Inter School Kho-Kho Competition

ನಮ್ಮ ಶಾಲೆಯ ಕ್ರೀಡೋತ್ಸವ

ದಿನಾಂಕ: 28.10.2013

ಸ್ಥಳ: ಪೂರ್ಣಪ್ರಮತಿ ಮೈದಾನ, ಗಿರಿನಗರ, ಬೆಂಗಳೂರು

ಆಟದ ಬಯಲಿಗೆ ಓಡಿ, ಆಟದ ಬಯಲಿಗೆ ಓಡಿ

ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ

ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ

ಚಿನ್ನಿ-ದಾಂಡು ಖೋ ಖೋ ಆಡಿ ದೇಹವ ಮೋಡಿಯ ಮಾಡಿ

ಆಟವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. ಹಸಿವು, ನೋವು, ಗಾಯ ಎಲ್ಲವನ್ನೂ ಮರೆತು ಮನಃಪೂರ್ವಕವಾಗಿ ಆಡುತ್ತಾರೆ. ಆಟವೆಂದರೆ ತಲೆಗೆ ತೋಚಿದಂತೆ ಆಡುವುದಲ್ಲ. ಅದಕ್ಕೆ ಅದರದೇ ಆದ ನಿಯಮಗಳಿವೆ, ವಿಧಾನಗಳಿವೆ. ಹಲವು ಕ್ರೀಡೆಗಳು ಬೇರೆ ಬೇರೆ ದೇಶಗಳ ಮೂಲವನ್ನು ಹೊಂದಿವೆ. ಭಾರತೀಯ ಆಟಗಳಲ್ಲಿ ಮೆದುಳಿಗೆ ಮತ್ತು ದೇಹಕ್ಕೆ ಎರಡಕ್ಕೂ ಹೆಚ್ಚಿನ ಕೆಲಸವಿರುತ್ತದೆ. ಉದಾಹರಣೆಗೆ ಚದುರಂಗದಾಟ, ಖೋ ಖೋ, ಹಾಕಿ ಇತ್ಯಾದಿ. ಆಟದಲ್ಲಿ ಕಲಿತ ಶ್ರದ್ಧೆ, ಏಕಾಗ್ರತೆ, ಸ್ನೇಹಪರತೆಗಳನ್ನು ಓದಿನಲ್ಲಿ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕ್ರೀಡೆಗಳ ಅಂತಿಮ ಫಲ. ಸೋಲು-ಗೆಲವುಗಳು ಇದಕ್ಕೆ ಪೂರಕವಾಗಿರುತ್ತವೆ. ಭಾರತೀಯ ಆಟಗಳನ್ನು ಉತ್ತೇಜಿಸುವ ಉದ್ದೇಶದಿಂದ ಪೂರ್ಣಪ್ರಮತಿಯು ದಿನಾಂಕ 28.10.2013ರಂದು ಅಂತರ್-ಶಾಲಾ ಖೋ ಖೋ ಪಂದ್ಯಾವಳಿಯನ್ನು ಏರ್ಪಡಿಸಿತ್ತು.

ಪಂದ್ಯವು ನಡೆದದ್ದು 28ನೇ ದಿನಾಂಕದಂದು. ಆದರೆ ಅದಕ್ಕೆ ತಯಾರಿ ಒಂದು ತಿಂಗಳ ಮೊದಲೆ ಪ್ರಾರಂಭವಾಗಿತ್ತು. ಇತರ ಶಾಲೆಗಳನ್ನು ಆಹ್ವಾನಿಸುವುದರಿಂದ ಆರಂಭಿಸಿ, ಮಕ್ಕಳ ತಯಾರಿ, ವ್ಯವಸ್ಥೆಗಳ ಬಗ್ಗೆ ಇಡೀ ಶಾಲೆಯೇ ಕೈಜೋಡಿಸಿ ಸಹಕರಿಸಿತು. ನಮ್ಮ ಕ್ರೀಡಾ ಅಧ್ಯಾಪಕರಾದ ಶಶಿಅಣ್ಣ ಅವರಂತೂ ಮಕ್ಕಳನ್ನು ಯಾವ ಹಂತದಲ್ಲೂ ಎಚ್ಚರ ತಪ್ಪದಂತೆ ಖೋ ಖೋ ಪಂದ್ಯಕ್ಕೆ ಅಣಿಗೊಳಿಸಿದ್ದರು. ಪ್ರತಿನಿತ್ಯ 2-3 ತಾಸು ಅಭ್ಯಾಸ ನಡೆದೇ ಇತ್ತು. ಪೋಷಕರೂ ಸಹ ಮಕ್ಕಳನ್ನು ನಿತ್ಯ ಅಭ್ಯಾಸಕ್ಕೆ ಕರೆದು ತರುತ್ತಿದ್ದರು. ಆಟದ ದಿನ ಹತ್ತಿರವಾಗುತ್ತಿದ್ದಂತೆ ಎಲ್ಲರ ಮನದಲ್ಲೂ ಒಂದು ಉತ್ಸಾಹ, ಮಕ್ಕಳು ಹೇಗೆ ಆಡುವರೋ ಎಂಬ ಕುತೂಹಲ ಕಾಯುತ್ತಿತ್ತು.

