ಉಪಮಾಲಂಕಾರ – ೩

ಲುಪ್ತೋಮಾಲಂಕಾರ

 à²¹à²¿à²‚ದಿನ ಸಂಚಿಕೆಯಲ್ಲಿ ಉಪಮಾಲಂಕಾರದನ್ನು ನೋಡಿದೆವು, ಈಗ ಕೆಲ ಚಿತ್ರಗೀತೆಗಳನ್ನು ನೋಡೊಣ

ದೋಣಿಸಾಗಲಿ, ಮುಂದೆಹೋಗಲಿ, ದೂರತೀರವ ಸೇರಲಿ
ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ .

ಈ ಹಾಡಿನ ಪಲ್ಲವಿಯನ್ನು ಸುಖದಲ್ಲಿ ಇದ್ದಾಗ ಕೇಳಿದರೆ ಒಂದು ತೆರೆನಾದ ಅರ್ಥವನ್ನು ಕೊಡುತ್ತದೆ. ದುಃಖದಲ್ಲಿ ಇದ್ದಾಗ ಕೇಳಿದರೆ ಸಾಂತ್ವನದ ಧ್ವನಿ ಕೇಳಿಬರುತ್ತದೆ. ಕೇವಲ ಉಪಮಾನ ವಾಚಕ ಪದಗಳಿಂದಲೇ  ಎಲ್ಲಾ ಕೆಲಸಗಳನ್ನು ಕವಿಗಳು ಮಾಡಿಸಿದ್ದಾರೆ ಎನ್ನುವುದು ವಿಶೇಷ.

ಸಂಸ್ಕೃತ ಕವಿಯಾದ ಭಾಸನ ನಾಟಕವಾದ ಪ್ರತಿಮಾನಾಟಕ ಒಂದು ಪ್ರಸಂಗ  ದಶರಥ ಮಹಾರಾಜನ ಮರಣವಾಗಿರುತ್ತದೆ ಆಗ ವಸಿಷ್ಠ ಋಷಿಗಳು ಕೋಸಲ ದೇಶದಲ್ಲಿ ಇದ್ದ  ಭರತನಿಗೆ ಹೇಳಿಕಳುಹಿಸುತ್ತಾರೆ.  ಅಗ ಭರತನು ರಥದಲ್ಲಿ ಬರುತ್ತಾ ಇರುತ್ತಾನೆ ಶಿಷ್ಟಾಚಾರದಂತೆ ಊರನ್ನು ಪ್ರವೇಶಿಸುವ ಮುಂಚೆ ಊರ ಹೊರಭಾಗದಲ್ಲಿ  ಇದ್ದು ನಂತರ ಊರ ಒಳಗೆ ಬರುವುದು ಸಂಪ್ರದಾಯವಾಗಿತ್ತು .  ಆಗ ಆ ಭರತನಿಗೆ  ಒಂದು ದೇವಸ್ಥಾನದಂತಹ ಪ್ರದೇಶ ಸಿಗುತ್ತದೆ ಅದು ದೇವಸ್ಥಾನವೇ ಎಂದು  ತಿಳಿದು ಅಲ್ಲಿ ಭರತ ಇಳಿಯುತ್ತಾನೆ.  ಆದರೆ ಅದು ಸ್ವರ್ಗಸ್ಥರಾದ ರಾಜರ ಪುತ್ಥಳಿಗಳನ್ನು ಇಡುತ್ತಿದ್ದ ಸ್ಥಳ. ಅಲ್ಲಿ ಭರತ  à²…ಲ್ಲಿ ದಶರಥನ್ನನ್ನೇ ಹೊಲುವ ಪ್ರತಿಮೆಯನ್ನು ನೋಡುತ್ತಾನೆ. ಅಲ್ಲಿಯ ಕೆಲಸಗಾರನಿಗೂ ಭರತನಿಗೂ ಸಂವಾದ ನಡೆಯುತ್ತದೆ. ಕೊನೆಗೆ ಆ ದೇವಕುಲಿಕ ದಶರಥನ ಮರಣ ಸಂಭವಿಸಿದ್ದು, ಕೈಕೇಯಿಯ ವರವೆಂಬ ಶುಲ್ಕದಿಂದ ಎಂದು ಹೇಳುತ್ತಾನೆ. ಈ ವಾರ್ತೆಯನ್ನು ಕೇಳಿ ಭರತ ಮೂರ್ಛಿತನಾಗುತ್ತಾನೆ.  à²†à²— ಆ ದೇವ ಕುಲಿಕ ಹೇಳುವ ಮಾತು ಇದು-

“ಹಸ್ತಸ್ಪರ್ಶೋ ಹಿ ಮಾತೃಣಾಂ ಅಜಲಸ್ಯ ಜಲಾಂಜಲಿ” ತಾಯಿಯ ಕೈಯ ಸ್ಪರ್ಶ  ನೀರಿಲ್ಲದೆ ಬಸವಳಿದವನಿಗೆ ನೀರಿನಂತಾಯಿತು ಎಂದು.

