ಪ್ರಕೃತಿಯನ್ನೇ ಗುರುವಾಗಿಸಿ….ನಾವು ಆಚರಿಸಿದ ಗುರುಪೂರ್ಣಿಮೆ

ಪ್ರಕೃತಿಯನ್ನೇ ಗುರುವಾಗಿಸಿ….ನಾವು ಆಚರಿಸಿದ ಗುರುಪೂರ್ಣಿಮೆ

ದಿನಾಂಕ: 8ನೇ ಆಗಸ್ಟ್, 2013
ಸ್ಥಳ: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

ಆಗಸ್ಟ್ 8, 2012 ಪೂರ್ಣಪ್ರಮತಿಯ ಹಾದಿಯಲ್ಲಿ ಮರೆಯಲಾಗದ ಹೆಜ್ಜೆಯಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಗುರುಪೂರ್ಣಿಮೆಯಂದು ಆಚರಿಸಲು ಸಾಧ್ಯವಾಗದ ಉತ್ಸವವನ್ನು ಆಗಸ್ಟ್ 8 ರಂದು ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪುಟ್ಟ ವನಕ್ಕೆ ಪೂರ್ಣಪ್ರಮತಿಯ ಮಕ್ಕಳು ಪಯಣ ಬೆಳೆಸಿದ್ದರು. ‘ಜೀವೋ ಜೀವಸ್ಯ ಜೀವನಂ’ ಸೂತ್ರವನ್ನು ಮತ್ತಷ್ಟು ಮಗದಷ್ಟು ಮನದಟ್ಟು ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಪ್ರವೇಶಿಸಿದೆವು. ಅಲ್ಲಿಂದ ಮುಂದೆ ಬೇರೆಯದೇ ಪ್ರಪಂಚ ತೆರೆದುಕೊಂಡಿತು. ಕಾಂಕ್ರಿಟ್ ಕಾಡಿನಿಂದ ದೂರಾಗಿ ಹಸಿರು ಕಾಡನ್ನು ಅನುಭವಿಸುವ ಅವಕಾಶ ನಮ್ಮದಾಗಿತ್ತು. ಮುಂದಿನ ಒಂದೊಂದು ಹೆಜ್ಜೆಗಳನ್ನು ನೀವೆ ಅನುಭವಿಸಿ…

ಚಿತ್ರದಲ್ಲಿ ಕಂಡ ಅಕ್ಷರಗಳು
ನಮ್ಮ ಪ್ರಯಾಣಕ್ಕೆ ದೈವವೂ ಜೊತೆಯಾದಂತೆ ಬೆಂಗಳೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಭವನದಲ್ಲಿ ಶಾಲೆಯ ಶಿಕ್ಷಕರಿಗೆ ಪರಿಣಾಮಕಾರಿ ಬೋಧನೆಯ ಕಾರ್ಯಾಗಾರ ನಡೆದಿತ್ತು. ಹೆಸರಾಂತ ನಿವೃತ್ತ ಶಿಕ್ಷಕರಾದ ಸುರೇಶ್ ಕುಲಕರ್ಣಿ ಅವರು ಧಾರವಾಡದಿಂದ ಈ ಕಾರ್ಯಾಗರವನ್ನು ನಡೆಸಿಕೊಡಲು ಬಂದಿದ್ದರು. ಮಕ್ಕಳನ್ನು ನೋಡಿದ್ದೇ ತಡ ಕಲಿಸಲು ಪ್ರಾರಂಭಿಸಿದರು. ಚಿತ್ರಗಳಿಂದ ಅಕ್ಷರಗಳನ್ನು, ಅಕ್ಷರಗಳಿಂದ ಚಿತ್ರಗಳನ್ನು ರಚಿಸುತ್ತಾ ಪ್ರಕೃತಿಯ ಅನೇಕ ವಿಷಯಗಳ ಕುರಿತು ಗಮನ ಸೆಳೆದರು. ಮಕ್ಕಳಿಗೆ ಮರದ ಕೆಳಗೆ ಕುಳಿತು, ಎಲೆ, ಕಾಂಡ, ಬೇರು, ಬಣ್ಣಗಳ ಬಗ್ಗೆ ಜೊತೆ ಜೊತೆಗೆ ಅಕ್ಷರಗಳನ್ನು ಕಲಿತದ್ದು ಹೊಸ ಅನುಭವವಾಗಿತ್ತು. ಸುರೇಶ್ ಕುಲಕರ್ಣಿ ಅವರ ಎರಡು ಕೈಗಳಿಂದಲೂ ಚಿತ್ರಬಿಡಿಸುವ ಕಲೆಗಾರಿಕೆ, ಚುರುಕು ಮಾತುಗಳು ಅಂದಿನ ದಿನದ ಪಯಣಕ್ಕೆ ಒಳ್ಳೆಯ ಕಿಕ್ ಸ್ಟಾರ್ಟ್ ನೀಡಿತ್ತು. ನೀವು ಸವಿಯುವಂತೆ ಅದರ ಒಂದು ತುಣುಕು ಇಲ್ಲಿದೆ ನೋಡಿ:

ನಾವು ಉಪಯೋಗಿಸುವ ಮೊಬೈಲ್ ನಿಂದ ಒಂದು ಗುಬ್ಬಿ ಸತ್ತರೆ ಪ್ರಕೃತಿಯ ಸಮತೋಲನವನ್ನು ಕಾಪಾಡಲು ನಾವು ದಿನಕ್ಕೆ 120 ಹುಳುಗಳನ್ನು ತಿನ್ನಬೇಕಾಗುವುದು. ಏಕೆಂದರೆ ಒಂದು ಗುಬ್ಬಿ ದಿನಕ್ಕೆ 120 ಹುಳುಗಳನ್ನು ತಿನ್ನುತ್ತವೆ.

