Purnapramati Jaatre 2013-14: Day 2

ಪೂರ್ಣಪ್ರಮತಿ ಉತ್ಸವ ೨೦೧೩-೧೪
ಜಾತ್ರೆ – ೨
ದಿನಾಂಕ: ೨೬.೧೨.೨೦೧೩
ಸ್ಥಳ: ಎನ್.ಎಸ್.ಎಸ್. ಭವನ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಬೆಂಗಳೂರು
ಸಮಯ: ಬೆಳಗ್ಗೆ ೯.೦೦-ಸಂಜೆ ೫.೩೦

ಎರಡನೆಯ ದಿನದ ಜಾತ್ರೆಯಲ್ಲಿ ಹುಲ್ಲುಗಾವಲು, ಸಂಖ್ಯೆಗಳಲ್ಲಿ ಜೀವೋ ಜೀವಸ್ಯ ಜೀವನಮ್, ಹಿಮಾಲಯದ ಗಂಗಾ, ಪ್ರಾಚೀನ ಸಂಸ್ಕೃತಿಯಲ್ಲಿ ಜೀವೋ ಜೀವಸ್ಯ ಜೀವನಮ್ ವಿಷಯಗಳ ಕುರಿತು ವಸ್ತುಪ್ರದರ್ಶನವಿತ್ತು. ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಂತರ್ ಶಾಲಾ ಚಟುವಟಿಕೆಗಳು ಮಕ್ಕಳಲ್ಲಿ ವಿಷಯಾಧಾರಿತ ಚಿಂತನೆಯನ್ನು ಬೆಳೆಸಲು ರೂಪುಗೊಂಡಿದ್ದವೇ ಹೊರತಾಗಿ ಸ್ಪರ್ಧಾ ಮನೋಭಾವವನ್ನು ಹೆಚ್ಚಿಸಲು ಅಲ್ಲ. ಹಾಗಾಗಿ ಈ ಚಟುವಟಿಕೆಗಳಲ್ಲಿ ವಿಜೇತರು, ಸೋತವರು ಎಂಬ ವಿಭಾಗಗಳಿರಲಿಲ್ಲ. ಎಲ್ಲರಿಗೂ ಪ್ರಶಸ್ತಿ ಪತ್ರ-ಪುಸ್ತಕವನ್ನು ನೀಡಲಾಯಿತು. ಈ ಬಾರಿ ಪತ್ರಿಕಾ ಗೋಷ್ಠಿ ಮತ್ತು ವರದಿ ತಯಾರಿ ಒಂದು ವಿಭಿನ್ನ ಪ್ರಯೋಗವಾಗಿತ್ತು. ಹಲವು ಶ್ರೇಷ್ಠ ಪತ್ರಿಕಾವರದಿಗಾರರನ್ನು ನಾವು ಕಂಡಿದ್ದೇವೆ. ಅವರ ಬೆಳವಣಿಗೆಯ ಹಂತಗಳನ್ನು ತಿಳಿದುಕೊಳ್ಳುವ ಅವಕಾಶವಾಗಿರುವುದಿಲ್ಲ. ಎಷ್ಟೋ ಮಂದಿಗೆ ವಿಷಯ ಅರ್ಥವಾದರೂ ಶುದ್ಧ ಭಾಷೆ ಇರುವುದಿಲ್ಲ, ಭಾಷೆ ಚೆನ್ನಾಗಿ ಬಂದರೂ ವಿಷಯವನ್ನು ಗ್ರಹಿಸುವ, ಚೆನ್ನಾಗಿ ಪ್ರಸ್ತುತ ಪಡಿಸುವ ಸಾಮರ್ಥ್ಯವಿರುವುದಿಲ್ಲ. ಇವೆಲ್ಲದರ ಮೇಳೈಸುವಿಕೆ ಒಬ್ಬ ಉತ್ತಮ ಬರಹಗಾರನನ್ನು ಸೃಷ್ಟಿಸುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಬರವಣಿಗೆ ಮತ್ತು ವಿಷಯಗ್ರಹಣೆ, ಪ್ರಶ್ನಿಸುವ ವಿಧಾನಗಳನ್ನು ತಿಳಿಸುವ ಸಲುವಾಗಿ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ನಾಗೇಶ್ ಹೆಗಡೆ ಮತ್ತು ಅನಿತಾ ಪೈಲೂರ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗುಂಡ್ಯಾ ಅಣೆಕಟ್ಟಿನ ಬಗ್ಗೆ ಮಕ್ಕಳಿಗೆ ವಿಷಯ ಪ್ರಸ್ತಾಪಿಸಿದರು, ಮಕ್ಕಳು ಪ್ರಶ್ನಿಸಿತ್ತಾ ಹೋದರು. ಅತಿಥಿಗಳು ಮಕ್ಕಳ ಉತ್ಸಾಹ ಮತ್ತು ಒಳ್ಳೆಯ ಚಿಂತನೆಗಳನ್ನು ಒಳಗೊಂಡ ಪ್ರಶ್ನೆಗಳನ್ನು ಕೇಳಿ ಖುಷಿಪಟ್ಟರು.

