ಜೀವನಾಡಿ – ಜೀವನದೀ

ಪೂರ್ಣಪ್ರಮತಿ

ಪೂರ್ಣಪ್ರಮತಿಯು ಭಾರತೀಯ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಒಂದು ನೂತನ ಪ್ರಯೋಗ. ಕೇವಲ ಆಧುನಿಕ ವಿದ್ಯೆಗಳಲ್ಲದೇ ಪಾರಂಪರಿಕ ವಿದ್ಯೆಗಳಲ್ಲೂ ಮಕ್ಕಳು ಪರಿಣತರಾಗಬೇಕೆಂಬುದು ಇದರ ಉದ್ದೇಶ. ಅಂತಹ ಪಾರಂಪರಿಕ ವಿದ್ಯೆಗಳ ವ್ಯಾಪ್ತಿಯೂ ಹಿರಿದು, ಭಾಷೆಗಳೂ ಹಲವು. ಇವುಗಳು ಹಳ್ಳಿಗಳ ನೀರಿನ ವ್ಯವಸ್ಥೆಯಿಂದ ಹಿಡಿದು, ಗುಡ್ಡಗಾಡಿನ ಆರೋಗ್ಯ ವ್ಯವಸ್ಥೆಯವರೆಗೂ ಹಬ್ಬಿವೆ. ಕೆಲವು ಸಂಸ್ಕೃತದಂತಹ ಶಾಸ್ತ್ರೀಯ ಭಾಷೆಗಳಲ್ಲಿದ್ದರೆ, ಮತ್ತೆ ಕೆಲವು ಜಾನಪದದ ಜನಜೀವನದಲ್ಲಿವೆ. ಈ ವೈವಿಧ್ಯತೆಯ ಜೊತೆಗೆ ಸಾಂಸ್ಕೃತಿಕ ಹಿನ್ನೆಲೆಗಳೂ, ಪ್ರಾಚೀನ ನಂಬಿಕೆಗಳೂ, ಜೀವನದ ಅನುಭವ-ಗಳೂ ಬೆರೆತಿವೆ. ಆ ವಿದ್ಯೆಗಳನ್ನು ಮತ್ತೆ ಪುನರುಜ್ಜೀವನಗೊಳಿಸಬೇಕು. ಅದು ಮಕ್ಕಳ ಶಿಕ್ಷಣದ ಹಂತದಲ್ಲೇ ಆಗಬೇಕು ಎಂಬುದು ಪೂರ್ಣಪ್ರಮತಿಯ ಆಶಯ.

ಮಕ್ಕಳ ಕಲಿಕೆಯಲ್ಲಿನ ತಾಂತ್ರಿಕತೆಯ ಜಡತ್ವಕ್ಕೆ ಸಾಮಾಜಿಕತೆಯ ಜೀವ ತುಂಬಲು ಸಮರ್ಥವಾದದ್ದು ಈ ಪ್ರಯತ್ನ ಎಂಬುದು ಪೂರ್ಣಪ್ರಮತಿಯ ನಂಬಿಕೆ. ಅದರಲ್ಲೂ ನದಿ ಮತ್ತು ನೀರು ನಮ್ಮ ವ್ಯವಸ್ಥೆಯ ಜೀವನಾಡಿಗಳಿದ್ದಂತೆ. ಇಲ್ಲಿಂದ ಆರಂಭಗೊಂಡು, ನಿಧಾನವಾಗಿ ಈ ನಾಡಿನ ಜನಪದದಲ್ಲಿ ಹಾಗೂ ಶಾಸ್ತ್ರೀಯ ಪದ್ಧತಿಗಳಲ್ಲಿ ಅಡಗಿರುವ ಆರೋಗ್ಯ ವಿದ್ಯೆಗಳು, ಕಲೆಗಳು, ಬೇಸಾಯದ ವ್ಯವಸ್ಥೆ, ಪರ್ವತ ಮತ್ತು ಕಾಡಿನ ಜೀವವೈವಿಧ್ಯತೆಯೊಂದಿಗೆ ಕೂಡಿ ಬಾಳುವ ಬದುಕಿನ ದೃಷ್ಟಿ ಮೊದಲಾದ ಅನೇಕ ವಿಚಾರಗಳಲ್ಲಿ ಶ್ರೀಮಂತಿಕೆಯನ್ನು ಹೊರಹೊಮ್ಮಿಸುವ ಮಹತ್ವಾಕಾಂಕ್ಷೆ ಈ ಪುಟ್ಟ ಶಾಲೆಯದು.

