Recent Events of Purnaramati

Kanakadaasa Jayanti - 2013

Kanakadaasa Jayanti – 2013

Saturday, January 11th, 2014

ಕನಕದಾಸ ಜಯಂತಿ ದಿನಾಂಕ: ೨೦/೧೧/೨೦೧೩ ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆ, ಬೆಂಗಳೂರು ಸಂತಕವಿಯೊಬ್ಬರ ಜನ್ಮದಿನವನ್ನು ಸ್ಮರಿಸುವುದರ ಮೂಲಕ ಮಕ್ಕಳಲ್ಲಿ ಸಮಾಜದ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲು ದಿನಾಂಕ ೨೦/೧೧/೨೦೧೩ ರಂದು (ಕಾರ್ತಿಕಮಾಸ,ಕೃಷ್ಣಪಕ್ಷ, ತೃತೀಯ) ಕನಕದಾಸ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಲಾಯಿತು. ಕನಕದಾಸರ ಕೃತಿಗಳು, ಹಾಡುಗಳು ಪರಿಚಯವಿದ್ದರೂ, ಅವರ ಜೀವನವನ್ನೂ, ಸಮಾಜಮುಖಿ ಕಾರ್ಯವನ್ನೂ ಪರಿಚಯಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗಿತ್ತು. ಅಂದು ಬೆಳಗ್ಗೆ à³®.೪೫ಕ್ಕೆ ಕಾರ್ಯಕ್ರಮವು ಕನಕದಾಸರದ್ದೇ ಕೀರ್ತನೆಯೊಂದಿಗೆ ಪ್ರಾರಂಭವಾಯಿತು. ಅತಿಥಿಗಳಾಗಿ ಲಕ್ವಳ್ಳಿ ಮಂಜುನಾಥ್ ಅವರು ಆಗಮಿಸಿದ್ದರು. ಇವರು ವೃತ್ತಿಯಿಂದ ವಕೀಲರು ಮತ್ತು ಕನಕ ಅಧ್ಯಯನ ಪೀಠದ ಸದಸ್ಯರೂ ಆಗಿದ್ದಾರೆ. ಇವರೊಂದಿಗೆ ನಮ್ಮವರೇ ಆದ ಸತ್ಯನಾರಾಯಣಾಚಾರ್ಯರು ಆಗಮಿಸಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮವು ಆರಂಭಿಸಿದೆವು. ಈ ದಿನದ ವಿಶೇಷವೆಂದರೆ ಕನಕದಾಸರ ಹಲವು ಕೀರ್ತನೆಗಳನ್ನು ಅಭ್ಯಾಸ ಮಾಡಿ ಮಕ್ಕಳೆಲ್ಲರೂ ಅತಿಥಿಗಳ ಮುಂದೆ ಪ್ರಸ್ತುತ ಪಡಿಸಿದ್ದು. ಕನಕದಾಸರು ದೇವರನ್ನು ಕುರಿತು ಪದ್ಯಗಳನ್ನು ರಚಿಸಿ ಹಾಡು-ನೃತ್ಯಗಳ ಮೂಲಕ ಸಮಾಜದ ಜನರನ್ನು ಎಚ್ಚರಿಸದಂತೆ ನಮ್ಮ ಮಕ್ಕಳೂ ಅವರ ಹಾಡುಗಳನ್ನು ಹಾಡಿ, ನೃತ್ಯವನ್ನು ಮಾಡಿ ತಾವೂ ಜಾಗೃತಾಗಿರುವುದಾಗಿ ಸೂಚಸಿದರು. ದಶವತಾರಗಳನ್ನು ಸರಳ ಭಾಷೆಯಲ್ಲಿ ಹೇಳಿರುವ ದೇವಿ ನಮ್ಮ ದ್ಯಾವರು ಬಂದವ್ರೆ ಎಂಬ ಹಾಡನ್ನು ಮಕ್ಕಳು ಚೆನ್ನಾಗಿ ಅಭಿನಯಿಸಿ ತೋರಿಸಿದರು. ಕನಕದಾಸರ ಹುಟ್ಟೂರು, ಜೀವನವನ್ನು ಪರಿಚಯಿಸಲಾಯಿತು. ಪುಟ್ಟ ಮಕ್ಕಳು ರಾಮಾಯಣದ ಸನ್ನಿವೇಶವನ್ನು ಮಾಡಿ ತೋರಿಸಿದರು. ಮಂಜುನಾಥ್ ಅವರು ಮಾತನಾಡುತ್ತಾ: ಕನಕಜಯಂತಿಯನ್ನು ಭಕ್ತಿಯ ದಿನವೆಂದು ಆಚರಿಸುತ್ತೇವೆ. ಬೇರೆ ಬೇರೆ ಕಡೆ ಕನಕದಾಸ ಜಯಂತಿಯ ಆಚರಿಸುತ್ತಾರೆ. ಆದರೆ ಪೂರ್ಣಪ್ರಮತಿಯಲ್ಲಿ ಕನಕದಾಸ ಜಯಂತಿ ಆಚರಿಸುತ್ತಾರೆ ಎಂದು ಕೇಳಿ ಆಶ್ಚರ್ಯವಾಯಿತು. ಅದಕ್ಕೆ ಬೆಳಗಿನಿಂದ ನಿಮ್ಮೊಂದಿಗೆ ಇರಲು ಬಂದೆ. ನೀವೆಲ್ಲ ಹಾಡನ್ನು ಹೇಳಿದಿರಿ, ನರ್ತನ ಮಾಡಿದಿರಿ. ಕನಕದಾಸರು ಸಾಮಾನ್ಯ ಕುಟುಂಬದಲ್ಲಿ ಬಂದವರು. ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳುವುದೇ ಎಲ್ಲರ ಉದ್ದೇಶ. ಇದನ್ನು ಸರಳ ಹಾಡುಗಳಲ್ಲಿ ಎಲ್ಲರಿಗೂ ತಿಳಿಸಿದ್ದು ಕನಕದಾಸರು. ಅವರು ದೈಹಿಕವಾಗಿ ಮರಣಹೊಂದಿ ಬಹಳ ದಿನಗಳಾಗಿದ್ದರೂ ಆದಿಕೇಶವನನ್ನು ಒಲಿಸಿಕೊಳ್ಳಲು ಅವರು ನಡೆದಿರುವ ಹಾದಿ ನಮಗೂ ಅವಶ್ಯಕ ಎಂಬ ಕಾರಣಕ್ಕೆ ಅವನ್ನು ಸ್ಮರಿಸಿಕೊಳ್ಳುತ್ತೇವೆ. ನಿಮ್ಮೊಂದಿಗೆ ವಿದ್ಯಾರ್ಥಿಯಾಗಿ ನಾನು ಕಲಿತೆ. ‘ಭಕ್ತಿಯಿಂದ ಪೂಜೆ ಮಾಡುವುದು, ತಪ್ಪಿನ ಹಾದಿಯಿಂದ ರಕ್ಷಿಸು ಎಂದು ದೇವರನ್ನು ಬೇಡುವುದು’ ನಮ್ಮ ದಾರಿಯಾಗಬೇಕು. ತಪ್ಪು ಮಾಡಿದಾಗ ನಿಮ್ಮ ಶಿಕ್ಷಕರು ತಿದ್ದುವಂತೆ ಕನಕದಾಸರು ದೇವರು ತನ್ನನ್ನು ತಿದ್ದಬೇಕೆಂದು ಹಾಡಿನ ಮೂಲಕ ಕೇಳುತ್ತಾರೆ. ಧ್ಯಾನ ಮಾಡುವ ಬುದ್ಧಿಯನ್ನು ಕೊಡೆಂದು ಬೇಡಿಕೊಳ್ಳುತ್ತಾರೆ. ಆ ಭಕ್ತಿಯ ಮಾರ್ಗವನ್ನು ತಿಳಿಯಲು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕನಕದಾಸರ ಹಾಡುಗಳನ್ನು ನಾವು ಕಲಿಯಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ನೀವು ಈ ಪ್ರಯತ್ನ ಮಾಡುತ್ತಾ ಇಂದು ಕನಕದಾಸ ಜಯಂತಿಯನ್ನು ಆಚರಿಸುತ್ತಿದ್ದೀರಿ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ. ಪುಸ್ತಕದಲ್ಲಿರುವುದಷ್ಟೇ ಅಲ್ಲದೆ ಬೇರೆ ಅನೇಕ ವಿಚಾರಗಳನ್ನು ನಿಮ್ಮ ಶಾಲೆಯಲ್ಲಿ ಕಲಿಸುತ್ತಿದ್ದಾರೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎಂಬ ಕಿವಿಮಾತನ್ನು ಮಕ್ಕಳಿಗೆ ಹೇಳಿದರು. ನಂತರ ಸತ್ಯನಾರಾಯಣಾಚಾರ್ಯರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕನಕ ದಾಸರ ಕೀರ್ತನೆಯೊಂದರ ಸಾಲನ್ನು ಸರಳವಾಗಿ ಮಕ್ಕಳಿಗೆ ಅರ್ಥಮಾಡಿಸಿದರು. ಇವರ ಮಾತಿನ ಸಾರಾಂಶ ಹೀಗಿದೆ: ಸತ್ಯವನ್ನು ಹೇಳಲು ಧೈರ್ಯ ಬೇಕು. ಜಯಂತಿ ಎಂದರೆ ಹುಟ್ಟಿದ ಹಬ್ಬ. ನೀವೆಲ್ಲ ನಿಮ್ಮ ಹುಟ್ಟಿದ ಹಬ್ಬವನ್ನು ಆಚರಿಸಲು ದೀಪವನ್ನು ಹಚ್ಚುತ್ತೀರಿ. ನಮ್ಮ ನಡುವೆ ಇಲ್ಲದ ಹಿರಿಯರ ಹುಟ್ಟಿದ ಹಬ್ಬಕ್ಕಾಗಿ ಶ್ರಾದ್ಧ ಮಾಡುತ್ತೇವೆ. ಜಯಂತಿ ಎಂದರೆ ಇನ್ನೂ ಬದುಕುರುವವರಿಗೆ ಮಾಡುವುದು. ಅಂದರೆ ನಾವು ಇಂದು ಕನಕಜಯಂತಿ ಮಾಡುತ್ತಿದ್ದೇವೆ. ಕನಕದಾಸರು ಹಾಡುಗಳ ಮೂಲಕ ಭಕ್ತಿಯ ಮೂಲಕ ನಮ್ಮೊಳಗೆ ಇದ್ದಾರೆ. ಶರೀರದಿಂದ ಅಲ್ಲದೆ ತತ್ವವಾಗಿ ನಮ್ಮೊಳಗೆ ಇದ್ದಾರೆ. ಒಂದು ಕಾಲದಲ್ಲಿ ಭಕ್ತಿ ಎಂದರೆ ಇಷ್ಟುದ್ದ ಗಡ್ಡ ಬಿಟ್ಟು, ಕಾಡಿನಲ್ಲಿ ತಪಸ್ಸು ಮಾಡುವ, ಕಚ್ಚೆ ಹಾಕಿದವರಿಗೆ ಮಾತ್ರ ಮೀಸಲು ಎಂಬ ಅಭಿಪ್ರಾಯವಿತ್ತು. ಉಳಿದವರು ಕೆಲಸದಲ್ಲಿ ಮಾತ್ರ ಇರಬೇಕು ಎಂಬ ಭಾವನೆ ಇತ್ತು. ಆದರೆ ಕನಕ ದಾಸರು ಬಂದು ‘ಭಕ್ತಿ ಎಂಬುದು ಯಾವುದೋ ಒಂದು ಗುಂಪಿನದಲ್ಲ. ಭಕ್ತಿ ಎಂಬುದು ಎಲ್ಲರ ಸ್ವತ್ತು’ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ‘ನಾವು ಗಾಯತ್ರಿ ಜಪ ಮಾಡುತ್ತೇವೆ, ಯಜ್ಞೋಪವೀತ ಹಾಕಿದ್ದೇವೆ, ನಾವು ಮಾತ್ರ ಭಕ್ತಿ ಮಾಡಬೇಕು’ ಎಂದು ನಿಮ್ಮ ಮನಸ್ಸಿಲ್ಲಿದ್ದರೆ ತೆಗೆದುಹಾಕಿ. ಅದಕ್ಕೇ ಕನಕದಾಸ ಜಯಂತಿ ಮಾಡುವುದು. ಪ್ರತಿಯೊಬ್ಬರು ದೇವಸ್ಥಾನದಲ್ಲಿ ಕೂತು ಪೂಜೆ ಮಾಡುವುದಾದರೆ ಕೃಷಿ ಮಾಡುವವರಾರು? ನಾವು ತಿನ್ನುವುದು ಏನನ್ನು? ಲೋಕದಲ್ಲಿ ಎಲ್ಲ ತರಹದ ಜನ ಇದ್ದರೆ ಮಾತ್ರ ಸಮಾಜ ಸರಿಯಾಗಿ ನಡೆಯುವುದು. ಪೂಜೆ, ಅನುಷ್ಠಾನ ಮಾಡುವಾಗ ಶುದ್ಧವಾಗಿರಬೇಕು. ಬಿ.ಟಿ.ಎಸ್ ಬಸ್‌ನಲ್ಲಿ ಹೋಗುವಾಗ ಎಲ್ಲರೊಂದಿಗೆ ನಾವು ಒಂದಾಗಿ ಇರಬೇಕು. ಮಡಿ ಮೈಲಿಗೆ ಮನೆಯ ಪೂಜೆಯ ಸಂದರ್ಭದಲ್ಲಿ ಮಾತ್ರ ಎಂಬುದನ್ನು ಗಮನಿಸಿ ನಾವು ಅಂತಃಕರಣದಿಂದ ಒಪ್ಪಿಕೊಳ್ಳುವ ವಿಷಯ ಏನೆಂದರೆ, ಸಮಾಜದಲ್ಲಿ ಯಾವುದೇ ಕಾರಣದಿಂದ ಜಾತಿಭೇದ, ಮತಭೇದ ಅನ್ನುವ ಕೀಳು ಭಾವನೆಗಳನ್ನು ಉಳಿಸಿಕೊಳ್ಳುವುದಿಲ್ಲ. ಆ ರೀತಿ ತಪ್ಪು ಮಾಡುವ ವ್ಯಕ್ತಿಗಳನ್ನು ದೂಷಿಸುತ್ತೇವೆ. ಜಾತಿಮತ ಭೇದವನ್ನು ಕಿತ್ತೊಗೆಯಬೇಕು ಎಂಬ ದೀಕ್ಷೆಯನ್ನು ಹೊಂದಿದ್ದೇವೆ ಎಂದು ಪ್ರತಿಜ್ಞೆ ಮಾಡಿದರೆ ಕನಕದಾಸರು ನಗುತ್ತಿರುತ್ತಾರೆ. ಹಸುವಿನ ಮಾಂಸದೊಳು ಉತ್ಪತ್ತಿ ಕ್ಷೀರವು, ವಸುಧೆಯೊಳು ಭೂ ಸುರರು ಉಣಲಿಲ್ಲವೇ? ಹಸುವಿನ ಮಾಂಸದಿಂದ ಹಾಲು ಉತ್ಪತ್ತಿಯಾದರೂ ಭೂಸುರರೆಂದು ಕರೆಯಲ್ಪಡುವ ಬ್ರಾಹ್ಮಣರು ಕುಡಿದರಲ್ಲ?! ಎಂದು ಕನಕದಾಸರು ಪದ್ಯದ ಮೂಲಕ ಕೇಳುತ್ತಾರೆ. ಹಿಂದೆ ಕೆಲವು ಬ್ರಾಹ್ಮಣರು ಮಾಂಸ ತಿನ್ನುವವರು ಎಂದು ದೂರ’ ಎಂದು ಭೇದವನ್ನು ತೋರಿಸುತ್ತಿದ್ದರು. ದೇವತಾನುಷ್ಠಾನ ಮಾಡುವವರು ತಿನ್ನಬಾರದು ಎಂದು ಹೇಳಿದ್ದಾರೆ. ಯಾರೂ ತಿನ್ನಬಾರದು ಎಂದಲ್ಲ. ಅದನ್ನು ಒತ್ತಿ ಹೇಳಿದ್ದು ಕನಕದಾಸರು. ಕೈಗಳಲ್ಲಿ ೩೬, ಕಾಲುಗಳಲ್ಲಿ ೨೬, ಭುಜಗಳಲ್ಲಿ ೪, ಸೊಂಟದಲ್ಲಿ ೨ ಹೀಗೆ ೬೮ ಕೀಲುಗಳ ದೇಹಕ್ಕೆ ನಾವು ಅತಿಥಿಗಳು ಮಾತ್ರ ಎಂದು ಕನಕದಾಸರ ಒಂದು ಪದ್ಯವನ್ನು ವಿವರಿಸಿದರು. ಈ ಕನಕದಾಸ ಜಯಂತಿಯ ಆಚರಣೆಯು ಸಮಾಜಪರವಾದ ಮಕ್ಕಳನ್ನು ಕೊಡಲಿ ಎಂದು ಹಾರೈಸುತ್ತಾ ವಿರಮಿಸಿದರು. ಅತಿಥಿಗಳಿಗೆ ಧನ್ಯವಾದಗಳನ್ನು ಹೇಳಿ ಕಾರ್ಯಕ್ರಮಕ್ಕೆ ತೆರೆಯನ್ನು ಹಾಕಲಾಯಿತು. ಸಭೆಯಲ್ಲಿ ಹಾಡಿದ ದೇವಿ ನಮ್ಮ ದ್ಯಾವರು ಬಂದವ್ರೆ, ಕುರುಬರು ನಾವು, ಈಶ ನಿನ್ನ ಚರಣ ಭಜನೆ ಮುಂದಾದ ಹಾಡುಗಳು ಕಿವಿಯಲ್ಲಿ ಗುಯ್ ಗುಡುತ್ತಿದ್ದವು. ಕನಕದಾಸರು ನಮ್ಮ ಭಕ್ತಿಯ ತರಂಗಗಳಲ್ಲಿ ಜೀವಂತವಲ್ಲವೆ?! For more photos Click Here

