A trip to Nandihills – Report

ನಂದಿಯ ಬೆನ್ನೇರಿ ನಮ್ಮ ಪ್ರವಾಸ

ದಿನಾಂಕ: 25.07.2014

ಪ್ರತಿ ವರ್ಷದಂತೆ ಈ ವರ್ಷವು ಶಾಲೆಯು ಮಕ್ಕಳಿಗೆ ಪ್ರವಾಸವನ್ನು ಆಯೋಜಿಸಲಾಯಿತು. ಗಿಜಿಗುಡುವ ನಗರದ ವಾತಾವರಣದಿಂದ ಸ್ವಲ್ಪ ಹೊತ್ತು ದೂರವಿದ್ದು ಪ್ರಕೃತಿಯ ಮಡಿಲಲ್ಲಿ ಮಕ್ಕಳನ್ನು ತೂಗಿಸುವ ಉದ್ದೇಶ ನಮ್ಮದು. ಕೇವಲ ಮನರಂಜನೆಯೇ ಪ್ರವಾಸದ ಉದ್ದೇಶವಲ್ಲ. ಮನರಂಜನೆಯ ಮೂಲಕ ಉತ್ತಮ ಶಿಕ್ಷಣವನ್ನು ನೀಡುವ ಹಂಬಲ, ಜೊತೆಗೆ ಸಾಹಸ ಪ್ರವೃತ್ತಿಯೂ ಮಕ್ಕಳಲ್ಲಿ ಬೆಳೆಸಬೇಕು. ಬದುಕಿನಲ್ಲಿ ಉತ್ಸಾಹವು ಎಂದೂ ಬತ್ತಬಾರದು. ಧೈರ್ಯವೂ ಅವರಲ್ಲಿ ಮೂಡಬೇಕು ಎಂಬ ಅನೇಕ ಉದ್ದೇಶದಿಂದ ಪ್ರವಾಸಕ್ಕೆ ಸ್ಥಳವೊಂದನ್ನು ಆಯ್ಕೆ ಮಾಡಲಾಯಿತು. ಅದು ಬೆಂಗಳೂರಿನಿಂದ ಸುಮಾರು 2 ಗಂಟೆ ಪ್ರಯಾಣವನ್ನು ಹೊಂದಿರುವ ನಂದಿ ಎಂಬ ಗಿರಿಧಾಮ. ಮಕ್ಕಳನ್ನು ಅಲ್ಲಿಗೆ ಕರೆದೊಯ್ಯುವ ಮೊದಲು ಸ್ಥಳದ ಪರಿಚಯ, ಮಕ್ಕಳ ರಕ್ಷಣೆ, ಅವರ ಊಟ ಉಪಚಾರಕ್ಕೆ ತಂಗುವ ಸ್ಥಳ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಬೇಕಾದ ಸಮಯ, ಹೀಗೆ ಎಲ್ಲದರ ಬಗ್ಗೆಯೂ ಕ್ರಮಬದ್ಧವಾದ ಯೋಜನೆಯನ್ನು ಮಾಡಲು ರಘುರಾಮಣ್ಣ ಮತ್ತು ಶ್ರೀನಿವಾಸಣ್ಣ ನಂದಿಬೆಟ್ಟಕ್ಕೆ ಹೋಗಿಬಂದರು. ಯೋಜನೆಯನ್ನು ಸಿದ್ಧಪಡಿಸಿ ದಿನಾಂಕ 25.07.2014ರಂದು ಹೊರಡುವುದೆಂದು ತೀರ್ಮಾನಿಸಲಾಯಿತು. ಹಿಂದಿನ ದಿನವೇ ಪ್ರವಾಸದಲ್ಲಿ ಸಂಗ್ರಹಿಸಬೇಕಾಗಿರುವ ಸೂಕ್ಷ್ಮವಿಷಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು.

ನಸುಕಿನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಅಧ್ಯಾಪಕರ ಮಕ್ಕಳ ಪರಿಷೆ ಶಾಲೆಯಲ್ಲಿ ಸೇರಿತ್ತು. ಮಕ್ಕಳನ್ನು ಎಂಟು ಗುಂಪುಗಳಾಗಿ ವಿಂಗಡಿಸಿ ಗುಂಪಿಗೆ ತಲಾ ಇಬ್ಬರನ್ನು ನೇತಾರರನ್ನಾಗಿ ಆರಿಸಿದೆವು. ಎಲ್ಲಾ ತಂಡಗಳಿಗೂ ಒಬ್ಬೊಬ್ಬ ಅಧ್ಯಾಪಕರೂ ಮುಖ್ಯ ನಿರ್ವಾಹಕರಾಗಿ ನಿಂತರು. ಎಂದಿನಂತೆ ಶಾಲಾಪ್ರಾರ್ಥನೆಯನ್ನು ಮಾಡಿ ಪಂಚಾಂಗ ಪಠನ ಮಾಡಿ ಸಿದ್ಧವಾಗಿ ನಿಂತಿದ್ದ ವಾಹನವನ್ನು ಹತ್ತಿದೆವು. ಬೆಂಗಳೂರಿನ ಸರಹದ್ದನ್ನು ದಾಟಿ ದೊಡ್ಡಬಳಾಪುರವನ್ನು ಹಾದು 7.30ಕ್ಕೆ ನಂದಿಬೆಟ್ಟದ ತಪ್ಪಲನ್ನು ತಲುಪಿದೆವು. ಗದ್ದೆಯ ಒಂದು ಬದಿಯಲ್ಲಿ ಇಳಿದು ಮತ್ತೆ ತಮ್ಮ ತಮ್ಮ ತಂಡಗಳನ್ನು ಸರಿಯಾಗಿ ಸಜ್ಜುಗೊಳಿಸಿ ಸಣ್ಣ ಪ್ರಾರ್ಥನೆಯನ್ನು ಮಾಡಿ ನಂದಿ ಬೆಟ್ಟದ ದಾರಿಯಲ್ಲಿ ನಡೆದೆವು.

