Purnapramati Utsava 2015-16

Purnapramati Utsava 2015-16

Monday, January 11th, 2016
Panacea for health issues

Panacea for health issues

Saturday, September 19th, 2015

Purnapramati proud to host yet another workshop in the series “Learn with parents”, on Sunday, the 27th September at 4.15pm. Dr.Khader, a renowned Homeopath and nutritionist will share his expertise on “Panacea for health issues – a rediscovered secret for your child and family’s glowing health” Ensure your participation without fail.  

A workshop on Poetry, Drumming & Mathematics from Mr.Manjul Bhargav

A workshop on Poetry, Drumming & Mathematics from Mr.Manjul Bhargav

Thursday, July 23rd, 2015

A workshop on Poetry, Drumming & Mathematics from Mr.Manjul Bhargav, Fields Medalist, Princeton University, USA, had been organized by ICDS at Christ University Auditorium.  All students from 8th grade, with their teachers attended the workshop. He spoke about many modern mathematical tools used in probability and combinatorics, and applied in varied technologies such as those on NASA space missions, originated in problems encountered by linguists like Pingala and musicians thousands of years ago in India .  He also looked at some of these ancient, poetic problems — and their remarkable solutions through the ages — to reveal much about the nature of human thought and the origins of mathematics.

A memorable trek

Saturday, June 6th, 2015

You might not believe me if I say, May 16th, 2015 was the day my childhood desire to ascend Savandurga was fulfilled. Thanks to Purnapramati. Thirumale a small village in Magadi district is my mother’s hometown. We as kids would visit this place every year during our summer vacations. It is just a few miles away from Savandurga. Every year we would pesture our cousins to take us to Savandurga. But all our pesturing had been futile. As years passed by, and I grew up, my wish to climb Savandurga, had taken a back seat. May 15th: I was looking forward for this day, along with lot of apprehensions, curiosity and anxiety, as that was the day when the academic year 2015-16 would commence for teachers. Raghuram anna told us that the next day all of us shall have a team outing to Savandurga. Of course, I was elated to hear the long forgotten word ‘Savandurga’. 16th May: We were at the base of the hill few mintues prior to the scheduled time. Having pondered over it for years, savored it, dreamt about, but never got the chance or gutts to actually do it, there I was. Just at the glimpse of the hill from the bus window, it seemed like a daunting task. The hill looked really huge. Earlier,  I was under the impression that our climb would be something similar to that of Shivagange, wherein we had the luxury of going past the steps at most of the places. But this one appeared to be totally different.  It was intimidating. As if to add to my misery, my slippers started deceiving me. It wasn’t giving me the grip that was required. It was no more reliable. So I thought, climbing barefoot was safer than depending on those slippers. Initially I did face a few hiccups – found it too steep at places, ran out of breath, got tired quickly, etc. But I did not wanted to get deterred. By the time I had covered one fourth the distance, I got used to it and thus started enjoying the ascend. As I got higher and higher, the view started getting better and better. With the aim of reaching the top within the expected time, I was hardly having any time to stop, look back and appreciate the beauty of nature. I was indeed missing many breath taking views from there.  I desperately needed some time for myself. For this to happen, I had to increase my pace, and so did I. In between my climbs, I was fortunate enough to find time to sit to myself amongst this serene environment. I just loved every bit of the lush green panoramic view. It was mesmerizing!!! I was amazed to see Sridevi akka ascending the hill with such great ease. She made it look so simple. To me it looked like she was about to conquer the hill. Though the journey was exhausting (as it was sizzling hot), it was such an accomplishing feeling when I made it to the summit. After a short relaxing session, a few selfies and profile pictures at the top, we were compelled to start our journey down (As said by Ed Viesturs, “Getting to top is optional, but getting down is mandatory”) as the dark clouds were gathering. On our way up the hill, irritated by the scorching heat, Sriramanna was suggesting Raghuram anna to plan our next outing to a place where we can get wet and have a little fun in water.  Little did he know that his prayers would be answered so quickly. Four of us (Roopa, Indu, Balanna and myself) had just started our trek down-hill, we could see the sky getting darker. We could also sense that it had already started raining a few kilometers from us. We knew our descent would become even more challenging if the rocks get wet. We were just hoping, the rains would wait till we get to the base. But the rains had other plans and they had decided to be our companion for the rest of our trek. Very soon, the clouds broke loose and threatened to derail our plans. But we were determined to get going. Initially we found it a little slippery, but then got accustomed and started enjoying the rains. Within a few minutes, there were waterfalls all around us. Oh! What a sight that was. I wondered if it was the same hill that we ascended a few hours back.  We were completely drenched. As the rains got heavier, we had nothing more to fear. The continuous gentle breeze and the waterfalls added to the allure. I was marveled at this spectacular beauty. It was a pity that not much of this wet-experience could not be caught on camera due to the rains. I had always longed to witness such a beauty which was beyond human realm of capture. The moment there was water all around, Indu shed off all her inhibitions and started enjoying just like a child. We had to literally drag her out of water, as we were running short of time. Finally the four of us, safely made it to the foot of the hill. As long as we were a part of the adventure, we had not felt the cold at all. The moment the adventure seized at the base, I started shivering (with not a bone left in my body). I couldn’t bear the cold, but had nothing to dry myself, as all that I had in my ‘water-proof bag’ had also witnessed the downpour, along with me. Thus the memorable trek at Savandurga came to an end. I would say, it was all together an adventurous trek, which was worth the toil.   Geetha S. Teacher Purnapramati Click here for more photos  

