ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ – ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ

ದೇಹದಂಡನೆಯ ತಪಸ್ಸು ಇಂದು ಅಪರೂಪ. ಅದರಲ್ಲೂ ಉಪವಾಸದ ತಪಸ್ಸು. ಅದರಲ್ಲೂ ಇಳಿಯ ವಯಸ್ಸಿನಲ್ಲಿ ನಡೆಸುವ ಉಪವಾಸದ ತಪಸ್ಸು. ಅದರಲ್ಲೂ ಸನ್ನ್ಯಾಸಿಯೊಬ್ಬರು ಈ ರಾಷ್ಟ್ರದ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ನಡೆಸುವ ತಪಸ್ಸು. ಇದೊಂದು ಢೋಂಗಿ ಸಾಧುವಿನ ನಾಟಕವಿರಬೇಕು ಅಂತ ತಿರಸ್ಕರಿಸುವವರೇ ಹೆಚ್ಚು. ಕೆಲವರು ಇದು ನಮ್ಮ ಹೊಟ್ಟೆಪಾಡಿಗೆ ಸಂಬಂಧಿಸಿದ್ದಂತೂ ಅಲ್ಲ ಅನ್ನುವವರು. ಇನ್ನು ಕೆಲವರು ಇದು ಆಧುನಿಕ ವಿರೋಧಿ ಸ್ವದೇಶೀ ಗಾಂಧೀ ಮಾರ್ಗಿಗಳು ನಡೆಸುವ ಧಾರಾವಾಹಿಕ ಉಪವಾಸಗಳು ಅಂತ ಉಪೇಕ್ಷಿಸುವವರು. ಆದರೆ ೮೦ ವರ್ಷದ ಸನ್ನ್ಯಾಸಿಯೊಬ್ಬ ಗಂಗಾತೀರದಲ್ಲಿ ಉಪವಾಸ ಕೂತರೆ, ಸ್ವಯಂ ಪ್ರಧಾನಿ ಕಛೇರಿಯೇ ಮಧ್ಯ ಪ್ರವೇಶಿಸಿ ಅವರ ಆಗ್ರಹಗಳನ್ನು ಒಪ್ಪಿಕೊಳ್ಳುತ್ತದೆ ಎಂದರೆ ಆಶ್ಚರ್ಯವಲ್ಲವೇ!

ಹೌದು ಆ ಸನ್ನ್ಯಾಸಿಯೇ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ. ಅವರ ಆಜ್ಞೆ ಪಾಲಿಸಲು ದೊಡ್ಡ ದೊಡ್ಡ ಮಂದಿಯೂ ಓಡಿ ಬರುತ್ತಾರೆ. ಮ್ಯಾಗ್ಸೆಸೆ ಪ್ರಶಸ್ತಿಯ ನೀರಿನ ಗಾಂಧಿಯೆಂದೇ ಪ್ರಖ್ಯಾತರಾದ ರಾಜೇಂದ್ರ ಸಿಂಗ್ ಇರಬಹುದು, ಹಿಮಾಲಯದ ತಪ್ಪಲಿನಲ್ಲಿ ಪರ್ಯಾಯ ಹಾಗೂ ಪ್ರಕೃತಿಸಹಜ ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ರವಿ ಚೋಪ್ರಾ ಇರಬಹುದು. ಡೌನ್ ಟು ಅರ್ಥ್ ಖ್ಯಾತಿಯ ಸುನಿತಾ ನಾರಾಯಣ್ ಇರಬಹುದು, ನೊಂದವರ ಸೇವೆಯಲ್ಲಿ ತೊಡಗಿಸಿಕೊಂಡಿರುವ ದುನು ರಾಯ್ ಇರಬಹುದು. ರಾಜೇಂದ್ರ ಸಿಂಗ್, ಡಾ. ಚೋಪ್ರಾ, ದುನು ರಾಯ್ ಹಾಗೂ ಸಿ. ಎಸ್. ಇ. ಸಂಸ್ಥಾಪಕ ಡಾ.ಅನಿಲ್ ಅಗರ್‌ವಾಲ್ ಎಲ್ಲರೂ ಇವರ ಶಿಷ್ಯರೇ.

