ಸುಖ v/s ಸಾರ್ಥಕ

ಕಷ್ಟದಲ್ಲೂ ಎದೆಗುಂದದೆ ಇರವ ಸ್ವಭಾವ ಸೀನಣ್ಣನದು. ಆಗೊಮ್ಮೆ-ಈಗೊಮ್ಮೆ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ಸೀನಣ್ಣ ಹೆಚ್ಚಿನ ಕಾಲ ಹೊಲದಲ್ಲಿ ದುಡಿದು…..ತಮ್ಮ ರಮೇಶ, ತಂಗಿ ಸೀತಳನ್ನು ಖಾಸಗಿ  à²¶à²¾à²²à³†à²¯à²²à³à²²à²¿ ಓದಲು ಸಹಾಯ ಮಾಡುತ್ತಿದ್ದ.

ಕಾಲೇಜಿನ ಮುಖವನ್ನೇ ನೋಡದ ಸೀನಣ್ಣ, ಹಣವಿಲ್ಲದಿದ್ದರು ಗುಣದಲ್ಲಿ ಸಿರಿವಂತ…ತನ್ನ ಅತ್ತೆಯ ಮಗಳೊ೦ದಿಗೆ ವಿವಾಹವಾಗಿದ್ದನು. ಪದವಿಯನ್ನು ಮುಗಿಸಿದ್ದ ರಮೇಶ ಸಿರಿವ೦ತ ಕನ್ಯೆಯೊ೦ದಿಗೆ ಪ್ರೇಮ ವಿವಾಹವಾಗಿದ್ದನು.ಇವರ ಒಟ್ಟು ಕುಟುಂಬ ಕಪ್ಪಿರುವೆ-ಕೆಂಪಿರುವೆ  ಒಂದೇ ಗೂಡಿನಲ್ಲಿದಂತಾಗಿತ್ತು.

ಇಂತಹ ಗೂಡಿಗೆ ಕಲ್ಲು-ಸಕ್ಕರೆಯಂತೆ , ಒಮ್ಮೆ ಅಜ್ಜ-ಅಜ್ಜಿ ಊರಿನಿಂದ ಬಂದರು. ರಾತ್ರಿಯ ಭೋಜನದ ನಂತರ…ಎಲ್ಲಾರು ಜಗುಲಿಯ ಮೇಲೆ ಕುಳಿತು…ಸೀತಾಳ ಹಾಡು ಕೇಳುತ್ತ…ತಂಪಾದ ಗಾಳಿಯಲ್ಲಿ…. ಸಹಜವಾದ ಹರಟೆಹೊಡೆಯುತ್ತಿದ್ದರು.

‌ಅಲ್ಲಿಂದ  ಸುಮಾರು ೧೩00 ಕಿ.ಮಿ ದೂರದಲ್ಲಿರುವ , ನಾರಾಯಣ ಮಠ ಹಾಗು ರಂಗಾಪುರಿ ಮಠಗಳನ್ನು ನೊಡಬೇಕೆಂಬ ಬಯಕೆಯಾಗಿದ್ದು …ಸೀನಣ್ಣ ಹಾಗು ರಮೇಶರು ಕರೆದುಕೊಂಡು ಹೋಗಬಹುದಾ…? ಎಂದು ಅಜ್ಜ ಅಜ್ಜಿ ಕೇಳಿದರು. ತಕ್ಷಣವೇ… ರಮೇಶ ಹಾ..ಆಗಲಿ ಆಗಲಿ, ನನ್ನ ಕಾರಿನಲ್ಲೆ ನಾರಾಯಣ ಮಠಕ್ಕೆ ಕರೆದುಕೊಂಡು ಹೋಗಿಬರುವೆ ಎಂದು ತಿಳಿಸಿದನು. ಹಣವಿರದ ಸೀನಣ್ಣನು ಕೊಂಚ ಕಾಲ ಯೋಚಿಸಿ…ಆಗಲಿ,ನಾನು ರಂಗಾಪುರಿ ಮಠಕ್ಕೆ ಕರೆದುಕೊಂಡು ಹೋಗುವೆ ಎಂದು ಹೇಳಿದನು.

