Anandini – October & November

ಸಂಪಾದಕೀಯ:

       

ಶಶಿರೇಖಾ, (ಪ್ರಾಂಶುಪಾಲರು, ಪೂರ್ಣಪ್ರಮತಿ ಶಾಲೆ)

 

ಹರೀಶ್ ಭಟ್‌ಗೆ ಮಿಂಚಂಚೆ ಕಳಿಸಿದೆ ಎರಡು ತಿಂಗಳ ಹಿಂದೆ. ನಮ್ಮ ಆನಂದಿನಿಗೆ ಇನ್ನು ಮುಂದೆ ಒಂದು ಅಂಕಣ ಬೇಕು, ತಪ್ಪದೇ ಪ್ರತಿ ತಿಂಗಳ ೧೮ರಂದು ಕಳಿಸಿ ದಯವಿಟ್ಟು ಅಂತ. ಆಗಲಿ ಮೇಡಂ, ಆದರೆ ಈಗ ತುಂಬಾ ಬಿಜ಼ಿ ಇದ್ದೇನೆ, ಸಧ್ಯದಲ್ಲೇ ಪ್ರಾರಂಭಿಸ್ತೀನಿ ಅಂದಿದ್ದರು.
ನಮ್ಮ ದುರದೃಷ್ಟ. ಅವರ ನೆನಪಿಗಾಗಿ ಆನಂದಿನಿ ಮೀಸಲಾಗಿಡುವ ಸಂದರ್ಭ ಬಂದೊದಗಿದೆ. ದಿನಾಂಕ ೦೩.೧೧.೨೦೧೭ ರಂದು ಹರೀಶ್ ಭಟ್ ಅವರು ನಮ್ಮನ್ನು ಅಗಲಿದ್ದಾರೆ.
ಯಾರಿಗಾದರೂ ಥಟ್ಟನೆ ಇವರು ನಮ್ಮ ಆತ್ಮೀಯ ಬಂಧು ಅನ್ನಿಸೋ ವ್ಯಕ್ತಿತ್ವ ಅವರದು. ಎಂದೂ ಅಳಿಸದ ಮಾಸದ ನಗುಮುಖ, ಸರಳವಾಗಿ ಮನೆಯೊಳಗೆ ನಡೆಯುವಂಥ ಮಾತುಕತೆ. ಯಾವ ವಿಶೇಷ ಸೌಲಭ್ಯವನ್ನೂ ಬೇಡದ, ಸದಾ ಪುಟಿಯುವ ಉತ್ಸಾಹದ ಬುಗ್ಗೆ. ಮಾಧವ ಗಾಡ್ಗೀಳರಂಥ ವಿಜ್ಞಾನಿಯಿರಲಿ, ಕೇಂದ್ರ ಮಂತ್ರಿ ಅನಂತಕುಮಾರರಂಥ ರಾಜಕಾರಣಿಯಿರಲಿ, ಒಂದನೇ ತರಗತಿಯ ಹಾಲು ಹಸುಳೆಯಿರಲಿ- ಸುಗಮವಾಗಿ, ಸುರಸವಾಗಿ ಯಾವ ಒತ್ತಡವೂ ಇಲ್ಲದೆ ಮಾತನಾಡುವ ಜೊತೆಗೂಡಿ ಕೆಲಸ ಮಾಡುವ ಮಾಡಿಸುವ ಕೆಲಸಗಾರ. ಏನು ಮಾಡಬೇಕು, ಎಷ್ಟು ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಸ್ಪಷ್ಟ ಕಲ್ಪನೆ ಇದ್ದ, ಏಕೋಭಾವದಿಂದ ಕೈಗೆತ್ತಿಕೊಂಡ ಕೆಲಸವನ್ನು ಪೂರೈಸುವ ಶಕ್ತಿ ಇದ್ದ ವ್ಯಕ್ತಿ.
ನಮ್ಮ ಮೊದಲ ಭೇಟಿ ಅವರ ಬದುಕು-ಭಾವ-ಜೀವ ಆಗಿದ್ದ ನಿಸರ್ಗದಲ್ಲೇ. ಬೆಂಗಳೂರು ವಿಶ್ವವಿದ್ಯಾನಿಲಯದ ಸಾವಿರ ಎಕರೆಯ ಕಾಡಿನಲ್ಲಿ. ಅಲ್ಲೇ ತಮ್ಮತನದ ಛಾಪು ಒತ್ತಿದರು ಹರೀಶ್. ನಾಗೇಶ್ ಹೆಗ್ಗಡೆಯವರಿಂದ ಅವರ ಪರಿಚಯವಾಯ್ತು. ಕೆಲಹೊತ್ತು ಕಾಡಲ್ಲಿ ಓಡಾಡಿ ದಣಿದ ಮಕ್ಕಳನ್ನು ಒಂದೆಡೆ ಕೂಡಿಸಿದ್ದೆವು. ಹರೀಶ್ ಅಲ್ಲೇ ಇದ್ದ ಕಪ್ಪೆ, ಇರುವೆ, ಚಿಟ್ಟೆಗಳನ್ನು ಕೈಯಲ್ಲಿ ಹಿಡಿದು ಮಕ್ಕಳಿಗೆ ಆಕರ್ಷಕವಾಗಿ ಅವುಗಳ ಬಗ್ಗೆ ಹೇಳತೊಡಗಿದರು. ಬಹುಶಃ ಒಂದು ಘಂಟೆಯಾಗಿರಬಹುದು, ಮಕ್ಕಳೊಟ್ಟಿಗೆ ಶಿಕ್ಷಕರೂ ಆ ನಿಸರ್ಗ ಕಥನದಲ್ಲಿ ಮುಳುಗಿಹೋಗಿದ್ದರು.
