Seminar on Primary Education and Ecology

ಪೂರ್ಣಪ್ರಮತಿ ವ್ಯಾಖ್ಯಾ: ೨೦೧೩-೧೪

ವಿಚಾರ ಸಂಕಿರಣ: ಪ್ರಾಥಮಿಕ ಶಿಕ್ಷಣ ಮತ್ತು ಪರಿಸರ ವಿಜ್ಞಾನ
ವಿಷಯ: ಜೀವನದ ಕೇಂದ್ರಬಿಂದುವಾಗಿ ಪ್ರಾಥಮಿಕ ಶಿಕ್ಷಣದಿಂದಲೇ ನಿಸರ್ಗ ಅಧ್ಯಯನದ ಆರಂಭ.
ದಿನಾಂಕ: ೧ನೇ ಜನವರಿ, ೨೦೧೪
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ

ವಿಚಾರ ಮಂಡನೆ ಮಾಡಿದವರು
೧.    à²¶à³à²°à³€  ಎಲ್ಲಪ್ಪ ರೆಡ್ಡಿ (ನಿವೃತ್ತ IFS, ಲೋಕ ಅದಾಲತ್ ಸದಸ್ಯರು, ಕರ್ನಾಟಕ ಉಚ್ಚ ನ್ಯಾಯಾಲಯ)
೨.    à²¶à³à²°à³€ ನಾಗೇಶ್ ಹೆಗಡೆ (ಬರಹಗಾರರು ಮತ್ತು ಪರಿಸರ ತಜ್ಞರು)
೩.    à²¡à²¾. ಶರಚ್ಚಂದ್ರ ಲೇಲೆ (A TREE ಸಂಸ್ಥೆಯ ಹಿರಿಯ ಚಿಂತಕರು)
೪.    à²ªà³à²°à³Š. ದೀಪಕ್ ಮಲ್ಗಾನ್ (Centre for Public Polity, IIM)
೫.    à²ªà³Š. ಕೆ.ಎನ್. ಗಣೇಶಯ್ಯ (ಪರಿಸರ ತಜ್ಞರು ಮತ್ತು ಕಾದಂಬರಿ ಬರಹಗಾರರು)
೬.    à²¹à²°à³€à²¶à³ ಭಟ್ (ಪರಿಸರ ತಜ್ಞರು, ಐ.ಐ.ಎಸ್.ಸಿ)

ಮುಖ್ಯ ಅತಿಥಿಗಳು (೨೦೧೩-೧೪ರ ಪೂರ್ಣಪ್ರಮತಿ ಸಮ್ಮಾನ್ ಪುರಸ್ಕೃತರು)
ಶ್ರೀಮತಿ ತುಳಸಿ ಗೌಡ (ಬುಡಕಟ್ಟು ಹಾಲಕ್ಕಿ ಜನಾಂಗದ ಪರಿಸರ ಕಾರ್ಯಕರ್ತರು)

ಅಧ್ಯಕ್ಷರು
ಶ್ರೀ ರಾಜೇಂದ್ರ ಸಿಂಗ್ (ಮಾಗ್ಸೇಸೆ ಪ್ರಶಸ್ತಿ ವಿಜೇತರು, ಭಾರತದ ನೀರಿನ ಮನುಷ್ಯ, ಆಧುನಿಕ ಭಗೀರಥ)

ಸಭಾಧ್ಯಕ್ಷರು
ಪ್ರೊ.ಡಿ.ಪ್ರಹ್ಲಾದಾಚಾರ್ಯರು (ನಿವೃತ್ತ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳು, ತಿರುಪತಿ)

ಚರ್ಚೆಯಲ್ಲಿ ಭಾಗವಹಿಸಿದವರು
ಶ್ರೀನಿವಾಸ ವರಖೇಡಿ (ಸಂಸ್ಕೃತ ವಿದ್ವಾಂಸರು, ಸಂಸ್ಕೃತ ವಿಶ್ವವಿದ್ಯಾಲಯ) ಪೂರ್ಣಪ್ರಮತಿಯ ಅಧ್ಯಾಪಕರು ಮತ್ತು ತಂಡ, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು, ದೂರದೂರಿನಿಂದ ಬಂದ ಆಸಕ್ತರು, ಹಲವು ಸಂಸ್ಥೆಗಳ ಪ್ರತಿನಿಧಿಗಳು, ಮಾದ್ಯಮ ಪ್ರತಿನಿಧಿಗಳು

ವಿಚಾರ ಸಂಕಿರಣದ ಹಿನ್ನಲೆ/ಉದ್ದೇಶ
ಪೂರ್ಣಪ್ರಮತಿ ಒಂದು ಶಾಲೆ ಎಂಬುದಕ್ಕಿಂತ ಹೆಚ್ಚಾಗಿ ಒಂದು ಸಂಶೋಧನಾಲಯವಾಗಿದೆ. ಶಿಕ್ಷಣದ ಮೂಲಕ ಭಾರತೀಯ ತತ್ತ್ವಜ್ಞಾನವನ್ನು ಉಳಿಸುವ, ಬೆಳೆಸುವ ಕೈಂಕರ್ಯದಲ್ಲಿ ತೊಡಗಿದೆ. ಇದರ ಮೂಲ ಉದ್ದೇಶ ಬೀಜರಕ್ಷಣೆ. ಸಂಸ್ಕೃತಿ, ಜ್ಞಾನ, ಪರಂಪರೆ ಇತ್ಯಾದಿ ಆಯಾಮಗಳಲ್ಲಿ ಮುಂದಿನ ಜನಾಂಗಕ್ಕೆ ಭಾರತೀಯತೆಯನ್ನು ತಲುಪಿಸುವ ಸಲುವಾಗಿ ಬೀಜರಕ್ಷಣೆಯಲ್ಲಿ ತೊಡಗಿದೆ. ಪ್ರಕೃತಿ-ಸಂಸ್ಕೃತಿ-ಅಧ್ಯಾತ್ಮ ಈ ಮೂರನ್ನು ಬೆಸೆಯುವ ಮಾದ್ಯಮವಾಗಿ ಪೂರ್ಣಪ್ರಮತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ರೂಪಿಸಲಾಗಿದೆ. ವರ್ಷಕ್ಕೊಂದು ವಿಷಯವನ್ನು ಅಧ್ಯಯನ ಮಾಡುತ್ತಾ ಉಳಿದೆಲ್ಲ ಚಟುವಟಿಕೆಗಳನ್ನು, ಕಲಿಕೆಯನ್ನೂ ಇದಕ್ಕೇ ಪೂರಕವಾಗಿ ರಚಿಸಲಾಗುವುದು. ಜೀವೋ ಜೀವಸ್ಯ ಜೀವನಂ ಎಂಬ ಈ ವರ್ಷದ ವಿಷಯವನ್ನು ಪಶ್ಚಿಮಘಟ್ಟಗಳಿಂದ ಆರಂಭಿಸಿ, ಉತ್ತರಾಖಂಡದಲ್ಲಾದ ಜಲಪ್ರಳಯದವರೆಗೆ ಹಲವು ಆಯಾಮಗಳಲ್ಲಿ ಅಭ್ಯಾಸ ಮಾಡಲಾಯಿತು. ಇದನ್ನು ಪೂರ್ಣಪ್ರಮತಿ ಜಾತ್ರೆಯ ಮೂಲಕ ಎಲ್ಲರೊಂದಿಗೆ ಹಂಚಿಕೊಳ್ಳಲಾಯಿತು. ಹರೀಶ್ ಭಟ್, ನಾಗೇಶ್ ಹೆಗಡೆ ಮತ್ತು ಎಲ್ಲಪ್ಪ ರೆಡ್ಡಿಯಂತಹ ನುರಿತಜ್ಞರ ಮಾರ್ಗದರ್ಶನದಲ್ಲಿ ವಾರಕ್ಕೊಮ್ಮೆ ಪರಿಸರ ತರಗತಿಗಳನ್ನೂ ಸಹ ಆಯೋಜಿಸಲಾಗಿತ್ತು.

ಜೀವೋ ಜೀವಸ್ಯ ಜೀವನಂ ವಿಷಯವನ್ನು ಮತ್ತಷ್ಟು ಆಯಾಮಗಳಿಂದ ನೋಡುತ್ತಾ ಮಾನವನ ಜೀವನದಲ್ಲಿ ಮರೆಯಾಗುತ್ತಿರುವ ಪರಿಸರವನ್ನು ಪುನಃ ಹೇಗೆ ಸ್ಥಾಪಿಸಬಹುದು ಎಂಬುದು ಪೂರ್ಣಪ್ರಮತಿ ವ್ಯಾಖ್ಯಾ ೨೦೧೩-೧೪ರ ಚರ್ಚೆಯ ವಿಷಯ. ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಲ್ಲಿ ಪರಿಸರಜಾಗೃತಿಯನ್ನು ತರುವ ಜಿಜ್ಞಾಸೆಯೊಂದಿಗೆ ಈ ವಿಚಾರಸಂಕಿರಣವನ್ನು ಆಯೋಜಿಸಲಾಗಿತ್ತು. ಹಲವು ತಜ್ಞರು ಈ ವಿಚಾರವಾಗಿ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ವಿಚಾರಗೋಷ್ಠಿಗೆ ಮೊದಲು ಪ್ರೊ.ಡಿ. ಪ್ರಹ್ಲಾದಾಚಾರ್ಯರು ಮಾತನಾಡಿ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಉಲ್ಲೇಖಿಸಲಾಗಿರುವ ಯಾಜ್ಞವಲ್ಕ್ಯ ಮತ್ತು ದಶರಥನ ಆಸ್ಥಾನದ ವಿದ್ವಾಂಸರ ನಡುವೆ ನಡೆದ ಪ್ರಕೃತಿಗೆ ಸಂಬಂಧಿಸಿದ ಪ್ರಶ್ನೋತ್ತರಗಳ ಸಂದರ್ಭವನ್ನು ತಿಳಿಸಿದರು, ‘ಪ್ರಕೃತಿಯ ರಹಸ್ಯಗಳನ್ನು ಭೇದಿಸುವುದು ಒಂದು ಹಂತಕ್ಕೆ ನಿಲ್ಲಬೇಕು. ಇಲ್ಲವಾದರೆ ಮುಂದುವರೆದ ಅನ್ವೇಷಣೆಯು ಮನುಕುಲದ ವಿನಾಶಕ್ಕೆ ನಾಂದಿಯಾದೀತು! ಎಂದು ಯಾಜ್ಞವಲ್ಕ್ಯರು ಎಚ್ಚರಿಸುತ್ತಾರೆ. ಆದರೆ ಇಂದು ಮನುಷ್ಯನು ಪ್ರಕೃತಿಯನ್ನು ಅರಿಯುವ ಗೋಜಿಗೇ ಹೋಗದೆ ಕೇವಲ ತನ್ನ ಇಚ್ಛೆಗೆ ಬಳಸಿಕೊಳ್ಳುತ್ತಿದ್ದಾನೆ. ಇದರಿಂದಲೂ ಪ್ರಕೃತಿಯ ನಾಶವಾಗುತ್ತಿದೆ. ಅಂತಿಮವಾಗಿ ಅದರ ಪರಿಣಾಮ ಮನುಕುಲದ ಮೇಲೆ ಆಗುವುದು ಕಾಣುತ್ತಿದೆ. ನಾಶವಾಗದೆ ಉಳಿಯಬೇಕಾದರೆ ಸರಿಯಾದ ರೀತಿಯಲ್ಲಿ ಪ್ರಕೃತಿಯನ್ನು ಅರಿಯುವುದು ಮುಖ್ಯ’ ಎಂಬುದನ್ನು ಹೇಳಿ ಮುಂದಿನ ವಿಚಾರ ಮಂಥನಕ್ಕೆ ಪೀಠಿಕೆಯನ್ನು ಹಾಕಿಕೊಟ್ಟರು.