ಸರ್ವಸಂಗ ಸನ್ನ್ಯಾಸಿಯಾಗಿ ಆಶ್ರಮ ಸ್ವೀಕಾರ ಮಾಡಿ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ ಆದದ್ದು ಒಂದು ವರ್ಷದ ಹಿಂದಷ್ಟೇ. ಅವರ ೭೯ನೇ ಪಕ್ವ ವಯಸ್ಸಿನಲ್ಲಿ. ಆದರೆ ಅಲ್ಲಿಯತನಕವೂ ಪ್ರೊ. ಜಿ.ಡಿ. ಅಗ್ರವಾಲರು ಸನ್ನ್ಯಾಸಿಗಳೇ. ಮಧ್ಯಪ್ರದೇಶದ ಚಿತ್ರಕೂಟದ ಅವರ ನಿವಾಸದಲ್ಲಿ ವಯಸ್ಸು ೭೫ ದಾಟಿದ್ದಾಗಲೂ ಮನೆಯ ಕಸಗುಡಿಸುತ್ತಾ, ತಮ್ಮ ಬಟ್ಟೆ ತಾವೇ ಒಗೆಯುತ್ತಾ, ತನ್ನ ಅಡಿಗೆ ತಾನೇ ಬೇಯಿಸುತ್ತಾ, ಮನೆಯಲ್ಲೇ ನೇಯ್ದ ಖಾದಿಯನ್ನು ತೊಡುತ್ತಾ ಬದುಕುತ್ತಿದ್ದ ಆಶ್ರಮಪೂರ್ವ ಸನ್ನ್ಯಾಸಿ. ಹತ್ತಿರ ಓಡಾಡಲು ಸೈಕಲ್, ದೂರಕ್ಕೆ ಆರ್ಡಿನರಿ ಬಸ್ಸು ಇಲ್ಲವೇ ದ್ವಿತೀಯ ದರ್ಜೆ ರೈಲು.

ಇವರದ್ದು ಜಿಗುಪ್ಸೆಯ ವೈರಾಗ್ಯವಲ್ಲ. ತೋರಿಕೆಯ ಸತ್ಯಾಗ್ರಹವಲ್ಲ. ಯಾವುದೇ ಕೀರ್ತಿ, ಸಂಪತ್ತು ಅಥವಾ ಅಧಿಕಾರದ ಅಪೇಕ್ಷೆಯೂ ಇಲ್ಲದ ತಪಸ್ಸು. ತಾಯಿಯ ಜೀವರಕ್ಷಣೆಗಾಗಿ ನಡೆಸುತ್ತಿರುವ ತಪಸ್ಸು. ಸನ್ನ್ಯಾಸದಿಂದಲೂ ಕಳಚದ ಕೊಂಡಿ ಎಂದರೆ ಆ ತಾಯಿಯೊಂದೇ. ಈ ದೇಶದ ಯಾವ ಪ್ರಜೆಯೂ ಆಕೆಯ ನಂಟು ಬಿಟ್ಟು ಬದುಕಲಾರ. ಮರೆತು ಉಳಿಯಲಾರ. ಭಾರತೀಯನಾಗಲಾರ. ಆ ಗಂಗಾಮಾತೆಯ ಕರುಳ ಕೊಂಡಿಯದು. ಇವರ ಉಪವಾಸವೂ ಅಷ್ಟೇ. ಮಾಧ್ಯಮಗಳು ಹಗಲೂ ರಾತ್ರಿ ಬಿತ್ತರಿಸುವ ತಾಮಸ ಕಾರ್ಯಕ್ರಮವಲ್ಲ. ಲಕ್ಷಾಂತರ ಮಂದಿ ಸೇರಿ ಘೋಷಣೆ ಕೂಗುವ ರಾಜಸ ಆಂದೋಲನಗಳೂ ಅಲ್ಲ. ನನ್ನ ತಾಯಿಯನ್ನು ಬದುಕಿಸು ಎಂದು ಗಂಗಾಪಿತನನ್ನು ರಾಮಭಕ್ತನೊಬ್ಬ ಒತ್ತಾಯಿಸುವ ಸಾತ್ವಿಕ ತಪಸ್ಸು. ಖಾವಿ ಬಟ್ಟೆಯವರೂ ಕೆಲವರಿದ್ದಾರೆ. ಟೋಪಿಧಾರಿಗಳೂ ಹಲವರಿದ್ದಾರೆ. ಆದರೆ ಋಷಿಕುಲದ ಮಂದಿ ಬಹು ಕಡಿಮೆ. ಕೇವಲ ಭಾವುಕನಾದರೂ ಸಾಲದು, ಬುದ್ಧಿಜೀವಿಯಾದರೂ ಸಾಲದು. ಅವೆರಡರ ಮೇಲನದ ಅಂತಃಶಕ್ತಿ ಬೇಕು. ಅದೇ ಪ್ರೊ. ಅಗ್ರವಾಲರ ವೈಶಿಷ್ಟ್ಯ. ಇವರು ಆಧುನಿಕ ಶಿಕ್ಷಣದ ತುತ್ತತುದಿಯನ್ನು ಅನುಭವಿಸಿದವರು. ಜೊತೆಗೇ ಭಾರತದ ಮೂಲಭೂತ ಭಾವನೆಯಾದ ಗಂಗೆಯನ್ನು ಆರಾಧಿಸತೊಡಗಿದವರು.

