Purnapramati Jaatre 2013-14: Day 1

ಜಾತ್ರೆ ೧
ದಿನಾಂಕ:     à³¨à³«/೧೨/೨೦೧೩
ಸ್ಥಳ:         à²Žà²¨à³.ಎಸ್.ಎಸ್. ಭವನ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಬೆಂಗಳೂರು
ಸಮಯ:     à²¬à³†à²³à²—್ಗೆ ೯.೦೦ – ಸಂಜೆ ೫.೦೦

‘ಜೀವೋ ಜೀವಸ್ಯ ಜೀವನಮ್’ ವಿಷಯವನ್ನು ಆಧರಿಸಿ ಎಲ್ಲಪ್ಪ ರೆಡ್ಡಿ ಮತ್ತು ನಾಗೇಶ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಇಡೀ ಉತ್ಸವದ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ೧೯/೧೨/೨೦೧೩ರಂದು ಶುಭ ಚಾಲನೆಯೂ ದೊರಕಿತ್ತು. ಡಿಸೆಂಬರ್ ೨೫ರಂದು ಜಾತ್ರೆಯ ಮೊದಲ ದಿನ. ಹಿಂದಿನ ದಿನವೇ ವಸ್ತುಪ್ರದರ್ಶನಕ್ಕೆ ಬೇಕಾದಂತೆ ಆವರಣವನ್ನೆಲ್ಲಾ ಅಣಿಗೊಳಿಸಿದೆವು. ಬಯಲುರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಅಂತರ್ ಶಾಲಾ ಚಟುವಟಿಕೆಗಳು, ವಸ್ತುಪ್ರದರ್ಶನಗಳನ್ನು ನಡೆಸಲು ವಿಭಿನ್ನವಾದ ತಯಾರಿಯೇ ಬೇಕು. ಗಾಳಿ, ಬೆಳಕು, ಮಳೆ, ಚಳಿಗಳಿಗೆ ಮೈಯ್ಯೊಡ್ಡಿ ವಸ್ತುಪ್ರದರ್ಶನಕ್ಕೆ ತಯಾರಾದೆವು.

ಜಾತ್ರೆಯ ದಿನ ಬೆಳಗಿನಿಂದಲೇ ಮಕ್ಕಳು ವಿಭಿನ್ನ ವೇಷ-ಭೂಷಣಗಳೊಂದಿಗೆ ಪೋಷರೊಂದಿಗೆ ಆಗಮಿಸತೊಡಗಿದರು. ರಾಜಸ್ಥಾನ, ಪುಣೆ, ಮಲೆನಾಡು, ಚಿಕ್ಕಬಳ್ಳಾಪುರ, ಧಾರವಾಡ, ಶಿವನಹಳ್ಳಿ ಮತ್ತು ಬೆಂಗಳೂರಿನ ವಿವಿಧ ಶಾಲೆಗಳ ಮಕ್ಕಳು-ಅಧ್ಯಾಪಕರು ಜಾತ್ರೆಯಲ್ಲಿ ಭಾಗವಹಿಸಲು ನಮ್ಮೊಂದಿಗಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಆರ್. ಲಕ್ಷ್ಮೀನಾರಾಯಣ (Chief Endowment office, Azim Premji Foundation) ಜಿ.ವಿ.  ರೆಡ್ಡಿ (ಸಂಸ್ಥಾಪಕರು, ಸನಾತನ ಪಬ್ಲಿಷರ್), ಡಾ. ಸಂಜೀವ್ ಕುಲಕರ್ಣಿ (ಅಧ್ಯಕ್ಷರು, ಬಾಲಬಳಗ, ಧಾರವಾಡ), ಶ್ರೀಮತಿ ವಿಜಯಲಕ್ಷ್ಮೀ (ಮುಖ್ಯಸ್ಥರು, ತೀರ್ಥಹಳ್ಳಿ ಪ್ರೌಢಶಾಲೆ), ಮಥುರ ಕಲೌನಿ (ರಂಗನಿರ್ದೇಶಕರು) ಡಾ.ಆರ್.ನಾಗೇಂದ್ರನ್ (ಹಸಿರು ನ್ಯಾಯಾಲಯ), ಡಾ.ಆರ್.ಉಮಾಶಂಕರ್ (ಕೃಷಿ ವಿಶ್ವವಿದ್ಯಾಲಯ) ಡಾ. ಹರೀಶ್ ಭಟ್ (ಪರಿಸರ ತಜ್ಞರು, ಐ.ಐ.ಎಸ್.ಸಿ), ಪೋ.ಕೆ.ಎಸ್.ಕಣ್ಣನ್ (ಸಂಸ್ಕೃತ ವಿಸ್ವಾಂಸರು), ಡಾ. ಎಂ.ಬಿ. ಕೃಷ್ಣ (ವೈದ್ಯರು), ಶ್ರೀಮತಿ ಗೌರಿ ದತ್ತು (ಪ್ರಾಂಶುಪಾಲರು, ಅಭಿನಯ ತರಂಗ), ಆರ್.ಹೆಚ್.ಸಾವ್ಕಾರ್ (Secretary,  Geological Society of India) ನಮ್ಮವರೇ ಆದ ನಾಗೇಶ್ ಹೆಗಡೆ, ಪ್ರಮೋದ್ ಶಿಗ್ಗಾಂವ್ ಹೀಗೆ ಹಿರಿಯರ ದಂಡೇ ಜಾತ್ರೆಯಲ್ಲಿ ನೆರೆದಿತ್ತು.

ಈ ಬಾರಿಯ ವಿಶೇಷವೆಂದರೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತಂದದ್ದು. ಹುಲಿವೇಷ, ಕೋಲಾಟ, ಹಲವು ಪ್ರಾಣಿಗಳ ವೇಷ, ಡಂಬಲ್ಸ್, ಜೀವೋ ಜೀವಸ್ಯ ಜೀವನಮ್ ಎಂಬ ವಾಕ್ಯವನ್ನು ಹೊತ್ತ ಮೂರು ಮಡಿಕೆಗಳು ಹೀಗೆ ಹಲವು ತಂಡಗಳ ಮಕ್ಕಳು ಚಂಡೆಯ ವಾದ್ಯಕ್ಕೆ ಹೆಜ್ಜೆ ಹಾಕುತ್ತಾ ಅತಿಥಿಗಳನ್ನು ಜಾತ್ರೆಗೆ ಬರಮಾಡಿಕೊಂಡರು. ದೀಪಪ್ರಜ್ವಾಲನೆಯ ನಂತರ ಪ್ರಾರ್ಥಮೆಯೊಂದಿಗೆ ಜಾತ್ರೆಗೆ ಔಪಚಾರಿಕ ಚಾಲನೆ ಸಿಕ್ಕಿತು.

