Bhageerati Jayanti – 2013

After a yearlong effort of understanding the River as one of the most necessary life sustainers , this year we have proceeded with our thematic learning  focusing on the inter reliance of lives in the world. And on this theme weekly classes are being conducted in the campus. But how can anybody appreciate the variety of lives, their habitats and network without experiencing the least contact with them? Hence our field trip to Tippagondanahalli, a place where the rivers Kumudvati and Arkavati meet which is a habit for a large variety of birds. Just adjacent to the meeting point of the two rivers, the flow is blocked by Chamrajasagar reservoir built by the British during 1933 under the supervision of Sir. M Vishveshvaraih to supply piped water to their establishment and other parts of Bangalore. The reservoir has supplied about 35 million liters of water per day to Bangalore for more than thirty years and hence it is also a place of historical significance to Bangalorians. However water supply from the reservoir to any place has stopped and the reservoir remains dry or holds little water during most months.

 

Two bird watchers Mr. Srinivasa Rao and Mr Ullas Anand accompanied us as guides. As we began to stroll along the paths amidst plantation, almost once in every two footsteps, they spotted a species of a plant or an insect or a bird and explained it’s attributes. Some of the aspects that came to light in their conversation with children are here:

  • Etymology of the word Tamarind – When the Arabs visited India and saw Tamarind trees unfamiliar to them, the fruit part appeared similar to dates which they call ‘Tamarai’. So they called it ‘Tamarai-Hind’- The Dates of India. Later, the British modified it as Tamarind to their convenience.
  •  Sandlewood tree – In any grown up tree there are two kinds of tissues- The Xylem and The Phloem. Xylem is marketed as hard wood after the tissue dies and sandlewood tree requires a period of 20 years to develop fragrance.
  • Anthill- Anthills are not made by snakes which live in them. They are made by Moths(insects that are attracted to light). They are social animals which categorize as queens- the individuals that lay eggs, workers- those which work for food and soldiers- those which work for protection. They collect leaves, harvest fungi on them and then feed on them. When these insects leave the place, snakes, which are cold blooded take shelter in them to protect themselves from the sun. The anthills being mud structures act as natural air conditioners(convention cycle- hot air goes up and cold air comes down) and are pleasant to snakes. Are they spacious enough for a group of snakes to live? Yes. A quite old ant hill is about 25 to 30 feet deep below the ground and the volume of an ant hill is directly proportional to its age.
  • Emigrant butterfly – They migrate when it rains.
  • Bonnet monkey – These are monkeys whose head look like a car bonnet and are commonly found in South India. In the northern parts of India the commonly found monkey kind is the Rhesus monkey. Humans must owe a lot to those monkeys because they are the first ones to alert scientists about the presence of Rh factor in human blood neglecting which blood transfusions could become fatal. Rh factor means Rhesus factor.
  • Some more introductions – Basavana pada or Bahunia or Kanchuvala tree whose leaves look like Oxe’s hooves. Plumeria or Devakanigile or Temple tree popularly found in temple premises.(Old Plumeria trees can be found in Virupaksha temple at Hampi). Epiphytes are plants that grow upon other plants non-paracitically( without drawing food out of them). Insects are six legged and arachnids are eight legged. They are together called arthropods.

 

For more photos please click here

Oxygen reduction, algae bloom, toxicity, increased temperature make water hazardous to life and water pollution is the most common crisis nowadays. So, to ensure a healthy eco-system the society needs to learn to check these parameters in water. With this in mind, we had organized a water testing session for the day. Dr Iqbal and Dr Deepesh – scientists from CPCB demonstrated a few tests for chemical and physical parameters of water purity. The details are given below –

Water was collected from the lake(Reservoir) Children observed the color and odor of the collected water. A pH paper was dipped in the water and children compared the color of the pH paper with a color code. A test for Turbidity(Relative clarity of water) was conducted using Secchi disc(A black and white disc) method- clearer the visibility of the disc inside, purer the water. Children titrated and found out the content of dissolved oxygen in the water. They learnt about the hardness of water and titrated the water against EDTA solution using Erichrome black – T – indicator.

