Anandini – July 2017

ಸಂಪಾದಕೀಯ

ಜ್ಞಾನವೃದ್ಧರೂ, ವಯೋವೃದ್ಧರೂ ಆಗಿರುವ ಶ್ರೀ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿಯವರು ಕಳೆದ ಹಲವು ದಿನಗಳಿಂದ ನಮ್ಮ ಸೌಭಾಗ್ಯದಿಂದ ನಮ್ಮೊಡನೆ ಆನಂದವನದಲ್ಲಿ ತಂಗಿದ್ದಾರೆ. ಈ ಇಳಿ ಹರೆಯದಲ್ಲೂ ಅವರ ದೈಹಿಕ, ಮಾನಸಿಕ ಚಟುವಟಿಕೆಗಳು ನಮಗೆ ಸ್ಪೂರ್ತಿದಾಯಕವಾಗಿದೆ. ಅವರ ಬಗೆಗೆ ನಮ್ಮ ಶಾಲಾತಂಡದ ಸದಸ್ಯರಾದ ಡಾ.ಶ್ರೀನಿಧಿಯವರ ಪರಿಚಯಾತ್ಮಕ ಲೇಖನವನ್ನು ನೀವು ಇಲ್ಲಿ ಓದಬಹುದು

 

ಜುಲೈ ತಿಂಗಳ ತಿಳಿಗಾಳು

ಜುಲೈ 2017:

ಗಣಿತದ ವಿಷಯದಲ್ಲಿ ಪ್ರಯೋಗಗಳಿಗೆ ಹೆಚ್ಚು ಒತ್ತು ಕೊಡುವ ಉದ್ದೇಶದಿಂದ ನಮ್ಮ ಶಾಲೆಯು ಈ ದಿವಸ PRMO – Regional Math Olympiad ಕಾರ್ಯಕ್ರಮಕ್ಕೆ ನೋಂದಣಿ ಹೊಂದಿ, ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಸಾಕ್ಷಿಯಾಯಿತು.

 

ಜುಲೈ 2:

ಪೂರ್ಣಪ್ರಮತಿಯ, ಸತ್ಯತೀರ್ಥ ಫೌಂಡೇಷನ್ ನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ.ಪ್ರಹ್ಲಾದಾಚಾರ್ಯ ರವರು, ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ಶ್ರೀಪಾದಂಗಳಾಗಿ ಪೀಠಾರೋಹಣ ಮಾಡಿರುವುದು ಸಮಸ್ತ ಪೂರ್ಣಪ್ರಮತಿಯ ಪರಿವಾರಕ್ಕೆ ಸಂತಸದ ವಿಷಯವಾಗಿದೆ.

 

ಜುಲೈ 8:

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ಸುಮತಿಯ ಮಕ್ಕಳು, ಶಿವಂನ ೧ ರಿಂದ ೬ ನೇ ತರಗತಿಯ ಮಕ್ಕಳು  ಈ ಬಾರಿ ಗುರುಪೂರ್ಣಿಮೆಯನ್ನು ಶ್ರೀ.ಸಾನಂದ ಗುರೂಜಿ ಮತ್ತು ಶ್ರೀ.ಎಸ್.ಕೆ.ಗುಪ್ತ ರವರೊಂದಿಗೆ ಬಹಳ ಅರ್ಥಪೂರ್ಣವಾಗಿ ಆಚರಿಸಿದರು. ಅಂದಿನ ದಿನವೇ ಫ್ರೌಢಶಾಲಾ ವಿಧ್ಯಾರ್ಥಿಗಳು ಸಹ ಈ ಇಬ್ಬರು ಮಹನೀಯರಿಂದ ಮಾರ್ಗದರ್ಶನವನ್ನೂ ಪಡೆದರು.

 

 

ಜುಲೈ 8:

ಪೂರ್ಣಪ್ರಮತಿಯಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಜನಪ್ರಿಯ ಕ್ರೀಡೆ ಕ್ರಿಕೆಟ್ ತರಬೇತಿ ಪ್ರಾರಂಭವಾಗಿದ್ದು ಸುಮಾರು ೧೫ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. KSCA  ವತಿಯಿಂದ ನಡೆಯುತ್ತಿರುವ ಪಂದ್ಯಗಳಲ್ಲಿ ನಮ್ಮ ಶಾಲೆಯ ತಂಡವು ಭಾಗವಹಿಸಿದೆ.