ಮುಂದೆ ಅತಿಥಿಗಳು ಅಮೃತ ಮಹಲ್ ಕಾವಲ್, ಪಶ್ಚಿಮ ಘಟ್ಟಗಳು, ಜೈವಿಕ ಸಂಬಂಧಗಳು, ಪ್ರಾಚೀನ ಸಾಹಿತ್ಯದಲ್ಲಿ ಜೀವೋ ಜೀವಸ್ಯ ಜೀವನಮ್, ವನ್ಯಜೀವಿ ವ್ಯವಸ್ಥೆ, ಬುಡಕಟ್ಟು ಜನಾಂಗ ಮಳಿಗೆಗಳಿಗೆ ಭೇಟಿಕೊಟ್ಟರು. ಬೆಳಗಿನ ಅವಧಿಗೆ ಮೂರು, ಮಧ್ಯಾಹ್ನದ ಅವಧಿಗೆ ಮೂರು ವಿಷಯಗಳನ್ನು ಆಧರಿಸಿ ಜಾತ್ರೆಯು ನಡೆಯಿತು. ಮಕ್ಕಳು ತಾವು ತಯಾರಿಸಿದ ಪ್ರಾತ್ಯಕ್ಷಿಕೆಗಳನ್ನು, ನಕ್ಷೆಗಳನ್ನು ಆಯಾ ಕ್ಷೇತ್ರದಲ್ಲಿ ವಿಶೇಷ ಕೆಲಸ ಮಾಡಿರುವ ಅತಿಥಿಗಳಿಗೆ ವಿವರಿಸಿದರು. ಅದೊಂದು ತೆರೆದ ತರಗತಿಯೇ ಆಗಿತ್ತು. ಅತಿಥಿಗಳು ಮಕ್ಕಳು ತಿಳಿದ ವಿಷಯಗಳನ್ನು ತಿದ್ದುತ್ತಾ ಮತ್ತಷ್ಟು ಹೊಸ ವಿಷಯಗಳನ್ನು ತಿಳಿಸುತ್ತಾ, ಕಿರಿವಯಸ್ಸಿನಲ್ಲೇ ಪ್ರಕೃತಿಯ ಬಗ್ಗೆ ಇಷ್ಟು ಜಾಗೃತಿ ಹೊಂದಿರುವುದನ್ನು ಅಚ್ಚರಿಯಿಂದ ಮೆಚ್ಚುತ್ತಾ ಮುನ್ನಡೆದರು. ಆಯಾ ಸ್ಥಳದ ವಿಶೇಷವಾದ ಖಾದ್ಯವನ್ನು ಕೊಟ್ಟು ಅತಿಥಿಗಳನ್ನು ಸ್ವಾಗತಿಸುತ್ತಾ ಹಬ್ಬದ ವಾತಾವರಣವೇ ಸೃಷ್ಟಿಯಾಯಿತು.

ನಾಗೇಶ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಜಾತ್ರೆಯಲ್ಲಿ ವಿಶೇಷವಾಗಿ ದೊಡ್ಡ ಪ್ಲಾಸ್ಟಿಕ್ ಭೂತವನ್ನು ತಯಾರಿಸಲಾಗಿತ್ತು. ಪ್ಲಾಸ್ಟಿಕ್ ನಿರ್ಮೂಲ ಹೇಗೆ? ಎಂಬ ಮಂಥನಕ್ಕಾಗಿ ಮತ್ತು ಮಕ್ಕಳಿಗೆ ಅರಿವನ್ನು ಮೂಡಿಸುವ ಸಲುವಾಗಿ ನಿಲ್ಲಿಸಲಾಗಿದ್ದ ಈ ಪ್ಲಾಸ್ಟಿಕ್ ಭೂತ ಎಲ್ಲರ ಆಕರ್ಷಣೆಯಾಯಿತು. ಅಂತರ್ ಶಾಲಾ ಚಟುವಟಿಕೆಗಳಲ್ಲಿ ನಾಟಕ, ವಿಷಯ ಮಂಡನೆ, ಏಕಪಾತ್ರಾಭಿನಯ, ಕಥಾಕಥನ, ರೂಪಕ, ಬುಡಕಟ್ಟು ನೃತ್ಯಗಳು ಪ್ರದರ್ಶನಗೊಂಡವು. ಒಂದೇ ಸಮಯದಲ್ಲಿ ವಿವಿಧ ತರಗತಿಗಳಲ್ಲಿ ನಡೆದ ಇಷ್ಟೂ ಚಟುವಟಿಕೆಗಳು ಎಲ್ಲಿಗೆ ಹೋಗಿ ಯಾವುದನ್ನು ನೋಡೋಣ!? ಎಂಬ ಆಯ್ಕೆಯನ್ನು ಪ್ರೇಕ್ಷಕರ ಮುಂದೆ ಇಟ್ಟಂತಾಯಿತು. ಹಲವು ವಿಷಯಗಳನ್ನು ಕಲಿಯಲು ಪ್ರೇಕ್ಷಕರಲ್ಲಿಯೇ ಸ್ಪರ್ಧೆ ಮೂಡಿದ್ದು ವಿಶೇಷ. ಯಾವುದನ್ನು ಬಿಟ್ಟರೂ ವಿಶೇಷವಾದದ್ದೇನೋ ಕಳೆದುಕೊಂಡ ಭಾವವನ್ನು ಪ್ರೇಕ್ಷಕರಲ್ಲಿ ಕಾಣಬಹುದಾಗಿತ್ತು. ನಂತರ ಇದೇ ವಿಷಯಗಳನ್ನು ಆಧರಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜೀವೋ ಜೀವಸ್ಯ ಜೀವನಮ್ ವಿಷಯವನ್ನು ಇಷ್ಟು ಆಯಾಮಗಳಿಂದ ನೋಡಲು ಸಾಧ್ಯವೇ?! ಎಂಬ ಅಚ್ಚರಿಯನ್ನು ಹೊತ್ತ ಅತಿಥಿಗಳ ಮಾತುಗಳನ್ನು ಗಮನಿಸಿ:

ಡಾ.ಆರ್.ನಾಗೇಂದ್ರನ್
ಈ ತರಹದ ಒಂದು ಹೊಸ ಪರಿಕಲ್ಪನೆಯನ್ನು ಇಷ್ಟು ಕಡಿಮೆ ಸಮಯದಲ್ಲಿ ಎಷ್ಟು ಚೆನ್ನಾಗಿ ಬಂದಿದೆ ಎಂಬುದನ್ನು ನಾವು ಎಲ್ಲರಿಗೂ ಸಾರಿ ಹೇಳಬೇಕು. ಇಂದು ನಡೆದ ಅಂತರ್ ಶಾಲಾ ಕಾರ್ಯಕ್ರಮದಲ್ಲಿ ಎರಡು ತಂಡಗಳು ಮಾತ್ರ ಭಾಗವಹಿಸಿದ್ದರು. ಮುಂದಿನ ಬಾರಿ ಬೆಂಗಳೂರಿನ ಎಲ್ಲಾ ಶಾಲೆಯಿಂದಲೂ ತಂಡಗಳು ಇಂತಹ ಹೊಸ ಪ್ರಯೋಗಗಳಿಗೆ ಒಳಪಡಬೇಕು. ಇದರಿಂದ ರಾಷ್ಟ್ರದ ಉನ್ನತಿ ಹೇಗೆ? ಮತ್ತು ಸಂಸ್ಕೃತಿಯನ್ನು ಉಳಿಸುವುದು ಹೇಗೆ? ಎಂಬುದನ್ನು ತಿಳಿಯಬಹುದಾಗಿದೆ. ಇಂತಹ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರಿಗೆ ಧನ್ಯವಾದಗಳು. ಇಂದು ಮಕ್ಕಳನ್ನು ಕೇವಲ ಇಂಜಿನಿಯರಿಂಗ್, ಡಾಕ್ಟರ್‌ಗಳಾಗಿ ಮಾತ್ರ ತಯಾರು ಮಾಡುವ ಶಾಲೆಗಳಿವೆ. ಪೂರ್ಣಪ್ರಮತಿ ಎಂಬ ಪ್ರಯೋಗವನ್ನು ಎಷ್ಟು ಜನ ಎಷ್ಟು ಬೇಗ ಒಪ್ಪಿಕೊಳ್ಳುತ್ತಿದ್ದಾರೆ ಎಂಬುದೇ ವಿಶೇಷ. ಇದನ್ನು ಇನ್ನೂ ಹೆಚ್ಚು ಜನಪ್ರಿಯಗೊಳಿಸಬೇಕು.

ಫ್ರೊ. ಆರ್. ಉಮಾಶಂಕರ್

Let me thank all of the organizers here. When I visited school two years back in my address I told to children, parents and to the teachers that I am very envious of the children of here, the reason is I did not get such schooling, then I was wondering for such school. Some one call to Utopia…something is not possible. West and east is mixed in such a nice cocktail, that the students of this school are get away with the richness of tradition, the Indian ethos as well as best in west knowledge. I should truly appreciate and congratulate parents assembled here, for having thought differently and send children to such school, I wish that this school, mind set of this school prelifate so that it reach  benefit of larger number of children in the country. Coming to today’s theme I and my colleague had an opportunity to visit 2-3 stalls , for example controversy between Prof.Madhav Gadgil and Kasturi Rangan sort of committee report. I am not pretending here that the children would understood the entire implications of that. Parents should convey this message to larger masses of our country through media, formal curriculum and also informal exchange. We could realize impact and import such exhibits into the larger context of the national economy. I have a suggestion here for principal and to the administrators both. Western Ghats and Amrit Mahal Kaval have very intensive background information, teachers brought up to the level of students understanding. It is possible even schools do the primary and secondary research into areas that can be used as a subject matters for education of the other students. Students are not getting material from books without getting what is the spirit, they are actually creating the spirit that is very good way of teaching, rather than teaching them endlessly from book, journals. In this regard my specific suggestion is that, certain British schools actually use children as a means of delivering important policy decision to the public larges number, larger class of the nation. And in this context such events can grow up into such an event, and put proposal before National Biodiversity authority and etc. It can easily fund for such events, that can take children as the communication. I once again congratulate parents, teachers for such a commendable exhbits here.

ಪ್ರಮೋದ್ ಶಿಗ್ಗಾಂವ್
ನಾನು ಮೂಲತಃ ಮಾತುಗಾರನಲ್ಲ. ನಾನು ಮಾತಿಗಿಂತ ಕೆಲಸ ಮಾಡುವುದೇ ಸೂಕ್ತ. ಕಳೆದ ವರ್ಷದಿಂದಲೇ ಶಾಲೆಗೆ ಬರಲು ಪ್ರಾಂಶುಪಾಲರು ಹೇಳೀದ್ದರೂ ನನ್ನ ಕೆಲಸಗಳ ನಡುವೆ ಸಾಧ್ಯವಾಗಿರಲಿಲ್ಲ. ಈ ಬಾರಿ ಹೋಗಲೇ ಬೇಕು ಎಂಬ ಕಾರಣಕ್ಕಾಗಿ ಬಂದಾಗ ಇಷ್ಟೆಲ್ಲ ಅದ್ಭುತಗಳನ್ನು ನೋಡಿ ಮಾತನಾಡದೆ ಇರುವುದೇ ಸರಿ ಎನಿಸಿತು. ಶಾಲೆಯ ಮೂಲೆ ಮೂಲೆಗಳಲ್ಲು ಚಟುವಟಿಕೆಗಳು ನಡೆಯುತ್ತಿದ್ದವು. ನಾನು ರಂಗ ಚಟುವತಿಟಿಕೆಗಳಿಗೆ ಸಣ್ಣದಾದ ಸಲಹೆಗಳನ್ನು ನೀಡಲು ಶಾಲೆಗೆ ಹೋಗಿದು. ಇಲ್ಲಿ ನೋಡಿದಾಗ ಇನ್ನೂ ನಾನು ಸಕ್ರಿಯವಾಗಿ ತೊಡಗಿಕೊಳ್ಳದಿದ್ದರೆ ದೊಡ್ಡ ತಪ್ಪು ಮಾಡುಬಿಡುತ್ತೇನೋ ಎಂಬ ಆತಂಕದಿಂದ ಅಧ್ಯಾಪಕರೊಂದಿಗೆ ಒಂದು ದಿನ ರಂಗತರಬೇತಿ ಶಿಬಿರವನ್ನು ನಡೆಸಿದೆ. ಬಹಳ ಅದ್ಭುತವಾದ ಕೆಲಸ. ಅಲ್ಲಿ ಸಣ್ಣ ಸಣ್ಣ ಕೊಠಡಿಗಳಲ್ಲಿ ಎಲ್ಲರೂ ಸ್ಥಳವನ್ನು ಹಂಚಿಕೊಂಡು ಕೆಲಸ ಮಾಡುತ್ತಿದ್ದರು. ಇಷ್ಟು ವಿಶಾಲವಾದ ಕೆಲಸ ಅಲ್ಲಿ ತಯಾರಾಗುತ್ತಿತ್ತು ಎಂಬುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಬಹಳ ದೊಡ್ಡದಾದ, ವಿಶಾಲವಾದ ಉದ್ದೇಶ ಶಾಲೆಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ಶಾಲೆಗಳಲ್ಲೂ ಇಂತಹ ಪ್ರಯತ್ನಗಳು ಆಗಲಿ. ನಾನು ಸಂಪೂರ್ಣವಾಗಿ ನಿಮ್ಮ ಶಾಲೆಯೊಂದಿಗೆ ಕೆಲಸಗಳಲ್ಲಿ ತೊಡಗಿಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ.