We then visited Spoorthy Vana situated at an extent of about half a kilometer from the place. It is a forest looked after by a group of committed horticulturists led by Mr Eshwar Prasad. Children enacted three short plays – one conveying the commitment of all animals to their activities, another on the life style of forest dwellers and the last one on chipko movement – a non violent resistance of the people through hugging trees to protect them from being felled. Children planted about a dozen of trees in the Spoorthy vana before leaving the place.

Our field trip ended with a very creative game modeling the birth of aquatic animals like turtles, their reaching to the water from the place where they hatch and the life threats they face on their way to water.

Thus on Bhagirathi Jayanthi Purnapramati successfully completed its first field trip of the year relevant to the year’s theme jivo jivasya jivanam  and also to that of the previous year jivanam jalam uchyate.

ಪೂರ್ಣಪ್ರಮತಿಯಲ್ಲಿಂದು ಭಾಗೀರಥಿ ಜಯಂತಿ…. ಮಕ್ಕಳೊಂದಿಗೆ ಹೆಜ್ಜೆ ಹಾಕುತ್ತಾ…

ಇಂದು ಜೇಷ್ಠ ಮಾಸ, ಹಸ್ತ ನಕ್ಷತ್ರ, ನವಮಿ ತಿಥಿ…. ನದಿಗಳು ತಮಗೊಂದು ದಿನ, ಜಯಂತಿ ಮಾಡಿರೆಂದು ಬೇಡಿಕೊಳ್ಳುವುದಿಲ್ಲ. ಆದರೆ ಅವುಗಳ ಮೂಲಕ ಮಕ್ಕಳಿಗೆ ಆ ದಿನದ ಮಹತ್ವ, ಹಿನ್ನಲೆ, ಸ್ಮರಣೀಯರ ಬಗ್ಗೆ ಜಾಗೃತಿಯನ್ನು ಮೂಡಿಸುವುದು ನಮ್ಮ ಭಾಗೀರಥಿ ಜಯಂತಿಯ ಉದ್ದೇಶ. ಭಗೀರಥನಿಗೆ ಗಂಗೆಯನ್ನು ಭೂಮಿಗೆ ತರಬೇಕಿತ್ತು, ದೃಢಚಿತ್ತನಾಗಿ ಬೇಡಿದ. ಭೂಮಿಗೆ ಬಂದ ಗಂಗೆಯನ್ನು ರಕ್ಷಿಸಿಕೊಳ್ಳಲು ದೃಢಮನಸ್ಕರಾಗಿ ದುಡಿಯುವ ಹೊಣೆ ನಮ್ಮದು. ಅದಕ್ಕಾಗಿ ಈ ಭಾಗೀರಥಿ ಜಯಂತಿ.

ಮಕ್ಕಳಿಗೆ ಕಳೆದ ಭಾಗೀರಥಿ ಜಯಂತಿಯಂದು ಕುಮುದ್ವತಿಯ ಜನ್ಮಸ್ಥಳವನ್ನು ತೋರಿಸಲಾಗಿತ್ತು. ಇಂದು ಅರ್ಕಾವತಿಗೆ ಸೇರುವ ತಾಣವನ್ನು ತೋರಿಸುವ ಇಚ್ಚೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆ ತಾಲ್ಲೂಕಿನ ತಿಪ್ಪಗೊಂಡನ ಹಳ್ಳಿಕೆರೆಗೆ ಬೇಟಿನೀಡಲಾಯಿತು. ಮಾಗಡಿ ರಸ್ತೆ, ಜೋಗೇನ ಹಳ್ಳಿ ಮಾರ್ಗವಾಗಿ ಸಾಗಿದರೆ ಬೆಂಗಳೂರು ನಗರದಿಂದ ಕೇವಲ ಒಂದು ಗಂಟೆಯ ಸಮಯದಲ್ಲಿ ತಿಪ್ಪಗೊಂಡನ ಹಳ್ಳಿ ಕೆರೆಯನ್ನು ಮುಟ್ಟಬಹುದು. ೧೯೩೩ ರಿಂದ ೧೯೭೦ ರವರೆಗೆ ಬೆಂಗಳೂರಿನ ಜನರಿಗೆ ಕುಡಿಯಲು ನೀರುಣಿಸಿದ್ದ ತಿಪ್ಪಗೊಂಡನ ಹಳ್ಳಿ ಕೆರೆಯು ಇದೀಗ ಬೆಂಗಳೂರಿನವರ ಅತಿಯಾದ ದಾಹವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ೭.೪೦ಕ್ಕೆ ನಾವೆಲ್ಲರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯು ನಿರ್ವಹಿಸುತ್ತಿರುವ ಚಾಮರಾಜ ಸಾಗರ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ನ್ನು ತಲುಪಿದೆವು. ಪರಿವೀಕ್ಷಣ ಭವನದಲ್ಲಿ ಈಶ್ವರ್ ಪ್ರಸಾದರು ನಮ್ಮನ್ನು ಎದುರುಗೊಂಡು ವಿವರಗಳನ್ನು ನೀಡುತ್ತಾ ಮುಂದುವರೆದರು.