Valmiki Jayanti - 2013

Valmiki Jayanti – 2013

Saturday, January 11th, 2014

ವಾಲ್ಮೀಕಿ ಜಯಂತಿ ದಿನಾಂಕ: ೧೮ನೇ ಅಕ್ಟೋಬರ್, ೨೦೧೩ ಸ್ಥಳ: ಪೂರ್ಣಪ್ರಮತಿ ಶಾಲೆ, ಗಿರಿನಗರ ಅಕ್ಟೋಬರ್ ೧೮ ರಂದು ವಾಲ್ಮೀಕಿ ಜಯಂತಿಯನ್ನು ನಮ್ಮ ಶಾಲೆಯಲ್ಲಿ ಆಚರಿಸಿದೆವು. ಸೃಜನಾತ್ಮಕ ಕಲಿಕೆಯ ತರಗತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಸುನೀತಾ ಫಡ್ನೀಸ್ ನಮ್ಮ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮಕ್ಕಳೇ ಸಂಪೂರ್ಣ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಟ್ಟರು. ಬಂದ ಅತಿಥಿಗಳಿಗೆ ಸ್ವಾಗತ ಕೋರಿ ನಂತರ ವಾಲ್ಮೀಕಿ ಜಯಂತಿಯ ಮಹತ್ವವನ್ನು ತಿಳಿಯಲು ತೊಡಗಿದೆವು. ನಮ್ಮ ಶಾಲೆಯ ಅಧ್ಯಾಪಕರಾದ ಬದರಿ ನಾರಾಯಣ ಕಟ್ಟಿ ಅವರು ಮಕ್ಕಳಿಗೆ ಸರಳವಾದ ಉಪಮೆಯಿಂದ ವಿವರಿಸಿದರು: ಎರಡು ಹಕ್ಕಿಗಳಿವೆ. ಒಂದು T ಮತ್ತೊಂದು T. ಒಂದು ತತ್ವದರ್ಶನ ಎಂಬ ಹೆಸರಿನ ಹಕ್ಕಿ. ಮತ್ತೊಂದು ಟಿ.ವಿ. ಎಂಬ ಹೆಸರಿನ ಹಕ್ಕಿ. ರಾಮ ಸೀತೆಯರು ಒಟ್ಟಿಗೆ ಇರಬೇಕು ಆದರೆ ಬೇಡನೊಬ್ಬ ರಾವಣನ ರೂಪದಲ್ಲಿ ಬಂದು ಬಾಣ ಬಿಟ್ಟ. ಆ ಬಾಣವೇ ಟಿ.ವಿ.ಯ ರಿಮೋಟ್. ರಿಮೋಟ್‌ನ ಗುಂಡಿಯನ್ನು ಒತ್ತಿದರೆ ಟಿ.ವಿ. ಪ್ರಾರಂಭವಾಗುತ್ತದೆ. ಆಗ ತತ್ವದರ್ಶದ ಕಡೆ ಗಮನವಿಲ್ಲದಾಗುತ್ತದೆ. ಹಾಗಾಗಿ ರಾವಣನನ್ನು ಬರಗೊಡದೆ ತತ್ವದರ್ಶನದೆಡೆ ಗಮನ ಹರಿಸೋಣ ಎಂಬ ಸಂದೇಶವನ್ನು ವಾಲ್ಮೀಕಿ ಜಯಂತಿಯಂದು ನೆನಪಿಡಬೇಕೆಂದು ಹೇಳಿದರು. ಎಂದಿನಂತೆ ಗಂಗೆಗೆ ಪ್ರಾರ್ಥನೆಯನ್ನು ಸಲ್ಲಿಸಿ ನಮ್ಮನ್ನು ಸುಭಿಕ್ಷವಾಗಿಡುವಂತೆ ಬೇಡಿಕೊಂಡೆವು. ನಂತರ ಮಕ್ಕಳು ಕಲಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ಅಂತೆಯೇ ಅಧ್ಯಾಪಕರು ಮಕ್ಕಳ ಮುಂದಿನ ಬೆಳವಣಿಗೆಗಾಗಿ ತಾವು ರೂಪಿಸಿಕೊಂಡಿರುವ ವಿವಿಧ ಯೋಜನೆಗಳನ್ನು ಅತಿಥಿಗಳಿಗೂ ಮಕ್ಕಳಿಗೂ ವಿವರಿಸಿದರು. ಇದೊಂದು ಅವಲೋಕನ ಕಾರ್ಯಕ್ರಮವೇ ಆಗಿತ್ತು. ಅತಿಥಿಗಳಾಗಿ ಬಂದಿದ್ದ ಡಾ. ಸುನೀತಾರವರು ತಮ್ಮ ಚುರುಕು ಮಾತುಗಳಿಂದ ಮಕ್ಕಳೊಡನೆ ಸಂಭಾಷಣೆ ನಡೆಸಿದರು. ತನ್ಮೂಲಕ ಹಲವು ಮಹತ್ವದ ಸಲಹೆಗಳನ್ನು ನೀಡಿದರು: ಡಾ.ಸುನೀತ:     à²ªà³à²°à²¤à²¿à²¬à²¿à²‚ಬ ಯಾವಾಗ ಕಾಣಿಸುತ್ತದೆ? ಮಕ್ಕಳು:     à²¸à³à²Ÿà³€à²²à³, ಸಿಲ್ವರ್, ಕಣ್ಣಿನಲ್ಲಿ, ನೀರಿನಲ್ಲಿ, ಕನ್ನಡಿಯಲ್ಲಿ ಕಾಣುತ್ತದೆ. ಡಾ.ಸುನೀತ:     à²…ದನ್ನು ಪ್ರತಿಬಿಂಬ ಎಂದು ಏಕೆ ಕರೆಯುತ್ತೇವೆ? ಮಕ್ಕಳು:     à²¨à²¾à²µà³ ಹೇಗಿರುತ್ತೇವೋ ಹಾಗೇ ಕಾಣುತ್ತದೆ, ಅದಕ್ಕೆ ಅದನ್ನು ಪ್ರತಿಬಿಂಬ ಎನ್ನುತ್ತೇವೆ. ವಸ್ತು ಬಲಭಾಗಕ್ಕೆ ಇದ್ದರು ಅದು ಎಡಭಾಗಕ್ಕೆ ತೋರಿಸುತ್ತದೆ. ಡಾ.ಸುನೀತ:     à²…ದನ್ನು ಏನೆಂದು ಕರೆಯುತ್ತಾರೆ? ಯಾಕೆ ಹಾಗೆ ತೋರಿಸುತ್ತದೆ? ಮಕ್ಕಳು:     à²¬à²¿à²‚ಬ-ಪ್ರತಿಬಿಂಬ ಎನ್ನುತ್ತಾರೆ. ಡಾ.ಸುನೀತ:    Very good,, ಅದನ್ನು Mirror image ಅಂತ ಕರಿತಾರಲ್ಲವೇ? ಈಗ ನಿಮ್ಮ ಪಕ್ಕದಲ್ಲಿ ಕುಳಿತಿರುವ ನಿಮ್ಮ ಸ್ನೇಹಿತರ ಕಡೆ ತಿರುಗಿ ಪ್ರತಿಬಿಂಬ ಕಾಣುತ್ತಿದೆಯೇ, ಹೇಳಿ. ಮಕ್ಕಳು:     à²•à²£à³à²£à²¿à²¨à²²à³à²²à²¿ ಡಾ.ಸುನೀತ:     à²…ವರಲ್ಲಿರುವ ಒಂದು ಒಳ್ಳೆಯ ಗುಣವನ್ನು ಹೇಳಿರಿ. ಮಕ್ಕಳು:     à²…ವಳು ಚೆನ್ನಾಗಿದ್ದಾಳೆ, ಅವನು ಪೆನ್ಸಿಲ್ ಕೊಟ್ಟು ಸಹಾಯ ಮಾಡುತ್ತಾನೆ, ಅವಳು ಹಾಡುತ್ತಾಳೆ, ಅವನು ಎಲ್ಲರಿಗೂ ಸಹಾಯ ಮಾಡುತ್ತಾನೆ, ಅವನು ಸ್ನೇಹದಿಂದ ಇರುತ್ತಾನೆ, ಅವಳು ಸುಳ್ಳು ಹೇಳುವುದಿಲ್ಲ (ಮಕ್ಕಳು ವಿವಿಧ ಉತ್ತರಗಳನ್ನು ನೀಡಿದರು) ಡಾ.ಸುನೀತ:     à²¨à³€à²µà³ ಇಂದು ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೀರಿ, ವಾಲ್ಮೀಕಿ ಎಂಬ ಹೆಸರು ಏಕೆ ಬಂದಿತು? ಕೃಷ್ಣ (ತರಗತಿ ೫ ಬಿ): ಅವರು ತಪಸ್ಸು ಮಾಡುವಾಗ ಅವರ ಸುತ್ತ ಹುತ್ತ ಬೆಳೆದಿದ್ದು. ಸಂಸ್ಕೃತದಲ್ಲಿ ಹುತ್ತಕ್ಕೆ ವಲ್ಮೀಕ ಎನ್ನುತ್ತಾರೆ. ಅವರು ನಂತರ ವಲ್ಮೀಕದಿಂದ ಎದ್ದು ಬಂದದ್ದಕ್ಕೆ ವಾಲ್ಮೀಕಿ ಎಂದು ಹೆಸರಾಯಿತು. ಡಾ.ಸುನೀತ:     à²¹à³à²¤à³à²¤ ಯಾರು ಕಟ್ಟುತ್ತಾರೆ ಹೇಗೆ ಕಟ್ಟುತ್ತಾರೆ ಗೊತ್ತಾ? ಮಕ್ಕಳು:     à²‡à²°à³à²µà³† ಮತ್ತು ಟರ್ಮೈಟ್ಸ್ ಕಟ್ಟುತ್ತವೆ. ಮಣ್ಣಿನಿಂದ ಕಟ್ಟುತ್ತವೆ . Saliva ದಿಂದ ಕಟ್ಟುತ್ತವೆ. ಡಾ.ಸುನೀತ:     à²¹à³‡à²—ೆ ಕಟ್ಟುತ್ತವೆ ಗೊತ್ತಾ? ನಿಮಗೆ ಮಣ್ಣು ಕೊಟ್ಟು ಮನೆ ಕಟ್ಟಲು ಹೇಳಿದರೆ ಕಟ್ಟಲು ಸಾಧ್ಯವೇ? ಮಕ್ಕಳು:     à²®à²£à³à²£à³, ಇಟ್ಟಿಗೆ, ಸಿಮೆಂಟ್, ಇಂಜಿನಿಯರ್, ಮನೆ ಕಟ್ಟುವವರು ಎಲ್ಲಾ ಬೇಕು. ಡಾ.ಸುನೀತ:     à²‡à²°à³à²µà³†à²—ಳು ಹೇಗೆ ಕಟ್ಟುತ್ತವೆ. ಇವರೆಲ್ಲ ಇರುವೆಗಳ ಹತ್ತಿರ ಇವೆಯಾ? ಮಕ್ಕಳು:     à²‡à²°à³à²µà³†à²—ಳಲ್ಲಿ Soldier Ant, Worker Ant ಅಂತ ಇರತ್ತೆ. ಅವುಗಳು ಕಟ್ಟುತ್ತವೆ. ಡಾ.ಸುನೀತ:     à²‡à²°à³à²µà³†à²—ಳಿಂದ ನಾವೇನು ಕಲಿಯಬಹುದು? ಮಕ್ಕಳು:     à²¸à²¾à²²à²¿à²¨à²²à³à²²à²¿ ಹೋಗಬೇಕು, Hard work ಮಾಡಬೇಕು, Active ಆಗಿ ಕೆಲಸ ಮಾಡಬೇಕು, ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಡಾ.ಸುನೀತ:     Very Good , ವಾಲ್ಮೀಕಿ ಋಷಿಯಿಂದ ಏನೇನು ಕಲಿಯಬೇಕು. ವಾಲ್ಮೀಕಿ ಋಷಿ ಏನೆಲ್ಲಾ ಕಲಿಸುತ್ತಾರೆ? ಮಕ್ಕಳು:    Practice makes perfect. ಡಾ.ಸುನೀತ:     à²¸à²°à³ ತುಂಬಾ ಚೆನ್ನಾಗಿ ಹೇಳಿದರು. ಎರಡು ಕ್ರೌಂಚ ಹಕ್ಕಿಗಳಿದ್ದವು, ಗಂಡು ಹಕ್ಕಿಯನ್ನು ಬೇಡ ಕೊಂದನು ಎಂದು. ನಮ್ಮ ಸುತ್ತ-ಮುತ್ತ ಬಹಳಷ್ಟು ವಿಚಾರಗಳು ನಡೆಯುತ್ತಿರುತ್ತವೆ. ನಾವು ನಿಜವಾಗಲು ಅದರ ಬಗ್ಗೆ ಯೋಚಿಸುತ್ತೇವೆಯೇ? ದಾರಿಯಲ್ಲಿ ಯಾರೋ ಭಿಕ್ಷುಕನನ್ನು ನೋಡುತ್ತೇವೆ, ಯಾವುದೋ ಅಪಘಾತವನ್ನು ನೋಡುತ್ತೇವೆ, ಎಷ್ಟು ಜನ ನಿಂತು ಅವರಿಗೆ ಸಹಾಯ ಮಾಡುತ್ತೇವೆ? ಮಕ್ಕಳೆ, ನೀವು ಮತ್ತೊಬ್ಬ ವಾಲ್ಮೀಕಿ ಆಗಬೇಕಿದ್ದರೆ ನಿಮ್ಮ ಸುತ್ತ-ಮುತ್ತ ನಡೆಯುವ ಕ್ರಿಯೆಗಳನ್ನು ಹೃಯದಿಂದ ಅನುಭವಿಸುವುದನ್ನು ಕಲಿಯಬೇಕು. ನೀವು ಯಾವುದನ್ನೇ ಹೃದಯದಿಂದ ಅನುಭವಿಸಿದಾಗ ಮಾತ್ರ ಸೃಜನಾತ್ಮಕವಾಗಿ ಕೆಲಸವನ್ನು ಮಾಡಲು ಸಾಧ್ಯ, ಕೆಸಲವನ್ನು ಚೆನ್ನಾಗಿ ಮಾಡಲು ಸಾಧ್ಯ. ಇಲ್ಲದಿದ್ದರೆ ರಾಮಾಯಣವೇ ಬರೆಯಲು ಆಗುತ್ತಿರಲಿಲ್ಲ. ನಾನು ಮತ್ತೆ ಪ್ರತಿಬಿಂಬದ ಬಗ್ಗೆ ಹೇಳುತ್ತೇನೆ…ನಿಮ್ಮನ್ನು ನೀವು ಗಮನಿಸಿಕೊಂಡಾಗ ನಿಮ್ಮ ಪ್ರತಿಬಿಂಬ ನಿಮಗೆ ಕಾಣುತ್ತದೆ. ತಪ್ಪುಗಳನ್ನು ಮಾಡುತ್ತಿದ್ದರೆ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಯಾವುದರಲ್ಲಾದರೂ ಚೆನ್ನಾಗಿದ್ದರೆ ಹೆಚ್ಚು ಜಂಭಪಡದೆ ಎಲ್ಲರೊಂದಿಗೆ ಸ್ನೇಹದಿಂದ ಇರುವುದು, ನಿಮ್ಮ ಅಧ್ಯಾಪಕರು ನಿಮಗಾಗಿ ಬಹಳಷ್ಟು ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ಗೌರವ ಕೊಟ್ಟು ಚೆನ್ನಾಗಿ ಕಲಿಯಿರಿ. ಮುಂದೆ ಬಹಳಷ್ಟು ವಾಲ್ಮೀಕಿಗಳು ಈ ಮಕ್ಕಳಲ್ಲಿ ತಯಾರಾಗಬಹುದು. All the best. ನಂತರ ಬಂದ ಅತಿಥಿಗಳಿಗೆ ನಮ್ಮ ಶಾಲೆಯ ಸ್ಮರಣ ಸಂಚಿಕೆಯನ್ನು ಕೊಡುಗೆಗಳಾಗಿ ನೀಡಿ ಧನ್ಯವಾದಗಳನ್ನು ಹೇಳಿದೆವು. ರಾಮಾಯಣದ ಮಹತ್ವವನ್ನು ಹೇಳುವ ಶ್ಲೋಕ ಮತ್ತು ಶಾಂತಿ ಮಂತ್ರದೊಂದಿಗೆ ಈ ಪುಟ್ಟ ಕಾರ್ಯಕ್ರಮಕ್ಕೆ ಮಂಗಳ ಹಾಡಿದೆವು. ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಮ್ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ || ಗೋಸಜ್ಜನೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು || ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯ ಶಾಲಿನೀ || ದೇಶೋಽಯಂ ಕ್ಷೋಭರಹಿತಃ ಸಜ್ಜನಾಃ ಸಂತು ನಿರ್ಭಯಾಃ || For more photos Click Here

Geetha Jayanti 2013

Geetha Jayanti 2013

Friday, January 10th, 2014

ಗೀತಾ ಜಯಂತಿ ದಿನಾಂಕ: ೧೩ನೇ ಡಿಸೆಂಬರ್, ೨೦೧೩ ಸ್ಥಳ: ಪೂರ್ಣಪ್ರಮತಿ, ಪ್ರಾಥಮಿಕ ಶಾಲೆ, ಗಿರಿನಗರ ಭಗವದ್ಗೀತೆ ಎಂಬುದು ಭಾರತೀಯರಿಗೆ ಒಂದು ಹೆಮ್ಮೆಯ ಗುರುತು. ಭಾರತೀಯರನ್ನು ಪ್ರಪಂಚದಾದ್ಯಂತ ಗೀತೆಯ ನಾಡಿನವರೆಂದು ಗೌರವಿಸುತ್ತಾರೆ. ಮಕ್ಕಳಿಗೆ ಬುದ್ಧಿಯನ್ನು ಚುರುಕುಗೊಳಿಸುವ, ಸಂಸ್ಕೃತಿಯ ಪರಿಚಯ ಮಾಡಿಸುವ, ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ, ಮುಂದಿನ ಅಧ್ಯಯನಕ್ಕೆ ಅಡಿಪಾಯವಾಗಿ ಗೀತೆಯನ್ನು ಹೇಳಿಕೊಡುವ ಸಂಪ್ರದಾಯ ಮೊದಲಿನಿಂದಲೂ ಭಾರತೀಯರಲ್ಲಿ ಬಂದಿದೆ. ಮನೆಮನೆಗಳಲ್ಲಿ ಇಂದಿಗೂ ಗೀತಾ ಪಾರಾಯಣ, ಅಧ್ಯಯನ ನಡೆಯುತ್ತಲೇ ಇರುತ್ತದೆ. ಪೂರ್ಣಪ್ರಮತಿಯಲ್ಲಿ ಗೀತಾ ಅಧ್ಯಯನಕ್ಕೆ ಒಂದು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಕಂಠಪಾಠ, ಉಚ್ಚಾರಣೆಯ ಶುದ್ಧತೆ, ಸಂಸ್ಕೃತ ಕಲಿಕೆಗಳನ್ನು ಗೀತೆಯ ಮೂಲಕವೇ ಮಾಡಲಾಗುವುದು. ೨೦೧೩-೧೪ ನೇ ಸಾಲಿನಲ್ಲಿ ಮೊದಲ ಬಾರಿಗೆ ಗೀತೆಯ ೧೮ ಅಧ್ಯಾಯಗಳ ಪಾಠವು ಸಂಪನ್ನವಾಗಿದೆ. ಈ ಸಂಭ್ರಮದಲ್ಲಿ ಭಾಗಿಯಾದವರಲ್ಲಿ ಶಾಲೆಯ ೬ನೇ ತರಗತಿಯ ಮಕ್ಕಳದ್ದೇ ಮೊದಲ ತಂಡ. ಇವರು ಕಳೆದ ೩ ವರ್ಷಗಳಿಂದ ಗೀತೆಯನ್ನು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ವಿಷಯದಲ್ಲಿ ಹೆಚ್ಚಿನ ಅಧ್ಯಯನವೂ ಮುಂದುವರೆಯಲಿದೆ. ಈ ಎಲ್ಲಾ ಚಟುವಟಿಕೆಗಳಿಗೆ ಶುಭ ಹಾರೈಸಲು ಮತ್ತು ಮುಂದಿನ ಯೋಜನೆಗಳಿಗೆ ಚಾಲನೆ ನೀಡಲು ಗೀತಾ ಜಯಂತಿಯನ್ನು ಆಚರಿಸಲಾಯಿತು. ಗೀತೆಯ ವಿಶೇಷ ಅಧ್ಯಯನ ನಡೆಸಿರುವ ಹಿರಿಯ ಸಂಸ್ಕೃತ ವಿದ್ವಾಂಸರು ಮಕ್ಕಳ ಅಭ್ಯಾಸಕ್ಕೆ ಪುಷ್ಠಿಯನ್ನು ಕೊಡಲು ಪರೀಕ್ಷಕರಾಗಿ ಆಗಮಿಸಿದ್ದರು. ಪ್ರೊ.ಡಿ.ಪ್ರಹ್ಲಾದಾಚಾರ್ಯರು (ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯದ ಹಿಂದಿನ ಉಪಕುಲಪತಿಗಳು), ವಿ.ಕೆ.ರಾಮಣ್ಣ(ಪ್ರಜ್ಞಾಪ್ರತಿಷ್ಠಾನ ವೇದಪಾಠಶಾಲೆಯ ಮುಖ್ಯಸ್ಥರು), ಸೂರ್ಯನಾರಾಯಣ (ವಿಜ್ಞಾನಿ), ಸಂಪತ್ ಕುಮಾರ್ (ಪ್ರಾಚಾರ್ಯರು, ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು), ಕೃಶ್ಣರಾಜಭಟ್.ಕೆ.ಆರ್ (ಸಂಸ್ಕೃತ ಅಧ್ಯಾಪಕರು, ಪಿ.ಇ.ಎಸ್ ಪದವಿಪೂರ್ವ ವಿದ್ಯಾಸಂಸ್ಥೆ), ವಿಕಾಸ ಸವಾಯಿ (ಸಂಸ್ಕೃತ ಅಧ್ಯಾಪಕರು, ಶಿವಮೊಗ್ಗ), ವಿಜಯಸಿಂಹಾಚಾರ್ಯರು (ನಿರ್ದೇಶಕರು, ಸಂಸ್ಕೃತ ವಿದ್ವಾಂಸರು, ಮಹಾ ಅಕಾಡೆಮಿ, ಬೆಂಗಳೂರು) ಮುಖ್ಯ ಅತಿಥಿಗಳು ಮತ್ತು ಪರೀಕ್ಷಕರೂ ಆಗಿದ್ದರು. ವೆಂಕಟರೆಡ್ಡಿಯವರು (ಮುಖ್ಯಸ್ಥರು, ಸನಾತನ ಪ್ರಕಾಶನ, ಬೆಂಗಳೂರು) ತಾಡವಾಲೆಯಲ್ಲಿ ಪ್ರಾಚೀನ ಗ್ರಂಥಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರು ಗೀತಾಮಂಗಳ(ಕಂಠಪಾಠ) ಸಮಯದಲ್ಲಿ ೧೮ ಅಧ್ಯಾಯಗಳನ್ನು ಹೇಳುವ ವಿದ್ಯಾರ್ಥಿಗೆ ಕೊಡುಗೆಯಾಗಿ ನೀಡುವ ಭಗದ್ಗೀತೆಯ ತಾಡವಾಲೆಯನ್ನು ಯಾವುದೇ ಹಣದ ಅಪೇಕ್ಷೆ ಇಲ್ಲದೆ ಸಿದ್ಧಪಡಿಸಿಕೊಡುವ ಮಹತ್ ಕಾರ್ಯವನ್ನು ಮಾಡಿದ್ದಾರೆ. ಬೆಳಗ್ಗೆ à³®.೪೦ ರಿಂದ ಆರಂಭವಾದ ಪರೀಕ್ಷೆಯು ೧೦.೩೦ ರವರೆಗೆ ನಡೆಯಿತು. ಎಂಟು ತಂಡಗಳಾಗಿ ಮಕ್ಕಳು à³® ವಿದ್ವಾಂಸರ ಬಳಿ ಪರೀಕ್ಷೆ ಕೊಟ್ಟರು. ಮಕ್ಕಳು ಕಲಿತಿರುವ ಅಧ್ಯಾಯಗಳಲ್ಲಿ ಪರೀಕ್ಷಕರು ಹೇಳಿದ ಶ್ಲೋಕವನ್ನು ಪೂರ್ಣಗೊಳಿಸುವುದು ಕ್ರಮವಾಗಿತ್ತು. ಮಕ್ಕಳ ಉಚ್ಚಾರಣೆ, ಕಂಠಪಾಠ, ನಿರರ್ಗಳತೆ, ಆತ್ಮವಿಶ್ವಾಸವನ್ನು ಗಮನಿಸಿ ಪರೀಕ್ಷಕರು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. ದಿನದ ಸಂಭ್ರಮಕ್ಕೆ ಗರಿ ಇಟ್ಟಂತೆ ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ವಿಶ್ವಪ್ರಸನ್ನ ತೀರ್ಥರು ಆಗಮಿಸಿದರು. ಸ್ವಾಮಿಗಳ ಸಮ್ಮುಖದಲ್ಲಿ ಗೀತೆಯ ಅಂತ್ಯಾಕ್ಷರಿಯನ್ನು ನಡೆಸಲಾಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಸ್ವಾಮಿಗಳನ್ನು ಮತ್ತು ಬಂದಿದ್ದ ಇತರ ವಿದ್ವಾಂಸರನ್ನು ಆಶ್ಚರ್ಯಚಕಿತಗೊಳಿಸಿದರು. ಕೇಳಿದ ಶ್ಲೋಕವನ್ನು ತಡವರಿಸದೆ, ಪುನರಾವರ್ತನೆ ಆಗದೆ ಸರಾಗವಾಗಿ ಹೇಳುವ ರೀತಿಗೆ ಎಲ್ಲರೂ ತಲೆದೂಗಿದರು. ೧೮ ಅಧ್ಯಾಯಗಳನ್ನು ಕಂಠಪಾಠ ಮಾಡಿರುವ ಮೇಧಾ (೬ನೇ ತರಗತಿ) ಸಭೆಯಲ್ಲಿ ಸ್ವಾಮಿಗಳು ಕೇಳಿದ ಅಧ್ಯಾಯದ ಶ್ಲೋಕಗಳನ್ನು ಪೂರ್ಣಗೊಳಿಸುವುದು ಮುಂದಿನ ಕಾರ್ಯಕ್ರಮವಾಗಿತ್ತು. ಮುಂದಿನ ಮಾರ್ಚ್ ತಿಂಗಳಷ್ಟರಲ್ಲಿ ಪಾಠವಾಗಿರುವ ಎಲ್ಲಾ ವಿದ್ಯಾರ್ಥಿಗಳು ೧೮ ಅಧ್ಯಾಯಗಳನ್ನು ಕಲಿತು ಸ್ವಾಮಿಗಳನ್ನು ಮತ್ತೆ ಪರೀಕ್ಷಕರಾಗಿ ಕರೆಯಿಸುವ ಭರವಸೆಯನ್ನು ಇತ್ತರು. ಇದೇ ಸಂದರ್ಭದಲ್ಲಿ ೬ನೇ ತರಗತಿಯ ಮಕ್ಕಳಿಗೆ ಗೀತಾದೀಕ್ಷೆಯನ್ನು ಕೊಡಲಾಯಿತು. ಭಾರತದ ಪರಂಪರೆಯನ್ನು ಉಳಿಸುವ ಮೂಲಸತ್ವದ ರಕ್ಷಣೆ ಮತ್ತು ಜೀವನದುದ್ದಕ್ಕೂ ಉಳಿಸುವ, ಬೆಳೆಸುವ ದೀಕ್ಷೆಯನ್ನು ಮಕ್ಕಳಿಗೆ ನೀಡಲಾಯಿತು. ಮುಂದಿನ ಜನಾಂಗಕ್ಕೆ ನಾವು ಕೊಡಬಹುದಾದ ಬಹುದೊಡ್ಡ ಆಸ್ತಿ ಮತ್ತು ಕರ್ತವ್ಯ ಪ್ರಜ್ಞೆ ಇದಾಗಿದೆ. ಅತಿಥಿಗಳು ಹೃದಯತುಂಬಿ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಅವರ ಮಾತಿನಲ್ಲೇ ಕೇಳೋಣ: ಪ್ರೊ.ಡಿ.ಪ್ರಹ್ಲಾದಾಚಾರ್ಯರು ಗೀತೆಯ ಪ್ರಯೋಜನ ಈ ವಯಸ್ಸಿಗೆ ತಿಳಿಯದಿದ್ದರೂ ಮುಂದೆ ಅದರ ಮಹತ್ವ ತಿಳಿಯುವುದು. ಒಂದು ಉದಾಹರಣೆ ಕೊಡುತ್ತೇನೆ: ಕೆಲವು ಮಕ್ಕಳು ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಠ ಮಾಡಿ ತಿನ್ನುವವರು ಇರುತ್ತಾರೆ. ಏನು ಕೊಟ್ಟರೂ ತಿನ್ನದೇ ಇರುವವರು ಇರುತ್ತಾರೆ. ಹಾಗೆ ಹೆಚ್ಚು ಕಾಲ ಮಲಗುವವರು ಇರುತ್ತಾರೆ, ನಿದ್ದೆ ಮಾಡದವರು ಇರುತ್ತಾರೆ. ಇಂತಹವರಿಗೆ ಗೀತೆ ಒಂದು ಕಿವಿ ಮಾತು ಹೇಳುತ್ತದೆ ‘ನಾತ್ಯ’ ತುಂಬಾ ತಿಂದರೂ ಕಷ್ಟ, ತಿನ್ನದೇ ಇದ್ದರೂ ಕಷ್ಟ. ಎಷ್ಟು ಬೇಕೋ ಅಷ್ಟು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯಬಹುದು. ಸ್ವಾಮಿಗಳು ನಿಮಗೆಲ್ಲರಿಗೂ ಅಂತಹ ಅನುಗ್ರಹ ಮಾಡಲಿ. ಟಿ.ಆರ್. ಸೂರ್ಯನಾರಾಯಣ ಮಕ್ಕಳು ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಅದನ್ನು ಕಲಿಸಿರುವ ಅಧ್ಯಾಪಕರಿಗೆ ಅನಂತ ಧನ್ಯವಾದಗಳು ವಿ.ಕೆ.ರಾಮಣ್ಣ ನಿಮ್ಮ ಪ್ರಯತ್ನ ಅಪರೂಪದಲ್ಲಿ ಅಪರೂಪದ್ದು. ಎಲ್ಲಾ ಶಾಲೆಗಳಲ್ಲಿ ಇಂತಹ ಅವಕಾಶವಿರುವುದಿಲ್ಲ. ಇಷ್ಟು ಮಕ್ಕಳಿಗೆ ಗೀತೆ ಹೇಳಿಕೊಟ್ಟಿರುವುದು ಮಹತ್ವದ ವಿಷಯ. ಮಕ್ಕಳಿಗೆ ಈ ಹಂತದಲ್ಲಿ ಗೀತೆ ಹೇಳಿಕೊಟ್ಟರೆ ಜೀವನ ಪರ್ಯಂತ ಅದು ಉಳಿಯುತ್ತದೆ. ಇಂತಹ ಪ್ರಯತ್ನ ಮಾಡಿರುವ ಅಧ್ಯಾಪಕರಿಗೆ ನಾನು ಅನಂತ ಧನ್ಯವಾದ ಹೇಳುತ್ತೇನೆ. ನಾವೂ ವೇದಪಾಠ ಶಾಲೆ ನಡೆಸುತ್ತೇವೆ. ಎಲ್ಲವನ್ನೂ ಉಚಿತವಾಗಿ ಕೊಟ್ಟರೂ ಕಲಿಯಲು ಬರುವವರೇ ಇಲ್ಲ. ಅವರದೇ ಆದ ಅನೇಕ ಕಾರಣಗಳಿಂದ ಜನರು ಕಲಿಯುವ ಆಸಕ್ತಿಯನ್ನೇ ಹೊಂದಿರುವುದಿಲ್ಲ. ಇದೊಂದು ದೊಡ್ಡ ದುರಂತ. ಹಾಗದರೆ ನಮ್ಮ ಸಂಸ್ಕೃತಿ ಉಳಿಯುವುದಾದರೂ ಹೇಗೆ? ಎಲ್ಲಾದರೂ ಒಂದು ಕಡೆ ಪ್ರಯತ್ನ ನಡೆಯಲೇ ಬೇಕು. ಅದನ್ನು ಈ ಶಾಲೆಯಲ್ಲಿ ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಸಂಪತ್ ಕುಮಾರ್ ಮಕ್ಕಳು ಮುದ್ದು ಮುದ್ದಾಗಿ ಗೀತೆಯ ಶ್ಲೋಕಗಳನ್ನು ಹೇಳಿದಾಗ ಕಣ್ಣಲ್ಲಿ ನೀರು ತುಂಬಿತು. ಭಗವದ್ಗೀತೆಯಲ್ಲಿ ಹೇಳುವಂತೆ ಯಾವಾಗಲೂ ನಮ್ಮ ಕೆಲಸವನ್ನು ನಾವು ಮಾಡುತ್ತಲೇ ಇರಬೇಕು. ಸೋಮಾರಿಗಳಾಗಬಾರದು. ಇಂದಿನ ಹಲವು ಮಕ್ಕಳಿಗೆ ಮಹಾಭಾರತದಲ್ಲಿ ಎಷ್ಟು ಪರ್ವಗಳು ತಿಳಿದಿರುವುದಿಲ್ಲ. ಬೆಳೆದವರಿಗೆ ಹೇಳಿಕೊಡುವುದು ಸುಲಭ ಆದರೆ ಮಕ್ಕಳಿಗೆ ಹೇಳಿಕೊಡಲು ಬಹಳ ಸಹನೆ ಬೇಕು. ನಾನು ಬಂದಾಗಿನಿಂದ ಗಮನಿಸಿದೆ. ಮಕ್ಕಳನ್ನು ಹೀಗೆ ಪ್ರೀತಿಯಿಂದ ಸಂಬೋಧನೆ ಮಾಡುತ್ತಾ ಸಹನೆಯಿಂದ ಇರುವುದನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಶಸ್ತಿ ಬಂದವರು ಮಾತ್ರ ಜಾಣರಲ್ಲ, ಅದೊಂದು ಮಾರ್ಗದರ್ಶನ ಅಷ್ಟೆ. ಎಲ್ಲರೂ ಗೀತೆಯನ್ನು ಚೆನ್ನಾಗಿ ಕಲಿಯಿರಿ, ಮುಂದೆ ಶ್ರೀಗಳ ಅನುಗ್ರಹದಿಂದ ಅದರ ಅರ್ಥವೂ ನಿಮಗೆ ಆಗುವುದು. ಸುಯಮೀಂದ್ರಾಚಾರ್ಯ ಸಂಸ್ಕೃತಿಯನ್ನು ಉಳಿಸುವ ಯಾವುದೇ ದೊಡ್ಡ ಯೋಜನೆ, ಅದನ್ನು ಕಾರ್ಯಗತಗೊಳಿಸುವಿಕೆ, ಬೆಳೆಸುವಿಕೆಯ ಹಂತಗಳನ್ನು ಗಮನಿಸುವುದಾದರೆ, ಈ ತರಹದ ಶಾಲೆಯನ್ನು ಮಾಡಬೇಕೆಂದು ಯೋಜಿಸಿದ ಯುವಮಿತ್ರರಿಗೂ, ಅದನ್ನು ಕಾರ್ಯಗತಗೊಳಿಸುತ್ತಿರುವ ಅಧ್ಯಾಪಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದರ ಉಪಯೋಗವನ್ನು ಸಮರ್ಪಕ ರೀತಿಯಲ್ಲಿ ಪಡೆಯುತ್ತಿರುವ ಮಕ್ಕಳಿಗೂ ಅಭಿನಂದನೆಗಳನ್ನು ಉತ್ತಮ ಭವಿಷ್ಯವನ್ನು ಆಶಿಸುತ್ತೇನೆ. ವೆಂಕಟ ರೆಡ್ಡಿ ೨೦೦೦ ವರ್ಷಗಳ ಹಿಂದೆ ಗುರುಕುಲಗಳು ಹೇಗಿದ್ದವು ಎಂಬ ಅನುಭವ ಕೊಟ್ಟದ್ದಕ್ಕಾಗಿ ಈ ಶಾಲೆಗೆ ಅಭಿನಂದನೆಗಳು. ಅಂತ್ಯಾಕ್ಷರಿ ನಡೆಯುವಾಗ ಬಹುಶಃ ಎಲ್ಲರೂ ತಯಾರಿರುತ್ತಿದ್ದರು. ಬಹಳ ಸಂತೋಷವಾಯಿತು. ಉತ್ತರ ಭಾರತದಲ್ಲಿ ನಮ್ಮ ಸಂಸ್ಕೃತಿ ನಶಿಸುತ್ತಿದೆ. ದಕ್ಷಿಣ ಭಾರತದಲ್ಲಿ ಉಳಿದುಕೊಂಡಿದೆ, ಬೆಳೆಸುವ ಪ್ರಯತ್ನಗಳು ನಡೆದಿವೆ. ಉತ್ತರ ಭಾರತದಲ್ಲೂ ಪೂರ್ಣಪ್ರಮತಿಯಂತಹ ಶಾಲೆಯನ್ನು ಸ್ಥಾಪಿಸಬೇಕೆಂದು ಕೇಳಿಕೊಳ್ಳುತ್ತೇನೆ. ಸ್ವಾಮಿಗಳ ಹಿತವಚನ ಕಲಿಯಲು ಏನು ಬೇಕು? ಶಾಲೆಯ ಹೆಸರೇನು? ಪೂರ್ಣಪ್ರಮತಿ. ಪೂರ್ಣವಾಗಿ ಕಲಿತರೆ ನೀವು ಪೂರ್ಣಪ್ರಮತಿಯ ಮಕ್ಕಳಾಗುತ್ತೀರಿ. ಪೂರ್ಣಕಲಿಯಲು ಏನು ಬೇಕು? ಗೀತೆಯಲ್ಲಿ ಶ್ರದ್ಧಾವಾನ್ ಲಭತೇ ಜ್ಞಾನಮ್ ಎಂದು ಹೇಳಿದ್ದಾರೆ. ಪೂರ್ಣಕಲಿಕೆಗೆ ಶ್ರದ್ಧೆ ಬೇಕು. ಶ್ರದ್ಧೆಯಿಂದ ಕಲಿಯಿರಿ, ಈ ಬಾರಿ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಕೊಟ್ಟಿದ್ದಾರೆ. ಮುಂದಿನ ಬಾರಿ ಬಂದಾಗ ಎಲ್ಲರೂ ಪಾಸಾಗಿರಿ ಮತ್ತು ನಿಮ್ಮ ಅಧ್ಯಾಪಕರನ್ನು ಪಾಸು ಮಾಡಿರಿ. ಭಕ್ತಿಯಿಂದ ದೇವರನ್ನು ಭಜಿಸಿದವರ ಯೋಗಕ್ಷೇಮವನ್ನು ದೇವರೇ ವಹಿಸಿಕೊಳ್ಳುತ್ತಾನೆ. ಆದ್ದರಿಂದ ನೀವೆಲ್ಲರೂ ಶ್ರದ್ಧೆಯಿಂದ ದೇವರನ್ನು ಭಜಿಸಿರಿ ಎಂದು ಬೋಧಿಸಿದರು.   For more photos click here ಪ್ರಾಂಶುಪಾಲರು ಅನಾರೋಗ್ಯದ ಕಾರಣದಿಂದ ಹಲವು ದಿನಗಳ ಕಾಲ ಶಾಲೆಗೆ ಬರಲು ಸಾಧ್ಯಗದೆ ಇದ್ದರೂ ಮಕ್ಕಳು ಗೀತಾ ಪರೀಕ್ಷೆಯನ್ನು ಕೊಡುವ ಸಂದರ್ಭವನ್ನು ಕಳೆದುಕೊಳ್ಳಲು ಬಯಸದೆ ಸಭೆಯಲ್ಲಿ ಭಾಗವಹಿಸಿದ್ದರು. ಹತ್ತು ಹಲವು ಕಾರ್ಯಕ್ರಮಗಳ ನಡುವೆಯೂ ಮಕ್ಕಳನ್ನು ಹಾರೈಸುವ ಸಲುವಾಗಿ ಬಂದಿದ್ದ ಗಣ್ಯರಿಗೆಲ್ಲಾ ಧನ್ಯವಾದಗಳನ್ನು ಹೇಳುತ್ತಾ ಸಭೆಗೆ ತಾತ್ಕಾಲಿಕವಾಗಿ ಮಂಗಳ ಮಾಡಲಾಯಿತು. ಗೀತೆಯನ್ನು ಅಧ್ಯಯನ ಮಾಡಿ ಅದರಲ್ಲಿ ಹೇಳಿದಂತೆ ನಡೆಯುವ ಹಿರಿಯರ, ಅನುಭವಿಗಳ ಮುಂದೆ ಪರೀಕ್ಷೆ ನೀಡುವುದು ಎಂದರೆ ಪ್ರತಿಭಾ ಪ್ರದರ್ಶನವಲ್ಲ, ಬದಲಾಗಿ ಅವರ ಆಶೀರ್ವಾದಕ್ಕೆ ಪಾತ್ರರಾಗುವ ಸದವಕಾಶ. ಇಂತಹ ಸದವಕಾಶಗಳನ್ನು ಮಕ್ಕಳಿಗೆ ದಕ್ಕಿಸಿಕೊಡುವುದೇ  ಪೂರ್ಣಪ್ರಮತಿಯ ಪ್ರಯತ್ನ.