ಈ ಪಂದ್ಯದಲ್ಲಿ ಪೂರ್ಣಪ್ರಮತಿಯೂ ಸೇರಿದಂತೆ ಗಿರಿನಗರದ ಸುತ್ತಮುತ್ತಲ 8 ಶಾಲೆಗಳು ಭಾಗವಹಿಸಿದ್ದವು. ಸಿಸ್ಟರ್ ನಿವೇದಿತಾ ಶಾಲೆ, ರತ್ನಗಿರಿ ವಿದ್ಯಾಸಂಸ್ಥೆ, ಸಿ.ಬಿ.ಎಲ್. ಮದರ್ ತೆರೇಸಾ ಶಾಲೆ, ಮೌಂಟ್ ಎವೆರೆಸ್ಟ್ ಶಾಲೆ, ಕನಕ ವಿದ್ಯಾಸಂಸ್ಥೆ, ಶಾರದಶ್ರೀ ವಿದ್ಯಾಸಂಸ್ಥೆ, ಶಾಂತಿ ನಿಕೇತನ ಇಂಗ್ಲಿಷ್ ಶಾಲೆಗಳ ಪರವಾಗಿ ಬಾಲಕರು ಮತ್ತು ಬಾಲಕಿಯರ ಪ್ರತ್ಯೇಕ ತಂಡಗಳು ಆಗಮಿಸಿದ್ದವು. ಪ್ರಾಥಮಿಕಶಾಲಾ ಮಕ್ಕಳ ವಿಭಾಗದ ಈ ಪಂದ್ಯವು ನಿರೀಕ್ಷೆಗೂ ಮೀರಿ ಮಕ್ಕಳ ನಿಜವಾದ ಸಾಮರ್ಥ್ಯವನ್ನು ಎಲ್ಲರಿಗೂ ತೋರಿಸಿತ್ತು.