ಭಾರತದ ಅದರಲ್ಲೂ ಕರ್ನಾಟಕದ ಎಷ್ಟುಶಾಲೆಗಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳನ್ನು ನಿಸರ್ಗದ ಅಭ್ಯಾಸದೆಡೆಗೆ ತಿರುಗಿಸಿದರೋ, ಎಷ್ಟು ಮಕ್ಕಳಿಗೆ ಪ್ರಕೃತಿಯೊಡನೆ ಸಹಬಾಳ್ವೆ ನಡೆಸುವ ದೀಕ್ಷೆ ಕೊಟ್ಟರೋ, ಎಷ್ಟು ಸರ್ಕಾರ, ಸರ್ಕಾರೇತರ ವಿಜ್ಞಾನ ಕಾರ್ಯಾಗಾರ, ಸಂಶೋಧನೆ, ಸ್ಪರ್ಧೆಗಳ ಮೇಲ್ವಿಚಾರಣೆ ಹೊತ್ತರೋ ಅವರಿಗೇ ಗೊತ್ತು. ಅವರ ಬಜಂತ್ರಿ ಅವರು ಊದಿದವರಲ್ಲ. ಯಾರು ಯಾವಾಗ ಯಾವುದೇ ಪ್ರಶ್ನೆ ಕೇಳಿದರೂ ತಕ್ಷಣ ಉತ್ತರ ಕಳಿಸುತ್ತಿದ್ದುದು ಅವರ ವೈಶಿಷ್ಟ್ಯ.
೨೦ನೇ ಶತಮಾನದ ಮೇರು ವಿಜ್ಞಾನಿ ಐನ್‌ಸ್ಟೈನ್ ಹೇಳುತ್ತಾನೆ “A person who says I have no time, is a dandy”. ಆತ ವಿಜ್ಞಾನದೊಂದಿಗೆ ಬದುಕನ್ನು ಸವಿದಾತ. ನಮ್ಮ ಹರೀಶ್ ಕೂಡ ತಮ್ಮ ಇಷ್ಟೆಲ್ಲ ಕಾರ್ಯಗಳ ಮಧ್ಯೆಯೂ ಸಂಸಾರದ ಯಾವ ಆಸ್ಥೆಯನ್ನೂ ಕಡೆಗಣಿಸಲಿಲ್ಲ. ಮಗಳು ಹಂಸಳ ಬಗ್ಗೆ ವಹಿಸುತ್ತಿದ್ದ ಕಾಳಜಿಯನ್ನು, ಅವಳೊಂದಿಗೆ ಅವಳಿಗಾಗಿ ಅವರು ಕಳೆಯುತ್ತಿದ್ದ ಕಾಲ, ಬೆಳೆಸುತ್ತಿದ್ದ ಬಗೆಯನ್ನು ಮಡದಿ ಶ್ರೀವಲ್ಲಿ ವಿವರಿಸುತ್ತಾರೆ. ಕೆಲಸದ ಮೇಲೆ ಬಹಳ ಸಲ ಬೇರೆ ಊರುಗಳಿಗೆ ಹೋಗುತ್ತಿದ್ದ ಹರೀಶ್ ತಾವಿಲ್ಲದಾಗ ಹೇಗಿರಬೇಕೆಂದು ಮಡದಿಗೆ ಕಲಿಸಿದ್ದರಂತೆ. ವಿಧಿಗೆ ಅದು ಕೇಳಿಸಿತೇ!
ಇಂತಹ ವ್ಯಕ್ತಿ ಕಳೆದ ಐದು ವರ್ಷಗಳಿಂದ ನಮ್ಮ ಶಾಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಕ್ಕಳಿಗೆ ಮುಖ್ಯವಾಗಿ “ಭೂಮಿಯ ಮೇಲೆ ಜೀವ ವಿಕಾಸದ” ಪಾಠ ಮಾಡಿದರು. ಮಕ್ಕಳಿಂದ ಒಂದು ಪಠ್ಯಪುಸ್ತಕ ತಯಾರಿ ಮಾಡಿಸಿದ್ದರು. ನಮ್ಮ ಆನಂದವನದ ಜೀವವೈವಿಧ್ಯದ ಸರ್ವೆಯನ್ನು ಮಕ್ಕಳಿಂದ ಮಾಡಿಸಿದ್ದರು ಎನ್ನುವುದೇ ನಮ್ಮ ಸಂತೋಷ, ಸೌಭಾಗ್ಯ, ಹೆಮ್ಮೆ.

ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ.

        ಅವರ ಆತ್ಮೀಯ ನೆನಪಿನಲ್ಲಿ ಅವರ ಪ್ರೀತಿಪಾತ್ರರಾದ ನಮ್ಮ ಶಾಲೆಯ ಮಕ್ಕಳು,  ಶಿಕ್ಷಕರು ಹಾಗೂ ನಮ್ಮ ಮಾರ್ಗದರ್ಶಕರು ಕಂಬನಿದುಂಬಿದ ವಿದಾಯದ ಲೇಖನಗಳನ್ನು ಬರೆದಿದ್ದಾರೆ. ಅದನ್ನು ಎರಡು ಕಂತುಗಳಲ್ಲಿ ಪ್ರಕಟಿಸುತ್ತಿದ್ದೇವೆ.

 

       Raghuram (Vice Principal)

          My association with Harish Bhat, the naturalist began almost 3 years back. I could instantly hit a chord with him as our interests were common. There are very few naturalists who go out in the field, do research, come back and share it with others.  He could instantly strike the right chord with 6 year old or a 60 year old. Our yatra to Kumaraparvat with him was unforgettable. The vast amount of knowledge he had and his willingness to share it with every child throughout the journey was something extraordinary. He always encouraged me to come up with a zoological dictionary with inputs from our ancient scriptures. It will be a befitting shrandanjali to him if I can atleast start this work in this academic year.

ದೇವಲೋಕದ ಹೂವನ್ನು ಅರಸಿ ಹೊರಟ ಚಿಟ್ಟೆ  – ಶ್ರೀವಲ್ಲಿ (ಹರೀಶ್ ಭಟ್ಟರ ಶ್ರೀಮತಿ)

೨೦೦೩, ಅಕ್ಟೋಬರ್ ೩ ರಂದು ಉಡುಪಿಯಲ್ಲಿ ನನ್ನ ಜೀವನದ ಒಂದು ಹೊಸ ಅಧ್ಯಾಯ ಆರಂಭವಾಯಿತು. ಒಂದು ನಡೆದಾಡುವ ವಿಶ್ವಕೋಶವನ್ನು ನಾನು ಮದುವೆಯಾಗಿದ್ದೆ ಎಂದು ನಂತರ ತಿಳಿಯಿತು. ಇವರ ಭೇಟಿಯಾದ ನಂತರ ನಾನು ಎಂದೂ ಗೂಗಲ್ ಸರ್ಚ್ ಮಾಡಿದ್ದೇ ಇಲ್ಲ…….

ನಾನು ಕಂಡ ಅಪರೂಪದ ವಿಜ್ಞಾನಿ –  Sri Yallappa Reddy,  (Retired Forest officer )

ಡಾ.ಹರೀಶ್ ಭಟ್ಟರು ಒಬ್ಬ ಯುವ ವಿಜ್ಞಾನಿ. ಇವರು ಬೇರೆ ವಿಜ್ಞಾನಿಗಳ ಹಾಗೆ ಜೀವಿ-ಜೀವಿಗಳನ್ನು ನೋಡಿದವರಲ್ಲ. ಪಕ್ಷಿ ಅಧ್ಯಯನ ಮಾಡಿದರು. ಅಲ್ಲದೆ ಪಕ್ಷಿ-ಮರ-ಕೀಟ-ಹಣ್ಣು-ಹೂವುಗಳ ನಡುವಿನ ಕೊಂಡಿ, ಸಂಬಂಧಗಳನ್ನು ಗುರುತಿಸಿದರು. ಇವೆಲ್ಲ ಒಂದನ್ನೊಂದು ಬಿಟ್ಟು ಬಾಳಲಾರದ ಸಂಬಂಧಿಕರು………