ಉತ್ತರಾಖಂಡದ ಜಲಪ್ರಳಯವನ್ನು ಅದರ ಕಾರಣಗಳನ್ನು ಚರ್ಚಿಸುವ ಸಲುವಾಗಿ ಅಂತರ್ ಶಾಲಾ ಮಟ್ಟದ ಗೀತ ರೂಪಕವನ್ನು ಯೋಜಿಸಲಾಯಿತು. ಹಿಮಾಲಯದ ಗಂಗೆ ವಿಷಯವಾಗಿ ಮಕ್ಕಳ ತಂಡವನ್ನು ತಯಾರು ಮಾಡಿದ ನಮ್ಮ ಶಾಲೆಯ ಅಧ್ಯಾಪಕರು ಹೊಸದೊಂದು ಹಾಡನ್ನು ರಚಿಸಿ, ಸಂಗೀತ ಅಧ್ಯಾಪಕರೊಡಗೂಡಿ ರಾಗ ಸಂಯೋಜನೆಯನ್ನೂ, ನೃತ್ಯ ಅಧ್ಯಾಪಕರೊಡಗೂಡಿ ಹಾಡಿಗೆ ತಕ್ಕ ಹೆಜ್ಜೆಗಳನ್ನು ತಯಾರು ಮಾಡಿಸಿದರು.
ದೇವದೇವನ ಅಂಗಜಾತಳ
ಮಂಗಳಾಂಗಳ  ಭಂಗರಹಿತಳ
ದೇವಗಂಗೆಯ  ಕಥೆಯ  ಕೇಳಿರಿ
ಭಾವುಕರು ನೀವೆಲ್ಲರು… ಎಂದು ಮುಂದುವರೆಯುವ ಈ ಹಾಡು ಸುಮಾರು ೧೧ ನಿಮಿಷಗಳದ್ದು. ಉತ್ತರಾಖಂಡದಲ್ಲಿ ನಡೆಯುತ್ತಿರುವ ಅಣೆಕಟ್ಟುಗಳು, ಲೆಕ್ಕವಿಲ್ಲದೆ ಹೆಚ್ಚುತ್ತಿರುವ ವಿದ್ಯುತ್ ಯೋಜನೆಗಳು, ಹೋಟೇಲ್‌ಗಳು, ಕಾರ್ಖಾನೆಗಳ ನಿರ್ಮಾಣವನ್ನು ನಿಲ್ಲಿಸುವಂತೆ, ಧಾರೀ ದೇವಿ ಮಂದಿರವನ್ನು ಸ್ಥಳಾಂತರಗೊಳಿಸಿದಕ್ಕಾಗಿ ಎದ್ದು ಬಂದ ಗಂಗೆಯ ರೌದ್ರ ನರ್ತನವನ್ನು ತೋರಿಸುವ ಈ ಗೀತರೂಪಕ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.

ಖನಿಜಗಳ ನಂತರ ಅತಿ ಹೆಚ್ಚು ಗಣಿಗಾರಿಕೆ ನಡೆಯುತ್ತಿರುವುದು ಮರುಳಿಗಾಗಿ. ಮರುಳು ಸಾಗಾಣಿಕೆಯನ್ನು, ಅದರ ಬಗೆಗೆ ಅರಿವು ಮೂಡಿಸುವ ಸಲುವಾಗಿ ನಾಗೇಶ್ ಹೆಗಡೆ ಅವರು ರಚಿಸಿದ್ದ ಮರುಳು ನಾಟಕವನ್ನು ಪ್ರದರ್ಶಿಸಲಾಯಿತು. ಹುಲ್ಲುಗಾವಲಿನ ಪ್ರಾಮುಖ್ಯತೆಯನ್ನು ತೋರಿಸುವ ಗೀಗೀಪದವನ್ನು ನಮ್ಮ ಶಾಲೆಯ ಅಧ್ಯಾಪಕರೇ ರಚಿಸಿ ಮಕ್ಕಳಿಗೆ ತರಬೇತಿ ನೀಡಿದ್ದರು. ಜಾತ್ರೆಯ ದೆಸೆಯಿಂದ ಹಲವು ಹೊಸ ನಾಟಕ, ಹಾಡಿನ ರಚನೆಗಳ ಸಾಧ್ಯವಾಯಿತು. ಹೊಸ ಹೊಸ ಪ್ರಯೋಗಗಳಿಗೆ ಪೂರ್ಣಪ್ರಮತಿ ತೆರೆದ ಪ್ರಯೋಗಾಲಯವೇ ಆಗಿದೆ. ನಮ್ಮ ಪ್ರಯೋಗಾಲಯವನ್ನು ಕುರಿತು ಆಗಮಿಸಿದ್ದ ಅತಿಥಿಗಳ ಅಭಿಪ್ರಾಯವನ್ನು ಕೇಳೋಣ:

ಡಾ. ಅಬಿ ತಮೀಮ್ ವನಕ್ (Fellow, ATREE)

I am quite happy to see so many different stalls, so many different items displayed here, being child we did not even hear about ecology, we did about forest and wild life. It is really excellent . So much interest from all these children and from the teachers about neglected eco system, grass land, wet land and so on. I would like congratulate all teachers and little participants putting together an excellent show. I do help and participate in Purnapramati activities in future.

ಪ್ರೊ. ವಿದ್ಯಾನಂದ ನಂಜುಂಡಯ್ಯ (CES, IISc)
ಇಲ್ಲಿಗೆ ಬಂದು ತುಂಬಾ ಸಂತೋಷವಾಯಿತು, ಮಕ್ಕಳು ತೋರಿಸಿದ ವಿಷಯಗಳು, ಮಕ್ಕಳ ಪ್ರತಿಭೆ ನೋಡಿ ಆಶ್ಚರ್ಯವಾಗುತ್ತಿದೆ. ಈ ವಯಸ್ಸಿನ ಮಕ್ಕಳು ಇಷ್ಟೆಲ್ಲ ಮಾಡಲು ಸಾಧ್ಯವೇ ಎಂದು. ಮಕ್ಕಳು ಎಷ್ಟು ಚೆನ್ನಾಗಿ ಇಲ್ಲಿ ಭಾಗವಹಿಸಿದ್ದಾರೋ ಹಾಗೇ ಅಧ್ಯಾಪಕರೂ ಮಾಡಿರುವುದು ಕಂಡುಬರುತ್ತಿದೆ. ಇದನ್ನೆಲ್ಲಾ ಏರ್ಪಾಡು ಮಾಡಲು ಬಹಳ ಕಷ್ಟಪಟ್ಟಿರಬೇಕು. ನನಗೆ ಬಹಳ ಇಷ್ಟವಾಯಿತು. ಇಲ್ಲಿ ಕರೆದುದ್ದಕ್ಕೆ ಧನ್ಯವಾದಗಳು.

ಕೃಷ್ಣ ಶೆಟ್ಟಿ (Ex-chairman, Karnataka Chitrakala Academy)
ನಿನ್ನೆಯಿಂದ ಇಲ್ಲಿ ಪ್ರಕೃತಿ, ಅದರ ಜೊತೆ ನಾವು ಹೇಗಿರಬೇಕು ಎಂಬ ವಿಷಯವನ್ನು ಮಕ್ಕಳು ಬಹಳ ಚೆನ್ನಾಗಿ ತೋರಿಸುತ್ತಿದ್ದಾರೆ. ನಿಸರ್ಗ ರಕ್ಷಣೆಯಲ್ಲಿ ಚಿತ್ರಕಲೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ದೃಷ್ಟಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಚಿತ್ರ ಬರೆಯಿಸಿದ್ದಾರೆ. ಮಕ್ಕಳು ಬರೆದ ಚಿತ್ರ ನೋಡಿ ಬಹಳ ಸಂತೋಷವಾಯಿತು. ಚಿಕ್ಕಮಕ್ಕಳಿಗೆ ಪ್ರಕೃತಿಯ ಬಗ್ಗೆ ಇರುವ ಕಾಳಜಿಯನ್ನು ಚಿತ್ರದ ಮೂಲಕ ತೋರಿಸಿದ್ದಾರೆ. ಮುಂದೆ ಈ ಕಾಳಜಿ ಜೀವನದಲ್ಲಿ ನಿರಂತರವಾಗಿ ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ.