18-copy

ನಂದಿಯ ಬೆನ್ನೇರಿ

ಮಕ್ಕಳಲ್ಲಿ ಧೈರ್ಯವನ್ನು ತುಂಬಲು ಸಾಹಸದ ಕೆಲಸವನ್ನು ಮಾಡಿಸಬೇಕು. ಹಾಗಾಗಿ ನಂದಿ ಬೆಟ್ಟವನ್ನು ವಾಹನದಲ್ಲಿ ಹತ್ತದೆ ಕಾಲಿನಿಂದಲೇ ಹತ್ತಲು ತೀರ್ಮಾನಿಸಿತ್ತು. ಮಕ್ಕಳಿಗೂ ಇದು ಬಲವಂತದ ಮಾಘಸ್ನಾನವಾಗಲಿಲ್ಲ. ಅವರ ಮೈಮನಗಳಲ್ಲಿ ಉತ್ಸಾಹವೇ ತುಂಬಿತ್ತು. ಜೊತೆಗೆ ವಾತಾರವಣವೂ ಹಿತವಾಗಿತ್ತು. ಸುತ್ತಲೂ ಎತ್ತರವಾದ ಗಿಡಮರಗಳು, ಹಕ್ಕಿಗಳ ಕಲರವ ‘ನದಿ’ಬೆಟ್ಟವನ್ನು ಆವರಿಸಿದ್ದ ಮೋಡ-ಇವೆಲ್ಲ ಮಕ್ಕಳ ಉತ್ಸಾಹದೊಂದಿಗೆ ಸೇರಿಕೊಂಡವು. ನಡೆಯುವುದೇ ಅಪರೂಪವಾದ ಈ ಕಾಲದಲ್ಲಿ ಕೆಲವು ಮಕ್ಕಳಿಗೆ ಬೆಟ್ಟವನ್ನು ಹತ್ತಲು ಆರಂಭದಲ್ಲಿ ಕಶ್ಟವಾದರೂ ಉತ್ಸಾಹಕ್ಕೇನು ಕೊರತೆ ಇರಲಿಲ್ಲ. ಆಯಾಸವಾದಾಗ ತಣ್ಣನೆಯ ಗಾಳಿ ಶೈತ್ಯೋಪಚಾರವನ್ನು ಮಾಡುತ್ತಿತ್ತು. ಹಿಂದಿನ ದಿನ ಹೇಳಿದ ಮಾತುಗಳನ್ನು ನೆನಪಿಟ್ಟು ಮಕ್ಕಳು ಸುತ್ತಲಿನ ಪರಿಸರವನ್ನು ಚೆನ್ನಾಗಿ ಪರೀಕ್ಷಿಸಿ ತಮ್ಮ ಪುಸ್ತಕದಲ್ಲಿ ನಮೂದಿಸಿಕೊಂಡರು. ಹಲವು ಕ್ರಿಮಿ, ಕೀಟಗಳನ್ನು ಕಂಡು ಆಶ್ಚರ್ಯದಿಂದ ಇನ್ನೊಬ್ಬರನ್ನು ಕರೆದು ಅದನ್ನು ತೋರಿಸುತ್ತಾ ನಡೆದರು. ಎತ್ತರಕ್ಕೆ ಹೋಗುತ್ತಿದ್ದ ಹಾಗೆ ಸುತ್ತಲ ವಿಹಂಗಮ ನೋಟಕ್ಕೆ ಕಣ್ಣುಗಳನ್ನರಳಿಸಿ ಆನಂದಿಸುತ್ತಿದ್ದರು. ಇರುವೆಗಳಂತೆ ಕಾಣುತ್ತಿದ್ದ ಹೊಲಗದ್ದೆಗಳು, ವಾಹನಗಳು, ಅಂಕುಡೊಂಕಾದ ದಾರಿಗಳು ಅವರಿಗೆ ತಮಾಷೆಯ ವಸ್ತುಗಳಾಗಿದ್ದವು. ಮುಟ್ಟಿದ ಕೂಡಲೆ ಹರಿಯುತ್ತಿದ್ದ ಕೀಟ ಸುತ್ತಿಕೊಂಡು ಪುಟ್ಟ ಚೆಂಡಿನಷ್ಟು ಗಟ್ಟಿಯಾಗುತ್ತಿದ್ದನ್ನು ನೋಡಿ ಅಧ್ಯಾಪಕರನ್ನು ಕರೆದು ಭಾವಚಿತ್ರವನ್ನು ತೆಗೆಯಲು ಹೇಳಿದರು. ಕೋಡುಬಳೆಯಂತೆ ಸುತ್ತಿಕೊಳ್ಳೂವ ‘ಒನಕೆಬಂಡಿ’ ಎಂಬ ನೂರಾರು ಕಾಲುಗಳ ಕೀಟ, ಬಸವನ ಹುಳು, ಹೀಗೆ ತಮ್ಮಂತೆಯೇ ಚೇಷ್ಟೆ ಮಾಡುವ ಮಂಗಗಳು, ಎಲ್ಲ ಅವರ ಕಲಿಕೆಯ ಭಾಗಗಳಾದವು. ಅವುಗಳ ಬಗ್ಗೆ ಬರೆದು ಹರೀಶ್ ಭಟ್ (ಪರಿಸರ ಅಧ್ಯಾಪಕರು) ಅಣ್ಣನಿಗೆ ಅವುಗಳನ್ನು ತೋರಿಸಬೇಕೆಂದು ಛಾಯಾಚಿತ್ರವನ್ನು ತೆಗೆದುಕೊಂಡೆವು.

