ಆನಂದವನ – ಪೂರ್ಣಪ್ರಮತಿಯ ಕನಸಿನ ತಾಣ

Sunday, July 1st, 2012

ನಿಮಗೆಲ್ಲರಿಗೂ “ಆನಂದವನ”ಕ್ಕೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ಅರೆ ಏನಿದು ಆನಂದವನ? ಸಹಜವಾಗಿ ನಿಮ್ಮಲ್ಲಿ ಅಚ್ಚರಿ ಮೂಡಿರಬಹುದು ಅಲ್ಲವೇ? ಹೌದು ಕೆಲವೇ ನಿಮಿಷಗಳಲ್ಲಿ ನಾವು ಆನಂದವನದೊಳಗೆ ಮಾನಸಿಕವಾಗಿ ಪ್ರವೇಶಿಸುತ್ತಿದ್ದೇವೆ. ಆನಂದವನದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. ವನ ಎಂದಾಕ್ಷಣ ನಮ್ಮ ಕಣ್ಣೆದುರು ತುಂಬಿಕೊಳ್ಳುವುದು ಹಸಿರು. ಬೀಜದಿಂದ . . . . ಸಸಿಯಾಗಿ . . . . ಗಿಡವಾಗಿ  . . . .  ಹಲವು ಹರವುಗಳ ಹೂವು ಹಣ್ಣುಗಳ ಮರವಾಗಿ, ಅನೇಕ ಬೀಜಗಳಿಗೆ ಕಾರಣವಾಗಿ, ಇರುವವರೆಗೂ ನೆರಳಾಗಿ, ನಿರಂತರವೂ ಉಪಯುಕ್ತವಾಗುವ ಈ ಮರಗಳು ನಿತ್ಯನೂತನ ಹಾಗೂ ನಮ್ಮ ಭೂಮಿಯ ಹಸಿರಿಗೂ ನಮ್ಮೆಲ್ಲರ ಉಸಿರಿಗೂ ಕಾರಣ. ಇಂತಹ ಮರ ಗಿಡಗಳ ಸಮೂಹ ಒಂದು ವನ. ಅಂದರೆ ಅನೇಕ ಪರಿಪೂರ್ಣತೆಗಳ ಆಗರ. ನಮ್ಮ ಮನುಷ್ಯಜೀವನವೂ ಹಾಗೆ ಪರಿಪೂರ್ಣವಾಗಬೇಕಲ್ಲವೇ? ನಾವು … ನೀವು … ನಮ್ಮ ಮುಂದಿನ ಪೀಳಿಗೆ. ಹೀಗೆ ನಾವೆಲ್ಲ ಸೇರಿದಾಗ ಆ ಸಮೂಹವು ಪೂರ್ಣತೆಯ ವನದಂತಾಗುವುದಾದರೆ ಎಷ್ಟು ಚಂದ ಅಲ್ಲವೇ? ನಾವು ನೀವೆಲ್ಲ ಸೇರಿ ಸಾರ್ಥಕ ಜೀವನದ ಅಂಥದೊಂದು ಪೂರ್ಣವಾದ ವನ ನಿರ್ಮಿಸಲು ಸಾಧ್ಯ ಅಲ್ಲವೇ? ಹೌದು. ಜೀಜವು ಹೇಗೋ ಹಾಗೆ ಮಕ್ಕಳ ಮನಸ್ಸು. ಇದಕ್ಕೆ ಸಾಂಸ್ಕೃತಿಕ, ಹಾಗೂ ಆಧ್ಯಾತ್ಮಿಕ ಮೌಲ್ಯಗಳ ನೀರನ್ನು ಆಧುನಿಕ ಶಿಕ್ಷಣವೆಂಬ ಗೊಬ್ಬರವನ್ನು ಧಾರೆಯೆರೆಯಬೇಕು.  ಗಿಡಗಳಿಂದ ಕೀಟಗಳನ್ನು ದೂರಪಡಿಸಬೇಕು. ಹಾಗಾದಲ್ಲಿ ನಮ್ಮ ನಿಮ್ಮೆಲ್ಲರ ಮಕ್ಕಳು ಪರಿಪೂರ್ಣ ಫಲಗಳನ್ನು ಕೊಡುವ ಮರದಂತೆ ಅಜರಾಮರರಾಗುತ್ತಾರೆ. ಅಂತಹ ಅಜರ-ಅಮರ ವೃಕ್ಷಗಳ ವೃಂದ ನಾಡಿಗೆ ಆನಂದ ಕೊಡುವ ಆನಂದವನವಾಗುತ್ತದೆ. ಇಂತಹ ಒಂದು ವನವನ್ನು ಸಮಾಜವೇ ಬೆಳೆಸಬೇಕು. ಅದು ನಮ್ಮ ನಿಮ್ಮೆಲ್ಲರ ಹೊಣೆ. ಅಂಥದೊಂದು ವನ ಬೆಳೆಸಬೇಕೆಂಬ ಹೆಬ್ಬಯಕೆಯಿಂದ ನಾವು ಇಂದು ನಿಮ್ಮೆದುರು ಬದ್ಧರಾಗಿ ನಿಂತಿದ್ದೇವೆ; ರೈತರಂತೆ. ನಮ್ಮೆದುರು ಸಾಕಷ್ಟು ಬೀಜರೂಪದ ಚಿಣ್ಣರಿದ್ದಾರೆ. ಆದರೆ ಬೆಳೆಯಲು ಕೃಷಿಭೂಮಿಯ ಅಗತ್ಯವಿದೆ. ಬೀಜವು ನೆಲೆಯೂರಲು ನೆಲವು ಬೇಕು. ಬೆಳೆದಂತೆ ಹರಡಿಕೊಳ್ಳುವಷ್ಟು ವಿಶಾಲವಾಗಿರಬೇಕು. ಆ ವಿಶಾಲ ಭೂಮಿಗೆ ತಕ್ಕಷ್ಟು ನೀರು ಬೇಕು, ನೇಗಿಲು ಬೇಕು. ಅದನ್ನು ಸಮಾಜವು ಕಲ್ಪಿಸಿಕೊಡಬೇಕು. ಹೌದು. ನಿಮಗೆಲ್ಲ ಗೊತ್ತಿರುವಂತೆ ಪೂರ್ಣಪ್ರಮತಿ ಎಂಬ ಅಭಿಯಾನದೊಂದಿಗೆ ನಾವು ಮಾದರಿಯ ಶಿಕ್ಷಣ ರಂಗದಲ್ಲಿ ಅಡಿಯಿಟ್ಟಿದ್ದೇವೆ. ಆಧುನಿಕತೆಯಲ್ಲಿ ಪ್ರಾಚೀನತೆಯ ಸೊಬಗನ್ನು ಬೆಸೆಯುವ ಅಭಿಲಾಷೆ. ಡಿವಿಜಿಯವರು ಹೇಳಿದ “ಹಳೆ ಬೇರು ಹೊಸ ಚಿಗುರು ಮೂಡಿರಲು ಮರ ಸೊಬಗು” ಎಂಬುದನ್ನು ನನಸಾಗಿಸಲು ಹೊರಟಿರುವ ಪ್ರಯತ್ನ. ಅದಕ್ಕಾಗಿಯೇ ಋಷಿವಾಕ್ಯದೊಡನೆ ವಿಜ್ಞಾನ ಮೇಳವಿಸಲು ತೆರೆದ ರಂಗ. ಆಧ್ಯಾತ್ಮಿಕ ಪ್ರಗತಿ, ಸಾಮಾಜಿಕ ಕಳಕಳಿ, ಮೌಲ್ಯಗಳ ಚಿಂತನೆ, ಹಾಗೂ ಕಲಾತ್ಮಕ ಭಾರತೀಯತೆಯ ಆವಿಷ್ಕಾರಕ್ಕಾಗಿ ಈ ತಳಹದಿ. ಪಾಶ್ಚಾತ್ಯ- ಭಾರತೀಯ, ಆಧುನಿಕ – ಪ್ರಾಚೀನ, ಆರ್ಥಿಕ – ಸಾಮಾಜಿಕ, ಜಡವಿದ್ಯೆ – ಕಲಾರಸ ಹಾಗೂ ಸ್ಪರ್ಧೆ – ಆಧ್ಯಾತ್ಮಗಳ ದ್ವಂದ್ವವನ್ನು ಬೆಸೆದು ಒಂದೆಡೆಯಲ್ಲಿ ಹೊರ-ಒಳ ಶಿಕ್ಷಣಪದ್ಧತಿಗಳನ್ನು ಜೋಡಿಸುವ ವಿಶಿಷ್ಟ ಕಲ್ಪನೆ. ಇಂತಹ ಸಮನ್ವಿತ ಶಿಕ್ಷಣಕ್ಕೊಂದು ಆಧಾರ ಪೂರ್ಣಪ್ರಮತಿ. ಇಲ್ಲಿ ಸಂಸ್ಕೃತ, ಜೀವನವಿದ್ಯೆ, ತತ್ತ್ವದರ್ಶನ, ಪರಂಪರೆ, ಕಲೆ ಮೊದಲಾದ ನಿತ್ಯನೂತನ ವಿದ್ಯೆಗಳ ಜೊತೆಗೆ ಗಣಿತ, ವಿಜ್ಞಾನ, ವ್ಯವಹಾರ ಮೊದಲಾದ ಪ್ರಸ್ತುತ ವಿದ್ಯೆಗಳನ್ನು ಜೋಡಿಸಿ ಎಳೆಯ ಮಕ್ಕಳ ಬುದ್ಧಿಯ ಪೂರ್ಣ ವಿಕಾಸಕ್ಕೆ ಪ್ರಯತ್ನಿಸಲಾಗುತ್ತಿದೆ. ಆಧುನಿಕ ಕಲಿಕೆಯನ್ನು ಮೊಟಕಾಗಿಸದೆ, ಕಲಿಕೆಗೆ ಮತ್ತೆ ಭಾರತೀಯ ಚಿಲುಮೆ ತುಂಬಿ, ಅದಕ್ಕೊಂದು ಸಾಮಾಜಿಕ ಅರ್ಥ ನೀಡಿ, ಮಕ್ಕಳ ಪಕ್ವತೆಗೆ ಬೆಲೆ ಕೊಡುವ ಶಿಕ್ಷಣವನ್ನು ಬೆನ್ನೇರಿ ಹೊರಟಿದೆ ಪೂರ್ಣಪ್ರಮತಿ. ಖ್ಯಾತ ಭಾರತೀಯ ವಿದ್ವಾಂಸರು, ಆಧುನಿಕ ಶಿಕ್ಷಣತಜ್ಞರು ಹಾಗೂ ಸಮಾಜ ಸೇವಕರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವ ತಂಡ ಈ ಶಾಲೆಯನ್ನು ನಡೆಸುತ್ತಿದೆ. ಈ ಶಾಲೆಯಲ್ಲಿ ಆಧುನಿಕ ಮುಖ್ಯವಾಹಿನಿಯ ಪಠ್ಯದ ಅನುಸಾರ ಇಂಗ್ಲೀಷ್, ಗಣಿತ, ಹಾಗೂ ವಿಜ್ಞಾನದ ವಿಷಯಗಳನ್ನು ಕಲಿತ ಮಕ್ಕಳು, ಅದರೊಟ್ಟಿಗೇ ಸಂಸ್ಕೃತದಲ್ಲಿ ಮಾತನಾಡಬಲ್ಲರು. ಭಾರತೀಯ ಗದ್ಯ-ಪದ್ಯಗಳನ್ನು ಹೊರಬಲ್ಲರು. ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳಬಲ್ಲರು. ಸಮಗ್ರ ಭಗವದ್ಗೀತೆಯನ್ನು ಅನುವಾದಿಸಬಲ್ಲರು. ಹಾಡು, ನೃತ್ಯ, ಯೋಗ ಹಾಗೂ ಚಿತ್ರಕಲೆಯೂ ಈ ಮಕ್ಕಳಿಗೆ ಸಹಜ. ಅನಾರೋಗ್ಯಕರ ಸ್ಪರ್ಧೆಯನ್ನು ಬೆಳೆಸದೇ ಗುಣಮಟ್ಟವನ್ನು ಕಾಯ್ದುಕೊಳ್ಳಲು ಇಲ್ಲಿ ಮಕ್ಕಳ ಸಂಖ್ಯೆಯೇ ಕಡಿಮೆ. ಪ್ರತಿ ತರಗತಿಗೆ ಗರಿಷ್ಠ ಹದಿನೈದು. “ನಾವು ಪೂರ್ಣಪ್ರಮತಿಯ ಮಕ್ಕಳು. ನಮ್ಮ ಶಾಲೆ ಅನೇಕ ವಿಶೇಷಗಳ ತವರು. ಭಾಗೀರಥೀ ಜಯಂತಿ ಇಲ್ಲಿಯ ಪರಿಸರ ಹಾಗೂ ಜಲ ದಿನ. ಸೀತಾಜಯಂತಿಯನ್ನು ಮಾತೃದಿನ ಎಂದೂ ಧನ್ವಂತರಿ ಜಯಂತಿಯನ್ನು ಸಾಮಾಜಿಕ ಆರೋಗ್ಯ ದಿನ ಎಂದೂ ಆಚರಿಸುತ್ತೇವೆ. ನಮ್ಮ ಹಬ್ಬಗಳ ಪರಿಚಯದ ಜೊತೆಗೆ ನಾವು ಮಾಡಬೇಕಾದ ಸಾಮಾಜಿಕ ಕರ್ತವ್ಯಗಳನ್ನೂ ತಿಳಿಯುತ್ತೇವೆ. ಹಾಗೆಯೇ ರಾಷ್ಟ್ರೀಯ ಹಬ್ಬಗಳಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತೇವೆ. ಆಗಿಂದಾಗ್ಗೆ ಬೇರೊಂದು ಶಾಲೆಯ ಮಕ್ಕಳೊಡನೆ ಬೆರೆಯುತ್ತೇವೆ. ನಿಜಜೀವನದಿಂದ ಕಲಿಯಲು ಶಾಲೆಯ ಗುರುಗಳೊಡನೆ ಪ್ರವಾಸ ಕೈಗೊಳ್ಳುತ್ತೇವೆ. ಅಲ್ಲದೇ, “ಪೂರ್ಣಪ್ರಮತಿ ವಂದಾರು ವೃಂದ” ಎಂಬ ಮತ್ತೊಂದು