ಗಂಗಾಪುತ್ರ ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ

ಜಿ.ಡಿ. ಅಗರ್‌ವಾಲ್ ಜನಿಸಿದ್ದು ೧೯೩೨ ರಲ್ಲಿ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಕಂಧ್ಲಾ ಊರಿನಲ್ಲಿ ಒಂದು ಕೃಷಿಕ ಕುಟುಂಬದಲ್ಲಿ. ಅಲ್ಲಿಯೇ ಸುತ್ತಮುತ್ತ ಮೊದಲ ಹಂತದ ಶಿಕ್ಷಣ ಮುಗಿಸಿ, ರೂರ್ಕೀ ವಿಶ್ವವಿದ್ಯಾಲಯದಲ್ಲಿ (ಈಗಿನ ಐ ಐ ಟಿ ರೂರ್ಕೀ) ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ವಿನ್ಯಾಸ ಅಭಿಯಂತರರಾಗಿ ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ಕೆಲಸ ಆರಂಭಿಸಿದ ಇವರು ನಂತರ ಅಮೇರಿಕಾದ ಬರ್ಕ್ಲಿಯಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪಿ.ಎಚ್.ಡಿ. ಮುಗಿಸಿದರು. ಆಗಿನಿಂದ ಅವರು ವಿಶ್ವವೇ ಗುರುತಿಸುವ ಪ್ರಖ್ಯಾತ ಎನ್ವಿರಾನ್‍ಮೆಂಟಲ್ ಎಂಜಿನಿಯರ್. ನಂತರ ಐ ಐ ಟಿ ಕಾನ್ಪುರದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಹಾಗೂ ಡೀನ್ ಆಗಿಯೂ ಸೇವೆ ಸಲ್ಲಿಸಿದರು. ಹಲವಾರು ವೈಜ್ಞಾನಿಕ ಲೇಖನಗಳನ್ನು ಬರೆದುದಲ್ಲದೇ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ವಿದ್ಯಾರ್ಥಿಗಳ ಮಾರ್ಗದರ್ಶಕರೂ ಆದರು. ಇದೇ ಅವಧಿಯಲ್ಲಿ ರಾಜೇಂದ್ರ ಸಿಂಗ್, ಅನಿಲ್ ಅಗರ್‌ವಾಲ್, ರವಿ ಛೋಪ್ರಾ ತರಹದ ಸಾಮಾಜಿಕ ಕ್ರಾಂತಿಕಾರಿಗಳಿಗೂ ಸ್ಫೂರ್ತಿಪ್ರದರಾದರು. ಮುಂದೆ ಭಾರತ ಸರ್ಕಾರದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿ (Central