ಆನಂದಕಂದ – ವಿದ್ಯಾ ಗುತ್ತಲ್ (ಪ್ರತಿನಿಧಿ, ಪೂರ್ವಪ್ರಾಥಮಿಕ ವಿಭಾಗ)
ನಮ್ಮೆಲ್ಲರ ನಲ್ಮೆಯ ಪುಟಾಣಿಗಳಿಗೆ ಕನ್ನಡ ಹಬ್ಬದ ಶುಭಾಶಯಗಳು…
ಮಾತೃ ಭಾಷೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ, ನೆಚ್ಚುಗೆ. ಅದರಲ್ಲಿ ಕಲಿಯುವ ವಿಷಯಗಳು ಮನದಲ್ಲಿ ಆಳವಾಗಿ ಇಳಿಯುವಂತಹವು. ನಮ್ಮಲ್ಲಿ ಕನ್ನಡದ ಕಲಿಕೆ ನಿರಂತರ. ಅದಕ್ಕೆ ಯಾವುದೇ ಸಮಯದ ಮಿತಿ ಅಥವಾ ನಿರ್ಬಂಧವಿಲ್ಲ. ಹಾಡುಗಳು, ಕಥೆಗಳು, ಗಾದೆಗಳು, ಒಗಟುಗಳು, ಪದ ಜೋಡಣೆ, ಕನ್ನಡದಲ್ಲಿ ಪದಾರ್ಥಗಳ ಪರಿಚಯ, ಕವಿ ಪರಿಚಯ, ಪೋಷಕರಿಗೆ ವಿವಿಧ ಸ್ಪರ್ಧೆಗಳು, ಹೀಗೆ ಹಲವು ವಿಷಯಗಳಲ್ಲಿ ಭಾಗವಹಿಸುವಿಕೆ ಮತ್ತು ಪ್ರಸ್ತುತಿಗಳೊಂದಿಗೆ ಆನಂದಕಂದ ವಿಭಾದಲ್ಲಿ ಕನ್ನಡ ಹಬ್ಬದ ಆಚರಣೆ ಸಡಗರದಿಂದ ನೆರವೇರಿತು.
ಕನ್ನಡ ಹಬ್ಬದ ಸಮಾರೋಪ ಸಮಾರಂಭದ ದಿನ ನಡೆದ ಚಿತ್ರ ಸಹಿತ ಗಾದೆಗಳು, ಊಹಿಸಿ ಹೇಳಿ ಚಟುವಟಿಕೆಗಳು ಪೋಷಕರಿಗೆ ಹೆಚ್ಚಿನ ಉತ್ಸಾಹವನ್ನು ಉಂಟುಮಾಡಿದವು. ದೀಪಗಳ ಹಬ್ಬ ದೀಪಾವಳಿಯನ್ನು ಪಟಾಕಿಗಳ ಗದ್ದಲವಿಲ್ಲದೆ, ಪ್ರದೂಷಣೆ ಇಲ್ಲದೆ, ಸಂಭ್ರಮದಿಂದ ಮನೆಯಲ್ಲಿಯೇ ಹೇಗೆ ಆಚರಿಸಬಹುದು ಎಂದು ತಿಳಿಸಲಾಯಿತು.
ಸಂಸ್ಕೃತ ಪರ್ವ, ಶಾಲಾ ಉತ್ಸವ, ಧನ್ವಂತರಿ ಜಯಂತಿ ಇವುಗಳಿಗೆ ಪೂರ್ವತಯಾರಿ ನಡೆಯುತ್ತಿದೆ. ಮಕ್ಕಳ ಕಲಿಕೆಯ ಉತ್ಸಾಹ ಪೋಷಕರಲ್ಲಿ ಹಾಗೂ ಅಧ್ಯಾಪಕರಲ್ಲಿ ನವ ಚೈತನ್ಯವನ್ನು ತುಂಬುತ್ತಿದೆ.