ಅಧ್ಯಕ್ಷರಾದ ರಾಜೇಂದ್ರ ಸಿಂಗ್ ಅವರು ವಿಷಯವನ್ನು ಮುಂದಿಟ್ಟರು:
‘ದಶರಥನು ಭೋಗದಲ್ಲಿ ಮುಳುಗಿದ್ದಾಗ ಯಾಜ್ಞವಲ್ಕ್ಯರಂತಹ ತಿಳಿದವರು ಬಂದು ಎಚ್ಚರಿಸಿದರು. ಆದರೆ ಇಂದಿನ ಶಿಕ್ಷಣವ್ಯವಸ್ಥೆಯನ್ನು ರೂಪಿಸುವವರನ್ನು ಯಾರೂ ಎಚ್ಚರಿಸುವವರಿಲ್ಲ. ನನ್ನ ಗುರುಗಳು ಶಾಲೆಯಲ್ಲಿ ಕಲಿಯದ ಒಬ್ಬ ರೈತರಾಗಿದ್ದರು. ಅವರು ನನ್ನ ಪಿ.ಹೆಚ್.ಡಿ ವಿಷಯವನ್ನು ಮೂರೇ ದಿನದಲ್ಲಿ ವಿಮರ್ಶಿಸಿದ್ದರು. ಹಿಂದೆ ಬಹಳ ಸರಳವಾಗಿ ಸಹಜವಾಗಿ ಸಿಗುತ್ತಿದ್ದ ಉತ್ತಮ ಶಿಕ್ಷಣ ಇಂದು ಕಷ್ಟಪಟ್ಟರು ಸಿಗದಾಗಿದೆ. ಮುಂದೆ ನಡೆಯಲಿರುವ ಚರ್ಚೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಬೇಕು’.

ನಾಗೇಶ್ ಹೆಗಡೆ ಸ್ವತಃ ಪರಿಸರತಜ್ಞರು ಮತ್ತು ಅನುಭವಗಳನ್ನು ಪರಿಣಾಮಕಾರಿಯಾದ ಬರವಣಿಗೆಯ ಮೂಲಕ ಜನರಿಗೆ ಮುಟ್ಟಿಸುವವರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು: ಇಂದಿನ ಪರಿಸ್ಥಿತಿಯನ್ನು ಎರಡು ಮುಖಗಳಲ್ಲಿ ನೋಡಬಹುದು. ಮಕ್ಕಳಿಂದ ಕಲಿಯಬೇಕಾದ ಎಷ್ಟೋ ತಂತ್ರಜ್ಞಾನಗಳಿವೆ. ಅಂತೆಯೇ, ಮಕ್ಕಳು ಮರೆಯುತ್ತಿರುವ ಎಷ್ಟೋ ನಿಸರ್ಗದ ಪಾಠಗಳೂ ಇವೆ. ಇಂದಿನ ಸಮೂಹಮಾದ್ಯಮಗಳ ಮೂಲಕ ಮಕ್ಕಳಲ್ಲಿ ಭೋಗಸಂಸ್ಕೃತಿಯನ್ನು ಹುಟ್ಟಿಸಿ ಬೆಳೆಸಲಾಗುತ್ತಿದೆ. ನಾಗರೀಕತೆಯ ಲಕ್ಷಣಗಳಾದ ನದಿ, ಕೆರೆ, ಗಿಡ, ಮರ, ಚರಂಡಿ ವ್ಯವಸ್ಥೆಗಳು ಇಂದಿನ So called infrastructure ಪಟ್ಟಿಗೆ ಸೇರಿಯೇ ಇಲ್ಲ. ಬದಲಾಗಿ ಕಾಡುಗಳನ್ನು ನಾಶ ಮಾಡಿ ಕಟ್ಟಲಾತ್ತಿರುವ ರಸ್ತೆಗಳು, ಅಣೆಕಟ್ಟುಗಳು, ವಿದ್ಯುತ್ ಯೋಜನೆಗಳು, ಮಾಲ್‌ಗಳು ಮಾತ್ರ ನಾಗರಿಕತೆಯಾಗಿದೆ. ಇದು ಮನೆ, ಶಾಲೆ ಎಲ್ಲದರ ಮೇಲೂ ಪ್ರಭಾವ ಬೀರುತ್ತಿವೆ. ಲಂಡನ್‌ನಲ್ಲಿ ೨೦ ವರ್ಷಗಳ ಹಿಂದೆ ಒಂದು ಹೊಸ ವಿಷಯವನ್ನು ಪರಿಚಯಿಸಲಾಯಿತು. ಅದು ಅಂದಿನ ಅಗತ್ಯವನ್ನು ಆಧರಿಸಿ ರಚಿಸಲಾಗಿತ್ತು. Solid Waste Management ಬಗ್ಗೆ ೧ ವರ್ಷದ ತರಬೇತಿ. ಅಂದಿನ ಅಗತ್ಯವನ್ನು, ಸವಾಲುಗಳನ್ನು ಎದುರಿಸಲು ೩೦೦ ಜನ ತಜ್ಞರನ್ನು ತಯಾರು ಮಾಡಿ ಸಮಾಜಕ್ಕೆ ನೀಡಲಾಯಿತು. ಅದಕ್ಕಾಗಿ ವಿಶೇಷ ಪಠ್ಯವನ್ನು ರಚಿಸಲಾಯಿತು. ಆದರೆ ನಮ್ಮ ದೇಶದಲ್ಲಿ ಭೂಪಾಲ್ ಅನಿಲ ದುರಂತ ಇದುವರೆಗೆ ನಮ್ಮ ಮಕ್ಕಳ ಪಠ್ಯಪುಸ್ತಕದಲ್ಲಿ ಬಂದಿಲ್ಲ. ಹೊಸ ವಿಷಯವೊಂದು ಪಠ್ಯಪುಸ್ತಕ ಸೇರಲು ೧೫ ವರ್ಷಗಳೇ ಬೇಕು. ಈಗಾಗಲೇ ಮೇಲ್ಮೈ ನೀರು, ೫೦೦ ಅಡಿ, ೧೦೦೦ ಅಡಿಗಳ ನೀರನ್ನು ಮುಗಿಸಿದ್ದೇವೆ. ಆದರೆ ನಾವಷ್ಟೇ ಈ ಭೂಮಿಯ ಮೇಲೆ ಇರುವುದಲ್ಲ!! ನಮ್ಮೊಂದಿಗೆ ಅನೇಕ ಜೀವಿಗಳೂ ಇವೆ. ಅವುಗಳ ಹಕ್ಕನ್ನೂ ನಾವು ಕಿತ್ತುಕೊಳ್ಳುತ್ತಿದ್ದೇವೆ. ಪರಿಸರದ ಬಗ್ಗೆ ಸೂಕ್ಷ್ಮವಾಗಿ ಯೋಚಿಸಿ, ಕಾರ್ಯೋನ್ಮುಖರಾಗುವವರನ್ನು ಇಂದು ಹುಡುಕಬೇಕಿದೆ. ವೃತ್ತಿ ಯಾವುದೇ ಆದರೂ, ವಿದ್ಯಾಭ್ಯಾಸ ಯಾವ ಕ್ಷೇತ್ರದಲ್ಲೇ ಆದರೆ ನಿಸರ್ಗದೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳುವಂತಹ ಮಕ್ಕಳನ್ನು ನಾವು ಇಂದು ತಯಾರು ಮಾಡಬೇಕಿದೆ. ಪದವಿ ಶಿಕ್ಷಣಕ್ಕೆ ಬಂದ ನಂತರ ಪರಿಸರ ಅಧ್ಯಯನ ಆರಂಭಿಸುವುದಕ್ಕಿಂತ, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಜಾಗೃತಿಯನ್ನು ತರುವುದು ಮುಖ್ಯ. ಇಂತಹ ಶಿಕ್ಷಣವನ್ನು ನಾವು ಕೊಡಬೇಕಾಗಿದೆ. ಇದಕ್ಕಾಗಿ ವಿಶೇಷ ಪಠ್ಯವನ್ನು ತಯಾರುಮಾಡಬೇಕಿದೆ. ಅದೃಷ್ಟವಶಾತ್ ಪೂರ್ಣಪ್ರಮತಿಯ ಶಿಕ್ಷಕರೆಲ್ಲರೂ ಒಟ್ಟಾಗಿ ಇದಕ್ಕೆ ಪೂರಕವಾಗಿ ಕೆಲಸಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪಠ್ಯಪುಸ್ತಕವನ್ನು ಓದದೆ ಅದನ್ನೂ ಮೀರಿಸುವ ಅನುಭವವನ್ನು ಚರ್ಚೆಯಲ್ಲಿ ಮುಂದಿಟ್ಟವರು ತುಳಸಿ ಗೌಡ ಅವರು. ಅವರು ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸುಮಾರು ೨ ಲಕ್ಷ ಸಸಿಗಳನ್ನು ಬೆಳೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೀಸಂ, ಸಾಗೋನಿ, ಮತ್ತಿ, ಹೊನ್ನೆ, ಹಿಂದೋಳ ಮತ್ತಿ, ನಂದಿ, ಆಲ ಮುಂತಾದ ಬೀಜಗಳನ್ನು ಸಂಸ್ಕರಿಸಿ ಸಸಿಗಳನ್ನು ಮಾಡುವುದು ಇವರ ವಿಜ್ಞಾನ. ಸ್ವಂತ ಕಾಳಜಿಯಿಂದ ಗಿಡಗಳ ಪಾಲನೆಯಲ್ಲಿ ತೊಡಗುವ ಇವರು ಸಸ್ಯಗಳ ಬಗ್ಗೆ ಅಧ್ಯಯನ ಮಾಡಿರುವವರೂ ಸಹ ಬೀಜಸಂಸ್ಕರಣೆಯಲ್ಲಿ ಸೋತಾಗ ತಮ್ಮ ಅನುಭವದಿಂದ ಸಸಿ ಮಾಡಿದ್ದಾರೆ. ಉದಾಹರಣೆಗೆ ಬಂದಗ ಎಂಬ ಬಿದಿರಿನಂತಿರುವ ಒಂದು ಮರ. ಇದರ ಗೆಣ್ಣುಗಳನ್ನು ಕತ್ತರಿಸಿ ಮಜ್ಜಿಗೆ ಅಥವಾ ಸಕ್ಕರೆ ನೀರಿನ್ನು ಹಾಕಿ ನಂತರ ಭೂಮಿಯಲ್ಲಿ ನೆಟ್ಟರೆ ಸಸಿಯಾಗುತ್ತದೆ ಎಂಬುದು ನಂಬಿಕೆ. ಯಾವ ಪ್ರಯತ್ನವೂ ಫಲಿಸದಿದ್ದಾಗ ಅದರ ಕಾಂಡವನ್ನು ಸುಟ್ಟು ನಂತರ ನೆಟ್ಟು ಸಸಿಯಾಗಿಸಿದರು. ಸಾಗೋನಿ ಬೀಜವನ್ನು ೭ ದಿನ ನೀರಿನಲ್ಲಿ ನೆನೆಸಿ, ೭ ದಿನ ಬಿಸಿನಲ್ಲಿ ಒಣಗಿಸಿ ಮತ್ತೆ ೭ ದಿನ ನೆನೆಸಿ ಮಡಿಯಲ್ಲಿ ಹಾಕಬೇಕು. ೨೦ದಿನಗಳ ನಂತರ ಇದು ಚಿಗುರಲು ಆರಂಭಿಸುವುದು. ಯಾವುದೇ ಬೀಜವಾದರೂ ಜೂನ್-ಜುಲೈ ತಿಂಗಳೊಳಗೆ ಸಸಿಗಳಾಗಿ ಮಾಡಿ ನೆಡಬೇಕು ಎಂಬುದು ಅವರ ಅನುಭವ. ಇಂತಹ ಅನೇಕ ಪ್ರಯೋಗಗಳು ಅವರ ಬುತ್ತಿಯಲ್ಲಿವೆ.