Pollution Control Board) ಯ ಮೊದಲ ಸದಸ್ಯ-ಕಾರ್ಯದರ್ಶಿಯಾದರು. ತನ್ಮೂಲಕ ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ರಕ್ಷಣೆಯ ಕುರಿತಾದ ಕಾಯ್ದೆಗಳ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಹೀಗೆ ಸಂಶೋಧಕರೂ ಗೌರವಿಸುವ ವಿಜ್ಞಾನಿಯಾಗಿ, ವಿದ್ಯಾರ್ಥಿಗಳು ಮೆಚ್ಚುವ ಶಿಕ್ಷಕನಾಗಿ, ಸಾಮಾಜಿಕ ಕಾರ್ಯಕರ್ತರಿಗೆ ಚೈತನ್ಯ ತುಂಬುವ ಮಾರ್ಗದರ್ಶಕರಾಗಿ, ಸರ್ಕಾರವು ಆಹ್ವಾನಿಸುವ ತಜ್ಞರಾಗಿ ಜಗತ್ತಿಗೇ ಕಂಡ ಅಗ್ರವಾಲರು, ಅಂತರಂಗದಲ್ಲಿ ಪ್ರಕೃತಿಮಾತೆಯ ಸೇವೆಗಾಗಿ ಹಪಹಪಿಸುತ್ತಿದ್ದರು. ಸನಾತನ ಧರ್ಮದಲ್ಲಿ ಸದಾಸಕ್ತರಾಗಿ, ಭಾರತೀಯ ಸಂಸ್ಕೃತಿಯ ರಕ್ಷಣೆಯಲ್ಲಿ ಬದ್ಧಮನಸ್ಕರಾಗಿದ್ದ ಅಗ್ರವಾಲರು ಅನೇಕ ಪರಿಸರ ರಕ್ಷಣೆ ಸಂಬಂಧಿ ಕಾರ್ಯಗಳಲ್ಲಿ ತಮ್ಮ ಆಧುನಿಕ ವಿದ್ಯೆಯನ್ನು ತಮ್ಮ ಅಗಾಧ ಶಿಷ್ಯಸಂಪತ್ತನ್ನು ಬಳಸತೊಡಗಿದ್ದರು.

೨೦೦೭ ರ ಒಂದು ದಿನ ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಬಯಸಲಾಗಿದ್ದ ಅಣೆಕಟ್ಟೊಂದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಪ್ರಿಯಾ ಪಟೇಲ್ ಎಂಬುವವರು ಎಂ.ಸಿ. ಮೆಹ್ತಾರನ್ನು ಕಾಣಲು ಬಂದಿದ್ದಾಗ ಅಗ್ರವಾಲರೂ ಅವರ ಜೊತೆ ಇದ್ದರು. ಎಲ್ಲರೂ ಈ ಅಣೆಕಟ್ಟು ಮೊದಲಾದ ಯೋಜನೆಗಳು ಗಂಗಾಮಾತೆಯನ್ನು ಬರಿದು ಮಾಡುತ್ತಿರುವ ಬಗೆಯನ್ನು ಕಾಣಲು ಹೋದರು. ಅಲ್ಲಿನ ದೃಶ್ಯವನ್ನು ಅಗ್ರವಾಲರಿಗೆ ನಂಬಲಾಗಲಿಲ್ಲ. ಮೂವತ್ತು ವರ್ಷಗಳ ಹಿಂದೆ ಮನೇರಿ ಭಾಲಿ ಯೋಜನೆ ಶುರುವಾಗಿದ್ದಾಗ ಅಲ್ಲಿ ಹೋಗಿದ್ದ ಅಗ್ರವಾಲರು, ಈಗ ಈ ದೃಶ್ಯವನ್ನು ನೋಡಿ ದಿಗ್ಭ್ರಾಂತರಾದರು. ಮನೇರಿ ಭಾಲಿಯ ಕೆಳಪ್ರದೇಶಗಳಲ್ಲಿ ಭಾಗೀರಥಿಯೇ ಕಣ್ಮರೆಯಾಗಿದ್ದಳು! ಅಣೆಕಟ್ಟುಗಳಲ್ಲಿ ಸಂಗ್ರಹಿಸಿ ನದಿಯ ಸಮಗ್ರ ನೀರನ್ನು ಕಾಲುವೆಗಳ ಮೂಲಕ ಬೇರೆಡೆ ಸ್ಥಳಾಂತರಿಸುತ್ತಿರುವದನ್ನು ನೋಡಿ ಅಗ್ರವಾಲರ ಮನಸ್ಸು ಕದಡಿತು. ಬಹಳ ದಿನಗಳ ಕಾಲ ಯೋಚಿಸಿ, ೨೦೦೮ ರ ರಾಮನವಮಿಯಂದು ಅವರೊಂದು ದೃಢ ಸಂಕಲ್ಪ ಮಾಡಿದರು: ಉಳಿದ ನನ್ನ ಜೀವನವೆಲ್ಲವೂ ಗಂಗೆಗಾಗಿಯೇ ಸಮರ್ಪಿತ. ಗಂಗೆ ಒಂದು ಪರಿಸರದ ಸಂಗತಿಯಲ್ಲ. ಅದೊಂದು ದೈವೀ ಶಕ್ತಿ. ಅದು ನನ್ನ ವ್ಯಕ್ತಿತ್ವದ ಗುರುತು. ಅದು ನನ್ನ ನಂಬಿಕೆ. ಆಕೆ ನನ್ನ ತಾಯಿ. ರಾಜಾ ಭಗೀರಥನನ್ನು ನಾನು ನನ್ನ ಪೂರ್ವಜನೆಂದು ಭಾವಿಸುತ್ತೇನೆ. ನಮಗಾಗಿ ಅವನು ಕೊಟ್ಟು ಹೋದ ಭವ್ಯ ಪರಂಪರೆಯೇ ಗಂಗೆ. ಹೊರಸಂಕೇತದ ಇತ್ತೀಚಿನ ರಾಷ್ಟ್ರಧ್ವಜಕ್ಕೇ ಅವಮಾನವನ್ನು ಒಪ್ಪದ ನಾವು ನಮ್ಮ ದೇಶದ ಅಂತಃಪ್ರಜ್ಞೆಯಾದ ಸಾವಿರಾರು ವರ್ಷಗಳ ನಮ್ಮ ಭವ್ಯ ಪರಂಪರೆಯ ಪ್ರತೀಕವಾದ ಗಂಗೆಗೆ ಆಗುತ್ತಿರುವ ಅಪಚಾರವನ್ನು ಹೇಗೆ ಸಹಿಸಲು ಸಾಧ್ಯ? ನಾವು ತಾಜ್ ಮಹಲ್ ಗೆ ಇಷ್ಟೆಲ್ಲಾ ಮಾಡಬಹುದಾದರೆ ಗಂಗೆಗೆ ಯಾಕಿಲ್ಲ?

ಎಲ್ಲೆಡೆಯೂ ಗಂಗೆಯ ಹರಿವು ಕ್ಷೀಣಿಸುತ್ತಿದೆ. ಎಲ್ಲ ಕಾರ್ಖಾನೆಗಳ ತ್ಯಾಜ್ಯಗಳಿಂದ ಹಿಡಿದು ನಗರಗಳ ಮಲಮೂತ್ರಗಳೂ ಗಂಗೆ ಸೇರುತ್ತಿವೆ. ಗಂಗೆಯ ಅವಿಚ್ಛಿನ್ನ ಪ್ರವಾಹಕ್ಕೆ ಅಡೆ ತಡೆಗಳನ್ನು ಕಟ್ಟುತ್ತಿದ್ದೇವೆ. ಭಾಗೀರಥಿಯ ಉಗಮದಿಂದ ಸುಮಾರು ೧೩೫ ಕಿ.