ಶ್ರೀಮತಿ ಭಾರ್ಗವಿ ನಾರಾಯಣ (Theatre Performer and Director)
ಮಕ್ಕಳು ಎಷ್ಟು ಚೆನ್ನಾಗಿ ಪ್ರಕೃತಿ, ಕಾಡು, ಪ್ರಾಣಿಗಳ ಬಗ್ಗೆ ವಿವರಣೆ ಕೊಡುತ್ತಿದ್ದಾರೆ. ಈಗ ಅರ್ಥವಾದಷ್ಟನ್ನು ಹೇಳಿದ್ದರೂ ನಂತರದ ದಿನಗಳಲ್ಲಿ ಅದು ಮನವರಿಕೆ ಆಗುತ್ತದೆ. ಚಿಕ್ಕವಯಸ್ಸಿನಲ್ಲಿ ಇವುಗಳ ಪ್ರಾಮುಖ್ಯತೆ ತಿಳಿದರೆ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಾರೆ. ದೊಡ್ಡವರು ಏನೋ ಕರ್ತವ್ಯ ಎಂಬ ರೀತಿಯಲ್ಲಿ ಹೇಳುತ್ತೇವೆ, ಅದರೆ ಮಕ್ಕಳು ಮುಗ್ಧವಾಗಿ ಪೂರ್ಣವಾಗಿ ನಂಬಿ ಮಾತನಾಡುತ್ತಿರುತ್ತಾರೆ. ಅವರು ಹೇಳಿದ್ದನ್ನು ಕೇಳಿದರೆ ನಮಗೂ ನಂಬಿಕೆ ಬರುತ್ತದೆ. ಮಕ್ಕಳು ಹೇಳಿದ್ದನ್ನು ಕೇಳಬೆಕು ಎನ್ನುವಷ್ಟು ಮುದ್ದಾಗಿ ಹೇಳಿದರು. ಯಾವ ಗೀತರೂಪಕ ಚೆನ್ನಾಗಿತ್ತು, ಯಾವುದು ಚೆನ್ನಾಗಿರಲಿಲ್ಲ ಎಂಬುದಕ್ಕಿಂತ ತಮ್ಮನ್ನು ತೊಡಗಿಸಿಕೊಂಡು ಅಷ್ಟು ಆಸಕ್ತಿಯಿಂದ ತೋರಿಸುತ್ತಿರುವುದು ಮುಖ್ಯ. ಈ ಕಾರ್ಯಕ್ರಮವೇ ಉತ್ತಮವಾದುದು. ಮಕ್ಕಳಿಗಷ್ಟೇ ಅಲ್ಲ, ಎಂತಹವರಿಗೂ ಸ್ವಲ್ಪ ಕಾಲವಾದರೂ ಇದರ ಬಗ್ಗೆ ಯೋಚಿಸಬೇಕು ಎನಿಸುತ್ತದೆ.