ಜೀವನಾಡಿ – ಜೀವನದಿ

ದೇಹದ ಜೀವಕ್ಕೆ ಹಾಗೂ ದೇಶದ ಜೀವಕ್ಕೆ ಎರಡಕ್ಕೂ ಬೇಕಾದ್ದು ಒಂದೇ. ಜೀವನಾಡಿ. ನಾವು ನೀವೆಲ್ಲ  ಬದುಕಿರುವುದು ಈ ನಾಡಿಯಿಂದಲೇ. ಇದು ಜೀವನದ ನಾಡಿ. ಜೀವಸಂಕುಲದ ನಾಡಿ. ಜೀವಚೈತನ್ಯದ ನಾಡಿ.  ಜೀವಿಯೊಂದು ಬದುಕಿರುವುದು ಈ ನಾಡಿಯಿಂದಲೇ. ಬದುಕಿರುವುದನ್ನು ತಿಳಿಯುವುದೂ ಈ  ನಾಡಿಯಿಂದಲೇ. ದೇಹದೊಳಗಣ ನಾಡಿಗಳ ಮೂಲಕವೇ ಆಹಾರದ ಪೂರೈಕೆ. ಈ ನಾಡಿಗಳೇ ಉಸಿರಿಗೂ ಆಸರೆ. ಹಾಗೆಯೇ ಜ್ಞಾನಸಂವಹಕಗಳೂ ಕೂಡ. ಆರೋಗ್ಯದ ರಕ್ಷಣೆಯೂ ಈ ನಾಡಿಗಳಿಂದಲೇ. ನೆತ್ತರ ಶುದ್ಧಿಯೇ ದೇಹಶುದ್ದಿ ಅಲ್ಲವೇ. ನಾಡಿಗಳು ಬೇಕು. ಅದರಲ್ಲಿ ನೆತ್ತರ ಹರಿವು ಬೇಕು. ಆ ನೆತ್ತರಿನ ಶುದ್ಧಿ ಬೇಕು. ಆಗ ಮಾತ್ರ ನಮ್ಮೆಲ್ಲರ ಬದುಕು ಉಳಿಯಲು ಸಾಧ್ಯ.

ದೇಶದಲ್ಲೂ ಇಂಥದೊಂದು ವಿನ್ಯಾಸವಿದೆ. ಜನಜೀವನದಲ್ಲಿ ಇಂಥ ಹಲವು ಆವಶ್ಯಕತೆಗಳಿವೆ. ಅದಕ್ಕಾಗಿ ಪ್ರಕೃತಿಯೂ ಒಂದು ದೇಶದ ಜೀವನಾಡಿಯನ್ನು ಒದಗಿಸಿದೆ.  ಅದೇ ಜೀವನದಿ. ಇದೂ ಅಷ್ಟೇ. ಆಹಾರವಾಗಿ ಬೇಕು. ಆಹಾರಕ್ಕಾಗಿಯೂ ಬೇಕು. ಆಹಾರವನ್ನು ಬೆಳೆಯಲು ಬೇಕು. ಯೋಗಿಗಳ ಮನ:ಸಮಾಧಾನಕ್ಕೂ ಬೇಕು. ಜ್ಞಾನಿಗಳ ಅಂಗಣವಾಗಿಯೂ ಬೇಕು. ಆ ಮೂಲಕ ತಿಳಿವಿನ ಪ್ರಾಂಗಣವಾಗಲು. ಹಾಗೆಯೇ ಬೀಸುವ ತಂಪಿಗೂ ಬೇಕು. ಜೀವಚಕ್ರದ ಕೊಂಡಿಯಾಗಿಯೂ ಬೇಕು. ಇಳೆಯ ಎಳೆಯಾಗಿಯೂ ಬೇಕು. ಇಳೆಯನ್ನು ಹೆಣೆಯಲೂ ಬೇಕು. ಇದೊಂದು ಭೌಗೋಳಿಕ ಹಾಗೂ ಸಾಂಸ್ಕೃತಿಕ ಲಕ್ಷಣ. ಈ ನದಿಗಳ ಇರವು ಬೇಕು. ನದಿಗಳಲ್ಲಿ ಹರಿವ ನೀರು ಬೇಕು. ಆ ನೀರಿನ ಶುದ್ಧಿ ಬೇಕು. ಆಗ ಮಾತ್ರ ನಮ್ಮೆಲ್ಲರ ಬದುಕು ಬೆಳೆಯಲು ಸಾಧ್ಯ.