ಕೆಲವು ಮಕ್ಕಳು ಎಲ್ಲೂ ಕೂಡದೆ ಬೆಟ್ಟವನ್ನು ಹತ್ತುವ ಸಂಕಲ್ಪವನ್ನು ತೊಟ್ಟರು. ನುಡಿದಂತೆ ಕೆಲವರು ಕೂಡದೆ ಬೆಟ್ಟವನ್ನು ಹತ್ತಿದರು. 09.30ಕ್ಕೆ ಟಿಪ್ಪೂ ಸುಲ್ತಾನನ ಬೇಸಿಗೆಯ ಅರಮನೆಯನ್ನು ತಲುಪಿದ ಮಕ್ಕಳು ಹಸಿರು ಫಲಕಗಳಲ್ಲಿರುವ ಸ್ಥಳದ ಮಾಹಿತಿಗಳನ್ನು ಬರೆದುಕೊಂಡರು. ೯.೪೦ಕ್ಕೆ ‘ಅಮೃತ ಸರೋವರ’ ಎಂಬ ಸರೋವರವನ್ನು ಕಂಡು ಮುಂದೆ ನಡೆದವು. ಇದನ್ನು ಸರ್ ಮಿರ್ಜಾ ಇಸ್ಮಾಯಿಲ್ ಎಂಬ ದಿವಾನರು ಕಟ್ಟಿಸಿದರೆಂದು ಹೇಳಲಾಗುತ್ತದೆ.  ಮುಂದೆ ನಡೆದು ‘ಟಿಪ್ಪೂ ಪಾತಾಳ’ ಎದುರಿನ ಗುಡ್ಡವನ್ನು ಹತ್ತಿ ಬೆಳಗಿನ ಉಪಾಹಾರವನ್ನು ತಿಂದೆವು.39-copy

 à²…ರ್ಕಾವತಿಯ ಉಗಮಸ್ಥಾನದಲ್ಲಿ

ಉಪಾಹಾರದ ನಂತರ ಅಲ್ಲಿಂದ ಹೊರಟು ೧೦.೪೦ಕ್ಕೆ ಅರ್ಕಾವತಿಯ ನದಿಯ ಉಗಮಸ್ಥಾನಕ್ಕೆ ಬಂದೆವು. ಇಳಿಬಾವಿಯಂತೆ ಅಗಲ ಆಳವಿರುವ ಈ ಸ್ಥಳದಲ್ಲಿ ನೀರಿನ ಕುರುಹೇ ಇರಲಿಲ್ಲ. ಪ್ರವಾಸಿಗರ ತ್ಯಾಜ್ಯವೇ ಅಲ್ಲಿ ತುಂಬಿತ್ತು. ಉಗಮಸ್ಥಾನಕ್ಕೆ ಒದಗಿದ ಈ ಸ್ಥಿತಿಗೆ ಶಾಲೆ ಮನಸ್ಸು ಬಹಳ ಮಿಡಿಯಿತು. ಎಲ್ಲಾ ತಂಡಗಳೂ ಸರದಿಯಂತೆ ಇಳಿದು ಅಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿದೆವು. ಮತ್ತೆ ಹಿಂದಿನ ವೈಭವ ಮರುಕಳಿಸಲೆಂದು ಗಂಗಾ ಪ್ರಾರ್ಥನೆಯನ್ನು ಮಾಡಿದೆವು. ಮಾನವ ಪ್ರಯತ್ನದ ಜೊತೆಗೆ ದೈವದ ಅನುಗ್ರಹವೂ ಬೇಕೇಂಬ ಪಾಠವನ್ನು ಜ್ಞಾನಸ್ವರೂಪಾನಂದ ಸ್ವಾಮೀಜಿಯವರ ತಪಸ್ಸಿನಿಂದ ನಾವು ಕಲಿತಿದ್ದೆವು. ಕಣ್ಮುಚ್ಚಿ, ಕೈ ಮುಗಿದು ಪ್ರಾರ್ಥನೆಯನ್ನು ಮಾಡಿ ಇಡೀ ಶಾಲೆ ಮುಂದೆ ಹೊರಟಿತು.