ಮೊದಲನೆಯದಾಗಿ ಪ್ರಜ್ಞಾಭಾರತಿ, ಮಲ್ನಾಡು ಶಾಲೆಯವರು ತಮ್ಮ ರೂಪಕವನ್ನು ತೋರಿಸಿದರು. ಹೆಚ್ಚು ಮನದಟ್ಟಾಗುವಂತೆ ಹೇಳಲು ಸಾಧ್ಯವಾಗಲಿಲ್ಲ ಎನಿಸಿತು. ಮಾತುಗಳೂ ಸರಿಯಾಗಿ ಕೇಳುತ್ತಿರಲಿಲ್ಲ. ನಿರೂಪಣೆಯನ್ನು ಪರದೆ ಹಿಂದಿನಿಂದ ಹೇಳಿದರು. ಅದು ಸೂಕ್ತವಲ್ಲ. ಸೂತ್ರಧಾರನಂತೆ ಪರದೆಯ ಮುಂದೆ ಬಂದು ಹೇಳಬೇಕು. ಎರಡನೆಯದಾಗಿ ಪೂರ್ಣಪ್ರಮತಿ ಶಾಲೆಯ ರೂಪಕ. ಬಹಳ ಅಚ್ಚುಕಟ್ಟಾಗಿ, ಸ್ಪಷ್ಟವಾಗಿ ಏನು ಹೇಳುತ್ತಿದ್ದಾರೆ ಎಂಬುದು ತಿಳಿಯಿತು. ಅನಿಸಿದಷ್ಟೇ ಅಲ್ಲ. ಒಂದು ಕ್ಷಣ ಬೇಸರವಾಯಿತು. ಒಳ್ಳೆಯ ವೇಷಭೂಷಣವಿತ್ತು. ಚೆನ್ನಾಗಿ ಅಭ್ಯಾಸಮಾಡಿರುವುದು ಕಂಡುಬಂದಿತು. ಹಾಡು ಬಹಳ ಅರ್ಥಪೂರ್ಣವಾಗಿತ್ತು. ಬೇಂದ್ರೆ-ಕುವೆಂಪು ಅವರ ಪರಿಣಾಮ ಇಲ್ಲಿ ಕಾಣುತ್ತಿತ್ತು. ಹಾಡು ಹೇಳಿದವರೂ ಬಹಳ ಚೆನ್ನಾಗಿ ಹಾಡಿದರು. ಮನಸ್ಸಿಗೆ ತಟ್ಟಿತು ಅದು. ತುಂಬ ಸಂತೋಷವಾಯಿತು. ವೇದಿಕೆಯನ್ನೂ ಬಹಳ ಚೆನ್ನಾಗಿ ಬಳಸಿಕೊಂಡರು. ಇದರ ಹಿಂದಿರುವ ಅಧ್ಯಾಪಕರ-ಮಕ್ಕಳ ನಿಷ್ಠೆ ಕಾಣುತ್ತಿತ್ತು. ಚಿಮಂಗಳ ಶಾಲೆಯವರು ಚೆನ್ನಾಗಿ ಅವರು ತಿಳಿಸಬೇಕೆಂದುಕೊಂಡದ್ದನ್ನು ತಿಳಿಸಿದರು. ಪ್ರೌಢಶಾಲೆ, ಬಸವನಗುಡಿ ಅವರು ಮಾಡಿದ್ದು ಬಹಳ ಸ್ತಬ್ಧ ಎನಿಸಿತು. ಒಂದೆಡೆ ನಿಂತು ಭಾಷಣ ಮಾಡಿದಂತಿತ್ತು. ಯಾವುದೇ ಚಲನೆ, ಸಂಭಾಷಣೆಯಲ್ಲಿ ಚುರುಕುತನವಿರಲಿಲ್ಲ. ಶಿವನಹಳ್ಳಿಯಿಂದ ಬಂದಂತಹ ಶಾಲೆ ಅವರು ಉತ್ತರಖಂಡದ ಪ್ರವಾಹದ ಬಗ್ಗೆ ಹೆಚ್ಚಗೆ ಏನೂ ಹೇಳಲಿಲ್ಲ. ಪುಣೆಯ ಮಕ್ಕಳು ಮೈಕನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ವೇಷಭೂಷಣ, ರಂಗದ ಮೇಲಿನ ಚಲನೆ ಚೆನ್ನಾಗಿತ್ತು. ಯಾವುದೇ ಪ್ರತಿಕ್ರಿಯೆಗಳಿದ್ದರೂ ಮಕ್ಕಳನ್ನು ತಿದ್ದಲು ಮಾತ್ರ. ಮಕ್ಕಳ ಪ್ರಯತ್ನಕ್ಕೆ ನಾನು ಧನ್ಯವಾದ ಹೇಳುತ್ತೆನೆ.

ಮಥುರ ಕಲೌನಿ(Author, Playwright and Director)

Such a wonderful programe. Very hard to say anything. I went throught the exhibition, children deep understanding, they explained both in Kannada and English so well, problems are faced in Uttarakhand explaind verry well,  It is very difficult to judge their program. Intensity of this program is very high. You should select some 10-15 children send them Uttarakhand, let them see there, how plastic and etc are dump into the water. Once upon a time it was such a pure place that no where in the country. Children tried to show that in their performance. Thanks for inviting me here.

