Purnapramati Mahotsava 2013-14

ಪೂರ್ಣಪ್ರಮತಿ ಮಹೋತ್ಸವ: ೨೦೧೩-೧೪
ದಿನಾಂಕ: ೩೧/೧೨/೨೦೧೩
ಸ್ಥಳ: ಹೆಚ್.ಎನ್.ಕಲಾಕ್ಷೇತ್ರ, ಜಯನಗರ

ಪೂರ್ಣಪ್ರಮತಿ ಜಾತ್ರೆ ಮತ್ತು ಉತ್ಸವಕ್ಕೆ ಗರಿ ಇಟ್ಟಂತೆ ೩೧/೧೨ ರಂದು ಮಹೋತ್ಸವವನ್ನು ಆಚರಿಸಲಾಯಿತು. ಪೂರ್ಣಪ್ರಮತಿ ಸಮ್ಮಾನ್ ಕೊಡುವ ಗಳಿಗೆಯೂ ಇದಾಗಿದೆ. ಸಂವತ್ಸರ ಸೂತ್ರಕ್ಕೆ ಪೂರಕವಾಗಿ ನಿರ್ದಿಷ್ಟ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಹಿರಿಯ ವ್ಯಕ್ತಿಗಳನ್ನು ಗುರುತಿಸಿ ವರ್ಷಕ್ಕೊಮ್ಮೆ ಸನ್ಮಾನ ಮಾಡುವುದು ಮಹೋತ್ಸವದ ವಿಶೇಷ ಕಾರ್ಯಕ್ರಮ. ತನ್ಮೂಲಕ ಅವರ ಮಾರ್ಗದರ್ಶನ, ಅಪಾರ ಅನುಭವವನ್ನು ನಮ್ಮ ಪಯಣದಲ್ಲಿ ಜೊತೆಗೂಡಿಸಿಕೊಳ್ಳುವ ಉದ್ದೇಶವೂ ಇದಕ್ಕಿದೆ. ನಮ್ಮ ಸನ್ಮಾನ ಅವರ ಆಶೀರ್ವಾದವನ್ನು, ಶುಭಕಾಮನೆಗಳನ್ನು ಪಡೆಯುವ ದಾರಿಯಷ್ಟೇ.

ಮಹೋತ್ಸವದ ಸಂತೋಷವನ್ನು ಇಮ್ಮಡಿಗೊಳಿಸಲು ಮತ್ತು ಶುಭವಾಗಲೆಂದು ಹರಸಲು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಆಗಮಿಸಿದ್ದರು. ಜಸ್ವೀಸ್ ವೆಂಕಟಾಚಲಯ್ಯ, ಡಾ.ಎಂ.ಚಿದಾನಂದ ಮೂರ್ತಿ, ರಾಜೇಂದ್ರ ಸಿಂಗ್, ಶ್ರೀನಾಥ್ ಬಾಟ್ನಿ, ಪ್ರಹ್ಲಾದಾಚಾರ್ಯರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಪಶ್ಚಿಮ ಘಟ್ಟಗಳಿರುವ ಒಂದು ಗ್ರಾಮದಲಿ ಜನಿಸಿ, ಕಾಡಿನ ಬಗ್ಗೆ ಒಲವನ್ನು ಬೆಳೆಸಿಕೊಂಡು ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ಕಾಡನ್ನು ಉಳಿಸುವ ಜವಾಬ್ದಾರಿಯುತ ಕೆಲಸದಲ್ಲಿ ನಿರತರಾಗಿರುವ ಹಾಲಕ್ಕಿ ಜನಾಂಗದ ತುಳಸಿ ಗೌಡ ಎಂಬುವವರಿಗೆ ಈ ಬಾರಿಯ ಸಮ್ಮಾನ್ ನೀಡಲಾಯಿತು. ಖ್ಯಾತ ಪರಿಸರ ತಜ್ಞರಾಗಿ ನಮಗೆಲ್ಲಾ ಪರಿಚಯವಿರುವ, ಪಶ್ಚಿಮಘಟ್ಟಗಳ ಉಳಿವಿಗಾಗಿ ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತಿರುವ ಪ್ರೊ. ಮಾಧವ್ ಗಾಡ್ಗಿಲ್ ಅವರಿಗೆ ಸಮ್ಮಾನ್ ನೀಡುವ ಯೋಜನೆ ಇದ್ದರೂ ಕೆಲವು ಆಕಸ್ಮಿಕ ಕಾರಣಗಳಿಂದ ತಪ್ಪಿತು. (ಮಾಧವ್ ಗಾಡ್ಗಿಲ್ ಅವರು ಕೌಟುಂಬಿಕ ಕಾರಣಗಳಿಂದಾಗಿ ಸಭೆಗೆ ಬರಲು ಸಾಧ್ಯವಾಗಲಿಲ್ಲ).