ಪ್ರತಿಮಾನಾಟಕದ ಇನ್ನೊಂದು ಶ್ಲೋಕ à²¦à²¶à²°à²¥à²¨ ಮಂತ್ರಿ ಸುಮಂತ್ರ ಹೇಳುವುದು. “ಜೀವಾಮಿ ಶೂನ್ಯಸ್ಯ ರಥಸ್ಯ ಸೂತಃ” à²¨à²¾à²¨à³ ರಥಿಕನೆ ಇಲ್ಲದ ರಥದ ಸಾರಥಿ ಆಗಿದ್ದೇನೆ ಎಂದು.

ಅಭಿಜ್ಞಾನಶಾಕುಂತಲಾದಲ್ಲಿ ಒಂದು ಪ್ರಸಂಗ –

ರಾಜನಾದ ದುಷ್ಯಂತನು ಒಮ್ಮೆ ಬೇಟೆಗಾಗಿ ಕಾಡಿಗೆ ಹೋಗಿರುತ್ತಾನೆ . ಅಲ್ಲಿ ಶಕುಂತಲೆಯನ್ನು ನೋಡಿ ಗಾಂಧರ್ವ ರೀತಿಯಲ್ಲಿ ವಿವಾಹವಾಗುತ್ತಾನೆ. ಕಣ್ವ ಮಹರ್ಷಿಗಳು ತಪಸ್ಸನ್ನು ಮುಗಿಸಿ ಆಶ್ರಮಕ್ಕೆ ಬರುತ್ತಾರೆ. ಅವರ ಆದೇಶದ ಮೇರೆಗೆ ಶಕುಂತಲೆಯನ್ನು ರಾಜನ ಬಳಿ ಕಳುಹಿಸಲು ಬರುತ್ತಾರೆ . ಆಗ ರಾಜ ತನ್ನ ಮನಸ್ಸಿನಲ್ಲಿ ಹೀಗೆ ಆಲೋಚನೆ ಮಾಡುತ್ತಾನೆ    ಮಧ್ಯೆ ಕಿಸಲಯಮಿವ ಪಾಂಡುಪತ್ರಾಣಾಂ   ಬಿಳಿ ಬಣ್ಣದ ಎಲೆಗೆಳ ನಡುವೆ ಇರುವ ಚಿಗುರಿನಂತೆ ಎಂದು.

ಇಷ್ಟೊಂದು ದೃಷಾಂತಗಳನ್ನು ಏಕೆ ಕೊಟ್ಟೆ ? ಎನ್ನುವ ಸಂದೇಹವನ್ನು ಹೀಗೆ ನಿವಾರಿಸುತ್ತೇನೆ ಆತ್ಮೀಯರೆ . ಪೂರ್ಣೋಪಮಾಲಂಕಾರವಾಗಲು  ನಾಲ್ಕು ಗುಣಗಳು ಬೇಕು ಎಂದು ಹೇಳಿದ್ದೆ . ಆ ನಾಲ್ಕು ಗುಣಗಳು ಯಾವುವು

 • ಉಪಮಾನ
 • ಉಪಮೇಯ
 • ವಾಚಕ ಶಬ್ದ
 • ಸಮಾನ ಧರ್ಮ

ಈ ನಾಲ್ಕರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೇನೆ. ಈ ನಾಲ್ಕರಲ್ಲಿ ಒಂದು ಇಲ್ಲದಿದ್ದರೂ ಅದನ್ನು ಲುಪ್ತೋಪಮಾ ಎಂದು ಕರೆಯುತ್ತಾರೆ. ಹಾಗಾದರೆ ಆ ಲುಪ್ತೋಪಮಾದ ಲಕ್ಷಣವೇನು ಎಂದರೆ

वर्णोपमानधर्माणामुपमावाचकस्य च ।

एकद्वित्र्यनुपादानात् भिन्ना लुप्तोपमाष्टधा ॥

ಹಿಂದೆ ಹೇಳಿದ ಉಪಮಾನ, ಉಪಮೆಯ, ವಾಚಕಶಬ್ದ, ಸಮಾನಧರ್ಮಾ , ಇಷ್ಟರಲ್ಲಿ ಯಾವುದಾದರು ಒಂದು ಇಲ್ಲದಿದ್ದರು ಅದು ಲುಪ್ತೋಪಮಾಲಂಕಾರ ಎಂದು  ಸಂಸ್ಕೃತ ವಿದ್ವಾಂಸರ ಅಭಿಪ್ರಾಯ.  ಲುಪ್ತೋಪಮಾಲಂಕಾರ ಎಂಟು ಪ್ರಭೇಧಗಳನ್ನು ಹೊಂದಿದೆ ಅವುಗಳ ಪಟ್ಟಿ