ಮೀ. ಗಳ ಉತ್ತರಕಾಶಿಯ ವರೆಗೆ ಮಾತ್ರ ಉಳಿದಿರುವ ಭಾಗೀರಥಿಯ ಪ್ರವಾಹಕ್ಕೂ ಆಧುನಿಕ ಜಗತ್ತು ಲಗ್ಗೆಯಿಡುತ್ತಿದೆ. ಗಂಗೋತ್ರಿಯ ಹತ್ತಿರದಲ್ಲೇ ಅಣೆಕಟ್ಟನ್ನು ನಿರ್ಮಿಸಹೊರಟಿದ್ದಾರೆ. ಈಗ ಅಳಿದುಳಿದಿರುವುದೂ ಕೂಡ ನಾಶವಾದರೆ ಭಾಗೀರಥಿ ಪೂರ್ಣವಾಗಿ ಮರೆಯಾಗುವಳೇ? ಇದಕ್ಕೆ ನಾ ಹೇಗೆ ಸ್ಪಂದಿಸಲಿ? ತಾಯಿಯ ರಕ್ತವನ್ನೇ ಹೀರುತ್ತಿರುವ ಪ್ರಬಲರ ವಿರುದ್ಧ ನಾನು ಏನು ಮಾಡಲಿ? ಈ ಭವ್ಯ ಇತಿಹಾಸದ ಧರ್ಮಾಚಾರ್ಯರುಗಳೂ ಕೈಕಟ್ಟಿ ಕುಳಿತಿರುವಾಗ ನಾ ಏನು ಮಾಡಲಿ? ಆದರೆ ನನ್ನ ತಾಯಿಯ ರಕ್ತವನ್ನು ಹೀರುವುದನ್ನು ನೋಡುತ್ತಾ ನಾನು ಸುಮ್ಮನಿರಲಾರೆ. ಇದು ಕಷ್ಟವೆನಿಸಿದರೂ ನನಗೊಂದು ಸೌಭಾಗ್ಯವಿದೆ. ನಾನು ಈ ಭಾರತವರ್ಷದಲ್ಲಿ ಹುಟ್ಟಿದವನು. ತಪಸ್ಸು ಮತ್ತು ತ್ಯಾಗವನ್ನು ಬೇರೆಲ್ಲ ಶಕ್ತಿಗಳಿಗಿಂತ ದೊಡ್ಡದು ಎಂದು ತೋರಿಸಿದ ಪರಂಪರೆಯವ ನಾನು. ಗಂಗೆ ನಮ್ಮೆಲ್ಲರ ನಂಬಿಕೆಯ ಪ್ರತೀಕ ಹೌದು. ಆ ನಂಬಿಕೆಗಾಗಿ ತ್ಯಾಗ ಮಾಡಲು ಸಿದ್ಧರಿಲ್ಲದಿದ್ದರೆ, ಆ ನಂಬಿಕೆಯ ಅರ್ಥವಾದರೂ ಏನು? ಎನ್ನುತ್ತಾ ಬಹಳ ದಿನಗಳ ಆತ್ಮವಿಮರ್ಶೆಯ ನಂತರ ಅಗ್ರವಾಲರು ಒಂದು ಗಟ್ಟಿ ತೀರ್ಮಾನಕ್ಕೆ ಬಂದರು. ಗಂಗಾಮಾತೆಗಾಗಿ ತನ್ನ ಸರ್ವಸ್ವವನ್ನು ತ್ಯಜಿಸುವ ಪಣ ತೊಟ್ಟರು. ಗಂಗೆಯನ್ನು ಉಳಿಸಲು ಜೀವವನ್ನೂ ಅಡವಿಡಲು ಸಜ್ಜಾದರು. ಗಂಗೋತ್ರಿ ಮತ್ತು ಉತ್ತರಕಾಶಿಯ ನಡುವಿನ ಭಾರೀ ಪ್ರಮಾಣದ ಯೋಜನೆಗಳನ್ನು ಕೈಬಿಡುವುದಿಲ್ಲವಾದರೆ ಆಮರಣಾಂತ ಉಪವಾಸ ಮಾಡುವುದಾಗಿ ಆಹಾರವನ್ನು ತ್ಯಜಿಸಿಯೇ ಬಿಟ್ಟರು – ೨೦೦೮ ರ ಜೂನ್ ತಿಂಗಳು.