ಅಂತೂ ಪಂದ್ಯಾವಳಿಯ ದಿನ ಬಂದೆ ಬಿಟ್ಟಿತು….
ಮೈದಾನ ಸ್ವಚ್ಛವಾಗಿ ಸಿದ್ಧವಾಯಿತು, ವಿವಿಧ ತಂಡಗಳು ಕುಳಿತುಕೊಳ್ಳಲು ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ, ಊಟದ ವ್ಯವಸ್ಥೆ, ಹೀಗೆ ಎಲ್ಲವೂ ತಯಾರಾಯಿತು. ಗಿರಿನಗರದ ಹನುಮಂತಪ್ಪನವರು ತಮ್ಮ ನಿವೇಶನವನ್ನು ಅಭಿಮಾನಪೂರ್ವಕವಾಗಿ ಪೂರ್ಣಪ್ರಮತಿಯ ಕಾರ್ಯಗಳಿಗೆ ಬಿಟ್ಟುಕೊಟ್ಟದ್ದು ನಿಜಕ್ಕೂ ಶ್ಲಾಘನೀಯ. ಬೆಳಗ್ಗೆ 8.40 ರಿಂದ ವಿವಿಧ ಶಾಲೆಯವರು ಬರಲು ಆರಂಭಿಸಿದ್ದರು. ಅತಿಥಿಗಳಿಗೆ ತಿಲಕ ಹಚ್ಚಿ ಹೂವನ್ನು ಕೊಟ್ಟು ಸ್ವಾಗತಿಸಿದೆವು. ಅಂದಿನ ಮುಖ್ಯ ಅತಿಥಿಗಳಾಗಿ ಉಮೇಶ್.ಆರ್ (ಕ್ರೀಡಾ ನಿರ್ದೇಶಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ತ್ಯಾಮಗೊಂಡಲು) ಮತ್ತು ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿ ಶ್ರೀಮತಿ ಅನಿತಾ ಅವರು ಆಗಮಿಸಿದರು. ಅತಿಥಿಗಳಿಗೆ ಸ್ವಾಗತ, ಪ್ರಾರ್ಥನೆ, ಪ್ರತಿಜ್ಞಾಸ್ವೀಕಾರ, ಭೂಮಿ ಪೂಜೆ, ಧ್ವಜಾರೋಹಣ, ಭಾರತ ಮಾತೆಗೆ ಪುಷ್ಪಾರ್ಚನೆ ಎಲ್ಲಾ ಕಾರ್ಯಗಳನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ನಮ್ಮ ಶಾಲೆಯ ಹಾಡಿನ ಶಿಕ್ಷಕರಾದ ರಾಜೇಂದ್ರಣ್ಣ ಈ ದಿನಕ್ಕಾಗಿ ವಿಶೇಷ ಹಾಡನ್ನು ರಚಿಸಿ, ರಾಗ ಸಂಯೋಜಿಸಿ ಮಕ್ಕಳಿಗೆ ಅಭ್ಯಾಸ ಮಾಡಿಸಿದ್ದರು. ಮಕ್ಕಳು ಬೆಳಗಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತೆ ಈ ಹಾಡನ್ನು ಹಾಡಿದರು:

ಖೋ ಖೋ ಆಟವ ಆಡೋಣ

ಎಲ್ಲರ ಜೊತೆಗೂ ಬೆರೆಯೋಣ

ಸಾಂಘಿಕ ಶಕ್ತಿಯ ಬೆಳೆಸೋಣ

ದೇಹಾರೋಗ್ಯವ ಪಡೆಯೋಣ

 

ಆಟದಿ ಶಕ್ತಿಯು ಆಟದಿ ಯುಕ್ತಿಯು

ಆಟವೆ ಮನಗಳ ಸೇತುವೆಯು

ಆಟವ ಆಡುತ ಮುದವನು ಪಡೆಯುತ

ಭಾವೈಕ್ಯತೆಯನು ಬೆಳೆಸೋಣ

 

ಬನ್ನಿರಿ ಆಟವ ಆಡೋಣ

ಎಲ್ಲರ ಜೊತೆಗೂ ಬೆರೆಯೋಣ

ಕ್ರೀಡೆಯನಾಡುತ ಭಾರತ ಮಾತೆಗೆ

ದಿನವೂ ಸೇವೆಯ ಮಾಡೋಣ

ಅತಿಥಿಗಳು ಮಾತಿಗಿಂತ ಕ್ರಿಯೆಯೇ ಉತ್ತಮ, ಸೋಲು-ಗೆಲುವುಗಳಿಗಿಂತ ಮುಖ್ಯವಾಗಿ ಕ್ರೀಡಾ ಮನೋಭಾವ ಮತ್ತು ಬಾಂಧವ್ಯವೇ ಆಟದಲ್ಲಿ ಮುಖ್ಯ ಎಂದು ತಿಳಿಸಿ ತಾವು ಆಡುವುದರೊಂದಿಗೆ ಪಂದ್ಯಕ್ಕೆ ಚಾಲನೆ ಕೊಟ್ಟರು. ಮಕ್ಕಳ ಉತ್ಸಾಹವನ್ನು ಮತ್ತಷ್ಟು ಉತ್ತೇಜಿಸುವಂತೆ ಅಭಿನಂದಿಸಿ ಆಟ ನೋಡಲು ತಾವೂ ಕುಳಿತರು.

