ದಿನಾಂಕ: ೮ನೇ ಆಗಸ್ಟ್, ೨೦೧೩
ಸ್ಥಳ: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
ಆಗಸ್ಟ್ ೮, ೨೦೧೩ ಪೂರ್ಣಪ್ರಮತಿಯ ಹಾದಿಯಲ್ಲಿ ಮರೆಯಲಾಗದ ಹೆಜ್ಜೆಯಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಗುರುಪೂರ್ಣಿಮೆಯಂದು ಆಚರಿಸಲು ಸಾಧ್ಯವಾಗದ ಉತ್ಸವವನ್ನು ಆಗಸ್ಟ್ ೮ ರಂದು ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪುಟ್ಟ ವನಕ್ಕೆ ಪೂರ್ಣಪ್ರಮತಿಯ ಮಕ್ಕಳು ಪಯಣ ಬೆಳೆಸಿದ್ದರು. ಜೀವೋ ಜೀವಸ್ಯ ಜೀವನಂ ಸೂತ್ರವನ್ನು ಮತ್ತಷ್ಟು ಮಗದಷ್ಟು ಮನದಟ್ಟು ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಪ್ರವೇಶಿಸಿದೆವು. ಅಲ್ಲಿಂದ ಮುಂದೆ ಬೇರೆಯದೇ ಪ್ರಪಂಚ ತೆರೆದುಕೊಂಡಿತು. ಕಾಂಕ್ರಿಟ್ ಕಾಡಿನಿಂದ ದೂರಾಗಿ ಹಸಿರು ಕಾಡನ್ನು ಅನುಭವಿಸುವ ಅವಕಾಶ ನಮ್ಮದಾಗಿತ್ತು. ಮುಂದಿನ ಒಂದೊಂದು ಹೆಜ್ಜೆಗಳನ್ನು ನೀವೆ ಅನುಭವಿಸಿ…
ಪ್ರಾರಂಭದಲ್ಲಿ ಸುರೇಶ್ ಕುಲಕರ್ಣಿಯವರಿಂದ ಚಿತ್ರದ ಮೂಲಕ ಅಕ್ಷರ ಕಲಿಕೆಯ ಪಾಠ, ನಿವೃತ್ತ ಅರಣ್ಯಾಧಿಕಾರಿ ಶ್ರೀಯಲ್ಲಪ್ಪ ರೆಡ್ಡಿಯವರಿಂದ ಪ್ರಕೃತಿಯ ಬಗೆಗಿನ ಪಾಠ ನಡೆದ ನಂತರ ನಾವೆಲ್ಲ ಒಂದು ಪ್ರಶಾಂತ ಸ್ಥಳವನ್ನು ಆರಿಸಿ ಮಧ್ಯಾಹ್ನದ ಉಪಾಹಾರ ಮುಗಿಸಿದೆವು. ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿಸರ್ಗ ತಜ್ಞರಾದ ಹರೀಶ್ ಭಟ್ ಅವರು ನಮ್ಮೊಂದಿಗೆ ಸಂಚರಿಸುತ್ತಾ ಪ್ರಕೃತಿಯ ವೈಚಿತ್ರ್ಯಗಳನ್ನು ವಿವರಿಸುತ್ತಿದ್ದರು. ಮಕ್ಕಳೆಲ್ಲ ಅವರ ಮಾತುಗಳನ್ನು ಉತ್ಸಾಹದಿಂದ ಕೇಳಿ ಪ್ರತಿಕ್ರಿಯಿಸುತ್ತಿದ್ದರು. ಇಂದಿನ ಮೆನುವಿನಲ್ಲಿ ಮೊದಲು ಹೆಸರು ಕಪ್ಪೆಯದಾಗಿತ್ತು…
ಕಪ್ಪೆ
೧೩೦ ಮಿಲಿಯನ್ ವರ್ಷಗಳ ಮೊದಲು ಕಪ್ಪೆಯ ಸಂತತಿ ಹುಟ್ಟುಕೊಂಡಿತು. ಕಪ್ಪೆಯ ಚರ್ಮ ನಯವಾಗಿರುತ್ತದೆ. ನೀರಿನಲ್ಲಿ ಹೆಚ್ಚು ಸಮಯವಿರುವುದರಿಂದ. ಭೂಮಿಯ ಒಳಗೆ ಸುರಂಗವನ್ನು ಮಾಡಿ ಬದುಕಬಲ್ಲದು. ಚರ್ಮವು ನಯವಾಗಿರುವುದರಿಂದ ಚೆನ್ನಾಗಿ ನುಸುಳಬಹುದೆ. ಇದರ ವಿಶಿಷ್ಟತೆ ಎಂದರೆ ಚರ್ಮ ಮತ್ತು ಮೂಗು ಎರಡೂ ಉಸಿರಾಡುವ ಅಂಗಗಳಾಗಿವೆ. ಗಂಡು ಕಪ್ಪೆ ಮಾತ್ರ ಕೂಗಬಲ್ಲದು. ಸುಮಾರು ೧/೨ ಫರ್ಲಾಂಗ್ ವರೆಗೆ ಕೇಳುವಂತೆ ಕೂಗಬಲ್ಲದು. ಇವು ಒಂದು ಗಂಟೆಗೆ ೮೦-೯೦ ಹುಳುಗಳನ್ನು ತಿನ್ನುತ್ತವೆ. ಐದು ದಿನಗಳ ಮೊದಲು ಭೂಕಂಪದ ಸೂಚನೆ ಇವುಗಳಿಗೆ ಸಿಗುತ್ತದೆ. ಭೂಮಿಯಿಂದ ಹೊರಹೊಮ್ಮುವ ರಡಾನ್ ಗ್ಯಾಸ್ ಇವುಗಳ ಚರ್ಮವನ್ನು ಸೋಕಿ ನವೆಯನ್ನು ಉಂಟುಮಾಡುತ್ತದೆ. ಇದರಿಂದ ಎಲ್ಲ ಕಪ್ಪೆಗಳು ಹೊರಬರುತ್ತವೆ. ಟೋಡ್ ಎಂದು ಕರೆಯಲ್ಪಡುವ ಮತ್ತೊಂದು ಜಾತಿಯ ಕಪ್ಪೆಗಳಿಗೆ ಕಿವಿಯ ಹಿಂದೆ ವಿಷದ ಗ್ರಂಥಿ ಇರುತ್ತದೆ. ನಾಲಿಗೆಯನ್ನು ಹೊರಚಾಚಿ ತನ್ನ ಅಂಟುಗುಣದಿಂದ ಹುಳುಗಳನ್ನು ಹಿಡಿದು ತಿನ್ನುತ್ತವೆ.
ಇರುವೆ
ಇರುವೆಗಳ ಘ್ರಾಣಶಕ್ತಿಯು ಅತ್ಯಂತ ಸೂಕ್ಷ್ಮವಾಗಿರುತ್ತದೆ.
ಸ್ಕೌಟ್ ಇರುವೆ ಎಂದು ಕರೆಯಲ್ಪಡುವವು ಆಹಾರವನ್ನು ಹುಡುಗಿ ಬರಬೇಕು. ಅದು ಮನೆಗೆ ಮರಳುವಾಗ ಒಂದು ರಾಸಾಯನಿಕವನ್ನು ದಾರಿ ಉದ್ದಕ್ಕೂ ಚೆಲ್ಲುತ್ತಾ ಬರುತ್ತದೆ, ಮತ್ತೆ ದಾರಿಯನ್ನು ಗುರುತಿಸಿವ ಸಲುವಾಗಿ. ನಂತರ ಎಲ್ಲ ಇರುವೆಗಳು ಸಾಲಾಗಿ ಬಂದು ಆಹಾರ ತಿನ್ನುತ್ತವೆ. ಮರಳಿ ಹೋಗುವಾಗ ಸೋಲ್ಜರ್ ಇರುವೆ ಚೆಲ್ಲಿದ್ದ ರಾಸಾಯನಿಕವನ್ನು ಅಳಿಸುತ್ತಾ ಸಾಗುತ್ತದೆ. ಶತ್ರುಗಳಿಗೆ ದಾರಿ ತಿಳಿಯಬಾರದೆಂದು.