-೦-
ವಾಮನ ವಿಭಾಗ– ಮುರಳೀಧರ ಕೆ (ಪ್ರತಿನಿಧಿ, ಪ್ರಾಥಮಿಕ ವಿಭಾಗ)
ಆತ್ಮೀಯ ಪೂರ್ಣಪ್ರಮತಿ ಬಂಧುಗಳಿಗೆ ನಮಸ್ಕಾರಗಳು. ಈ ಬಾರಿ ಕನ್ನಡ ಹಬ್ಬದೊಂದಿಗೆ ಬಂದಿರುವೆ.
“ರೋಮಾಂಚನ ವೀ ಕನ್ನಡ” ಕನ್ನಡ ಭಾಷೆ, ನಡೆ, ನುಡಿ, ಆಚಾರ, ವಿಚಾರ, ಪರಂಪರೆ, ಕಲೆ, ಸಾಹಿತ್ಯ, ಎಲ್ಲವೂ ರೋಮಾಂಚನಕಾರಿ. ಕರ್ನಾಟಕವನ್ನಾಳಿದ ರಾಜರ ಪರಾಕ್ರಮ ಅನ್ಯಾದೃಶ್ಯ. ಇದಕ್ಕೆ ಒಂದು ಕಥೆ ಹೇಳುವೆ. ಆಗಬಹುದಾ?
ಈ ಕಥೆ ೧೮೩೪ ನೇ ಇಸವಿಯಲ್ಲಿ ಆದದ್ದು. ಆಗ ಎಲ್ಲಡೆ ಬ್ರಿಟಿಷ್ ರ ಹಾವಳಿ ಇರುವಂತೆ ಕರ್ನಾಟಕದಲ್ಲೂ ಇತ್ತು. ಕೊಡಗಿನ ರಾಜನನ್ನು ಬ್ರಿಟಿಷರು ಪದಚ್ಯುತಿಗೊಳಸಿದರು. ರಾಜನಿಗೆ ಜನರು ತೆರೆಗೆ ರೂಪದಲ್ಲಿ ಧವಸ ಧಾನ್ಯ ಕೊಡುತ್ತಿದ್ದರು ಆದರೆ ಬ್ರಿಟಿಷರು ಜನರಿಂದ ಕಂದಾಯರೂಪವಾಗಿ ಹಣ ಪಾವತಿ ಮಾಡಬೇಕು ಎಂದು ಹೇಳಿದರು. ಆಗ ರಾಜನಿಷ್ಠರಾದ ಗುಡ್ಡೆಮನೆ ಅಪ್ಪಯ್ಯ ಗೌಡರು ಇದನ್ನು ವಿರೋಧಿಸಿ ಬ್ರಿಟಿಷರ ವಿರುದ್ಧ ಹೋರಾಡಿದರು. ನಮ್ಮ ಕನ್ನಡಿಗರ ಪರಂಪರೆಯಲ್ಲಿ ಸ್ವಾತಂತ್ರ್ಯದ ರಣಕಹಳೆ ಮೂಡಿತ್ತು. ಹೀಗೆ ಹಲವು ರಾಜಮನೆತನಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿವೆ. ಹಲಗಲಿ ಬೇಡರು ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಮುಂಡರಿಗಿ ಭೀಮರಾಯರು, ನರಗುಂದ ಬಾಬಾಸಾಹೇಬರು ಹೀಗೆ ಅನೇಕರು ತಮ್ಮದೇ ಆದ ರೀತಿಯಲ್ಲಿ ಕಾಣ್ಕೆಯನ್ನು ಸಲ್ಲಿಸಿದ್ದಾರೆ.