ಹರಿತ್ ಮತ್ತು ಹರೀಶ್: ಕಳಚಿಕೊಂಡ ಹಸುರು ಕೊಂಡಿNagesh Hegde ( Journalist)

ನಿಸರ್ಗದ ಜೊತೆ ಗಾಢ ನಂಟನ್ನು ಇಟ್ಟುಕೊಂಡವರು ಕಣ್ಮರೆ ಆದರೆಂದರೆ ನಿಸರ್ಗದ ಒಂದು ಭಾಗವೇ ಕಣ್ಮರೆ ಆದಂತೆ. ‘ಮಿತ್ರ ಹರೀಶ್ ಭಟ್ ಇನ್ನಿಲ್ಲ’ ಎಂದು ಶ್ರೀನಿವಾಸ್ ಅಣ್ಣ ಆ ದಿನ ಗದ್ಗದಿತರಾಗಿ, ತಡೆ-ತಡೆದು ಹೇಳುತ್ತಿದ್ದಾಗ ಒಂದು ಸೊಂಪಾದ ಅಶ್ವತ್ಥ ವೃಕ್ಷವೊಂದು ನೋಡನೋಡುತ್ತ ಕಣ್ಮರೆ ಆದಂತೆ………..

ಅಜಾತಶತ್ರು, ನಿಗರ್ವಿ ಡಾ|ಹರೀಶ್‍ ಭಟ್ – K.S. Naveen (ಸಂಗ್ರಹಾಲಯ ನಿರ್ವಾಹಕ, ಆನಂದವನ, ಮಾಗಡಿ)

“ಯಶ್ವಂತ್‍, ಇವರು ನವೀನ್‍ ಅಂತ ಪುಸ್ತಕ ಬರಿತಾ ಇದಾರೆ. ಅವರಿಗೆ ಯಾವುದಾದರು ರೆಫೆರೆನ್ಸ್ ಪುಸ್ತಕ ಬೇಕಾದರೆ ನನ್ನ ಹೆಸರಲ್ಲಿ ಕೊಡಿ” ಇದು ಹರೀಶ್ ಭಟ್‍, ನನ್ನ ಪರಿಚಯ ಹೆಚ್ಚೇನು ಇರದಿದ್ದ ಸಂದರ್ಭದಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯ………………

ಬಿತ್ತಿದ ಕನಸು- (ಭಾಗ – ೧) – Krishnaraja Bhat (Lecturer, PES College)

ಹರೀಶಣ್ಣ ಈ ಪದ ವ್ಯಕ್ತಿಪರಿಚಯ ಇದ್ದವರಿಗೆ ಕಿವಿಯಿಂದಿಳಿದು ನೇರ ಹೃದಯಕ್ಕೆ ತಟ್ಟುತ್ತದೆ. ಅವರಲ್ಲಿ ಮೇಧಾವಿತನದೊಂದಿಗಿದ್ದ ನಿರಹಂಕಾರ ಸರಳತೆ ಎಳೆಯ ಮನಸ್ಸಿಗೂ ಆಪ್ತತೆಯನ್ನು ಮೂಡಿಸುತ್ತಿತ್ತು. ನಡೆದಾಡುವ ಗೂಗಲ್ ಆಗಿ, ಆದರೆ ಗೂಗಲ್‌ನಂತೆ ಈ ಅರ್ಥದಲ್ಲೋ ಆ ಅರ್ಥದಲ್ಲೋ! ಎಂದು ಮರಳಿ ಪ್ರಶ್ನಿಸದೆ ನಿಸ್ಸಂದೇಹವಾದ……