೮೦ ಮಿಲಿಯನ್ ವರ್ಷಗಳ ಹಿಂದೆ ಇರುವೆಗಳ ಜನನ ಆಗಿದೆ.
ಜೇಡ
ಜೇಡದಲ್ಲಿ ಹೆಣ್ಣು ಮಾತ್ರ ಬಲೆ ಹೆಣೆಯುವುದು. ಸ್ಪಿನರೆಟ್ ಗ್ರಂಥಿಯಿಂದ ಅಂಟುವ ಮತ್ತು ಅಂಟದ ಎರಡು ರೀತಿಯ ದ್ರವವನ್ನು ಉಂಟುಮಾಡುತ್ತದೆ. ಅದರಿಂದ ಬಲೆಯನ್ನು ಹೆಣೆಯುತ್ತದೆ. ತಾನು ಅಂಟದ ದಾರಿಯಿಂದ ಸಾಗಿ, ಹುಳು ಅಥವಾ ಆಹಾರ ಅಂಟುವ ದ್ರವದಲ್ಲಿ ಸಾಗಿ ಬರುವಂತೆ ಜಾಣ್ಮೆ ವಹಿಸುತ್ತದೆ.
ಸೋಶಿಯಲ್ ಜೇಡ (ಸಾಮಾಜಿಕ ಜೇಡ) ಎಂದು ಕರೆಯಲ್ಪಡುವ ಜೇಡಗಳ ಮನೆಯು ಒಂದರ ಪಕ್ಕಕ್ಕೆ ಒಂದು ಇರುವಂತೆ ಕಟ್ಟುತ್ತವೆ. ಆದರೆ ಒಂದರ ಆಹಾರಕ್ಕೆ ಮತ್ತೊಂದು ಕೈ ಹಾಕುವುದಿಲ್ಲ.
ಜಪಾನ್‌ನಲ್ಲಿ ಜೇಡದ ಬಲೆ ಕಟ್ಟುವ ಗುಣವನ್ನು ಬಳಸಿ ಬುಲೆಟ್ ಪ್ರೂಫ್ ವಸ್ತ್ರವನ್ನು ತಯಾರಿಸಿದ್ದಾರೆ. ಕರವಸ್ತ್ರಕ್ಕಿಂತಲೂ ಹಗುರವಾದ ಗುಂಡು ನಿರೋಧಕ ವಸ್ತ್ರವನ್ನು ತಯಾರಿದ್ದಾರೆ. ಜೇಡಗಳ ವಂಶವಾಹಿಗಳನ್ನು ಮೇಕೆಯ ಕೆಚ್ಚಲಿಗೆ ಕಸಿಮಾಡಲಾಯಿತು. ಅದರಿಂದ ಬಂದ ಹಾಲಿನಿಂದ ಇದನ್ನು ತಯಾರಿಸಲಾಗಿದೆ.