ಏಳು ದಿನಗಳ ಉಪವಾಸಕ್ಕೆ ಸ್ಪಂದಿಸಿದ ಉತ್ತರಾಖಾಂಡ್ ರಾಜ್ಯ ಸರ್ಕಾರ ಭೈರೊಘಾಟಿ ಮತ್ತು ಪಾಲಾ ಮನೇರಿ ಯೋಜನೆಗಳನ್ನು ಕೈಬಿಟ್ಟಿತು. ಕೇಂದ್ರ ಸರ್ಕಾರ ಲೊಹಾರಿನಾಗ್-ಪಾಲ ಯೋಜನೆಯ ಸಾಧಕ-ಬಾಧಕಗಳನ್ನು ವಿಮರ್ಶಿಸಲು ಸಮಿತಿಯೊಂದನ್ನು ರಚಿಸಿ ಮೂರು ತಿಂಗಳ ಕಾಲಾವಕಾಶ ಕೊಟ್ಟಿತು. ಇವುಗಳಿಂದ ತಮ್ಮ ಉಪವಾಸ ಕೈಬಿಟ್ಟ ಅಗ್ರವಾಲರು ಮೂರು ತಿಂಗಳು ಕಾದರು. ಸರ್ಕಾರ ಇನ್ನೊಂದು ತಿಂಗಳ ವಿಸ್ತರಣೆ ಕೊಟ್ಟಿದು. ಮತ್ತೊಂದು ತಿಂಗಳು. ಮತ್ತೆ ಮೂರು ತಿಂಗಳು. ಬೇಸತ್ತ ಅಗ್ರವಾಲರು ಮತ್ತೆ ಆಮರಣಾಂತ ಉಪವಾಸ ಕೈಗೊಂಡರು. ಈ ಬಾರಿ ಕೇಂದ್ರ ಸರ್ಕಾರದ್ದೂ ದಪ್ಪ ಚರ್ಮವಾಗಿತ್ತು. ಒಂದು ದಿನವಲ್ಲ. ಎರಡು ದಿನವಲ್ಲ. ಒಂದು ವಾರ, ಎರಡು ವಾರ, ಮೂರು ವಾರ, ಒಂದು ತಿಂಗಳು. ಕೊನೆಗೆ ೩೭ ದಿನಗಳ ನಂತರ, ಪ್ರಧಾನಿ ಕಛೇರಿಯ ಮಧ್ಯಸ್ಥಿಕೆಯಿಂದ ಕೇಂದ್ರ ಸರ್ಕಾರದ ವಿದ್ಯುತ್ ಮಂತ್ರಾಲಯ ಲೊಹಾರಿನಾಗ್-ಪಾಲ ಯೋಜನೆಯನ್ನು ಕೈಬಿಡುವ ಆದೇಶ ಹೊರಡಿಸಿತು. ೩೮ನೇ ದಿನ ಅಗ್ರವಾಲರು ತಮ್ಮ ಉಪವಾಸ ಕೈಬಿಟ್ಟರು.

ನಂತರದಲ್ಲೂ ಮಾತು ಕೊಟ್ಟು ಮತ್ತೆ ಮುರಿಯುವ ಸರ್ಕಾರದ ವಿರುದ್ಧ ಅಗ್ರವಾಲರ ಉಪವಾಸದ ತಪಸ್ಸುಗಳೂ ನಡೆದೇ ಇವೆ. ಮೂರು ಭಾರೀ ಯೋಜನೆಗಳನ್ನು ಗಂಗೋತ್ರಿ ಮತ್ತು ಉತ್ತರಕಾಶಿಯ ನಡುವಿನಲ್ಲಿ ನಿಲ್ಲಿಸಲಾಯಿತು. ಅಲ್ಲದೇ ಈ ಪ್ರದೇಶವನ್ನು ಸೂಕ್ಷ್ಮ ಪರಿಸರದ ತಾಣ ಎಂದೂ ಸರ್ಕಾರ ಘೋಷಿಸಿತು. ಗಂಗೆಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಿತು. ಅಷ್ಟರಲ್ಲೇ ಗಂಗಾ ಮಾತೆಯ ಪರಿಚಾರಕರಾಗಿ, ಪರಿವ್ರಾಜಕರಾಗುವ ದೀಕ್ಷೆ ತೊಟ್ಟರು. ಜಗದ್ಗುರು ಶ್ರೀ ಶಂಕರಾಚಾರ್ಯ ದ್ವಾರಕಾಸಂಸ್ಥಾನ ಹಾಗೂ ಜ್ಯೋತಿಷ್ಪೀಠದ ಅಧೀಶ್ವರರಾದ ಸ್ವಾಮೀ ಸ್ವರೂಪಾನಂದ ಸರಸ್ವತಿಗಳ ಶಿಷ್ಯರಾದ ಸ್ವಾಮೀ ಅವಿಮುಕ್ತೇಶ್ವರಾನಂದ ಸರಸ್ವತಿಗಳಿಂದ ಸನ್ನ್ಯಾಸ ಪಡೆದು ಸ್ವಾಮೀ ಜ್ಞಾನಸ್ವರೂಪ ಸಾನಂದರಾದರು. ಗಂಗೆಯ ಪರಿಶುದ್ಧಿಗಾಗಿ ಹಗಲು ರಾತ್ರಿ ಗಂಗೆಯ ತಪಸ್ಸಿನಲ್ಲೇ ಮುಂದುವರೆಯುತ್ತಿದ್ದಾರೆ. ಇತ್ತೀಚಿಗಷ್ಟೇ ತಮ್ಮ ೮೦ ನೇ ವಯಸ್ಸಿನಲ್ಲೂ ಗಂಗಾ ಸಮಿತಿಯು ಸಭೆಗಳನ್ನೇ ನಡೆಸುತ್ತಿಲ್ಲದ್ದನ್ನು ಪ್ರತಿಭಟಿಸಿ ಮತ್ತೆ ಉಪವಾಸ ಕೈಗೊಂಡರು. ಪ್ರಧಾನಿ ನೇತೃತ್ವದ ಸಭೆಯನ್ನು ಕೂಡಲೇ ನಡೆಸುವ ಆದೇಶ ಹೊರಬಂದ ಮೇಲೆಯೇ ಉಪವಾಸ ನಿಂತಿದ್ದು.

ವೈಜ್ಞಾನಿಕ ವಿಮರ್ಶೆಗಳಲ್ಲಿ ಸಿದ್ಧಹಸ್ತರಾದ ಸ್ವಾಮೀಜಿ, ಈ ದೇಶದ ಆಧ್ಯಾತ್ಮಿಕ ಸೊಬಗಿಗೆ ತಾವಾಗಿಯೇ ಶರಣಾದವರು. ಗಂಗೆಯ ಭವಿಷ್ಯವನ್ನು ಯಾವುದೋ ಒಂದು ತಜ್ಞ ಸಮಿತಿಯೋ, ಸರ್ಕಾರವೋ, ಒತ್ತಡ ಹೇರುವ ಸಮುದಾಯಗಳೋ ಮಾಡಿದರೆ ಸಾಲದು. ಅದು ಧರ್ಮಾಚಾರ್ಯರ ಒಪ್ಪಿಗೆಯಂತೆ ನಡೆಯಬೇಕು. ಇದೊಂದು ಬರಿಯ ನೀರಿನ ನದಿಯಲ್ಲ. ಇದು ನಮ್ಮ ನಿಮ್ಮೆಲ್ಲರ ಭಾಗ್ಯದೇವತೆ ಎನ್ನುತ್ತಾ ತಪಸ್ಸಿನಲ್ಲಿ ಮುಂದುವರೆದಿದ್ದಾರೆ ಸ್ವಾಮೀಜಿ. ಎಲ್ಲ ಬಿಟ್ಟ ಸನ್ನ್ಯಾಸಿಯೂ ಬಿಡಬಾರದ್ದು ಈ ತಪಸ್ಸು. ತಾಯಿಯ ಕರುಳ ಕುಡಿಯೊಂದು ನಡೆಸುತ್ತಿರುವ ತಪಸ್ಸು ಇದು. ಗಂಗೆಯನ್ನೇ ತಾಯಿಯಂದು ಅಪ್ಪಿರುವ, ಶ್ರೀರಾಮನನ್ನೇ ದೈವವೆಂದು ಆಶ್ರಯಿಸಿರುವ, ಭಗೀರಥನನ್ನೇ ಪೂರ್ವಜನೆಂದು ನಂಬಿರುವ, ತಪಸ್ಸೇ ತನ್ನ ಧರ್ಮವೆಂದು ಆಚರಿಸುತ್ತಿರುವ ಆ ಜ್ಞಾನವೃದ್ಧ ಹಾಗೂ ವಯೋವೃದ್ಧ ಚೇತನಕ್ಕೆ  ಪೂರ್ಣಪ್ರಮತಿಯ ನಮನ.

ಪೂರ್ಣಪ್ರಮತಿಗುರುಕಾರುಣ್ಯಸರಣಿಂ ಪ್ರಪನ್ನಾ ಮಾನ್ಯಾ ಸ್ಮಃ

Dr. Shrinidhi 

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.