ಅವಧೂತ ಗೀತೆ ಹರೀಶ್ ಭಟ್ ಅವರು ತಮ್ಮ ಕೊಠಡಿಯಲ್ಲಿ ಕುಳಿತು ತಮ್ಮ ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಏನೋ ವಿವರಣೆ ಕೊಡ್ತಾ ಇರ್ತಾರೆ. ಅವರಿಗೆ ತೊಂದರೆ ಕೊಡುವುದು ಬೇಡವೆಂದು ಇವರೆಲ್ಲ ಸುಮ್ಮನೆ ಕೇಳುತ್ತಾ ಕುಳಿತುಕೊಳ್ಳುತ್ತಾರೆ. ಹರೀಶ್ ಅವರು behavioral study of animals ಬಗ್ಗೆ ವಿವರಿಸುತ್ತಾ …………

ಹರೀಶ್ ಭಟ್ ಇನ್ನು ನೆನೆಪು ಮಾತ್ರ  IndumatiPurnapramati

ನಮ್ಮ ಶಾಲೆಯಲ್ಲಿ ‘ಜೀವೋ ಜೀವಸ್ಯ ಜೀವನಮ್’ ಎಂಬ ಸಂವತ್ಸರ ಸೂತ್ರವನ್ನು ಕಲಿಯುತ್ತಿದ್ದಾಗ ಭಾಗೀರಥಿ ಜಯಂತಿಯಂದು ಮಕ್ಕಳನ್ನು ಪರಿಸರ ಅಧ್ಯಯನಕ್ಕೆಂದು ಯಪ್ಪಲ್ಲರೆಡ್ಡಿಯವರ ಜೊತೆ ೨೦೧೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜೀವವೈವಿದ್ಯ ಉದ್ಯಾನಕ್ಕೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಶ್ರೀ ಹರೀಶ್ ಭಟ್ಟರ ಪರಿಚಯ ನಮಗಾಯಿತು………

ಪ್ರಕೃತಿಯನ್ನೇ ಗುರುವಾಗಿಸಿ….. – ಆಗಸ್ಟ್ ೮, ೨೦೧೩ ಪೂರ್ಣಪ್ರಮತಿಯ ಹಾದಿಯಲ್ಲಿ ಮರೆಯಲಾಗದ ಹೆಜ್ಜೆಯಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಗುರುಪೂರ್ಣಿಮೆಯಂದು ಆಚರಿಸಲು ಸಾಧ್ಯವಾಗದ ಉತ್ಸವವನ್ನು ಆಗಸ್ಟ್ ೮ ರಂದು ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪುಟ್ಟ ವನಕ್ಕೆ ಪೂರ್ಣಪ್ರಮತಿಯ ಮಕ್ಕಳು ಪಯಣ ಬೆಳೆಸಿದ್ದರು. ಜೀವೋ ಜೀವಸ್ಯ ಜೀವನಂ ಸೂತ್ರವನ್ನು ಮತ್ತಷ್ಟು ಮಗದಷ್ಟು………

ನಮ್ಮಶಾಲೆಯ ಅನೇಕ ಚಟುವಟಿಕೆಗಳಲ್ಲಿ ನಮ್ಮೊಡನಿದ್ದು ಆ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಹರೀಶಣ್ಣನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರೊಡಗಿನ ನಮ್ಮ ಶಾಲೆಯ ಪಯಣದಲ್ಲಿನ ಕೆಲ ಚಿತ್ರಗಳನ್ನು ಇಲ್ಲಿ ಬಿತ್ತರಿಸಲಾಗಿದೆ.

ಬೆಂಗಳೂರು ವಿವಿಯ ಅರಣ್ಯದ ಭೇಟಿ – ಪರಿಚಯದ ಕ್ಷಣಗಳು ೨೦೧೪

ಯೆಲ್ಲಪ್ಪ ರೆಡ್ಡಿ, ನಾಗೇಶ್ ಹೆಗ್ದೆ ಹಾಗೂ ಶ್ರೀನಿವಾಸ್ ಅವರೊಂದಿಗೆ

ಸಿಕ್ಕ ಗಿಡ, ಪ್ರಾಣಿಗಳೆಲ್ಲವೂ ಕುತೂಹಲ ಹುಟ್ಟಿಸುವಂಥದ್ದೇ..

ಅದ್ಭುತ ಜೀವಿ – ಕಪ್ಪೆ ಮರಿ

Save the tiger Program – ಮಕ್ಕಳ ವಿವರಣೆ ಕೇಳುವ ತಾಳ್ಮೆ

ಆನಂದವನದಲ್ಲಿ ಗಿಡ ಮರಗಳ, ಚಿಟ್ಟೆ, ಪಕ್ಷಿಗಳ ಸರ್ವೆಗೆ ಮಾರ್ಗದರ್ಶನ

ಪೂರ್ಣಪ್ರಮತಿ ಪೋಷಕರ ಸಭೆಯಲ್ಲಿ

ಮಗಳು ಹಂಸನೊಂದಿಗೆ ಆತ್ಮೀಯ ಘಳಿಗೆ..