ಗುರುವೃಂದವಿದೆ. ಇವರು ನಮಗಾಗಿ ಆಗಿಂದಾಗ್ಗೆ ದೂರದಿಂದ ಬಂದು ಪಾಠ ಮಾಡುತ್ತಾರೆ. “ಪೂರ್ಣಪ್ರಮತಿ ವ್ಯಾಖ್ಯಾ” ಎಂಬ ವಿದ್ವದ್ಗೋಷ್ಠಿಗಳನ್ನೂ ನಮ್ಮ ಶಾಲೆ ನಡೆಸುತ್ತದೆ. ವರ್ಷಕ್ಕೊಮ್ಮೆ ಸಡಗರದ ಹಬ್ಬವೊಂದಿದೆ ನಮಗಾಗಿ. ಅದೇ ಪೂರ್ಣಪ್ರಮತಿ ಉತ್ಸವ. ನಾಲ್ಕೈದು ದಿನದ ಈ ಉತ್ಸವದಲ್ಲಿ ಹಿರಿಯ ಸಾಧಕರು ಬಂದು ನಮ್ಮೊಡನೆ ಕಾಲ ಕಳೆಯುತ್ತಾರೆ. ಅದೊಂದು ಸ್ಫೂರ್ತಿಯ ಸೆಲೆ. ವರ್ಷದ ಕೊನೆಯಲ್ಲಿ “ಪೂರ್ಣಪ್ರಮತಿ ಸಮೀಕ್ಷಾ” ಎಂಬ ಮತ್ತೊಂದು ಕಾರ್ಯಕ್ರಮ. ಅದೊಂದು ಸಂವಾದ; ಮಾತುಕತೆ. ನಮ್ಮನ್ನು ಮಾತನಾಡಿಸಲು ಹೊರಗಿನಿಂದ ಸಾಧಕರು ಬಂದಿರುತ್ತಾರೆ. ನಮ್ಮ ಕಲಿಕೆಯನ್ನು ಗುರುತಿಸುತ್ತಾರೆ. ತಮ್ಮ ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ನಮ್ಮ ಶಿಕ್ಷಕರೊಡನೆ ಹಂಚಿಕೊಳ್ಳುತ್ತಾರೆ. ನಮ್ಮ ಪ್ರಗತಿಯನ್ನು ಅಪ್ಪ-ಅಮ್ಮರಿಗೆ ತಿಳಿಸಲು ಇದೂ ಒಂದು ಸೂಚಕ. ಎಲ್ಲಕ್ಕಿಂತ ಸಂತಸದ ಸಂಗತಿಯೆಂದರೆ ನಮಗಿಲ್ಲಿ ಪರೀಕ್ಷೆಯ ಭಯವಿಲ್ಲ. ಶಿಕ್ಷೆಯ ಭಯವಿಲ್ಲ. ಮಾರ್ಕ್ಸಿನ ಗೋಜಿಲ್ಲ. ನಲಿಯುತ್ತಾ ಕಲಿಯುವ ಆನಂದ. ಓ ದೇವ! ನಾವೇ ಭಾಗ್ಯಶಾಲಿಗಳು” ಪೂರ್ವಪ್ರಾಥಮಿಕ ಮಟ್ಟದಿಂದ ಆರಂಭಗೊಂಡಿರುವ ಈ ಶಾಲೆಯಲ್ಲಿ ಈಗಾಗಲೇ ನೂರಾರು ಮಕ್ಕಳು ಕಲಿಯುತ್ತಿದ್ದಾರೆ.  ಶೀಘ್ರವಾಗಿ ಬೆಳೆಯುತ್ತಿರುವ ಪೂರ್ಣಪ್ರಮತಿ ತನ್ನ ಕನಸಿನ ಪೂರ್ಣ ಸಾಕಾರಕ್ಕಾಗಿ ವಿಶಾಲ ಹಾಗೂ ನಿರ್ಮಲ ಪರಿಸರವನ್ನು ಅರಸುತ್ತಿದೆ. ಅದೊಂದು ಗಿಡ ಮರಗಳ ಸಂದೋಹ; ಗುರುಕುಲದ ವಾತಾವರಣ; ಆಟ-ಪಾಠದ ಆಧುನಿಕ ಕೊಠಡಿಗಳು; ಸಭಾಗೃಹಗಳು; ವಿದ್ಯಾರ್ಥಿನಿಲಯ; ವಸತಿ ಗೃಹಗಳು; ವಿಸ್ತಾರವಾದ ಆಟದ ಮೈದಾನ; ಧ್ಯಾನ ಮಂದಿರ; ಕಣ್ಣಿನ ಒಳಗೂ ಹೊರಗೂ ಕೊನೆಯನೆಂದೂ ಮುಟ್ಟದ ಭಾರತೀಯ ಮಕ್ಕಳ ಮುಗ್ಧ ಮನಸ್ಸುಗಳು. ಈ ಭವ್ಯತೆ ಹಾಗೂ ಧನ್ಯತೆಗಳ ಸಾಂಗತ್ಯಕ್ಕಾಗಿ ಒಂದು ವಿಶಾಲವಾದ ಕೃಷಿಭೂಮಿ ಬೇಕು. ಬನ್ನಿ! ಈ ತಾಯ್ನಾಡಿನ ಮಕ್ಕಳಿಗಾಗಿ ದಿವ್ಯವಾದ ಆನಂದವನ ಕಟ್ಟೋಣ. ಮುಂದೊಂದು ದಿನ ವ್ಯವಸ್ಥೆಯ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಭಾರತೀಯತೆಯನ್ನು, ಸಾಮಾಜಿಕತೆಯನ್ನು, ನಿಸ್ವಾರ್ಥ ಮೌಲ್ಯಗಳನ್ನು ಮನುಕುಲಕ್ಕೆ ಈ ಮಕ್ಕಳು ಉಣಬಡಿಸುತ್ತಾರೆ ಎಂಬ ಮಹತ್ವಾಕಾಂಕ್ಷೆ ಪೂರ್ಣಪ್ರಮತಿಯದು. ಈ ಆನಂದವನದಲ್ಲಿ ಕೇವಲ ಶಾಲೆಯನ್ನಲ್ಲದೇ, ಉನ್ನತ ಅಧ್ಯಯನಕ್ಕಾಗಿಯೂ ಸಂಸ್ಥೆಯನ್ನು ಬೆಳೆಸಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಉನ್ನತ ಅಭ್ಯಾಸ ಹಾಗೂ ಸಂಶೋಧನೆಗಳಿಗಾಗಿಯೇ ಮೀಸಲಾದ ಅಂಗಸಂಸ್ಥೆಯೂ ಇಲ್ಲಿ ಬೆಳೆದುಬರಲಿದೆ. ಈಗಾಗಲೇ ದೇಶದ ಅನೇಕ ಗ್ರಂಥಾಲಯಗಳಿಂದ ಅಪ್ರಕಟಿತ ಹಸ್ತಪ್ರತಿಗಳನ್ನು ತಂದು ಪ್ರಕಾಶನ ಪಡಿಸಲಾಗಿದೆ. ಸಮಾಜದ ಎಲ್ಲ ಆಸಕ್ತರಿಗೂ ನಿಲುಕುವಂತೆ ಅನೇಕ ಕಾರ್ಯಾಗಾರಗಳನ್ನೂ, ಕಲಿಕೆಯ  ಔತಣಗಳನ್ನೂ ಇಲ್ಲಿ ಬಡಿಸಲಾಗುವುದು. ಭಗವದ್ಗೀತೆಯ ದೈನಂದಿನ ಒಳನೋಟ, ಸಾಮಾಜಿಕ ತತ್ತ್ವದರ್ಶನ, ಪ್ರಾಚೀನಭಾರತದ ವಿದ್ಯೆಗಳು, ವಿಜ್ಞಾನಿಗಳಿಗೆ ತತ್ತ್ವದರ್ಶನ, ದಾರ್ಶನಿಕರಿಗೆ ಆಧುನಿಕವಿಜ್ಞಾನ, ಆರಾಧಕರಿಗೆ ಭಕ್ತಿಯ ಕಲೆ ಮೊದಲಾದ ವಿಶೇಷ ಕಾರ್ಯಕ್ರಮಗಳನ್ನೂ ನಿಧಾನವಾಗಿ ಆರಂಭಿಸಲಾಗುವುದು. ಒಟ್ಟಾರೆ ಇದೊಂದು ಪರಿಪೂರ್ಣ ಕಲಿಕೆಯ ತಾಣ. ಎಲ್ಲ  ವಯಸ್ಸಿನವರಿಗೂ. ಎಲ್ಲ ಸ್ತರದಲ್ಲೂ. ಇಂತಹ ಭೂಮಿಯನ್ನು ಕೊಳ್ಳುವುದಾಗಲೀ, ಅಲ್ಲಿ ಈ ಸಂಸ್ಥೆಯ ನಿರ್ಮಾಣವಾಗಲೀ ಒಬ್ಬಿಬ್ಬರ ಕೆಲಸವಲ್ಲ. ಬನ್ನಿ! ಇದೊಂದು ಮಹಾಯಜ್ಞ. ದ್ರವ್ಯಯಜ್ಞವೂ ಹೌದು. ಜ್ಞಾನಯಜ್ಞವೂ ಹೌದು. ಮಗುವೆಂಬ ಬೀಜವನ್ನು ಬಿತ್ತೋಣ. ಜೀವನವಿದ್ಯೆಯಿಂದ ಪೋಷಿಸೋಣ. ವೃಕ್ಷದ ಆಸರೆಯಲ್ಲಿ ಎಲ್ಲರೂ ಕಲಿಯೋಣ. ಆನಂದವನವನ್ನು ಕಟ್ಟೋಣ. ಎಲ್ಲವನ್ನೂ ಈ ತಾಯ್ನಾಡಿಗಾಗಿ ಅರ್ಪಿಸೋಣ. –  ಕೃಷ್ಣಾರ್ಪಣ                       ಯಥಾಶಕ್ತಿ –  ಬೀಜ ಅರ್ಪಣ                   ರೂ. ೧೦,೦೦೦ –  ಅಂಕುರ ಅರ್ಪಣ               ರೂ.೨೫,೦೦೦ –  ಸಸ್ಯ ಅರ್ಪಣ                    ರೂ. ೫೦,೦೦೦ –  ವೃಕ್ಷ ಅರ್ಪಣ                    ರೂ. ೧,೦೦,೦೦೦ –  ಮಹಾವೃಕ್ಷ ಅರ್ಪಣ          ರೂ. ೨,೦೦,೦೦೦ –  ಕಲ್ಪತರು ಅರ್ಪಣ             ರೂ. ೫,೦೦,೦೦೦ –  ಉದ್ಯಾನ ಅರ್ಪಣ            ರೂ. ೧೦,೦೦,೦೦೦ –  ಉಪವನ ಅರ್ಪಣ            ಒಂದು ಎಕರೆ ಅಥವಾ ಹೆಚ್ಚಿನ ಭೂಮಿಯ ಮೌಲ್ಯ

Anandavana – A Dream Campus for Purnapramati

Sunday, July 1st, 2012

Welcome to Anandavana – the garden of happiness  Click here to have a glimpse of Anandavana A tree is nature’s model for completeness. What grows from a small seed, with little nurturing becomes a sapling, then a plant and then a mighty tree. Flowers, fruits, vegetables, large branches that provide shade, home to birds, instruments for keeping the air fresh, and later wood to the humankind – contribution at every stage. Stands on its own, complete by itself. Can humans be like that? Can we live a life of completeness, life of development guided by far-reaching goals than ones compelled by mere survival? We at Purnapramati believe that such is indeed possible if the development of an individual caters to his or her physical, mental, social and spiritual needs. Such