ನಮ್ಮೆಲ್ಲರ ನಲ್ಮೆಯ ಪುಟಾಣಿಗಳಿಗೆ ಕನ್ನಡ ಹಬ್ಬದ ಶುಭಾಶಯಗಳು…
ಮಾತೃ ಭಾಷೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ, ನೆಚ್ಚುಗೆ. ಅದರಲ್ಲಿ ಕಲಿಯುವ ವಿಷಯಗಳು ಮನದಲ್ಲಿ ಆಳವಾಗಿ ಇಳಿಯುವಂತಹವು. ನಮ್ಮಲ್ಲಿ ಕನ್ನಡದ ಕಲಿಕೆ ನಿರಂತರ. ಅದಕ್ಕೆ ಯಾವುದೇ ಸಮಯದ ಮಿತಿ ಅಥವಾ ನಿರ್ಬಂಧವಿಲ್ಲ. ಹಾಡುಗಳು, ಕಥೆಗಳು, ಗಾದೆಗಳು, ಒಗಟುಗಳು, ಪದ ಜೋಡಣೆ, ಕನ್ನಡದಲ್ಲಿ ಪದಾರ್ಥಗಳ ಪರಿಚಯ, ಕವಿ ಪರಿಚಯ, ಪೋಷಕರಿಗೆ ವಿವಿಧ ಸ್ಪರ್ಧೆಗಳು, ಹೀಗೆ ಹಲವು ವಿಷಯಗಳಲ್ಲಿ ಭಾಗವಹಿಸುವಿಕೆ ಮತ್ತು ಪ್ರಸ್ತುತಿಗಳೊಂದಿಗೆ ಆನಂದಕಂದ ವಿಭಾದಲ್ಲಿ ಕನ್ನಡ ಹಬ್ಬದ ಆಚರಣೆ ಸಡಗರದಿಂದ ನೆರವೇರಿತು.
ಕನ್ನಡ ಹಬ್ಬದ ಸಮಾರೋಪ ಸಮಾರಂಭದ ದಿನ ನಡೆದ ಚಿತ್ರ ಸಹಿತ ಗಾದೆಗಳು, ಊಹಿಸಿ ಹೇಳಿ ಚಟುವಟಿಕೆಗಳು ಪೋಷಕರಿಗೆ ಹೆಚ್ಚಿನ ಉತ್ಸಾಹವನ್ನು ಉಂಟುಮಾಡಿದವು. ದೀಪಗಳ ಹಬ್ಬ ದೀಪಾವಳಿಯನ್ನು ಪಟಾಕಿಗಳ ಗದ್ದಲವಿಲ್ಲದೆ, ಪ್ರದೂಷಣೆ ಇಲ್ಲದೆ, ಸಂಭ್ರಮದಿಂದ ಮನೆಯಲ್ಲಿಯೇ ಹೇಗೆ ಆಚರಿಸಬಹುದು ಎಂದು ತಿಳಿಸಲಾಯಿತು.
ಸಂಸ್ಕೃತ ಪರ್ವ, ಶಾಲಾ ಉತ್ಸವ, ಧನ್ವಂತರಿ ಜಯಂತಿ ಇವುಗಳಿಗೆ ಪೂರ್ವತಯಾರಿ ನಡೆಯುತ್ತಿದೆ. ಮಕ್ಕಳ ಕಲಿಕೆಯ ಉತ್ಸಾಹ ಪೋಷಕರಲ್ಲಿ ಹಾಗೂ ಅಧ್ಯಾಪಕರಲ್ಲಿ ನವ ಚೈತನ್ಯವನ್ನು ತುಂಬುತ್ತಿದೆ.
-೦-