ಡಾ.ಹರೀಶ್ ಭಟ್
ಜೀವೋ ಜೀವಸ್ಯ ಜೀವನಮ್ ಇಲ್ಲೇ ಕಾಣುತ್ತಿದೆ. ಒಳಗೆ ಬರುತ್ತಿದ್ದಂತೆ ನಾನು ನೋಡಿದೆ ಪ್ರತಿಯೊಂದು ಕಡೆಯೂ ಈ ವಾಕ್ಯ ಪ್ರತಿಧ್ವನಿಯಾಗುತ್ತಿದೆ. ಮುಂದೆ ಭೂಗೋಳವಿದೆ, ಮಕ್ಕಳು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ ಮನುಷ್ಯನನ್ನು ಸೇರಿಸದೆ. ಮನುಷ್ಯನನ್ನು ಬಿಟ್ಟರೆ ಭೂಮಿ ಎಷ್ಟು ಸೊಗಸಾಗಿದೆ ಎನ್ನುವುದು ಕಾಣುತ್ತಿದೆ. ಹಿಂದೆ ದೊಡ್ಡ ಪ್ಲಾಸ್ಟಿಕ್ ಭೂತವಿದೆ. ಸಣ್ಣ ಭೂತ ಅಲ್ಲವೇ ಅಲ್ಲ ಇದು. ಈ ಪೂರ್ಣಪ್ರಮತಿಯ ಮಕ್ಕಳನ್ನು ನೋಡಿದ್ದು ಇದೆ ಎನ್.ಎಸ್.ಎಸ್. ಭವನದ ಹಿಂಭಾಗಕ್ಕಿರುವ ಕಾಡಿನಲ್ಲಿ. ಎಲ್ಲ ಮಕ್ಕಳಂತೆ ಇವರೂ ಗಲಾಟೆ ಮಾಡುತ್ತಾರೆ ಎಂದು ಅಂದುಕೊಂಡಿದ್ದೆ. ವಿಚಿತ್ರವೆಂದರೆ ನಾನು ಯಾವುದೇ ಕೀಟವನ್ನು ದೂರದಿಂದ ತೋರಿಸಿದರೂ ಅವರು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದರು. ಖುಷಿ ಎಂದರೆ ಆತ್ಮೀಯತೆ ಎಲ್ಲೆಲ್ಲೂ ಕಾಣುತ್ತದೆ. ಎಲ್ಲರನ್ನೂ ಅಣ್ಣ, ಅಕ್ಕ ಎನ್ನುತ್ತಾರೆ. ಮೂರು ತಿಂಗಳ ಹಿಂದೆ ಹೇಳಿಕೊಟ್ಟಿದ್ದನ್ನು ಕಲಿತು ಏನೆಲ್ಲ ಪ್ರಾತ್ಯಕ್ಷಿಕೆಗಳನ್ನು ಮಾಡಿದ್ದಾರೆಂದು ನೋಡಲು ಎರಡು ದಿನಗಳ ಹಿಂದೆ ಶಾಲೆಗೆ ಹೋಗಿದ್ದೆ. ಆಶ್ಚರ್ಯವಾಯಿತು, ಹೇಳಿದ್ದನ್ನು ಹಸಿಗೋಡೆಯಂತೆ ಹಿಡಿದಿಟ್ಟುಕೊಳ್ಳುವ ಗುಣವಿದೆ ಮಕ್ಕಳಿಗೆ. ವಿಶೇಷವೆಂದರೆ ಅಧ್ಯಾಪಕರು-ವಿದ್ಯಾರ್ಥಿಗಳ ನಡುವಿನ ಸಂಬಂಧ. ಮನೆಯಲ್ಲಿರುವಂತೆಯೇ ಇರುತ್ತಾರೆ. ಎಷ್ಟೋ ಸಲ ಟೀಚರ್ ಯಾರು? ಸ್ಟುಡೆಂಟ್ ಯಾರು? ಎಂದು ಗೊತ್ತಾಗುವುದೇ ಇಲ್ಲ. ಎಲ್ಲರೂ ಒಟ್ಟಿಗೆ ಕೂತು ಕಲಿಯುತ್ತಾರೆ. ಇಲ್ಲಿನ ಪ್ರತಿಯೊಂದು ವಿಷಯದಲ್ಲೂ, ವಸ್ತುವಿನಲ್ಲೂ ನೈಜತೆ ಎನ್ನುವುದು ಕಂಡುಬರುತ್ತಿದೆ. ಎಷ್ಟೋ ವಸ್ತುಪ್ರದರ್ಶನಗಳನ್ನು ನೋಡಿದ್ದೇನೆ, ಆದರೆ ಜೀವೋ ಜೀವಸ್ಯ ಜೀವನಮ್ ಎಂಬ ವಿಷಯವನ್ನು ಸಂಪೂರ್ಣವಾಗಿ ತೋರಿಸಿದ್ದು ಇಲ್ಲಿಯೇ. ಅದ್ಭುತವಾಗಿದೆ. ವಿಭಿನ್ನವಾದ ಕಲಿಕೆ ಇದೆ. ಪೋಷಕರು ನಿಜವಾಗಿ ಧನ್ಯರಾಗಿದ್ದಾರೆ. ಸಮಗ್ರ ಕಲಿಕೆ ಎಂಬುದನ್ನು ಕೆಲವು ಶಾಲೆಗಳಲ್ಲಿ ಮಾತ್ರ ನೋಡದ್ದೇನೆ. ಅದರಲ್ಲಿ ಪೂರ್ಣಪ್ರಮತಿಯೂ ಒಂದು.