ಇನ್ನು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ನೋಡುತ್ತಾ ಹೋದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಹಲವಾರು ಜನ ನಾಡೋಜ ಪ್ರಶಸ್ತಿ ಪುರಸ್ಕೃತರು ಸರಸ್ವತೀ ಸಮ್ಮಾನ್ ಪುರಸ್ಕೃತರು ಎಲ್ಲಾ ಮಹನೀಯರ ಬೀಡು ನಮ್ಮ ಕರ್ನಾಟಕ. ಕಲೆ ವಿಷಯಕ್ಕೆ ಬಂದರೆ ಯಕ್ಷಗಾನ, ಕಂಸಾಳೆ, ದೇವರಕುಣಿತ, ಡೊಳ್ಳುಕುಣಿತ, ಹೀಗೆ ಹತ್ತು ಹಲವು ಕಲೆಗಳು ಸುಪ್ರಸಿದ್ಧ. ಇಷ್ಟೆಲ್ಲಾ ಕರ್ನಾಟಕ ವಿಷಯಗಳು. ನಮ್ಮ ಶಾಲೆಯಲ್ಲಿ ಈ ಎಲ್ಲಾ ವಿಷಯಗಳ ಅಧ್ಯಯನದ ದೃಷ್ಟಿಯಿಂದ ಕನ್ನಡ ಅಧ್ಯಯನ ಪೀಠ ಸ್ಥಾಪನೆ ಆಗಿದೆ. ಈ ಬಾರಿ ಆನ್ ಲೈನ್ ಮುಖಾಂತರವೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆವು. ಈ ಸಂದರ್ಭದಲ್ಲಿ ಮಕ್ಕಳಿಕೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೆವು. ಮಕ್ಕಳು ಬಹಳ ಸಂತಸದಿಂದ ಭಾಗವಹಿಸಿದರು. ಬಂದ ಅತಿಥಿಗಳ ಸಂತಸಪಟ್ಟರು. ಹೀಗೆ ಸಾಗುತ್ತಲೇ ಇರುವುದು ನಮ್ಮ ಭಾಷಾಪ್ರೇಮದ ದೋಣಿ ….
-೦-
ಅರ್ಜುನ ವಿಭಾಗ– ಬದರಿನಾರಾಯಣ ಕಟ್ಟಿ (ಸಂಸ್ಕೃತ ಅಧ್ಯಾಪಕರು, ಮಾಧ್ಯಮಿಕ ವಿಭಾಗ)
ಕರ್ನಾಟಕದವರಿಗೆ ಹೆಮ್ಮೆಯ ವಿಷಯವಾದ ನವಂಬರ್ ಮಾಸ ಕನ್ನಡಕ್ಕಾಗಿ ಮೀಸಲಿಟ್ಟಿರುವುದು. ಮಕ್ಕಳು ತಮ್ಮ ತಮ್ಮ ಪ್ರತಿಭೆಗಳನ್ನು ಅನೇಕ ಚಟುವಟಿಕೆಗಳ ಮೂಲಕ ಕನ್ನಡ ಹಬ್ಬದಲ್ಲಿ ಅಧ್ಯಾಪಕರಿಗೆ, ಪರಸ್ಪರ ವಿದ್ಯಾರ್ಥಿಗಳಿಗೆ ಹಾಗೂ ಬಂದು ಹರಿಸಿದ ಅತಿಥಿಗಳಿಗೆ ತಿಳಿಸಿಕೊಟ್ಟಿದ್ದಾರೆ. ಅತಿಥಿಗಳು ಮತ್ತು ಅಧ್ಯಾಪಕರಿಂದ ಮಾರ್ಗದರ್ಶಕ ಪ್ರತಿಕ್ರಿಯೆಯನ್ನು ಪಡೆದ ಮಕ್ಕಳು ಕನ್ನಡ ಅಧ್ಯಯನದಲ್ಲಿ ಅದನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಈ ಚಟುವಟಿಕೆಗಳು ಕೇವಲ ಮಕ್ಕಳಿಗೆ ಮಾತ್ರ ಅಲ್ಲದೆ, ಪೋಷಕರಿಗೂ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿತ್ತು ಅದನ್ನು ಅರ್ಥಪೂರ್ಣವಾಗಿ ಉಪಯೋಗಿಸಿಕೊಂಡರು.
ದೀಪಾವಳಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಗೆ ಹೋಗುವುದು ಅಗತ್ಯವಿದ್ದಲ್ಲಿ ಮಾತ್ರ ಹೋಗಬೇಕು ಎಂದು ಮನದಟ್ಟು ಮಾಡಲಾಯಿತು. ಪಟಾಕಿಗಳನ್ನು ಹೊಡೆಯಬೇಕೊ ಬೇಡವೋ, ಅದರಿಂದ ಪ್ರಕೃತಿಗೆ ಆಗುವ ಹಾನಿ ಏನು? ಹೀಗೆ ಅನೇಕ ವಿಷಯಗಳನ್ನು ಹೇಳುತ್ತಾ ಮಕ್ಕಳನ್ನು ದೀಪಾವಳಿಗೆ ಸಜ್ಜು ಮಾಡಿದೆವು.