ಎಲ್ಲಪ್ಪರೆಡ್ಡಿ ಅವರಿಂದ ಮಾರ್ಗದರ್ಶನ
ಪ್ರಾರ್ಥನೆಯಿಂದ ಪ್ರಾರಂಭವಾದ ಔಪಚಾರಿಕ ಕಾರ್ಯಕ್ರಮವು ನಡೆದಿದೆ ಪೂಜಾರತಿ ವಿಶ್ವದೇಹಿಗೆ ಎಂಬ ಹಾಡಿನಿಂದ ಮತ್ತಷ್ಟು ಸಾರ್ಥಕವಾಯಿತು. ವಿಕ್ರಮಣ್ಣನಂತೆ ನಾವು ಹಾಡಬಲ್ಲೆವು ಎಂಬಂತೆ ಮಕ್ಕಳು ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ಹಾಡನ್ನು ಹಾಡಿದರು. ಡಾ.ಎಲ್ಲಪ್ಪ ರೆಡ್ಡಿ ಅವರು ಆ ವೇಳೆಗಾಗಲೇ ತಮ್ಮ ಜ್ಞಾನದ ಬುತ್ತಿಯನ್ನು ಬಿಚ್ಚಿ ಆಗಿತ್ತು. ಅವರ ಕಣ್ಣಿಗೆ ಒಂದು ಪ್ಲಾಸ್ಟಿಕ್ ಲೋಟ ಕಾಣಿಸಿತು. ಯಾರೋ ಪೆಪ್ಸಿ-ಕೊಕೊ ಕೋಲಾ ಕುಡಿದು ಹಾಕಿದ್ದ ಆ ಪ್ಲಾಸ್ಟಿಕ್ ಲೋಟವನ್ನು ಹಿಡಿದು ವಿವರಣೆ ಆರಂಭಿಸಿದರು. ಆ ಲೋಟದೊಳಗಿರುವ ಸಿಹಿಯನ್ನು ಸವಿಯಲು ಇರುವೆ, ಜೇನುನೊಣಗಳೇನಾದರೂ ಬಂದರೆ ಸಾವೇ ಖಚಿತ. ಜೇನುನ್ರೆಣಗಳಿಲ್ಲದೆ ಮಾನವನ ಸಂತತಿಯೇ ನಾಶವಾದಂತೆ. ಪ್ರಕೃತಿಯ ರಕ್ಷಣೆಗೆ ಜೇನುನೊಣಗಳ ಕೊಡುಗೆ ಸುಮಾರು 75% ಇದೆ. ಇದಾವುದರ ಪರಿವೆಯೇ ಇಲ್ಲದೆ ನಾವು ತೋರುವ ಬೇಜವಾಬ್ದಾರಿತನ ಪರೋಕ್ಷವಾಗಿ ನಮ್ಮ ನಾಶವನ್ನೇ ತೋರುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಮಕ್ಕಳು ಕ್ರಿಯಾಶೀಲರಾಗಿ ಈ ಸಂಭಾಷಣೆಯಲ್ಲಿ ಭಾಗವಹಿಸಿದರು.

ಬೋರೆ ಮರದ ಪರಿಚಯ
ರಾಮಾಯಣ ಕಾಲದಲ್ಲಿ ದಂಡಕಾರಣ್ಯವಾಗಿದ್ದ ಈ ಸ್ಥಳದಲ್ಲಿ ಬೆಳೆಯುವ ಬೋರೆ ಹಣ್ಣುಗಳ ಮರವನ್ನು ನೋಡಲು ಹೋದೆವು. ಶಬರಿ ಕಾಡಿನಲ್ಲಿ ಬೆಳೆಯುವ ರುಚಿಕರವಾದ ಮತ್ತು ಆರೋಗ್ಯಕರವಾದ ಹಣ್ಣುಗಳನ್ನು ಸೂಕ್ಷ್ಮವಾಗಿ ಗಮನಿಸಿ ರಾಮನಿಗಾಗಿ ಇಟ್ಟಿದ್ದಳು. ಈ ಬೋರೆ ಹಣ್ಣುಗಳಾದರೋ (ಎಲಚೆ ಹಣ್ಣು) 1 ಲಕ್ಷ ವಿವಿಧ ಪ್ರಾಣಿ-ಪಕ್ಷಿಗಳಿಗೆ ಆಹಾರ ಮತ್ತು ಔಷಧಿಯಾಗಿದೆ. ಸುಮಾರು 40 ಅಡಿ ಬೆಳೆಯುವ ಈ ಮರಗಳು 200 ವರ್ಷಗಳವರೆಗೆ ಬದುಕಬಲ್ಲವು. ರಾಮ್‌ನೇಸಿ ಎಂದು ಇದಕ್ಕೆ ವೈಜ್ಞಾನಿಕವಾಗಿ ಕರೆಯಲಾಗುವುದು. ಈ ಮರದ ಎಲೆಗಳ ಹಿಂಭಾಗವು ಸೂಕ್ಷ್ಮವಾದ ರೋಮಗಳಿಂದ ಕೂಡಿದ್ದು ಗಾಳಿಯಲ್ಲಿ ಬರುವ ಧೂಳಿನ ಕಣಗಳನ್ನು ಹಿಡಿದಿಟ್ಟುಕೊಂಡು ಪ್ರಕೃತಿಯನ್ನು ಶುದ್ಧವಾಗಿಸುವುದು. ಅಂತೆಯೇ ಹೃದಯವನ್ನೂ ಶುದ್ಧಗೊಳಿಸುವುದು ಇದರ ವೈಶಿಷ್ಟ್ಯ. ಇದರಲ್ಲಿ ಸುಮಾರು ೫೦ ಜಾತಿಯ ಬೋರೆ ಹಣ್ಣುಗಳ ಮರ ಕಾಣಲು ಸಿಗುತ್ತವೆ.

ಕರಂಡಾ  – ಕವಳೆ ಹಣ್ಣಿನ ಮರ
ಹುಳಿ ಮತ್ತು ಸಿಹಿ ರುಚಿಗಳನ್ನು ಹೊಂದಿರುವ ಈ ಹಣ್ಣನ್ನು ಉಪ್ಪಿನಕಾಯಿ ಮಾಡಲು ಹೆಚ್ಚಾಗಿ ಬಳಸುವರು. ಒಂದು ಮರದಲ್ಲೇ ಸಾವಿರಾರು ಹಣ್ಣುಗಳು ಬಿಡುತ್ತವೆ. ಇದು ಆರೋಗ್ಯಕ್ಕೆ ವಿಟಮಿನ್ ಎ, ಬಿ, ಸಿ, ಡಿ ಗಳನ್ನು ಯಥೇಚ್ಛವಾಗಿ ನೀಡುತ್ತದೆ.

