Geetha Jayanti 2013

ಗೀತಾ ಜಯಂತಿ
ದಿನಾಂಕ: ೧೩ನೇ ಡಿಸೆಂಬರ್, ೨೦೧೩
ಸ್ಥಳ: ಪೂರ್ಣಪ್ರಮತಿ, ಪ್ರಾಥಮಿಕ ಶಾಲೆ, ಗಿರಿನಗರ

ಭಗವದ್ಗೀತೆ ಎಂಬುದು ಭಾರತೀಯರಿಗೆ ಒಂದು ಹೆಮ್ಮೆಯ ಗುರುತು. ಭಾರತೀಯರನ್ನು ಪ್ರಪಂಚದಾದ್ಯಂತ ಗೀತೆಯ ನಾಡಿನವರೆಂದು ಗೌರವಿಸುತ್ತಾರೆ. ಮಕ್ಕಳಿಗೆ ಬುದ್ಧಿಯನ್ನು ಚುರುಕುಗೊಳಿಸುವ, ಸಂಸ್ಕೃತಿಯ ಪರಿಚಯ ಮಾಡಿಸುವ, ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ, ಮುಂದಿನ ಅಧ್ಯಯನಕ್ಕೆ ಅಡಿಪಾಯವಾಗಿ ಗೀತೆಯನ್ನು ಹೇಳಿಕೊಡುವ ಸಂಪ್ರದಾಯ ಮೊದಲಿನಿಂದಲೂ ಭಾರತೀಯರಲ್ಲಿ ಬಂದಿದೆ. ಮನೆಮನೆಗಳಲ್ಲಿ ಇಂದಿಗೂ ಗೀತಾ ಪಾರಾಯಣ, ಅಧ್ಯಯನ ನಡೆಯುತ್ತಲೇ ಇರುತ್ತದೆ.

ಪೂರ್ಣಪ್ರಮತಿಯಲ್ಲಿ ಗೀತಾ ಅಧ್ಯಯನಕ್ಕೆ ಒಂದು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಕಂಠಪಾಠ, ಉಚ್ಚಾರಣೆಯ ಶುದ್ಧತೆ, ಸಂಸ್ಕೃತ ಕಲಿಕೆಗಳನ್ನು ಗೀತೆಯ ಮೂಲಕವೇ ಮಾಡಲಾಗುವುದು. ೨೦೧೩-೧೪ ನೇ ಸಾಲಿನಲ್ಲಿ ಮೊದಲ ಬಾರಿಗೆ ಗೀತೆಯ ೧೮ ಅಧ್ಯಾಯಗಳ ಪಾಠವು ಸಂಪನ್ನವಾಗಿದೆ. ಈ ಸಂಭ್ರಮದಲ್ಲಿ ಭಾಗಿಯಾದವರಲ್ಲಿ ಶಾಲೆಯ ೬ನೇ ತರಗತಿಯ ಮಕ್ಕಳದ್ದೇ ಮೊದಲ ತಂಡ. ಇವರು ಕಳೆದ ೩ ವರ್ಷಗಳಿಂದ ಗೀತೆಯನ್ನು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ವಿಷಯದಲ್ಲಿ ಹೆಚ್ಚಿನ ಅಧ್ಯಯನವೂ ಮುಂದುವರೆಯಲಿದೆ. ಈ ಎಲ್ಲಾ ಚಟುವಟಿಕೆಗಳಿಗೆ ಶುಭ ಹಾರೈಸಲು ಮತ್ತು ಮುಂದಿನ ಯೋಜನೆಗಳಿಗೆ ಚಾಲನೆ ನೀಡಲು ಗೀತಾ ಜಯಂತಿಯನ್ನು ಆಚರಿಸಲಾಯಿತು.