ರಾಜೇಂದ್ರ ಸಿಂಗ್ ಅವರು ತುಳಸಿ ಅವರ ಮಾತಿನ ಸಾರಾಂಶವನ್ನು ಸಂಗ್ರಹಿಸುತ್ತಾ, ನಿಜವಾದ ಅರಿವು ಇದೇ ಆಗಿದೆ, ಗಾಂಧೀಜಿಯವರು ಬುನಾದಿ ಶಿಕ್ಷಣ ಎಂದು ಕರೆದದ್ದೂ ಇದನ್ನೇ. ಆದರೆ ಭಾರತದಲ್ಲಿ ಅದನ್ನು ೧೦೦% ತರಲು ಸಾಧ್ಯವಾಗಲೇ ಇಲ್ಲ. ಇಂತಹ ಅನುಭವಗಳನ್ನು ಇಂದಿನ ಶಿಕ್ಷಣದಲ್ಲಿ ಹೇಗೆ ತರಬಹುದು ಎಂಬುದನ್ನು ಯೋಚಿಸಬೇಕಿದೆ’ ಎಂದರು.

ಪ್ರಾಥಮಿಕ ಶಿಕ್ಷಣದಲ್ಲಿ ಪ್ರತ್ಯಕ್ಷ ಅನುಭವಗಳನ್ನು ತರುವ ಆಲೋಚನೆಯನ್ನು ಗಾಂಧೀಜಿ ಅವರು ಅವರ ಸಮಯದಲ್ಲಿ ಹೇಗೆ ಮಾಡಿದ್ದರು ಎಂದು ವಿವರಿಸಲು ಮುಂದೆ ದೀಪಕ್ ಮಲ್ಗಾನ್ ಅವರು ಮಾತನಾಡಿದರು. ಅವರು ಗಾಂಧೀಜಿ ಜೀವನದ ಹಲವು ಘಟನೆಗಳನ್ನು ನೋಡುವುದರ ಮೂಲಕ ಶಿಕ್ಷಣದ ಬಗ್ಗೆ ಗಾಂಧೀಜಿ ಅವರ ಅಭಿಪ್ರಾಯವನ್ನು ತಿಳಿಸಲು ಮುಂದಾದರು. ‘ನಾವು ಇತಿಹಾಸವನ್ನು ನೋಡುತ್ತಾ ಪಾಠ ಕಲಿಯಬೇಕು. ಗಾಂಧೀಜಿ ಅವರು ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಯೋಜಿಸಿದ್ದರು. ಆ ಸಮಯದಲ್ಲಿ ಸಂಘರ್ಷ-ನಿರ್ಮಾಣ ಕೆಲಸಗಳು ನಡೆದವು. ಹಿಂದಿನಿಂದ ಬೇರೂರಿದ್ದ ಹಲವು ಆಲೋಚನೆಗಳು, ಬ್ರಿಟಿಷ್ ಪದ್ಧತಿ, ಸ್ವತಂತ್ರ ಭಾರತದಲ್ಲಿ ಹೊಂದಬೇಕಾಗಿರುವ ಪರಿಕಲ್ಪನೆಗಳ ನಡುವೆ ಸಂಘರ್ಷವನ್ನು ಎದುರಿಸಬೇಕಿತ್ತು. ಉತ್ತಮ ಯೋಜನೆಗಳನ್ನು ನಿರ್ಮಾಣಮಾಡಬೇಕಿತ್ತು. ೧೯೩೨ರ ದುಂಡುಮೇಜಿನ ಸಭೆಯ ನಂತರ ಗಾಂಧೀಜಿ ಅವರು ಭಾರತದ ಉನ್ನತಿಗೆ ಕೇವಲ ಖಾದಿ ಕಲ್ಪನೆ ಸಾಕಾಗದು, ಹಲವು ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸಮಾಡಬೇಕೆಂದು ತೀರ್ಮಾನಿಸಿದರು. ಕೈಗಾರಿಕೀಕರಣಕ್ಕೆ ಪೂರಕವಾಗಿ ಗ್ರಾಮೋದ್ಯಮವನ್ನು ಅಭಿವೃದ್ಧಿಪಡಿಸುವ ಯೋಚನೆ ಮಾಡಿದರು. ೧೯೩೩ರಲ್ಲಿ ಅಖಂಡ ಭಾರತ ಯಾತ್ರೆ/ಹರಿಜನ ಯಾತ್ರೆ ಕೈಗೊಂಡರು. ೧೯೩೭ರಲ್ಲಿ ಕಾಂಗ್ರೆಸ್ ಪ್ರಬಲವಾದ ಕಾಲಕ್ಕೆ ಗ್ರಾಮೋದ್ಯೋಗ ತರಬೇತಿಯನ್ನು ಹಮ್ಮಿಕೊಂಡರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಭವಿಸಿದ ಕಾರ್ಮಿಕವರ್ಗ ಧೋರಣೆಯಿಂದ ಕಲಿತ ಪಾಠವಾಗಿ ಕಾರ್ವಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕೆಂಬುದನ್ನು ಪ್ರಬಲವಾಗಿ ಹೇಳಿದರು.

