗಂಗೆಯ ಹಾಗೇ,  ಅವಿಚ್ಛಿನ್ನವಾಗಿ ಸಾಗಬೇಕು ಎನ್ನುವ ದೃಷ್ಟಿಯಿಂದ ಈ ಸಂದರ್ಭದಲ್ಲಿ  ಸೃಷ್ಟಿಯಾದದ್ದೇ  ಆನ್ ಲೈನ್ ತರಗತಿಗಳು.           ಈ ಆನ್ ಲೈನ್ ತರಗತಿಗಳು ಪ್ರಾರಂಭ ಆಗವುದು ಅಷ್ಟು ಸುಲಭದ ಮಾತಾಗಿರಲಿಲ್ಲ ಅದಕ್ಕಾಗಿ ನಮ್ಮ ಅಧ್ಯಾಪಕರ ತಂಡ ಮತ್ತು ತಂತ್ರಜ್ಞರ ತಂಡ ಮಾರ್ಚ, ಏಪ್ರಿಲ್, ಮೇ ತಿಂಗಳಿನಿಂದಲೇ ಪ್ರರಿಶ್ರಮಪಡಲು ಪ್ರಾರಂಭಿಸಿತು.ನಮ್ಮ ಅಧ್ಯಾಪಕ ತಂಡ ಈ ಆನ್ ಲೈನ್  ಶಿಕ್ಷಣವನ್ನು ಕರಗತ ಮಾಡಿಕೊಳ್ಳಲು  ಮೇ ಪ್ರಾರಂಭಿಸಿದರು.  ಎಲ್ಲಾ ಅಧ್ಯಾಪಕರು ಏಕಮನಸ್ಕರಾಗಿ ಮಕ್ಕಳಿಗೆ ಯಾವ ರೀತಿ ಮಾಡದರೆ ಒಳಿತು ಎಂದು ಚಿಂತಿಸುತ್ತಾ,  ಪ್ರತೀ ತರಗತಿಗೆ ಯಾವ ರೀತಿ ನಮ್ಮ ತಯಾರಿ ಇರಬೇಕು ಎನ್ನುವದಿಲ್ಲಾ ಚಿಂತಿಸುತ್ತಾ ಈ ಆನ್ ಲೈನ್  ತರಗತಿಯನ್ನು ಆರಂಭಿಸಿದರು.  ತರಗತಿಯಲ್ಲಿ ಮಕ್ಕಳನ್ನು ಹೆಚ್ಚು ಹೊತ್ತು ಸ್ಕ್ರೀನ್ ಮುಂದೆ ಕೂಡಿಸದ ಹಾಗೇ ಮಕ್ಕಳಿಗೆ ಕೆಲಸಕೊಡಲು ನಿರ್ಧಾರಮಾಡಿಕೊಂಡು ಈ  ತರಗತಿಗಳನ್ನು ವಾಮನವಿಭಾಗವು ಆರಂಭಿಸಿತು.            ಈ ರೀತಿ ಶಾಲೆ ನಮ್ಮ ಮಕ್ಕಳಿಗೂ ಬೇಕು ಎಂದು ಹಲವು ಪೋಷಕರು ಬಂದಿದ್ದಾರೆ ಹಾಗಾಗಿ ಕೊಂಚ ಮಟ್ಟಿಗೆ  ಮಕ್ಕಳ ಸಂಖ್ಯೆಯೂ ಜಾಸ್ತಿ ಆಗಿರುವ ಕಾರಣ ಈ ಬಾರಿ ಹೊಸ ಪರಿಸರ ಒಂದು ಪ್ರಾರಂಭವಾಯಿತು.ಒಟ್ಟಾರೆಯಾಗಿ ವಾಮನ ವಿಭಾಗದಲ್ಲಿ ೬ ಪರಿಸರಗಳು ಇವೆ. ಆರುಣೀ ಧೃವ ನಚಿಕೇತ ಪ್ರಹ್ಲಾದ ಮಾರ್ಕಂಡೇಯ ಉಪಮನ್ಯು ಎಂದು ಪ್ರತೀ ಪರಿಸರವೂ ಸಂಸ್ಕೃತ ಹಾಗೂ ಆಧುನಿಕ ವಿಷಯಗಳ ಅಧ್ಯಾಪಕರನ್ನು ಹೊಂದಿದೆ.  ಹೀಗೆ ಎಲ್ಲಾ ಪರಿಸರಗಳು ಜೂನ್ ಮಾಸದಲ್ಲಿ ಪುನರಾವರ್ತನೆಗೆ ಹೆಚ್ಚು ಮಹತ್ವವನ್ನು ಕೊಟ್ಟು ಮಾಸಾಂತ್ಯದಲ್ಲಿ ಮೊದಲ ಕಥೆಯಾದ  “ಸೃಷ್ಠಿಪ್ರಕ್ರಿಯೆ”  ಬಗ್ಗೆ ತಿಳಿಸಿಕೊಟ್ಟು ನಂತರದ ದಿನಗಳಲ್ಲಿ ಮುಂದಿನ ವಿಷಯಗಳನ್ನು ತಿಳಿಸಿಕೊಡಲು ಸನ್ನದ್ಧರಾಗಿದ್ದೇವೆ. ಜುಲೈ ಮಾಸಕ್ಕೆ ಸ್ವಾಗತ ಬಯಸುತ್ತೇನೆ. ಧನ್ಯವಾದಗಳು Arjuna – Upper Elementary  – Geetha. S (Teacher and Vibhaga pratinidhi of Upper elementary) First few weeks experience of ‘learning to teach’ from home                   Arjuna (Upper elementary) stepped into the academic year 2020-21 on May 25th. With the view of getting children and parents acquainted to this new mode of online learning, we

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.