 à²•à³à²·à³€à²°à²¨à²¦à²¿à²¯ ಮೂಲದಲ್ಲಿ

ಸುಮಾರು ಮೂರು ಕಿಲೋಮೀಟರ್ ನಡೆದು ಕ್ಷೀರನದಿ (ಪಾಲಾರ್) ಮೂಲಸ್ಥಾನಕ್ಕೆ ಬಂದೆವು. ಇದರ ಸ್ಥಿತಿಯೂ ಅರ್ಕಾವತಿಯ ಉಗಮಸ್ಥಾನಕ್ಕಿಂತ ಬೇರೆಯಾಗಿರಲಿಲ್ಲ. ಮಕ್ಕಳೆಲ್ಲ ಅದರ ಪಾವಡಿಗಳಲ್ಲಿ ಸಾಲುಗಟ್ಟಿ ಕುಳಿತರು. ಅಲ್ಲಿಯೇ ವಿದ್ಯಾರ್ಥಿಗಳ ಪುಟ್ಟ ಸಭೆಯನ್ನು ಏರ್ಪಡಿಸಿ ನದಿಗಳ ಸಮಸ್ಯೆಗೆ ಮಾನವ ದೌರ್ಜನ್ಯದ ತಡೆಗೆ ಪರಿಹಾರವನ್ನು ಚಿಂತಿಸಲು ಹೇಳಲಾಯಿತು. ಪುಟ್ಟ ಮನಸ್ಸುಗಳು ತಮಗೆ ತಿಳಿದಂತೆ ಚರ್ಚಿಸಿ ಕೆಲವು ಪರಿಹಾರಗಳನ್ನು ನೀಡಿದವು. ನಂತರವೂ ಅಲ್ಲಿ ಹಿಂದಿನಂತೆ ಹಳ್ಳದಲ್ಲಿ ಇಳಿದು ಪ್ಲಾಸ್ಟಿಕ್, ಹೆಂಡದ ಬಾಟಲಿಗಳು, ಚಪ್ಪಲಿ, ಮೊದಲಾದ ಕಸ್ಸವನ್ನು ಹೊರತೆಗೆದೆವು. ದೇವರನ್ನು ಪ್ರಾರ್ಥಿಸಿ ಹೊರಟೆವು. ಆಗ ಸುಮಾರು 12.30ಸಮಯವಾಗಿತ್ತು.

ರೇಮಂಡ್ ಬಟ್ಟೆ ತಯಾರಿಕಾ ಘಟಕಕ್ಕೆ ಭೇಟಿ

2014-15ರ ಶೈಕ್ಷಣಿಕ ಸಾಲಿನ ಸಂವತ್ಸರ ಸೂತ್ರ ಬಟ್ಟೆಯಾದ್ದರಿಂದ, ಅದರ ಹೆಚ್ಚಿನ ತಿಳುವಳಿಕೆಗಾಗಿ ಬಟ್ಟೆತಯಾರಿಕಾ ಘಟಕಕ್ಕೆ ಭೇಟಿಯನ್ನು ಏರ್ಪಡಿಸಿದೆವು. ನಡೆದು ಹತ್ತಿದ ಬೆಟ್ಟವನ್ನು ನಡೆದೇ ಇಳಿಯುವ ಹಂಬಲ ಎಲ್ಲರಲ್ಲಿತ್ತು. ಅವರ ಉತ್ಸಾಹ ಬತ್ತಲಿಲ್ಲ. ಆದರೆ ಕಾಲ ನಮ್ಮ ಅಂಕೆಗೆ ಸಿಗದೆ ಓಡುತ್ತಿತ್ತು. ನಿಗದಿತ ಸಮಯಕ್ಕೆ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಬೇಕಿತ್ತು. ಸ್ವಲ್ಪ ದೂರ ಇಳಿದು ಆಯಕಟ್ಟಿನ ಸ್ಥಳದಲ್ಲಿ ನಿಂತಿದ್ದ ವಾಹವನ್ನು ಏರಿ ಮತ್ತೆ ಪ್ರಯಾಣ ಬೆಳೆಸಿದೆವು. 2.30ಕ್ಕೆ ಬಟ್ಟೆಯ ಕೈಗಾರಿಕಾ ಘಟಕಕ್ಕೆ ವಾಹನ ತಲುಪಿತು. ವಾಹನದಿಂದ ಇಳಿದ ಮಕ್ಕಳು, ಐದು ಎಕರೆ ವಿಸ್ತೀರ್ಣದ ಕೈಗಾರಿಕಾ ಘಟಕದ ಒಳಗೆ ಪ್ರವೇಶಿಸಿದರು. ಸಂಸ್ಥೆಯ ನಿರ್ವಾಹಕರು ಶಾಲೆಯನ್ನು ಆದರದಿಂದ ಬರಮಾಡಿಕೊಂಡರು. ನೇರ ತರಗತಿ ನಡೆಯುವ ಕೋಣೆಗೆ ಕರೆದೊಯ್ದು ಶಾಲೆಯ ವಿವರಗಳನ್ನು ಕೇಳಿ ಪಾಠವನ್ನು ಆರಂಭಿಸಿದರು. ರೇಮಂಡ್ ಸಂಸ್ಥೆಯ ಹುಟ್ಟು, ಬೆಳವಣಿಗೆ, ಸಂಸ್ಥಾಪಕರು, ವ್ಯಾಪಾರದ ವಿವರಗಳು, ತಯಾರಿಕೆಯ ವಿವಿಧ ಹಂತಗಳು – ಹೀಗೆ ನಾವು ತೊಡುವ ಸಿದ್ಧ ಉಡುಪುಗಳವರೆಗೆ ನಡೆಯುವ ವಿವಿಧ ಕೆಲಸಗಳನ್ನು ಮಕ್ಕಳು ಗಮನಿಸಿದರು. ತಮ್ಮ ಆಲೋಚನೆಗೆ ಎಟುಕಿದಷ್ಟು ವಿಷಯಗಳನ್ನು ಗ್ರಹಿಸಿ, ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು.