ಪಕ್ಷಿಗಳು
ಮುಂದೆ ಹರಟೆ ಮಲ್ಲ (ಜಂಗಲ್ ಬಾಬ್ಲರ್, ಸಾಥ್ ಬಾಯ್, ೭ ಸಿಸ್ಟರ್) ಎಂದು ಕರೆಯಲ್ಪಡುವ ಹಕ್ಕಿಯ ಪರಿಯಚಯ, ಕೋಗಿಲೆ ಪರಿಚಯ ನೀಡಿದರು. ಗಂಡು ಕೋಗಿಲೆ ಮಾತ್ರ ಕೂಗುವುದು, ಆದರೆ ಗೂಡು ಕಟ್ಟಿ ಮರಿ ಮಾಡುವ ಸ್ವಭಾವವೇ ಕೋಗಿಲೆಗೆ ಇಲ್ಲ. ಕಾಗೆಗಳಿಂದ ಉಚಿತವಾಗಿ ಎಲ್ಲ ರೀತಿಯ ಸೇವೆಗಳನ್ನು ಪಡೆದುಕೊಳ್ಳುತ್ತವೆ. ಇಂದಿಗೂ ಕಾಗೆಯನ್ನು ಕೋಗಿಲೆಯ ಚಿಕ್ಕಮ್ಮ ಎಂದು ಕರೆಯುವರು. ನವಿಲಿನ ಬಗ್ಗೆ ತಿಳಿಸುತ್ತಾ, ಗಂಡು ನವಿಲು ಮಾತ್ರ ಸುಂದರ ಮತ್ತು ಗರಿಗಳನ್ನು ಹೊಂದಿರುತ್ತವೆ ಎಂದು ತಿಳಿಸಿದರು. ನವಿಲಿನ ಮುಖ್ಯ ಆಹಾರ ಹಾವು, ಹುಳಗಳು. ಒಮ್ಮೆಗೆ ಸುಮಾರು ೨೬ ಮೊಟ್ಟೆಗಳನ್ನು ಇಡುತ್ತದೆ. ೩೦-೪೦ ದಿನಗಳ ನಂತರ ಕಪ್ಪು ಮರಿಗಳು ಹೊರಬರುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಕಾವುಕೊಡುತ್ತವೆ. ಗಂಡು ನವಿಲು ತನ್ನ ಛತ್ರಿಯಂತ ಗರಿಗಳಿಂದ ಮರಿಗಳಿಗೆ ರಕ್ಷಣೆ ನೀಡುತ್ತದೆ.
ಹಾವು
ಹಾವುಗಳಿಗೆ ಸ್ಪರ್ಶ ಮಾತ್ರ ಗೊತ್ತಾಗುವುದು, ಕಿವಿ ಇಲ್ಲ. ನಾಗರ ಹಾವು, ಕಟ್ಟಾ ಹಾವು, ಮಂಡಲದ ಹಾವು, ಸಮುದ್ರ ಹಾವು ಬಿಟ್ಟರೆ ಉಳಿದ ಯಾವುದೂ ವಿಷಪೂರಿತವಲ್ಲ. ಹಾವಿನ ವಿಷವು ತಿಳಿಹಳದಿ ಬಣ್ಣದ್ದಾಗಿದ್ದು ಹೆಚ್ಚಿನ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾವಿಗೆ ದವಡೆಯಲ್ಲಿ ವಿಷವಿರುತ್ತದೆ.
ಕಾಳಿಂಗ ಸರ್ಪವು ೨೦ ಅಡಿ ಉದ್ದವಿದ್ದು ೭ ಅಡಿಗಳವರೆಗೆ ಹೆಡೆಯನ್ನು ಎತ್ತಬಲ್ಲದ್ದಾಗಿದೆ. ಇವುಗಳ ಆಹಾರ ಹಾವು ಮಾತ್ರ.
ಇವು ಒಮ್ಮೆಗೆ ೬೦ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯಾಗಿರುವಾಗಲೆ ಗಂಡುಮರಿ ಹೆಣ್ಣುಮರಿಗಳನ್ನು ಗುರುತಿಸಿ ಕಾವು ಕೊಡುತ್ತವೆ. ಗಂಡು ರಕ್ಷಣೆಗಾಗಿ ನಿಂತರೆ ಕಾವು ಕೊಡುವ ಕೆಲಸ ಹೆಣ್ಣು ಸರ್ಪದ್ದು. ೯೦ ದಿನಗಳವರೆಗೆ ಉಪವಾಸವಿದ್ದು ರಕ್ಷಣೆ ನೀಡುತ್ತವೆ. ಮರಿ ಹೊರಬರುವ ದಿನ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ತಮ್ಮ ಮರಿಗಳನ್ನು ತಾವೇ ಆಹಾರವಾಗಿಸುವುದು ಬೇಡ ಎಂಬ ದೃಷ್ಟಿಯಿಂದ. ಅಷ್ಟು ಮರಿಗಳಲ್ಲಿ ೩-೪ ಮಾತ್ರ ಉಳಿಯುತ್ತವೆ.