ವಿಷ್ಣುಕ್ರಾಂತಿ ಬಳ್ಳಿ
ಬುದ್ಧಿಯನ್ನು ಚುರುಕುಮಾಡಲು ಮಾಚಿ ಪತ್ರ ಬಹಳ ಉಪಕಾರಿ. ಸತ್ಯನಾರಾಯಣ ವ್ರತದಲ್ಲಿ ಬಳಸುವ ಪುಷ್ಟಪಗಳ, ಪತ್ರಗಳ ಪರಿಚಯವನ್ನು ಮಾಡುವ ಕೆಲಸವನ್ನು ಪುರೋಹಿತರು ಮಾಡತ್ತಿಲ್ಲ. ಅವರಿಗೂ ಅವುಗಳ ಪರಿಚಯ ಇಲ್ಲದಿರುವುದು ಖೇದದ ಸಂಗತಿ. ಹೋಮದಲ್ಲಿ ಬಳಸುವ ಪತ್ರ, ಪುಷ್ಟಪಗಳ ಪರಿಚಯ ಮಾಡಿಸಿ ಇದರಿಂದ ಇಂತಹ ಚಿಕಿತ್ಸೆ ಸಿಗುವುದು ಎಂದು ಹೇಳುವುದು ಪುರೋಹಿತರ ಕರ್ತವ್ಯವೇ ಆಗಿದೆ. ಸ್ಕಿಜೋಫ್ರೇನಿಯ ಎಂಬ ಮನೋರೋಗಕ್ಕೆ ಇದೊಂದು ಉತ್ತಮವಾಗ ಚಿಕಿತ್ಸೆ. ಮನೆಯಲ್ಲಿ ವಿಷ್ಣುಕ್ರಾಂತಿ ಬಳ್ಳಿಯ ಪೀಠವನ್ನು ಮಾಡಿ ಕೂಡಿಸಿದರೆ ಉತ್ತಮ ಚಿಕಿತ್ಸೆಯಾಗುವುದು. ಹೃದಯದ ಅನೇಕ ಖಾಯಿಲೆಗಳಿಗೂ ಇದು ಔಷಧಿಯಾಗಿದೆ.

ಶಿಲಾ-ಜಲ-ಉದ್ಯಾನ ಯೋಜನೆ
ಸರ್ಕಾರದಿಂದ ಶಿಲೆ, ಜಲ, ಉದ್ಯಾನಗಳ ರಕ್ಷಣೆಗಾಗಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಪ್ರೊಫೆಸರ್ ರೇಣುಕಾಪ್ರಕಾದ್ ಅವರು ಅದರ ರೂವಾರಿಗಳಾಗಿದ್ದಾರೆ. ಜೀವನ, ಶಾಂತಿ ಮತ್ತು ಪ್ರೀತಿ ಎಲ್ಲಿದೆ ಎಂಬ ಮೂಲ ಹುಡುಕುತ್ತಾ ಅದರೊಂದಿಗೆ ನಮ್ಮ ನಿತ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಪ್ರಸಾದ್ ಎಂಬುವರು ಮಕ್ಕಳಿಗೆ ಪ್ರಕೃತಿ ಮತ್ತು ನಮ್ಮ ಚಟುವಟಿಕೆಗಳಿಗೆ ಇರುವ ಸಂಬಂಧವನ್ನು ವಿವರಿಸಿದರು. ಭೂಮಿಯ ಜನನ, ಪಂಚಭೂತಗಳು ಅದರೊಂದಿಗೆ ನಾವು ಕಲ್ಪಿಸುವ ಅಗ್ನಿ, ಗಣಪತಿ, ಭೂಮಿ ತಾಯಿ, ವರುಣ, ವಾಯು ದೇವರುಗಳೊಂದಿಗೆ ಸಂಬಂಧಗಳು ರೋಚಕವಾಗಿವೆ. ಇವುಗಳನ್ನು ಪ್ರೀತಿಸಿದಾಗ ಜೀವನ ಸಾರ್ಥಕ. ಶಾಂತಿ ತಾನಾಗಿಯೇ ಬರುತ್ತದೆ. ಮನೆಯ ಮುಂದಿರುವ ಮರ, ಬಳ್ಳಿಗಳನ್ನು ಮುಟ್ಟಿ, ಅಪ್ಪಿಕೊಳ್ಳಿ, ಮಾತನಾಡಿಸಿ ಎಂಬ ಕಿವಿಮಾತನ್ನು ಹೇಳಿದರು. ದಾಖಲಿಸಲಾದ ಅಂಕಿಅಂಶಗಳಿಂದಾಗಿ ಅಲ್ಲಿ ಸುಮಾರು 67 ವಿಧವಾದ ಪತಂಗಗಳಿರುವುದು ದೃಢವಾಗಿದೆ. ಪ್ರಕೃತಿಯಿಂದ ಬಂದದ್ದನ್ನು ನಾವು ಬಳಸಿ ಮುಂದಿನವರಿಗೆ ಉಳಿಸುವ ಕೆಲಸ ಮಾಡಬೇಕು. ಪ್ರಕೃತಿ ಕೊಟ್ಟಿರುವ ಅಕ್ಷಯ ಪಾತ್ರೆಯು ನಮಗೆ ಎಂದಿಗೂ ಇರಬೇಕು ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು.

ಶ್ರೀಗಂಧ
60-70 ಅಡಿ ಎತ್ತರ ಬೆಳೆಯುವ ಶ್ರೀಗಂಧದ ಮರ ಕಾಂಡದ ಮಧ್ಯಭಾಗದಲ್ಲಿ ಮಾತ್ರ ಸುಗಂಧವನ್ನು ಹೊಂದಿರುತ್ತದೆ. ಮತ್ತೆಲ್ಲೂ ಪರಿಮಳವಿರುವುದಿಲ್ಲ. ಇದರ ಆಯಸ್ಸು ಸುಮಾರು 100 ವರ್ಷ. ಕೋಗಿಲೆ ಇದರಿಂದ ಬರುವ ಹಣ್ಣುಗಳನ್ನು ತಿಂದು ಬೀಜಗಳನ್ನು ಬೀಳಿಸುತ್ತವೆ. ಅದು ಸಂಸ್ಕರಿಸಿದ ಬೀಜಗಳಂತೆ ಕಾರ್ಯಮಾಡಿ ಶ್ರೀಗಂಧದ ಸಂತತಿಯನ್ನು ಬೆಳೆಸುತ್ತವೆ. ಈ ಹಣ್ಣುಗಳಿಂದ ಚಟ್ನಿ-ರೊಟ್ಟಿಗಳನ್ನು ಮಾಡುತ್ತಾರೆ.