ಪ್ರತಿ ಶುಕ್ರವಾರ ನಡೆಯುವ ಚಕ್ರವರ್ತಿ ಸೂಲಿಬೆಲೆ ಅವರ ಕಾರ್ಯಕ್ರಮಕ್ಕೆ ಮಕ್ಕಳನ್ನು ಕಡ್ಡಾಯವಾಗಿ ಬರುವಂತೆ ಮಾಡಿ ಅವರಿಂದ ಅನೇಕ ವಿಷಯಗಳನ್ನು ಕಲಿಯುವ ವೇದಿಕೆಯನ್ನು ಮಾಡಲಾಗಿದೆ. ಶಕ್ತ ಭಾರತದ ದಾರಿದೀಪಗಳು ಎಂಬ ಶೀರ್ಷಿಕೆಯಡಿ ನಡೆಯುವ ಈ ಕಾರ್ಯಕ್ರಮ ಮಕ್ಕಳಿಗೆ, ಪೋಷಕರಿಗೆ ಶಕ್ತಿಮದ್ದಾಗಿದೆ.
ಈ ತಿಂಗಳ ಕೊನೆಯ ವಾರದಲ್ಲಿ ಕನ್ನಡ ಹಬ್ಬದಂತೆ ಸಂಸ್ಕೃತ ಭಾಷೆಯಲ್ಲಿ ಅನೇಕ ಚಟುವಟಿಕೆಗಳನ್ನು ಮಾಡುವ ಸಂಸ್ಕೃತ ಪರ್ವದ ದೃಷ್ಟಿಯಿಂದ ಬೇಕಾಗುವ ಸಿದ್ಧತೆಗಳನ್ನು ಮಕ್ಕಳಿಂದ ಮಾಡಿಸುತ್ತಿದ್ದೇವೆ. ಮಕ್ಕಳಿಗೆ ಪ್ರತಿಭೆಯನ್ನು ತೋರಿಸಲು ಮತ್ತೊಂದು ಮುಕ್ತ ಅವಕಾಶವನ್ನು ಸಜ್ಜುಗೊಳಿಸಲಾಗಿದೆ.
ಮಕ್ಕಳ ಕಲಿಕೆಯಲ್ಲಿ ಒಂದು ಶಿಸ್ತನ್ನು ತರುವುದಕ್ಕಾಗಿ ಕೆಲವು ಉಪಾಯಗಳನ್ನು ಮಾಡಿದ್ದೇವೆ – ಪ್ರತಿಯೊಂದು ವಿಷಯದ ಪರಿವಿಡಿ (Index) ಅನ್ನು ಮಕ್ಕಳ ಬಳಿ ಬರೆಸುವುದು, ದಿನಚರಿಯನ್ನು ತಂದೆ-ತಾಯಿಯರಿಗೆ ತೋರಿಸಿ ಅವರಿಂದ ಸಹಿಯನ್ನು ಹಾಕಿಸಿಕೊಂಡು, ಅಧ್ಯಾಪಕರ ಗಮನಕ್ಕೆ ತರುವುದು, ವಿಜ್ಞಾನದ ಪ್ರಯೋಗಗಳನ್ನು ಮಾಡಿ Classroom ನಲ್ಲಿ Videoಗಳನ್ನು ಕಳಿಸುವುದು – ಹೀಗೆ ಮಕ್ಕಳ ಕಲಿಕೆಯನ್ನು ನಿಯಮಿತವಾಗಿ ಗಮನಿಸಲಾಗುತ್ತಿದೆ. ಇನ್ನೂ ಹತ್ತಾರು ಮುಖಗಳಲ್ಲಿ ಮಕ್ಕಳು ಅಧ್ಯಯನಶೀಲರಾಗಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತಿದೆ.