Inter School Kho-Kho Competition

Inter School Kho-Kho Competition

Friday, November 8th, 2013

ನಮ್ಮ ಶಾಲೆಯ ಕ್ರೀಡೋತ್ಸವ ದಿನಾಂಕ: 28.10.2013 ಸ್ಥಳ: ಪೂರ್ಣಪ್ರಮತಿ ಮೈದಾನ, ಗಿರಿನಗರ, ಬೆಂಗಳೂರು ಆಟದ ಬಯಲಿಗೆ ಓಡಿ, ಆಟದ ಬಯಲಿಗೆ ಓಡಿ ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ ಚಿನ್ನಿ-ದಾಂಡು ಖೋ ಖೋ ಆಡಿ ದೇಹವ ಮೋಡಿಯ ಮಾಡಿ ಆಟವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. ಹಸಿವು, ನೋವು, ಗಾಯ ಎಲ್ಲವನ್ನೂ ಮರೆತು ಮನಃಪೂರ್ವಕವಾಗಿ ಆಡುತ್ತಾರೆ. ಆಟವೆಂದರೆ ತಲೆಗೆ ತೋಚಿದಂತೆ ಆಡುವುದಲ್ಲ. ಅದಕ್ಕೆ ಅದರದೇ ಆದ ನಿಯಮಗಳಿವೆ, ವಿಧಾನಗಳಿವೆ. ಹಲವು ಕ್ರೀಡೆಗಳು ಬೇರೆ ಬೇರೆ ದೇಶಗಳ ಮೂಲವನ್ನು ಹೊಂದಿವೆ. ಭಾರತೀಯ ಆಟಗಳಲ್ಲಿ ಮೆದುಳಿಗೆ ಮತ್ತು ದೇಹಕ್ಕೆ ಎರಡಕ್ಕೂ ಹೆಚ್ಚಿನ ಕೆಲಸವಿರುತ್ತದೆ. ಉದಾಹರಣೆಗೆ ಚದುರಂಗದಾಟ, ಖೋ ಖೋ, ಹಾಕಿ ಇತ್ಯಾದಿ. ಆಟದಲ್ಲಿ ಕಲಿತ ಶ್ರದ್ಧೆ, ಏಕಾಗ್ರತೆ, ಸ್ನೇಹಪರತೆಗಳನ್ನು ಓದಿನಲ್ಲಿ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕ್ರೀಡೆಗಳ ಅಂತಿಮ ಫಲ. ಸೋಲು-ಗೆಲವುಗಳು ಇದಕ್ಕೆ ಪೂರಕವಾಗಿರುತ್ತವೆ. ಭಾರತೀಯ ಆಟಗಳನ್ನು ಉತ್ತೇಜಿಸುವ ಉದ್ದೇಶದಿಂದ ಪೂರ್ಣಪ್ರಮತಿಯು ದಿನಾಂಕ 28.10.2013ರಂದು ಅಂತರ್-ಶಾಲಾ ಖೋ ಖೋ ಪಂದ್ಯಾವಳಿಯನ್ನು ಏರ್ಪಡಿಸಿತ್ತು. ಪಂದ್ಯವು ನಡೆದದ್ದು 28ನೇ ದಿನಾಂಕದಂದು. ಆದರೆ ಅದಕ್ಕೆ ತಯಾರಿ ಒಂದು ತಿಂಗಳ ಮೊದಲೆ ಪ್ರಾರಂಭವಾಗಿತ್ತು. ಇತರ ಶಾಲೆಗಳನ್ನು ಆಹ್ವಾನಿಸುವುದರಿಂದ ಆರಂಭಿಸಿ, ಮಕ್ಕಳ ತಯಾರಿ, ವ್ಯವಸ್ಥೆಗಳ ಬಗ್ಗೆ ಇಡೀ ಶಾಲೆಯೇ ಕೈಜೋಡಿಸಿ ಸಹಕರಿಸಿತು. ನಮ್ಮ ಕ್ರೀಡಾ ಅಧ್ಯಾಪಕರಾದ ಶಶಿಅಣ್ಣ ಅವರಂತೂ ಮಕ್ಕಳನ್ನು ಯಾವ ಹಂತದಲ್ಲೂ ಎಚ್ಚರ ತಪ್ಪದಂತೆ ಖೋ ಖೋ ಪಂದ್ಯಕ್ಕೆ ಅಣಿಗೊಳಿಸಿದ್ದರು. ಪ್ರತಿನಿತ್ಯ 2-3 ತಾಸು ಅಭ್ಯಾಸ ನಡೆದೇ ಇತ್ತು. ಪೋಷಕರೂ ಸಹ ಮಕ್ಕಳನ್ನು ನಿತ್ಯ ಅಭ್ಯಾಸಕ್ಕೆ ಕರೆದು ತರುತ್ತಿದ್ದರು. ಆಟದ ದಿನ ಹತ್ತಿರವಾಗುತ್ತಿದ್ದಂತೆ ಎಲ್ಲರ ಮನದಲ್ಲೂ ಒಂದು ಉತ್ಸಾಹ, ಮಕ್ಕಳು ಹೇಗೆ ಆಡುವರೋ ಎಂಬ ಕುತೂಹಲ ಕಾಯುತ್ತಿತ್ತು. ಈ ಪಂದ್ಯದಲ್ಲಿ ಪೂರ್ಣಪ್ರಮತಿಯೂ ಸೇರಿದಂತೆ ಗಿರಿನಗರದ ಸುತ್ತಮುತ್ತಲ 8 ಶಾಲೆಗಳು ಭಾಗವಹಿಸಿದ್ದವು. ಸಿಸ್ಟರ್ ನಿವೇದಿತಾ ಶಾಲೆ, ರತ್ನಗಿರಿ ವಿದ್ಯಾಸಂಸ್ಥೆ, ಸಿ.ಬಿ.ಎಲ್. ಮದರ್ ತೆರೇಸಾ ಶಾಲೆ, ಮೌಂಟ್ ಎವೆರೆಸ್ಟ್ ಶಾಲೆ, ಕನಕ ವಿದ್ಯಾಸಂಸ್ಥೆ, ಶಾರದಶ್ರೀ ವಿದ್ಯಾಸಂಸ್ಥೆ, ಶಾಂತಿ ನಿಕೇತನ ಇಂಗ್ಲಿಷ್ ಶಾಲೆಗಳ ಪರವಾಗಿ ಬಾಲಕರು ಮತ್ತು ಬಾಲಕಿಯರ ಪ್ರತ್ಯೇಕ ತಂಡಗಳು ಆಗಮಿಸಿದ್ದವು. ಪ್ರಾಥಮಿಕಶಾಲಾ ಮಕ್ಕಳ ವಿಭಾಗದ ಈ ಪಂದ್ಯವು ನಿರೀಕ್ಷೆಗೂ ಮೀರಿ ಮಕ್ಕಳ ನಿಜವಾದ ಸಾಮರ್ಥ್ಯವನ್ನು ಎಲ್ಲರಿಗೂ ತೋರಿಸಿತ್ತು. ಅಂತೂ ಪಂದ್ಯಾವಳಿಯ ದಿನ ಬಂದೆ ಬಿಟ್ಟಿತು…. ಮೈದಾನ ಸ್ವಚ್ಛವಾಗಿ ಸಿದ್ಧವಾಯಿತು, ವಿವಿಧ ತಂಡಗಳು ಕುಳಿತುಕೊಳ್ಳಲು ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ, ಊಟದ ವ್ಯವಸ್ಥೆ, ಹೀಗೆ ಎಲ್ಲವೂ ತಯಾರಾಯಿತು. ಗಿರಿನಗರದ ಹನುಮಂತಪ್ಪನವರು ತಮ್ಮ ನಿವೇಶನವನ್ನು ಅಭಿಮಾನಪೂರ್ವಕವಾಗಿ ಪೂರ್ಣಪ್ರಮತಿಯ ಕಾರ್ಯಗಳಿಗೆ ಬಿಟ್ಟುಕೊಟ್ಟದ್ದು ನಿಜಕ್ಕೂ ಶ್ಲಾಘನೀಯ. ಬೆಳಗ್ಗೆ 8.40 ರಿಂದ ವಿವಿಧ ಶಾಲೆಯವರು ಬರಲು ಆರಂಭಿಸಿದ್ದರು. ಅತಿಥಿಗಳಿಗೆ ತಿಲಕ ಹಚ್ಚಿ ಹೂವನ್ನು ಕೊಟ್ಟು ಸ್ವಾಗತಿಸಿದೆವು. ಅಂದಿನ ಮುಖ್ಯ ಅತಿಥಿಗಳಾಗಿ ಉಮೇಶ್.ಆರ್ (ಕ್ರೀಡಾ ನಿರ್ದೇಶಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ತ್ಯಾಮಗೊಂಡಲು) ಮತ್ತು ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿ ಶ್ರೀಮತಿ ಅನಿತಾ ಅವರು ಆಗಮಿಸಿದರು. ಅತಿಥಿಗಳಿಗೆ ಸ್ವಾಗತ, ಪ್ರಾರ್ಥನೆ, ಪ್ರತಿಜ್ಞಾಸ್ವೀಕಾರ, ಭೂಮಿ ಪೂಜೆ, ಧ್ವಜಾರೋಹಣ, ಭಾರತ ಮಾತೆಗೆ ಪುಷ್ಪಾರ್ಚನೆ ಎಲ್ಲಾ ಕಾರ್ಯಗಳನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ನಮ್ಮ ಶಾಲೆಯ ಹಾಡಿನ ಶಿಕ್ಷಕರಾದ ರಾಜೇಂದ್ರಣ್ಣ ಈ ದಿನಕ್ಕಾಗಿ ವಿಶೇಷ ಹಾಡನ್ನು ರಚಿಸಿ, ರಾಗ ಸಂಯೋಜಿಸಿ ಮಕ್ಕಳಿಗೆ ಅಭ್ಯಾಸ ಮಾಡಿಸಿದ್ದರು. ಮಕ್ಕಳು ಬೆಳಗಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತೆ ಈ ಹಾಡನ್ನು ಹಾಡಿದರು: ಖೋ ಖೋ ಆಟವ ಆಡೋಣ ಎಲ್ಲರ ಜೊತೆಗೂ ಬೆರೆಯೋಣ ಸಾಂಘಿಕ ಶಕ್ತಿಯ ಬೆಳೆಸೋಣ ದೇಹಾರೋಗ್ಯವ ಪಡೆಯೋಣ   ಆಟದಿ ಶಕ್ತಿಯು ಆಟದಿ ಯುಕ್ತಿಯು ಆಟವೆ ಮನಗಳ ಸೇತುವೆಯು ಆಟವ ಆಡುತ ಮುದವನು ಪಡೆಯುತ ಭಾವೈಕ್ಯತೆಯನು ಬೆಳೆಸೋಣ   ಬನ್ನಿರಿ ಆಟವ ಆಡೋಣ ಎಲ್ಲರ ಜೊತೆಗೂ ಬೆರೆಯೋಣ ಕ್ರೀಡೆಯನಾಡುತ ಭಾರತ ಮಾತೆಗೆ ದಿನವೂ ಸೇವೆಯ ಮಾಡೋಣ ಅತಿಥಿಗಳು ಮಾತಿಗಿಂತ ಕ್ರಿಯೆಯೇ ಉತ್ತಮ, ಸೋಲು-ಗೆಲುವುಗಳಿಗಿಂತ ಮುಖ್ಯವಾಗಿ ಕ್ರೀಡಾ ಮನೋಭಾವ ಮತ್ತು ಬಾಂಧವ್ಯವೇ ಆಟದಲ್ಲಿ ಮುಖ್ಯ ಎಂದು ತಿಳಿಸಿ ತಾವು ಆಡುವುದರೊಂದಿಗೆ ಪಂದ್ಯಕ್ಕೆ ಚಾಲನೆ ಕೊಟ್ಟರು. ಮಕ್ಕಳ ಉತ್ಸಾಹವನ್ನು ಮತ್ತಷ್ಟು ಉತ್ತೇಜಿಸುವಂತೆ ಅಭಿನಂದಿಸಿ ಆಟ ನೋಡಲು ತಾವೂ ಕುಳಿತರು. ಯಾವ ತಂಡಗಳು ಯಾವ ತಂಡಗಳೊಂದಿಗೆ ಆಡಬೇಕೆಂಬ ಯೋಜನೆಯಂತೆ ಒಂದೊಂದೇ ತಂಡಗಳು ಆಡತೊಡಗಿದವು. ಕೆಲವು ತಂಡಗಳು ಮೊದಲೆ ಚೆನ್ನಾಗಿ ಅಭ್ಯಾಸ ಮಾಡಿ ಬಂದಿದ್ದವು. ಒಂದೊಂದೇ ತಂಡಗಳು ಸೋಲುತ್ತಾ ಹೋದಂತೆ ಅಂತಿಮ ಸುತ್ತಿಗೆ ತಂಡಗಳು ಆಯ್ಕೆಯಾದವು. ಮಳೆರಾಯ ತಾನೂ ಪಂದ್ಯ ನೋಡಲು ಬಂದನು. ಪಂದ್ಯ ನೋಡಲು ಬಂದ ಮಳೆರಾಯನಿಗೆ ಬೇಸರವಾಗದಿರಲೆಂದು ಮಕ್ಕಳು ಮಳೆಯಲ್ಲೂ ಒಂದು ಪಂದ್ಯವನ್ನಾಡಿದರು. ಅಂತಿಮ ಸುತ್ತಿಗೆ ರತ್ನಗಿರಿ ವಿದ್ಯಾಸಂಸ್ಥೆ ಮತ್ತು ಪೂರ್ಣಪ್ರಮತಿಯ ಮಕ್ಕಳ ತಂಡಗಳು ಆಯ್ಕೆಯಾದವು. ಅಲ್ಲಿಯ ಒಂದೊಂದು ನೋಟ, ಓಟ, ಜೂಟಾಟ ಕ್ಷಣಕ್ಷಣಕ್ಕೂ ಉತ್ಸಾಹವನ್ನು ಹೆಚ್ಚಿಸುತ್ತಲೇ ಇತ್ತು. ತಮ್ಮೆಲ್ಲ ಜಾಣ್ಮೆ, ಏಕಾಗ್ರತೆ, ಸತತ ಅಭ್ಯಾಸ, ನಿಯಮಗಳ ಅರಿವುಗಳನ್ನು ಒಟ್ಟುಗೂಡಿಸಿ ಎಚ್ಚರಿಕೆಯಿಂದ ಆಡಿದ ಪೂರ್ಣಪ್ರಮತಿಯ ಬಾಲಕರು ಮತ್ತು ಬಾಲಕಿಯರು ಜಯಶಾಲಿಗಳಾದರು. ಪ್ರಾಂಶುಪಾಲರು ಅನಾರೋಗ್ಯದಿಂದ ವಿಶ್ರಾಂತಿ ಪಡೆಯಬೇಕಾಗಿದ್ದರೂ ಈ ಉತ್ಸವವನ್ನು ಕಣ್ಣಾರೆ ಕಾಣುವ ತವಕದಿಂದ ಮೈದಾನಕ್ಕೆ ಧಾವಿಸಿ ಬಂದರು. ಈ ಯಜ್ಞದಲ್ಲಿ ಯಾರ ಪರಿಶ್ರಮವೂ ವ್ಯರ್ಥವಾಗಲಿಲ್ಲ. ಅಂತೂ ಅಂತಿಮ ಜಯ ನಮ್ಮದಾಯಿತು. ಮಕ್ಕಳ ಮುಂದಿನ ಸಾಧನೆಗೆ ದಾರಿದೀಪವಾಯಿತು. ಪಂದ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ಪತ್ರವನ್ನು ನೀಡಲಾಯಿತು. ಈ ಬಹುಮಾನ ಪತ್ರದ ವಿಶೇಷವೆಂದರೆ ಅದನ್ನು ಮಕ್ಕಳೇ ತಮ್ಮ ಕೈ ಬರಹದಿಂದ, ಚಿತ್ರಗಳಿಂದ ತಯಾರಿಸಿದ್ದರು. ಸಂಜೆಯ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ಖೋ ಖೋ ಕ್ರೀಡಾಪಟುಗಳಾದ ಶ್ರೀಯುತ ರಾಮು, ಗಣಿತಜ್ಞರಾದ ಶ್ರೀಮತಿ ಆನಂದ ಲಕ್ಷ್ಮೀ, ರಬ್ಬರ್ ಉದ್ಯಮಿಯಾದ ಮಣೂರು ನರಸಿಂಹ ಪೈ ಮುಂತಾದವರು ಆಗಮಿಸಿದ್ದರು. ಇವರೆಲ್ಲರೂ ಸಮಾಜದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯದೊಂದಿಗೆ, ಶಾಲೆಗಳನ್ನು ನಿರ್ಮಿಸಿ ಕ್ರೀಡೆಗಳನ್ನು ಪ್ರೋತ್ಸಾಹಿಸುವವರಾಗಿದ್ದಾರೆ. ಇವರ ಆಶೀರ್ವಾದವನ್ನು, ಬಹುಮಾನವನ್ನೂ ಪಡೆದ ಮಕ್ಕಳು ತಮ್ಮ ಕೊರಳಲ್ಲಿ ಕಂಗೊಳಿಸುತ್ತಿರುವ ಪದಕಗಳು ಮತ್ತು ಬಹುಮಾನವನ್ನು ನೋಡುತ್ತಾ ಸಾವಿರ ಕನಸುಗಳನ್ನು ನಾಳೆಗಾಗಿ ಕಟ್ಟಲು ಆರಂಭಿಸಿದರು. ಪೂರ್ಣಪ್ರಮತಿಯ ಈ ಮರಿಸೈನ್ಯವು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಮಟ್ಟದ ಖೋ ಖೋ ತಂಡವಾಗಿ ಹೊರಹೊಮ್ಮುವ ಭವರಸೆಯನ್ನು ಹೊತ್ತು ನಾವೆಲ್ಲ ಮನೆಗೆ ತೆರಳಿದೆವು.   Inter School Kho-Kho Competition “28th October 2013” Purnapramati organized the Inter school Kho-Kho competition on 28th October’2013 with a zeal to promote the game which has its origin from our country. It was a thrilling experience to see 15 teams participating from different schools. The day started with an Inauguration program. Wherein, all the players assembled in the ground with a hope to win and to prove their metal. All the players their respective coaches and P.T masters were given a warm traditional welcome by putting tilak on their forehead and by giving flowers. Then the chief guest Mrs. Anitha Reddy (national level Kho-Kho player), Mr. Umesh (director of sports, govt. college Yelahanka) and Hanumanthappa were welcomed by a grand salute by the purnapramatians. It followed with a flag hoisting and introduction of teams and officials to the guest. A welcome speech was given by Indumati akka (teacher purnapramati) and an invocation song on Kho-Kho game was sung by purnapramati children which was composed by our music teacher (Rajender anna). Anitha Reddy, Umesh and the captains of the teams played the Kho-kho game which marked the inauguration of the meet. Then it followed with the oath taking by all the players of all the schools. The chief guest also addressed the audience and players by sharing few tips on the game. Shashi anna the sports teacher of purnapramati announced the match time table and tournament instructions which followed with the vote of thanks. In the closing ceremony the players assembled for the final play and the chief guest Mr.& Mrs. Ramu (national level Kho-Kho player), Mr. Prabhakaran (national level Kho- Kho player) and Mr. Sunder Raj shetty (participant in International sprint event 100 meters) were given a warm welcome by all. Then the game took its more thrilling and breath taking moment when purnapramati boys and girls team came in finals against Ratnagiri school. It was a moment to cherish and live with to see the zeal of both the teams to win. The match took many turning points but at last the trophy of the event was won by the Purnapramati team. We won the boys and girls finals and both the trophies came into the kitty of purnapramati after seeing this there was no boundry for happiness of parents, teachers, players and the students of purnapramati and all ran into the ground to hug and congratulate the winning stars of purnapramati. It was an overwhelming experience to see the prize distribution for winning and runner up teams. The day ended with vote of thanks and flag down ceremony. The day was over but the joy