1925ರಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿ ಲಾಲ್ ಕೈಲಾಸ್ ಪತ್ ಎಂಬುವವರು ಈ ಸಂಸ್ಥೆಯನ್ನು ಪ್ರಾರಂಭಿಸಿದರು. ೨೦೦೪ರಲ್ಲಿ ದೊಡ್ಡಬಳ್ಳಾಪುರದಲ್ಲಿ Silver spark apparel limited – a Raymond Group ಎಂಬ ಘಟಕವನ್ನು ಸ್ಥಾಪಿಸಲಾಯಿತು. ಗೌತಮ್ ಹರಿ ಸಿಂಘಾನಿಯ ಎಂಬುವವರು ಇದನ್ನು ಮುನ್ನಡೆಸುತ್ತಿದ್ದಾರೆ. ರೇಮಂಡ್ ಕಂಪನಿಯ ಮುಖ್ಯ ಧ್ಯೇಯ ಕೊಳ್ಳುವವರ ಅಗತ್ಯಗಳನ್ನು ಚೆನ್ನಾಗಿ ಪೂರೈಸುವುದು, ಗುಣಮಟ್ಟದಲ್ಲಿ ಉನ್ನತ ಮಟ್ಟವನ್ನು ತಲುಪುವುದು.

ದೈತ್ಯ ಯಂತ್ರಗಳು, ಸಾವಿರಾರು ಜನರ ಕೆಲಸವನ್ನು ಒಮ್ಮೆಲೆಗೆ ನೋಡಿ ಮಕ್ಕಳು ಆಶ್ಚರ್ಯಪಟ್ಟರು. ರೇಮಂಡ್ ಕಂಪನಿಯಲ್ಲಿರುವ ಎಲ್ಲಾ ಯಂತ್ರಗಳು ಜಪಾನ್ ಮತ್ತು ಜರ್ಮನಿಯಿಂದ ತಯಾರಾಗಿ ಬಂದಂತಹವು. ಒಂದೊಂದು ಯಂತ್ರವು ಲಕ್ಷಗಟ್ಟಲೆ ಬೆಲೆಬಾಳುವಂತಹವು. ವಿವಿಧ ಹಂತಗಳಲ್ಲಿ ಒಂದು ಮೇಲಂಗಿಯ ಕೆಲಸ ನಡೆಯುತ್ತದೆ. ಸಾವಿರಾರು ಯಂತ್ರಗಳು, ಮಾನವರ ಕೊಡುಗೆಯಿಂದ ಒಂದು ನಿಮಿಷಕ್ಕೆ ಒಂದು ಕೋಟು ತಯಾರಾಗುತ್ತದೆ. ಒಂದು ಮೇಲಂಗಿ ಸುಮಾರು 14000 ರೂಪಾಯಿ ಬೆಲೆಬಾಳುತ್ತದೆ ಎಂಬ ಮಾಹಿತಿಯನ್ನು ಕೇಳಿ ಆಶ್ಚರ್ಯಪಟ್ಟೆವು. ಇಂತಹ ಕೋಟುಗಳು ತಿಂಗಳಿಗೆ 50,000 ತಯಾರಾಗುತ್ತವೆ. ಭಾರತ ಮತ್ತು ವಿದೇಶಗಳಲ್ಲಿ ಇದನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