ಅಧ್ಯಾಪಕರ ದೃಷ್ಟಿಯಿಂದ ಅನೇಕ ತರಬೇತಿ ಮತ್ತು ಚರ್ಚೆಗಳು, ವಿಶೇಷವಾಗಿ ಆತ್ಮಾವಲೋಕನ ಎಲ್ಲವೂ ಅರ್ಥಪೂರ್ಣವಾಗಿ ನಡೆಯುತ್ತಿದೆ. ಮುಂಬರುವ ಅನೇಕ ಪರ್ವಗಳ ಹಾಗೂ ಸಮೀಕ್ಷೆಗಳ ಬಗ್ಗೆ ಎಚ್ಚೆತ್ತುಕೊಂಡು ನಮ್ಮ ಅರ್ಜುನ ತಂಡ ಮುನ್ನಡೆಯುತ್ತಿದೆ.
-೦-
ಭೀಮಸೆನಾ – ಅಶ್ವಿನಿ ಕೆ.ಎಸ್ (ಕನ್ನಡ ಅಧ್ಯಾಪಕರು, ಪ್ರೌಢಶಾಲಾ ವಿಭಾಗ)
ಪೂರ್ಣಪ್ರಮತಿ ಕುಟುಂಬದ ಎಲ್ಲಾ ಬಂಧುಗಳಿಗೂ ಹೃತ್ಪೂರ್ವಕ ನಮಸ್ಕಾರಗಳು.
ಪ್ರಸ್ತುತ ಸಂದರ್ಭದಲಿ ನಾವು Online ನಲ್ಲಿ ಮಕ್ಕಳಿಗೆ ತರಗತಿಗಳನ್ನು ಮಾಡುತ್ತಾ ಅರ್ಧವರ್ಷ ಕಳೆದಿದ್ದೇವೆ. ಈ Online ತರಗತಿಗಳನ್ನು ಯಶಸ್ವಿಯಾಗಿ ಪೂರೈಸಲು ಕಾರಣರಾದ ಪೋಷಕರು, ಮಕ್ಕಳು ಹಾಗೂ ಅಧ್ಯಾಪಕ ವೃಂದದವರಿಗೆ ಅಭಿನಂದನೆಗಳು.
ಪ್ರೌಢಶಾಲೆಯ ಈ ಮಾಸದ ವರದಿ ಇಂತಿದೆ. ಈ ಮಾಸದ ಆರಂಭದಲ್ಲಿಯೇ ನಾವು ಗಾಂಧಿ ಜಯಂತಿಯನ್ನು ಬಹಳ ಚೆನ್ನಾಗಿ ಆಚರಿಸಿದೆವು. ಮಕ್ಕಳ ಬಹಳ ಉತ್ಸಾಹದಿಂದ ಅನೇಕ ವಿಷಯಗಳಿಗೆ ತಯಾರಾಗಿ ಪ್ರಸ್ತುತಿ ಮಾಡಿದರು. ಅಕ್ಟೋಬರ್ ೮ರಿಂದ ೧೬ನೇ ತಾರೀಖಿನ ವರೆಗೆ ೮-೯ ನೇತ್ ತರಗತಿಯ ಮಕ್ಕಳಿಗೆ ಅರ್ಧವಾರ್ಷಿಕ ಪರೀಕ್ಷೆಯನ್ನು ನಡೆಸಲಾಯಿತು. ಮಕ್ಕಳ ಸಂಖ್ಯೆಯನ್ನು ಗಮನಿಸಿ ಪ್ರತ್ಯೇಕ ಗಮನ ನೀಡುವ ಸಲುವಾಗಿ ತರಗತಿಯನ್ನು A ಮತ್ತು B ವಿಭಾಗಗಳಾಗಿ ಮಾಡಲಾಯಿತು. ಪ್ರತ್ಯೇಕ ತರಗತಿ ಶಿಕ್ಷಕರನ್ನು ನೇಮಿಸಲಾಯಿತು. ಅಕ್ಟೋಬರ್ ೧೭ನೇ ತಾರೀಖಿನಿಂದ ಶಾಲೆಗೆ ದಸರಾ ರಜೆಯನ್ನು ನೀಡಲಾಗಿತ್ತು. ಈ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಕೆಲವು ಚಟುವಟಿಕೆಗಳನ್ನು ಮಾಡಲು ಕೊಟ್ಟಿದ್ದರು. ಅದರಂತೆ ವಿದ್ಯಾರ್ಥಿಗಳು ಪೂರೈಸಿದ್ದಾರೆ. ಇದೇ ದಸರಾ ರಜೆಯಲ್ಲಿ ಮುಂದೆ ಬರುವ ಕನ್ನಡ ಹಬ್ಬಕ್ಕೆ ತಯಾರಾಗಲು ಸುತ್ತೋಲೆಯನ್ನು ನೀಡಲಾಗಿತ್ತು. ರಜೆಯ ನಂತರ ಕನ್ನಡ ಹಬ್ಬ ನಡೆಯಿತು. ಇದರಲ್ಲಿ ಮಕ್ಕಳೊಂದಿಗೆ ಪೋಷಕರಿಗೂ ಭಾಗವಹಿಸುವ ಅವಕಾಶವಿತ್ತು. ಪ್ರತಿಭೆಯನ್ನು ತೋರುವ, ಉತ್ಸಾಹ ಹೆಚ್ಚಿಸುವ ಅನೇಕ ಚಟುವಟಿಕೆಗಳನ್ನು ನೀಡಲಾಗಿತ್ತು. ವಿಷಯ ಮಂಡನೆ, ಕವಿ ಪರಿಚಯ, ಪುಸ್ತಕ ಪರಿಚಯ, ಸಂಭಾಷಣೆಯ ಓದು, ಕಥಾರಚನೆ, ಪದ್ಯರಚನೆ ಇತ್ಯಾದಿ. ಅಧ್ಯಾಪಕರು ತಂಡವಾಗಿ Online ನಲ್ಲೇ ಕನ್ನಡ ಹಬ್ಬವನ್ನು ಆಚರಿಸಲು ಸಹಕರಿಸಿದರು. ಸಮಾರಪ ಸಭೆಗೆ ಸಂಜೀವ್ ಸಿರನೂರ್ಕರ್ ಅವರನ್ನು ಆಹ್ವಾನಿಸಲಾಗಿತ್ತು. ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗವನ್ನು ಕಂಠಸ್ಥ ಮಾಡಿಕೊಂಡಿರುವ, ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಕೃಷಿ ಇರುವ ಇವರು ಮಕ್ಕಳಿಗೆ ಮಾರ್ಗದರ್ಶನ ಮಾಡಲು ದೊರಕಿದ್ದು ಸುಕೃತವೇ ಸರಿ. ಇವರು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕನ್ನಡ ನೆಲ-ಜಲ-ಭಾಷೆ ಎಂಬ ವಿಷಯವಾಗಿ ತರಗತಿಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದರು. ಇದು ಇನ್ನೊಂದು ಸಿಹಿ ಸುದ್ದಿ. ಹೀಗೆ ಕನ್ನಡ ಹಬ್ಬದ ಸವಿಯನ್ನು ನಿಮಗೂ ನೀಡಿದ್ದೇವೆ. ಮುಂದಿನ ತಿಂಗಳು ಸಂಸ್ಕೃತ ಪರ್ವದ ಬಿಸಿ ಬಿಸಿ ಸುದ್ದಿ ಹೊತ್ತು ಬರುವೆವು.
-0-