ಯಾವ ತಂಡಗಳು ಯಾವ ತಂಡಗಳೊಂದಿಗೆ ಆಡಬೇಕೆಂಬ ಯೋಜನೆಯಂತೆ ಒಂದೊಂದೇ ತಂಡಗಳು ಆಡತೊಡಗಿದವು. ಕೆಲವು ತಂಡಗಳು ಮೊದಲೆ ಚೆನ್ನಾಗಿ ಅಭ್ಯಾಸ ಮಾಡಿ ಬಂದಿದ್ದವು. ಒಂದೊಂದೇ ತಂಡಗಳು ಸೋಲುತ್ತಾ ಹೋದಂತೆ ಅಂತಿಮ ಸುತ್ತಿಗೆ ತಂಡಗಳು ಆಯ್ಕೆಯಾದವು. ಮಳೆರಾಯ ತಾನೂ ಪಂದ್ಯ ನೋಡಲು ಬಂದನು. ಪಂದ್ಯ ನೋಡಲು ಬಂದ ಮಳೆರಾಯನಿಗೆ ಬೇಸರವಾಗದಿರಲೆಂದು ಮಕ್ಕಳು ಮಳೆಯಲ್ಲೂ ಒಂದು ಪಂದ್ಯವನ್ನಾಡಿದರು. ಅಂತಿಮ ಸುತ್ತಿಗೆ ರತ್ನಗಿರಿ ವಿದ್ಯಾಸಂಸ್ಥೆ ಮತ್ತು ಪೂರ್ಣಪ್ರಮತಿಯ ಮಕ್ಕಳ ತಂಡಗಳು ಆಯ್ಕೆಯಾದವು. ಅಲ್ಲಿಯ ಒಂದೊಂದು ನೋಟ, ಓಟ, ಜೂಟಾಟ ಕ್ಷಣಕ್ಷಣಕ್ಕೂ ಉತ್ಸಾಹವನ್ನು ಹೆಚ್ಚಿಸುತ್ತಲೇ ಇತ್ತು. ತಮ್ಮೆಲ್ಲ ಜಾಣ್ಮೆ, ಏಕಾಗ್ರತೆ, ಸತತ ಅಭ್ಯಾಸ, ನಿಯಮಗಳ ಅರಿವುಗಳನ್ನು ಒಟ್ಟುಗೂಡಿಸಿ ಎಚ್ಚರಿಕೆಯಿಂದ ಆಡಿದ ಪೂರ್ಣಪ್ರಮತಿಯ ಬಾಲಕರು ಮತ್ತು ಬಾಲಕಿಯರು ಜಯಶಾಲಿಗಳಾದರು. ಪ್ರಾಂಶುಪಾಲರು ಅನಾರೋಗ್ಯದಿಂದ ವಿಶ್ರಾಂತಿ ಪಡೆಯಬೇಕಾಗಿದ್ದರೂ ಈ ಉತ್ಸವವನ್ನು ಕಣ್ಣಾರೆ ಕಾಣುವ ತವಕದಿಂದ ಮೈದಾನಕ್ಕೆ ಧಾವಿಸಿ ಬಂದರು. ಈ ಯಜ್ಞದಲ್ಲಿ ಯಾರ ಪರಿಶ್ರಮವೂ ವ್ಯರ್ಥವಾಗಲಿಲ್ಲ. ಅಂತೂ ಅಂತಿಮ ಜಯ ನಮ್ಮದಾಯಿತು. ಮಕ್ಕಳ ಮುಂದಿನ ಸಾಧನೆಗೆ ದಾರಿದೀಪವಾಯಿತು.