ಗೀತೆಯ ವಿಶೇಷ ಅಧ್ಯಯನ ನಡೆಸಿರುವ ಹಿರಿಯ ಸಂಸ್ಕೃತ ವಿದ್ವಾಂಸರು ಮಕ್ಕಳ ಅಭ್ಯಾಸಕ್ಕೆ ಪುಷ್ಠಿಯನ್ನು ಕೊಡಲು ಪರೀಕ್ಷಕರಾಗಿ ಆಗಮಿಸಿದ್ದರು. ಪ್ರೊ.ಡಿ.ಪ್ರಹ್ಲಾದಾಚಾರ್ಯರು (ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯದ ಹಿಂದಿನ ಉಪಕುಲಪತಿಗಳು), ವಿ.ಕೆ.ರಾಮಣ್ಣ(ಪ್ರಜ್ಞಾಪ್ರತಿಷ್ಠಾನ ವೇದಪಾಠಶಾಲೆಯ ಮುಖ್ಯಸ್ಥರು), ಸೂರ್ಯನಾರಾಯಣ (ವಿಜ್ಞಾನಿ), ಸಂಪತ್ ಕುಮಾರ್ (ಪ್ರಾಚಾರ್ಯರು, ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು), ಕೃಶ್ಣರಾಜಭಟ್.ಕೆ.ಆರ್ (ಸಂಸ್ಕೃತ ಅಧ್ಯಾಪಕರು, ಪಿ.ಇ.ಎಸ್ ಪದವಿಪೂರ್ವ ವಿದ್ಯಾಸಂಸ್ಥೆ), ವಿಕಾಸ ಸವಾಯಿ (ಸಂಸ್ಕೃತ ಅಧ್ಯಾಪಕರು, ಶಿವಮೊಗ್ಗ), ವಿಜಯಸಿಂಹಾಚಾರ್ಯರು (ನಿರ್ದೇಶಕರು, ಸಂಸ್ಕೃತ ವಿದ್ವಾಂಸರು, ಮಹಾ ಅಕಾಡೆಮಿ, ಬೆಂಗಳೂರು) ಮುಖ್ಯ ಅತಿಥಿಗಳು ಮತ್ತು ಪರೀಕ್ಷಕರೂ ಆಗಿದ್ದರು. ವೆಂಕಟರೆಡ್ಡಿಯವರು (ಮುಖ್ಯಸ್ಥರು, ಸನಾತನ ಪ್ರಕಾಶನ, ಬೆಂಗಳೂರು) ತಾಡವಾಲೆಯಲ್ಲಿ ಪ್ರಾಚೀನ ಗ್ರಂಥಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರು ಗೀತಾಮಂಗಳ(ಕಂಠಪಾಠ) ಸಮಯದಲ್ಲಿ ೧೮ ಅಧ್ಯಾಯಗಳನ್ನು ಹೇಳುವ ವಿದ್ಯಾರ್ಥಿಗೆ ಕೊಡುಗೆಯಾಗಿ ನೀಡುವ ಭಗದ್ಗೀತೆಯ ತಾಡವಾಲೆಯನ್ನು ಯಾವುದೇ ಹಣದ ಅಪೇಕ್ಷೆ ಇಲ್ಲದೆ ಸಿದ್ಧಪಡಿಸಿಕೊಡುವ ಮಹತ್ ಕಾರ್ಯವನ್ನು ಮಾಡಿದ್ದಾರೆ.