ಮಾರನೆಯ ದಿನ ರಮೇಶ ತನ್ನ ಪತ್ನಿಯೊಂದಿಗೆ, ಸೀತ ,ಅಜ್ಜ ಅಜ್ಜಿಯರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೊರಟ. ದಾರಿ ಮಧ್ಯಮಧ್ಯದಲ್ಲಿ ..ಕುರು.ಕುರು ತಿಂಡಿಗಳು…ತಂಪು ಪಾನೀಯಗಳು…ಚಹ…ಹಾಡುಗಳೊಂದಿಗೆ…ಪ್ರಕೃತಿ ಸೌಂದರ್ಯವನ್ನು ಸವಿಯುತ್ತ…ಎಸಿ ಕಾರಿನಲ್ಲಿ ತಂಪಾಗಿ…ನಾರಾಯಣ ಮಠಕ್ಕೆ ಬಂದು ತಲುಪಿದರು. ಅಲಂಕಾರದ ಸಮಯವಾದ್ದರಿಂದ ಗರ್ಭಗುಡಿಯ ಬಾಗಿಲ್ಹಾಕಿತ್ತು.ಅಲ್ಲಿಂದಲೇ ಕೈ ಮುಗಿದು…ಯತಿಗಳ ದರ್ಶನಕ್ಕೆ ಸಾಗಿದರು. ಫಲಮಂತ್ರಾಕ್ಷತೆ ಸ್ವೀಕರಿಸುವ ಸಾಲು ಉದ್ದವಿದ್ದಿದ್ದರಿಂದ ನಿಂತ ಸ್ಥಳದಲ್ಲೇ ಸಾಷ್ಟಾಂಗ ನಮಸ್ಕಾರ ಮಾಡಿದರು.ಮಠದ ಊಟ ರುಚಿಇರುವುದಿಲ್ಲ ಎಂದು ಭಾವಿಸಿ, ಪಂಚತಾರ ಹೋಟೆಲ್ ನಲ್ಲಿ ಊಟ ಮುಗಿಸಿ.ಮಠದ ಸುತ್ತಲಿದ್ದ ಅಂಗಡಿಗಳಲ್ಲಿ ಶಾಪಿಂಗ್ ಮಾಡಿ, ಊರಿಗೆ ಹಿಂದಿರುಗಿದರು.

‌ಒಂದು ದಿನ ಕಳೆದು,ಮರುದಿನ ಸೀನಣ್ಣ ದಂಪತಿಗಳು ,ಅಜ್ಜ ಅಜ್ಜಿ ಸೀತಾಳೊಂದಿಗೆ ರೈಲಿನಲ್ಲಿ ರಂಗಾಪುರಿ  ಮಠಕ್ಕೆ ಹೊರೆಟರು. ಕೂರಲೂ ಜಾಗವಿಲ್ಲದ…ಮೂರನೆ ದರ್ಜಿಯ ಡಬ್ಬಿ…ಭಾರೀ ಇಕ್ಕಟ್ಟು ….ಒಬ್ಬರಮೇಲೊಬ್ಬರು ಬಿದ್ದು…ಬೇರೆಯವರ ಆಹಾರ ಡಬ್ಬಿಯನ್ನು ನೋಡುತ್ತಾ…ಬೆವರಿನವಾಸನೆಯನ್ನು ಸಹಿಸಿಕೊಂಡು…ಮೈ-ಕೈ ನೋವಿನಿಂದ….ರಂಗಾಪುರಿಗೆ ಬಂದು ಇಳಿದರು. ಆಟೋವಿನಲ್ಲಿ ಹೋಗಲು ಹಣವಿಲ್ಲದ ಕಾರಣ, ನಡದೇ…ಮಠವನ್ನು ಸೇರಿದರು. ಕಲ್ಯಾಣಿಯ ತೀರ್ಥ ಸ್ನಾನ ಮಾಡಿ…ದೇವರ ದರ್ಶನಕ್ಕೆ ತೆರಳಿದರು. ಆಲಂಕೃತ ಪಾಂಡುರಂಗನನ್ನು ನೋಡಿ ರೋಮಾಂಚನವಾಯಿತು…ರಂಗನ ಪಾದಕ್ಕೆ-ಹಣೆಯನ್ನೂರಿ…ಆಯಾಸವೆಲ್ಲಾ ನೀಗಿ …ಆನಂದದಲ್ಲಿ ಮೈ ಮರೆತರು…ಯತಿಗಳ ದರ್ಶನ ಮಾಡಿ …ಅವರ ಉಪನ್ಯಾಸ ಕೇಳಿ…ಅನುಗ್ರಹ ಪಡೆದು…ಧ್ಯಾನಜಪಾದಿಗಳಲ್ಲಿ ನಿರತರಾಗಿ,ಊರನ್ನೇ ಮರೆತು ಬಿಟ್ಟಿದ್ದರು… ಲಾಡ್ಜಿನ ರೂಂ ದುಬಾರಿಯಾದರಿಂದ, ಅಂದಿನ ರಾತ್ರಿ …ಮಠದ ಅಂಗಳದಲ್ಲೆ ತಂಗಿದರು…ಮರುದಿನ ಪ್ರಸಾದ ಸ್ವೀಕರಿಸಿ ಊರಿಗೆ ಹಿಂದಿರುಗಿದರು.

ಊರಿನಲ್ಲಿ ಎಂದಿನಂತೆ… ರಾತ್ರಿಯ ಭೋಜನದ ನಂತರ…ಎಲ್ಲಾರು ಜಗುಲಿಯ ಮೇಲೆ ಕುಳಿತು…ತಂಪಾದ ಗಾಳಿಯಲ್ಲಿ…. ಯಾತ್ರೆಯ  ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಅಜ್ಜನ ಹೆಸರಿನಲ್ಲಿರುವ ಹೊಲವನ್ನು-ಯಾತ್ರೆಯ ಬಯಕೆ ತೀರಿಸಿದ ಮೊಮ್ಮಗನಿಗೆ ಕೊಡುತ್ತೇವೆ ಎಂದು ಅಜ್ಜಿ ಹೇಳಿದಳು.