a holistic development can make a person stand on his own but without losing the sight on his role in the society, see things in his own perspective and simultaneously relate to others’ perspectives. Ignore any of those dimensions or needs, and the outcome would be found wanting. Therefore, we have envisioned Purnapramati as a center of integrated learning. We see children’s minds as seeds, with the potential to become like those complete trees. Cultural and spiritual values on one hand and a strong modern education on another are like water and manure to these seeds. One gives them strong roots and the other protects them from harmful influences. One without the other brings forth a sick, under-developed tree. We deliver modern education, without any compromises on it, but in the background of Indian culture, in a way it makes sense in the current social context. Our curriculum interweaves the regular subjects such as Mathematics, science, social studies, with classical subjects such as Sanskrit, Samskriti (culture) and Philosophy. Here, the children can speak both English and Sanskrit, can do mental-math like a child of any other school, also recite poems from the folklore, can tell anecdotes from Ramayana and Mahabharata, not just recite Gita but can even rephrase parts of it. Naturally, dance, arts and yoga are taught to children. There is stress on competitiveness, but without its dirty hood. Our utmost stress on quality in teaching and individual attention ensures a policy of not having more than 15 students in a class. We have not just added three subjects but the entire method of teaching is related to the Indian roots. These are the impressions of our first year children, in their words: “We are students of Purnapramati. Our school is unique in many ways. Bhaagirathi