ಸಮುದ್ರಮಟ್ಟಕ್ಕಿಂತ ೨೫೭೦ ಅಡಿ ಎತ್ತರದಲ್ಲಿರುವ ಇದು ಕಾವೇರಿ ಜಲಾನಯನ ಪ್ರದೇಶವಾಗಿದೆ. ವಿಶ್ವೇಶ್ವರಯ್ಯನವರ ವೈಜ್ಞಾನಿಕ, ಕ್ರಮಬದ್ಧವಾದ ಅಣೆಕಟ್ಟಿನ ಯೋಜನೆ ನೀರಿನ ಸಂಗ್ರಹಣೆಗೆ ಇಂದಿಗೂ ಸಹಕಾರಿಯಾಗಿದೆ. ಇದರ ಒಟ್ಟು ಶೇಕರಣ ಸಾಮರ್ಥ್ಯ ೨೫೪೭ ಅಡಿ. ೪ ಪ್ರಮುಖ ತೂಬುಗಳಿವೆ. ೧೯೩೩ ರಲ್ಲಿ ಬೆಂಗಳೂರಿಗೆ ನೀರನ್ನು ತರುವ ಯೋಚನೆ ಮಾಡಿದಾಗ ಹೇಮಾವತಿ, ಕಾವೇರಿ ನದಿಗಿಂತ ಸುಲಭವಾಗಿ ನೀರನ್ನು ಒದಗಿಸಲು ಮುಂದಾದ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಸಂಗಮವಾದ ಇದೇ ತಿಪ್ಪಗೊಂಡನ ಹಳ್ಳಿ ಕೆರೆ.

ಮುಂದೆ ನಾವೆಲ್ಲರು ಈ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು, ಪಕ್ಷಿಗಳನ್ನು ವೀಕ್ಷಿಸುತ್ತಾ ಅಣೆಕಟ್ಟು ಮಾರ್ಗವಾಗಿ ಮುಂದುವರೆದೆವು. ಜಲಶುದ್ಧೀಕರಣ ಭವನವನ್ನು ಕಂಡೆವು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಂದಂತಹ ವಿಜ್ಞಾನಿಗಳು ನಮ್ಮ ಮಕ್ಕಳಿಗೆ ಕೆರೆಯ ತೀರದಲ್ಲಿ ನೀರಿನ ಪರೀಕ್ಷೆಯನ್ನು ಹೇಗೆ ನಡೆಸಬಹುದೆಂಬ ಪ್ರಯೋಗವನ್ನು ಮಾಡಿ ತೋರಿಸಿದರು. ಮಕ್ಕಳಿಗೆ ಅರ್ಥವಾಗುವ ಸುಲಭ ಭಾಷೆಯಲ್ಲಿ ವಿವರಿಸುತ್ತಾ ಪ್ರಯೋಗವನ್ನು ಮಾಡಿ ತೋರಿಸಿದರು. ಎಲ್ಲಾ ವಿವರಗಳನ್ನು ಒಳಗೊಂಡ ಕೈಪಿಡಿಯನ್ನು ಮತ್ತು ನೀರಿನ ಪರೀಕ್ಷೆಯ ಸಲಕರಣೆಗಳ ಪೆಟ್ಟಿಗೆಯನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ. ನೀರಿನ ಪರೀಕ್ಷೆಯಿಂದ ನದಿಯ ಉದ್ದ, ಆಳ, ಮಣ್ಣಿನ ಗುಣಗಳನ್ನು ತಿಳಿಯಬಹುದು. ಪರೀಕ್ಷೆಗಾಗಿ ಬಳಸುವ ನೀರು ನದಿಯ ಮಧ್ಯಭಾಗದ್ದಾಗಿದ್ದರೆ ಒಳಿತು.(ಆಸಕ್ತರು ವಿವರಗಳನ್ನು ಕೈಪಿಡಯಲ್ಲಿ ಓದಿ ತಿಳಿಯಬಹುದು, ಶಾಲೆಯಲ್ಲಿ ಲಭ್ಯವಿದೆ) ಇವರ ಪ್ರಕಾರ ಮೂರು ಮುಖ್ಯ ಕ್ಷೇತ್ರಗಳಲ್ಲಿ ನೀರಿನ ಪರೀಕ್ಷೆಯನ್ನು ನಡೆಸಲಾಗುವುದು. ಅವು:
1. Physical parameters

