Valmiki Jayanti – 2013

ವಾಲ್ಮೀಕಿ ಜಯಂತಿ
ದಿನಾಂಕ: ೧೮ನೇ ಅಕ್ಟೋಬರ್, ೨೦೧೩
ಸ್ಥಳ: ಪೂರ್ಣಪ್ರಮತಿ ಶಾಲೆ, ಗಿರಿನಗರ

ಅಕ್ಟೋಬರ್ ೧೮ ರಂದು ವಾಲ್ಮೀಕಿ ಜಯಂತಿಯನ್ನು ನಮ್ಮ ಶಾಲೆಯಲ್ಲಿ ಆಚರಿಸಿದೆವು. ಸೃಜನಾತ್ಮಕ ಕಲಿಕೆಯ ತರಗತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಸುನೀತಾ ಫಡ್ನೀಸ್ ನಮ್ಮ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮಕ್ಕಳೇ ಸಂಪೂರ್ಣ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಟ್ಟರು. ಬಂದ ಅತಿಥಿಗಳಿಗೆ ಸ್ವಾಗತ ಕೋರಿ ನಂತರ ವಾಲ್ಮೀಕಿ ಜಯಂತಿಯ ಮಹತ್ವವನ್ನು ತಿಳಿಯಲು ತೊಡಗಿದೆವು. ನಮ್ಮ ಶಾಲೆಯ ಅಧ್ಯಾಪಕರಾದ ಬದರಿ ನಾರಾಯಣ ಕಟ್ಟಿ ಅವರು ಮಕ್ಕಳಿಗೆ ಸರಳವಾದ ಉಪಮೆಯಿಂದ ವಿವರಿಸಿದರು: ಎರಡು ಹಕ್ಕಿಗಳಿವೆ. ಒಂದು T ಮತ್ತೊಂದು T. ಒಂದು ತತ್ವದರ್ಶನ ಎಂಬ ಹೆಸರಿನ ಹಕ್ಕಿ. ಮತ್ತೊಂದು ಟಿ.ವಿ. ಎಂಬ ಹೆಸರಿನ ಹಕ್ಕಿ. ರಾಮ ಸೀತೆಯರು ಒಟ್ಟಿಗೆ ಇರಬೇಕು ಆದರೆ ಬೇಡನೊಬ್ಬ ರಾವಣನ ರೂಪದಲ್ಲಿ ಬಂದು ಬಾಣ ಬಿಟ್ಟ. ಆ ಬಾಣವೇ ಟಿ.ವಿ.ಯ ರಿಮೋಟ್. ರಿಮೋಟ್‌ನ ಗುಂಡಿಯನ್ನು ಒತ್ತಿದರೆ ಟಿ.ವಿ. ಪ್ರಾರಂಭವಾಗುತ್ತದೆ. ಆಗ ತತ್ವದರ್ಶದ ಕಡೆ ಗಮನವಿಲ್ಲದಾಗುತ್ತದೆ. ಹಾಗಾಗಿ ರಾವಣನನ್ನು ಬರಗೊಡದೆ ತತ್ವದರ್ಶನದೆಡೆ ಗಮನ ಹರಿಸೋಣ ಎಂಬ ಸಂದೇಶವನ್ನು ವಾಲ್ಮೀಕಿ ಜಯಂತಿಯಂದು ನೆನಪಿಡಬೇಕೆಂದು ಹೇಳಿದರು. ಎಂದಿನಂತೆ ಗಂಗೆಗೆ ಪ್ರಾರ್ಥನೆಯನ್ನು ಸಲ್ಲಿಸಿ ನಮ್ಮನ್ನು ಸುಭಿಕ್ಷವಾಗಿಡುವಂತೆ ಬೇಡಿಕೊಂಡೆವು.