Trip to Amruth Mahal Kaval

Trip to Amruth Mahal Kaval

Thursday, November 7th, 2013

ಅಮೃತ ಮಹಲ್ ಕಾವಲ್‌ನಲ್ಲಿ ಗಾಂಧಿಜಯಂತಿಯ ಆಚರಣೆ ದಿನಾಂಕ: 02.10.2013 ಸ್ಥಳ: ದೊಡ್ಡ ಉಳ್ಳಾರ್ತಿ ಗ್ರಾಮ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ   ನಮ್ಮ ಯಾತ್ರೆಯ ಹಿನ್ನಲೆ: ಆಧುನಿಕತೆ, ನಾಗರಿಕತೆ ಮತ್ತು ವ್ಯವಹಾರದ ಉದ್ದೇಶಗಳಿಗೆ ಪ್ರಕೃತಿಯನ್ನು ಬಳಸಿಕೊಳ್ಳುವ ಮತ್ತು ನಿಧಾನವಾಗಿ ಬಲಿಕೊಡುವ ಮನುಷ್ಯನ ಅತಿಬುದ್ಧಿಗೆ ಮತ್ತೊಂದು ಉದಾಹರಣೆಯಾಗಿ ಅಮೃತ ಮಹಲ್ ಕಾವಲ್ ಇದೆ. ಇದೊಂದು ಹುಲ್ಲುಗಾವಲು. ಈ ಹುಲ್ಲುಗಾವಲು ಕೃಷ್ಣದೇವರಾಯನ ಕಾಲದಿಂದಲೂ ಅಮೃತ ಮಹಲ್ ಎಂಬ ವಿಶೇಷ ತಳಿಯ ಹಸುಗಳಿಗೆ ಮತ್ತು ಆಡು-ಕುರಿಗಳಿಗೆ ಆಹಾರ ಒದಗಿಸುವ ಹುಲ್ಲುಗಾವಲಾಗಿತ್ತು. ದೈತ್ಯಾಕಾರದ, ದಷ್ಟ-ಪುಷ್ಠವಾದ ಈ ಅಮೃತ ಮಹಲ್ ಹೋರಿಗಳನ್ನು ಟಿಪ್ಪುಸುಲ್ತಾನನು ಯುದ್ಧದಲ್ಲೂ ಬಳಸುತ್ತಿದ್ದನು. ಈ ಕಾವಲ್‌ಅನ್ನು ಅವಲಂಬಿಸಿ ಹೈನುಗಾರಿಕೆ, ಕಂಬಳಿ ತಯಾರಿಕೆ ಹೀಗೆ ಸಾವಿರಾರು ಜನರಿಗೆ ಉದ್ಯೋಗ, ಜೀವನ ನಡೆಯುತ್ತಿತ್ತು. ಮೊದಲು 4 ಲಕ್ಷ ಎಕರೆ ಇದ್ದ ಹುಲ್ಲುಗಾವಲು ಈಗ 56 ಸಾವಿರ ಎಕರೆಯಾಗಿದೆ. ಸಾವಿರಾರು ಎಕರೆಗಳ ಈ ಭೂಮಿಯನ್ನು ಇತ್ತೀಚಿನ ದಿನಗಳಲ್ಲಿ ಅನೇಕ ಸಂಸ್ಥೆಗಳಿಗೆ ಬೇರೆ ಬೇರೆ ಉದ್ದೇಶಗಳಿಗೆ ನೀಡಲಾಗಿದ್ದು ಅಲ್ಲಿನ ಜನರ ಜೀವನವನ್ನು ಕಿತ್ತುಕೊಳ್ಳಲಾಗುತ್ತಿದೆ. ಅಂದು ಗಾಂಧೀಜಿ ಅವರು ಬಹಳ ಪ್ರಮುಖವಾಗಿ ಹೇಳಿದ್ದ ಗ್ರಾಮೋದ್ಯೋಗ ಯೋಜನೆಗಳು, ಮುಂದಾಲೋಚನೆಯಿಲ್ಲದ-ಯೋಜನಾಬದ್ಧ ನಡೆಗಳಿಲ್ಲದ ಇಂದಿನ ಸರಕಾರದ ಹುಚ್ಚುತನಕ್ಕೆ ಬಲಿಯಾಗುತ್ತಿದೆ. ಮಕ್ಕಳಿಗೆ ಇದನ್ನು ಪ್ರತ್ಯಕ್ಷವಾಗಿ ತೋರಿಸುವುದರ ಮೂಲಕ ಗಾಂಧಿ ಜಯಂತಿಯನ್ನು ಸಾರ್ಥಕಗೊಳಿಸುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲ್ಲೂಕಿನ ದೊಡ್ಡಉಳ್ಳಾರ್ತಿಗೆ ನಮ್ಮ ಪಯಣ ಸಾಗಿತ್ತು. ಬೆಂಗಳೂರಿನಿಂದ ಉಳ್ಳಾರ್ತಿಗೆ… ಮಕ್ಕಳೆಲ್ಲ ಅಕ್ಟೋಬರ್ ೨ರಂದು ಬೆಳಗಿನ ಜಾವ ೪ ಗಂಟೆಗೇ ತಯಾರಾಗಿ ಶಾಲೆಯ ಬಳಿ ಸೇರಿದ್ದರು. ೪.೧೫ಕ್ಕೆ ನಮ್ಮ ಬಸ್ಸು ಪ್ರಯಾಣ ಆರಂಭಸಿತು. ಅಮೃತ ಮಹಲ್ ಕಾವಲ್‌ಬಗ್ಗೆ ಹೆಚ್ಚಿನ ಅರಿವನ್ನು ನೀಡಲು ಭಾರತೀಯ ವಿಜ್ಞಾನ ಸಂಸ್ಥೆಯಿಂದ ದುರ್ಗಾ ಮಾಧವ್ ಮಹಾಪಾತ್ರ ಎಂಬುವವರು ನಮ್ಮೊಂದಿಗೆ ಬಂದಿದ್ದರು. ಮಕ್ಕಳೆಲ್ಲಾ ಸಂಭ್ರಮದಿಂದ ಎಂದಿನಂತೆ ಉತ್ಸಾಹದ ಚಿಲುಮೆಗಳಾಗಿ ಶಾಲೆಯ ಪ್ರಾರ್ಥನೆ, ಹಾಡು, ದೇವರ ನಾಮಗಳನ್ನು ಹೇಳುತ್ತಾ ಸಾಗಿದರು. ಅರುಣೋದಯದ ಸೊಬಗನ್ನು, ಸೂರ್ಯೋದಯವನ್ನೂ ಕಂಡು ಖುಷಿಪಟ್ಟರು. ಸುಮಾರು 8.00 ಗಂಟೆಗೆ ಚಳ್ಳಕೆರೆ ಸಮೀಪದ ಲಕ್ಕನಾಳದ ಒಂದು ತೋಟದಲ್ಲಿ ಬೆಳಗಿನ ಉಪಾಹಾರಕ್ಕಾಗಿ ನಿಂತೆವು. ಅಲ್ಲಿಂದ ಮುಂದೆ 9.15 ಗಂಟೆಗೆ ದೊಡ್ಡಉಳ್ಳಾರ್ತಿಗೆ ತಲುಪಿದೆವು. ಅಮೃತ ಮಹಲ್ ಕಾವಲ್‌ನಲ್ಲಿ ಹೆಜ್ಜೆ ಹಾಕಲಾರಂಭಿಸಿದೆವು.   ಅಮೃತ ಮಹಲ್ ಕಾವಲ್‌ನಲ್ಲಿ… ಇದೊಂದು ಹುಲ್ಲುಗಾವಲು. ಇಲ್ಲಿ ಸೆಪ್ರೆಸ್ ಜಾತಿಯ ತ್ರಿಕೋನಾಕಾರದ ಕಾಂಡವಿರುವ ಹುಲ್ಲು ಬೆಳೆಯುತ್ತದೆ. ಮತ್ತು ರಶ್ ಎಂದು ಕರೆಯುವ ಸಸ್ಯಗಳನ್ನು ಕಾಣಬಹುದು. ಮುಖ್ಯವಾಗಿ ಹುಲ್ಲುಗಾವಲು ಪ್ರದೇಶದಲ್ಲಿ ಮುಳ್ಳಿನ ಪೊದೆಗಳು, ಕಡಿಮೆ ಎತ್ತರದ ಮರಗಳು ಬೆಳೆದಿವೆ. ಹುಣಸೆ, ಬೇವಿನ ಮರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹುಲ್ಲುಗಳಲ್ಲಿ ಸುಮಾರು 300 ಜಾತಿಯ ಹುಲ್ಲುಗಳಿವೆ. ಹುಲ್ಲುಗಾವಲಿನಲ್ಲಿ ಬೆಳೆಯುವ ಮರಗಳು, ಹುಲ್ಲುಗಳು ಭೂಮಿಯಲ್ಲಿ ಹೆಚ್ಚು ಆಳಕ್ಕೆ ಬೇರನ್ನು ಹೊಂದಿರುವುದಿಲ್ಲ. ಮಾವಿನಮರದಂತೆ (ಭೂಮಿಯಲ್ಲಿ ಆಳವಾಗಿ ಬೇರನ್ನು ಹೊಂದಿರುವ ಮರಗಳಂತೆ) ಇವಕ್ಕೆ ಹೆಚ್ಚಿನ ಪೋಷಕಾಂಶಗಳು, ನೀರಿನ ಸೌಲಭ್ಯದ ಅಗತ್ಯವಿರುವುದಿಲ್ಲ. ಇವು ಭೂಮಿಯ ಮೇಲಿನ ಪದರವನ್ನೇ ಆಶ್ರಯಿಸಿ ಇರುತ್ತವೆ. ಮಳೆಯ ಪ್ರಮಾಣವೂ ಹುಲ್ಲುಗಾವಲಿನಲ್ಲಿ ಕಡಿಮೆ. ಹುಲ್ಲುಗಾವಲಿನಲ್ಲಿ ಆಶ್ಚರ್ಯ ತರಿಸುವ ಬೇವಿನ ಮರವನ್ನು ನಾವು ನೋಡಿದೆವು. ಅದರ ಕಾಂಡದಿಂದ ಹಾಲಿನಂತೆ ಬಿಳಿಯಾದ ದ್ರವವು ಹೊರಸೂಸುತ್ತಿತ್ತು. ಮರಗಳಿಗೆ ಬೇಕಾದ ಪ್ರಾಥಮಿಕ ಪೋಷಕಾಂಶಗಳನ್ನು ಜೀರ್ಣಿಸಿಕೊಂಡ ನಂತರ ಆನುಷಂಗಿಕ ಪೋಷಕಾಂಶಗಳು ಹೆಚ್ಚಾಗಿ ಹೊರ ಬರುತ್ತಿರುವ ಸೋರಿಕೆ ಇದಾಗಿತ್ತು. ಇದು ಬಹಳ ಅಸಹಜ ಕ್ರಿಯೆಯಾಗಿದ್ದು, 5-6 ದಿನಗಳಿಂದ ಈ ಸೋರಿಕೆ ಉಂಟಾಗಿದೆ ಎಂದು ಸ್ಥಳೀಯರು ಹೇಳಿದರು. ಇಂತಹ ಸೋರಿಕೆಗಳಿಂದ ಮರದ ಮೇಲ್ಪದರವೂ ಹೊರ ಬರುವುದರಿಂದ ಸೋರಿಕೆ ನಿರಂತರವಾದರೆ ಹೊರ ಪದರವನ್ನೂ ಕಳೆದುಕೊಳ್ಳಬಹುದು. ಆದರೆ ಸೋರಿದ ದ್ರವವು ಭೂಮಿಯಲ್ಲಿ ಸೇರಿ ಅದೇ ಜಾತಿಯ ಮರಗಳು ಮತ್ತಷ್ಟು ಹುಟ್ಟಲು, ಅದೇ ಕುಲದ ರಕ್ಷಣೆಗಾಗಿಯೂ ಈ ಕ್ರಿಯೆ ಸಹಾಯಕವಾಗಬಹುದು. ಇದೊಂದು ರಕ್ಷಣಾತಂತ್ರ, ಮನುಷ್ಯರಿಗೆ ವಿಷವಾಗಬಹುದು. ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ ಪಿಯಾಸಿ, ಸೈಪ್ರಸಿ ಎಂಬ ಎರಡು ಜಾತಿಯ ಹುಲ್ಲುಗಳಿರುತ್ತವೆ. ಸೈಪ್ರಸ್ ಹೊಂಡೋಫೋಲಿಯಾ (SH) ಇವು 1 ರಿಂದ 2 ಅಡಿ ಎತ್ತರದವರೆಗೆ ಬೆಳೆಯಬಲ್ಲವು. ಭಾರತದಲ್ಲಿ 60 ಜಾತಿಯ ಸೆಡ್ಜಸ್‌ಗಳಿವೆ. ಇವು ಭೂಮಿಯ ಮೇಲಿನ ಪದರದ ಪೋಷಕಾಂಶಗಳನ್ನು ಮಾತ್ರ ಬಳಸಿಕೊಳ್ಳುತ್ತವೆ. ಇವುಗಳು ಬಲೆಯಂಥಹ ಬೇರಿನಿಂದ ಬೆಳವಣಿಗೆಗೆ ಸಾಕಾಗುವಷ್ಟು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಹುಲ್ಲುಗಳೂ ಕೂಡ ಮನುಷ್ಯರು ತಿನ್ನಲು ಸಾಧ್ಯವಾಗುವ ಹಣ್ಣುಗಳನ್ನು, ಹೂವುಗಳನ್ನು ಹೊಂದಿರುತ್ತವೆ. ಇವುಗಳು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡ ಬೀಜಗಳನ್ನು ತಯಾರಿಸಬಲ್ಲವು. ಗಿರಿಜನರು, ಕಾಡುಜನರು ಇದರ ಸ್ಪಷ್ಟ ಅರಿವನ್ನು ಹೊಂದಿರುತ್ತಾರೆ. ನಾವು ಅಕ್ಕಿ ತಿನ್ನುವಂತೆ ಅವರು ಇದರ ಬೀಜಗಳನ್ನು ಬಳಸುತ್ತಾರೆ. ಎಷ್ಟೋ ಬಾರಿ ವ್ಯವಸಾಯ ಭೂಮಿಯ ಫಲವತ್ತತೆಯು ಅಕ್ಕ-ಪಕ್ಕದಲ್ಲಿರುವ ಇಂತಹ ಹುಲ್ಲುಗಾವಲಿನ ಬಳುವಳಿಯೂ ಆಗಿರುತ್ತದೆ. ಬರಗಾಲದಲ್ಲಿ ಹಳ್ಳಿಗರಿಗೆ ಆಹಾರವಾಗಿದ್ದ ಕಾರೆ ಹಣ್ಣುಗಳನ್ನು ಅದರ ಗಿಡವನ್ನು ನೋಡಿದೆವು. ಬಾಯಿ ಇಲ್ಲದೆ ಇದ್ದರೂ ಕೇವಲ ಕಾಲುಗಳ ಉಜ್ಜುವಿಕೆಯಿಂದ ಶಬ್ದ  ಮಾಡುವ ಕ್ರಿಕೆಟ್ ಹುಳುಗಳನ್ನು ಕಂಡೆವು. ಗೂಸುಂಬೆ, ಬುಲ್‌ಬುಲ್ ಪಕ್ಷಿಗಳು ನಮಗೆ ಕಾಣಲು ಸಿಕ್ಕವು. ಮರವನ್ನು ಆಶ್ರಯಿಸಿ ಬೆಳೆಯುವ ನಂತರ ಮರದ ಸಾರವನ್ನೆಲ್ಲಾ ಹೀರಿ ತಾನೇ ಬಲಿಷ್ಠವಾಗುವ ಮಂಕಿ ಲಾಡರ್ ಅಥವಾ ಲಯಾನಸ್ ಎಂದು ಕರೆಯಲ್ಪಡುವ ಬಳ್ಳಿಯನ್ನು ನೋಡಿದೆವು. ಈ ಬಳ್ಳಿಗಳು ಎಲ್ಲಾ ಮರಗಳನ್ನು ಆಶ್ರಯಿಸುವುದಿಲ್ಲ. ಕೆಲವೊಂದು ಮರಗಳನ್ನು ಮಾತ್ರ ಹುಡುಕಿ ಅದಕ್ಕೆ ಹಬ್ಬುತ್ತವೆ. ಬಲೆಯಂತೆ ಒಂದು ಮರದಿಂದ ಒಂದು ಮರಕ್ಕೆ ಹಬ್ಬುತ್ತಾ ಮಂಗಗಳಿಗೆ ಒಂದೆಡೆಯಿಂದ ಒಂದೆಡೆ ಹೋಗಲು ಸಹಾಯಕವಾಗಿವೆ. ಇದನ್ನು ಮೂಳೆ ಚಿಕಿತ್ಸೆಗಾಗಿ ಬಳಸುವರು ಎಂಬುದು ನಮಗೆ ಹೊಸವಿಷಯವಾಗಿತ್ತು. ಕ್ಯಾಕ್ಟಸ್‌ನ ಎರಡು ಜಾತಿಯ ಗಿಡಗಳನ್ನು ಕಂಡೆವು. ಬಳೆಯಾಕಾರದಲ್ಲಿ ಮರದಲ್ಲಿ ಜೋತಾಡುತ್ತಿದ್ದ ಕಾಯಿಗಳನ್ನು ಕಂಡೆವು. ಅದನ್ನು ಮುರಿದಾಗ ಆಲ್ಕೊಲಾಯಿಡ್ ನಂತಹ ದ್ರವ ಹೊರಬರುತ್ತಿತ್ತು. ನೈಸರ್ಗಿಕ ವಿಷವಾಗಿ ಕೆಲಸಮಾಡುವ ನಮ್ಮ ಜೀರ್ಣಕ್ರಿಯೆಯನ್ನು ನಿಲ್ಲಿಸುವ ಗುಲಗಂಜಿಯನ್ನು ಹೆಕ್ಕಿ ತೆಗೆದೆವು. ದೊಡ್ಡ ಗಾತ್ರದ ಗ್ರಾಸ್ ಹಾಪರ್ ನೋಡಿ ಮಕ್ಕಳು ಆನಂದಿಸಿದರು. ಸ್ಥಳೀಯರಾದ ಹನುಮಂತಪ್ಪನವರ ಮಾತಿನಲ್ಲಿ ಮೊದಲಿದ್ದ ಕಾವಲ್ ಮತ್ತು ಈಗಿರುವ ಕಾವಲ್… ಇಲ್ಲಿ ಮೊದಲು ತುರುವುಗಟ್ಟಲೆ (300-400) ಹಸುಗಳಿರುತ್ತಿದ್ದರು. 8-9 ವರ್ಷಗಳಿಂದೀಚೆಗೆ ಎಲ್ಲಾ ಹೋಗಿಬಿಟ್ಟವು. ಫಾರಂ ಅಂತ ಮಾಡಿ ಮುಳ್ಳುತಂತಿ ಹಾಕಿಬಿಟ್ಟರು. ಕುರಿ ಫಾರಂ, ಗೋ ಶಾಲೆ ಅಂತ ಸ್ವಲ್ಪ ಜಾಗ ಮಾತ್ರ ಉಳಿಸಿಕೊಂಡಿದ್ದಾರೆ. ಬರಗಾಲದಲ್ಲಿ ಸರಕಾರವೇ ಹಸುಗಳಿಗೆ ಹುಲ್ಲು ಕೊಡುತ್ತಿತ್ತು. ಹಾಲನ್ನು ಅವರೇ ತೆಗೆದುಕೊಂಡು ಹೋಗುತ್ತಿದ್ದರು ಮತ್ತೆ ನಾವು ಪೇಟೆಗೆ ಹೋಗಿ ಮಾರಿ ಬರುತ್ತಿದ್ದೆವು. ಮೊದಲು ಬರಿ ಮರಗಳಿದ್ದವು. ದೊಡ್ಡ ಕಾಡಿತ್ತು. ಈಗ ಬಯಲಾಗಿ ಹೋಯ್ತು. ಸರಕಾರದವರು ಎಲ್ಲಾ ಕಡಿದುಕೊಂಡು ಬಿಟ್ಟರು. ಕಟ್ಟಿಗೆಗೆ, ರೈಲಿನ ಇದ್ದಿಲಿಗೆ ಮರಗಳನ್ನು ಕಡಿದುಕೊಂಡು ಮಾರಿಬಿಟ್ಟರು. ಹಂದಿ, ಜಿಂಕೆ, ಕೃಷ್ಣಮೃಗ, ನವಿಲು, ಮುಂತಾದ ಪ್ರಾಣಿಗಳು ಇರುತ್ತಿದ್ದವು. ನೀರೆ ಇಲ್ಲ ವ್ಯವಸಾಯಕ್ಕೆ, 120-150 ಅಡಿ ಕೊರೆದು ಬೋರ್ ಹಾಕಿ ನೀರಾವರಿ ಮಾಡಿಕೊಂಡು ವ್ಯವಸಾಯ ಮಾಡಬೇಕು. ಮೊನ್ನೆ ಮಳೆ ಬಂದುದ್ದರಿಂದ ನೀರು ಬಂತು.   ಸಿದ್ಧಪ್ಪ ಮತ್ತು ತಿಮ್ಮೇಶ ಅವರು ಕಂಡಿರುವ ಅಮೃತ ಮಹಲ್ ಕಾವಲ್ ಈಗ ಅಮೃತ ಮಹಲ್ ಕಾವಲ್ ಆಕಳು ಅಜ್ಜಾಂಪುರದಲ್ಲಿದೆ, ಇಲ್ಲಿ ಇಲ್ಲ. 300 ರಾಸುಗಳಿವೆ. ಅಮೃತ ಮಹಲ್ ಹೋರಿಗಳು ನೋಡಲು ಸುಂದರವಾಗಿರುತ್ತವೆ. ಅವು ಬಂಗಾರದಂತೆ, ಒಂದು ಹೋರಿ 1 ಲಕ್ಷ ಅಥವಾ 1.20 ಲಕ್ಷಕ್ಕೆ ಮಾರಾಟವಾಗುತ್ತದೆ. ಅಮೃತ ಮಹಲ್ ನೋಡೋಕೆ ಸುಂದರ. ಅಮೃತ ಮಹಲ್ ಆಕಳಿನ ಹಾಲು ಬಹಳ ಶಕ್ತಿ ಕೊಡತ್ತೆ. ದಿನಕ್ಕೆ 5-8 ಲೀಟರ್ ಹಾಲು ಕೊಡುತ್ತವೆ. ಮೇವು ಜಾಸ್ತಿ ಬೇಕು. ಪ್ರತಿದಿನ ಯಾರು ನೋಡಿಕೊಳ್ಳುತ್ತಾರೋ ಅವರೇ ಅದರ ಹತ್ತಿರ ಹೋಗಲು ಸಾಧ್ಯವಾಗುವುದು. ಹೊಸ ಮನುಷ್ಯರು ಹೋದರೆ ಬಿಡುವುದಿಲ್ಲ ಅವು, ಅಷ್ಟೆತ್ತರ ಇರುತ್ತವೆ. ನೋಡಿ ಬನ್ನಿ ಒಮ್ಮೆ. ಈಗ ಎಲ್ಲಾ ಬೇಲಿ ಹಾಕಿಬಿಟ್ಟರು ಅಮೃತ ಮಹಲ್ ಇಲ್ಲ, ರಾಮ್ ಬುಲೆಟ್ ಅಂತ ಕುರಿ ತಂದರು, ಅದು ಇಲ್ಲ, ಸಿಂಧಿ ಹಸು ತಂದರು. ಅದೂ ಇಲ್ಲ. ಈಗ ಯಾರು ಯಾರೋ ಕೊಂಡುಬಿಟ್ಟಿದ್ದಾರೆ. ಕಾಂಪೌಂಡ್ ಹಾಕ್ತಾ ಇದ್ದಾರೆ. ಒಬ್ಬ ರೈತ 100 ರಿಂದ 400 ಕುರಿಗಳವರೆಗೆ ಸಾಕಿಕೊಂಡಿರುತ್ತಾನೆ. ಈರುಳ್ಳಿ, ಸಜ್ಜೆ, ಶೇಂಗಾ, ತೊಗರಿ, ಅಲಸಂದಿ, ರಾಗಿ, ಭತ್ತಗಳನ್ನು ಬೆಳೆಯುತ್ತೇವೆ. ವರ್ಷಕ್ಕೆ 2 ಬೆಳೆ ಬೆಳೆಯುತ್ತೇವೆ. ಕಂಬಳಿ ತಯಾರಿಕೆ ಅಮೃತ ಮಹಲ್ ಕಾವಲ್‌ಅನ್ನು ಅವಲಂಬಿಸಿ ಅಲ್ಲಿನ ಸ್ಥಳೀಯರು ಜೀವನಕ್ಕೆ ನಂಬಿರುವ ಉದ್ಯೋಗ ಹೈನುಗಾರಿಕೆ ಮತ್ತು ಕಂಬಳಿ ತಯಾರಿಕೆ. ಇಲ್ಲಿನ ಕಂಬಳಿಗಳಿಗೆ ಒಳ್ಳೆಯ ಬೇಡಿಕೆ ಇದೆ. ಒಂದು ಕಂಬಳಿ ತಯಾರಿಕೆಗೆ ಕನಿಷ್ಠ 4 ದಿನಗಳಾದರೂ ಬೇಕು. ಇದರಲ್ಲಿ ವಿಶೇಷ ತಜ್ಞತೆಯನ್ನು ಹೊಂದಿರುವ ಇಲ್ಲಿನ ಜನ ವಾರಕ್ಕೆ 2-3 ಕಂಬಳಿಗಳನ್ನು ತಯಾರು ಮಾಡುತ್ತಾರೆ. ಒಂದು ಕಂಬಳಿ 800-1000 ರೂಪಾಯಿಗಳವರೆಗೆ ಮಾರಾಟವಾಗುತ್ತದೆ. ಕುರಿಯಿಂದ ತುಪ್ಪಳವನ್ನು ತಂದು ಯಂತ್ರಕ್ಕೆ ಕೊಟ್ಟು ಬಿಡಿ-ಬಿಡಿಯಾಗಿ ಹತ್ತಿಯನ್ನು ಸ್ವಚ್ಛಗೊಳಿಸುವಂತೆ ಸ್ವಚ್ಛಗೊಳಿಸಿ, ಚರಕದಿಂದ ನೂಲನ್ನು ತೆಗೆದು ಅದಕ್ಕೆ ಹುಣಸೆ ಬೀಜದ ಪುಡಿಯಿಂದ ತಯಾರಿಸಿದ ಗಂಜಿಯನ್ನು ಹಂಚಿ ಹದಗೊಳಿಸುತ್ತಾರೆ. ನಂತರ ಅದನ್ನು ಬಾಚಣಿಕೆಯಂತಹ ಸಾಧನದಿಂದ ಬಾಚಿ ನೂಲನ್ನು ನೇಯಲು ತಯಾರಿಟ್ಟುಕೊಳ್ಳುತ್ತಾರೆ. 9 ಕಂಬಿಗಳ ಒಂದು ಮರದ ಪಟ್ಟಿಯಲ್ಲಿ ಈ ನೂಲನ್ನು ಎಣಿಸಿಕೊಂಡು ಹಾಕುತ್ತಾರೆ. ಈ ಪ್ರಕ್ರಿಯೆಯಂತೂ ಎಂತಹವರನ್ನೂ ಆಶ್ಚರ್ಯಗೊಳಿಸುತ್ತದೆ. ಎಂತಹ ಅದ್ಭುತ ಕೈಚಳಕ!! ಒಂದು ಕಂಬಳಿಗೆ 380 ರಿಂದ 400 ಎಳೆಗಳು ಬೇಕಾಗುತ್ತವೆ. ಒಂದು ಕಡ್ಡಿಗೆ ಆ ದಾರವನ್ನು ವಿಶೇಷ ವಿಧಾನದಲ್ಲಿ ಸುತ್ತಿ ಇಟ್ಟುಕೊಳ್ಳುತ್ತಾರೆ. ಸೀರೆ ನೇಯುವಂತೆ ಕೈಮಗ್ಗದ ಮಾದರಿಯಲ್ಲಿ ತಮ್ಮದೇ ಸಾಧನಗಳಿಂದ ಹೆಣಿಗೆಯನ್ನು ಆರಂಭಿಸುತ್ತಾರೆ. ಹೆಣೆಯುತ್ತಾ ಹೋದಂತೆ ಅದು ಒಂದು ದೊಡ್ಡ ಮರದ ದಿಮ್ಮಿಗೆ ಸುತ್ತಿಕೊಳ್ಳುತ್ತಾ ಹೋಗುತ್ತದೆ. ಬೆಳಗಿನಿಂದ ಒಂದು ಹಳ್ಳದಂತಹ ತಗ್ಗುಪ್ರದೇಶದಲ್ಲಿ ನಿಂತು ಮನೆಯ ಯಜಮಾನ ಈ ಕಂಬಳಿಯನ್ನು ನೇಯುತ್ತಾ ಹೋಗುತ್ತಾನೆ. ಹೆಂಡತಿ ಚರಕದಿಂದ ನೂಲು ತೆಗೆಯುತ್ತಾಳೆ, ಮಕ್ಕಳು ಗಂಜಿ ಹಚ್ಚಿ ಚೊಕ್ಕ ಮಾಡುತ್ತಾರೆ. ಹೀಗೆ ಮನೆಮಂದಿ ಎಲ್ಲಾ ಒಂದೊಂದು ಕೆಲಸವನ್ನು ಮಾಡುತ್ತಾರೆ. ಅಲ್ಲದೆ ಒಂದೊಂದು ಸಾಧನದ ತಯಾರಿ ಒಂದೊಂದು ಜನರ ಗುಂಪು ಮಾಡುತ್ತದೆ. ಆದ್ದರಿಂದ ಎಲ್ಲರಿಗೂ ಇಲ್ಲಿ ಉದ್ಯೋಗವಿದೆ. ಒಂದು ಕಂಬಳಿ ತಯಾರಿಕೆಯು ಹಲವು ಹಂತಗಳಲ್ಲಿ ಎಷ್ಟೋ ಜನರಿಗೆ ಕೆಲಸ ನೀಡುತ್ತದೆ. ಆದರೆ ಈಗ ಇದಾವುದರ ಪರಿವೆಯೇ ಇಲ್ಲದೆ ಸರಕಾರ ಕಾವಲ್‌ಅನ್ನು ಶಾಶ್ವತವಾಗಿ ಮುಚ್ಚಿಬಿಡುವ ಯೋಚನೆಯಲ್ಲಿದೆ. ಮುಂದೆ… ಮಕ್ಕಳು ಈ ಪರಿಸರವನ್ನು ಬಹಳ ಕುತೂಹಲದಿಂದ ಗಮನಿಸಿದರು. ಕೋಳಿಗಳನ್ನು, ಕೋಳಿಯ ಮರಿಗಳನ್ನು ನೋಡಿ ಪ್ರಶ್ನಿಸಿದರು. ಒಂದು ಕೋಳಿಮೊಟ್ಟೆಯಿಂದ ಮರಿ ಹೊರ ಬರಲು 1 ತಿಂಗಳು ಕಾವು ಕೊಡಬೇಕು. ದೊಡ್ಡದಾಗಿ ಬೆಳೆಯಲು ಯಾವ ಖಾಯಿಲೆಯೂ ಬರದಿದ್ದರೆ 6-7 ತಿಂಗಳು ಬೇಕು. ಇವು 1.5-2 ವರ್ಷ ಬದುಕಿರುತ್ತವೆ ಎಂಬ ವಿಷಯವನ್ನು ಅರಿತರು. ಮೇಕೆ ಮರಿಗಳಿಗೆ ಹುಲ್ಲು ತಿನ್ನಿಸಿ ಖುಷಿಪಟ್ಟರು. ಅಲ್ಲಿಂದ ಮುಂದೆ ಊರಿನ ಸರಕಾರಿ ಶಾಲೆಯ ಆವರಣದಲ್ಲಿ ಹಿರಿಯರ ಮಾತುಗಳನ್ನು ಕೇಳಲು ಶಿಸ್ತಿನಿಂದ ಕೂತರು. ಪಂಚಾಯತಿ ಸದಸ್ಯರು ಮಕ್ಕಳನ್ನು ಕುರಿತು ಆಡಿದ ಮಾತುಗಳು ನಮ್ಮ ಪ್ರಾಂಶುಪಾಲರು ಪೂರ್ಣಪ್ರಮತಿಯ ಪರಿಚಯವನ್ನು ಚಳ್ಳಕೆರೆಯ ಜನರಿಗೆ ಮಾಡಿಕೊಟ್ಟರು. ಅಲ್ಲಿನ ಶಾಲೆಯ ಉಮೇಶ್ ಎಂಬುವರು ‘ಭಾರತೀಯ ಸೈನಿಕರೆ ವಂದನೆ’ ಎಂಬ ಹಾಡನ್ನು ಹಾಡಿದರು.   ಕರಿಯಣ್ಣ ಅವರು ಮಾತನ್ನಾರಂಭಿಸುತ್ತಾ….. “ಗಾಂಧಿ ಜಯಂತಿಯ ದಿನ ನಿಮ್ಮನ್ನೆಲ್ಲ ಇಲ್ಲಿ ಕರೆದುಕೊಂಡು ಬಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಹಳ್ಳಿ ಇದ್ದರೆ ಡೆಲ್ಲಿ. ಪಟ್ಟಣದಲ್ಲಿ ಏನೇ ಸಿಕ್ಕರೂ ಆಹಾರ ಮಾತ್ರ ಇಂಟರ್‌ನೆಟ್ ನಲ್ಲಿ ಬರುವುದಿಲ್ಲ.

Sananda swamiji's 100th day of upavasa for Ganga

Sananda swamiji’s 100th day of upavasa for Ganga

Sunday, September 22nd, 2013

A day to be noted in history After receiving the last year’s Samman, Swamiji left on us a deep impression of Ganga consciousness. We have also been deeply attached to Swamiji and every time we herd of his thought of giving up food for the sake of Ganga mata, our hearts were filled with anxiety. Our anxiety inflated when he started his endless AnashanVrata(fast to death) for the cause of Ganga mata’s health on the 13th of June. We have been feeling helpless to support him directly in any way. Some of our team members tried out ways to help him but nothing did work. In this situation we have relied on his own belief which says ” In our tradition, when everything fails and we become weak Tapasya and Prarthana are the only ways relied after.”  We have been praying for the health of Ganga mata and swamiji as a strict daily routine since the days he left Bangalore and more intensely from 13th June. Our fear of swamiji’s illhealth kept on increasing as the number of swamiji’s Anashan days kept on incrementing on the school’s pin board. All these days, we were soothing our anxiety with the childish hope of Swamiji’s recovery. But today the pin board shows 100 and swamiji has decided to give up water too. A slight thought of the 83 year old swamji’s condition irks us and fills us with shame. We are visionless. Staying quiet would be our double shame.  We had an assembly of teachers, team members and children of purnapramati on 21st September. Sri Radhakrishna Bhadti, Sri Lingaraju, Sri D K Sharma, SriNagesh Hegde and Sri Satyanarayanacharya joined us. Poojya pejavara Swamiji, Sri Rajendra Singh and Sri Prahladacharya joined us over the phone. After our daily prayer and ganga prarthana, Sri Rajendra Singh spoke to the children over the phone. He said “Today is the 100th day of Swamiji’s Anashan. But the government just does not care . When the prime minister is not ready to listen to a true tapasvi, I have felt that there is no use in working with him. So I have decided to resign from my post as a member of Ganga basin authority today. ” Sri pejavara swamiji expressed his support to Swamiji and gave the praman vachan “GANGA RAKSHA ME ADYA DEEKSHA”  which means  ” Right at this moment, I take the oath of protection of Ganga”.  After the oath, over the phone, Sri prahladacharya said “Ganga has been the anchor of the Indian tradition. It is believed that Bhagiratha brought Ganga mata with monumental effort. Swamiji is under serious tapasya to preserve the existence of such a river for the future generation.His sacrifice must become an inspiration for us and it will not go waste .”  On behalf of Purnapramati, Srinidhi reported the principles followed by Purnapramati as a step of nature conservation. ” On the 37th day of Swamiji’s tapasya,  when we met him along with Pejavara Swamiji and Sri Prahladacharya, he said that the flow of Gangaji is not just the result of Bhagiratha’s effort. It was the result of the tapsya of two generations prior to Bhagirath. So I do not desire for the immediate fruit of my tapasya. I foresee that the future generation will work for Gangaji. I believe that Purnapramati’s children will make the change.” he said.  Inspired by swamiji, we have determined on three ways to contribute to the conservation of nature. Adhyayan, Adhyapan and Tapasya. Our Adhyayana involves gathering the maximum possible information about water, forests and all that we buy or consume; where did the item come from? In what way was it manufactured?, etc Adyapana is the propagation of the knowledge gained through Adhyayan to the society thereby creating an awareness in the society and Tapasya involves the implementation of the knowledge gained in our daily life. ”  For example, we have stopped presenting mementoes to the guests who visit us and we just thank them with heartfelt regards.” He said.  Sharma ji said “I have moved closely with swamiji from past many years. I am inspired by his commitment and style of working. Every activity he has taken up in his life has become complete. But unfortunately he has quit the institutions one after the other where he served. This shows that nowhere in our country there is place for the good. But he never gave up his vision. He has been inspiring and guiding a lot of persons to work for the mother nature. In this kaliyug we cannot expect god incarnating as Ram or Krishna. These are the people in whom we have to see God.” ” Freedom is not a word exclusive to a country. Plants, rivers, waves, flowers, everything has to have its freedom. A river’s freedom is the freedom to flow. Swamiji is under penance for the sake of it. Let us all wish for the fulfilment of his desire” Sri Nagesh Hegde said. Addressing children, Sri Radhakrishna Bhadti said ” According to Darwin’s theory, Monkeys lost their tails and became humans because they did not use them. Similarly if we block the rivers with a huge amount of dams as we are doing now, there will be one day when the word river becomes meaningless. A river means something that roars.”  Sri Lingaraju congratulated Purnapramati saying ” Last year around this time you visited Shivaganga and cleaned  kalyanis and planted trees. The trees have grown up now and the kalyanis are full of water. Youths have been visiting the place, picking out the silt from many lakes since the time you began the trend. Congrats, you set the trend. ” We have an instance of the similar situation in the Puranas, which says that the flow of Ganga was once cut. Jahnu rishi won over the support of the devatas through severe tapasya and brought the mother back. Ganga is thus called Jahnavi. For sure, the tapasya of Swamiji will be fruitful.” Sri Satyanarayanacharya said.