ಸ್ವಾಮಿಗಳು ಮತ್ತು ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ಮಕ್ಕಳು ತಾವು ಕಲಿತ ಹಾಡು, ನೃತ್ಯ, ನಾಟಕ, ಚುರುಕು ಸಂಭಾಷಣೆಗಳಿಂದ ಜೀವೋ ಜೀವಸ್ಯ ಜೀವನಮ್ ವಿಷಯವನ್ನು ಮಹೋತ್ಸವದಲ್ಲಿ ಮತ್ತೊಮ್ಮೆ ಪ್ರತಿಧ್ವನಿಸುವಂತೆ ಮಾಡಿದರು. ವಿಷಯಕ್ಕೆ ತಕ್ಕ ವೇಷ-ಭೂಷಣ, ನಿರ್ಭಯತೆ, ತನ್ಮಯತೆ ಮಕ್ಕಳ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಅಮರ ಗಂಗೆಯ ಗೀತ ರೂಪಕವನ್ನು ನೋಡಿ ಸಭಿಕರೆಲ್ಲರೂ ಒಂದು ಕ್ಷಣ ವಿಸ್ಮಯರಾದರು. ಸ್ವಾಮಿಗಳು ಬಹಳವಾಗಿ ಮೆಚ್ಚಿಕೊಂಡ ಕಾರ್ಯಕ್ರಮವೂ ಇದಾಗಿತ್ತು. ಮಹೋತ್ಸವದ ಮತ್ತೊಂದು ಪ್ರಮುಖ ಘಟ್ಟ ಪುಸ್ತಕ ಬಿಡುಗಡೆ. ಎಲ್ಲಪ್ಪ ರೆಡ್ಡಿ ಅವರೊಡನೆ ನಡೆಸಿದ ಸಂದರ್ಶನ ಮತ್ತು ಅವರು ಮಕ್ಕಳಿಗೆ ತರಗತಿಯಲ್ಲಿ ಬೋಧಿಸಿದ ವಿಷಯಗಳನ್ನು ಸಂಗ್ರಹಿಸಿ ‘ಪ್ರಕೃತಿಯೊಡನೆ ಒಂದು ನಡಿಗೆ’ ಎಂಬ ಕಿರು ಹೊತ್ತಿಗೆಯನ್ನು ಸ್ವಾಮಿಗಳು ಬಿಡುಗಡೆ ಮಾಡಿದರು. ಮಕ್ಕಳಿಗೆ ಬಾಲ್ಯದಿಂದಲೆ ನಿಸರ್ಗದ ಸೂಕ್ಷ್ಮ ವಿಚಾರಗಳನ್ನು, ಪರಸ್ಪರ ಸಂಬಂಧಗಳನ್ನು ತಿಳಿಸುವ ಉದ್ದೇಶದಿಂದ ವಿಶೇಷ ಪಠ್ಯಪುಸ್ತಕವನ್ನು ತಯಾರಿಸುವ ಯೋಜನೆ ಪೂರ್ಣಪ್ರಮತಿಯದ್ದು. ಇದರ ಮೊದಲ ಹೆಜ್ಜೆಯಾಗಿ ಪುಸ್ತಕದ ಬಿಡುಗಡೆ ಸ್ವಾಮಿಗಳ ಆಶೀರ್ವಾದದೊಂದಿಗೆ ನಡೆಯಿತು. ಈ ಪುಸ್ತಕದ ಲಾಭವು ಇತರ ಶಾಲೆಯ ವಿದ್ಯಾರ್ಥಿಗಳಿಗೂ, ಪ್ರಕೃತಿಯ ಬಗೆಗೆ ಅರಿಯಲು ಆಸಕ್ತಿ ಉಳ್ಳ ಓದುಗರಿಗೂ ಸಿಗಲಿದೆ. ಅನೇಕ ವಿಷಯಗಳಿಗೆ ಸಂಬಂಧಿಸಿದ ಮತ್ತೂ ಅನೇಕ ಪುಸ್ತಕಗಳನ್ನು ಹೊರತರುವ ಉದ್ದೇಶ ಪೂರ್ಣಪ್ರಮತಿಗಿದೆ. ಈ ಸಂತಸದ ಸಂದರ್ಭದಲ್ಲಿ ಹಿರಿಯರಾಡಿದ ನುಡಿಗಳು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತೆ, ಕಾರ್ಯೋನ್ಮುಖರಾಗುವಂತೆ ಮಾಡಿತು. ಪ್ರಕೃತಿ-ಸಂಸ್ಕೃತಿ-ಅಧ್ಯಾತ್ಮವನ್ನು ಬೆಸೆಯುವ ಪೂರ್ಣಪ್ರಮತಿಯ ಹೊಸ ಪ್ರಯೋಗಗಳಿಗೆ ಮಾರ್ಗದರ್ಶನವಾಯಿತು. ಅವುಗಳ ಸಂಗ್ರಹ ಹೀಗಿದೆ ನೋಡಿ:

ಡಾ.ಎಂ.ಚಿದಾನಂದಮೂರ್ತಿ (ಬರಹಗಾರರು, ಸಂಶೋಧಕರು ಮತ್ತು ಇತಿಹಾಸಜ್ಞರು)
ಪ್ರಗತಿಪರ ಚಿಂತನೆಗಳನ್ನು ಮಾಡುತ್ತಾ, ಪ್ರಗತಿಪರ ಪಥದಲ್ಲಿ ನಡೆಯುತ್ತಿರುವ, ಭಾರತವನ್ನು ನಡೆಸುತ್ತಿರುವ ಪರಮಪೂಜ್ಯ ಪೇಜಾವರ ಸ್ವಾಮಿಗಳಿಗೆ, ವೇದಿಕೆ ಮೇಲಿರುವ ಗಣ್ಯರಿಗೆ ಮತ್ತು ಶ್ರೋತೃಬಾಂಧವರಿಗೆ ವಂದಿಸುತ್ತೇನೆ. ವಂದೇ ಮಾತರಂ, ಏಕಂ ಸತ್ಯಂ ವಿಪ್ರಾಃ ಬಹುದಾ ವದಂತಿ, ಸರ್ವೇ ಜನಾಃ ಸುಖಿನಃ ಸಂತು ಎಂಬುದು ನಮ್ಮ ಭಾರತೀಯ ಸಂಸ್ಕೃತಿಯ ಘೋಷಣೆ. ಮಕ್ಕಳ ಅತ್ಯದ್ಭುತ ಹಾಡು, ನಾಟಕ, ನರ್ತನಗಳನ್ನು ನೋಡಿ ಅತ್ಯಾನಂದವನ್ನು ಅನುಭವಿಸಿದ್ದೇವೆ. ಆ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿರುವ ಗುರುವೃಂದಕ್ಕೆ ಮತ್ತು ಪೋಷಕರಿಗೆ ಅಭಿನಂದನೆಗಳು. ಕಳೆದ ಒಂದೂವರೆ ಗಂಟೆಗಳಿಂದ ಈ ವೇದಿಕೆಯ ಮೇಲೆ ನಮಗೆ ಕಂಡಿದ್ದು ಅಪ್ಪಟ ಭಾರತೀಯ ಸನಾತನ ಸಂಸ್ಕೃತಿ. ಭಾರತೀಯ ಸಂಸ್ಕೃತಿಯನ್ನು ಇಷ್ಟು ಚೆನ್ನಾಗಿ ತೋರಿಸುವ ಕಾರ್ಯಕ್ರಮವನ್ನು ನಾನು ಕಂಡಿಲ್ಲ. ಮತ್ತೆ ಮುಂದಿನ ಪೂರ್ಣಪ್ರಮತಿ ಉತ್ಸವದಲ್ಲೇ ಇಂತಹ ಕಾರ್ಯಕ್ರಮ ನೋಡಲು ಸಾಧ್ಯ.