ಶ್ರೀಮತಿ ವಿಜಯಲಕ್ಷ್ಮೀ
ಪಶ್ಚಿಮ ಘಟ್ಟಗಳನ್ನು ದೇವಲೋಕ, ಸ್ವರ್ಗ ಅಂತೆಲ್ಲ ಹೇಳ್ತಾರೆ, ಅದು ನಿಜ. ನಾನು ಅಂತಹ ಕ್ಷೇತ್ರದಿಂದ ಬಂದಿದ್ದೇನೆ. ಪೂರ್ಣಪ್ರಮತಿ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವಂತಹದ್ದು. ಭಾರತೀಯ ಸಂಸ್ಕೃತಿ ಎಂದರೆ ಪ್ರಕೃತಿಯ ಆರಾಧನೆ. ಪ್ರಕೃತಿಯನ್ನು ನಾವು ಉಳಿಸಿದರೆ, ಪ್ರಕೃತಿ ನಮ್ಮನ್ನು ಉಳಿಸುತ್ತದೆ. ಸಂಸ್ಕಾರಯುತವಾದ ವಾತಾವರಣವನ್ನು ನಿರ್ಮಿಸಿದ್ದಾರೆ ಈ ಶಾಲೆಯಲ್ಲಿ. ಇಂತಹ ಶಾಲೆಗಳಿಂದ ನಮ್ಮ ದೇಶ ಉದ್ದಾರವಾಗುತ್ತದೆ. ಪರಿಸರ ಉಳಿಯುತ್ತದೆ. ಈ ಶಾಲೆ ನಮಗೆ ಮಾರ್ಗದರ್ಶನವಾಗುತ್ತಿದೆ. ಇದು ಫಾರಿನ್‌ನಿಂದ ತಂದದ್ದು ಎಂದು ಮಕ್ಕಳು ಹೆಮ್ಮೆಯಿಂದ ತೋರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಇದು ಭಾರತದ್ದು ಎಂದು ತೋರಿಸಬೇಕಾದರೆ ನಿಜಕ್ಕೂ ಅಭಿಮಾನವಿರಬೇಕು. ಪ್ರತಿಯೊಂದು ಮಗುವಿನ ಭಾವನೆಗಳನ್ನು ಇಲ್ಲಿ ನಾವು ಗಮನಿಸುತ್ತಿದ್ದೇವೆ. ಪ್ರಪಂಚದಲ್ಲೇ ಎತ್ತರಕ್ಕೆ ಈ ಶಾಲೆ ಬೆಳೆಯಬೇಕು.

ನಾಗೇಶ್ ಹೆಗಡೆ
ಶಾಲೆಯನ್ನು ಹೆಚ್ಚು ಹೊಗಳಬಾರದೆಂದು ನನಗೆ ಬಹಳ ಕಡಿಮೆ ಸಮಯ ಕೊಟ್ಟಿದ್ದಾರೆ. ನೀವೆಲ್ಲ ಹಿಂದೆ ಪ್ಲಾಸ್ಟಿಕ್ ಭೂತ ನೋಡುತ್ತಿದ್ದೀರಿ, ಅದನ್ನು ನಿರ್ನಾಮ ಮಾಡುವ ಸಲಹೆಗಳನ್ನು ನೀವೆಲ್ಲ ಕೊಡಬೇಕು. ಅದಕ್ಕೊಂದು ಸ್ಪರ್ಧೆ ಇದೆ. ಅತ್ಯುತ್ತಮ ಸಲಹೆ ಕೊಟ್ಟವರಿಗೆ ವಿಶೇಷ ಬಹುಮಾನವಿದೆ. ಅಂತೆಯೇ ಎರಡು ತೋರುಗಂಬಗಳಿವೆ. ಒಂದು ದುರಂತಗಳನ್ನು ಹೇಳುವ (ಭೂಪಾಲ್ ಇತ್ಯಾದಿ) ಮತ್ತೊಂದು ಒಳ್ಳೆಯ ಕೆಲಸಗಳ ತೋರುಗಂಬ. ಪ್ಲಾಸ್ಟಿಕ್ ಭೂತದಂತೆ ಸಂವಾದಿಯಾಗಿ ನಮ್ಮೆಲ್ಲರ ಹಾರೈಕೆಯಂತೆ ವನದೇವತೆ ಇದ್ದಾಳೆ. ಸೂಕ್ಷ್ಮವಾಗಿ ಗಮನಿಸಿ ಪ್ರೇಕ್ಷಕರು ಎಲ್ಲವನ್ನೂ ನೋಡಿಕೊಂಡು ಹೋಗಬೇಕು.

ಇಲ್ಲಿರುವ ಪ್ಲಾಸ್ಟಿಕ್ ಭೂತವನ್ನು ನಿರ್ನಾಮ ಮಾಡುವುದು ಹೇಗೆಂಬುದಕ್ಕೆ, ಎಲ್ಲರೂ ಸಹಜವಾಗಿ ಪುನರ್ಬಳಕೆ ಆಗಬೇಕು ಎನ್ನುತ್ತಾರೆ. ಆದರೆ ಅದು ಅಷ್ಟು ಸುಲಭವಲ್ಲ. ಸಂಗ್ರಹ ಮಾಡುವವರಾರು? ಕಂಡ ಕಂಡಲ್ಲಿ ಪ್ಲಾಸ್ಟಿಕನ್ನು ಬಿಸಾಡುತ್ತೇವೆ. ಮಾಲಿನ್ಯ ನಿಯಂತ್ರ ಮಂಡಳಿಯ ಅಧ್ಯಕ್ಷರು ಸ್ವತಃ ಪ್ಲಾಸ್ಟಿಕ್ ಪುನರ್ಬಳಕೆ ಕಾರ್ಖಾನೆ ಇಟ್ಟುಕೊಂಡಿದ್ದಾರೆ. ಮಾಗಡಿ ರಸ್ತೆಯಲ್ಲಿ ಆ ಕಾರ್ಖಾನೆ ಇದೆ. ಅವರು ಯಾವಾಗಲೂ ಹೇಳುತ್ತಾರೆ: ನಮ್ಮ ಕಾರ್ಖಾನೆಗೆ ಬೇಕಾಗಿರುವ ೨೦% ರಷ್ಟು ಪ್ಲಾಸ್ಟಿಕ್ ಕೂಡ ಸಿಗುತ್ತಿಲ್ಲ ಎಂದು. ಏಕೆಂದರೆ ನಾವು ಅದನ್ನು ಕ್ರಮಬದ್ಧವಾಗಿ ಇಡುತ್ತಿಲ್ಲ. ಪಕ್ಕದ ವೃಷಭಾವತಿ ನೋಡಿದರೆ ಪ್ಲಾಸ್ಟಿಕ್‌ಮಯ, ಕಾವೇರಿ ದಂಡೆ ನೋಡಿದರೆ ಪ್ಲಾಸ್ಟಿಕ್ ರಾಶಿ, ಅದು ತಮಿಳುನಾಡಿನ ಪುಂಪುಹಾರ್ ಎಂಬ ಸ್ಥಳದಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ನೋಡಿದರೆ ಪ್ಲಾಸ್ಟಿಕ್ ರಾಶಿ. ಬಂಗಾಳ ಉಪಸಾಗರಲ್ಲಿ ಸೇರಿ ಫೆಸಿಫಿಕ್ ಸಮುದ್ರದೊಳಗೆ ಹೋಗುತ್ತದೆ. ಅಲ್ಲಿ ಸುಮಾರು ಅಮೇರಿಕಾ ರಾಷ್ಟ್ರದಷ್ಟು ವಿಶಾಲವಾದ ನೀರಿನಲ್ಲಿ ಈ ಪ್ಲಾಸ್ಟಿಕ್ ತೇಲುತ್ತಿರುತ್ತದೆ. ಮೀನುಗಳಿಗೆ, ಆಮೆಗಳು, ಡಾಲ್ಫಿನ್‌ಗಳು ಸಾಯುತ್ತಿವೆ. ಒಂದು ದ್ವೀಪದಲ್ಲಿ ಸಾವಿರಾರು ಪಕ್ಷಿಗಳು ಏನೋ ಆಹಾರವೆಂದು ಪ್ಲಾಸ್ಟಿಕನ್ನು ತಿನ್ನುತ್ತಿವೆ. ಅವುಗಳ ಸತ್ತ ದೇಹಗಳಲ್ಲಿ ಪ್ಲಾಸ್ಟಿಕ್ ಸಿಗುತ್ತಿದೆ.