ರೇಮಂಡ್ ಕಂಪನಿಯು ಮುಖ್ಯವಾಗಿ ಬಟ್ಟೆಯ ರಫ್ತು ಮತ್ತು ಗುಣಮಟ್ಟಕ್ಕೆ ದೊಡ್ಡ ಹೆಸರನ್ನು ಮಾಡಿದೆ. ಬಟ್ಟೆಯ ತಯಾರಿಕೆಯಲ್ಲಿ ರೇಮಂಡ್ ಕಂಪನಿಗೆ ಪ್ರಪಂಚದಲ್ಲೇ 4ನೇ ಸ್ಥಾನ ದೊರಕಿದೆ. ವರ್ಷಕ್ಕೊಮ್ಮೆ ಸಂಸ್ಥೆಯಲ್ಲಿ ನಡೆಯುವ ವಾರ್ಷಿಕೋತ್ಸವ, ಹಲವು ಸ್ಪರ್ಧೆಗಳು ಕೆಲಸಗಾರರಲ್ಲಿ ಉತ್ಸಾಹವನ್ನು ಇಮ್ಮಡಿಸುತ್ತದೆ. ಕೆಲಸಗಾರರ ಮಕ್ಕಳ ಪೋಷಣೆಗಾಗಿ ‘ಬಾಲವಾಡಿ’ ಎಂಬ ಪ್ರಾರಂಭಿಕ ಹಂತದ ವಿದ್ಯಾಭ್ಯಾಸಕ್ಕೆ ಅನುಕೂಲವನ್ನೂ ಇಲ್ಲಿ ಕಲ್ಪಿಸಲಾಗಿದೆ.

ಸಂಸ್ಥೆಯ ಎಲ್ಲಾ ಘಟಕಗಳನ್ನು ಎಲ್ಲಾ ಮಕ್ಕಳು ನೋಡಲು ಸಾಧ್ಯವಾಗಲಿಲ್ಲ. ಒಂದೊಂದು ತಂಡ ಒಂದೊಂದು ವಿಭಾಗಕ್ಕೆ ಭೇಟಿ ನೀಡಿತು. ನಂತರ ವಿಚಾರ ವಿನಿಮಯ ಮಾಡಿಕೊಂಡೆವು. ಮಕ್ಕಳ ಕುತೂಹಲಕ್ಕೆ ಸಂಸ್ಥೆಯವರು ಅಭಿನಂದನೆಗಳನ್ನು ಹೇಳಿ ತಂಪುಪಾನೀಯ, ಸಿಹಿತಿಂಡಿಯನ್ನು ಕೊಟ್ಟರು.  ಹೀಗೆ ಬಟ್ಟೆತಯಾರಿಕೆಯ ಅದ್ಭುತಲೋಕದ ಒಂದು ತುಂಡನ್ನು ಪರಿಚಯಿಸಿಕೊಂಡು ಹಿಂತಿರುಗಿದೆವು. ಮಕ್ಕಳ ಉತ್ಸಾಹ ಯಾವ ಹಂತದಲ್ಲೂ ಕುಗ್ಗಲೇ ಇಲ್ಲ. ಮರಳಿ ಬರುವಾಗಲೂ ಹಾಡುಗಳನ್ನು ಹಾಡುತ್ತಾ, ಆಟಗಳನ್ನು ಆಡುತ್ತಾ ಬೆಂಗಳೂರನ್ನು ತಲುಪಿ ತಮ್ಮ ತಮ್ಮ ಪೋಷಕರೊಂದಿಗೆ ಮನೆಗಳನ್ನು ತಲುಪಿದರು.26-copy

 

For more photos click here

 

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it