ಬನ್ನಿ, ದೇಶದ ಜೀವನಾಡಿಗಳನ್ನು ಉಳಿಸೋಣ. ಸಹಜತೆಯ ಸೌಂದರ್ಯವನ್ನು ಕಾಪಾಡೋಣ.

ಪೂರ್ಣಪ್ರಮತಿ  ಕುಮುದ್ವತಿ

ಆಧುನಿಕತೆ ಮತ್ತು ಪಾರಂಪರಿಕತೆಯ ಸಮಷ್ಟಿ ಕಲಿಕೆಯನ್ನು ಇಂದಿನ ಭಾರತೀಯ ಸಮಾಜದ ಅಗತ್ಯಗಳಿಗೆ ಉಪಯೋಗಿಸುವುದು ಈ ಶಾಲೆಯ ಮುಖ್ಯ ಧ್ಯೇಯ. ಹಾಗೇ ಪಾರಂಪರಿಕ ವಿದ್ಯೆಗಳನ್ನು ಇಂದಿನ ಸಾಮಾಜಿಕ ಕ್ಷೇತ್ರಗಳಲ್ಲಿ ಬಳಸಿರುವ ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದು ಈ ಕೆಲಸಗಳನ್ನು ಮಾಡಲಾಗುತ್ತಿದೆ. ಉದಾಹರಣೆಗೆ, ಇಂದಿನ ಸಮಾಜದ ನದಿ ಹಾಗೂ ನೀರಿನ ಸಮಸ್ಯೆಗಳನ್ನು ಗಮನಿಸಿ, ಅದಕ್ಕಾಗಿ ಮಕ್ಕಳಿಗೆ ನೀರನ್ನು ಕುರಿತಾದ ಪಾರಂಪರಿಕ ದೃಷ್ಟಿಕೋನವನ್ನು ಬೆಳೆಸಲಾಗುತ್ತಿದೆ. ಭಾರತದ ಆಧುನಿಕ ಭಗೀರಥ ಎಂದೇ ಹೆಸರಾದ ರಾಜೇಂದ್ರ ಸಿಂಗ್ ರನ್ನು ಪೂರ್ಣಪ್ರಮತಿ ಸಮ್ಮಾನ್ ನಿಂದ ಗೌರವಿಸಲಾಯಿತು. ನಂತರವೂ ಆಗಿದ್ದಾಂಗೆ ಅವರನ್ನು ಶಾಲೆಗೆ ಕರೆಸಿ, ಅವರಿಂದ ನದಿ ಮತ್ತು ನೀರನ್ನು ಕುರಿತಾದ ಪಾರಂಪರಿಕ ಜ್ಞಾನದ ಮಹತ್ವವನ್ನು ತಿಳಿದು, ನದಿ ಪುನಶ್ಚೇತನ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಈ ಶಾಲೆ ಬದ್ಧವಾಗಿದೆ.

೨೦೧೨-೧೩ರ ಶೈಕ್ಷಣಿಕ ವರ್ಷದಲ್ಲಿ ನದಿ ಮತ್ತು ನೀರನ್ನು ಕುರಿತಾಗಿಯೇ ಮಕ್ಕಳ ಶಿಕ್ಷಣ ಹಾಗೂ ಸಾಮಾಜಿಕ ಕೆಲಸಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಕುಮುದ್ವತಿ ನದಿಯನ್ನು ಆಯ್ಕೆ ಮಾಡಲಾಯಿತು. ಅದರ ಮೊದಲ ಹೆಜ್ಜೆಯಾಗಿ ದೈವಪ್ರೇರಣೆಯೋ ಎಂಬಂತೆ ಶಾಲೆಯು ಆರಂಭವಾದದ್ದೇ ಭಾಗೀರಥೀ ಜಯಂತಿಯಂದು (ಮೇ ೩೦ ೨೦೧೨). ಅಂದಿನ ದಿನ ಮಕ್ಕಳು ಕಾಲ್ನಡಿಗೆಯಲ್ಲೇ ಶಿವಗಂಗೆ ಬೆಟ್ಟವನ್ನೇರಿ ಇದರ ಅಧ್ಯಯನ ಆರಂಭಿಸಿದರು. ಈಗ ಎರಡನೇ ಹೆಜ್ಜೆಯಾಗಿ, ಆಗಸ್ಟ್ ೧೧ ರಂದು ರಾಜೇಂದ್ರ ಸಿಂಗ್ ರವರ ನೇತೃತ್ವದಲ್ಲಿ, ಅನೇಕ ಹಿರಿಯರ ಮಾರ್ಗದರ್ಶನದಲ್ಲಿ, ಸುತ್ತಮುತ್ತಲ ಹಳ್ಳಿಗಳ ಸಮುದಾಯಗಳೊಂದಿಗೆ ಸೇರಿ ನದಿ ಪುನಶ್ಚೇತನದ ವಿಧ್ಯುಕ್ತ ಚಾಲನೆಯಲ್ಲಿ ಶಾಲೆಯು ಭಾಗವಹಿಸುತ್ತಿದೆ.