Jayanti is our environment day. We understand the importance of environment in the background of purity of Ganga. We learn about our festivals and also about our social duties on that day. National holidays are used for social activities. We sometimes mingle with other school children. We visit some sites, along with our gurus, to learn from live situations. We have an external faculty called ‘Purnapramati Vrundaaru-vrunda’, who teach us occasionally. And we have a fun-filled Purnapramati Utsava, our annual week! In that week, some big people spend time with us. Inspiring! Towards the end of the year, there is another program called Purnapramati Sameeksha. A discussion with accomplished teachers, educationalists from outside. They understand what we have learnt. They share their suggestions with our gurus. Our progress is also shared with our parents. The biggest thing is that we are not afraid of our school or our exams. We are not afraid of any punishment; after all we call our teachers as akka (elder sister) and anna (elder brother) who take care of us. We are not afraid of marks. Our school is fun  O God, we are blessed”. We need your support in developing such children, who form the Anandavana. There are hundreds of children; young tender seeds with us now. We need a fertile land for these seeds to sprout. And as they grow, they need a large space to spread out. And to cultivate that space, we need more water and more ploughs! That space cannot come from one person or one small team. It should come from everyone in the society. Come, let us build that Anandavana, where such trees will be grown! Growing at a pace in line with demand, the school requires spacious unpolluted area for growth. That space is filled with greenery, a gurukula like environment with buildings to teach us