ನಂತರ ಮಕ್ಕಳು ಕಲಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ಅಂತೆಯೇ ಅಧ್ಯಾಪಕರು ಮಕ್ಕಳ ಮುಂದಿನ ಬೆಳವಣಿಗೆಗಾಗಿ ತಾವು ರೂಪಿಸಿಕೊಂಡಿರುವ ವಿವಿಧ ಯೋಜನೆಗಳನ್ನು ಅತಿಥಿಗಳಿಗೂ ಮಕ್ಕಳಿಗೂ ವಿವರಿಸಿದರು. ಇದೊಂದು ಅವಲೋಕನ ಕಾರ್ಯಕ್ರಮವೇ ಆಗಿತ್ತು. ಅತಿಥಿಗಳಾಗಿ ಬಂದಿದ್ದ ಡಾ. ಸುನೀತಾರವರು ತಮ್ಮ ಚುರುಕು ಮಾತುಗಳಿಂದ ಮಕ್ಕಳೊಡನೆ ಸಂಭಾಷಣೆ ನಡೆಸಿದರು. ತನ್ಮೂಲಕ ಹಲವು ಮಹತ್ವದ ಸಲಹೆಗಳನ್ನು ನೀಡಿದರು:
ಡಾ.ಸುನೀತ:     ಪ್ರತಿಬಿಂಬ ಯಾವಾಗ ಕಾಣಿಸುತ್ತದೆ?
ಮಕ್ಕಳು:     ಸ್ಟೀಲ್, ಸಿಲ್ವರ್, ಕಣ್ಣಿನಲ್ಲಿ, ನೀರಿನಲ್ಲಿ, ಕನ್ನಡಿಯಲ್ಲಿ ಕಾಣುತ್ತದೆ.
ಡಾ.ಸುನೀತ:     ಅದನ್ನು ಪ್ರತಿಬಿಂಬ ಎಂದು ಏಕೆ ಕರೆಯುತ್ತೇವೆ?
ಮಕ್ಕಳು:     ನಾವು ಹೇಗಿರುತ್ತೇವೋ ಹಾಗೇ ಕಾಣುತ್ತದೆ, ಅದಕ್ಕೆ ಅದನ್ನು ಪ್ರತಿಬಿಂಬ ಎನ್ನುತ್ತೇವೆ. ವಸ್ತು ಬಲಭಾಗಕ್ಕೆ ಇದ್ದರು ಅದು ಎಡಭಾಗಕ್ಕೆ ತೋರಿಸುತ್ತದೆ.
ಡಾ.ಸುನೀತ:     ಅದನ್ನು ಏನೆಂದು ಕರೆಯುತ್ತಾರೆ? ಯಾಕೆ ಹಾಗೆ ತೋರಿಸುತ್ತದೆ?
ಮಕ್ಕಳು:     ಬಿಂಬ-ಪ್ರತಿಬಿಂಬ ಎನ್ನುತ್ತಾರೆ.
ಡಾ.ಸುನೀತ:    Very good,, ಅದನ್ನು Mirror image ಅಂತ ಕರಿತಾರಲ್ಲವೇ? ಈಗ ನಿಮ್ಮ ಪಕ್ಕದಲ್ಲಿ ಕುಳಿತಿರುವ ನಿಮ್ಮ ಸ್ನೇಹಿತರ ಕಡೆ ತಿರುಗಿ ಪ್ರತಿಬಿಂಬ ಕಾಣುತ್ತಿದೆಯೇ, ಹೇಳಿ.
ಮಕ್ಕಳು:     ಕಣ್ಣಿನಲ್ಲಿ
ಡಾ.ಸುನೀತ:     ಅವರಲ್ಲಿರುವ ಒಂದು ಒಳ್ಳೆಯ ಗುಣವನ್ನು ಹೇಳಿರಿ.
ಮಕ್ಕಳು:     ಅವಳು ಚೆನ್ನಾಗಿದ್ದಾಳೆ, ಅವನು ಪೆನ್ಸಿಲ್ ಕೊಟ್ಟು ಸಹಾಯ ಮಾಡುತ್ತಾನೆ, ಅವಳು ಹಾಡುತ್ತಾಳೆ, ಅವನು ಎಲ್ಲರಿಗೂ ಸಹಾಯ ಮಾಡುತ್ತಾನೆ, ಅವನು ಸ್ನೇಹದಿಂದ ಇರುತ್ತಾನೆ, ಅವಳು ಸುಳ್ಳು ಹೇಳುವುದಿಲ್ಲ (ಮಕ್ಕಳು ವಿವಿಧ ಉತ್ತರಗಳನ್ನು ನೀಡಿದರು)
ಡಾ.ಸುನೀತ:     ನೀವು ಇಂದು ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೀರಿ, ವಾಲ್ಮೀಕಿ ಎಂಬ ಹೆಸರು ಏಕೆ ಬಂದಿತು?