 

ಜುಲೈ 9:

ಬಿಬಿಎಂಪಿ ವತಿಯಿಂದ ನಡೆದ ಕಾಂಪೋಸ್ಟ್ ಸಂತೆಯಲ್ಲಿ. ಫ್ರೌಢಶಾಲಾ ವಿಧ್ಯಾರ್ಥಿಗಳು ಪಾಲ್ಗೊಂಡು ಸಾವಯವವಾಗಿ ಮಾನವ ತ್ಯಾಜ್ಯವನ್ನು ಹೇಗೆ ಗೊಬ್ಬರವಾಗಿ ಪರಿವರ್ತಿಸಬಹುದು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ವಿವರಿಸಿದರು. ನಮ್ಮ ಆನಂದವನದಲ್ಲಿ ಈ ಪದ್ದತಿಯನ್ನು ಅಳವಡಿಸಿಕೊಂಡಿದ್ದು ಬಹಳ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಈ ಒಂದು ವಿಧಾನದ ಪ್ರಾತ್ಯಕ್ಷಿಕೆಗಾಗಿ ನಮ್ಮ ಶಾಲೆಯು ಪ್ರಥಮ ಬಹುಮಾನವನ್ನು ಪಡೆದಿದೆ.

 

ಜುಲೈ 10:

ಫ್ರೌಢಶಾಲಾ ವಿಧ್ಯಾರ್ಥಿಗಳು ಸಹ ಇಂದಿನ ದಿನ ಶಿಕ್ಷಕರಿಗೆ ವಿವಿಧ ರೀತಿಯ ಆಟಗಳನ್ನು ಆಡಿಸುವ ಮೂಲಕ ಗುರುಪೂರ್ಣಿಮೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು. ಶಿಕ್ಷಕರಿಗೆ ಒಂದೊಂದು ಸಸಿಗಳನ್ನು ಕಾಣಿಕೆಯಾಗಿ ನೀಡಿದರು.

 

ಜುಲೈ 13 ಮತ್ತು 14:

ಪೂರ್ಣಪ್ರಮತಿಯ ಫ್ರೌಢಶಾಲಾ ವಿಧ್ಯಾರ್ಥಿಗಳು ಅಂತರ್ ಶಾಲಾಮಟ್ಟದ ಕೌನ್ಸಿಲರ್ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಸಿದ್ದರು.

 

ಜುಲೈ 14:

ವಿಭಿನ್ನ ಪ್ರಯತ್ನಗಳನ್ನು ಕಲಿಯುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ ಪೂರ್ಣಪ್ರಮತಿಯ ಮಕ್ಕಳು ಹಾಗೂ ಅಧ್ಯಾಪಕರು ಗುರುನಾನಕ್ ಭವನದಲ್ಲಿ ಏರ್ಪಡಿಸಲಾಗಿದ್ದ  ” The Dark Lord” ಎಂಬ ನೃತ್ಯ ರೂಪಕವನ್ನು ವೀಕ್ಷಿಸಿದರು ಮತ್ತು ಆಧುನಿಕ ರಂಗಭೂಮಿಯ ಪ್ರಯೋಗಗಳನ್ನು ಸವಿದರು.

 

ಜುಲೈ 15:

ಪೂರ್ಣಪ್ರಮತಿಯ ಪೋಷಕರಿಗಾಗಿ ಶ್ರೀಮತಿ.ಸೌಮ್ಯ ರಾಮಜಿರವರು ಶಾಲೆಯಲ್ಲಿ ಕಲಿಕಾ ಪದ್ದತಿ ಮತ್ತು ಕಲಿಕೆಯ ಕ್ರಮದ ಬಗ್ಗೆ ವಿವರವಾಗಿ ತಿಳಿಸಿದರು.

 

ಜುಲೈ 18:

ಜವಹರಲಾಲ್ ನೆಹರು ತಾರಾಲಯದ ವತಿಯಿಂದ ರಾಬರ್ಟ್ ಹೂಕಿ ರವರ ಜನ್ಮ ದಿನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಜ್ಜಾನ ಕಾರ್ಯಾಗಾರದಲ್ಲಿ ನಮ್ಮ ಶಾಲೆಯ ಅಧ್ಯಾಪಕರು ಪಾಲ್ಗೊಂಡಿದ್ದರು.

 

ಜುಲೈ 20 ಮತ್ತು 21:

ಜವಹರಲಾಲ್ ನೆಹರು ತಾರಾಲಯದ ವತಿಯಿಂದ ನಡೆದ ಗಣಿತ ಕಾರ್ಯಾಗಾರದಲ್ಲಿ ನಮ್ಮ ಶಾಲೆಯ ಅಧ್ಯಾಪಕರು ಪಾಲ್ಗೊಂಡಿದ್ದರು.