ತ್ರಿವಿಕ್ರಮ – ನಾಗಶ್ರೀ (ಪ್ರತಿನಿಧಿ, ಪದವಿಪೂರ್ವ ವಿಭಾಗ)
November started with a hope of meeting all the students in person. Students and teachers were excited to meet each other. Children wanted to feel the environment outside their houses. It was kind of a dream for children to meet their friends, have conversations and feel they were college students. They have so much to share, which has been held back since a couple of months. There were follow ups from students to know regarding the re-opening of the school. Due to the second wave of Covid, as our State Government decided not to reopen schools and colleges in November, once again we all settled back to accept the mode of online classes. Classes happened in rigour as we all were focused on the mid term exam which is going to start from December 14th. Rigorous assignments were given and children did find it hard at the beginning. It made us teachers feel proud and content to see our PU students building a support structure to complete the various assignments given to them. It is always a pleasure to see children being there for each other. This is one of the noblest things a human could exhibit. Also children demonstrated improvement in their participation level. To support children on this, we had a couple of meetings with them and suggested a couple of methods and practices they could implement to make use of the available time to study effectively. Our PU students put up a commendable effort in the lake conference. Mitri, Rashmi and Sahana have been selected to the next round of the conference among the other few from our School. This makes us all extremely proud to see children driven by their passion, as this definitely is one of the important outcomes of Holistic education. It is a roller coaster ride for both students and teachers so far in hitting the balance between long online sessions and catching up with the assignments and follow up studies. Our wish and effort for the coming months is to enable them to create that drive and focus.