ಕೃಷ್ಣ (ತರಗತಿ ೫ ಬಿ): ಅವರು ತಪಸ್ಸು ಮಾಡುವಾಗ ಅವರ ಸುತ್ತ ಹುತ್ತ ಬೆಳೆದಿದ್ದು. ಸಂಸ್ಕೃತದಲ್ಲಿ ಹುತ್ತಕ್ಕೆ ವಲ್ಮೀಕ ಎನ್ನುತ್ತಾರೆ. ಅವರು ನಂತರ ವಲ್ಮೀಕದಿಂದ ಎದ್ದು ಬಂದದ್ದಕ್ಕೆ ವಾಲ್ಮೀಕಿ ಎಂದು ಹೆಸರಾಯಿತು.
ಡಾ.ಸುನೀತ:     ಹುತ್ತ ಯಾರು ಕಟ್ಟುತ್ತಾರೆ ಹೇಗೆ ಕಟ್ಟುತ್ತಾರೆ ಗೊತ್ತಾ?
ಮಕ್ಕಳು:     ಇರುವೆ ಮತ್ತು ಟರ್ಮೈಟ್ಸ್ ಕಟ್ಟುತ್ತವೆ. ಮಣ್ಣಿನಿಂದ ಕಟ್ಟುತ್ತವೆ . Saliva ದಿಂದ ಕಟ್ಟುತ್ತವೆ.
ಡಾ.ಸುನೀತ:     ಹೇಗೆ ಕಟ್ಟುತ್ತವೆ ಗೊತ್ತಾ? ನಿಮಗೆ ಮಣ್ಣು ಕೊಟ್ಟು ಮನೆ ಕಟ್ಟಲು ಹೇಳಿದರೆ ಕಟ್ಟಲು ಸಾಧ್ಯವೇ?
ಮಕ್ಕಳು:     ಮಣ್ಣು, ಇಟ್ಟಿಗೆ, ಸಿಮೆಂಟ್, ಇಂಜಿನಿಯರ್, ಮನೆ ಕಟ್ಟುವವರು ಎಲ್ಲಾ ಬೇಕು.
ಡಾ.ಸುನೀತ:     ಇರುವೆಗಳು ಹೇಗೆ ಕಟ್ಟುತ್ತವೆ. ಇವರೆಲ್ಲ ಇರುವೆಗಳ ಹತ್ತಿರ ಇವೆಯಾ?
ಮಕ್ಕಳು:     ಇರುವೆಗಳಲ್ಲಿ Soldier Ant, Worker Ant ಅಂತ ಇರತ್ತೆ. ಅವುಗಳು ಕಟ್ಟುತ್ತವೆ.
ಡಾ.ಸುನೀತ:     ಇರುವೆಗಳಿಂದ ನಾವೇನು ಕಲಿಯಬಹುದು?
ಮಕ್ಕಳು:     ಸಾಲಿನಲ್ಲಿ ಹೋಗಬೇಕು, Hard work ಮಾಡಬೇಕು, Active ಆಗಿ ಕೆಲಸ ಮಾಡಬೇಕು, ಒಗ್ಗಟ್ಟಿನಿಂದ ಕೆಲಸ ಮಾಡಬೇಕು.
ಡಾ.ಸುನೀತ:     Very Good , ವಾಲ್ಮೀಕಿ ಋಷಿಯಿಂದ ಏನೇನು ಕಲಿಯಬೇಕು. ವಾಲ್ಮೀಕಿ ಋಷಿ ಏನೆಲ್ಲಾ ಕಲಿಸುತ್ತಾರೆ?
ಮಕ್ಕಳು:    Practice makes perfect.
ಡಾ.ಸುನೀತ:     ಸರ್ ತುಂಬಾ ಚೆನ್ನಾಗಿ ಹೇಳಿದರು. ಎರಡು ಕ್ರೌಂಚ ಹಕ್ಕಿಗಳಿದ್ದವು, ಗಂಡು ಹಕ್ಕಿಯನ್ನು ಬೇಡ ಕೊಂದನು ಎಂದು. ನಮ್ಮ ಸುತ್ತ-ಮುತ್ತ ಬಹಳಷ್ಟು ವಿಚಾರಗಳು ನಡೆಯುತ್ತಿರುತ್ತವೆ. ನಾವು ನಿಜವಾಗಲು ಅದರ ಬಗ್ಗೆ ಯೋಚಿಸುತ್ತೇವೆಯೇ? ದಾರಿಯಲ್ಲಿ ಯಾರೋ ಭಿಕ್ಷುಕನನ್ನು ನೋಡುತ್ತೇವೆ, ಯಾವುದೋ ಅಪಘಾತವನ್ನು ನೋಡುತ್ತೇವೆ, ಎಷ್ಟು ಜನ ನಿಂತು ಅವರಿಗೆ ಸಹಾಯ ಮಾಡುತ್ತೇವೆ? ಮಕ್ಕಳೆ, ನೀವು ಮತ್ತೊಬ್ಬ ವಾಲ್ಮೀಕಿ ಆಗಬೇಕಿದ್ದರೆ ನಿಮ್ಮ ಸುತ್ತ-ಮುತ್ತ ನಡೆಯುವ ಕ್ರಿಯೆಗಳನ್ನು