ಬೆಳಗ್ಗೆ ೮.೪೦ ರಿಂದ ಆರಂಭವಾದ ಪರೀಕ್ಷೆಯು ೧೦.೩೦ ರವರೆಗೆ ನಡೆಯಿತು. ಎಂಟು ತಂಡಗಳಾಗಿ ಮಕ್ಕಳು ೮ ವಿದ್ವಾಂಸರ ಬಳಿ ಪರೀಕ್ಷೆ ಕೊಟ್ಟರು. ಮಕ್ಕಳು ಕಲಿತಿರುವ ಅಧ್ಯಾಯಗಳಲ್ಲಿ ಪರೀಕ್ಷಕರು ಹೇಳಿದ ಶ್ಲೋಕವನ್ನು ಪೂರ್ಣಗೊಳಿಸುವುದು ಕ್ರಮವಾಗಿತ್ತು. ಮಕ್ಕಳ ಉಚ್ಚಾರಣೆ, ಕಂಠಪಾಠ, ನಿರರ್ಗಳತೆ, ಆತ್ಮವಿಶ್ವಾಸವನ್ನು ಗಮನಿಸಿ ಪರೀಕ್ಷಕರು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. ದಿನದ ಸಂಭ್ರಮಕ್ಕೆ ಗರಿ ಇಟ್ಟಂತೆ ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ವಿಶ್ವಪ್ರಸನ್ನ ತೀರ್ಥರು ಆಗಮಿಸಿದರು. ಸ್ವಾಮಿಗಳ ಸಮ್ಮುಖದಲ್ಲಿ ಗೀತೆಯ ಅಂತ್ಯಾಕ್ಷರಿಯನ್ನು ನಡೆಸಲಾಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಸ್ವಾಮಿಗಳನ್ನು ಮತ್ತು ಬಂದಿದ್ದ ಇತರ ವಿದ್ವಾಂಸರನ್ನು ಆಶ್ಚರ್ಯಚಕಿತಗೊಳಿಸಿದರು. ಕೇಳಿದ ಶ್ಲೋಕವನ್ನು ತಡವರಿಸದೆ, ಪುನರಾವರ್ತನೆ ಆಗದೆ ಸರಾಗವಾಗಿ ಹೇಳುವ ರೀತಿಗೆ ಎಲ್ಲರೂ ತಲೆದೂಗಿದರು. ೧೮ ಅಧ್ಯಾಯಗಳನ್ನು ಕಂಠಪಾಠ ಮಾಡಿರುವ ಮೇಧಾ (೬ನೇ ತರಗತಿ) ಸಭೆಯಲ್ಲಿ ಸ್ವಾಮಿಗಳು ಕೇಳಿದ ಅಧ್ಯಾಯದ ಶ್ಲೋಕಗಳನ್ನು ಪೂರ್ಣಗೊಳಿಸುವುದು ಮುಂದಿನ ಕಾರ್ಯಕ್ರಮವಾಗಿತ್ತು. ಮುಂದಿನ ಮಾರ್ಚ್ ತಿಂಗಳಷ್ಟರಲ್ಲಿ ಪಾಠವಾಗಿರುವ ಎಲ್ಲಾ ವಿದ್ಯಾರ್ಥಿಗಳು ೧೮ ಅಧ್ಯಾಯಗಳನ್ನು ಕಲಿತು ಸ್ವಾಮಿಗಳನ್ನು ಮತ್ತೆ ಪರೀಕ್ಷಕರಾಗಿ ಕರೆಯಿಸುವ ಭರವಸೆಯನ್ನು ಇತ್ತರು. ಇದೇ ಸಂದರ್ಭದಲ್ಲಿ ೬ನೇ ತರಗತಿಯ ಮಕ್ಕಳಿಗೆ ಗೀತಾದೀಕ್ಷೆಯನ್ನು ಕೊಡಲಾಯಿತು. ಭಾರತದ ಪರಂಪರೆಯನ್ನು ಉಳಿಸುವ ಮೂಲಸತ್ವದ ರಕ್ಷಣೆ ಮತ್ತು ಜೀವನದುದ್ದಕ್ಕೂ ಉಳಿಸುವ, ಬೆಳೆಸುವ ದೀಕ್ಷೆಯನ್ನು ಮಕ್ಕಳಿಗೆ ನೀಡಲಾಯಿತು. ಮುಂದಿನ ಜನಾಂಗಕ್ಕೆ ನಾವು ಕೊಡಬಹುದಾದ ಬಹುದೊಡ್ಡ ಆಸ್ತಿ ಮತ್ತು ಕರ್ತವ್ಯ ಪ್ರಜ್ಞೆ ಇದಾಗಿದೆ.

ಅತಿಥಿಗಳು ಹೃದಯತುಂಬಿ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಅವರ ಮಾತಿನಲ್ಲೇ ಕೇಳೋಣ:
ಪ್ರೊ.ಡಿ.ಪ್ರಹ್ಲಾದಾಚಾರ್ಯರು
ಗೀತೆಯ ಪ್ರಯೋಜನ ಈ ವಯಸ್ಸಿಗೆ ತಿಳಿಯದಿದ್ದರೂ ಮುಂದೆ ಅದರ ಮಹತ್ವ ತಿಳಿಯುವುದು. ಒಂದು ಉದಾಹರಣೆ ಕೊಡುತ್ತೇನೆ: ಕೆಲವು ಮಕ್ಕಳು ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಠ ಮಾಡಿ ತಿನ್ನುವವರು ಇರುತ್ತಾರೆ. ಏನು ಕೊಟ್ಟರೂ ತಿನ್ನದೇ ಇರುವವರು ಇರುತ್ತಾರೆ. ಹಾಗೆ ಹೆಚ್ಚು ಕಾಲ ಮಲಗುವವರು ಇರುತ್ತಾರೆ, ನಿದ್ದೆ ಮಾಡದವರು ಇರುತ್ತಾರೆ. ಇಂತಹವರಿಗೆ ಗೀತೆ ಒಂದು ಕಿವಿ ಮಾತು ಹೇಳುತ್ತದೆ ‘ನಾತ್ಯ’ ತುಂಬಾ ತಿಂದರೂ ಕಷ್ಟ, ತಿನ್ನದೇ ಇದ್ದರೂ ಕಷ್ಟ. ಎಷ್ಟು ಬೇಕೋ ಅಷ್ಟು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯಬಹುದು. ಸ್ವಾಮಿಗಳು ನಿಮಗೆಲ್ಲರಿಗೂ ಅಂತಹ ಅನುಗ್ರಹ ಮಾಡಲಿ.