-0-
ಆನಂದವನ ಗುರುಕುಲ– ಯದುನಂದನ (ಪ್ರತಿನಿಧಿ ಮತ್ತು ಅಧ್ಯಾಪಕ, ಆನಂದವನ ಗುರುಕುಲ)
ಈ ಮಾಸದಲ್ಲಿ ನವೋಲ್ಲಾಸವನ್ನು ತುಂಬುವ ಅನೇಕ ಚಟುವಟಿಕೆಗಳನ್ನು ನಡೆಸಿದೆವು ಅದಕ್ಕೆ ಕಾರಣವೂ ಇದೆ ಅದೇನೆಂದರೆ ಹಬ್ಬಗಳ ಸರದಿ ಸಾಲು. ಮೊದಲು ನವರಾತ್ರಿ ಅದು ಕಳೆದ ನಂತರ ದೀಪಾವಳಿ, ಅದಾದಮೇಲೆ ಉತ್ಥಾನ ದ್ವಾದಶಿ – ಹೀಗೆ ಒಂದಾದ ಮೇಲೊಂದು ಹಬ್ಬಗಳು. ಅದರಲ್ಲೂ ದೀಪಾವಳಿ ಎಂದ ಮೇಲೆ ಹೇಳಲೇ ಬೇಕಿಲ್ಲ ಅದರಲ್ಲೇ ಅಡಕವಾಗಿರುವ ಅನೇಕ ಆಚರಣೆಗಳು ಎಲ್ಲವನ್ನೂ ಆಚರಿಸಿ ಮನದಲ್ಲಿ ಸಂತೋಷ, ಮೊಗದಲ್ಲಿ ಮಂದಹಾಸ ತುಂಬಿತು. ಇದರೊಂದಿಗೆ ಗೋಪೂಜೆ, ಲಕ್ಷ್ಮಿ ಸಮುತ್ಥಾನ ಪೂಜೆ, ಅದಾದ ನಂತರ ಪ್ರತಿದಿನ ಸಾಯಂಕಾಲ ನಡೆಯುವ ತುಳಸಿ ಸಂಕೀರ್ತನೆ….ಆಹಾ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಕ್ಕಳ ಉತ್ಸಾಹ ಅಪರಿಮಿತವಾಗಿತ್ತು ಸಂತೋಷದಿಂದ, ಉಲ್ಲಾಸದಿಂದ ಭಾಗವಹಿಸುತ್ತಿದ್ದರು. ಪ್ರತಿಯೊಂದು ಕಾರ್ಯವನ್ನು ಭಕ್ತಿ ಶ್ರದ್ಧೆಯಿಂದ ಮಾಡುತಿದ್ದರು, ಅದರ ಮಧ್ಯೆ ಆಗಾಗ್ಗೆ ತುಂಟಾಟವೂ ಇರುತಿತ್ತು .
ಪ್ರತಿಬಾರಿ ಮಾಡಿದಂತೆಯೇ ಎಲ್ಲಾ ಗೋವುಗಳ ಮೈ ತಿಕ್ಕಿ ಸ್ನಾನ ಮಾಡಿಸಿ, ಗೋಪಿ ಅರಿಶಿನ ಕುಂಕುಮವನ್ನು ಹಚ್ಚಿ ಸವತ್ಸಗೋದಾನವನ್ನೂ ಮಾಡಲಾಯಿತು. ಕೆಲದಾನಿಗಳು ಗೋಗ್ರಾಸದ ದಾನವನ್ನು ಮಾಡಿದರು. ವಿಶ್ವಮಾತೃವಾದ ಗೋವನ್ನು ಪೂಜಿಸಿ, ವಂದಿಸಿ ಎಲ್ಲರೂ ಕೃತಾರ್ಥಭಾವವನ್ನು ಹೊಂದಿದರು.