– Colour
– Odour
– Temperature
– Turbidity
– Suspended Solids

2. Chemical Parameters

– pH
– Alkalinity
– Dissolved Oxygen
– Hardness
– Calcium
– Fluride
– Nitrate
– Ammonia
– Phosphate
– Total Iron
– Residual Chlorine

3. Biological Parameters
– Estimation of Total Coliform
– Estimataion of Primary Productivity
– Estimation of Water Quality usig Benthic Macro-invertebrates (Benthic Animals)

ಇವುಗಳ ಪರೀಕ್ಷೆಯನ್ನು ನಡೆಸಿದ ನಂತರ ಬಳಕೆಗೆ ಸೂಕ್ತವೆಂದು ತಿಳಿಯಲಾಗುವುದು ಎಂಬ ಅಂಶವನ್ನು ವಿವರಿಸಿದರು. ಮಕ್ಕಳು ಪುಟ್ಟ ವಿಜ್ಞಾನಿಗಳಂತೆ ಇನ್ನು ಮುಂದೆ ಶಾಲೆಯಲ್ಲಿ, ಮನೆಯಲ್ಲಿ ನೀರಿನ ಪರೀಕ್ಷೆ ನಡೆಸಿಯೇ ಬಳಸುವುದಾಗಿ ಪಣತೊಟ್ಟರು.

ಅಲ್ಲಿಂದ ಸ್ಫೂರ್ತಿವನಕ್ಕೆ ನಮ್ಮ ತಂಡ ನಡೆಯಿತು. ಈಶ್ವರ್ ಪ್ರಸಾದರು ಸೀಮಾರೂಪ, ಹಿಪ್ಪೆ, ನಾಯಿ ನೇರಳೆ- ಮಹಾಘನಿ (ದಕ್ಷಿಣ ಅಮೇರಿಕದಿಂದ ಬಂದ ತಳಿಗಳು), ಝಂ ನೇರಳೆ, ಗೊಣ್ಣೆ ಹಣ್ಣಿನ ಮರ, ಹಳೆ ಮತ್ತಿ, ಮರಾಲೆ, ಬೇಲ, ಮುತ್ತುಗದ ಮರ, ಛತ್ರಿಮರ, ಬಾಗೇಮರ, ಹೊಂಗೆಮರ, ತಾರೆಮರ ಮತ್ತು ಮರಗಳಲ್ಲೇ ಭೀಷ್ಮ ಪಿತಾಮಹನೆಂಬ ಹೆಸರು ಪಡೆದಿರುವ ಹುಣಸೆ ಮರದ ಸಸಿಗಳನ್ನು ಪರಿಚಯಿಸಿ ಅವುಗಳ ಎತ್ತರ, ಒಟ್ಟು ಜೀವನಾವಧಿ, ಗುಣಗಳನ್ನು ವಿವರಿಸಿದರು. ಮಕ್ಕಳು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಪಡೆದರು. ಹುಣಸೇ ಮರದ ಕೆಳಗೆ ಕುಳಿತು ಅವುಗಳನ್ನು ಮಾತನಾಡಿಸಿದರೆ ಎಷ್ಟೋ ಹಿಂದನ ಕತೆಗಳನ್ನು ಅವು ಹೇಳುತ್ತವೆ, ನಾವು ಕೂತು ಅದರೊಂದಿಗೆ ಮಾತನಾಡಬೇಕೆಂದು ಪ್ರಕೃತಿಗೆ ಹತ್ತಿರವಾಗುವ ಮಾರ್ಗವನ್ನು ತೋರಿಸಿದರು.