ಬುದ್ಧಿ-ಹೃದಯ-ಕರಣಗಳ ಸಂಗಮದಿಂದ ಕಾರ್ಯನಿರ್ವಹಿಸಬೇಕೆಂದು ಶ್ರೀಲಂಕಾದ ಆರ್ಯ ನಾಯರ್, ರವೀಂದ್ರನಾಥ ಠಾಗೋರ್, ಆಶಾದೇವಿ ಅವರ ಮುಖಂಡತ್ವದಲ್ಲಿ All India Village Association ಎಂಬ ಒಂದು ಸಮಿತಿಯನ್ನು ರಚಿಸಿದರು. ಮುಂದೆಯೂ ಕುಮಾರಪ್ಪನವರು ಠಾಗೋರ್ ಮಾದರಿ ವಿದ್ಯಾಭ್ಯಾಸವನ್ನು ತರಲು ಪ್ರಯತ್ನಿದ್ದರು. ಆದರೆ ಈ ಯೋಜನೆ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ವಿದ್ಯಾಭ್ಯಾಸ ಸಿಗಬೇಕು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಉತ್ತಮ ನಾಯಕನ ತಯಾರಿಗಾಗಿ ಮತ್ತು ಉತ್ತಮ ರಾಜಕೀಯ ನೀತಿಗಳನ್ನು ಬೆಳೆಸಲು ಮಾತೃಭಾಷೆಯಲ್ಲೇ ಶಿಕ್ಷಣವನ್ನು ಕೊಡುವುದು ಅನಿರ್ವಾಯ ಎಂದು ಮನಗಂಡಿದ್ದರು. ಮಧ್ಯಾಹ್ನದ ಭೋಜನದ ಮೂಲಕ ಆಯಾ ಕ್ಷೇತ್ರದಲ್ಲಿ ಬೆಳೆಯುವ ಬೆಳೆಗಳನ್ನು ಪೂರ್ಣಪ್ರಮಾಣದಲ್ಲಿ ಬಳಸುತ್ತಾ ಸಮತೋಲನ ಆಹಾರಪದ್ಧತಿಯನ್ನು ತರಲು ಪ್ರಯತ್ನಿಸಿದರು. ಜಾತಿಪದ್ಧತಿಯನ್ನು ವಿದ್ಯಾಭ್ಯಾಸದ ಮೂಲಕ ತೆಗೆಯಬಹುದೆಂಬುದು ಅವರ ನಂಬಿಕೆಯಾಗಿತ್ತು. ಯುವಕರು ಗ್ರಾಮೋದ್ಯೋಗಗಳಾದ ನೇಯ್ಗೆ, ಕರಕುಶಲಕಲೆಗಳ ಮೂಲಕ ಉದ್ಯೋಗವನ್ನು ಅರಸಬೇಕೆಂಬುದು ಅವರ ಇಚ್ಛೆಯಾಗಿತ್ತು. ಹೀಗೆ ಪ್ರಕೃತಿಗೆ ಹತ್ತಿರವಾಗಿ ಬದುಕುವುದನ್ನು ಜನರಲ್ಲಿ ರೂಢಿಸಲು ವಿದ್ಯಾಭ್ಯಾಸವನ್ನು ರೂಪಿಸಿದರು ಎಂದು ಗಾಂಧೀಜಿ ಅವರ ಪರಿಕಲ್ಪನೆಗಳನ್ನು ವಿಶ್ಲೇಷಿಸಿದರು.

ಶರಚ್ಚಂದ್ರ ಲೇಲೆ ಅವರು A TREE ಸಂಸ್ಥೆಯಲ್ಲಿ ಪಿ.ಹೆಚ್.ಡಿ ವಿದ್ಯಾರ್ಥಿಗಳ ಮಾರ್ಗದರ್ಶಕರು. ಪ್ರಕೃತಿ ಪ್ರೇಮಿ ಮತ್ತು ಪರಿಸರ ಕಾರ್ಯಕರ್ತರೂ ಆಗಿದ್ದಾರೆ. ಇವರು ಸಭೆಯ ಮುಂದೆ ಕೆಲವು ಪ್ರಮುಖ ಪ್ರಶ್ನೆಗಳನ್ನು ಇಡುತ್ತಾ ತಮ್ಮ ಅಭಿಪ್ರಾಯವನ್ನು ತಿಳಿಸದರು. ಪರಿಸರ ವಿಜ್ಞಾನಿಯಾಗುವುದು ಬೇರೆ, ಪರಿಸರವಾದಿಯಾಗಿ ಕೆಲಸಕ್ಕೆ ಇಳಿಯುವುದು ಬೇರೆ. ನಾವು ಮಕ್ಕಳಿಗೆ ಪರಿಸರದ ಬಗ್ಗೆ ವಿಷಯ ತಿಳಿಸಿದರೆ ಸಾಲದು, ಕೆಲಸ ಮಾಡುವುದೂ ಮುಖ್ಯ. ಬೀಜದಿಂದ ಮರವಾಗುವಂತೆ ಮಗುವೊಂದು ಬೆಳೆದು ಮನುಷ್ಯನಾಗಿ ಸಮಾಜದಲ್ಲಿ ಬದುಕಲು ಅವನು ಕೇವಲ ವಯಸ್ಕನಾದರೆ ಸಾಲದು, ಮಾನವನಾಗಿರಬೇಕು. ಎಲ್ಲರಂತೆ ದುಡಿಮೆ, ಸಂಸಾರ, ಮಕ್ಕಳ, ಮನೆಗಳಲ್ಲಿ ಇರುವವರು ವಯಸ್ಕನಾಗುತ್ತಾನೆ. ನೈತಿಕತೆಯನ್ನು ಬೆಳೆಸುತ್ತಾ ಮಗುವನ್ನು ಬೆಳೆಸುವ  ಶಿಕ್ಷಣವನ್ನು ನಾವು ಕೊಡಬೇಕು. ಗಾಂಧೀಜಿ ಅವರ ಆಲೋಚನೆಗಳಲ್ಲೂ ಇರುವುದು ಒಬ್ಬರು ಇನ್ನೊಬ್ಬರಿಗೆ ತೊಂದರೆ ಕೊಡದೆ ಬದುಕುವುದನ್ನು ಕಲಿಸುವುದು. ವ್ಯಕ್ತಿಯೊಬ್ಬ ದಾರಿಯಲ್ಲಿ ಬಿದ್ದಿರುವ ಕಸವನ್ನು ತೆಗೆದು ಸರಿಯಾದ ಸ್ಥಳದಲ್ಲಿ ಹಾಕುವುದಾಗಿರಬಹುದು, ಉದ್ಯಮಿಯೊಬ್ಬರು ತಮ್ಮ ಕಾರ್ಖಾನೆಯನ್ನು ಇತರರಿಗೆ ತೊಂದರೆಯಾಗದಂತೆ ನಡೆಸಿವುದು ಇರಬಹುದು, ಬಂಡೀಪುರ ಅಭಯಾರಣ್ಯಗಳನ್ನು ಉಳಿಸುವುದಾಗಿರಬಹುದು ಎಲ್ಲಡೆಯೂ ಬೇರೆ ಬೇರೆ ನೆಲೆಗಳಲ್ಲಿ ಪರಿಸರವಾದಿಯನ್ನು ಹುಡುಕಬೇಕಾಗುವುದು. ನಮ್ಮ ಜೀವನವನ್ನು ಶ್ರೀಮಂತಗೊಳಿಸಿಕೊಳ್ಳಲು ಅಥವಾ ಮಾನವನ ಸುಖಜೀವನದ ವ್ಯಾಖ್ಯಾನದಲ್ಲಿ ಮರ, ಹುಲಿ, ಗಿಡ, ಬೆಟ್ಟಗಳಿಗೆ ಯಾವ ಸ್ಥಾನವಿದೆ, ಪಾತ್ರವಿದೆ ಎಂಬುದನ್ನು ಗಮನಿಸಬೇಕಿದೆ. ಇಲ್ಲದೇ ಹೋದರೆ ಹುಲಿಯನ್ನು ಏಕೆ ಉಳಿಸಬೇಕು? ಎಂಬ ಪ್ರಶ್ನೆಗೆ ನೇರವಾದ ಉತ್ತರವಿಲ್ಲ. ಆದರೆ ದೀರ್ಘಕಾಲದಲ್ಲಿ ಮನುಷ್ಯನ ಉಳಿವನ್ನು ಗನಮದಲ್ಲಿಟ್ಟಿಕೊಂಡರೆ, ಇಂದು ಪರಿಸರವನ್ನು ಉಳಿಸುವುದು ಅನಿವಾರ್ಯವಗುವುದು.

ವಸ್ತುತಃ ಇಂದು ನಡೆಯುತ್ತಿರುವುದು ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಂಘರ್ಷ ಅಲ್ಲ. ಮನುಷ್ಯ ಪ್ರಾಣಿಗಳಿಗಿಂತ ಭಿನ್ನವಾಗುವುದು ಅವನ ಬುದ್ಧಿವಂತಿಕೆಯಿಂದ. ೫೦೦೦, ೧೦೦೦, ೫೦೦ ವರ್ಷಗಳ ಹಿಂದೆ ಬೆಂಗಳೂರು ಹೀಗಿತ್ತು ಈಗ ಹೇಗೆ ಇದೆ?! ಎಂದು ಚಿಂತಿಸಿ. ಮಕ್ಕಳನ್ನು ಹಿಂದಕ್ಕೆ ಕಳುಹಿಸುವುದು, ಅಂದಿನ ಬೆಂಗಳೂರನ್ನು ಮತ್ತೆ ತರುವುದೇ ಅಭಿವೃದ್ಧಿ ಎನ್ನುವುದಾದರೆ ! ಎಷ್ಟು ವರ್ಷಗಳ ಹಿಂದಿನ ದಿನಗಳು ನಿಮಗೆ ಬೇಕು? ಕಾಲದಿಂದ ಕಾಲಕ್ಕೆ ಈ ವ್ಯಾಖ್ಯಾನ ಬದಲಾಗುತ್ತದೆ. ಅಭಿವೃದ್ಧಿಗೆ ಬುದ್ಧಿ-ಹೃದಯ-ಕರಣಗಳು ಬೇಕು ಎನ್ನುವುದಾದರೆ ಈಗ ತಂತ್ರಜ್ಞಾನದ ಮತ್ತೊಂದು ಹೆಚ್ಚುವರಿ ಕರಣವಿದೆಯಲ್ಲ!? ದಿನದಿಂದ ದಿನಕ್ಕೆ ಮಾನವನ ಕ್ಷೇಮಾಭಿವೃದ್ಧಿಯ ರೇಖೆ ಎತ್ತರಕ್ಕೆ ಏರುತ್ತಿದೆ. ಪರಿಸರದ ದೃಷ್ಟಿಯ್ಯಿಂದ  ಆದರೆ ಪರಿಸರಕ್ಕೆ ಪೂರಕವಾದ ವಿಭಿನ್ನ ತಂತ್ರಜ್ಞಾನವನ್ನು ರೂಪಿಸುವುದು ಇಂದಿನ ಅಗತ್ಯ. ಮಕ್ಕಳನ್ನು ಎಷ್ಟು ವರ್ಷಗಳ ಹಿಂದಕ್ಕೆ ಕಳುಹಿಸಬೇಕು ಎನ್ನುವುದಕ್ಕಿಂತ ಅವರನ್ನು ವಿಚಾರವಂತರಾಗಿ ಮಾಡುವುದೇ ಶಿಕ್ಷಣ. ಅವರ ನಿರ್ಧಾರವನ್ನು ಅವರು ಆಲೋಚಿಸಿ ತೆಗೆದುಕೊಳ್ಳುವಂತೆ ಮಾಡುವುದೇ ಶಿಕ್ಷಣದ ಉದ್ದೇಶವಾಗಬೇಕು.