ಪಂದ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ಪತ್ರವನ್ನು ನೀಡಲಾಯಿತು. ಈ ಬಹುಮಾನ ಪತ್ರದ ವಿಶೇಷವೆಂದರೆ ಅದನ್ನು ಮಕ್ಕಳೇ ತಮ್ಮ ಕೈ ಬರಹದಿಂದ, ಚಿತ್ರಗಳಿಂದ ತಯಾರಿಸಿದ್ದರು. ಸಂಜೆಯ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ಖೋ ಖೋ ಕ್ರೀಡಾಪಟುಗಳಾದ ಶ್ರೀಯುತ ರಾಮು, ಗಣಿತಜ್ಞರಾದ ಶ್ರೀಮತಿ ಆನಂದ ಲಕ್ಷ್ಮೀ, ರಬ್ಬರ್ ಉದ್ಯಮಿಯಾದ ಮಣೂರು ನರಸಿಂಹ ಪೈ ಮುಂತಾದವರು ಆಗಮಿಸಿದ್ದರು. ಇವರೆಲ್ಲರೂ ಸಮಾಜದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯದೊಂದಿಗೆ, ಶಾಲೆಗಳನ್ನು ನಿರ್ಮಿಸಿ ಕ್ರೀಡೆಗಳನ್ನು ಪ್ರೋತ್ಸಾಹಿಸುವವರಾಗಿದ್ದಾರೆ. ಇವರ ಆಶೀರ್ವಾದವನ್ನು, ಬಹುಮಾನವನ್ನೂ ಪಡೆದ ಮಕ್ಕಳು ತಮ್ಮ ಕೊರಳಲ್ಲಿ ಕಂಗೊಳಿಸುತ್ತಿರುವ ಪದಕಗಳು ಮತ್ತು ಬಹುಮಾನವನ್ನು ನೋಡುತ್ತಾ ಸಾವಿರ ಕನಸುಗಳನ್ನು ನಾಳೆಗಾಗಿ ಕಟ್ಟಲು ಆರಂಭಿಸಿದರು. ಪೂರ್ಣಪ್ರಮತಿಯ ಈ ಮರಿಸೈನ್ಯವು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಮಟ್ಟದ ಖೋ ಖೋ ತಂಡವಾಗಿ ಹೊರಹೊಮ್ಮುವ ಭವರಸೆಯನ್ನು ಹೊತ್ತು ನಾವೆಲ್ಲ ಮನೆಗೆ ತೆರಳಿದೆವು.

 

Inter School Kho-Kho Competition “28th October 2013” Purnapramati organized the Inter school Kho-Kho competition on 28th October’2013 with a zeal to promote the game which has its origin from our country. It was a thrilling experience to see 15 teams participating from different schools. The day started with an Inauguration program. Wherein, all the players assembled in the ground with a hope to win and to prove their metal. All the players their respective coaches and P.T masters were given a warm traditional welcome by putting tilak on their forehead and by giving flowers. Then the chief guest Mrs. Anitha Reddy (national level Kho-Kho player), Mr. Umesh (director of sports, govt. college Yelahanka) and Hanumanthappa were welcomed by a grand salute by the purnapramatians. It followed with a flag hoisting and introduction of teams and officials to the guest. A welcome speech was given by Indumati akka (teacher purnapramati) and an invocation song on Kho-Kho game was sung by purnapramati children which was composed by our music teacher (Rajender anna). Anitha Reddy, Umesh and the captains of the teams played the Kho-kho game which marked the inauguration of the meet. Then it followed with the oath taking by all the players of all the schools. The chief guest also addressed the audience and players by sharing few tips on the game. Shashi anna the sports teacher of purnapramati announced the match time table and tournament instructions which followed with the vote of thanks.

In the closing ceremony the players assembled for the final play and the chief guest Mr.& Mrs. Ramu (national level Kho-Kho player), Mr. Prabhakaran (national level Kho- Kho player) and Mr. Sunder Raj shetty (participant in International sprint event 100 meters) were given a warm welcome by all. Then the game took its more thrilling and breath taking moment when purnapramati boys and girls team came in finals against Ratnagiri school. It was a moment to cherish and live with to see the zeal of both the teams to win. The match took many turning points but at last the trophy of the event was won by the Purnapramati team. We won the boys and girls finals and both the trophies came into the kitty of purnapramati after seeing this there was no boundry for happiness of parents, teachers, players and the students of purnapramati and all ran into the ground to hug and congratulate the winning stars of purnapramati. It was an overwhelming experience to see the prize distribution for winning and runner up teams. The day ended with vote of thanks and flag down ceremony. The day was over but the joy of winning can still be seen on the faces of all the purnapramatians………………..


For more photos click here

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.