ಅಲ್ಲಿಂದ ಮುಂದುವರೆದು ನಾವೆಲ್ಲ ಒಂದು ಪ್ರಶಾಂತ ಸ್ಥಳವನ್ನು ಆರಿಸಿ ಮಧ್ಯಾಹ್ನದ ಉಪಾಹಾರ ಮುಗಿಸಿದೆವು. ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿಸರ್ಗ ತಜ್ಞರಾದ ಹರೀಶ್ ಭಟ್ ಅವರು ನಮ್ಮೊಂದಿಗೆ ಸಂಚರಿಸುತ್ತಾ ಪ್ರಕೃತಿಯ ವೈಚಿತ್ರ್ಯಗಳನ್ನು ವಿವರಿಸುತ್ತಿದ್ದರು. ಮಕ್ಕಳೆಲ್ಲ ಅವರ ಮಾತುಗಳನ್ನು ಉತ್ಸಾಹದಿಂದ ಕೇಳಿ ಪ್ರತಿಕ್ರಿಯಿಸುತ್ತಿದ್ದರು. ಇಂದಿನ ಮೆನುವಿನಲ್ಲಿ ಮೊದಲ ಹೆಸರು ಕಪ್ಪೆಯದಾಗಿತ್ತು…

ಕಪ್ಪೆ
130 ಮಿಲಿಯನ್ ವರ್ಷಗಳ ಮೊದಲು ಕಪ್ಪೆಯ ಸಂತತಿ ಹುಟ್ಟುಕೊಂಡಿತು. ಕಪ್ಪೆಯ ಚರ್ಮ ನಯವಾಗಿರುತ್ತದೆ. ನೀರಿನಲ್ಲಿ ಹೆಚ್ಚು ಸಮಯವಿರುವುದರಿಂದ. ಭೂಮಿಯ ಒಳಗೆ ಸುರಂಗವನ್ನು ಮಾಡಿ ಬದುಕಬಲ್ಲದು. ಚರ್ಮವು ನಯವಾಗಿರುವುದರಿಂದ ಚೆನ್ನಾಗಿ ನುಸುಳಬಹುದೆ. ಇದರ ವಿಶಿಷ್ಟತೆ ಎಂದರೆ ಚರ್ಮ ಮತ್ತು ಮೂಗು ಎರಡೂ ಉಸಿರಾಡುವ ಅಂಗಗಳಾಗಿವೆ. ಗಂಡು ಕಪ್ಪೆ ಮಾತ್ರ ಕೂಗಬಲ್ಲದು. ಸುಮಾರು 1/2 ಫರ್ಲಾಂಗ್ ವರೆಗೆ ಕೇಳುವಂತೆ ಕೂಗಬಲ್ಲದು. ಇವು ಒಂದು ಗಂಟೆಗೆ 80-90 ಹುಳುಗಳನ್ನು ತಿನ್ನುತ್ತವೆ. ಐದು ದಿನಗಳ ಮೊದಲು ಭೂಕಂಪದ ಸೂಚನೆ ಇವುಗಳಿಗೆ ಸಿಗುತ್ತದೆ. ಭೂಮಿಯಿಂದ ಹೊರಹೊಮ್ಮುವ ರಡಾನ್ ಗ್ಯಾಸ್ ಇವುಗಳ ಚರ್ಮವನ್ನು ಸೋಕಿ ನವೆಯನ್ನು ಉಂಟುಮಾಡುತ್ತದೆ. ಇದರಿಂದ ಎಲ್ಲ ಕಪ್ಪೆಗಳು ಹೊರಬರುತ್ತವೆ. ಟೋಡ್ ಎಂದು ಕರೆಯಲ್ಪಡುವ ಮತ್ತೊಂದು ಜಾತಿಯ ಕಪ್ಪೆಗಳಿಗೆ ಕಿವಿಯ ಹಿಂದೆ ವಿಷದ ಗ್ರಂಥಿ ಇರುತ್ತದೆ. ನಾಲಿಗೆಯನ್ನು ಹೊರಚಾಚಿ ತನ್ನ ಅಂಟುಗುಣದಿಂದ ಹುಳುಗಳನ್ನು ಹಿಡಿದು ತಿನ್ನುತ್ತವೆ.

ಇರುವೆ
80 ಮಿಲಿಯನ್ ವರ್ಷಗಳ ಹಿಂದೆ ಇರುವೆಗಳ ಜನನ ಆಗಿದೆ. ಇರುವೆಗಳ ಘ್ರಾಣಶಕ್ತಿಯು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಸ್ಕೌಟ್ ಇರುವೆ ಎಂದು ಕರೆಯಲ್ಪಡುವವು ಆಹಾರವನ್ನು ಹುಡುಗಿ ಬರಬೇಕು. ಅದು ಮನೆಗೆ ಮರಳುವಾಗ ಒಂದು ರಾಸಾಯನಿಕವನ್ನು ದಾರಿ ಉದ್ದಕ್ಕೂ ಚೆಲ್ಲುತ್ತಾ ಬರುತ್ತದೆ, ಮತ್ತೆ ದಾರಿಯನ್ನು ಗುರುತಿಸಿವ ಸಲುವಾಗಿ. ನಂತರ ಎಲ್ಲ ಇರುವೆಗಳು ಸಾಲಾಗಿ ಬಂದು ಆಹಾರ ತಿನ್ನುತ್ತವೆ. ಮರಳಿ ಹೋಗುವಾಗ ಸೋಲ್ಜರ್ ಇರುವೆ ಚೆಲ್ಲಿದ್ದ ರಾಸಾಯನಿಕವನ್ನು ಅಳಿಸುತ್ತಾ ಸಾಗುತ್ತದೆ, ಶತ್ರುಗಳಿಗೆ ದಾರಿ ತಿಳಿಯಬಾರದೆಂದು.