ಜಾತಿಪದ್ಧತಿ, ಮಹಿಳೆಯರ ಮೇಲಿನ ದೌರ್ಜನ್ಯ ಮುಂತಾದ ಸಾಮಾಜಿಕ ಅಂಶಗಳನ್ನು ಹೊಂದಿಯೇ ಪರಿಸರದ ಶಿಕ್ಷಣವನ್ನು ನಾವು ರೂಪಿಸಬೇಕಿದೆ. ಭೋಗ ಸಂಸ್ಕೃತಿಯನ್ನು ಕೇವಲ ಮಾದ್ಯಮಗಳು ಬೆಳೆಸುತ್ತಿವೆಯೋ ಅಥವಾ ನಮ್ಮ ಅಭಿವೃದ್ಧಿಯ ವ್ಯಾಖ್ಯಾನವು ಬೆಳೆಸುತ್ತಿದೆಯೋ ಎಂದು ಯೋಚಿಸಬೇಕಿದೆ’. ಹೀಗೆ ಶರಚ್ಚಂದ್ರರ ಮಾತುಗಳು ಮುಂದಿನ ಚಿಂತನೆಗೆ ಹಲವು ಆಯಾಮಗಳನ್ನು ಸಭೆಯ ಮುಂದೆ ಇಟ್ಟಿತು.

ರಾಜೇಂದ್ರ ಸಿಂಗ್ ಅವರ ಅಭಿಪ್ರಾಯ:
ಬೀಜದಿಂದ ಮರವಾಗುವುದು. ಇದೂ ಒಂದು ರೀತಿಯಲ್ಲಿ ಅಭಿವೃದ್ಧಿಯೇ. ಆದರೆ ಈ ಅಭಿವೃದ್ಧಿಯಲ್ಲಿ ಯಾರಿಗೂ ತೊಂದರೆ ಇಲ್ಲ, ನಷ್ಟವಿಲ್ಲ. ತನ್ನ ಉಳಿಯುವಿಕೆಗೇ ಭಯ ಬಂದರೆ ಆಗ ಮನುಷ್ಯ ವಿನಾಶಕ್ಕೆ ಇಳಿಯುತ್ತಾನೆ. ಬ್ರಿಟಿಷರು ೧೯೩೦-೩೫ರ ಸಮಯದಲ್ಲಿ ತಮ್ಮ ಉಳಿವಿಗಾಗಿ ವಿನಾಶದ ಹಾದಿ ಹಿಡಿದರು. ಶಿಕ್ಷಣದ ಮೂಲಕ ಮಕ್ಕಳ ಮನಸ್ಸನ್ನು ತಿದ್ದಲು ಪ್ರಯತ್ನಿಸಿದರು. ಹಾಕಿನ್ಸ್ ರವರು ೧೯೩೫ರಲ್ಲಿ ಪವಿತ್ರವಾದ ಗಂಗಾನದಿಯಲ್ಲಿ ಮಾನವನ ಮಲ-ಮೂತ್ರಗಳನ್ನು ಸೇರಿಸುವ ಆದೇಶವನ್ನು ಹೊರಡಿಸುತ್ತಾರೆ. ಭಾರತೀಯರನ್ನು ವಿನಾಶಕ್ಕೆ ತಳ್ಳಲು ಶಿಕ್ಷಣವನ್ನು ಬಳಸಿಕೊಂಡರು. ಇದಕ್ಕಿಂತ ಮೊದಲು ಪರಿಸರವನ್ನು ಹೊರತುಪಡಿಸಿದ ಶಿಕ್ಷಣ ಭಾರತದಲ್ಲಿ ಇರಲಿಲ್ಲ. ಭಯವಿಲ್ಲದೆ ಇದ್ದಾಗ ಮಕ್ಕಳು ನಿರ್ಮಾಣದ ಆಲೋಚನೆಯನ್ನು ಮಾಡುತ್ತಾರೆ. ಆದ್ದರಿಂದ ಶಿಕ್ಷಣದ ಭಯ ಮಕ್ಕಳಲ್ಲಿ ಇರುವುದು ಬೇಡ. ಪರಿಸರವನ್ನು ಆನಂದದಿಂದ ಕಲಿಯುವಂತಾಗಬೇಕು. ಬುದ್ಧಿ-ಹೃದಯ-ಕರಣಗಳ ಮೂಲಕ ವಿಕಾಸಶಿಕ್ಷಣವನ್ನು ನೀಡುವುದು ಹೇಗೆ ಎಂಬುದು ಮುಂದಿನ ಚರ್ಚೆಗಳಲ್ಲಿ ವಿಮರ್ಶಿಸಲ್ಪಡಬೇಕೆಂಬುದು ರಾಜೇಂದ್ರ ಸಿಂಗ್ ಅವರ ಅಭಿಪ್ರಾಯವಾಗಿತ್ತು.

ಮಕ್ಕಳಲ್ಲಿ ಮಾನವೀಯತೆ, ಹಂಚಿಕೊಂಡು ಬಳಸುವುದು, ಸಾಮಾಜಿಕ ಸಾಮರಸ್ಯವನ್ನು ಬೆಳೆಸುವುದು ಶಿಕ್ಷಣದ ಉದ್ದೇಶವಾಗಬೇಕು ಎಂಬ ವಿಷಯದ ಸುತ್ತ ಗಣೇಶಯ್ಯ ಅವರು ತಮ್ಮ ಮಂಡನೆಯನ್ನು ಮಾಡಿದರು. ಸ್ಪಷ್ಟನೆಗಾಗಿ ಒಂದು ಉದಾಹರಣೆಯನ್ನು ಕೊಟ್ಟರು. ‘ಆಫ್ರಿಕಾದ ಮಕ್ಕಳಿಗೆ ಹಣ್ಣುಗಳನ್ನು ತರಲು ಹೇಳಿದಾಗ ಅವರೆಲ್ಲರೂ ಒಟ್ಟಿಗೆ ಹೋಗಿ ತಂದದ್ದು, ಒಟ್ಟಿಗೆ ಹಂಚಿಕೊಂಡು ತಿದ್ದದ್ದು ನಾವು ಎಂಬ ಕಲ್ಪನೆಯನ್ನು ತೋರಿಸುತ್ತದೆ. ಅವರ ವಾದ I am because we are ಎಂಬುದು. ಇತಿಹಾಸದಲ್ಲಿ ಜರ್ವಾ ಜನಾಂಗದವರು ಮತ್ತು ಬ್ರಿಟಿಷರ ನಡುವೆ ನಡೆದ ಸಂಘರ್ಷದಲ್ಲಿ ಜರ್ವಾ ಜನರನ್ನು ಪೂರ್ಣವಾಗಿ ನಾಶಮಾಡುತ್ತಾರೆ. ಬ್ರಿಟಿಷರು ಜರ್ವಾ ನಾಯಕನ ತಲೆಯನ್ನು ಕಡಿದು ಒಂದು ಬುಟ್ಟಿಯಲ್ಲಿಟ್ಟು ಅವನ ಹೆಂಡತಿಯಿಂದ ಹೊರೆಸಿಕೊಂಡು ೨೦ ಕಿ.ಮೀ. ದೂರದಿಂದ ಅವಳಿಗೆ ತಿಳಿಯದಂತೆ ಕೋಟೆಗೆ ತರಿಸಿಕೊಳ್ಳುತ್ತಾರೆ. ಒಂದು ಕೈಯಲ್ಲಿ ಗಂಡನ ತಲೆಯನ್ನು ಒಂದು ಕೈಯಲ್ಲಿ ಮಗುವನ್ನೂ ಎತ್ತಿಕೊಂಡು ಆಕೆ ನಡೆದು ಬರುತ್ತಾಳೆ. ಅರಮನೆಯಲ್ಲಿದ್ದವರು ಈ ಹೆಣ್ಣುಮಗಳಿಗೆ ಒಂದು ಬಾಳೆಹಣ್ಣನ್ನು ಕೊಡುತ್ತಾರೆ. ಇನ್ನೇನು ತಿನ್ನಬೇಕೆಂದು ಬಾಯಿ ತೆರೆಯುವಷ್ಟರಲ್ಲಿ ಬ್ರಿಟಿಷ್ ಮಗುವೊಂದು ತಾನೂ ಬಾಯಿತೆರೆಯುತ್ತದೆ. ಈಕೆ ರಾತ್ರಿ ಇಡೀ ನಡೆದು ಬಂದಿದ್ದರೂ, ಹಸಿದಿದ್ದರೂ ಬಾಯಿ ತೆರೆದ ಆ ಮಗುವಿಗೆ ಬಾಳೆಹಣ್ಣನ್ನು ಇಡುತ್ತಾಳೆ. ನಮ್ಮಲ್ಲಿರಬೇಕಾದ ಹಂಚಿ ತಿನ್ನುವ ಸಂಸ್ಕಾರವಿದು’.