Purnapramati

Purnapramati is a newly established alternative school working with a vision to integrate indigenous and modern knowledge systems at the level of elementary education. The indigenous knowledge is spread over numerous disciplines ranging from water management in villages to health care in tribal areas. While a part of this corpus of knowledge is codified in classical languages like Sanskrit, a lot of it is in the folklore. These knowledge systems are inseparably intertwined with culture, tradition and ancient wisdom. The vision of Purnapramati is to rejuvenate them and to start that rejuvenation from early childhood.

It is believed that this integrated learning can go a long way in providing a social meaning to the otherwise dry technical education. In an effort to realize this dream, Purnapramati has started working on river systems, the central theme of life. Beginning from here, little Purnapramati has an ambition to explore into the folklore and the codified classical knowledge to understand and apply other indigenous systems that talk about health care, arts, agricultural systems and the fundamental relationship between mankind and the biodiversity in mountains and forests.

Jeevanadi – Jeevanaadi (“River as Life”)

There is an interesting commonality between the basic needs of a human body and those of a civilization. This is the essential “lifeline” called naadi. Every one of us is living because of this lifeline. The word naadi in Ayurveda refers to blood vessels and nerves. These lifelines are conduits for food, oxygen and sensations. Hence, the health of a person is primarily identified by these naadis. After all, pure health requires pure blood and pure blood implies pure health. Therefore we need conduits for blood, we need the continuous unobstructed flow of blood, and we need the purity in that flow, to preserve the health of mankind.

There are similar needs in a civilization. Not surprisingly, there is a similar structure for the health of a civilization. Even this is referred to as lifeline, called nadi, the river. Rivers function similar to blood vessels and nerves. They are needed for food. They act as conduits of civilizational wisdom, to create knowledge and to disseminate knowledge. They provide the serenity for holistic health. They act as the primary link in the life of an ecosystem. They are basic threads of life and fertility in land. The rivers also act as geo-cultural markers. Therefore we need rivers, we need a continuous unobstructed flow, and we need purity in that flow, to preserve the health of a civilization.

Come, let’s preserve these civilizational lifelines. Let’s protect the natural beauty.

Purnapramati – Kumudvati

The central motto of the school is to use this integrated learning for the current social needs. Inspired from such great personalities, who use traditional knowledge for modern needs, the school is also innovating similar methods. For example, understanding today’s issues with rivers and water supply, the kids are actively exposed to the traditional outlook in the aspects of water management. In this context, Purnapramati honored Sri Rajendra Singh, popularly known as Modern Day Bhagiratha, with Purnapramati Samman. After that too, Sri Rajendra Singh is being invited frequently to the school and is interacting with the kids about the river, the indigenous water management systems etc. Starting from this process the school is slowly involving into social activities like river rejuvenation.

In the current academic year (2012-13), the school has organized many socio-educational programs connected to the theme – “River as Life”. River Kumudvati is chosen for this purpose. Suggesting a divine coincidence, the school started this year on Bhageerathi Jayanthi (30th May.) On that day, the kids trekked and climbed the Shivaganga hills as a first step in their learning process. Now, as a second step, the school is participating in the launching of Kumudvati rejuvenation activity under the leadership of Rajendra Singh on 11th of August. Purnapramati is actively engaging with the village communities and is ably guided by many experts.

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it