ಮತ್ತೊಂದು ವಿಷಯ ವೇನಂದರೆ ಈ ಬಾರಿ ಹಬ್ಬಗಳು ಬಂದಹಾಗೆ ನಮ್ಮಲ್ಲಿ ಉತ್ಸಾಹ ತುಂಬಲು ವಿಶೇಷ ಆಸಕ್ತಿ ಮೂಡಿಸಲು ಅನೇಕ ಪೂಜ್ಯರು, ಗಣ್ಯರು, ಮಾನ್ಯರು, ಇಲ್ಲಿಗೆ ಆಗಮಿಸಿದ್ದರು. ಲೌಕಿಕ ಪಾರಮಾರ್ಥಿಕ ಸಮಗಮದಂತಿರುವ ನಮ್ಮ ಗುರುಕುಲದಲ್ಲಿ ಲೋಕಕವಿಷಯಪ್ರವೀಣರಾದ ಪ್ರೊ.ಶಾಸ್ತ್ರಿಯವರು ಆಗಮಿಸಿದ್ದರು. ಅವರು ಮಕ್ಕಳನ್ನು ಗಣಿತ ವಿಶೇಷವಾಗಿ ಗಮನವಹಿಸಿ ಅರ್ಥಮಾಡಿಕೊಂಡು ಪ್ರೀತಿಯಿಂದ ಕಲಿಯುವಂತೆ ಪ್ರೇರೇಪಣೆ ನೀಡಿದರು.
ನಮನ್ನು ಬ್ರಹ್ಮಸೂತ್ರಗಳ ಉಪದೇಶನೀಡಿ ಅನುಗ್ರಹಿಸಲು ನಮ್ಮ ಪೂಜ್ಯಗುರುಗಳಾದ ಭಂಡಾರುಕೇರಿ ಮಠಾಧೀಶರಾದ ಶ್ರೀ ಶ್ರೀ ವಿದ್ಯೇಶತೀರ್ಥರು ಆಗಮಿಸಿದ್ದರು. ಪೂಜ್ಯರು ಬ್ರಹ್ಮಸೂತ್ರಗಳ ಪ್ರಥಮಾ ಅಧ್ಯಾಯದ ಸೂತ್ರಗಳನ್ನು ಉಪದೇಶಿಸಿದರು. ಅದರ ಮಹತ್ವವನ್ನು ತಿಳಿಸಿ ಮಕ್ಕಳಿಗೆ ಗೌರವ ಭಾವವನ್ನು ಮೂಡಿಸಿದರು. ಇದಾದನಂತರ ಮಕ್ಕಳು ಬಿಡುವನ್ನು ಬಯಸದೆ ಆಟವನ್ನು ತ್ಯಜಿಸಿ ನಮ್ಮ ಗುರುಗಳಾದ ಪೇಜಾವರ ಶ್ರೀಗಳ ಮೃತ್ತಿಕಾ ಬೃಂದಾವನದ ನಿರ್ಮಾಣಕ್ಕೆ ಶ್ರಮಿಸಿದರು. ಮಕ್ಕಳ ಉತ್ಸಾಹಕ್ಕೆ ಮಿತಿಯೇ ಇಲ್ಲ ಅವರ ಮನಸ್ಸು ನಿರಂತರ ಕೆಲಸ ಮಾಡುವಂತೆ ಶುದ್ಧ ಹಾಗೂ ಪ್ರಾಮಾಣಿಕ ಅಲ್ಲವೇ. ಹೀಗೆ ಈ ಮಾಸದ ಅನೇಕ ವಿಷಯಗಳನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ. ಮುಂದಿನ ಮಾಸ ಮತ್ತೆ ಸಿಗೋಣ.
-0-