ಸ್ವಾತಂತ್ರ್ಯ ದಿನೋತ್ಸವ – 2013

ದಿನಾಂಕ: 15 ನೇ ಆಗಸ್ಟ್ 2013

ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆಯ ಹತ್ತಿರದ ಮೈದಾನ ಮತ್ತು ಶಾಲೆಯ ಆವರಣ, ಗಿರಿನಗರ, ಬೆಂಗಳೂರು

 

ದೇಶಕ್ಕಾಗಿ ತಮ್ಮ ಸುಖವನ್ನು ತ್ಯಾಗಮಾಡಿದವರ ನೆನಪಿಗಾಗಿ ಮತ್ತು ಎದೆಗುಂದದೆ ಕ್ರಮಬದ್ಧವಾದ ಯೋಜನೆಗಳನ್ನು ರೂಪಿಸಿದ ಅದರಂತೆ ಯಶಸ್ವಿಗೊಳಿಸಿದ ಧೀಮಂತರ ಸ್ಮರಣೆಗಾಗಿ ಆಗಸ್ಟ್ 15ನೇ ದಿನವನ್ನು ಉತ್ಸವವಾಗಿ ಆಚರಿಸಲಾಗುವುದು. ಪೂರ್ಣಪ್ರಮತಿಯ ಈ ಸರಳ ಸಮಾರಂಭದಲ್ಲಿ ಮಕ್ಕಳು, ಪೋಷಕರು, ಅಧ್ಯಾಪಕರೊಂದಿಗೆ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಿದ ಅಪರೂಪದ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದರು. ಅವರೇ

ಶ್ರೀಯುತ ಪ್ರಹ್ಲಾದ್ ಅವರು.

ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಸೈನಿಕರು ಇವರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಆಸಕ್ತಿಯನ್ನು ಕಾಯ್ದಿಟ್ಟುಕೊಂಡಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕವನ, ನಾಟಕಗಳನ್ನು ಬರೆಯುವುದು ಇವರ ಹವ್ಯಾಸ. ಪ್ರಕೃತಿ ಪ್ರೇಮವನ್ನು ತಮ್ಮದಾಗಿಸಿಕೊಂಡಿರುವ ಇವರು ಹಾವುಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಹಾವಿನ ವಿಷವನ್ನು ಔಷಧಿಗಳಲ್ಲಿ ಯಾವ ಪ್ರಮಾಣದಲ್ಲಿ ಬಳಸಬಹುದೆಂಬುದನ್ನು ಪರೀಕ್ಷಿಸುವ ಘಟಕದಲ್ಲಿ ಕಾರ್ಯನಿರ್ವಹಿಸುತ್ತಾರೆ. ಹಲವು ವೈಜ್ಞಾನಿಕ ಲೇಖನಗಳನ್ನು ಬರೆದು ಆಸಕ್ತರಿಗೆ ಮಾರ್ಗದರ್ಶನವನ್ನೂ ನೀಡುತ್ತಾರೆ. ಇಂತಹ ವಿಶಿಷ್ಟ ಆಸಕ್ತಿಯ, ಸರಳ ವ್ಯಕ್ತಿಯನ್ನು ನಮ್ಮ ಶಾಲೆಗೆ ಬರಮಾಡಿಕೊಂಡಿದ್ದು ನಮ್ಮ ಸುಕೃತವೇ ಸರಿ.

ಬೆಳಗ್ಗೆ 8.45ಕ್ಕೆ ಧ್ವಜಾರೋಹಣವನ್ನು ನಮ್ಮ ಅತಿಥಿಗಳು ಮತ್ತು ಪುಟ್ಟ ಶ್ರೀನಿಧಿ ನಡೆಸಿದರು. ರಾಷ್ಟ್ರಗೀತೆ,  ವಂದೇ ಮಾತರಂ ಗೀತೆಗಳನ್ನು ಎಲ್ಲರೂ ಹಾಡಿದೆವು. ಐದನೆಯ ತರಗತಿಯ ಮಕ್ಕಳು ಈ ಗೀತೆಗಳ ಲೇಖಕರು, ಹಿನ್ನಲೆಯ ಬಗ್ಗೆ ವಿವರಣೆಯನ್ನು ನೀಡಿದರು. ಪುಟ್ಟ ಮಕ್ಕಳು ಜೀವ ವೈವಿಧ್ಯ ಉದ್ಯಾನದಲ್ಲಿ ಕಂಡಿದ್ದ ಪ್ರಾಣಿ-ಪಕ್ಷಿಗಳ ಜೀವನ ಶೈಲಿಯನ್ನು ರೂಪಕವಾಗಿ ಪ್ರದರ್ಶಿಸಿದರು. ಭಾರತ ಕಂಡ ಧೀಮಂತ ನಾಯಕ ಸುಭಾಷ್ ಚಂದ್ರಬೋಸ್ ಅವರ ಬಗ್ಗೆ ಕನ್ನಡದಲ್ಲಿ, ಸಂಸ್ಕೃತದಲ್ಲಿ ಮಕ್ಕಳು ಮಾತನಾಡಿದರು. ಚುರುಕು ನಿರೂಪಣೆಗಳಿಂದ ಮಕ್ಕಳು ಮುಂದಿನ ಕಾರ್ಯಕ್ರಮಗಳನ್ನು ನಡೆಸಿದರು. ಪ್ರಹ್ಲಾದ್ ಅವರು ಈ ಕಾರ್ಯಕ್ರಮಗಳನ್ನು ನೋಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಖುಷಿಪಟ್ಟರು.