ಇಲ್ಲಿರುವ ಎಲ್ಲರಿಗೂ ತಿಳಿದಿದೆ, ಭಾರತೀಯ ಸಂಸ್ಕೃತಿ ಆಕ್ರಮಣಕ್ಕೆ ಒಳಗಾಗಿದೆ. ನಾಲ್ಕುದಿನಗಳ ಹಿಂದೆಯಷ್ಟೇ ಪತ್ರಿಕೆಯಲ್ಲಿ ಒಂದು ಹಿಂದೂ ದೇವಾಲಯ ಭಗ್ನವಾಗಿರುವ ಚಿತ್ರವನ್ನು ಕೊಡಲಾಗಿತ್ತು. ಹಿಂದೆ ಭಾರತದ ಭಾಗವೇ ಆಗಿದ್ದ ಪಾಕಿಸ್ತಾನದಲ್ಲಿ ಇದ್ದ ೪೨೦ ದೇವಾಲಯಗಳಲ್ಲಿ ಇಂದು ಉಳಿದಿರುವುದು ಕೇವಲ ೨೦ ದೇವಾಲಯಗಳು ಮಾತ್ರ. ೨೨% ಹಿಂದೂಗಳ ಜನಸಂಖ್ಯೆ ಇದೀಗ ೨% ಗೆ ಇಳಿದಿದೆ. ಅಲ್ಲಿ ಮಾತ್ರ ಅಲ್ಲ, ಭಾರತದಲ್ಲೇ ನಾಶವಾಗುತ್ತಿದೆ. ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಕ್ರಿಶ್ಚಿಯನ್, ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಹಲವು ಹುನ್ನಾರಗಳಿಗೆ ಹಿಂದೂ ದೇವಾಲಯಗಳು, ಜನರು ಒಳಗಾಗುತ್ತಿದ್ದಾರೆ. ಇದನ್ನೆಲ್ಲಾ ಗಂಭೀರವಾಗಿ ನಾವು ಪರಿಗಣಿಸಿ ಕಾರ್ಯೋನ್ಮುಖರಾಗಬೇಕು. ಇಂತಹ ಕಾರ್ಯಕ್ರಮಗಳು ಯುವಕರಿಗೆ ಉತ್ಸಾಹವನ್ನು ತುಂಬಲಿ. ನನ್ನನ್ನು ಇಲ್ಲಿ ಕರೆದಿರುವವರಿಗೆ ಧನ್ಯವಾದಗಳು. ನನ್ನ ಪ್ರಶಸ್ತಿಯಾಗಲಿ, ಹೆಸರಾಗಲಿ ಈ ಸಭೆಗೆ ಕರೆಯುವಂತೆ ಮಾಡಿಲ್ಲ. ನಾನು ಈ ಸಭೆ ಬಂದಿದ್ದರೆ ಅದು ಒಬ್ಬ ಶ್ರೇಷ್ಠ ಹಿಂದೂವಾಗಿ. ಗಾಂಧೀಜಿಯವರು ಹೇಳುತ್ತಾರೆ I take pride to call me a Sanaatani, a Hindu ಎಂದು ಹೇಳಿಕೊಂಡಿದ್ದಾರೆ. ವಿವೇಕಾನಂದರೂ ಇದೇ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಹೆಚ್ಚು ಹಿಂದೂಗಳೇ ಇರುವ ಇಂದಿನ ಭಾರತದಲ್ಲಿ ನಾನು ಪ್ರಾಣಬಿಡುತ್ತಿದ್ದೇನೆ ಎಂಬುದೇ ಸಮಾಧಾನದ ಸಂಗತಿ. ಜೈ ಹಿಂದ್.