ಆದರೆ ಹಾವು ಸ್ವತಃ ಗೂಡು ಕಟ್ಟುವುದಿಲ್ಲ. ಗೆದ್ದಲು ಹುಳು ಕಟ್ಟುವ ಗೂಡನ್ನು ತನ್ನ ವಾಸಕ್ಕೆ ಬಳಸುತ್ತವೆ. ಗೆದ್ದಲು ಹುಳಗಳು ತನ್ನ ದೇಹದಿಂದ ಹೊರಬರುವ ಅಂಟಿನಂತಹ ದ್ರವದಿಂದ ಮಣ್ಣನ್ನು ಸೇರಿಸಿ ಭದ್ರವಾದ ಗೂಡನ್ನು ಕಟ್ಟುತ್ತದೆ. ೧೦ ಅಡಿ ಎತ್ತರದ ಗೂಡನ್ನು ಕಟ್ಟುತ್ತವೆ. ಮೇಲೆ ಎಷ್ಟು ಎತ್ತರವೋ ಕೆಳಗೆ ಅಷ್ಟೆ ಆಳವಿರುತ್ತದೆ. ಮಳೆ ಬಂದಾಗ ದ್ವಾರವನ್ನು ಮುಚ್ಚುತ್ತಾ, ಬೇಸಿಗೆಯಲ್ಲಿ ತೆಗೆದು ಕಾಲಕ್ಕೆ ತಕ್ಕಂತೆ ಅನುಕೂಲವನ್ನು ಮಾಡಿಕೊಳ್ಳುತ್ತವೆ. ಹಾವುಗಳಿಗೆ ತಂಪಾದ ಸ್ಥಳ ಬೇಕಾದ್ದರಿಂದ ಗೆದ್ದಲು ಕಟ್ಟಿದ ಗೂಡಿನೊಳಗೆ ಬರುತ್ತವೆ. ಇಲಿಗಳು ಗೆದ್ದಲು ಹುಳುಗಳಿಗೆ ಶತ್ರು, ಅಂತೆಯೆ ಹಾವು ಇಲಿಗಳಿಗೆ ಶತ್ರು. ಹಾವುಗಳಿಗೆ ಗೆದ್ದಲು ಹುಳುಗಳು ಮನೆ ಮಾಡಿಕೊಟ್ಟರೆ, ಹಾವುಗಳು ಇಲಿಗಳಿಂದ ಗೆದ್ದಲ್ಲನ್ನು ರಕ್ಷಿಸಿ ಮನೆಗೆ ಬಾಡಿಗೆ ಸಲ್ಲಿಸುತ್ತವೆ.
ಚೇಳು
ಚೇಳಿಗೆ ವಿಷವಿರುವುದು ಬಾಲದಲ್ಲಿ, ಬೆನ್ನ ಮೇಲೆ ಕಾಲಿಟ್ಟರೆ ಬಾಲದಿಂದ ಹೊಡೆಯುತ್ತದೆ. ಯಾವಾಗಲೂ ಂggಡಿessive.
೧೦೦-೨೦೦ ಮರಿಗಳನ್ನು ಬೆನ್ನಮೇಲೆ ಕೂರಿಸಿಕೊಂಡು ಹೋಗುತ್ತದೆ. ಬಿಸಿಲು ಆಗುವುದಿಲ್ಲ. ನೆರಳಿನಲ್ಲಿ ಇರಲು ಬಯಸುತ್ತದೆ.
ಕ್ರಿಕೆಟ್ ಹುಳು
ರಾತ್ರಿಯಲ್ಲಿ ಕಿರ್ ಕಿರ್ ಎಂದು ಶಬ್ದ ಮಾಡುವ ಈ ಕ್ರಿಮಿಗೆ ಕಿವಿ ಇರುವುದು ಕಾಲಿನಲ್ಲಿ. ಬಾಲದ ತುದಿಯಲ್ಲಿ ಸಣ್ಣ ಮುಳ್ಳು ಇರುತ್ತದೆ. ಅದರ ಕಾಲು ಮತ್ತು ಕೆಳಹೊಟ್ಟೆಯ ಉಜ್ಜುವಿಕೆಯಿಂದ ಈ ಶಬ್ದ ಉಂಟಾಗುತ್ತದೆ. ಹಗಲಾದ ಕೂಡಲೆ ಕಣ್ಣು ಕಾಣುವುದಿಲ್ಲ.