games and subjects, auditoriums, residential hostels, a spacious playground and a meditation center. This space will also be utilized for two more initiatives, aligned to the purpose of providing completeness in education: Higher Education & Research and Information & Publication House. The research institute is already up and functioning. It is initiated with a vision to critically explore the classical and contemporary systems for evolving integrative research and application in multi-disciplines such as philosophy, science & technology, arts, public policy. It will also cater to the educational needs of general public through outreach programs with courses like: Mathematics and Science in Ancient India, Contemporary applications in Bhagavad Gita. Similarly, the House for Integrated Information and Publication is another area of our service. The house will be a one stop library for printed and electronic resources. We have already published more than 5 Sanskrit manuscripts, and a couple of Kannada works on Indian culture. Purnapramati is a not-for-profit initiative. It can be supported only through an altruistic donation. Consider this as an offering to our culture and our children in a grand yajna (vedic sacrifice). In the words of Bhagavad Gita, this is both dravya-yajna (sacrifices with material offering) and Jnana-yajna (a mental sacrifice where the knowledge earned is submitted to the Supreme Being). Let us develop our children like the mighty benevolent trees. Let us dedicate this Anandavana to our motherland. The following are schemes: –    Krishnaarpanam:         No fixed amount –    Bija-arpanam:             Rs 10000 –    Ankura-arpanam        Rs 25000 –    Sasya-arpanam:         Rs 50000 –    Vruksha-arpanam:      

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.