ಶ್ರೀನಾಥ್ ಬಾಟ್ನಿ (Director on Board, Infosys Technologies)
ಒಂದೂವರೆ ಗಂಟೆ ಮಕ್ಕಳ ಈ ಕಾರ್ಯವನ್ನು ನೋಡುತ್ತಾ ಸಮಯ ಹೋದದ್ದೆ ತಿಳಿಯಲಿಲ್ಲ. ಒಂದೊಂದು ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಭಾರತೀಯ ಸಂಸ್ಕೃತಿ ಪ್ರತಿಧ್ವನಿಸುತ್ತಿತ್ತು. ಪ್ರಕೃತಿ-ಸಂಸ್ಕೃತಿ ಬಹಳ ಮುಖ್ಯವಾದುದು. ನಮ್ಮದೇ ಸಂಸ್ಕೃತಿಯನ್ನು ಮರೆಯುತ್ತಾ ಹೇಗೆ ನಮ್ಮ ದೇಶದಲ್ಲಿ ಪ್ರಕೃತಿಯನ್ನು ನಾಶಮಾಡುತ್ತಿದ್ದೇವೆ ಎಂಬುದನ್ನು ನೆನೆಸಿಕೊಂಡರೆ ಮುಂದೆ ಏನಾಗುವುದೋ ಗೊತ್ತಿಲ್ಲ?! ಇಂದು ನಮ್ಮ ಮಕ್ಕಳು ಮಹಾಭಾರತ-ರಾಮಾಯಣ ಕತೆಗಳನ್ನು ಕೇಳುತ್ತಿಲ್ಲ. ಟಿ.ವಿ. ಸೀರಿಯಲ್‌ಗಳನ್ನು, ಬಾಲಿವುಡ್ ಸಿನಿಮಾಗಳನ್ನು ನೋಡುತ್ತಿದ್ದಾರೆ. ನಾನು ಎಷ್ಟೋ ದೇಶಗಳಿಗೆ ಭೇಟಿ ನೀಡಿದ್ದೇನೆ. ಪಾಶ್ಚಿಮಾತ್ಯ ದೇಶಗಳಿಗೆ ಹೋದಾಗ ಅಲ್ಲಿನ ಜನ ಆಸಕ್ತಿಯಿಂದ ನಮ್ಮ ಸಂಸ್ಕೃತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಎಷ್ಟೋ ಜನ ಮಹಾಭಾರತ-ರಾಮಾಯಣವನ್ನೂ ಓದಿರುತ್ತಾರೆ. ಅವರಿಗೆ ಆಸಕ್ತಿ ಕುತೂಹಲ ಎರಡೂ ಇರುತ್ತದೆ. ಪೌರಾತ್ಯ ದೇಶಗಳಿಗೆ ಹೋದಾಗಲೂ ಅವರ ದೇಶದ ಸಂಸ್ಕೃತಿಯನ್ನು ಪ್ರೀತಿಸುವುದನ್ನು ಕಾಣಬಹುದು. ನಾವು ಈ ಎರಡರ ಮಧ್ಯೆ ಎಲ್ಲೋ ಬೀಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಈ ಕಾರ್ಯಕ್ರಮ ಮಾಡಲು ವೇದಿಕೆ ಮಾಡಿಕೊಟ್ಟದ್ದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಾಯಿತು. ದೊಡ್ಡವರಿಗೆ ಕಣ್ಣುತೆರೆಸುವಂತೆ ಮಕ್ಕಳು ಕಾರ್ಯಕ್ರಮ ಕೊಟ್ಟರು. ಬೆಟ್ಟಗಳಿಗೆ ಹೋದಾಗ ಪ್ಲಾಸ್ಟಿಕ್‌ಅನ್ನು ಎಲ್ಲೆಂದರಲ್ಲಿ ಬಿಸಾಕುತ್ತಿರುತ್ತೇವೆ. ಈ ಮಕ್ಕಳು ಅದನ್ನು ಬಹಳ ಚೆನ್ನಾಗಿ ತೋರಿಸಿದರು. What Purnapramati is doing great service to the society by inculcating importance of both our culture and our environment. I wish all the best for this event.