 

ರಾಪಾನೂಯಿಯ ದುರಂತ ಕತೆ

ಒಂದು ಸಮೃದ್ಧ ದ್ವೀಪ ಏಳೆಂಟು ನೂರು ವರ್ಷಗಳ ಅವಧಿಯಲ್ಲಿ ಮನುಷ್ಯನ ಕೈಗೆ ಸಿಕ್ಕು ನಲುಗಿ, ತನ್ನ ಧಾರಣಶಕ್ತಿಯನ್ನು ಕಳೆದುಕೊಂಡು, ನಂತರದ ಕೇವಲ ನೂರು ವರ್ಷಗಳಲ್ಲಿ ಇಳಿಜಾರಿನಲ್ಲಿ ಉರುಳಿದ ಮಣ್ಣುಂಡೆಯ ಹಾಗೆ ಎಲ್ಲವನ್ನೂ ಕಳೆದುಕೊಂಡು ನಶ್ವರವಾಗುವ ಹಂತ ತಲುಪಿದ್ದು ಹೇಗೆ? ನಾಗೇಶ ಹೆಗಡೆಯವರ ಈ ಲೇಖನ ಓದಿ.

 

ಅಂಕಣಗಳುಲೇಖನಗಳು

 

ಕೃತಕ ಉಪಗ್ರಹಗಳ ಕುರಿತು ನಿಮಗೆಷ್ಟು ಗೊತ್ತು?

ನಮ್ಮ ದಿನನಿತ್ಯದ ಬದುಕಿನಲ್ಲಿ ಕೃತಕ ಉಪಗ್ರಹಗಳ ಪಾತ್ರ ಬಹಳ ದೊಡ್ಡದು. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲರ ಬದುಕನ್ನೂ ಅವು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸುತ್ತವೆ. ಅಂತರಿಕ್ಷದಲ್ಲಿರುವ ಉಪಗ್ರಹಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲವಲ್ಲ, ಹಾಗೆಯೇ ಅವುಗಳ ಮಹತ್ವವೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ. ಕಣ್ಣಿಗೆ ಕಾಣದ ಈ ಕಣ್ಮಣಿಗಳು ನಮ್ಮ ಬದುಕನ್ನು ಹೇಗೆಲ್ಲ ಪ್ರಭಾವಿಸುತ್ತವೆ? ವಿವರ ತಿಳಿಯಲು ಈ ಲೇಖನ ಓದಿ.

 

Recent Research On Language Learning – Conversation Skills

Mastering the language in just Grammar or the lessons from standard text book never results in holding good conversation in the language. Read more about the Recent Research On Language Learning and Conversation Skills in this article by Shylaja Holla.

 

ಸುಖ  v/s ಸಾರ್ಥಕ

ನಮ್ಮ ಬದುಕಿನ ಯಾತ್ರೆ ಹೇಗೆ ಸಾಗುತ್ತಿದೆ ಎಂಬುವುದು ಮುಖ್ಯವಲ್ಲ! ಸಾರ್ಥಕ್ಯದ ಹಾದಿಯಲ್ಲಿ ಸಾಗುತ್ತಿದೆಯಾ ಎಂಬುವುದಷ್ಟೇ ಮಾನ್ಯ. ನಮ್ಮ ಜೀವನದ ಸಾರ್ಥಕ್ಯ ದೈವ ಸಾಕ್ಷಾತ್ಕಾರ-ಮುಕ್ತಿಯಲ್ಲಿ, ವಿನ: ನಾವುಗಳಿಸುವ ಶಿಕ್ಷಣ, ದುಡಿಮೆ, ಅನುಭವಿಸುವ ಲಾಭ, ನಷ್ಟ ಎಲ್ಲವು ಅಮಾನ್ಯ. ಪೂರ್ಣಪ್ರಮತಿ ಅಧ್ಯಾಪಕರಾದ ಶ್ರೀನಾಥ ಅವರು ಬರೆದಿರುವ, ಈ ತಾತ್ಪರ್ಯ ತಿಳಿಸುವ ಕತೆ ಓದಲು ಇಲ್ಲಿ ಕ್ಲಿಕ್ ಮಾಡಿ.

 

ಚಿಣ್ಣರ ಅಂಗಳ

Stuti -Class 3

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it