  For more photos click here

ಅನಿತಾ ಪೈಲೂರು (ಪತ್ರಕರ್ತರು)
ನಾನೊಂದು ಸಣ್ಣ ಕತೆಯನ್ನು ಹೇಳುವ ಮೂಲಕ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. ಸಿ.ವಿ.ರಾಮನ್ ಅವರು ಬೆಂಗಳೂರಿನಲ್ಲಿ ಬಹಳ ದಿನ ಕೆಲಸ ಮಾಡಿದ್ದರು. ಅಲ್ಲಿಗೆ ಹೋಮಿಬಾಬಾ ಮತ್ತು ವಿಕ್ರಮ್ ಸಾರಾಬಾಯಿ ಬಂದರು. ಏನೋ ಚರ್ಚೆ ಮಾಡುತ್ತಿರುವಾಗ, ಸಿ.ವಿ. ರಾಮನ್ ಅವರು ಎದ್ದು ಹೊರಗೆ ಹೋಗುತ್ತಾರೆ. ಅರ್ಧಗಂಟೆಯಾದರೂ ಮರಳಿ ಬರುವುದೇ ಇಲ್ಲ. ನಂತರ ಅವರು ಬರುತ್ತಾರೆ. ಇವರಿಬ್ಬರಿಗೂ ಆಶ್ಚರ್ಯ. ಯಾಕಾಗಿ ಹೊರಗೆ ಹೋಗಿದ್ದರು. ‘ನಾವಿಬ್ಬರೂ ಇಲ್ಲೇ ಇದ್ದೆವಲ್ಲ ನೀವು ಏಕೆ ಹೊರಗೆ ಹೋಗಿದ್ದಿರಿ’ ಎಂದು ಕೇಳಿದರು. ಅವರು ಹೇಳಿದರು ‘ನಿಮಗೆ ಹೊರಗೆ ಏನೂ ಶಬ್ದ ಕೇಳಿಸಲೇ ಇಲ್ಲವೆ? ಇವರಿಬ್ಬರೂ ‘ಇಲ್ಲ, ನಮಗೇನು ಕೇಳಿಸಲಿಲ್ಲ’ ಎನ್ನುತ್ತಾರೆ. ಸಿ.ವಿ.ರಾಮನ್ ಅವರು ‘ಅಲ್ಲೊಂದಷ್ಟು ಮಕ್ಕಳು ಬಂದಿದ್ದರು. ಅವರಲ್ಲಿ ಯಾರಾದರೂ ವಿಜ್ಞಾನಿ ಸಿಗುತ್ತಾರೇನೋ ಎಂದು ನೋಡುತ್ತಿದ್ದೆ’ ಎಂದು ಹೇಳುತ್ತಾರೆ. ಇವರು ‘ಹಾಗಾದರೆ ನಾವಿಬ್ಬರೂ ಒಳ್ಳೆಯ ವಿಜ್ಞಾನಿಗಳಲ್ಲವೆ? ನಮ್ಮನ್ನು ಏಕೆ ಪರಿಗಣಿಸಲಿಲ್ಲ’ ಎಂದು ಕೇಳಿದಾಗ ‘ಒಲಿಂಪಿಕ್ಸ್‌ಗೆ ಯಾರಾನ್ನಾದರೂ ತಯಾರು ಮಾಡಬೇಕಿದ್ದರೆ ೫೦ ವರ್ಷ ದಾಟಿದವರನ್ನು ತಯಾರು ಮಾಡುವುದಿಲ್ಲ ಎಳೆಯ ವಯಸ್ಸಿನಲ್ಲಿಯೇ ಹುಡುಕಬೇಕು ಅವರನ್ನು’ ಎನ್ನುತ್ತಾರೆ.