For more photos click here

ಮುಂದಿನ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಿತು. ಮಕ್ಕಳಿಗೆ ಭಾರತೀಯ ವಾಯುಪಡೆಯ ಪರಿಚಯ ಮಾಡಿಸುವುದು ಮತ್ತು ಯುದ್ಧಕ್ಕೆ ತಯಾರಾಗುವ ವಿಧಾನವನ್ನು ತಿಳಿಸುವುದಕ್ಕಾಗಿ ಒಂದು ದೃಶ್ಯಚಿತ್ರವನ್ನು ತೋರಿಸಲಾಯಿತು. ಪ್ರಹ್ಲಾದ ಅವರು ನಡುವೆ ದೃಶ್ಯಗಳಿಗೆ ವಿವರಣೆಯನ್ನು ಕೊಟ್ಟರು. ಅನೇಕ ಯುದ್ಧ ವಿಮಾನಗಳು ಅವುಗಳ ಸಾಮರ್ಥ್ಯ, ಶತ್ರುಗಳನ್ನು ದೂರದಿಂದಲೇ ಗುರುತಿಸಿ ಆಕ್ರಮಣ ಮಾಡುವ ವಿಧಾನಗಳನ್ನು ತೋರಿಸಿದರು. ಈ ಸಂದರ್ಭದಲ್ಲಿ ಪ್ರಹ್ಲಾದರ ಮುಖ್ಯ ಸಂದೇಶವೆಂದರೆ ಸೈನ್ಯಕ್ಕೆ ಮಕ್ಕಳನ್ನು ಸೇರಿಸುವುದು. ಎಲ್ಲರೂ ಸಾಫ್ಟ್‌ವೇರ್ ಕ್ಷೇತ್ರ, ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವ ಬದಲು ಭಾರತೀಯ ಸೈನ್ಯಕ್ಕೆ ಸೇರುವಂತೆ ಮಕ್ಕಳ ಮನಸ್ಸನ್ನು ಸಿದ್ಧಗೊಳಿಸುವುದು ಪೋಷಕರು ಮಾಡಬಹುದಾದ ಸೇವೆ ಎಂದರು.

ಯಾವುದೇ ಸಂದರ್ಭದಲ್ಲೂ ಧೈರ್ಯಗೆಡದೆ ಮುನ್ನುಗ್ಗುವ ಗುಣವನ್ನು ಕಲಿಸುವುದು ಸೈನ್ಯದಲ್ಲಿನ ಸೇವೆ, ಸಣ್ಣ ನೋವುಗಳು, ಗಾಯಗಳು ಗುರಿ ಸಾಧನೆಗೆ ತಡೆಯೇ ಅಲ್ಲ ಎಂಬ ತಮ್ಮ ಕಲಿಕೆಯನ್ನು ಮಕ್ಕಳೊಂದಿಗೆ ಹಂಚಿಕೊಂಡರು. ನಮ್ಮ ಶಾಲೆಯ ಸಂಪ್ರದಾಯದಂತೆ ಅತಿಥಿಗಳಿಗೆ ನಮ್ಮ ಚಟುವಟಿಕೆಗಳ ಬಗ್ಗೆ ವಿವರಿಸಿ ಸ್ಮರಣ ಸಂಚಿಕೆಗಳನ್ನು ನೀಡಿ ಬೀಳ್ಕೊಟ್ಟೆವು. ಸರಳವಾಗಿ ಸನ್ಮಾನಿಸಿದ್ದು ಪ್ರಹ್ಲಾದ್‌ಅವರಿಗೂ ಸಮ್ಮತವಾಯಿತು ಮತ್ತು ಸಂತೋಷವನ್ನು ತಂದಿತು.

Leave a Reply

Notice Board

pūrṇapramati is recruiting teachers

pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it