ಪೋಷಕರ ಮಾಹಿತಿ ಸಭೆ

Saturday, June 6th, 2015

ಪೋಷಕರ ಮಾಹಿತಿ ಸಭೆ ದಿನಾಂಕ: ೩೦/೦೫/೨೦೧೫ ಸ್ಥಳ: ಮನೋರಮಾ ಸಭಾಂಗಣ, ಅಕ್ಷರಂ ಸಂಸ್ಥೆ, ಬೆಂಗಳೂರು ೨೦೧೫-೧೬ ನೇ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಕಲಿಕೆ, ಅದಕ್ಕಾಗಿ ಅಳವಡಿಸಿಕೊಂಡಿರುವ ನೂತನ ವಿಧಾನಗಳು, ಮಾಡಿಕೊಂಡಿರುವ ತಯಾರಿಗಳು, ಈ ಪ್ರಕ್ರಿಯೆಯಲ್ಲಿ ಪೋಷಕರ ಪಾತ್ರ, ವಾರ್ಷಿಕ ಗುರಿಯನ್ನು ತಲುಪಲು ರಚಿಸಿರುವ ದಿನ-ದಿನದ ಕಾರ್ಯಚಟುವಟಿಕೆಗಳು – ಇವನ್ನೆಲ್ಲಾ ಪೋಷಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಪ್ರತಿವರ್ಷದ ಆರಂಭಕ್ಕೆ ಪೋಷಕರ ಸಭೆಯನ್ನು ಆಯೋಜಿಸಲಾಗುವುದು. ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆ, ಅದಕ್ಕೆ ತಕ್ಕ ಅವರ ಅಗತ್ಯಗಳನ್ನು ಅರಿತು ಪಠ್ಯಕ್ರಮವನ್ನು ರಚಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಸೂಕ್ತ ಮಾರ್ಗವನ್ನು ಕಂಡುಕೊಳ್ಳುತ್ತಾ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಿರಂತವಾಗಿ ನಡೆದಿದೆ. ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ Learner centric approach ಅಥವಾ Montessori ವಿಧಾನದಿಂದ ಮಕ್ಕಳ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸಬಹುದೆಂದು ಮನಗಂಡು ಶಾಲೆಯ ಎಲ್ಲಾ ಶಿಕ್ಷಕರೂ ಈ ತರಬೇತಿಯನ್ನು ಪಡೆದರು. ಶಿಕ್ಷಕರ ಕಲಿಕೆ, ಅವರು ಮಕ್ಕಳಿಗಾಗಿ ಮಾಡಿಕೊಂಡಿರುವ ತಯಾರಿಗಳನ್ನು ಪೋಷಕರ ಮುಂದಿಡುವುದು ಮೊದಲ ಹೆಜ್ಜೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮ ೯.೧೫ಕ್ಕೆ ಪ್ರಾರಂಭವಾಯಿತು. ದೀಪ ಬೆಳಗಿಸಿ, ಸಂಸ್ಕೃತದಲ್ಲಿ ಎಲ್ಲರಿಗೂ ಸ್ವಾಗತ ಕೋರಿ ಸಾಂಪ್ರದಾಯಿಕ ರೀತಿಯಲ್ಲಿ ಸಭೆಯನ್ನು ಆರಂಭಿಸಲಾಯಿತು. -೦- ಮೊದಲಿಗೆ  ಶ್ರೀನಿವಾಸ್ ಅವರು ಶಾಲೆಯ ಪೂರ್ವ-ಪರಗಳ ಬಗ್ಗೆ ಸ್ಥೂಲ ಚಿತ್ರಣವನ್ನು ಕೊಟ್ಟ ಬಗೆ ಹೀಗಿದೆ: ಐದು ವರ್ಷದ ಕೆಳಗೆ ಪೂಜ್ಯ ಪೇಜಾವರ ಸ್ವಾಮೀಜಿಯವರು ದೀಪ ಬೆಳಗಿಸಿ ಆರಂಭಿಸಿದ ಸಂಸ್ಥೆ ಸತ್ಯನಾರಾಯಣಾಚಾರ್ಯರು ಹೇಳಿದಂತೆ ಒಂದು ಪ್ರಮುಖ ಘಟ್ಟದಲ್ಲಿ ಬಂದು ನಿಂತಿದೆ. ಯಾವುದೇ ಸಂಸ್ಥೆಯ ಬೆಳವಣಿಗೆಗೆ ಮೊದಲ ೫ ವರ್ಷ ಭದ್ರವಾಗಿ ನೆಲೆಯೂರಲು ಬಹಳ ಪ್ರಮುಖವಾದುದು. ಮೊದಲ ಘಟ್ಟದಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ಶಿಕ್ಷಣವನ್ನು ಒಂದು ವೇದಿಕೆಯಲ್ಲಿ ತರುವುದು, ಸಂಘಟನೆ ನಮ್ಮ ಗುರಿಯಾಗಿತ್ತು. ಎರಡನೆಯ ಘಟ್ಟದಲ್ಲಿ ಇವು ಸಮ್ಮಿಳಿತಗೊಂಡಾಗ ಆಗಬಹುದಾದ ಸೃಷ್ಟಿಗಳನ್ನು ಮಕ್ಕಳು ಹಲವು ಚಟುವಟಿಕೆಗಳ ಮೂಲಕ ತೋರಿಸಿದ್ದಾರೆ. ಮೂರನೆಯ ಘಟ್ಟದಲ್ಲಿ ಕಲಿಕೆಯನ್ನು ಆಳವಾಗಿ ಅಭ್ಯಾಸ ಮಾಡುವುದು. ಕಲಿಕೆ ಹೇಗೆ ಆಗುವುದು? ಪ್ರತಿಯೊಂದು ಮಗುವಿಗೂ ಕಲಿಕೆ ಪರಿಪೂರ್ಣವಾಗಿ ಆಗುವುದು ಹೇಗೆ ಸಾಧ್ಯ? ಹೀಗೆ ಮೂಲಭೂತ ಕಾರ್ಯದಲ್ಲಿ ತೊಡಗಿದೆ. ಅದಕ್ಕೆ ಬೇಕಾದ ತರಬೇತಿಯು ಈಗಾಗಲೇ ಪ್ರಾರಂಭವಾಗಿದೆ. ಈ ವರ್ಷದಲ್ಲಿ ಒಂದು ತರಗತಿಯಲ್ಲಿ ಕೂತು ಅಧ್ಯಾಪಕರು ನಿರ್ಧರಿಸಿದ ಪಾಠಗಳನ್ನು ಕಲಿಯುವ ಮಾರ್ಗದಿಂದ ಮಗು ಕಲಿಯಲು ಬಯಸುವುದನ್ನು ಅದರ ಗತಿಗೆ ತಕ್ಕಂತೆ ಕಲಿಸುವೆಡೆಗೆ ಬದಲಾಗಿದೆ. Child centric ಎಂದರೆ ಮಗು ಮಾತ್ರ ಅಲ್ಲ, ಅಧ್ಯಾಪಕರೂ ಕೂಡ. ಎಲ್ಲರೂ ಕಲಿಯುತ್ತಾರೆ. ಹಾಗಾಗಿ ಇದು Learner Centric ಎಂದರೆ ಹೆಚ್ಚು ಸೂಕ್ತ. ಅಧ್ಯಾಪಕರೂ ಇಲ್ಲಿ ಹಿರಿಯ ವಿದ್ಯಾರ್ಥಿಗಳು ಮಾತ್ರ ಆಗಿರುತ್ತಾರೆ. ಮಕ್ಕಳೊಂದಿಗೆ ಎಲ್ಲರೂ ತೊಡಗಿ ಕಲಿಯುವುದು. ಇದೊಂದು  Joint learning  à²µà³à²¯à²µà²¸à³à²¥à³†. ಅಧ್ಯಾಪಕರು ಕಲಿತು ಬಂದ ಪಾಠವನ್ನು ಮಕ್ಕಳಿಗೆ ಕಲಿಸುವುದು ಎನ್ನುವುದಕ್ಕಿಂತ ಕಲಿಯುವ ಒಂದು ಸಮುದಾಯ ಇದಾಗಬೇಕು. ಒಂದು ಕುಟುಂಬದಲ್ಲಿ ಅಜ್ಜ, ಅಪ್ಪ, ಮಗ ಮೂವರು ಒಂದು ಕಲಿಯುವ ಕುಟುಂಬದಂತೆಯೇ ಈ ಕಲ್ಪನೆ. (೧) ಮಕ್ಕಳಿಗೆ ಒಳ್ಳೆಯ ಕಲಿಕೆಯ ಪರಿಸರ (ಅದು ಬೋಧನಾ ಸಾಮಗ್ರಿಗಳಾಗಿರಬಹುದು, ಸಾಧನಗಳು, ಪುಸ್ತಕಗಳು, ಚಟುವಟಿಕೆಗಳು, ಅಲ್ಲಿರುವ ಹಿರಿಯರಾಗಿರಬಹುದು, ಪ್ರಕೃತಿಯಾಗಿರಬಹುದು) (೨) ಅಧ್ಯಾಪಕರಾಗಿ ಆ ಎಲ್ಲವನ್ನೂ ಮೊದಲು ನಾವು ಮೊದಲು ಕಲಿತಿರಬೇಕು – ಎಂಬ ಎರಡು ಪ್ರಮುಖ ಅಂಶಗಳೊಂದಿಗೆ ಈ ವರ್ಷದ ಪಠ್ಯಕ್ರಮವನ್ನು ರೂಪಿಸಲಾಗಿದೆ. ಮೂರನೆಯದಾಗಿ ಇದೊಂದು ಕಲಿಕಾತಾಣ ಮಾತ್ರ ಆದರೆ ಹೆಚ್ಚು ಪರಿಣಾಮಕಾರಿಯಾಗಲಾರದು, ಬದಲಾಗಿ ಕಲಿಯುವ-ಜೀವಿಸುವ ಒಂದು ಸಮುದಾಯವಾಗಬೇಕು. ಆ ನಿಟ್ಟಿನಲ್ಲಿ ಆನಂದವನವು ತಯಾರಾಗುತ್ತಿದೆ.   ಈ ವರ್ಷ Anubhava Science Centre ನ ಗೀತಾ ಅರವಿಂದ್, ಕ್ಷಮಾ, ಅಂಜು ಅವರ ಸಹಾಯದಿಂದ ನಮ್ಮ ಶಾಲೆಯಲ್ಲಿ ಒಂದು science-math lab ತಯಾರಾಗಬೇಕೆಂಬುದು ಈ ವರ್ಷದ ಗುರಿಯಾಗಿದೆ. ಹರೀಶ್ ಭಟ್ ಅವರು ಮಕ್ಕಳಿಗೆ ಹಲವು ಉತ್ತಮ project ಗಳ ಮೂಲಕ ನಿರ್ದಿಷ್ಟವಾದ ಕಲಿಕೆಯಲ್ಲಿ ತೊಡಗಲಿದ್ದಾರೆ, ಗುರುಪ್ರಸಾದ್ ಅಥಣಿ ಅವರು ಭೌತಶಾಸ್ತ್ರದ ಬಗ್ಗೆ ಮತ್ತು  competitive exam  à²¦à³ƒà²·à³à²Ÿà²¿à²¯à²¿à²‚ದ ಮಕ್ಕಳನ್ನು ತಯಾರು ಮಾಡಲು ಎರಡು ವರ್ಷಗಳ ಪೂರ್ಣಾವಧಿಯ ಯೋಜನೆಯನ್ನು ರೂಪಿಸಿದ್ದಾರೆ. ಪ್ರಾಣೇಶಾಚಾರ್ಯರು Olympiad ನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಸಮಯ ನೀಡಲಿದ್ದಾರೆ. ವಿಶ್ವೇಶ ಗುತ್ತಲ್ ಅವರು Project based learning ನಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ವರ್ಷದ Theme ಆನಂದವನ ಆಗಿರುವುದು. Architecture ನಿಂದ ಆರಂಭಿಸಿ Field work ವರೆಗೆ ಅಲ್ಲಿನ ಎಲ್ಲಾ ಕೆಲಸಗಳಲ್ಲಿ ಮಕ್ಕಳು ಭಾಗಿಯಾಗಲಿದ್ದಾರೆ. ನಾಗೇಶ್ ಹೆಗಡೆ ಅವರು ಪರಿಸರ ಸ್ನೇಹ ಜೀವನ ಮತ್ತು ಉತ್ತಮ ಬರವಣಿಗೆ ದೃಷ್ಟಿಯಿಂದ, ಸುಭಾಶ್-ಯೋಗಾನಂದ ಅವರು ಸಂಪೂರ್ಣ Planning ನಲ್ಲಿ ಮಕ್ಕಳೊಂದಿಗೆ ಕಾರ್ಯ ಮಾಡಲಿದ್ದಾರೆ. ಈ ವರ್ಷದ Electives ನಲ್ಲಿ ಕಲೆಗಳನ್ನು ಮಾತ್ರ ಹೇಳಿಕೊಡಲು ನಿರ್ಧರಿಸಲಾಗಿದೆ. ಕರ್ನಾಟಕ ಸಂಗೀತ, ಭರತನಾಟ್ಯ, ಕಲರಿ ಪಯಟ್ಟು, ಚಿತ್ರಕಲೆ ಮುಂದುವರೆಯಲಿದೆ. Affiliation ದೃಷ್ಟಿಯಿಂದ ಸ್ಪಷ್ಟ ಉತ್ತರವನ್ನು ಮುಂದಿನ ವರ್ಷಕ್ಕೆ ನೀಡಬಹುದಾಗಿದೆ. NIOS, IGCSE, CBSE, State board ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಯೋಚನೆ ನಡೆಯುತ್ತಿದೆ. -೦- ನಂತರ ಪುಷ್ಪಾ ಅವರು Learner Centric approach  à²¹à³‡à²—ಿರುವುದು, ಅಲ್ಲಿ Teacher ಪಾತ್ರ ಏನು? ಅಲ್ಲಿ ಮಗು ಹೇಗೆ ಕಲಿಯುವುದು? ಎನ್ನುವುದನ್ನು ತಿಳಿಸಿದರು. ಅದರ ಪ್ರಮುಖಾಂಶಗಳು ಇಲ್ಲಿವೆ: ಕಲಿಕೆ ಎಂಬುದು ಒಂದು ಸಹಜವಾದ ಪ್ರಕ್ರ‍ಿಯೆ. ಹಿರಿಯರಾಗಲಿ, ಕಿರಿಯರಾಗಲಿ ಕಲಿಯುವ ಒಂದು ಗುಣ ಎಲ್ಲರೊಳಗೂ ಇರುವುದು. ಶಾಲೆಯಲ್ಲಿ ಸಿಗುವ ಶಿಕ್ಷಣ ಇದಕ್ಕೆ ಪೂರಕವಾಗಿರಬೇಕು. ಹಾಗಾಗಿ ಇಲ್ಲಿ ಮಗುವಿನ ಅಗತ್ಯ, ಕಲಿಕೆಯ ಗತಿಯನ್ನು ಅರಿತು ಅದನ್ನು ಗೌರವಿಸಿ ಮುಂದುವರೆಯಬೇಕು. ಇದಕ್ಕೆ ಪೂರಕವಾದ ಪರಿಸರವನ್ನು ಸಿದ್ಧಗೊಳಿಸುವುದು ಪ್ರಮುಖವಾದ ಕೆಲಸ. ಸೂಕ್ತವಾದ ಬೋಧನಾ ಸಾಮಗ್ರಿಗಳಿಂದ ಮಕ್ಕಳು ಯಾವುದೇ ವಿಷಯದ ಪರಿಕಲ್ಪನೆಯನ್ನು ಅರಿತು ಮುಂದೆ ತಾವೇ ಅದನ್ನು ಮುಂದುವರೆಸುತ್ತಾ ಅಮೂರ್ತದೆಡೆಗೆ ಸಾಗಬೇಕು. ಮಗುವಿನ ಬೆಳವಣಿಗೆಯ ಹಂತಗಳನ್ನು ಅರಿಯುವುದು ಮುಖ್ಯ. ೦-೬, ೬-೧೨ ವರ್ಷಗಳಲ್ಲಿ ಮಗುವಿನಲ್ಲಾಗುವ ಬದಲಾವಣೆ, ಜೊತೆಗೆ ಮಗುವಿನ ಆಂತರಿಕ ಸಾಮರ್ಥ್ಯವನ್ನು ಅರಿಯಬೇಕು. ಅಧ್ಯಾಪಕರು ಇಲ್ಲಿ ಕೇವಲ ಸಹಾಯಕರಾಗಿರುತ್ತಾರೆ. ಹೇಳಿಕೊಡುವುದು ಎನ್ನುವುದಕ್ಕಿಂತ ಸಾಮಗ್ರಿಗಳಿಂದ ಮಕ್ಕಳೇ ಸ್ವತಃ ಕಲಿಯುವುದು ಹೇಗೆ ಎಂಬುದನ್ನು ಕಲಿಸಬೇಕು. ಈಗ ಇಷ್ಟೇ ಕಲಿಯಬೇಕೆಂದು ಅಧ್ಯಾಪಕರು ನಿರ್ಧರಿಸುವುದಿಲ್ಲ. ಮಕ್ಕಳೊಂದಿಗೆ ಕೂತು ಮಗು ಏನನ್ನು ಕಲಿಯಲು ಬಯಸುತ್ತಿದೆ ಎಂಬುದನ್ನು ಯೋಜಿಸಲಾಗುವುದು. ಮಗುವಿಗೆ ಬೇಕಾದುದನ್ನು ಮಗುವೇ ಆಯ್ಕೆ ಮಾಡುವುದು. ಗಣಿತ, ಇತಿಹಾಸ, ಭಾಷೆ, ವಿಜ್ಞಾನ, ಭೂಗೋಳ, ಜೀವಶಾಸ್ತ್ರ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಎಲ್ಲವೂ ನಮ್ಮ ಸುತ್ತಲಿನ-ನಿತ್ಯದ ಜೀವನದೊಂದಿಗೆ ಇರುವ ಸಂಬಂಧವನ್ನು ಗುರುತಿಸುವುದನ್ನು ತೋರಿಸುವುದು ನಮ್ಮ ಉದ್ದೇಶ. ತನ್ಮೂಲಕ ಮಗುವೇ ಅದನ್ನು ಕಲಿಯುವುದು. ಕಲಿಕೆ ಪುಸ್ತಕಕ್ಕೆ ಸಂಬಂಧಪಟ್ಟಿದ್ದಕ್ಕಿಂತ ನಮಗೆ ಸಂಬಂಧಪಟ್ಟಿದ್ದು ಎಂಬುದನ್ನು ಮಗುವಿಗೆ ತೋರಿಸುವುದು. -೦- ಪ್ರತಿಯೊಂದು Environment ನಲ್ಲಿ ಇರುವ ನಿತ್ಯ ಕಲಿಕಾ ವ್ಯವಸ್ಥೆಗಳ ಬಗ್ಗೆ ಗೀತಾ ಅವರು ಪೋಷಕರಿಗೆ ಮಾಹಿತಿ ನೀಡಿದರು: ಮೊದಲೆರೆಡು ವಾರಗಳಲ್ಲಿ ಮಕ್ಕಳು ಇರುವ ಹಂತವನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಂದ ಮುಂದೆ ಪ್ರತ್ಯೇಕ ಮಗುವಿಗೆ ಮಾಡಬಹುದಾದ ಯೋಜನೆಯನ್ನು ಅಧ್ಯಾಪಕರು ಮಕ್ಕಳೊಂದಿಗೆ ಚರ್ಚಿಸಿ ರೂಪಿಸುವರು. ಆ ಯೋಜನೆಯನ್ನು ಮಗುವಿನ Dairy ಯಲ್ಲಿ ನೀಡಲಾಗುವುದು. ಇದರಲ್ಲಿ ಪ್ರತಿದಿನ ನಡೆದ ಚಟುವಟಿಕೆಗಳನ್ನು ನಮೂದಿಸಲಾಗುವುದು. ಪ್ರತಿ ಶನಿವಾರ ಮಕ್ಕಳು ಮತ್ತು ಅಧ್ಯಾಪಕರು ತಾವು ವಾರದಲ್ಲಿ ಕಲಿತಿರುವ ವಿಷಯದ ಅವಲೋಕನ ನೀಡಬೇಕಾಗುವುದು ಅಧ್ಯಾಪಕರು ಪ್ರತಿಯೊಂದು ಮಗುವಿನ presentation-observation ಅನ್ನು ಬರೆದಿಡುವರು. à³­-à³® ಪೋಷಕರು ತಿಂಗಳ ಒಂದು ಶನಿವಾರದಂದು ಶಾಲೆಗೆ ಬಂದು ಮಕ್ಕಳ ಕಲಿಕೆ ಹೇಗಾಗುತ್ತಿದೆ? ಯೋಜನೆಗಳೇನು? ಎಂಬುದನ್ನು ಅಧ್ಯಾಪಕರೊಂದಿಗೆ ಚರ್ಚಿಸಿ ತಿಳಿದುಕೊಳ್ಳುವ ವ್ಯವಸ್ಥೆ ಇರುವುದು. -೦- ಸಂಸ್ಕೃತ ಪರಿಚಯ: ನಮ್ಮ ವಿದ್ಯಾರ್ಥಿಗಳು ಸಂಸ್ಕೃತ ಪ್ರಥಮಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಸಂಸ್ಕೃತದಲ್ಲೇ ಮಕ್ಕಳೊಂದಿಗೆ, ಎಲ್ಲರೊಂದಿಗೂ ಸಂಭಾಷಣೆ ಮಾಡುವ ಮೂಲಕ ಸಂಸ್ಕೃತ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶವಿದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪ್ರಭಾ, ವಿಭಾ, ಪ್ರಭಾ ಪ್ರದೀಪ, ಕಾವ್ಯ, ಸಾಹಿತ್ಯ ಪಠ್ಯಪುಸ್ತಕಗಳನ್ನೇ ಈ ವರ್ಷ ನಮ್ಮ ಮಕ್ಕಳಿಗೆ ಅಳವಡಿಸಿಕೊಳ್ಳಲಾಗಿದೆ. ಒಂದೊಂದು ಪಾಠವನ್ನು ಒಂದೊಂದು ಪ್ರತ್ಯೇಕ ಕಿರುಪುಸ್ತಕವಾಗಿ ಮಾಡಲಾಗಿದೆ. ಇದರಿಂದ ಮಕ್ಕಳಿಗೆ ಒಂದೊಂದನ್ನು ಮುಗಿಸಿದಾಗಲೂ ವಿಶಿಷ್ಟ ಆನಂದವನ್ನು ಅನುಭವಿಸುವರು. ನಾಮಪದ, ಕ್ರಿಯಾಪದಗಳನ್ನು ಪಾಠ ಮಾಡಲು ಅನೇಕ ಬೋಧನಾ ಸಾಮಗ್ರಿಗಳನ್ನು ತಯಾರಿಸಲಾಗಿದೆ. ಬಿಡಿಭಾಗಗಳನ್ನು ಜೋಡಿಸಿ ಮಕ್ಕಳು ಆಟದೊಂದಿಗೆ ಶಬ್ದಗಳನ್ನು, ಕ್ರಿಯಾಪದಗಳನ್ನು ಕಲಿಯುತ್ತಾರೆ. ಇನ್ನೂ ಅನೇಕ ಕಥಾ ಪುಸ್ತಕಗಳೂ ಮಕ್ಕಳ ಅಧ್ಯಯನಕ್ಕೆ ಇಡಲಾಗಿದೆ.   ಕನ್ನಡ, ತತ್ವದರ್ಶನಗಳ ಪರಿಚಯ: ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಯನ್ನು ಹಂತ ಹಂತವಾದ ವೈಜ್ಞಾನಿಕ ವಿಧಾನಗಳಿಂದ ಬೆಳೆಸಲಾಗುವುದು. ಪ್ರಾಥಮಿಕ ಹಂತಗಳಲ್ಲಿ ಪದ-ಪದಾರ್ಥ ಪರಿಚಯ, ಕಥೆ, ಹಾಡು, ಪದ್ಯಗಳ ಮೂಲಕ ಮೌಖಿಕವಾಗಿ ಸ್ಪಷ್ಟ ಉಚ್ಚಾರಣೆಗೆ ಹೆಚ್ಚು ಒತ್ತು ನೀಡಲಾಗುವುದು. ಮಾತು ಸ್ಪಷ್ಟವಾದ ನಂತರವೆ ಬರವಣಿಗೆಗೆ ತೊಡಗುವುದು. ಧ್ವನಿ ವಿಶ್ಲೇಷಣೆಯ ಮೂಲಕ ಮಕ್ಕಳಿಗೆ ಶಬ್ದಗಳನ್ನು ಗುರುತಿಸುವುದು ಬಂದರೆ ತಪ್ಪು ಬರೆಯಲು-ಹೇಳಲು ಸಾಧ್ಯವೇ ಇರುವುದಿಲ್ಲ. ಇದು ಸಾಂಪ್ರದಾಯಿಕ ಶೈಲಿಯೂ ಹೌದು. ವಾಕ್ಯ ರಚನೆ ಮತ್ತು ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು Logical analysis ಅಥವಾ ಕಾರಕ ಪರಿಚಯಗಳ ಮೂಲಕ ಹೇಳಿಕೊಡುವುದು. ವಾಕ್ಯ ವಿಶ್ಲೇಷಣೆಗೆ ಬೇಕಾದ ನಾಮ, ಕ್ರಿಯೆ, ಕಾಲ, ಲಿಂಗ, ವಚನಗಳ ಹೇಳಿಕೊಡುವುದು. ಇದರಿಂದ ಎಂತಹ ಕ್ಲಿಷ್ಟವಾಕ್ಯವನ್ನಾದರೂ ಸುಲಭವಾಗಿ ತಿಳಿಯಲು, ತಪ್ಪಿಲ್ಲದ ವಾಕ್ಯರಚನೆ ಸಾಧ್ಯ. ಈ ಹಂತದಲ್ಲಿ ಪಠ್ಯಪುಸ್ತಕವನ್ನು ಪರಿಚಯಿಸಿಲಾಗುವುದು. ಇದರಿಂದ ಮಕ್ಕಳೇ ಪಾಠಗಳನ್ನು ಓದಿ ಅಭ್ಯಾಸ ಚಟುವಟಿಕೆಗಳನ್ನು ಮಾಡುವರು. ವಾಕ್ಯ ರಚನೆ ಕಲಿತ ನಂತರ ಟಿಪ್ಪಣಿ, ಸಾರಾಂಶ, ಪದ್ಯಗಳನ್ನು ವಿಶ್ಲೇಷಿಸುವುದು, ಲೇಖನಗಳನ್ನು ಅರಿಯುವುದು, ಭಾವಾರ್ಥ ರಚಿಸುವುದರ ಕಡೆ ಗಮನ ನೀಡಲಾಗುವುದು. ಗದ್ಯ-ಪದ್ಯ-ನಾಟಕ-ಹಳಗನ್ನಡ-ಕನ್ನಡ ಛಂದಸ್ಸಿನ ಬಗೆಗೆ à³­ ಮತ್ತು à³® ನೇ ತರಗತಿಯ ಮಕ್ಕಳು ಕಲಿಯಲಿದ್ದಾರೆ. ರಾಮಾಯಣ-ಮಹಾಭಾರತ-ಭಾಗವತ-ಉಪನಿಷತ್ತಿನ ಕಥೆಯ ಮೂಲಕ ಭಾರತೀಯ ಪರಂಪರೆ, ಸಂಸ್ಕೃತಿ, ಮೌಲ್ಯಗಳ ಪರಿಚಯ ಮತ್ತು ಭಾಷಾ ಬೆಳವಣಿಗೆಯನ್ನೂ ಮಾಡಲಾಗುವುದು. ಮಗುವಿನ ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ತತ್ವದರ್ಶನದ ಮೂಲಕ ದಾಸರಪದಗಳು, ದೇವರ ನಾಮಗಳನ್ನು ಹೇಳಿಕೊಡಲಾಗುವುದು. -೦- ಪರಿಸರ ಮತ್ತು ಅಧ್ಯಾಪಕರ ಪರಿಚಯ ೬-೯ ವರ್ಷದ ಸುಮಾರು ೭೦ ಮಕ್ಕಳನ್ನು ೩ ಗುಂಪುಗಳಾಗಿ ಮಾಡಲಾಗಿದೆ. ಈ ವಿಭಾಗ ‘ಶಿವಂ’ ಕಟ್ಟಡದಲ್ಲಿರುವುದು. ಉಮಾ-ವಿಕ್ರಮಸಿಂಹ-ಶೈಲಜಾ ಹೊಳ್ಳ, ಮೀನಾ-ಬಾಲಚಂದ್ರ-ಸಂಧ್ಯಾ, ಬದರಿನಾರಾಯಣ ಕಟ್ಟಿ-ಗೌರಿ-ರಂಜಿತಾ ಪ್ರಮುಖ ಅಧ್ಯಾಪಕರಾಗಿರುತ್ತಾರೆ. ಧೃವ, ಪ್ರಹ್ಲಾದ, ನಚಿಕೇತ ಎಂದು ಪರಿಸರಗಳಿಗೆ ಹೆಸರು ನೀಡಲಾಗಿದೆ. ಪ್ರತಿಯೊಂದು ಮಗುವಿಗೂ ಪ್ರತ್ಯೇಕ ಯೋಜನೆಗಳಿರುವುದು. ಎಲ್ಲ ಮಕ್ಕಳನ್ನು ಗಮನಿಸಿ ಅವರ ಗತಿಗೆ ತಕ್ಕಂತೆ ಕಲಿಸಲಾಗುವುದು. ಮೂರು ಪರಿಸರಗಳಲ್ಲೂ ಒಂದೆ ರೀತಿಯ ಕಲಿಕೆಗೆ ವ್ಯವಸ್ಥೆ ಇರುವುದು. ಪ್ರತಿ ತಿಂಗಳ ಕೊನೆಯ ಶನಿವಾರ ಮಕ್ಕಳೇ ಕುಳಿತು ಆದ ಕಲಿಕೆಯನ್ನು ಚರ್ಚಿಸುತ್ತಾರೆ. ಯಾವುದೆ ವೇಳಾಪಟ್ಟಿ ಇರುವುದಿಲ್ಲ. ಸಮಯದ ಮಿತಿಯೂ ಇರುವುದಿಲ್ಲ. ಮಗುವೇ ಎಷ್ಟು ಹೊತ್ತು, ಏನನ್ನು ಕಲಿಯಬೇಕೆಂಬುದನ್ನು ಆಸಕ್ತಿಯ ಮೂಲಕ ಸೂಚಿಸುವುದು. ಅದಕ್ಕೆ ತಕ್ಕಂತೆ ಅಧ್ಯಾಪಕರು ಯೋಜನೆಯನ್ನು ಮಾಡುತ್ತಾರೆ. ಕನ್ನಡ-ಇಂಗ್ಲಿಷ್-ಸಂಸ್ಕೃತ ಮೂರು ಭಾಷೆಯ ಓದಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಪೋಷಕರೂ ಮನೆಯಲ್ಲಿ ಇದನ್ನು ದಿನದಲ್ಲಿ ೧೫ ನಿಮಿಷ ಇದಕ್ಕಾಗಿ ಮೀಸಲಾಗಿಸಿದರೆ ಉತ್ತಮ. ಪೋಷಕರೂ ಮಕ್ಕಳೊಂದಿಗೆ ಸೇರಿ ಓದಿದರೆ ಮಾತ್ರ ಮಕ್ಕಳಿಗೆ ಉತ್ಸಾಹ ಬರುವುದು. Asset ಪರೀಕ್ಷೆಗಾಗಿ IEO, IMOS, NSO ಪುಸ್ತಕಗಳನ್ನು ಕೊಂಡುಕೊಳ್ಳಬಹುದು. ಶಾಲೆಯಿಂದ Home work ಕಳುಹಿಸಿದಾಗ ಈ ಪುಸ್ತಕಗಳ ಮೂಲಕ ಪೋಷಕರು ಮಾಡಿಸಬಹುದು. NCERT ಪುಸ್ತಕಗಳನ್ನು