ಹರೀಶ್ ಭಟ್ ಅವರ ಪ್ರಕೃತಿಯ ಪಾಠದ ನಂತರ ಮಕ್ಕಳಿಗೆ ಹಸಿವಿನ ಬಗ್ಗೆ ಗಮನ ಹರಿಯಿತು. ಸುಮಾರು ೧.೦೦ ಗಂಟೆ ಹೊತ್ತಿಗೆ ಭೋಜನವನ್ನು ಮುಗಿಸಿ ಮನರಂಜನೆ ಎಂಬಂತೆ ಮಕ್ಕಳು ಅಭ್ಯಾಸ ಮಾಡಿದ್ದ ನೃತ್ಯ ರೂಪಕ, ನಾಟಕಗಳನ್ನು ಸವಿದೆವು. ನಾಗೇಶ್ ಹೆಗಡೆ, ಪ್ರಮೋದ್ ಮತ್ತು ಶ್ರೀನಿ ಶ್ರೀನಿವಾಸ್ ಅವರ ಮಾತುಗಳನ್ನು ಕೇಳಲು ೩ ತಂಡಗಳಾಗಿ ಬೇರೆ ಬೇರೆ ಮರಗಳ ಕೆಳಗೆ ಕುಳಿತೆವು. ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿರುವ ಈ ವ್ಯಕ್ತಿಗಳು ಮಕ್ಕಳೊಂದಿಗೆ ಸರಳವಾಗಿ ಬೆರೆತು ಮರದ ಕೆಳಗೆ ಪಾಠ ಹೇಳಿದ ರೀತಿಯೇ ಚೆನ್ನ. ಮಕ್ಕಳಿಗೆ ತಂಪಾದ ಗಾಳಿ, ಹಕ್ಕಿಗಳ ಕಲರವ, ತಲೆಗೆ ಪೌಷ್ಟಿಕ ಆಹಾರ ಸಮಯದ ಮಿತಿಯನ್ನು ಮರೆಯುವಂತೆ ಮಾಡಿತ್ತು. ಇವರ ಮಾತಿನ ಪ್ರಮುಖಾಂಶಗಳು ಹೀಗಿವೆ:
ಬೆಂಗಳೂರು ವಿಶ್ವವಿದ್ಯಾಲಯದ ಬಳಿ ಇರುವ ಃio-ಜiveಡಿsiಣಥಿ ಠಿಚಿಡಿಞ ನಲ್ಲಿ ಸರಳವಾದ ಛಿheಛಿಞ ಜಚಿm ಗಳನ್ನು ನಿರ್ಮಿಸಲಾಗಿದೆ. ವಿದೇಶದಿಂದ ತರಲಾಗಿರುವ ಅಕೇಶಿಯಾ ಎಂಬ ಮರಗಳನ್ನು ಸುತ್ತಲೂ ಬೆಳೆಸಲಾಗಿದೆ. ನೀರಿನ ಅಭಾವವಾದ ಕಾರಣದಿಂದ ಈ ಛಿheಛಿಞ ಜಚಿm ಗಳ ಗಳನ್ನು ನಿರ್ಮಿಸಲಾಗಿದೆ.