ಇಂದಿನ ದಿನಗಳಲ್ಲಿ ಪ್ಲಾಸ್ಟಿಕನ್ನು ಬಳಸದೆ ಇರಲು ಸಾಧ್ಯವಿಲ್ಲ. ಆದರೆ ಪ್ಲಾಸ್ಟಿಕ್ ಇರದ ಹಿಂದಿನ ದಿನಗಳಲ್ಲೂ ನಾವು ಸುಖವಾಗಿದ್ದೆವು. ಬಳಸಿದ ಪ್ಲಾಸ್ಟಿಕನ್ನು ಮರುಬಳಕೆ ಮಾಡುವುದು ಹೇಗೆ? ಎಂದು ಯೋಚಿಸಬೇಕು. ನಾವು ನಮ್ಮ ವೈಯಕ್ತಿಕ ಮಟ್ಟದಲ್ಲಿ, ಕುಟುಂಬದ ಮಟ್ಟದಲ್ಲಿ, ಬಡಾವಣೆಯ ಮಟ್ಟದಲ್ಲಿ ಮಾಡಬೇಕು ವ್ಯವಸ್ಥಿತ ರೀತಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಕಾರ್ಖಾನೆಗೆ ತಲುಪುವಂತೆ ನೋಡಿಕೊಳ್ಳಬೆಕು. ಮತ್ತೆ ಮತ್ತೆ ಪುನರ್ಬಳಕೆ ಮಾಡಬೇಕೆ? ನಿರ್ನಾಮ ಮಾಡಬೇಕೇ? ಯೋಚಿಸಬೇಕು. ತೋಚಿದ ಉತ್ತರಗಳನ್ನು ಬರೆದು ಕೊಡಬೇಕು. ಐದು ಅತ್ಯುತ್ತಮ ಉತ್ತರಗಳಿಗೆ ವಿಶೇಷ ಬಹುಮಾನವಿರುತ್ತದೆ.

ಆರ್.ಹೆಚ್.ಸಾವ್ಕಾರ್
ಮಳೆಕೊಯ್ಲಿನ ಬಗ್ಗೆ ಮಕ್ಕಳಿಗೆ ತಿಳಿಸುವ ನೆಪದಲ್ಲಿ ನನಗೆ ಶ್ರೀನಿವಾಸ್ ಗುತ್ತಲ್ ಅವರು ರಾಜೇಂದ್ರ ಸಿಂಗ್ ಅವರ ಮೂಲಕ ಪರಿಚಯವಾದರು. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಎಲ್ಲ ತಜ್ಞರನ್ನು ಒಂದೆಡೆ ಸೇರಿಸಿ ಏನು ಮಾಡಬೇಕೆಂದು ಚಿಂತಿಸುವ ಕೆಲಸ ಬಹಳ ದೊಡ್ಡದು. ಭೂಗರ್ಭ ಶಾಸ್ತ್ರವಾಗಲಿ, ನೀರಿನ ಬಗ್ಗೆಯಾಗಲಿ, ಪರಿಸರ ವಿಜ್ಞಾನಗಳನ್ನು ಶಾಲೆಗಳಲ್ಲಿ ಜಿಯಾಗ್ರಫಿ ಕೆಳಗೆ ಕಲಿಸಲಾಗುತ್ತಿದೆ. ಬದಲಾಗಿ ಪರಿಸರ ವಿಜ್ಞಾನದ ಕೆಳಗೆ ೫ ರಿಂದ ೧೨ನೇ ತರಗತಿಯವರೆಗೆ ಕಲಿಸಬೇಕು. ಮುಂದೆ ಪದವಿಯಲ್ಲಿ ಅರ್ತ್ರೊಸೈನ್ಸ್ ವಿಭಾಗಗಳಲ್ಲಿ ಕಲಿಸಬೇಕು. ಮುಂದೆ ಸ್ನಾತಕೋತ್ತರ ಪದವಿ, ಪಿ.ಹೆಚ್.ಡಿ ಗೂ ತೆಗೆದುಕೊಂಡು ಹೋಗುವ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಆದರೆ ೫ ನೇ ತರಗತಿಯ ಮಕ್ಕಳಿಗೆ ಪ್ರಕೃತಿ ವಿಜ್ಞಾನವನ್ನು ತಿಳಿಸುವ ಪಠ್ಯಪುಸ್ತಕವಿದೆಯೇ? ಎಂಬ ಪ್ರಶ್ನೆ ಈಗ ನಮ್ಮ ಮುಂದಿದೆ. ಜಿಯಾಲಾಜಿಕಲ್ ಸೊಸೈಟಿ ಅಂತಹ ಪುಸ್ತಕವನ್ನು ತರಲು ಸಿದ್ಧವಿದೆ. ಶ್ರೀನಿವಾಸ್ ಗುತ್ತಲ್ ಅವರನ್ನು ಮತ್ತು ಇಲ್ಲಿನ ಅಧ್ಯಾಪಕರನ್ನು ಪ್ರಾರಂಭಿಕ ಹಂತದ ಪಠ್ಯಪುಸ್ತಕವನ್ನು ರಚಿಸಲು ಸಂಪರ್ಕಿಸುವೆ. ಸಹಕರಿಸುವರೆಂಬ ಆಶಯದೊಂದಿಗೆ ನನ್ನ ಮಾತನ್ನು ಮುಗಿಸುತ್ತೇನೆ.