ಟಿ.ಆರ್. ಸೂರ್ಯನಾರಾಯಣ
ಮಕ್ಕಳು ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಅದನ್ನು ಕಲಿಸಿರುವ ಅಧ್ಯಾಪಕರಿಗೆ ಅನಂತ ಧನ್ಯವಾದಗಳು

ವಿ.ಕೆ.ರಾಮಣ್ಣ
ನಿಮ್ಮ ಪ್ರಯತ್ನ ಅಪರೂಪದಲ್ಲಿ ಅಪರೂಪದ್ದು. ಎಲ್ಲಾ ಶಾಲೆಗಳಲ್ಲಿ ಇಂತಹ ಅವಕಾಶವಿರುವುದಿಲ್ಲ. ಇಷ್ಟು ಮಕ್ಕಳಿಗೆ ಗೀತೆ ಹೇಳಿಕೊಟ್ಟಿರುವುದು ಮಹತ್ವದ ವಿಷಯ. ಮಕ್ಕಳಿಗೆ ಈ ಹಂತದಲ್ಲಿ ಗೀತೆ ಹೇಳಿಕೊಟ್ಟರೆ ಜೀವನ ಪರ್ಯಂತ ಅದು ಉಳಿಯುತ್ತದೆ. ಇಂತಹ ಪ್ರಯತ್ನ ಮಾಡಿರುವ ಅಧ್ಯಾಪಕರಿಗೆ ನಾನು ಅನಂತ ಧನ್ಯವಾದ ಹೇಳುತ್ತೇನೆ. ನಾವೂ ವೇದಪಾಠ ಶಾಲೆ ನಡೆಸುತ್ತೇವೆ. ಎಲ್ಲವನ್ನೂ ಉಚಿತವಾಗಿ ಕೊಟ್ಟರೂ ಕಲಿಯಲು ಬರುವವರೇ ಇಲ್ಲ. ಅವರದೇ ಆದ ಅನೇಕ ಕಾರಣಗಳಿಂದ ಜನರು ಕಲಿಯುವ ಆಸಕ್ತಿಯನ್ನೇ ಹೊಂದಿರುವುದಿಲ್ಲ. ಇದೊಂದು ದೊಡ್ಡ ದುರಂತ. ಹಾಗದರೆ ನಮ್ಮ ಸಂಸ್ಕೃತಿ ಉಳಿಯುವುದಾದರೂ ಹೇಗೆ? ಎಲ್ಲಾದರೂ ಒಂದು ಕಡೆ ಪ್ರಯತ್ನ ನಡೆಯಲೇ ಬೇಕು. ಅದನ್ನು ಈ ಶಾಲೆಯಲ್ಲಿ ಬಹಳ ಚೆನ್ನಾಗಿ ಮಾಡುತ್ತಿದ್ದೀರಿ.