Anandavana Inauguration Invitation

Anandavana Inauguration Invitation

Wednesday, May 27th, 2015
Purnapramati Utsava 2015 Invitation

Purnapramati Utsava 2015 Invitation

Saturday, March 14th, 2015
A trip to Nandihills - Report

A trip to Nandihills – Report

Thursday, July 31st, 2014

ನಂದಿಯ ಬೆನ್ನೇರಿ ನಮ್ಮ ಪ್ರವಾಸ ದಿನಾಂಕ: 25.07.2014 ಪ್ರತಿ ವರ್ಷದಂತೆ ಈ ವರ್ಷವು ಶಾಲೆಯು ಮಕ್ಕಳಿಗೆ ಪ್ರವಾಸವನ್ನು ಆಯೋಜಿಸಲಾಯಿತು. ಗಿಜಿಗುಡುವ ನಗರದ ವಾತಾವರಣದಿಂದ ಸ್ವಲ್ಪ ಹೊತ್ತು ದೂರವಿದ್ದು ಪ್ರಕೃತಿಯ ಮಡಿಲಲ್ಲಿ ಮಕ್ಕಳನ್ನು ತೂಗಿಸುವ ಉದ್ದೇಶ ನಮ್ಮದು. ಕೇವಲ ಮನರಂಜನೆಯೇ ಪ್ರವಾಸದ ಉದ್ದೇಶವಲ್ಲ. ಮನರಂಜನೆಯ ಮೂಲಕ ಉತ್ತಮ ಶಿಕ್ಷಣವನ್ನು ನೀಡುವ ಹಂಬಲ, ಜೊತೆಗೆ ಸಾಹಸ ಪ್ರವೃತ್ತಿಯೂ ಮಕ್ಕಳಲ್ಲಿ ಬೆಳೆಸಬೇಕು. ಬದುಕಿನಲ್ಲಿ ಉತ್ಸಾಹವು ಎಂದೂ ಬತ್ತಬಾರದು. ಧೈರ್ಯವೂ ಅವರಲ್ಲಿ ಮೂಡಬೇಕು ಎಂಬ ಅನೇಕ ಉದ್ದೇಶದಿಂದ ಪ್ರವಾಸಕ್ಕೆ ಸ್ಥಳವೊಂದನ್ನು ಆಯ್ಕೆ ಮಾಡಲಾಯಿತು. ಅದು ಬೆಂಗಳೂರಿನಿಂದ ಸುಮಾರು 2 ಗಂಟೆ ಪ್ರಯಾಣವನ್ನು ಹೊಂದಿರುವ ನಂದಿ ಎಂಬ ಗಿರಿಧಾಮ. ಮಕ್ಕಳನ್ನು ಅಲ್ಲಿಗೆ ಕರೆದೊಯ್ಯುವ ಮೊದಲು ಸ್ಥಳದ ಪರಿಚಯ, ಮಕ್ಕಳ ರಕ್ಷಣೆ, ಅವರ ಊಟ ಉಪಚಾರಕ್ಕೆ ತಂಗುವ ಸ್ಥಳ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಬೇಕಾದ ಸಮಯ, ಹೀಗೆ ಎಲ್ಲದರ ಬಗ್ಗೆಯೂ ಕ್ರಮಬದ್ಧವಾದ ಯೋಜನೆಯನ್ನು ಮಾಡಲು ರಘುರಾಮಣ್ಣ ಮತ್ತು ಶ್ರೀನಿವಾಸಣ್ಣ ನಂದಿಬೆಟ್ಟಕ್ಕೆ ಹೋಗಿಬಂದರು. ಯೋಜನೆಯನ್ನು ಸಿದ್ಧಪಡಿಸಿ ದಿನಾಂಕ 25.07.2014ರಂದು ಹೊರಡುವುದೆಂದು ತೀರ್ಮಾನಿಸಲಾಯಿತು. ಹಿಂದಿನ ದಿನವೇ ಪ್ರವಾಸದಲ್ಲಿ ಸಂಗ್ರಹಿಸಬೇಕಾಗಿರುವ ಸೂಕ್ಷ್ಮವಿಷಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು. ನಸುಕಿನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಅಧ್ಯಾಪಕರ ಮಕ್ಕಳ ಪರಿಷೆ ಶಾಲೆಯಲ್ಲಿ ಸೇರಿತ್ತು. ಮಕ್ಕಳನ್ನು ಎಂಟು ಗುಂಪುಗಳಾಗಿ ವಿಂಗಡಿಸಿ ಗುಂಪಿಗೆ ತಲಾ ಇಬ್ಬರನ್ನು ನೇತಾರರನ್ನಾಗಿ ಆರಿಸಿದೆವು. ಎಲ್ಲಾ ತಂಡಗಳಿಗೂ ಒಬ್ಬೊಬ್ಬ ಅಧ್ಯಾಪಕರೂ ಮುಖ್ಯ ನಿರ್ವಾಹಕರಾಗಿ ನಿಂತರು. ಎಂದಿನಂತೆ ಶಾಲಾಪ್ರಾರ್ಥನೆಯನ್ನು ಮಾಡಿ ಪಂಚಾಂಗ ಪಠನ ಮಾಡಿ ಸಿದ್ಧವಾಗಿ ನಿಂತಿದ್ದ ವಾಹನವನ್ನು ಹತ್ತಿದೆವು. ಬೆಂಗಳೂರಿನ ಸರಹದ್ದನ್ನು ದಾಟಿ ದೊಡ್ಡಬಳಾಪುರವನ್ನು ಹಾದು 7.30ಕ್ಕೆ ನಂದಿಬೆಟ್ಟದ ತಪ್ಪಲನ್ನು ತಲುಪಿದೆವು. ಗದ್ದೆಯ ಒಂದು ಬದಿಯಲ್ಲಿ ಇಳಿದು ಮತ್ತೆ ತಮ್ಮ ತಮ್ಮ ತಂಡಗಳನ್ನು ಸರಿಯಾಗಿ ಸಜ್ಜುಗೊಳಿಸಿ ಸಣ್ಣ ಪ್ರಾರ್ಥನೆಯನ್ನು ಮಾಡಿ ನಂದಿ ಬೆಟ್ಟದ ದಾರಿಯಲ್ಲಿ ನಡೆದೆವು. ನಂದಿಯ ಬೆನ್ನೇರಿ ಮಕ್ಕಳಲ್ಲಿ ಧೈರ್ಯವನ್ನು ತುಂಬಲು ಸಾಹಸದ ಕೆಲಸವನ್ನು ಮಾಡಿಸಬೇಕು. ಹಾಗಾಗಿ ನಂದಿ ಬೆಟ್ಟವನ್ನು ವಾಹನದಲ್ಲಿ ಹತ್ತದೆ ಕಾಲಿನಿಂದಲೇ ಹತ್ತಲು ತೀರ್ಮಾನಿಸಿತ್ತು. ಮಕ್ಕಳಿಗೂ ಇದು ಬಲವಂತದ ಮಾಘಸ್ನಾನವಾಗಲಿಲ್ಲ. ಅವರ ಮೈಮನಗಳಲ್ಲಿ ಉತ್ಸಾಹವೇ ತುಂಬಿತ್ತು. ಜೊತೆಗೆ ವಾತಾರವಣವೂ ಹಿತವಾಗಿತ್ತು. ಸುತ್ತಲೂ ಎತ್ತರವಾದ ಗಿಡಮರಗಳು, ಹಕ್ಕಿಗಳ ಕಲರವ ‘ನದಿ’ಬೆಟ್ಟವನ್ನು ಆವರಿಸಿದ್ದ ಮೋಡ-ಇವೆಲ್ಲ ಮಕ್ಕಳ ಉತ್ಸಾಹದೊಂದಿಗೆ ಸೇರಿಕೊಂಡವು. ನಡೆಯುವುದೇ ಅಪರೂಪವಾದ ಈ ಕಾಲದಲ್ಲಿ ಕೆಲವು ಮಕ್ಕಳಿಗೆ ಬೆಟ್ಟವನ್ನು ಹತ್ತಲು ಆರಂಭದಲ್ಲಿ ಕಶ್ಟವಾದರೂ ಉತ್ಸಾಹಕ್ಕೇನು ಕೊರತೆ ಇರಲಿಲ್ಲ. ಆಯಾಸವಾದಾಗ ತಣ್ಣನೆಯ ಗಾಳಿ ಶೈತ್ಯೋಪಚಾರವನ್ನು ಮಾಡುತ್ತಿತ್ತು. ಹಿಂದಿನ ದಿನ ಹೇಳಿದ ಮಾತುಗಳನ್ನು ನೆನಪಿಟ್ಟು ಮಕ್ಕಳು ಸುತ್ತಲಿನ ಪರಿಸರವನ್ನು ಚೆನ್ನಾಗಿ ಪರೀಕ್ಷಿಸಿ ತಮ್ಮ ಪುಸ್ತಕದಲ್ಲಿ ನಮೂದಿಸಿಕೊಂಡರು. ಹಲವು ಕ್ರಿಮಿ, ಕೀಟಗಳನ್ನು ಕಂಡು ಆಶ್ಚರ್ಯದಿಂದ ಇನ್ನೊಬ್ಬರನ್ನು ಕರೆದು ಅದನ್ನು ತೋರಿಸುತ್ತಾ ನಡೆದರು. ಎತ್ತರಕ್ಕೆ ಹೋಗುತ್ತಿದ್ದ ಹಾಗೆ ಸುತ್ತಲ ವಿಹಂಗಮ ನೋಟಕ್ಕೆ ಕಣ್ಣುಗಳನ್ನರಳಿಸಿ ಆನಂದಿಸುತ್ತಿದ್ದರು. ಇರುವೆಗಳಂತೆ ಕಾಣುತ್ತಿದ್ದ ಹೊಲಗದ್ದೆಗಳು, ವಾಹನಗಳು, ಅಂಕುಡೊಂಕಾದ ದಾರಿಗಳು ಅವರಿಗೆ ತಮಾಷೆಯ ವಸ್ತುಗಳಾಗಿದ್ದವು. ಮುಟ್ಟಿದ ಕೂಡಲೆ ಹರಿಯುತ್ತಿದ್ದ ಕೀಟ ಸುತ್ತಿಕೊಂಡು ಪುಟ್ಟ ಚೆಂಡಿನಷ್ಟು ಗಟ್ಟಿಯಾಗುತ್ತಿದ್ದನ್ನು ನೋಡಿ ಅಧ್ಯಾಪಕರನ್ನು ಕರೆದು ಭಾವಚಿತ್ರವನ್ನು ತೆಗೆಯಲು ಹೇಳಿದರು. ಕೋಡುಬಳೆಯಂತೆ ಸುತ್ತಿಕೊಳ್ಳೂವ ‘ಒನಕೆಬಂಡಿ’ ಎಂಬ ನೂರಾರು ಕಾಲುಗಳ ಕೀಟ, ಬಸವನ ಹುಳು, ಹೀಗೆ ತಮ್ಮಂತೆಯೇ ಚೇಷ್ಟೆ ಮಾಡುವ ಮಂಗಗಳು, ಎಲ್ಲ ಅವರ ಕಲಿಕೆಯ ಭಾಗಗಳಾದವು. ಅವುಗಳ ಬಗ್ಗೆ ಬರೆದು ಹರೀಶ್ ಭಟ್ (ಪರಿಸರ ಅಧ್ಯಾಪಕರು) ಅಣ್ಣನಿಗೆ ಅವುಗಳನ್ನು ತೋರಿಸಬೇಕೆಂದು ಛಾಯಾಚಿತ್ರವನ್ನು ತೆಗೆದುಕೊಂಡೆವು. ಕೆಲವು ಮಕ್ಕಳು ಎಲ್ಲೂ ಕೂಡದೆ ಬೆಟ್ಟವನ್ನು ಹತ್ತುವ ಸಂಕಲ್ಪವನ್ನು ತೊಟ್ಟರು. ನುಡಿದಂತೆ ಕೆಲವರು ಕೂಡದೆ ಬೆಟ್ಟವನ್ನು ಹತ್ತಿದರು. 09.30ಕ್ಕೆ ಟಿಪ್ಪೂ ಸುಲ್ತಾನನ ಬೇಸಿಗೆಯ ಅರಮನೆಯನ್ನು ತಲುಪಿದ ಮಕ್ಕಳು ಹಸಿರು ಫಲಕಗಳಲ್ಲಿರುವ ಸ್ಥಳದ ಮಾಹಿತಿಗಳನ್ನು ಬರೆದುಕೊಂಡರು. ೯.೪೦ಕ್ಕೆ ‘ಅಮೃತ ಸರೋವರ’ ಎಂಬ ಸರೋವರವನ್ನು ಕಂಡು ಮುಂದೆ ನಡೆದವು. ಇದನ್ನು ಸರ್ ಮಿರ್ಜಾ ಇಸ್ಮಾಯಿಲ್ ಎಂಬ ದಿವಾನರು ಕಟ್ಟಿಸಿದರೆಂದು ಹೇಳಲಾಗುತ್ತದೆ.  ಮುಂದೆ ನಡೆದು ‘ಟಿಪ್ಪೂ ಪಾತಾಳ’ ಎದುರಿನ ಗುಡ್ಡವನ್ನು ಹತ್ತಿ ಬೆಳಗಿನ ಉಪಾಹಾರವನ್ನು ತಿಂದೆವು.  à²…ರ್ಕಾವತಿಯ ಉಗಮಸ್ಥಾನದಲ್ಲಿ ಉಪಾಹಾರದ ನಂತರ ಅಲ್ಲಿಂದ ಹೊರಟು ೧೦.೪೦ಕ್ಕೆ ಅರ್ಕಾವತಿಯ ನದಿಯ ಉಗಮಸ್ಥಾನಕ್ಕೆ ಬಂದೆವು. ಇಳಿಬಾವಿಯಂತೆ ಅಗಲ ಆಳವಿರುವ ಈ ಸ್ಥಳದಲ್ಲಿ ನೀರಿನ ಕುರುಹೇ ಇರಲಿಲ್ಲ. ಪ್ರವಾಸಿಗರ ತ್ಯಾಜ್ಯವೇ ಅಲ್ಲಿ ತುಂಬಿತ್ತು. ಉಗಮಸ್ಥಾನಕ್ಕೆ ಒದಗಿದ ಈ ಸ್ಥಿತಿಗೆ ಶಾಲೆ ಮನಸ್ಸು ಬಹಳ ಮಿಡಿಯಿತು. ಎಲ್ಲಾ ತಂಡಗಳೂ ಸರದಿಯಂತೆ ಇಳಿದು ಅಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿದೆವು. ಮತ್ತೆ ಹಿಂದಿನ ವೈಭವ ಮರುಕಳಿಸಲೆಂದು ಗಂಗಾ ಪ್ರಾರ್ಥನೆಯನ್ನು ಮಾಡಿದೆವು. ಮಾನವ ಪ್ರಯತ್ನದ ಜೊತೆಗೆ ದೈವದ ಅನುಗ್ರಹವೂ ಬೇಕೇಂಬ ಪಾಠವನ್ನು ಜ್ಞಾನಸ್ವರೂಪಾನಂದ ಸ್ವಾಮೀಜಿಯವರ ತಪಸ್ಸಿನಿಂದ ನಾವು ಕಲಿತಿದ್ದೆವು. ಕಣ್ಮುಚ್ಚಿ, ಕೈ ಮುಗಿದು ಪ್ರಾರ್ಥನೆಯನ್ನು ಮಾಡಿ ಇಡೀ ಶಾಲೆ ಮುಂದೆ ಹೊರಟಿತು.  à²•à³à²·à³€à²°à²¨à²¦à²¿à²¯ ಮೂಲದಲ್ಲಿ ಸುಮಾರು ಮೂರು ಕಿಲೋಮೀಟರ್ ನಡೆದು ಕ್ಷೀರನದಿ (ಪಾಲಾರ್) ಮೂಲಸ್ಥಾನಕ್ಕೆ ಬಂದೆವು. ಇದರ ಸ್ಥಿತಿಯೂ ಅರ್ಕಾವತಿಯ ಉಗಮಸ್ಥಾನಕ್ಕಿಂತ ಬೇರೆಯಾಗಿರಲಿಲ್ಲ. ಮಕ್ಕಳೆಲ್ಲ ಅದರ ಪಾವಡಿಗಳಲ್ಲಿ ಸಾಲುಗಟ್ಟಿ ಕುಳಿತರು. ಅಲ್ಲಿಯೇ ವಿದ್ಯಾರ್ಥಿಗಳ ಪುಟ್ಟ ಸಭೆಯನ್ನು ಏರ್ಪಡಿಸಿ ನದಿಗಳ ಸಮಸ್ಯೆಗೆ ಮಾನವ ದೌರ್ಜನ್ಯದ ತಡೆಗೆ ಪರಿಹಾರವನ್ನು ಚಿಂತಿಸಲು ಹೇಳಲಾಯಿತು. ಪುಟ್ಟ ಮನಸ್ಸುಗಳು ತಮಗೆ ತಿಳಿದಂತೆ ಚರ್ಚಿಸಿ ಕೆಲವು ಪರಿಹಾರಗಳನ್ನು ನೀಡಿದವು. ನಂತರವೂ ಅಲ್ಲಿ ಹಿಂದಿನಂತೆ ಹಳ್ಳದಲ್ಲಿ ಇಳಿದು ಪ್ಲಾಸ್ಟಿಕ್, ಹೆಂಡದ ಬಾಟಲಿಗಳು, ಚಪ್ಪಲಿ, ಮೊದಲಾದ ಕಸ್ಸವನ್ನು ಹೊರತೆಗೆದೆವು. ದೇವರನ್ನು ಪ್ರಾರ್ಥಿಸಿ ಹೊರಟೆವು. ಆಗ ಸುಮಾರು 12.30ಸಮಯವಾಗಿತ್ತು. ರೇಮಂಡ್ ಬಟ್ಟೆ ತಯಾರಿಕಾ ಘಟಕಕ್ಕೆ ಭೇಟಿ 2014-15ರ ಶೈಕ್ಷಣಿಕ ಸಾಲಿನ ಸಂವತ್ಸರ ಸೂತ್ರ ಬಟ್ಟೆಯಾದ್ದರಿಂದ, ಅದರ ಹೆಚ್ಚಿನ ತಿಳುವಳಿಕೆಗಾಗಿ ಬಟ್ಟೆತಯಾರಿಕಾ ಘಟಕಕ್ಕೆ ಭೇಟಿಯನ್ನು ಏರ್ಪಡಿಸಿದೆವು. ನಡೆದು ಹತ್ತಿದ ಬೆಟ್ಟವನ್ನು ನಡೆದೇ ಇಳಿಯುವ ಹಂಬಲ ಎಲ್ಲರಲ್ಲಿತ್ತು. ಅವರ ಉತ್ಸಾಹ ಬತ್ತಲಿಲ್ಲ. ಆದರೆ ಕಾಲ ನಮ್ಮ ಅಂಕೆಗೆ ಸಿಗದೆ ಓಡುತ್ತಿತ್ತು. ನಿಗದಿತ ಸಮಯಕ್ಕೆ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಬೇಕಿತ್ತು. ಸ್ವಲ್ಪ ದೂರ ಇಳಿದು ಆಯಕಟ್ಟಿನ ಸ್ಥಳದಲ್ಲಿ ನಿಂತಿದ್ದ ವಾಹವನ್ನು ಏರಿ ಮತ್ತೆ ಪ್ರಯಾಣ ಬೆಳೆಸಿದೆವು. 2.30ಕ್ಕೆ ಬಟ್ಟೆಯ ಕೈಗಾರಿಕಾ ಘಟಕಕ್ಕೆ ವಾಹನ ತಲುಪಿತು. ವಾಹನದಿಂದ ಇಳಿದ ಮಕ್ಕಳು, ಐದು ಎಕರೆ ವಿಸ್ತೀರ್ಣದ ಕೈಗಾರಿಕಾ ಘಟಕದ ಒಳಗೆ ಪ್ರವೇಶಿಸಿದರು. ಸಂಸ್ಥೆಯ ನಿರ್ವಾಹಕರು ಶಾಲೆಯನ್ನು ಆದರದಿಂದ ಬರಮಾಡಿಕೊಂಡರು. ನೇರ ತರಗತಿ ನಡೆಯುವ ಕೋಣೆಗೆ ಕರೆದೊಯ್ದು ಶಾಲೆಯ ವಿವರಗಳನ್ನು ಕೇಳಿ ಪಾಠವನ್ನು ಆರಂಭಿಸಿದರು. ರೇಮಂಡ್ ಸಂಸ್ಥೆಯ ಹುಟ್ಟು, ಬೆಳವಣಿಗೆ, ಸಂಸ್ಥಾಪಕರು, ವ್ಯಾಪಾರದ ವಿವರಗಳು, ತಯಾರಿಕೆಯ ವಿವಿಧ ಹಂತಗಳು – ಹೀಗೆ ನಾವು ತೊಡುವ ಸಿದ್ಧ ಉಡುಪುಗಳವರೆಗೆ ನಡೆಯುವ ವಿವಿಧ ಕೆಲಸಗಳನ್ನು ಮಕ್ಕಳು ಗಮನಿಸಿದರು. ತಮ್ಮ ಆಲೋಚನೆಗೆ ಎಟುಕಿದಷ್ಟು ವಿಷಯಗಳನ್ನು ಗ್ರಹಿಸಿ, ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು. 1925ರಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿ ಲಾಲ್ ಕೈಲಾಸ್ ಪತ್ ಎಂಬುವವರು ಈ ಸಂಸ್ಥೆಯನ್ನು ಪ್ರಾರಂಭಿಸಿದರು. ೨೦೦೪ರಲ್ಲಿ ದೊಡ್ಡಬಳ್ಳಾಪುರದಲ್ಲಿ Silver spark apparel limited – a Raymond Group ಎಂಬ ಘಟಕವನ್ನು ಸ್ಥಾಪಿಸಲಾಯಿತು. ಗೌತಮ್ ಹರಿ ಸಿಂಘಾನಿಯ ಎಂಬುವವರು ಇದನ್ನು ಮುನ್ನಡೆಸುತ್ತಿದ್ದಾರೆ. ರೇಮಂಡ್ ಕಂಪನಿಯ ಮುಖ್ಯ ಧ್ಯೇಯ ಕೊಳ್ಳುವವರ ಅಗತ್ಯಗಳನ್ನು ಚೆನ್ನಾಗಿ ಪೂರೈಸುವುದು, ಗುಣಮಟ್ಟದಲ್ಲಿ ಉನ್ನತ ಮಟ್ಟವನ್ನು ತಲುಪುವುದು. ದೈತ್ಯ ಯಂತ್ರಗಳು, ಸಾವಿರಾರು ಜನರ ಕೆಲಸವನ್ನು ಒಮ್ಮೆಲೆಗೆ ನೋಡಿ ಮಕ್ಕಳು ಆಶ್ಚರ್ಯಪಟ್ಟರು. ರೇಮಂಡ್ ಕಂಪನಿಯಲ್ಲಿರುವ ಎಲ್ಲಾ ಯಂತ್ರಗಳು ಜಪಾನ್ ಮತ್ತು ಜರ್ಮನಿಯಿಂದ ತಯಾರಾಗಿ ಬಂದಂತಹವು. ಒಂದೊಂದು ಯಂತ್ರವು ಲಕ್ಷಗಟ್ಟಲೆ ಬೆಲೆಬಾಳುವಂತಹವು. ವಿವಿಧ ಹಂತಗಳಲ್ಲಿ ಒಂದು ಮೇಲಂಗಿಯ ಕೆಲಸ ನಡೆಯುತ್ತದೆ. ಸಾವಿರಾರು ಯಂತ್ರಗಳು, ಮಾನವರ ಕೊಡುಗೆಯಿಂದ ಒಂದು ನಿಮಿಷಕ್ಕೆ ಒಂದು ಕೋಟು ತಯಾರಾಗುತ್ತದೆ. ಒಂದು ಮೇಲಂಗಿ ಸುಮಾರು 14000 ರೂಪಾಯಿ ಬೆಲೆಬಾಳುತ್ತದೆ ಎಂಬ ಮಾಹಿತಿಯನ್ನು ಕೇಳಿ ಆಶ್ಚರ್ಯಪಟ್ಟೆವು. ಇಂತಹ ಕೋಟುಗಳು ತಿಂಗಳಿಗೆ 50,000 ತಯಾರಾಗುತ್ತವೆ. ಭಾರತ ಮತ್ತು ವಿದೇಶಗಳಲ್ಲಿ ಇದನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ರೇಮಂಡ್ ಕಂಪನಿಯು ಮುಖ್ಯವಾಗಿ ಬಟ್ಟೆಯ ರಫ್ತು ಮತ್ತು ಗುಣಮಟ್ಟಕ್ಕೆ ದೊಡ್ಡ ಹೆಸರನ್ನು ಮಾಡಿದೆ. ಬಟ್ಟೆಯ ತಯಾರಿಕೆಯಲ್ಲಿ ರೇಮಂಡ್ ಕಂಪನಿಗೆ ಪ್ರಪಂಚದಲ್ಲೇ 4ನೇ ಸ್ಥಾನ ದೊರಕಿದೆ. ವರ್ಷಕ್ಕೊಮ್ಮೆ ಸಂಸ್ಥೆಯಲ್ಲಿ ನಡೆಯುವ ವಾರ್ಷಿಕೋತ್ಸವ, ಹಲವು ಸ್ಪರ್ಧೆಗಳು ಕೆಲಸಗಾರರಲ್ಲಿ ಉತ್ಸಾಹವನ್ನು ಇಮ್ಮಡಿಸುತ್ತದೆ. ಕೆಲಸಗಾರರ ಮಕ್ಕಳ ಪೋಷಣೆಗಾಗಿ ‘ಬಾಲವಾಡಿ’ ಎಂಬ ಪ್ರಾರಂಭಿಕ ಹಂತದ ವಿದ್ಯಾಭ್ಯಾಸಕ್ಕೆ ಅನುಕೂಲವನ್ನೂ ಇಲ್ಲಿ ಕಲ್ಪಿಸಲಾಗಿದೆ. ಸಂಸ್ಥೆಯ ಎಲ್ಲಾ ಘಟಕಗಳನ್ನು ಎಲ್ಲಾ ಮಕ್ಕಳು ನೋಡಲು ಸಾಧ್ಯವಾಗಲಿಲ್ಲ. ಒಂದೊಂದು ತಂಡ ಒಂದೊಂದು ವಿಭಾಗಕ್ಕೆ ಭೇಟಿ ನೀಡಿತು. ನಂತರ ವಿಚಾರ ವಿನಿಮಯ ಮಾಡಿಕೊಂಡೆವು. ಮಕ್ಕಳ ಕುತೂಹಲಕ್ಕೆ ಸಂಸ್ಥೆಯವರು ಅಭಿನಂದನೆಗಳನ್ನು ಹೇಳಿ ತಂಪುಪಾನೀಯ, ಸಿಹಿತಿಂಡಿಯನ್ನು ಕೊಟ್ಟರು.  ಹೀಗೆ ಬಟ್ಟೆತಯಾರಿಕೆಯ ಅದ್ಭುತಲೋಕದ ಒಂದು ತುಂಡನ್ನು ಪರಿಚಯಿಸಿಕೊಂಡು ಹಿಂತಿರುಗಿದೆವು. ಮಕ್ಕಳ ಉತ್ಸಾಹ ಯಾವ ಹಂತದಲ್ಲೂ ಕುಗ್ಗಲೇ ಇಲ್ಲ. ಮರಳಿ ಬರುವಾಗಲೂ ಹಾಡುಗಳನ್ನು ಹಾಡುತ್ತಾ, ಆಟಗಳನ್ನು ಆಡುತ್ತಾ ಬೆಂಗಳೂರನ್ನು ತಲುಪಿ ತಮ್ಮ ತಮ್ಮ ಪೋಷಕರೊಂದಿಗೆ ಮನೆಗಳನ್ನು ತಲುಪಿದರು.   For more photos click here  