ಡಾ.ಎಂ.ಬಿ.ಕೃಷ್ಣ
ಮಕ್ಕಳ ಉತ್ಸಾಹವನ್ನು ನೋಡಿ ನಾನು ಚಿಕ್ಕವನಾಗಿದ್ದ ದಿನಗಳು ನೆನಪಾದವು. ಪೋಷಕರಿಗೆ ಒಂದು ಕಿವಿಮಾತು. ಮಕ್ಕಳಲ್ಲಿ ಹವ್ಯಾಸಗಳನ್ನು ಬೆಳೆಸಿ. ಏಕೆಂದರೆ ಪಠ್ಯಪುಸ್ತಕಗಳು ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಬರುತ್ತಿದೆ. ತೂಕವೂ ಜಾಸ್ತಿ, ವಿಷಯದ ಹೊರೆಯೂ ಜಾಸ್ತಿ. ಅವರ ತಲೆಯೊಳಗೆ ಬಹಳಷ್ಟು ವಿಷಯಗಳನ್ನು ತುಂಬುತ್ತಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಯಾವುದಾದರೊಂದು ಹವ್ಯಾಸ, ವಿಶೇಷ ಕ್ಷೇತ್ರವೊಂದರಲ್ಲಿ ಆಸಕ್ತಿ ಇರಬೇಕು. ಇದರಿಂದ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಶ್ರೀಮತಿ ಗೌರಿ ದತ್ತು
ಬೇರೆ ರಾಜ್ಯದಿಂದ ಬಂದಿರುವ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಭಾಗವಹಿಸುತ್ತಿರುವುದನ್ನು ಕಾಣಬಹುದು. ನಮ್ಮದೊಂದು ಸಾಂಸ್ಕೃತಿಕ ಕೇಂದ್ರವಿದೆ. ಅಲ್ಲಿ ಮಕ್ಕಳಿಗೆ ಹಾಡು, ನೃತ್ಯ, ನಾಟಕ, ಚಿತ್ರಕಲೆಯನ್ನು ಪ್ರತಿ ಶನಿವಾರ ಹೇಳಿಕೊಡಲಾಗುವುದು. ಹಿರಿಯರಿಗೆ ಅಭಿನಯ, ಅದರೊಂದಿಗೆ ರಂಗದ ಎಲ್ಲಾ ಕ್ಷೇತ್ರಗಳಲ್ಲೂ ತರಬೇತಿಯನ್ನು ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅರಿವನ್ನು ಕೊಡುವಂತಹ ಕಾರ್ಯಕ್ರಮವನ್ನು ನಾನಿಲ್ಲಿ ನೋಡಿದೆ. ಕಥೆ, ಹಾಡು, ನೃತ್ಯ, ನಾಟಕ  ಎಲ್ಲವೂ ಪರಿಸರಕ್ಕೆ ಸಂಬಂಧಪಟ್ಟವು. ಆಯ್ದುಕೊಂಡಿರುವ ವಸ್ತು ಬಹಳ ಚೆನ್ನಾಗಿತ್ತು. ಆದರೆ ಇನ್ನಷ್ಟು ತಯಾರಿ ಬೇಕಿತ್ತೇನೋ ಅನಿಸಿತು. ಮಕ್ಕಳಿಗೆ ಏನನ್ನು ಬೇಕಾದರೂ ಗ್ರಹಿಸುವ ಶಕ್ತಿ ಇದೆ. ಇನ್ನು ಸ್ವಲ್ಪ ತಯಾರಿ ಇದ್ದರೆ ಚೆನ್ನಾಗಿರುತ್ತಿತ್ತು. ಇಲ್ಲಿ ಕಳೆದ ಕಾಲ ಬಹಳ ಉತ್ತಮವಾದುದು, ಅವರ ವಿವರಣೆಗಳನ್ನು ಕೇಳಿದೆ. ನನಗೇ ಎಷ್ಟೋ ವಿಷಯಗಳು ಗೊತ್ತಿಲ್ಲವೆಂದು ಅನಿಸಿತ್ತು, ಮಕ್ಕಳು ತಿಳಿಸಿದರು. ಮುಖ್ಯವಾಗಿ ಕೆರೆಗಳ ಬಗ್ಗೆ. ಬೆಂಗಳೂರಿನಲ್ಲಿ ಎಷ್ಟು ಕೆರೆಗಳಿದ್ದವು, ಈಗ ಏನಾಗಿದೆ ಎಂದು ತಿಳಿಸಿದರು. ಇದನ್ನು ಎಲ್ಲರಿಗೂ ತಿಳಿಸಬೇಕು. ನಮ್ಮ ಸಂಸ್ಥೆಯಿಂದ ಯಾವುದೇ ರೀತಿಯ ಬೆಂಬಲವನ್ನು ಕೊಡಲು ಸಿದ್ಧರಿದ್ದೇವೆ.

ಪ್ರೊ.ಕೆ.ಎಸ್.ಕಣ್ಣನ್
ಮಕ್ಕಳ ಆಟವನ್ನು ನೋಡಿದ ಮೇಲೆ ದೊಡ್ಡವರ ಮಾತೇನು ರುಚಿಸುವುದಿಲ್ಲ. ಮಕ್ಕಳ ನಲಿವು, ಅದರಲ್ಲೂ ಪ್ರಕೃತಿಯ ಅನುಕರಣೆಯನ್ನು ಮಾಡಿ ನಲಿಯುವುದು ಬಹಳ ಆಪ್ಯಾಯವಾದದ್ದು. ಕಣ್ಣಿಗೆ ಹಬ್ಬ. ಮಕ್ಕಳಿಗೆ ರಾಜ-ರಾಣಿ ಕತೆ ಹೇಳುವುದರಲ್ಲೂ ಸಂತೋಷವಿದೆ. ಆದರೆ ಪಂಚತಂತ್ರಗಳಲ್ಲಿ ಪ್ರಾಣಿಗಳ ಕತೆಗಳಿಂದಲೇ ಅವರಿಗೆ ಶಿಕ್ಷಣ ಕೊಟ್ಟಿದ್ದು ಹೆಚ್ಚು ಸಂತಸ ತರುವ ಸಂಗತಿ. ಇಲ್ಲಿ ನಡೆದ ಪ್ರದರ್ಶನ ನೋಡಿದ ನಂತರ ಮಕ್ಕಳ ಉತ್ಸಾಹ ಅತ್ಯಂತ ಶ್ಲಾಘನೀಯ ಎನಿಸಿತು. ಇದನ್ನೆಲ್ಲ ಆಯೋಜನೆ ಮಾಡಿದ ಪೂರ್ಣಪ್ರತಿಶಾಲೆಗೆ ಅಭಿನಂದನೆಗಳು. ನಮ್ಮ ದೇಶ ಒಂದು ಕಾಲದಲ್ಲಿ ಕತೆಗಳಿಗೇ ಹೆಸರುವಾಸಿಯಾಗಿದ್ದದ್ದು. ಪುಟ್ಟ ಮಕ್ಕಳು ಉತ್ಕೃಷ್ಟವಾದ ಕತೆಗಳನ್ನು ಹೇಳಿದರು. ಭಾರತೀಯ ಮೌಲ್ಯಗಳನ್ನು ಬೆಳೆಸುವ ಪೂರ್ಣಪ್ರಮತಿ ಇನ್ನು ಪೂರ್ಣವಾಗಿ ಬೆಳೆದು ಇಂತಹ ಅನೇಕ ಕಾರ್ಯಕ್ರಮಗಳನ್ನು ನೀಡಲಿ. ನನ್ನನ್ನು ಇಲ್ಲಿಗೆ ಆಹ್ವಾನಿಸಿದ ಶ್ರೀನಿಧಿಯವರಿಗೆ ಧನ್ಯವಾದಗಳು.