ಅಧ್ಯಯನಕ್ಕೊಂದು ದಾರಿದೀಪ...ಹಯಗ್ರೀವ ಜಯಂತಿಯಂದು

ಅಧ್ಯಯನಕ್ಕೊಂದು ದಾರಿದೀಪ…ಹಯಗ್ರೀವ ಜಯಂತಿಯಂದು

Tuesday, August 27th, 2013

ಸಾಧನೆಗಾಗಿ ಕಿವಿಮಾತು, ಸಾಧಕರಿಂದ ಹೀಗಿತ್ತು, ಸಾಗುವ ಹಾದಿ ತೆರೆದು ಸುರಿದ ಸೋನೆಮುತ್ತು ಸಾರ್ಥಕ ‘ಹಯಗ್ರೀವ ಜಯಂತಿಯ’ ದಿನವದಾಗಿತ್ತು….. ಶ್ರಾವಣ ಮಾಸದ ಪ್ರಥಮ ಹುಣ್ಣಿಮೆಯಂದು (21ನೇ ಆಗಸ್ಟ್ 2013) ಹಯಗ್ರೀಯ ಜಯಂತಿಯ (ಜ್ಞಾನದ ದಿನ) ಆಚರಣೆ ನಮ್ಮ ಶಾಲೆಯಲ್ಲಿನಡೆಯಿತು. ಭಗವಂತ ಹಯಗ್ರೀವ ರೂಪದಿಂದ ಬ್ರಹ್ಮ ದೇವರಿಗೆ ಜ್ಞಾನೋಪದೇಶ ಮಾಡಿದ ದಿನ ಇದಾಗಿದೆ. ಶ್ರದ್ಧೆಯಿಂದ ಜ್ಞಾನಕ್ಕಾಗಿ ಬೇಡುವುದು ಈ ದಿನದ ಮಹತ್ವದ ಕಾರ್ಯಕ್ರಮವಾಗಿತ್ತು. ವಿದ್ಯಾಪೀಠದ ಹಿರಿಯ ವಿದ್ವಾಂಸರೂ ನಮ್ಮ ಶಾಲೆಯ ಹಿರಿಯ ಮಾರ್ಗದರ್ಶಕರೂ ಆದ ಶ್ರೀ ಸತ್ಯನಾರಾಯಣಾಚಾರ್ಯರು ಮತ್ತು ಹಿರಿಯ ವಿದ್ವಾಂಸರೂ ಸ್ವಾತಂತ್ರ ಹೋರಾಟಗಾರರೂ ಆದ ಶ್ರೀ ಸುಧಾಕರ ಚತುರ್ವೇದಿ ಅವರು ನಮಗೆ ಮಾರ್ಗದರ್ಶನ ಮಾಡಲು ಆಗಮಿಸಿದ್ದುದು ನಮ್ಮ ಸುಕೃತವೇ ಸರಿ. ಔಪಚಾರಿಕ ಸ್ವಾಗತ ಭಾಷಣ, ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೆ ಅಧ್ಯಯನವನ್ನು ಪ್ರಖರಗೊಳಿಸುವ ನಿಟ್ಟಿನಲ್ಲಿ ಎಲ್ಲರ ಗಮನವೂ ನೆಟ್ಟಿತ್ತು. ಸಮಯ ಪಾಲಕರಾದ ಸತ್ಯನಾರಾಯಣಾಚಾರ್ಯರು 8.30ಕ್ಕೆ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರನೆಯ ತರಗತಿಯ ವಿದ್ಯಾರ್ಥಿ ವಿಷ್ಣು ಪುಟ್ಟ ಆಚಾರ್ಯರಿಗೆ ಸ್ವಾಗತ ಕೋರಿದ. ಆಚಾರ್ಯರ ಮಾತುಗಳು, ಮಕ್ಕಳಿಂದ ಪ್ರಶ್ನೆ, ಆಚಾರ್ಯರಿಂದ ಸೂಕ್ತ ಉತ್ತರಗಳು ಇಂದಿನ ಕಾರ್ಯಕ್ರಮ. ಮುಂದಿನ ಸಂದೇಶ ಆಚಾರ್ಯರ ಮಾತುಗಳಲ್ಲೇ ಕೇಳಿ… ಗ್ರೀವ ಎಂದರೆ ಕಂಠ, ಹಯ ಎಂದರೆ ಕುದುರೆ. ಗ್ರೀವ ಎಂದರೆ ತಲೆ ಎಂಬ ಅರ್ಥವೂ ಇದೆ. ಹಯ-ಗತೌ ಎಂಬುದು ಧಾತು ಪಾಠ. ಹಯ ಎಂದರೆ ಜ್ಞಾನ ಎಂದು ಅರ್ಥ. ಕುದುರೆ ಬಹಳ ಬೇಗ ಹೋಗುವುದರಿಂದ ಹಯ ಎಂದು ಹೆಸರು. ಆಶು ವಾತಿ ಇತಿ ಅಶ್ವ. ಶೀಘ್ರವಾಗಿ ಹೋಗುವುದರಿಂದ ಹಯ ಎಂಬ ಹೆಸರು ಬಂದಿದೆ. ನಮ್ಮ ತಲೆಯೂ ಶೀಘ್ರವಾಗಿ ಓಡುತ್ತಿದ್ದರೆ ಹಯಗ್ರೀವ ಎಂದು ಹೆಸರು. ನಮ್ಮದು ಜ್ಞಾನದ ತಲೆ ಆಗಬೇಕು. ಅದಕ್ಕಾಗಿ ಈ ಹಯಗ್ರೀವ ಜಯಂತಿಯ ಆಚರಣೆ. ಅಧ್ಯಯನದಲ್ಲಿ ಶಿಸ್ತು ಬರಬೇಕಾದರೆ ಏನು ಬೇಕು? ಪಾಠ ಹೇಳುವವರು ಪಾಠ ಹೇಳಿದರೆ ಅವರು ಬುದ್ಧಿವಂತರಾಗುತ್ತಾ ಹೋಗುತ್ತಾರೆ ಮತ್ತು ಕೇಳುವವರು ಕೇಳುವ ಹಾಗೆ ಕೇಳಿದರೆ, ಚೆನ್ನಾಗಿ ಅಧ್ಯಯನ ಮಾಡಿದರೆ ಅವರಂತೆ ಬುದ್ಧಿವಂತರಾಗುತ್ತಾರೆ. ಆದರೆ ಕೆಲವರಿಗೆ ಪಾಠ ಹೇಳುವವರು ಚೆನ್ನಾಗಿ ಹೇಳಿದರೂ ತಲೆಯ ಒಳಗೆ ಹೋಗುವುದಿಲ್ಲ. ನಾಲ್ಕು ಕಾರಣಗಳನ್ನು ಹೇಳುತ್ತೇನೆ ನಿಮಗೆ. ಪಾಠ ಅರ್ಥವಾಗದಿರಲು ಮೂಲ ಕಾರಣ ವಿದಾರ್ಥಿಗಳ ಗಮನ ಬೇರೆಡೆ ಇರುವುದು. ಅಂದರೆ ಅನ್ಯಾಸಕ್ತಿ. ತಲೆ ಎಲ್ಲರಿಗೂ ಇರುತ್ತದೆ, ಬುದ್ಧಿಯೂ ಇರುತ್ತದೆ, ಬುದ್ಧಿಯನ್ನು ಬೇಕಾದ ಕಡೆ ಬಿಟ್ಟು ಬೇರೆ ಎಲ್ಲೆಲ್ಲೋ ಉಪಯೋಗಿಸುವುದು ಮೊದಲ ಕಾರಣ. ಎರಡನೆಯ ಕಾರಣ ಅನಾಸಕ್ತಿ. ತಪ್ಪುತಪ್ಪಾಗಿ ಹೇಳಿದರೂ ಲೆಕ್ಕ ಪಾಠ ಇಷ್ಟ, ಆದರೆ ಸಂಸ್ಕೃತ ರಗಳೆ. ಪುಲ್ಲಿಂಗಕ್ಕೆ ಭವಾನ್, ಸ್ತ್ರೀಲಿಂಗಕ್ಕೆ ಭವತೀ, ನಪುಂಸಕ ಲಿಂಗ ಬಂದರೆ ಭವತ್. ಒಟ್ಟು ಅರ್ಥವಾಗುವುದಿಲ್ಲ. ಇಷ್ಟವಾಗುವುದಿಲ್ಲ ಎಂದು ಮನಸ್ಸಿನಲ್ಲಿ ಇದ್ದರೆ ವಿಷಯ ಅರ್ಥವಾಗುವುದೇ ಇಲ್ಲ. ಸಂಸ್ಕೃತ ಇಷ್ಟವಾದವನಿಗೆ ಸಮಾಜಶಾಸ್ತ್ರವೆಂದರೆ ತಲೆಗೆ ಹೋಗುವುದಿಲ್ಲ. ಬೇಡದನ್ನೆಲ್ಲ ಹೇಳಿಕೊಡುತ್ತಾರೆ ಎಂದು ತಲೆ ಕೆರೆಯುತ್ತಾನೆ ಅವನು. ಒಂದು ಕಡೆ ಆಸಕ್ತಿ, ಒಂದು ಕಡೆ ಅನಾಸಕ್ತಿ ಇದ್ದರೆ ವಿಷಯ ತಲೆಯ ಒಳಗೆ ಹೋಗುವುದಿಲ್ಲ. ಅನ್ಯಾಸಕ್ತಿ ಇಲ್ಲದಿದ್ದರೂ ಆಸಕ್ತಿ ಇಲ್ಲದಿದ್ದರೆ ಹೇಳಿದ್ದು ತಿಳಿಯುವುದಿಲ್ಲ. ಹಾಡುವಾಗ ಹಾಡಿನಲ್ಲಿ, ಊಟಮಾಡುವಾಗ ಊಟದಲ್ಲಿ, ಆಟವಾಡುವಾಗ ಆಟದಲ್ಲಿ, ಓದುವಾಗ ಓದಿನಲ್ಲಿ, ಟಿ.ವಿ. ನೋಡುವಾಗ ಟಿ.ವಿ.ಯಲ್ಲಿ ಆಸಕ್ತಿ ಇಲ್ಲದಿದ್ದರೆ ಆ ವಿಷಯ ಅರ್ಥವಾಗುವುದೇ ಇಲ್ಲ. ಇನ್ನೊಂದು ಕಾರಣ ಇದೆ. ನನಗೆ ಇವರೇನು ಪಾಠ ಹೇಳುವುದು? ಇವರಿಗೇನು ಗೊತ್ತು? ಇಂಟರ್‌ನೆಟ್ ನೋಡಿ ನಾನು ಎಷ್ಟೆಲ್ಲ ಕಲಿತಿದ್ದೇನೆ ಇವರಿಗೆ ಅದೆಲ್ಲ ಗೊತ್ತಿದೆಯಾ? ಎಂದುಕೊಳ್ಳುವುದು. ಇದಕ್ಕೆ ಅಗೌರವ ಎಂದು ಹೆಸರು. ಗುರುಗಳ ಮೇಲೆ ಗೌರವ ಇಲ್ಲದಿರುವುದು. ಅವರೇನು ನನಗೆ ಪಾಠ ಹೇಳುವುದು ನಾನು ಅವನಿಗೆ ಹೇಳಬಹುದು. ಹೇಳುವವರನ್ನು ಗೌರವಿಸದಿರುವುದು, ಉದಾಸೀನ ಮಾಡುವುದು ಅಗೌರವ. ಅದಕ್ಕಾಗಿ ಹಿಂದಿನ ಕಾಲದಲ್ಲಿ ಹಿರಿಯರು ಮನೆಗೆ ಬಂದಾಗ ಕಾಲಿಗೆ ನಮಸ್ಕಾರ ಮಾಡುವುದು, ಶಾಲೆಯಲ್ಲಿ ಅಭಿವಾದಯೇ ಎಂದು ಗೌರವಿಸುವುದು. ಇದೆಲ್ಲಾ ನಮ್ಮ ಮನಸ್ಸಿಗೆ ಬರಬೇಕು. ಅವರು ಚೆನ್ನಾಗಿ ಓದಿಕೊಂಡಿದ್ದಾರೆ ನಾನು ಅವರಂತೆ ಆಗಲು ಕಲಿಯುತ್ತಿರುವವನು ಎಂಬ ಭಾವ ಮನಸ್ಸಿಗೆ ಬರಬೇಕು. ಅದಕ್ಕೆ ಅಧ್ಯಾಪಕರಲ್ಲಿ ಗೌರವ ಬೆಳೆಸಿಕೊಳ್ಳಬೇಕು. ಮತ್ತೊಂದು ಕಾರಣ ನಾನು ಎಂಬ ಅಹಂಕಾರ. ನನ್ನ ಮುಂದೆ ರಾವಣನೂ ಲೆಕ್ಕವಿಲ್ಲ. ಶಕುನಿಯ ತಲೆಯನ್ನು ಮೀರಿಸಬಲ್ಲ ತಲೆ ಇದೆ ಎಂಬ ಭಾವ. ಅಗೌರವದಲ್ಲಿದ್ದುದು ಗುರುಗಳ ಬಗ್ಗೆ ಅನಾದರ, ಈಗ ತನ್ನ ಬಗ್ಗೆ ಅಹಂಕಾರ. ಅಂತಹ ಪಂಡಿತರ ಮಗ, ಮೊಮ್ಮಗ ನಾನು. ನನಗೆ ಇವರೇನು ಪಾಠ ಹೇಳುವುದು ಎಂಬ ಮನೋಭಾವ. ಇಂತಹವರಿಗೆ ಪಂಡಿತ ಪುತ್ರ ಎಂದು ಹೆಸರು. ಅಂದರೆ ದಡ್ಡಂಭಟ್ಟ ಎಂದು ಅರ್ಥ. ತಾನು ಕಲಿತದ್ದೇನು ಇಲ್ಲ. ತನ್ನ ಅಪ್ಪ, ಅಜ್ಜ ಇಂತಹ ಪಂಡಿತರೆಂದು ಹೇಳಿಕೊಳ್ಳುವುದೇ ದೊಡ್ಡಸ್ತಿಕೆ. ಮತ್ತು ಕೆಲವರಿಗೆ ಧನಮದ, ರೂಪಮದ, ಜ್ಞಾತಿಮದ ಇರುತ್ತದೆ. ಈ ಅಹಂಕಾರಗಳೆಲ್ಲ ವಿದ್ಯಾರ್ಥಿಗಳಿಗೆ ಇದ್ದರೆ ಓದು ತಲೆಗೆ ಹತ್ತುವುದಿಲ್ಲ. ಒಂದು ಪಾತ್ರೆಯಲ್ಲಿ ತುಂಬ ನೀರಿದ್ದು ಮತ್ತೆ ಹಾಕಲು ಹೋದರೆ ಚೆಲ್ಲಬಹುದಷ್ಟೆ. ಅಹಂಕಾರ ತಲೆಯೊಳಗಿದ್ದರೆ ವಿದ್ಯೆ ಒಳಗೆ ಹೋಗುವುದೇ ಇಲ್ಲ. ಹೊರಗೆ ಚೆಲ್ಲಬಹುದು. ಓದಲು ಬಗ್ಗಿ ಕೇಳುವ, ಬಾಗುವ ಗುರುಗಳಿಗೆ ಒಪ್ಪಿಸಿಕೊಳ್ಳುವ ಭಾವ ಬೇಕು. ಗುರುಗಳು ಚೆನ್ನಾಗಿ ಓದಿಕೊಂಡವರು. ನಾನು ಕಲಿಯಲು ಬಂದಿರುವವ ಎಂಬ ವಿನಯ ಇರಬೇಕು. ವಿಧೇಯತೆ ಬೆಳಸಿಕೊಳ್ಳಬೇಕು. ಅಸಾಮರ್ಥ್ಯ ಎಂದು ಮಗದೊಂದು ಕಾರಣ ಶಿಕ್ಷಣತಜ್ಞರು ಹೇಳುತ್ತಾರೆ. ಕೆಲವರಿಗೆ ಅನಾಸಕ್ತಿ, ಅನ್ಯಾಸಕ್ತಿ, ಅಗೌರವ, ಅಹಂಕಾರ ಯಾವುದೂ ಇಲ್ಲದಿದ್ದರೂ ಸಾಮರ್ಥ್ಯವೇ ಇರುವುದಿಲ್ಲ. ಆದರೆ ಇದಕ್ಕೆ ಚರಕ ಎಂಬ ಆಯುವೇದಕ್ಕೆ ಸಂಬಂಧಪಟ್ಟ ಋಷಿ ಕೆಲವು ಉಪಾಯಗಳನ್ನೂ ಹೇಳುತ್ತಾರೆ. ಒಂದೆಲಗ (ಬ್ರಾಹ್ಮಿ) ತಿನ್ನಲು, ಪ್ರಾಣಾಯಾಮ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಬೇಕೆಂಬ ಮಾರ್ಗ ಹೇಳುತ್ತಾರೆ. ಬೇರೆ ಶಾಲೆಗಳಲ್ಲಿ ಸಿಗದ ದೇವರನ್ನು ಪ್ರಾರ್ಥಿಸುವ ಮಂತ್ರಗಳು, ಶ್ಲೋಕಗಳು ಸಿಗುತ್ತವೆ ಪೂರ್ಣಪ್ರಮತಿಯಲ್ಲಿ ಸಿಗುತ್ತವೆ. ಅದೊಂದು ಲಾಭವೇ ಸರಿ. ಚರಕ-ಸುಶ್ರುತ ಋಷಿಗಳು ಬೆಳಗ್ಗೆ ಸೂರ್ಯೋದಯಕ್ಕೂ ಮೊದಲು ಎದ್ದು ಓದಬೇಕು ಎಂದು ಹೇಳುತ್ತಾರೆ. ಸೂರ್ಯ ಉದಯಿಸುವ ಒಂದೂ ಕಾಲು ಗಂಟೆ ಪೂರ್ವ ಕೆಂಪಾಗುವುದು. ಅದಕ್ಕೆ ಅರುಣೋದಯ ಎಂದು ಹೆಸರು. ಈ ಕಾಲದಲ್ಲಿ ಒಂದು ವಿಶಿಷ್ಟ ವಾತಾವರಣದ ಶಕ್ತಿ, ಕಂಪನ ಇರುತ್ತದೆ. ಇದನ್ನು ದೈವೀಶಕ್ತಿ ಎನ್ನುತ್ತಾರೆ. ಇದನ್ನು ಪ್ರಾಣಿಗಳೂ ಅರ್ಥಮಾಡಿಕೊಳ್ಳುತ್ತವೆ. ಹಸು, ಪಕ್ಷಿಗಳೂ ಎಚ್ಚೆತ್ತು ಖುಷಿಪಡುತ್ತಿರುತ್ತವೆ. ಹಿಂದೆ ಸಂಕಲ್ಪ ಮಾಡಿದ್ದು ನೆನಪಿದೆಯೇ, ಎಷ್ಟು ಜನ ಪಾಲಿಸುತ್ತಿದ್ದೀರಿ? ಅಂದು ಸಂಕಲ್ಪ ಮಾಡಿದವರಿಗೆ ಅದನ್ನು ನಡೆಸುವ ಜವಾಬ್ದಾರಿ ಇರುತ್ತದೆ. ಒಂದು ವೇಳೆ ಪಾಲಿಸಲು ಆಗದಿದ್ದರೆ ಪ್ರಾಯಶ್ಚಿತ್ತ ಎಂದು ಮಾಡಬೇಕು. ಎದ್ದ ನಂತರ ಹಲ್ಲು ತೊಳೆದು ಗೀತೆಯ ಒಂದು ಅಧ್ಯಾಯವನ್ನು ಪಾರಾಯಣ ಮಾಡುವುದು. ಹಾಗೆಂದು ನಿತ್ಯ ತಡವಾಗಿ ಏಳುವುದು ಗೀತೆ ಪಾರಾಯಣ ಮಾಡುವುದಲ್ಲ. ಪ್ರಾಯಶ್ಚಿತ್ತ ಇದೆ ಎಂದು ತಪ್ಪುಮಾಡುವುದಲ್ಲ. ಅನಿವಾರ್ಯವಾಗಿ ತಪ್ಪಾದಾಗ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು. ಪೂರ್ಣಪ್ರಮತಿಯ ಮಕ್ಕಳೆಂದರೆ ಬೆಳಗ್ಗೆ 6 ಗಂಟೆಯ ನಂತರ ಮಲಗುವುದೇ ಇಲ್ಲ ಎಂದು ಊರಿನವರೆಲ್ಲ ಮಾತನಾಡಿಕೊಳ್ಳುವಂತಾಗಲಿ. ನಾವೆಲ್ಲರೂ ಸೂರ್ಯೋದಯಕ್ಕಿಂತ ಮುಂಚೆ ನಿಶ್ಚಯವಾಗಿಯೂ ಎದ್ದು, ಹಲ್ಲು ತೊಳೆದು ಅಧ್ಯಯನ ಮಾಡುತ್ತೇವೆ ಎಂಬುದು ಸಂಕಲ್ಪವಾಗಲಿ. ಈ ದಿನ ಹಿಂದಿನ ಸಂಕಲ್ಪವನ್ನೇ ಮತ್ತಷ್ಟು ಗಟ್ಟಿಮಾಡಿಕೊಳ್ಳಿ. ಪಾಠ ಸರಿಯಾಗಿ ಅರ್ಥವಾಗುವ ಕಾರಣ ಆಸಕ್ತಿ, ಹೇಳಿದ ವಿಷಯದಲ್ಲೇ ಆಸಕ್ತಿ, ಗುರುಗಳಲ್ಲಿ ಗೌರವ ಎಂಬುದು ಇಂದಿನ ಪಾಠದಿಂದ ತಿಳಿಯಿತು. ಆಚಾರ್ಯರಿಂದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ಪ್ರಶ್ನೆ: ಅನ್ಯಾಸಕ್ತಿ, ಅನಾಸಕ್ತಿ, ಅಗೌರವ, ಅಹಂಕಾರಗಳಲ್ಲಿ ಯಾವುದೇ ಒಂದು ಇದ್ದರೂ ಯಾವ ವಿದ್ಯೆಯೂ ಬರುವುದಿಲ್ಲವೇ ? (ಅನಂತ ಕೃಷ್ಣ, ಮೂರನೆಯ ತರಗತಿ) ಉತ್ತರ: ವಸ್ತುತಃ ಸ್ವಲ್ಪ ವಿದ್ಯೆ ಬರಬಹುದು. ಅನ್ಯಾಸಕ್ತಿ ಇಲ್ಲ, ಅಹಂಕಾರ ಇಲ್ಲ. ಆದರೆ ಗೌರವ ಇಲ್ಲದಿದ್ದರೆ ಆಸಕ್ತಿ ಬರುವುದೇ ಇಲ್ಲ. ಗುರುಗಳ ಮೇಲೆ ಗೌರವ ಇಲ್ಲದಿದ್ದರೆ ಆಸಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ. ಈ ನಾಲ್ಕು ಒಂದಕ್ಕೊಂದು ಸಂಬಂಧ ಹೊಂದಿದೆ. ನಮಗೆ ಯಾವುದಾದರೂ ವಿಷಯದಲ್ಲಿ ಆಸಕ್ತಿ ಹೇಗೆ ಬರುತ್ತದೆ?! ಅದರ ಪ್ರಯೋಜನ ತಿಳಿದು ಅದರ ಬಗ್ಗೆ ಆಸಕ್ತಿ ಬರುತ್ತದೆ. ಬಾಲ್ಯದಲ್ಲಿ ಯಾವುದು ಪ್ರಯೋಜನ ಎಂಬುದು ವಿದ್ಯಾರ್ಥಿಗಳಿಗೆ ತಿಳಿದಿರುವುದಿಲ್ಲ. ಗುರುಗಳಿಗೆ ಹೇಳಿಕೊಡುವ ವಿಷಯ ಹೇಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದು ತಿಳಿದಿರುತ್ತದೆ. ಅವರು ತಮ್ಮ ಇಚ್ಛೆಯಿಂದ ಹೇಳಿಕೊಡುತ್ತಾರೆ. ಗುರುಗಳ ಬಗ್ಗೆ ಗೌರವದಿಂದ ಕಲಿಯದಿದ್ದರೆ ಆಸಕ್ತಿ ಬರುವುದೆ ಇಲ್ಲ. ಅದರಿಂದ ಸಿಗಬೇಕಾದ ಪೂರ್ಣಫಲವು ಸಿಗುವುದೂ ಇಲ್ಲ. ವಿಧೇಯತೆ ಇದ್ದರೆ ಕಲಿತ ವಿದ್ಯೆ ದೊಡ್ಡ ಫಲವನ್ನು ಕೊಡುತ್ತದೆ.  For more photos click here ಪ್ರಶ್ನೆ: ನಾಲ್ಕೂ ಕಾರಣಗಳೂ ಒಂದಕ್ಕೊಂದು ಹೇಗೆ ಸಂಬಂಧ ಹೊಂದಿದೆ? (ಪುರುಜಿತ್, ಮೂರನೆಯ ತರಗತಿ) ಉತ್ತರ: ಒಂದಕ್ಕೊಂದು ಅವುಗಳ ಕಾರ್ಯಕಾರಣಭಾವವನ್ನು ಕೇಳುತ್ತಿದ್ದಾನೆ ಪುರುಜಿತ್. ಅನಾಸಕ್ತಿಯಿಂದ ಮನಸ್ಸು ಬೇರೆಡೆಗೆ ಹೋಗುತ್ತದೆ, ಅದರಿಂದ ಅನ್ಯಾಸಕ್ತಿ ಬರುತ್ತದೆ, ಮುಂದೆ ಗುರುಗಳಿಗೆ ಕೀಟಲೆ ಮಾಡಬೇಕು ಅನಿಸುತ್ತದೆ. ಏಕೆಂದರೆ ಗುರುಗಳು ಸದಾ ಬೈಯುತ್ತಾರೆ, ಗಮನ ಎಲ್ಲೋ ಇರುತ್ತದೆ ಎಂದು. ಗುರುಗಳ ಬಗ್ಗೆ ಗೌರವ ಹೋಗುತ್ತದೆ. ಮುಂದೆ ಹೇಗಾದರೂ ಎಲ್ಲರ ಗಮನದಲ್ಲೂ ತಾನು ದೊಡ್ಡವನಾಗಬೇಕೆಂಬ ಅಹಂಕಾರ ಬೆಳೆಯುತ್ತದೆ. ಪ್ರಶ್ನೆ: ಒಂದು ದೋಷ ಬಿಟ್ಟರೆ ಎಲ್ಲವೂ ಹೊರಟುಹೋಗತ್ತಾ? (ಶ್ರೀಹರಿ, ನಾಲ್ಕನೆಯ ತರಗತಿ) ಉತ್ತರ: ದೋಷವನ್ನು ಬಿಡುವುದು ಎಂಬುದೆ ಕಷ್ಟ. ಬಲವಂತವಾಗಿ ಬಿಟ್ಟರೆ ಸ್ವಲ್ಪ ಕಾಲಕ್ಕೆ ಹೋದಂತೆ ಅನಿಸಬಹುದು. ಆದರೆ ಒಂದು ಹೋದರೆ ಎಲ್ಲವೂ ತಾನಾಗಿ ಹೋಗುತ್ತವೆ. ಪ್ರಶ್ನೆ: ಅನ್ಯಾಸಕ್ತಿ, ಅನಾಸಕ್ತಿ ಎಲ್ಲ ಎಷ್ಟು ಬೇಗ ಬರುತ್ತದೆ? (ವೇದೇಶ, ಮೂರನೆಯ ತರಗತಿ) ಉತ್ತರ: ಮಕ್ಕಳಲ್ಲಿ ಎಷ್ಟು ಬೇಗ ಬರುವುದೋ ಅಷ್ಟು ಬೇಗ ಹೋಗುತ್ತದೆ. ಆದರೆ ಎಷ್ಟು ಬೇಗ ಬಂದರೆ ಅಷ್ಟು ಒಳ್ಳೆಯದು. ಬಂದ ಕೂಡಲೆ ತಡೆದು ನಿಲ್ಲಿಸುವ ಪ್ರಯತ್ನ ಮಾಡಬೇಕು. ಪ್ರಶ್ನೆ: ಯಾವುದೇ ದೋಷವನ್ನು ಬಿಡುವುದು ಹೇಗೆ? (ಸುರಭಿ, ಆರನೆಯ ತರಗತಿ) ಉತ್ತರ: ದೋಷ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ನಂತರ ಬಿಡಬೇಕು, ಒಂದೊಕ್ಕೊಂದು ಸಂಬಂಧ ಇರುವುದರಿಂದ ಒಂದು ಬಿಟ್ಟರೆ ಉಳಿದವು ಬಿಡುತ್ತವೆ. ಆದರೆ ನಮ್ಮಲ್ಲಿ ದೋಷ ಇರುವುದೇ ತಿಳಿಯುವುದಿಲ್ಲ. ತಿಳಿದರೆ ನಂತರ ಸರಿಮಾಡಿಕೊಳ್ಳಲು ನಾವೇ ಪ್ರಯತ್ನ ಮಾಡಬಹುದು. -೦- ಇಷ್ಟು ವಿಚಾರಗಳನ್ನು ತಿಳಿಸಿ ಆಚಾರ್ಯರು ನಿರ್ಗಮಿಸಿದರು ತಮ್ಮ ಮುಂದಿನ ಕಾರ್ಯಕ್ಕಾಗಿ. ಅವರನ್ನು ಬೀಳ್ಕೊಟ್ಟು ಸುಧಾಕರ ಚತುರ್ವೇದಿಯವರನ್ನು ಸ್ವಾಗತಿಸಿದೆವು. ಅನಂತಣ್ಣ ೧೧೮ ವಯಸ್ಸಿನ ಹಿರಿಯ ಜೀವ, ಸ್ವಾತಂತ್ರ ಹೋರಾಟಗಾರ, ನಾಲ್ಕು ವೇದಗಳನ್ನು ಪ್ರಸ್ತುತ ನೆನಪಿಟ್ಟುಕೊಂಡು ಪಾಠ-ಪ್ರವಚನ ಮಾಡುವ ಅಪರೂಪದ ವ್ಯಕ್ತಿಯನ್ನು ಸೊಗಸಾಗಿ ಪರಿಚಯಿಸಿದರು. ಜಲಿಯನ್ ವಾಲಾಬಾಗ್ ಘಟನೆಯನ್ನು ಕಣ್ಣಾರೆ ಕಂಡ ಜೀವಂತ ಐತಿಹಾಸಿಕ ಪುರುಷ ಇವರಾಗಿದ್ದಾರೆ. ತಮಗಿಟ್ಟ ಚತುರ್ವೇದಿ ಎಂಬ ಹೆಸರನ್ನು ಸಾರ್ಥಕವಾಗಿಸಿದ್ದಾರೆ. ಚತುರ್ವೇದಿಯವರ ಸಂದೇಶ ಹೀಗಿದೆ: ಸಭೆಯಲ್ಲಿರುವ ಸಜ್ಜನರೇ, ಮಕ್ಕಳೇ…. ಮೊದಲು ಮಕ್ಕಳನ್ನು ಹೇಳಬೇಕು, ಇಂದು ಚಿಕ್ಕವರಾಗಿರುವವರೇ ಮುಂದೆ ಬೆಳೆದು ದೇಶದ ಭಾರವನ್ನು ಹೊರುವ ಜವಾಬ್ದಾರಿ ಹೊಂದಿದ್ದೀರಿ. ಅದಕ್ಕೆ ಈಗಿನಿಂದಲೇ ತಯಾರಿ ಆಗಬೇಕು. ಚಿಕ್ಕವಯಸ್ಸಿನಲ್ಲಿ ಏನು ಕಲಿಯುತ್ತೇವೆ ಅದು ಬಹಳ ಮುಖ್ಯ. ದೊಡ್ಡವರು ಕಲಿಯುತ್ತಾರೆ, ಮರೆಯುತ್ತಾರೆ. ಚಿಕ್ಕಂದಿನಲ್ಲಿ ಕಲಿತದ್ದು ನನಗೆ ಈಗಲೂ ನೆನಪಿದೆ. ನನ್ನ ಉದ್ದೇಶ ಇದ್ದದ್ದು ನಾನು ಯಾವ ರೀತಿಯ ಶಿಕ್ಷಣವನ್ನು ಪಡೆದೆನೋ ಅದನ್ನು ಸಮಾಜಕ್ಕೆ ಕೊಡಬೇಕು. ಯಾವ ಹಣತೆ ಉರಿಯುತ್ತಿರುತ್ತದೋ ಅದರಿಂದ ನೂರಾರು ಹಣತೆಗಳನ್ನು ಹಚ್ಚಿಕೊಳ್ಳಬಹುದು. ನಾನು ಹಾಗೆ ನೋಡಿಕೊಳ್ಳುತ್ತಿದ್ದೇನೆ, ನನ್ನಲ್ಲಿರುವ ಹಣತೆ ತಣ್ಣಗಾಗಿದೆಯೋ, ಇನ್ನೂ ಉರಿಯುತ್ತಿದ್ದೆಯೋ ಎಂದು. ನಿರಾಸೆ ಎಂಬುದು ನನ್ನ ಜೀವನದಲ್ಲಿ ಇಲ್ಲವೇ ಇಲ್ಲ. ಧೀರ ಸಂನ್ಯಾಸಿಯ