Seminar on Primary Education and Ecology

Seminar on Primary Education and Ecology

Friday, January 17th, 2014

ಪೂರ್ಣಪ್ರಮತಿ ವ್ಯಾಖ್ಯಾ: ೨೦೧೩-೧೪ ವಿಚಾರ ಸಂಕಿರಣ: ಪ್ರಾಥಮಿಕ ಶಿಕ್ಷಣ ಮತ್ತು ಪರಿಸರ ವಿಜ್ಞಾನ ವಿಷಯ: ಜೀವನದ ಕೇಂದ್ರಬಿಂದುವಾಗಿ ಪ್ರಾಥಮಿಕ ಶಿಕ್ಷಣದಿಂದಲೇ ನಿಸರ್ಗ ಅಧ್ಯಯನದ ಆರಂಭ. ದಿನಾಂಕ: ೧ನೇ ಜನವರಿ, ೨೦೧೪ ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ ವಿಚಾರ ಮಂಡನೆ ಮಾಡಿದವರು ೧.    à²¶à³à²°à³€  ಎಲ್ಲಪ್ಪ ರೆಡ್ಡಿ (ನಿವೃತ್ತ IFS, ಲೋಕ ಅದಾಲತ್ ಸದಸ್ಯರು, ಕರ್ನಾಟಕ ಉಚ್ಚ ನ್ಯಾಯಾಲಯ) ೨.    à²¶à³à²°à³€ ನಾಗೇಶ್ ಹೆಗಡೆ (ಬರಹಗಾರರು ಮತ್ತು ಪರಿಸರ ತಜ್ಞರು) ೩.    à²¡à²¾. ಶರಚ್ಚಂದ್ರ ಲೇಲೆ (A TREE ಸಂಸ್ಥೆಯ ಹಿರಿಯ ಚಿಂತಕರು) ೪.    à²ªà³à²°à³Š. ದೀಪಕ್ ಮಲ್ಗಾನ್ (Centre for Public Polity, IIM) ೫.    à²ªà³Š. ಕೆ.ಎನ್. ಗಣೇಶಯ್ಯ (ಪರಿಸರ ತಜ್ಞರು ಮತ್ತು ಕಾದಂಬರಿ ಬರಹಗಾರರು) ೬.    à²¹à²°à³€à²¶à³ ಭಟ್ (ಪರಿಸರ ತಜ್ಞರು, ಐ.ಐ.ಎಸ್.ಸಿ) ಮುಖ್ಯ ಅತಿಥಿಗಳು (೨೦೧೩-೧೪ರ ಪೂರ್ಣಪ್ರಮತಿ ಸಮ್ಮಾನ್ ಪುರಸ್ಕೃತರು) ಶ್ರೀಮತಿ ತುಳಸಿ ಗೌಡ (ಬುಡಕಟ್ಟು ಹಾಲಕ್ಕಿ ಜನಾಂಗದ ಪರಿಸರ ಕಾರ್ಯಕರ್ತರು) ಅಧ್ಯಕ್ಷರು ಶ್ರೀ ರಾಜೇಂದ್ರ ಸಿಂಗ್ (ಮಾಗ್ಸೇಸೆ ಪ್ರಶಸ್ತಿ ವಿಜೇತರು, ಭಾರತದ ನೀರಿನ ಮನುಷ್ಯ, ಆಧುನಿಕ ಭಗೀರಥ) ಸಭಾಧ್ಯಕ್ಷರು ಪ್ರೊ.ಡಿ.ಪ್ರಹ್ಲಾದಾಚಾರ್ಯರು (ನಿವೃತ್ತ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳು, ತಿರುಪತಿ) ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ ವರಖೇಡಿ (ಸಂಸ್ಕೃತ ವಿದ್ವಾಂಸರು, ಸಂಸ್ಕೃತ ವಿಶ್ವವಿದ್ಯಾಲಯ) ಪೂರ್ಣಪ್ರಮತಿಯ ಅಧ್ಯಾಪಕರು ಮತ್ತು ತಂಡ, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು, ದೂರದೂರಿನಿಂದ ಬಂದ ಆಸಕ್ತರು, ಹಲವು ಸಂಸ್ಥೆಗಳ ಪ್ರತಿನಿಧಿಗಳು, ಮಾದ್ಯಮ ಪ್ರತಿನಿಧಿಗಳು ವಿಚಾರ ಸಂಕಿರಣದ ಹಿನ್ನಲೆ/ಉದ್ದೇಶ ಪೂರ್ಣಪ್ರಮತಿ ಒಂದು ಶಾಲೆ ಎಂಬುದಕ್ಕಿಂತ ಹೆಚ್ಚಾಗಿ ಒಂದು ಸಂಶೋಧನಾಲಯವಾಗಿದೆ. ಶಿಕ್ಷಣದ ಮೂಲಕ ಭಾರತೀಯ ತತ್ತ್ವಜ್ಞಾನವನ್ನು ಉಳಿಸುವ, ಬೆಳೆಸುವ ಕೈಂಕರ್ಯದಲ್ಲಿ ತೊಡಗಿದೆ. ಇದರ ಮೂಲ ಉದ್ದೇಶ ಬೀಜರಕ್ಷಣೆ. ಸಂಸ್ಕೃತಿ, ಜ್ಞಾನ, ಪರಂಪರೆ ಇತ್ಯಾದಿ ಆಯಾಮಗಳಲ್ಲಿ ಮುಂದಿನ ಜನಾಂಗಕ್ಕೆ ಭಾರತೀಯತೆಯನ್ನು ತಲುಪಿಸುವ ಸಲುವಾಗಿ ಬೀಜರಕ್ಷಣೆಯಲ್ಲಿ ತೊಡಗಿದೆ. ಪ್ರಕೃತಿ-ಸಂಸ್ಕೃತಿ-ಅಧ್ಯಾತ್ಮ ಈ ಮೂರನ್ನು ಬೆಸೆಯುವ ಮಾದ್ಯಮವಾಗಿ ಪೂರ್ಣಪ್ರಮತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ರೂಪಿಸಲಾಗಿದೆ. ವರ್ಷಕ್ಕೊಂದು ವಿಷಯವನ್ನು ಅಧ್ಯಯನ ಮಾಡುತ್ತಾ ಉಳಿದೆಲ್ಲ ಚಟುವಟಿಕೆಗಳನ್ನು, ಕಲಿಕೆಯನ್ನೂ ಇದಕ್ಕೇ ಪೂರಕವಾಗಿ ರಚಿಸಲಾಗುವುದು. ಜೀವೋ ಜೀವಸ್ಯ ಜೀವನಂ ಎಂಬ ಈ ವರ್ಷದ ವಿಷಯವನ್ನು ಪಶ್ಚಿಮಘಟ್ಟಗಳಿಂದ ಆರಂಭಿಸಿ, ಉತ್ತರಾಖಂಡದಲ್ಲಾದ ಜಲಪ್ರಳಯದವರೆಗೆ ಹಲವು ಆಯಾಮಗಳಲ್ಲಿ ಅಭ್ಯಾಸ ಮಾಡಲಾಯಿತು. ಇದನ್ನು ಪೂರ್ಣಪ್ರಮತಿ ಜಾತ್ರೆಯ ಮೂಲಕ ಎಲ್ಲರೊಂದಿಗೆ ಹಂಚಿಕೊಳ್ಳಲಾಯಿತು. ಹರೀಶ್ ಭಟ್, ನಾಗೇಶ್ ಹೆಗಡೆ ಮತ್ತು ಎಲ್ಲಪ್ಪ ರೆಡ್ಡಿಯಂತಹ ನುರಿತಜ್ಞರ ಮಾರ್ಗದರ್ಶನದಲ್ಲಿ ವಾರಕ್ಕೊಮ್ಮೆ ಪರಿಸರ ತರಗತಿಗಳನ್ನೂ ಸಹ ಆಯೋಜಿಸಲಾಗಿತ್ತು. ಜೀವೋ ಜೀವಸ್ಯ ಜೀವನಂ ವಿಷಯವನ್ನು ಮತ್ತಷ್ಟು ಆಯಾಮಗಳಿಂದ ನೋಡುತ್ತಾ ಮಾನವನ ಜೀವನದಲ್ಲಿ ಮರೆಯಾಗುತ್ತಿರುವ ಪರಿಸರವನ್ನು ಪುನಃ ಹೇಗೆ ಸ್ಥಾಪಿಸಬಹುದು ಎಂಬುದು ಪೂರ್ಣಪ್ರಮತಿ ವ್ಯಾಖ್ಯಾ ೨೦೧೩-೧೪ರ ಚರ್ಚೆಯ ವಿಷಯ. ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಲ್ಲಿ ಪರಿಸರಜಾಗೃತಿಯನ್ನು ತರುವ ಜಿಜ್ಞಾಸೆಯೊಂದಿಗೆ ಈ ವಿಚಾರಸಂಕಿರಣವನ್ನು ಆಯೋಜಿಸಲಾಗಿತ್ತು. ಹಲವು ತಜ್ಞರು ಈ ವಿಚಾರವಾಗಿ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಿಚಾರಗೋಷ್ಠಿಗೆ ಮೊದಲು ಪ್ರೊ.ಡಿ. ಪ್ರಹ್ಲಾದಾಚಾರ್ಯರು ಮಾತನಾಡಿ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಉಲ್ಲೇಖಿಸಲಾಗಿರುವ ಯಾಜ್ಞವಲ್ಕ್ಯ ಮತ್ತು ದಶರಥನ ಆಸ್ಥಾನದ ವಿದ್ವಾಂಸರ ನಡುವೆ ನಡೆದ ಪ್ರಕೃತಿಗೆ ಸಂಬಂಧಿಸಿದ ಪ್ರಶ್ನೋತ್ತರಗಳ ಸಂದರ್ಭವನ್ನು ತಿಳಿಸಿದರು, ‘ಪ್ರಕೃತಿಯ ರಹಸ್ಯಗಳನ್ನು ಭೇದಿಸುವುದು ಒಂದು ಹಂತಕ್ಕೆ ನಿಲ್ಲಬೇಕು. ಇಲ್ಲವಾದರೆ ಮುಂದುವರೆದ ಅನ್ವೇಷಣೆಯು ಮನುಕುಲದ ವಿನಾಶಕ್ಕೆ ನಾಂದಿಯಾದೀತು! ಎಂದು ಯಾಜ್ಞವಲ್ಕ್ಯರು ಎಚ್ಚರಿಸುತ್ತಾರೆ. ಆದರೆ ಇಂದು ಮನುಷ್ಯನು ಪ್ರಕೃತಿಯನ್ನು ಅರಿಯುವ ಗೋಜಿಗೇ ಹೋಗದೆ ಕೇವಲ ತನ್ನ ಇಚ್ಛೆಗೆ ಬಳಸಿಕೊಳ್ಳುತ್ತಿದ್ದಾನೆ. ಇದರಿಂದಲೂ ಪ್ರಕೃತಿಯ ನಾಶವಾಗುತ್ತಿದೆ. ಅಂತಿಮವಾಗಿ ಅದರ ಪರಿಣಾಮ ಮನುಕುಲದ ಮೇಲೆ ಆಗುವುದು ಕಾಣುತ್ತಿದೆ. ನಾಶವಾಗದೆ ಉಳಿಯಬೇಕಾದರೆ ಸರಿಯಾದ ರೀತಿಯಲ್ಲಿ ಪ್ರಕೃತಿಯನ್ನು ಅರಿಯುವುದು ಮುಖ್ಯ’ ಎಂಬುದನ್ನು ಹೇಳಿ ಮುಂದಿನ ವಿಚಾರ ಮಂಥನಕ್ಕೆ ಪೀಠಿಕೆಯನ್ನು ಹಾಕಿಕೊಟ್ಟರು. ಅಧ್ಯಕ್ಷರಾದ ರಾಜೇಂದ್ರ ಸಿಂಗ್ ಅವರು ವಿಷಯವನ್ನು ಮುಂದಿಟ್ಟರು: ‘ದಶರಥನು ಭೋಗದಲ್ಲಿ ಮುಳುಗಿದ್ದಾಗ ಯಾಜ್ಞವಲ್ಕ್ಯರಂತಹ ತಿಳಿದವರು ಬಂದು ಎಚ್ಚರಿಸಿದರು. ಆದರೆ ಇಂದಿನ ಶಿಕ್ಷಣವ್ಯವಸ್ಥೆಯನ್ನು ರೂಪಿಸುವವರನ್ನು ಯಾರೂ ಎಚ್ಚರಿಸುವವರಿಲ್ಲ. ನನ್ನ ಗುರುಗಳು ಶಾಲೆಯಲ್ಲಿ ಕಲಿಯದ ಒಬ್ಬ ರೈತರಾಗಿದ್ದರು. ಅವರು ನನ್ನ ಪಿ.ಹೆಚ್.ಡಿ ವಿಷಯವನ್ನು ಮೂರೇ ದಿನದಲ್ಲಿ ವಿಮರ್ಶಿಸಿದ್ದರು. ಹಿಂದೆ ಬಹಳ ಸರಳವಾಗಿ ಸಹಜವಾಗಿ ಸಿಗುತ್ತಿದ್ದ ಉತ್ತಮ ಶಿಕ್ಷಣ ಇಂದು ಕಷ್ಟಪಟ್ಟರು ಸಿಗದಾಗಿದೆ. ಮುಂದೆ ನಡೆಯಲಿರುವ ಚರ್ಚೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಬೇಕು’. ನಾಗೇಶ್ ಹೆಗಡೆ ಸ್ವತಃ ಪರಿಸರತಜ್ಞರು ಮತ್ತು ಅನುಭವಗಳನ್ನು ಪರಿಣಾಮಕಾರಿಯಾದ ಬರವಣಿಗೆಯ ಮೂಲಕ ಜನರಿಗೆ ಮುಟ್ಟಿಸುವವರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು: ಇಂದಿನ ಪರಿಸ್ಥಿತಿಯನ್ನು ಎರಡು ಮುಖಗಳಲ್ಲಿ ನೋಡಬಹುದು. ಮಕ್ಕಳಿಂದ ಕಲಿಯಬೇಕಾದ ಎಷ್ಟೋ ತಂತ್ರಜ್ಞಾನಗಳಿವೆ. ಅಂತೆಯೇ, ಮಕ್ಕಳು ಮರೆಯುತ್ತಿರುವ ಎಷ್ಟೋ ನಿಸರ್ಗದ ಪಾಠಗಳೂ ಇವೆ. ಇಂದಿನ ಸಮೂಹಮಾದ್ಯಮಗಳ ಮೂಲಕ ಮಕ್ಕಳಲ್ಲಿ ಭೋಗಸಂಸ್ಕೃತಿಯನ್ನು ಹುಟ್ಟಿಸಿ ಬೆಳೆಸಲಾಗುತ್ತಿದೆ. ನಾಗರೀಕತೆಯ ಲಕ್ಷಣಗಳಾದ ನದಿ, ಕೆರೆ, ಗಿಡ, ಮರ, ಚರಂಡಿ ವ್ಯವಸ್ಥೆಗಳು ಇಂದಿನ So called infrastructure ಪಟ್ಟಿಗೆ ಸೇರಿಯೇ ಇಲ್ಲ. ಬದಲಾಗಿ ಕಾಡುಗಳನ್ನು ನಾಶ ಮಾಡಿ ಕಟ್ಟಲಾತ್ತಿರುವ ರಸ್ತೆಗಳು, ಅಣೆಕಟ್ಟುಗಳು, ವಿದ್ಯುತ್ ಯೋಜನೆಗಳು, ಮಾಲ್‌ಗಳು ಮಾತ್ರ ನಾಗರಿಕತೆಯಾಗಿದೆ. ಇದು ಮನೆ, ಶಾಲೆ ಎಲ್ಲದರ ಮೇಲೂ ಪ್ರಭಾವ ಬೀರುತ್ತಿವೆ. ಲಂಡನ್‌ನಲ್ಲಿ ೨೦ ವರ್ಷಗಳ ಹಿಂದೆ ಒಂದು ಹೊಸ ವಿಷಯವನ್ನು ಪರಿಚಯಿಸಲಾಯಿತು. ಅದು ಅಂದಿನ ಅಗತ್ಯವನ್ನು ಆಧರಿಸಿ ರಚಿಸಲಾಗಿತ್ತು. Solid Waste Management ಬಗ್ಗೆ ೧ ವರ್ಷದ ತರಬೇತಿ. ಅಂದಿನ ಅಗತ್ಯವನ್ನು, ಸವಾಲುಗಳನ್ನು ಎದುರಿಸಲು ೩೦೦ ಜನ ತಜ್ಞರನ್ನು ತಯಾರು ಮಾಡಿ ಸಮಾಜಕ್ಕೆ ನೀಡಲಾಯಿತು. ಅದಕ್ಕಾಗಿ ವಿಶೇಷ ಪಠ್ಯವನ್ನು ರಚಿಸಲಾಯಿತು. ಆದರೆ ನಮ್ಮ ದೇಶದಲ್ಲಿ ಭೂಪಾಲ್ ಅನಿಲ ದುರಂತ ಇದುವರೆಗೆ ನಮ್ಮ ಮಕ್ಕಳ ಪಠ್ಯಪುಸ್ತಕದಲ್ಲಿ ಬಂದಿಲ್ಲ. ಹೊಸ ವಿಷಯವೊಂದು ಪಠ್ಯಪುಸ್ತಕ ಸೇರಲು ೧೫ ವರ್ಷಗಳೇ ಬೇಕು. ಈಗಾಗಲೇ ಮೇಲ್ಮೈ ನೀರು, ೫೦೦ ಅಡಿ, ೧೦೦೦ ಅಡಿಗಳ ನೀರನ್ನು ಮುಗಿಸಿದ್ದೇವೆ. ಆದರೆ ನಾವಷ್ಟೇ ಈ ಭೂಮಿಯ ಮೇಲೆ ಇರುವುದಲ್ಲ!! ನಮ್ಮೊಂದಿಗೆ ಅನೇಕ ಜೀವಿಗಳೂ ಇವೆ. ಅವುಗಳ ಹಕ್ಕನ್ನೂ ನಾವು ಕಿತ್ತುಕೊಳ್ಳುತ್ತಿದ್ದೇವೆ. ಪರಿಸರದ ಬಗ್ಗೆ ಸೂಕ್ಷ್ಮವಾಗಿ ಯೋಚಿಸಿ, ಕಾರ್ಯೋನ್ಮುಖರಾಗುವವರನ್ನು ಇಂದು ಹುಡುಕಬೇಕಿದೆ. ವೃತ್ತಿ ಯಾವುದೇ ಆದರೂ, ವಿದ್ಯಾಭ್ಯಾಸ ಯಾವ ಕ್ಷೇತ್ರದಲ್ಲೇ ಆದರೆ ನಿಸರ್ಗದೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳುವಂತಹ ಮಕ್ಕಳನ್ನು ನಾವು ಇಂದು ತಯಾರು ಮಾಡಬೇಕಿದೆ. ಪದವಿ ಶಿಕ್ಷಣಕ್ಕೆ ಬಂದ ನಂತರ ಪರಿಸರ ಅಧ್ಯಯನ ಆರಂಭಿಸುವುದಕ್ಕಿಂತ, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಜಾಗೃತಿಯನ್ನು ತರುವುದು ಮುಖ್ಯ. ಇಂತಹ ಶಿಕ್ಷಣವನ್ನು ನಾವು ಕೊಡಬೇಕಾಗಿದೆ. ಇದಕ್ಕಾಗಿ ವಿಶೇಷ ಪಠ್ಯವನ್ನು ತಯಾರುಮಾಡಬೇಕಿದೆ. ಅದೃಷ್ಟವಶಾತ್ ಪೂರ್ಣಪ್ರಮತಿಯ ಶಿಕ್ಷಕರೆಲ್ಲರೂ ಒಟ್ಟಾಗಿ ಇದಕ್ಕೆ ಪೂರಕವಾಗಿ ಕೆಲಸಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಪಠ್ಯಪುಸ್ತಕವನ್ನು ಓದದೆ ಅದನ್ನೂ ಮೀರಿಸುವ ಅನುಭವವನ್ನು ಚರ್ಚೆಯಲ್ಲಿ ಮುಂದಿಟ್ಟವರು ತುಳಸಿ ಗೌಡ ಅವರು. ಅವರು ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸುಮಾರು ೨ ಲಕ್ಷ ಸಸಿಗಳನ್ನು ಬೆಳೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೀಸಂ, ಸಾಗೋನಿ, ಮತ್ತಿ, ಹೊನ್ನೆ, ಹಿಂದೋಳ ಮತ್ತಿ, ನಂದಿ, ಆಲ ಮುಂತಾದ ಬೀಜಗಳನ್ನು ಸಂಸ್ಕರಿಸಿ ಸಸಿಗಳನ್ನು ಮಾಡುವುದು ಇವರ ವಿಜ್ಞಾನ. ಸ್ವಂತ ಕಾಳಜಿಯಿಂದ ಗಿಡಗಳ ಪಾಲನೆಯಲ್ಲಿ ತೊಡಗುವ ಇವರು ಸಸ್ಯಗಳ ಬಗ್ಗೆ ಅಧ್ಯಯನ ಮಾಡಿರುವವರೂ ಸಹ ಬೀಜಸಂಸ್ಕರಣೆಯಲ್ಲಿ ಸೋತಾಗ ತಮ್ಮ ಅನುಭವದಿಂದ ಸಸಿ ಮಾಡಿದ್ದಾರೆ. ಉದಾಹರಣೆಗೆ ಬಂದಗ ಎಂಬ ಬಿದಿರಿನಂತಿರುವ ಒಂದು ಮರ. ಇದರ ಗೆಣ್ಣುಗಳನ್ನು ಕತ್ತರಿಸಿ ಮಜ್ಜಿಗೆ ಅಥವಾ ಸಕ್ಕರೆ ನೀರಿನ್ನು ಹಾಕಿ ನಂತರ ಭೂಮಿಯಲ್ಲಿ ನೆಟ್ಟರೆ ಸಸಿಯಾಗುತ್ತದೆ ಎಂಬುದು ನಂಬಿಕೆ. ಯಾವ ಪ್ರಯತ್ನವೂ ಫಲಿಸದಿದ್ದಾಗ ಅದರ ಕಾಂಡವನ್ನು ಸುಟ್ಟು ನಂತರ ನೆಟ್ಟು ಸಸಿಯಾಗಿಸಿದರು. ಸಾಗೋನಿ ಬೀಜವನ್ನು à³­ ದಿನ ನೀರಿನಲ್ಲಿ ನೆನೆಸಿ, à³­ ದಿನ ಬಿಸಿನಲ್ಲಿ ಒಣಗಿಸಿ ಮತ್ತೆ à³­ ದಿನ ನೆನೆಸಿ ಮಡಿಯಲ್ಲಿ ಹಾಕಬೇಕು. ೨೦ದಿನಗಳ ನಂತರ ಇದು ಚಿಗುರಲು ಆರಂಭಿಸುವುದು. ಯಾವುದೇ ಬೀಜವಾದರೂ ಜೂನ್-ಜುಲೈ ತಿಂಗಳೊಳಗೆ ಸಸಿಗಳಾಗಿ ಮಾಡಿ ನೆಡಬೇಕು ಎಂಬುದು ಅವರ ಅನುಭವ. ಇಂತಹ ಅನೇಕ ಪ್ರಯೋಗಗಳು ಅವರ ಬುತ್ತಿಯಲ್ಲಿವೆ. ರಾಜೇಂದ್ರ ಸಿಂಗ್ ಅವರು ತುಳಸಿ ಅವರ ಮಾತಿನ ಸಾರಾಂಶವನ್ನು ಸಂಗ್ರಹಿಸುತ್ತಾ, ನಿಜವಾದ ಅರಿವು ಇದೇ ಆಗಿದೆ, ಗಾಂಧೀಜಿಯವರು ಬುನಾದಿ ಶಿಕ್ಷಣ ಎಂದು ಕರೆದದ್ದೂ ಇದನ್ನೇ. ಆದರೆ ಭಾರತದಲ್ಲಿ ಅದನ್ನು ೧೦೦% ತರಲು ಸಾಧ್ಯವಾಗಲೇ ಇಲ್ಲ. ಇಂತಹ ಅನುಭವಗಳನ್ನು ಇಂದಿನ ಶಿಕ್ಷಣದಲ್ಲಿ ಹೇಗೆ ತರಬಹುದು ಎಂಬುದನ್ನು ಯೋಚಿಸಬೇಕಿದೆ’ ಎಂದರು. ಪ್ರಾಥಮಿಕ ಶಿಕ್ಷಣದಲ್ಲಿ ಪ್ರತ್ಯಕ್ಷ ಅನುಭವಗಳನ್ನು ತರುವ ಆಲೋಚನೆಯನ್ನು ಗಾಂಧೀಜಿ ಅವರು ಅವರ ಸಮಯದಲ್ಲಿ ಹೇಗೆ ಮಾಡಿದ್ದರು ಎಂದು ವಿವರಿಸಲು ಮುಂದೆ ದೀಪಕ್ ಮಲ್ಗಾನ್ ಅವರು ಮಾತನಾಡಿದರು. ಅವರು ಗಾಂಧೀಜಿ ಜೀವನದ ಹಲವು ಘಟನೆಗಳನ್ನು ನೋಡುವುದರ ಮೂಲಕ ಶಿಕ್ಷಣದ ಬಗ್ಗೆ ಗಾಂಧೀಜಿ ಅವರ ಅಭಿಪ್ರಾಯವನ್ನು ತಿಳಿಸಲು ಮುಂದಾದರು. ‘ನಾವು ಇತಿಹಾಸವನ್ನು ನೋಡುತ್ತಾ ಪಾಠ ಕಲಿಯಬೇಕು. ಗಾಂಧೀಜಿ ಅವರು ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಯೋಜಿಸಿದ್ದರು. ಆ ಸಮಯದಲ್ಲಿ ಸಂಘರ್ಷ-ನಿರ್ಮಾಣ ಕೆಲಸಗಳು ನಡೆದವು. ಹಿಂದಿನಿಂದ ಬೇರೂರಿದ್ದ ಹಲವು ಆಲೋಚನೆಗಳು, ಬ್ರಿಟಿಷ್ ಪದ್ಧತಿ, ಸ್ವತಂತ್ರ ಭಾರತದಲ್ಲಿ ಹೊಂದಬೇಕಾಗಿರುವ ಪರಿಕಲ್ಪನೆಗಳ ನಡುವೆ ಸಂಘರ್ಷವನ್ನು ಎದುರಿಸಬೇಕಿತ್ತು. ಉತ್ತಮ ಯೋಜನೆಗಳನ್ನು ನಿರ್ಮಾಣಮಾಡಬೇಕಿತ್ತು. ೧೯೩೨ರ ದುಂಡುಮೇಜಿನ ಸಭೆಯ ನಂತರ ಗಾಂಧೀಜಿ ಅವರು ಭಾರತದ ಉನ್ನತಿಗೆ ಕೇವಲ ಖಾದಿ ಕಲ್ಪನೆ ಸಾಕಾಗದು, ಹಲವು ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸಮಾಡಬೇಕೆಂದು ತೀರ್ಮಾನಿಸಿದರು. ಕೈಗಾರಿಕೀಕರಣಕ್ಕೆ ಪೂರಕವಾಗಿ ಗ್ರಾಮೋದ್ಯಮವನ್ನು ಅಭಿವೃದ್ಧಿಪಡಿಸುವ ಯೋಚನೆ ಮಾಡಿದರು. ೧೯೩೩ರಲ್ಲಿ ಅಖಂಡ ಭಾರತ ಯಾತ್ರೆ/ಹರಿಜನ ಯಾತ್ರೆ ಕೈಗೊಂಡರು. ೧೯೩೭ರಲ್ಲಿ ಕಾಂಗ್ರೆಸ್ ಪ್ರಬಲವಾದ ಕಾಲಕ್ಕೆ ಗ್ರಾಮೋದ್ಯೋಗ ತರಬೇತಿಯನ್ನು ಹಮ್ಮಿಕೊಂಡರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಭವಿಸಿದ ಕಾರ್ಮಿಕವರ್ಗ ಧೋರಣೆಯಿಂದ ಕಲಿತ ಪಾಠವಾಗಿ ಕಾರ್ವಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕೆಂಬುದನ್ನು ಪ್ರಬಲವಾಗಿ ಹೇಳಿದರು. ಬುದ್ಧಿ-ಹೃದಯ-ಕರಣಗಳ ಸಂಗಮದಿಂದ ಕಾರ್ಯನಿರ್ವಹಿಸಬೇಕೆಂದು ಶ್ರೀಲಂಕಾದ ಆರ್ಯ ನಾಯರ್, ರವೀಂದ್ರನಾಥ ಠಾಗೋರ್, ಆಶಾದೇವಿ ಅವರ ಮುಖಂಡತ್ವದಲ್ಲಿ All India Village Association ಎಂಬ ಒಂದು ಸಮಿತಿಯನ್ನು ರಚಿಸಿದರು. ಮುಂದೆಯೂ ಕುಮಾರಪ್ಪನವರು ಠಾಗೋರ್ ಮಾದರಿ ವಿದ್ಯಾಭ್ಯಾಸವನ್ನು ತರಲು ಪ್ರಯತ್ನಿದ್ದರು. ಆದರೆ ಈ ಯೋಜನೆ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ವಿದ್ಯಾಭ್ಯಾಸ ಸಿಗಬೇಕು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಉತ್ತಮ ನಾಯಕನ ತಯಾರಿಗಾಗಿ ಮತ್ತು ಉತ್ತಮ ರಾಜಕೀಯ ನೀತಿಗಳನ್ನು ಬೆಳೆಸಲು ಮಾತೃಭಾಷೆಯಲ್ಲೇ ಶಿಕ್ಷಣವನ್ನು ಕೊಡುವುದು ಅನಿರ್ವಾಯ ಎಂದು ಮನಗಂಡಿದ್ದರು. ಮಧ್ಯಾಹ್ನದ ಭೋಜನದ ಮೂಲಕ ಆಯಾ ಕ್ಷೇತ್ರದಲ್ಲಿ ಬೆಳೆಯುವ ಬೆಳೆಗಳನ್ನು ಪೂರ್ಣಪ್ರಮಾಣದಲ್ಲಿ ಬಳಸುತ್ತಾ ಸಮತೋಲನ ಆಹಾರಪದ್ಧತಿಯನ್ನು ತರಲು ಪ್ರಯತ್ನಿಸಿದರು. ಜಾತಿಪದ್ಧತಿಯನ್ನು ವಿದ್ಯಾಭ್ಯಾಸದ ಮೂಲಕ ತೆಗೆಯಬಹುದೆಂಬುದು ಅವರ ನಂಬಿಕೆಯಾಗಿತ್ತು. ಯುವಕರು ಗ್ರಾಮೋದ್ಯೋಗಗಳಾದ ನೇಯ್ಗೆ, ಕರಕುಶಲಕಲೆಗಳ ಮೂಲಕ ಉದ್ಯೋಗವನ್ನು ಅರಸಬೇಕೆಂಬುದು ಅವರ ಇಚ್ಛೆಯಾಗಿತ್ತು. ಹೀಗೆ ಪ್ರಕೃತಿಗೆ ಹತ್ತಿರವಾಗಿ ಬದುಕುವುದನ್ನು ಜನರಲ್ಲಿ ರೂಢಿಸಲು ವಿದ್ಯಾಭ್ಯಾಸವನ್ನು ರೂಪಿಸಿದರು ಎಂದು ಗಾಂಧೀಜಿ ಅವರ ಪರಿಕಲ್ಪನೆಗಳನ್ನು ವಿಶ್ಲೇಷಿಸಿದರು. ಶರಚ್ಚಂದ್ರ ಲೇಲೆ ಅವರು A TREE ಸಂಸ್ಥೆಯಲ್ಲಿ ಪಿ.ಹೆಚ್.ಡಿ ವಿದ್ಯಾರ್ಥಿಗಳ ಮಾರ್ಗದರ್ಶಕರು. ಪ್ರಕೃತಿ ಪ್ರೇಮಿ ಮತ್ತು ಪರಿಸರ ಕಾರ್ಯಕರ್ತರೂ ಆಗಿದ್ದಾರೆ. ಇವರು ಸಭೆಯ ಮುಂದೆ ಕೆಲವು ಪ್ರಮುಖ ಪ್ರಶ್ನೆಗಳನ್ನು ಇಡುತ್ತಾ ತಮ್ಮ ಅಭಿಪ್ರಾಯವನ್ನು ತಿಳಿಸದರು. ಪರಿಸರ ವಿಜ್ಞಾನಿಯಾಗುವುದು ಬೇರೆ, ಪರಿಸರವಾದಿಯಾಗಿ ಕೆಲಸಕ್ಕೆ ಇಳಿಯುವುದು ಬೇರೆ. ನಾವು ಮಕ್ಕಳಿಗೆ ಪರಿಸರದ ಬಗ್ಗೆ ವಿಷಯ ತಿಳಿಸಿದರೆ ಸಾಲದು, ಕೆಲಸ ಮಾಡುವುದೂ ಮುಖ್ಯ. ಬೀಜದಿಂದ ಮರವಾಗುವಂತೆ ಮಗುವೊಂದು ಬೆಳೆದು ಮನುಷ್ಯನಾಗಿ ಸಮಾಜದಲ್ಲಿ ಬದುಕಲು ಅವನು ಕೇವಲ ವಯಸ್ಕನಾದರೆ