ಕೆ.ಆರ್. ಲಕ್ಷ್ಮೀನಾರಾಯಣ
ಮಕ್ಕಳ ಉತ್ಸಾಹ, ವಿವರಣೆಗಳನ್ನು ನೋಡಿ ಖುಷಿಪಟ್ಟೆ, ನಾನು ನಿರೀಕ್ಷಿಸಿದ್ದಕ್ಕಿಂತ ಚೆನ್ನಾಗಿ ಈ ಕಾರ್ಯಕ್ರಮವಿದೆ. ಹೆಚ್ಚು ಅರಿವನ್ನು ನೀಡುವ ಕಾರ್ಯಕ್ರಮವಿದು.

  For more photos click here

ಹಿರಿಯರಿಂದ ಇಂತಹ ಹಿತನುಡಿಗಳನ್ನು ಕೇಳಿ, ಸಲಹೆಗಳನ್ನು ಆಲಿಸಿ ದಿನದ ಕೊನೆಯ ಕಾರ್ಯಕ್ರಮಕ್ಕೆ ನಾವೆಲ್ಲ ಬಂದೆವು. ಪ್ಲಾಸ್ಟಿಕ್ ಭೂತದ ನಿರ್ನಾಮ ಹೇಗೆ? ಅತ್ಯುತ್ತಮ ಪುನರ್ಬಳಕೆ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಪಡೆಯುವುದು ಒಂದು ಕುತೂಹಲದ ಘಟ್ಟವಾಗಿತ್ತು. ಪ್ರೇಕ್ಷಕರೆಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದರು. ಯಾವುದೋ ಪ್ರಶ್ನೆ, ಯಾರೋ ಉತ್ತರ ಬರೆಯಲಿ ಎಂದು ಉದಾಸೀನ ತೋರದೆ ಎಲ್ಲರೂ ಚಿಂತಿಸಿ ಉತ್ತರ ಬರೆದು ಒಂದು ಪೆಟ್ಟಿಗೆಯಲ್ಲಿ ಹಾಕಿದ್ದರು. ಸುಮಾರು ೭೫-೮೦ ಉತ್ತರಗಳು ಬಂದಿದ್ದವು. ಅದರಲ್ಲಿ ಅತ್ಯುತ್ತಮ ಮರುಬಳಕೆಯ ದಾರಿ ತೋರಿದವರು ಚಿಮಂಗಳ ಊರಿನ, ಕುವೆಂಪು ಶಾಲೆಯ ೬ ನೇ ತರಗತಿಯ ವಿದ್ಯಾರ್ಥಿಗಳು. ಅವರ ಉತ್ತರಗಳು ಹೀಗಿದ್ದವು:

ಡಾಂಬರಿನೊಂದಿಗೆ ಸೇರಿಸಿ ರಸ್ತೆಯನ್ನು ಮಾಡಲು ಪ್ಲಾಸ್ಟಿಕನ್ನು ಬಳಸಬಹುದು. ಇದರಿಂದ ಬಿರುಕಾಗದಂತೆ, ಹಳ್ಳಗಳಾಗದಂತೆ ಹೆಚ್ಚು ಕಾಲ ರಸ್ತೆಯನ್ನು ಕಾಪಾಡಿಕೊಳ್ಳಬಹುದು. ಪ್ಲಾಸ್ಟಿಕನ್ನು ಕರಗಿಸಿ ಡ್ರಿಪ್ ಪೈಪ್ ಮಾಡಬಹುದು. ಏಕೆಂದರೆ ಡ್ರಿಪ್ ಪೈಪ್ ನೀರನ್ನು ಹಿತಿಮಿತವಾಗಿ ಬಳಸಿ ಆ ಮೂಲಕ ಗಿಡಮರಗಳನ್ನು ಬೆಳಸಲು ಸಾಧ್ಯವಾಗುತ್ತದೆ. ಇದೊಂದು ಉತ್ತಮವಾದ ಕೆಲಸ. ಮನೆಯಲ್ಲಿ ಒಂದು ಪೈಪನ್ನು ಇಟ್ಟು ಆರು ತಿಂಗಳ ಕಾಲದ ಎಲ್ಲಾ ಬಳಕೆಯ ಪ್ಲಾಸ್ಟಿಕನ್ನು ತುಂಬಿಸುತ್ತಾ ಬರಬೇಕು. ಆರು ತಿಂಗಳ ನಂತರ ಒಂದು ಸಿಲಿಂಡರ್ ತಯಾರಾಗುವುದು. ಇದನ್ನು ಮರುಬಳಕೆಯ ಕಾರ್ಖಾನೆಯವರು ತೆಗೆದುಕೊಳ್ಳುತ್ತಾರೆ. ರದ್ದಿ ಅಂಗಡಿಗೆ ಆರು ತಿಂಗಳ ನಂತರ ಕೊಡಬಹುದು. ಇದರಿಂದ ನಮ್ಮೆಲ್ಲರಿಗೂ ಉತ್ತಮ ರಸ್ತೆ ಬರುತ್ತದೆ ಎಂಬ ವಿಚಾರವನ್ನು ನಾಗೇಶ್ ಹೆಗಡೆಯವರು ತಿಳಿಸಿದರು.

ಹೀಗೆ ಪ್ಲಾಸ್ಟಿಕ್ ಭೂತಕ್ಕೆ ಒಂದು ಗತಿ ಕಾಣಿಸಲಾಯಿತು. ಪುಟಾಣಿ ವಿಜ್ಞಾನಿಗಳ ಆಲೋಚನೆಯನ್ನು ಶ್ಲಾಘಿಸುತ್ತಾ ಒಂದು ಉತ್ತಮ ಆಶಾಕಿರಣದೊಂದಿಗೆ ಮೊದಲ ದಿನದ ಜಾತ್ರೆಗೆ ತೆರೆ ಹಾಕಲಾಯಿತು.

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.