ಇಂದಿನ ವಿಷಯ To bring nature back to human life, ಇದನ್ನೇ ಸ್ವಲ್ಪ ಬದಲಾಯಿಸುವುದಾದರೆ To bring back nature to our life, To bring life back to our life,  Life=Nature  ಎಂದುಕೊಂಡರೆ, To bring life back to us ಎಂದೂ ಈ ವಾಕ್ಯವನ್ನು ಹೇಳಬಹುದು. ಹಾಗಾದರೆ ನಾವೇನು ಸತ್ತಿದ್ದೇವಾ? ಇಲ್ಲ. ಪ್ರಕೃತಿಯಿಂದ Nature Deficiency ಆಗಿ ಬದುಕುತ್ತಿದ್ದೇವೆ. ನಮ್ಮ ಜೀವನದಲ್ಲಿ ಪ್ರಕೃತಿಯ ಭಾಗ ಕಡಿಮೆಯಾಗುತ್ತಿದೆ. ಇದನ್ನು ಓಚಿಣuಡಿe ಆeಜಿiಛಿieಟಿಛಿಥಿ ಎಂದು ಕರೆಯಬಹುದು. ಮನುಷ್ಯ ಎಂದಿಗೂ ತನ್ನ ಒಳಿತಿಗಾಗೇ ಕೆಲಸ ಮಾಡುವುದಾದರೆ ‘ಒಳ್ಳೆಯದು’ ಯಾವುದು ಎಂಬ ಕಲ್ಪನೆ ಸ್ಪಷ್ಟವಾಗಿರಬೇಕು. ಮನುಷ್ಯನಾಗಲಿ, ಪ್ರಾಣಿಗಳಾಗಲಿ ಪ್ರಕೃತಿಯಲ್ಲಿ ಬದುಕಲು ಒಂದು ಬೆಲೆ ನೀಡಲೇಬೇಕಿದೆ. ಪ್ರಾಕೃತಿಕ ವಿಕೋಪಗಳಿಂದ, ಇತರ ಪ್ರಾಣಿಗಳಿಂದ ತನ್ನನ್ನು ತಾನು ಉಳಿಸಿಕೊಳ್ಳಬೇಕಿದೆ. ಆದ್ದರಿಂದಲೇ ಮನೆ, ನಾಗರಿಕತೆಗಳನ್ನು ಬೆಳೆಸಿಕೊಳ್ಳುವುದು ಅನಿವಾಚಿi. ಆದರೆ ಇಂದು ಪ್ರಕೃತಿಯಿಂದ ದೂರವಾಗುತ್ತಾ ಬಹಳ ದೂರ ಸರಿದಿದ್ದರಿಂದ ಪ್ರಕೃತಿಯಿಂದ ಸಿಗುವ ಲಾಭಗಳು ಕಡಿಮೆಯಾದವು. ಹಾಗಾಗಿ ಈಗ ಪುನಃ ಪ್ರಕೃತಿ ಕಡೆ ತಿರುಗುವಂತಾಗಿದೆ. ಸಂತೋಷವೆಂಬುದು ಭೋಗಸಂಸ್ಕೃತಿಯಿಂದಲ್ಲ ಸಮಾಜದೊಂದಿಗೆ ಹಂಚಿಕೊಳ್ಳುವುದರಲ್ಲಿ ಇದೆ ಎಂಬುದು ಇಂದಿನ ಶಿಕ್ಷಣದಲ್ಲಿ ಮಕ್ಕಳಿಗೆ ಮನವರಿಕೆಯಾಗಬೇಕಿದೆ ಎಂಬುದು ಗಣೇಶಯ್ಯ ಅವರ ಅಭಿಪ್ರಾಯವಾಗಿತ್ತು. I am because we are, I am happy because we are happy, we are happy because nature is happy ಎಂಬುದು ಗಣೇಶಯ್ಯವರ ಮಾತಿನ ಸಾರಾಂಶವಾಗಿತ್ತು.

ಹರೀಶ್ ಭಟ್ ಅವರು ಅವರ ಅನುಭವಗಳನ್ನು ತಿಳಿಸುತ್ತಾ ಮಕ್ಕಳನ್ನು ಪ್ರಕೃತಿಯೊಡನೆ ತಮ್ಮನ್ನು ತಾವು ಜೋಡಿಸಿಕೊಳ್ಳುವ ಶಿಕ್ಷಣವನ್ನು ಕೊಟ್ಟಾಗ ಅವರೇ ಉತ್ತಮವಾದ ನಿರ್ಧಾರಗಳನ್ನು ಮಾಡುವರು. ಏಕೆಂದರೆ ಮಕ್ಕಳ ಶಕ್ತಿ ಹಿರಿಯರ ಊಹೆಗೆ ಮೀರಿದ್ದು ಎಂದರು. ಈ ಉದಾಹರಣೆಗಳನ್ನು ಗಮನಿಸಿ:
ಕಾಡನ್ನು ಯಾರು ಸೃಷ್ಟಿಸಿದರು? ಮಲೆಕುಡಿಯರ ಉತ್ತರ: ಪಕ್ಷಿಗಳು. ಹಣ್ಣನ್ನು ತಿಂದು ಬೀಜವನ್ನು ಹಿಕ್ಕೆಗಳ ರೂಪದಲ್ಲಿ ದೂರ ದೂರಕ್ಕೆ ಪಸರಿಸುತ್ತವೆ. ಹೀಗೆ ಕಾಡು ಹರಡುತ್ತದೆ.
ಮಲೆನಾಡಿನ ಒಂದು ಶಾಲೆಯ ಮಕ್ಕಳಿಗೆ Classification, Taxanomy ವಿವರಿಸಬೇಕಿತ್ತು. ಎಲೆ, ಹೂವು, ಬೀಜ, ಕಡ್ಡಿಗಳನ್ನೆಲ್ಲ ಆಯ್ದು ತರಲು ಅರ್ಧ ಗಂಟೆಯಲ್ಲಿ ಸಂಗ್ರಹಿಸಿ ತರಲು ಹೇಳಲಾಯಿತು. ನಂತರ ಒಂದೆ ರೀತಿ ಇರುವ ವಸ್ತುಗಳನ್ನು ಬೇರ್ಪಡಿಸಲು ತಿಳಿಸಲಾಯಿತು. ವಿಭಾಗದ ಪಾಠ ಇದರಿಂದ ಸುಲಭವಾಯಿತು.
ಹಿಮಾಚಲದ ಪ್ರದೇಶದಲ್ಲಿ ಕುರಿ ಕಾಯುವವರ ಮಕ್ಕಳಿಗೆ ಎಲ್ಲಾ ಪಾಠಗಳು ಬೆಟ್ಟಗಳಲ್ಲಿ ಕುರಿಯನ್ನು ಮೇಯಿಸುತ್ತಾ ನಡೆಯುತ್ತದೆ. ಕುರಿಯ ಕೊಂಬಿಗೆ ಬೋರ್ಡ್ ನೇತುಹಾಕಿ ಅಧ್ಯಾಪಕರು ಚಲಿಸುತ್ತಾ ಪಾಠ ಮಾಡುತ್ತಾರೆ. ಗಣಿತದ ಪಾಠ ಕುರಿಗಳನ್ನು ಆಚೆ-ಈಚೆ ಕಳುಹಿಸಿ, ಸೇರಿಸಿಕೊಂಡು ಮಕ್ಕಳಿಗೆ ಮನವರಿಕೆ ಮಾಡುತ್ತಾರೆ. ಹೀಗೆ ಚಲಿಸುತ್ತಾ ವರ್ಷದ ಕೊನೆಗೆ ಪಟ್ಟಣ ತಲುಪುತ್ತಾರೆ. ಅಲ್ಲಿ ಪರೀಕ್ಷೆ ಕೊಡುತ್ತಾರೆ.
ಜೂನ್ ೫ರಂದು ರಾಜಕಾರಣಿಗಳು ಪರಿಸರ ದಿನದಂದು ಸಭೆಯಲ್ಲಿ ಸಸಿಗಳನ್ನು ವಿತರಿಸಿದರು. ವಿದ್ಯಾರ್ಥಿಯೊಬ್ಬ ಸಸಿಯನ್ನು ತೆಗೆದುಕೊಂಡ, ಆದರೆ ತಾನು ಅಪಾರ್ಟ್‌ಮೆಂಟಿನ ೫ನೇಯ ಮಹಡಿಯಲ್ಲಿರುವುದು, ಈ ಸಸಿಯನ್ನು ನೆಡುವುದಾದರೂ ಎಲ್ಲಿ? ಎಂದು ಮರು ಪ್ರಶ್ನಿಸಿದ. ರಾಜಕಾರಣಿಗಳು ಅಪಾರ್ಟ್‌ಮೆಂಟಿನಿಂದ ಹೊರಗೆ ಬಂದು ರಸ್ತೆ ಬದಿಯಲ್ಲಿ ನೆಡಲು ಹೇಳಿದರು. ಅದೇ ವರ್ಷ ಅಕ್ಟೋಬರ್ ೧ರಂದು ವನ್ಯಜೀವಿ ಸಂರಕ್ಷಣಾ ದಿನದಂದು ಅದೇ ರಾಜಕಾರಣಿ ಮತ್ತು ಅದೇ ವಿದ್ಯಾರ್ಥಿ ಮತ್ತೆ ಬೇಟಿಯಾದರು. ರಾಜಕಾರಣಿಗಳು ಕೊಟ್ಟಿದ್ದ ಸಸಿಯನ್ನು ಅವನು ನೆಟ್ಟಿದ್ದ. ಅದು ಮರವಾಗಿ ಬೆಳೆದಿತ್ತು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಸ್ತೆಯನ್ನು ಅಗಲಗೊಳಿಸುವ ಸಲುವಾಗ ಆ ಮರವನ್ನು ತೆಗೆದಿದ್ದರು. ಇದನ್ನು ತಿಳಿಸಿ ಆ ವಿದ್ಯಾರ್ಥಿ ಮುಂದಿನ ಬಾರಿ ಸಸಿಗಳನ್ನು ವಿತರಿಸುವ ಮೊದಲು ಅದನ್ನು ನೆಡಲು ಸ್ಥಳವನ್ನೂ ನಿರ್ದೇಶಿಸಬೇಕಾಗಿ ವಿನಂತಿಸಿಕೊಂಡ.
ಬೆಳ್ತಂಗಡಿಯ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಒಂದೇ ವೇಳೆಯಲ್ಲಿ ಶಾಲೆಯ ಎರಡು ಕಿಲೋ ಮೀಟರ್ ಅಂತರದಲ್ಲಿರುವ ಎಲ್ಲಾ ವಸ್ತುಗಳನ್ನು ಗಮನಿಸಿ ಒಂದು ನಕ್ಷೆ ತಯಾರಿಸಲು ತಿಳಿಸಲಾಯಿತು. ಅಧ್ಯಾಪಕರ ತಂಡ ಅರ್ಧ ಗಂಟೆಯಲ್ಲಿ ಒಂದು ನಕ್ಷೆಯೊಡನೆ ಮರಳಿದರು. ಆದರೆ ವಿದ್ಯಾರ್ಥಿಗಳ ತಂಡ ಇನ್ನೂ ಬರಲಿಲ್ಲ. ಮೂರು ಗಂಟೆಯ ನಂತರ ಬಂದು ಎಲ್ಲವನ್ನೂ ಗಮನಿಸಿ ನಕ್ಷೆ ತಯಾರಿಸುವುದು ಸಾಧ್ಯವೇ ಆಗಲಿಲ್ಲ, ಮೂರು ದಿನವಾದರೂ ಬೇಕು ಎಂದರು.