ಜೇಡ
ಜೇಡದಲ್ಲಿ ಹೆಣ್ಣು ಮಾತ್ರ ಬಲೆ ಹೆಣೆಯುವುದು. ಸ್ಪಿನರೆಟ್ ಗ್ರಂಥಿಯಿಂದ ಅಂಟುವ ಮತ್ತು ಅಂಟದ ಎರಡು ರೀತಿಯ ದ್ರವವನ್ನು ಉಂಟುಮಾಡುತ್ತದೆ. ಅದರಿಂದ ಬಲೆಯನ್ನು ಹೆಣೆಯುತ್ತದೆ. ತಾನು ಅಂಟದ ದಾರಿಯಿಂದ ಸಾಗಿ, ಹುಳು ಅಥವಾ ಆಹಾರ ಅಂಟುವ ದ್ರವದಲ್ಲಿ ಸಾಗಿ ಬರುವಂತೆ ಜಾಣ್ಮೆ ವಹಿಸುತ್ತದೆ. ಸೋಶಿಯಲ್ ಜೇಡ (ಸಾಮಾಜಿಕ ಜೇಡ) ಎಂದು ಕರೆಯಲ್ಪಡುವ ಜೇಡಗಳ ಮನೆಯು ಒಂದರ ಪಕ್ಕಕ್ಕೆ ಒಂದು ಇರುವಂತೆ ಕಟ್ಟುತ್ತವೆ. ಆದರೆ ಒಂದರ ಆಹಾರಕ್ಕೆ ಮತ್ತೊಂದು ಕೈ ಹಾಕುವುದಿಲ್ಲ. ಜಪಾನ್‌ನಲ್ಲಿ ಜೇಡದ ಬಲೆ ಕಟ್ಟುವ ಗುಣವನ್ನು ಬಳಸಿ ಬುಲೆಟ್ ಪ್ರೂಫ್ ವಸ್ತ್ರವನ್ನು ತಯಾರಿಸಿದ್ದಾರೆ. ಕರವಸ್ತ್ರಕ್ಕಿಂತಲೂ ಹಗುರವಾದ ಗುಂಡು ನಿರೋಧಕ ವಸ್ತ್ರವನ್ನು ತಯಾರಿಸಿದ್ದಾರೆ. ಜೇಡಗಳ ವಂಶವಾಹಿಗಳನ್ನು ಮೇಕೆಯ ಕೆಚ್ಚಲಿಗೆ ಕಸಿಮಾಡಲಾಯಿತು. ಅದರಿಂದ ಬಂದ ಹಾಲಿನಿಂದ ಇದನ್ನು ತಯಾರಿಸಲಾಗಿದೆ.

ಪಕ್ಷಿಗಳು
ಮುಂದೆ ಹರಟೆ ಮಲ್ಲ (ಜಂಗಲ್ ಬಾಬ್ಲರ್, ಸಾಥ್ ಬಾಯ್, 7 ಸಿಸ್ಟರ್) ಎಂದು ಕರೆಯಲ್ಪಡುವ ಹಕ್ಕಿಯ ಪರಿಯಚಯ, ಕೋಗಿಲೆ ಪರಿಚಯ ನೀಡಿದರು. ಗಂಡು ಕೋಗಿಲೆ ಮಾತ್ರ ಕೂಗುವುದು, ಆದರೆ ಗೂಡು ಕಟ್ಟಿ ಮರಿ ಮಾಡುವ ಸ್ವಭಾವವೇ ಕೋಗಿಲೆಗೆ ಇಲ್ಲ. ಕಾಗೆಗಳಿಂದ ಉಚಿತವಾಗಿ ಎಲ್ಲ ರೀತಿಯ ಸೇವೆಗಳನ್ನು ಪಡೆದುಕೊಳ್ಳುತ್ತವೆ. ಇಂದಿಗೂ ಕಾಗೆಯನ್ನು ಕೋಗಿಲೆಯ ಚಿಕ್ಕಮ್ಮ ಎಂದು ಕರೆಯುವರು. ನವಿಲಿನ ಬಗ್ಗೆ ತಿಳಿಸುತ್ತಾ, ಗಂಡು ನವಿಲು ಮಾತ್ರ ಸುಂದರ ಮತ್ತು ಗರಿಗಳನ್ನು ಹೊಂದಿರುತ್ತವೆ ಎಂದು ತಿಳಿಸಿದರು. ನವಿಲಿನ ಮುಖ್ಯ ಆಹಾರ ಹಾವು, ಹುಳಗಳು. ಒಮ್ಮೆಗೆ ಸುಮಾರು 26 ಮೊಟ್ಟೆಗಳನ್ನು ಇಡುತ್ತದೆ. 30-40 ದಿನಗಳ ನಂತರ ಕಪ್ಪು ಮರಿಗಳು ಹೊರಬರುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಕಾವುಕೊಡುತ್ತವೆ. ಗಂಡು ನವಿಲು  ಛತ್ರಿಯಂತೆ ತನ್ನ ಗರಿಗಳಿಂದ ಮರಿಗಳಿಗೆ ರಕ್ಷಣೆ ನೀಡುತ್ತದೆ.

ಹಾವು
ಹಾವುಗಳಿಗೆ ಸ್ಪರ್ಶ ಮಾತ್ರ ಗೊತ್ತಾಗುವುದು, ಕಿವಿ ಇಲ್ಲ. ನಾಗರ ಹಾವು, ಕಟ್ಟಾ ಹಾವು, ಮಂಡಲದ ಹಾವು, ಸಮುದ್ರ ಹಾವು ಬಿಟ್ಟರೆ ಉಳಿದ ಯಾವುದೂ ವಿಷಪೂರಿತವಲ್ಲ. ಹಾವಿನ ವಿಷವು ತಿಳಿಹಳದಿ ಬಣ್ಣದ್ದಾಗಿದ್ದು ಹೆಚ್ಚಿನ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾವಿಗೆ ದವಡೆಯಲ್ಲಿ ವಿಷವಿರುತ್ತದೆ. ಕಾಳಿಂಗ ಸರ್ಪವು 20 ಅಡಿ ಉದ್ದವಿದ್ದು  ಅಡಿಗಳವರೆಗೆ ಹೆಡೆಯನ್ನು ಎತ್ತಬಲ್ಲದ್ದಾಗಿದೆ. ಇವುಗಳ ಆಹಾರ ಹಾವು ಮಾತ್ರ. ಇವು ಒಮ್ಮೆಗೆ 60 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯಾಗಿರುವಾಗಲೆ ಗಂಡುಮರಿ ಹೆಣ್ಣುಮರಿಗಳನ್ನು ಗುರುತಿಸಿ ಕಾವು ಕೊಡುತ್ತವೆ. ಗಂಡು ರಕ್ಷಣೆಗಾಗಿ ನಿಂತರೆ ಕಾವು ಕೊಡುವ ಕೆಲಸ ಹೆಣ್ಣು ಸರ್ಪದ್ದು. 90 ದಿನಗಳವರೆಗೆ ಉಪವಾಸವಿದ್ದು ರಕ್ಷಣೆ ನೀಡುತ್ತವೆ. ಮರಿ ಹೊರಬರುವ ದಿನ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ತಮ್ಮ ಮರಿಗಳನ್ನು ತಾವೇ ಆಹಾರವಾಗಿಸುವುದು ಬೇಡ ಎಂಬ ದೃಷ್ಟಿಯಿಂದ. ಅಷ್ಟು ಮರಿಗಳಲ್ಲಿ 3-4 ಮಾತ್ರ ಉಳಿಯುತ್ತವೆ. ಆದರೆ ಹಾವು ಸ್ವತಃ ಗೂಡು ಕಟ್ಟುವುದಿಲ್ಲ. ಗೆದ್ದಲು ಹುಳು ಕಟ್ಟುವ ಗೂಡನ್ನು ತನ್ನ ವಾಸಕ್ಕೆ ಬಳಸುತ್ತವೆ. ಗೆದ್ದಲು ಹುಳಗಳು ತನ್ನ ದೇಹದಿಂದ ಹೊರಬರುವ ಅಂಟಿನಂತಹ ದ್ರವದಿಂದ ಮಣ್ಣನ್ನು ಸೇರಿಸಿ ಭದ್ರವಾದ ಗೂಡನ್ನು ಕಟ್ಟುತ್ತದೆ. 10 ಅಡಿ ಎತ್ತರದ ಗೂಡನ್ನು ಕಟ್ಟುತ್ತವೆ. ಮೇಲೆ ಎಷ್ಟು ಎತ್ತರವೋ ಕೆಳಗೆ ಅಷ್ಟೆ ಆಳವಿರುತ್ತದೆ. ಮಳೆ ಬಂದಾಗ ದ್ವಾರವನ್ನು ಮುಚ್ಚುತ್ತಾ, ಬೇಸಿಗೆಯಲ್ಲಿ ತೆಗೆದು ಕಾಲಕ್ಕೆ ತಕ್ಕಂತೆ ಅನುಕೂಲವನ್ನು ಮಾಡಿಕೊಳ್ಳುತ್ತವೆ. ಹಾವುಗಳಿಗೆ ತಂಪಾದ ಸ್ಥಳ ಬೇಕಾದ್ದರಿಂದ ಗೆದ್ದಲು ಕಟ್ಟಿದ ಗೂಡಿನೊಳಗೆ ಬರುತ್ತವೆ. ಇಲಿಗಳು ಗೆದ್ದಲು ಹುಳುಗಳಿಗೆ ಶತ್ರು, ಅಂತೆಯೆ ಹಾವು ಇಲಿಗಳಿಗೆ ಶತ್ರು. ಹಾವುಗಳಿಗೆ ಗೆದ್ದಲು ಹುಳುಗಳು ಮನೆ ಮಾಡಿಕೊಟ್ಟರೆ, ಹಾವುಗಳು ಇಲಿಗಳಿಂದ ಗೆದ್ದಲ್ಲನ್ನು ರಕ್ಷಿಸಿ ಮನೆಗೆ ಬಾಡಿಗೆ ಸಲ್ಲಿಸುತ್ತವೆ.

ಚೇಳು
ಚೇಳಿಗೆ ವಿಷವಿರುವುದು ಬಾಲದಲ್ಲಿ, ಬೆನ್ನ ಮೇಲೆ ಕಾಲಿಟ್ಟರೆ ಬಾಲದಿಂದ ಹೊಡೆಯುತ್ತದೆ. ಯಾವಾಗಲೂ Aggressive. 100-200 ಮರಿಗಳನ್ನು ಬೆನ್ನಮೇಲೆ ಕೂರಿಸಿಕೊಂಡು ಹೋಗುತ್ತದೆ. ಬಿಸಿಲು ಆಗುವುದಿಲ್ಲ. ನೆರಳಿನಲ್ಲಿ ಇರಲು ಬಯಸುತ್ತದೆ.

ಕ್ರಿಕೆಟ್ ಹುಳು
ರಾತ್ರಿಯಲ್ಲಿ ಕಿರ್ ಕಿರ್ ಎಂದು ಶಬ್ದ ಮಾಡುವ ಈ ಕ್ರಿಮಿಗೆ ಕಿವಿ ಇರುವುದು ಕಾಲಿನಲ್ಲಿ. ಬಾಲದ ತುದಿಯಲ್ಲಿ ಸಣ್ಣ ಮುಳ್ಳು ಇರುತ್ತದೆ. ಅದರ ಕಾಲು ಮತ್ತು ಕೆಳಹೊಟ್ಟೆಯ ಉಜ್ಜುವಿಕೆಯಿಂದ ಈ ಶಬ್ದ ಉಂಟಾಗುತ್ತದೆ. ಹಗಲಾದ ಕೂಡಲೆ ಕಣ್ಣು ಕಾಣುವುದಿಲ್ಲ.

ಹರೀಶ್ ಭಟ್ ಅವರ ಪ್ರಕೃತಿಯ ಪಾಠದ ನಂತರ ಮಕ್ಕಳಿಗೆ ಹಸಿವಿನ ಬಗ್ಗೆ ಗಮನ ಹರಿಯಿತು. ಸುಮಾರು 01.00 ಗಂಟೆ ಹೊತ್ತಿಗೆ ಭೋಜನವನ್ನು ಮುಗಿಸಿ ಮನರಂಜನೆ ಎಂಬಂತೆ ಮಕ್ಕಳು ಅಭ್ಯಾಸ ಮಾಡಿದ್ದ ನೃತ್ಯ ರೂಪಕ, ನಾಟಕಗಳನ್ನು ಸವಿದೆವು. ನಾಗೇಶ್ ಹೆಗಡೆ, ಪ್ರಮೋದ್ ಮತ್ತು ಶ್ರೀನಿ ಶ್ರೀನಿವಾಸ್ ಅವರ ಮಾತುಗಳನ್ನು ಕೇಳಲು 3 ತಂಡಗಳಾಗಿ ಬೇರೆ ಬೇರೆ ಮರಗಳ ಕೆಳಗೆ ಕುಳಿತೆವು. ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿರುವ ಈ ವ್ಯಕ್ತಿಗಳು ಮಕ್ಕಳೊಂದಿಗೆ ಸರಳವಾಗಿ ಬೆರೆತು ಮರದ ಕೆಳಗೆ ಪಾಠ ಹೇಳಿದ ರೀತಿಯೇ ಚೆನ್ನ. ಮಕ್ಕಳಿಗೆ ತಂಪಾದ ಗಾಳಿ, ಹಕ್ಕಿಗಳ ಕಲರವ, ತಲೆಗೆ ಪೌಷ್ಟಿಕ ಆಹಾರ ಸಮಯದ ಮಿತಿಯನ್ನು ಮರೆಯುವಂತೆ ಮಾಡಿತ್ತು. ಇವರ ಮಾತಿನ ಪ್ರಮುಖಾಂಶಗಳು ಹೀಗಿವೆ:

