Sri Vishweshatirtha Swamiji

ಉಪನಿಷತ್ತು ತಿಳಿಸಿದಂತೆ ಪರವಿದ್ಯೆ ಹಾಗೂ ಅಪರವಿದ್ಯೆ ಎರಡೂ ಮನುಷ್ಯನಿಗೆ ಅವಶ್ಯಕ. ಪರಮಾತ್ಮನನ್ನು ತಿಳಿಸುವ ವಿದ್ಯೆ ಪರವಿದ್ಯೆ. ಉಳಿದವುಗಳೆಲ್ಲಾ ಅಪರವಿದ್ಯೆ. ಅಪರವಿದ್ಯೆ ಶರೀರದಂತೆ. ಪರವಿದ್ಯೆ ಆತ್ಮದಂತೆ. ಇವೆರಡೂ ಜೊತೆ ಸೇರಿದಾಗಲೇ ಜೀವನ. ವಿಜ್ಞಾನ ಕುದುರೆಯಂತೆ. ಅಧ್ಯಾತ್ಮ ಅದರ ಕಡಿವಾಣ. ಕಡಿವಾಣವಿಲ್ಲದ ಕುದುರೆ ಪ್ರಪಾತಕ್ಕೆ ಬೀಳುವ ಭಯವಿದೆ. ಈ ಎರಡೂ ಶಿಕ್ಷಣದ ಅಂಗವಾದ ಶಿಕ್ಷಣ ನೀತಿಯನ್ನು ಪ್ರತಿಪಾದಿಸಿದ್ದು ಪ್ರಹ್ಲಾದ. ಅದನ್ನು ಅನುಸರಿಸುವಂತೆ ಇಂದಿನ ಶೈಕ್ಷಣಿಕ ಕ್ಶೇತ್ರದಲ್ಲಿ ಹೊಸ ಪ್ರಯೋಗಕ್ಕೆ ಯುವಕರು ಧೈರ್ಯದ ಹೆಜ್ಜೆಯನ್ನಿಟ್ಟಿದ್ದಾರೆ. ಇದು ಅಭಿನಂದನೀಯ. ಈ ಸಂಸ್ಥೆಗೆ ನಮ್ಮ ಆಶೀರ್ವಾದ ಮಾತ್ರವಲ್ಲ ಪೂರ್ಣ ಬೆಂಬಲವಿದೆ. ಯುವಪೀಳಿಗೆ ಎಂಬ ಬಾಣವು ಹಿರಿಯರೆಂಬ ಬಿಲ್ಲಿನ ಆಸರೆಯಿಂದ ಹೊರಟರೆ ಸರಿಯಾದ ಗುರಿಯನ್ನು ಮುಟ್ಟುತ್ತದೆ. ಈ ಪ್ರಯತ್ನ ಶಿಕ್ಷಣ ಕ್ಷೇತ್ರದಲ್ಲೇ ದೊಡ್ಡ ಕ್ರಾಂತಿಯನ್ನು ಮಾಡುವಂತಾಗಲಿ.

– ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಪೇಜಾವರ ಮಠ, ಉಡುಪಿ

2011 Feb 06, Purnapramati Mahotsva

ಬರೀ ನೀರು ಕುಡಿದಾಗ ಅಷ್ಟು ಸಂತೋಷ ಇರುವುದಿಲ್ಲ. ಅದಕ್ಕೆ, ನಿಂಬೆಹಣ್ಣು, ಸಕ್ಕರೆ, ಕೇಸರಿ ಸೇರಿಸಿ ಪಾನಕ ಮಾಡಿದಾಗ ಅದರ ರುಚಿಯೇ ಬೇರೆ. ಎಲ್ಲಾ ವಿದ್ಯಾ ಸಂಸ್ಥೆಗಳಲ್ಲೂ ನೀರು ಕುಡಿಸುತ್ತಾರೆ. ಅದಕ್ಕೆ ಅಧ್ಯಾತ್ಮಿಕತೆಯ ಸಕ್ಕರೆ, ಸಂಸ್ಕೃತಿಯ ಕೇಸರಿ, ವಿಜ್ಞಾನದ ನಿಂಬೆಹಣ್ಣು ಎಲ್ಲ ಸೇರಿಸಿ ಉತ್ತಮ ಪಾನಕ ಮಾಡಿ ಸಮಾಜಕ್ಕೆ ನೀಡುವ ಒಂದು ರೀತಿಯ ಅಭೂತಪೂರ್ವ ಪ್ರಯೋಗವನ್ನು ಮಾಡುತ್ತಿದ್ದಾರೆ. ಇಲ್ಲಿ ಅಧ್ಯಾತ್ಮಿಕತೆ ವಿಜ್ಞಾನ ಮತ್ತು ಸಂಸ್ಕೃತಿ – ಈ ಮೂರರ ಸಂಗಮ ಇದೆ. ಗಂಗಾ, ಯಮುನಾ, ಸರಸ್ವತಿಯಂತೆ ಈ ಮೂರರ ತ್ರಿವೇಣೀಸಂಗಮವನ್ನು ಇಲ್ಲಿ ಕಾಣುತ್ತಾ ಇದ್ದೇವೆ. ಎಲ್ಲಾ ನಮ್ಮ ಅಭಿಮಾನಿಗಳು, ನಮ್ಮ ಜೊತೆಗೆ ಇದ್ದ ನಮಗೆ ಅತ್ಯಂತ ಪರಿಚಿತವಾದ ಮಿತ್ರರು ಸೇರಿ ಇಂಥ ಒಂದು ಉದಾತ್ತವಾದ ಒಂದು ಶೈಕ್ಷಣಿಕ ಪ್ರಯೋಗವನ್ನು ಮಾಡಿದ ಬಗ್ಗೆ ಅವರೆಲ್ಲರನ್ನೂ ಕೂಡ ಹೃತ್ಪೂರ್ವಕವಾಗಿ ಅಭಿನಂದಿಸಿ, ಈ ಸಂಸ್ಥೆಯ ಉತ್ತರೋತ್ತರ ಪ್ರಗತಿಯನ್ನು ನಾವು ಆಶಿಸುತ್ತಾ ಇದ್ದೇವೆ.

– ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ

2012 Jan 22, Purnapramati Mahotsva

Leave a Reply

Notice Board

pūrṇapramati is recruiting teachers

pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it