ಅಧ್ಯಾಪಕರು ಮಕ್ಕಳಿಗೆ ತಾವು ಕಲಿತಿರುವುದನ್ನು ಹಾಗೇ ಕಲಿಸಬೇಕೆಂದು ಧಾವಿಸುತ್ತಿರುವಾಗ ಮಕ್ಕಳ ತಲೆಯಲ್ಲಿ ಏನು ನಡೆಯುತ್ತಿರುತ್ತದೆ ಎಂಬುದನ್ನು ಗಮನಿಸುವುದಿಲ್ಲ. ಆದರೆ ಮಕ್ಕಳು ಎಲ್ಲವನ್ನೂ ಕುತೂಹಲದಿಂದ ನೋಡುವ, ತಿಳಿಯುವ ಸ್ವಭಾವ ಹೊಂದಿರುತ್ತಾರೆ. ಅವರನ್ನು ಪ್ರಕೃತಿಯೊಡನೆ ಹೊಂದಿಸಿಕೊಂಡು ಯೋಚಿಸಲು ಕಲಿಸಿದರೆ ಸಾಕು ಮುಂದಿನ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ. ಅಂತಹ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂಬುದನ್ನು ತಮ್ಮ ಅನುಭವಗಳ ಮೂಲಕ ಹರೀಶ್ ಭಟ್ ಅವರು ಮನವರಿಕೆ ಮಾಡಿಸಿದರು.

For more photos click here

ಎಲ್ಲಪ್ಪ ರೆಡ್ಡಿ ಅವರು ಮಾತನಾಡುತ್ತಾ ಅಭಿವೃದ್ಧಿ, ತಂತ್ರಜ್ಞಾನ, ನಾಗರಿಕತೆಯ ಹೆಸರಿನಲ್ಲಿ ಮಕ್ಕಳಿಗೆ ಬೆಳಗ್ಗೆ ೭ರಿಂದ ಸಂಜೆ à³­.೩೦ ರವರೆಗೆ ಶಾಲೆಯಲ್ಲಿ ಪಾಠಮಾಡುವಂತಹ ಉದಾಹರಣೆಗಳೂ ಇವೆ. ವರ್ಷಕ್ಕೆ ೧೦ ಲಕ್ಷ ಫೀಸ್ ಕಟ್ಟಿರುವುದರ ಬದಲಾಗಿ ಮಕ್ಕಳಿಗೆ Monitory Economy ಹೇಳಿಕೊಡುತ್ತಿದ್ದೇವೆ. ಮಕ್ಕಳಿಗೆ ಇದಕ್ಕಿಂತ ಬೇರೆ ನರಕ ಬೇಕೆ? ಎಷ್ಟು ದಿನಗಳಲ್ಲಿ ಎಷ್ಟು ಹಣ ಗಳಿಸಬಹುದು, ಹಣ ಗಳಿಸುವ ಮಾರ್ಗ ಯಾವುದೇ ಆದರೂ ಹೇಗೆ ಎಲ್ಲರಿಗೂ ಟೋಪಿ ಹಾಕುವುದು! ಎಂದು ಕಲಿಸುವ ವಿದ್ಯಾಭ್ಯಾಸ ನಮಗೆ ಬೇಕೆ? ಇಂದಿನ ದಿನಕ್ಕೆ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬೇಕಾಗಿದೆ. ಪರಿಸರದೊಂದಿಗೆ ಹೊಂದಿಕೊಂಡು ನಡೆಯುವುದು ಅಭಿವೃದ್ಧಿಯಾಗಬೇಕಿದೆ. ಇದಕ್ಕೆ ಪೂರಕವಾದ ಶಿಕ್ಷಣ ಬೇಕಾಗಿದೆ ಎಂದರು.

ಪ್ರಶ್ನೋತ್ತರ ವಿಭಾಗ
ಪ್ರೇಕ್ಷಕರಾಗಿ ಬಂದಿದ್ದ ಹಲವರು ತಮ್ಮ ಅಭಿಪ್ರಾಯಗಳನ್ನು ಮತ್ತು ಪ್ರಶ್ನೆಗಳನ್ನು ಮುಂದಿಟ್ಟರು:
ಕೊಲ್ಕತ್ತದಿಂದ ಬಂದಿದ್ದ ಆಸಕ್ತರೊಬ್ಬರು ‘ಮಾನವ ಮತ್ತು ಪ್ರಕೃತಿ ಒಟ್ಟಿಗೆ ಸಮತೋಲನದಿಂದರೆ ಪ್ರಕೃತಿಯೂ ಸಂತೋಷದಿಂದಿರುತ್ತದೆ, ಮಾನವರು ಅದನ್ನು ನಾಶಮಾಡಲು ಪ್ರಯತ್ನಿಸಿದರೆ ಪ್ರಕೃತಿ ವಿಕೋಪಗಳ ಮೂಲಕ ಅವರನ್ನೇ ನಾಶಮಾಡುತ್ತದೆ. ಮಕ್ಕಳಿಗೆ ಇದನ್ನು ತಿಳಿಸಬೇಕು ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಪ್ರಕೃತಿಯೊಂದಿಗೆ ಬೆಳೆಯುವಂತೆ ಮಾಡುವ ಒಂದು ಮಾರ್ಗ ಯಾವುದು ಎಂದು ಹುಡುಕಬೇಕಿದೆ’ ಎಂದರು.

ಶ್ರೀಶ ಕುಮಾರ್ ಎಂಬುವವರು ಸತ್ಯ, ಧರ್ಮ, ಅಹಿಂಸೆಗಳ ಆಧಾರದ ಮೇಲೆ ಶಿಕ್ಷಣವನ್ನು ಯೋಜಿಸಬೇಕು, ಪಂಚಮಹಾಭೂತಗಳನ್ನು ಅರಿತು ಬಳಸುವ ಸಂಸ್ಕೃತಿ ಬರಬೇಕು. ಶಾಲೆಗಳಲ್ಲಿ ಇಂತಹದ್ದನ್ನು ಮಕ್ಕಳಿಗೆ ಕಲಿಸುವ ಶಿಕ್ಷಕರನ್ನು ಹುಡುಕಬೇಕು. ಅವರು ಪೂರ್ಣ ಮನಸ್ಸಿನಿಂದ ಇದನ್ನೆಲ್ಲ ಮಕ್ಕಳಿಗೆ ಹೇಳಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವೇಶ ಅವರು ‘ನಾವೆಲ್ಲ ಶಾಲೆಯಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಸಾಕಷ್ಟು ಓದಿದ್ದರೂ ಅದರಿಂದ ಹೆಚ್ಚು ಆಕರ್ಷಿತರಾಗಿಲ್ಲ ಆದರೆ ಪರಿಸರದ ವಿಸ್ಮಯಗಳ ಬಗ್ಗೆ ತಿಳಿಸಿದರೆ ಮಕ್ಕಳು ಆಸಕ್ತಿಯಿಂದ ಕಲಿಯಬಹುದಲ್ಲವೆ?’ ಎಂದು ಪ್ರಶ್ನಿಸಿದರು.

ಶಶಿರೇಖಾ ಅವರು ‘ಓದಿ ಸುಮಾರು ವಿಷಯ ತಿಳಿದಾಗಿದೆ, ಇನ್ನು ಕಾರ್ಯಕ್ಕೆ ಇಳಿಯಬೇಕು, ಕೇವಲ ಮಕ್ಕಳನ್ನು ಈ ವಿಚಾರವಾಗಿ ಜಾಗೃತರಾಗಿಸಿದರೆ ಸಾಲದು, ಪೋಷಕರು ಮತ್ತು ಸುತ್ತಲಿನವರನ್ನೂ ಜಾಗೃತಗೊಳಿಸಬೇಕು. ಅದು ಹೇಗೆ?’ ಎಂದು ಪ್ರಶ್ನಿಸಿದರು.

ಶ್ರೀನಿವಾಸ ವರಖೇಡಿ ಅವರು ಮಾತನಾಡುತ್ತಾ ‘ತುಳಸಿ ಗೌಡ ಅವರು ನೀರು ಕುಡಿಯುವಾಗ ಲೋಟದಲ್ಲಿದ್ದ ಎಲ್ಲಾ ನೀರನ್ನೂ ಬಳಸದೆ ತನಗೆ ಎಷ್ಟು ನೀರು ಬೇಕೆಂದು ಆಲೋಚಿಸಿ ಸ್ವಲ್ಪ ನೀರನ್ನು ಬೇರೆ ಲೋಟಕ್ಕೆ ಹಾಕಿ ಅಗತ್ಯವಾದಷ್ಟು ನೀರನ್ನು ಮಾತ್ರ ಕುಡಿದರು. ಅಭಿವೃದ್ಧಿಯ ಹೆಸರಿನಲ್ಲಿ ಆಲೋಚಸಿದೆ ಕೆಲಸ ಮಾಡುವುದಕ್ಕಿಂತ ಪರಿಸರಕ್ಕೆ ಪೂರಕವಾದ ಸೂಕ್ಷ್ಮತೆ ಎಲ್ಲರಿಗೂ ಬಂದರೆ ಅದೇ ಉತ್ತಮವಾದ ಶಿಕ್ಷಣ ಆದೀತು’ ಎಂದು ಅಭಿಪ್ರಾಯಪಟ್ಟರು.