ಸೀನಣ್ಣನಿಗೆ ಕೊಡುತ್ತಾರೋ ಅಥವ ರಮೇಶನಿಗೆ ಕೊಡುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿತ್ತು !

ಆಗ ಸೀತೆ ” ರಮೇಶನಿಗೇ  à²ˆ ಹೊಲವನ್ನು ಕೊಡಬೇಕು. ಏಕೆಂದರೆ, ರಮೇಶ ಎಷ್ಟೊಂದು ಹಣ ಖರ್ಚುಮಾಡಿದ್ದಾನೆ…ಎಸಿ ಕಾರು…ತಿಂಡಿ,ಪಾನೀಯಗಳು… ಪಂಚತಾರ ಹೋಟೆಲ್ ನಲ್ಲಿ ಊಟ…ಶಾಫಿಂಗ್…ಆಯಾಸವೇ ಆಗದಂತೆ ಸುಖಕರವಾದ ಯಾತ್ರೆ ಮಾಡಿಸಿದ್ದಾನೆ. ಅದೇ ಸೀನಣ್ಣನ ಯಾತ್ರೆಯೋ…ರಾಮರಾಮ !… ರೈಲಿನಲ್ಲಿ ಬೆವರು ವಾಸನೆ…ಮೈ-ಕೈ ನೋವಿನ ಪ್ರವಾಸ, ತಣ್ಣೀರಿನ ಸ್ನಾನ…ಅಂಗಳದಲ್ಲಿ ನಿದ್ದೆ…ಜ್ಞಾಪಿಸಿ ಕೊಂಡರೆ ಈಗಲೂ ನಿದ್ದೆ ಬರುವುದಿಲ್ಲ” ಎಂದು ಅಜ್ಜ ಅಜ್ಜಿಗೆ ಹೇಳಿದಳು.

ಆಗ, ಅನುಭವಿಗಳು -ಜ್ಞಾನಿಗಳಾದ ಹಿರಿಯರು ” ಯಾತ್ರೆ ಮಾಡಿಸಿದ ಇಬ್ಬರಿಗೂ ನಮ್ಮ ಆರ್ಶೀವಾದಗಳು. ಸೀತೆ ಹೇಳಿದಂತೆ….ರಮೇಶನ ಯಾತ್ರೆ ಆಯಾಸವೇ ಆಗಲ್ಲಿಲ್ಲ… ಸುಖಮಯವಾಯಿತ್ತು…ಆದರೇ ಯಾತ್ರೆಯ ಉದ್ದೇಶ ಈಡೇರಲಿಲ್ಲ. ಬರಿ ಕಟ್ಟಡ ನೋಡಿಬರುವುದರಿಂದ ಏನು ಪ್ರಯೋಜನ !?.ದೇವರ ದರ್ಶನ, ಸಂತ

ಸಹವಾಸ, ಅನುಷ್ಠಾನಗಳಲ್ಲಿ ಮೈಮರಿಯುವುದೇ… ಯಾತ್ರೆಯ ತಿರುಳು. ಸೀನಣ್ಣನ ಮಾಡಿಸಿದ ಪ್ರವಾಸ ಸುಖವಾಗಿಲ್ಲದಿದ್ದರೂ…ಅಲ್ಲಿ ಪಡೆದ ಅನುಗ್ರಹ…ಆನಂದದ ಅನುಭವ…ಊರನ್ನೇ ಮರೆಯುವಂತೆ ಮಾಡಿದ್ದರಿಂದ…ಅದು ಸಾರ್ಥಕದ ಯಾತ್ರೆಯಾಗಿದೆ. ಸುಖಕ್ಕಿಂತ ಸಾರ್ಥಕ ಹೆಚ್ಚಿನದು” ಎಂದು ಹೇಳಿ…ಸೀನಣ್ಣನಿಗೆ ಹೊಲವನ್ನು ಕೊಡುತ್ತಾರೆ.

Shrinath Teacher

ತಾತ್ಪರ್ಯ: ನಮ್ಮ ಬದುಕಿನ ಯಾತ್ರೆ ಹೇಗೆ ಸಾಗುತ್ತಿದೆ ಎಂಬುವುದು ಮುಖ್ಯವಲ್ಲ ! ಸಾರ್ಥಕ್ಯದ ಹಾದಿಯಲ್ಲಿ ಸಾಗುತ್ತಿದೆಯಾ….ಎಂಬುವುದಷ್ಟೇ ಮಾನ್ಯ. ನಮ್ಮ ಜೀವನದ ಸಾರ್ಥಕ್ಯ ದೈವ ಸಾಕ್ಷಾತ್ಕಾರ-ಮುಕ್ತಿಯಲ್ಲಿ. ವಿನ: ನಾವುಗಳಿಸುವ ಶಿಕ್ಷಣ, ದುಡಿಮೆ, ಅನುಭವಿಸು ಲಾಭ, ನಷ್ಟ ಎಲ್ಲವು ಅಮಾನ್ಯ.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it