ನಾಗೇಶ್ ಹೆಗಡೆ ಅವರು ಪುಟ್ಟ ಮಕ್ಕಳ ಜೊತೆ ನಡೆಸಿದ ಸಂವಾದ ನೋಡಿ ಈ ಕತೆ ಹೇಳಬೇಕು ಎನಿಸಿತು. ಪತ್ರಕರ್ತರನ್ನು ಎಳವೆಯಲ್ಲಿಯೇ ಹುಡಕಬೇಕು. ನಿಜವಾದ ತರಬೇತಿ ನೀಡಬೇಕು ಎಂದರು. ಪತ್ರಿಕಾ ಗೋಷ್ಠಿ ಬಹಳ ವಿಶಿಷ್ಠವಾದ ಕಾರ್ಯಕ್ರಮವಾಗಿತ್ತು. ಗುಂಡ್ಯಾ ಜಲವಿದ್ಯುತ್ ಯೋಜನೆಯನ್ನು ಕುರಿತು ನಾಗೇಶ್ ಹೆಗಡೆ ಅವರು ಮೊದಲಿಗೆ ಪ್ರಸ್ತಾವ ಇಟ್ಟರು. ಅದಕ್ಕಿಂತ ಮೊದಲು ಪತ್ರಕರ್ತರು ಯಾವ ರೀತಿ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿದ್ದರು. ನಂತರ ಮಕ್ಕಳು ಪ್ರಶ್ನೆಗಳನ್ನು ಕೇಳಿದರು. ನಿಜಕ್ಕೂ ಅಚ್ಚರಿಯಾಯಿತು. ಗುಂಡ್ಯ ಜಲವಿದ್ಯುತ್ ಯೋಜನೆ ಎಂಬುದು ದೊಡ್ಡವರಿಗೂ ನಿಲುಕದ ವಿಷಯ. ಸಾಕಷ್ಟು ಹೋಮ್ ವರ್ಕ್ ಮತ್ತು ವಿಷಯ ಜ್ಞಾನ ಕೂಡ ಬೇಕು ಪ್ರಶ್ನೆಗಳನ್ನು ಕೇಳಲು. ಮಕ್ಕಳು ಬಹಳ ಚೆನ್ನಾಗಿ ಪ್ರಶ್ನೆಗಳನ್ನು ಕೇಳಿದರು. ನಾಗೇಶ್ ಹೆಗಡೆ ಅವರು ವಿದ್ಯುತ್ ಸಚಿವರಾಗಿ ವಿಷಯವನ್ನು ಪ್ರಸ್ತಾಪಿಸಿದ್ದರು. ಅವರ ಮೊದಲ ಪ್ರಶ್ನೆ ಪ್ರಕೃತಿ ಜೊತೆ ನೀವೇನು ಆಟ ಆಡ್ತಾ ಇದ್ದೀರಾ? ಈ ಅಣೆಕಟ್ಟನ್ನು ಕಟ್ಟುವುದರಿಂದ ಅಲ್ಲಿರುವ ಪ್ರಾಣಿಗಳಿಗೆ, ಪ್ರಕೃತಿಗೆ ಏನು ಪ್ರಯೋಜನ? ನಗರದಲ್ಲಿ ಜನರಿದ್ದಾರೆ ಅಂದ ಮಾತ್ರಕ್ಕೆ ಅಲ್ಲಿರುವ ಜೀವ ವೈವಿಧ್ಯತೆಯನ್ನು ಕಡೆಗಣಿಸಲು ಸಾಧ್ಯವೇ? ಅದರ ಬದಲು ಪರ್ಯಾಯ ವಿದ್ಯುತ್ ಯೋಜನೆಗಳನ್ನು ಏಕೆ ಮಾಡಬಾರದು? ಮಕ್ಕಳು ಮುಂದಿನ ಹಂತಗಳನ್ನು ಯೋಚಿಸಿ ಪ್ರಶ್ನಿಸಿದರು ‘ವಿದ್ಯುತ್ತನ್ನು ತಯಾರಿಸುತ್ತೀರಿ, ಅದನ್ನು ನಗರಗಳಿಗೆ ಸಾಗಿಸಲು ಇನ್ನೂ ಬಹಳಷ್ಟು ಕಾಡನ್ನು ನಾಶಮಾಡುತ್ತೀರಿ, ಅದರ ಬಗ್ಗೆ ಯೋಚಿಸಿದ್ದೀರಾ? ಮಳೆ ಹೆಚ್ಚು ಬರುತ್ತದೆ ಹೌದು, ಮರಗಳನ್ನು ಕಡಿದು ಅಣೆಕಟ್ಟನ್ನು ಕಟ್ಟಿದ ನಂತರ ಮಳೆ ಬರುವುದು ಕಡಿಮೆಯಾಗುವುದು. ನೀರು ಕಡಿಮೆಯಾಗುವುದು. ಆಗ ಏನು ಮಾಡುವಿರಿ? ಈ ತರಹದ ಪ್ರಶ್ನೆಗಳನ್ನು ಮಕ್ಕಳು ಕೇಳಿದರು. ಪತ್ರಕರ್ತರಾಗಿ ಅವರೇನು ತರಬೇತಿ ಪಡೆದವರಲ್ಲ. ವಿಷಯವನ್ನು ತಿಳಿಯುವ ಕುತೂಹಲವಿದೆ. ಇದು ಬಹಳ ಖುಷಿಯಾಯಿತು. ಅವರ ಬೌದ್ಧಿಕ ಮಟ್ಟಕ್ಕೆ ಮೀರಿದ ಪ್ರಶ್ನೆಗಳನ್ನು ಕೇಳಿದರು. ಇನ್ನು ಇಲ್ಲಿರುವ ಮಳಿಗೆಗಳು ಸೃಜನಾತ್ಮಕವಾಗಿವೆ. ನಮ್ಮನ್ನು ನೋಡಲು ಪ್ರೇರೇಪಿಸುತ್ತವೆ.  ನಮ್ಮ ಜೀವನ ಶೈಲಿ ಪರಿಸರಕ್ಕೆ ಎಷ್ಟು ಪೂರಕವಾಗಿರುತ್ತದೆ ಎಂಬುದು ಮನಗಾಣಬೇಕಿದೆ.