ದೀಪಕ್ ಮಲ್ಗಾನೆ ಅವರು ಗಾಂಧೀಜಿ ಅವರ ಹೊಸಪ್ರಯೋಗಗಳನ್ನು ಖಾದಿ, ಗ್ರಾಮೋದ್ಯೋಗಗಳಲ್ಲಿ ಕಾಣಬಹುದಾಗಿತ್ತು. ಒಬ್ಬ ರೈತ ಮತ್ತು ತತ್ವಜ್ಞಾನಿಯ ಅನುಭವ-ಆಲೋಚನೆಗಳನ್ನು ಹೇಗೆ ಹೊಂದಿಸಬಹುದು ಎಂಬುದನ್ನು ಗಾಂಧೀಜಿ ಅವರು ಮಾಡಿ ತೋರಿಸಿದ್ದಾರೆ. ಈ ಭೂಮಿಯ ಮೇಲೆ ಮುಂದಿನ ದಿನಗಳಲ್ಲಿ ಮಾನವನ ಜೀವನವನ್ನು ಕಲ್ಪಿಸಿಕೊಂಡು ಇಂದಿನ ದಿನವನ್ನು ರೂಪಿಸುವುದು ಅಗತ್ಯವಾಗಿದೆ ಎಂದರು.
ಶರಚ್ಚಂದ್ರ ಅವರು ವಿಶ್ವೇಶ ಅವರ ಪ್ರಶ್ನೆಗೆ ಉತ್ತರಿಸುತ್ತಾ ‘ಪ್ರಕೃತಿಯ ವಿಸ್ಮಯಗಳು ಆಸಕ್ತಿ ಹುಟ್ಟಿಸಬಹುದು ಆದರೆ ಪ್ರಕೃತಿಯ ಇನ್ನೊಂದು ಮುಖದ ಪರಿಚಯವಿಲ್ಲದೆ ಜೀವನ ಸಾಧ್ಯವೇ ಇಲ್ಲ. ಹಾಲು ಎಲ್ಲಿಂದ ಬರುತ್ತದೆ ಎಂಬುದು ಎಲ್ಲರಿಗೂ ತಿಳಿಯದಿದ್ದರೂ ಮಲೇರಿಯಾ ಅಥವಾ ಕಾಲರಾ ಬಂದಿದೆ ಎಂದರೆ ಅದು ಸೊಳ್ಳೆಯಿಂದ ಅಥವಾ ನೊಣದಿಂದ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಸೊಳ್ಳೆ, ನೊಣಗಳೂ ಪ್ರಕೃತಿಯ ನಡುವೆ ಇವೆ ಎಂದಾದರೆ ಅದನ್ನೂ ತಿಳಿಯಬೇಕು. ಪ್ರಕೃತಿಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೆರಡನ್ನೂ ತಿಳಿಯಬೇಕು. Negative Survival cost of the nature ತಿಳಿಯುವುದು ಅನಿವಾರ್ಯ. ಸಮಗ್ರ ಅರಿವು ಇರಬೇಕು, ಎಷ್ಟು ಬಳಸಬೇಕು, ಹೇಗೆ ಬಳಸಬೇಕು ಎಂಬುದರ ಸಮತೋಲನ ತಿಳಿದಿರಬೇಕು. ಪ್ರಕೃತಿಯಲ್ಲಿ ಸಮತೋಲನ ಸಾಧಿಸುವುದು ಹೇಗೆ ಎಂಬುದು ಪ್ರಶ್ನೆಯೇ ಹೊರತು ಬಳಸಬೇಕೆ ಬೇಡವೆ ಎಂಬುದಲ್ಲ. ಸ್ಪರ್ಧಾತ್ಮಕ ಈ ಪ್ರಪಂಚದಲ್ಲಿ ಮಕ್ಕಳಿಗೆ ಸಾಧನೆ ಅಥವಾ ಸಫಲತೆ ಎಂಬುದರ ವ್ಯಾಖ್ಯಾನ ಪ್ರಕೃತಿಯನ್ನು ಸಮತೋಲನದಲ್ಲಿ ಬಳಸುವುದೇ ಆಗಿದೆ ಎಂಬುದನ್ನು ಮನವರಿಕೆ ಮಾಡಿಸಬೇಕಿದೆ ಎಂದರು.

ವಿಚಾರಗೋಷ್ಠಿಯ ಕೊನೆಯ ಹಂತವಾಗಿ ರಾಜೇಂದ್ರ ಸಿಂಗ್ ಅವರು ಎಲ್ಲಾ ಚರ್ಚೆಯ ಸಾರಾಂಶವನ್ನು ನೀಡಿದರು:
೧.    à²¤à³Šà²‚ದರೆಗಳನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂದು ಕಲಿತರೆ ಮಕ್ಕಳು ನಾಯಕರಾಗಿ ಬೆಳೆಯುತ್ತಾರೆ. ಮಾತೃಭಾಷೆಯಲ್ಲಿ ಮಕ್ಕಳು ಅಧ್ಯಾಪಕರ ಬಳಿ ತಮ್ಮ ಆಲೋಚನೆಯನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಬೇಕು. ಮೇಕಾಲೆ ಮಾಡಿದ ಮೊದಲ ಕೆಲಸ ಶಿಕ್ಷಣದ ಬಗ್ಗೆ ಭಯ ಹುಟ್ಟಿಸುವುದು. ಇದರಿಂದ ಮಕ್ಕಳು ತಮ್ಮ ಆಲೋಚನೆಗಳನ್ನು ಹೊರಗೆ ಬಿಡದೆ ಭಯಗ್ರಸ್ತರಾಗಿ ಬೆಳೆಯುವುದನ್ನು ಕಲಿಯುತ್ತಾರೆ. ಮೊದಲು ಅವರಿಗೆ ಶಿಕ್ಷಣ, ಶಾಲೆ, ಅಧ್ಯಾಪಕರ ಬಗ್ಗೆ ಇರುವ ಭಯದಿಂದ ದೂರಮಾಡಿ. ಅವರನ್ನು ಮುಕ್ತವಾಗಿ ಕಲಿಯಲು ಪ್ರೋತ್ಸಾಹಿಸಿ.
೨.    à²­à²¾à²°à²¤à³€à²¯ ಜ್ಞಾನಪರಂಪರೆಯನ್ನು ಗಮನಿಸಿದರೆ ಪ್ರಕೃತಿಯ ಪಾತ್ರ ಮಹತ್ವವಾದದ್ದು. ಪ್ರಕೃತಿ ಎಂಬುದು ಪ್ರತಿ ಆಲೋಚನೆಯಲ್ಲಿ ಹಾಸುಹೊಕ್ಕಾಗಿತ್ತು. ಇಂದಿನ ದಿನಗಳಲ್ಲಿ ಪ್ರಕೃತಿಯನ್ನು ಹಾಳುಗೆಡಹುವುದು ಹೇಗೆ? ಎಂಬುದನ್ನು ಕಲಿಸಲಾಗುತ್ತಿದೆ. ಚೆನ್ನಾಗಿ ಹಾಳುಮಾಡುವವರಿಗೆ ಮನ್ನಣೆಯೂ ಸಿಗುತ್ತಿದೆ. ತುಳಸಿ ಗೌಡ ಅವರಿಂದ ನಾವು ಕಲಿಯುವ ದೊಡ್ಡ ಪಾಠವೆಂದರೆ ಪ್ರಕೃತಿಯಿಂದ ಏನನ್ನು ಪಡೆಯುತ್ತೇವೋ ಅದನ್ನು ಪ್ರಕೃತಿಗೆ ಮರಳಿಸಬೇಕು. ಈ ಅರಣ್ಯ ಶಿಕ್ಷಣ (ಪಡೆದದ್ದನ್ನು ಮರಳಿಸುವುದು) ಮಕ್ಕಳಿಗೆ ಬೇಕಾಗಿದೆ. ಆಗ ಮಕ್ಕಳು ಪ್ರಕೃತಿಯನ್ನು ದೋಚುವ ಕ್ರಿಯೆಯಲ್ಲಿ ತೊಡಗುವುದಿಲ್ಲ.
೩.   Exploitation, Pollution, Encroachment ಗಳ ನಡುವೆ Nourishment education ಅಂದರೆ ಪ್ರಕೃತಿಯ ಪೋಷಣೆಯ ಶಿಕ್ಷಣ ಬೇಕಾಗಿದೆ. ಭೂಸಂಸ್ಕೃತಿ ವೈವಿಧ್ಯವನ್ನು ಗೌರವಿಸಲು ಕಲಿತರೆ ನದಿ-ನಾಗರಿಕತೆ-ಸಂಸ್ಕೃತಿ-ಆರೋಗ್ಯ ಎಲ್ಲವೂ ಸ್ವಸ್ಥವಾಗುತ್ತದೆ. ಆಗ ಮಕ್ಕಳು ಸಹಜವಾಗೇ ಅಧ್ಯಾತ್ಮವನ್ನು ಕಲಿಯುತ್ತಾರೆ. ನಿತ್ಯ ಪೂಜೆ, ವ್ರತಗಳನ್ನು ಮಾಡುವುದು ಬೇರೆ, ಅಧ್ಯಾತ್ಮ ಬೇರೆ. ಸಂಸ್ಕೃತಿ-ಅಧ್ಯಾತ್ಮ ಮಕ್ಕಳು ಪ್ರಕೃತಿಯಲ್ಲಿ ಸಹಜವಾಗೇ ಕಲಿಯುತ್ತಾರೆ.

ಪೂರ್ಣಪ್ರಮತಿಯ ಸಣ್ಣ ಪ್ರಯತ್ನ ದೊಡ್ಡ ಬದಲಾವಣೆಗೆ, ಕ್ರಾಂತಿಗೆ ಕಾರಣವಾಗಲಿ, ನಾವೆಲ್ಲ ಒಟ್ಟಾಗಿ ಈ ಪೂರ್ಣರ್ಪಮತಿಯನ್ನು ಬೆಳೆಸೋಣ ಎಂದು ರಾಜೇಂದ್ರ ಸಿಂಗ್ ಅವರು ಆಗಮಿಸಿದ್ದ ತಜ್ಞರನ್ನು ವಿನಂತಿಸಿಕೊಂಡರು.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it