 1. ವಾಚಕ ಲುಪ್ತಾ
 2. ಧರ್ಮಲುಪ್ತಾ
 3. ಧರ್ಮವಾಚಕ ಲುಪ್ತಾ
 4. ವಾಚಕೊಪಮೇಯ ಲುಪ್ತಾ
 5. ಉಪಮಾನಲುಪ್ತಾ
 6. ವಾಚಕೋಪಮಾನ ಲುಪ್ತಾ
 7. ಧರ್ಮೋಪಮಾನಲುಪ್ತಾ
 8. ಧರ್ಮೊಪಮಾನ ವಾಚಕಲುಪ್ತಾ

ಇಷ್ಟೂ ಮೂಲದಲ್ಲಿ ಇರುವ ವಾಕ್ಯಗಳನ್ನೇ ಅನುವಾದ ಮಾಡಿದ್ದೇನೆ. ಕೆಲ ದೃಷ್ಟಾಂತವನ್ನು ನೋಡಿದರೆ ಮಾತ್ರ ಮೇಲೆ ಹೇಳಿರುವ ವಿಷಯಗಳು ಸ್ಪಷ್ಟವಾಗಬಹುದು.

ವಾಚಕ ಲುಪ್ತ – ಅರವಿಂದ ಸುಂದರವಾದ ಮುಖ  ಎಂದು ಹೇಳಿದಾಗ ವಾಚಕವಾದ ಅರವಿಂದದಂತೆ   ಎನ್ನುವ ಪದವಿಲ್ಲ.

ಧರ್ಮಲುಪ್ತಾ – ಚಂದ್ರನಂತೆ ರಾಜ  ಇಲ್ಲಿ ರಾಜ ಹಾಗೂ ಚಂದ್ರನಲ್ಲಿ ಇರುವ ಸಮಾನಧರ್ಮವನ್ನು ಕವಿಯು ಹೇಳಲಿಲ್ಲ. ರಾಜ ಸಜ್ಜನರಿಗೆ ಸಂತೋಷವನ್ನು ಕೊಡುತ್ತಾನೆ ಹೇಗೊ ಹಾಗೇ  ಚಂದ್ರೋದಯವಾದಾಗ ಎಲ್ಲಾ ಜೀವಿಗಳಿಗೂ ಸಂತೋಷವಾಗುತ್ತದೆ . ಎಂದು ಹೇಳಬೇಕಿತ್ತು ಆದರೆ ಚಂದ್ರನಂತೆ ರಾಜ ಎಂದು ಅಷ್ಟು ಮಾತ್ರ ಹೇಳಿದ್ದಾರೆ ಕವಿಗಳು.

ಧರ್ಮವಾಚಕ ಲುಪ್ತಾ –  ಚಂದ್ರಮುಖೀ  ಎನ್ನುವಾಗ ಚಂದ್ರನಲ್ಲಿ ಹಾಗೂ ಪ್ರಿಯತಮೆಯಲ್ಲಿ ಇರುವ  ಸಮಾನಧರ್ಮವನ್ನು ಹೇಳಲಿಲ್ಲ . ಚಂದ್ರನಂತೆ  ಮುಖ ಉಳ್ಳವಳು ಎಂದು ಹೇಳಲಿಲ್ಲ ಹಾಗಾಗಿ ಇಲ್ಲಿ ಧರ್ಮ, ವಾಚಕ ಎರಡೂ ಲೋಪವಾಗಿವೆ.

Muralidhara Katti -Teacher

ಹೀಗೆ ಯಾವುದಾದರು ಒಂದು ಅಥವಾ ಎರಡು ಗುಣಗಳು ಲೋಪವಾಗಿದ್ದರೆ ಅದನ್ನು ಲುಪ್ತೋಪಮಾಲಂಕಾರ ಎಂದು ಕರೆದಿದ್ದಾರೆ ಸಂಸ್ಕೃತ ಕವಿಗಳು ಮುಂದಿನ ಸಂಚಿಕೆಯಲ್ಲಿ ರೂಪಕ ಎನ್ನುವ ವಿಶಿಷ್ಟವಾದ ಅಲಂಕಾರವನ್ನು ನೋಡೊಣ.

1 Response to ಉಪಮಾಲಂಕಾರ – ೩

 1. Viay Koushik

  Lekhana adbhutavaagide.

  Murali Annanige abhinandanegalu.

  Heege dayavittu itara alankaaragala bagge parichaya needuviraa?

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it