  • ಬೆಂಗಳೂರು ವಿಶ್ವವಿದ್ಯಾಲಯದ ಬಳಿ ಇರುವ Bio-diversity park ನಲ್ಲಿ ಸರಳವಾದ check dam ಗಳನ್ನು ನಿರ್ಮಿಸಲಾಗಿದೆ. ವಿದೇಶದಿಂದ ತರಲಾಗಿರುವ ಅಕೇಶಿಯಾ ಎಂಬ ಮರಗಳನ್ನು ಸುತ್ತಲೂ ಬೆಳೆಸಲಾಗಿದೆ. ನೀರಿನ ಅಭಾವವಾದ ಕಾರಣದಿಂದ ಈ check dam ಗಳನ್ನು ನಿರ್ಮಿಸಲಾಗಿದೆ.
  • 100-120 ಅಡಿ ದೂರದಲ್ಲಿ Sports Authority of India ಇದೆ. 100 ಅಡಿ ಹಿಂದೆ ಹೋದರೆ ಅತ್ಯಂತ ಕೊಳಕಾದ ವೃಷಭಾವತಿ ನದಿ ಹರಿಯುತ್ತಿದೆ. ಇಲ್ಲಿ ಆದರ್ಶಪ್ರಾಯವಾದ check dam ಗಳು ಇವೆ, ಸ್ವಲ್ಪ ದೂರದಲ್ಲಿ ಗೋಪಾಲನ್ ಮಾಲ್ ಎಂಬ ಗ್ರಾಹಕರ ಆಕರ್ಷಕ ಸ್ಥಳವಿದೆ. ಇಷ್ಟರಲ್ಲೇ ಎಷ್ಟು ವೈವಿಧ್ಯ. ನೀರನ್ನು ಹೆಚ್ಚಾಗಿ ದುರುಪಯೋಗವಾಗುತ್ತಿರುವುದನ್ನು ಇಲ್ಲೆ ನೋಡಬಹುದು.
  • ಓಡುವ ನೀರನ್ನು ನಿಲ್ಲಿಸಬೇಕು, ನಿಂತ ನೀರನ್ನು ಇಂಗಿಸಬೇಕು. ಆ ಕ್ರಿಯೆಯನ್ನು ಈ  check damಗಳ ಮೂಲಕ ಮಾಡಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಬಾವಿಯಲ್ಲಿ ನೀರು ಬಂದಿರುವುದು ಕಾಣುತ್ತದೆ.
  • ಮೊದಲು ವೈವಿಧ್ಯತೆ ಎಂದರೇನು ಎಂದು ತಿಳಿಯಬೇಕು. ಅಂಟಾರ್ಕ್‌ಟಿಕ್‌ಗೆ ಹೋದರೆ 2-3 ವಿವಿಧ ಪ್ರಾಣಿಗಳು ಸಿಗಬಹುದು. ರಾಜಸ್ಥಾನದ ಮರುಭೂಮಿಗೆ ಹೋದರೆ 16-17 ವಿವಿಧತೆಗಳು ಸಿಗಬಹುದು. ಅಲಾಸ್ಕಕ್ಕೆ ಹೋದರೆ 18-20 ವಿವಿಧತೆಗಳು ಸಿಗಬಹುದು. ಯುರೋಪ್ ನಲ್ಲಿದ್ದರೆ 35-40 ವಿವಿಧತೆಗಳು ಸಿಗಬಹುದು. ಇಲ್ಲಿ ಬಂದು ಪಟ್ಟಿಮಾಡಲು ಕುಳಿತರೆ ಸುಮ್ಮನೆ ಕೈ ಇಟ್ಟರೆ ವಿವಿಧ ಪ್ರಾಣಿ, ಕೀಟಗಳು, ಮರಗಳು, ಗಿಡಗಳು 200 ರ ಪಟ್ಟಿಯನ್ನು ಸುಲಭವಾಗಿ ತಯಾರಿಸಬಹುದಾಗಿದೆ. ಮನುಷ್ಯ ತನಗೆ ಅಗತ್ಯವಿರುವ ಮರಗಳ ಜಾತಿ, ಪ್ರಾಣಿಗಳ ಜಾತಿಯನ್ನು ಬೆಳೆಸಿದ. ವಿವಿಧತೆಯನ್ನು ನಾಶಮಾಡಿ ಏಕತೆಯನ್ನು ಬೆಳೆಸಿದ.
  • ಇಲ್ಲಿ ಎಲ್ಲ ಸಸ್ಯಗಳು ತಾನಾಗಿಯೇ ಬೆಳೆದಿವೆ. ಹಸುಗಳು, ಕುರಿಗಳು, ಕಳ್ಳರು, ಬೆಂಕಿಯಿಂದ ರಕ್ಷಿಸಿದರೆ ಬಹಳಷ್ಟು ವಿವಿಧತೆಯನ್ನು ಕಾಣಬಹುದಾಗಿದೆ. ಈ ವಿವಿಧತೆ ಹಿಮಾಲಯದಲ್ಲಾಗಲಿ, ರಾಜಸ್ಥಾನದಲ್ಲಾಗಲಿ ಕಾಣಲು ಸಾಧ್ಯವಿಲ್ಲ.

ನಾಗೇಶ್ ಹೆಗಡೆ ಅವರು ಹೇಳಿದ ಒಂದು ಪುಟ್ಟ ಕತೆ:

ನದಿ ಪಕ್ಕ ಒಂದು ಕೆಂಪು ಹೂವು ಇತ್ತು. ಸೂರ್ಯನಿಗೂ ಆ ಕೆಂಪು ಹೂವಿಗೂ ಒಳ್ಳೆಯ ಗೆಳೆತನ. ಸೂರ್ಯ ಬೆಳಗ್ಗೆ ಈ ಹೂವನ್ನು ನೋಡಲು ಬರುತ್ತಾನೆ. ಹೂವು ಬೇಗನೆ ಎದ್ದು ಅವನಿಗಾಗಿ ಕಾಯುತ್ತದೆ. ಸೂರ್ಯ ಬಂದವನೆ ನಾನು ಜಪಾನ್, ಇಂಡೋನೇಷಿಯ ನೋಡಿ ಬಂದೆ ಎನ್ನುತ್ತಿದ್ದ. ಹೂವು ಯಾವ ಯಾವ ದುಂಬಿ ಬಂತು ಎಂತೆಲ್ಲ ಕತೆ ಹೇಳುತ್ತಿತ್ತು. ಒಂದು ದಿನ ಸೂರ್ಯ ಬರುವ ವೇಳೆಗೆ ಒಂದು ಹುಳ ಬಂದು ಕಾಂಡದ ಜಾಗದಲ್ಲಿ ಆ ಹೂವನ್ನು ಕತ್ತರಿಸಿಬಿಟ್ಟಿತು. ಗಾಳಿ ಓಡಿ ಹೋಗಿ ಸೂರ್ಯನಿಗೆ ಹೇಳಿತು. ಸೂರ್ಯ ಬೇಜಾರಿಂದ ಮೋಡದ ಒಳಗೆ ಕೂತುಬಿಟ್ಟ. ಗಾಳಿಗೂ ಬೇಜಾರಿಂದ ಬೀಸದೆ ಕೂತು ಬಿಟ್ಟಿತು. ಗಾಳಿಗೂ – ಕೋಳಿಗೂ ಒಳ್ಳೆಯ ಗೆಳೆತನ. ಗಾಳಿ ಬೀಸಲಿಲ್ಲ, ಕೋಳಿ ಕೂಗಲಿಲ್ಲ. ಪಕ್ಕದಲ್ಲಿದ್ದ ಕೊಕ್ಕರೆ ಕೇಳಿತು. ಎಲ್ಲರೂ ಬೇಜಾರಾಗಿ ಕುಳಿತಿದ್ದಾರೆ. ನೀರಿನಲ್ಲಿದ್ದ ಮೀನು, ಕಪ್ಪೆ ಹೀಗೆ ಸಾಲಾಗಿ ಎಲ್ಲರೂ ಕತೆ ಹೇಳಿಕೊಂಡು ಬೇಜಾರಾಗಿ ಕುಳಿತವು. ಕಪ್ಪೆ ನಗಲು ಶುರುಮಾಡಿತು. ಹೂವಿಗೆ ಹುಳು ಕಚ್ಚಿದ್ದರೆ ಆ ಹುಳುವನ್ನು ತೆಗೆದರಾಯ್ತು ಎಂದಿತು. ಕೋಳಿ ಕೂಡಲೆ ಹೋಗಿ ಆ ಹುಳುವನ್ನು ತೆಗೆದುಹಾಕಿತು. ಹೂವು ಮೆಲ್ಲನೆ ಎದ್ದು ನಿಂತಿತು. ಹೂವಿಂದ ಕೋಳಿ, ಕೋಳಿಯಿಂದ ಕೊಕ್ಕರೆ, ಕೊಕ್ಕರೆಯಿಂದ ಮೀನು, ಮೀನಿನಿಂದ ಕಪ್ಪೆ,ಅ ಕಪ್ಪೆಯಿಂದ ಗಾಳಿ, ಗಾಳಿಯಿಂದ ಸೂರ್ಯ ಹೀಗೆ ಎಲ್ಲರೂ ಸಂತೋಷಪಟ್ಟರು. ಇಲ್ಲಿ ಎಷ್ಟು ಗೆಳೆತನ ವೈವಿಧ್ಯತೆ ಇದೆ ಗಮನಿಸಿದಿರಾ?!

  • ಬೆಳಗಿನ ಜಾವ ಇಲ್ಲಿಗೆ ಬಂದರೆ  60-70 ವಿವಿಧ ಪಕ್ಷಿಗಳ ಕೂಗನ್ನು ಕೇಳಬಹುದು, ಪಕ್ಷಿಗಳನ್ನು ಕಾಣಬಹುದು. ಅದಕ್ಕೆ ಇದು ಜೀವ-ವೈವಿಧ್ಯ ಉದ್ಯಾನ. ನಾವು ಅವುಗಳಿಗೆ ತೊಂದರೆ ನೀಡದಿದ್ದರೆ ಮತ್ತು ತೊಂದರೆ ಕೊಡುವ ಅಂಶಗಳನ್ನು ದೂರಮಾಡಿದರೆ ಈ ವಿವಿಧತೆಯನ್ನು ಉಳಿಸಿಕೊಳ್ಳಬಹುದು.

ಜೀವ-ವೈವಿಧ್ಯ ಉದ್ಯಾನವನ್ನು ನೋಡಿ ಮತ್ತೆ ಬಂದ ಸ್ಥಳಕ್ಕೆ ಮರಳಲು ಮಕ್ಕಳು ಮನಸ್ಸೇ ಮಾಡಲಿಲ್ಲ. ಅಲ್ಲೇ ಇರಲು ಬಯಸಿದರು. ಬಂದಗದ್ದೆ ರಾಧಾಕೃಷ್ಣ ಅವರಿಂದ ಹಸೆಕಲೆ ಅಥವಾ ಜನಪದ ಚಿತ್ರ ಎಂದು ಕರೆಯಲ್ಪಡುವ ಸರಳ ಚಿತ್ರಗಳನ್ನು ಕಲಿಯುವ ಆಸೆ ತೋರಿಸಿ ಕರೆದು ತರಲಾಯಿತು. ಮುಂದೊಂದು ದಿನ ಮತ್ತೆ ಭೇಟಿ ನೀಡುವ ಭರವಸೆಯೊಂದಿಗೆ ಒಂದೊಂದು ಬಾಳೆಹಣ್ಣನ್ನು ತಿಂದು ಮಂಗಗಳಂತೆ ಮೋರೆ ಮಾಡಿಕೊಂಡು 03.30 ಕ್ಕೆ ಅಲ್ಲಿಂದ ಹೊರಟೆವು.

For photos:  Click here

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.