ಎಲ್ಲಪ್ಪ ರೆಡ್ಡಿ (ಸದಸ್ಯರು, ಲೋಕ ಅದಾಲತ್,  ಕರ್ನಾಟಕ ಉಚ್ಚ ನ್ಯಾಯಾಲಯ)
೧೯೮೨ರಲ್ಲಿ ಅರಣ್ಯ ಅಧಿಕಾರಿಯಾಗಿ ಮಾಸ್ತಿ ಕಟ್ಟೆ ಸಸ್ಯಪಾಲನಾ ಕ್ಷೇತ್ರಕ್ಕೆ ಹೋದಾಗ ತುಳಸಿ ಯಂತಹ ವ್ಯಕ್ತಿಯ ನಿಷ್ಠೆ, ಕೆಲಸದಲ್ಲಿನ ತನ್ಮಯತೆ ಗಮನಿಸಿದೆ. ಕುತೂಹಲಕ್ಕಾದರೂ ತಲೆ ಎತ್ತಿ ನೋಡುತ್ತಾರೆ, ಆದರೆ ಇವರು ಅವರ ಕೆಲಸ ಮಾಡುತ್ತಲೆ ಇರುತ್ತಿದ್ದರು. ಬಂದವರನ್ನು ಗಮನಿಸುತ್ತಿರಲಿಲ್ಲ. ಕೆಲಸದಲ್ಲಿದ್ದ ಅವರ ಏಕಾಗ್ರತೆಯನ್ನು ಗಮನಿಸಿದೆ. ದಿನಗೂಲ್ಲಿ ನೌಕರರಾದ, ಅನಕ್ಷರಸ್ಥರಾದ ಈ ಮಹಿಳೆ ನಿರ್ವಂಚನೆಯಿಂದ ಕೆಲಸದಲ್ಲಿ ನಿರತರಾಗಿರುವುದು ದಿಗ್ಭ್ರಮೆ ತರಿಸಿತು. ೨೦ ಜನ ಹೆಂಗಸರ ಗುಂಪನ್ನು ಕರೆದುಕೊಂಡು ಕಾಡಿಗೆ ಬರುವ ಕಳ್ಳನನ್ನು ಹಿಡಿದು ತರುವ ಧೈರ್ಯ ಇವರಿಗಿದೆ. ಕಾಡನ್ನು ತನ್ನದು ಎಂದು ತಿಳಿದಿಕೊಂಡಿದ್ದಾರೆ. ಹಲವರು ಪಿ.ಹೆಚ್.ಡಿ ಮಾಡಿರಬಹುದು. ಇವರ ತನ್ಮಯತೆ ನನಗೂ ಇಲ್ಲ. ಯಾವ ಮರದ ಬೀಜವನ್ನು ತಂದು ಮೊಳಕೆ ಮಾಡಬೇಕೆಂದು ಹೇಳಿದ್ದೆನೋ ಮುಂದಿನ ಬಾರಿ ಹೋಗುವುದರೊಳಗೆ ಅಷ್ಟೂ ಕೆಲಸವನ್ನೂ ಮಾಡಿರುತ್ತಿದ್ದರು. ಪುಸ್ತಕದಲ್ಲಿ ಬರೆದಿದ್ದ ಎಷ್ಟೋ ವಿಧಾನಗಳು ಸೋತಾಗಲೂ ಅನುಭವದಿಂದ ಬೀಜವನ್ನು ಮೊಳಕೆ ಬರಿಸಿದ ಬುದ್ಧಿವಂತಿಕೆ ಇವರದ್ದು. ಕಾಡಿನ  ಮಧ್ಯೆ ನಡೆಯುವಾಗ ಅವರನ್ನು ಗಮನಿಸಿದರೆ ಕಾಡಿನಲ್ಲೇ ಸ್ವರ್ಗವನ್ನು ಕಂಡಿರುವುದು ನಮ್ಮ ಅನುಭವಕ್ಕೆ ಬರುತ್ತದೆ. ನಿಸರ್ಗಕ್ಕೆ ನಾವು ಸರಿಯಾಗಿ ಸ್ಪಂದಿಸಿದರೆ ನಮ್ಮ ಕಾಲ ಕೆಳಗೇ ಒಂದು ಅದ್ಭುತವಾದ ಲೋಕವಿದೆ. ಒಂದು ಹೊಸ ಜೀವಲೋಕವನ್ನು ಕಾಣಬಹುದು. ಮುಂದೆ ಉತ್ತರಕನ್ನಡಕ್ಕೆ ಪ್ರಶಸ್ತಿ ಬಂದಾಗ ನನ್ನನ್ನು ಕರೆದರು. ನನಗೆ ನಾಚಿಕೆಯಾಯಿತು. ನನಗೆ ಆ ಯೋಗ್ಯತೆ ಇದೆಯೇ? ಎಂದು. ತುಳಸಿ ಅವರನ್ನೆ ಅದಕ್ಕೆ ಕಳುಹಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡೆ. ಇಂತಹವರನ್ನು ಮಕ್ಕಳಿಗೆ ಪರಿಚಯ ಮಾಡಿಸುವ ಉದ್ದೇಶದಿಂದ ಇವರನ್ನು ಕರೆಸಲಾಗಿದೆ. ಈಕೆಯದ್ದು ನಿಜವಾದ ವಿಜ್ಞಾನ. ಇಂತಹ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಟ್ಟ ಪೋಷಕರಿಗೆ ಅಭಿನಂದನೆಗಳು.

ಜಸ್ಟೀಸ್ ವೆಂಕಟಾಚಲಯ್ಯ
ಪೂರ್ಣಪ್ರಮತಿ ಎನ್ನುವುದು ನನ್ನ ಕಲ್ಪನೆಯಲ್ಲಿ ಒಂದು ಸಂಸ್ಥೆಯಲ್ಲ,it is a great metopher for the global debate.  ಪ್ರಕೃತಿಯನ್ನು ನಾವು ಆರಾಧಿಸುತ್ತೇವೆ. ಒಂದು ಹಿಡಿ ಮಣ್ಣನ್ನು ನಾವು ಹಿಡಿದರೆ ಸಾವಿರಾರು ತರಹದ ಜೀವಿಗಳು ಅಲ್ಲಿರುತ್ತವೆ. ಅದನ್ನು ವಿವರಿಸಲು ಸಾಧ್ಯವೇ ಇರುವುದಿಲ್ಲ. ಆ ಕ್ಷಣಕ್ಕೆ ಹುಟ್ಟಿ ತಮ್ಮ ಕೆಲಸ ಮಾಡಿ ಮುಗಿಸಿ ಸಾಯುತ್ತವೆ. ಪೂರ್ಣಪ್ರಮತಿ ಇಷ್ಟರ ಮಟ್ಟಿಗೆ ನಮ್ಮ ಸಂಸ್ಕೃತಿಯನ್ನು ಉದ್ದೀಪನ ಮಾಡಿರುವುದನ್ನು ಮಕ್ಕಳು ನಮಗೆ ತೋರಿಸಿದ್ದಾರೆ.