ಸ್ವಾತಂತ್ರ್ಯ ದಿನೋತ್ಸವ - 2013

ಸ್ವಾತಂತ್ರ್ಯ ದಿನೋತ್ಸವ – 2013

Saturday, August 24th, 2013

ದಿನಾಂಕ: 15 ನೇ ಆಗಸ್ಟ್ 2013 ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆಯ ಹತ್ತಿರದ ಮೈದಾನ ಮತ್ತು ಶಾಲೆಯ ಆವರಣ, ಗಿರಿನಗರ, ಬೆಂಗಳೂರು   ದೇಶಕ್ಕಾಗಿ ತಮ್ಮ ಸುಖವನ್ನು ತ್ಯಾಗಮಾಡಿದವರ ನೆನಪಿಗಾಗಿ ಮತ್ತು ಎದೆಗುಂದದೆ ಕ್ರಮಬದ್ಧವಾದ ಯೋಜನೆಗಳನ್ನು ರೂಪಿಸಿದ ಅದರಂತೆ ಯಶಸ್ವಿಗೊಳಿಸಿದ ಧೀಮಂತರ ಸ್ಮರಣೆಗಾಗಿ ಆಗಸ್ಟ್ 15ನೇ ದಿನವನ್ನು ಉತ್ಸವವಾಗಿ ಆಚರಿಸಲಾಗುವುದು. ಪೂರ್ಣಪ್ರಮತಿಯ ಈ ಸರಳ ಸಮಾರಂಭದಲ್ಲಿ ಮಕ್ಕಳು, ಪೋಷಕರು, ಅಧ್ಯಾಪಕರೊಂದಿಗೆ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಿದ ಅಪರೂಪದ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದರು. ಅವರೇ ಶ್ರೀಯುತ ಪ್ರಹ್ಲಾದ್ ಅವರು. ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಸೈನಿಕರು ಇವರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಆಸಕ್ತಿಯನ್ನು ಕಾಯ್ದಿಟ್ಟುಕೊಂಡಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕವನ, ನಾಟಕಗಳನ್ನು ಬರೆಯುವುದು ಇವರ ಹವ್ಯಾಸ. ಪ್ರಕೃತಿ ಪ್ರೇಮವನ್ನು ತಮ್ಮದಾಗಿಸಿಕೊಂಡಿರುವ ಇವರು ಹಾವುಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಹಾವಿನ ವಿಷವನ್ನು ಔಷಧಿಗಳಲ್ಲಿ ಯಾವ ಪ್ರಮಾಣದಲ್ಲಿ ಬಳಸಬಹುದೆಂಬುದನ್ನು ಪರೀಕ್ಷಿಸುವ ಘಟಕದಲ್ಲಿ ಕಾರ್ಯನಿರ್ವಹಿಸುತ್ತಾರೆ. ಹಲವು ವೈಜ್ಞಾನಿಕ ಲೇಖನಗಳನ್ನು ಬರೆದು ಆಸಕ್ತರಿಗೆ ಮಾರ್ಗದರ್ಶನವನ್ನೂ ನೀಡುತ್ತಾರೆ. ಇಂತಹ ವಿಶಿಷ್ಟ ಆಸಕ್ತಿಯ, ಸರಳ ವ್ಯಕ್ತಿಯನ್ನು ನಮ್ಮ ಶಾಲೆಗೆ ಬರಮಾಡಿಕೊಂಡಿದ್ದು ನಮ್ಮ ಸುಕೃತವೇ ಸರಿ. ಬೆಳಗ್ಗೆ 8.45ಕ್ಕೆ ಧ್ವಜಾರೋಹಣವನ್ನು ನಮ್ಮ ಅತಿಥಿಗಳು ಮತ್ತು ಪುಟ್ಟ ಶ್ರೀನಿಧಿ ನಡೆಸಿದರು. ರಾಷ್ಟ್ರಗೀತೆ,  ವಂದೇ ಮಾತರಂ ಗೀತೆಗಳನ್ನು ಎಲ್ಲರೂ ಹಾಡಿದೆವು. ಐದನೆಯ ತರಗತಿಯ ಮಕ್ಕಳು ಈ ಗೀತೆಗಳ ಲೇಖಕರು, ಹಿನ್ನಲೆಯ ಬಗ್ಗೆ ವಿವರಣೆಯನ್ನು ನೀಡಿದರು. ಪುಟ್ಟ ಮಕ್ಕಳು ಜೀವ ವೈವಿಧ್ಯ ಉದ್ಯಾನದಲ್ಲಿ ಕಂಡಿದ್ದ ಪ್ರಾಣಿ-ಪಕ್ಷಿಗಳ ಜೀವನ ಶೈಲಿಯನ್ನು ರೂಪಕವಾಗಿ ಪ್ರದರ್ಶಿಸಿದರು. ಭಾರತ ಕಂಡ ಧೀಮಂತ ನಾಯಕ ಸುಭಾಷ್ ಚಂದ್ರಬೋಸ್ ಅವರ ಬಗ್ಗೆ ಕನ್ನಡದಲ್ಲಿ, ಸಂಸ್ಕೃತದಲ್ಲಿ ಮಕ್ಕಳು ಮಾತನಾಡಿದರು. ಚುರುಕು ನಿರೂಪಣೆಗಳಿಂದ ಮಕ್ಕಳು ಮುಂದಿನ ಕಾರ್ಯಕ್ರಮಗಳನ್ನು ನಡೆಸಿದರು. ಪ್ರಹ್ಲಾದ್ ಅವರು ಈ ಕಾರ್ಯಕ್ರಮಗಳನ್ನು ನೋಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಖುಷಿಪಟ್ಟರು. For more photos click here ಮುಂದಿನ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಿತು. ಮಕ್ಕಳಿಗೆ ಭಾರತೀಯ ವಾಯುಪಡೆಯ ಪರಿಚಯ ಮಾಡಿಸುವುದು ಮತ್ತು ಯುದ್ಧಕ್ಕೆ ತಯಾರಾಗುವ ವಿಧಾನವನ್ನು ತಿಳಿಸುವುದಕ್ಕಾಗಿ ಒಂದು ದೃಶ್ಯಚಿತ್ರವನ್ನು ತೋರಿಸಲಾಯಿತು. ಪ್ರಹ್ಲಾದ ಅವರು ನಡುವೆ ದೃಶ್ಯಗಳಿಗೆ ವಿವರಣೆಯನ್ನು ಕೊಟ್ಟರು. ಅನೇಕ ಯುದ್ಧ ವಿಮಾನಗಳು ಅವುಗಳ ಸಾಮರ್ಥ್ಯ, ಶತ್ರುಗಳನ್ನು ದೂರದಿಂದಲೇ ಗುರುತಿಸಿ ಆಕ್ರಮಣ ಮಾಡುವ ವಿಧಾನಗಳನ್ನು ತೋರಿಸಿದರು. ಈ ಸಂದರ್ಭದಲ್ಲಿ ಪ್ರಹ್ಲಾದರ ಮುಖ್ಯ ಸಂದೇಶವೆಂದರೆ ಸೈನ್ಯಕ್ಕೆ ಮಕ್ಕಳನ್ನು ಸೇರಿಸುವುದು. ಎಲ್ಲರೂ ಸಾಫ್ಟ್‌ವೇರ್ ಕ್ಷೇತ್ರ, ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವ ಬದಲು ಭಾರತೀಯ ಸೈನ್ಯಕ್ಕೆ ಸೇರುವಂತೆ ಮಕ್ಕಳ ಮನಸ್ಸನ್ನು ಸಿದ್ಧಗೊಳಿಸುವುದು ಪೋಷಕರು ಮಾಡಬಹುದಾದ ಸೇವೆ ಎಂದರು. ಯಾವುದೇ ಸಂದರ್ಭದಲ್ಲೂ ಧೈರ್ಯಗೆಡದೆ ಮುನ್ನುಗ್ಗುವ ಗುಣವನ್ನು ಕಲಿಸುವುದು ಸೈನ್ಯದಲ್ಲಿನ ಸೇವೆ, ಸಣ್ಣ ನೋವುಗಳು, ಗಾಯಗಳು ಗುರಿ ಸಾಧನೆಗೆ ತಡೆಯೇ ಅಲ್ಲ ಎಂಬ ತಮ್ಮ ಕಲಿಕೆಯನ್ನು ಮಕ್ಕಳೊಂದಿಗೆ ಹಂಚಿಕೊಂಡರು. ನಮ್ಮ ಶಾಲೆಯ ಸಂಪ್ರದಾಯದಂತೆ ಅತಿಥಿಗಳಿಗೆ ನಮ್ಮ ಚಟುವಟಿಕೆಗಳ ಬಗ್ಗೆ ವಿವರಿಸಿ ಸ್ಮರಣ ಸಂಚಿಕೆಗಳನ್ನು ನೀಡಿ ಬೀಳ್ಕೊಟ್ಟೆವು. ಸರಳವಾಗಿ ಸನ್ಮಾನಿಸಿದ್ದು ಪ್ರಹ್ಲಾದ್‌ಅವರಿಗೂ ಸಮ್ಮತವಾಯಿತು ಮತ್ತು ಸಂತೋಷವನ್ನು ತಂದಿತು.

Bio Diversity Park: Field Trip

Bio Diversity Park: Field Trip

Tuesday, August 13th, 2013

In a dense metropolis like ours, with people of good affluence residing, every sort of human’s taste is served. Our place is a platform for any kind of occupation or recreation. The market pleases us with a countless variety of items supporting our every single activity. The proverb ‘Variety is the spice of life’ is our doctrine and it rules. But the eco-concerned, sensing the damage being continuously caused to the environment, grieve over the situation and often ask “Why doesn’t anybody realise that there is also the spice of Bio variety highly necessary on earth?” Some of them desperately try out ways to contribute to the conservation of Bio diversity and habitats. The result of one such effort is the Bio-diversity park inside Bangalore university campus, which Purnapramati visited as a field trip on 8th August, 2013. The park is a novel venture conceived by the university’s previous vice chancellor K N Siddappa and planned by retired environment secretary and forest officer A N Yellappa Reddy. The 800 acre park consists largely of indigenous tree species native to western ghats. It is also known for its medicinal gardens developed by invoking ancient Indian techniques and modern rain water and soil conservation techniques. In the activities of our trip, we were accompanied by Sri Yellappa Reddy, environmentalist and journalist Sri Nagesh Hegde, environmentalist and educationalist Sri Suresh Kulkarni, Professor of Ecology at IISc Sri Harish Bhat, Prof of Geology at Bangalore university Sri Renuka Prasad, folk artist Sri Bandagadde Radha Krishna, former Professor of NCERT Sri M Nagaraj accompanied us. In a short session at the beginning, Sri Kulkarni entertained children with a few free hand drawings and two hand symmetry drawings and enlightened children about the fundamental skills essential to be a good observer of environment. Some of the examples he evoked are here. – When we need to check whether a given plant is a monocot or dicot, check its leaves without going to its seed. If the leaves have parallel venation, it is a monocot and if they have a reticulate venation, it is a dicot. – There are similarities among many things in the environment. These similarities help us to understand them better. Only a good observer grasps them and finds nature appealing. For example, the shape ω forms a base for almost all the kannada letters ಜ, ಓ, ಔ, , etc and similarly most of the letters of English like A, V, X, Z, etc are shaped out of the straight strokes /, \, _. “The essence of learning is the identification of similarities, differences and patterns in everything we come across”, he concluded. As we proceeded into the forest, Sri Yellappa Reddy led us near two plants of the park and explained about them. “Zizipus jujuba called Bore Mara in kannada is a fruit baring tree commonly found in the Dandakaranya forests of central east India. It produces fruits in abundance. It has fine hair like structures on its leaves which grab the minute dust particles in air. So, a good number of such plants can really keep the air dust free. It is believed that Shabari of Ramayana chose this plant to offer fruits to Rama. Tribes believe that their ancestors reside in these trees and so they strictly avoid cutting these, thereby inadvertently contributing to save the environment. These have an average life span of about 250 years”, he said. “Carissa carandas called Kavale Mara in Kannada is also a fruit-tree common in India. It’s fruits are largely harvested for pickles in our country. Villagers in Andhra sell these fruits in lots and barter Maize. It is a rich source of iron and vitamins and it helps in checking cholesterol. There is no reason why these trees must be so less popular as they are now. Evolvulus Alsinoidus called Vishnu Kranthi in Kannada is a plant popularly used in poojas. It is a plant of extensive medicinal use for treating nervous disorders, fever, loss of memory, brain disorders like Schizophrenia, etc” he said. In the next session, Mr Harish Bhat gave us the notion of how interesting animal life is. Illustrations of his session are given below – Frogs have smooth skin which helps them penetrate into the earth during rainy days. They respire both through their nostrils and skin. They are sensitive to the Radon gas that emerges out of the earth’s surface during earth quakes. Due to the gas, they feel itchy inside the earth’s surface and hence come out in masses. Thus, they predict earthquakes. One female frog gives birth to at least 500 young ones. Amidst predators, only around 10 survive. Frogs eat up 60 to 70 insects every hour. Excess killing of frogs cause acute disturbance to ecological balance. – How do ants guess where to go for food? They sense the scent of food through their antennae and identify the direction of their food. They are social insects classified as queen ants, soldier ants and worker ants. Once a worker ant notices food, it stains the path with chemical(called pheromone) and other ants follow the path when they make out the chemical stain. When they finish collecting food, soldier ants wipes off the stain to avoid ants of other community tracing the path. – Spiders are interesting anthropods. Among them only females build webs. They have spinneret glands in the abdomen which emit silk. Interestingly, of the silk strands that are emitted, some are sticky and some are not which only the spiders differentiate. This helps them catch insects which are unaware of the web design. An astonishing instance: In Japan, scientists once discovered that the silk of a particular spider was 10 times stronger than steel. They ventured injecting the spider’s gene to a goat and succeeded in manufacturing a bullet proof jacket using the goat’s milk. – Jungle Babbler or Seven Sister birds called Harate Malla in kannada are beautiful birds that hunt in groups of six to ten. They mainly feed on