ಸಂಪತ್ ಕುಮಾರ್
ಮಕ್ಕಳು ಮುದ್ದು ಮುದ್ದಾಗಿ ಗೀತೆಯ ಶ್ಲೋಕಗಳನ್ನು ಹೇಳಿದಾಗ ಕಣ್ಣಲ್ಲಿ ನೀರು ತುಂಬಿತು. ಭಗವದ್ಗೀತೆಯಲ್ಲಿ ಹೇಳುವಂತೆ ಯಾವಾಗಲೂ ನಮ್ಮ ಕೆಲಸವನ್ನು ನಾವು ಮಾಡುತ್ತಲೇ ಇರಬೇಕು. ಸೋಮಾರಿಗಳಾಗಬಾರದು. ಇಂದಿನ ಹಲವು ಮಕ್ಕಳಿಗೆ ಮಹಾಭಾರತದಲ್ಲಿ ಎಷ್ಟು ಪರ್ವಗಳು ತಿಳಿದಿರುವುದಿಲ್ಲ. ಬೆಳೆದವರಿಗೆ ಹೇಳಿಕೊಡುವುದು ಸುಲಭ ಆದರೆ ಮಕ್ಕಳಿಗೆ ಹೇಳಿಕೊಡಲು ಬಹಳ ಸಹನೆ ಬೇಕು. ನಾನು ಬಂದಾಗಿನಿಂದ ಗಮನಿಸಿದೆ. ಮಕ್ಕಳನ್ನು ಹೀಗೆ ಪ್ರೀತಿಯಿಂದ ಸಂಬೋಧನೆ ಮಾಡುತ್ತಾ ಸಹನೆಯಿಂದ ಇರುವುದನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಶಸ್ತಿ ಬಂದವರು ಮಾತ್ರ ಜಾಣರಲ್ಲ, ಅದೊಂದು ಮಾರ್ಗದರ್ಶನ ಅಷ್ಟೆ. ಎಲ್ಲರೂ ಗೀತೆಯನ್ನು ಚೆನ್ನಾಗಿ ಕಲಿಯಿರಿ, ಮುಂದೆ ಶ್ರೀಗಳ ಅನುಗ್ರಹದಿಂದ ಅದರ ಅರ್ಥವೂ ನಿಮಗೆ ಆಗುವುದು.

ಸುಯಮೀಂದ್ರಾಚಾರ್ಯ
ಸಂಸ್ಕೃತಿಯನ್ನು ಉಳಿಸುವ ಯಾವುದೇ ದೊಡ್ಡ ಯೋಜನೆ, ಅದನ್ನು ಕಾರ್ಯಗತಗೊಳಿಸುವಿಕೆ, ಬೆಳೆಸುವಿಕೆಯ ಹಂತಗಳನ್ನು ಗಮನಿಸುವುದಾದರೆ, ಈ ತರಹದ ಶಾಲೆಯನ್ನು ಮಾಡಬೇಕೆಂದು ಯೋಜಿಸಿದ ಯುವಮಿತ್ರರಿಗೂ, ಅದನ್ನು ಕಾರ್ಯಗತಗೊಳಿಸುತ್ತಿರುವ ಅಧ್ಯಾಪಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದರ ಉಪಯೋಗವನ್ನು ಸಮರ್ಪಕ ರೀತಿಯಲ್ಲಿ ಪಡೆಯುತ್ತಿರುವ ಮಕ್ಕಳಿಗೂ ಅಭಿನಂದನೆಗಳನ್ನು ಉತ್ತಮ ಭವಿಷ್ಯವನ್ನು ಆಶಿಸುತ್ತೇನೆ.