೪೦ರ ದಶಕದಲ್ಲಿ ನಮ್ಮ ಆರೋಗ್ಯದ ಸ್ಥಿತಿ ಹೇಗಿತ್ತು? Maternal Mortality ಎಂದು ಒಂದು ಗಣತಿ ಇದೆ. ೪೦೦೦ ಹೆಣ್ಣುಮಕ್ಕಳು ಪ್ರಸವದ ಕಾಲದಲ್ಲಿ ಪ್ರಾಣ ಬಿಡುತ್ತಾರೆ. ೫೦ರ ದಶಕದಲ್ಲಿ ೨೦೦೦ ಕ್ಕೆ ಬಂದಿತು. ಈಗ ೧೬೦ ಇದೆ. ಆಧುನಿಕ ವಿಜ್ಞಾನದ ಕೊಡುಗೆ ಇದು. ೧೯೧೦ರಲ್ಲಿ ಒಬ್ಬ ಭಾರತೀಯನ ಸರಾಸರಿ ಜೀವಿತಾವಧಿ ೨೯ ವರ್ಷಗಳು, ೧೯೮೦ರಲ್ಲಿ ೮೫ ವರ್ಷಗಳು. ವಿಜ್ಞಾನದ ಪ್ರಭಾವ ಎಷ್ಟಿದೆ ಎಂಬುದು ಇದರಿಂದ ತಿಳಿಯುತ್ತದೆ. ಆದರೆ ೨೦ನೇ ಶತಮಾನದಲ್ಲಿ ೧೦೦ ವರ್ಷ ಎಂದು ಹೇಳುತ್ತದೆ. ಇದರಲ್ಲಿ ಎಷ್ಟು ಒಳ್ಳೆಯದು ಎಷ್ಟು ಕೆಟ್ಟದು ಎಂಬುದು ನೋಡಬೇಕು. ಪ್ರಕೃತಿಯನ್ನು ಆರಾಧನೆ ಮಾಡುವ ಪದ್ಧತಿ ಹೋಗಬೇಕು, ಅದನ್ನು ನಾವು ಸೇವಕರಂತೆ ಬಳಸಿಕೊಳ್ಳಬೇಕು ಎಂದು ಒಬ್ಬರು ಹೇಳುತ್ತಾರೆ. ಮನುಷ್ಯನ ಕಾಲ ಮುಗಿಯಿತು, ಇನ್ನು ಯಂತ್ರಗಳ ಕಾಲ, ತಂತ್ರಜ್ಞಾನದ ಕಾಲ ಎಂದು ಹೇಳುತ್ತಾರೆ. ವಿಜ್ಞಾನದ ಹೊಳೆಯಲ್ಲಿ ಸಂಸ್ಕೃತಿ ಕೊಚ್ಚಿ ಹೋಗುತ್ತದೆ ಎನಿಸುತ್ತದೆ. ಸಂಸ್ಕೃತಿಯನ್ನು ಗುರುತಿಸಿ, ಅಳವಡಿಸಿಕೊಳ್ಳುವುದು ಹೇಗೆ ಎನ್ನುವುದು ಇಂದಿನ ಸಮಾಜಕ್ಕಿರುವ ದೊಡ್ಡ ಸಮಸ್ಯೆ. ಮಕ್ಕಳು ಈ ಸಮಸ್ಯೆ ಬಹಳ ಚೆನ್ನಾಗಿ ಉತ್ತರ ಹುಡುಕುವ ಪ್ರಯತ್ನವನ್ನು ಇಂದು ತೋರಿಸಿದರು. ಆದ್ದರಿಂದಲೇ ಇದನ್ನು ಮೆಟಾಫರ್ ಎಂದು ಹೇಳಿದ್ದು. ಇದನ್ನು ಎಲ್ಲರೂ ಬೆಳೆಸಬೇಕು.

ಪ್ರೊ.ಡಿ.ಪ್ರಹ್ಲಾದಾಚಾರ್ಯರು (ನಿವೃತ್ತ ಕುಲಪತಿಗಳು, ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯ)
ಪೂರ್ಣಪ್ರಮತಿ ೪ ವರ್ಷದ ಬಾಲಿಕೆ. ಮೊದಲ ವರ್ಷದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟಾಗ ಪೋಷಕರಲ್ಲಿ ಒಂದು ಭಯ ಕಾಣಿಸಿತ್ತು. ಆದರೆ ಈ ದಿನ ಹೆಮ್ಮೆಯಿಂದ ಹೇಳಬಹುದು, ಈ ಬಾಲಿಕೆ ಪುಟ್ಟದಾದ ಆದರೆ ದಿಟ್ಟವಾದ ಹೆಜ್ಜೆಯನ್ನು ಇಡುತ್ತಿದ್ದಾಳೆ. ಎಲ್ಲಾ ಪೋಷಕರು ನಿರ್ಭಯರಾಗಿದ್ದಾರೆ, ಅಷ್ಟೇ ಅಲ್ಲ ಅವರಿಗೆ ಪರಿಚಯವಿರುವ ಇತರರಿಗೂ ಇಲ್ಲಿಗೆ ಸೇರಿಸಬೇಕೆಂಬ ಸಲಹೆ ಕೊಡುತ್ತಿದ್ದಾರೆ. ಯಾವ ಉದ್ದೇಶದಿಂದ ಈ ಶಾಲೆ ಬೆಳೆಯಬೇಕೆಂದು ಅಂದುಕೊಂಡಿದ್ದಾರೆ ಅದು ಸರಿಯಾದ ಮಾರ್ಗದಲ್ಲಿ ಹೋಗುತ್ತಿದೆ ಎಂಬ ಭರವಸೆ ನಮಗೆ ಬಂತು. ಪರಮ ಪೂಜ್ಯ ಸ್ವಾಮಿಗಳು ಮತ್ತು ಇಲ್ಲಿರುವ ಗಣ್ಯರೆಲ್ಲರ ಆಶೀರ್ವಾದ ಈ ಶಾಲೆಗೆ ಸಿಗಲಿ, ನಾನು ಈ ಶಾಲೆಯ ಒಂದು ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಎಲ್ಲರ ಪ್ರೋತ್ಸಾಹ ಹೀಗೆ ಇರಲಿ, ನಮ್ಮ ಮಕ್ಕಳು ಎಲ್ಲರಿಗೂ ಪ್ರೇರಣೆ ನೀಡುವಂತೆ ಬೆಳೆಯಲಿ.