Purnapramati Mahotsava 2013-14

Purnapramati Mahotsava 2013-14

Monday, January 13th, 2014

ಪೂರ್ಣಪ್ರಮತಿ ಮಹೋತ್ಸವ: ೨೦೧೩-೧೪ ದಿನಾಂಕ: ೩೧/೧೨/೨೦೧೩ ಸ್ಥಳ: ಹೆಚ್.ಎನ್.ಕಲಾಕ್ಷೇತ್ರ, ಜಯನಗರ ಪೂರ್ಣಪ್ರಮತಿ ಜಾತ್ರೆ ಮತ್ತು ಉತ್ಸವಕ್ಕೆ ಗರಿ ಇಟ್ಟಂತೆ ೩೧/೧೨ ರಂದು ಮಹೋತ್ಸವವನ್ನು ಆಚರಿಸಲಾಯಿತು. ಪೂರ್ಣಪ್ರಮತಿ ಸಮ್ಮಾನ್ ಕೊಡುವ ಗಳಿಗೆಯೂ ಇದಾಗಿದೆ. ಸಂವತ್ಸರ ಸೂತ್ರಕ್ಕೆ ಪೂರಕವಾಗಿ ನಿರ್ದಿಷ್ಟ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಹಿರಿಯ ವ್ಯಕ್ತಿಗಳನ್ನು ಗುರುತಿಸಿ ವರ್ಷಕ್ಕೊಮ್ಮೆ ಸನ್ಮಾನ ಮಾಡುವುದು ಮಹೋತ್ಸವದ ವಿಶೇಷ ಕಾರ್ಯಕ್ರಮ. ತನ್ಮೂಲಕ ಅವರ ಮಾರ್ಗದರ್ಶನ, ಅಪಾರ ಅನುಭವವನ್ನು ನಮ್ಮ ಪಯಣದಲ್ಲಿ ಜೊತೆಗೂಡಿಸಿಕೊಳ್ಳುವ ಉದ್ದೇಶವೂ ಇದಕ್ಕಿದೆ. ನಮ್ಮ ಸನ್ಮಾನ ಅವರ ಆಶೀರ್ವಾದವನ್ನು, ಶುಭಕಾಮನೆಗಳನ್ನು ಪಡೆಯುವ ದಾರಿಯಷ್ಟೇ. ಮಹೋತ್ಸವದ ಸಂತೋಷವನ್ನು ಇಮ್ಮಡಿಗೊಳಿಸಲು ಮತ್ತು ಶುಭವಾಗಲೆಂದು ಹರಸಲು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಆಗಮಿಸಿದ್ದರು. ಜಸ್ವೀಸ್ ವೆಂಕಟಾಚಲಯ್ಯ, ಡಾ.ಎಂ.ಚಿದಾನಂದ ಮೂರ್ತಿ, ರಾಜೇಂದ್ರ ಸಿಂಗ್, ಶ್ರೀನಾಥ್ ಬಾಟ್ನಿ, ಪ್ರಹ್ಲಾದಾಚಾರ್ಯರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಪಶ್ಚಿಮ ಘಟ್ಟಗಳಿರುವ ಒಂದು ಗ್ರಾಮದಲಿ ಜನಿಸಿ, ಕಾಡಿನ ಬಗ್ಗೆ ಒಲವನ್ನು ಬೆಳೆಸಿಕೊಂಡು ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ಕಾಡನ್ನು ಉಳಿಸುವ ಜವಾಬ್ದಾರಿಯುತ ಕೆಲಸದಲ್ಲಿ ನಿರತರಾಗಿರುವ ಹಾಲಕ್ಕಿ ಜನಾಂಗದ ತುಳಸಿ ಗೌಡ ಎಂಬುವವರಿಗೆ ಈ ಬಾರಿಯ ಸಮ್ಮಾನ್ ನೀಡಲಾಯಿತು. ಖ್ಯಾತ ಪರಿಸರ ತಜ್ಞರಾಗಿ ನಮಗೆಲ್ಲಾ ಪರಿಚಯವಿರುವ, ಪಶ್ಚಿಮಘಟ್ಟಗಳ ಉಳಿವಿಗಾಗಿ ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತಿರುವ ಪ್ರೊ. ಮಾಧವ್ ಗಾಡ್ಗಿಲ್ ಅವರಿಗೆ ಸಮ್ಮಾನ್ ನೀಡುವ ಯೋಜನೆ ಇದ್ದರೂ ಕೆಲವು ಆಕಸ್ಮಿಕ ಕಾರಣಗಳಿಂದ ತಪ್ಪಿತು. (ಮಾಧವ್ ಗಾಡ್ಗಿಲ್ ಅವರು ಕೌಟುಂಬಿಕ ಕಾರಣಗಳಿಂದಾಗಿ ಸಭೆಗೆ ಬರಲು ಸಾಧ್ಯವಾಗಲಿಲ್ಲ). ಸ್ವಾಮಿಗಳು ಮತ್ತು ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ಮಕ್ಕಳು ತಾವು ಕಲಿತ ಹಾಡು, ನೃತ್ಯ, ನಾಟಕ, ಚುರುಕು ಸಂಭಾಷಣೆಗಳಿಂದ ಜೀವೋ ಜೀವಸ್ಯ ಜೀವನಮ್ ವಿಷಯವನ್ನು ಮಹೋತ್ಸವದಲ್ಲಿ ಮತ್ತೊಮ್ಮೆ ಪ್ರತಿಧ್ವನಿಸುವಂತೆ ಮಾಡಿದರು. ವಿಷಯಕ್ಕೆ ತಕ್ಕ ವೇಷ-ಭೂಷಣ, ನಿರ್ಭಯತೆ, ತನ್ಮಯತೆ ಮಕ್ಕಳ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಅಮರ ಗಂಗೆಯ ಗೀತ ರೂಪಕವನ್ನು ನೋಡಿ ಸಭಿಕರೆಲ್ಲರೂ ಒಂದು ಕ್ಷಣ ವಿಸ್ಮಯರಾದರು. ಸ್ವಾಮಿಗಳು ಬಹಳವಾಗಿ ಮೆಚ್ಚಿಕೊಂಡ ಕಾರ್ಯಕ್ರಮವೂ ಇದಾಗಿತ್ತು. ಮಹೋತ್ಸವದ ಮತ್ತೊಂದು ಪ್ರಮುಖ ಘಟ್ಟ ಪುಸ್ತಕ ಬಿಡುಗಡೆ. ಎಲ್ಲಪ್ಪ ರೆಡ್ಡಿ ಅವರೊಡನೆ ನಡೆಸಿದ ಸಂದರ್ಶನ ಮತ್ತು ಅವರು ಮಕ್ಕಳಿಗೆ ತರಗತಿಯಲ್ಲಿ ಬೋಧಿಸಿದ ವಿಷಯಗಳನ್ನು ಸಂಗ್ರಹಿಸಿ ‘ಪ್ರಕೃತಿಯೊಡನೆ ಒಂದು ನಡಿಗೆ’ ಎಂಬ ಕಿರು ಹೊತ್ತಿಗೆಯನ್ನು ಸ್ವಾಮಿಗಳು ಬಿಡುಗಡೆ ಮಾಡಿದರು. ಮಕ್ಕಳಿಗೆ ಬಾಲ್ಯದಿಂದಲೆ ನಿಸರ್ಗದ ಸೂಕ್ಷ್ಮ ವಿಚಾರಗಳನ್ನು, ಪರಸ್ಪರ ಸಂಬಂಧಗಳನ್ನು ತಿಳಿಸುವ ಉದ್ದೇಶದಿಂದ ವಿಶೇಷ ಪಠ್ಯಪುಸ್ತಕವನ್ನು ತಯಾರಿಸುವ ಯೋಜನೆ ಪೂರ್ಣಪ್ರಮತಿಯದ್ದು. ಇದರ ಮೊದಲ ಹೆಜ್ಜೆಯಾಗಿ ಪುಸ್ತಕದ ಬಿಡುಗಡೆ ಸ್ವಾಮಿಗಳ ಆಶೀರ್ವಾದದೊಂದಿಗೆ ನಡೆಯಿತು. ಈ ಪುಸ್ತಕದ ಲಾಭವು ಇತರ ಶಾಲೆಯ ವಿದ್ಯಾರ್ಥಿಗಳಿಗೂ, ಪ್ರಕೃತಿಯ ಬಗೆಗೆ ಅರಿಯಲು ಆಸಕ್ತಿ ಉಳ್ಳ ಓದುಗರಿಗೂ ಸಿಗಲಿದೆ. ಅನೇಕ ವಿಷಯಗಳಿಗೆ ಸಂಬಂಧಿಸಿದ ಮತ್ತೂ ಅನೇಕ ಪುಸ್ತಕಗಳನ್ನು ಹೊರತರುವ ಉದ್ದೇಶ ಪೂರ್ಣಪ್ರಮತಿಗಿದೆ. ಈ ಸಂತಸದ ಸಂದರ್ಭದಲ್ಲಿ ಹಿರಿಯರಾಡಿದ ನುಡಿಗಳು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತೆ, ಕಾರ್ಯೋನ್ಮುಖರಾಗುವಂತೆ ಮಾಡಿತು. ಪ್ರಕೃತಿ-ಸಂಸ್ಕೃತಿ-ಅಧ್ಯಾತ್ಮವನ್ನು ಬೆಸೆಯುವ ಪೂರ್ಣಪ್ರಮತಿಯ ಹೊಸ ಪ್ರಯೋಗಗಳಿಗೆ ಮಾರ್ಗದರ್ಶನವಾಯಿತು. ಅವುಗಳ ಸಂಗ್ರಹ ಹೀಗಿದೆ ನೋಡಿ: ಡಾ.ಎಂ.ಚಿದಾನಂದಮೂರ್ತಿ (ಬರಹಗಾರರು, ಸಂಶೋಧಕರು ಮತ್ತು ಇತಿಹಾಸಜ್ಞರು) ಪ್ರಗತಿಪರ ಚಿಂತನೆಗಳನ್ನು ಮಾಡುತ್ತಾ, ಪ್ರಗತಿಪರ ಪಥದಲ್ಲಿ ನಡೆಯುತ್ತಿರುವ, ಭಾರತವನ್ನು ನಡೆಸುತ್ತಿರುವ ಪರಮಪೂಜ್ಯ ಪೇಜಾವರ ಸ್ವಾಮಿಗಳಿಗೆ, ವೇದಿಕೆ ಮೇಲಿರುವ ಗಣ್ಯರಿಗೆ ಮತ್ತು ಶ್ರೋತೃಬಾಂಧವರಿಗೆ ವಂದಿಸುತ್ತೇನೆ. ವಂದೇ ಮಾತರಂ, ಏಕಂ ಸತ್ಯಂ ವಿಪ್ರಾಃ ಬಹುದಾ ವದಂತಿ, ಸರ್ವೇ ಜನಾಃ ಸುಖಿನಃ ಸಂತು ಎಂಬುದು ನಮ್ಮ ಭಾರತೀಯ ಸಂಸ್ಕೃತಿಯ ಘೋಷಣೆ. ಮಕ್ಕಳ ಅತ್ಯದ್ಭುತ ಹಾಡು, ನಾಟಕ, ನರ್ತನಗಳನ್ನು ನೋಡಿ ಅತ್ಯಾನಂದವನ್ನು ಅನುಭವಿಸಿದ್ದೇವೆ. ಆ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿರುವ ಗುರುವೃಂದಕ್ಕೆ ಮತ್ತು ಪೋಷಕರಿಗೆ ಅಭಿನಂದನೆಗಳು. ಕಳೆದ ಒಂದೂವರೆ ಗಂಟೆಗಳಿಂದ ಈ ವೇದಿಕೆಯ ಮೇಲೆ ನಮಗೆ ಕಂಡಿದ್ದು ಅಪ್ಪಟ ಭಾರತೀಯ ಸನಾತನ ಸಂಸ್ಕೃತಿ. ಭಾರತೀಯ ಸಂಸ್ಕೃತಿಯನ್ನು ಇಷ್ಟು ಚೆನ್ನಾಗಿ ತೋರಿಸುವ ಕಾರ್ಯಕ್ರಮವನ್ನು ನಾನು ಕಂಡಿಲ್ಲ. ಮತ್ತೆ ಮುಂದಿನ ಪೂರ್ಣಪ್ರಮತಿ ಉತ್ಸವದಲ್ಲೇ ಇಂತಹ ಕಾರ್ಯಕ್ರಮ ನೋಡಲು ಸಾಧ್ಯ. ಇಲ್ಲಿರುವ ಎಲ್ಲರಿಗೂ ತಿಳಿದಿದೆ, ಭಾರತೀಯ ಸಂಸ್ಕೃತಿ ಆಕ್ರಮಣಕ್ಕೆ ಒಳಗಾಗಿದೆ. ನಾಲ್ಕುದಿನಗಳ ಹಿಂದೆಯಷ್ಟೇ ಪತ್ರಿಕೆಯಲ್ಲಿ ಒಂದು ಹಿಂದೂ ದೇವಾಲಯ ಭಗ್ನವಾಗಿರುವ ಚಿತ್ರವನ್ನು ಕೊಡಲಾಗಿತ್ತು. ಹಿಂದೆ ಭಾರತದ ಭಾಗವೇ ಆಗಿದ್ದ ಪಾಕಿಸ್ತಾನದಲ್ಲಿ ಇದ್ದ ೪೨೦ ದೇವಾಲಯಗಳಲ್ಲಿ ಇಂದು ಉಳಿದಿರುವುದು ಕೇವಲ ೨೦ ದೇವಾಲಯಗಳು ಮಾತ್ರ. ೨೨% ಹಿಂದೂಗಳ ಜನಸಂಖ್ಯೆ ಇದೀಗ ೨% ಗೆ ಇಳಿದಿದೆ. ಅಲ್ಲಿ ಮಾತ್ರ ಅಲ್ಲ, ಭಾರತದಲ್ಲೇ ನಾಶವಾಗುತ್ತಿದೆ. ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಕ್ರಿಶ್ಚಿಯನ್, ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಹಲವು ಹುನ್ನಾರಗಳಿಗೆ ಹಿಂದೂ ದೇವಾಲಯಗಳು, ಜನರು ಒಳಗಾಗುತ್ತಿದ್ದಾರೆ. ಇದನ್ನೆಲ್ಲಾ ಗಂಭೀರವಾಗಿ ನಾವು ಪರಿಗಣಿಸಿ ಕಾರ್ಯೋನ್ಮುಖರಾಗಬೇಕು. ಇಂತಹ ಕಾರ್ಯಕ್ರಮಗಳು ಯುವಕರಿಗೆ ಉತ್ಸಾಹವನ್ನು ತುಂಬಲಿ. ನನ್ನನ್ನು ಇಲ್ಲಿ ಕರೆದಿರುವವರಿಗೆ ಧನ್ಯವಾದಗಳು. ನನ್ನ ಪ್ರಶಸ್ತಿಯಾಗಲಿ, ಹೆಸರಾಗಲಿ ಈ ಸಭೆಗೆ ಕರೆಯುವಂತೆ ಮಾಡಿಲ್ಲ. ನಾನು ಈ ಸಭೆ ಬಂದಿದ್ದರೆ ಅದು ಒಬ್ಬ ಶ್ರೇಷ್ಠ ಹಿಂದೂವಾಗಿ. ಗಾಂಧೀಜಿಯವರು ಹೇಳುತ್ತಾರೆ I take pride to call me a Sanaatani, a Hindu ಎಂದು ಹೇಳಿಕೊಂಡಿದ್ದಾರೆ. ವಿವೇಕಾನಂದರೂ ಇದೇ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಹೆಚ್ಚು ಹಿಂದೂಗಳೇ ಇರುವ ಇಂದಿನ ಭಾರತದಲ್ಲಿ ನಾನು ಪ್ರಾಣಬಿಡುತ್ತಿದ್ದೇನೆ ಎಂಬುದೇ ಸಮಾಧಾನದ ಸಂಗತಿ. ಜೈ ಹಿಂದ್. ಶ್ರೀನಾಥ್ ಬಾಟ್ನಿ (Director on Board, Infosys Technologies) ಒಂದೂವರೆ ಗಂಟೆ ಮಕ್ಕಳ ಈ ಕಾರ್ಯವನ್ನು ನೋಡುತ್ತಾ ಸಮಯ ಹೋದದ್ದೆ ತಿಳಿಯಲಿಲ್ಲ. ಒಂದೊಂದು ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಭಾರತೀಯ ಸಂಸ್ಕೃತಿ ಪ್ರತಿಧ್ವನಿಸುತ್ತಿತ್ತು. ಪ್ರಕೃತಿ-ಸಂಸ್ಕೃತಿ ಬಹಳ ಮುಖ್ಯವಾದುದು. ನಮ್ಮದೇ ಸಂಸ್ಕೃತಿಯನ್ನು ಮರೆಯುತ್ತಾ ಹೇಗೆ ನಮ್ಮ ದೇಶದಲ್ಲಿ ಪ್ರಕೃತಿಯನ್ನು ನಾಶಮಾಡುತ್ತಿದ್ದೇವೆ ಎಂಬುದನ್ನು ನೆನೆಸಿಕೊಂಡರೆ ಮುಂದೆ ಏನಾಗುವುದೋ ಗೊತ್ತಿಲ್ಲ?! ಇಂದು ನಮ್ಮ ಮಕ್ಕಳು ಮಹಾಭಾರತ-ರಾಮಾಯಣ ಕತೆಗಳನ್ನು ಕೇಳುತ್ತಿಲ್ಲ. ಟಿ.