ಸೀಮಾರೂಬ, ಹೊಂಗೆಮರಗಳಿಂದ ಬಯೋಡೀಸೆಲ್ ತಯಾರಿಸಲು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಗೊಂಬೆಗಳ ತಯಾರಿಯಲ್ಲಿ ಮರಾಲೆ ಮರವು ಬಹಳ ಉಪಕಾರಿಯಾಗಿದೆ. ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹುಟ್ಟುಹಬ್ಬ, ಮದುವೆ ಇತ್ಯಾದಿ ಸಮಾರಂಭಗಳ ನೆನಪಿಗಾಗಿ ಒಂದೊಂದು ಸಸಿಯನ್ನು ನೆಡುತ್ತಾ ಇಂದು ಸ್ಫೂರ್ತಿವನ ಪುಟ್ಟ ಕಾಡಿನಂತೆ ಕಂಗೊಳಿಸುತ್ತಿದೆ. ಡಾ.ಲಿಂಗರಾಜು ಅವರು ಅದೇ ಸಮಯಕ್ಕೆ ನಮ್ಮ ತಂಡದೊಂದಿಗೆ ಸೇರಿ ಐದಾರು ಗಿಡಗಳನ್ನು ಮಕ್ಕಳೊಂದಿಗೆ ನೆಟ್ಟರು. ಸಸಿಯನ್ನು ನೆಡುವುದು ಒಂದು ಹೆಜ್ಜೆ. ಅವುಗಳನ್ನು ಮಕ್ಕಳಂತೆ ಸಾಕಿ ಸಲುಹಿ ಬೆಳೆಸುವ ಹೊಣೆ ಹೊತ್ತಿರುವ ಈಶ್ವರ್ ಪ್ರಸಾದ್ ಮತ್ತು ಅವರ ತಂಡದವರಿಗೆ ಶಾಲೆಯವತಿಯಿಂದ ಮತ್ತು ಆಸಕ್ತ ಪೋಷಕರಿಂದ ಸಂಗ್ರಹಿಸಿದ್ದ ಸಣ್ಣ ಮೊತ್ತವನ್ನು ನೀಡಲಾಯಿತು. ಜೀವೋ ಜೀವಸ್ಯ ಜೀವನಮ್ ಸೂತ್ರಕ್ಕೆ ಮೊದಲ ಮಣಿಯನ್ನು ಪೋಣಿಸುವಂತೆ ಮಕ್ಕಳು ಸ್ಫೂರ್ತಿವನದಲ್ಲಿ ಮೂರು ಭಿನ್ನ ನಾಟಕಗಳನ್ನು ಪ್ರದರ್ಶಿಸಿದರು.

ತಮ್ಮದೇ ಮಾತುಕತೆಗಳಿಂದ ಮೈಮರೆತ ಪುಟಾಣಿಗಳನ್ನು ಅನಂತಣ್ಣ ಒಂದು ಕ್ಷಣ ಕಣ್ ಮುಚ್ಚುವಂತೆ ಹೇಳಿ, ಗಾಳಿ-ಪಕ್ಷಿಗಳ ನಾದಕ್ಕೆ ಕಿವಿಕೊಡುವಂತೆ ಪ್ರೇರೇಪಿಸಿದರು. ಬೆಂಗಳೂರು ನಗರದಲ್ಲಿ ಬೇಕೆಂದರೂ ಸಿಗದ ಆ ಸೌಲಭ್ಯವನ್ನು ಚೆನ್ನಾಗಿ ಅನುಭವಿಸುವಂತೆ ಮಾಡಿ ಪ್ರಕೃತಿಯೊಂದಿಗೆ ಮಾತನಾಡಿಸಿದರು.