ತುಳಸಿ ಗೌಡ
ನನಗೆ ಕಾಡು ಬೆಳೆಸುವುದೆಂದರೆ ಬಹಳ ಇಷ್ಟ. ಮಕ್ಕಳು ಈಗ ಹಾಡು, ಕುಣಿತ ಎಲ್ಲಾ ಮಾಡಿದರು. ಅವರೂ ಹೀಗೆ ಕಾಡು ಬೆಳೆಸಬೇಕು. ೨-೩ ಲಕ್ಷ ಗಿಡ ಮಾಡಿದ್ದೇನೆ ನರ್ಸರಿಯಲ್ಲಿದ್ದಾಗ. ಈಗ ಹೋಗದೆ ೧೦-೧೨ ವರ್ಷ ಆಯಿತು. ಮಕ್ಕಳು ಮಾಡಿದ್ದು ನೋಡಿ ನನಗೆ ಖುಷಿ ಆಯಿತು.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ
ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಅದಕ್ಕಿಂತ ಹೆಚ್ಚು ಪರಿಣಾಮ ಮಕ್ಕಳು ಪ್ರದರ್ಶಿಸಿದ ನೃತ್ಯ, ನಾಟಕಗಳಲ್ಲಿತ್ತು. ಪೂರ್ಣಪ್ರಮತಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮನರಂಜನೆ ಜೊತೆಗೆ ಜೀವನದಲ್ಲಿ ಮರೆಯಲಾಗದ ಉತ್ತಮ ಸಂಸ್ಕೃತಿ, ಪ್ರಕೃತಿಯ ಬಗ್ಗೆ ಒಳ್ಳೆಯ ಪ್ರೇರಣೆಯನ್ನು ಮಕ್ಕಳಿಗೆ ಮತ್ತು ನಮಗೆ ನೀಡಿದ್ದು ಎಲ್ಲಾರಿಗೂ ಮಾದರಿಯಾದುದು. ಮಕ್ಕಳಿಗೆ ವಿಕೃತಿ ಬೇಡ, ಸಂಸ್ಕೃತಿ ಮತ್ತು ಪ್ರಕೃತಿ ಬೇಕು. ಅಂತಹ ಶಿಕ್ಷಣ ಬೇಕು. ಅದಕ್ಕೆ ನಿದರ್ಶನ ಇಂದಿನ ಮನರಂಜನಾ ಕಾರ್ಯಕ್ರಮ. ಉಪನಿಷತ್ತು, ಪುರಾಣಗಳಲ್ಲಿ ದೇವರನ್ನು ಕೇವಲ ಮಂದಿರದಲ್ಲಿ, ಮೂರ್ತಿಗಳಲ್ಲಿ ಅಲ್ಲದೆ ಪ್ರಾಣಿಗಳಲ್ಲಿ, ಪ್ರಕೃತಿಯಲ್ಲಿ ಎಲ್ಲೆಡೆಯಲ್ಲಿಯೂ ಕಾಣಬೇಕೆಂಬುದು ನಮ್ಮ ಋಷಿ-ಮುನಿಗಳ ಸಂದೇಶವಾಗಿದೆ. ಭೂಮಿ ಕೇವಲ ಜಡ ಭೂಮಿಯಲ್ಲ, ಅದು ಭೂ ಮಾತೆ. ಬೆಟ್ಟ, ನದಿ ಎಲ್ಲೆಡೆಯೂ ದೇವಿ-ದೇವತೆಗಳನ್ನು ಕಂಡಿದ್ದಾರೆ. ಮರಗಿಡಗಳಲ್ಲೂ ಭಗವಂತನಿದ್ದಾನೆ. ಜಡ, ಮಾನವ, ಪ್ರಾಣಿ ಎಲ್ಲದರಲ್ಲೂ ದೇವರನ್ನು ಕಾಣುವ ಭೂಮಿಕೆಯನ್ನು ನಮ್ಮ ಋಷಿಗಳು ನೀಡಿದ್ದಾರೆ. ಎಲ್ಲರಿಗೂ ಬದುಕುವ ಅಧಿಕಾರವಿದೆ ಎಂಬುದನ್ನು ಮಕ್ಕಳು ಹೇಳಿದಾಗ ನನಗೆ ರೋಮಾಂಚನವಾಯಿತು.

ಕೃಷ್ಣ ಗೋಕುಲವನ್ನು ಬಿಟ್ಟು ವೃಂದಾವನಕ್ಕೆ ಹೋಗುವ ಸಂಕಲ್ಪ ಮಾಡಿದ. ಏಕೆಂದರೆ ಮೊದಲು ಗೋಕುಲದಲ್ಲಿ ದಟ್ಟವಾದ ಅರಣ್ಯವಿತ್ತು. ಪ್ರಕೃತಿ ಸಂಪತ್ತು ಇತ್ತು. ಆಕಾಶವೇ ಕಾಣದಷ್ಟು ಮರಗಳಿದ್ದವು. ಈಗ ಮಥುರೆಯ ನಗರದ ವರ್ತಕರು ಹಣದ ಆಸೆಗಾಗಿ ಮರಗಳನ್ನು ನಾಶಪಡಿಸಿದ್ದಾರೆ ಎಂದು ಹೇಳಿರುವುದು ಹರಿವಂಶದಲ್ಲಿ ಉಲ್ಲೇಖವಾಗಿದೆ. ಇದೇ ರೀತಿ ಮುಂದುವರೆದರೆ ವೃಂದಾವವಷ್ಟೇ ಅಲ್ಲ, ಭಾರತವನ್ನೇ ಬಿಟ್ಟು ಹೋಗಬೇಕಾದೀತು. ಗಂಗೆಯ ಹಾಡು, ನೃತ್ಯ ಬಹಳ ಚೆನ್ನಾಗಿ ಮೂಡಿಬಂದಿತು. ಶ್ರೀರಾಮ್ ಅವರು ಬಹಳ ಪ್ರಚೋದನಕಾರಿಯಾದ ಗೀತೆಯನ್ನು ರಚಿಸಿ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ವಿಶೇಷವಾಗಿ ಅಭಿನಂದಿಸುತ್ತೇನೆ. ಪುಣ್ಯಕೋಟಿಯ ಹಾಡಿನಂತೆ ಇದೂ ಬಹಳ ಕಾಲ ಉಳಿಯುವಂತಹದ್ದು. ನಮ್ಮ ಗಂಗೆ ಅವಿಚ್ಛಿನ್ನವಾಗಿ ಹರಿಯಬೇಕು. ಅಖಂಡವಾಗಿ ಹರಿಯಬೇಕು. ಇದಕ್ಕಾಗಿ ನಮ್ಮ ಎಲ್ಲ ಯುವಕರೂ ಸಿದ್ಧರಾಗಬೇಕು.