ವೆಂಕಟ ರೆಡ್ಡಿ
೨೦೦೦ ವರ್ಷಗಳ ಹಿಂದೆ ಗುರುಕುಲಗಳು ಹೇಗಿದ್ದವು ಎಂಬ ಅನುಭವ ಕೊಟ್ಟದ್ದಕ್ಕಾಗಿ ಈ ಶಾಲೆಗೆ ಅಭಿನಂದನೆಗಳು. ಅಂತ್ಯಾಕ್ಷರಿ ನಡೆಯುವಾಗ ಬಹುಶಃ ಎಲ್ಲರೂ ತಯಾರಿರುತ್ತಿದ್ದರು. ಬಹಳ ಸಂತೋಷವಾಯಿತು. ಉತ್ತರ ಭಾರತದಲ್ಲಿ ನಮ್ಮ ಸಂಸ್ಕೃತಿ ನಶಿಸುತ್ತಿದೆ. ದಕ್ಷಿಣ ಭಾರತದಲ್ಲಿ ಉಳಿದುಕೊಂಡಿದೆ, ಬೆಳೆಸುವ ಪ್ರಯತ್ನಗಳು ನಡೆದಿವೆ. ಉತ್ತರ ಭಾರತದಲ್ಲೂ ಪೂರ್ಣಪ್ರಮತಿಯಂತಹ ಶಾಲೆಯನ್ನು ಸ್ಥಾಪಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಸ್ವಾಮಿಗಳ ಹಿತವಚನ
ಕಲಿಯಲು ಏನು ಬೇಕು? ಶಾಲೆಯ ಹೆಸರೇನು? ಪೂರ್ಣಪ್ರಮತಿ. ಪೂರ್ಣವಾಗಿ ಕಲಿತರೆ ನೀವು ಪೂರ್ಣಪ್ರಮತಿಯ ಮಕ್ಕಳಾಗುತ್ತೀರಿ. ಪೂರ್ಣಕಲಿಯಲು ಏನು ಬೇಕು? ಗೀತೆಯಲ್ಲಿ ಶ್ರದ್ಧಾವಾನ್ ಲಭತೇ ಜ್ಞಾನಮ್ ಎಂದು ಹೇಳಿದ್ದಾರೆ. ಪೂರ್ಣಕಲಿಕೆಗೆ ಶ್ರದ್ಧೆ ಬೇಕು. ಶ್ರದ್ಧೆಯಿಂದ ಕಲಿಯಿರಿ, ಈ ಬಾರಿ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಕೊಟ್ಟಿದ್ದಾರೆ. ಮುಂದಿನ ಬಾರಿ ಬಂದಾಗ ಎಲ್ಲರೂ ಪಾಸಾಗಿರಿ ಮತ್ತು ನಿಮ್ಮ ಅಧ್ಯಾಪಕರನ್ನು ಪಾಸು ಮಾಡಿರಿ. ಭಕ್ತಿಯಿಂದ ದೇವರನ್ನು ಭಜಿಸಿದವರ ಯೋಗಕ್ಷೇಮವನ್ನು ದೇವರೇ ವಹಿಸಿಕೊಳ್ಳುತ್ತಾನೆ. ಆದ್ದರಿಂದ ನೀವೆಲ್ಲರೂ ಶ್ರದ್ಧೆಯಿಂದ ದೇವರನ್ನು ಭಜಿಸಿರಿ ಎಂದು ಬೋಧಿಸಿದರು.
 

For more photos click here

ಪ್ರಾಂಶುಪಾಲರು ಅನಾರೋಗ್ಯದ ಕಾರಣದಿಂದ ಹಲವು ದಿನಗಳ ಕಾಲ ಶಾಲೆಗೆ ಬರಲು ಸಾಧ್ಯಗದೆ ಇದ್ದರೂ ಮಕ್ಕಳು ಗೀತಾ ಪರೀಕ್ಷೆಯನ್ನು ಕೊಡುವ ಸಂದರ್ಭವನ್ನು ಕಳೆದುಕೊಳ್ಳಲು ಬಯಸದೆ ಸಭೆಯಲ್ಲಿ ಭಾಗವಹಿಸಿದ್ದರು. ಹತ್ತು ಹಲವು ಕಾರ್ಯಕ್ರಮಗಳ ನಡುವೆಯೂ ಮಕ್ಕಳನ್ನು ಹಾರೈಸುವ ಸಲುವಾಗಿ ಬಂದಿದ್ದ ಗಣ್ಯರಿಗೆಲ್ಲಾ ಧನ್ಯವಾದಗಳನ್ನು ಹೇಳುತ್ತಾ ಸಭೆಗೆ ತಾತ್ಕಾಲಿಕವಾಗಿ ಮಂಗಳ ಮಾಡಲಾಯಿತು. ಗೀತೆಯನ್ನು ಅಧ್ಯಯನ ಮಾಡಿ ಅದರಲ್ಲಿ ಹೇಳಿದಂತೆ ನಡೆಯುವ ಹಿರಿಯರ, ಅನುಭವಿಗಳ ಮುಂದೆ ಪರೀಕ್ಷೆ ನೀಡುವುದು ಎಂದರೆ ಪ್ರತಿಭಾ ಪ್ರದರ್ಶನವಲ್ಲ, ಬದಲಾಗಿ ಅವರ ಆಶೀರ್ವಾದಕ್ಕೆ ಪಾತ್ರರಾಗುವ ಸದವಕಾಶ. ಇಂತಹ ಸದವಕಾಶಗಳನ್ನು ಮಕ್ಕಳಿಗೆ ದಕ್ಕಿಸಿಕೊಡುವುದೇ  ಪೂರ್ಣಪ್ರಮತಿಯ ಪ್ರಯತ್ನ.

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.