ವಿ. ಸೀರಿಯಲ್‌ಗಳನ್ನು, ಬಾಲಿವುಡ್ ಸಿನಿಮಾಗಳನ್ನು ನೋಡುತ್ತಿದ್ದಾರೆ. ನಾನು ಎಷ್ಟೋ ದೇಶಗಳಿಗೆ ಭೇಟಿ ನೀಡಿದ್ದೇನೆ. ಪಾಶ್ಚಿಮಾತ್ಯ ದೇಶಗಳಿಗೆ ಹೋದಾಗ ಅಲ್ಲಿನ ಜನ ಆಸಕ್ತಿಯಿಂದ ನಮ್ಮ ಸಂಸ್ಕೃತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಎಷ್ಟೋ ಜನ ಮಹಾಭಾರತ-ರಾಮಾಯಣವನ್ನೂ ಓದಿರುತ್ತಾರೆ. ಅವರಿಗೆ ಆಸಕ್ತಿ ಕುತೂಹಲ ಎರಡೂ ಇರುತ್ತದೆ. ಪೌರಾತ್ಯ ದೇಶಗಳಿಗೆ ಹೋದಾಗಲೂ ಅವರ ದೇಶದ ಸಂಸ್ಕೃತಿಯನ್ನು ಪ್ರೀತಿಸುವುದನ್ನು ಕಾಣಬಹುದು. ನಾವು ಈ ಎರಡರ ಮಧ್ಯೆ ಎಲ್ಲೋ ಬೀಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಈ ಕಾರ್ಯಕ್ರಮ ಮಾಡಲು ವೇದಿಕೆ ಮಾಡಿಕೊಟ್ಟದ್ದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಾಯಿತು. ದೊಡ್ಡವರಿಗೆ ಕಣ್ಣುತೆರೆಸುವಂತೆ ಮಕ್ಕಳು ಕಾರ್ಯಕ್ರಮ ಕೊಟ್ಟರು. ಬೆಟ್ಟಗಳಿಗೆ ಹೋದಾಗ ಪ್ಲಾಸ್ಟಿಕ್‌ಅನ್ನು ಎಲ್ಲೆಂದರಲ್ಲಿ ಬಿಸಾಕುತ್ತಿರುತ್ತೇವೆ. ಈ ಮಕ್ಕಳು ಅದನ್ನು ಬಹಳ ಚೆನ್ನಾಗಿ ತೋರಿಸಿದರು. What Purnapramati is doing great service to the society by inculcating importance of both our culture and our environment. I wish all the best for this event. ಎಲ್ಲಪ್ಪ ರೆಡ್ಡಿ (ಸದಸ್ಯರು, ಲೋಕ ಅದಾಲತ್,  ಕರ್ನಾಟಕ ಉಚ್ಚ ನ್ಯಾಯಾಲಯ) ೧೯೮೨ರಲ್ಲಿ ಅರಣ್ಯ ಅಧಿಕಾರಿಯಾಗಿ ಮಾಸ್ತಿ ಕಟ್ಟೆ ಸಸ್ಯಪಾಲನಾ ಕ್ಷೇತ್ರಕ್ಕೆ ಹೋದಾಗ ತುಳಸಿ ಯಂತಹ ವ್ಯಕ್ತಿಯ ನಿಷ್ಠೆ, ಕೆಲಸದಲ್ಲಿನ ತನ್ಮಯತೆ ಗಮನಿಸಿದೆ. ಕುತೂಹಲಕ್ಕಾದರೂ ತಲೆ ಎತ್ತಿ ನೋಡುತ್ತಾರೆ, ಆದರೆ ಇವರು ಅವರ ಕೆಲಸ ಮಾಡುತ್ತಲೆ ಇರುತ್ತಿದ್ದರು. ಬಂದವರನ್ನು ಗಮನಿಸುತ್ತಿರಲಿಲ್ಲ. ಕೆಲಸದಲ್ಲಿದ್ದ ಅವರ ಏಕಾಗ್ರತೆಯನ್ನು ಗಮನಿಸಿದೆ. ದಿನಗೂಲ್ಲಿ ನೌಕರರಾದ, ಅನಕ್ಷರಸ್ಥರಾದ ಈ ಮಹಿಳೆ ನಿರ್ವಂಚನೆಯಿಂದ ಕೆಲಸದಲ್ಲಿ ನಿರತರಾಗಿರುವುದು ದಿಗ್ಭ್ರಮೆ ತರಿಸಿತು. ೨೦ ಜನ ಹೆಂಗಸರ ಗುಂಪನ್ನು ಕರೆದುಕೊಂಡು ಕಾಡಿಗೆ ಬರುವ ಕಳ್ಳನನ್ನು ಹಿಡಿದು ತರುವ ಧೈರ್ಯ ಇವರಿಗಿದೆ. ಕಾಡನ್ನು ತನ್ನದು ಎಂದು ತಿಳಿದಿಕೊಂಡಿದ್ದಾರೆ. ಹಲವರು ಪಿ.ಹೆಚ್.ಡಿ ಮಾಡಿರಬಹುದು. ಇವರ ತನ್ಮಯತೆ ನನಗೂ ಇಲ್ಲ. ಯಾವ ಮರದ ಬೀಜವನ್ನು ತಂದು ಮೊಳಕೆ ಮಾಡಬೇಕೆಂದು ಹೇಳಿದ್ದೆನೋ ಮುಂದಿನ ಬಾರಿ ಹೋಗುವುದರೊಳಗೆ ಅಷ್ಟೂ ಕೆಲಸವನ್ನೂ ಮಾಡಿರುತ್ತಿದ್ದರು. ಪುಸ್ತಕದಲ್ಲಿ ಬರೆದಿದ್ದ ಎಷ್ಟೋ ವಿಧಾನಗಳು ಸೋತಾಗಲೂ ಅನುಭವದಿಂದ ಬೀಜವನ್ನು ಮೊಳಕೆ ಬರಿಸಿದ ಬುದ್ಧಿವಂತಿಕೆ ಇವರದ್ದು. ಕಾಡಿನ  ಮಧ್ಯೆ ನಡೆಯುವಾಗ ಅವರನ್ನು ಗಮನಿಸಿದರೆ ಕಾಡಿನಲ್ಲೇ ಸ್ವರ್ಗವನ್ನು ಕಂಡಿರುವುದು ನಮ್ಮ ಅನುಭವಕ್ಕೆ ಬರುತ್ತದೆ. ನಿಸರ್ಗಕ್ಕೆ ನಾವು ಸರಿಯಾಗಿ ಸ್ಪಂದಿಸಿದರೆ ನಮ್ಮ ಕಾಲ ಕೆಳಗೇ ಒಂದು ಅದ್ಭುತವಾದ ಲೋಕವಿದೆ. ಒಂದು ಹೊಸ ಜೀವಲೋಕವನ್ನು ಕಾಣಬಹುದು. ಮುಂದೆ ಉತ್ತರಕನ್ನಡಕ್ಕೆ ಪ್ರಶಸ್ತಿ ಬಂದಾಗ ನನ್ನನ್ನು ಕರೆದರು. ನನಗೆ ನಾಚಿಕೆಯಾಯಿತು. ನನಗೆ ಆ ಯೋಗ್ಯತೆ ಇದೆಯೇ? ಎಂದು. ತುಳಸಿ ಅವರನ್ನೆ ಅದಕ್ಕೆ ಕಳುಹಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡೆ. ಇಂತಹವರನ್ನು ಮಕ್ಕಳಿಗೆ ಪರಿಚಯ ಮಾಡಿಸುವ ಉದ್ದೇಶದಿಂದ ಇವರನ್ನು ಕರೆಸಲಾಗಿದೆ. ಈಕೆಯದ್ದು ನಿಜವಾದ ವಿಜ್ಞಾನ. ಇಂತಹ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಟ್ಟ ಪೋಷಕರಿಗೆ ಅಭಿನಂದನೆಗಳು. ಜಸ್ಟೀಸ್ ವೆಂಕಟಾಚಲಯ್ಯ ಪೂರ್ಣಪ್ರಮತಿ ಎನ್ನುವುದು ನನ್ನ ಕಲ್ಪನೆಯಲ್ಲಿ ಒಂದು ಸಂಸ್ಥೆಯಲ್ಲ,it is a great metopher for the global debate.  ಪ್ರಕೃತಿಯನ್ನು ನಾವು ಆರಾಧಿಸುತ್ತೇವೆ. ಒಂದು ಹಿಡಿ ಮಣ್ಣನ್ನು ನಾವು ಹಿಡಿದರೆ ಸಾವಿರಾರು ತರಹದ ಜೀವಿಗಳು ಅಲ್ಲಿರುತ್ತವೆ. ಅದನ್ನು ವಿವರಿಸಲು ಸಾಧ್ಯವೇ ಇರುವುದಿಲ್ಲ. ಆ ಕ್ಷಣಕ್ಕೆ ಹುಟ್ಟಿ ತಮ್ಮ ಕೆಲಸ ಮಾಡಿ ಮುಗಿಸಿ ಸಾಯುತ್ತವೆ. ಪೂರ್ಣಪ್ರಮತಿ ಇಷ್ಟರ ಮಟ್ಟಿಗೆ ನಮ್ಮ ಸಂಸ್ಕೃತಿಯನ್ನು ಉದ್ದೀಪನ ಮಾಡಿರುವುದನ್ನು ಮಕ್ಕಳು ನಮಗೆ ತೋರಿಸಿದ್ದಾರೆ. ೪೦ರ ದಶಕದಲ್ಲಿ ನಮ್ಮ ಆರೋಗ್ಯದ ಸ್ಥಿತಿ ಹೇಗಿತ್ತು? Maternal Mortality ಎಂದು ಒಂದು ಗಣತಿ ಇದೆ. ೪೦೦೦ ಹೆಣ್ಣುಮಕ್ಕಳು ಪ್ರಸವದ ಕಾಲದಲ್ಲಿ ಪ್ರಾಣ ಬಿಡುತ್ತಾರೆ. ೫೦ರ ದಶಕದಲ್ಲಿ ೨೦೦೦ ಕ್ಕೆ ಬಂದಿತು. ಈಗ ೧೬೦ ಇದೆ. ಆಧುನಿಕ ವಿಜ್ಞಾನದ ಕೊಡುಗೆ ಇದು. ೧೯೧೦ರಲ್ಲಿ ಒಬ್ಬ ಭಾರತೀಯನ ಸರಾಸರಿ ಜೀವಿತಾವಧಿ ೨೯ ವರ್ಷಗಳು, ೧೯೮೦ರಲ್ಲಿ ೮೫ ವರ್ಷಗಳು. ವಿಜ್ಞಾನದ ಪ್ರಭಾವ ಎಷ್ಟಿದೆ ಎಂಬುದು ಇದರಿಂದ ತಿಳಿಯುತ್ತದೆ. ಆದರೆ ೨೦ನೇ ಶತಮಾನದಲ್ಲಿ ೧೦೦ ವರ್ಷ ಎಂದು ಹೇಳುತ್ತದೆ. ಇದರಲ್ಲಿ ಎಷ್ಟು ಒಳ್ಳೆಯದು ಎಷ್ಟು ಕೆಟ್ಟದು ಎಂಬುದು ನೋಡಬೇಕು. ಪ್ರಕೃತಿಯನ್ನು ಆರಾಧನೆ ಮಾಡುವ ಪದ್ಧತಿ ಹೋಗಬೇಕು, ಅದನ್ನು ನಾವು ಸೇವಕರಂತೆ ಬಳಸಿಕೊಳ್ಳಬೇಕು ಎಂದು ಒಬ್ಬರು ಹೇಳುತ್ತಾರೆ. ಮನುಷ್ಯನ ಕಾಲ ಮುಗಿಯಿತು, ಇನ್ನು ಯಂತ್ರಗಳ ಕಾಲ, ತಂತ್ರಜ್ಞಾನದ ಕಾಲ ಎಂದು ಹೇಳುತ್ತಾರೆ. ವಿಜ್ಞಾನದ ಹೊಳೆಯಲ್ಲಿ ಸಂಸ್ಕೃತಿ ಕೊಚ್ಚಿ ಹೋಗುತ್ತದೆ ಎನಿಸುತ್ತದೆ. ಸಂಸ್ಕೃತಿಯನ್ನು ಗುರುತಿಸಿ, ಅಳವಡಿಸಿಕೊಳ್ಳುವುದು ಹೇಗೆ ಎನ್ನುವುದು ಇಂದಿನ ಸಮಾಜಕ್ಕಿರುವ ದೊಡ್ಡ ಸಮಸ್ಯೆ. ಮಕ್ಕಳು ಈ ಸಮಸ್ಯೆ ಬಹಳ ಚೆನ್ನಾಗಿ ಉತ್ತರ ಹುಡುಕುವ ಪ್ರಯತ್ನವನ್ನು ಇಂದು ತೋರಿಸಿದರು. ಆದ್ದರಿಂದಲೇ ಇದನ್ನು ಮೆಟಾಫರ್ ಎಂದು ಹೇಳಿದ್ದು. ಇದನ್ನು ಎಲ್ಲರೂ ಬೆಳೆಸಬೇಕು. ಪ್ರೊ.ಡಿ.ಪ್ರಹ್ಲಾದಾಚಾರ್ಯರು (ನಿವೃತ್ತ ಕುಲಪತಿಗಳು, ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯ) ಪೂರ್ಣಪ್ರಮತಿ ೪ ವರ್ಷದ ಬಾಲಿಕೆ. ಮೊದಲ ವರ್ಷದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟಾಗ ಪೋಷಕರಲ್ಲಿ ಒಂದು ಭಯ ಕಾಣಿಸಿತ್ತು. ಆದರೆ ಈ ದಿನ ಹೆಮ್ಮೆಯಿಂದ ಹೇಳಬಹುದು, ಈ ಬಾಲಿಕೆ ಪುಟ್ಟದಾದ ಆದರೆ ದಿಟ್ಟವಾದ ಹೆಜ್ಜೆಯನ್ನು ಇಡುತ್ತಿದ್ದಾಳೆ. ಎಲ್ಲಾ ಪೋಷಕರು ನಿರ್ಭಯರಾಗಿದ್ದಾರೆ, ಅಷ್ಟೇ ಅಲ್ಲ ಅವರಿಗೆ ಪರಿಚಯವಿರುವ ಇತರರಿಗೂ ಇಲ್ಲಿಗೆ ಸೇರಿಸಬೇಕೆಂಬ ಸಲಹೆ ಕೊಡುತ್ತಿದ್ದಾರೆ. ಯಾವ ಉದ್ದೇಶದಿಂದ ಈ ಶಾಲೆ ಬೆಳೆಯಬೇಕೆಂದು ಅಂದುಕೊಂಡಿದ್ದಾರೆ ಅದು ಸರಿಯಾದ ಮಾರ್ಗದಲ್ಲಿ ಹೋಗುತ್ತಿದೆ ಎಂಬ ಭರವಸೆ ನಮಗೆ ಬಂತು. ಪರಮ ಪೂಜ್ಯ

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.