ತುಳಸಿ ಗೌಡರು ಹಳ್ಳಿಯ ಹೆಂಗಸು. ಆಡಂಭರವಿಲ್ಲದೆ, ಬೀಜರಕ್ಷಣೆಯಲ್ಲಿ ತೊಡಗಿದ್ದಾರೆ. ಮುಂದಿನ ಸೃಷ್ಟಿಗಾಗಿ ಬೀಜರಕ್ಷಣೆಯನ್ನು ಮತ್ಸ್ಯಾವತಾರ ಭಗವಂತನ ನೆರವಿನಿಂದ ಮನು ಮಾಡಿದ ಎಂಬ ಉಲ್ಲೇಖ ಭಾಗವತದಲ್ಲಿ ಬರುತ್ತದೆ. ಆ ಬೀಜರಕ್ಷಣೆಯ ಕಾರ್ಯ ನಮ್ಮ ತುಳಸಿ ಗೌಡರೂ ಮಾಡುತ್ತಿರುವುದು ಸಂತೋಷದ ಸಂಗತಿ. ಮಧುಸೂದನ ಸರಸ್ವತಿ ಅವರು ಕಾಶಿಯಲ್ಲಿನ ಆನಂದ ಕಾನನದಲ್ಲಿದ್ದ ತುಳಸಿದಾಸರನ್ನು ನಡೆದಾಡುವ ತುಳಸಿ ಎಂದು ವರ್ಣಿಸುತ್ತಾರೆ. ತುಳಸಿ ಅಂಗಳದಲ್ಲಿದ್ದರೆ ವಾತಾವರಣವೂ ಶುದ್ಧ. ನಮ್ಮ ಕರ್ನಾಟಕದ ಅಂಗಳದಲ್ಲಿ ನಡೆದಾಡುವ ತುಳಸಿ ಎಂದರೆ ನಮ್ಮ ತುಳಸಿ ಗೌಡರು ಎಂದು ಅವರನ್ನು ಅಭಿನಂದಿಸುತ್ತೇನೆ. ಅವರಿಗೆ ಸನ್ಮಾನ ನೀಡಿದ್ದು ಸಂತೋಷ ತಂದಿದೆ. ಇಲ್ಲಿನ ಕಾರ್ಯಚಟುವಟಿಕೆಗಳು ಇತರರಿಗೆ ಮಾದರಿ. ನಮ್ಮಲ್ಲಿ ಕಲಿತ ಅನೇಕರು ಉತ್ಸಾಹದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಹ್ಲಾದಾಚಾರ್ಯರೇ ಅಧ್ಯಕ್ಷರಾಗಿರುವ ಈ ಸಂಸ್ಥೆ ಪೂರ್ತಿಯಾಗಿ ನಮ್ಮದೆ ಸಂಸ್ಥೆಯಾಗಿದೆ ಎಂದು ಅಭಿಮಾನದಿಂದ ಹೇಳುತ್ತೇವೆ. ಇದರ ಉತ್ತರೋತ್ತರ ಪ್ರಗತಿಯನ್ನು ಕೃಷ್ಣ ನಡೆಸಲಿ ಎಂದು ಹಾರೈಸುತ್ತೇವೆ.

For more photos click here

 

ಹೀಗೆ ಹಿರಿಯರೆಲ್ಲರ ಆಶೀರ್ವಾದಿಂದ ಹೃದಯ ತುಂಬಿಸಿಕೊಂಡು ನಮ್ಮ ಪ್ರಾಂಶುಪಾಲರು ಔಪಚಾರಿಕವಾಗಿ ಅತಿಥಿಗಳಿಗೆ ವಂದನಾರ್ಪಣೆಯನ್ನು ಮಾಡಿದರು.  ಕೊನೆಯ ಹನಿಯಾಗಿ ಸುಮಸುಂದರ ತರುಲತೆಗಳ ವೃಂದಾವನ ಲೀಲೆ….ಎಂಬ ಹಾಡಿನೊಂದಿಗೆ ಎಲ್ಲ ಮಕ್ಕಳು, ಅಧ್ಯಾಪಕರು ಸಸಿಗಳನ್ನು ಕೈಯಲ್ಲಿ ಹಿಡಿದು ವೇದಿಕೆಯನ್ನು ತುಂಬಿದಾಗ ಜೀವೋ ಜೀವಸ್ಯ ಜೀವನಮ್ ಅರ್ಥಪೂರ್ಣವಾಗಿ ಮೈದಾಳಿದ್ದನ್ನು ಅಲ್ಲಿ ನೆರೆದಿದ್ದ ಪೋಷಕರು, ಸಭಿಕರೆಲ್ಲರೂ ಅನುಭವಿಸಿದರು. ಅದೊಂದು ಸದಾ ನೆನಪುಳಿಯುವ ಅವಿಸ್ಮರಣೀಯ ನೋಟವಾಯಿತು.

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.