ಹೃಯದಿಂದ ಅನುಭವಿಸುವುದನ್ನು ಕಲಿಯಬೇಕು. ನೀವು ಯಾವುದನ್ನೇ ಹೃದಯದಿಂದ ಅನುಭವಿಸಿದಾಗ ಮಾತ್ರ ಸೃಜನಾತ್ಮಕವಾಗಿ ಕೆಲಸವನ್ನು ಮಾಡಲು ಸಾಧ್ಯ, ಕೆಸಲವನ್ನು ಚೆನ್ನಾಗಿ ಮಾಡಲು ಸಾಧ್ಯ. ಇಲ್ಲದಿದ್ದರೆ ರಾಮಾಯಣವೇ ಬರೆಯಲು ಆಗುತ್ತಿರಲಿಲ್ಲ. ನಾನು ಮತ್ತೆ ಪ್ರತಿಬಿಂಬದ ಬಗ್ಗೆ ಹೇಳುತ್ತೇನೆ…ನಿಮ್ಮನ್ನು ನೀವು ಗಮನಿಸಿಕೊಂಡಾಗ ನಿಮ್ಮ ಪ್ರತಿಬಿಂಬ ನಿಮಗೆ ಕಾಣುತ್ತದೆ. ತಪ್ಪುಗಳನ್ನು ಮಾಡುತ್ತಿದ್ದರೆ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಯಾವುದರಲ್ಲಾದರೂ ಚೆನ್ನಾಗಿದ್ದರೆ ಹೆಚ್ಚು ಜಂಭಪಡದೆ ಎಲ್ಲರೊಂದಿಗೆ ಸ್ನೇಹದಿಂದ ಇರುವುದು, ನಿಮ್ಮ ಅಧ್ಯಾಪಕರು ನಿಮಗಾಗಿ ಬಹಳಷ್ಟು ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ಗೌರವ ಕೊಟ್ಟು ಚೆನ್ನಾಗಿ ಕಲಿಯಿರಿ. ಮುಂದೆ ಬಹಳಷ್ಟು ವಾಲ್ಮೀಕಿಗಳು ಈ ಮಕ್ಕಳಲ್ಲಿ ತಯಾರಾಗಬಹುದು. All the best.


ನಂತರ ಬಂದ ಅತಿಥಿಗಳಿಗೆ ನಮ್ಮ ಶಾಲೆಯ ಸ್ಮರಣ ಸಂಚಿಕೆಯನ್ನು ಕೊಡುಗೆಗಳಾಗಿ ನೀಡಿ ಧನ್ಯವಾದಗಳನ್ನು ಹೇಳಿದೆವು. ರಾಮಾಯಣದ ಮಹತ್ವವನ್ನು ಹೇಳುವ ಶ್ಲೋಕ ಮತ್ತು ಶಾಂತಿ ಮಂತ್ರದೊಂದಿಗೆ ಈ ಪುಟ್ಟ ಕಾರ್ಯಕ್ರಮಕ್ಕೆ ಮಂಗಳ ಹಾಡಿದೆವು.

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ

ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಮ್
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ ||
ಗೋಸಜ್ಜನೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು ||
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯ ಶಾಲಿನೀ ||
ದೇಶೋಽಯಂ ಕ್ಷೋಭರಹಿತಃ ಸಜ್ಜನಾಃ ಸಂತು ನಿರ್ಭಯಾಃ ||
For more photos Click Here

Leave a Reply

Notice Board

pūrṇapramati is recruiting teachers

pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it