ಕಲಿಕೆ, ಆಟದೊಂದಿಗೆ ಕಲಿಕೆ ಎಂಬಂತೆ ಶಶಿ ಅಣ್ಣ ನಮಗೆಲ್ಲರಿಗೂ ಜೀವಿಸುವುದಕ್ಕಾಗಿ ಹೋರಾಟ ನಡೆಸುವ ಆಟವನ್ನು ಆಡಿಸಿದರು. ಮಕ್ಕಳು, ಶಿಕ್ಷಕರು ಎಲ್ಲರೂ ಖುಷಿಯಿಂದ ಪಾಲ್ಗೊಂಡರು, ಆಡಿ ಮತ್ತಷ್ಟು ಖುಷಿಗೊಂಡರು.

ಕಾರ್ಯಕ್ರಮದ ತಯಾರಿಯನ್ನು ಮೊದಲಿನಿಂದಲೇ ಆರಂಭಿಸಿದ್ದ ಶಾಲೆಯ ಅಧ್ಯಾಪಕರೆಲ್ಲರೂ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ರುಚಿಯಾದ ಅವಲಕ್ಕಿ, ಬಾಣೆಹಣ್ಣುಗಳನ್ನು ನೀಡುತ್ತಾ ಪ್ರವಾಸದ ಆಸಕ್ತಿಯನ್ನು ಮತ್ತಷ್ಟು ಹೆಚ್ಚುಮಾಡಿದರು. ಶಾಲೆಯ ವ್ಯವಸ್ಥಾಪಕರು ವಾಹನ, ನೀರು ಇತ್ಯಾದಿಗಳನ್ನು ಚೆನ್ನಾಗಿ ಅಣಿಗೊಳಿಸಿದ್ದರು.

ಪ್ರಸ್ತುತ ತಿಪ್ಪಗೊಂಡನ ಹಳ್ಳಿ ಹೆಚ್ಚು ಜನರ ವಾಸವಿಲ್ಲದೆ ಮತ್ತಷ್ಟು ಮೌನವಾಗಿದೆ. ಜನರೆಲ್ಲರೂ ಕೆಲಸ, ಜೀವನವನ್ನು ಅರಸಿ ನಗರ-ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಶಾಲೆಗಳು ಬರಿದಾಗಿವೆ. ಈಗೊಂದು-ಆಗೊಂದು ಬಿ.ಎಂ.ಟಿ.ಸಿ ಬಸ್ ಓಡಾಡುತ್ತಿದೆ. ನಗರಕ್ಕೂ-ಹಳ್ಳಿಗೂ ಸೇತುವೆಯಾಗಿ. ಪ್ರಕೃತಿ ತನ್ನ ನಂಬಿ ಬಂದವರನ್ನು ಎಂದೂ ಕೈಬಿಡದೆ ಸಲಹುವಂತೆ ಇರುವ ಹಳೆ ತಲೆಮಾರಿನ ಜನರನ್ನು ಸಾಕುತ್ತಾ ಸುಂದರವಾಗಿದೆ. ಉತ್ತಮ ವಾತಾವರಣ, ಕಲಿಕೆಯನ್ನು ಹೊಂದಿ ನಾವೆಲ್ಲರೂ ೪.೨೦ಕ್ಕೆ ಅಲ್ಲಿಂದ ಹೊರಟು ಸುಮಾರು ೫.೩೦ಕ್ಕೆ ಬೆಂಗಳೂರು ತಲುಪಿದೆವು. ಮಕ್ಕಳೆಲ್ಲರೂ ತಮ್ಮ ಅನುಭವಗಳನ್ನು ದಾಖಲಿಸುವುದಾಗಿ ಆನಂದದಿಂದ ಮನೆಗಳಿಗೆ ತೆರಳಿದರು.

ಇದು ನಮ್ಮ ಭಾಗೀರಥಿ ಜಯಂತಿಯ ಪಯಣ…ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದೇ ತಿಳಿಯಲಿಲ್ಲ…ಮನಸ್ಸಿನಲ್ಲಿ ಭಗೀರಥ ಮತ್ತಷ್ಟು ಬಲವಾದ, ನದಿಗಳಿಗೆ ಜೀವದಾನ ಮಾಡುವ ಕಾಡುಗಳ ರಕ್ಷಣೆಗೆ ಅಣಿಯಾದ.

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.