ಯಾರ ಪ್ರಶ್ನೆಗೆ ಉತ್ತರ ಸಿಕ್ಕಿತೋ..

ಪೂರ್ಣಪ್ರಮತಿ ಪೋಷಕರ ಸಭೆಯಲ್ಲಿ

ಮಕ್ಕಳೊಂದಿಗೆ ಕುಮಾರ ಪರ್ವತದ ಆರೋಹಣ

ಪೂರ್ಣಪ್ರಮತಿ ಪೋಷಕರ ಸಭೆ

ಪೂರ್ಣಪ್ರಮತಿ ಜಾತ್ರೆ ೨೦೧೪

ವಿಚಾರ ಸಂಕಿರಣ ೨೦೧೪

ವಿಚಾರ ಸಂಕಿರಣ ೨೦೧೪

ಆನಂದವನದ ಶಂಕುಸ್ಠಾಪನೆಯ ಸಂದರ್ಭ

ಆನಂದವನದ ಶಂಕುಸ್ಠಾಪನೆಯ ಸಂದರ್ಭ

ಆನಂದವನದ ಸರ್ವೆ

ಆನಂದವನದ ಸರ್ವೆ

ಪೂರ್ಣಪ್ರಮತಿ ವಿಚಾರ ಸಂಕಿರಣ ೨೦೧೫

ಪೂರ್ಣಪ್ರಮತಿ ಉತ್ಸವ -೨೦೧೫ ರಲ್ಲಿ ಪೇಜಾವರ ಶ್ರೀಗಳೊಂದಿಗೆ

ಪೂರ್ಣಪ್ರಮತಿ ಜಾತ್ರೆ ೨೦೧೪

ಕುಮಾರ ಪರ್ವತದ ನೆತ್ತಿಯ ಮೇಲೆ

ನೋಡಿ, ಆ ಪಕ್ಷಿ ಇಷ್ಟು ದೊಡ್ಡದು….

 

3 Responses to Anandini – October & November

 1. Girish SV

  I dont know about Harish Bhat and very sad that I had to know about such a fine human being by reading his obituary. By seeing the photos you had published, I could feel how down to earth he was and that too with children.
  Its a loss for all the children (and my child too), his family and Purnapramati and so many others who were associated with him. May God bless his soul with eternal peace. Om Shanti

 2. Rajaneesh

  ನಿಸರ್ಗದ ಒಡನಾಡಿ ಹರೀಶ ಭಟ್ಟರಗಾಗಿ ಮೀಸಲಾದ “ಆನಂದಿನಿ”ಯನ್ನ ನನ್ನ ಮಗನಿಗೆ ಗಟ್ಟಿಯಾಗಿ ಓದಿ ಹೆಳುವಾಗ ಮನಸ್ಸು ಒಳಗೊಳಗೆ ಬಿಕ್ಕುತ್ತಲಿತ್ತು. ಹರೀಶರನ್ನು ಪೂರ್ಣಪ್ರಮತಿಯಲ್ಲಿ ನೋಡಲು ನನಗೆ ಲಭ್ಯವಾಗಿದ್ದು ಒಮ್ಮೆ ಮಾತ್ರವೇ ಆದರೂ ಅವರ ಛಾಪು ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ… ನಿಜಕ್ಕೂ ಅವರ ಅಗಲಿಕೆ ಭರಿಸಲಾಗದ ಬಹು ದೊಡ್ಡ ನಷ್ಟವೇ.
  ನಮ್ಮ ಮಕ್ಕಳ ಮನಗಳಲ್ಲಿ ಆ “ವನಸುಮ”ವು ಉಳಿಸಿಹೋಗಿರುವ ಪರಿಮಳವಷ್ಟೇ ಪೋಷಕರಾದ ನಮ್ಮ ಪಾಲಿಗೆ ದಕ್ಕಿರುವ ಭಾಗ್ಯವೆಂದು ಸಂತೈಸಿಕೊಳ್ಳುವುದೊಂದೇ ನಮಗುಳಿದಿರುವ ದಾರಿ.

 3. Rao

  I was really shocked when I read about this last month in a newspaper. Though I had never interacted with him, after reading all the Obituary, looks like we have missed a great human being. Wish he had lived long. May the Devatas bless his soul and give strength to his family.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it