೧೦೦-೧೨೦ ಅಡಿ ದೂರದಲ್ಲಿ Sಠಿoಡಿಣs ಂuಣhoಡಿiಣಥಿ oಜಿ Iಟಿಜiಚಿ ಇದೆ. ೧೦೦ ಅಡಿ ಹಿಂದೆ ಹೋದರೆ ಅತ್ಯಂತ ಕೊಳಕಾದ ವೃಷಭಾವತಿ ನದಿ ಹರಿಯುತ್ತಿದೆ. ಇಲ್ಲಿ ಆದರ್ಶಪ್ರಾಯವಾದ ಛಿheಛಿಞ ಜಚಿm ಗಳು ಇವೆ, ಸ್ವಲ್ಪ ದೂರದಲ್ಲಿ ಗೋಪಾಲನ್ ಮಾಲ್ ಎಂಬ ಗ್ರಾಹಕ ಆಕರ್ಷಕ ಸ್ಥಳವಿದೆ. ಇಷ್ಟರಲ್ಲೇ ಎಷ್ಟು ವೈವಿಧ್ಯ. ನೀರನ್ನು ಹೆಚ್ಚಾಗಿ ದುರುಪಯೋಗವಾಗುತ್ತಿರುವುದನ್ನು ಇಲ್ಲೆ ನೋಡಬಹುದು.
ಓಡುವ ನೀರನ್ನು ನಿಲ್ಲಿಸಬೇಕು, ನಿಂತ ನೀರನ್ನು ಹಿಂಗಿಸಬೇಕು. ಆ ಕ್ರಿಯೆಯನ್ನು ಈ ಛಿheಛಿಞ ಜಚಿm ಗಳ ಮೂಲಕ ಮಾಡಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಬಾವಿಯಲ್ಲಿ ನೀರು ಬಂದಿರುವುದು ಕಾಣುತ್ತದೆ.
ಮೊದಲು ವೈವಿಧ್ಯತೆ ಎಂದರೇನು ಎಂದು ತಿಳಿಯಬೇಕು. ಅಂಟಾರ್ಕ್‌ಟಿಕ್‌ಗೆ ಹೋದರೆ ೨-೩ ವಿವಿಧ ಪ್ರಾಣಿಗಳು ಸಿಗಬಹುದು. ರಾಜಸ್ಥಾನದ ಮರುಭೂಮಿಗೆ ಹೋದರೆ ೧೬-೧೭ ವಿವಿಧತೆಗಳು ಸಿಗಬಹುದು. ಅಲಾಸ್ಕಕ್ಕೆ ಹೋದರೆ ೧೮-೨೦ ವಿವಿಧತೆಗಳು ಸಿಗಬಹುದು. ಯುರೋಪ್ ನಲ್ಲಿದ್ದರೆ ೩೫-೪೦ ವಿವಿಧತೆಗಳು ಸಿಗಬಹುದು. ಇಲ್ಲಿ ಬಂದು ಪಟ್ಟಿಮಾಡಲು ಕುಳಿತರೆ ಸುಮ್ಮನೆ ಕೈ ಇಟ್ಟರೆ ವಿವಿಧ ಪ್ರಾಣಿ, ಕೀಟಗಳು, ಮರಗಳು, ಗಿಡಗಳು ೨೦೦ ರ ಪಟ್ಟಿಯನ್ನು ಸುಲಭವಾಗಿ ತಯಾರಿಸಬಹುದಾಗಿದೆ. ಮನುಷ್ಯ ತನಗೆ ಅಗತ್ಯವಿರುವ ಮರಗಳ ಜಾತಿ, ಪ್ರಾಣಿಗಳ ಜಾತಿಯನ್ನು ಬೆಳೆಸಿದ. ವಿವಿಧತೆಯನ್ನು ನಾಶಮಾಡಿ ಏಕತೆಯನ್ನು ಬೆಳೆಸಿದ.
ಇಲ್ಲಿ ಎಲ್ಲ ಸಸ್ಯಗಳು ತಾನಾಗಿಯೇ ಬೆಳೆದಿವೆ. ಹಸುಗಳು, ಕುರಿಗಳು, ಕಳ್ಳರು, ಬೆಂಕಿಯಿಂದ ರಕ್ಷಿಸಿದರೆ ಬಹಳಷ್ಟು ವಿವಿಧತೆಯನ್ನು ಕಾಣಬಹುದಾಗಿದೆ. ಈ ವಿವಿಧತೆ ಹಿಮಾಲಯದಲ್ಲಾಗಲಿ, ರಾಜಸ್ಥಾನದಲ್ಲಾಗಲಿ ಕಾಣಲು ಸಾಧ್ಯವಿಲ್ಲ.