ಪ್ರಕೃತಿಯನ್ನೇ ಗುರುವಾಗಿಸಿ....ನಾವು ಆಚರಿಸಿದ ಗುರುಪೂರ್ಣಿಮೆ

ಪ್ರಕೃತಿಯನ್ನೇ ಗುರುವಾಗಿಸಿ….ನಾವು ಆಚರಿಸಿದ ಗುರುಪೂರ್ಣಿಮೆ

Tuesday, August 13th, 2013

ಪ್ರಕೃತಿಯನ್ನೇ ಗುರುವಾಗಿಸಿ….ನಾವು ಆಚರಿಸಿದ ಗುರುಪೂರ್ಣಿಮೆ ದಿನಾಂಕ: 8ನೇ ಆಗಸ್ಟ್, 2013 ಸ್ಥಳ: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಆಗಸ್ಟ್ 8, 2012 ಪೂರ್ಣಪ್ರಮತಿಯ ಹಾದಿಯಲ್ಲಿ ಮರೆಯಲಾಗದ ಹೆಜ್ಜೆಯಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಗುರುಪೂರ್ಣಿಮೆಯಂದು ಆಚರಿಸಲು ಸಾಧ್ಯವಾಗದ ಉತ್ಸವವನ್ನು ಆಗಸ್ಟ್ 8 ರಂದು ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪುಟ್ಟ ವನಕ್ಕೆ ಪೂರ್ಣಪ್ರಮತಿಯ ಮಕ್ಕಳು ಪಯಣ ಬೆಳೆಸಿದ್ದರು. ‘ಜೀವೋ ಜೀವಸ್ಯ ಜೀವನಂ’ ಸೂತ್ರವನ್ನು ಮತ್ತಷ್ಟು ಮಗದಷ್ಟು ಮನದಟ್ಟು ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಪ್ರವೇಶಿಸಿದೆವು. ಅಲ್ಲಿಂದ ಮುಂದೆ ಬೇರೆಯದೇ ಪ್ರಪಂಚ ತೆರೆದುಕೊಂಡಿತು. ಕಾಂಕ್ರಿಟ್ ಕಾಡಿನಿಂದ ದೂರಾಗಿ ಹಸಿರು ಕಾಡನ್ನು ಅನುಭವಿಸುವ ಅವಕಾಶ ನಮ್ಮದಾಗಿತ್ತು. ಮುಂದಿನ ಒಂದೊಂದು ಹೆಜ್ಜೆಗಳನ್ನು ನೀವೆ ಅನುಭವಿಸಿ… ಚಿತ್ರದಲ್ಲಿ ಕಂಡ ಅಕ್ಷರಗಳು ನಮ್ಮ ಪ್ರಯಾಣಕ್ಕೆ ದೈವವೂ ಜೊತೆಯಾದಂತೆ ಬೆಂಗಳೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಭವನದಲ್ಲಿ ಶಾಲೆಯ ಶಿಕ್ಷಕರಿಗೆ ಪರಿಣಾಮಕಾರಿ ಬೋಧನೆಯ ಕಾರ್ಯಾಗಾರ ನಡೆದಿತ್ತು. ಹೆಸರಾಂತ ನಿವೃತ್ತ ಶಿಕ್ಷಕರಾದ ಸುರೇಶ್ ಕುಲಕರ್ಣಿ ಅವರು ಧಾರವಾಡದಿಂದ ಈ ಕಾರ್ಯಾಗರವನ್ನು ನಡೆಸಿಕೊಡಲು ಬಂದಿದ್ದರು. ಮಕ್ಕಳನ್ನು ನೋಡಿದ್ದೇ ತಡ ಕಲಿಸಲು ಪ್ರಾರಂಭಿಸಿದರು. ಚಿತ್ರಗಳಿಂದ ಅಕ್ಷರಗಳನ್ನು, ಅಕ್ಷರಗಳಿಂದ ಚಿತ್ರಗಳನ್ನು ರಚಿಸುತ್ತಾ ಪ್ರಕೃತಿಯ ಅನೇಕ ವಿಷಯಗಳ ಕುರಿತು ಗಮನ ಸೆಳೆದರು. ಮಕ್ಕಳಿಗೆ ಮರದ ಕೆಳಗೆ ಕುಳಿತು, ಎಲೆ, ಕಾಂಡ, ಬೇರು, ಬಣ್ಣಗಳ ಬಗ್ಗೆ ಜೊತೆ ಜೊತೆಗೆ ಅಕ್ಷರಗಳನ್ನು ಕಲಿತದ್ದು ಹೊಸ ಅನುಭವವಾಗಿತ್ತು. ಸುರೇಶ್ ಕುಲಕರ್ಣಿ ಅವರ ಎರಡು ಕೈಗಳಿಂದಲೂ ಚಿತ್ರಬಿಡಿಸುವ ಕಲೆಗಾರಿಕೆ, ಚುರುಕು ಮಾತುಗಳು ಅಂದಿನ ದಿನದ ಪಯಣಕ್ಕೆ ಒಳ್ಳೆಯ ಕಿಕ್ ಸ್ಟಾರ್ಟ್ ನೀಡಿತ್ತು. ನೀವು ಸವಿಯುವಂತೆ ಅದರ ಒಂದು ತುಣುಕು ಇಲ್ಲಿದೆ ನೋಡಿ: ನಾವು ಉಪಯೋಗಿಸುವ ಮೊಬೈಲ್ ನಿಂದ ಒಂದು ಗುಬ್ಬಿ ಸತ್ತರೆ ಪ್ರಕೃತಿಯ ಸಮತೋಲನವನ್ನು ಕಾಪಾಡಲು ನಾವು ದಿನಕ್ಕೆ 120 ಹುಳುಗಳನ್ನು ತಿನ್ನಬೇಕಾಗುವುದು. ಏಕೆಂದರೆ ಒಂದು ಗುಬ್ಬಿ ದಿನಕ್ಕೆ 120 ಹುಳುಗಳನ್ನು ತಿನ್ನುತ್ತವೆ. ಎಲ್ಲಪ್ಪರೆಡ್ಡಿ ಅವರಿಂದ ಮಾರ್ಗದರ್ಶನ ಪ್ರಾರ್ಥನೆಯಿಂದ ಪ್ರಾರಂಭವಾದ ಔಪಚಾರಿಕ ಕಾರ್ಯಕ್ರಮವು ನಡೆದಿದೆ ಪೂಜಾರತಿ ವಿಶ್ವದೇಹಿಗೆ ಎಂಬ ಹಾಡಿನಿಂದ ಮತ್ತಷ್ಟು ಸಾರ್ಥಕವಾಯಿತು. ವಿಕ್ರಮಣ್ಣನಂತೆ ನಾವು ಹಾಡಬಲ್ಲೆವು ಎಂಬಂತೆ ಮಕ್ಕಳು ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ಹಾಡನ್ನು ಹಾಡಿದರು. ಡಾ.ಎಲ್ಲಪ್ಪ ರೆಡ್ಡಿ ಅವರು ಆ ವೇಳೆಗಾಗಲೇ ತಮ್ಮ ಜ್ಞಾನದ ಬುತ್ತಿಯನ್ನು ಬಿಚ್ಚಿ ಆಗಿತ್ತು. ಅವರ ಕಣ್ಣಿಗೆ ಒಂದು ಪ್ಲಾಸ್ಟಿಕ್ ಲೋಟ ಕಾಣಿಸಿತು. ಯಾರೋ ಪೆಪ್ಸಿ-ಕೊಕೊ ಕೋಲಾ ಕುಡಿದು ಹಾಕಿದ್ದ ಆ ಪ್ಲಾಸ್ಟಿಕ್ ಲೋಟವನ್ನು ಹಿಡಿದು ವಿವರಣೆ ಆರಂಭಿಸಿದರು. ಆ ಲೋಟದೊಳಗಿರುವ ಸಿಹಿಯನ್ನು ಸವಿಯಲು ಇರುವೆ, ಜೇನುನೊಣಗಳೇನಾದರೂ ಬಂದರೆ ಸಾವೇ ಖಚಿತ. ಜೇನುನ್ರೆಣಗಳಿಲ್ಲದೆ ಮಾನವನ ಸಂತತಿಯೇ ನಾಶವಾದಂತೆ. ಪ್ರಕೃತಿಯ ರಕ್ಷಣೆಗೆ ಜೇನುನೊಣಗಳ ಕೊಡುಗೆ ಸುಮಾರು 75% ಇದೆ. ಇದಾವುದರ ಪರಿವೆಯೇ ಇಲ್ಲದೆ ನಾವು ತೋರುವ ಬೇಜವಾಬ್ದಾರಿತನ ಪರೋಕ್ಷವಾಗಿ ನಮ್ಮ ನಾಶವನ್ನೇ ತೋರುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಮಕ್ಕಳು ಕ್ರಿಯಾಶೀಲರಾಗಿ ಈ ಸಂಭಾಷಣೆಯಲ್ಲಿ ಭಾಗವಹಿಸಿದರು. ಬೋರೆ ಮರದ ಪರಿಚಯ ರಾಮಾಯಣ ಕಾಲದಲ್ಲಿ ದಂಡಕಾರಣ್ಯವಾಗಿದ್ದ ಈ ಸ್ಥಳದಲ್ಲಿ ಬೆಳೆಯುವ ಬೋರೆ ಹಣ್ಣುಗಳ ಮರವನ್ನು ನೋಡಲು ಹೋದೆವು. ಶಬರಿ ಕಾಡಿನಲ್ಲಿ ಬೆಳೆಯುವ ರುಚಿಕರವಾದ ಮತ್ತು ಆರೋಗ್ಯಕರವಾದ ಹಣ್ಣುಗಳನ್ನು ಸೂಕ್ಷ್ಮವಾಗಿ ಗಮನಿಸಿ ರಾಮನಿಗಾಗಿ ಇಟ್ಟಿದ್ದಳು. ಈ ಬೋರೆ ಹಣ್ಣುಗಳಾದರೋ (ಎಲಚೆ ಹಣ್ಣು) 1 ಲಕ್ಷ ವಿವಿಧ ಪ್ರಾಣಿ-ಪಕ್ಷಿಗಳಿಗೆ ಆಹಾರ ಮತ್ತು ಔಷಧಿಯಾಗಿದೆ. ಸುಮಾರು 40 ಅಡಿ ಬೆಳೆಯುವ ಈ ಮರಗಳು 200 ವರ್ಷಗಳವರೆಗೆ ಬದುಕಬಲ್ಲವು. ರಾಮ್‌ನೇಸಿ ಎಂದು ಇದಕ್ಕೆ ವೈಜ್ಞಾನಿಕವಾಗಿ ಕರೆಯಲಾಗುವುದು. ಈ ಮರದ ಎಲೆಗಳ ಹಿಂಭಾಗವು ಸೂಕ್ಷ್ಮವಾದ ರೋಮಗಳಿಂದ ಕೂಡಿದ್ದು ಗಾಳಿಯಲ್ಲಿ ಬರುವ ಧೂಳಿನ ಕಣಗಳನ್ನು ಹಿಡಿದಿಟ್ಟುಕೊಂಡು ಪ್ರಕೃತಿಯನ್ನು ಶುದ್ಧವಾಗಿಸುವುದು. ಅಂತೆಯೇ ಹೃದಯವನ್ನೂ ಶುದ್ಧಗೊಳಿಸುವುದು ಇದರ ವೈಶಿಷ್ಟ್ಯ. ಇದರಲ್ಲಿ ಸುಮಾರು ೫೦ ಜಾತಿಯ ಬೋರೆ ಹಣ್ಣುಗಳ ಮರ ಕಾಣಲು ಸಿಗುತ್ತವೆ. ಕರಂಡಾ  – ಕವಳೆ ಹಣ್ಣಿನ ಮರ ಹುಳಿ ಮತ್ತು ಸಿಹಿ ರುಚಿಗಳನ್ನು ಹೊಂದಿರುವ ಈ ಹಣ್ಣನ್ನು ಉಪ್ಪಿನಕಾಯಿ ಮಾಡಲು ಹೆಚ್ಚಾಗಿ ಬಳಸುವರು. ಒಂದು ಮರದಲ್ಲೇ ಸಾವಿರಾರು ಹಣ್ಣುಗಳು ಬಿಡುತ್ತವೆ. ಇದು ಆರೋಗ್ಯಕ್ಕೆ ವಿಟಮಿನ್ ಎ, ಬಿ, ಸಿ, ಡಿ ಗಳನ್ನು ಯಥೇಚ್ಛವಾಗಿ ನೀಡುತ್ತದೆ. ವಿಷ್ಣುಕ್ರಾಂತಿ ಬಳ್ಳಿ ಬುದ್ಧಿಯನ್ನು ಚುರುಕುಮಾಡಲು ಮಾಚಿ ಪತ್ರ ಬಹಳ ಉಪಕಾರಿ. ಸತ್ಯನಾರಾಯಣ ವ್ರತದಲ್ಲಿ ಬಳಸುವ ಪುಷ್ಟಪಗಳ, ಪತ್ರಗಳ ಪರಿಚಯವನ್ನು ಮಾಡುವ ಕೆಲಸವನ್ನು ಪುರೋಹಿತರು ಮಾಡತ್ತಿಲ್ಲ. ಅವರಿಗೂ ಅವುಗಳ ಪರಿಚಯ ಇಲ್ಲದಿರುವುದು ಖೇದದ ಸಂಗತಿ. ಹೋಮದಲ್ಲಿ ಬಳಸುವ ಪತ್ರ, ಪುಷ್ಟಪಗಳ ಪರಿಚಯ ಮಾಡಿಸಿ ಇದರಿಂದ ಇಂತಹ ಚಿಕಿತ್ಸೆ ಸಿಗುವುದು ಎಂದು ಹೇಳುವುದು ಪುರೋಹಿತರ ಕರ್ತವ್ಯವೇ ಆಗಿದೆ. ಸ್ಕಿಜೋಫ್ರೇನಿಯ ಎಂಬ ಮನೋರೋಗಕ್ಕೆ ಇದೊಂದು ಉತ್ತಮವಾಗ ಚಿಕಿತ್ಸೆ. ಮನೆಯಲ್ಲಿ ವಿಷ್ಣುಕ್ರಾಂತಿ ಬಳ್ಳಿಯ ಪೀಠವನ್ನು ಮಾಡಿ ಕೂಡಿಸಿದರೆ ಉತ್ತಮ ಚಿಕಿತ್ಸೆಯಾಗುವುದು. ಹೃದಯದ ಅನೇಕ ಖಾಯಿಲೆಗಳಿಗೂ ಇದು ಔಷಧಿಯಾಗಿದೆ. ಶಿಲಾ-ಜಲ-ಉದ್ಯಾನ ಯೋಜನೆ ಸರ್ಕಾರದಿಂದ ಶಿಲೆ, ಜಲ, ಉದ್ಯಾನಗಳ ರಕ್ಷಣೆಗಾಗಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಪ್ರೊಫೆಸರ್ ರೇಣುಕಾಪ್ರಕಾದ್ ಅವರು ಅದರ ರೂವಾರಿಗಳಾಗಿದ್ದಾರೆ. ಜೀವನ, ಶಾಂತಿ ಮತ್ತು ಪ್ರೀತಿ ಎಲ್ಲಿದೆ ಎಂಬ ಮೂಲ ಹುಡುಕುತ್ತಾ ಅದರೊಂದಿಗೆ ನಮ್ಮ ನಿತ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಪ್ರಸಾದ್ ಎಂಬುವರು ಮಕ್ಕಳಿಗೆ ಪ್ರಕೃತಿ ಮತ್ತು ನಮ್ಮ ಚಟುವಟಿಕೆಗಳಿಗೆ ಇರುವ ಸಂಬಂಧವನ್ನು ವಿವರಿಸಿದರು. ಭೂಮಿಯ ಜನನ, ಪಂಚಭೂತಗಳು ಅದರೊಂದಿಗೆ ನಾವು ಕಲ್ಪಿಸುವ ಅಗ್ನಿ, ಗಣಪತಿ, ಭೂಮಿ ತಾಯಿ, ವರುಣ, ವಾಯು ದೇವರುಗಳೊಂದಿಗೆ ಸಂಬಂಧಗಳು ರೋಚಕವಾಗಿವೆ. ಇವುಗಳನ್ನು ಪ್ರೀತಿಸಿದಾಗ ಜೀವನ ಸಾರ್ಥಕ. ಶಾಂತಿ ತಾನಾಗಿಯೇ ಬರುತ್ತದೆ. ಮನೆಯ ಮುಂದಿರುವ ಮರ, ಬಳ್ಳಿಗಳನ್ನು ಮುಟ್ಟಿ, ಅಪ್ಪಿಕೊಳ್ಳಿ, ಮಾತನಾಡಿಸಿ ಎಂಬ ಕಿವಿಮಾತನ್ನು ಹೇಳಿದರು. ದಾಖಲಿಸಲಾದ ಅಂಕಿಅಂಶಗಳಿಂದಾಗಿ ಅಲ್ಲಿ ಸುಮಾರು 67 ವಿಧವಾದ ಪತಂಗಗಳಿರುವುದು ದೃಢವಾಗಿದೆ. ಪ್ರಕೃತಿಯಿಂದ ಬಂದದ್ದನ್ನು ನಾವು ಬಳಸಿ ಮುಂದಿನವರಿಗೆ ಉಳಿಸುವ ಕೆಲಸ ಮಾಡಬೇಕು. ಪ್ರಕೃತಿ ಕೊಟ್ಟಿರುವ ಅಕ್ಷಯ ಪಾತ್ರೆಯು ನಮಗೆ ಎಂದಿಗೂ ಇರಬೇಕು ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು. ಶ್ರೀಗಂಧ 60-70 ಅಡಿ ಎತ್ತರ ಬೆಳೆಯುವ ಶ್ರೀಗಂಧದ ಮರ ಕಾಂಡದ ಮಧ್ಯಭಾಗದಲ್ಲಿ ಮಾತ್ರ ಸುಗಂಧವನ್ನು ಹೊಂದಿರುತ್ತದೆ. ಮತ್ತೆಲ್ಲೂ ಪರಿಮಳವಿರುವುದಿಲ್ಲ. ಇದರ ಆಯಸ್ಸು ಸುಮಾರು 100 ವರ್ಷ. ಕೋಗಿಲೆ ಇದರಿಂದ ಬರುವ ಹಣ್ಣುಗಳನ್ನು ತಿಂದು ಬೀಜಗಳನ್ನು ಬೀಳಿಸುತ್ತವೆ. ಅದು ಸಂಸ್ಕರಿಸಿದ ಬೀಜಗಳಂತೆ ಕಾರ್ಯಮಾಡಿ ಶ್ರೀಗಂಧದ ಸಂತತಿಯನ್ನು ಬೆಳೆಸುತ್ತವೆ. ಈ ಹಣ್ಣುಗಳಿಂದ ಚಟ್ನಿ-ರೊಟ್ಟಿಗಳನ್ನು ಮಾಡುತ್ತಾರೆ. ಅಲ್ಲಿಂದ ಮುಂದುವರೆದು ನಾವೆಲ್ಲ ಒಂದು ಪ್ರಶಾಂತ ಸ್ಥಳವನ್ನು ಆರಿಸಿ ಮಧ್ಯಾಹ್ನದ ಉಪಾಹಾರ ಮುಗಿಸಿದೆವು. ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿಸರ್ಗ ತಜ್ಞರಾದ ಹರೀಶ್ ಭಟ್ ಅವರು ನಮ್ಮೊಂದಿಗೆ ಸಂಚರಿಸುತ್ತಾ ಪ್ರಕೃತಿಯ ವೈಚಿತ್ರ್ಯಗಳನ್ನು ವಿವರಿಸುತ್ತಿದ್ದರು. ಮಕ್ಕಳೆಲ್ಲ ಅವರ ಮಾತುಗಳನ್ನು ಉತ್ಸಾಹದಿಂದ ಕೇಳಿ ಪ್ರತಿಕ್ರಿಯಿಸುತ್ತಿದ್ದರು. ಇಂದಿನ ಮೆನುವಿನಲ್ಲಿ ಮೊದಲ ಹೆಸರು ಕಪ್ಪೆಯದಾಗಿತ್ತು… ಕಪ್ಪೆ 130 ಮಿಲಿಯನ್ ವರ್ಷಗಳ ಮೊದಲು ಕಪ್ಪೆಯ ಸಂತತಿ ಹುಟ್ಟುಕೊಂಡಿತು. ಕಪ್ಪೆಯ ಚರ್ಮ ನಯವಾಗಿರುತ್ತದೆ. ನೀರಿನಲ್ಲಿ ಹೆಚ್ಚು ಸಮಯವಿರುವುದರಿಂದ. ಭೂಮಿಯ ಒಳಗೆ ಸುರಂಗವನ್ನು ಮಾಡಿ ಬದುಕಬಲ್ಲದು. ಚರ್ಮವು ನಯವಾಗಿರುವುದರಿಂದ ಚೆನ್ನಾಗಿ ನುಸುಳಬಹುದೆ. ಇದರ ವಿಶಿಷ್ಟತೆ ಎಂದರೆ ಚರ್ಮ ಮತ್ತು ಮೂಗು ಎರಡೂ ಉಸಿರಾಡುವ ಅಂಗಗಳಾಗಿವೆ. ಗಂಡು ಕಪ್ಪೆ ಮಾತ್ರ ಕೂಗಬಲ್ಲದು. ಸುಮಾರು 1/2 ಫರ್ಲಾಂಗ್ ವರೆಗೆ ಕೇಳುವಂತೆ ಕೂಗಬಲ್ಲದು. ಇವು ಒಂದು ಗಂಟೆಗೆ 80-90 ಹುಳುಗಳನ್ನು ತಿನ್ನುತ್ತವೆ. ಐದು ದಿನಗಳ ಮೊದಲು ಭೂಕಂಪದ ಸೂಚನೆ ಇವುಗಳಿಗೆ ಸಿಗುತ್ತದೆ. ಭೂಮಿಯಿಂದ ಹೊರಹೊಮ್ಮುವ ರಡಾನ್ ಗ್ಯಾಸ್ ಇವುಗಳ ಚರ್ಮವನ್ನು ಸೋಕಿ ನವೆಯನ್ನು ಉಂಟುಮಾಡುತ್ತದೆ. ಇದರಿಂದ ಎಲ್ಲ ಕಪ್ಪೆಗಳು ಹೊರಬರುತ್ತವೆ. ಟೋಡ್ ಎಂದು ಕರೆಯಲ್ಪಡುವ ಮತ್ತೊಂದು ಜಾತಿಯ ಕಪ್ಪೆಗಳಿಗೆ ಕಿವಿಯ ಹಿಂದೆ ವಿಷದ ಗ್ರಂಥಿ ಇರುತ್ತದೆ. ನಾಲಿಗೆಯನ್ನು ಹೊರಚಾಚಿ ತನ್ನ ಅಂಟುಗುಣದಿಂದ ಹುಳುಗಳನ್ನು ಹಿಡಿದು ತಿನ್ನುತ್ತವೆ. ಇರುವೆ 80 ಮಿಲಿಯನ್ ವರ್ಷಗಳ ಹಿಂದೆ ಇರುವೆಗಳ ಜನನ ಆಗಿದೆ. ಇರುವೆಗಳ ಘ್ರಾಣಶಕ್ತಿಯು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಸ್ಕೌಟ್ ಇರುವೆ ಎಂದು ಕರೆಯಲ್ಪಡುವವು ಆಹಾರವನ್ನು ಹುಡುಗಿ ಬರಬೇಕು. ಅದು ಮನೆಗೆ ಮರಳುವಾಗ ಒಂದು ರಾಸಾಯನಿಕವನ್ನು ದಾರಿ ಉದ್ದಕ್ಕೂ ಚೆಲ್ಲುತ್ತಾ ಬರುತ್ತದೆ, ಮತ್ತೆ ದಾರಿಯನ್ನು ಗುರುತಿಸಿವ ಸಲುವಾಗಿ. ನಂತರ ಎಲ್ಲ ಇರುವೆಗಳು ಸಾಲಾಗಿ ಬಂದು ಆಹಾರ ತಿನ್ನುತ್ತವೆ. ಮರಳಿ ಹೋಗುವಾಗ ಸೋಲ್ಜರ್ ಇರುವೆ ಚೆಲ್ಲಿದ್ದ ರಾಸಾಯನಿಕವನ್ನು ಅಳಿಸುತ್ತಾ ಸಾಗುತ್ತದೆ, ಶತ್ರುಗಳಿಗೆ ದಾರಿ ತಿಳಿಯಬಾರದೆಂದು. ಜೇಡ ಜೇಡದಲ್ಲಿ ಹೆಣ್ಣು ಮಾತ್ರ ಬಲೆ ಹೆಣೆಯುವುದು. ಸ್ಪಿನರೆಟ್ ಗ್ರಂಥಿಯಿಂದ ಅಂಟುವ ಮತ್ತು ಅಂಟದ ಎರಡು ರೀತಿಯ ದ್ರವವನ್ನು ಉಂಟುಮಾಡುತ್ತದೆ. ಅದರಿಂದ ಬಲೆಯನ್ನು ಹೆಣೆಯುತ್ತದೆ. ತಾನು ಅಂಟದ ದಾರಿಯಿಂದ ಸಾಗಿ, ಹುಳು ಅಥವಾ ಆಹಾರ ಅಂಟುವ ದ್ರವದಲ್ಲಿ ಸಾಗಿ ಬರುವಂತೆ ಜಾಣ್ಮೆ ವಹಿಸುತ್ತದೆ. ಸೋಶಿಯಲ್ ಜೇಡ (ಸಾಮಾಜಿಕ ಜೇಡ) ಎಂದು ಕರೆಯಲ್ಪಡುವ ಜೇಡಗಳ ಮನೆಯು ಒಂದರ ಪಕ್ಕಕ್ಕೆ ಒಂದು ಇರುವಂತೆ ಕಟ್ಟುತ್ತವೆ. ಆದರೆ ಒಂದರ ಆಹಾರಕ್ಕೆ ಮತ್ತೊಂದು ಕೈ ಹಾಕುವುದಿಲ್ಲ. ಜಪಾನ್‌ನಲ್ಲಿ ಜೇಡದ ಬಲೆ ಕಟ್ಟುವ ಗುಣವನ್ನು ಬಳಸಿ ಬುಲೆಟ್ ಪ್ರೂಫ್ ವಸ್ತ್ರವನ್ನು ತಯಾರಿಸಿದ್ದಾರೆ. ಕರವಸ್ತ್ರಕ್ಕಿಂತಲೂ ಹಗುರವಾದ ಗುಂಡು ನಿರೋಧಕ ವಸ್ತ್ರವನ್ನು ತಯಾರಿಸಿದ್ದಾರೆ. ಜೇಡಗಳ ವಂಶವಾಹಿಗಳನ್ನು ಮೇಕೆಯ ಕೆಚ್ಚಲಿಗೆ ಕಸಿಮಾಡಲಾಯಿತು. ಅದರಿಂದ ಬಂದ ಹಾಲಿನಿಂದ ಇದನ್ನು ತಯಾರಿಸಲಾಗಿದೆ. ಪಕ್ಷಿಗಳು ಮುಂದೆ ಹರಟೆ ಮಲ್ಲ (ಜಂಗಲ್ ಬಾಬ್ಲರ್, ಸಾಥ್ ಬಾಯ್, 7 ಸಿಸ್ಟರ್) ಎಂದು ಕರೆಯಲ್ಪಡುವ ಹಕ್ಕಿಯ ಪರಿಯಚಯ, ಕೋಗಿಲೆ ಪರಿಚಯ ನೀಡಿದರು. ಗಂಡು ಕೋಗಿಲೆ ಮಾತ್ರ ಕೂಗುವುದು, ಆದರೆ ಗೂಡು ಕಟ್ಟಿ ಮರಿ ಮಾಡುವ ಸ್ವಭಾವವೇ ಕೋಗಿಲೆಗೆ ಇಲ್ಲ. ಕಾಗೆಗಳಿಂದ ಉಚಿತವಾಗಿ ಎಲ್ಲ ರೀತಿಯ ಸೇವೆಗಳನ್ನು ಪಡೆದುಕೊಳ್ಳುತ್ತವೆ. ಇಂದಿಗೂ ಕಾಗೆಯನ್ನು ಕೋಗಿಲೆಯ ಚಿಕ್ಕಮ್ಮ ಎಂದು ಕರೆಯುವರು. ನವಿಲಿನ ಬಗ್ಗೆ ತಿಳಿಸುತ್ತಾ, ಗಂಡು ನವಿಲು ಮಾತ್ರ ಸುಂದರ ಮತ್ತು ಗರಿಗಳನ್ನು ಹೊಂದಿರುತ್ತವೆ ಎಂದು ತಿಳಿಸಿದರು. ನವಿಲಿನ ಮುಖ್ಯ ಆಹಾರ ಹಾವು, ಹುಳಗಳು. ಒಮ್ಮೆಗೆ ಸುಮಾರು 26 ಮೊಟ್ಟೆಗಳನ್ನು ಇಡುತ್ತದೆ. 30-40 ದಿನಗಳ ನಂತರ ಕಪ್ಪು ಮರಿಗಳು ಹೊರಬರುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಕಾವುಕೊಡುತ್ತವೆ. ಗಂಡು ನವಿಲು  ಛತ್ರಿಯಂತೆ ತನ್ನ ಗರಿಗಳಿಂದ ಮರಿಗಳಿಗೆ ರಕ್ಷಣೆ ನೀಡುತ್ತದೆ. ಹಾವು ಹಾವುಗಳಿಗೆ ಸ್ಪರ್ಶ ಮಾತ್ರ ಗೊತ್ತಾಗುವುದು, ಕಿವಿ ಇಲ್ಲ. ನಾಗರ ಹಾವು, ಕಟ್ಟಾ ಹಾವು, ಮಂಡಲದ ಹಾವು, ಸಮುದ್ರ ಹಾವು ಬಿಟ್ಟರೆ ಉಳಿದ ಯಾವುದೂ ವಿಷಪೂರಿತವಲ್ಲ. ಹಾವಿನ ವಿಷವು ತಿಳಿಹಳದಿ ಬಣ್ಣದ್ದಾಗಿದ್ದು ಹೆಚ್ಚಿನ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾವಿಗೆ ದವಡೆಯಲ್ಲಿ ವಿಷವಿರುತ್ತದೆ. ಕಾಳಿಂಗ ಸರ್ಪವು 20 ಅಡಿ ಉದ್ದವಿದ್ದು  ಅಡಿಗಳವರೆಗೆ ಹೆಡೆಯನ್ನು ಎತ್ತಬಲ್ಲದ್ದಾಗಿದೆ. ಇವುಗಳ ಆಹಾರ ಹಾವು ಮಾತ್ರ. ಇವು ಒಮ್ಮೆಗೆ 60 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯಾಗಿರುವಾಗಲೆ ಗಂಡುಮರಿ ಹೆಣ್ಣುಮರಿಗಳನ್ನು ಗುರುತಿಸಿ ಕಾವು ಕೊಡುತ್ತವೆ. ಗಂಡು ರಕ್ಷಣೆಗಾಗಿ ನಿಂತರೆ ಕಾವು ಕೊಡುವ ಕೆಲಸ ಹೆಣ್ಣು ಸರ್ಪದ್ದು. 90 ದಿನಗಳವರೆಗೆ ಉಪವಾಸವಿದ್ದು ರಕ್ಷಣೆ ನೀಡುತ್ತವೆ. ಮರಿ ಹೊರಬರುವ ದಿನ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ತಮ್ಮ ಮರಿಗಳನ್ನು ತಾವೇ ಆಹಾರವಾಗಿಸುವುದು ಬೇಡ ಎಂಬ ದೃಷ್ಟಿಯಿಂದ. ಅಷ್ಟು ಮರಿಗಳಲ್ಲಿ 3-4 ಮಾತ್ರ ಉಳಿಯುತ್ತವೆ. ಆದರೆ ಹಾವು ಸ್ವತಃ ಗೂಡು ಕಟ್ಟುವುದಿಲ್ಲ. ಗೆದ್ದಲು ಹುಳು ಕಟ್ಟುವ ಗೂಡನ್ನು ತನ್ನ ವಾಸಕ್ಕೆ ಬಳಸುತ್ತವೆ. ಗೆದ್ದಲು ಹುಳಗಳು ತನ್ನ ದೇಹದಿಂದ ಹೊರಬರುವ ಅಂಟಿನಂತಹ

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.