ಜಿ.ವಿ.ರೆಡ್ಡಿ (Founder, Sanatana Publishers)
ಇಲ್ಲಿಗೆ ಬಂದ ಮೇಲೆ ನನಗೊಂದು ವಿಷಯ ಗೊತ್ತಾಯಿತು. ದೊಡ್ಡವರಿಗಿಂತ ಚಿಕ್ಕ ಮಕ್ಕಳಿಗೇ ಪ್ರಕೃತಿಯ ಬಗ್ಗೆ ತುಂಬಾ ಅರಿವಿದೆ. ಅವರಿಗೆ ಗೊತ್ತಿರುವ ಎಷ್ಟೋ ವಿಷಯಗಳು ನಮಗೆ ಗೊತ್ತಿಲ್ಲ. ನಮ್ಮ ಕಾಲದಲ್ಲಿ ಇಂತಹ ಅರಿವನ್ನು ಕೊಡುವ ಶಾಲೆಯಾಗಲಿ, ಅಧ್ಯಾಪಕರಾಗಲಿ ನಮಗೆ ಸಿಗಲಿಲ್ಲ. ಈ ಮಕ್ಕಳೆಲ್ಲ ಬಹಳ ಪುಣ್ಯ ಮಾಡಿದ್ದಾರೆ. ಮಕ್ಕಳು ವಿವರಿಸುವ ಹಂತಕ್ಕೆ ಬಂದಿದ್ದಾರೆ ಎಂದರೆ ಆ ವಿಷಯದ ಬಗ್ಗೆ ಅವರು ಎಷ್ಟು ಕಲಿತಿದ್ದಾರೆ ಎಂಬುದನ್ನು ನೋಡಬಹುದು. ನಾವು ಎಷ್ಟೋ ಗ್ರಹಗಳಿಗೆ ನೀರನ್ನು ಹುಡುಕುತ್ತಾ ಉಪಗ್ರಹಗಳನ್ನು ಕಳುಹಿಸುತ್ತಿರುತ್ತೇವೆ. ಆದರೆ ಇಲ್ಲಿರುವ ನೀರನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಿದ್ದೇವೆ ಎಂಬುದನ್ನು ಯೋಚಿಸಬೇಕು. ಅದೊಂದು ದೊಡ್ಡ ಪ್ರಶ್ನೆ. ಎಷ್ಟೋ ಗ್ರಾಮಗಳಿಗೆ ಕುಡಿಯುವ ನೀರಿಲ್ಲ. ಉಪಗ್ರಹಗಳಿಗೆ ಬಳಸುವ ಹಣವನ್ನು ಇವುಗಳಿಗೆ ಸ್ವಲ್ಪ ಬಳಸಿದರೆ ಎಷ್ಟೋ ಉಪಯೋಗವಾಗುತ್ತದೆ. ಪರಿಸರ ಎಂದ ತಕ್ಷಣ ಗಿಡಗಳು, ನದಿಗಳು ನಮಗೆ ನೆನಪಾಗುತ್ತವೆ. ಬೆಂಗಳೂರಿನಲ್ಲಿ ನೋಡುವ ಗಿಡಗಳು ಬೇರೆಡೆ ಕಾಣಸಿಗುವುದಿಲ್ಲ. ಪ್ರತಿಯೊಬ್ಬರು ಅವರ ಜೀವಮಾನದ ಸಮಯದಲ್ಲಿ ೧೦ ಮರಗಳನ್ನಾದರೂ ಬೆಳೆಸಿದರೆ ಬಹಳ ಉಪಯೋಗವಾಗುತ್ತದೆ. ಎಷ್ಟೋ ಜೀವಿಗಳಿಗೆ ಅದು ಆಶ್ರಯತಾಣವಾಗುತ್ತದೆ.

ಅತಿಥಿಗಳ ಮಾತುಗಳನ್ನು, ಸಲಹೆಗಳನ್ನು ಕೇಳುತ್ತಾ ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಜಾತ್ರೆಯ ಎರಡನೆಯ ದಿನಕ್ಕೆ ತೆರೆಯನ್ನು ಹಾಕಲಾಯಿತು. ಹೀಗೆ ಪೂರ್ಣಪ್ರಮತಿ ಜಾತ್ರೆಯು ಸಂಪನ್ನವಾಗಿ ಮಹೋತ್ಸವದ ತಯಾರಿಗೆ ಅಣಿಯಾಯಿತು.

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.